Showing posts with label Science. Show all posts
Showing posts with label Science. Show all posts

Tuesday, September 2, 2025

PARYAYA: ಇರುವೆ ಕಡಿತದ ರಹಸ್ಯ..!

 ಇರುವೆ ಕಡಿತದ ರಹಸ್ಯ..!

ರುವೆಗಳು ಕಚ್ಚಿದಾಗ ಚರ್ಮದ ಮೇಲೆ ಉರಿಯ ಅನುಭವ ಆಗುತ್ತದೆ. ಇದಕ್ಕೆ ಕಾರಣವೇನು?
ವಾಸ್ತವವಾಗಿ ಇರುವೆಗಳು ಕಚ್ಚುತ್ತವೆಯೇ ಅಥವಾ ಚರ್ಮದ ಮೇಲೆ ಆಸಿಡ್‌ ಬಿಡುತ್ತವೆಯೇ?

ಇರುವೆ ಕಚ್ಚಿದಾಗ ಚರ್ಮದ ಮೇಲೆ ಉರಿಯುವ ಅನುಭವ ಆಗುವುದು ಸಹಜ. ಇದಕ್ಕೆ ಪ್ರಮುಖ ಕಾರಣ ಇರುವೆಗಳು ಚರ್ಮದ ಮೇಲೆ ಒಂದು ರೀತಿಯ ಆಮ್ಲವನ್ನು (ಆಸಿಡ್‌) ಬಿಡುವುದು.

ಇರುವೆಗಳು ಕಚ್ಚಿದಾಗ ಆಗುವುದೇನು?

ವಾಸ್ತವವಾಗಿ ಇರುವೆಗಳು ನಮ್ಮನ್ನು ಕಚ್ಚುತ್ತವೆ ಮತ್ತು ಕಚ್ಚಿದ ಕೂಡಲೇ ತಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಫಾರ್ಮಿಕ್ ಆಸಿಡ್ (Formic Acid) ಎಂಬ ಆಮ್ಲವನ್ನು ಚರ್ಮದ ಮೇಲೆ ಚುಚ್ಚುತ್ತವೆ.

ಈ ಪ್ರಕ್ರಿಯೆಯನ್ನು ಹೀಗೆ ವಿವರಿಸಬಹುದು:

  1. ಕಚ್ಚುವಿಕೆ: ಮೊದಲಿಗೆ ಇರುವೆ ತನ್ನ ಬಾಯಿಯ ಭಾಗದಿಂದ (mandibles) ನಿಮ್ಮ ಚರ್ಮವನ್ನು ಹಿಡಿಯುತ್ತದೆ ಅಥವಾ ಕಚ್ಚುತ್ತದೆ.
  2. ಆಸಿಡ್ ಚುಚ್ಚುವುದು: ನಂತರಇರುವೆ ತನ್ನ ಹಿಂಭಾಗದಲ್ಲಿರುವ ಒಂದು ಸಣ್ಣ ಕುಟುಕಿನ (stinger) ಮೂಲಕ ಫಾರ್ಮಿಕ್ ಆಸಿಡ್ ಅನ್ನು ಚರ್ಮದ ಒಳಗೆ ಸೇರಿಸುತ್ತದೆ.

ಈ ಫಾರ್ಮಿಕ್ ಆಸಿಡ್ ನಮ್ಮ ಚರ್ಮದ ಜೀವಕೋಶಗಳನ್ನು ಕೆರಳಿಸುತ್ತದೆ (irritates). ಇದರಿಂದಾಗಿ ನಾವು ಆ ಜಾಗದಲ್ಲಿ ತೀವ್ರವಾದ ಉರಿನೋವು ಮತ್ತು ಕೆಲವೊಮ್ಮೆ ತುರಿಕೆಯನ್ನು ಅನುಭವಿಸುತ್ತೇವೆ. ಇದೇ ಕಾರಣಕ್ಕೆ ಇರುವೆ ಕಚ್ಚಿದಾಗ ಆ ಜಾಗ ಕೆಂಪಾಗುತ್ತದೆ ಮತ್ತು ಉಬ್ಬಿದಂತೆ ಕಾಣುತ್ತದೆ.

ಹಾಗಾಗಿಇರುವೆ ಕೇವಲ ಕಚ್ಚುವುದಲ್ಲಕಚ್ಚಿದ ಕೂಡಲೇ ತಮ್ಮ ರಕ್ಷಣಾತ್ಮಕ ಅಸ್ತ್ರವಾದ ಫಾರ್ಮಿಕ್ ಆಸಿಡ್ ಅನ್ನು ಚರ್ಮದ ಮೇಲೆ ಬಿಡುವುದರಿಂದ ನೋವು ಮತ್ತು ಉರಿ ಉಂಟಾಗುತ್ತದೆ.

ಈ ವಿಷಯಕ್ಕೆ ಸಂಬಂಧಿಸಿದ ಸ್ವಾರಸ್ಯಕರ ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿ.

PARYAYA: ಇರುವೆ ಕಡಿತದ ರಹಸ್ಯ..!:   ಇರುವೆ ಕಡಿತದ ರಹಸ್ಯ..! ಇ ರುವೆಗಳು ಕಚ್ಚಿದಾಗ ಚರ್ಮದ ಮೇಲೆ ಉರಿಯ ಅನುಭವ ಆಗುತ್ತದೆ . ಇದಕ್ಕೆ ಕಾರಣವೇನು ? ವಾಸ್ತವವಾಗಿ ಇರುವೆಗಳು ಕಚ್ಚುತ್ತವೆಯೇ ಅಥವಾ ಚರ್ಮ...

Sunday, April 27, 2025

PARYAYA: ಗೊತ್ತಾ ನಿಮಗೆ ಮೋರ್ಸ್‌ ಕೋಡ್?

 ಗೊತ್ತಾ ನಿಮಗೆ ಮೋರ್ಸ್‌ ಕೋಡ್?

ಕ್‌ ಟಕ್‌ ಟಕ್‌ ಟಕ್‌ ಟಕ್‌ ಎಂಬ ಧ್ವನಿ ಸಂಜ್ಞೆಯ ಮೂಲಕ ಸಂದೇಶ ಅಥವಾ ಮಾಹಿತಿ ರವಾನಿಸುವ ವಿಧಾನವನ್ನು ಮೋರ್ಸ್‌ ಕೋಡ್‌ ಅಥವಾ ಮೋರ್ಸ್‌ ಸಂಜ್ಞೆ ಎಂದು ಕರೆಯುತ್ತೇವೆ. ಈ ಸಂಜ್ಞಾ ಭಾಷೆಯ ಸಂಶೋಧಕ ಸ್ಯಾಮ್ಯುಯೆಲ್‌ ಮೋರ್ಸ್.‌ ಅವರನ್ನು ಗೌರವಿಸಲು ಮತ್ತು ಈ ಸಂವಹನ ವಿಧಾನವನ್ನು ಸಂಭ್ರಮಿಸಲು ಏಪ್ರಿಲ್‌ 27ರ ದಿನಾಂಕವನ್ನು  ʼಮೋರ್ಸ್‌ ಕೋಡ್‌ ದಿನʼವಾಗಿ ಆಚರಿಸಲಾಗುತ್ತದೆ.

ಈಗಿನ ಮೊಬೈಲ್‌ ಯುಗದ ಯುವಕರು, ಬಾಲಕ, ಬಾಲಕಿಯರಿಗೆ ಇದು ತಮಾಷೆಯಾಗಿ ಕಾಣಬಹುದು. ಆದರೆ ಸುಮಾರು ನೂರೈವತ್ತು ವರ್ಷಗಳ ಹಿಂದೆ ಈ ಸಂವಹನ ಮಾಧ್ಯಮ ಕ್ರಾಂತಿಕಾರಿ ಸಂವಹನ ವಿಧಾನವಾಗಿ ಎಲ್ಲರ ಗಮನ ಸೆಳೆದಿತ್ತು. ಅಲ್ಲಿಯವರೆಗೆ ಸಂದೇಶಗಳನ್ನು ಕಳುಹಿಸಲು ವಾರಗಳೇ ಬೇಕಾಗುತ್ತಿದ್ದವು. ಆದರೆ ಸ್ಯಾಮ್ಯುಯೆಲ್‌ ಮೋರ್ಸ್ ಅವರು ಆಲ್ಫ್ರೆಡ್ ವೈಲ್ ಮತ್ತು ಜೋಸೆಫ್ ಹೆನ್ರಿ ಅವರ ಜೊತೆಗೂಡಿ 1836ರಲ್ಲಿ ವಿದ್ಯುತ್ ಟೆಲಿಗ್ರಾಫ್‌ ಮೂಲಕ ಸಂವಹನದಲ್ಲಿ ಕ್ರಾಂತಿಯನ್ನು ಉಂಟುಮಾಡಿದರು.

ಮೊದಲಿಗೆಮೋರ್ಸ್ ಕೋಡ್ ಮೂಲಕ ಸಂಖ್ಯೆಗಳನ್ನು ಮಾತ್ರ ಸಂದೇಶವಾಗಿ ರವಾನಿಸಲಾಗುತ್ತಿತ್ತು. ಆದರೆ 1840 ರ ಹೊತ್ತಿಗೆವೈಲ್ ಅದನ್ನು ಅಕ್ಷರಗಳು ಮತ್ತು ವಿಶೇಷ ಅಕ್ಷರಗಳನ್ನು ಸೇರಿಸಲು ಸಾಧ್ಯವಾಗುವಂತೆ ಪರಿಷ್ಕರಿಸಿದರು. ಕ್ರಮೇಣ ಇದರ ಬಳಕೆ ಹೆಚ್ಚಿತು. 1851ರಲ್ಲಿ ಐರೋಪ್ಯ ರಾಷ್ಟ್ರಗಳು ಅಂತಾರಾಷ್ಟ್ರೀಯವಾಗಿ ವಿವಿಧ ಭಾಷೆಗಳಲ್ಲಿ ಬಳಸಲು ಸಾಧ್ಯವಾಗುವಂತೆ ಮೋರ್ಸ್‌ ಕೋಡನ್ನು ಅಭಿವೃದ್ಧಿ ಪಡಿಸಿದವು. ಅದಕ್ಕೊಂದು ಜಾಗತಿಕ ಮಾನದಂಡವನ್ನು ರೂಪಿಸಿದವು.

