Friday, November 20, 2026

PARYAYA: ಹೆಗಡೆ ನಗರದಲ್ಲಿ ʼಭಾರತರತ್ನ ವೀರ ಅಭಿಮನ್ಯುʼ

 ಹೆಗಡೆ ನಗರದಲ್ಲಿ ʼಭಾರತರತ್ನ ವೀರ ಅಭಿಮನ್ಯುʼ

ಬೆಂಗಳೂರು ನಗರ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ  ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ೨೦೨೬ ನವೆಂಬರ್‌ ೧೫ರ ಭಾನುವಾರ ʼಭಾರತ ರತ್ನ ವೀರ ಅಭಿಮನ್ಯುʼ ಯಕ್ಷಗಾನ ಪ್ರದರ್ಶನವು ಎಲ್ಲರ ಮನ ಗೆದ್ದಿತು.

ದೇವಸ್ಥಾನದ ಆವರಣಲ್ಲಿ ಕಳೆದ ಒಂದು ವರ್ಷದಿಂದ ಯಕ್ಷಗಾನವನ್ನು ಕಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಈ ಸೊಬಗಿನ ಯಕ್ಷಗಾನವನ್ನು ಪ್ರದರ್ಶಿಸಿದರು. ಯಕ್ಷಗಾನವನ್ನು ಕಲಿಸಿಕೊಡುತ್ತಿರುವ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ ʼಯಕ್ಷ ಕಲಾ ಕೌಸ್ತುಭʼ ಸಂಸ್ಥೆಯು ಈ ಕಾರ್ಯಕ್ರಮವನ್ನು ತನ್ನ ಪ್ರಥಮ ವಾರ್ಷಿಕೋತ್ಸವದ ಪ್ರಯುಕ್ತ ಏರ್ಪಡಿಸಿತ್ತು.

ಮುಮ್ಮೇಳದಲ್ಲಿ ಬಾಲಗೋಪಾಲರಾಗಿ ಕನೀರ, ಬ್ರಿತಿ, ಸಮನ್ವಿ, ಆದ್ರಿತ ರೈ, ಕ್ರಿಶ ಪಾಲ್ಗೊಂಡರು.

ಭಾರತ ರತ್ನ ವೀರ ಅಭಿಮನ್ಯು  ಪ್ರಸಂಗದಲ್ಲಿ ಕೃಷ್ಣನಾಗಿ ಪುಣ್ಯ, ಅರ್ಜುನನಾಗಿ ಸಾನಿಧ್ಯ, ಒಂದನೇ ಸಂಶಪ್ತಕರಾಗಿ ಅದ್ಮಯ್‌, ೨ನೇ ಸಂಶಪ್ತಕರಾಗಿ ಉದಯ್‌, ಧರ್ಮರಾಯನಾಗಿ ಶಿವಾಂಶ್‌, ಒಂದನೇ ಅಭಿಮನ್ಯುವಾಗಿ ಆದ್ಯ ಕಶ್ಯಪ್‌, ಎರಡನೇ ಅಭಿಮನ್ಯುವಾಗಿ ಆದ್ಯ ಶ್ರೀವಲ್ಲಿ, ಸುಭದ್ರೆಯಾಗಿ ಡಾ. ಉಮಾದೇವಿ, ದ್ರೋಣನಾಗಿ ಆದ್ಯ ಭಟ್‌, ಜಯದ್ರಥನಾಗಿ ಶಿವಾಂಶ್‌, ಕೌರವನಾಗಿ ಅರ್ಚನ ಬಂಗೇರ, ಕರ್ಣನಾಗಿ ಪ್ರಣೀತ ರೈ,  ಶಲ್ಯನಾಗಿ ಅಭ್ಯುದಯ್‌, ದುಶ್ಯಾಸನನಾಗಿ ಆದ್ರಿತ ರೈ, ಕೌರವರ ಸೇನೆಯ ವಿಕರ್ಣನಾಗಿ ಕನೀರ ಬಂಗೇರ, ಲಕ್ಷಣನಾಗಿ ಬ್ರಿತಿ, ದುರ್ಮುಖನಾಗಿ ಲಕ್ಷ್ಯ, ದುರ್ಮರ್ಷಣನಾಗಿ ಅಂಶ್‌, ದುಸ್ಸಹನಾಗಿ ರಿಶಿಥ್‌ ಕುಮಾರ್‌ ಪಾಲ್ಗೊಂಡಿದ್ದರು.

ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಉಮೇಶ್ ರಾಜ್ ಮಂದಾರ್ತಿ, ಶ್ರೀ ಉದಯಶಂಕರ್ ಭಟ್ ನೆತ್ರಕೆರೆ, ಮದ್ದಳೆಗಾರರಾಗಿ ಶ್ರೀ ವೆಂಕಟೇಶ ಪ್ರಭು, ಶ್ರೀ ರಘು ಶರ್ಮ, ಚೆಂಡೆವಾದಕರಾಗಿ ಶ್ರೀ ಸುಬ್ರಹ್ಮಣ್ಯ ಗಾಣಿಗ ಸಾಸ್ತಾನ ಪ್ರಸಂಗಕ್ಕೆ ಕಳೆ ನೀಡಿದರು.

ಪ್ರಸಾಧನ ಕಲಾವಿದರಾಗಿ ಶ್ರೀ ರಾಜೇಶ ಆಚಾರ್ಯ, ಶ್ರೀ ಪ್ರಸನ್ನ ಮಯ್ಯ, ಶ್ರೀ ಲಕ್ಷ್ಮಿ ಹೊಂಬಾಡಿ, ಶ್ರೀ ಗುರುರಾಜ್‌ ಬಿಲ್ಲಾಡಿ, ಶ್ರೀಮತಿ ಉಷಾ ಹರೀಶ್‌, ಶ್ರೀ ಉದಯ ಕುಮಾರ್‌ ಇಡೀ ಪ್ರದರ್ಶನದ ಸೊಬಗನ್ನು ಹೆಚ್ಚಿಸಿದರು.

ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೇಯಾ ಕಶ್ಯಪ್‌ ಪ್ರಾರ್ಥನೆ ನೆರವೇರಿಸಿದರೆ, ಅನಿಕೇತ್‌ ತಬಲಾ ಬಾರಿಸಿದರು. ಮುರಳಿ ವೆಂಕಟರಾಮ್‌ ಅವರ ಭಾವಗೀತೆ, ಶ್ರೇಯಾ ಅವರ ಶಾಸ್ತ್ರೀಯ ಸಂಗೀತ, ಅನಿಕೇತ್‌ ಅವರ ತಬಲಾವಾದನ, ಶಾಂತಿ ಅವರ ಭಕ್ತಿ ಗೀತೆ, ಕುಮಾರ  ಅಶುತೋಷ್‌ ಅವರ ಪಿಟೀಲು ವಾದನ, ಅರೈನ ಪೂಜಾ, ವೀಹಾ ಶರ್ಮ, ಶ್ರೇಷ್ಠಾ ಶೆಟ್ಟಿ ಅವರ ಭರತನಾಟ್ಯ, ಹರ್ಷ ಆಚಾರ್ಯ ಮತ್ತು ಮೇಘ ಆಚಾರ್ಯ ಅವರ ನೃತ್ಯ ಪ್ರದರ್ಶನ ಪ್ರೇಕ್ಷರನ್ನು ರಂಜಿಸಿದವು.

ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದ ಖ್ಯಾತ ಯಕ್ಷ ಗುರು ಶ್ರೀ ಮಂಜುನಾಥ ಕುಲಾಲ್‌ ಐರೋಡಿ ಅವರನ್ನು ಅವರ ಕಲಾ ಸೇವೆಗಾಗಿ ಸನ್ಮಾನಿಸಿ ಗೌರವಿಸಲಾಯಿತು.

ಯಕ್ಷಗಾನ ಕಲಿಕೆಗೆ ಸ್ಥಳಾವಕಾಶ ಮಾಡಿಕೊಟ್ಟ ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ, ಕಾನೂನು ಸಲಹೆಗಾರ ಶ್ರೀ ಮುನಿರಾಜು ಮತ್ತು ಮಮತಾ ಮುನಿರಾಜು, ಉಪಾಧ್ಯಕ್ಷ ಶ್ರೀ ಶಿವಪ್ಪ ಶಾಂತಪ್ಪನವರ, ಕಾರ್ಯದರ್ಶಿ ಶ್ರೀ ರಾಜೇಶ ಕೆ. ಹೆಗಡೆ, ಟ್ರಸ್ಟಿಗಳಾದ ಶ್ರೀ ನೆತ್ರಕೆರೆ ಉದಯಶಂಕರ ಭಟ್‌, ಶ್ರೀ ಕೆ.ಪಿ. ಸುಗುಣನ್‌ ಅವರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಕಳೆದ ಒಂದು ವರ್ಷದಲ್ಲಿ ಯಕ್ಷಗಾನ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನೂ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ನಿರ್ವಹಣೆಯನ್ನು ಚೇತನಾ ಹಾಗೂ ಸಭಾ ಕಾರ್ಯಕ್ರಮದ ನಿರ್ವಹಣೆಯನ್ನು ಪ್ರಣೀತಾ ರೈ ನೆರವೇರಿಸಿದರು.

