Wednesday, October 3, 2018

ಇಂದಿನ ಇತಿಹಾಸ History Today ಅಕ್ಟೋಬರ್ 03

ಇಂದಿನ ಇತಿಹಾಸ History Today ಅಕ್ಟೋಬರ್ 03
2018: ಸ್ಟಾಕ್ ಹೋಮ್: ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯು ೨೦೧೮ರ ಸಾಲಿನ ನೊಬೆಲ್ ರಸಾಯನಶಾಸ್ತ್ರ ಪ್ರಶಸ್ತಿಯನ್ನು ಕಿಣ್ವಗಳ ನಿರ್ದೇಶಿತ ವಿಕಾಸಕ್ಕಾಗಿ ಫ್ರಾನ್ಸೆಸ್ ಎಚ್. ಅರ್ನಾಲ್ಡ್ (ಅಮೆರಿಕ) ಅವರಿಗೆ ಮತ್ತು ಫೇಜ್ ಅಥವಾ ಬ್ಯಾಕ್ಟೀರಿಯಾಫೇಜ್ ವಿಕಾಸಕ್ಕೆ ನೀಡಿದ ಕೊಡುಗೆಗಾಗಿ ಜಾರ್ಜ್ ಪಿ ಸ್ಮಿತ್ (ಅಮೆರಿಕ) ಮತ್ತು ಸರ್ ಗ್ರೆಗೊರಿ ಪಿ. ವಿಂಟರ್ (ಇಂಗ್ಲೆಂಡ್) ಅವರಿಗೆ ಜಂಟಿಯಾಗಿ ನೀಡಿತು. ಮಾನವ ಸಂಕುಲದ ರಾಸಾಯನಿಕ ಸಮಸ್ಯೆಗಳನ್ನು ನಿವಾರಿಸಲು ಪ್ರೊಟೀನ್ಗಳ ಅಭಿವೃದ್ಧಿ, ಆನುವಂಶಿಕ ಬದಲಾವಣೆ ಮತ್ತು ಆಯ್ಕೆ ಮೂರು ತತ್ವಗಳನ್ನು ಆಧರಿಸಿ ವರ್ಷದ ರಸಾಯನಶಾಸ್ತ್ರ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಅಕಾಡೆಮಿ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಪ್ರಸ್ತುತ ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಸಂಶೋಧಕರು ಅಭಿವೃದ್ಧಿ ಪಡಿಸಿದ ವಿಧಾನಗಳು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಮಿತ್ರ ರಾಸಾಯನಿಕ ಕೈಗಾರಿಕೆಗಳ ಬೆಳವಣಿಗೆ, ಸುಸ್ಥಿರ ಜೈವಿಕ ಇಂಧನಗಳ ಉತ್ಪಾದನೆ, ರೋಗ ನಿವಾರಣೆ ಮೂಲಕ ಜೀವಗಳ ರಕ್ಷಣೆಗೆ ನೆರವಾಗಿವೆ ಎಂದು ಅಕಾಡೆಮಿ ಹೇಳಿತು. ಸರ್ ಗ್ರೆಗೊರಿ ವಿಂಟರ್ ಅವರು ನೂತನ ಫಾರ್ಮಾಸ್ಯೂಟಿಕಲ್ಸ್ ತಯಾರಿಗೆ ಬಳಸಬಹುದಾದ ಫೇಜ್ ಪ್ರದರ್ಶಿಸಿದ್ದಾರೆ. ಬ್ಯಾಕ್ಟೀರಿಯಾಫೇಜ್ಗಳನ್ನು ಈಗ ನಂಜು ನಿವಾರಣೆಗೆ, ರೋಗನಿರೋಧಕ ಶಕ್ತಿ ಬೆಳೆಸಿಕೊಂಡ ರೋಗಗಳನ್ನು ನಿಗ್ರಹಿಸಬಲ್ಲ ಪ್ರತಿರೋಧಕಗಳ ತಯಾರಿ ಮತ್ತು ಪರಿವರ್ತನೆಯಾಗುವ ಕ್ಯಾನ್ಸರ್ ಗುಣಪಡಿಸಲು ಬಳಸಲಾಗುತ್ತಿದೆ.  ಕಳೆದ ವರ್ಷದ ನೊಬೆಲ್ ಪ್ರಶಸ್ತಿಯನ್ನು ಮಾಲೆಕ್ಯೂಲ್ ವಿಕಾಸಕ್ಕಾಗಿ ಅಮೆರಿಕ, ಸ್ವಿಟ್ಜರ್ಲೆಂಡ್ ಮತ್ತು ಬ್ರಿಟನ್ ಸಂಶೋಧಕರಿಗೆ ಜಂಟಿಯಾಗಿ ನೀಡಲಾಗಿತ್ತು ವರ್ಷ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಯಾರಿಗೂ ಘೋಷಿಸಲಾಗಿಲ್ಲ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಮತ್ತು ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಸೋಮವಾರ ಪ್ರಕಟಿಸಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ನೀಡಲಾಗುವ ವರ್ಷದ ಪ್ರಶಸ್ತಿಯನ್ನು ಅಮೆರಿಕ ಮತ್ತು ಜಪಾನಿನ ಸಂಶೋಧಕರಿಗೆ ಸೋಮವಾರ ಘೋಷಿಸಲಾಗಿತ್ತು. ಭೌತಶಾಸ್ತ್ರ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಮಂಗಳವಾ ಅಮೆರಿಕ, ಕೆನಡಾ ಮತ್ತು ಫ್ರಾನ್ಸ್ ಸಂಶೋಧಕರಿಗೆ ಜಂಟಿಯಾಗಿ ಘೋಷಿಸಲಾಯಿತು.

2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಬುಧವಾರ ಅಧಿಕಾರ ವಹಿಸಿಕೊಂಡಿರುವ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ವಿವಿಧ ಪೀಠಗಳಿಗೆ ಪ್ರಕರಣಗಳ ಹಂಚಿಕೆಗೆ ಸಂಬಂಧಿಸಿದಂತೆ ನೂತನ ರೋಸ್ಟರ್ ವ್ಯವಸ್ಥೆಯನ್ನು ಜಾರಿಗೆ ತಂದರು.  ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ತಮ್ಮ ಪೀಠ ಹಾಗೂ ಹಿರಿತನದಲ್ಲಿ ತಮ್ಮ ಬಳಿಕದ ಸ್ಥಾನದಲ್ಲಿರುವ ನ್ಯಾಯಮೂರ್ತಿ ಮದನ್ ಬಿ ಲೋಕುರ್ ನೇತೃತ್ವದ ಪೀಠ ಆಲಿಸಬೇಕು ಎಂದು ಅವರು ನಿರ್ಧರಿಸಿದರು.  ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುಪ್ರೀಂಕೋರ್ಟಿಗೆ ವಾಪಸಾದ ನ್ಯಾಯಮೂರ್ತಿ ಗೊಗೋಯಿ ಅವರು ಇತರ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರ ಜೊತೆಗೆ ನಂ. ಸಿಜೆಐ ನ್ಯಾಯಾಲಯ ಪೀಠದ ನೇತೃತ್ವ ವಹಿಸಿದರು. ತುರ್ತಾಗಿ ಕೈಗೆತ್ತಿಕೊಳ್ಳಬೇಕಾದ ಪ್ರಕರಣಗಳಿಗೆ ಆದ್ಯತೆ ನೀಡುವ ಸಲುವಾಗಿ ಪ್ರಕರಣಗಳನ್ನು ಆಲಿಕೆ ಪ್ರಸ್ತಾಪ ಸಂಬಂಧ ಹೊಸ ಮಾನದಂಡಗಳನ್ನು ರೂಪಿಸಲಾಗುವುದು ಎಂಬುದಾಗಿ ವಕೀಲರಿಗೆ ಹೇಳುವುದರೊಂದಿಗೆ ನೂತನ ಸಿಜೆಐ ತಮ್ಮ ದಿನದ ಕಲಾಪ ಆರಂಭಿಸಿದರು. ೪೬ನೇ ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಿದ ರಂಜನ್ ಗೊಗೋಯಿ ಅವರುಕೆಲವು ಮಾನದಂಡಗಳನ್ನು ನಿಗದಿಪಡಿಸುವವರೆಗೆ ಯಾವುದೇ ಪ್ರಕರಣಗಳನ್ನು ತುರ್ತು ವಿಚಾರಣೆಗಾಗಿ ಪ್ರಸ್ತಾಪಿಸಲಾಗುವುದಿಲ್ಲ. ಮಾನದಂಡಗಳನ್ನು ನಾವು ರೂಪಿಸಲಿದ್ದೇವೆ. ಬಳಿಕ ಪ್ರಕರಣಗಳನ್ನು ಹೇಗೆ ವಿಚಾರಣೆಗೆ ಪ್ರಸ್ತಾಪಿಸಬೇಕು ಎಂದು ಗಮನಿಸುತ್ತೇವೆ ಎಂದು ಅವರು ನುಡಿದರು.  ‘ನಾಳೆ ಯಾರನ್ನಾದರೂ ಗಲ್ಲಿಗೆ ಹಾಕುವುದಿದ್ದರೆ, ಆಗ ನಮಗೆ (ತುರ್ತು) ಅರ್ಥವಾಗುತ್ತದೆ ಎಂದು ಸಿಜೆಐ ಹೇಳಿದರುಸುಪ್ರೀಂಕೋರ್ಟಿನ ವೆಬ್ ಸೈಟ್ ಅಕ್ಟೋಬರ್ ೩ರಿಂದ ಅನ್ವಯವಾಗುವಂತೆ ಹೊಸ ಪ್ರಕರಣಗಳ ರೋಸ್ಟರನ್ನು ಭಾರತದ ಮುಖ್ಯ ನ್ಯಾಯಮೂರ್ತಿಗಳ ಆದೇಶದ ಮೇರೆಗೆ ಪ್ರಕಟಿಸಿತು. ನೂತನ ರೋಸ್ಟರ್ ಆದೇಶದ ಪ್ರಕಾರ ಸಿಜೆಐ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಮತ್ತು ತಮಗೆ ಬಂದ ಪತ್ರಗಳನ್ನು ಆಧರಿಸಿದ ಅರ್ಜಿಗಳನ್ನು ತಮ್ಮ ಬಳಿಯೇ ಇಟ್ಟುಕೊಂಡರು. ಸಿಜೆಐ ನೇತೃತ್ವದ ಪೀಠವು ಸಾಮಾಜಿಕ ನ್ಯಾಯ, ಚುನಾವಣೆಗಳು, ಕಂಪೆನಿ ಕಾನೂನು, ಏಕಸ್ವಾಮ್ಯ ಮತ್ತು ನಿಯಂತ್ರಿತ ವ್ಯಾಪಾರ ಆಚರಣೆಗಳು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಭಾರತೀಯ ಭದ್ರತಾ ವಿನಿಯಮಯ ಮಂಡಳಿ (ಸೆಬಿ), ವಿಮಾ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸಂಬಂಧಿತ ವಿಚಾರಗಳ ವಿಚಾರಣೆಯನ್ನು ನಡೆಸುವುದು. ಆರ್ಬಿಟ್ರೇಷನ್, ಹೇಬಿಯಸ್ ಕಾರ್ಪಸ್, ಕ್ರಿಮಿನಲ್ ಪ್ರಕರಣಗಳು, ನ್ಯಾಯಾಲಯ ನಿಂದನೆ ಮತ್ತು ಸಾಮಾನ್ಯ ಸಿವಿಲ್ ವಿಚಾರಗಳನ್ನೂ ಗೊಗೋಯಿ ಅವರು ತಮ್ಮಲ್ಲೇ ಇರಿಸಿಕೊಂಡಿದ್ದಾರೆ.  ಸಾಂವಿಧಾನಿಕ ಹುದ್ದೆಗಳಿಗೆ ನೇಮಕಶಾಸನಬದ್ಧ ನೇಮಕಾತಿಗಳು ಮತ್ತು ಇತರ ಕಾನೂನು ಅಧಿಕಾರಿಗಳ ನೇಮಕ ವಿಚಾರಗಳನ್ನೂ ಸಿಜೆಐ ನೇತೃತ್ವದ ಪೀಠವೇ ನೋಡಿಕೊಳ್ಳುವುದು. ನ್ಯಾಯಾಂಗ ಅಧಿಕಾರಿಗಳು ಮತ್ತು ತನಿಖಾ ಆಯೋಗಗಳಿಗೆ ಸಂಬಂಧಿಸಿದ ವಿಚಾರಗಳು ಕೂಡಾ ಸಿಜೆಐ ನೇತೃತ್ವದ ಪೀಠಕ್ಕೆ ಬರುವುವು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮತ್ತು ಪತ್ರ ಆಧಾರಿತ ವಿಷಯಗಳನ್ನು ನ್ಯಾಯಮೂರ್ತಿ ಗೊಗೋಯಿ ಅವರು ನ್ಯಾಯಮೂರ್ತಿ ಲೋಕುರ್ ನೇತೃತ್ವದ ಪೀಠಕ್ಕೆ ಹಂಚಿಕೆ ಮಾಡಿದ್ದಾರೆ. ಭೂಸ್ವಾಧೀನ, ಅಜ್ಞಾಕೋರಿಕೆ ಮತ್ತು ಸೇವೆ ಸಂಬಂಧಿತ ವಿಚಾರಗಳನ್ನೂ ನ್ಯಾಯಮೂರ್ತಿ ಲೋಕುರ್ ಪೀಠಕ್ಕೆ ವಹಿಸಲಾಗಿದೆಸಾಮಾಜಿಕ ನ್ಯಾಯ ವಿಷಯಗಳು, ಅರಣ್ಯ, ಪರಿಸರ, ವನ್ಯಜೀವಿಗಳು ಮತ್ತು ಪರಿಸರ ವಿಜ್ಞಾನ ವಿಷಯಗಳು ನ್ಯಾಯಮೂರ್ತಿ ಲೋಕುರ್ ಪೀಠದಲ್ಲಿಯೇ ಮುಂದುವರೆಯುತ್ತವೆ. ಇದರ ಜೊತೆಗೆ ವೈಯಕ್ತಿಕ ಕಾನೂನು ವಿಚಾರಗಳು, ಧಾರ್ಮಿಕ, ದತ್ತಿ ಸಂಸ್ಥೆಗಳು ಮತ್ತು ಗಣಿಗಾರಿಕೆ, ಖನಿಜಗಳು, ಗಣಿ ಗುತ್ತಿಗೆ ವಿಚಾರಗಳೂ ನ್ಯಾಯಮೂರ್ತಿ ಲೋಕುರ್ ಪೀಠದ ವ್ಯಾಪ್ತಿಗೆ ಬರುತ್ತವೆ. ಭೂ ಕಾಯ್ದೆಗಳು, ಕೃಷಿ ಒಕ್ಕಲುತನ, ಗ್ರಾಹಕ ಸಂರಕ್ಷಣೆ ಮತ್ತು ಸಶಸ್ತ್ರ ಪಡೆಗಳು ಮತ್ತು ಅರೆಸೇನಾ ಪಡೆಗಳಿಗೆ ಸಂಬಂಧಿಸಿದ ವಿಷಯಗಳೂ ಇದೇ ಪೀಠದ ವ್ಯಾಪ್ತಿಗೆ ಬರುತ್ತವೆಹಿರಿತನದಲ್ಲಿ ೩ನೇ ಸ್ಥಾನದಲ್ಲಿರುವ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ನೇತೃತ್ವದ ಪೀಠವು ಕಾರ್ಮಿಕ, ಬಾಡಿಗೆ, ಸೇವೆ, ಕುಟುಂಬ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ನೋಡಿಕೊಳ್ಳುವುದು. ನ್ಯಾಯಮೂರ್ತಿ ಕುರಿಯನ್ ನೇತೃತ್ವದ ಪೀಠವು ನ್ಯಾಯಾಲಯ ನಿಂದನೆ ಪ್ರಕರಣಗಳನ್ನು ಸಿಜೆಐ ಪೀಠದ ಜೊತೆಗೆ ಹಂಚಿಕೊಳ್ಳುವುದು. ಸಾಮಾನ್ಯ, ಸಿವಿಲ್, ವೈಯಕ್ತಿಕ ಕಾನೂನು, ಧಾರ್ಮಿಕ ದತ್ತಿ ಎಂಡೋಮೆಂಟ್ಗಳು, ಸರಳ ಹಣ ಮತ್ತು ಅಡಮಾನ ವಿಚಾರಗಳನ್ನೂ ನ್ಯಾಯಮೂರ್ತಿ ಜೋಸೆಫ್ ಪೀಠವು ನೋಡಿಕೊಳ್ಳುವುದು. ಭೂ ಕಾಯ್ದೆಗಳು, ಕೃಷಿ, ಒಕ್ಕಲುತನ ಮತ್ತು ಸುಪ್ರೀಂಕೋರ್ಟ್, ಹೈಕೋರ್ಟ್ಗಳು ಮತ್ತು ಇತರ ನ್ಯಾಯಾಲಯಗಳು, ಟ್ರಿಬ್ಯೂನಲ್ ಗಳಿಗೆ ಸಂಬಂಧಿಸಿದ ವಿಚಾರಗಳೂ ಅವರ ಪೀಠದ ವ್ಯಾಪ್ತಿಗೆ ಬರುವುವು. ಹಿರಿತನದಲ್ಲಿ ೪ನೇ ಸ್ಥಾನದಲ್ಲಿರುವ ನ್ಯಾಯಮೂರ್ತಿ ಎಕೆ ಸಿಕ್ರಿ ಅವರು ನ್ಯಾಯಾಲಯ ನಿಂದನೆ, ನೇರ ಹಾಗೂ ಪರೋಕ್ಷ ತೆರಿಗೆ  ವಿಚಾರಗಳು, ಚುನಾವಣಾ ಅರ್ಜಿ ಮತ್ತು ಇತರ ವಿಷಯಗಳನ್ನು ನೋಡಿಕೊಳ್ಳುವರು. ನ್ಯಾಯಮೂರ್ತಿ ಎಸ್.. ಬೊಬ್ಡೆ ಅವರಿಗೆ ವಹಿಸಲಾಗಿರುವ ವಿಷಯಗಳನ್ನೂ ಸುಪ್ರೀಂಕೋರ್ಟ್ ವೆಬ್ ಸೈಟ್ ಪಟ್ಟಿ ಮಾಡಿದೆ.