ಇದಿಷ್ಟು ಮೋರ್ಸ್‌ ಕೋಡಿನ ಕಥೆ. ಈಗಲೂ ಈ ಟಕ್‌ ಟಕ್‌ ಟಕ್‌ ಟಕ್‌ ಸಂಜ್ಞಾ ಸಂವಹನವನ್ನು ಬಳಸಲು ಸಾಧ್ಯವಿದೆ. ಈಗ ಇದನ್ನು ಆನ್‌ ಲೈನ್‌ ಕೋರ್ಸುಗಳ ಮೂಲಕ ಕಲಿಯಬಹುದು. ಅಥವಾ ವಿಡಿಯೋಗಳ ಮೂಲಕವೂ ಕಲಿಯಬಹುದು.

ನೀವು ಮೋರ್ಸ್‌ ಸಂಜ್ಞೆ ಬಳಸುವ ಮೂಲಕ ಇತರರ ಗಮನ ಸೆಳೆಯಬಹುದು. ವಿನೋದಕ್ಕಾಗಿ ಮೋರ್ಸ್‌ ಸಂಜ್ಞಾ ಸಂದೇಶ ಕಳುಹಿಸಿ ಸ್ನೇಹಿತರನ್ನು ಚಕಿತಗೊಳಿಸಬಹುದು. ಆನ್‌ ಲೈನ್‌ ಪರಿಕರಗಳನ್ನು ಬಳಸಿ ಈ ಸಂಕೇತಗಳನ್ನು ಗಟ್ಟಿಯಾಗಿ ಹೇಳುವಂತೆ ಸವಾಲು ಹಾಕಬಹುದು.

ಕಲಿಯುವ ಮೂಲಕ ಇರಬಹುದು, ಸಂಜ್ಞೆಯನ್ನು ಬಿಡಿಸುವ ಮೂಲಕ ಇರಬಹುದು ಅಥವಾ ಈ ಸಂಜ್ಞಾ ಭಾಷೆಯನ್ನು ಪ್ರಯೋಗಿಸುವ ಮೂಲಕ ಇರಬಹುದು- ಹೀಗೇ ಯಾವುದೇ ರೀತಿಯಲ್ಲೂ ಇದನ್ನು ಬಳಸುವ ಮೂಲಕ ಒಂದೂವರೆ ಶತಕದ ಹಿಂದೆ ಇತಿಹಾಸ ಸೃಷ್ಟಿಸಿದ್ದ ಈ ಚಾರಿತ್ರಿಕ ಆವಿಷ್ಕಾರವನ್ನು ನೀವು ಮೆಚ್ಚಬಹುದು, ಪ್ರಶಂಸಿಸಬಹುದು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ ಲಿಂಕ್‌ ಕ್ಲಿಕ್‌ ಮಾಡಿರಿ.

PARYAYA: ಗೊತ್ತಾ ನಿಮಗೆ ಮೋರ್ಸ್‌ ಕೋಡ್?:   ಗೊತ್ತಾ ನಿಮಗೆ ಮೋರ್ಸ್‌ ಕೋಡ್? ಟ ಕ್‌ ಟಕ್‌ ಟಕ್‌ ಟಕ್‌ ಟಕ್‌ ಎಂಬ ಧ್ವನಿ ಸಂಜ್ಞೆಯ ಮೂಲಕ ಸಂದೇಶ ಅಥವಾ ಮಾಹಿತಿ ರವಾನಿಸುವ ವಿಧಾನವನ್ನು ಮೋರ್ಸ್‌ ಕೋಡ್‌ ಅಥವಾ ಮೋರ್ಸ...

Thursday, April 24, 2025

PARYAYA:  ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!ನಾನು ಹಬ...

 ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!

ನಾನು ಹಬಲ್.‌ ಕಳೆದ 35 ವರ್ಷಗಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

35 ವರ್ಷಗಳ ಹಿಂದೆ 1990ರ ಏಪ್ರಿಲ್ 24ರಂದು ಅಮೆರಿಕದ ನಾಸಾ ಬಾಹ್ಯಾಕಾಶ ಕೇಂದ್ರವು ಡಿಸ್ಕವರಿ ಬಾಹ್ಯಾಕಾಶ ನೌಕೆಯ ಮೂಲಕ ನನ್ನನ್ನು ಬಾಹ್ಯಾಕಾಶಕ್ಕೆ ಏರಿಸಿತು ಮತ್ತು ಬಾಹ್ಯಾಕಾಶದ ವಿವಿಧ ಮಜಲುಗಳ ಚಿತ್ರ ತೆಗೆಯುವ ಕಾರ್ಯಕ್ಕೆ ನನ್ನನ್ನು ನಿಯೋಜಿಸಿತು.