ಮೇಲಿನ ಚಿತ್ರವನ್ನು ಕ್ಲಿಕ್‌ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ, ಸಭಾ ಕಾರ್ಯಕ್ರಮ ಹಾಗೂ ʼಭಾರತ ರತ್ನ ವೀರ ಅಭಿಮನ್ಯುʼ ಯಕ್ಷಗಾನ ಸಹಿತ ಸಂಪೂರ್ಣ ಕಾರ್ಯಕ್ರಮವನ್ನು  ವೀಕ್ಷಿಸಬಹುದು.

ಈ ಸಂದರ್ಭದ ಕೆಲವು ಪುಟ್ಟ ಪುಟ್ಟ ವಿಡಿಯೋಗಳನ್ನು ಇಲ್ಲಿ ವೀಕ್ಷಿಸಬಹುದು.














ಇದನ್ನೂ ಓದಿರಿ:
PARYAYA: ಹೆಗಡೆ ನಗರದಲ್ಲಿ ʼಭಾರತರತ್ನ ವೀರ ಅಭಿಮನ್ಯುʼ:   ಹೆಗಡೆ ನಗರದಲ್ಲಿ ʼ ಭಾರತರತ್ನ ವೀರ ಅಭಿಮನ್ಯು ʼ ಬೆಂ ಗಳೂರು ನಗರ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ   ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ ಅಭಯ...

Friday, November 13, 2026

PARYAYA: ಯಕ್ಷ ಕಲಾ ಕೌಸ್ತುಭಕ್ಕೆ ವಾರ್ಷಿಕೋತ್ಸವ ಸಂಭ್ರಮ

 ಯಕ್ಷ ಕಲಾ ಕೌಸ್ತುಭಕ್ಕೆ ವಾರ್ಷಿಕೋತ್ಸವ ಸಂಭ್ರಮ


ಬೆಂ
ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಳೆದ ಒಂದು ವರ್ಷದಿಂದ ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವ ಯಕ್ಷಗುರು ಉಮೇಶರಾಜ್‌ ಮಂದಾರ್ತಿ ನೇತೃತ್ವದ
ʼಯಕ್ಷ ಕಲಾ ಕೌಸ್ತುಭʼಕ್ಕೆ  ಪ್ರಥಮ ವಾರ್ಷಿಕೋತ್ಸವದ ಸಂಭ್ರಮ.

ಪ್ರಥಮ ವಾರ್ಷಿಕೋತ್ಸವದ ನೆನಪಿಗಾಗಿ ಬಡಾವಣೆಯ 6ನೇ ಅಡ್ಡರಸ್ತೆಯಲ್ಲಿರುವ ದೇವಸ್ಥಾನದ ಆವರಣದಲ್ಲೇ ೨೦೨೬ ನವೆಂಬರ್‌ ೧೫ರ (ನ.15) ಭಾನುವಾರ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ಅಂದು ಸಂಜೆ 4.30ರಿಂದ ರಾತ್ರಿ 8.30ರವರೆಗೆ ಕಾರ್ಯಕ್ರಮ ನಡೆಯಲಿದೆ.

ಸಂಜೆ ೪.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾಗುವ ವಾರ್ಷಿಕೋತ್ಸವ ಸಂಭ್ರಮದಲ್ಲಿ ೫ರಿಂದ ೬ರ ತನಕ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶೇಷ ಆಹ್ವಾನಿತರಾಗಿ ಬೃಹತ್‌  ಬೆಂಗಳೂರು ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ಮತ್ತು ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡ  ಅವರು ಪಾಲ್ಗೊಳ್ಳಲಿದ್ದಾರೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ  ಯಕ್ಷಗಾನ ಕ್ಷೇತ್ರದ ಹಿರಿಯ ಖ್ಯಾತ ಯಕ್ಷಗುರುಗಳಾದ ಶ್ರೀ ಮಂಜುನಾಥ ಕುಲಾಲ್‌ ಐರೋಡಿ ಅವರನ್ನು ಅವರ ಕಲಾ ಸೇವೆಗಾಗಿ ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಯಕ್ಷ ಕಲಾ ಕೌಸ್ತುಭ ತಂಡವು ಹಮ್ಮಿಕೊಂಡಿದೆ. ಐರೋಡಿ ಅವರ ಬಗೆಗಿನ ವಿಡಿಯೋ ಒಂದನ್ನು ಇಲ್ಲಿ ನೋಡಬಹುದು.

ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ ಇಲ್ಲಿ ಯಕ್ಷಗಾನ ಕಲಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ʼಭಾರತ ರತ್ನ ವೀರ ಅಭಿಮನ್ಯುʼ ಯಕ್ಷಗಾನ ಪ್ರದರ್ಶನ ನಡೆಯಲಿದೆ.

ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎನ್.ಚೌಡರೆಡ್ಡಿ, ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಕಾನೂನು ಸಲಹೆಗಾರ ವಿ.ಮುನಿರಾಜು, ಕಾರ್ಯದರ್ಶಿ ರಾಜೇಶ ಕೆ.ಹೆಗಡೆ, ಟ್ರಸ್ಟಿಗಳಾದ ನೆತ್ರಕೆರೆ ಉದಯಶಂಕರ ನಾರಾಯಣ ಭಟ್, ಕೆ.ಪಿ.ಸುಗುಣನ್ ಉಪಸ್ಥಿತರಿರುವರು.


ವಾರ್ಷಿಕೋತ್ಸವ ಸಿದ್ಧತೆಯ ಹಿನ್ನೆಲೆಯಲ್ಲಿ ಯಕ್ಷಗಾನ ಕಲಿಯುತ್ತಿರುವ ಮಕ್ಕಳ ಸೃಜನಾತ್ಮಕ ಪ್ರತಿಭೆಯ ಕೆಲವು ವಿಡಿಯೋ ಹಾಗೂ ಚಿತ್ರಗಳು ಇಲ್ಲಿವೆ.





PARYAYA: ಯಕ್ಷ ಕಲಾ ಕೌಸ್ತುಭಕ್ಕೆ ವಾರ್ಷಿಕೋತ್ಸವ ಸಂಭ್ರಮ:   ಯಕ್ಷ ಕಲಾ ಕೌಸ್ತುಭಕ್ಕೆ ವಾರ್ಷಿಕೋತ್ಸವ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂ...

Sunday, November 8, 2026

PARYAYA: ದೀಪಾವಳಿ ಸಂಭ್ರಮ: ಧನಲಕ್ಷ್ಮಿ, ಕೇದಾರನಾಥೇಶ್ವರ ಪೂಜೆ

 ದೀಪಾವಳಿ ಸಂಭ್ರಮ: ಧನಲಕ್ಷ್ಮಿ, ಕೇದಾರನಾಥೇಶ್ವರ ಪೂಜೆ

ಬೆಂಗಳೂರು ನಗರ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯ ದೇವಸ್ಥಾನದಲ್ಲಿ ೨೦೨೬ ನವೆಂಬರ್‌ ೦೮ರ ಭಾನುವಾರ ಮುಂಜಾನೆಯಿಂದಲೇ ದೀಪಾವಳಿ ಸಂಭ್ರಮ.

ದೇವಾಲಯದಲ್ಲಿ ಕಳೆದ ಒಂದು ವರ್ಷದಿಂದ ಯಕ್ಷಗಾನ ತರಗತಿಗಳನ್ನು ನಡೆಸುತ್ತಿರುವ ಯಕ್ಷ ಕಲಾ ಕೌಸ್ತುಭದ ವಾರ್ಷಿಕೋತ್ಸವ ಆಮಂತ್ರಣ ಪತ್ರಿಕೆಗೆ ಬೆಳಗ್ಗೆ ಪೂಜೆ. ಸಂಜೆ ದೀಪಾವಳಿಯ ಪ್ರಯುಕ್ತ ಧನಲಕ್ಷ್ಮಿ, ಕೇದಾರನಾಥೇಶ್ವರನಿಗೆ ವಿಶೇಷ ಪೂಜೆ ನಡೆಯಿತು.

ಈ ವಿಶೇಷ ಸಂದರ್ಭಕ್ಕೆ ಶ್ರೀ ಮುನಿರಾಜು ಮತ್ತು ಕುಟುಂಬ, ಶ್ರೀ ರಾಜೇಂದ್ರ ಕುಮಾರ್‌ ಮತ್ತು ಕುಟುಂಬ ಹಾಗೂ ದೇವಾಲಯದ ಗೌರವ ಅಧ್ಯಕ್ಷ ಶ್ರೀ ಕೃಷ್ಣಯ್ಯ ಶೆಟ್ಟಿ ಮತ್ತು ಕುಟುಂಬದವರಿಂದ ಸುಡುಮದ್ದು  (ಪಟಾಕಿ) ಸೇವೆ- ಪ್ರಸಾದ ಸೇವೆ, ಮಧು ಭಟ್‌ ಪೂರ್ಲುಪಾಡಿ ಅವರಿಂದ ವಿದ್ಯುತ್‌ ದೀಪ ಸೇವೆ ನಡೆಯಿತು.

ಇದೇ ಶುಭ ಸಂದರ್ಭದಲ್ಲಿ ದೇವರ ದೀಪ, ತಟ್ಟೆ ಇತ್ಯಾದಿ ಪೂಜಾ ಸಾಮಗ್ರಿಗಳ ಸ್ವಚ್ಛತೆಗಾಗಿ ವ್ಯವಸ್ಥೆಯನ್ನು ಶ್ರೀ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಶ್ರೀ ಚೌಡರೆಡ್ಡಿ ಅವರು ಮಾಡಿಸಿದರು. ಇದಕ್ಕಾಗಿ ವಾಶ್‌ ಬೇಸಿನನ್ನು ಸಂಪಿಗೆ ಹಳ್ಳಿಯ ಭಕ್ತ ಮುರಳೀಧರ್‌  ಅವರು ಒದಗಿಸಿದರೆ, ಉಳಿದ ಖರ್ಚು ವೆಚ್ಚಗಳನ್ನು ಅಧ್ಯಕ್ಷರೇ ವಹಿಸಿದರು. ಈ ಕೈಂಕರ್ಯದಲ್ಲಿ ಉಪಾಧ್ಯಕ್ಷ ಶಿವಪ್ಪ ಶಾಂತಪ್ಪನವರ, ಶ್ರೀ ಹಂಪಣ್ಣ ಮತ್ತಿತರರು ನೆರವಾಗಿದ್ದರು.


ಈ ಸಂದರ್ಭದ ಕೆಲವು ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ.


೨೦೨೬ ನವೆಂಬರ್‌ ೧೫ರ ಭಾನುವಾರ ನಡೆಯಲಿರುವ ಯಕ್ಷ ಕಲಾ ಕೌಸ್ತುಭದ ಪ್ರಥಮ ವಾರ್ಷಿಕೋತ್ಸವದ ಆಮಂತ್ರಣ ಪತ್ರಿಕೆಗೆ ಪೂಜೆ.

ಮಹಾ ಮಂಗಳಾರತಿ.


ಇವರು ಇಲ್ಲಿಗೆ ಏಕೆ ಬಂದಿದ್ದಾರೆ ಗೊತ್ತಾ? ಇಲ್ಲಿ ಕ್ಲಿಕ್‌ ಮಾಡಿ ನೋಡಿ

PARYAYA: ದೀಪಾವಳಿ ಸಂಭ್ರಮ: ಧನಲಕ್ಷ್ಮಿ, ಕೇದಾರನಾಥೇಶ್ವರ ಪೂಜೆ:   ದೀಪಾವಳಿ ಸಂಭ್ರಮ: ಧನಲಕ್ಷ್ಮಿ, ಕೇದಾರನಾಥೇಶ್ವರ ಪೂಜೆ ಬೆಂ ಗಳೂರು ನಗರ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವ...

Monday, November 2, 2026

PARYAYA: ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು

 ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು

೨೦೨೬ ನವೆಂಬರ್‌ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷಣಗಳು ಇಲ್ಲಿವೆ. (ಸಮೀಪ ನೋಟಕ್ಕೆ ಚಿತ್ರವನ್ನು ಕ್ಲಿಕ್‌ ಮಾಡಿ).

