ಭಯೋತ್ಪಾದಕ ಮಸೂದ್ ಅಜರನ ಅಣ್ಣನ ಮಗ
ಖತಮ್
ನವದೆಹಲಿ: ಜೈಶ್ –ಇ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ, ಮುಂಬೈ ಭಯೋತ್ಪಾದಕ ದಾಳಿಯ ಪಾತಕಿ ಮೌಲಾನಾ ಮಸೂದ್ ಅಜರನ ಸಹೋದರ ಸಂಬಂಧಿ (ಅಣ್ಣನ ಮಗ) ಉಗ್ರಗಾಮಿ ಮೊಹಮ್ಮದ್ ಉಸ್ಮಾನನನ್ನು ಭದ್ರತಾ ಪಡೆಗಳು ಮಂಗಳವಾರ 30 ಅಕ್ಟೋಬರ್ 2018ರ ಮಂಗಳವಾರ ಕೊಂದು ಹಾಕಿವೆ.
ಕಾಶ್ಮೀರ ಕಣಿವೆಯಲ್ಲಿ ಕಳೆದ 10 ದಿನಗಳಿಂದ ಭದ್ರತಾ ಪಡೆಗಳ ಮೇಲೆ ಮರೆಯಿಂದ ಅಡಗಿ ದಾಳಿಗಳನ್ನು ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಮೊಹಮ್ಮದ್ ಉಸ್ಮಾನ್ನ ಹತ್ಯೆಯು ಭದ್ರತಾ ಪಡೆಗಳು ಈ ವರ್ಷ ಸಾಧಿಸಿದ ಮಹಾನ್ ಯಶಸ್ಸುಗಳಲ್ಲಿ ಒಂದು ಎಂದು ಭದ್ರತಾ ಪಡೆಗಳು ಹೇಳಿವೆ.
ಮೊಹಮ್ಮದ್ ಉಸ್ಮಾನ್ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರನ ಹಿರಿಯ ಸಹೋದರ ಇಬ್ರಾಹಿಂನ ಪುತ್ರ. ಈತ 1999ರಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರನನ್ನು ಬಿಡಿಸಿಕೊಳ್ಳುವ ಸಲುವಾಗಿ ನಡೆದಿದ್ದ ಐಟಿ-814 ವಿಮಾನ ಅಪಹರಣದಲ್ಲಿ ಶಾಮೀಲಾಗಿದ್ದ.
ವರ್ಷದ ಹಿಂದೆ ಕಾಶ್ಮೀರ ಕಣಿವೆಗೆ ನುಸುಳಿದ್ದ ಎನ್ನಲಾಗಿರುವ ಮೊಹಮ್ಮದ್ ಉಸ್ಮಾನ್ ಜೈಶ್ ಸಂಘಟನೆಯನ್ನು ಬಲಾಢ್ಯ ಪಡಿಸುವ ಸಲುವಾಗಿ ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎರಡು ವಾರಗಳಿಂದ ಸಕ್ರಿಯನಾಗಿದ್ದ ಈತ 4 ಸದಸ್ಯರ ಮರೆಯಿಂದ ದಾಳಿ ನಡೆಸುವ ಉಗ್ರರ ತಂಡಗಳನ್ನು ರಚಿಸಿ ಅವುಗಳ ಮೂಲಕ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ.ಈದಿನ ನಡೆದ ಭದ್ರತಾ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಅವರ ಪೈಕಿ ಮೊಹಮ್ಮದ್ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿವೆ.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment