Showing posts with label ಇಮ್ರಾನ್ ಖಾನ್. Show all posts
Showing posts with label ಇಮ್ರಾನ್ ಖಾನ್. Show all posts

Wednesday, July 24, 2019

ಸರ್ಕಾರಗಳು ಸತ್ಯ ಹೇಳಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಸರ್ಕಾರಗಳು ಸತ್ಯ ಹೇಳಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದಲ್ಲಿ 40  ಭಯೋತ್ಪಾದಕ  ಗುಂಪುಗಳ ಕಾರ್ಯಾಚರಣೆ
ವಾಷಿಂಗ್ಟನ್: ಪಾಕಿಸ್ತಾನದ ಸರ್ಕಾರಗಳು ನಿರಂತರವಾಗಿ ಕಳೆದ 15 ವರ್ಷಗಳಲ್ಲಿ ಅಮೆರಿಕಕ್ಕೆ ಸತ್ಯ ಹೇಳಲಿಲ್ಲ, ನಮ್ಮ ದೇಶದಲ್ಲಿ 40 ವಿವಿಧ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುತ್ತಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2019 ಜುಲೈ 23ರ ಮಂಗಳವಾರ (ಭಾರತದಲ್ಲಿ ಬುಧವಾರ ಜುಲೈ 24) ಇಲ್ಲಿ ಹೇಳಿದರು.
‘ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದ  ಅಮೆರಿಕದ  ಜೊತೆ ಹೋರಾಟ ನಡೆಸಿದ್ದೆವು. 9/11ರ ಭಯೋತ್ಪಾದಕ ದಾಳಿಯವರೆಗೆ ಪಾಕಿಸ್ತಾನ ಈ ವಿಚಾರಕ್ಕೆ ಕೈಹಾಕಿರಲಿಲ್ಲ.  ಅಲ್ ಖೈದಾ ಆಫ್ಘಾನಿಸ್ಥಾನದಲ್ಲಿತ್ತು. ಪಾಕಿಸ್ತಾನದಲ್ಲಿ ಉಗ್ರಗಾಮಿ ತಾಲಿಬಾನಿಗಳು ಇರಲಿಲ್ಲ.  ಆದರೆ  ನಾವು ಹೋರಾಟದಲ್ಲಿ ಅಮೆರಿಕದ ಜೊತೆ ಸೇರಿದೆವು. ದುರದೃಷ್ಟವೆಂದರೆ ಪರಿಸ್ಥಿತಿಗಳು ಬದಲಾದಾಗ ನಾವು ಅಮೆರಿಕಕ್ಕೆ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬ ಸತ್ಯವನ್ನು ಹೇಳಲಿಲ್ಲ,  ಇದಕ್ಕೆ ನಾನು ನಮ್ಮ ಸರ್ಕಾರಗಳನ್ನೇ  ದೂಷಿಸಬೇಕಾಗಿದೆ ಎಂದು ಇಮ್ರಾನ್ ಖಾನ್ ನುಡಿದರು.
ಕಾಂಗ್ರೆಸ್ ಸದಸ್ಯೆ ಶೀಲಾ ಜ್ಯಾಕ್ಸನ್ ಲೀ ಅವರ  ಏರ್ಪಡಿಸಿದ್ದ ಕ್ಯಾಪಿಟಲ್ ಹಿಲ್ ಸತ್ಕಾರ ಕೂಟದಲ್ಲಿ ಖಾನ್ ಮಾತನಾಡುತ್ತಿದ್ದರು. ಲೀ ಅವರು ಕಾಂಗ್ರೆಸ್ಸನಲ್ ಪಾಕಿಸ್ತಾನ ಕ್ಯಾಕಸ್ ಅಧ್ಯಕ್ಷರಾಗಿದ್ದಾರೆ. ಅವರು ಭಾರತದ ಕಾಂಗ್ರೆಸ್ಸನಲ್  ಅಂಡ್  ಇಂಡಿಯನ್  ಅಮೆರಿಕನ್ಸ್  ಸಂಸ್ಥೆಯ ಸದಸ್ಯರೂ ಆಗಿದ್ದಾರೆ.
ಪಾಕಿಸ್ತಾನಿ ಸರ್ಕಾರಳಿಗೆ ಭಯೋತ್ಪಾದಕರ ಮೇಲೆ ಯಾವುದೇ ನಿಯಂತ್ರಣವೂ ಇರದಿದ್ದುದೇ ಇದಕ್ಕೆ ಕಾರಣವಾಗಿತ್ತು ಎಂದು ಖಾನ್ ಹೇಳಿದರು.
ವಿವರಗಳಿಗೆ  ಕೆಳಗಿನ ಚಿತ್ರ ಕ್ಲಿಕ್ಕಿಸಿ:


Thursday, August 2, 2018

ಮೋದಿ ಸಹಿತ ಯಾರ ವಿದೇಶೀ ನಾಯಕರಿಗೂ ಇಮ್ರಾನ್ ಆಮಂತ್ರಣ ಇಲ್ಲ


ಮೋದಿ ಸಹಿತ ಯಾರೇ ವಿದೇಶೀ ನಾಯಕರಿಗೂ

ಇಮ್ರಾನ್ ಆಮಂತ್ರಣ ಇಲ್ಲ


ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ತಾವು ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೇ ವಿದೇಶೀ ನಾಯಕರನ್ನೂ ಆಹ್ವಾನಿಸದೇ ಇರಲು ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.

ತಮ್ಮ ಪದಗ್ರಹಣ ಸಮಾರಂಭವನ್ನು ಅತ್ಯಂತ ಸರಳ ಸಮಾರಂಭವನ್ನಾಗಿ ಇರಿಸಲು ಇಮ್ರಾನ್ ಖಾನ್ ಬಯಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಜುಲೈ 25ರ ಚುನಾವಣೆಯಲ್ಲಿ  ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದೆ.

ಇಮ್ರಾನ್ ಖಾನ್ ಅವರ ಪಕ್ಷವು ಈ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾರ್ಕ್ ನಾಯಕರನ್ನು, ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್, ಭಾರತೀಯ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್, ನವಜೋತ್ ಸಿಂಗ್ ಸಿಧು ಅವರನ್ನು ಸಮಾರಂಭಕ್ಕೆ ಆಮಂತ್ರಿಸಲು ಯೋಜಿಸಿತ್ತು.

ಆದರೆ ಗುರುವಾರ ತಮ್ಮ ಮನಸ್ಸು ಬದಲಾಯಿಸಿದ ಇಮ್ರಾನ್ ಖಾನ್ ಸಮಾರಂಭವನ್ನು ಅದ್ದೂರಿಯಾಗಿಸದೇ ಸರಳ ಸಮಾರಂಭವನ್ನಾಗಿ ಮಾಡಲು ಬಯಸಿದ್ದಾರೆ ಎಂದು ಪತ್ರಿಕಾ ವರದಿ ಹೇಳಿದೆ.