ಇದನ್ನೂ ಓದಿರಿ:

ಅಭಿನಂದನೆಗಳು ವಿಶ್ವನಾಥ ಸುವರ್ಣ…

ಕನ್ನಡ ರಾಜ್ಯೋತ್ಸವ ಸಂಭ್ರಮ

PARYAYA: ರಾಜ್ಯೋತ್ಸವ ಪ್ರಶಸ್ತಿ: ಸಂಭ್ರಮದ ಕ್ಷಣಗಳು:   ರಾಜ್ಯೋತ್ಸವ ಪ್ರಶಸ್ತಿ : ಸಂಭ್ರಮದ ಕ್ಷಣಗಳು ೨ ೦೨೬ ನವೆಂಬರ್‌ ೦೧ರ ಭಾನುವಾರ ನಡೆದ ಪ್ರಸ್ತುತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಂಭ್ರಮದ ಕ್ಷ...

Sunday, November 1, 2026

PARYAYA: ಕನ್ನಡ ರಾಜ್ಯೋತ್ಸವ ಸಂಭ್ರಮ

 ಕನ್ನಡ ರಾಜ್ಯೋತ್ಸವ ಸಂಭ್ರಮ

ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ನವೆಂಬರ್‌ ೦೧ರ ಭಾನುವಾರ ೭೧ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.

ಬಡಾವಣೆಯ ಹಿರಿಯ ಸದಸ್ಯ, ಹೋಟೆಲ್‌ ಉದ್ಯಮಿ, ಶಿವಮೊಗ್ಗ ಜಿಲ್ಲೆ ತೀರ್ಥ ಹಳ್ಳಿ ತಾಲೂಕಿನ ಕಾಸರವಳ್ಳಿ ಮೂಲದ ಕೆ.ಎಂ. ನಾಗರಾಜ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿ ʼಪ್ರತಿದಿನವೂ ಕನ್ನಡ ಮಾತನಾಡುವ ಮೂಲಕ ಕನ್ನಡವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಭಾಷೆಯನ್ನು ಬೆಳೆಸಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಬಡಾವಣೆಯ ನಿವಾಸಿ ಭಾಸ್ಕರ್‌ ಅವರು ಭಾಷೆಯನ್ನು ನಿತ್ಯ ಮಾತನಾಡುವ ಕೆಲಸ ಪ್ರತಿಯೊಬ್ಬರ ಮನೆ ಮನೆಗಳಲ್ಲಿ ಮಾತೃಭಾಷೆ ಬಳಕೆಗೆ ಆದ್ಯತೆ ನೀಡುವಲ್ಲಿಂದಲೇ ಆರಂಭವಾಗಬೇಕು ಎಂದು ಹೇಳಿದರು.

ಬಡಾವಣೆಯ ಹಿರಿಯ ಸದಸ್ಯ, ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಚೌಡರೆಡ್ಡಿ, ಮೊಗ್ತೇಸರರಾದ ಶ್ರೀ ಮುನಿರಾಜು, ಬಾಲಾಜಿ ಕೃಪಾ ಬಡಾವಣೆ ನಿವಾಸಿಗಳ ಸಂಘದ ಅಧ್ಯಕ್ಷ ರಾಜೇಶ ಹೆಗಡೆ ಮುಖ್ಯ ಅತಿಥಿ ನಾಗರಾಜ್‌- ಶಕುಂತಲಾ ದಂಪತಿಯನ್ನು ಸನ್ಮಾನಿಸಿದರು. ರಾಜೇಶ್‌ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.

ದೇವಸ್ಥಾನ ಸೇವಾ ಸಮಿತಿಯ ಮೊಕ್ತೇಸರ ಎಚ್.ವಿ. ಉದಯಶಂಕರ್‌, ನಾಗೇಶ್‌ ರಾಘವಯ್ಯ, ಪ್ರವೀಣ್‌, ಕೆ.ಪಿ. ಸುಗುಣನ್‌, ಹಂಪಣ್ಣ, ಮತ್ತಿತರರು ಪಾಲ್ಗೊಂಡಿದ್ದರು. ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು. ನಾಗರಾಜ್‌ ಅವರು ಕಾರ್ಯಕ್ರಮದ ಬಳಿಕ ಲಘು ಉಪಾಹಾರದ ವ್ಯವಸ್ಥೆ ಮಾಡಿದ್ದರು.





PARYAYA: ಕನ್ನಡ ರಾಜ್ಯೋತ್ಸವ ಸಂಭ್ರಮ:   ಕನ್ನಡ ರಾಜ್ಯೋತ್ಸವ ಸಂಭ್ರಮ ಬೆಂ ಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ೨೦೨೬ನವೆಂಬರ್‌ ೦೧ರ ಭಾನುವಾರ ೭೧ನೇ ಕನ್ನಡ ರಾಜ್ಯೋತ್ಸವವನ್ನು ಆಚರ...