Saturday, October 6, 2018

ಇಂದಿನ ಇತಿಹಾಸ History Today ಅಕ್ಟೋಬರ್ 06

ಇಂದಿನ ಇತಿಹಾಸ History Today ಅಕ್ಟೋಬರ್ 06
2018: ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಿಜೋರಂ ಮತ್ತು ತೆಲಂಗಾಣ ಐದು ರಾಜ್ಯಗಳ ವಿಧಾನಸಭೆಗಳಮಿನಿ ಮಹಾ ಸಮರಕ್ಕೆ ಮುಹೂರ್ತ ನಿಗದಿ ಪಡಿಸಿದ ಭಾರತದ ಚುನಾವಣಾ ಆಯೋಗವು ನವೆಂಬರ್ ೧೨ರಿಂದ ಡಿಸೆಂಬರ್ ೭ರವರೆಗಿನ ಅವಧಿಯಲ್ಲಿ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ ಎಂದು  ಪ್ರಕಟಿಸಿತು. ವಿವಿಧ ರಾಜ್ಯಗಳ ಚುನಾವಣಾ ದಿನಾಂಕಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಚುನಾವಣಾ ಆಯೋಗದ ಮುಖ್ಯ ಆಯುಕ್ತ .ಪಿ. ರಾವತ್ ಅವರು ಎಲ್ಲ ಐದೂ ರಾಜ್ಯಗಳಲ್ಲೂ ಮತಗಳ ಎಣಿಕೆ ಡಿಸೆಂಬರ್ ೧೧ರಂದು ನಡೆದು ನಡೆಯುವುದು ಎಂದು ಹೇಳಿದರು. ೨೩೦ ಸ್ಥಾನಗಳ ಮಧ್ಯಪ್ರದೇಶ ವಿಧಾನಸಭೆಗೆ ನವೆಂಬರ್ ೨೮ರಂದು ಮತ್ತು ೨೦೦ ಸ್ಥಾನಗಳಿರುವ ರಾಜಸ್ಥಾನ ವಿಧಾನಸಭೆಗೆ ಡಿಸೆಂಬರ್ ೭ರಂದು ಚುನಾವಣೆ ನಡೆಯಲಿದೆ. ೯೦ ಸದಸ್ಯ ಬಲದ ಛತ್ತೀಸ್ ಗಢ ವಿಧಾನಸಭೆಗೆ ನವೆಂಬರ್ ೧೨ ಮತ್ತು ೨೦ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾವೋವಾದಿ ನಕ್ಸಲೀಯ ಹಾವಳಿ ಇರುವ ದಕ್ಷಿಣದ ಜಿಲ್ಲೆಗಳಲ್ಲಿ ನವೆಂಬರ್ ೧೨ರಂದು ಮೊದಲ ಹಂತದಲ್ಲೇ ಚುನಾವಣೆ ನಡೆಯುವುದುಅತ್ಯಂತ ಸಣ್ಣರಾಜ್ಯವಾಗಿರುವ ೪೦ ಸದಸ್ಯಬಲದ ಮಿಜೋರಂ ವಿಧಾನಸಭೆಗೆ ನವೆಂಬರ್ ೨೮ರಂದು ಚುನಾವಣೆ ನಡೆಯುವುದು. ಕಾಂಗ್ರೆಸ್ ಆಳ್ವಿಕೆ ಇರುವ ಮಿಜೋರಂ ಹೊರತು ಪಡಿಸಿ, ಉಳಿದ ಮೂರೂ ರಾಜ್ಯಗಳಲ್ಲಿ (ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ) ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಆಳ್ವಿಕೆ ಇದೆ. ೧೧೯ ಸದಸ್ಯ ಬಲದ ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ ೭ರಂದು ಚುನಾವಣೆ ನಡೆಯಲಿದೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ ಪರಿಣಾಮವಾಗಿ ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಬೇಕಾಗಿ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಟಿಡಿಪಿ ಈಗಾಗಲೇ ಮೈತ್ರಿ ಘೋಷಣೆ ಮಾಡಿವೆ. ಮುಖ್ಯಮಂತ್ರಿ ಕೆ.ಸಿ.ಆರ್ ಅವರ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್ ಎಸ್) ಈಗಾಗಲೇ ಭರದ ಚುನಾವಣಾ ಸಿದ್ಧತೆ ನಡೆಸಿದೆತೆಲಂಗಾಣದಲ್ಲಿ ಈಗಾಗಲೇ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆಯು ಈದಿನ ಚುನಾವಣೆ ಮುಹೂರ್ತ ನಿಗದಿಯಾಗಿರುವ ಇತರ ನಾಲ್ಕು ರಾಜ್ಯಗಳಿಗೂ ತತ್ ಕ್ಷಣದಿಂದಲೇ ಅನ್ವಯಿಸಲಿದೆ. ಕರ್ನಾಟಕದಲ್ಲಿ: ಕರ್ನಾಟಕದ ಲೋಕಸಭೆ ಮತ್ತು ವಿಧಾನಸಭಾ ಸ್ಥಾನಗಳಿಗೂ ಇದೇ ಅವಧಿಯಲ್ಲಿ ಉಪ ಚುನಾವಣೆಗಳು ನಡೆಯಲಿವೆ. ನವೆಂಬರ್ ೩ರಂದು ಮಂಡ್ಯ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳು ಹಾಗೂ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ  ಉಪಚುನಾವಣೆಗಳು ನಡೆಯಲಿವೆ. ನವೆಂಬರ್ 6ರಂದು ಕರ್ನಾಟಕದ  ಉಪಚುನಾವಣೆ ಫಲಿತಾಂಶ ಹೊರಬೀಳಲಿದೆ.  ಎಲ್ಲೆಲ್ಲಿ ಎಂದು ಚುನಾವಣೆಚುನಾವಣಾ ಆಯೋಗವು ಪ್ರಕಟಿಸಿರುವ ಪ್ರಕಾರ ವಿವಿಧ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಕೆಳಗಿನಂತಿದೆ:  ರಾಜಸ್ಥಾನ:  ನಾಮಪತ್ರ ಸಲ್ಲಿಕೆ: ೧೯ ನವೆಂಬರ್ ನಾಮಪತ್ರ ಪರಿಶೀಲನೆ: ೨೦ ನವೆಂಬರ್,  ನಾಮಪತ್ರ ವಾಪಸಾತಿ: ೨೨ ನವೆಂಬರ್. ಮತದಾನ:   ಡಿಸೆಂಬರ್. ಫಲಿತಾಂಶ: ೧೧ ಡಿಸೆಂಬರ್ತೆಲಂಗಾಣ: ನಾಮಪತ್ರ ಸಲ್ಲಿಕೆ: ೧೯ ನವೆಂಬರ್ನಾಮಪತ್ರ ಪರಿಶೀಲನೆ: ೨೦ ನವೆಂಬರ್,  ನಾಮಪತ್ರ ವಾಪಸಾತಿ: ೨೨ ನವೆಂಬರ್., ಮತದಾನ: ಡಿಸೆಂಬರ್. ಫಲಿತಾಂಶ: ೧೧ ಡಿಸೆಂಬರ್. ಮಿಜೋರಂ: ನಾಮಪತ್ರ ಸಲ್ಲಿಕೆ: ನವೆಂಬರ್. ನಾಮಪತ್ರ ಪರಿಶೀಲನೆ: ೧೨ ನವೆಂಬರ್: ನಾಮಪತ್ರ ವಾಪಸಾತಿ: ೧೪ ನವೆಂಬರ್ಮತದಾನ: ೨೮ ನವೆಂಬರ್.ಫಲಿತಾಂಶ: ೧೧ ಡಿಸೆಂಬರ್ . ಮಧ್ಯಪ್ರದೇಶ: ನಾಮಪತ್ರ ಸಲ್ಲಿಕೆ: ನವೆಂಬರ್. ನಾಮಪತ್ರ ಪರಿಶೀಲನೆ: ೧೨ ನವೆಂಬರ್,  ನಾಮಪತ್ರ ವಾಪಸಾತಿ: ೧೪ ನವೆಂಬರ್. ಮತದಾನ: ೨೮ ನವೆಂಬರ್. ಫಲಿತಾಂಶ: ೧೧ ಡಿಸೆಂಬರ್.  ಛತ್ತೀಸ್ ಗಢ (ಎರಡು ಹಂತಗಳ ಚುನಾವಣೆ): ಮೊದಲ ಹಂತ: ನಾಮಪತ್ರ ಸಲ್ಲಿಕೆ: ೨೩ ಅಕ್ಟೋಬರ್. ನಾಮಪತ್ರ ಪರಿಶೀಲನೆ: ೨೪ ಅಕ್ಟೋಬರ್. ನಾಮಪತ್ರ ವಾಪಸಾತಿ: ೨೬ ಅಕ್ಟೋಬರ್. ಮತದಾನ: ೧೨ ನವೆಂಬರ್. ಎರಡನೇ ಹಂತ: ನಾಮಪತ್ರ ಸಲ್ಲಿಕೆ: ನವೆಂಬರ್. ನಾಮಪತ್ರ ಪರಿಶೀಲನೆ: ನವೆಂಬರ್. ನಾಮಪತ್ರ ವಾಪಸಾತಿ: ನವೆಂಬರ್. ಮತದಾನ: ೨೦ ನವೆಂಬರ್ಉಭಯ ಹಂತಗಳ ಫಲಿತಾಂಶ: ಡಿಸೆಂಬರ್ ೧೧. ೨೦೧೩ರಲಿ ಬಿಜೆಪಿಯು ರಾಜಸ್ಥಾನದಲ್ಲಿ ಮೂರನೇ ಎರಡರಷ್ಟು ಸ್ಥಾನಗಳೊಂದಿಗೆ ಪ್ರಚಂಡ ಬಹುಮತ ಪಡೆದಿತ್ತು. ಬಳಿಕ ೨೦೧೪ರಲ್ಲ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಎಲ್ಲ ೨೫ ಸ್ಥಾನಗಳನ್ನೂ ಗೆದ್ದುಕೊಂಡಿತ್ತು. ಆದರೆ ವರ್ಷ ಜನವರಿಯಲ್ಲಿ ನಡೆದ ಉಪಚುನಾವಣೆಗಳಲ್ಲಿ ಎರಡು ಲೋಕಸಭಾ ಮತ್ತು ಒಂದು ವಿಧಾನಸಭಾ ಸ್ಥಾನಗಳಲ್ಲಿ ಭಾರೀ ಅಂತರದಿಂದ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತುಮಧ್ಯಪ್ರದೇಶದಲ್ಲಿ ಕೇಸರಿ ಪಕ್ಷವು ೨೦೦೩ರಿಂದ ಆಡಳಿತಾರೂಢ ಪಕ್ಷವಾಗಿದ್ದು, ಬಾರಿ ಕಾಂಗ್ರೆಸ್ ಪಕ್ಷದಿಂದ ಬೆದರಿಕೆ ಎದುರಿಸುತ್ತಿದೆ. ಕೆಲವು ಹಗರಣಗಳ ಪರಿಣಾಮವಾಗಿ ರಾಜ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಇತ್ತೀಚೆಗೆ ಧಕ್ಕೆ ಉಂಟಾಗಿದ್ದು, ಕಾಂಗ್ರೆಸ್ ಇವುಗಳನ್ನು ಬಿಜೆಪಿ ವಿರುದ್ಧ ತನ್ನ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆಗಳಿವೆಛತ್ತೀಸ್ ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಕುತೂಹಲಕಾರಿ ಸ್ಪರ್ಧೆ ನಡೆಯುವ ನಿರೀಕ್ಷೆಯಿದೆ. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚುಕಡಿಮೆ ಒಂದೇ ಪ್ರಮಾಣದ ಮತಗಳನ್ನು ಪಡೆದಿದ್ದುದರಿಂದ ಬಾರಿ ಹೇಗೆ ಎಂಬ ಕುತೂಹಲ ಮೂಡಿದೆ.

2018: ಅಜ್ಮೀರ್ (ರಾಜಸ್ಥಾನ): ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ಆಯೋಗ ಮುಹೂರ್ತ ನಿಗದಿ ಪಡಿಸುವ ಕೆಲವೇ ತಾಸುಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪರಸ್ಪರ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ಅಜ್ಮೀರದಲ್ಲಿಸೇನಾ ಸಿಬ್ಬಂದಿಯನ್ನು ತಮಾಷೆ ಮಾಡಿದ್ದಕ್ಕಾಗಿ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಫೇಲ್ ವ್ಯವಹಾರ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಹಗರಣಕ್ಕಾಗಿ ಬಿಜೆಪಿ ವಿರುದ್ಧ ಹರಿಹಾಯ್ದರು. ‘ನಮ್ಮ ಯೋಧರು ಮತ್ತು ಅವರು ನಡೆಸಿದ ಸರ್ಜಿಕಲ್ ದಾಳಿ ಬಗ್ಗೆ ಹೆಮ್ಮೆ ಪಡದ ಯಾರೇ ಭಾರತೀಯರು ಇರಲು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ಸನ್ನು ನೋಡಿ. ಅವರು ನಮ್ಮ ಯೋಧರನ್ನೂ ಅಣಕಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.   ಮಧ್ಯೆ ಮಧ್ಯಪ್ರದೇಶದ ಮೊರೇನಾದಲ್ಲಿ ಚುನಾವಣಾ ರಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಎಚ್ ಎಎಲ್ ಗೆ ನೀಡಲಾಗಿದ್ದ ರಫೇಲ್ ವ್ಯವಹಾರವು ಭಾರತದಲ್ಲಿ ನೂರಾರು ಮಂದಿಗೆ ಕೆಲಸ ಕೊಡುತ್ತಿತ್ತು. ಆದರೆ ಪ್ರಧಾನಿ ಮೋದಿಯವರು ಇದನ್ನು ಎಚ್ ಎಎಲ್ ನಿಂದ  ಕದ್ದು ಅನಿಲ್ ಅಂಬಾನಿ ಕಂಪೆನಿಗೆ ೩೦,೦೦೦ ಕೋಟಿ ರೂಪಾಯಿಗಳ ಗುತ್ತಿಗೆ ಕೊಟ್ಟಿದ್ದಾರೆ ಎಂದು ರಾಹುಲ್ ಗಾಂಧಿ ಪ್ರಧಾನಿಯತ್ತ ಕೂರಂಬು ಎಸೆದರು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆಸಿದ ರಾಜ್ಯವ್ಯಾಪಿ ಯಾತ್ರೆಯ ಸಮಾರೋಪದ ಅಂಗವಾಗಿ ಪ್ರದಾನಿ ಮೋದಿ ಅವರ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತುಮುಖ್ಯಮಂತ್ರಿ ವಸುಂಧರಾರಾಜೆ ಅವರು ಸಂಘಟಿಸಿದರಾಜಸ್ಥಾನ ಗೌರವ ಯಾತ್ರೆಯನ್ನು ರಾಜಸಮಂಡ್ ಚಾರ್ ಭುಜನಾಥ್ ದೇವಾಲಯದಿಂದ ಆರಂಭಿಸಲಾಗಿತ್ತು. ಇದಕ್ಕೆ ಮುನ್ನ ಮೋದಿಯವರು ಪುಷ್ಕರ ಪಟ್ಟಣದ ಬ್ರಹ್ಮ ದೇವಾಲಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ ಕೊನೆಗೆ ಅವರು ತಮ್ಮ ಕಾರ್ಯಕ್ರಮವನ್ನು ಅಜ್ಮೀರ್ ರಾಲಿಗೆ ಮಾತ್ರ ಸೀಮಿತ ಪಡಿಸಿದರು. ವಸುಂಧರಾ ರಾಜೆ, ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಲಾಲ್ ಸೈನಿ ಮತ್ತು ಇತರ ನಾಯಕರು ಅಜ್ಮೀರದ ಹೊರವಲಯದ ಕಯದ್ ವಿಶ್ರಾಮ ಸ್ಥಳದಲ್ಲಿ ಸಂಘಟಿಸಲಾದ ರಾಲಿಯ ಸಿದ್ಧತೆಗಳನ್ನು ಹಿಂದಿನ ದಿನ ಪರಿಶೀಲಿಸಿದ್ದರು. ರಾಲಿಗೆ   ಲಕ್ಷ ಆಗಮಿಸಿದ್ದರು ಎಂದು ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾದರು. ಮೋದಿ ಅವರ ರಾಲಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಜ್ಮೀರ್ ದರ್ಗಾ ಸಮಿತಿಯ ಅಧ್ಯಕ್ಷ ಅಮಿನ್ ಪಠಾಣ್ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ಆಗ್ರಹಿಸಿದ್ದರುಅಜ್ಮೀರ್ ಉತ್ತರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರಾಜ್ಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ವಸುದೇವ ದೇವಾನಿ ಅವರು ರಾಲಿಗೆ ಬೃಹತ್ ಪ್ರಮಾಣದಲ್ಲಿ ಜನರನ್ನು ಆಕರ್ಷಿಸಲು ಪ್ರಚಾರಾಭಿಯಾನ ನಡೆಸಿದ್ದರು.  ಅಜ್ಮೀರ್ ಜಿಲ್ಲೆಯು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಅವುಗಳ ಪೈಕಿ ಏಳು ಕ್ಷೇತ್ರಗಳನ್ನು ಬಿಜೆಪಿ ಶಾಸಕರು ಪ್ರತಿನಿಧಿಸುತ್ತಿದ್ದರೆನಸೀರಾಬಾದ್ ಸ್ಥಾನವನ್ನು ಮಾತ್ರ ಕಾಂಗ್ರೆಸ್ ಪ್ರತಿನಿಧಿಸಿದೆ. ವರ್ಷ ಆದಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷವು ಅಜ್ಮೀರ್ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿತ್ತು. ಕಾಂಗ್ರೆಸ್ ಕ್ಷೇತ್ರವನ್ನು ಗೆದ್ದುಕೊಂಡಿತ್ತು. ಪ್ರಧಾನಿ ಮೋದಿ ಅವರ ರಾಲಿ ಸಂಘಟಿಸುವ ಮೂಲಕ ಮತದಾರರಲ್ಲಿ ಪಕ್ಷದ ಪರ ಒಲವು ಹೆಚ್ಚಿಸಲು ಬಿಜೆಪಿ ಯತ್ನಿಸಿತು. ೨೦೧೩ರಲ್ಲೂ ಮೋದಿ ಅವರು ಅಜ್ಮೀರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು.  ಅಜ್ಮೀರ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿಯ ರಾಮಸ್ವರೂಪ್ ಲಂಬಾ ಅವರನ್ನು ಪರಾಭವಗೊಳಿಸುವ ಮೂಲಕ ಕಾಂಗ್ರೆಸ್ ಗೆದ್ದಿತ್ತುಲಂಬಾ ಅವರು ಮಾಜಿ ಅಜ್ಮೀರ್ ಸಂಸತ್ ಸದಸ್ಯ ಸನ್ವಾರ್ ಲಾಲ್ ಜಾಟ್ ಅವರ ಪುತ್ರಹಾಲಿ ಸಂಸದ ಸನ್ವಾರ್ ಲಾಲ್ ಜಾಟ್ ಅವರು ಕಳೆದ ವರ್ಷ ಹೃದಯಸ್ಥಂಭನದಿಂದ ನಿಧನರಾದ್ದರಿಂದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಾಗಿ ಬಂದಿತ್ತು.