2018: ಆಗ್ರಾ: ಪಾರಂಪರಿಕ ಸ್ಮಾರಕವಾಗಿರುವ ತಾಜ್ ಮಹಲ್ ಒಳಕ್ಕೆ ಚೀನಾದ ಪ್ರವಾಸಿಯೊಬ್ಬ ಡ್ರೋಣ್ ಒಯ್ಯುವ ಮೂಲಕ ಭದ್ರತೆಯನ್ನು ಉಲ್ಲಂಘಿಸಿದ ಘಟನೆ ಘಟಿಸಿತು. ಏನಿದ್ದರೂ, ಪ್ರವಾಸಿಯು ತಾಜ್ ಮಹಲಿನ ರಾಯಲ್ ಗೇಟ್ ತಲುಪಿ ಡ್ರೋಣ್ ಹಾರಲು ಸಿದ್ಧನಾಗುತ್ತಿದ್ದಾಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ ಎಫ್) ಸಿಬ್ಬಂದಿ ಆತನನ್ನು ತಡೆದು ವಶಕ್ಕೆ ತೆಗೆದುಕೊಂಡರು.  ‘ತಾಜ್ ಮಹಲ್ ಒಳಗೆ ಡ್ರೋಣ್ ಹಾರಿಸುವುದನ್ನು ನಿಷೇಧಿಸಲಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ, ನಾನು ಮುಗ್ಧ ಎಂಬುದಾಗಿ ಪ್ರವಾಸಿಯು ಮನವಿ ಮಾಡಿದರೂ, ಆತನನ್ನು ಪ್ರವಾಸೋದ್ಯಮ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ‘ಪ್ರವಾಸಿಯು ಚೀನಾದಿಂದ ಬಂದಿದ್ದು, ಹಿಂದಿ ಮತ್ತು ಇಂಗ್ಲಿಷಿನಲ್ಲಿ ಬರೆದಿರುವ ಸೂಚನೆಗಳನ್ನು ಓದಲು ತನಗೆ ಬರುವುದಿಲ್ಲ ಎಂಬುದಾಗಿ ತಿಳಿಸಿದ್ದಾನೆ. ಹೀಗಾಗಿ ತಾನು ತಾಜ್ ಮಹಲ್ ಒಳಕ್ಕೆ ಡ್ರೋಣ್ ತೆಗೆದುಕೊಂಡು ಬಂದೆ ಎಂದು ಪ್ರವಾಸಿ ಹೇಳಿದ. ಆತನನ್ನು ಪ್ರವಾಸೋದ್ಯಮ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಆದರೆ ಅನುಮಾನಾಸ್ಪದ ವ್ಯಕ್ತಿಯಾಗಿ ಕಂಡು ಬಾರದ ಕಾರಣ ಸ್ಮಾರಕ ವೀಕ್ಷಣೆಗೆ ಅವಕಾಶ ನೀಡಲಾಯತು ಎಂದು ತಾಜ್ ಮಹಲ್ ನಲ್ಲಿ ಸಿಐಎಸ್ ಎಫ್ ಕಮಾಂಡೆಂಟ್ ಆಗಿರುವ ಬ್ರಿಜ್ ಭೂಷಣ್ ಹೇಳಿದರುತಾಜ್ ಮಹಲ್ ಪ್ರವೇಶದ್ವಾರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇದೆ. ಪ್ರವಾಸಿಗರನ್ನು ತಪಾಸಣೆಗೆ ಒಳಪಡಿಸಿದ ಬಳಿಕವೇ ಸಿಐಎಸ್ ಎಫ್ ಒಳಕ್ಕೆ ಬಿಡುತ್ತದೆ. ಆದರೆ ತಪಾಸಣೆ ವೇಳೆ ಚೀನೀ ಪ್ರವಾಸಿ ಬಳಿ ಡ್ರೋಣ್ ಇದ್ದುದು ಗೊತ್ತಾಗಿರಲಿಲ್ಲ ಎಂದು ವರದಿಗಳು ಹೇಳಿದವು. ಪ್ಯಾಕ್ ಮಾಡಲಾಗಿದ್ದ ಡ್ರೋಣ್ ಕ್ಯಾಮರಾದಂತೆ ಇದ್ದುದರಿಂದ ಲೋಪ ಉಂಟಾಯಿತು. ಆದರೆ ಪ್ರವಾಸಿಗೆ ಅದನ್ನು ಹಾರಿಸಲು ಅವಕಾಶ ನೀಡಲಿಲ್ಲ. ಆತ ಅದನ್ನು ಹೊರತೆಗೆದು ಹಾರಿಸುವ ಸಲುವಾಗಿ ರಾಯಲ್ ಗೇಟ್ ಸಮೀಪ ಬರುತ್ತಿದ್ದಂತೆಯೇ ಆತನನ್ನು ತಡೆಯಲಾಯಿತು ಎಂದು ಸಿಐಎಸ್ ಎಫ್ ಕಮಾಂಡೆಂಟ್ ನುಡಿದರು. ಪ್ರವಾಸಿಯನ್ನು ಬೀಜಿಂಗಿನ ಗುಯಿ ಗುವಾನಕ್ಸಿಯೊಂಗ್ ಎಂಬುದಾಗಿ ಗುರುತಿಸಲಾಗಿದ್ದು ಆತ ೨೬ರ ಹರೆಯದ ಯುವಕ. ತಾಜ್ ಮಹಲ್ ಸಮೀಪ ಡ್ರೋಣ್ ಹಾರಿಸಬಾರದು ಎಂಬುದು ತನಗೆ ಗೊತ್ತಿರಲಿಲ್ಲ ಎಂದು ಆತ ತಿಳಿಸಿದ. ವಿಚಾರಣೆಗೆ ಒಳಪಡಿಸಿದ ಬಳಿಕವೇ ಆತನನ್ನು ಒಳಕ್ಕೆ ಹೋಗಲು ಬಿಡಲಾಯಿತು. ಅಲ್ಲಿಂದ ಹೊರಹೋಗುವ ಮುನ್ನ ಆತ ಕ್ಷಮೆಯಾಚನಾ ಪತ್ರವನ್ನೂ ಬರೆದುಕೊಟ್ಟ ಎಂದು ಪ್ರವಾಸೋದ್ಯಮ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಡಿ.ಕೆ. ದ್ವಿವೇದಿ ಹೇಳಿದರು೨೦೧೭ರ ಫೆಬ್ರುವರಿಯಲ್ಲಿ ಆಗ್ರಾ ಜಿಲ್ಲಾ ಆಡಳಿತವು ತಾಜ್ ಮಹಲ್ ಮತ್ತು ಸುತ್ತಮುತ್ತಣ ಪ್ರದೇಶವನ್ನು ಸೂಕ್ಷ್ಮ ಪ್ರದೇಶ ಎಂಬುದಾಗಿ ಘೋಷಿಸಿ ಅಲ್ಲಿ ಡ್ರೋಣ್ ಹಾರಾಟವನ್ನು ನಿಷೇಧಿಸಿತ್ತು. ಪ್ರವಾಸಿಗರಿಗೆ ಬಗ್ಗೆ ತಿಳಿಸುವ ಹೊಣೆಗಾರಿಕೆಯನ್ನು ತಾಜ್ ಮಹಲ್ ಸಮೀಪದ ಹೊಟೇಲ್ ಮಾಲೀಕರಿಗೆ ವಹಿಸಲಾಗಿತ್ತು. ನಿಷೇಧದ ಹೊರತಾಗಿಯೂ ನಿಯಮಾವಳಿಯ ಉಲ್ಲಂಘನೆ ಆದದ್ದು ಇದೆ. ಆಗಸ್ಟ್ ತಿಂಗಳಲ್ಲಿ ಸ್ಮಾರಕದ ದಕ್ಷಿಣದ ಕಡೆಗಿದ್ದ ಹೊಟೇಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಇಸ್ರೇಲಿ ಪ್ರವಾಸಿಯೊಬ್ಬ ಡ್ರೋಣ್ ಹಾರಿಸಿದ್ದ. ಪೊಲೀಸರು ಡ್ರೋಣ್ ನ್ನು ವಶ ಪಡಿಸಿಕೊಂಡು ಪ್ರವಾಸಿಯು ಕ್ಷಮೆ ಯಾಚನೆ ಪತ್ರ ನೀಡಿದ ಬಳಿಕ ಆತನನ್ನು ಅಲ್ಲಿಂದ ತೆರಳಲು ಅವಕಾಶ ನೀಡಿದ್ದರು. ಆದರೆ ಉಲ್ಲಂಘನೆಗಾಗಿ ಹೊಟೇಲ್ ಮಾಲೀಕ ಮತ್ತು ಸಿಬ್ಬಂದಿ ವಿರುದ್ಧ ಜಿಲ್ಲಾ ಮ್ಯಾಜಿಸ್ಟ್ರೇಟರ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು. ೨೦೧೭ರ ಫೆಬ್ರುವರಿ ೨೨ರಂದು ದಕ್ಷಿಣ ಕೊರಿಯಾದ ಪ್ರಾಧ್ಯಾಪಕ ಚುನ್ ಹೊಂಗ್ ಚುಲ್ (೫೦) ಅವರೂ ತಾಜ್ ಮಹಲ್ ಮೇಲೆ ಡ್ರೋಣ್ ಹಾರಿಸಿದ್ದರು. ವಿಷಯಕ್ಕೆ ಸಂಬಂಧಿಸಿದಂತೆ ಸಹಕರಿಸುವುದಾಗಿ ಬರೆದುಕೊಟ್ಟ ಬಳಿಕ ಅವರನ್ನು ಹೋಗಲು ಬಿಡಲಾಗಿತ್ತು.

2018: ಲಕ್ನೋ: ಮುಂಬರುವ ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭಾ ಚುನಾವಣೆಗಳಲ್ಲಿ ತಮ್ಮ ಬಹುಜನ ಸಮಾಜ ಪಕ್ಷವು ಏಕಾಂಗಿಯಾಗಿ ಸೆಣಸಲಿದೆ ಎಂಬುದಾಗಿ ಇಲ್ಲಿ ಪ್ರಕಟಿಸಿದ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ೨೦೧೯ರ ಮಹಾಚುನಾವಣೆಗೂ ಮೊದಲೇ ವಿರೋಧ ಪಕ್ಷಗಳ ಮಹಾಮೈತ್ರಿಯಲ್ಲಿ (ಮಹಾಘಟಬಂಧನ್) ಒಡಕು ಉಂಟಾಗುತ್ತಿರುವ ಬಗ್ಗೆ ತಮ್ಮ ಭಾಷಣದಲ್ಲಿ ಸುಳಿವು ನೀಡಿದ ಮಾಯಾವತಿ, ಕಾಂಗ್ರೆಸ್ ಪಕ್ಷವು ಬಿಎಸ್ಪಿಯನ್ನು ಮುಗಿಸಲು ವಿರುದ್ಧ ಸಂಚು ಹೂಡಿದ್ದು ಅದರ ನಾಯಕರು ಮೈತ್ರಿಕೂಟದ ವಿರುದ್ಧ ವಿಧ್ವಂಸಕ ಕೃತ್ಯ ಎಸಗುತ್ತಿದ್ದಾರೆ ಎಂದು ಆಪಾದಿಸಿದರುಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಕಳೆದ ತಿಂಗಳು ೨೨ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಘೋಷಿಸಿದ್ದ  ಬಿಎಸ್ಪಿ ಮುಖ್ಯಸ್ಥೆ, ಮೈತ್ರಿ ಮುರಿದು ಬೀಳಲು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕಾರಣ ಎಂದು ದೂರಿದ್ದರು.
ಸಿಂಗ್ ಅವರನ್ನು ಬಿಜೆಪಿ ಏಜೆಂಟ್ ಎಂಬುದಾಗಿ ಕರೆದ ಮಾಯಾವತಿ, ಸಿಂಗ್ ಅವರಿಗೆ ರಾಜ್ಯದಲ್ಲಿ ಮೈತ್ರಿ ಬೇಕಾಗಿಲ್ಲ ಎಂದು ಹೇಳಿದರು. ಮೈತ್ರಿ ಜಾರಿಗೆ ಬಂದರೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐಯಂತಹ ಕೇಂದ್ರೀಯ ಸಂಸ್ಥೆಗಳು ತಮ್ಮ ಬೆನ್ನ ಹಿಂದೆ ಬೀಳಬಹುದು ಎಂದು ದಿಗ್ವಿಜಯ್ ಸಿಂಗ್ ಅಂಜಿದ್ದಾರೆ ಎಂದು ಹೇಳಿದರು. ಬಿಎಸ್ಪಿಯು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಬಯಸಿದೆ. ಆದರೆ ಬಿಜೆಪಿ ಏಜೆಂಟರಾಗಿರುವ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಮಧ್ಯಪ್ರದೇಶದಲ್ಲಿ ಬಿಎಸ್ಪಿ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವುದನ್ನು ಬಯಸುತ್ತಿಲ್ಲ. ಮಾಯಾವತಿಜಿ ಅವರಿಗೆ ಕೇಂದ್ರದಿಂದ ಬಲವಾದ ಒತ್ತಡ ಇರುವುದರಿಂದ ಅವರು ಮೈತ್ರಿಯನ್ನು ಬಯಸುತ್ತಿಲ್ಲ ಎಂಬುದಾಗಿ ಸಿಂಗ್ ಹೇಳಿಕೆ ನೀಡುತ್ತಿದ್ದಾರೆ. ಇದು ಬುಡರಹಿತ ಎಂದು ಲಕ್ನೋದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಬಿಎಸ್ಪಿ ಮುಖ್ಯಸ್ಥೆ ನುಡಿದರು. ಏನಿದ್ದರೂ, ಮಾಯಾವತಿ ಅವರು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಮತ್ತು ಪಕ್ಷ ನಾಯಕಿ ಸೋನಿಯಾ ಗಾಂಧಿ ಅವರ ಬಗ್ಗೆ ಮೃದುಧೋರಣೆ ತಳೆದರು. ’ಕಾಂಗ್ರೆಸ್- ಬಿಎಸ್ಪಿ ಮೈತ್ರಿಯ ಉದ್ದೇಶ ಪ್ರಾಮಾಣಿಕವಾದದ್ದು ಎಂದು ಅವರು ನುಡಿದರುಕಾಂಗ್ರೆಸ್ ತನ್ನ ಸ್ವಂತ ಬಲದಿಂದಲೇ ಬಿಜೆಪಿಯನ್ನು ಪರಾಭವಗೊಳಿಸುವ ಕನಸು ಕಾಣುತ್ತಿದೆ. ಕೇಸರಿ ಪಕ್ಷವನ್ನು ಪರಾಭವಗೊಳಿಸಲು ಹಳೆಯ ಪಕ್ಷ ಬಯಸಿದ್ದರೂ, ಚುನಾವಣೆಯಲ್ಲಿ ಸೆಣಸಲು ಮಾನಸಿಕವಾಗಿ ಸೆಣಸಲು ಸಿದ್ಧವಾಗಿಲ್ಲ ಎಂದು ಬಿಎಸ್ಪಿ ಮುಖ್ಯಸ್ಥೆ ಹೇಳಿದರು. ತಾವು ಬಿಜೆಪಿಯನ್ನು ಸೋಲಿಸಬಲ್ಲೆವು ಎಂಬ ತಪ್ಪು ಲೆಕ್ಕಾಚಾರ ಹಾಕಿಕೊಂಡು ಅವರು (ಕಾಂಗ್ರೆಸ್) ಸೊಕ್ಕು ಪ್ರದರ್ಶಿಸುತ್ತಿದ್ದಾರೆ. ಆದರೆ ವಾಸ್ತವವಾಗಿ ಕಾಂಗ್ರೆಸ್ ಪಕ್ಷವನ್ನು ಅದು ಮಾಡಿರುವ ತಪ್ಪುಗಳು ಮತ್ತು ಭ್ರಷ್ಟಾಚಾರಕ್ಕಾಗಿ ಜನರು ಮರೆತಿಲ್ಲ. ಅವರು ತಮ್ಮನ್ನು ತಾವು ತಿದ್ದಿಕೊಳ್ಳಲು ಸಿದ್ಧರಿಲ್ಲ ಎಂದು ಮಾಯಾವತಿ ಹೇಳಿದರು.

2018: ನವದೆಹಲಿ: ಸಲಿಂಗರತಿ ಅಪರಾಧವಲ್ಲ ಎಂಬುದಾಗಿ ಹೇಳಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ನ್ನು ರದ್ದು ಪಡಿಸಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪುನ ನೀಡಿದ ಕೆಲವೇ ದಿನಗಳ ಬಳಿಕ ೨೫ರ ಹರೆಯದ ಮಹಿಳೆಯೊಬ್ಬಳು ಇನ್ನೊಬ್ಬ ಮಹಿಳೆಯ ವಿರುದ್ಧ ನೀಡಿದ್ದಅತ್ಯಾಚಾರ ದೂರನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ ಮೊದಲ ಪ್ರಕರಣ ಬೆಳಕಿಗೆ ಬಂದಿತು. ಮಹಿಳೆಯು ಪೂರ್ವಭಾರತದ ರಾಜ್ಯ ಒಂದರಿಂದ ದೆಹಲಿಗೆ ಬಂದಿದ್ದು, ೧೯ರ ಹರೆಯದ ಆರೋಪಿತ ಮಹಿಳೆಯು ತನ್ನ ಮೇಲೆ ಪದೇ ಪದೇ ಲೈಂಗಿಕ ಹಲ್ಲೆ ನಡೆಸಿರುವುದಾಗಿ ಆಪಾದಿಸಿದರು.  ಎರಡು ತಿಂಗಳುಗಳಿಂದ ಒತ್ತೆಸೆರೆಯಲ್ಲಿದ್ದ ಮಹಿಳೆಯ ಮೇಲೆ ಆರೋಪಿತ ಮಹಿಳೆ ಲೈಂಗಿಕ ಹಲ್ಲೆ ಎಸಗುತ್ತಿದ್ದ ವೇಳೆಯಲ್ಲೆ ದೆಹಲಿಯ ಸೀಮಾಪುರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿದ್ದರೂ, ಆರೋಪಿತ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ್ದರಿಂದ ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯ ದುಃಸ್ಥಿತಿ ಮುಂದುವರೆಯಿತು.  ‘ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ನಾನು ಸೀಮಾಪುರಿ ಪೊಲೀಸ್ ಠಾಣೆಯ ಪೊಲೀಸರಿಗೆ ಮನವಿ ಮಾಡಿದ್ದೇನೆ. ಆದರೆ ದೂರು ದಾಖಲಿಸಲು ಅವರು ನಿರಾಕರಿಸಿದರು. ಮ್ಯಾಜಿಸ್ಟ್ರೇಟರ ಮುಂದೆ ವಿಚಾರವನ್ನು ಪ್ರಸ್ತಾಪಿಸಬಾರದು ಎಂಬುದಾಗಿಯೂ ಅವರು ನನಗೆ ಸೂಚಿಸಿದ್ದರು. ಆದರೆ ನಾನು ನನ್ನ ಕಥೆಯನ್ನು ಮ್ಯಾಜಿಸ್ಟ್ರೇಟರಿಗೆ ತಿಳಿಸಿದ್ದೇನೆ ಎಂದು ಮಹಿಳೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು. ಇದೀಗ, ಮಹಿಳೆಯ ಹೇಳಿಕೆಯನ್ನು ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೬೪ರ ಅಡಿಯಲ್ಲಿ ಕರ್ಕರಡೂಮ ಜಿಲ್ಲೆಯ ಮ್ಯಾಜಿಸ್ಟ್ರೇಟರು ಸೆಪ್ಟೆಂಬರ್ ೨೬ರಂದು ದಾಖಲಿಸಿಕೊಂಡರು. ಮಹಿಳೆಯ ದಾರುಣ ಕಥೆ ವರ್ಷ ಮಾರ್ಚ್ ತಿಂಗಳಲ್ಲಿ ಆಕೆ ಗುರುಗ್ರಾಮದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ವ್ಯವಹಾರದಲ್ಲಿ ಹಣ ಹೂಡಲು ಹೊರಟ ಬಳಿಕ ಶುರವಾಗಿತ್ತು. ಆನ್ ಲೈನ್ ಬಟ್ಟೆ ವ್ಯವಹಾರದಲ್ಲಿ ಇತರ ಪಾಲುದಾರರ ಜೊತೆಗೆ ಮಹಿಳೆಯೂ ಹಣ ಹೂಡಿಕೆ ಮಾಡಬೇಕಾಗಿತ್ತು. ಪಂಜಾಬಿನ ರಾಜಪುರದಲ್ಲಿ ತರಬೇತಿಯ ಬಳಿಕ . ಲಕ್ಷ ರೂಪಾಯಿಗಳನ್ನು ಬಂಡವಾಳವಾಗಿ ಹೂಡುವಂತೆ ಆಕೆಗೆ ಸೂಚಿಸಲಾಗಿತ್ತು. ಸಾಲನೀಡುವವರೊಬ್ಬರಿಂದ ಸಾಲ ಪಡೆದು ಆಕೆಯ ತಂದೆ ಹಣ ಒದಗಿಸಲು ವ್ಯವಸ್ಥೆ ಮಾಡಿದ್ದರುಪಾಲುದಾರರನ್ನು ಹುಡುಕುವ ಸಲುವಾಗಿ ರೈಲ್ವೇ ನಿಲ್ದಾಣಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಅಥವಾ ಬಸ್ಸು ನಿಲ್ದಾಣಗಳಲ್ಲಿ ತನ್ನ ವ್ಯವಹಾರ ಪ್ರಸ್ತಾಪವನ್ನು ವಿವರಿಸುವಂತೆ ಆಕೆಗೆ ಸಲಹೆ ಮಾಡಲಾಯಿತು. ಆಕೆ ಕೆಲಸ ಮಾಡುತ್ತಿದ್ದಾಗ ಪ್ರಕರಣದ ಇನ್ನೊಬ್ಬ ಆರೋಪಿ ರೋಹಿತ್ ಪರಿಚಯವಾಗಿತ್ತು. ತಾನು ಎಚ್ಸಿ ಎಲ್ ಗಾಗಿ ಕೆಲಸ ಮಾಡುತ್ತಿದ್ದು ಬಂಡವಾಳ ಹೂಡಲು ಸಿದ್ಧ ಎಂದು ಆಕೆಗೆ ಈತ ತಿಳಿಸಿದ್ದ. ಬಳಿಕ  ದಿಲ್ಶಾದ್ ಕಾಲೋನಿಯಲ್ಲಿ ಅಪಾರ್ಟ್ಮೆಂಟ್ ಒಂದನ್ನು ಅವರು ಪಡೆದರು. ಅಲ್ಲಿ ರೋಹಿತ್ ಇನ್ನೊಬ್ಬ ಆರೋಪಿ ರಾಹುಲ್ ಜೊತೆ ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ.  ‘ಮೊದಲು ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಅವರು ಒತ್ತಾಯಿಸಿದರು. ಬಳಿಕ ಅದು ಗ್ಯಾಂಗ್ ವ್ಯವಹಾರವಾಯಿತು. ಆಮೇಲೆ ನನ್ನನ್ನು ಇತರರ ಬಳಿಗೆ ಕಳುಹಿಸಲು ಆರಂಭಿಸಿದರು. ಅಪಾರ್ಟ್ಮೆಂಟಿನಲ್ಲೇ ವಾಸವಾಗಿದ್ದ ಆರೋಪಿತ ಮಹಿಳೆ ಕೂಡಾ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿದಳು ಎಂದು ಮಹಿಳೆ ದೂರಿದರು. ಈ ದುರವಸ್ಥೆಯ ವೇಳೆಯಲ್ಲಿ ಕೆಲವೊಮ್ಮೆ ತನಗೆ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ತನಗೆ ಹೆತ್ತವರ ಜೊತೆ ಮಾತನಾಡಲು ರಾಹುಲ್ ವ್ಯವಸ್ಥೆ ಮಾಡುತ್ತಿದ್ದ. ಆದರೆ ಯಾವ ವಿಷಯವನ್ನೂ ಹೇಳದಂತೆ ಬೆದರಿಕೆ ಹಾಕುತ್ತಿದ್ದ. ನನ್ನಶುಲ್ಕ ಹೆಸರಿನಲ್ಲಿ ೨೦,೦೦೦ ರೂ.ಗಳನ್ನು ರಾಹುಲ್ ನೇರವಾಗಿ ಹೆತ್ತವರ ಖಾತೆಗೆ ಹಾಕಿದ್ದ. ಹೆತ್ತವರು ಈಗಲೂ ನಾನು ಬಂಡವಾಳ ಹೂಡಿಕೆ ವ್ಯವಹಾರ ಸಾಹಸ ಮಾಡುತ್ತಿದ್ದೇನೆ ಎಂದೇ ಭಾವಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ. ಈಗ ತನ್ನ ಕಥೆಯನ್ನು ಹೆತ್ತವರಿಗೆ ಹೇಳಲೂ ಮಹಿಳೆ ಭಯ ಪಡುತ್ತಿದ್ದಾರೆ. ತನ್ನ ದುರವಸ್ಥೆ ಗೊತ್ತಾದರೆ ಹೆತ್ತವರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ಆಕೆ ಅಂಜಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಾಹುಲ್ನನ್ನು ಬಂಧಿಸಿದ್ದಾರೆ. ಆತನಿಗೆ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ರೋಹಿತ್ ತಲೆ ತಲೆತಪ್ಪಿಸಿಕೊಂಡಿದ್ದಾನೆ. ಸುಪ್ರೀಂಕೋರ್ಟ್ ಸಂವಿಧಾನ ಪೀಠವು ಸಲಿಂಗ ರತಿ ಅಪರಾಧವಲ್ಲ ಎಂಬುದಾಗಿ ತೀರ್ಪು ನೀಡಿದ ಬಳಿಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೭ನ್ನು ರದ್ದು ಪಡಿಸಿದೆ. ’ಪರಸ್ಪರ ಒಪ್ಪಿಗೆ ಎಂಬ ಅಂಶ ಮಾತ್ರವೇ ವಿಧಿಗೆ ಸಂಬಂಧಿಸಿದಂತೆ ಈಗ ಚರ್ಚೆಯ ವಿಷಯವಾಗಿ ಉಳಿದಿದೆ. ಈಗ ಮಕ್ಕಳನ್ನು ಅಸಹಜ ಲೈಂಗಿಕ ಹಲ್ಲೆಗೆ ಗುರಿಪಡಿಸಿದ ಪ್ರಕರಣಗಳಲ್ಲಿ ಮಾತ್ರವೇ ಸೆಕ್ಷನ್ ೩೭೭ನ್ನು ಅನ್ವಯಿಸಲು ಸಾಧ್ಯ           ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು. ವಯಸ್ಕರಿಬ್ಬರ ನಡುವಣ ಪ್ರಕರಣದಲ್ಲಿಪರಸ್ಪರ ಸಮ್ಮತಿಯನ್ನು ಸಾಬೀತು ಪಡಿಸುವುದು ಪೊಲೀಸರಿಗೆ ಅತ್ಯಂತ ತಲೆನೋವಿನ ವಿಷಯವಾಗುತ್ತದೆ ಎಂದು ಅಧಿಕಾರಿ ಹೇಳಿದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೬ ಅತ್ಯಾಚಾರಕ್ಕೆ ವಿಧಿಸುವ ಶಿಕ್ಷೆಗಳನ್ನು ಪಟ್ಟಿ ಮಾಡುತ್ತದೆ. ಆದರೆ ಇದು ಪುರುಷ - ಮಹಿಳೆಯರ ವ್ಯವಹಾರಕ್ಕೆ ಮಾತ್ರ ಸೀಮಿತ. ಸಲಿಂಗ ಲೈಂಗಿಕ ಹಲ್ಲೆಯಾದರೆ ಅದು ಇದರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಆರೋಪಿ ಮಹಿಳೆಯನ್ನು ಶಿಕ್ಷೆಗೆ ಗುರಿಪಡಿಸಲು ಸಾಧ್ಯವಾಗುವುದಿಲ್ಲ ಎಂದು ಲೈಂಗಿಕ ದೌರ್ಜನ್ಯಕ್ಕೆ  ಒಳಗಾದ ಮಹಿಳೆಯನ್ನು ರಕ್ಷಿಸಿದ ಪರಮಜ್ಯೋತಿ ಸೇವಾ ಫೌಂಡೇಷನ್ನಿನ ಸಾಮಾಜಿಕ ಕಾರ್ಯಕರ್ತ ಹೇಮಂತ್ ಶರ್ಮ ಹೇಳಿದ್ದಾರೆ.
 .
2016: ಬೆಂಗಳೂರು: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಈದಿನ ನಡೆಸಿದ ಉಭಯ ಸದನಗಳ ವಿಶೇಷ ಅಧಿವೇಶನದಲ್ಲಿ ಸೆ.23ರಂದು ಕೈಗೊಂಡಿದ್ದ ನಿರ್ಣಯದಲ್ಲಿ ಬದಲಾವಣೆ ಮಾಡಲಾಯಿತು. ಬದಲಾವಣೆಯ ಪ್ರಕಾರ ಕುಡಿಯುವುದಕ್ಕೆ ಮತ್ತು ರೈತರ ಬೆಳೆಗಳಿಗೂ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಯಿತು. ವಿಧಾನ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲ್ಪಟ್ಟಿತು. ನಿರ್ಣಯ ಅಂಗೀಕಾರವಾದ ಬಳಿಕ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಯಿತು. ವಿಶೇಷ ಅಧಿವೇಶನದಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತಾ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ  ಕುಡಿಯುವ ನೀರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ. ಈಗಾಗಲೇ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ನೀರು ಬಿಡಲಾಗಿದೆ. ರಾಜ್ಯದ ಬೆಳೆಗಳಿಗೆ ಒಟ್ಟು 43 ಟಿಎಂಸಿ ನೀರು ಬೇಕಾಗಿದೆ ಎಂದು ಹೇಳಿದರು. ಕಾವೇರಿ ವಿಚಾರದ ಕುರಿತು ಸುಪ್ರೀಂಕೋರ್ಟಿನಿಂದ 6 ಬಾರಿ ಆದೇಶ ಬಂದಿದೆ. ಸುಪ್ರೀಂಕೋರ್ಟಿನ  ಹಿಂದಿನ ಆದೇಶವನ್ನು ನಾವು ಪಾಲಿಸಿದ್ದೇವೆ. ಆದರೆ ನಮಗೆ ಕೋರ್ಟ್ ವಿಷಯದಲ್ಲಿ ಸಂಘರ್ಷ ಮಾಡಬೇಕೆಂಬ ಬಯಕೆ ಇಲ್ಲ. ಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ. ಈಗ ಇರುವ 34.13 ಟಿಎಂಸಿ ನೀರು ಜೂನ್ ತನಕ ಕುಡಿಯಲು ಸಾಲುತ್ತದೆ. ಸುಪ್ರೀಂಕೋರ್ಟ್ ಆದೇಶದಂತೆ .1ರಿಂದ 6ರವರೆಗೆ ಮತ್ತೆ 36ಸಾವಿರ ಕ್ಯುಸೆಕ್ ನೀರು ಹರಿಯ ಬಿಡುವುದು ಕಷ್ಟವಾಗುತ್ತದೆ ಎಂದರು. ಈಗಾಗಲೇ ಕರ್ನಾಟಕದ ಹಲವಾರು ಜಿಲ್ಲೆಗಳು ನೀರಿಲ್ಲದೆ ಒಣಗುತ್ತಿವೆ. ಆದ್ದರಿಂದ ಹೆಚ್ಚಿನ ನೀರಿಗಾಗಿ ತಮಿಳುನಾಡು ನವೆಂಬರ್ ತಿಂಗಳವರೆಗೆ ಕಾಯಲೇ ಬೇಕು. ವರ್ಷ ನಾವು ತಮಿಳುನಾಡಿಗೆ 53.2 ಟಿಎಂಸಿ ನೀರು ಬಿಟ್ಟಿದ್ದೇವೆ. ಕಾವೇರಿ ಐತೀರ್ಪಿನ ಪ್ರಕಾರ 192 ಟಿಎಂಸಿ ನೀರು ಬಿಡಬೇಕು. 2014 -15ನೇ ಸಾಲಿನಲ್ಲಿ 229 ಟಿಎಂಸಿ ನೀರು ಬಿಟ್ಟಿದ್ದೇವೆ. ಎಲ್ಲಾ ಮುಖ್ಯಮಂತ್ರಿಗಳ ಕಾಲದಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿದೆ. ತಮಿಳುನಾಡಿಗೆ ಬಿಡುವ ನೀರಿನ ಪಾಲು ಕಸಿದುಕೊಳ್ಳುವ ಉದ್ದೇಶವೂ ನಮಗಿಲ್ಲಅದೇ ವೇಳೆ ಪ್ರಕರಣವನ್ನು ನಾರಿಮನ್ ಅವರೇ ವಾದಿಸಲಿದ್ದಾರೆ. ಪ್ರಕರಣದ ಎಲ್ಲ ಮಾಹಿತಿಗಳು ಅವರಿಗೊಬ್ಬರಿಗೇ ಗೊತ್ತಿದೆ. ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
2016: ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿ ಕಡೆಗೂ ಕೇಂದ್ರ ಸರ್ಕಾರ ಕಣ್ಣು ತೆರೆಯಿತು.  ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮರು ಪರಿಶೀಲನೆ ಕೋರಿ ಅಟಾರ್ನಿ ಜನರಲ್ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರಂದು ನೀಡಿದ ಆದೇಶದಲ್ಲಿ . 4ರೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಹೇಳಿತ್ತು. ಇದಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಒಪ್ಪಿಗೆ ಸೂಚಿಸಿದ್ದರು. ಈದಿನ  ಆದೇಶ ಮರು ಪರಿಶೀಲಿಸುವಂತೆ ಕೇಂದ್ರ ಸರ್ಕಾರವೇ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತು. ಅರ್ಜಿಯ ವಿಚಾರಣೆಯನ್ನು ಅ.4ರಂದು ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿತು.

2016: ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶವಾದ ರಾಜಸ್ಥಾನದ ಪೋಕ್ರಾನ್ ನಲ್ಲಿ ತರಬೇತಿ ನಡೆಸುತ್ತಿದ್ದ ವೇಳೆ ಭಾರತೀಯ ವಾಯು ಸೇನೆಯ ಜಾಗ್ವಾರ್ ಯುದ್ದ ವಿಮಾನ ಪತನಗೊಂಡಿತು. ವಿಮಾನ ಪತನಗೊಳ್ಳುತ್ತಿದ್ದಂತೆ ಇಬ್ಬರು ಪೈಲೆಟ್ಗಳು ವಿಮಾನದಿಂದ ಹೊರ ಜಿಗಿದು ಅಪಾಯದಿಂದ ಪಾರಾದರು. ಎಂದು ರಕ್ಷಣಾ ಪಡೆಯ ವಕ್ತಾರ ಲೆ.ಕರ್ನಲ್ ಮನೀಶ್ ಓಜಾ ಹೇಳಿದರು. ಈ ಘಟನೆಯ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಓಜಾ ತಿಳಿಸಿದರು.

2016: ಸ್ವೀಡನ್:  2016ನೇ ಸಾಲಿನ ವೈದ್ಯಕೀಯ ನೊಬೆಲ್ ಪ್ರಶಸ್ತಿ ಪ್ರಕಟಿಸಲಾಯಿತು.  ಜಪಾನಿನ ಒಶಿನೋರಿ ಓಹ್ಸುಮಿ ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು.  ದೇಹ ರಚನಾ ಪದಾರ್ಥಗಳು ಜೀರ್ಣಿಸುವ ಪ್ರಕ್ರಿಯೆ(ಆಟೋಫಗಿ) ವಿಧಾನದ ಕುರಿತಾಗಿ ನಡೆಸಲಾಗಿರುವ ಸಂಶೋಧನೆಗೆ ಪ್ರಶಸ್ತಿ ಸಂದಿತು.  ಏನೀದು 'ಆಟೋಫಗಿ':  ಸ್ವಯಂಭಕ್ಷಣ ಎಂಬುದು ಆಟೋಫಗಿ ಪದದ ನೇರ ಅರ್ಥ. ಜೀವಕೋಶಗಳು ತಮ್ಮಲ್ಲಿನ ಅಂಶಗಳನ್ನು ಮರುಬಳಕೆ ಮಾಡುವ ಪ್ರಕ್ರಿಯೆ ಇದು. ಕೋಶ ಒಳಗಿನ ಪದಾರ್ಥಗಳನ್ನು ಪದರದೊಳಗೆ ಸೇರಿಸಿ, ಅದನ್ನು ಕೋಶದೊಳಗಿನ ಮರುಬಳಕೆ ಕೇಂದ್ರಕ್ಕೆ ರವಾನಿಸುತ್ತದೆ ಎಂಬುದನ್ನು 1960ರಲ್ಲಿಯೇ ವಿಜ್ಞಾನಿಗಳು ಕಂಡುಕೊಂಡಿದ್ದರು. ಈ ರೀತಿಯ ಆಟೋಫಗಿ ಪ್ರಕ್ರಿಯೆ ನಿಯಂತ್ರಿಸಲು ಕಾರಣವಾಗಿರುವ ವಂಶವಾಹಿಗಳ ವರ್ಗವನ್ನು ವಿಜ್ಞಾನಿ ಒಶಿನೋರಿ ಪತ್ತೆ ಮಾಡಿದರು. ಇದರ ಪ್ರಕ್ರಿಯೆ ಗಮನಿಸಿ, ನಂತರ ಮನುಷ್ಯರ ಜೀವಕೋಶಗಳಲ್ಲಿ ಆಗುವ ಪ್ರಕ್ರಿಯಾ ಸೂತ್ರವನ್ನುಓಹ್ನುಮಿ  ವಿವರಿಸಿದ್ದಾರೆ. ಪರಿಚಯ: ಹೆಸರು: ಒಶಿನೋರಿ ಓಹ್ಸುಮಿ
ಜನನ: 1945, ಫೊಕೋಕಾ, ಜಪಾನ್, ಸಂಶೋಧನೆ: ಆಟೋಫಗಿ ಪ್ರಕ್ರಿಯಾ ವಿಧಾನ
2016: ಕೊಲ್ಕತ:  ನ್ಯೂಜಿಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ 178 ರನ್ ಬೃಹತ್ ಅಂತರದ ಗೆಲುವು ಸಾಧಿಸಿದ ವಿರಾಟ್ ಕೋಹ್ಲಿ ಪಡೆ ಪ್ರಸ್ತುತ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಸ್ಥಾನಕ್ಕೇರಿತು. ಭಾರತದ 375 ರನ್ ಗಳ ಸವಾಲಿನ ಮೊತ್ತವನ್ನು ಬೆನ್ನಟ್ಟಿದ  ನ್ಯೂಜಿಲೆಂಡ್ಮೊದಲ ವಿಕೆಟ್ ಗೆ ಅರ್ಧಶತಕದ ಜೊತೆಯಾಟವಾಡಿ ಭಾರತದ ಗೆಲುವಿನಾಸೆಗೆ ಅಡ್ಡಿಯಾಗುವ ಸೂಚನೆ ನೀಡಿತ್ತುಆದರೆ ಪಂದ್ಯದ 17ನೇ ಓವರ್ನಲ್ಲಿ ಬೌಲಿಂಗ್ ದಾಳಿಗಿಳಿದ ಅಶ್ವಿನ್, ಮಾರ್ಟಿನ್ ಗುಪ್ಟಿಲ್ ವಿಕೆಟ್ ಕಬಳಿಸಿ ನ್ಯೂಜಿಲೆಂಡ್ ಗೆ ಮೊದಲ ಆಘಾತ ನೀಡಿದರು. ಬಳಿಕ ಪ್ರವಾಸಿ ತಂಡದ ಆಟಗಾರರಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬರದ ಕಾರಣ ಪಂದ್ಯ ಕೇವಲ ನಾಲ್ಕು ದಿನಗಳಲ್ಲಿ ಮುಕ್ತಾಯವಾಯಿತು. ಆತಿಥೇಯರ ಪ್ರಬಲ ಬೌಲಿಂಗ್ ದಾಳಿಗೆ ನಲುಗಿದ ನ್ಯೂಜಿಲೆಂಡ್ ಅಂತಿಮ ಇನ್ನಿಂಗ್ಸ್ ನಲ್ಲಿ ಕೇವಲ 197ರನ್ ಗಳಿಗೆ ಆಲ್ಔಟ್ ಆಗುವುದರೊಂದಿಗೆ ಸತತ ಎರಡನೇ ಪಂದ್ಯದಲ್ಲಿಯೂ ಸೋಲಿಗೆ ಶರಣಾಯಿತು. ಆರಂಭಿಕ ಆಟಗಾರ ಟಾಮ್ ಲಾಥಮ್(74) ಆಟ ವ್ಯರ್ಥವಾಯಿತು. ಭಾರತದ ಪರ ಆರ್ ಅಶ್ವಿನ್, ಮೊಹಮ್ಮದ್ ಶಮಿ ಹಾಗೂ ರವೀಂದ್ರ ಜಡೇಜ ತಲಾ 3 ವಿಕೆಟ್ ಗಳಿಸಿ ಮಿಂಚಿದರು. ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕದೊಂದಿಗೆ ಅಜೇಯ(54, 58) ಆಟವಾಡಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ  ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
2016: ಜಮ್ಮು: ಪಾಕ್ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿಯನ್ನು ತೀವ್ರಗೊಳಿಸಿ, ಒಂದೇ ದಿನ ಐದು ಬಾರಿ ಕದನ ವಿರಾಮ ಉಲ್ಲಂಘಿಸಿದರು.  ಬಿಎಸ್ಎಫ್ ಪೋಸ್ಟ್ಗಳು ಮತ್ತು ಗ್ರಾಮಗಳ ಮೇಲೆ ಮೋರ್ಟರ್ ಶೆಲ್ಗಳು ಮತ್ತು ಗುಂಡಿನ ದಾಳಿ ನಡೆಯಿತು. ಪಾಕ್ ಸೈನಿಕರು ಪೂಂಚ್ ಜಿಲ್ಲೆಯ ಶಹಾಪುರ, ಕೃಷ್ಣಗಂಟಿ, ಮಂಡಿ ಮತ್ತು ಸಾಬಿಜೈನ್ ಸೆಕ್ಟರ್ಗಳಲ್ಲಿ ಗುಂಡಿನ ಮತ್ತು ಶೆಲ್ ದಾಳಿ ನಡೆಸಿದರು. ದಾಳಿಯಲ್ಲಿ ಇಬ್ಬರು ನಾಗರಿಕರಿಗೆ ಗಾಯಗಳಾದವು. ಭಾರತೀಯ ಸೈನಿಕರು ಪಾಕ್ ದಾಳಿಗೆ ತಕ್ಕ ಪ್ರತ್ತುತ್ತರ ನೀಡಿದರು.

2016: ಶ್ರೀನಗರ
: ಬಾರಾಮುಲ್ಲಾ ಪಟ್ಟಣದ ಹೊರವಲಯದಲ್ಲಿರುವ ಸೇನಾ ಶಿಬಿರದ ಮೇಲೆ
ಭಯೋತ್ಪಾದಕರು ಹಿಂದಿನ ದಿನ ರಾತ್ರಿ (ಅ.2) ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಬಿಎಸ್ಎಫ್ ಯೋಧ ನಿತಿನ್ಹುತಾತ್ಮರಾದರು. ರಾತ್ರಿ 10.30 ಬಳಿಕ ಉಗ್ರರು ದಾಳಿ ನಡೆಸಿದ್ದು, ಸಂದರ್ಭದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗಾಯಗೊಂಡಿದ್ದ ಬಿಎಸ್ಎಫ್ ಇಬ್ಬರು ಯೋಧರ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಬಾರಾಮುಲ್ಲಾದ ಜಬೆಂಜ್ಪುರದಲ್ಲಿರುವ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿರುವುದನ್ನು ಸೇನಾ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಖಚಿತಪಡಿಸಿದರು. ಮೂಲಗಳ ಪ್ರಕಾರ, 46ನೇ ರಾಷ್ಟ್ರೀಯ ರೈಫಲ್ಸ್ ಸೈನಿಕರು ಹಾಗೂ ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆಯಿತು. ಶಿಬಿರದ ಸಮೀಪದ ಮನೆಗಳಿಂದಲೂ ಗುಂಡಿನ ಸದ್ದು ಕೇಳಿಸಿತು ಎಂದು ಮೂಲಗಳು ತಿಳಿಸಿದವು.

2016: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ವರದಿ ಮತ್ತು ಅವರ ಫೋಟೊ  ಬಹಿರಂಗ ಪಡಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮದ್ರಾಸ್ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಜಯಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಹಲವಾರು ವದಂತಿಗಳು ಕೇಳಿ ಬರುತ್ತಿವೆ. ಆದ್ದರಿಂದ ಜಯಾ ಅವರ ಆರೋಗ್ಯ ಹೇಗಿದೆ? ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಯಾ ಅವರು ತಮ್ಮ ಸಚಿವ ಸಂಪುಟದ ಸದಸ್ಯರನ್ನು ಭೇಟಿಯಾಗಿದ್ದಾರೆಯೇ? ಅವರು ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ? ಮಾಹಿತಿಗಳನ್ನು ಬಹಿರಂಗ ಪಡಿಸಲು ನಿರ್ದೇಶಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ 'ಟ್ರಾಫಿಕ್' ರಾಮಸ್ವಾಮಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ರಾಜ್ಯಪಾಲ ಸಿ. ವಿದ್ಯಾಸಾಗರ್ ರಾವ್ ಮತ್ತು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಜಯಲಲಿತಾ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇವರು ಜಯಾ ಅವರ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಯಿತು.
2016: ನವದೆಹಲಿ: ಸದಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್  ಮುಕ್ತಕಂಠದಿಂದ ಶ್ಲಾಘಿಸಿದರು. ಪಿಓಕೆಯಲ್ಲಿ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯಿಂದ ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನೆಯಾಗಿದೆ. ಮೋದಿ ಅವರ ನಿರ್ಧಾರಕ್ಕೆ ನಾನು ಶಿರಬಾಗಿಸುವೆ ಎಂದು ವಿಡಿಯೋ ಸಂದೇಶ  ಒಂದರಲ್ಲಿ ತಿಳಿಸಿದರು.
ಮೋದಿಜೀ ಮತ್ತು ನನ್ನ ವಿಚಾರಧಾರೆಗಳ ನಡುವೆ ಹಲವು ಭಿನ್ನಾಭಿಪ್ರಾಯವಿದೆ. ಆದರೆ ಪಾಕ್ ವಿರುದ್ಧ ಪ್ರಧಾನಿಯವರು ಕೈಗೊಂಡ ತೀರ್ಮಾನ ಮಾತ್ರ ನಿಜಕ್ಕೂ ಪ್ರಶಂಸಾರ್ಹ. ತುಂಬಾ ಜಾಣ್ಮೆಯಿಂದ ಮೋದಿ ಅವರು ಕಾರ್ಯ ಕೈಗೊಂಡಿದ್ದಾರೆ. ವಿಚಾರವಾಗಿ ಪ್ರಧಾನಿ ಅವರಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು. ಸೀಮಿತ ದಾಳಿ ನಡೆದೇ ಇಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ತನ್ನ ಮೊಂಡುತನವನ್ನು ಮುಂದುವರೆಸುವುದರಲ್ಲಿ ಯಾವುದೇ ಹುರುಳಿಲ್ಲ. ಭಾರತದ ಶಕ್ತಿ, ಸಾಮರ್ಥ್ಯಕ್ಕೆ ಹೆದರಿದ ಪಾಕ್, ಯಾವುದೇ ರೀತಿ ದಾಳಿ ನಡೆದಿಲ್ಲ ಎಂದು ಸುಳ್ಳಿನ ಸರಮಾಲೆಯನ್ನು ಹೆಣೆಯುತ್ತಿದೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ಮುಜುಗರ ಅನುಭವಿಸಿದ ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಭಾರತ ತಕ್ಕ ಪಾಠ ಕಲಿಸಲಿದೆ ಎಂದು ಕೇಜ್ರಿವಾಲ್ ತಿಳಿಸಿದರು.
2016: ಅಡೀಸ್ ಅಬಾಬ: ವಾರ್ಷಿಕ ಧಾರ್ವಿುಕ ಆಚರಣೆಯ ವೇಳೆ ಸರ್ಕಾರದ ವಿರುದ್ಧ ಪ್ರತಿಭಟಿಸಿ, ಘೊಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದಾಗ ಕಾಲ್ತುಳಿತ ಸಂಭವಿಸಿ 52ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ಇಥಿಯೋಪಿಯಾದ ಒರೋಮಿಯಾ ಪ್ರಾಂತ್ಯದಲ್ಲಿ ಘಟಿಸಿತು. ಕೆಲ ಗುಂಪು ವಿರೋಧಿಗಳು ಧ್ವಜ ಹಾರಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿರುವುದರಿಂದ ಘಟನೆ ಘಟಿಸಿತು ಎನ್ನಲಾಗಿದೆ. ಅಲ್ಲದೇ, ವರ್ಷಬೇಧ ನಿಂದನೆಯೂ ಘಟನೆಗೆ ಕಾರಣ ಎಂದೂ ಹೇಳಲಾಯಿತು. 2015ರಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಗಲಭೆಯಲ್ಲಿ ಸಾಕಷ್ಟ ಮಂದಿ ಸಾವನ್ನಪ್ಪಿದ್ದದ್ದರು.

2016: ನವದೆಹಲಿ: ಕಿವೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಸ್ಥಾನಕ್ಕೆ ಕನ್ನಡಿಗ ಕರಣ್ ನಾಯರ್ ಆಯ್ಕೆಯಾದರು. ಶಿಖರ್ ಧವನ್ ಅವರ ಎಡ ಕೈಗೆ ಗಾಯವಾಗಿದೆ. ಹತ್ತರಿಂದ ಹದಿನೈದು ದಿನ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಆದ್ದರಿಂದ ಮೂರನೇ ಟೆಸ್ಟ್ ಪಂದ್ಯಕ್ಕೆ ಕರಣ್ ನಾಯರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದರು. ಕರಣ್ ರಣಜಿ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2015-16ರಲ್ಲಿ ಐವತ್ತರ ಸರಾಸರಿಯಲ್ಲಿ 500 ರನ್ ಸಿಡಿಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡಿದ್ದ ಕೆ.ಎಲ್. ರಾಹುಲ್ ಸ್ಥಾನಕ್ಕೆ ಗೌತಮ್ ಗಂಭೀರ್ ಆಯ್ಕೆಯಾಗಿದ್ದರು.

1844: ಸೊಳ್ಳೆಗಳಿಂದಾಗಿ ಖ್ಯಾತಿ ಪಡೆದ ಇಬ್ಬರು ಗಣ್ಯರ ಜನ್ಮದಿನವಿದು. 1844 ಈದಿನ ಸರ್ ಪ್ಯಾಟ್ರಿಕ್ ಮ್ಯಾನ್ಸನ್ (1844-1922) ಜನ್ಮದಿನ. ಫೈಲೇರಿಯಾಸಿಸ್ಸಿಗೆ ಕಾರಣವಾಗುವ ಪರಾವಲಂಬಿ ಸೂಕ್ಷ್ಮಾಣುಗಳನ್ನು ಹರಡಲು ಸೊಳ್ಳೆಗಳು ನೆರವಾಗುತ್ತವೆ ಎಂಬುದನ್ನು ಮೊದಲ ಬಾರಿಗೆ ಕಂಡು ಹಿಡಿದ ಬ್ರಿಟಿಷ್ ಸಂಶೋಧಕನೀತ. ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತದೆ ಎಂದು ಹೇಳಿದ ಸರ್ ರೊನಾಲ್ಡ್ ರೋಸ್ ಅವರ ಶೋಧನೆಗೆ ಪ್ಯಾಟ್ರಿಕ್ ಮ್ಯಾನ್ಸನ್ ಅವರ ಸಂಶೋಧನೆಯೇ ಮೂಲ. ಹಳದಿ ಜ್ವರ ಮತ್ತು ಮಲೇರಿಯಾವನ್ನು ತಡೆಯಲು ಸೊಳ್ಳೆ ನಿಯಂತ್ರಣವನ್ನು ಅನುಷ್ಠಾನಕ್ಕೆ ತರುವ ಮೂಲಕ ಪನಾಮಾ ಕಾಲುವೆ ನಿರ್ಮಾಣಕ್ಕೆ ಮಹಾನ್ ಕಾಣಿಕೆ ಸಲ್ಲಿಸಿದ ಅಮೆರಿಕದ ಸೇನಾ ಸರ್ಜನ್ ವಿಲಿಯಂ ಕ್ರಾಫರ್ಡ್ ಗಾರ್ಗಸ್ (1854-1920) ಅವರ ಜನ್ಮದಿನ ಕೂಡಾ

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನಿನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾರತಡಬ್ಬಲ್ ಸ್ವಣ ಪದಕಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಭಾರತದ ಮಹಿಳೆಯರ ತಂಡ ಮೊದಲಿಗೆ ಇರಾನಿನ ಮಹಿಳಾ ತಂಡವನ್ನು ಪರಾಭವಗೊಳಿಸುವ ಮೂಲಕ ಭಾರತದ ಮಹಿಳಾ ಕಬಡ್ಡಿ ತಂಡವು ಸತತ ಎರಡನೇ ಬಾರಿಗೆ ಏಷ್ಯಾಡ್ ಕಬಡ್ಡಿ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. 31-21 ಅಂಕಗಳ ಅಂತರದೊಂದಿಗೆ ಪದಕ ಭಾರತೀಯ ಮಹಿಳೆಯರ ಪಾಲಾಯಿತು. ದಿನದ ಆರಂಭದಲ್ಲಿ ಭಾರತ ಮಹಿಳೆಯರ ಮೂಲಕ ಗೆಲುವು ಪಡೆದರೆ ಬಳಿಕ ಪುರುಷರ ಮೂಲಕವೂ ಕಬಡ್ಡಿ ಪಂದ್ಯದಲ್ಲಿ ಸತತ 7ನೇ ಬಾರಿಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿತು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನಿನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಕಬಡ್ಡಿ ತಂಡವು ಸತತ 7ನೇ ಬಾರಿಗೆ ಸ್ವರ್ಣ ಪದಕವನ್ನು ಗೆದ್ದುಕೊಂಡಿತು. ಭಾರತದ ತಂಡವು ಬಿರುಸಿನ ಸ್ಪರ್ಧೆಯಲ್ಲಿ 27-25 ಅಂಕಗಳ ಅಂತರದಲ್ಲಿ ಭಾರಿ ಹೋರಾಟ ನೀಡಿದ ಇರಾನ್ ತಂಡವನ್ನು ಪರಾಭವಗೊಳಿಸಿ ಚಿನ್ನದ ಪದಕವನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಏಷ್ಯನ್ ಕ್ರೀಡಾಕೂಟಕ್ಕೆ 1990ರಲ್ಲಿ ಕಬಡ್ಡಿಯನ್ನು ಸೇರ್ಪಡೆ ಮಾಡಿದ ಲಾಗಾಯ್ತಿನಿಂದಲೂ ಭಾರತವು ಚಿನ್ನದ ಪದಕವನ್ನು ಗೆಲ್ಲುತ್ತಲೇ ಬಂದಿತ್ತು. ಇಂಚೋನ್ ಸ್ಪರ್ಧೆಯಲ್ಲಿ ಮೊದಲ 20 ನಿಮಿಷಗಳಲ್ಲಿ 10 ಅಂಕಗಳ ಭಾರಿ ಮುನ್ನಡೆ ಸಾಧಿಸಿದ ಇರಾನ್ ಭಾರತವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಪಂದ್ಯದ 37ನೇ ನಿಮಿಷದಲ್ಲಷ್ಟೇ ಭಾರತೀಯ ತಂಡಕ್ಕೆ ಇರಾನ್ ವಿರುದ್ಧ ಮುನ್ನಡೆ ಸಾಧಿಸಲು ಸಾಧ್ಯವಾಯಿತು.

2014: ನವದೆಹಲಿ: ತಾವು ಇನ್ನುಮುಂದೆ ನಿಯಮಿತವಾಗಿ ಆಕಾಶವಾಣಿ / ರೇಡಿಯೋ ಮೂಲಕ ಜನತೆಯೊಂದಿಗೆ ಸಂವಹನ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದರು. ಅಖಿಲ ಭಾರತ ಆಕಾಶವಾಣಿ ಮೂಲಕ ಈದಿನ  11 ಗಂಟೆಗೆ ತಮ್ಮ ಚೊಚ್ಚಲ ಮನದಾಳದ ಮಾತು ಆಡಿದ ಅವರು, ಸಾಮಾನ್ಯವಾಗಿ ಸಂವಹನವನ್ನು ಪ್ರತಿ ಭಾನುವಾರ ಮುಂಜಾನೆ 11 ಗಂಟೆಗೇ ಇಟ್ಟುಕೊಳ್ಳುವುದಾಗಿ ಹೇಳಿದರು. ಕೊಳಕಿನ ವಿರುದ್ಧ ವಿಜಯ ಸಾಧಿಸಲು ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಜನತೆಗೆ ಪುನಃ ಮನವಿ ಮಾಡಿದ ಪ್ರಧಾನಿ, ವಿಜಯದಶಮಿಯು ನಮಗೆ ಸುತ್ತಮುತ್ತಣ ಕೊಳಕಿನ ಮೇಲೆ ವಿಜಯ ತಂದುಕೊಡಲಿ ಎಂದು ಹಾರೈಸಿದರು.  ಜನತೆಗೆ ವಿಜಯದಶಮಿಯ ಶುಭ ಸಂದೇಶ ನೀಡಲು ಅವರು ಬಾನುಲಿ ಭಾಷಣದ ಅವಕಾಶವನ್ನು ಬಳಸಿಕೊಂಡರು. ಕೊಳಕು ನಿರ್ಮೂಲನೆಗೆ ಪ್ರತಿಜ್ಞೆ ಮಾಡೋಣ. ನಿನ್ನೆ (.2 ಗಾಂಧಿ ಜಯಂತಿಯ ದಿನ) ನಾವು ಸ್ವಚ್ಛ ಭಾರತ ಅಭಿಯಾನವನ್ನು ಆರಂಭಿಸಿದ್ದೇವೆ. ನೀವೆಲ್ಲರೂ ಅಭಿಯಾನದಲ್ಲಿ ಸೇರಿಕೊಳ್ಳಬೇಕು ಎಂದು ನಾನು ಬಯಸುವೆ ಎಂದು ಪ್ರಧಾನಿ ನುಡಿದರು. ಸ್ವಚ್ಛ ಭಾರತ ಅಭಿಯಾನಕ್ಕೆ ಗಾಂಧಿಜಯಂತಿಯ ದಿನ ಚಾಲನೆ ನೀಡಿದ್ದ ಪ್ರಧಾನಿ ವಾರದಲ್ಲಿ ಎರಡು ಗಂಟೆಗಳನ್ನು ರಾಷ್ಟ್ರದ ಸ್ವಚ್ಛತೆಗಾಗಿ ಮೀಸಲಿಡುವುದಾಗಿ ಲಕ್ಷಾಂತರ ಜನರಿಂದ ಪ್ರತಿಜ್ಞೆ ಮಾಡಿಸಿದ್ದರು. ಬಡ ಕುಟುಂಬಗಳ ಅನುಕೂಲಕ್ಕಾಗಿ ಕೆಲವಾದರೂ ಖಾದಿ ಉಡುಪುಗಳನ್ನು ಖರೀದಿಸಿ. ಬೆಡ್ ಶೀಟ್ ಇರಬಹುದು, ಕರವಸ್ತ್ರ ಇರಬಹುದು ಅಥವಾ ಬೇರೇನಾದರೂ ಇರಬಹುದು. ನೀವು ಒಂದು ವಸ್ತುವನ್ನು ಖರೀದಿಸಿದರೆ ಅದು ಒಂದು ಬಡ ಕುಟುಂಬದಲ್ಲಿ ಜ್ಯೋತಿಯನ್ನು ಬೆಳಗುತ್ತದೆ. ಹಬ್ಬದ ದಿನಗಳಲ್ಲಿ ಜನರ ಅನುಕೂಲಕ್ಕಾಗಿ ಖಾದಿ ಗ್ರಾಮೋದ್ಯೋಗ ಸಂಘಗಳು ಖಾದಿ ಬಟ್ಟೆಗಳಿಗೆ ರಿಯಾಯ್ತಿಯನ್ನೂ ನೀಡುತ್ತವೆ ಎಂದು ಪ್ರಧಾನಿ ಮನ್ ಕೀ ಬಾತ್ (ಮನದಾಳದ ಮಾತು) ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದರು.

2008: ಬಾಂಬ್ ಸ್ಫೋಟ ಸಹಿತ ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಸಂಘಟನೆಗೆ ಸೇರಿದ ನಾಲ್ವರನ್ನು ಮಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಈದಿನ ಬೆಳಿಗ್ಗೆ 3 ಗಂಟೆ ಸುಮಾರಿಗೆ ಮುಂಬೈ ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳದ ನೆರವಿನಿಂದ ಡಿಢೀರ್ ದಾಳಿ ನಡೆಸಿ ದಕ್ಷಿಣ ಕನ್ನಡ ಪೊಲೀಸರ ತಂಡ ಬಂಧಿಸಿತು. ಅವರಿಂದ ಹಲವಾರು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಯಿತು. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಆಲಿ (56), ಆತನ ಪುತ್ರ ಜಾವೆದ್ ಆಲಿ (20), ಮಂಗಳೂರಿನ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಸುಭಾಶ್ ನಗರದ ನೌಷಾದ್ (25) ಮತ್ತು ಮೂಲ್ಕಿ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಅಹಮ್ಮದ್ ಬಾವ (33) ಬಂಧಿತರು..

2008: ಕರ್ನಾಟಕದ ಗುಲ್ಬರ್ಗ ಸೇರಿದಂತೆ ದೇಶದಲ್ಲಿ ಒಟ್ಟು 12 ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಹಾಗೂ ಮದರಸಾಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ರೂಪಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 12 ಕೇಂದ್ರೀಯ ವಿವಿಗಳ ಸ್ಥಾಪನೆಯ ಜತೆಗೆ ಈಗಿರುವ ನಾಲ್ಕು ರಾಜ್ಯ ವಿಶ್ವವಿದ್ಯಾಲಯಗಳನ್ನು ಕೇಂದ್ರೀಯ ವಿಶ್ವವಿದ್ಯಾಲಯಗಳಾಗಿ ಮೇಲ್ದರ್ಜೆಗೆ ಏರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಭೆಯ ಬಳಿಕ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ತಿಳಿಸಿದರು. ಕರ್ನಾಟಕವಲ್ಲದೆ, ಬಿಹಾರ, ಜಾರ್ಖಂಡ್, ಒರಿಸ್ಸಾ, ಗುಜರಾತ್, ಹರಿಯಾಣ, ಪಂಜಾಬ್, ರಾಜಸ್ಥಾನ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕೇರಳ ಹಾಗೂ ತಮಿಳುನಾಡುಗಳಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಲಿವೆ.

2008: ಪಶ್ಚಿಮ ಬಂಗಾಳದ ಸಿಂಗೂರಿನಿಂದ `ನ್ಯಾನೊ' ಸಣ್ಣ ಕಾರು ಯೋಜನೆಯನ್ನು ತಮ್ಮ ಕಂಪೆನಿ ಹಿಂತೆಗೆದುಕೊಳ್ಳುತ್ತಿರುವುದಾಗಿ ಟಾಟಾ ಗ್ರೂಪ್ ಅಧ್ಯಕ್ಷ ರತನ್ ಟಾಟಾ ಪ್ರಕಟಿಸಿದರು. ಯೋಜನೆಗೆ ನಿರಂತರವಾಗಿ ಮುಂದುವರಿದ ರಾಜಕೀಯ ವಿರೋಧದ ಕಾರಣ ಇದು ಅನಿವಾರ್ಯ, ರಾಜ್ಯದಲ್ಲಿ ದುರ್ಗಾಪೂಜೆ ಹಬ್ಬದ ಸಡಗರದ ಸಂದರ್ಭದಲ್ಲೇ ನಿರ್ಧಾರ ಮಾಡಬೇಕಾಗಿರುವುದೂ ದುರದೃಷ್ಟಕರ. ಆದರೆ ವಿಶ್ವದಾದ್ಯಂತ ಗಮನ ಸೆಳೆದಿರುವ ಯೋಜನೆ ಜಾರಿಯ ಗಡುವನ್ನು ತಾವು ಪೂರೈಸಲೇ ಬೇಕಿದೆ ಎಂದು ಅವರು ತಿಳಿಸಿದರು.. ಒಂದು ಲಕ್ಷ ರೂಪಾಯಿಯ ವಿಶ್ವದ ಅತಿ ಅಗ್ಗದ ಕಾರು ನ್ಯಾನೊ, ಪ್ರಕಟಿಸಿರುವ ಸಮಯಕ್ಕೆ ಸರಿಯಾಗಿ ಬಿಡುಗಡೆಯಾಗಲಿದೆ ಎಂಬ ಆಶ್ವಾಸನೆಯನ್ನೂ ಟಾಟಾ ಪುನರುಚ್ಚರಿಸಿದರು.

2008: ಕೆನೆ ಪದರಕ್ಕೆ ಸೇರುವ ಇತರೆ ಹಿಂದುಳಿದ ವರ್ಗದವರ ವಾರ್ಷಿಕ ಆದಾಯ ಮಿತಿಯನ್ನು 2.5 ಲಕ್ಷ ರೂಪಾಯಿಗಳಿಂದ 4.5 ಲಕ್ಷಕ್ಕೆ ಏರಿಸಲು ಕೇಂದ್ರ ಸಕರ್ಾರ ನಿರ್ಧರಿಸಿತು. ಇದರಿಂದಾಗಿ ಮೀಸಲಾತಿ ವಲಯದಲ್ಲಿ ಇತರೆ ಹಿಂದುಳಿದ ವರ್ಗಗಳ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಲು ಅವಕಾಶ ಕಲ್ಪಿಸಿದಂತಾಯಿತು.. ಕೇಂದ್ರ ಸಚಿವ ಸಂಪುಟದ ಸಭೆ ಮಹತ್ವದ ನಿರ್ಧಾರ ಕೈಗೊಂಡಿತು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಶಿಫಾರಸಿನ ಮೇರೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಪ್ರಸ್ತಾವವನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿತು.

2007: ಫ್ರೆಂಚ್ ಕಲಾವಿದ ಲೂಯಿಸ್ ಬೋರ್ಜಿಯಾಸ್ ಅವರು ಹಿತ್ತಾಳೆ, ಉಕ್ಕು ಮತ್ತು ಅಮೃತಶಿಲೆಯಿಂದ ನಿರ್ಮಿಸಿದ 9 ಮೀಟರ್ ಎತ್ತರದ ಬೃಹತ್ ಜೇಡ ಕಲಾಕೃತಿಯನ್ನು ಲಂಡನ್ನಿನ ಸೇಂಟ್ ಪಾಲ್ ಇಗರ್ಜಿ (ಚರ್ಚ್) ಮುಂಭಾಗದಲ್ಲಿ ಸ್ಥಾಪಿಸಲಾಯಿತು.

2007: ಸುಮಾರು 13 ವರ್ಷಗಳ ಹಿಂದೆ ಸಂಭವಿಸಿದ ಗೋಪಾಲಗಂಜ್ ಜಿಲ್ಲಾಧಿಕಾರಿ ಎಂ.ಜಿ.ಕೃಷ್ಣಯ್ಯ ಕೊಲೆ ಪ್ರಕರಣದ ತೀರ್ಪು ಕೊನೆಗೂ ಹೊರಬಿದ್ದಿತು. ಪ್ರಕರಣದ ಪ್ರಮುಖ ಆರೋಪಿ ಮಾಜಿ ಸಂಸದ ಆನಂದ ಮೋಹನ್ ಮತ್ತು ಆತನ ಇಬ್ಬರು ಸಹವರ್ತಿಗಳಾದ ಅಖ್ಲಾಖ್ ಅಹ್ಮದ್ ಮತ್ತು ಅರುಣ್ ಕುಮಾರ್ ಅವರಿಗೆ ಪಟ್ನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿತು. ಇದೇ ಪ್ರಕರಣದಲ್ಲಿ ಆನಂದ ಮೋಹನನ ಅರ್ಧಾಂಗಿ ಲವ್ಲಿ ಆನಂದ್ (ಇವರೂ ಸಂಸತ್ ಸದಸ್ಯರಾಗಿದ್ದರು), ಆಡಳಿತಾರೂಢ ಜೆಡಿ(ಯು) ಶಾಸಕ ಮುನ್ನಾ ಶುಕ್ಲಾ ಮತ್ತು ಇನ್ನಿಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಎಲ್ಲ ಏಳೂ ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ 302, 307, 147, 427 ಅನ್ವಯ ಶಿಕ್ಷೆ ವಿಧಿಸಿರುವುದಾಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಆರ್. ಎಸ್. ರಾಯ್ ಹೇಳಿದರು. ಇದೇ ಪ್ರಕರಣದ ಆರೋಪಿಗಳಾಗಿದ್ದ ಇತರ 29 ಮಂದಿಯನ್ನು ನ್ಯಾಯಾಲಯವು ಮೊದಲು ಖುಲಾಸೆಗೊಳಿಸಿತ್ತು. ಆನಂದ ಮೋಹನ್ ಅವರ ಬಿಹಾರ ಪೀಟಲ್ಸ್ ಪಾರ್ಟಿಯ ಮುಖಂಡನಾಗಿದ್ದ ಭೂಗತ ಲೋಕದ ಪಾತಕಿ ಚೋಟನ್ ಶುಕ್ಲನ ಶವಯಾತ್ರೆ ವೇಳೆ ಜನರ ಗುಂಪೊಂದು ಹಾಜಿಪುರದಲ್ಲಿ ಸಭೆಯೊಂದನ್ನು ಮುಗಿಸಿ ಮಾರ್ಗವಾಗಿ ಬರುತ್ತಿದ್ದ ಕೃಷ್ಣಯ್ಯ ಅವರನ್ನು ಕಾರಿನಿಂದ ಹೊರಗೆಳೆದು ಕೊಲೆ ಮಾಡಿತ್ತು.

2007: ಕರಾಚಿಯಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ದಕ್ಚಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ಬ್ಯಾಟ್ಸ್ ಮನ್ನರನ್ನು ಬಲಿ ಪಡೆದು (369) ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನದ ಉಮರ್ ಗುಲ್ ಅವರನ್ನು ಸ್ಟಂಪ್ ಮಾಡುವ ಮೂಲಕ ಅವರು ಆಸ್ಟ್ರೇಲಿಯಾದ ಇಯಾನ್ ಹೀಲಿ ಅವರ ದಾಖಲೆ (395) ಮುರಿದರು.

2007: ಉತ್ತರ ಪ್ರದೇಶದ ಮೊಘಲ್ ಸರಾಯಿಯ ರೈಲು ನಿಲ್ದಾಣದಲ್ಲಿ ಒಂದೇ ಕಾಲಕ್ಕೆ ಮೂರು ರೈಲುಗಳ ಬಂದ ಪರಿಣಾಮವಾಗಿ ಮೇಲ್ಸೇತುವೆಯಲ್ಲಿ ಜನದಟ್ಟಣೆ ಉಂಟಾಗಿ ಸಂಭವಿಸಿದ ಕಾಲ್ತುಳಿತಕ್ಕೆ ಸಿಕ್ಕಿ ಕನಿಷ್ಠ 13 ಮಹಿಳೆಯರು ಮೃತರಾಗಿ 48 ಜನ ಗಾಯಗೊಂಡರು. ಇವರಲ್ಲಿ ಹೆಚ್ಚಿನವರು ಬಿಹಾರದ ಭೋಜಪುರ ಹಾಗೂ ಹುಕ್ಸಾರ್ ಜಿಲ್ಲೆಯವರು. ಇವರೆಲ್ಲರೂ `ಜೂಟಿಯಾ' ಮಹೋತ್ಸವ ವೀಕ್ಷಿಸಲು ವಾರಣಾಸಿಗೆ ಹೊರಟಿದ್ದರು.

2007: ಎಡಪಂಥೀಯ ಬರಹಗಾರ ಎಂ.ಎನ್. ವಿಜಯನ್ (77) ಕೇರಳದ ತ್ರಿಶ್ಶೂರಿನ ಪ್ರೆಸ್ ಕ್ಲಬ್ಬಿನಲ್ಲಿ ಪ್ರಜ್ಞೆತಪ್ಪಿ ಬಿದ್ದು ಮೃತರಾದರು. ಕೆಲ ವರ್ಷಗಳ ಹಿಂದೆ ವಿದೇಶಿ ನಿಧಿ ಹೆಸರಿನಲ್ಲಿ ಸಿಪಿಎಂ ಹಿರಿಯ ನಾಯಕರು ಲಂಚ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದ ಅವರು ನಂತರ ಪಕ್ಷದ ಸಂಪರ್ಕದಿಂದ ದೂರ ಉಳಿದಿದ್ದರು. ಹಲವು ವರ್ಷಗಳ ಕಾಲ ಕಾಲ ಸಿಪಿಎಂನ ವಾರಪತ್ರಿಕೆ `ದೇಶಾಭಿಮಾನಿ' ಸಂಪಾದಕರಾಗಿದ್ದ ವಿಜಯನ್, ತಾವು ಬರೆದ ಲೇಖನವೊಂದರ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಖುಲಾಸೆಯಾಗಿದ್ದರು.

2007: ವೈವಿಧ್ಯಮಯ ಸರಕುಗಳ ಬೃಹತ್ ಮಾರಾಟ ಮಳಿಗೆಯ (ಶಾಪಿಂಗ್ ಮಾಲ್) ಸಹಯೋಗದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆಗೆ ತರುವ, ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನಕ್ಕೆ ಬೆಂಗಳೂರಿನ ಫೋರಮ್ ಮಾಲ್ ವೇದಿಕೆಯಾಯಿತು. ಫೋರಮ್ ಮಾಲ್ ಪ್ರವರ್ತಕ ಸಂಸ್ಥೆ ಪ್ರೆಸ್ಟೀಜ್ ಗ್ರೂಪ್, ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಜಾರಿಗೆ ತಂದ `ಐಸಿಐಸಿಐ ಬ್ಯಾಂಕ್ ಫೋರಮ್ ಕ್ರೆಡಿಟ್ ಕಾರ್ಡಿಗೆ' ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು.

2007: ತೆಂಗಿನ ನಾರು ಉತ್ಪನ್ನಗಳ ದೇಶಿ ಮಾರುಕಟ್ಟೆ ಅಭಿವೃದ್ಧಿ ಮತ್ತು ರಫ್ತಿನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಕ್ಕಾಗಿ ಕರ್ಲಾನ್ ಲಿಮಿಟೆಡ್ ಸಂಸ್ಥೆಗೆ ಕೇಂದ್ರ ಸರ್ಕಾರದ ತೆಂಗಿನ ನಾರು ಮಂಡಳಿಯು ಎರಡು ಪ್ರಶಸ್ತಿಗಳನು ನೀಡಿತು. ಕೇಂದ್ರದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮಹಾವೀರ ಪ್ರಸಾದ್ ಅವರು ನವದೆಹಲಿಯಲ್ಲಿ ನಡೆದ ತೆಂಗಿನ ನಾರು ಮಂಡಳಿ ಉತ್ಸವದಲ್ಲಿ ಪ್ರಶಸ್ತಿ ವಿತರಿಸಿದರು. ದೇಶದ ಅತಿದೊಡ್ಡ ಹಾಸಿಗೆ ತಯಾರಿಕೆ ಸಂಸ್ಥೆ ಎಂದೇ ಜನಪ್ರಿಯಗೊಂಡಿರುವ ಕರ್ಲಾನ್, ಈಗ ಮೆತ್ತನೆಯ ಪೀಠೋಪಕರಣ, ಬೆಡ್ ಶೀಟುಗಳು, ಟವೆಲ್, ಪರದೆ ಮತ್ತಿತರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದೆ.