ಈ 35 ವರ್ಷಗಳಲ್ಲಿ ನಾನು ಬಾಹ್ಯಾಕಾಶದ ಲಕ್ಷಾಂತರ ಚಿತ್ರಗಳನ್ನು ತೆಗೆದು ಭೂಮಿಗೆ ಕಳುಹಿಸಿದ್ದೇನೆ. ನಾನು ಬಾಹ್ಯಾಕಾಶಕ್ಕೆ ಏರಿದ ಈದಿನದ ಆಚರಣೆಗೆ ಈ ಚಿತ್ರಗಳು ಅಪೂರ್ವವಾಗಿದ್ದು ಬ್ರಹ್ಮಾಂಡಕ್ಕೆ ಹೊಸ ಉಡುಗೊರೆಯಾಗಿವೆ ಎಂದು ನನ್ನನ್ನು ಇಲ್ಲಿಗೆ ಕಳುಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ.

ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಾನು ಕಳುಹಿಸಿದ ಚಿತ್ರಗಳು ಅನುಕೂಲಕರವಾಗಿವೆಯಂತೆ. ಬಾಹ್ಯಾಕಾಶ ಪಯಣದ ಇತಿಹಾಸದಲ್ಲಿ ನಾನು ಅತ್ಯಂತ ಪ್ರತಿಮಾರೂಪದ ವೈಜ್ಞಾನಿಕ ಸಾಧನಗಳಲ್ಲಿ ಒಂದಾಗಿದ್ದೇನೆ ಎಂದು ಅವರು ಹೇಳುತ್ತಿದ್ದಾರೆ.

ʼಬ್ರಹ್ಮಾಂಡದ ಅಸ್ಪಷ್ಟ ರಹಸ್ಯವನ್ನು ಸ್ಪಷ್ಟ ಕಣ್ಣಿನ ಅನ್ವೇಷಣೆಯಾಗಿ ಪರಿವರ್ತಿಸಿದ ಯಂತ್ರ ನಾನುʼ ಎಂದೂ ವಿಜ್ಞಾನಿಯೊಬ್ಬರು ಬಣ್ಣಿಸಿದ್ದಾರೆ.

"35 ವರ್ಷಗಳ ಹಿಂದೆ ಉಡಾವಣೆಯಾದಾಗ ಹಬಲ್ ವಿಶ್ವಕ್ಕೆ ಹೊಸ ಕಿಟಕಿಯನ್ನು ತೆರೆಯಿತು" ಎಂದು ನಾಸಾ ಪ್ರಧಾನ ಕಚೇರಿಯಲ್ಲಿರುವ ಖಗೋಳ ಭೌತಶಾಸ್ತ್ರ ವಿಭಾಗದ ಕಾರ್ಯಕಾರಿ ನಿರ್ದೇಶಕ ಶಾನ್ ಡೊಮಗಲ್-ಗೋಲ್ಡ್‌ಮನ್ ಹೇಳಿದರಂತೆ.

"ಅದರ ಬೆರಗುಗೊಳಿಸುವ ಚಿತ್ರಣವು ಪ್ರಪಂಚದಾದ್ಯಂತ ಜನರಿಗೆ ಸ್ಫೂರ್ತಿ ನೀಡಿತು ಮತ್ತು ಆ ಚಿತ್ರಗಳ ಹಿಂದಿನ ದತ್ತಾಂಶವು ಆರಂಭಿಕ ಗ್ಯಾಲಕ್ಸಿಗಳಿಂದ ಹಿಡಿದು ನಮ್ಮದೇ ಸೌರವ್ಯೂಹದ ಗ್ರಹಗಳವರೆಗೆ ಎಲ್ಲದರ ಬಗ್ಗೆ ಹಲವಾರು ಅಚ್ಚರಿಗಳನ್ನು ಬಹಿರಂಗ ಪಡಿಸಿತು” ಎಂದು ಹೇಳಿದ್ದು ಗೋಲ್ಡಮನ್ ಮಾರಾಯರೇ -‌ ನಾನಲ್ಲ.”

ಏನೋ, ನನಗೆ ಗೊತ್ತಿಲ್ಲ. ಈ ವರ್ಷ ನನ್ನ ಬಾನಿಗೇರಿದ ವರ್ಷಾಚರಣೆಗಾಗಿ ಒಂದಷ್ಟು ಚಿತ್ರಗಳನ್ನು ವಿಶ್ವಕ್ಕೆ ಕಳುಹಿಸಿಬಿಡಬೇಕು ಎಂದು ತೀರ್ಮಾನಿಸಿ, ನಾಸಾ ಒಂದಷ್ಟು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವುಗಳಲ್ಲಿ ನನಗೆ ಪ್ರಮುಖ ಅನ್ನಿಸಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ ನೋಡಿ.

ಮೇಲಿನಿಂದ ಎಡಕ್ಕೆ: ಡಿಸೆಂಬರ್ 2024 ರ ಕೊನೆಯಲ್ಲಿ ಭೂಮಿಯಿಂದ ಸರಿಸುಮಾರು 61 ಮಿಲಿಯನ್ ಮೈಲುಗಳಷ್ಟು ದೂರದಲ್ಲಿದ್ದಾಗ ಕಂಡು ಬಂದ ಮಂಗಳ ಗ್ರಹ ಇದು. ನನ್ನ ವಿಶಿಷ್ಟ ನೇರಳಾತೀತ ಸಾಮರ್ಥ್ಯದಿಂದ ಬಹಿರಂಗಗೊಂಡ ತೆಳುವಾದ ನೀರು-ಮಂಜುಗಡ್ಡೆಯ ಮೋಡಗಳು ಕೆಂಪು ಗ್ರಹಕ್ಕೆ ಹಿಮಭರಿತ ನೋಟವನ್ನು ನೀಡಿವೆ.

ಮೇಲಿನಿಂದ ಬಲಕ್ಕೆಇದು ಗ್ರಹ ನೀಹಾರಿಕೆ NGC 2899. ನೋಡಲು ಪತಂಗದಂತೆ ಕಾಣುವ ನೀಹಾರಿಕೆಯು ಮಧ್ಯದಲ್ಲಿ ಸುಮಾರು 40,000-ಡಿಗ್ರಿ-ಫ್ಯಾರನ್‌ಹೀಟ್ ಉಷ್ಣಾಂಶದೊಂದಿಗೆ ಸಾಯುತ್ತಿರುವ ನಕ್ಷತ್ರ ಅಂದರೆ ʼಬಿಳಿ ಕುಬ್ಜʼದಿಂದ ಬರುತ್ತಿರುವ ವಿಕಿರಣ ಮತ್ತು ನಾಕ್ಷತ್ರಿಕ ಗಾಳಿಗಳ ಹೊರಹರಿವಿನಿಂದಾಗಿ ಹೀಗೆ ಪತಂಗವನ್ನು ಕೆತ್ತಿ ಇಟ್ಟಿರುವಂತೆ ಕಾಣುತ್ತಿದೆ.

ಕೆಳಗಿನಿಂದ ಎಡಕ್ಕೆ: ರಕ್ಕಸನಂತೆ ಕಾಣುತ್ತಿದೆಯಲ್ಲ? ಇದು ರೋಸೆಟ್ ನೀಹಾರಿಕೆ. ಇದು ಬೃಹತ್ ನಕ್ಷತ್ರವೊಂದು ರೂಪುಗೊಳ್ಳುತ್ತಿರುವ ಪ್ರದೇಶದ  ಸಣ್ಣ ಭಾಗ. ಧೂಳಿನಿಂದ ಕೂಡಿದ ಹೈಡ್ರೋಜನ್ ಅನಿಲದ ಕರಿಯ ಮೋಡಗಳು ಇಂತಹ ರೂಪವನ್ನು ಇದಕ್ಕೆ ನೀಡಿವೆ.

ಕೆಳಗಿನಿಂದ ಬಲಭಾಗಕ್ಕೆಇದು NGC 5335 ನಕ್ಷತ್ರಪುಂಜಇದು ಒಂದು ಚಪ್ಪಟೆಯಾದ ಸುರುಳಿಯಾಕಾರದ ನಕ್ಷತ್ರಪುಂಜ. ಇದರ ಡಿಸ್ಕ್‌ನಾದ್ಯಂತ ನಕ್ಷತ್ರ ರಚನೆಯ ತೇಪೆಯ ಸ್ಟ್ರೀಮರ್‌ಗಳಿವೆ. ನಕ್ಷತ್ರಪುಂಜದ ಮಧ್ಯಭಾಗವನ್ನು ಗಮನಾರ್ಹವಾದ ಲಟ್ಟಣಿಗೆಯಂತಹ ರಚನೆಯು ವಿಭಜಿಸುತ್ತದೆ.

ಈ ಚಿತ್ರಗಳಿಗೆ ಸಂಬಂಧಿಸಿದಂತೆ ನಾಸಾದ ವಿಜ್ಞಾನಿಯೊಬ್ಬರು ನೀಡಿದ ವಿವರಣೆಯ ವಿಡಿಯೋ 👇👇👇 ಒಂದನ್ನು ಕೂಡಾ ನಾಸಾ ಬಿಡುಗಡೆ ಮಾಡಿದೆ.


ಹೆಚ್ಚಿಲ್ಲ, ಒಂದೈದು ನಿಮಿಷ ಬಿಡುವು ಮಾಡಿಕೊಂಡು ಈ ವಿಡಿಯೋ ಒಳಹೊಕ್ಕು ನೋಡಿ. ನಿಮ್ಮ ಭೂಮಿಯಾಚೆ ಇರುವ ಈ ನಭೋ ಮಂಡಲದಲ್ಲಿ ಎಂತೆಂತಹ ವಿಸ್ಮಯಗಳಿವೆ ಎಂಬುದು ನಿಮಗೆ ಗೊತ್ತಾಗುತ್ತದೆ. ಈ ಬಾಹ್ಯಾಕಾಶ ಯಾನ ಅದೆಷ್ಟು ಸುಂದರ ಎಂದು ನಂತರ ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಖಂಡಿತ.

-ನೆತ್ರಕೆರೆ ಉದಯಶಂಕರ.

ಇವುಗಳನ್ನೂ ಓದಿ:

ಇಸ್ರೋದಿಂದ ಕೋವಿಡ್ ಲಾಕ್‌ಡೌನ್ ನಂತರ ಮೊದಲ ಭೂ ವೀಕ್ಷಣೆ ಉಪಗ್ರಹ ಉಡಾವಣೆ
ಮೂರ್ಜೆ ಸುನಿತಾ ಪ್ರಭುವಿಗೆ ಪ್ರಧಾನ ಮಂತ್ರಿ ಬಾಲ ಪುರಸ್ಕಾರ

Indian-American Scientist to Get Rare Honour
Prestigious INSA Teachers Award to Prof. R Vasudeva
Ancient India had Planes: Claim at Indian Science Congress

PARYAYA:  ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..!ನಾನು ಹಬ...:   ಬನ್ನಿ ನಾನು ಹಬಲ್..‌ ಬಾನಂಗಳದಲ್ಲಿ ವಿಹರಿಸೋಣ..! ನಾ ನು ಹಬಲ್ .‌ ಕಳೆದ 35 ವರ್ಷಗ ಳಿಂದ ಬಾಹ್ಯಾಕಾಶದಲ್ಲಿ ಇದ್ದುಕೊಂಡೇ ದೂರದರ್ಶಕವಾಗಿ ಕಾರ್ಯ ನಿರ್ವಹಿಸುತ್ತಿದ್ದ...

Thursday, November 8, 2018

ಬಂತು ಮಡಚುವ ಸ್ಮಾರ್ಟ್ ಫೋನ್ ..!

ಬಂತು ಮಡಚುವ ಸ್ಮಾರ್ಟ್ ಫೋನ್ ..!

ಸ್ಯಾನ್ ಫ್ರಾನ್ಸಿಸ್ಕೋ: ಹೌದು. ಇದೀಗ ಮಡಚುವ ಸ್ಮಾರ್ಟ್ ಫೋನ್!  ತನ್ನ ಮಡಚುವ (ಫೋಲ್ಡೇಬಲ್) ಸ್ಮಾರ್ಟ್ ಫೋನನ್ನು ಸ್ಯಾಮ್ಸಂಗ್ ನೇ ನವೆಂಬರ್ ೨೦೧೮  ಗುರುವಾರ  ಇದೇ ಮೊತ್ತ ಮೊದಲ ಬಾರಿಗೆ ಅನಾವರಣಗೊಳಿಸಿತು.
ತನ್ನಮಡಚುವ ಫೋನ್ತಂತ್ರಜ್ಞಾನವನ್ನು ಇನ್ಫಿನಿಟಿ ಫ್ಲೆಕ್ಸ್ ಡಿಸ್ಪ್ಲೇ ಎಂಬುದಾಗಿ ಸ್ಯಾಮ್ಸಂಗ್ ಬಣ್ಣಿಸಿದೆ.  ಟ್ಯಾಬ್ಲೆಟ್- ಗಾತ್ರದ ಪರದೆಯನ್ನು ಹೊಂದಿರುವ ಸ್ಮಾರ್ಟ್ ಫೋನನ್ನು ನೀವು ಆರಾಮವಾಗಿ ಮಡಚಿ ಪುಟ್ಟ ಸ್ಮಾರ್ಟ್ ಫೋನ್ ನಂತೆಯೇ ನಿಮ್ಮ ಕಿಸೆಯೊಳಕ್ಕೆ ಸೇರಿಸಿಕೊಳ್ಳಬಹುದು.

ತನ್ನ ಅಭಿವೃದ್ಧಿ ಸಮ್ಮೇಳದಲ್ಲಿ  ಹೊಸ ತಂತ್ರಜ್ಞಾನದ ಫೋನನ್ನು ಅನಾವರಣಗೊಳಿಸಿದ ಸ್ಯಾಮ್ಸಂಗ್ ವಿನ್ಯಾಸದ ಅಂಶಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ  "ಮರೆಮಾಚುವ" ಸಾಧನವನ್ನು ಪ್ರದರ್ಶಿಸಿ, ದೀಪಗಳನ್ನು ಮಬ್ಬಾಗಿಸಿತು.

"
ಇಲ್ಲಿ ಒಂದು ಸಾಧನವಿದೆ ಮತ್ತು ಇದು ನಿಮ್ಮನ್ನು ಬೆರಗುಗೊಳಿಸುತ್ತದೆ" ಎಂದು ಮೊಬೈಲ್ ಉತ್ಪನ್ನ ಮಾರಾಟದ ಎಸ್ವಿಪಿ ಜಸ್ಟಿನ್ ಡೆನಿಸನ್ ಸಮ್ಮೇಳನದಲ್ಲಿ ಪ್ರಕಟಿಸಿದರು.

ನಂತರ ಡೆನಿಸನ್ ಮಡಿಚಿದಾಗ ಕ್ಯಾಂಡಿಬಾರ್ ತರಹ ಕಾಣಿಸುವ ಸಾಧನವನ್ನು ತೋರಿಸಿದರು. ಸಾಧನವು ಕವಚ (ಕವರ್) ಹೊಂದಿದ್ದು , ಇದು ಫೋನ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಮುಖ್ಯವಾದ .-ಇಂಚಿನ ಡಿಸ್ ಪ್ಲೇ ಪರದೆಯನ್ನು ಒಳಗೊಂಡಿದೆ. ಸಾಧನವನ್ನು ಸಹಸ್ರಾರು ಬಾರಿ ಮಡಿಚಬಹುದು, ಯಾವುದೇ ಸಮಸ್ಯೆ ಇಲ್ಲ ಎಂದು ಅವರು ವಿವರಿಸಿದರು.

ಈ ಸ್ಯಾಮ್ಸಂಗ್ ಫೋನ್ ಏಕ ಕಾಲಕ್ಕೆ ಮೂರು ಆಪ್ ಗಳನ್ನು ತೋರಿಸುತ್ತದೆ.  ಸ್ಯಾಮ್ಸಂಗ್ ಡೆನಿಸನ್ ಪ್ರಕಾರ "ತಿಂಗಳಲ್ಲೇ ಮಾರುಕಟ್ಟೆಗೆ ಬರಲಿರುವ  ಇನ್ಫಿನಿಟಿ ಫ್ಲೆಕ್ಸ್’ ಇಷ್ಟರಲ್ಲೇ ಸಾಧನಗಳನ್ನು ಸಾಮೂಹಿಕವಾಗಿ ಉತ್ಪಾದಿಸಲಿದೆ.

ಸ್ಯಾಮ್ಸಂಗ್ ಅಷ್ಟೇ ಅಲ್ಲ,  ಇತರ ಕಂಪೆನಿಗಳೂ ಇದೀಗ ಈ ನಿಟ್ಟಿನಲ್ಲಿ ಕಾರ್ಯ ಆರಂಭ ಮಾಡಿವೆ.
ಆಂಡ್ರಾಯ್ಡ್ ಸಹಯೋಗದೊಂದಿಗೆ ಹೊಸ ಮಡಚುವ ಸಾಧನಗಳ ತಯಾರಿಗೆ ಗೂಗಲ್ ಅಧಿಕೃತವಾಗಿ ಬೆಂಬಲ ನೀಡಿದೆ. ಮುಂದಿನ ವರ್ಷ ಫೋನ್ ಪ್ರಾರಂಭಿಸಲು ಸ್ಯಾಮ್ಸಂಗ್ ಜೊತೆಗೆ  ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ.

ಈ ಮಧ್ಯೆ, ಹುವಾವೇ ಮುಂದಿನ ವರ್ಷ ಒಂದು ಮಡಿಚುವ ಸಾಧನ ಬಿಡುಗಡೆ ಮಾಡಲು ಯೋಜಿಸಿದೆ. ಲೆನೊವೊ ಮತ್ತು ಕ್ಸಿಯಾಮಿಯೊ ತಮ್ಮ ಸ್ವಂತ ಮೂಲ ಮಾದರಿಗಳನ್ನು ಮಾಡಲಾರಂಭಿಸಿವೆ.
ಮೈಕ್ರೋಸಾಫ್ಟ್ ಕೂಡಾ ಒಂದು ಮಲ್ಟಿಸ್ಕ್ರೀನ್ ಸಾಧನ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮೈಕ್ರೋಸಾಫ್ಟ್ ಸರ್ಫೇಸ್ ಮುಖ್ಯಸ್ಥ ಪನೋಸ್ ಪನಾಯೆ  ಅವರು  ಪಾಕೆಟೇಬಲ್ ಸರ್ಫೇಸ್ ಸಾಧನವು "ಸಂಪೂರ್ಣವಾಗಿ ನನ್ನ ಕೂಸು" ಎಂದು ಪ್ರತಿಪಾದಿಸಿದ್ದಾರೆ.

ನೀವು ಬಹುಶಃ ಎಂದಿಗೂ ಹೆಸರನ್ನೇ ಕೇಳಿರದ ಫೋನ್ ತಯಾರಕರು ಕೂಡ ಇಂತಹ ಸಾಧನಗಳ ತಯಾರಿಗೆ ಪ್ರಯೋಗ ನಡೆಸುತ್ತಿದ್ದು, ಬಹುತೇಕ ೨೦೧೯ ರಲ್ಲಿ ಇಂತಹ ಹಲವಾರು ಸಾಧನಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


Saturday, November 3, 2018

ಮತ್ತೊಂದು ಎಂಜಿನಿಯರಿಂಗ್ ವಿಸ್ಮಯ ’ದೆಹಲಿಯ ಸಿಗ್ನೇಚರ್ ಬ್ರಿಜ್’

ಮತ್ತೊಂದು ಎಂಜಿನಿಯರಿಂಗ್ ವಿಸ್ಮಯ ’ದೆಹಲಿಯ ಸಿಗ್ನೇಚರ್ ಬ್ರಿಜ್

೨೦೧೮ ನವೆಂಬರ್ ರಂದು ಉದ್ಘಾಟನೆ
ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಯಮುನಾ ಮೇಲೆ ನಿರ್ಮಿಸಲಾಗಿರುವ  ದೇಶದ ಇನ್ನೊಂದು ಎಂಜಿನಿಯರಿಂಗ್ ವಿಸ್ಮಯ  ಸಿಗ್ನೇಚರ್ ಬ್ರಿಡ್ಜ್ ೨೦೧೮ ನವೆಂಬರ್ ರಂದು ಭಾನುವಾರ ಉದ್ಘಾಟನೆಯಾಗಲಿದೆ.
ಸಿವಿಲ್  ಎಂಜಿನಿಯರಿಂಗ್  ಕ್ಷೇತ್ರದ  ಇನ್ನೊಂದು ವಿಸ್ಮಯ ಸಾಧನೆಯನ್ನು ವೀಕ್ಷಿಸಲು ಆಗಮಿಸುವಂತೆ ದೆಹಲಿ ಸರ್ಕಾರ್ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು 2018 ನವೆಂಬರ್ 3 ಶನಿವಾರ  ಸಾರ್ವಜನಿಕರಿಗೆ ಮನವಿ ಮಾಡಿದರು.