2018: ಲಕ್ನೋ: ಮಾಯಾವತಿ ಅವರ ಬಿಎಸ್ಪಿಯ ಬಳಿಕ, ಸಮಾಜವಾದಿ ಪಕ್ಷ (ಎಸ್ಪಿ) ಕೂಡಾ ಮಧ್ಯಪ್ರದೇಶ ಮತ್ತ ಛತ್ತೀಸ್ ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿತು. ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಜೊತೆಗೆ ತಾನು ಯಾವುದೇ ಮೈತ್ರಿಯನ್ನೂ ಮಾಡಿಕೊಳ್ಳುವುದಿಲ್ಲ ಎಂದು ಬಹುಜನ ಸಮಾಜ ಪಕ್ಷವು ಇತ್ತೀಚೆಗೆ ಪ್ರಕಟಿಸಿತ್ತು. ಮೂರೂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನವೆಂಬರ್ ೧೨ರಿಂದ ಡಿಸೆಂಬರ್ ೭ರ ನಡುವಣ ಅವಧಿಯಲ್ಲಿ ನಡೆಯಲಿವೆ. ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ನಾವು ನೇರವಾಗಿ ಚುನಾವಣೆಯಲ್ಲಿ ಸೆಣಸಲಿದ್ದೇವೆ. ಗೊಂಡ್ವಾನಾ ಗಣತಂತ್ರ ಪಕ್ಷ (ಜಿಜಿಪಿ) ಮತ್ತು ಬಿಎಸ್ಪಿ ಜೊತೆ ಎರಡು ರಾಜ್ಯಗಳಲ್ಲಿ ಮೈತ್ರಿ ಬಗ್ಗೆ ಮಾತುಕತೆ ನಡೆಸಲಿದ್ದೇವೆ. ಕಾಂಗ್ರೆಸ್ ನಮ್ಮನ್ನು ದೀರ್ಘ ಕಾಲ ಕಾಯುವಂತೆ ಮಾಡಿದೆ. ನಾವಿನ್ನು ಕಾಯಲಾಗುವುದಿಲ್ಲ. ನಾವು ಈಗಾಗಲೇ ಛತ್ತೀಸ್ ಗಢದಲ್ಲಿ ಜಿಜಿಪಿ ಜೊತೆ ಮೈತ್ರಿ ಸಾಧಿಸುವ ನಿಟ್ಟಿನಲ್ಲಿ ಸಂಪರ್ಕದಲ್ಲಿ ಇದ್ದೇವೆ. ಮಧ್ಯಪ್ರದೇಶದಲ್ಲೂ ನಾವು ಇದನ್ನೇ ಮಾಡಲಿದ್ದೇವೆ ಎಂದು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು. ಅಖಿಲೇಶ್ ಯಾದವ್ ಅವರು ಪಕ್ಷದ ಕೇಂದ್ರ ಕಚೇರಿಯಲ್ಲಿ ಹಿರಿಯ ಶಿಕ್ಷಕರ ಸಮಾವೇಶದ ಸಂದರ್ಭದಲ್ಲಿ ಮಾಧ್ಯಮ ಮಂದಿಯೊಂದಿಗೆ ಮಾತನಾಡಿದರು. ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯಂತಹ ತನಿಖಾ ಸಂಸ್ಥೆಗಳ ಹೆದರಿಕೆಯಿಂದ ಮಧ್ಯಪ್ರದೇಶದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಿಎಸ್ಪಿ ಅಂಜಿದೆ ಎಂಬುದಾಗಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಎಸ್ಪಿ ಮತ್ತು ಬಿಎಸ್ಪಿಯಂತಹ ಪಕ್ಷಗಳಿಗೆ ಯಾವುದರ ಬಗೆಗೂ ಹೆದರಿಕೆ ಇಲ್ಲ ಎಂದು ಅಖಿಲೇಶ್ ನುಡಿದರು. ಚುನಾವಣಾ ಆಯೋಗವು ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ, ಮಿಜೋರಂ ಮತ್ತು ತೆಲಂಗಾಣ ಐದು ರಾಜ್ಯಗಳ ವಿಧಾನಸಭೆಗಳಗೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿತು. ೨೦೧೭ರಲ್ಲಿ ಕಾಂಗ್ರೆಸ್ ಮತ್ತು ಎಸ್ಪಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಜೊತೆಯಾಗಿ ನಿಂತು ಬಿಜೆಪಿ ವಿರುದ್ಧ ಸೆಣಸಿದ್ದವು. ಆದರೆ ಮೈತ್ರಿಕೂಟದಿಂದ ಯಾವುದೇ ಪ್ರಯೋಜನವೂ ಆಗಿರಲಿಲ್ಲ. ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು೨೦೧೯ರ ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಗೆದ್ದರೆ, ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಎಸ್ಪಿ ಬೆಂಬಲಿಸುವುದೇ ಎಂಬ ಪ್ರಶ್ನೆಗೆಇದು ಈಗ ಪ್ರಸ್ತುತವಲ್ಲ. ಈಗ ನಾನು ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದನ್ನಷ್ಟೇ ಬಯಸುತ್ತಿದ್ದೇನೆ ಎಂದು ಅಖಿಲೇಶ್ ನುಡಿದರು.

2018: ಬಲಿಯಾ (ಉತ್ತರಪ್ರದೇಶ): ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಅನುದಾನಿತ ಇಂಟರ್ ಕಾಲೇಜು ಒಂದರ ವಿದ್ಯಾರ್ಥಿಗಳುವಂದೇ ಮಾತರಂ ಹಾಡಿದರೆ ಮತ್ತುಭಾರತ್ ಮಾತಾ ಕೀ ಜೈ ಘೋಷಣೆ ಕೂಗಿದರೆ ತಮ್ಮನ್ನು ಶಿಕ್ಷಿಸಲಾಗುತ್ತಿದೆ ಎಂಬುದಾಗಿ ದೂರಿದ್ದು, ಅವರ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬಲಿಯಾ ಜಿಲ್ಲಾಡಳಿತ ತನಿಖೆಗೆ ಆಜ್ಞಾಪಿಸಿತು. ಬಿಲ್ತಾರಾ ರಸ್ತೆಯಲ್ಲಿನ ಜಿಎಂಎಎಂ ಇಂಟರ್ ಕಾಲೇಜಿಗೆ ಭೇಟಿ ನೀಡಿದ್ದಮಾನಸ ಮಂದಿರ ಸಮಾಜ ಕಲ್ಯಾಣ ಸಂಘಟನೆಯ ಸದಸ್ಯರು, ಸಂಸ್ಥೆಯ ವಿದ್ಯಾರ್ಥಿಗಳನ್ನು ಶಾಲಾ ಪ್ರಾರ್ಥನೆಯ ಬಳಿಕ ವಂದೇ ಮಾತರಂ ಹಾಡಿದ್ದಕ್ಕಾಗಿ ಮತ್ತು ಭಾರತ ಮಾತಾ ಕೀ ಜೈ ಘೋಷಣೆ ಕೂಗಿದ್ದಕ್ಕಾಗಿ ಶಿಕ್ಷಿಸಿದ್ದನ್ನು ಕಣ್ಣಾರೆ ಕಂಡು, ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದರು. ಸಂಘಟನೆಯ ಮ್ಯಾನೇಜರ್ ಶಿವ ಕುಮಾರ್ ಜೈಸ್ವಾಲ್ ಅವರ ಪ್ರಕಾರ ವಿದ್ಯಾರ್ಥಿಗಳು ಮಾತ್ರವೇ ಅಲ್ಲ ಶಿಕ್ಷಕರು ಕೂಡಾ ಬಗ್ಗೆ ದೂರಿದ್ದಾರೆ. ಅವರ ಹೇಳಿಕೆಗಳನ್ನು ವಿಡಿಯೋದಲ್ಲಿ ದಾಖಲಿಸಲಾಗಿದೆ ಎಂದು ಹೇಳಿದರು.  ‘ಶಾಲೆಯಲ್ಲಿ ವಂದೇ ಮಾತರಂ ಹಾಡುವುದಕ್ಕೆ ಮತ್ತು ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವುದಕ್ಕೆ ನಿಷೇಧವಿದೆ. ಇದನ್ನು ಉಲ್ಲಂಘಿಸಿದವರನ್ನು ಶಿಕ್ಷಿಸಲಾಗುತ್ತದೆ ಎಂದು ಶಾಲೆಯ ಅರ್ಥಶಾಸ್ತ್ರ ಶಿಕ್ಷಕ ಸಂಜಯ್ ಪಾಂಡೆ ನಮಗೆ ತಿಳಿಸಿದರು ಎಂದು ಜೈಸ್ವಾಲ್  ಹೇಳಿದರು.  ‘ಬಾಯ್ತಪ್ಪಿ ಭಾರತ್ ಮಾತಾ ಕೀ ಜೈ’ ಉಚ್ಚರಿಸಿದ್ದ ಒಬ್ಬ ವಿದ್ಯಾರ್ಥಿಯನ್ನು ಶಾಲಾ ಅಸೆಂಬ್ಲಿಯ ಬಳಿಕ ತಾಸುಗಟ್ಟಲೆ ಕಾಲ ಬಿಸಿಲಲ್ಲಿ ಹಿಮ್ಮಡಿ ಮೇಲೆ ಕೂರಿಸಲಾಗಿತ್ತು ಎಂದು ಪಾಂಡೆ ನಮಗೆ ತಿಳಿಸಿದರು ಎಂದು ಜೈಸ್ವಾಲ್ ನುಡಿದರು.  ‘ವಂದೇ ಮಾತರಂ ಹಾಡಲು ಯತ್ನಿಸಿದರೆ ತಮ್ಮನ್ನು ಶಿಕ್ಷಿಸಲಾಗುತ್ತದೆ ಎಂದು ವಿದ್ಯಾರ್ಥಿಗಳು ನಮ್ಮ ತಂಡದ ಸದಸ್ಯರಿಗೆ ತಿಳಿಸಿದರು ಎಂದು ಜೈಸ್ವಾಲ್ ಹೇಳಿದರುಘಟನೆ ಬಗ್ಗೆ ದೂರು ಮತ್ತು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳ ವಿಡಿಯೋ ದಾಖಲಾತಿಗಳನ್ನು  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಕಳುಹಿಸಲಾಗಿದೆ ಎಂದು ಅವರು ನುಡಿದರು.  ‘ಇದೊಂದು ಗಂಭೀರವಾದ ಪ್ರಕರಣವಾಗಿದ್ದು, ಬಗ್ಗೆ ಪರಿಶೀಲಿಸುವಂತೆ ಜಿಲ್ಲಾ ಶಾಲಾ ಇನ್ ಸ್ಪೆಕ್ಟರ್ (ಡಿಐಒಎಸ್) ನರೇಂದ್ರ ದೇವ ಪಾಂಡೆ ಅವರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಭವಾನಿ ಸಿಂಗ್ ಖಂಗರೌತ್ ಅವರು ಹೇಳಿದರು. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ನುಡಿದರುಏನಿದ್ದರೂ, ಕಾಲೇಜಿನ ಪ್ರಾಂಶುಪಾಲ ಮಜೀದ್ ನಾಸೀರ್ ಅವರು ದೂರನ್ನು ಸಂಸ್ಥೆಗೆ ಕೆಟ್ಟ ಹೆಸರು ತರಲು ನಡೆಸಿರುವ ಸಂಚು ಎಂಬುದಾಗಿ ಪ್ರತಿಪಾದಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹೇಳಿಕೆಗಳ ವಿಡಿಯೋ ದೃಶ್ಯಾವಳಿಗಳನ್ನು ಮಾನಸ ಮಂದಿರ ಸದಸ್ಯರು ಸಾಮಾಜಿಕ ಜಾಲತಾಣದಲ್ಲೂ ಅಪ್ಲೋಡ್ ಮಾಡಿದರು.

2018: ನವದೆಹಲಿ: ಸಂಸತ್ತಿನಿಂದ ಅನುಮೋದನೆ ಪಡೆದ ಶಾಸನವು ಮೊಬೈಲ್ ಫೋನ್ ಗಳು ಮತ್ತು ಬ್ಯಾಂಕ್ ಖಾತೆಗಳಿಗೆ ಬಯೋಮೆಟ್ರಿಕ್ ಐಡಿ ಆಧಾರ್ ಜೋಡಣೆ ಕಡ್ಡಾಯವನ್ನು ಮರುಸ್ಥಾಪಿಸಬಲ್ಲುದು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಹೇಳಿದರು. ಆದರೆ ಸರ್ಕಾರವು ನಿಟ್ಟಿನಲ್ಲಿ ನೂತನ ಶಾಸನ ತರಲಿದೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಸುಪ್ರೀಂಕೋರ್ಟಿನ ಸಂವಿಧಾನಪೀಠವು ಕಳೆದ ತಿಂಗಳು ಆಧಾರ್- ೧೨ ಅಂಕಿಗಳ ಬಯೋಮೆಟ್ರಿಕ್ ಆಧಾರಿತ ಗುರುತಿನ ಸಂಖ್ಯೆ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಆದರೆ ಟೆಲಿಕಾಂ ಆಪರೇಟರುಗಳಂತಹ ಖಾಸಗಿ ವ್ಯಕ್ತಿ/ ಸಂಸ್ಥೆಗಳಿಗೆ ಮೊಬೈಲ್ ಫೋನ್ ಬಳಕೆದಾರರ ಗುರುತು ಪರಿಶೀಲನೆಗೆ ಆಧಾರ್ ಬಳಸುವಂತಿಲ್ಲ ಎಂದು ಹೇಳಿತ್ತು. ಸುಪ್ರೀಂಕೋರ್ಟ್ ತೀರ್ಪನ್ನು ಅತ್ಯಂತ ಉತ್ತಮ ತೀರ್ಪು ಎಂಬುದಾಗಿ ಕರೆದ ಜೇಟ್ಲಿ, ’ಆಧಾರ್ ಯೋಜನೆಯ ಶಾಸನಬದ್ಧತೆಯನ್ನು ಕೋರ್ಟ್ ಅಂಗೀಕರಿಸಿದೆ ಎಂದು ಹೇಳಿದ್ದರು.  ‘ಆಧಾರ್ ಪೌರತ್ವ ಕಾಡ್ ಅಲ್ಲ. ಸರ್ಕಾರದ ವಿವಿಧ ಯೋಜನೆ, ಸಬ್ಸಿಡಿಗಳ ಹಣವನ್ನು ನೀವು ವ್ಯವಸ್ಥೆಯ ಮೂಲಕ ಜನರಿಗೆ ನೇರವಾಗಿ ತಲುಪಿಸಬಲ್ಲಿರಿ. ಇದು ಆಧಾರ್ ಯೋಜನೆಯ ಮುಖ್ಯ ಉದ್ದೇಶ ಎಂದು ಜೇಟ್ಲಿ ಪ್ರತಿಪಾದಿಸಿದರು. ಸುಪ್ರೀಂಕೋರ್ಟ್ ಎತ್ತಿ ಹಿಡಿಯದೇ ಇರುವ ಅಂಶಗಳಿಗೆ ಸಂಬಂಧಿಸಿದಂತೆ ಶಾಸನ ರೂಪಿಸುವ ಮೂಲಕ ಮೊಬೈಲ್ ಫೋನುಗಳು ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಪರ್ಕ ಕಲ್ಪಿಸಬಹುದು ಎಂದು ಅವರು ಹೇಳಿದರು. ಉದ್ದೇಶಕ್ಕಾಗಿ ಸಂಸತ್ತಿನಲ್ಲಿ ಶಾಸನ ತರುವ ಯೋಜನೆ ಸರ್ಕಾರದ ಮುಂದಿದೆಯೇ ಎಂಬ ಪ್ರಶ್ನೆಗೆ ಜೇಟ್ಲಿ ಅವರು ಉತ್ತರಿಸಲಿಲ್ಲದಾಮಾಶಯ ಸೂತ್ರ ಆಧಾರದಲ್ಲಿ ಆದಾಯ ತೆರಿಗೆಯಂತಹ ಹಲವಾರು ಕ್ಷೇತ್ರಗಳಲ್ಲಿ ಆಧಾರ್ ಜೋಡಣೆಗೆ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿದೆ. ಮೊಬೈಲ್ ಟೆಲಿಫೋನಿಯ ಜೊತೆ ಆಧಾರ್ ಜೋಡಣೆಯಿಂದ ಅನುಕೂಲವಾಗುವ ಕುರಿತ ಮಾಹಿತಿಯನ್ನು  ತೋರಿಸಿಕೊಡಲು ನೀವು ಸಮರ್ಥರಾದರೆ ಇಲ್ಲೂ ಅದನ್ನು ಮಾಡಬಹುದು. ಏಕೆಂದರೆ ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳು ಅತ್ಯಂತ ಮಹತ್ವ ಪಡೆದಿರುವ ಎರಡು ಕ್ಷೇತ್ರಗಳು ಎಂದು ಜೇಟ್ಲಿ ಹೇಳಿದರು.



2016: ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿ ಉಗ್ರರನ್ನು ಮಟ್ಟ ಹಾಕಲು ಭಾರತ ಪ್ರಯತ್ನಿಸಿದ ಬೆನ್ನಲ್ಲೇ ಉಗ್ರರು ಸೇನಾ ಶಿಬಿರಗಳನ್ನೇ ಗುರಿಯಾಗಿಸಿಕೊಂಡು ಈದಿನ ಮುಂಜಾನೆಯೂ ಪುಲ್ವಾಮಾ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದರು. ತಕ್ಕ ಉತ್ತರ ನೀಡಿದ ಕೆಲವೇ ಗಂಟೆಗಳ ಅಂತರದಲ್ಲಿ, ಅಂದರೆ ಸಂಜೆಯ ವೇಳೆಗೆ ನೌಗಾಮ್ ಮತ್ತು ರಾಮ್ ಪುರ ಸೆಕ್ಟರ್ಗಳಲ್ಲಿಯೂ ಒಳನುಸುಳಿ ದಾಳಿ ನಡೆಸಿರುವ ಬಗ್ಗೆ ವರದಿಯಾಯಿತು. ಪುಲ್ವಾಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು ಮೂವರು ಉಗ್ರರನ್ನು ಹತ್ಯೆಗೈದು ಕಾರ್ಯಾಚರಣೆ ಮುಂದುವರಿಸಿದ ಸೇನೆ, ಸಂಜೆ ನೌಗಾಮ್ ಮತ್ತು ರಾಮ್ ಪುರ ಸೆಕ್ಟರ್ಗಳಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಬಲಿ ಪಡೆಯಿತು. ಒಟ್ಟು ನಾಲ್ವರು ಉಗ್ರರು ಗಡಿ ಭದ್ರತಾ ಪಡೆ ಪ್ರತ್ಯುತ್ತರಕ್ಕೆ ಬಲಿಯಾದರು.  ನಿರಂತರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರಿಗೆ ಗಾಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಲಾಂಗೇಟ್ನಲ್ಲಿರುವ 30ನೇ ರಾಷ್ಟ್ರೀಯ ರೈಫಲ್ಸ್ನ ಕ್ಯಾಂಪ್ ಮೇಲೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಉಗ್ರರು ದಾಳಿ ನಡೆಸಿದರು. ತಕ್ಷಣ ಎಚ್ಚೆತ್ತ ಯೋಧರು ಪ್ರತಿದಾಳಿ ನಡೆಸಿ, ಮೂವರು ಉಗ್ರರನ್ನು ಹೊಡೆದುರುಳಿಸಿದರು. ಸಂಜೆ 5 ಗಂಟೆಗೆ ನೌಗಾಮ್ ವಲಯದಲ್ಲಿ ಯೋಧರ ಗುಂಡೆಟಿಗೆ ಇನ್ನೊಬ್ಬ ಉಗ್ರ ಬಲಿಯಾದ.

2016: ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೀಮಿತ ಓವರ್ ತಂಡದ ನಾಯಕ ಎಂಎಸ್ ಧೋನಿಗಿಂತ ಅಧಿಕ ಸಂಭಾವನೆ ಪಡೆದು, ಭಾರತ ಕ್ರಿಕೆಟ್ ತಂಡದಲ್ಲಿ ಅಧಿಕ ಸಂಭಾವನೆ ಪಡೆಯುವ ಆಟಗಾರ ಎಂಬ ಗೌರವಕ್ಕೆ ಭಾಜನರಾದರು. ವಿರಾಟ್ ಕಳೆದ ಒಂಭತ್ತು ತಿಂಗಳಲ್ಲಿ 1ಕೋಟಿ 78ಲಕ್ಷ ಸಂಭಾವನೆ ಪಡೆದಿದ್ದಾರೆ. ಬಿಸಿಸಿಐ ಕೆಲ ದಿನಗಳ ಹಿಂದಷ್ಟೇ ಆಟಗಾರರ ಪರಿಷ್ಕೃತ ಸಂಭಾವನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕೊಹ್ಲಿ ಗರಿಷ್ಠ ಸಂಭಾವನೆ ಪಡೆಯುವ ಆಟಗಾರರಲ್ಲಿ ಅಗ್ರ ಸ್ಥಾನ ಅಲಂಕರಿಸಿದರು. ಧೋನಿ ಟೆಸ್ಟ್ ಕ್ರಿಕೆಟ್ಗೆ ಈಗಾಗಲೇ ವಿದಾಯ ಹೇಳಿರುವುದರಿಂದ ಕೊಹ್ಲಿಗೆ ಹೋಲಿಸಿದರೆ ಮಹಿ ಸಂಭಾವನೆ ಕಡಿಮೆ. ಟೆಸ್ಟ್ ಸರಣಿ ಜಯಿಸಿದಾಗ ಬಿಸಿಸಿಐ ಘೋಷಿಸುವ ಬೋನಸ್ ಹಾಗೂ ವಯಕ್ತಿಕ ಪ್ರದರ್ಶನದ ಆದಾರದ ಮೇಲೆ ಕೊಹ್ಲಿಗೆ ಅಧಿಕ ಸಂಭಾವನೆ ನೀಡಲಾಗುತ್ತಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತು.

2016: ನವದೆಹಲಿ: ಪಾಕ್ ಕಲಾವಿದರ ಪರವಾಗಿ ಮೊದಲಿನಿಂದಲೂ ಮುಂಚೂಣಿಯಲ್ಲಿ ನಿಂತು ಬ್ಯಾಟಿಂಗ್ ನಡೆಸುತ್ತಿದ್ದ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ನಿಷೇಧದ ಬಿಸಿ ತಟ್ಟಿಸಿತು. ಕರಣ್ ಜೋಹರ್ ನಿರ್ದೇಶನದ ಬಹುನಿರೀಕ್ಷತ ದಿನ್ ಹೈ ಮುಷ್ಕಿಲ್ ಚಿತ್ರವನ್ನು ಭಾರತದಲ್ಲಿ ನಿಷೇಧಿಸುವಂತೆ ಸೇನೆ ಕರೆ ನೀಡಿತು.  ಫವಾದ್ ಖಾನ್ ಸೇರಿದಂತೆ ಪಾಕ್ ಕಲಾವಿದರನ್ನು ಭಾರತದಿಂದ ಹೊರತಳ್ಳುವುದು ಸರಿಯಲ್ಲ. ಕಲಾವಿದರನ್ನು ಸರಿಯಾಗಿ ನಡೆಸಿಕೊಳ್ಳಬೇಕೆಂಬ ಕರಣ್ ಜೋಹರ್ ಹೇಳಿಕೆಗೆ ದೇಶವ್ಯಾಪಿ ಟೀಕೆ ವ್ಯಕ್ತವಾಗಿತ್ತು. ನಟ ಸಲ್ಮಾನ್ ಖಾನ್ ಮತ್ತು ಹಿರಿಯ ನಟ ಓಂ ಪುರಿ ಕೂಡ ಕರಣ್ ಹೇಳಿಕೆಗೆ ಧ್ವನಿ ಗೂಡಿಸಿದ್ದರು. ಪಾಕ್ ಕಲಾವಿದರಿಗೆ ವೀಸಾ ನೀಡಿದವರು ನೀವೆ ಎಂದು ಹೇಳುವ ಮೂಲಕ ಹಿರಿಯ ನಟ ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬಳಿಕ ತಪ್ಪನ್ನು ಅರಿತುಕೊಂಡ ಓಂ ಪುರಿ ಬಹಿರಂಗವಾಗಿ ಕ್ಷಮೆಯಾಚಿಸಿದರು.  ಭಾರತೀಯ ಸೈನ್ಯದ ಮೇಲೆ ನಡೆದ ಉರಿ ದಾಳಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಭಾರತ ನಡೆಸಿದ ಸೀಮಿತ ದಾಳಿಯಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯ ಹಳಸಿದ್ದು,  ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತೀಯ ಸಿನಿಮಾ ಮತ್ತು ಟಿವಿ ಚಾನಲ್ಗಳನ್ನು .15ರಿಂದ ನಿಸೇಧಿಸುವಂತೆ ಸುತ್ತೋಲೆ ಹೊರಡಿಸಿದೆ. ರಣಬೀರ್ ಕಪೂರ್, ಐಶ್ವರ್ಯ ರೈ , ಅನುಷ್ಕಾ ಶರ್ಮಾ ಮತ್ತು ಪಾಕ್ ಕಲಾವಿದ ಫವಾದ್ ಖಾನ್ ಅಭಿನಯದ ದಿನ್ ಹೈ ಮುಷ್ಕಿಲ್ ಚಿತ್ರ . 28ರಂದು ತೆರೆಕಾಣಲಿದೆ.

2016: ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಸಾಧಕರಿಗೆ 2015 ಏಕಲವ್ಯ, ಜೀವಮಾನ ಸಾಧನೆ ಮತ್ತು ಕ್ರೀಡಾ ರತ್ನ ಪ್ರಶಸ್ತಿಯನ್ನು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಈದಿನ ಪ್ರಕಟಿಸಿದರು. ಭಾರತ ಹಾಕಿ ತಂಡವನ್ನು ಪ್ರತಿನಿಧಿಸಿರುವ ನಿತಿನ್ ತಿಮ್ಮಯ್ಯ, ಈಜು ತಾರೆ ದಾಮಿನಿ ಗೌಡ ಸೇರಿ ಒಟ್ಟು 16 ಮಂದಿ ಸಾಧಕರು ಏಕಲವ್ಯ ಪ್ರಶಸ್ತಿಗೆ ಭಾಜನರಾದರೆ, 10 ಮಂದಿಗೆ ಕ್ರೀಡಾ ರತ್ನ ಮತ್ತು ಇಬ್ಬರು ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಯಿತು.  ಏಕಲವ್ಯ ಪ್ರಶಸ್ತಿ ವಿಜೇತರಿಗೆ ತಲಾ ಎರಡು ಲಕ್ಷ ರೂ., ಕ್ರೀಡಾರತ್ನ ಪ್ರಶಸ್ತಿಗೆ ತಲಾ 1 ಲಕ್ಷ ರೂ. ಹಾಗೂ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರಿಗೆ ತಲಾ 1.5 ಲಕ್ಷ ರೂ. ನೀಡಿ ಗೌರವಿಸಲಾಗುತ್ತದೆ. ಎಲ್ಲಾ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಏಕಲವ್ಯ ಪ್ರಶಸ್ತಿ:  ದಾಮಿನಿ ಕೆ. ಗೌಡ / ಈಜು,  ವಿದ್ಯಾ ಪಿಳ್ಳೆ / ಬಿಲಿಯರ್ಡ್ಸ್,  ಪವನ್ ಶೆಟ್ಟಿ / ಬಾಡಿಬಿಲ್ಡಿಂಗ್, ನಿತಿನ್ ತಿಮ್ಮಯ್ಯ / ಹಾಕಿ, ರಾಜಗುರು ಎಸ್. / ಕಬಡ್ಡಿ, ಕೃಷ್ಣ . ನಾಯ್ಕೋಡಿ / ಸೈಕ್ಲಿಂಗ್, ಅರವಿಂದ . / ಬಾಸ್ಕೆಟ್ಬಾಲ್, ಅರ್ಪಿತಾ ಎಂ. / ಅಥ್ಲೆಟಿಕ್ಸ್,  ಮೊಹಮ್ಮದ್ ರಫೀಕ್ ಹೋಳಿ/ ಕುಸ್ತಿ, ಮೇಘನ ಎಂ.ಸಜ್ಜನರ್ / ರೈಫಲ್, ಶೂಟಿಂಗ್,  ಧೃತಿ ತಾತಾಚರ್ ವೇಣುಗೋಪಾಲ್/ ಲಾನ್ ಟೆನಿಸ್, ಅನೂಪ್ ಡಿ. ಕೋಸ್ಟ / ವಾಲಿಬಾಲ್,  ಜಿ.ಎಂ. ನಿಶ್ಚಿತಾ / ಶಟಲ್ ಬ್ಯಾಡ್ಮಿಂಟನ್, ಶಾವದ್ ಜೆ.ಎಂ / ಪ್ಯಾರಾ ಅಥ್ಲೆಟಿಕ್ಸ್,  ಉಮೇಶ್ ಆರ್. ಖಾಡೆ / ಪ್ಯಾರಾ ಈಜು, ಕಂಚನ್ ಮುನ್ನೋಳ್ಕರ್/ ಭಾರ ಎತ್ತುವುದು,  ಜೀವಮಾನ ಸಾಧನೆ:  ಜಾನ್ ಕ್ರಿಸ್ಟೋಫರ್, ನಿರ್ಮಲ್ ಕುಮಾರ್ / ಈಜು,  ಶಿವಾನಂದ್ ಆರ್./ ಕುಸ್ತಿ. ಕರ್ನಾಟಕ ಕ್ರೀಡಾ ರತ್ನ: ಡಿ.ಎಸ್. ರುದ್ರಸ್ವಾಮಿ / ಯೋಗ, ಪೂರ್ಣಿಮಾ ಪಿ. / ಥ್ರೋಬಾಲ್, ಅಮೋಘ್ ಯು. ಚಚಡಿ / ಆಟ್ಯಾ-ಪಾಟ್ಯಾ, ರಂಜಿತಾ ಎಂ.ಪಿ. / ಬಾಲ್ ಬ್ಯಾಡ್ಮಿಂಟನ್, ಪ್ರದೀಪ್ ಕೆ.ಸಿ./ ಖೋ ಖೋ, ಸುಮಿತ ಯು.ಎಂ. / ಕಬಡ್ಡಿ, ಡಾ. ಜೀವಂಧರ್ ಬಲ್ಲಾಳ್ / ಕಂಬಳ, ಆನಂದ್ ಇರ್ವತ್ತೂರು / ಕಂಬಳ, ಆನಂದ್ ಎಲ್. / ಕುಸ್ತಿ, ಬೋಶಪ್ಪ ವಿಠ್ಠಪ್ಪ ಗುಳಬಾಳ/ ಗುಂಡು ಎತ್ತುವುದು.

2016: ನವದೆಹಲಿ: ಬಾಲಿವುಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಪಾಕಿಸ್ತಾನಿ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ(ಐಎಪಿಪಿಎ) ನಿಷೇಧ ಹೇರಿದ ಬೆನ್ನಲ್ಲೆ ಸಲ್ಮಾನ್ ಖಾನ್ ನಿರೂಪಣೆಯ ಜನಪ್ರಿಯ ರಿಯಾಲಿಟಿ ಶೋಬಿಗ್ ಬಾಸ್’ -10 ಆವೃತ್ತಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಯಿತು. ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್) ‘ಬಿಗ್ಬಾಸ್ಪ್ರಸಾರಕ್ಕೆ ನಿಷೇಧ ಹೇರಿದ್ದು, ಪಾಕಿಸ್ತಾನ ಕಲಾವಿದರಿಗೆ ಯಾವುದೇ ನೋಟಿಸ್ ಜಾರಿಗೊಳಿಸದೇ ಏಕಾಏಕಿ ನಿಷೇಧ ಹೇರಿರುವುದು ಎಷ್ಟಕ್ಕೂ ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿತು.  ಇದಲ್ಲದೇ ಸುದ್ದಿವಾಹಿನಿಗಳು, ಎಫ್ಎಂ ರೇಡಿಯೊ ಮತ್ತು ಕೇಬಲ್ ಆಪರೇಟರ್ಗಳು ತಪ್ಪದೇ ಇದನ್ನು ಪಾಲಿಸಬೇಕೆಂದು ಹೇಳಿತು. ಉರಿ ಸೇನಾನೆಲೆಯ ಮೇಲಿನ ದಾಳಿಯ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಸಾಕಷ್ಟು ಹದಗೆಟ್ಟಿದ್ದು, ಇದೀಗ ಕಲಾವಿದರ ನಡುವಿನ ವಿರಸಕ್ಕೂ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಬೇಕೆನ್ನುವ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಮೂಡಿಬಂದಿದ್ದವು. ನಿಷೇಧ ಹೇರಿದ ಬೆನ್ನಿಗೇ ಈಗ ಪಾಕಿಸ್ತಾನವೂ ಇದಕ್ಕೆ ಪ್ರತಿಯಾಗಿ ಬಿಗ್ಬಾಸ್ ಸೇರಿ ಉಳಿದೆಲ್ಲಾ ರಿಯಾಲಿಟಿ ಶೋ ಹಾಗೂ ಉಳಿದ ಕಾರ್ಯಕ್ರಮಗಳ ಪ್ರಸಾರಕ್ಕೆ ನಿಷೇಧ ಹೇರಿತು.

2016: ಥಾಣೆ: ನಕಲಿ ಕಾಲ್ ಸೆಂಟರ್ ಮೂಲಕ ಅಮೆರಿಕದ ಪ್ರಜೆಗಳಿಗೆ ಸುಮಾರು 500 ಕೋಟಿ ರೂ. ವಂಚನೆ ಮಾಡಿದ ಜಾಲವನ್ನು ಪೊಲೀಸರು ಭೇದಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 70 ಜನರನ್ನು ಬಂಧಿಸಲಾಯಿತು. ನಿಖರ ಮಾಹಿತಿಯ ಆಧಾರದ ಮೇಲೆ ಮಹಾರಾಷ್ಟ್ರ ಪೊಲೀಸರು ನಕಲಿ ಕಾಲ್ ಸೆಂಟರ್ ಮೇಲೆ ದಾಳಿ ನಡೆಸಿ ಬೃಹತ್ ಹಗರಣವನ್ನು ಬಯಲಿಗೆಳೆದರು. 630 ಜನರಿಗೆ ಶೋಕಾಸ್ ನೋಟಿಸ್ ನೀಡಲಾಯಿತು.  ಈ ಕಾಲ್ ಸೆಂಟರ್ನಲ್ಲಿ ಕೆಲಸ ಮಾಡುವವರು ತಮ್ಮನ್ನು ರೆವೆನ್ಯೂ ಸರ್ವೀಸ್ ಅಧಿಕಾರಿಗಳು ಎಂದು ಪರಿಚಯಿಸಿಕೊಂಡು ಅಮೆರಿಕದ ಪ್ರಜೆಗಳಿಗೆ ಕರೆ ಮಾಡುತ್ತಿದ್ದರು. ನೀವು ತೆರಿಗೆ ಅವ್ಯವಹಾರ ನಡೆಸಿದ್ದೀರಿ ಎಂದು ಹೆದರಿಸುತ್ತಿದ್ದರು. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಗೆ ಜೈಲು ಶಿಕ್ಷೆ ಆಗಬಹುದು ಎಂದು ತಿಳಿಸುತ್ತಿದ್ದರು. ಶಿಕ್ಷೆಯಿಂದ ಪಾರಾಗಬೇಕಾದರೆ 500 ರಿಂದ 3000 ಡಾಲರ್ವರೆಗೆ ದಂಡ ಪಾವತಿಸಬೇಕು ಎಂದು ಅವರಿಂದ ಹಣ ವಸೂಲಿ ಮಾಡುತ್ತಿದ್ದರು. ವಂಚನೆ ಪ್ರಕರಣದ ಕುರಿತು ಅಮೆರಿಕದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಇನ್ನೂ ಹೆಚ್ಚಿನ ಪ್ರಕರಣ ಬಯಲಿಗೆ ಬರಬಹುದು ಎಂದು ಪೊಲೀಸರು ತಿಳಿಸಿದರು. ಥಾಣೆಯ ಮೀರಾ ರೋಡ್ ರಾಯಲ್ ಕಾಲೇಜ್ ಸಮೀಪ ಕಾಲ್ ಸೆಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಕಾಲ್ ಸೆಂಟರ್ ಮಾಲೀಕ ಹೈದರ್ ಅಲಿ ಆಯುಬ್ ಮಸೂರಿ (24) ತಲೆ ಮರೆಸಿಕೊಂಡಿದ್ದಾನೆ. ಇದೇ ವಿಧದಲ್ಲಿ ಇನ್ನೂ ಹಲವು ಕಾಲ್ ಸೆಂಟರ್ಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳ ಮೇಲೂ ಸಹ ದಾಳಿ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದರು.
2016: ನವದೆಹಲಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುವ ಭೀತಿ ಎದುರಿಸಿದ ಪಾಕಿಸ್ತಾನ ಉಗ್ರರನ್ನು ನಿಯಂತ್ರಿಸಲು ಚಿಂತಿಸಿತು. ಪಾಕ್ ಪ್ರಧಾನಿ ನವಾಜ್ ಷರೀಫ್ ಉಗ್ರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೇನೆಗೆ ಸೂಚಿಸಿದ್ದಾರೆ ಎಂದು ಪಾಕ್ ಮಾಧ್ಯಮ ವರದಿ ಮಾಡಿತು.  ಪಾಕ್ ರಾಜಕೀಯ ನಾಯಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಹೆಚ್ಚುತ್ತಿರುವ ಒತ್ತಡಗಳಿಂದ ಪಾರಾಗಲು ಸ್ಪಷ್ಟ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿಗೆ ಸಲಹೆ ನೀಡಿದ್ದಾರೆ. ಹಿನ್ನೆಲೆಯಲ್ಲಿ ನವಾಜ್ ಷರೀಫ್ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸೇನೆಗೆ ಸೂಚಿಸಿದ್ದಾರೆ. ಜತೆಗೆ ಪಠಾಣ್ ಕೋಟ್ ವಾಯು ನೆಲೆ ಮೇಲೆ ನಡೆದ ದಾಳಿಯ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚಿಸಿದ್ದಾರೆ. ಮುಂಬೈ ದಾಳಿಯ ವಿಚಾರಣೆಯನ್ನೂ ಸಹ ಮರು ಪ್ರಾರಂಭಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿತು.  ಉರಿ ಸೇನಾ ನೆಲೆಯ ಮೇಲೆ ಪಾಕಿಸ್ತಾನ ಉಗ್ರರು ದಾಳಿ ನಡೆಸಿದ ನಂತರ ಭಾರತ ಪಾಕ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಯಿತು.  ಅದರ ಹಿನ್ನೆಲೆಯಲ್ಲಿ ರಾಜತಾಂತ್ರಿಕ ನಡೆಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಉಗ್ರರಿಗೆ ಬೆಂಬಲ ನೀಡುವ ರಾಷ್ಟ್ರ ಎಂದು ಘೋಷಿಸಲು ಪ್ರಯತ್ನಿಸಿತು. ಜತೆಗೆ ಸೆಪ್ಟೆಂಬರ್ 29 ರಂದು ಸೀಮಿತ ದಾಳಿ ನಡೆಸುವ ಮೂಲಕ ಉಗ್ರರನ್ನು ಸದೆಬಡೆಯಲು ಭಾರತ ಎಂಥಹ ಕಠಿಣ ಕ್ರಮಕ್ಕೂ ಸಿದ್ಧ ಎಂದು ಸಾಬೀತು ಪಡಿಸಿತು. ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷ ಪ್ರಾರಂಭವಾಯಿತು. ಸಂದರ್ಭದಲ್ಲಿ ಷರೀಫ್ ಸೇನೆಗೆ ಸೂಚನೆ ನೀಡುವ ಮೂಲಕ ಹಲವು ಚರ್ಚೆಗಳನ್ನು ಹುಟ್ಟು ಹಾಕಿದರು.

2016: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿ ಹೇಗಿದೆ? ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ? ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ? ಎಂದು ಪ್ರಶ್ನಿಸಿ ಮಾಹಿತಿ ಕೇಳಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಡ್ರಾಸ್ ಹೈಕೋರ್ಟ್ ವಜಾಗೊಳಿಸಿತು.
ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಎನ್ನುವವರು ಜಯಲಲಿತಾ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿ ಸಾರ್ವಜನಿಕ ವಲಯದಲ್ಲಿ ನಾನಾ ರೀತಿಯ ಊಹಾಪೋಹಗಳು ಹರಿದಾಡುತ್ತಿದ್ದು, ಸ್ಪಷ್ಟ ಮಾಹಿತಿಯ ಅಗತ್ಯವಿದೆ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿಲ್ಲ. ಇದು ಕೇವಲ ಪ್ರಚಾರವನ್ನು ಬಯಸಿ ಸಲ್ಲಿಸಲಾಗಿರುವ ಅರ್ಜಿಯಷ್ಟೇ ಎಂದು ವಜಾಗೊಳಿಸಿತು.  ತಮಿಳುನಾಡು ಸಿಎಂ ಜಯಲಲಿತಾ ಅವರನ್ನು ಸೆಪ್ಟೆಂಬರ್ 22ರಂದು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಇದೆ ಎಂದು ವೈದ್ಯರು ತಿಳಿಸಿದ್ದರು.

2016: ಮುಜಫ್ಫರಾಬಾದ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಉಗ್ರರಿಗೆ ತರಬೇತಿ ಶಿಬಿರಗಳನ್ನು ತೆರೆದು ಉಗ್ರರಿಗೆ ತರಬೇತಿ ನೀಡುತ್ತಿದೆ. ಮೂಲಕ ಪಿಒಕೆಯನ್ನು ಸಮಾಜ ಘಾತುಕ ಶಕ್ತಿಗಳ ಸ್ವರ್ಗವಾಗಿ ಪರಿವರ್ತಿಸುತ್ತಿದೆ. ಕೂಡಲೇ ಉಗ್ರ ತರಬೇತಿ ಶಿಬಿರಗಳನ್ನು ಪಾಕಿಸ್ತಾನ ಮುಚ್ಚಬೇಕು ಎಂದು ಒತ್ತಾಯಿಸಿ ಪಾಕ್ ಆಕ್ರಮಿತ ಕಾಶ್ಮೀರದ ಹಲವು ಭಾಗಗಳಲ್ಲಿ ಜನರು ಬೀದಿಗೀಳಿದು ಪ್ರತಿಭಟನೆ ನಡೆಸಿದರು. ಮುಜಫರಾಬಾದ್, ಕೋಟ್ಲಿ, ಚಿನಾರಿ, ಮಿರ್ಪುರ್, ಗಿಲ್ಗಿಟ್, ಡೈಮೇರ್ ಮತ್ತು ನೀಲಮ್ ಕಣಿವೆಯ ಹಲವು ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು. ಪಾಕಿಸ್ತಾನ ಉಗ್ರರ ತರಬೇತಿ ಶಿಬಿರಗಳನ್ನು ತೆಗೆಯುವ ಮೂಲಕ ಪಿಒಕೆಯನ್ನು ಇಲ್ಲಿನ ಜನರಿಗೆ ನರಕವಾಗಿ ಪರಿವರ್ತಿಸುತ್ತಿದೆ. ಉಗ್ರರು ಇಲ್ಲಿನ ಗ್ರಾಮಸ್ಥರನ್ನು ಲೂಟಿ ಮಾಡುತ್ತಿದ್ದಾರೆ ಮತ್ತು ಮಕ್ಕಳು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಐಎಸ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಬಳಸಿಕೊಂಡು ಭಾರತದ ವಿರುದ್ಧ ಪರೋಕ್ಷ ಯುದ್ಧ ಸಂಘಟಿಸುತ್ತಿದೆ. ಪಿಒಕೆಯಲ್ಲಿರುವ ಕೆಲವು ಬಡ ಯುವಕರನ್ನು ತನ್ನತ್ತ ಸೆಳೆದು ಉಗ್ರರಾಗುವಂತೆ ಪ್ರೆರೇಪಿಸಲಾಗುತ್ತಿದೆ. ಮೂಲಕ ಭಾರತದ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪಾಕಿಸ್ತಾನ ಪಿಒಕೆಯಲ್ಲಿ ತೆರೆದ ತಾಲಿಬಾನ್ ಮಾದರಿಯ ತರಬೇತಿ ಶಿಬಿರಗಳನ್ನು ಕೂಡಲೇ ಮುಚ್ಚಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಸ್ಥಳೀಯ ಮುಖಂಡರು ತಿಳಿಸಿದರು.

2016: ಇಂಫಾಲ: ನಿರಂತರ 16 ವರ್ಷ ಉಪವಾಸ ಸತ್ಯಾಗ್ರಹ ಮಾಡಿ ದೇಶದ ಗಮನ ಸೆಳೆದಿದ್ದ ಇರೋಮ್ ಶರ್ಮಿಳಾ ತಿಂಗಳು ಹೊಸ ರಾಜಕೀಯ ಪಕ್ಷ ಸ್ಥಾಪಿಸುವ ಮೂಲಕ ಸಕ್ರಿಯ ರಾಜಕೀಯಕ್ಕೆ ಅಧಿಕೃತವಾಗಿ ಧುಮುಕುವುದಾಗಿ ತಿಳಿಸಿದರು. ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಕ್ಕಾಗಿ ಇರೋಮ್ ಶರ್ಮಿಳಾ ಅವರ ಮೇಲೆ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅವರನ್ನು ದೋಷಮುಕ್ತರನ್ನಾಗಿಸಿತು. ಪ್ರಕರಣದಿಂದ ದೋಷಮುಕ್ತರಾದ ಬಳಿಕ ತಿಂಗಳು ಹೊಸ ಪಕ್ಷ ಪ್ರಾರಂಭಿಸುತ್ತಿರುವುದಾಗಿ ಕೋರ್ಟ್ ಆವರಣದಲ್ಲಿ ತಿಳಿಸಿದರು. ಮುಂದಿನ ವರ್ಷ ಮಣಿಪುರದಲ್ಲಿ ಚುನಾವಣೆ ನಡೆಯಲಿದ್ದು, ಶರ್ಮಿಳಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿದರು. ಆಗಸ್ಟ್ 9 ರಂದು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿ ಶರ್ಮಿಳಾ, ತಾವು ರಾಜಕೀಯಕ್ಕೆ ಪ್ರವೇಶಿಸಲು ಅಪೇಕ್ಷಿಸಿರುವುದಾಗಿ ತಿಳಿಸಿದ್ದರು.

2016: ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆಪ್ಟೆಂಬರ್ 29 ರಂದು ಸೀಮಿತ ದಾಳಿ ನಡೆದಿರುವುದು  ನಿಜ ಎಂದು ಪಿಒಕೆಯ ಹಿರಿಯ ಪೊಲೀಸ್ ಅಧಿಕಾರಿ ಖಾಸಗಿ ಸುದ್ದಿ ವಾಹಿನಿ ನಡೆಸಿದಸ್ಟಿಂಗ್ ಆಪರೇಷನ್ನಲ್ಲಿ ಬಾಯಿ ಬಿಟ್ಟರು. ಈ ಸತ್ಯ ಬಹಿರಂಗ ಪಡಿಸಿರುವುದು ಪಾಕ್ ಆಕ್ರಮಿತ ಕಾಶ್ಮೀರದ ಮಿರ್ಪುರ್ ವಿಶೇಷ ದಳದ ಎಸ್ಪಿ ಗುಲಾಮ್ ಅಕ್ಬರ್. ಸೆಪ್ಟೆಂಬರ್ 29 ರಂದು ಬೆಳಗಿನ ಜಾವ 2 ರಿಂದ 5 ಗಂಟೆಯೊಳಗೆ ದಾಳಿ ನಡೆದಿತ್ತು. ಪಿಒಕೆಯ ಬಿಂಬೆರ್ ಸಮಾನ, ಪೂಂಚ್ ಹಜೀರಾ, ನೀಲಮ್ ದುಧುನಿಯಾಲ್ ಮತ್ತು ಹಥೀಯನ್ ಬಾಲಾದ ಕಯಾನಿಯಲ್ಲಿ ದಾಳಿ ನಡೆದಿತ್ತು. ದಾಳಿಯಲ್ಲಿ ಪಾಕ್ ಸೇನೆಯ ಐವರು ಯೋಧರೂ ಸಹ ಮೃತಪಟ್ಟಿದ್ದರು. ಆದರೆ ಅವರ ಹೆಸರುಗಳು ಬಹಿರಂಗ ಗೊಳ್ಳದಂತೆ ಪಾಕಿಸ್ತಾನ ನಿಗಾ ವಹಿಸಿದೆ. ದಾಳಿಯಲ್ಲಿ ಮೃತಪಟ್ಟ ಉಗ್ರರನ್ನು ಪಾಕ್ ಸೇನೆ ತಕ್ಷಣ ಸ್ಥಳದಿಂದ ಅಜ್ಞಾತ ಸ್ಥಳಗಳಿಗೆ ಕೊಂಡೊಯ್ದಿದೆ. ನಂತರ ಅವರ ಅಂತ್ಯ ಸಂಸ್ಕಾರ ನೆರವೇರಿಸಿದೆ ಎಂದು ಅಕ್ಬರ್  ಹೇಳಿದರು. ಪಾಕಿಸ್ತಾನ ಸೇನೆ ಉಗ್ರರನ್ನು ಕರೆತಂದು ಅವರಿಗೆ ತರಬೇತಿ ನೀಡುತ್ತದೆ. ಉಗ್ರರ ತರಬೇತಿ ಕೇಂದ್ರಗಳು ಪಾಕ್ ಸೇನೆಯ ನೆರವಿನಿಂದ ನಡೆಯುತ್ತಿವೆ. ಜತೆಗೆ ಸ್ವತಃ ಪಾಕ್ ಸೈನಿಕರು ಉಗ್ರರು ಭಾರತದೊಳಗೆ ನುಸುಳಲು ಎಲ್ಲಾ ವಿಧದ ಸಹಕಾರ ನೀಡುತ್ತಾರೆ. ಪಿಒಕೆಯಲ್ಲಿರುವ ಉಗ್ರರ ನಿಖರ ಸಂಖ್ಯೆ ಕುರಿತು ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಅಕ್ಬರ್ ತಿಳಿಸಿದರು.

2016: ಬೆಂಗಳೂರು: ಫ್ರೆಂಚ್ ಗಯಾನಾದ ಕೊವುರುನಲ್ಲಿರುವ ಉಡಾವಣಾ ಕೇಂದ್ರದಿಂದ ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಈದಿನ  ನಸುಕಿನ 2 ಗಂಟೆ ಸುಮಾರಿಗೆ (ಭಾರತೀಯ ಕಾಲಮಾನ) ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಅ.5ರ ಬುಧವಾರ ಬೆಳಗಿನ ಜಾವ 2 ಗಂಟೆಗೆ ಜಿಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಬೇಕಿತ್ತು. ಆದರೆ ಉಡಾವಣಾ ಪ್ರದೇಶದಲ್ಲಿ ಭಾರೀ ಗಾಳಿ ಬೀಸುತ್ತಿದ್ದ ಕಾರಣ ಉಡಾವಣೆಯನ್ನು ಒಂದು ದಿನ ಮುಂದೂಡಲಾಗಿತ್ತು. ಈದಿನ ನಿಗದಿತ ಸಮಯಕ್ಕೆ ಸರಿಯಾಗಿ 3,404 ಕೆ.ಜಿ. ತೂಕದ ಜಿಸ್ಯಾಟ್ ಉಪಗ್ರಹ ಹೊತ್ತ ಏರಿಯಾನ್-5 ವಿಎ-231 ರಾಕೆಟ್ ನಭಕ್ಕೆ ಚಿಮ್ಮಿತು. ರಾಕೆಟ್ 32 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸಿತು. ಜಿಸ್ಯಾಟ್ ಭಾರೀ ಗಾತ್ರದ ಉಪಗ್ರಹವಾಗಿರುವ ಕಾರಣ ಪ್ರಸ್ತುತ ತನ್ನಲ್ಲಿರುವ ರಾಕೆಟ್ಗಳಿಂದ ಉಡಾವಣೆ ಮಾಡಲು ಸಾಧ್ಯವಿಲ್ಲ. ಇಸ್ರೋ ಜಿಎಸ್ಎಲ್ವಿ ಎಂಕೆ3 ರಾಕೆಟ್ ಅಭಿವೃದ್ಧಿ ಪಡಿಸಿದ ನಂತರ ಭಾರೀ ಗಾತ್ರದ ಉಪಗ್ರಹಗಳನ್ನೂ ಸಹ ಭಾರತ ಉಡಾವಣೆ ಮಾಡುವ ಸಾಮರ್ಥ್ಯ ಪಡೆಯಲಿದೆ. ಇಸ್ರೋ ನಿರ್ಮಿಸಿರುವ ಜಿಸ್ಯಾಟ್-18 ಉಪಗ್ರಹ ಅತ್ಯಾದುನಿಕ ಸಂವಹನ ಉಪಗ್ರಹವಾಗಿದ್ದು, ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 14 ಸಂವಹನ ಉಪಗ್ರಹಗಳೊಂದಿಗೆ ಸೇವೆ ಸಲ್ಲಿಸಲಿದೆ. ಜಿಸ್ಯಾಟ್ ಸಿಬ್ಯಾಂಡ್, ಕೆ.ಯು. ಬ್ಯಾಂಡ್ಗಳನ್ನು ಹೊಂದಿದೆ. ಉಪಗ್ರಹ 15 ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ.

2014: ಸ್ವೀಡನ್: ಮೆದುಳಿನ 'ಜಿಪಿಎಸ್ ವ್ಯವಸ್ಥೆ'ಯನ್ನು ಕಂಡು ಹಿಡಿದ ಮೂವರು ವಿಜ್ಞಾನಿಗಳಿಗೆ 2014ರ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಲಭಿಸಿತು. ಇಂಗ್ಲೆಂಡ್ ಮೂಲದ ಪ್ರೊಫೆಸರ್ ಜಾನ್ ಒ'ಕೀಫ್ ಅವರು ಪ್ರಶಸ್ತಿಯ ಅರ್ಧಭಾಗವನ್ನು ಮತ್ತು ಮೇ-ಬ್ರಿಟ್ಟ್ ಮೋಸೆರ್​ಹಾಗೂ ಎಡ್ವರ್ಡ್ ಮೋಸೆರ್ ಅವರು ಪ್ರಶಸ್ತಿ ಉಳಿದರ್ಧ ಭಾಗವನ್ನು ಸಮವಾಗಿ ಹಂಚಿಕೊಂಡರು. ಈ ವಿಜ್ಞಾನಿಗಳು 'ನಾವು ಎಲ್ಲಿದ್ದೇವೆ ಮತ್ತು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಸಮರ್ಥರಾಗುವುದು ಹೇಗೆ' ಎಂಬುದನ್ನು ಪತ್ತೆಹಚ್ಚಿದ್ದಾರೆ. ಮರೆಗುಳಿ (ಅಲ್ಜಿಮೀರ್ಸ್) ರೋಗಿಗಳು ತಮ್ಮ ಸುತ್ತಮುತ್ತಣ ಪ್ರದೇಶವನ್ನು ಏಕೆ ಗುರುತಿಸಲಾರರು ಎಂಬುದನ್ನು ತಿಳಿಯಲು ಈ ವಿಜ್ಞಾನಿಗಳ ಸಂಶೋಧನೆ ನೆರವಾಗಬಲ್ಲುದು. ಲಂಡನ್​ನ ಯುನಿರ್ವಸಿಟಿ ಕಾಲೇಜಿನ ಪ್ರೊ.ಓ'ಕೀಫ್ ಅವರು 1971ರಲ್ಲಿ ಮೆದುಳಿನ ಆಂತರಿಕ ವ್ಯವಸ್ಥೆಯ ಮೊದಲ ಭಾಗವನ್ನು ಪತ್ತೆ ಹಚ್ಚಿದ್ದರು. ಕೊಠಡಿಯೊಂದರಲ್ಲಿ ಒಂದೇ ಸ್ಥಳದಲ್ಲಿ ಇದ್ದ ಇಲಿಯ ಕೆಲವು ನಿರ್ದಿಷ್ಟ ನರಕೋಶಗಳು ಸಕ್ರಿಯವಾಗುತ್ತಿದ್ದವು ಎಂದು ಅವರು ತೋರಿಸಿಕೊಟ್ಟಿದ್ದರು. ಸುಮಾರು ಮೂರು ದಶಕಗಳ ಬಳಿಕ 2005ರಲ್ಲಿ ಮೇ-ಬ್ರಿಟ್ಟ್ ಮತ್ತು ಎಡ್ವರ್ಡ್ ಮೋಸೆರ್ ಅವರು ಮೆದುಳಿನ ಇನ್ನೊಂದು ಭಾಗದ ಕಾರ್ಯ ನಿರ್ವಹಣೆಯನ್ನು ಪತ್ತೆ ಹಚ್ಚಿದರು. 'ಗ್ರಿಡ್ ಸೆಲ್ಸ್' ಎಂದು ಕರೆಯಲಾದ ಇನ್ನೊಂದು ಬಗೆಯ ನರಕೋಶಗಳನ್ನು ಅವರು ಕಂಡು ಹಿಡಿದರು. ಇದು ವ್ಯವಸ್ಥೆಯನ್ನು ಸಮನ್ವಯಗೊಳಿಸಿ, ಇರುವ ಸ್ಥಳ ಗುರುತಿಸಿ ಮತ್ತು ಹೋಗುವ ದಾರಿ ಹುಡುಕುವ ಕೆಲಸ ಮಾಡುತ್ತದೆ ಎಂಬುದನ್ನು ಅವರು ಪತ್ತೆ ಹಚ್ಚಿದರು. ಈ ಮೂರು ಸಂಶೋಧನೆಗಳು ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳನ್ನು ಶತಮಾನಗಳಿಂದ ಕಾಡುತ್ತಾ ಬಂದ ಸಮಸ್ಯೆಯನ್ನು ಬಗೆಹರಿಸಿವೆ ಎಂದು ನೊಬೆಲ್ ಅಸೆಂಬ್ಲಿಯು ತನ್ನ ಪ್ರಕಟಣೆಯಲ್ಲಿ ತಿಳಿಸಿತು..

2014: ಜಮ್ಮು: ಜಮ್ಮು ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಜನವಸತಿ ಬಸ್ತಿಗಳು ಮತ್ತು ಸೇನಾ ಹೊರಠಾಣೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನಿ ಪಡೆಗಳು ನಡೆಸಿದ ಭಾರಿ ಫಿರಂಗಿದಾಳಿಯಲ್ಲಿ ಐವರು ಗ್ರಾಮಸ್ಥರು ಮೃತರಾಗಿ 29 ಮಂದಿ ಗಾಯಗೊಂಡರು. ಪಾಕಿಸ್ತಾನದಿಂದ ನಡೆದಿರುವ ಕದನವಿರಾಮ ಉಲ್ಲಂಘನೆಗಳಲ್ಲಿ ಇದು ಪರಮನೀಚ ಉಲ್ಲಂಘನೆಯೆನಿಸಿತು. 'ಪಾಕಿಸ್ತಾನಿ ಸೈನಿಕರು ಜಮ್ಮು ಜಿಲ್ಲೆಯ ಅರ್ನಿಯಾದಲ್ಲಿ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ 10 ಗಡಿ ಹೊರಠಾಣೆಗಳು ಮತ್ತು ನಾಗರಿಕ ಪ್ರದೇಶಗಳ ಮೇಲೆ ಹಿಂದಿನ ರಾತ್ರಿ 10 ಗಂಟೆಯ ಬಳಿಕ ಭಾರಿ ಫಿರಂಗಿ ದಾಳಿ ನಡೆಸಿದ್ದಾರೆ' ಎಂದು ಬಿಎಸ್​ಎಫ್ ವಕ್ತಾರರೊಬ್ಬರು ಈದಿನ ತಿಳಿಸಿದರು. ಪಾಕ್ ಸೈನಿಕರು ಸಣ್ಣ ಸ್ವಯಂಚಾಲಿತ ಆಯುಧಗಳು ಮತ್ತು ಸಣ್ಣ ಫಿರಂಗಿಗಳನ್ನು ಬಳಸಿ ಗಡಿಯಲ್ಲಿನ ಜನವಸತಿ ಪ್ರದೇಶಗಳು ಮತ್ತು ಹೊರಠಾಣೆಗಳ ಮೇಲೆ ದಾಳಿ ನಡೆಸಿದರು. ಗಡಿ ಕಾಯುತ್ತಿರುವ ಬಿಎಸ್​ಎಫ್ ಪಡೆಗಳು ಅವರಿಗೆ ತಕ್ಕ ಉತ್ತರ ನೀಡಿದ್ದಾರೆ' ಎಂದು ವಕ್ತಾರರು ನುಡಿದರು. 'ಪ್ರದೇಶದಲ್ಲಿ ಗುಂಡಿನ ವಿನಿಮಯ ಈದಿನವೂ ಮುಂದುವರೆಯಿತು ಎಂದೂ ಅವರು ತಿಳಿಸಿದರು. ಪಾಕ್ ಗುಂಡಿನ ದಾಳಿಗೆ ಐವರು ಗ್ರಾಮಸ್ಥರು ಬಲಿಯಾಗಿದ್ದಾರೆ. ಮತ್ತು ವಿವಿಧ ವಸತಿ ಪ್ರದೇಶಗಳ 29 ಜನ ಗಾಯಗೊಂಡಿದ್ದಾರೆ ಎಂದು ಆರ್.ಎಸ್. ಪುರ ತಹಸಿಲ್​ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ದೇವೇಂದರ್​ಸಿಂಗ್ ಸುದ್ದಿ ಸಂಸ್ಥೆಗೆ ತಿಳಿಸಿದರು. 25 ಮಂದಿ ಗಾಯಾಳುಗಳನ್ನು ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅವರು ನುಡಿದರು.

2014: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಕನಿಷ್ಠ ಮೂವರು ಗೆರಿಲ್ಲಾಗಳನ್ನು ಕೊಲ್ಲಲಾಗಿದೆ ಎಂದು ಹಿರಿಯ ಶ್ರೀನಗರದಲ್ಲಿ ತಿಳಿಸಿದರು. ತಾಂಗ್ಧರ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಹಿಂದಿನ ದಿನ ನಡುರಾತ್ರಿಯ ಬಳಿಕ ಗೆರಿಲ್ಲಾಗಳು ಗಡಿಯಿಂದ ಭಾರತದೊಳಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಅವರನ್ನು ಕೊಂದು ಹಾಕಲಾಯಿತು ಎಂದು ಕರ್ನಲ್ ಭೃಜೇಶ್ ಪಾಂಡೆ ಸುದ್ದಿ ಸಂಸ್ಥೆಗೆ ತಿಳಿಸಿದರು.

2014:) ನವದೆಹಲಿ: ಗಡಿಯಾಚೆಯಿಂದ ಪಾಕಿಸ್ತಾನಿ ಸೈನಿಕರು ಭಾರಿ ಫಿರಂಗಿದಾಳಿ ನಡೆಸಿ ಐವರು ಗ್ರಾಮಸ್ಥರನ್ನು ಬಲಿ ತೆಗೆದುಕೊಂಡು 29 ಮಂದಿಯನ್ನು ಗಾಯಗೊಳಿಸಿದ ಪರಮ ನೀಚ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ ಭಾರತವು ಕದನ ವಿರಾಮ ಉಲ್ಲಂಘನೆಗಳನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಸೂಚಿಸಿದೆ. 'ಪಾಕಿಸ್ತಾನವು ಈಗ ಕದನವಿರಾಮ ಉಲ್ಲಂಘನೆಗಳನ್ನು ನಿಲ್ಲಿಸಬೇಕು. ಭಾರತದಲ್ಲಿ ಕಾಲ ಬದಲಾಗಿದೆ ಎಂಬ ವಾಸ್ತವವನ್ನು ಅದು ಅರ್ಥ ಮಾಡಿಕೊಳ್ಳಬೇಕು' ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು. ಕೇಂದ್ರವು ಪರಿಸ್ಥಿತಿಯ ಮೇಲೆ ನಿಗಾ ಇರಿಸಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನಿ ಗುಂಡಿನ ದಾಳಿಯಿಂದ ತೊಂದರೆಗೊಳಗಾದ ನಿವಾಸಿಗಳಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಂಡಿದೆ ಎಂದು ಅವರು ನುಡಿದರು.

2014: ನವದೆಹಲಿ: ಪಾಕಿಸ್ತಾನವು ಪದೇ ಪದೇ ನಡೆಸುತ್ತಿರುವ ಕದನವಿರಾಮ ಉಲ್ಲಂಘನೆಗಳನ್ನು ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಖಂಡಿಸಿದರು. 'ಗಡಿಯಾಚೆಗಿನ ಪ್ರತಿಯೊಂದು ಪ್ರಚೋದನೆಗಳಿಗೂ ಸೂಕ್ತವಾಗಿ ಪ್ರತಿಕ್ರಿಯಿಸಲು ಭಾರತದ ಸಶಸ್ತ್ರ ಪಡೆಗಳು ಸಂಪೂರ್ಣ ಸಜ್ಜಾಗಿವೆ ಎಂದು ಅವರು ನುಡಿದರು. ತಾನು ಸೃಷ್ಟಿಸುತ್ತಿರುವ ವಾತಾವರಣವು ಖಂಡಿತವಾಗಿ ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಮಾಮೂಲಿಗೊಳಿಸಲು ಖಂಡಿತವಾಗಿ ನೆರವಾಗುವುದಿಲ್ಲ ಎಂದು ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು ಎಂದು ಜೇಟ್ಲಿ ಹೇಳಿದರು. ನಿರಂತರ ಕದನವಿರಾಮ ಉಲ್ಲಂಘನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಗಳಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಲು ಪಾಕಿಸ್ತಾನ ಯತ್ನಿಸುತ್ತಿದೆ. ಪಾಕಿಸ್ತಾನದ ಈ ಯತ್ನದ ಫಲವಾಗಿ ಕದನ ವಿರಾಮದ ಉಲ್ಲಂಘನೆಯಾಗುತ್ತಿದೆ. ಇಂತಹ ಕೃತ್ಯದ ಪರಿಣಾಮವಾಗಿಯೇ ಮುಗ್ಧ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ ತಾನು ಸೃಷ್ಟಿ ಮಾಡುತ್ತಿರುವ ವಾತಾವರಣವು ಖಂಡಿತವಾಗಿ ಬಾಂಧವ್ಯ ಸುಧಾರಣೆಗೆ ನೆರವಾಗುವುದಿಲ್ಲ ಎಂಬುದನ್ನು ಪಾಕಿಸ್ತಾನ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ತನ್ನ ಹೊಣೆಗಾರಿಕೆ ನಿಭಾಯಿಸುವಲ್ಲಿ ಪಾಕಿಸ್ತಾನ ವಿಫಲವಾಗುತ್ತಿದೆ ಎಂದು ಜೇಟ್ಲಿ ಹೇಳಿದರು.

2014: ಟೋಕಿಯೊ: ಹವಾಯಿ ದ್ವೀಪದಲ್ಲಿ ವಿಶ್ವದ ಅತ್ಯಂತ ದೊಡ್ಡ ದೂರದರ್ಶಕ (ಟೆಲಿಸ್ಕೋಪ್) ನಿರ್ವಿುಸುವ ಕಾರ್ಯವನ್ನು ಭಾರತವು ಇತರ ಐದು ರಾಷ್ಟ್ರಗಳ ಜೊತೆಗೆ ಅಕ್ಟೋಬರ್ 7ರಂದು ಆರಂಭಿಸಲಿದೆ ಎಂದು ಟೋಕಿಯೋದ ಮಾಧ್ಯಮ 'ಜಪಾನ್ ಟೈಮ್ಸ್ ' ವರದಿ ಮಾಡಿತು. ಟಿಎಂಟಿ ಎಂದೂ ಪರಿಚಿತವಾದ 30 ಮೀಟರ್ ದೂರದರ್ಶಕವನ್ನು ಹವಾಯಿ ದ್ವೀಪದ ಮೌನ ಕಿಯ ಜ್ವಾಲಾಮುಖಿಯ ಶೃಂಗದ ಸಮೀಪ ನಿರ್ವಿುಸಲಾಗುತ್ತಿದೆ. 2022ರ ವೇಳೆಗೆ ದೂರದರ್ಶಕದ ನಿರ್ವಣ ಪೂರ್ಣಗೊಳ್ಳಲಿದೆ ಎಂದು ಮಾಧ್ಯಮದ ವರದಿ ಹೇಳಿತು.. ಭಾರತದ ಜೊತೆಗೆ ಜಪಾನ್, ಅಮೆರಿಕ, ಚೀನಾ ಮತ್ತು ಕೆನಡಾ ಈ ರಾಷ್ಟ್ರಗಳು ಈ ಕಾರ್ಯದಲ್ಲಿ ಸಹಯೋಗ ನೀಡುತ್ತಿವೆ. ಯೋಜನೆಯ ಅಂದಾಜು ವೆಚ್ಚ 147ಕೋಟಿ ಡಾಲರ್​ಗಳಾಗಲಿದ್ದು ಜಪಾನ್ ಈ ವೆಚ್ಚದ ಕಾಲು ಭಾಗವನ್ನು ಭರಿಸುತ್ತದೆ ಎಂದು ವರದಿ ತಿಳಿಸಿತು. ವಿಶ್ವದ ಈ ಬೃಹತ್ ದೂರದರ್ಶಕ ನಿರ್ಮಾಣ ಕಾರ್ಯದ ಉದ್ಘಾಟನಾ ಸಮಾರಂಭದಲ್ಲಿ ಈ ರಾಷ್ಟ್ರಗಳ ಸುಮಾರು 100 ಮಂದಿ ಬಾಹ್ಯಾಕಾಶ ತಜ್ಞರು ಹಾಗೂ ಅಧಿಕಾರಿಗಳು ಪಾಲ್ಗೊಳ್ಳುವರು.

2014: ಶಿಲ್ಲಾಂಗ್: ಮೇಘಾಲಯದ ರಿ-ಭೊಯಿ ಜಿಲ್ಲೆಯಲ್ಲಿ ಭಾರಿ ಭೂಕುಸಿತದ ಪರಿಣಾಮವಾಗಿ ಮಣ್ಣಿನ ಮಡಿಯಲ್ಲಿ ಕಾರೊಂದು ಸಿಕ್ಕಿಹಾಕಿಕೊಂಡು ಅದರೊಳಗಿದ್ದ ವ್ಯಕ್ತಿ ಜೀವಂತ ಸಮಾಧಿಯಾದ ಘಟನೆ ಘಟಿಸಿತು. ಈ ಭೂಕುಸಿತದ ಪರಿಣಾಮವಾಗಿ ಸಹಸ್ರಾರು ಮಂದಿ ಹಲವು ಗಂಟೆಗಳ ಕಾಲ ದಿಗ್ಬಂಧಿತರಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು ಎಂದು ಪೊಲೀಸರು ತಿಳಿಸಿದರು. ಹಿಂದಿನ ದಿನ ಸಂಜೆ 6 ಗಂಟೆ ಸುಮಾರಿಗೆ ಉಮ್ಲಿಂಗ್​ನಲ್ಲಿ ಗುವಾಹಟಿ-ಶಿಲ್ಲಾಂಗ್ ಚತುಷ್ಪಥ ರಸ್ತೆಯಲ್ಲಿ ಮಣ್ಣು ಕುಸಿದು ಬೀಳುವುದರ ಜೊತೆಗೆ ಬಂಡೆಗಳೂ ಉರುಳಿಬಿದ್ದವು. ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳ ಪೈಕಿ ಒಂದು ಕಾರು ಮಣ್ಣಿನ ಅಡಿಯಲ್ಲಿ ಸಿಲುಕಿ ಅದರೊಳಗಿದ್ದ ನಾಗಾಲ್ಯಾಂಡಿನ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದರು.

2012:: ಖ್ಯಾತ ರಂಗಭೂಮಿ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಆರ್. ನಾಗರತ್ನಮ್ಮ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಈದಿನ (6/10/2012) ಬೆಂಗಳೂರಿನ ರಾಜಾಜಿನಗರದಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ಪುರುಷರಿಗೆ ಸರಿಸಮಾನರಾಗಿ ನಾಟಕಸಂಸ್ಥೆ ಕಟ್ಟಿ ಮಹಿಳೆಯರಿಂದಲೇ ನಾಟಕ ಮಾಡಿಸಿ ಪುರುಷ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ ನಾಗರತ್ನಮ್ಮ ಅವರು `ಭೀಮನ ಪಾತ್ರಧಾರಿ ನಾಗರತ್ನಮ್ಮ' ಎಂದೇ ಹೆಸರುವಾಸಿಯಾಗಿದ್ದರು. ಪ್ರಸ್ತುತ ವರ್ಷಲೇ ಏಪ್ರಿಲ್ ನಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ `ಪದ್ಮಶ್ರೀ' ಪ್ರಶಸ್ತಿಯನ್ನು ಸ್ವೀಕರಿಸಿದ್ದ ನಾಗರತ್ನಮ್ಮ ಅವರು ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ನಾಟಕ ಅಕಾಡೆಮಿ ಪ್ರಶಸ್ತಿ, ರವೀಂದ್ರ ರತ್ನ ನಾಟಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಬಗಲಿಗೆ ಏರಿಸಿಕೊಂಡಿದ್ದರು. ನಾಗರತ್ಮಮ್ಮ ಅವರು 1958ರಲ್ಲಿ ಕಟ್ಟಿದ್ದ ಶ್ರೀ ಸ್ತ್ರೀನಾಟಕ ಮಂಡಳಿಯು ಎಲ್ಲೇ ಹೋದರೂ 50 ರಿಂದ 100 ಪ್ರದರ್ಶನಗಳನ್ನು ಕಾಣುತ್ತಿದ್ದುದು ವಿಶೇಷ. ಅವರ ತಂಡದಲ್ಲಿ ಮಹಿಳೆಯರೇ ಪುರುಷ ಪಾತ್ರಗಳನ್ನು ನಿರ್ವಹಿಸುತ್ತಿದ್ದುದು ಒಂದು ಐತಿಹಾಸಿಕ ದಾಖಲೆ. ಇವರ ನಾಟಕಗಳನ್ನು ಜನ ಮಳೆ ಸುರಿದರೂ ಕೊಡೆ ಹಿಡಿದುಕೊಂಡು ವೀಕ್ಷಿಸುತ್ತಿದ್ದರು. ಮೈಸೂರಿನಲ್ಲಿ 1926ರಲ್ಲಿ (21-6-1926) ಕೃಷ್ಣಭಟ್ಟ- ರುಕ್ಮಿಣಮ್ಮ ದಂಪತಿಯ ಪುತ್ರಿಯಾಗಿ ಜನಿಸಿದ ನಾಗರತ್ನಮ್ಮ ಅವರು ಕಲಾಸೇವಾ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿದ್ದರು. ವರನಟ ರಾಜಕುಮಾರ್ ಅವರಂತಹ ಹಿರಿಯ ನಟರೊಂದಿಗೆ ಅಭಿನಯಿಸಿದ ಇವರು ಮಂಜುನಾಥ ಕೃಪಾಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರಮಂಡಳಿ, ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಕಂಪೆನಿ ಇತ್ಯಾದಿ ಹಲವಾರು ಕಂಪೆನಿಗಳ ಮೂಲಕ ರಾಜ್ಯಾದ್ಯಂತ ತಿರುಗಾಡಿ ಅಸಂಖ್ಯಾತ ನಾಟಕಗಳಲ್ಲಿ ಪಾತ್ರ ವಹಿಸಿದ್ದರು. ಕೃಷ್ಣಲೀಲಾ ನಾಟಕದಲ್ಲಿ ಕೃಷ್ಣನ ಪಾತ್ರ, ಕೃಷ್ಣ ಗಾರುಡಿಯಲ್ಲಿ ಭೀಮ, ಸುಭದ್ರಾ ಪರಿಣಯದಲ್ಲಿ ಬಲರಾಮ, ಬೇಡರ ಕಣ್ಣಪ್ಪದಲ್ಲಿ ಕಣ್ಣಪ್ಪ, ಸದಾರಮೆಯಲ್ಲಿ ಕಳ್ಳ, ಸಂಸಾರ ನೌಕೆಯಲ್ಲಿ ಸುಂದರನಂತಹ ಪುರುಷ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸುತ್ತಿದ್ದುದು ಇವರನ್ನು ರಂಗಭೂಮಿ ಕ್ಷೇತ್ರದ ಧ್ರುವತಾರೆಯನ್ನಾಗಿ ಮಾಡಿತು. ಮಾಸ್ಟರ್ ಹಿರಿಯಣ್ಣಯ್ಯ ಅವರು ನಾಗರತ್ನಮ್ಮ ಅವರನ್ನು `ರಂಗಭೂಮಿಯ ಸಿಂಹಿಣಿ' ಎಂದೇ ಕರೆಯುತ್ತಿದ್ದರು. ನಾಗರತ್ನಮ್ಮ ಅವರ ಪತಿ ಪಾರ್ಥಸಾರಥಿ ಕೆಲ ಸಮಯದ ಹಿಂದೆ ತೀರಿಕೊಂಡಿದ್ದರು. ಅವರು ಒಬ್ಬ ಪುತ್ರ, ಇಬ್ಬರು ಪುತ್ರಿಯರು ಅಪಾರ ಸಂಖ್ಯೆಯ ಬಂಧುಗಳು, ಅಭಿಮಾನಿಗಳನ್ನು ಅಗಲಿದರು.

2008: ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಿಸಿಗೆ ಕರಗಿದ ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು, ಈದಿನ ವಹಿವಾಟಿನಲ್ಲಿ 725 ಅಂಶಗಳಷ್ಟು ಭಾರಿ ಕುಸಿತ ದಾಖಲಿಸಿತು. ಎರಡು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 12 ಸಾವಿರ ಅಂಶಗಳ ಗಡಿಗಿಂತ ಕೆಳಗೆ ಇಳಿಯಿತು.. ವಿದೇಶಿ ನಿಧಿಗಳು ಸುರಕ್ಷಿತ ಹೂಡಿಕೆ ತಾಣ ಕಂಡುಕೊಳ್ಳಲು ಸಾಮೂಹಿಕವಾಗಿ ವಹಿವಾಟಿನಿಂದ ದೂರ ಸರಿದದ್ದರಿಂದ ಈ ದಾಖಲೆ ಪ್ರಮಾಣದ ಕುಸಿತ ಸಂಭವಿಸಿತು..

2008: ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಛೋಟ ಕೃತ್ಯದಲ್ಲಿ ಭಾಗಿಯಾಗಿರಬಹುದು ಎಂದು ಶಂಕಿಸಲಾದ ನಾಲ್ವರು ಸಾಫ್ಟ್ ವೇರ್ ಎಂಜಿನಿಯರುಗಳು ಸೇರಿದಂತೆ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ 20 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿದವು. ದೆಹಲಿ ಮತ್ತು ಅಹಮದಾಬಾದ್ ಬಾಂಬ್ ಸ್ಛೋಟಕ್ಕೆ ಮುನ್ನ ಮಾಧ್ಯಮಗಳಿಗೆ ಇ-ಮೇಲ್ ಸಂದೇಶ ಕಳುಹಿಸಿದ ನಾಲ್ವರು ಸಾಫ್ಟ್ ವೇರ್ ಎಂಜನಿಯರುಗಳ ಬಂಧನ ಸಹಿತವಾಗಿ ಈ ಎಲ್ಲ ಬಂಧನದ ಕಾರ್ಯಾಚರಣೆ ಕಳೆದ ಹತ್ತು ದಿನಗಳಲ್ಲಿ ನಡೆಯಿತು ಎಂದು ಪೊಲೀಸ್ ಕಮಿಷನರ್ ಹಸನ್ ಗಫೂರ್ ಪ್ರಕಟಿಸಿದರು.. ಬಂಧಿತ ಸಾಫ್ಟ್ ವೇರ್ ಎಂಜಿನಿಯರ್ ಮೊಹಮದ್ ಮನ್ಸೂರ್ ಅಸ್ಗರ್ ಪೀರ್ಬಿ (31) ಬಹು ರಾಷ್ಟ್ರೀಯ ಕಂಪೆನಿಯೊಂದರಲ್ಲಿ ಪ್ರಿನ್ಸಿಪಲ್ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದು, ಆತನ ವಾರ್ಷಿಕ ಸಂಬಳ 19 ಲಕ್ಷ ರೂಪಾಯಿಗಳು. ಬಂಧಿತ ಇತರ ಎಂಜಿನಿಯರುಗಳು: ಐಟಿ ಕಂಪೆನಿಯೊಂದರ ಸೀನಿಯರ್ ಟಿಕ್ನಿಕಲ್ ಅಡ್ವೈಸರ್ ಮೊಬಿನ್ ಖಾದಿರ್ ಶೇಖ್ (24), ಮೆಕ್ಯಾನಿಕಲ್ ಎಂಜಿನಿಯರ್ ಅಸಿಫ್ ಬದ್ರುದ್ದೀನ್ (22). ಇ-ಮೇಲ್ ಸಂದೇಶಗಳನ್ನು ನವಿ ಮುಂಬೈನ ಸನ್ ಪಡಾ ಉಪನಗರ, ಮಾತುಂಗಾದ ಕೈಲಾಸ್ ಕಾಲೇಜ್ ಮತ್ತು ಚೆಂಬೂರಿನ ಖಾಸಗಿ ಕಂಪೆನಿಯಿಂದ ಕಳುಹಿಸಲಾಗಿತ್ತು ಎಂಬುದು ತನಿಖೆಯಿಂದ ಗೊತ್ತಾಯಿತು. 2005ರಿಂದೀಚೆಗೆ ದೇಶದ ನಾನಾ ಭಾಗಗಳಲ್ಲಿ ಸಂಭವಿಸಿದ ಬಾಂಬ್ ಸ್ಛೋಟಗಳಲ್ಲಿ ಎಲ್ಲಾ ಬಂಧಿತರೂ ಪಾಲ್ಗೊಂಡಿದ್ದರು ಹಾಗೂ 20ರಿಂದ 35 ವರ್ಷದೊಳಗಿನ ಇವರೆಲ್ಲರೂ ಉನ್ನತ ಶಿಕ್ಷಣ ಪಡೆದವರು.

2008: ಗರ್ಭಕೋಶದ ಕ್ಯಾನ್ಸರಿಗೆ ಕಾರಣವಾದ ಹ್ಯೂಮನ್ ಪಪಿಲೋಮಾ ವೈರಸ್ (ಎಚ್ ಪಿ ವಿ) ಕಂಡುಹಿಡಿದ ಜರ್ಮನಿಯ ಹೆರಾಲ್ಡ್ ಝರ್ ಹೌಸೆನ್ (72) ಹಾಗೂ ಏಡ್ಸಿಗೆ ಕಾರಣವಾಗುವ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ (ಎಚ್ ಐ ವಿ) ಕಂಡು ಹಿಡಿದ ಫ್ರಾನ್ಸಿನ ಸಂಶೋಧಕರಾದ ಫ್ರಾಕೋಸ್ ಬರ್ರೆ-ಸಿನೋಸಿ (61) ಮತ್ತು ಲುಕ್ ಮೊಂಟಾಗ್ನೈರ್ (76) 2008ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಜಂಟಿಯಾಗಿ ಪಾತ್ರರಾದರು. 10 ದಶಲಕ್ಷ ಕ್ರೋನರ್ (1.4 ದಶಲಕ್ಷ ಡಾಲರ್, ಅಂದಾಜು 56 ಲಕ್ಷ ರೂಪಾಯಿ) ಪ್ರಶಸ್ತಿ ಮೊತ್ತದ ಪೈಕಿ ಅರ್ಧದಷ್ಟನ್ನು ಜರ್ಮನಿಯ ವಿಜ್ಞಾನಿ ಪಡೆದರೆ, ಇನ್ನುಳಿದ ಅರ್ಧ ಪ್ರಶಸ್ತಿ ಮೊತ್ತವನ್ನು ಫ್ರಾನ್ಸಿನ ಸಂಶೋಧಕರು ಹಂಚಿಕೊಂಡರು. ಏಡ್ಸಿನ ಜೈವಿಕ ಲಕ್ಷಣ ತಿಳಿದುಕೊಳ್ಳಲು ಬರ್ರೆ-ಸಿನೋಸಿ ಮತ್ತು ಮಾಂಟೆಗ್ನೈರ್ ಅವರು ಸಂಶೋಧಿಸಿದ ಎಚ್ ಐ ವಿ ಯ ಪರೀಕ್ಷೆ ಅಗತ್ಯ. 1980ರ ದಶಕದಲ್ಲಿ ಈ ಇಬ್ಬರು ನಡೆಸಿದ ಈ ಸಂಶೋಧನೆಯಿಂದ ಎಚ್ ಐ ವಿ ಸೋಂಕು ಪೀಡಿತ ರೋಗಿಗಳ ಮತ್ತು ಅವರ ರಕ್ತದ ಪರೀಕ್ಷೆಗೆ ಅನುಕೂಲವಾಯಿತು ಹಾಗೂ ಏಡ್ಸ್ ನಿಯಂತ್ರಣಕ್ಕೆ ವ್ಯವಸ್ಥಿತ ಕ್ರಮ ಕೈಗೊಳ್ಳುವುದು ಸಾಧ್ಯವಾಯಿತು. ಎಂದು ಸನ್ಮಾನ ಪತ್ರ ಹೇಳಿತು. ಗರ್ಭಕೋಶ ಕ್ಯಾನ್ಸರ್ ಮಹಿಳೆಯರಲ್ಲಿ ಕಾಣಿಸುವ ಎರಡನೇ ಅತಿ ಸಾಮಾನ್ಯ ಕ್ಯಾನ್ಸರ್ ಕಾಯಿಲೆ. ಝರ್ ಹುಸೆನ್ ಅವರು ಹ್ಯೂಮನ್ ಪಪಿಲೋಮಾ ವೈರಸ್ (ಎಚ್ಪಿವಿ) ಕಂಡು ಹಿಡಿದ ಕಾರಣ ಈ ಕ್ಯಾನ್ಸರಿಗೆ ಸೂಕ್ತ ಔಷಧ ಸಿದ್ಧಪಡಿಸುವುದು ಸಾಧ್ಯವಾಯಿತು ಎಂದೂ ಸನ್ಮಾನ ಪತ್ರ ಉಲ್ಲೇಖಿಸಿತು.

2008: ಚೀನಾದ ಗಡಿ ಭಾಗ ಕಿರ್ಗಿಸ್ಥಾನ ಪರ್ವತ ಪ್ರದೇಶದಲ್ಲಿ ಮತ್ತು ಟಿಬೆಟಿನ ಲ್ಹಾಸಾ ಸುತ್ತಮುತ್ತ ಸಂಭವಿಸಿದ ಪ್ರಬಲ ಭೂಕಂಪನದಿಂದ ಒಟ್ಟು 102ಕ್ಕೂ ಹೆಚ್ಚು ಜನರು ಮೃತರಾಗಿ ಇತರ ನೂರಾರು ಮಂದಿ ಗಾಯಗೊಂಡರು. ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.6ರಷ್ಟಿತ್ತು. ಅಂತಾರಾಷ್ಟ್ರೀಯ ಕಾಲಮಾನ ಸುಮಾರು 2 ಗಂಟೆಗೆ ಈ ದುರಂತ ಸಂಭವಿಸಿತು. ಭುಕಂಪದಿಂದಾಗಿ ಅಲೈಸ್ಕಿ ಜಿಲ್ಲೆಯ ತಿಯಾನ್ ಶಾನ್ ಪರ್ವತ ಪ್ರದೇಶದ ನೂರಾ ಗ್ರಾಮದಲ್ಲಿ ಮನೆಗಳು ಸಂಪೂರ್ಣ ನೆಲಸಮವಾದವು.

2008: ಶ್ರೀಲಂಕೆಯ ಅನೂರಾಧಪುರ ಬಸ್ ನಿಲ್ದಾಣದಲ್ಲಿ ಸಂಭವಿಸಿದ ಮಾನವ ಬಾಂಬ್ ದಾಳಿಯಲ್ಲಿ ಮಾಜಿ ಮುಖ್ಯ ಸೇನಾ ದಂಡನಾಯಕ ಹಾಗೂ ಉತ್ತರ- ಕೇಂದ್ರ ಪ್ರಾಂತೀಯ ಮಂಡಳಿಯ ಹಾಲಿ ವಿರೋಧ ಪಕ್ಷದ ನಾಯಕ ಜನಕ ಪೆರೇರಾ, ಅವರ ಪತ್ನಿ ಮತ್ತು ಹಲವಾರು ಮಂದಿ ಪ್ರಾಂತೀಯ ರಾಜಕಾರಣಿಗಳು ಸೇರಿದಂತೆ 27 ಮಂದಿ ಮೃತರಾಗಿ, ಇತರ 80ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಯುನೈಟೆಡ್ ನ್ಯಾಷನಲ್ ಪಾರ್ಟಿಯ ಹೊಸ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಶಂಕಿತ ತಮಿಳು ಉಗ್ರಗಾಮಿಯೊಬ್ಬ ತಾನು ಕಟ್ಟಿಕೊಂಡಿದ್ದ ಬಾಂಬ್ ಸ್ಫೋಟಿಸಿದಾಗ ಈ ದುರಂತ ಸಂಭವಿಸಿತು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಶಿಫಾರಸಿನಂತೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಬಿಜೆಪಿಯ 17 ಸಚಿವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದರು. ಪಕ್ಷದ ಮುಖಂಡರಿಗೆ ರಾಜೀನಾಮೆ ಸಲ್ಲಿಸಿದ್ದ ಪ್ರವಾಸೋದ್ಯಮ ಸಚಿವ ಬಿ. ಶ್ರೀರಾಮುಲು ಅವರನ್ನೂ ಮುಖ್ಯಮಂತ್ರಿ ಶಿಫಾರಸಿನಂತೆ ಸಂಪುಟದಿಂದ ಕೈ ಬಿಡಲಾಯಿತು. 2006 ಫೆಬ್ರುವರಿ 3ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಇಬ್ಬರೂ ಪರಸ್ಪರ ತಬ್ಬಿಕೊಂಡು ಜನತೆಯತ್ತ ಕೈಬೀಸಿ ಸಾರಿದ್ದ ಮೈತ್ರಿಯ ಸಂದೇಶ 20 ತಿಂಗಳುಗಳಲ್ಲೇ ಖತಂಗೊಂಡಿತು.

2007: ಭಾರತದ ಖ್ಯಾತ ಬಿಲಿಯರ್ಡ್ಸ್ ಆಟಗಾರ ಗೀತ್ ಸೇಥಿ ಅವರು ಹದಿನೈದು ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಸಿಂಗಪುರದ ಪೀಟರ್ ಗಿಲ್ ಕ್ರಿಸ್ಟ್ ಅವರು ನ್ಯೂಜಿಲೆಂಡ್ ಓಪನ್ ಟೂರ್ನಿಯಲ್ಲಿ ಗರಿಷ್ಠ ಪಾಯಿಂಟ್ ಸಂಗ್ರಹಿಸುವ ಮೂಲಕ ಮುರಿದರು. 1992ರಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ನಲ್ಲಿ ಗೀತ್ ಸೇಥಿ 1276 ಪಾಯಿಂಟುಗಳನ್ನು ಗಳಿಸಿದ್ದು ದಾಖಲೆಯಾಗಿತ್ತು. ಹ್ಯಾಮಿಲ್ಟನ್ ಕಾಸ್ಮೋಪಾಲಿಟನ್ ಕ್ಲಬ್ಬಿನಲ್ಲಿ ಈದಿನ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡಿನ ರೋಸ್ ಎಲಿಕ್ಸಿ ವಿರುದ್ಧ ಆಡಿದ ಗಿಲ್ ಕ್ರಿಸ್ಟ್ ಒಟ್ಟು 1346 ಪಾಯಿಂಟುಗಳನ್ನು ಸಂಗ್ರಹಿಸಿದರು.

2007: ಉದ್ದೀಪನ ಮದ್ದು ಸೇವಿಸಿದ್ದು ನಿಜವಾಗಿದ್ದರೂ ಅದನ್ನು ದೀರ್ಘ ಕಾಲದವರೆಗೆ ಮುಚ್ಚಿಟ್ಟಿದ್ದ ಅಮೆರಿಕದ ಖ್ಯಾತ ಅಥ್ಲೆಟ್ ಮೇರಿಯನ್ ಜೋನ್ಸ್ ನ್ಯೂಯಾರ್ಕಿನಲ್ಲಿ ಈದಿನ ಕ್ಷಮೆ ಕೋರಿದರು. ನ್ಯಾಯಾಲಯದಿಂದ ಹೊರಬಂದ ಬಳಿಕ ಅವರು 'ನಿಮ್ಮ ನಂಬಿಕೆಗೆ ದ್ರೋಹಬಗೆದೆ' ಎಂದು ಹೇಳಿದರು.

2007: ಪಾಕಿಸ್ಥಾನ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪರ್ವೇಜ್ ಮುಷರಫ್ ಅವರು ಚಲಾಯಿಸಲಾದ 257 ಮತಗಳ ಪೈಕಿ 252 ಮತಗಳನ್ನು ಪಡೆದು ಭಾರಿ ಗೆಲುವು ಸಾಧಿಸಿದರು. ಆದರೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ ಮುಷರಫ್ ಸ್ಪರ್ಧೆಯ ಸಂವಿಧಾನಾತ್ಮಕ ಅಂಶಗಳ ವಿವಾದದ ಬಗ್ಗೆ ಅಂತಿಮ ತೀರ್ಪು ನೀಡುವವರೆಗೆ ಫಲಿತಾಂಶವನ್ನು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗಕ್ಕೆ ಸೂಚಿಸಿರುವ ಕಾರಣ ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಲಿಲ್ಲ. ಎಂಟು ವರ್ಷಗಳ ಹಿಂದೆ ರಕ್ತರಹಿತ ಕ್ರಾಂತಿಯ ಮೂಲಕ ನವಾಜ್ ಷರೀಫ್ ಸರ್ಕಾರವನ್ನು ಪದಚ್ಯುತಗೊಳಿಸಿ ಅಧಿಕಾರದ ಗದ್ದುಗೆ ಏರಿದ ಮುಷರಫ್ ಅವರನ್ನು ಹತ್ಯೆ ಮಾಡಲು ಮೂರು ಪ್ರಯತ್ನಗಳು ನಡೆದಿದ್ದವು. 18ನೇ ವರ್ಷ ವಯಸ್ಸಿನಲ್ಲಿ ಪಾಕಿಸ್ಥಾನದ ಸೇನೆಗೆ ಸೇರಿದ ಮುಷರಫ್, ವಿವಿಧ ಸೇನಾ ಅಕಾಡೆಮಿಗಳಲ್ಲಿ ತರಬೇತಿ ಪಡೆದು 1966ರಲ್ಲಿ ಕಮಾಂಡೋ ಆದರು. ಇಬ್ಬರು ಸೇನಾಧಿಕಾರಿಗಳ ಸೇವಾ ಹಿರಿತನವನ್ನು ಕಡೆಗಣಿಸಿ ಷರೀಫ್ ಅವರು ಮುಷರಫ್ ಅವರನ್ನು ಸೇನಾ ದಂಡನಾಯಕನನ್ನಾಗಿ 1998ರಲ್ಲಿ ನೇಮಕ ಮಾಡಿದರು. ನಂತರ 1999ರ ಅಕ್ಟೋಬರ್ 12ರಂದು ಐಎಸ್ಐ ಮುಖ್ಯಸ್ಥ ಕ್ವಾಜಾ ಜಿಯಾವ್ದುದೀನ್ ಅವರನ್ನು ಸೇನಾ ಮುಖ್ಯಸ್ಥರನ್ನಾಗಿ ಮಾಡಲು ಷರೀಫ್ ಪ್ರಯತ್ನ ಮಾಡಿದ್ದೇ ಅವರಿಗೆ ಮುಳುವಾಯಿತು. ಶ್ರೀಲಂಕಾದಿಂದ ಕರಾಚಿಗೆ ವಿಮಾನದಲ್ಲಿ ಬರುತ್ತಿದ್ದ ಮುಷರಫ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಅವಕಾಶ ನೀಡಬಾರದು ಎಂದು ಷರೀಫ್ ಆದೇಶಿಸಿದ್ದರು. ಆದರೆ ಮುಷರಫ್ ಅವರಿಗೆ ಇತರ ಸೇನಾ ಅಧಿಕಾರಿಗಳು ಬೆಂಬಲ ನೀಡಿದ್ದರಿಂದ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ನಂತರ ನಡೆದ ಕ್ಷಿಪ್ರ ಸೇನಾ ಕ್ರಾಂತಿಯಲ್ಲಿ ನವಾಜ್ ಷರೀಫ್ ಅಧಿಕಾರ ಕಳೆದುಕೊಂಡು ಜೈಲಿಗೆ ಹೋದರು. ಅಲ್ಲಿಂದ ಮುಷರಫ್ ಅವರ ಅಧಿಕಾರ ಚಲಾವಣೆಗೆ ಅಡ್ಡಿ ಇಲ್ಲದೆ ಎಂಟು ವರ್ಷಗಳ ಕಾಲ ದೇಶದ ಅಧ್ಯಕ್ಷರಾಗಿ ಹಾಗೂ ಸೇನಾ ಮುಖ್ಯಸ್ಥರಾಗಿ ಆಡಳಿತ ನಡೆಸುತ್ತ ಬಂದರು. ಈಗ ಮತ್ತೆ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಲು ಚುನಾವಣೆ ಎದುರಿಸಿದರು.

2006: ರೂಪದರ್ಶಿ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮನುಶರ್ಮಾನ ತಂದೆ ಹರಿಯಾಣದ ವಿದ್ಯುತ್ ಸಚಿವ ವಿನೋದ ಶರ್ಮಾ ರಾಜೀನಾಮೆ ನೀಡಿದರು.

2006: ಫಿಲಿಪ್ಪೀನ್ಸಿನ ಮರ್ಲಿನ್ ಎಸ್ಪೆರಾಟ್ ಎಂಬ ಪತ್ರಕರ್ತೆಯನ್ನು ಹತ್ಯೆಗೈದ ಅಪರಾಧಕ್ಕಾಗಿ ಮನಿಲಾ ನ್ಯಾಯಾಲಯ 3 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಮನಿಲಾದ ಸುಲ್ತಾನ್ ಕುದರತ್ ಪ್ರಾಂತದ ಮನೆಯಲ್ಲಿ ಟಿವಿ ನೋಡುತ್ತಿದ್ದಾಗ ಈ ಮೂವರು ಬಾಡಿಗೆ ಹಂತಕರು ಆಕೆಯ ಕೋಣೆಯನ್ನು ಸುಟ್ಟು ಹಾಕಿ ಮಕ್ಕಳ ಎದುರೇ ಆಕೆಯನ್ನು ಗುಂಡಿಟ್ಟು ಕೊಂದಿದ್ದರು.

2006: ಪೂರ್ವ ಜಪಾನಿನ ಕಮಿಸು ಕಡಲತೀರದಲ್ಲಿ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಹಡಗು ಬೆಂಕಿ ತಗುಲಿ ಸಮುದ್ರದಲ್ಲಿ ಮುಳಗಿದ ಕಾರಣ ಒಬ್ಬ ಭಾರತೀಯ ನಾವಿಕ ಮೃತಪಟ್ಟು ಒಂಬತ್ತು ಮಂದಿ ಕಾಣೆಯಾದರು. ಹಡಗಿನಲ್ಲಿ ಇದ್ದ 25 ಮಂದಿ ಸಿಬ್ಬಂದಿ ಭಾರತೀಯರು. ಹಡಗಿಗೆ ಸಂಜೆ ವೇಳೆಗೆ ಬೆಂಕಿ ತಗುಲಿ ಅದರ ಎಂಜಿನ್ನುಗಳು ವಿಫಲಗೊಂಡವು. ಹಡಗು ಭಾರಿ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಎರಡು ಹೋಳಾಯಿತು.

1981: ಅರಬ್ ಇಸ್ರೇಲಿ ಯುದ್ಧದ 8 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕೈರೋದಲ್ಲಿ ಸೇನಾ ಪರೇಡ್ ನಡೆಯುತ್ತಿದ್ದಾಗ ಮುಸ್ಲಿಂ ಉಗ್ರಗಾಮಿಗಳು ಈಜಿಪ್ಟ್ ಅಧ್ಯಕ್ಷ ಸಾದತ್ ಅವರನ್ನು ಹತ್ಯೆಗೈದರು. 1973ರಲ್ಲಿ ಇದೇ ದಿನ ಯಹೂದ್ಯರ ಧಾರ್ಮಿಕ ರಜಾದಿನವಾದ `ಅಟೋನ್ ಮೆಂಟ್ ದಿನ'ದಂದು (ಯೊಮ್ ಕಿಪ್ಪರ್) ಈಜಿಪ್ಟ್ ಹಾಗೂ ಸಿರಿಯಾ ಮೇಲೆ ಇಸ್ರೇಲ್ ಹಠಾತ್ ದಾಳಿ ನಡೆಸಿತ್ತು.

1974: ಮಾಜಿ ರಕ್ಷಣಾ ಸಚಿವ ವೆಂಗಾಲಿಲ್ ಕೃಷ್ಣನನ್ ಕೃಷ್ಣಮೆನನ್ ನಿಧನ.

1963: ಸ್ವಾತಂತ್ರ್ಯ ಹೋರಾಟಗಾರ ಬಾಬಾ ಖರಕ್ಸಿಂಗ್ ನಿಧನ.

1954: ಸಾಹಿತಿ ಬಿ.ಜೆ. ಸುವರ್ಣ ಜನನ.

1946: ಬಾಲಿವುಡ್ ತಾರೆ ವಿನೋದ ಖನ್ನಾ ಜನನ.

1946: ಭಾರತೀಯ ಚಿತ್ರ ನಟ, ರಾಜಕಾರಣಿ ವಿನೋದ್ ಖನ್ನಾ ಜನ್ಮದಿನ.

1946: ಸಾಹಿತಿ ಲಲಿತಾ ವಿ. ಕೋಪರ್ಡೆ ಜನನ.

1940: ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್ ಅವರು ಶ್ರೀನಿವಾಸರಾವ್- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ತೆಂಕನಿಡಿಯೂರಿನಲ್ಲಿ ಜನಿಸಿದರು.

1927: ವಾರ್ನರ್ ಸಹೋದರರ ಪ್ರಪ್ರಥಮ ಯಶಸ್ವೀ ಟಾಕಿ ಚಲನಚಿತ್ರ `ದಿ ಜಾಝ್ ಸಿಂಗರ್' ನ್ಯೂಯಾರ್ಕ್ ನಗರದಲ್ಲಿ ಪ್ರದರ್ಶನಗೊಂಡಿತು. ಅಲ್ ಜೋಲ್ಸನ್ ಈ ಚಿತ್ರದಲ್ಲಿ ನಟಿಸಿದ್ದರು. ಟಾಕಿ ಚಿತ್ರಗಳ ನಿರ್ಮಾಣಕ್ಕೆ ಕಾರಣವಾದ `ವಿಟಾಫೋನ್' ಪ್ರಕ್ರಿಯೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಪೇಟೆಂಟ್ ಪಡೆದುಕೊಳ್ಳಲು ತಮ್ಮ ಸಹೋದರರನ್ನು ಮನವೊಲಿಸಿದ್ದ ಸ್ಯಾಮ್ ವಾರ್ನರ್ ಚಿತ್ರ ಬಿಡುಗಡೆಗೆ 24 ಗಂಟೆ ಮೊದಲು ಅಸು ನೀಗಿದ.

1893: ಭಾರತೀಯ ಖಭೌತ ತಜ್ಞ ಮೇಘನಾದ ಎನ್. ಸಹಾ (1893-1956) ಜನ್ಮದಿನ.

1892: ಖ್ಯಾತ ಇಂಗ್ಲಿಷ್ ಕವಿ ಅಲ್ ಫ್ರೆಡ್ ಲಾರ್ಡ್ ಟೆನ್ನಿಸನ್ (1809-1892) ತಮ್ಮ 83ನೇ ವಯಸ್ಸಿನಲ್ಲಿ ಸರ್ರೇಯಲ್ಲಿ ನಿಧನರಾದರು.

1887: ಸ್ವಿಸ್ ಶಿಲ್ಪಿ, ನಗರ ಯೋಜಕ ಚಾರ್ಲ್ಸ್ -ಎಡೋರ್ಡ್ ಜೀನ್ನರೆಟ್ (1887-1965) ಜನ್ಮದಿನ. ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ಈ ಸ್ವಿಸ್ ಶಿಲ್ಪಿ ಭಾರತದ ಚಂಡೀಗಢ ನಗರದ ವಿನ್ಯಾಸಕಾರರ ತಂಡದಲ್ಲಿ ಒಬ್ಬ.

1883: ಪ್ಯಾರಿಸ್ಸಿನಿಂದ ಕಾನ್ ಸ್ಟಾಂಟಿನೋಪಲ್ಲಿಗೆ (ಈಗಿನ ಇಸ್ತಾಂಬುಲ್) ತನ್ನ ಉದ್ಘಾಟನಾ ಪಯಣವನ್ನು ಓರಿಯಂಟ್ ಎಕ್ಸ್ಪ್ರೆಸ್ ಪೂರ್ಣಗೊಳಿಸಿತು. ಈ ಪಯಣಕ್ಕೆ ಅದು 78 ಗಂಟೆಗಳನ್ನು ತೆಗೆದುಕೊಂಡಿತು. ಈ ಲಕ್ಸುರಿ ರೈಲು ಪಯಣವು ಜಾರ್ಜ್ ನೆಗೆಲ್ ಮೇಕರನ ಮೆದುಳಿನ ಕೂಸು. ಪ್ಯಾರಿಸ್ನಿಂದ ಬಾಲ್ಟಿಕ್ ವಗಿನ ರಾಷ್ಟ್ರಗಳನ್ನು ಮತ್ತು ಗಡಿಗಳನ್ನು ಹಾದು ಅಂತಿಮವಾಗಿ ಬಲ್ಗೇರಿಯಾದ ವರ್ನಾದಿಂದ ಕಾನ್ ಸ್ಟಾಂಟಿನೋಪಲಿಗೆ ಸಮುದ್ರಯಾನದ ಮೂಲಕವಾಗಿ ತಲುಪುವಂತಹ ಪಯಣದ ಕಲ್ಪನೆ ಆತನದಾಗಿತ್ತು. ಈ ಪಯಣದ ಮಧ್ಯೆ ಸಂಭವಿಸಿದ ಘಟನಾವಳಿಗಳನ್ನೇ ಆಧರಿಸಿ ಈ ರೈಲಿನಲ್ಲಿ ಸತತ ಪ್ರಯಾಣಿಸುತ್ತಿದ್ದ ಅಗಾಥಾ ಕ್ರಿಸ್ತೀ ``ಮರ್ಡರ್ ಆನ್ ಓರಿಯಂಟ್ ಎಕ್ಸ್ಪ್ರೆಸ್'' ಕಾದಂಬರಿ ರಚಿಸಿದರು

No comments:

Post a Comment