2007: ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿದ್ದ ಕೇಂದ್ರ ಭೂ ಸಾರಿಗೆ ಮತ್ತು ನೌಕಾಯಾನ ಸಚಿವ ಟಿ.ಆರ್. ಬಾಲು ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಬೇಕೆಂದು ಕೋರಿ ಮದ್ರಾಸ್ ಹೈಕೋರ್ಟಿಗೆ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು. ವಕೀಲ ಆರ್. ಬಾಲಸುಬ್ರಮಣಿಯನ್ ಅವರು ಸಲ್ಲಿಸಿದ ಮನವಿಗಳ ಪೈಕಿ ಒಂದರಲ್ಲಿ ಸೇತುಸಮುದ್ರಂ ಯೋಜನೆಗೆ ಸಂಬಂಧಿಸಿದಂತೆ ಉಪವಾಸ ಸತ್ಯಾಗ್ರಹ ನಡೆಸಿದ ಟಿ.ಆರ್.ಬಾಲು ಅವರನ್ನು ಕೇಂದ್ರ ಸಂಪುಟದಿಂದ ವಜಾ ಮಾಡಲು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಬೇಕೆಂದು ಪ್ರಧಾನಿಗೆ ಸೂಚಿಸುವಂತೆ ಕೋರಲಾಯಿತು. ಮತ್ತೊಂದರಲ್ಲಿ ಉಪವಾಸ ಸತ್ಯಾಗ್ರಹದ ವೇಳೆ ನ್ಯಾಯಾಂಗ ನಿಂದನೆ ಮಾಡಿರುವ ಬಾಲು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಾಲಸುಬ್ರ್ರಮಣಿಯನ್ ಕೋರಿದರು.

2006: ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಬಾನ್ ಕಿ-ಮೂನ್ ಅವರು ನಾಲ್ಕನೇ ಸುತ್ತಿನ ಅನೌಪಚಾರಿಕ ಮತದಾನದಲ್ಲಿ ವಿಜೇತರಾದರು. ಭಾರತದ ಅಭ್ಯರ್ಥಿ ಶಶಿ ತರೂರ್ ಅವರು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಯ ಸ್ಪರ್ಧಾ ಕಣದಿಂದ ಹಿಂದೆ ಸರಿದರು. ಇದರೊಂದಿಗೆ ವಿಶ್ವಸಂಸ್ಥೆಯ ಪ್ರತಿಷ್ಠಿತ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಪಡೆದುಕೊಳ್ಳುವ ಭಾರತದ ಕನಸು ಭಗ್ನಗೊಂಡಿತು.

2006: ಅಮೆರಿಕದ ಜಾನ್ ಸಿ. ಮ್ಯಾಥೆರ್ ಮತ್ತು ಜಾರ್ಜ್ ಎಫ್. ಸ್ಮೂಟ್ ಅವರು ನಡೆಸಿರುವ ಬ್ರಹ್ಮಾಂಡದ ಉಗಮದ ಹಿಂದಿನ ನಿಗೂಢವನ್ನು ಒಡೆಯುವ ಸಂಶೋಧನೆಗೆ ಮನ್ನಣೆ ನೀಡಿ ಇಬ್ಬರನ್ನೂ ಪ್ರಸಕ್ತ ವರ್ಷದ `ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು.

2006: ಪರಸ್ಪರ ಪ್ರತಿಸ್ಪರ್ಧಿಗಳಾದ ಎಚ್ ಟಿ ಮೀಡಿಯಾ ಮತ್ತು ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ಒಟ್ಟಾಗಿ ನವದೆಹಲಿಯಿಂದ ಹೊಸ ಪತ್ರಿಕೆಯೊಂದನ್ನು ಹೊರತರಲು ಒಪ್ಪಂದ ಮಾಡಿಕೊಂಡವು. ಇದೇ ವೇಳೆಗೆ ಮುಂಬೈಯಿಂದ `ದಿ ಸಂಡೆ ಇಂಡಿಯನ್' ಎಂಬ ಹೊಸ ಫೀಚರ್ ಮ್ಯಾಗಜಿನ್ನನ್ನು ಪ್ಲಾನ್ ಮನ್ ಮೀಡಿಯಾ ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಏಕಕಾಲದಲ್ಲಿ 5 ಭಾಷೆಗಳಲ್ಲಿ ಭಾರತದಾದ್ಯಂತ ಪ್ರಕಟಿಸಿದೆ. ಇಂಗ್ಲಿಷ್, ಹಿಂದಿ, ಗುಜರಾಥಿ, ಬಂಗಾಳಿ ಮತ್ತು ತಮಿಳು ಭಾಷೆಗಳಲ್ಲಿ ಪತ್ರಿಕೆ ಅಕ್ಟೋಬರ್ 1ರಂದೇ ಮಾರುಕಟ್ಟೆಗಳಿಗೆ ಬಂದಿತು. ಹಿಂದುಸ್ತಾನ್ ಟೈಮ್ಸ್ ಇಂಗ್ಲಿಷ್ ಪತ್ರಿಕೆ, ಹಿಂದುಸ್ಥಾನ್ ಹಿಂದಿ ಪತ್ರಿಕೆ ಹೊಂದಿರುವ ಎಚ್ ಟಿ ಮೀಡಿಯಾ ಎಫ್ ಎಂ ರೇಡಿಯೊ ಕೇಂದ್ರಗಳು ಹಾಗೂ ಭಾರತದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ವಾಣಿಜ್ಯ ದೈನಿಕ ಆರಂಭಿಸುವ ಗುರಿ ಹೊಂದಿರುವ ದೊಡ್ಡ ಸಂಸ್ಥೆಯಾಗಿದ್ದರೆ, ಟೈಮ್ಸ್ ಆಫ್ ಇಂಡಿಯಾ ದಿನಪತ್ರಿಕೆಗಳು, ನಿಯತಕಾಲಿಕಗಳು, ಇಂಟರ್ನೆಟ್, ಟೆಲಿವಿಷನ್ ಇತ್ಯಾದಿಗಳನ್ನು ಹೊಂದಿರುವ ಭಾರತದ ಅತ್ಯಂತ ದೊಡ್ಡ ಮಾಧ್ಯಮ ಸಂಸ್ಥೆ.

2006: ಅಲ್ಬೇನಿಯಾದ ರಾಜಧಾನಿ ತಿರಾನಾದಿಂದ ಇಸ್ಲಾಂಬುಲ್ ಗೆ ತೆರಳುತ್ತಿದ್ದ ಟರ್ಕಿಶ್ ಏರ್ ಲೈನ್ಸಿಗೆ ಸೇರಿದ ವಿಮಾನದ ಅಪಹರಣ ಪ್ರಕರಣ ಸುಖಾಂತ್ಯಗೊಂಡಿತು. ಪೋಪ್ ಬೆನೆಡಿಕ್ಟ್ ಅವರ ಟರ್ಕಿ ಭೇಟಿಯನ್ನು ವಿರೋಧಿಸಿ ವಿಮಾನ ಅಪಹರಿಸಿದ್ದ ಟರ್ಕಿಯ ಇಬ್ಬರು ಅಪಹರಣಕಾರರನ್ನು ಇಟಲಿ ಪೊಲೀಸರು ವಶಕ್ಕೆ ಪಡೆದುಕೊಂಡರು.

2006: ದುಬೈಯಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದು ಇಳಿಯುವ ಮೂಲಕ ಕರ್ನಾಟಕದ ಮಟ್ಟಿಗೆ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಇರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಮಂಗಳೂರು ನಗರ ಪಾತ್ರವಾಯಿತು. ಸಂಜೆ 6 ಗಂಟೆಗೆ ಸರಿಯಾಗಿ ಮೊತ್ತ ಮೊದಲ ಬಾರಿಗೆ ದುಬೈಯಿಂದ ಬಂದ ವಿಮಾನದ ಪ್ರಯಾಣಿಕರನ್ನು ಸ್ವತಃ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ರಾಜ್ಯಸಭಾ ಸದಸ್ಯ ಜನಾರ್ದನ ಪೂಜಾರಿ, ಸಚಿವರಾದ ವಿ.ಎಸ್. ಆಚಾರ್ಯ, ನಾಗರಾಜ ಶೆಟ್ಟಿ, ಡಿ.ಎಚ್. ಶಂಕರ ಮೂರ್ತಿ ಮತ್ತಿತರರು ಸ್ವಾಗತಿಸಿದರು.

2006: ಮುರುಘಾ ಮಠದ ಪ್ರತಿಷ್ಠಿತ `ಬಸವಶ್ರೀ' ಪ್ರಶಸ್ತಿಯನ್ನು ಹಿಂದಿ ಚಿತ್ರನಟಿ ಶಬಾನಾ ಆಜ್ಮಿ ಅವರಿಗೆ ಚಿತ್ರದುರ್ಗದಲ್ಲಿ ಪ್ರದಾನ ಮಾಡಲಾಯಿತು.

2006: ಪ್ರಸಕ್ತ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಬಿಷಪ್ ಡೆಸ್ಮೆಂಡ್ ಟುಟು ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನಿ ಮನಮೋಹನ್ ಸಿಂಗ್ ಅವರು ಆಫ್ರಿಕಾದ ಪ್ರಿಟೋರಿಯಾದಲ್ಲಿ ಸ್ವದೇಶಕ್ಕೆ ವಾಪಸಾಗುವ ಮುನ್ನ ಘೋಷಣೆ ಮಾಡಿದರು.

2006: ಮುಂಬೈ ಉಪನಗರ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರಗಾಮಿ ಅಸಿಫ್ ಖಾನ್ ಜುನೈದನನ್ನು ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಬೆಳಗಾವಿಯಲ್ಲಿ ಬಂಧಿಸಿತು.

1999: ಉದ್ಯಮಿ ಹಾಗೂ ಎಂಜಿನಿಯರ್ ಸೋನಿ ಸಂಸ್ಥೆಯ ಸಹ ಸ್ಥಾಪಕ ಅಕಿಯೊ ಮೊರಿಟಾ ತಮ್ಮ 78ನೆಯ ವಯಸ್ಸಿನಲ್ಲಿ ಟೋಕಿಯೊದಲ್ಲಿ ನಿಧನರಾದರು.

1990: ವಿಭಜನೆಗೊಂಡ 45 ವರ್ಷಗಳ ಬಳಿಕ ದಿನ ಪಶ್ಚಿಮ ಜರ್ಮನಿ ಮತ್ತು ಪೂರ್ವ ಜರ್ಮನಿ ಒಂದಾಗಿ ಹೊಸ ಏಕೀಕೃತ ರಾಷ್ಟ್ರ ಅಸ್ತಿತ್ವಕ್ಕೆ ಬಂದಿತು.

1940: ಹಾಸ್ಯ ಬರಹಗಾರ ಪ್ರೊ.ವಿ.. ಜೋಶಿ ಅವರು ಆಬಾಜಿ- ಇಂದಿರಾ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುನವಳ್ಳಿಯಲ್ಲಿ ಈದಿನ ಜನಿಸಿದರು.

1929: ಕಿಂಗ್ಡಮ್ ಆಫ್ ಸರ್ಬ್ಸ್, ಕ್ರೊಯೆಟ್ಸ್ ಮತ್ತು ಸ್ಲೊವೆನ್ಸ್ ತನ್ನ ಹೆಸರನ್ನು ಅಧಿಕೃತವಾಗಿ `ಕಿಂಗ್ಡಮ್ ಆಫ್ ಯುಗೋಸ್ಲಾವಿಯಾ' ಎಂಬುದಾಗಿ ಬದಲಿಸಿಕೊಂಡಿತು. ಹಲವು ವರ್ಷಗಳ ಬಳಿಕ ಇವು ಮೂರೂ ರಾಷ್ಟ್ರಗಳು ಪ್ರತ್ಯೇಕಗೊಂಡವು.

1906: ಸಂಸ್ಕೃತ ನಿಘಂಟು ಕತೃ ಗೋವಿಂದ ವಿನಾಯಕ ದೇವಸ್ಥಳಿ ಜನನ.

1896: ಇಂಗ್ಲಿಷ್ ವಿನ್ಯಾಸಗಾರ, ಕುಶಲಕರ್ಮಿ, ಕವಿ ವಿಲಿಯಂ ಮೋರಿಸ್ ಅವರು ಲಂಡನ್ ಸಮೀಪ ತಮ್ಮ 62ನೆಯ ವಯಸ್ಸಿನಲ್ಲಿ ಮೃತರಾದರು. ಪೀಠೋಪಕರಣ, ಬಟ್ಟೆ, ಸ್ಟೆಯಿನ್ಡ್ ಗ್ಲಾಸ್, ವಾಲ್ ಪೇಪರ್ ಮತ್ತಿತರ ಅಲಂಕಾರಿಕ ಉತ್ಪನ್ನಗಳಿಗೆ ಇವರು ರೂಪಿಸಿದ ವಿನ್ಯಾಸಗಳು ಇಂಗ್ಲೆಂಡಿನಲ್ಲಿ ಕಲೆ ಮತ್ತು ಕುಶಲಕಲೆಗಳ ಚಳವಳಿಯನ್ನೇ ಹುಟ್ಟು ಹಾಕಿದವು.

1863: ಅಮೆರಿಕದಲ್ಲಿ ನವೆಂಬರ್ ತಿಂಗಳ ಕೊನೆಯ ಗುರುವಾರವನ್ನು ಥ್ಯಾಂಕ್ಸ್ ಗೀವಿಂಗ್ ಡೇ ಆಗಿ ಆಚರಿಸಲು ನಿರ್ಧರಿಸಲಾಯಿತು.


No comments:

Post a Comment