ನಾನು ಮೆಚ್ಚಿದ ವಾಟ್ಸಪ್

Saturday, October 13, 2018

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ


ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಆಯ್ಕೆ

ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಮಂಡಳಿಗೆ ಜನವರಿ , ೨೦೧೯ ರಿಂದ ಮೂರು ವರ್ಷಗಳ ಅವಧಿಗೆ 12 ಅಕ್ಟೋಬರ್ 2018ರ ಶುಕ್ರವಾರ ಆಯ್ಕೆಯಾಯಿತು. ಏಷ್ಯ--ಪೆಸಿಫಿಕ್ ವಿಭಾಗದಲ್ಲಿ 188 ಮತಗಳೊಂದಿಗೆ, ಅಭ್ಯರ್ಥಿಗಳ ಪೈಕಿ ಭಾರತವೇ ಅತ್ಯಧಿಕ ಮತಗಳನ್ನು ಪಡೆಯಿತು.

ವಿಶ್ವಸಂಸ್ಥೆಯ 193 ಸದಸ್ಯ ಬಲದ ಮಾನವ ಹಕ್ಕುಗಳ ಮಂಡಳಿಗೆ ಹೊಸ ಸದಸ್ಯರ  ಆಯ್ಕೆಗಾಗಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಚುನಾವಣೆ ನಡೆಯಿತು. ರಹಸ್ಯ ಮತದಾನದ ಮೂಲಕ ೧೮ ಹೊಸ ಸದಸ್ಯರನ್ನು ಸಂಪೂರ್ಣ ಬಹುಮತದೊಂದಿಗೆ ಚುನಾಯಿಸಲಾಯಿತು. ಮಂಡಳಿಗೆ ಚುನಾಯಿತರಾಗುವ ರಾಷ್ಟ್ರಗಳು ಕನಿಷ್ಟ 97 ಮತಗಳನ್ನು ಪಡೆಯಬೇಕಾಗಿತ್ತು.

ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಭಾರತವು ಸ್ಥಾನಕ್ಕೆ ಸ್ಪರ್ಧಿಸಿತ್ತು. ಭಾರತ ಜೊತೆಗೆ, ಬಹ್ರೇನ್, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಪೈನ್ಸ್ ದೇಶಗಳು ಅದೇ ಪ್ರಾದೇಶಿಕ ಗುಂಪಿನಲ್ಲಿ ಸ್ಪರ್ಧಿಸಿದ್ದವು.  ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಐದು ಸ್ಥಾನಗಳಿಗೆ ಆಯ್ಕೆಯಾಗಬೇಕಾಗಿದ್ದು, ಭಾರತದ ಆಯ್ಕೆ ಖಚಿತವಾಗಿತ್ತು.

ವಿಶ್ವಸಂಸ್ಥೆಯಲ್ಲಿ ಭಾರತದ  ಕಾಯಂ ರಾಯಭಾರಿಯಾಗಿರುವ  ಸೈಯದ್ ಅಕ್ಬರುದ್ದೀನ್  ಅವರು, ‘ಭಾರತದ ವಿಜಯವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ದೇಶದ ನಿಲುವನ್ನು ಪ್ರತಿಫಲಿಸಿದೆ’ ಎಂದು ಹೇಳಿದರು.

ಚುನಾವಣೆಯ ಬಳಿಕ ಅಕ್ಬರುದ್ದೀನ್  ಅವರು "ಸಂತಸದ ಫಲಿತಾಂಶಕ್ಕಾಗಿ ಮತದಾನ. ವಿಶ್ವಸಂಸ್ಥೆಯಲ್ಲಿ ನಮ್ಮ ಎಲ್ಲ ಸ್ನೇಹಿತರ ಬೆಂಬಲದೊಂದಿಗೆ ಭಾರತವು ಎಲ್ಲ ಅಭ್ಯರ್ಥಿಗಳ ಪೈಕಿ ಅತ್ಯಧಿಕ ಮತಗಳೊಂದಿಗೆ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ’ ಎಂದು ಟ್ವೀಟ್ ಮಾಡಿದರು.

ಹೊಸ ಸದಸ್ಯರು ಮುಂದಿನ ವರ್ಷ ಜನವರಿ ರಿಂದ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವರು. ಭಾರತವು ಹಿಂದೆ ಜಿನಿವಾ ಮೂಲದ ಮಾನವ ಹಕ್ಕುಗಳ ಮಂಡಳಿಗೆ ೨೦೧೧-೨೦೧೪ ಮತ್ತು ೨೦೧೪-೨೦೧೭ ಅವಧಿಗೆ ಆಯ್ಕೆಯಾಗಿತ್ತು. ಅದರ ಕೊನೆಯ ಅಧಿಕಾರಾವಧಿಯು ಡಿಸೆಂಬರ್ ೩೧, ೨೦೧೭ ರಂದು ಅಂತ್ಯಗೊಂಡಿತ್ತು. ನಿಯಮಗಳ ಅನುಸಾರ, ಎರಡು ಬಾರಿ ಸತತ ಅವಧಿಗೆ ಸೇವೆ ಸಲ್ಲಿಸಿದ್ದರಿಂದ ತಕ್ಷಣವೇ ಮರು-ಚುನಾವಣೆಗೆ ಭಾರತಕ್ಕೆ ಅರ್ಹತೆ ಇರಲಿಲ್ಲ.

