Showing posts with label ಜಮ್ಮು- ಕಾಶ್ಮೀರ. Show all posts
Showing posts with label ಜಮ್ಮು- ಕಾಶ್ಮೀರ. Show all posts

Tuesday, November 27, 2018

ಪತ್ರಕರ್ತ ಶುಜಾತ್ ಬುಖಾರಿ ಹಂತಕ ನವೀದ್ ಜಟ್ಟ್ ಹತ್ಯೆ

ಪತ್ರಕರ್ತ ಶುಜಾತ್ ಬುಖಾರಿ ಹಂತಕ ನವೀದ್ ಜಟ್ಟ್ ಹತ್ಯೆ
ಶ್ರೀನಗರ: ಕಾಶ್ಮೀರದ ಬಡಗಮ್ ಜಿಲ್ಲೆಯಲ್ಲಿ ಹಿರಿಯ ಪತ್ರಕರ್ತ, ‘ರೈಸಿಂಗ್ ಕಾಶ್ಮೀರ ಸಂಪಾದಕ ಶುಜಾತ್ ಬುಖಾರಿ ಅವರನ್ನು ಕೊಲೆ ಮಾಡಿದ ಭಯೋತ್ಪಾದಕ ನವೀದ್ ಜಟ್ಟ್ ಸೇರಿದಂತೆ ಲಷ್ಕರ್--ತೊಯ್ಬಾ (ಎಲ್ ಇಟಿ)ಭಯೋತ್ಪಾದಕ ಸಂಘಟನೆಯ  ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳೊಂದಿಗೆ 2018 ನವೆಂಬರ್ 28 ಬುಧವಾರ ನಡೆದ ಗುಂಡಿನ ಘರ್ಷಣೆಯಲ್ಲಿ ಹತರಾಗಿದ್ದಾರೆ.

ಬುಕಾರಿ ಅವರು  ಹಿರಿಯ ಪತ್ರಕರ್ತ ಮತ್ತುರೈಸಿಂಗ್ ಕಾಶ್ಮೀರಪತ್ರಿಕೆಯ ಸಂಪಾದಕರಾಗಿದ್ದು, ವರ್ಷದ ಜೂನ್ ತಿಂಗಳಲ್ಲಿ ಶ್ರೀನಗರದ ಹೃದಯಭಾಗದಲ್ಲಿರುವ ತಮ್ಮ ಪತ್ರಿಕಾ ಕಚೇರಿಯ ಹೊರಭಾಗದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದರು.

ಬುಧವಾರ ಬೆಳಗ್ಗೆ ಉಗ್ರಗಾಮಿಗಳು ಅಡಗಿರುವ ಬಗ್ಗೆ ಲಭಿಸಿದ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಉಗ್ರಗಾಮಿಗಳು ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಪಡೆಗಳೂ ಪ್ರತಿಗುಂಡು ಹಾರಿಸಿದವು. ಬಳಿಕ ತೀವ್ರ ಗುಂಡಿನ ಘರ್ಷಣೆ ನಡೆಯಿತು ಎಂದು ಸುದ್ದಿಮೂಲಗಳು ತಿಳಿಸಿವೆ.

ಮುನ್ನೆಚ್ಚರಿಕೆಯ ಕ್ರಮವಾಗಿ ಬಡ್ಗಮ್ನಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ಹೇಳಿದವು.

ಪಾಕಿಸ್ತಾನದ ಮೂಲದ ಎಲ್ ಇಟಿ ಸದಸ್ಯನಾಗಿದ್ದ ಉಗ್ರಗಾಮಿ ನವೀದ್ ಜಟ್ಟ್  ಶ್ರೀನಗರದ ಶ್ರೀ ಮಹಾರಾಜಾ ಹರಿ ಸಿಂಗ್ ಆಸ್ಪತ್ರೆಯಿಂದ 2018  ಫೆಬ್ರುವರಿಯಲ್ಲಿ ತಪ್ಪಿಸಿಕೊಂಡಿದ್ದ. ಬಳಿಕ
ಆತ ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ೨೦೧೩-೨೦೧೪ರ ಅವಧಿಯಲ್ಲಿ ಹಲವಾರು ಉಗ್ರಾಗಾಮಿ ದಾಳಿಗಳಲ್ಲಿ ಪಾಲ್ಗೊಂಡಿದ್ದ.

