Tuesday, October 16, 2018

ಅಲಹಾಬಾದ್ ಇನ್ನು ‘ಪ್ರಯಾಗರಾಜ್’: ಯೋಗಿ ಸಂಪುಟ ಅಸ್ತು


ಅಲಹಾಬಾದ್ ಇನ್ನುಪ್ರಯಾಗರಾಜ್’: ಯೋಗಿ ಸಂಪುಟ ಅಸ್ತು

ಲಖನೌ: ಮಂಗಳವಾರ, ಅಕ್ಟೋಬರ್ ೧೬, ೨೦೧೮ ರಂದು ಉತ್ತರ ಪ್ರದೇಶದ ಕ್ಯಾಬಿನೆಟ್ ಅಲಹಾಬಾದ್ ಅನ್ನು ಪ್ರಯಾಗರಾಜ್’ ಎಂಬುದಾಗಿ ಮರುನಾಮಕರಣ ಮಾಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸಚಿವ ಸಂಪುಟವು 2018ರ  ಅಕ್ಟೋಬರ್  16ರ ಮಂಗಳವಾರ ವಿರೋಧ ಪಕ್ಷಗಳ ವಿರೋಧದ  ಮಧ್ಯೆ ಅಂಗೀಕರಿಸಿತು.
 
ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂಬುದಾಗಿ ಬದಲಾಯಿಸುವ ಮುಖ್ಯಮಂತ್ರಿ ಆದಿತ್ಯನಾಥ್ ಘೋಷಣೆಯನ್ನು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ  ತೀವ್ರವಾಗಿ ಪ್ರತಿಭಟಿಸಿವೆ.

ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ ನಗರವಾದ ಅಲಹಾಬಾದ್ ನಗರದ  ಬುದ್ಧಿಜೀವಿಗಳು, ಶಿಕ್ಷಕರು, ಸಾಹಿತಿಗಳು, ವಕೀಲರು ಮತ್ತು ರಾಜಕಾರಣಿಗಳಿಂದ ನಗರದ ಮರುನಾಮಕರಣಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ.

ನಗರದ ಮರುನಾಮಕರಣದಿಂದ  ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಲಹಾಬಾದ್ ನಗರದ ಮಹತ್ವವನ್ನು ಕುಗ್ಗಿಸುತ್ತದೆ, ಹೆಸರು ಬದಲಾವಣೆಯ ಈ ಕ್ರಮ ಅರ್ಥರಹಿತ ಎಂದು ಕಾಂಗ್ರೆಸ್ ಹೇಳಿದೆ. ಆದಿತ್ಯ ನಾಥ್ ಸರ್ಕಾರದ  ಈ ಕ್ರಮವು ಅವರ ಸರ್ಕಾರದ ‘ಮರುನಾಮಕರಣ’ ಚಾಳಿಯ ಗುಣಲಕ್ಷಣ’ವನ್ನು ಪುನಃ ತೋರಿಸಿದೆ  ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ.

 ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


No comments:

Post a Comment