ಮಾನವ ಹಕ್ಕುಗಳೊಂದಿಗೆ ವ್ಯವಹರಿಸುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯು 2006ರ ಮಾರ್ಚ್ ತಿಂಗಳಲ್ಲಿ ಸ್ಥಾಪನೆಗೊಂಡಿದ್ದು, 47 ಚುನಾಯಿತ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಸಮಾನ ಭೌಗೋಳಿಕ ವಿತರಣೆಯ ಆಧಾರದ ಮೇಲೆ ಮಂಡಳಿಯ ಸ್ಥಾನಗಳನ್ನು ಐದು ಪ್ರಾದೇಶಿಕ ಗುಂಪುಗಳಿಗೆ ಹಂಚಲಾಗುತ್ತದೆ: ಆಫ್ರಿಕನ್ ರಾಜ್ಯಗಳು 13 ಸ್ಥಾನಗಳು; ಏಷ್ಯ-ಪೆಸಿಫಿಕ್ ರಾಜ್ಯಗಳು 13 ಸ್ಥಾನಗಳು; ಪೂರ್ವ ಯುರೋಪಿಯನ್ ರಾಜ್ಯಗಳು 6 ಸ್ಥಾನಗಳು; ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಜ್ಯಗಳು 8 ಸ್ಥಾನಗಳು; ಮತ್ತು ಪಶ್ಚಿಮ ಯುರೋಪಿಯನ್ ಮತ್ತು ಇತರ ರಾಜ್ಯಗಳು, 7 ಸ್ಥಾನಗಳನ್ನು ಪಡೆದಿವೆ.

ಜನರಲ್ ಅಸೆಂಬ್ಲಿಯ ಎಲ್ಲಾ ಐದು ಪ್ರಾದೇಶಿಕ ಗುಂಪುಗಳು ಪೈಪೋಟಿ-ಮುಕ್ತ ಸ್ಲಾಟ್ಗಳನ್ನು  ಸಲ್ಲಿಸಿದ್ದವು. ಅಂದರೆ ಎಲ್ಲಾ ಅಭ್ಯರ್ಥಿಗಳೂ ತಮ್ಮ ಹಕ್ಕುಗಳ ದಾಖಲೆಗಳನ್ನು ಲೆಕ್ಕಿಸದೆ, ಮಂಡಳಿ ಸದಸ್ಯತ್ವ ಪಡೆಯುವುದು ಖಚಿತವಿತ್ತು.
.
ಮಾನವ ಹಕ್ಕುಗಳ ಮಂಡಳಿಗಾಗಿ ನಡೆಯುವ ಚುನಾವಣೆಯಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಫಿಲಿಪೈನ್ಸ್ ಮತ್ತು ಎರಿಟ್ರಿಯಾದ ಅಭ್ಯರ್ಥಿಗಳನ್ನು ವಿರೋಧಿಸಬೇಕು ಎಂದು ಮಾನವ ಹಕ್ಕುಗಳ ಕಣ್ಗಾವಲು ಸಮೂಹವು ಸೂಚಿಸಿತ್ತು. ಬಹ್ರೇನ್ ಮತ್ತು ಕ್ಯಾಮರೂನಿನಲ್ಲಿ ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕರೆ ನೀಡಲಾಗಿತ್ತು.

ಚಿಲಿಯ ಮಾಜಿ ಅಧ್ಯಕ್ಷ ಮಿಚೆಲ್ ಬ್ಯಾಚೆಲೆಟ್ ಅವರು ವರ್ಷದ ಸೆಪ್ಟಂಬರಿನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಹುದ್ದೆಯನ್ನು ನಿರ್ವಹಿಸಿದ್ದರು. ಅವರ  ಪೂರ್ವಾಧಿಕಾರಿಯಾದ   ಜೋರ್ಡಾನ್ ರಾಯಭಾರಿ ಝೀದ್ ರಾದ್ ಅಲ್-ಹುಸೇನ್ ಅವರು ವರ್ಷದ ಜೂನ್ ತಿಂಗಳಲ್ಲಿ ಕಾಶ್ಮೀರ ಕುರಿತು ಚೊಚ್ಚಲ ವರದಿಯನ್ನು ಬಿಡುಗಡೆ ಮಾಡಿದ್ದರು. ಭಾರತ ಅದನ್ನು ತಿರಸ್ಕರಿಸಿತ್ತು.

No comments:

Post a Comment