ಮುಲ್ತಾನಿನ ಟ್ರಕ್ ಚಾಲಕನೊಬ್ಬನ ಮಗನಾದ ಜಟ್ಟ್ ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ದಾಖಲೆಗಳ ಪ್ರಕಾರ, ಅನಂತನಾಗ್ ಜಿಲ್ಲೆಯ ಸೆಂಪೋರಾ ಬಿಜ್ ಬೆಹರಾದಲ್ಲಿ ೨೦೧೪ ಸೆಪ್ಟೆಂಬರ್ ೧೯ ರಂದು ನವೀದ್ ಜಟ್ಟ್ ನನ್ನು ಬಂಧಿಸಲಾಗಿತ್ತು. ಕೊಲೆ ಮತ್ತು ಕೊಲೆಯತ್ನ ಆರೋಪದ ಪ್ರಕರಣಗಳಲ್ಲಿ ಆತನನ್ನು  ಶ್ರೀನಗರ ರೈನಾವರಿ ಸೆರೆಮನೆಯಲ್ಲಿ ಬಂಧಿಸಿ ಇಡಲಾಗಿತ್ತು.

ರಾಜ್ಯದ ಅನೇಕ ಭಯೋತ್ಪಾದನಾ ದಾಳಿ ಕೃತ್ಯಗಳಿಗೆ ಸಂಬಂಧಿಸಿದಂತೆ ಜಟ್ಟ್ ಪೊಲೀಸರಿಗೆ ಬೇಕಾಗಿದ್ದ.
ಅಬು ಹಂಜುಲ್ಲ ಎಂಬುದಾಗಿಯೂ ಕರೆಯಲ್ಪಡುತ್ತಿದ್ದ ಜಟ್ಟ್, ದಾಳಿಯೊಂದರಲ್ಲಿ ಇಬ್ಬರು ಪೊಲೀಸರನ್ನು ಮತ್ತು ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರನನ್ನು ಕೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಾಕಿಸ್ತಾನದ
ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಿವಾಸಿಯಾಗಿದ್ದ ಆತ  ಇನ್ನೊಂದು ದಾಳಿಯಲ್ಲಿ ಐವರು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಗಂಭೀರವಾಗಿ ಗಾಯಗೊಳಿಸಿದ್ದ.

Thursday, November 22, 2018

ಕಾಶ್ಮೀರ ಗುಂಡಿನ ಘರ್ಷಣೆ: 6 ಉಗ್ರರ ಹತ್ಯೆ


ಕಾಶ್ಮೀರ ಗುಂಡಿನ ಘರ್ಷಣೆ: 6 ಉಗ್ರರ ಹತ್ಯೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಬಿಜ್ ಬೆಹರಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಜೊತೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ 6 ಮಂದಿ ಉಗ್ರಗಾಮಿಗಳು 2018 ನವೆಂಬರ್ 23 ಶುಕ್ರವಾರ ಹತರಾದರು.

ಭಾರತೀಯ ಸೇನೆ ಮತ್ತು ರಾಜ್ಯ ಪೊಲೀಸರ ಕಾರ್ಯಾಚರಣೆ ಪ್ರಾರಂಭಿಸಿದ ಬಳಿಕ ಉಗ್ರಗಾಮಿಗಳು ಭದ್ರತಾ ಪಡೆಗಳ ಜೊತೆ ಗುಂಡಿನಘರ್ಷಣೆ ಆರಂಭಿಸಿದ್ದರು.