ನಿರ್ಮಾಣಕ್ಕೆ ಬರೋಬ್ಬರಿ 14 ವರ್ಷಗಳನ್ನು ತೆಗೆದುಕೊಂಡಿರುವ  ಸೇತುವೆಯ ಮೇಲಿನಿಂದ, ಪ್ಯಾರಸ್ಸಿನ ಐಫೆಲ್ ಗೋಪುರದಿಂದ ಇಡೀ ಪ್ಯಾರಿಸ್ಸಿನ ವೀಕ್ಷಣೆ ಹೇಗೆ ಸಾಧ್ಯವೋ ಹಾಗೆಯೇ ರಾಜಧಾನಿಯ ವಿಹಂಗಮ ನೋಟವನ್ನು ಆಸ್ವಾದಿಸಲು ಸಾಧ್ಯವಿದೆ ಎಂದು ಸಿಸೋಡಿಯಾ ವಿವರಿಸಿದರು.

ಒಟ್ಟು ೫೦ ಜನರನ್ನು ಒಯ್ಯುವ ಸಾಮರ್ಥ್ಯವಿರುವ ನಾಲ್ಕು ಎಲಿವೇಟರುಗಳು ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಕರೆದೊಯ್ಯುತ್ತವೆ ಎಂದು ಸಿಸೋಡಿಯಾ ನುಡಿದರು.

ಸೇತುವೆಯ ವಿಶೇಷತೆಗಳೇನು?
* ಸೇತುವೆಯು ೧೫೪ ಮೀಟರ್ ಎತ್ತರದ ಗಾಜಿನ ವೀಕ್ಷಣಾ ಪೆಟ್ಟಿಗೆಯನ್ನು ಹೊಂದಿರುತ್ತದೆ, ಎತ್ತರವು ಕುತುಬ್ ಮಿನಾರಿನ ಎರಡು ಪಟ್ಟು ಎತ್ತರವಾಗಿದೆ.

* ಒಟ್ಟು 50 ಜನರನ್ನು ಮೇಲಕ್ಕೆ ಎತ್ತುವ ಸಾಮರ್ಥ್ಯವಿರುವ  ನಾಲ್ಕು ಎಲಿವೇಟರುಗಳು ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಒಯ್ಯುತ್ತವೆ.
* ೫೭೫-ಮೀಟರ್ ಸೇತುವೆಯು ತಮ್ಮ ವಿಶೇಷ ಕ್ಷಣಗಳ ಸೆರೆಹಿಡಿಯಲು ಪ್ರವಾಸಿಗರಿಗೆ ಸೆಲ್ಫಿ ತಾಣಗಳನ್ನು ಸಹ ಹೊಂದಿದೆ.
* ಸೇತುವೆಯು ಭಾರತದ ಮೊತ್ತ ಮೊದಲ ಅಸಮಪಾರ್ಶ್ವದ (ಅಸಿಮೆಟ್ರಿಕಲ್) ಕೇಬಲ್-ಇರುವ ಸೇತುವೆ ಎಂದು ಪರಿಗಣಿತವಾಗಿದೆ.

* ಸೇತುವೆಯು ಉತ್ತರ ಮತ್ತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಅಭಿವೃದ್ಧಿಯ ಎರಡನೇ ಹಂತದಲ್ಲಿ ಸೇತುವೆಯು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ.

* ೨೦೦೪ ರಲ್ಲಿ ಸೇತುವೆ ನಿರ್ಮಾಣದ  ಘೋಫಣೆಯಾದಾಗ ಇದಕ್ಕೆ ೪೯೪ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ನಂತರ, ನಿರ್ಮಾಣ ವೆಚ್ಚ ಏರುತ್ತಾ ಹೋಗಿ, ದೆಹಲಿಯಲ್ಲಿ ನಡೆದ ೨೦೧೦ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ರೂ. ,೧೩೧ ಕೋಟಿ ಮೌಲ್ಯದ ಅಂದಾಜಿನಲ್ಲಿ ಇದನ್ನು ಪೂರ್ಣಗೊಳಿಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಬಳಿಕವೂ ಪ್ರಕಟಿಸಲಾದ ಗಡುವುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಈಗ ಪೂರ್ಣಗೊಳ್ಳುವ ವೇಳೆಗೆ ಇದರ ವೆಚ್ಚ 1594 ಕೋಟಿ ರೂಪಾಯಿಗಳಿಗೆ ಏರಿದೆ.

* ಸೇತುವೆಯ ವಜೀರಿಬಾಗ್ ಸೇತುವೆ ಮೇಲಿನ ಸಂಚಾರ ಭಾರವನ್ನು ಗಣನೀಯವಾಗಿ ಇಳಿಸಲಿದೆ.