Sunday, October 14, 2018

ರಾಜೀನಾಮೆಯಲ್ಲ, ಕಾನೂನು ಕ್ರಮ: ಎಂ.ಜೆ. ಅಕ್ಬರ್

ರಾಜೀನಾಮೆಯಲ್ಲ, ಕಾನೂನು ಕ್ರಮ: ಎಂ.ಜೆ. ಅಕ್ಬರ್

ನವದೆಹಲಿ: ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದುದಾಗಿ ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನುಸುಳ್ಳು ಹಾಗೂ ಸೃಷ್ಟಿತ ದುರುದ್ದೇಶದ ಮಸಾಲೆಭರಿತ ರಾಜಕೀಯ ಹಿನ್ನೆಲೆಯ ಆರೋಪ ಎಂಬುದಾಗಿ  2018ಅಕ್ಟೋಬರ್ 14 ಭಾನುವಾರ ತಳ್ಳಿಹಾಕಿದ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರು ವಿಚಾರದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿದರು.

ರಾಜೀನಾಮೆ ಬೇಡಿಕೆಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ.

‘ನನ್ನ ವಿರುದ್ಧ ಮಾಡಲಾಗಿರುವ ದುರ್ವರ್ತನೆಯ ಆರೋಪಗಳು ಸುಳ್ಳು ಮತ್ತು ಸೃಷ್ಟಿತ. ಕಿಡಿಗೇಡಿಗಳ ದ್ವೇಷಭರಿತ ಮಸಾಲೆ. ನಾನು ಅಧಿಕೃತ ವಿದೇಶ ಪ್ರವಾಸದಲ್ಲಿ ಇದ್ದುದರಿಂದ ಮೊದಲೇ ಇದಕ್ಕೆ ಉತ್ತರ ನೀಡಲಾಗಲಿಲ್ಲ ಎಂದು ಅಕ್ಬರ್ ಹೇಳಿದರು.

‘ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು ಕೆಲವು ವರ್ಗಗಳಲ್ಲಿ ಈಗ ವೈರಲ್ ಜ್ವರವಾಗಿದೆ. ಏನೇ ಇದ್ದರೂ, ನಾನೀಗ ವಿದೇಶದಿಂದ ವಾಪಸಾಗಿದ್ದೇನೆ. ಇಂತಹ ಸ್ವೇಚ್ಛಾಚಾರ ಬುಡರಹಿತ ಆರೋಪಗಳ ಬಗ್ಗೆ ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮದ ಬಗ್ಗೆ ನನ್ನ ವಕೀಲರು ನೋಡಿಕೊಳ್ಳುತ್ತಾರೆ ಎಂದು ತಮ್ಮ ಆಫ್ರಿಕಾ ಪ್ರವಾಸದಿಂದ ವಾಪಸಾದ ಬಳಿಕ ನೀಡಿದ ಹೇಳಿಕೆಯಲ್ಲಿ ಅಕ್ಬರ್ ತಿಳಿಸಿದರು.

ಮಹಾಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಬಿರುಗಾಳಿ ಏಕೆ ಎದ್ದಿದೆ? ಇದರ ಹಿಂದೆ ಏನಾದರೂ ಕಾರ್ಯಸೂಚಿ ಇದೆಯೇ? ನೀವೇ ತೀರ್ಮಾನಿಸಿ. ಸುಳ್ಳು, ಬುಡರಹಿತ, ಸ್ವೇಚ್ಛಾಚಾರದ ಆಪಾದನೆಗಳು ನನ್ನ ವರ್ಚಸ್ಸು ಮತ್ತು ನನ್ನ ಬಗೆಗಿನ ಸದ್ಭಾವನೆಗೆ ದುರಸ್ತಿ ಪಡಿಸಲಾಗದಂತಹ ಹಾನಿಯನ್ನು ಉಂಟು ಮಾಡಿದೆ ಎಂದು ಅವರು ನುಡಿದರು.

‘ಸುಳ್ಳುಗಳಿಗೆ ಕಾಲುಗಳಿರುವುದಿಲ್ಲ, ಆದರೆ ಅವು ವಿಷವನ್ನು ಹೊಂದಿರುತ್ತವೆ. ಆದರೆ ಇವು ಮನಸ್ಸಿಗೆ ಚಾಟಿ ಏಟಿನಂತೆ ಹೊಡೆದು ಬುದ್ಧಿಭ್ರಮಣೆ ಮಾಡುತ್ತವೆ ಎಂದು ಅಕ್ಬರ್ ನುಡಿದರು.

ಹಲವಾರು ಮಹಿಳಾ ಪತ್ರಕರ್ತರು ಅಕ್ಬರ್ ವಿರುದ್ಧ ಅವರು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿವಿಧ ಹಂತಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದುರ್ವರ್ತನೆ ಪ್ರದರ್ಶಿಸಿದ ಆರೋಪ ಮಾಡಿದ್ದರು.

