Showing posts with label ಇಂದಿನ ಇತಿಹಾಸ History Today. Show all posts
Showing posts with label ಇಂದಿನ ಇತಿಹಾಸ History Today. Show all posts

Wednesday, June 10, 2026

PARYAYA: ಇಂದಿನ ಇತಿಹಾಸ History Today ಜೂನ್ 10

 ಇಂದಿನ ಇತಿಹಾಸ History Today ಜೂನ್ 10

2026: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಈದಿನ (2026 ಜೂನ್ 10ರ ಬುಧವಾರ) ಭಾರತದ ಅತಿ ದೀರ್ಘಕಾಲ ಸತತವಾಗಿ ಚುನಾಯಿತರಾದ ಪ್ರಧಾನಿ ಎಂಬ ಹೊಸ ರಾಜಕೀಯ ಮೈಲಿಗಲ್ಲನ್ನು ಸ್ಥಾಪಿಸಿದರು. ಈ ಮೂಲಕ ಅವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದರು. ಮೇ 26, 2014 ರಂದು ಮೊದಲ ಬಾರಿಗೆ ಅಧಿಕಾರ ಸ್ವೀಕರಿಸಿದ ಮೋದಿಯವರು, ಜೂನ್ 10 ರಂದು ಪ್ರಧಾನಿಯಾಗಿ ಆ ಹುದ್ದೆಯಲ್ಲಿಯೇ ಸತತವಾಗಿ ಮುಂದುವರೆದು 4,399 ದಿನಕ್ಕೆ ಕಾಲಿರಿಸಿದರು. ಈ ಸಾಧನೆಯು, ಚುನಾವಣೆಗಳ ಮೂಲಕ ಆಯ್ಕೆಯಾದ ನಂತರ ಜವಾಹರಲಾಲ್ ನೆಹರೂ ಅವರು ಹೊಂದಿದ್ದ 4,398 ದಿನಗಳ ನಿರಂತರ ಅಧಿಕಾರದ ದಾಖಲೆಯನ್ನು ಮೀರಿಸಿತು. ಭಾರತದ ಮೊದಲ ಸಾರ್ವತ್ರಿಕ ಚುನಾವಣೆಗಳ ನಂತರ ಮೇ 13, 1952 ರಿಂದ ಮೇ 27, 1964 ರಂದು ತಮ್ಮ ನಿಧನದವರೆಗೆ ನೆಹರೂ ಅವರು ಸತತವಾಗಿ ಸೇವೆ ಸಲ್ಲಿಸಿದ್ದರು.

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಪ್ರಕರಣಗಳ ಏರಿಕೆ ಪ್ರಮಾಣ ಪ್ರತಿದಿನ ಅಂದಾಜು ೧೦,೦೦೦ಕ್ಕೆ ಏರಿದ್ದರ ನಡುವೆಯೂ ಇದೇ ಮೊದಲ ಬಾರಿಗೆ ಗುಣಮುಖರಾದ ಕೋವಿಡ್-೧೯ ರೋಗಿಗಳ ಸಂಖ್ಯೆಯು ಸಕ್ರಿಯ ಪ್ರಕರಣಗಳನ್ನು ಮೀರಿಸಿದೆ. ಆರೋಗ್ಯ ಸಚಿವಾಲಯವು  ೨೦೨೦ ಜೂನ್ ೧೦ರ ಬುಧವಾರ ಬಿಡುಗಡೆ ಮಾಡಿದ ಅಂಕಿಸಂಖ್ಯೆಗಳಿಂದ ವಿಚಾರವು ಬೆಳಕಿಗೆ ಬಂದಿತು. ರೋಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಕೊರೋನಾವೈರಸ್ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ,೩೫,೨೦೫ಕ್ಕೆ ಏರಿದೆ. ಇದೇ ವೇಳೆಗೆ ಬುಧವಾರದ ಅಂಕಿಸಂಖ್ಯೆಯಂತೆ ಭಾರತದಲ್ಲಿರುವ ಸಕ್ರಿಯ ಕೋವಿಡ್-೧೯ ಪ್ರಕರಣಗಳ ಸಂಖ್ಯೆ  ,೩೩,೬೩೨. ಒಟ್ಟಾರೆ ಚೇತರಿಕೆ ಪ್ರಮಾಣ ಶೇಕಡಾ ೪೯. ಭಾರತದ ಒಟ್ಟು ಕೊರೋನಾವೈರಸ್ ಸೋಂಕಿತರ ಸಂಖ್ಯೆ ಬುಧವಾರ .೭೬ ಲಕ್ಷವನ್ನು ಮೀರಿದ್ದು, ಸೋಂಕಿಗೆ ಬಲಿಯಾದವರ ಸಂಖ್ಯೆ ,೫೦೦ನ್ನು  ದಾಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಈವರೆಗೆ ಕೊರೋನಾವೈರಸ್ ಪತ್ತೆ ಸಲುವಾಗಿ ೫೦ ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದೆ. ಕಳೆದ ೨೪ ಗಂಟೆಗಳಲ್ಲಿ .೪೫ ಲಕ್ಷ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ೯೦,೦೦೦ ಪ್ರಕರಣಗಳೊಂದಿಗೆ ಮಹಾರಾಷ್ಟ್ರವು ಈಗಲೂ ದೇಶದ ಅತಿಬಾಧಿತ ರಾಜ್ಯವಾಗಿದೆ. ಕಳೆದ ೨೪ ಗಂಟೆಗಳಲ್ಲಿ ರಾಜ್ಯದಲ್ಲಿ ,೨೫೯ ಹೊಸ ಪ್ರಕರಣಗಳು ದಾಖಲಾದವು. ಆಶಾದಾಯಕ ವಿಚಾರವೇನೆಂದರೆ ಸುಮಾರು ಶೇಕಡಾ ೪೭ರಷ್ಟು ಕೋವಿಡ್ ರೋಗಿಗಳು ರಾಜ್ಯದಲ್ಲಿ ಚೇತರಿಸಿಕೊಂಡಿದ್ದಾರೆ. ಭಾರತದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾಸೋಂಕಿನಿಂದ ಗುಣಮುಖರಾದವರು ಪಂಜಾಬಿನಲ್ಲಿದ್ದಾರೆ. ರಾಜ್ಯದಲ್ಲಿ ಶೇಕಡಾ ೮೦ರಷ್ಟು ಕೊರೋನಾವೈರಸ್ ರೋಗಿಗಳು ಗುಣಮುಖರಾಗಿದ್ದಾರೆ. ಪಂಜಾಬಿನಲ್ಲಿ ಪ್ರಸ್ತುತ ೪೯೭ ಸಕ್ರಿಯ ಪ್ರಕರಣಗಳಿದ್ದರೆ, ,೧೬೭ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಆಸ್ಪತ್ರೆಯ ಹಾಸಿಗೆಗಳನ್ನು ಹುಡುಕಲು ಓಡಾಡುವ ರೋಗಿಗಳಿಗೆ ಸಹಾಯ ಮಾಡುವ ಸಲುವಾಗಿ, ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲಿ ಇರುವ ರೋಗಿಗಳು, ಹಾಸಿಗೆಗಳ ಲಭ್ಯತೆಯನ್ನು ಸೂಚಿಸುವ ಎಲೆಕ್ಟ್ರಾನಿಕ್ ಫಲPವನ್ನು ಆಸ್ಪತ್ರೆಗಳ ಪ್ರವೇಶದ್ವಾರದಲ್ಲಿ ಅಳವಡಿಸುವಂತೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ೨೦೨೦ ಜೂನ್ ೧೦ರ ಬುಧವಾರ ಆದೇಶ ನೀಡಿದರು. ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಸೂಕ್ತ ಆದೇಶ ನೀಡುವಂತೆ ಬೈಜಾಲ್ ಅವರು ಈಗಾಗಲೇ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರಿಗೆ ಸೂಚಿಸಿದರು. ಎಲೆಕ್ಟ್ರಾನಿಕ್ ಫಲಕಗಳ ಸಂಪರ್ಕವನ್ನು ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ಸ್ಥಾಪಿಸಲಾಗುವ ಕೇಂದ್ರ ನಿಯಂತ್ರಣ ಘಟಕಕ್ಕೆ ಒದಗಿಸುವಂತೆ ಕೂಡಾ ಲೆಫ್ಟಿನೆಂಟ್ ಗವರ್ನರ್ ಸೂಚಿಸಿದರು. ಸರ್ಕಾರವು ಹಿಂದೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಬಗ್ಗೆ ತಿಳಿಯಲು ಆಸ್ಪತ್ರೆಗಳಲ್ಲಿ ಎಲೆಕ್ಟ್ರಾನಿಕ್ ಫಲಕ ಅಳವಡಿಸುವುದರ ಜೊತೆಗೆ ಸರ್ಕಾರ ಸ್ಥಾಪಿಸಿದ ವೆಬ್ ಸೈಟ್ ಮತ್ತು ಆಪ್ಗಳನ್ನು ಬಳಸುವಂತೆ ಸಾರ್ವಜನಿಕರಿಗೆ ಸೂಚಿಸಿತ್ತು. ಆದರೆ ವೆಬ್ ಸೈಟ್ ಮತ್ತು ಆಪ್ಗಳಲ್ಲಿ ಹಾಸಿಗೆ ಲಭ್ಯತೆಯ ಮಾಹಿತಿ ಇದ್ದರೂ, ಆಸ್ಪತ್ರೆಗೆ ಹೋದಾಗಿ ಹಾಸಿಗೆ ಇಲ್ಲ ಎಂಬುದಾಗಿ ವಾಪಸ್ ಕಳುಹಿಸಲಾಗುತ್ತಿದೆ ಎಂಬ ದೂರುಗಳು ಬಂದಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಬೀಜಿಂಗ್:  ರಾಜತಾಂತ್ರಿಕರು ಮತ್ತು ಸೇನಾ ಅಧಿಕಾರಿಗಳ ನಡುವಣ ಮಾತುಕತೆಯ ಬಳಿಕ ಉಭಯ ದೇಶಗಳೂ ಪರಿಸ್ಥಿತಿ ಶಮನಕ್ಕೆ ಯತ್ನಿಸುತ್ತಿವೆ ಎಂದು ಚೀನಾ ೨೦೨೦ ಜೂನ್ ೧೦ರ ಬುಧವಾರ ಹೇಳಿತು. ಆದರೆ ಲಡಾಖ್ ವಾಸ್ತವಿಕ ನಿಯಂತ್ರಣ ರೇಖೆಯಿಂದ ಹಿಂದಕ್ಕೆ ತೆರಳುತ್ತಿರುವ ಉಭಯ ದೇಶಗಳ ಪಡೆಗಳ ವಿವರ ನೀಡಲು ಅದು ನಿರಾಕರಿಸಿತು. ಬುಧವಾರ ಇನ್ನೊಂದು ಸುತ್ತಿನ ಮಾತುಕತೆ ನಡೆಯುವುದಕ್ಕೆ ಮುಂಚಿತವಾಗಿ ಗಡಿಬಿಕ್ಕಟ್ಟನ್ನು ಕೊನೆಗೊಳಿಸುವ ಉದ್ದೇಶದಿಂದ ಉಭಯ ದೇಶಗಳ ಸೇನೆಗಳು ಪೂರ್ವ ಲಡಾಖ್ನಿಂದ ಸೀಮಿತ ಪ್ರಮಾಣದಲ್ಲಿ ಹಿಂದಕ್ಕೆ ಹೊರಟಿವೆ ಎಂಬುದಾಗಿ ಭಾರತೀಯ ಮಾಧ್ಯಮಗಳಲ್ಲಿ ಬಂದ ವರದಿಗಳಿಗೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಯಿಂಗ್ ಅವರು ಪ್ರತಿಕ್ರಿಯಿಸಿದರು. ಉಭಯ ದೇಶಗಳ ಸೇನೆಗಳು ಹಿಂದಿನ ಸ್ಥಳಗಳಿಂದ ಹಿಂದಕ್ಕೆ ಸಾಗುತ್ತಿವೆ ಎಂಬ ವರದಿಗಳ ಬಗ್ಗೆ ಪ್ರಶ್ನಿಸಿದಾಗಗಡಿಯುದ್ದಕ್ಕೂ ಉದ್ವಿಗ್ನತೆ ಶಮನಕ್ಕೆ ಉಭಯ ಕಡೆಗಳೂ ಕ್ರಮಗಳನ್ನು ಕೈಗೊಳ್ಳುತ್ತಿವೆಎಂದಷ್ಟೇ ಹುವಾ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸಮಸ್ಯೆ ಇತ್ಯರ್ಥಕ್ಕಾಗಿ ಶನಿವಾರ ನಡೆದ ಭಾರತ ಮತ್ತು ಚೀನಾ ನಡುವಣ ಸೇನಾ ಮಾತುಕತೆಗಳನ್ನು ನಿರ್ದಿಷ್ಟವಾಗಿ ಆಕೆ ಉಲ್ಲೇಖಿಸಲಿಲ್ಲ. ಇತೀಚೆಗೆ ಚೀನಾ ಮತ್ತು ಭಾರತದ ರಾಜತಾಂತ್ರಿಕ ಮತ್ತು ಸೇನಾ ಮಟ್ಟದಲ್ಲಿ ಗಡಿಯಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಪರಿಣಾಮಕಾರಿ ಸಂಪರ್ಕ ಸಾಧಿಸಲಾಗಿದೆ ಮತ್ತು ಧನಾತ್ಮಕ ಸಹಮತಕ್ಕೆ ಬರಲಾಗಿದೆಎಂದು ಆಕೆ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ಮುಂಬೈ: ಕೊರೋನಾವೈರಸ್ ಸಾಂಕ್ರಾಮಿಕದ ಪ್ರಾಥಮಿಕ ದಿನಗಳಲ್ಲಿ ಮುಂಬೈ ನಗರದಲ್ಲಿ ಕೋವಿಡ್ ಹಾಟ್ ಸ್ಪಾಟ್ ಆಗಿ ಪರಿವರ್ತನೆಗೊಂಡಿದ್ದ ಧಾರಾವಿ ಕೊಳಚೆಗೇರಿಯು ದಿನದಿಂದ ದಿನಕ್ಕೆ ಕಡಿಮೆ ಸೋಂಕಿನ ಪ್ರಕರಣಗಳನ್ನು ಕಾಣುತ್ತಿದೆ. ದೈನಂದಿನ ಸರಾಸರಿ ಸೋಂಕು ಪ್ರಕರಣಗಳು ಇಳಿಮುಖವಾಗುತ್ತಿವೆ. ಸೋಂಕು ನಿಯಂತ್ರಣಕ್ಕೆ ಧಾರಾವಿ ದಾರಿ ತೋರಿಸಿದೆ. ಏಷ್ಯಾದ ಅತಿದೊಡ್ಡ ಕೊಳಚೆಗೇರಿ ಆಗಿರುವ ಧಾರಾವಿಯಲ್ಲಿ ಜೂನ್ ಮೊದಲ ವಾರ ಕೊರೋನಾವೈರಸ್ ಸೋಂಕಿಗೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ ಬಲಿಯಾಗಿಲ್ಲ. ಮೇ ತಿಂಗಳಲ್ಲಿ ಸರಾಸರಿ ೪೭ ಪ್ರಕರಣಗಳು ವರದಿಯಾಗಿದ್ದ ಧಾರಾವಿಯಲ್ಲಿ ಜೂನ್ ಹೊತ್ತಿಗೆ ಸೋಂಕಿನ ಪ್ರಕರಣಗಳ ಸಂಖ್ಯೆ ೨೭ಕ್ಕೆ ಇಳಿದಿತ್ತು. ಸೋಂಕು ದುಪ್ಪಟ್ಟಾಗುವ ಪ್ರಮಾಣ ೪೪ ದಿನಗಳಿಗೆ ಏರಿತ್ತು. ಪ್ರದೇಶದಲ್ಲಿ ಒಟ್ಟು ಕೊರೋನಾವೈರಸ್ ಪ್ರಕರಣಗಳಲ್ಲಿ ಶೇಕಡಾ ೫೦ರಷ್ಟು ಪ್ರಕರಣಗಳಲ್ಲಿ ರೋಗಿಗಳು ಚೇತರಿಸಿದ್ದಾರೆ. ಜೂನ್ ೮ರಂದು ಪ್ರದೇಶದಲ್ಲಿ ೧೨ ಹೊಸ ಪ್ರಕರಣಗಳು ದಾಖಲಾದವು ಮತ್ತು ಜೂನ್ ೭ರಂದು ೧೩ ಹೊಸ ಪ್ರಕರಣಗಳು ದೃಢಪಟ್ಟವು. ಆದಾಗ್ಯೂ, ಜೂನ್ ೯ರಂದು ಇಲ್ಲಿ ೨೬ ಹೊಸ ಪ್ರಕರಣಗಳು ಮತ್ತು ಸಾವುಗಳು ದಾಖಲಾದವು. ಮಹಾರಾಷ್ಟ್ರ ಸರ್ಕಾರದವೈರಸ್ಸನ್ನು ಬೆನ್ನಟ್ಟುವ ನೀತಿಯುಕೊರೋನಾವೈರಸ್ ವಿರುದ್ಧದ ಸಮರದಲ್ಲಿ ವಿಜಯಸಾಧನೆಗೆ ಕಾರಣವಾಗಿದೆ ಎಂದು ಧಾರಾವಿಯನ್ನೂ ಒಳಗೊಳ್ಳುವ ಬಿಎಂಸಿ ಜಿ ಉತ್ತರ ವಾರ್ಡಿನ ಅಸಿಸ್ಟೆಂಟ್ ಮುನಿಸಿಪಲ್ ಕಮೀಷನರ್ ಕಿರಣ್ ದಿಘಾವ್ಕರ್ ೨೦೨೦ ಜೂನ್ ೧೦ರ ಬುಧವಾರ ಹೇಳಿದರು. ತೀವ್ರ ಸ್ವರೂಪದ ಸಂಪರ್ಕ ಪತ್ತೆ, ಪ್ರತ್ಯೇಕವಾಸ ಮತ್ತು ಪರೀಕ್ಷೆಗಳು ಪಾಸಿಟಿವ್ ಪ್ರಕರಣಗಳ ಸಂಖ್ಯೆಯನ್ನು ಇಳಿಮುಖಗೊಳಿಸಲು ಮುಂಬೈಗೆ ನೆರವಾದವು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಪಾಲಿಶ್ ಮಾಡಿದ ವಜ್ರಗಳು, ಬೆಳ್ಳಿ ಚಿನ್ನಾಭರಣ ಮತ್ತು ಮುತ್ತು ಸೇರಿದಂತೆ ಸುಮಾರು ,೩೫೦ ಕೋಟಿ ರೂಪಾಯಿ ಮೌಲ್ಯದ ೧೦೮ ವಸ್ತುಗಳನ್ನು ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಸೇರಿದ ಹಾಂಕಾಂಗ್ ಗೋದಾಮಿನಿಂದ ಭಾರತಕ್ಕೆ ತರಲಾಗಿದೆ ಎಂದು ಜಾರಿ ನಿರ್ದೇಶನಾಲಯವು 2020 ಜೂನ್ 10ರ ಬುಧವಾರ ಪ್ರಕಟಿಸಿತು. ವಸ್ತುಗಳ ಮೌಲ್ಯ ಅಂದಾಜು ,೩೫೦ ಕೋಟಿ ರೂಪಾಯಿಗಳು ಎಂಬುದಾಗಿ ಘೋಷಿಸಲಾಗಿದೆ. ಪಾಲಿಶ್ ಮಾಡಿದ ವಜ್ರಗಳು, ಮುತ್ತುಗಳು, ಬೆಳ್ಳಿ ಚಿನ್ನಾಭರಣಗಳು ಇತ್ಯಾದಿ ಅಮೂಲ್ಯ ಸೊತ್ತುಗಳು ಇವುಗಳಲ್ಲಿ ಸೇರಿವೆ. ಇವುಗಳನ್ನು ಹಾಂಕಾಂಗಿನಲ್ಲಿ ಸಾಗಣೆ ಕಂಪೆನಿಯೊಂದರ ಗೋದಾಮಿನಲ್ಲಿ ಇಡಲಾಗಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದರು. ಸುಮಾರು ,೩೪೦ ಕಿ.ಗ್ರಾಂ ತೂಕದ ಸರಕನ್ನು ಬುಧವಾರ ಮುಂಬೈಗೆ ವಾಪಸ್ ತರಲಾಗಿದೆ ಎಂದು ಅಧಿಕಾರಿ ನುಡಿದರು. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಭಾರತೀಯ ವ್ಯಾಪಾರೋದ್ಯಮಿಗಳಾಗಿದ್ದು, ಭಾರತೀಯ ಬ್ಯಾಂಕುಗಳಿಗೆ ಸಹಸ್ರಾರು ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ಬೇಕಾಗಿದ್ದಾರೆ. ನೀರವ್ ಮೋದಿ ೨೩,೭೮೦ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಕಳೆದ ವರ್ಷ ಮಾರ್ಚ್ನಿಂದೀಚೆಗೆ ಇಂಗ್ಲೆಂಡಿನಲ್ಲಿ ಸೆರೆವಾಸದಲ್ಲಿರುವ  ನೀರವ್ ಮೋದಿಯನ್ನು ಇಂಗ್ಲೆಂಡಿನಿಂದ ಹಸ್ತಾಂತರ ಮಾಡಿಕೊಳ್ಳಲು ಭಾರತವು ತೀವ್ರ ಪ್ರಯತ್ನ ನಡೆಸುತ್ತಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

 ಇಂದಿನ ಇತಿಹಾಸ  History Today ಜೂನ್  10  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

PARYAYA: ಇಂದಿನ ಇತಿಹಾಸ History Today ಜೂನ್ 10:  ಇಂದಿನ ಇತಿಹಾಸ History Today ಜೂನ್ 10 ‌ 2026: ನವದೆಹಲಿ:   ಪ್ರಧಾನಿ ನರೇಂದ್ರ ಮೋದಿಯವರು ಈದಿನ (2026 ಜೂನ್ 10ರ ಬುಧವಾರ) ಭಾರತದ ಅತಿ ದೀರ್ಘಕಾಲ ಸತತವಾಗಿ ಚುನಾಯ...

Wednesday, June 3, 2026

PARYAYA: ಇಂದಿನ ಇತಿಹಾಸ History Today ಜೂನ್‌ 03

ಇಂದಿನ ಇತಿಹಾಸ History Today ಜೂನ್‌ 03

2026: ಬೆಂಗಳೂರು: ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ (ಡಿ.ಕೆ. ಶಿವಕುಮಾರ್)‌ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಈದಿನ (2026 ಜೂನ್‌ 3ರ ಬುಧವಾರ) ಸಂಜೆ 4.15 ಗಂಟೆಗೆ ಪ್ರಮಾಣವಚನ ಸ್ವೀಕರಿಸಿದರು. ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆಯಂತೆ ಮೇ 28ರಂದು ರಾಜೀನಾಮೆ ನೀಡಿದ ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಶಿವಕುಮಾರ್‌ ಅವರು ಆಯ್ಕೆಯಾಗಿದ್ದಾರೆ. ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರು ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭದಲ್ಲಿ ಶಿವಕುಮಾರ್‌ ಅವರಿಗೆ ಪ್ರಮಾಣವಚನ ಬೋಧಿಸಿದರು. ಶಿವಕುಮಾರ್‌ ಅವರೊಂದಿಗೆ ಡಾ. ಜಿ. ಪರಮೇಶ್ವರ ಸಹಿತವಾಗಿ 13 ಮಂದಿ ಶಾಸಕರೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಪರಮೇಶ್ವರ್‌ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಇತರರು: ಕೆ.ಎಚ್.‌ ಮುನಿಯಪ್ಪ, ಕೆ.ಜೆ. ಜಾರ್ಜ್‌, ಎಂ.ಬಿ. ಪಾಟೀಲ, ರಾಮಲಿಂಗಾ ರೆಡ್ಡಿ, ಸತೀಶ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಯು.ಟಿ. ಖಾದರ್‌, ಈಶ್ವರ್‌ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್‌, ಶರಣ ಪ್ರಕಾಶ ಪಾಟೀಲ.  ಕಾಂಗ್ರೆಸ್‌ ಪಕ್ಷದ ಪ್ರಮುಖರಾದ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ,  ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೆವಾಲಾ,  ಕಾಂಗ್ರೆಸ್‌ ಅಧಿಕಾರಾರೂಢ ರಾಜ್ಯಗಳ ಹಲವು ಮುಖ್ಯಮಂತ್ರಿಗಳು, ವಿವಿಧ ಸ್ವಾಮೀಜಿಗಳು, ಫಾದರ್‌ ಹಾಗೂ ಮೌಲ್ವಿಗಳು ಸೇರಿದಂತೆ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

2026: ಕೋಲ್ಕತ: ತೃಣ ಮೂಲ ಕಾಂಗ್ರೆಸ್‌ ಪಕ್ಷದ ಉಚ್ಛಾಟಿತ ಶಾಸಕ ರಿತಬ್ರತ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಈದಿನ ನೇಮಿಸಲಾಯಿತು. ರಿತಬ್ರತ ಬ್ಯಾನರ್ಜಿ ಅವರು ಚುನಾಯಿತ 80 ಟಿಎಂಸಿ ಶಾಸಕರ ಪೈಕಿ 58 ಮಂದಿಯ ಬೆಂಬಲ ಇರುವುದನ್ನು ಸಾಬೀತು ಪಡಿಸಿದ ಪತ್ರ ಸಲ್ಲಿಸಿದ ಬಳಿಕ ವಿಧಾನ ಸಭಾಧ್ಯಕ್ಷರು ಈ ನೇಮಕ ಮಾಡಿದರು. ಇನ್ನಿಬ್ಬರು ಶಾಸಕರೂ ಈ ಗುಂಪಿನ ಜೊತೆಗಿದ್ದು ಸದ್ಯಕ್ಕೆ ಅವರು ನಗರದಿಂದ ಹೊರಗಿದ್ದಾರೆ ಎನ್ನಲಾಗಿದೆ. ಶಾಸಕಾಂಗ ಪಕ್ಷದ ಮುಖ್ಯ ಸಲಹೆಗಾರರಾಗಿ ಮಾರ್ಗದರ್ಶನ ಮಾಡುವಂತೆ ಇದೇ ಸಂದರ್ಭದಲ್ಲಿ ರಿತಬ್ರತ ಅವರು ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಮನವಿ ಮಾಡಿದರು.

2026: ಕೋಲ್ಕತ: ಚುನಾವಣೆ ಫಲಿತಾಂಶ ಪ್ರಕಟಗೊಂಡ ಒಂದೇ ತಿಂಗಳ ಒಳಗೆ ಪಶ್ಚಿಮ ಬಂಗಾಳದ  ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣ ಮೂಲ ಕಾಂಗ್ರೆಸ್‌ (ಟಿಎಂಸಿ) ಇಬ್ಭಾಗಗೊಂಡಿದ್ದು, 60 ಶಾಸಕರ ಒಂದು ಬಣ ಅವರೆಲ್ಲರ ಸಹಿ ಸಹಿತವಾದ ಪತ್ರದೊಂದಿಗೆ ರಿತಭ್ರತ ಬ್ಯಾನರ್ಜಿ ನೇತೃತ್ವದಲ್ಲಿ ಈ ದಿನ ವಿಧಾನಸಭೆಯಲ್ಲಿ ಈ ಬಣವು ರಿತಭ್ರತ ಬ್ಯಾನರ್ಜಿ ಅವರನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿಯೂ, ಸಾಂದೀಪನ್‌ ಸಹಾ ಅವರು ವಿರೋಧ ಪಕ್ಷದ ಉಪನಾಯಕರಾಗಿಯೂ ಮಾನ್ಯ ಮಾಡುವಂತೆ ಕೋರಿ ವಿಧಾನಸಭಾಧ್ಯಕ್ಷರಿಗೆ ಪತ್ರ ಸಲ್ಲಿಸಲು ಸಜ್ಜಾಯಿತು. ವಿಧಾನಸಭಾ ಚುನಾವಣೆಯಲ್ಲಿ  ಭಾರೀ ಬಹುಮತದೊಂದಿಗೆ ಗದ್ದುಗೆ ಏರಿದ ಬಿಜೆಪಿಯ ನಾಯಕ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ 2026 ಮೇ 9ರ ಶನಿವಾರ ಪ್ರಮಾಣವಚನ ಸ್ವೀಕರಿಸಿದ್ದರು.

2020: ಬೀಜಿಂಗ್: ಭಾರತದ ಕೋವಿಡ್ -೧೯ ಪ್ರಕರಣಗಳು ಜೂನ್ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿವೆ ಎಂದು ಚೀನಾ 2020 ಜೂನ್  03ರ ಬುಧವಾರ ಭವಿಷ್ಯ ನುಡಿಯಿತು.  ಜೂನ್ ತಿಂಗಳಲ್ಲಿ ಭಾರತವು ಕೋವಿಡ್ -೧೯ ಪ್ರಕರಣಗಳಲ್ಲಿ ಸ್ಥಿರ ಏರಿಕೆ ಕಾಣುವ ಸಾಧ್ಯತೆಯಿದೆ, ದೈನಂದಿನ ಹೆಚ್ಚಳವು ತಿಂಗಳ ಮಧ್ಯಭಾಗದಲ್ಲಿ ದಿನಕ್ಕೆ ೧೫,೦೦೦ ದಾಟಲಿದೆ ಎಂದು ಚೀನಾದ ಸಂಶೋಧಕರು ಸಿದ್ಧಪಡಿಸಿದ ಕೊರೋನವೈರಸ್ ಸಾಂಕ್ರಾಮಿಕ ರೋಗದ ಜಾಗತಿಕ ಮುನ್ಸೂಚನೆ ಮಾದರಿ ಭವಿಷ್ಯ ನುಡಿಯಿತು. ವಾಯುವ್ಯ ಚೀನಾದ ಗನ್ಸು ಪ್ರಾಂತ್ಯದ ಲ್ಯಾನ್ ಝೋವು ವಿಶ್ವವಿದ್ಯಾಲಯವು ಸ್ಥಾಪಿಸಿದಗ್ಲೋಬಲ್ ಕೋವಿಡ್ -೧೯ ಪ್ರಿಡಿಕ್ಟ್ ಸಿಸ್ಟಮ್೧೮೦ ದೇಶಗಳಿಗೆ ದೈನಂದಿನ ಮುನ್ಸೂಚನೆಯನ್ನು ನೀಡುತ್ತದೆ. ಜೂನ್ ರಂದು ಭಾರತದಲ್ಲಿ ,೨೯೧ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳ ಬಗ್ಗೆ ಸಂಶೋಧನಾ ಗುಂಪಿನ ಮುನ್ಸೂಚನೆ ಮಾದರಿಯು ಭವಿಷ್ಯ ನುಡಿದಿತ್ತು. ಭಾರತ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಕಳೆದ ೨೪ ಗಂಟೆಗಳಲ್ಲಿ ,೯೦೯ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಈವರೆಗಿನ ಪ್ರಮಾಣಕ್ಕೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಪ್ರಮಾಣವಾಗಿದೆ. ಬುಧವಾರದಿಂದ, ಮುಂದಿನ ನಾಲ್ಕು ದಿನಗಳವರೆಗೆ ೯೬೭೬, ೧೦,೦೭೮, ೧೦,೪೯೮ ಮತ್ತು ೧೦,೯೩೬ ದೈನಂದಿನ ಹೊಸ ಪ್ರಕರಣಗಳ ಮುನ್ಸೂಚನೆಯನ್ನು ಸಂಸ್ಥೆ ನೀಡಿದೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ದೆಹಲಿ ಗಲಭೆ ಪ್ರಕರಣದ ಪ್ರಮುಖ ಸಂಚುಕೋರ ಫೈಸಲ್ ಫಾರೂಕ್, ಫೆಬ್ರವರಿ ಗಲಭೆ ನಡೆಯುತ್ತಿರುವಾಗ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಮೊಹಮ್ಮದ್ ಸಾದ್ ಅವರ ಆಪ್ತ ಸಹವರ್ತಿ ಎಂದು ವರ್ಣಿಸಲಾದ ಅಬ್ದುಲ್ ಅಲೀಮ್ ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎಂದು ದೆಹಲಿ ಪೊಲೀಸರು ದೆಹಲಿ ನ್ಯಾಯಾಲಯಕ್ಕೆ  2020 ಜೂನ್ 03ರ ಬುಧವಾರ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ತಿಳಿಸಿದ್ದಾರೆ. ‘ಗಲಭೆಯಲ್ಲಿ ಫೈಸಲ್ ಫಾರೂಕ್ ಅವರ ಪಾತ್ರದ ಬಗ್ಗೆ ತನಿಖೆಯ ಭಾಗವಾಗಿ ಪೊಲೀಸರು ಅವರ ಫೋನಿನ ವಿವರವಾದ ಕರೆ ವಿಶ್ಲೇಷಣೆಯನ್ನು ನಡೆಸಿದ್ದರು. ಫೈಸಲ್ ಫಾರೂಕ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಪಿಂಜ್ರಾ ಟಾಡ್ ಗುಂಪು, ಜಾಮಿಯಾ ಸಮನ್ವಯ ಸಮಿತಿ ಮತ್ತು ಹಜರತ್ ನಿಜಾಮುದ್ದೀನ್ ಮಾರ್ಕಾಜ್ ಅವರ ಪ್ರಮುಖ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದರು ಎಂದು ವಿಶ್ಲೇಷಣೆ ತಿಳಿಸಿದೆ. ದಯಾಳಪುರದಲ್ಲಿ ರಾಜಧಾನಿ ಶಾಲೆಯನ್ನು ಹೊಂದಿರುವ ಫೈಸಲ್ ಫಾರೂಕ್, ತನ್ನ ಶಾಲೆಯ ಸುತ್ತಲಿನ ಗಲಭೆಗಾಗಿ ಅಪರಾಧ ವಿಭಾಗದಿಂದ ಬಂಧಿಸಲ್ಪಟ್ಟ ೧೮ ಜನರಲ್ಲಿ ಒಬ್ಬನಾಗಿದ್ದಾನೆ. ಗಲಭೆಕೋರರ ಆರಂಭಿಕ ಗುರಿಗಳಲ್ಲಿ ಒಂದು ಫಾರೂಕ್ ನಡೆಸುತ್ತಿದ್ದ ಶಾಲೆಯ ಪಕ್ಕದ ಡಿಆರ್ಪಿ ಕಾನ್ವೆಂಟ್ ಶಾಲೆಯಾಗಿತ್ತು. ತನಿಖೆಯ ಸಮಯದಲ್ಲಿ, ಫೈಸಲ್ ಫಾರೂಕ್ ರಾಜಧಾನಿ ಶಾಲೆಯಲ್ಲಿ ಮತ್ತು ಸುತ್ತಮುತ್ತಲಿನ ಗಲಭೆಗಳನ್ನು ಉಲ್ಬಣಗೊಳಿಸುವ ಪಿತೂರಿ ನಡೆಸಿದ್ದುದು ತಿಳಿದುಬಂದಿದೆ. ಫೈಸಲ್ ಸೂಚನೆಯ ಮೇರೆಗೆ ಪಕ್ಕದ ಮತ್ತು ಪ್ರತಿಸ್ಪರ್ಧಿ ಡಿಆರ್ಪಿ ಕಾನ್ವೆಂಟ್ ಶಾಲೆಯನ್ನು ಜನಸಮೂಹ ನಾಶಪಡಿಸಿತ್ತು ಎಂದು ದೋಷಾರೋಪ ಪಟ್ಟಿ ಹೇಳಿದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ/ ಮುಂಬೈ:  ‘ನಿಸರ್ಗಚಂಡಮಾರುತವು ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ 2020 ಜೂನ್ 03ರ ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿ, ಮಹಾರಾಷ್ಟ್ರದಲ್ಲಿ ಹಲವಾರು ಮರಗಳು, ವಿದ್ಯುತ್ ಕಂಬಗಳನ್ನು ಧರೆಗೆ ಉರುಳಿಸಿತು.  ಮುಂಬೈಯಿಂದ ಹುಬ್ಬಳ್ಳಿಯವರೆಗೆ ಭಾರೀ ಗಾಳಿ ಸಹಿತವಾಗಿ ಅಬ್ಬರದ ಮಳೆ ಸುರಿದಿದ್ದು, ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಮುಂಬೈ ಸಮೀಪದ ಅಲಿಬಾಗ್ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬವೊಂದು ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾದರು.  ಒಂದು ಸಾವನ್ನು ಹೊರತು ಪಡಿಸಿ ಮಹಾರಾಷ್ಟ್ರದಲ್ಲಿ ಈವರೆಗೆ ಬೇರೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ ಎಂದು ರಾಯಗಢ ಜಿಲ್ಲಾಧಿಕಾರಿ ನಿಧಿ ಚೌಧರಿ ತಿಳಿಸಿದರು. ‘ಅಲಿಬಾಗ್ನಿಂದ ಒಂದು ಸಾವು ವರದಿಯಾಗಿದೆ. ಅಲಿಬಾಗ್ ಉಮ್ಟೆ ಗ್ರಾಮದಲ್ಲಿ ವಿದ್ಯುತ್ ಕಂಬ ಬಿದ್ದು ೫೮ ವರ್ಷದ ವ್ಯಕ್ತಿಯೊಬ್ಬರು ಮೃತರಾಗಿದ್ದಾರೆ. ಜಿಲ್ಲೆಯಾದ್ಯಂತ ಇದುವರೆಗೆ ಯಾವುದೇ ಸಾವು ಸಂಭವಿಸಿಲ್ಲಎಂದು ಚೌಧರಿ ನುಡಿದರು. ಅಲಿಬಾಗ್ಗೆ ಸಮೀಪದಲ್ಲಿರುವ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯಲ್ಲಿ ಹಲವಾರು ಮರಗಳು ಬಿರುಗಾಳಿಗೆ ಉರುಳಿ ಬಿದ್ದಿವೆ. ಹಲವಾರು ವಿದ್ಯುತ್ ಕಂಬಗಳೂ ನೆಲಕ್ಕೆ ಒರಗಿವೆ. ಅಲಿಬಾಗ್ ಸಮೀಪ ಚಂಡಮಾರುತವು  ಬುಧವಾರ ಮಧ್ಯಾಹ್ನ ನೆಲಕ್ಕೆ ಅಪ್ಪಳಿಸಿತು. ಅಧಿಕಾರಿಗಳ ಪ್ರಕಾರ, ಚಂಡಮಾರುv ಅಬ್ಬರಕ್ಕೆ ಸುಮಾರು ೮೫ ದೊಡ್ಡ ಮರಗಳು ಉರುಳಿದ್ದು, ಅವುಗಳಲ್ಲಿ ಕೆಲವು ಮನೆಗಳ ಮೇಲೆ ಬಿದ್ದ. ಹನ್ನೊಂದು ವಿದ್ಯುತ್ ಕಂಬಗಳೂ ಧರೆಗುರುಳಿದವು. ಮಹಾರಾಷ್ಟ್ರ ಕರಾವಳಿಗೆ ೧೨೦ ಕಿ.ಮೀ ವೇಗದೊಂದಿಗೆ ಅಪ್ಪಳಿಸಿದ ಬಳಿಕನಿರ್ಗಚಂಡಮಾರುತವು ದುರ್ಬಲಗೊಳ್ಳಲು ಪ್ರಾರಂಭಿಸಿದೆ ಮತ್ತು ಸಂಜೆಯಾಗುತ್ತಿದ್ದಂತೆಯೇ ಅದರ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಮುಂಬೈ: ಮುಂಬೈಯಿಂದ ೯೫ ಕಿಮೀ ದೂರದಲ್ಲಿರುವ ಅಲಿಬಾಗ್ನಲ್ಲಿನಿಸರ್ಗಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಮುಂಬೈ ಮಹಾನಗರ ಹಾಗೂ ಗುಜರಾತ್ಪ್ರಕೃತಿನರ್ತನದ  ಮಹಾವಿಪತ್ತಿನಿಂದ ಪಾರಾದವು.  ಚಂಡಮಾರುತವು ಮುಂಬೈನ ಆಗ್ನೇಯಕ್ಕೆ ೭೫ ಕಿ.ಮೀ ಮತ್ತು ಪುಣೆಯ ಪಶ್ಚಿಮಕ್ಕೆ ೬೫ ಕಿ.ಮೀ ದೂರದಲ್ಲಿದ್ದು ದುರ್ಬಲಗೊಳ್ಳಲು ಪ್ರಾರಂಭಿಸಿದೆ. ಗಾಳಿಯ ವೇಗವು ಪ್ರಸ್ತುತ ಗಂಟೆಗೆ ೯೦-೧೦೦ ಕಿ.ಮೀ. ಮತ್ತು ಸಂಜೆಯ ಹೊತ್ತಿಗೆ ತೀವ್ರತೆಯು ಮತ್ತಷ್ಟು ಕಡಿಮೆಯಾಗುತ್ತದೆ" ಎಂದು ಅಧಿಕಾರಿಗಳು ಹೇಳಿದರು.  ನಿಸರ್ಗ ಚಂಡಮಾರುತವು ನೆಲಕ್ಕೆ ಅಪ್ಪಳಿಸುವುದರೊಂದಿಗೆ ಬೀಸಿದ ಭಾರೀ ಗಾಳಿ ಮತ್ತು ಮಳೆಯನ್ನು ಅನುಸರಿಸಿ ಮುಂಬೈ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸಂಜೆ ಗಂಟೆಯವರೆಗೆ ಮುಚ್ಚಲಾಯಿತು. "ಫೆಡೆಕ್ಸ್ ಎಂಡಿ ೧೧ ವಿಮಾನ (ಎನ್ ೫೮೩ ಎಫ್) ಬುಧವಾರ ಮುಂಬೈನಲ್ಲಿ ರನ್ವೇ ೧೪ ರಲ್ಲಿ ಸುತ್ತುತ್ತಿದೆ. ವಿಮಾನವು ರನ್ವೇ ಅಂತ್ಯದಿಂದ ಮೀಟರ್ ದೂರದಲ್ಲಿದೆ. ವಿಮಾನ ಮೂಲಸೌಕರ್ಯ ಮತ್ತು ವಿಮಾನಗಳಿಗೆ ಯಾವುದೇ ಹಾನಿಯಾಗಿಲ್ಲ" ಎಂದು ವರದಿಗಳು ಹೇಳಿವೆ  ಮಧ್ಯೆ, ಪುಣೆಯಲ್ಲಿ ೬೦ ಮರಗಳು ಬೇರು ಸಹಿತವಾಗಿ ನೆಲಕ್ಕೆ ಉರುಳಿರುದ್ದು, ಪುಣೆ ಅಗ್ನಿಶಾಮಕ ಇಲಾಖೆಗೆ ಕಡೆಗಳಲ್ಲಿ ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ಕರೆಗಳು ಬಂದಿವೆ. ಮರಗಳು ಉರುಳಿರುವ ಬಗ್ಗೆ ಬಂದ ೬೦ ಕರೆಗಳು ಮತ್ತು ಜಲಾವೃತಗೊಂಡಿರುವ ಬಗ್ಗೆ ಬಂದ ಕರೆಗಳಿಗೆ ಅಗ್ನಿಶಾಮಕ ಇಲಾಖೆ ಮತ್ತು ಪುಣೆ ಮಹಾನಗರ ಪಾಲಿಕೆ ಸ್ಪಂದಿಸಿದವು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಭರೂಚ್: ಗುಜರಾತಿನ ಭರೂಚ್ ಜಿಲ್ಲೆಯ ದಹೇಜ್ನಲ್ಲಿ ರಾಸಾಯನಿಕ ಕಾರ್ಖಾನೆಯ ಬಾಯ್ಲರ್ನಲ್ಲಿ 2020 ಜೂನ್ 03ರ ಬುಧವಾರ ಸಂಭವಿಸಿದ ಭಾರಿ ಸ್ಫೋಟ ಹಾಗೂ ಬೆಂಕಿಯಲ್ಲಿ  ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ೫೭ ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು. ಘಟನೆ ನಡೆದ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿತು.  ಇಲ್ಲಿಯವರೆಗೆ ನಾವು ಐವರು ಉದ್ಯೋಗಿಗಳ ಸಾವನ್ನು ದೃಢ ಪಡಿಸಿದ್ದೇವೆ. ಕೆಲವು ಶವಗಳನ್ನು ಕಾರ್ಖಾನೆಯಿಂದ ಹೊರತರಲಾಗಿದ್ದು, ಕೆಲವರು ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆಎಂದು ಭರೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ವಿ.ಚುದಾಸಮಾ ತಿಳಿಸಿದರು.  ಬುಧವಾರ ಮಧ್ಯಾಹ್ನ ಭರೂಚ್ ದಹೇಜ್ ಇಂಡಸ್ಟ್ರಿಯಲ್ ಎಸ್ಟೇಟ್ನಲ್ಲಿರುವ ಯಶಶ್ವಿ ರಸಾಯನ್ ಪ್ರೈವೇಟ್ ಲಿಮಿಟೆಡ್ನಲ್ಲಿನ ಟ್ಯಾಂಕ್ನಲ್ಲಿ ಸಂಭವಿಸಿದ ಸ್ಫೋಟ ಹಾಗೂ ಬೆಂಕಿಯಲ್ಲಿ ಸಿಲುಕಿ ಐವರು ಜನರು ಪ್ರಾಣ ಕಳೆದುಕೊಂಡರು ಮತ್ತು ೫೭ ಜನರು ಗಾಯಗೊಂಡಿದ್ದಾರೆಎಂದು ಭರೂಚ್ ಜಿಲ್ಲಾಧಿಕಾರಿ ಡಾ ಎಂಡಿ ಮೋಡಿಯಾ ತಿಳಿಸಿದರು.  (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಜೂನ್  03  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-
ಸಂಗ್ರಹ: ನೆತ್ರಕೆರೆ ಉದಯಶಂಕರ
PARYAYA: ಇಂದಿನ ಇತಿಹಾಸ History Today ಜೂನ್‌ 03: ಇಂದಿನ ಇತಿಹಾಸ History Today ಜೂನ್‌ 03 2026: ಬೆಂಗಳೂರು: ದೊಡ್ಡಾಲಹಳ್ಳಿ ಕೆಂಪೇಗೌಡ ಶಿವಕುಮಾರ್‌ (ಡಿ.ಕೆ. ಶಿವಕುಮಾರ್)‌ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ...