ನಾನು ಮೆಚ್ಚಿದ ವಾಟ್ಸಪ್

Thursday, October 18, 2018

ದೇವಸ್ವಂ ಮಂಡಳಿ ರಾಜಿಗೆ ಸಿದ್ಧ


ದೇವಸ್ವಂ ಮಂಡಳಿ ರಾಜಿಗೆ ಸಿದ್ಧ

ಶಬರಿಮಲೈ:  ಶಬರಿಮಲೈ ಅಯ್ಯಪ್ಪ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ಪಂಚ ಸದಸ್ಯ ಪೀಠವು ನೀಡಿದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ತನ್ನ ನಿಲವಿನಲ್ಲಿ ಸ್ವಲ್ಪ ವ್ಯತ್ಯಾಸವನ್ನು ಮಾಡಿರುವ ತಿರುವಾಂಕೂರು ದೇವಸ್ವಂ ಮಂಡಳಿಯು (ಟಿಡಿಬಿ) ಪ್ರತಿಭಟನೆಯನ್ನು ಹಿಂತೆಗೆದುಕೊಂಡರೆ, ನಾವು ರಾಜಿಗೆ ಸಿದ್ಧ  2018ರ ಅಕ್ಟೋಬರ್ 18ರ ಗುರುವಾರ  ಪ್ರಕಟಿಸಿತು.

‘ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಬಗ್ಗೆ ಶುಕ್ರವಾರ ನಡೆಯುವ ಮಂಡಳಿ ಸಭೆಯಲ್ಲಿ ಪರಿಶೀಲಿಸಲು ನಾವು ಸಿದ್ಧರಿದ್ದೇವೆ.  ಆದರೆ ಪ್ರತಿಭಟನಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವರೇ ಎಂದು ಮಂಡಳಿಯ ಅಧ್ಯಕ್ಷ . ಪದ್ಮಕುಮಾರ್ ಅವರು ಕೇಳಿದ್ದಾರೆ.

"ಈ ಮಧ್ಯೆ, ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳಲು ಮಂಡಳಿಯು ಸ್ವತಂತ್ರವಾಗಿದೆ. ಪುನರ್ ವಿಮರ್ಶಾ ಅರ್ಜಿ ಕುರಿತು ಅವರು ನಿರ್ಧಾರ ಕೈಗೊಳ್ಳಬಹುದು’ ಎಂದು  ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರು.

ಸುಪ್ರೀಂಕೋರ್ಟ್  ತೀರ್ಪಿನ  ಬಳಿಕ ಅಕ್ಟೋಬರ್ 17ರಂದು ಮೊದಲ ಬಾರಿಗೆ ಬಾಗಿಲು ತೆರೆದ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಮೊದಲ ದಿನದಂತೆಯೇ,  ಎರಡನೆಯ ದಿನವಾದ ಈದಿನವೂ  ತೀವ್ರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಹಿಳೆಯರು ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುವುದರಿಂದ  ದೂರವೇ  ಉಳಿದರು.

ಬೆಳಗ್ಗೆ ನ್ಯೂಯಾರ್ಕ್ ಟೈಮ್ಸ್ ಮಹಿಳಾ ಪತ್ರಕರ್ತೆ  ವಿದೇಶೀ ಪುರುಷನೊಬ್ಬನ ಜೊತೆಗೆ ಶಬರಿಮಲೈ  ಈದಿನ ಪ್ರವೇಶಿಸಲು ಬೆಟ್ಟ ಹತ್ತಲು ಯತ್ನಿಸಿದರು. ಸಂದರ್ಭದಲ್ಲಿ ಭಾರೀ ವಿರೋಧ, ಪ್ರತಿಭಟನೆ ವ್ಯಕ್ತವಾಗಿ, ಇಬ್ಬರನ್ನೂ ಬಲವಂತವಾಗಿ ವಾಪಸ್ ಕಳುಹಿಸಿರುವ ಘಟನೆ ಘಟಿಸಿತು.

ನ್ಯೂಯಾರ್ಕ್ ಟೈಮ್ಸ್ ಭಾರತದ ಪ್ರತಿನಿಧಿ ದೆಹಲಿ ಮೂಲದ ಸುಹಾಸಿನಿ ರಾಜ್ ಮತ್ತು ಆಕೆಯ ಸಹೋದ್ಯೋಗಿ(ವಿದೇಶಿ ಪತ್ರಕರ್ತ) ಪಂಪಾ ದಾರಿಯನ್ನು ದಾಟುವಲ್ಲಿ ಯಶಸ್ವಿಯಾಗಿದ್ದರು. ಶಬರಿಮಲೈ ದೇಗುಲ ಸೇರುವ ಮುನ್ನ ಸಿಗುವ ಬೆಟ್ಟ ಹತ್ತಲು ಆರಂಭಿಸಿದಾಗ ಆಕ್ರೋಶಗೊಂಡ ಪ್ರತಿಭಟನಾಕಾರರು ಮಾನವ ಗೋಡೆ ನಿರ್ಮಿಸ ಅಡ್ಡಿ ಪಡಿಸಿದ್ದರು. ಹೀಗಾಗಿ ಪತ್ರಕರ್ತೆ ಮತ್ತು ಸಹೋದ್ಯೋಗಿ ವಾಪಸಾಗಲು ನಿರ್ಧರಿಸಿದರು.

ನಾನು ಶಬರಿಮಲೆ ದೇಗುಲ ಪ್ರವೇಶಿಸಿ ಪ್ರಾರ್ಥನೆ ಸಲ್ಲಿಸಲು ಬಂದಿಲ್ಲ, ನನ್ನ ಕೆಲಸ ಮಾಡಲು ಬಂದಿದ್ದೇನೆ ಎಂದು ಸುಹಾಸಿನಿ ರಾಜ್ ವಿನಂತಿಸಿಕೊಂಡಿದ್ದರು. ಆದರೆ ಅಯ್ಯಪ್ಪ ಸ್ವಾಮಿ ಭಕ್ತರು ಭಾರೀ ಪ್ರತಿಭಟನೆ ನಡೆಸಿ ದಾರಿ ಮಧ್ಯೆ ಕುಳಿತು ಪತ್ರಕರ್ತೆಯರ ವಿರುದ್ಧ ಘೋಷಣೆ ಕೂಗಿದ್ದರು. ಬೇರೆ ದಾರಿ ಕಾಣದೇ ಇಬ್ಬರು ವಾಪಸ್ ಹೋದರು ಎಂದು ವರದಿ ವಿವರಿಸಿತು.


ಈ ಮಧ್ಯೆ ಪ್ರತಿಭಟನಕಾರರ ವಿರುದ್ಧ ಹಿಂದಿನ ದಿನ ನಡೆದ ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಿ ಕೇರಳ ರಾಜ್ಯಾದ್ಯಂತ ಈದಿನ ಹರತಾಳ  ಆಚರಿಸಲಾಯಿತು.


ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:



No comments:

Post a Comment