‘ನಾನು ಏನೂ ಮಾಡಿಲ್ಲವಾದರೆ, ಎಲ್ಲಿ ಮತ್ತು  ಏನು ಕಥೆ? ಅಲ್ಲಿ ಕಥೆಯೇ ಇಲ್ಲ. ಆದರೆ ವಕ್ರೋಕ್ತಿಗಳು, ಊಹಾಪೋಹಗಳು  ಮತ್ತು ಎಂದೂ ಘಟಿಸದ ಯಾವುದೋ ವಿಷಯದ ಸುತ್ತ ಹೆಣೆಯಲಾದ ದೂಷಣಾತ್ಮಕ ಟೀಕೆಗಳ ಸಾಗರವೇ ಇದೆ. ಇವುಗಳಲ್ಲಿ ಕೆಲವು ಸಂಪೂರ್ಣ ಆಧಾರವಿಲ್ಲದ ಗಾಳಿ ಮಾತುಗಳು; ಉಳಿದವು ನಾನು ಏನೂ ಮಾಡಿಲ್ಲ ಎಂಬುದಾಗಿ ದಾಖಲೆಯಲ್ಲಿ ಇರುವಂತಹವುಗಳು ಎಂದು ಅಕ್ಬರ್ ಹೇಳಿದರು.

ನನ್ನ ಬಗ್ಗೆ ಲೈಂಗಿಕ ಕಿರುಕುಳದ ಆಪಾದನೆ ಮಾಡಿರುವ ಘಜಾಲಾ ವಹಾಬ್ ಎಂಬ ಪತ್ರಕರ್ತೆಯ ಜೊತೆಗೆ ನಾನು ಕೆಲಸ ಮಾಡಿದ್ದು ದಿ ಏಷ್ಯನ್ ಏಜ್ ಪತ್ರಿಕೆಯ ಒಂದೇ ಒಂದು ಕಚೇರಿಯಲ್ಲಿ. ’ಸಂಪಾದಕೀಯ ತಂಡದ ಭಾಗವಾಗಿ ಸಣ್ಣ ಸಭಾಂಗಣವೊಂದರಲ್ಲಿ ಕೆಲಸ ಮಾಡಿದ್ದೆವು. ವೇಳೆಯಲ್ಲಿ ನನಗೆ ಇದ್ದದ್ದು ಪ್ಲೈವುಡ್ ಮತ್ತು ಗಾಜಿನಿಂದ ಬೇರ್ಪಟ್ಟ ಒಂದು ಪುಟ್ಟ ಕೋಣೆ. ಎರಡು ಅಡಿ ದೂರದಲ್ಲಿ ಉಳಿದವರಿಗೆ ಮೇಜು ಮತ್ತು ಕುರ್ಚಿಗಳು ಇದ್ದವು. ಇಂತಹ ಪುಟ್ಟ ಸ್ಥಳದಲ್ಲಿ ಏನು ಬೇಕಾದರೂ ಆಗಬಹುದಾಗಿತ್ತು ಎಂದು ನಂಬುವುದು, ಅದಕ್ಕೂ ಹೆಚ್ಚಾಗಿ ಕೆಲಸದ ನಡುವೆ ಹತ್ತಿರದಲ್ಲಿರುವ ಯಾರಿಗೂ ಗೊತ್ತಾಗದೇ ಇರುವುದು ಅತ್ಯಂತ ವಿಲಕ್ಷಣ ಎಂದು ಅವರು ನುಡಿದರು.

‘ನನ್ನ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಮಾಡಿದ ಮೊದಲ ಪತ್ರಕರ್ತೆ ಮತ್ತು ವಹಾಬ್ ಅವರು ಆರೋಪಿದ ಘಟನೆಗಳ ಬಳಿಕವೂ ನನ್ನ್ಮ ಜೊತೆಗೆ ಕೆಲಸ ಮಾಡಿದ್ದಾರೆ. ಇದು ಅವರಿಗೆ ಯಾವುದೇ ಆತಂಕ ಮತ್ತು ಇರುಸುಮುರುಸು ಇರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತು ಪಡಿಸುತ್ತದೆ. ದಶಕಗಳ ಕಾಲ ಮೌನವಾಗಿರಲು ಕಾರಣವೇನು ಎಂಬುದು ಕಣ್ಣಿಗೆ ಕಾಣುವಂತಹ ವಿಚಾರ, ನಾನು ಎಂದೂ ಏನನ್ನೂ ಮಾಡಿಲ್ಲ ಎಂದು ರಮಣಿ ಅವರು ಸ್ವತಃ ಬರೆದಿದ್ದಾರೆ ಎಂದು ಅಕ್ಬರ್ ಹೇಳಿದರು

ಕಾಂಗ್ರೆಸ್ ಆಗ್ರಹ: ಮಧ್ಯೆ ಕಾಂಗ್ರೆಸ್ ಪಕ್ಷವು ಅಕ್ಬರ್ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿ, ಪ್ರದಾನಿ ನರೇಂದ್ರ ಮೋದಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿತು.

‘ಪ್ರಧಾನಿಯ ಮೌನ ಕಣ್ಣಿಗೆ ಕಾಣುವಂತಹುದು. ಎಲ್ಲದರ ಬಗ್ಗೆ ಮಾತನಾಡುವ ಪ್ರಧಾನಿ #ಮಿ ಟೂ ಬಗ್ಗೆ ಮೌನ ತಾಳಿದ್ದಾರೆ. ಮೌನವು ಪ್ರಧಾನಿ ಕಚೇರಿಯ ಘನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಧಾನಿಯವರ ಸ್ಪಷ್ಟ ನಿಲುವು ಏನು ಎಂಬುದನ್ನು ತಿಳಿಯಲು ರಾಷ್ಟ್ರವು ಕಳೆದ ಹಲವಾರು ದಿನಗಳಿಂದ ಕಾಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಆನಂದ ಶರ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನೈಜೀರಿಯಾ ಪ್ರವಾಸದಿಂದ ಭಾನುವಾರ ವಾಪಸಾದ ಮಾಜಿ ಪತ್ರಕರ್ತ ಅಕ್ಬರ್ ಅವರಿಗೆ ವಿಮಾನನಿಲ್ದಾಣದಲ್ಲಿಯೇ ದೆಹಲಿ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದರು. ಗಂಟೆ ವೇಳೆಗೆ ಅಕ್ಬರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲು ತೆರಳಿದರು.

# ಮಿ ಟೂ ಚಳವಳಿಯ ಭಾಗವಾಗಿ ಅನೇಕ ಮಹಿಳೆಯರು ಅಕ್ಬರ್ ವಿರುದ್ಧ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅಕ್ಬರ್ ಅವರನ್ನು ಸಮರ್ಥಿಸಿಕೊಳ್ಳವುದು ಕಷ್ಟದ ವಿಚಾರ ಎಂಬುದಾಗಿ ಸರ್ಕಾರಿ ಮೂಲಗಳು ಇದಕ್ಕೆ ಮುನ್ನ ಹೇಳಿದ್ದವು. ಅಕ್ಬರ್ ಅವರು ದೇಶಕ್ಕೆ ವಾಪಸಾದ ಸ್ವಲ್ಪ ಹೊತ್ತಿನಲ್ಲೇ ಅವರು ರಾಜೀನಾಮೆಯನ್ನು ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ ಅವರಿಗೆ ಕಳುಹಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿಯನ್ನೂ ಮಾಡಿದ್ದವು.

ಸಾಹಿತ್ಯ, ಮನರಂಜನೆ, ಪತ್ರಿಕೋದ್ಯಮ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಗಳ ಹೆಸರಿನ ಜೊತೆ ಲೈಂಗಿಕ ಕಿರುಕುಳದ ಆರೋಪಗಳು ತಳಕು ಹಾಕಿಕೊಳ್ಳುತ್ತಿದ್ದು, ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮನ್ನುಅಕ್ಬರ್ ಅವರಿಗೆ ಸಂಬಂಧಿಸಿದಂತೆ ಪ್ರಶ್ನಿಸಲಾಗುತ್ತಿದೆ ಎಂದು ಇತರ ಅನೇಕ ಸಚಿವರು ದೂರುತ್ತಿದ್ದಾರೆ ಎಂದು ವರದಿಗಳು ಹೇಳಿದ್ದವು.

ವಿಷಯದಲ್ಲಿ ಭಾರತೀಯ ಜನತಾ ಪಕ್ಷವು ಅಧ್ಯಯನಪೂರ್ಣ  ಮೌನವನ್ನು ತಾಳಿದ್ದು, ಅಕ್ಬರ್ ವಿರುದ್ಧದ  ಆರೋಪಗಳು ಗಂಭೀರ ಸ್ವರೂಪದವಾಗಿವೆ ಎಂದು ಪಕ್ಷದ ಮೂಲಗಳು ಹೇಳಿದ್ದವು.

ಅಕ್ಬರ್ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಈಗ ಕೇಳಿ ಬರುತ್ತಿರುವ ಆರೋಪಗಳು ಕೂಡಾ ಅವರು ಸಚಿವರಾಗುವುದಕ್ಕಿಂತ ಸಾಕಷ್ಟು ಹಿಂದಿನವು ಎಂಬ ಅಭಿಪ್ರಾಯ ಕೂಡಾ ಪಕ್ಷದ ಕೆಲವು ವಲಯಗಳಲ್ಲಿ ಇದೆ ಎಂದು ವರದಿಗಳು ತಿಳಿಸಿದ್ದವು.

ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು  ಪ್ರಸ್ತುತ ಮಧ್ಯಪ್ರದೇಶದಲಿ ಎರಡು ದಿನಗಳ ಚುನಾವಣಾ ಸಮೀಕ್ಷಾ ಪ್ರವಾಸದಲ್ಲಿದ್ದಾರೆ.

ಅಕ್ಬರ್ ದುರ್ವರ್ತನೆಯ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಅವರ ಹೆಸರನ್ನು ಉಲ್ಲೇಖಿಸದೆಯೇ ಕಳೆದ ವರ್ಷ ನಿಯತಕಾಲಿಕ ಒಂದಕ್ಕೆ ಬರೆದಿದ್ದರು. ವಾರ ಅವರು ತಮ್ಮ ಆರೋಪವು ಅಕ್ಬರ್ ವಿರುದ್ಧ ಎಂಬುದಾಗಿ ದೃಢ ಪಡಿಸಿದ್ದರು.

ನನ್ನ ಬರಹದ ತುಣುಕನ್ನು ಎಂ.ಜೆ.ಅಕ್ಬರ್ ಕಥೆಯೊಂದಿಗೆ ಪ್ರಾರಂಭಿಸಿದ್ದೆ. ಅವರು "ಏನೂ" ಮಾಡದ ಕಾರಣ ಅವರ ಹೆಸರನ್ನು ಎಂದೂ ಉಲ್ಲೇಖಿಸಲಿಲ್ಲ. ಬಹಳಷ್ಟು ಮಹಿಳೆಯರ ಬಳಿ ಪರಭಕ್ಷಕನ ಬಗ್ಗೆ ಕೆಟ್ಟ ಕಥೆಗಳಿವೆ. ಬಹುಶಃ ಅವರು ಹಂಚಿಕೊಳ್ಳಬಹುದು ಎಂದು ರಮಣಿ ಬರೆದಿದ್ದರು.

ದಿ ಟೆಲಿಗ್ರಾಫ್, ಏಷ್ಯನ್ಏಜ್ ಮತ್ತು ದಿ ಸಂಡೇಗಾರ್ಡಿಯನ್ ಮುಂತಾದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿದ್ದ ಅಕ್ಬರ್ ಅವರು ಬಳಿಕ ಬಿಜೆಪಿ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರು.

ತಮಗಾಗಿದ್ದ ಅನುಭವವನ್ನು ವಿವರಿಸಿದ್ದ ರಮಣಿ, ‘ನನಗೆ ೨೩ ವರ್ಷ ಮತ್ತು ಅವರಿಗೆ ೪೩ ವರ್ಷವಾಗಿದ್ದಾಗ ಅವರು ದಕ್ಷಿಣ ಮುಂಬೈ ಹೋಟೆಲ್ ಒಂದಕ್ಕೆ ಕೆಲಸದ ಸಂದರ್ಶನ ಒಂದಕ್ಕಾಗಿ ಕರೆದಿದ್ದರು. ಅಲ್ಲಿ ಹೋಟೆಲ್ ಮೊಗಸಾಲೆಯಲ್ಲಿ ಅವರು ನನ್ನನ್ನು ಭೇಟಿ ಮಾಡಲಿಲ್ಲ. ಬದಲಿಗೆ ತಮ್ಮ ಕೊಠಡಿಗೆ ಕರೆಸಿದರು. ಅಲ್ಲಿ ಪಾನೀಯ ಕೊಟ್ಟರು. ನಾನು ನಿರಾಕರಿಸಿದರೂ ತಾವು ವೋಡ್ಕಾ ಸೇವಿಸುತ್ತಾ ಹಳೆಯ ಹಾಡು ಗುನುಗುನಿಸಿದರು. ತಮ್ಮ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸೂಚಿಸಿದರು ಎಂದು ರಮಣಿ ಆಪಾದಿಸಿದ್ದರು. ತಾನು ಕೆಲಸದ ಕೊಡುಗೆ ಬಂದರೂ ನಿರಾಕರಿಸಿದ್ದೆ ಎಂದು ಅವರು ಬರೆದಿದ್ದರು.

ರಮಣಿ ಅವರ ಬಳಿಕ ಶುಮಾರಾಹ ಎಂಬ ಪತ್ರಕರ್ತೆ ಮತ್ತು ಪ್ರೇರಣಾ ಸಿಂಗ್ ಬಿಂದ್ರಾ ಎಂಬ ಪತ್ರಕರ್ತೆ ಸೇರಿದಂತೆ ಹಲವರು ತಮಗಾದ ಕೆಟ್ಟ ಅನುಭವಗಳನ್ನು ಬಹಿರಂಗ ಪಡಿಸಿದ್ದರು

No comments:

Post a Comment