"ಗುಂಡಿನ ಘರ್ಷಣೆ ಸಂಭವಿಸಿದ ಸ್ಥಳದಲ್ಲಿ  ಸಮರದಲ್ಲಿ ಬಳಸುವಂತಹ ಸೊತ್ತುಗಳ ಸಂಗ್ಹವನ್ನು ನಾವು ವಶ ಪಡಿಸಿಕೊಂಡಿದ್ದೇವೆಎಂದು ಸೇನಾ ವಕ್ತಾರ ರಾಜೇಶ್ ಕಾಲಿಯಾ ಹೇಳಿದರು.

ಘರ್ಷಣೆ- ಕಾರ್ಯಾಚರಣೆ ಇನ್ನು ಮುಂದುವರೆದಿದೆ ಎಂದು ಅಧಿಕಾರಿಗಳು ಅಧಿಕಾರಿಗಳು ತಿಳಿಸಿದ್ದಾರೆ.

ಆರು ಅಥವಾ ಏಳು ಉಗ್ರಗಾಮಿಗಳು  ಸೀಕ್ಪೋರಾ  ಹಳ್ಳಿಯಲ್ಲಿ ಅಡಗಿಕೊಂಡಿದ್ದಾರೆ ಎಂಬ ವಿಶ್ವಸನೀಯ ಮಾಹಿತಿಯ ಮೇರೆಗೆ ಸ್ಥಳಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು ಎಂದು ಅವರು ಹೇಳಿದರು.

ಇದಕ್ಕೆ ಮುನ್ನ ಇನ್ನೊಂದು  ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ  ಕುಲಗಂ ಖುದ್ವಾನಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಘರ್ಷಣೆ  ಸಂಭವಿಸಿ, ಒಬ್ಬ ನಾಗರಿಕ ಮೃತನಾಗಿದ್ದು, ಹಲವರು ಗಾಯಗೊಂಡಿದ್ದರು.

ಗಾಯಾಳುಗಳೆಲ್ಲರನ್ನೂ  ಆಸ್ಪತ್ರೆಗೆ ಸೇರಿಸಲಾಗಿದ್ದು, ಶೋಧ ಕಾರ್ಯಾಚರಣೆಗಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿವೆ.

ನವೆಂಬರ್ ೧೮ ರಂದು ಸಂಭವಿಸಿದ್ದ ಘಟನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಶೊಪಿಯಾನ್ ಜಿಲ್ಲೆಯ ಜೈನಪೊರಾ ಗ್ರಾಮದ ರೆಬ್ಬಾನ್  ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿ  ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಉಗ್ರಗಾಮಿಗಳು ೧೯ ವರ್ಷದ ಹದಿಹರೆಯದ ಯುವಕನನ್ನು ಅಪಹರಿಸಿ ಕೊಂದ ಘಟನೆಯ ಬಳಿಕ  ಗುಂಡಿನ ಘರ್ಷಣೆ ಸಂಭವಿಸಿತ್ತು.

ಭಯೋತ್ಪಾದಕರು ಪ್ರದೇಶದಲ್ಲಿ ಅವಿತಿರುವ ಬಗ್ಗೆ ನಿರ್ದಿಷ್ಟ ಮಾಹಿತಿ ಲಭಿಸಿದ್ದನ್ನು ಅನುಸರಿಸಿ ಪ್ರದೇಶಕ್ಕೆ ಮುತ್ತಿಗೆ ಹಾಕಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು.

"ಶೋಧ ಕಾರ್ಯಾಚರಣೆಯು ನಡೆಯುತ್ತಿದ್ದಾಗ ಅಡಗಿದ್ದ ಭಯೋತ್ಪಾದಕರು ಗುಂಡು ಹಾರಿಸಿದರು. ಭದ್ರತಾ ಸಿಬ್ಬಂದಿಯೂ  ಗುಂಡಿನ ಉತ್ತರ ನೀಡಿದರು. ಬಳಿಕ ನಡೆದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾದರು.  ಘಟನಾ ಸ್ಥಳದಲ್ಲಿ ಸತ್ತ ಭಯೋತ್ಪಾದಕರ ಶವ ಪತ್ತೆ ಹಚ್ಚಲಾಗಿದ್ದು, ಗುರುತು ಪತ್ತೆಗೆ ಯತ್ನಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Tuesday, October 30, 2018

ಭಯೋತ್ಪಾದಕ ಮಸೂದ್ ಅಜರನ ಅಣ್ಣನ ಮಗ ಖತಮ್

ಭಯೋತ್ಪಾದಕ ಮಸೂದ್ ಅಜರನ ಅಣ್ಣನ ಮಗ ಖತಮ್

ನವದೆಹಲಿ: ಜೈಶ್-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ, ಮುಂಬೈ ಭಯೋತ್ಪಾದಕ ದಾಳಿಯ ಪಾತಕಿ ಮೌಲಾನಾ ಮಸೂದ್ ಅಜರ ಸಹೋದರ ಸಂಬಂಧಿ (ಅಣ್ಣನ ಮಗ)  ಉಗ್ರಗಾಮಿ ಮೊಹಮ್ಮದ್ ಉಸ್ಮಾನನನ್ನು ಭದ್ರತಾ ಪಡೆಗಳು ಮಂಗಳವಾರ 30 ಅಕ್ಟೋಬರ್ 2018 ಮಂಗಳವಾರ ಕೊಂದು ಹಾಕಿವೆ.

ಕಾಶ್ಮೀರ ಕಣಿವೆಯಲ್ಲಿ ಕಳೆದ 10 ದಿನಗಳಿಂದ ಭದ್ರತಾ ಪಡೆಗಳ ಮೇಲೆ ಮರೆಯಿಂದ ಅಡಗಿ ದಾಳಿಗಳನ್ನು ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಮೊಹಮ್ಮದ್ ಉಸ್ಮಾನ್ನ ಹತ್ಯೆಯು  ಭದ್ರತಾ ಪಡೆಗಳು ವರ್ಷ ಸಾಧಿಸಿದ ಮಹಾನ್ ಯಶಸ್ಸುಗಳಲ್ಲಿ ಒಂದು ಎಂದು ಭದ್ರತಾ ಪಡೆಗಳು ಹೇಳಿವೆ.

ಮೊಹಮ್ಮದ್ ಉಸ್ಮಾನ್ ಜೆಇಎಂ  ಮುಖ್ಯಸ್ಥ ಮೌಲಾನಾ ಮಸೂದ್ ಅಜರನ ಹಿರಿಯ ಸಹೋದರ  ಇಬ್ರಾಹಿಂನ ಪುತ್ರ. ಈತ 1999ರಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರನನ್ನು ಬಿಡಿಸಿಕೊಳ್ಳುವ ಸಲುವಾಗಿ ನಡೆದಿದ್ದ ಐಟಿ-814 ವಿಮಾನ ಅಪಹರಣದಲ್ಲಿ ಶಾಮೀಲಾಗಿದ್ದ.

ವರ್ಷದ ಹಿಂದೆ ಕಾಶ್ಮೀರ ಕಣಿವೆಗೆ ನುಸುಳಿದ್ದ ಎನ್ನಲಾಗಿರುವ ಮೊಹಮ್ಮದ್ ಉಸ್ಮಾನ್ ಜೈಶ್ ಸಂಘಟನೆಯನ್ನು ಬಲಾಢ್ಯ ಪಡಿಸುವ ಸಲುವಾಗಿ  ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎರಡು ವಾರಗಳಿಂದ ಸಕ್ರಿಯನಾಗಿದ್ದ ಈತ 4 ಸದಸ್ಯರ ಮರೆಯಿಂದ ದಾಳಿ ನಡೆಸುವ ಉಗ್ರರ ತಂಡಗಳನ್ನು ರಚಿಸಿ ಅವುಗಳ ಮೂಲಕ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ.ಈದಿನ ನಡೆದ ಭದ್ರತಾ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಅವರ ಪೈಕಿ ಮೊಹಮ್ಮದ್ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: