ನಾನು ಮೆಚ್ಚಿದ ವಾಟ್ಸಪ್

Monday, October 8, 2018

ಇಂದಿನ ಇತಿಹಾಸ History Today ಅಕ್ಟೋಬರ್ 08

ಇಂದಿನ ಇತಿಹಾಸ History Today ಅಕ್ಟೋಬರ್ 08
2018: ನವದೆಹಲಿ: ನಾಯರ್ ಸೇವಾ ಸಮಾಜ, ಪಂದಳ ರಾಜಕುಟುಂಬ, ತಂತ್ರಿ (ದೇಗುಲದ ಮುಖ್ಯ ಅರ್ಚಕ) ಮತ್ತು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ ಸೇರಿದಂತೆ ಕೇರಳದ ಹಲವಾರು ಹಿಂದು ಸಂಘಟನೆಗಳು ಮತ್ತೆ ಸುಪ್ರೀಂಕೋರ್ಟಿನ ಕದ ತಟ್ಟಿ ಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ಶಬರಿಮಲೈ ದೇವಾಲಯದ ದ್ವಾರಗಳನ್ನು ಎಲ್ಲ ವಯಸ್ಸಿನ ಮಹಿಳೆಯರಿಗೆ ತೆರೆಯಲು ಅವಕಾಶ ನೀಡಿದ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದವು. ಇದೇ ವೇಳೆಗೆ ಕೇರಳದಲ್ಲಿ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವ ಬದಲಿಗೆ ತೀರ್ಪು ಜಾರಿಗೆ ನಿರ್ಧರಿಸಿದ ಕೇರಳ ಸರ್ಕಾರದ ವಿರುದ್ಧ ಪ್ರತಿಭಟನೆಗಳೂ ತೀವ್ರಗೊಂಡವು. ನಾಯರ್ ಸೇವಾ ಸಮಾಜ, ಪಂದಳ ರಾಜಕುಟುಂಬ, ತಂತ್ತಿ ಮತ್ತು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ ತಮ್ಮ ಅರ್ಜಿಯಲ್ಲಿ ಋತುಮತಿಯರಾಗುವ ಮಹಿಳೆಯರ ದೇಗುಲ ಪ್ರವೇಶಕ್ಕೆ ಇದ್ದ ಶತ ಶತಮಾನಗಳ ನಿಷೇಧವನ್ನು ರದ್ದು ಪಡಿಸಿದ ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪನ್ನು ಪ್ರಶ್ನಿಸಿದವು. ‘ನ್ಯಾಯಾಲಯವು ತನ್ನ ತೀರ್ಪನ್ನು ಪುನರ್ ಪರಿಶೀಲಿಸುವುದು ಎಂಬುದಾಗಿ ನಾವು ಈಗಲೂ ಹಾರೈಸುತ್ತಿದ್ದೇವೆಎಂದು ಪಂದಳ ರಾಜವಂಶದ ಕುಡಿ ಶಶಿಕುಮಾರ್ ವರ್ಮ ಹೇಳಿದರು ಮಧ್ಯೆ ತಮ್ಮ ಪ್ರತಿಭಟನಾ ಕಾರ್‍ಯಕ್ರಮಗಳನ್ನು ರೂಪಿಸುವ ಸಲುವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಕೊಚ್ಚಿಯಲ್ಲಿ ಸಭೆಯೊಂದನ್ನು ಕರೆದವು. ಸುಪ್ರೀಂಕೋರ್ಟಿನ ಸಂವಿಧಾನ ಪೀಠವು ಪ್ರಾರ್ಥನೆಯ ಸಮಾನ ಹಕ್ಕುಗಳನ್ನು ತಾನು ಎತ್ತಿ ಹಿಡಿಯುವುದಾಗಿ ಹೇಳಿ ಕೊಟ್ಟಿರುವ ತೀರ್ಪಿನ ವಿರುದ್ಧ ಅಯ್ಯಪ್ಪ ಸ್ವಾಮಿಯ ನೂರಾರು ಭಕ್ತರು ಕೇರಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತೀರ್ಪು ಜಾರಿಗೆ ನಿರ್ಧರಿಸಿರುವ ಸರ್ಕಾರವು ಪ್ರತಿಭಟನೆಗಳಿಂದಾಗಿ ಚಿಂತೆಗೀಡಾಗಿದ್ದು, ವಿವಾದ ಇತ್ಯರ್ಥಕ್ಕಾಗಿ ತಂತ್ರಿ ಹಾಗೂ ರಾಜಕುಟುಂಬದ ಜೊತೆಗೆ ಮಾತುಕತೆ ನಡೆಸಲು ಯತ್ನಿಸಿತಾದರೂ, ಉಭಯರೂ ಮುಖ್ಯಮಂತ್ರಿಯ ಆಹ್ವಾನವನ್ನು ತಿರಸ್ಕರಿಸಿದ್ದರು. ಶಬರಿಮಲೈ ದೇವಾಲಯದ ಮೂವರು ಪ್ರಧಾನ ತಂತ್ರಿಗಳಲ್ಲಿ ಒಬ್ಬರಾದ ಮೋಹನರು ಕಂಡಾರು ಅವರು, ಸರ್ಕಾರವು ಈಗಾಗಲೇ ತೀರ್ಪಿನ ಅನುಷ್ಠಾನಕ್ಕೆ ನಿರ್ಧರಿಸಿರುವುದರಿಂದ ಸರ್ಕಾರದ ಜೊತೆ ಈಗ ಮಾತುಕತೆ ನಡೆಸುವುದಕ್ಕೆ ಯಾವ ಅರ್ಥವೂ ಇಲ್ಲ ಎಂದು ಹೇಳಿದರು. ಬೆಟ್ಟದ ಮೇಲಿನ ಅಯ್ಯಪ್ಪ ಸ್ವಾಮಿ ದೇವಾಲಯದ ಧಾರ್ಮಿಕ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ತಂತ್ರಿ ಅವರ ಮಾತುಗಳೇ ಅಂತಿಮವಾಗಿವೆ.  ’ಸರ್ಕಾರ ಮೊದಲು ಸುಪ್ರೀಂಕೋರ್ಟಿನಲ್ಲಿ ತನ್ನ ಪುನರ್ ಪರಿಶೀಲನಾ ಅರ್ಜಿ ದಾಖಲಿಸಲಿ. ಆಗ ನಾವು ಮಾತುಕತೆ ನಡೆಸಬಹುದುಎಂದು ಕಂಡಾರು ನುಡಿದರುಋತುಮತಿಯರಾದ ಮಹಿಳೆಯರ ಪ್ರವೇಶದಿಂದ ದೇವಾಲಯದ ಸಂಪ್ರದಾಯಗಳು ಮತ್ತು ದೈವತ್ವ ನಾಶವಾಗುತ್ತದೆ ಎಂದು ನುಡಿದ ಅವರು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ದೇವಾಲಯದಲ್ಲಿ ನಿಯೋಜಿಸುವುದರಿಂದ ದೇವಾಲಯದ ಸಂಪ್ರದಾಯಗಳ ಅವಸಾನವಾಗುತ್ತದೆ ಎಂದು ಹೇಳಿದರು. ದೇವಾಲಯದಲ್ಲಿ ೬೦೦ ಮಂದಿ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದು ಎಂಬುದಾಗಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ ಬೆಹ್ರಾ ಅವರು ನೀಡಿದ ಹೇಳಿಕೆಗೆ ಮುಖ್ಯ ತಂತ್ರಿ ಪ್ರತಿಕ್ರಿಯೆ ನೀಡಿದರು. ಭಾರತದ ಕಮೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ನೇತೃತ್ವದ ಕೇರಳ ಸರ್ಕಾರವು, ತಂತ್ರಿಗಳು ಮಾತುಕತೆಗೆ ನಿರಾಕರಿಸಿದ ಬಳಿಕ, ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನದ ನಿಲುವನ್ನು ಪುನರುಚ್ಚರಿಸಿದ್ದು ಮಹಿಳಾ ಭಕ್ತರ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಹೇಳಿತು. ಕಾಂಗ್ರೆಸ್ ಪಕ್ಷವು ತಾನು ದೇವಾಲಯದ ವಿಧಿ ವಿಧಾನಗಳನ್ನು ನಂಬುವವರ ಜೊತೆಗೆ ನಿಲ್ಲುವುದಾಗಿ ಸ್ಪಷ್ಟ ಪಡಿಸಿದ್ದರೆ, ರಾಜ್ಯ ಸರ್ಕಾರವು ಭಕ್ತರ ಧಾರ್ಮಿಕ ನಂಬಿಕೆಗಳನ್ನು ನಾಶಪಡಿಸಲು ರಾಜ್ಯ ಸರ್ಕಾರ ಯತ್ನಿಸುತ್ತಿದೆ ಎಂದು ಬಿಜೆಪಿ ಆಪಾದಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಭಕ್ತರ ಧಾರ್ಮಿಕ ಭಾವನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿವೆ ಎಂದು ಸರ್ಕಾರ ದೂರಿದವು. ಸುಗ್ರೀವಾಜ್ಞೆಗೆ ಮನವಿ: ತನ್ಮಧ್ಯೆ, ದೇವಾಲಯಗಳ ಸ್ವಾಯತ್ತತೆಗಾಗಿ ಹೋರಾಡುತ್ತಿರುವ ಹೈದರಾಬಾದ್ ಮೂಲದ ದೇವಾಲಯ ರಕ್ಷಣಾ ಚಳವಳಿ ಸಮಿತಿಯು ಶತಮಾನಗಳಷ್ಟು ಪುರಾತನವಾದ ಶಬರಿಮಲೈ ದೇವಾಲಯದ ಧಾರ್ಮಿಕ ವಿಧಿ ವಿಧಾನಗಳ ರಕ್ಷಣೆಗಾಗಿ ಋತುಮತಿಯರಾದ ಮಹಿಳೆಯರ ಪ್ರವೇಶವನ್ನು ನಿಷೇಧಿಸಿ ಸುಗ್ರೀವಾಜ್ಞೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತು. ಖ್ಯಾತ ಚಿಲ್ಕೂರ್ ಬಾಲಾಜಿ ದೇವಾಲಯದ ಮುಖ್ಯ ಅರ್ಚಕ ಹಾಗೂ ಚಳವಳಿಯ ಸ್ಥಾಪಕ ಅಧ್ಯಕ್ಷ ಸುಂದರ ರಾಜನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಮನವಿಯೊಂದರಲ್ಲಿ ಕೇಂದ್ರ ಸರ್ಕಾರವು ಸಂವಿಧಾನದ ೨೫೪ನೇ ಅನುಚ್ಛೇದದ ಅಡಿ ಪ್ರಾಪ್ತವಾಗಿರುವ ಅಧಿಕಾರಗಳನ್ನು ಬಳಸಿಕೊಂಡು ದೇವಾಲಯ ಮತ್ತು ಅದರ ಭಕ್ತರ ಸಂಪ್ರದಾಯಗಳ ಬಳಕೆಗೆ ಶಾಸನರೂಪಿಸಬೇಕು ಎಂದು ಕೋರಿದರು. ಸಂವಿದಾನದ ೨೫೪ನೇ ಅನುಚ್ಛೇದವು ಕೇಂದ್ರ ಹಾಗೂ ರಾಜ್ಯ ವ್ಯಾಪ್ತಿಗೆ ಬರುವ ಸಮವರ್ತಿ ಪಟ್ಟಿಯಲ್ಲಿರುವ ವಿಷಯಗಳಲ್ಲಿ ಶಾಸನ ರೂಪಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆಪುನರ್ ಪರಿಶೀಲನಾ ಅರ್ಜಿಯಲ್ಲಿ ಏನಿದೆಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ೧೦ರಿಂದ ೫೦ರ ನಡುವಣ ವಯಸ್ಸಿನ ಮಹಿಳೆಯರ ಪ್ರವೇಶ ನಿಷೇಧ ವಿಚಾರದಲ್ಲಿ ಸುಪ್ರೀಂಕೋರ್ಟ್, ಭಕ್ತರೆಂದು ಹೇಳಿಕೊಳ್ಳದೇ ಇದ್ದವರು ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಹಸ್ತಕ್ಷೇಪ ಮಾಡಬಾರದಾಗಿತ್ತು ಎಂದು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿರುವ ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ ಅಧ್ಯಕ್ಷೆ ಶೈಲಜಾ ವಿಜಯನ್‌ಅವರ ಪುನರ್ ಪರಿಶೀಲನಾ ಅರ್ಜಿ ಪ್ರತಿಪಾದಿಸಿತು. ಶೈಲಜಾ ವಿಜಯನ್‌ಅವರ  ಪುನರ್ ಪರಿಶೀಲನಾ ಅರ್ಜಿಯನ್ನು ವಕೀಲ ವಕೀಲರಾದ ಮ್ಯಾಥ್ಯೂ ನೆಡುಂಪಾರ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದರು.  ಪಂಚ ಸದಸ್ಯ ಸಂವಿಧಾನ ಪೀಠದಲ್ಲಿ ಭಿನ್ನಮತದತೀರ್ಪು ನೀಡಿದ ಏಕೈಕ ನ್ಯಾಯಮೂರ್ತಿಇಂದು ಮಲ್ಹೋತ್ರ ಅವರು ನೀಡಿದ್ದ ಅಭಿಪ್ರಾಯಗಳ ನೆಲೆಯಲ್ಲೇ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಯಿತು. ದೇವಾಲಯದ ಯಾರೇ ಭಕ್ತರೂ ದೇವಾಲಯದಲ್ಲಿ ಶತ ಶತಮಾನಗಳಿಂದ ಅನುಸರಿಸುತ್ತಾ ಬರಲಾಗಿರುವ ಪದ್ಧತಿಯಿಂದ ಲಿಂಗ ತಾರತಮ್ಯವಾಗಿರುವ ಬಗ್ಗೆ ಆಪಾದಿಸಿಲ್ಲ. ದೇಗುಲದ ಆರಾಧ್ಯ ದೈವ ಬ್ರಹ್ಮಚಾರಿಅಯ್ಯಪ್ಪ ಸ್ವಾಮಿಯ ವೈಶಿಷ್ಟಗಳ  ಆಧಾರದಲ್ಲಿ ಇಲ್ಲಿನ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬರಲಾಗಿದೆ. ಹೀಗಿರುವಾಗ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂವಿಧಾನದ ೩೨ನೇ ಅನುಚ್ಛೇದದ ಅಡಿಯಲ್ಲಿ, ತಾನು ಅಯ್ಯಪ್ಪಸ್ವಾಮಿಯ ಭಕ್ತ ಎಂಬುದಾಗಿ ಎಲ್ಲಿಯೂ ಪ್ರತಿಪಾದಿಸದೇ ಇದ್ದಂತಹ ಭಾರತೀಯ ಯುವ ವಕೀಲರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿಯನ್ನು  ಸುಪ್ರೀಂಕೋರ್ಟ್ ಪುರಸ್ಕರಿಸಲು ಹೇಗೆ ಸಾಧ್ಯ? ಎಂಬುದಾಗಿ ಅರ್ಜಿ ಕೇಳಿತು. ಸಂವಿಧಾನದ ೩೨ನೇ ಅನುಚ್ಛೇದದ ಅಡಿಯಲ್ಲಿ ಸಹಭಕ್ತರು ಮಾತ್ರವೇ ರಿಟ್‌ಅರ್ಜಿ ಸಲ್ಲಿಸಲು ಅವಕಾಶವಿದೆತಾನು ಅಯ್ಯಪ್ಪ ಸ್ವಾಮಿಯ  ಭಕ್ತ/ ಅಯ್ಯಪ್ಪ ಸ್ವಾಮಿಯಲ್ಲಿ ನಂಬಿಕೆ ಇರಿಸಿದವ ಎಂಬುದಾಗಿ ಹೇಳಿಕೊಳ್ಳದೇ ಇರುವ  ವಕೀಲರ ಸಂಘದ ಮೂಲಭೂತ ಹಕ್ಕುಗಳು ಹೇಗೆ ಉಲ್ಲಂಘನೆಯಾಗಿವೆ ಎಂಬುದಾಗಿ ಪುನರ್ ಪರಿಶೀಲನಾ ಅರ್ಜಿ ಪ್ರಶ್ನಿಸಿತು. ಧಾರ್ಮಿಕ ವಿಚಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸುವುದರಿಂದ, ಭಕ್ತರಲ್ಲದವರು ಹಾಗೂ ನಂಬಿಕೆ ಇಲ್ಲದ ಅಧಿಕ ಪ್ರಸಂಗಿಗಳಿಗೆ ಅವರು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳಲ್ಲದೇ ಇದ್ದರೂ, ಧಾರ್ಮಿಕ ನಂಬಿಕೆಗಳು ಮತ್ತು ಪದ್ಧತಿಗಳನ್ನು ಪ್ರಶ್ನಿಸಲು ಅವಕಾಶ ನೀಡಿಪ್ರವಾಹದ ಬಾಗಿಲುಗಳನ್ನು ತೆರೆದಂತಾಗಬಹುದುಎಂದು ನ್ಯಾಯಮೂರ್ತಿ ಇಂದು ಮಲ್ಹೋತ್ರ ತಮ್ಮ ಭಿನ್ನಮತದ ತೀರ್ಪಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ : ಬಹುಮತದ ತೀರ್ಪು ನೀಡಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠದ ಸಹ ನ್ಯಾಯಮೂರ್ತಿಗಳನ್ನು ಎಚ್ಚರಿಸಿದ್ದರುಇಂತಹ ಅರ್ಜಿಗಳಿಗೆ ಎಡೆಗೊಟ್ಟರೆ, ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಗುವ ಅಪಾಯಗಳು ಇನ್ನೂ ಗಂಭೀರವಾಗಿರುತ್ತವೆ ಎಂದು ಅವರು ಹೇಳಿದ್ದರುಶೈಲಜಾ ವಿಜಯನ್ ಅವರ ಪುನರ್ ಪರಿಶೀಲನಾ ಅರ್ಜಿಯು ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರ ನ್ಯಾಯಾಂಗ ಅಭಿಪ್ರಾಯಗಳನ್ನು ಪ್ರತಿಧ್ವನಿಸಿತು.
2018: ಬೆಂಗಳೂರು: ಭಾರತದಲ್ಲಿನ ತನ್ನ ಕಾರ್‍ಯಾಚರಣಾ ಮುಖ್ಯಸ್ಥ ಪ್ರತ್ಯೂಶ್ ಕುಮಾರ್ ಅವರನ್ನು ಬೋಯಿಂಗ್ ಕಂಪೆನಿಯು ಅಮೆರಿಕದಲ್ಲಿ ತನ್ನ ಪ್ರಮುಖ ಎಫ್ -೧೫ ಯುದ್ಧ ವಿಮಾನ ಕಾರ್‍ಯಕ್ರಮದ ಮುಖ್ಯಸ್ಥರಾಗಿ ಸೋಮವಾರ ನೇಮಕ ಮಾಡಿತು. ಕುಮಾರ್ ಅವರನ್ನು ಎಫ್ -೧೫ ಯುದ್ಧ ವಿಮಾನ ಕಾರ್‍ಯಕ್ರಮದ ಮುಖ್ಯಸ್ಥರಾಗಿ ಆಯ್ಕೆ ಮಾಡಲಾಗಿದೆ ಮತ್ತು ಅಮೆರಿಕ ಮತ್ತು ಜಾಗತಿಕವಾಗಿ ವ್ಯವಹಾರ ಮುನ್ನಡೆಸುವ ಹೊಣೆಗಾರಿಕೆಯನ್ನು ವಹಿಸಲಾಗಿದೆ ಎಂದು ಬೋಯಿಂಗ್ ಕಂಪೆನಿಯು ಬೆಂಗಳೂರಿನಲ್ಲಿ ಈದಿನ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತು. ಎಫ್ -೧೫ ಸಮರ ವಿಮಾನ ಕಾರ್‍ಯಕ್ರಮದ ವ್ಯವಹಾರವನ್ನು ವಿಶ್ವಾದ್ಯಂತ ಬೆಳೆಸುವ ಅಮೆರಿಕದಲ್ಲಿನ ತಮ್ಮ ಹೊಸ ಪಾತ್ರದ ಬಗ್ಗೆ ತಾವು ಅತ್ಯಂತ ಹರ್ಷಿತರಾಗಿರುವುದಾಗಿ ಕುಮಾರ್ ನುಡಿದರು. ಏನಿದ್ದರೂ ಕಂಪೆನಿಯು ತನ್ನ ಸ್ಥಳೀಯ ಉತ್ಪಾದನೆ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಹಾಗೂ ಉತ್ಪಾದನೆ ಹಾಗೂ ಸಿಬ್ಬಂದಿಯನ್ನು ಭಾರತ ಉಪಖಂಡದಲ್ಲಿ ವಿಸ್ತರಿಸುವುದು ಎಂದು ಅವರು ನುಡಿದರು. ಭಾರತದಲ್ಲಿ ಪ್ರತ್ಯೂಶ್ ಕುಮಾರ್ ಅವರ ಉತ್ತರಾಧಿಕಾರಿಯನ್ನು ಬೋಯಿಂಗ್ ಶೀಘ್ರದಲ್ಲೇ ಪ್ರಕಟಿಸಲಿದೆ. ಭಾರತದಲ್ಲಿನ ತಮ್ಮ ಐದು ವರ್ಷಗಳ ವಾಸ್ತವ್ಯದ ಅವಧಿಯಲ್ಲಿ ಕುಮಾರ್ ಅವರು ಕಂಪೆನಿಯ ವಾಣಿಜ್ಯ ವಿಮಾನಗಳು, ರಕ್ಷಣೆ, ಬಾಹ್ಯಾಕಾಶ ಮತ್ತ ಭದ್ರತೆ ಮತ್ತು ಜಾಗತಿಕ ಸೇವೆಗಳನ್ನು ಅಗಾಧವಾಗಿ ಬೆಳೆಸಿದ್ದರು. ನಾವು ಆವಿಷ್ಕಾರದ ಸಲುವಾಗಿ ಬೆಂಗಳೂರಿನಲ್ಲಿ ನಮ್ಮ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರವನ್ನು ಅವರ ಅವಧಿಯಲ್ಲೇ ಆರಂಭಿಸಿದ್ದೇವೆ. ಏರೋಸ್ಪೇಸ್ ಸರಬರಾಜು ಜಾಲವನ್ನು ವಿಸ್ತರಿಸಿದ್ದೇವೆ ಮತ್ತು ಹೈದರಾಬಾದಿನಲ್ಲಿ ಟಾಟಾ ಜೊತೆಗೆ ಅಪಾಚೆ ದಾಳಿ ಹೆಲಿಕಾಪ್ಟರಿನ ಮುಖ್ಯಭಾಗ (ಫ್ಯೂಸ್ಲೇಜ್) ತಯಾರಿಸುವ ಜಂಟಿ ಸಾಹಸವನ್ನು ಆರಂಭಿಸಿದ್ದೇವೆಎಂದು ಹೇಳಿಕೆ ತಿಳಿಸಿತು. ಅಮೆರಿಕ ಮೂಲದ ಜೆಟ್ ಲೈನರ್ ನಿರ್ಮಾಪಕ ಕಂಪೆನಿಯು, ಭಾರತೀಯ ಸೇನೆಗೆ ಅಪಾಚೆ ಮತ್ತು ಚಿನೂಕ್ ಹೆಲಿಕಾಪ್ಟರುಗಳ ಮಾರಾಟ ಮಾಡುವ ಒಪ್ಪಂದವನ್ನು ಅಂತಿಮಗೊಳಿಸಿದ್ದಲ್ಲದೆ ಪಿ-೮೧ ಕಡಲತಡಿಯ ಕಣ್ಗಾವಲು ವಿಮಾನಕ್ಕೆ ಕುಮಾರ್ ಅವರ ನಾಯಕತ್ವದಲ್ಲೇ ಆರ್ಡರುಗಳನ್ನು ಪಡೆದಿದೆ.  ’ಭಾರತದಲ್ಲಿ ನಮ್ಮ ವ್ಯವಹಾರಕ್ಕೆ ನೀಡಿದ ಕಾಣಿಕೆಗಾಗಿ ಮತ್ತು ರಾಷ್ಟ್ರಾದ್ಯಂತ ಪ್ರಬಲ ವೈಮಾನಿಕ ಕೈಗಾರಿಕಾ ಪರಿಸರ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಕುಮಾರ್ ಅವರಿಗೆ ನಾನು ಧನ್ಯವಾದ ಸಲ್ಲಿಸಬಯಸುತ್ತೇನೆಎಂದು ಬೋಯಿಂಗ್ ಇಂಟರ್ ನ್ಯಾಷನಲ್ ಅಧ್ಯಕ್ಷ ಮಾರ್ಕ್ ಅಲೆನ್ ಅವರು ಹೇಳಿಕೆಯಲ್ಲಿ ತಿಳಿಸಿದರು. ಇತ್ತೀಚೆಗೆ, ಸೆಪ್ಟೆಂಬರ್ ೨೪ರಂದು ಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರನ್ನು ರಾಜ್ಯ ರಾಜಧಾನಿಯಲ್ಲಿ ಭೇಟಿ ಮಾಡಿ ,೧೫೨ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಬೋಯಿಂಗ್ ಎಲೆಕ್ಟ್ರಾನಿಕ್ಸ್ ನಿರ್ಮಾಣ ಮತ್ತು ವೈಮಾನಿಕ ಜೋಡಣೆ ಸವಲತ್ತು ಸ್ಥಾಪನೆ ಪ್ರಸ್ತಾವವನ್ನು ಅಂತಿಮಗೊಳಿಸಿದ್ದರು. ಸವಲತ್ತು ೧೨-೧೮ ತಿಂಗಳಲ್ಲಿ ನಿರ್ಮಾಣವಾಗಲಿದ್ದು ಸುಮಾರು ೨೬೦೦ ಹುದ್ದೆಗಳನ್ನು ಸೃಷ್ಟಿಸಲಿದೆ೧೬೦ ಮಂದಿ ಪಾಲುದಾರರು ಮತ್ತು ಬಿಲಿಯನ್ (೧೦೦ ಕೋಟಿ) ಹೂಡಿಕೆಯೊಂದಿಗೆ ಬೋಯಿಂಗ್ ಭಾರತದಲ್ಲಿ ,೦೦೦ ಏರೋಸ್ಪೇಸ್ ಎಂಜಿನಿಯರ್ ಗಳನ್ನು ನೇಮಕ ಮಾಡಿದೆ.

2018: ನವದೆಹಲಿ: ಪಾಕಿಸ್ತಾನಕ್ಕೆ ತಾಂತ್ರಿಕ ರಹಸ್ಯಗಳನ್ನು ಸೋರಿಕೆ ಮಾಡುತ್ತಿದ್ದ ಆಪಾದನೆಯಲ್ಲಿ ಮಹಾರಾಷ್ಟ್ರದ ನಾಗಪುರ ಬ್ರಹ್ಮೋಸ್ ಕ್ಷಿಪಣಿ ಘಟಕದ ಶಂಕಿತ ಐಎಸ್ ಏಜೆಂಟ್ ಒಬ್ಬನನ್ನು  ಬಂಧಿಸಲಾಯಿತು. ಆರೋಪಿಯನ್ನು ನಿಶಾಂತ್ ಅಗರ್‌ವಾಲ್ ಎಂಬುದಾಗಿ ಗುರುತಿಸಲಾಯಿತು. ಈ ಆರೋಪಿಯು ಕಳೆದ ನಾಲ್ಕು ವರ್ಷಗಳಿಂದ ನಾಗಪುರದ ಬ್ರಹೋಸ್ ಏರೋಸ್ಪೇಸ್ ಘಟಕದಲ್ಲ ಕೆಲಸ ಮಾಡುತ್ತಿದ್ದ. ಈತನ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಕಳೆದ ತಿಂಗಳು ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳವು (ಎಟಿಎಸ್) ನೋಯಿಡಾದಿಂದ ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಯೋಧನನ್ನು ಬಂಧಿಸಿತ್ತು. ಪಾಕಿಸ್ತಾನದ ಐಎಸ್ ಏಜೆಂಟರ ಜೊತೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದ ಆಪಾದನೆಯಲ್ಲಿ ವ್ಯಕ್ತಿಯನ್ನು ಎಟಿಎಸ್ ಬಂಧಿಸಿತ್ತು. ಮಧ್ಯಪ್ರದೇಶದ ರೇವಾ ಜಿಲ್ಲೆಯವರನಾದ ಅಚ್ಯುತಾನಂದ ಮಿಶ್ರನನ್ನುಹನಿ ಟ್ರ್ಯಾಪ್ನಲ್ಲಿ ಕೆಡವಿ ಘಟಕದ ಕಾರ್‍ಯಾಚರಣಾ ವಿವರಗಳನ್ನು ಪಡೆದುಕೊಳ್ಳಲಾಗುತ್ತಿತ್ತು. ರಕ್ಷಣಾ ವರದಿಗಾರ್ತಿ ಎಂಬುದಾಗಿ ಹೇಳಿಕೊಂಡಿದ್ದ ಮಹಿಳೆ ಈತನಿಂದ ಪೊಲೀಸ್ ಅಕಾಡೆಮಿ ಮತ್ತು ತರಬೇತಿ ಕೇಂದ್ರದ ಕಾರ್‍ಯಾಚರಣೆ ವಿವರಗಳನ್ನು ಪಡೆದುಕೊಳ್ಳುತ್ತಿದ್ದಳು ಎಂದು ಆಪಾದಿಸಲಾಗಿತ್ತು. ಉತ್ತರಾಖಂಡದ ನಿವಾಸಿಯೊಬ್ಬನನ್ನು ಮೇ ತಿಂಗಳಲ್ಲಿ ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ ) ಗುಪ್ತಚರ ಸಂಸ್ಥೆಗೆ ನೆರವಾಗುತ್ತಿದ್ದುದಕ್ಕಾಗಿ ಬಂಧಿಸಲಾಗಿತ್ತು. ಈತ ಐಎಸ್ ಐಗೆ ಇಸ್ಲಾಮಾಬಾದಿನಲ್ಲಿ ಭಾರತೀಯ ರಾಜತಂತ್ರಜ್ಞನ ಮನೆಗೆ ಹಲವಾರು ಬಾರಿ ಪ್ರವೇಶ ಪಡೆಯಲು ನೆರವಾಗಿದ್ದ ಎಂದು ಹೇಳಲಾಗಿತ್ತು. ಆರೋಪಿ ರಮೇಶ್ ಸಿಂಗ್ ಭಾರತದ ಮಾಜಿ ರಾಜತಂತ್ರಜ್ಞನ ಮನೆಯಲ್ಲಿ ೨೦೧೫ರಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದ. ಈತ ಐಎಸ್ ಎಜೆಂಟರಿಗೆ ಅವರ ಕಾರುಗಳನ್ನು ಗಂಟೆಗಟ್ಟಲೆ ಕಾಲ ರಾಜತಂತ್ರಜ್ಞನ ಮನೆಯ ಹೊರಗೆ ನಿಲ್ಲಿಸಲು ಅವಕಾಶ ನೀಡಿದ್ದ ಎಂದು ಆಪಾದಿಸಲಾಗಿತ್ತು.

2018: ಸ್ಟಾಕ್ ಹೋಮ್: ಅಮೆರಿಕದ ಅರ್ಥಶಾಸ್ತ್ರಜ್ಞರಾದ ವಿಲಿಯಂ ನೋರ್ದಸ್ ಮತ್ತು ಪಾಲ್ ರೋಮೆರ್ ಅವರಿಗೆ ಹವಾಮಾನ ಬದಲಾವಣೆ ಮತ್ತು ಆರ್ಥಿಕ ಪ್ರಗತಿ ಬಗೆಗಿನ  ಆವಿಷ್ಕಾರದ ಕೆಲಸಕ್ಕಾಗಿ ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯು ನೀಡುವ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು  ಘೋಷಿಸಲಾಯಿತು. ಜಾಗತಿಕ ಆರ್ಥಿಕತೆ ಮತ್ತು ವಿಶ್ವದ ಜನರ ಕಲ್ಯಾಣಕ್ಕಾಗಿ ದೀರ್ಘಾವಧಿಯ ಸುಸ್ಥಿರ ಬೆಳವಣಿಗೆ ಸಾಧಿಸುವ ವಿಧಾನಗಳನ್ನು ವಿಲಿಯಮ್ ನೋರ್ದಸ್ ಮತ್ತು ಪಾಲ್ ರೋಮೆರ್ ರೂಪಿಸಿದ್ದರು. ಆರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಘೋಷಣೆಯೊಂದಿಗೆ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿಗಳ ಪ್ರಕಟಣೆ ಮುಕ್ತಾಯಗೊಂಡಿತು.  ಸ್ವೀಡಿಶ್ ಸೆಂಟ್ರಲ್ ಬ್ಯಾಂಕ್ ಅಲ್ಪ್ರೆಡ್ ನೊಬೆಲ್ ಸ್ಮರಣಾರ್ಥ ರೂಪಿಸಿದ ನೊಬೆಲ್ ಪಾರಿತೋಷಕವನ್ನು ಮೊತ್ತ ಮೊದಲಿಗೆ ೧೯೬೯ರಲ್ಲಿ ಪ್ರದಾನ ಮಾಡಲಾಗಿತ್ತು. ಇತರ ಪ್ರಶಸ್ತಿಗಳನ್ನು ನೊಬೆಲ್ ಅವರ ಅಂತಿಮ ಆಸೆಯಂತೆ ಸೃಷ್ಟಿಸಲಾಗಿದ್ದು ಇವುಗಳನ್ನು ೧೯೦೧ರಲ್ಲ ಮೊತ್ತ ಮೊದಲ ಬಾರಿಗೆ ಪ್ರದಾನ ಮಾಡಲಾಗಿತ್ತು. ಕಳೆದ ವರ್ಷದ ನೊಬೆಲ್ ಅರ್ಥಶಾಸ್ತ್ರ ಪ್ರಶಸಿಯನ್ನು ಜನಸಾಮಾನ್ಯ ರಿಚರ್ಡ್ ಥಾಲೆರ್ ಅವರಿಗೆ ನೀಡಲಾಗಿತ್ತು. ರಿಚರ್ಡ್ ಥಾಲೆರ್ ಅವರು ಆರ್ಥಿಕ ಸಿದ್ಧಾಂತವನ್ನು ಅಸ್ತವ್ಯಸ್ತಗೊಳಿಸಬಲ್ಲ ಮಾನವ ವಿವೇಕಶೂನ್ಯತೆ ಬಗ್ಗೆ ಮಾಡಿದ ಅಧ್ಯಯನಕ್ಕಾಗಿ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೀಡಿದ್ದು ಒಂದು ಅಸಾಧಾರಣ ನಡೆ ಎಂಬುದಾಗಿ ಪರಿಗಣಿಸಲ್ಪಟ್ಟಿತ್ತು.

2018: ಜಕಾರ್ತ: ಭಾರತದ ಸಂದೀಪ್ ಚೌಧರಿ ಅವರು ವಿಕಲಾಂಗರ ಏಷ್ಯನ್ ಗೇಮ್ಸ್‌ನ ಪುರುಷರ ಜಾವೆಲಿನ್ ಎಸೆತದಲ್ಲಿ ಸ್ವರ್ಣ ಪದಕ ಗಳಿಸಿದರು. ಎಫ್೪೨-೪೪/೬೧-೬೪ ವಿಭಾಗದ ಸ್ಪರ್ಧೆಯಲ್ಲಿ ಸಂದೀಪ್ ಅವರು ೬೦.೦೧ ಮೀಟರ್ ದೂರ ಜಾವೆಲಿನ್ ಎಸೆದು ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡರು. ಶ್ರೀಲಂಕಾದ ಚಮಿಂದ ಸಂಪತ್ ಹೆಟ್ಟಿ ೫೯.೫೨ ಮೀಟರ್ ಸಾಧನೆಯೊಡನೆ ಬೆಳ್ಳಿ ಪದಕ ಗಳಿಸಿದರೆ, ಇರಾನ್‌ನ ಒಮಿಡಿ (೫೮.೯೭ ಮೀಟರ್) ಕಂಚಿನ ಪದಕ ಪಡೆದರು. ಭಾರತ ಹಿಂದಿನ ದಿನ ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗಳಿಸಿತ್ತು. ಫರ್ಮಾನ್ ಬಾಶಾ ಹಾಗೂ ಪರಮ್‌ಜೀತ್ ಕುಮಾರ್ ಅವರು ೪೯ ಕೆಜಿ ಪವರ್‌ಲಿಫ್ಟಿಂಗ್‌ನಲ್ಲಿ ಕ್ರಮವಾಗು ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು. ದೇವನ್ಶಿ ಸಟಿಜವೊನ್ ಮಹಿಳಾ ೧೦೦ ಮೀಟರ್ಸ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದರೆ, ಸುಯಶ್ ಜಾಧವ್ ಪುರು? ೨೦೦ ಮೀಟರ್ಸ್ ವೈಯಕ್ತಿಕ ಮೆಡ್ಲೆ ರಿಲೆಯಲ್ಲಿ ಕಂಚಿನ ಪದಕ ಗಳಿಸಿದರು.  ಭಾರತ ಪುರುಷರ ತಂಡ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗಳಿಸಿತು.

2018: ಬ್ಯೂನೊಸ್ ಐರಿಸ್: ಭಾರತದ ತಬಾಬಿ ದೇವಿ ಥಂಗಿಯಮ್ ಅವರು ಯುವ ಒಲಿಂಪಿಕ್ ಗೇಮ್ಸ್‌ನಲ್ಲಿ ಮಹಿಳಾ ಜೂಡೊ ೪೪ ಕೆಜಿ ವಿಭಾಗದ ಬೆಳ್ಳಿ ಪದಕ ಗಳಿಸಿದರು.  ಫೈನಲ್‌ನಲ್ಲಿ ವೆನೆಜೂಲಾದ ಮಾರಿಯ ಗಿಮಿನೆಜ್ ಅವರಿಗೆ -೧೧ರಿಂದ ಸೋತ ತಬಾಬಿ ಒಲಿಂಪಿಕ್ ಮಟ್ಟದಲ್ಲಿ ಜೂಡೊ ಪದಕ ಗಳಿಸಿದ ಮೊದಲ ಭಾರತೀಯರಾದರು೧೬ ವರ್ಷದ ತಬಾಬಿ ದೇವಿ ಸೆಮಿ ಫೈನಲ್‌ನಲ್ಲಿ ಕ್ರೋಷಿಯಾದ ಆನಾ ಪುಲಿಜ್ ಅವರನ್ನು ೧೦-೦ಯಿಂದ ಆರಾಮವಾಗಿ ಸೋಲಿಸಿದರು. ತುಷಾರ್ ಮಾನೆ ಮೊದಲ ದಿನ ಪುರುಷರ ೧೦೦ ಮೀಟರ್ ಏರ್ ಋಐಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು. ಚೀನಾದಲ್ಲಿ ನಡೆದ ೨೦೧೪ರ ಯುವ ಒಲಿಂಪಿಕ್ಸ್‌ನಲ್ಲಿ ಭಾರತ ಒಂದು ಬೆಳ್ಳಿ ಹಾಗೂ ಒಂದು ಕಂಚು ಗಳಿಸಿತ್ತು. ೨೦೧೦ರ ಯುವ ಒಲಿಂಪಿಕ್ಸ್‌ನಲ್ಲಿ ಭಾರತ ಬೆಳ್ಳಿ ಹಾಗೂ ಒಂದು ಕಂಚು ಗಳಿಸಿತ್ತು.

2018: ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವೆ ಏರ್ಪಟ್ಟಿರುವ ರಫೇಲ್ ಯುದ್ಧ ವಿಮಾನ ಖರೀದಿ
ವಹಿವಾಟಿನ ವಿರುದ್ಧ ಸಲ್ಲಿಸಲಾಗಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಸುಪ್ರೀಂ ಕೋರ್ಟ್ .೧೦ರಂದು ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿತು. ವಕೀಲ ವಿನೀತ್ ದಂಡ ಎಂಬುವವರು ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು, ಅರ್ಜಿ ಯಲ್ಲಿ ರಫೇಲ್ ಒಪ್ಪಂದ ಕುರಿತ ವಿವರಗಳನ್ನು ಬಹಿರಂಗಪಡಿ ಸುವಂತೆ ಹಾಗೂ ಯುಪಿಎ-ಎನ್ಡಿಎ ಅವಧಿಯಲ್ಲಿನ ರಫೇಲ್ ದರಗಳ ವ್ಯತ್ಯಾಸಗಳನ್ನು ಮುಚ್ಚಿದ ಲಕೋಟೆಯ ಲ್ಲಿ ಭದ್ರಪಡಿಸಿ ತಿಳಿಸುವಂತೆ ಕೇಂದ್ರ ಸರ್ಕಾರ ಸೂಚ ನೆ ನೀಡಬೇಕೆಂದು ಆಗ್ರಹಿಸಿದ್ದರು. ಯುಪಿಎ ಮತ್ತು ಎನ್ ಡಿಎ ಸಮಯದಲ್ಲಿ ನಡೆದ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಲು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇ ಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಯಿತು. ರಫೇಲ್ ಯುದ್ಧ ವಿಮಾನ ಖರೀದಿಸಲು ಡಸಾಲ್ಟ್ ಕಂಪೆ ನಿ ಜತೆಗೆ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿ ನಡುವೆ ನಡೆದಿರುವ ಒಪ್ಪಂದದ ಮಾಹಿತಿ ಯನ್ನೂ ಬಹಿರಂಗಪಡಿಸಬೇಕು ಎಂದು ಕೋರಲಾಯಿತು. ಈ ಸಾರ್ವಜನಿಕ ಅರ್ಜಿಯನ್ನು ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರನ್ನೊ ಳಗೊಂಡ ಪೀಠವು ವಿಚಾರಣೆ ನಡೆಸಲಿದೆ.  ರಫೇಲ್ ವ್ಯವಹಾರದ ವಿವರಗಳನ್ನು ಬಹಿರಂಗ ಪಡಿಸುವಂತೆ ಮತ್ತು ರಫೇಲ್ ದರಗಳ ವ್ಯತ್ಯಾಸಗಳನ್ನು ಮುಚ್ಚಿದ ಲಕೋಟೆ ಯಲ್ಲಿ ಭದ್ರಪಡಿಸಿ ತಿಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಯಿತು. ರಫೇಲ್ ಖರೀದಿಯಲ್ಲಿ ಸರಕಾರದಿಂದ ೧೬,೦೦೦ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಪಕ್ಷ ಬಹಳ ಸಮಯದಿಂದಲೂ ಆರೋಪಿ ಸುತ್ತಲೇ ಬಂದಿದ್ದು ಬೊಫೋರ್ಸ್ ಮೀರಿದ ರಕ್ಷಣಾ ಖರೀದಿ ಹಗರಣ ಇದಾಗಿದೆ ಎಂದು ಹೇಳಿದೆ. ಅಂತೆಯೇ ಇದನ್ನು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಮಾಡಲು ಉದ್ದೇಶಿಸಿತು. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರವು ದಿಟ್ಟ ನಿರ್ಧಾರ ಕೈಗೊಂಡಿದೆ. ರಫೇಲ್ ಯುದ್ಧ ವಿಮಾನ ಸೇರ್ಪಡೆಯಿಂದ ದೇಶದ ವಾಯು ಪಡೆಯ ಬಲ ತೀವ್ರವಾಗಿ ಏರಿಕೆಯಾಗಲಿದೆ ಎಂದು ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವಾ ಈಚೆಗೆ ಹೇಳಿದ್ದರು. ಫ್ರಾನ್ಸ್‌ನಿಂದ ೩೬ ರಫೇಲ್ ವಿಮಾನ ಖರೀದಿ ವಿಚಾರದಲ್ಲಿ ಉಂಟಾಗಿರುವ ವಿವಾದದಿಂದಾಗಿ ಹೇಳಿಕೆ ಮಹತ್ವ ಪಡೆದುಕೊಂಡಿತು. ರಫೇಲ್ ವಿಮಾನ ತಯಾರಿಸುವ ಫ್ರಾನ್ಸ್‌ನ ಡಾಸೋ ಏವಿಯೇಷನ್‌ನ ಭಾರತೀಯ ಪಾಲುದಾರ ಸಂಸ್ಥೆ ಯಾಗಿ ರಿಲಯನ್ಸ್ ಡಿಫೆನ್ಸ್ ಆಯ್ಕೆಯಲ್ಲಿ ಭಾರತ ಸರ್ಕಾರ ಅಥವಾ ವಾಯಪಡೆಯ ಯಾವುದೇ ಪಾತ್ರ ಇಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಅನಿಲ್ ಅಂಬಾ ನಿ ಅವರ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಡಾಸೋ ಕಂಪ ನಿಯೇ ಆಯ್ಕೆ ಮಾಡಿಕೊಂಡಿದೆ ಎಂದು ಏರ್ ಚೀಫ್ ಮಾ?ಲ್ ಧನೋವಾ ಹೇಳಿದ್ದರು. ೫೯ ಸಾವಿರ ಕೋಟಿಯ ಖರೀದಿ ಒಪ್ಪಂದದಲ್ಲಿ ದೇಶೀ ಪಾಲುದಾರ ಕಂಪನಿಯಾಗಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್ ಬದಲಿಗೆ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಅನ್ನು ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್ ಆರೋಪಿಸಿತು.

2016: ಪಟನಾ
(ಬಿಹಾರ): ಬಿಹಾರದ ಔರಂಗಾಬಾದ್ ಜಿಲ್ಲೆಯ ಗ್ರಾಮ ಕಚಹ್ರಿ (ಗ್ರಾಮ
ನ್ಯಾಯಾಲಯ) ಒಂದು ಪಾಕಿಸ್ತಾನವನ್ನು ಬೆಂಬಲಿಸುತ್ತಿರುವುದಕ್ಕಾಗಿ ಚೀನಾವನ್ನುವೈರಿಎಂಬುದಾಗಿ ಘೋಷಿಸಿ, ‘ಚೀನೀ ನಿರ್ಮಿತಉತ್ಪನ್ನಗಳ ಮಾರಾಟ ಮತ್ತು ಖರೀದಿಯನ್ನು ನಿಷೇಧಿಸಿತು. ಆದೇಶ ಉಲ್ಲಂಘಿಸಿದರನ್ನು ದಂಡ ವಿಧಿಸುವ ಮೂಲಕ ಶಿಕ್ಷಿಸಲೂ ಸರ್ವಾನುಮತಿಯ ಅವಕಾಶವನ್ನು ನ್ಯಾಯಾಲಯ ಒದಗಿಸಿಕೊಟ್ಟಿತು. ಚೀನೀ ನಿರ್ಮಿತ ಉತ್ಪನ್ನಗಳನ್ನು ಗ್ರಾಮ ಮಟ್ಟದ ಸಂಸ್ಥೆಯೊಂದು ರೀತಿ ನಿಷೇಧಿಸಿದ ಘಟನೆ ರಾಜ್ಯದಲ್ಲಿ ಇದೇ ಪ್ರಥಮ. ಒಬ್ರಾ ಪಂಚಾಯತಿನ ಗ್ರಾಮ ನ್ಯಾಯಾಲಯ ನಿರ್ಧಾರವನ್ನು ಕೈಗೊಂಡಿದ್ದು, ಇದು 10,000 ಜನಸಂಖ್ಯೆಯುಳ್ಳ ಗ್ರಾಮ ಪಂಚಾಯ್ತಿ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಗ್ರಾಮ ನ್ಯಾಯಾಲಯದ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳ ಸಭೆಯನ್ನು ತಾವು ಕರೆದಿದ್ದುದಾಗಿ ಹೇಳಿದ ಗ್ರಾಮ ನ್ಯಾಯಾಲಯದ ಸರಪಂಚ ಗುಡಿಯಾ ದೇವಿ, ‘ಚೀನೀ ನಿರ್ಮಿತ ವಸ್ತುಗಳನ್ನು ನಿಷೇಧಿಸಲು ಮತ್ತು ಜನರಿಗೆ ಅವುಗಳನ್ನು ಬಳಸದಂತೆ ಮನವಿ ಮಾಡಲು ನಾವು ನಿರ್ಧರಿಸಿದೆವುಎಂದು ಹೇಳಿದರು. ಚೀನಾವು ಭಾರತಕ್ಕೆ ವಿರುದ್ಧವಾಗಿರುವ ಪಾಕಿಸ್ತಾನವನ್ನು ಬೆಂಬಲಿಸುತ್ತಿರುವುದರಿಂದ ಅದನ್ನು ಭಾರತದ ವೈರಿ ಎಂಬುದಾಗಿ ನಾವು ತೀರ್ಮಾನಿಸಿದೆವು ಎಂದು ಅವರು ನುಡಿದರು. ಒಬ್ರಾ ಪಂಚಾಯತ ವ್ಯಾಪ್ತಿಯಲ್ಲಿ ಚೀನೀ ನಿರ್ಮಿತ ವಸ್ತುಗಳನ್ನು ಮಾರುವ 12 ಅಂಗಡಿಗಳಿದ್ದು, ಕಳೆದ ವರ್ಷ ಉತ್ಸವ ಕಾಲದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚೀನೀ ಉತ್ಪನ್ನಗಳು ಮಾರಾಟವಾಗಿದ್ದವು.

2016: ಶ್ರೀನಗರ:ಜಮ್ಮು ಕಾಶ್ಮೀರ ಮತ್ತೆ ಬೂದಿ ಮುಚ್ಚಿದ ಕೆಂಡದಂತಾಯತು. ಹಿಂದಿನ ನಡೆದ ಘರ್ಷಣೆಯ ವೇಳೆ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಪೆಲೆಟ್ ಗನ್ ಗುಂಡಿಗೆ ತೀವ್ರವಾಗಿ ಗಾಯಗೊಂಡಿದ್ದ 12 ವರ್ಷದ ಬಾಲಕ ಮೃತನಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈದಿನ ಕರ್ಫ್ಯೂ ಜಾರಿಗೊಳಿಸಲಾಯಿತು. ನಡುವೆಯೂ ಹಿಂಸಾಚಾರ ನಡೆದ ಪರಿಣಾಮವಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಯಿತು. ಶ್ರೀನಗರದ ಸೈದ್ಪೂರದ ಬಾಲಕ ಜುನೈದ್ ಅಹಮ್ಮದ್ ಸಾವನ್ನಪ್ಪಿರುವ ಬಾಲಕ. ಘರ್ಷಣೆಯ ವೇಳೆ ಮನೆಯಿಂದ ಆಚೆ ಬಂದ ಸಂದರ್ಭದಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ. ಆದರೆ ಜುನೈದ್ ಪ್ರತಿಭಟನಾಕಾರನಾಗಿರಲಿಲ್ಲ. ಪ್ರತಿಭಟನಾಕಾರರ ನಡುವಿನ ಘರ್ಷಣೆಯ ವೇಳೆ ಜುನೈದ್ ಅಚಾನಕ್ ಮನೆಯಿಂದ ಆಚೆಬಂದು ಗುಂಡು ತಗುಲಿ ಗಾಯಗೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿದವು. ಮನೆಯ ಗೇಟ್ ಬಳಿನಿಂತು ಘರ್ಷಣೆ ನೋಡುತ್ತಿದ್ದ ವೇಳೆ ಸಾಕಷ್ಟು ಗುಂಡುಗಳು ಜುನೈದ್ ತಲೆ ಮತ್ತು ಎದೆಯ ಭಾಗಕ್ಕೆ ತಗುಲಿದ್ದರಿಂದ ಗಂಭೀರವಾಗಿಯೇ ಗಾಯಗೊಂಡಿದ್ದ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

2016: ಲಖನೌ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧಖೂನ್ ಕಿ ದಲಾಲಿಪದ ಪ್ರಯೋಗಿಸಿ ಮಾಡಿದ ಟೀಕೆಗಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಉತ್ತರ ಪ್ರದೇಶದ ಚಂದೌಲಿ ನ್ಯಾಯಾಲಯದಲ್ಲಿ ಖಟ್ಲೆ ದಾಖಲಾಯಿತು. ತಮ್ಮ ಒಂದು ತಿಂಗಳ ಅವಧಿಯ ಮಹಾಯಾತ್ರೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅವರುಪ್ರಧಾನಿ ಮೋದಿಯವರು ಯೋಧರ ರಕ್ತವನ್ನು ದುರ್ಬಳಕೆ ಮಾಡುತ್ತಿದ್ದಾರೆ ಮತ್ತು ಅವರ ಹಿಂದೆ ಅಡಗಿಕೊಳ್ಳುತ್ತಿದ್ದಾರೆಎಂದು ಟೀಕಿಸಿದ್ದರು. ‘ಹಮಾರೆ ಜವಾನ್ ಹೈ ಜಿನ್ಹೋನೆ ಖೂನ್ ದಿಯಾ ಹೈ, ಜಿನ್ಹೋ ನೆ ಸರ್ಜಿಕಲ್ ಸ್ಟ್ರೈಕ್ ಕಿಯಾ, ಉನ್ಕೆ ಖೂನ್ ಕೆ ಪೀಚೆ ಆಪ್ (ಪ್ರಧಾನಿ) ಚುಪೆ ಹುಯೆ ಹೊ. ಉನ್ಕಿ (ಯೋಧರು) ಆಪ್ (ಪ್ರಧಾನಿ) ದಲಾಲಿ ಕರ್ ರಹೆ ಹೊ‘ (ಸೀಮಿತ ದಾಳಿ ನಡೆಸಿದ ನಮ್ಮ ಯೋಧರು ತಮ್ಮ ಜೀವಗಳನ್ನು ಸಮರ್ಪಿಸಿದ್ದಾರೆ, ನೀವು ಅವರ ಹಿಂದೆ ಅಡಗಿಕೊಂಡಿದ್ದೀರಿ. ಅವರ ರಕ್ತವನ್ನು ದುರ್ಬಳಕೆ ಮಾಡುತ್ತಿದ್ದೀರಿ) ಎಂದು ರಾಹುಲ್ ಟೀಕಿಸಿದ್ದರು. ರಾಹುಲ್ ಗಾಂಧಿ ಅವರ ಟೀಕೆಗೆ ವ್ಯಾಪಕ ಪ್ರತಿರೋಧ ವ್ಯಕ್ತವಾದರೆ, ಕಾಂಗ್ರೆಸ್ ಧುರೀಣರಿಂದ ಸಮರ್ಥನೆ ಕೇಳಿಬಂದಿತ್ತು.

2016: ಹೈದರಾಬಾದ್: ಚೌಮಾಸಪವಿತ್ರ ಅವಧಿಯಲ್ಲಿ ಜೈನ ವಿಧಿವಿಧಾನಗಳಿಗೆ ಅನುಗುಣವಾಗಿ ಹೈದರಾಬಾದ್ನಲ್ಲಿ 68 ದಿನ ಉಪವಾಸ ವ್ರತ ಕೈಗೊಂಡಿದ್ದ 13 ವರ್ಷದ ಬಾಲಕಿ, ವ್ರತ ಪೂರೈಸಿದ ಬಳಿಕ ಕಳೆದವಾರ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿತು.  ಎಂಟನೇ ತರಗತಿಯ ವಿದ್ಯಾರ್ಥಿನಿ ಆರಾಧನಾಳನ್ನು ವ್ರತ ಪೂರೈಸಿದ ಎರಡೇ ದಿನಗಳಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಹೃದಯಸ್ಥಂಭನದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಕುಟುಂಬ ಮೂಲಗಳು ತಿಳಿಸಿದವು. ಆರಾಧನಾ ಅಂತ್ಯಕ್ರಿಯೆಯಲ್ಲಿ ಕನಿಷ್ಠ 600 ಪಾಲ್ಗೊಂಡಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರು ಆಕೆಯನ್ನುಬಾಲ ತಪಸ್ವಿಎಂದು ಶ್ಲಾಘಿಸಿದರು. ಅಂತ್ಯಯಾತ್ರೆಯನ್ನುಶೋಭಾಯಾತ್ರೆಎಂದು ಕರೆಯಲಾಗಿತ್ತು. ಆರಾಧನಾಳ ಕುಟುಂಬ ಚಿನ್ನಾಭರಣದ ವ್ಯವಹಾರ ಮಾಡುತ್ತಿದ್ದು, ಸಿಕಂದರಾಬಾದ್ ಪಾಟ್ ಬಜಾರ್ ಪ್ರದೇಶದಲ್ಲಿ ಅಂಗಡಿ ಹೊಂದಿತ್ತು. ಇಷ್ಟು ಪುಟ್ಟ ಬಾಲಕಿಗೆ ಶಾಲೆ ತಪ್ಪಿಸಿ ಉಪವಾಸ ವ್ರತ ಕೈಗೊಳ್ಳಲು ಬಿಟ್ಟದ್ದು ಏಕೆ ಎಂದು ಈಗ ಪ್ರಶ್ನೆಗಳು ಎದ್ದಿವೆ. ಸಾಮಾನ್ಯವಾಗಿ ಹಿರಿಯ ವ್ಯಕ್ತಿಗಳು ಮಾತ್ರ ಇಂತಹ ಜೈನ ಸಂಪ್ರದಾಯದ ದೇಹ ದಂಡನೆಯ ವ್ರತಗಳನ್ನು ಕೈಗೊಳ್ಳುತ್ತಾರೆ ಎನ್ನಲಾಗಿದೆ. ಬಾಲಕಿ ಹಿಂದೆ ಇದೇ ರೀತಿ 41 ದಿನಗಳ ಉಪವಾಸ ವ್ರತ ಕೈಗೊಂಡಿದ್ದಳು ಎಂದು ಹೇಳಲಾಯಿತು.

2016: ಜೋಧ್ಪುರ: ಕರಾಚಿಯ ವಧುವಿನ ಜತೆಗೆ ಇನ್ನು ಕೆಲವೇ ದಿನಗಳಲ್ಲಿ ಮದುವೆ ಇದ್ದು, ಭಾರತಕ್ಕೆ ಬರಲು ವಧುವಿಗೆ ವೀಸಾ ಸಿಗುತ್ತಿಲ್ಲ. ಭಾರತಕ್ಕೆ ಬರಲು ನೆರವು ನೀಡಿ ಎಂದು ಭಾರತದ ವರ ಮಾಡಿಕೊಂಡ ಮನವಿಗೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸ್ಪಂದಿಸಿ, ವೀಸಾ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ರಾಜಸ್ಥಾನದ ಜೋಧಪುರದ ನರೇಶ್ ತೇವಾನಿ ಮತ್ತು ಕರಾಚಿಯ ಪ್ರಿಯಾ ಬಚ್ಚಾನಿ ಅವರ ವಿವಾಹಕ್ಕೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆ ತೀವ್ರವಾಗಿರುವ ಕಾರಣ ಪ್ರಿಯಾ ಮತ್ತು ಆಕೆಯ ಕುಟುಂಬಸ್ಥರು ಸಲ್ಲಿಸಿದ್ದ ವೀಸಾ ಅರ್ಜಿಗೆ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹಾಗಾಗಿ ಮದುವೆಯ ಖುಷಿಯಲ್ಲಿರಬೇಕಿದ್ದ ವಧು -ವರರು ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ ವರ ನರೇಶ್ ತೇವಾನಿ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿ ನೆರವು ಕೇಳಲು ನಿರ್ಧರಿಸಿದರು. ಅದರಂತೆ ಸುಷ್ಮಾ ಸ್ವರಾಜ್ ಅವರ ಟ್ವಿಟರ್ ಅಕೌಂಟ್ನಲ್ಲಿ ತಮ್ಮ ಸಮಸ್ಯೆ ವಿವರಿಸಿ ಟ್ವೀಟ್ ಮಾಡಿದರು. ಯುವ ಜೋಡಿಯ ಮನವಿಗೆ ತಕ್ಷಣ ಸ್ಪಂದಿಸಿದ ಸುಷ್ಮಾ ಸ್ವರಾಜ್ಆತಂಕ ಪಡುವ ಅಗತ್ಯವಿಲ್ಲ, ಶೀಘ್ರ ವೀಸಾ ನೀಡಲಾಗುವುದುಎಂದು ಉತ್ತರ ನೀಡಿದರು.
ಪ್ರಿಯಾ ಮತ್ತು ಆಕೆಯ ಕುಟುಂಬಸ್ಥರು 3 ತಿಂಗಳ ಹಿಂದೆಯೇ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಇಲ್ಲಿಯವರೆಗೂ ವೀಸಾ ಸಿಕ್ಕಿರದಿದ್ದ ಕಾರಣ ನಿಗದಿತ ದಿನದಂದು ಮದುವೆ ನಡೆಯುವುದು ಸಾಧ್ಯವೇ ಎಂದು ನಮಗೆ ಆತಂಕ ಕಾಡಲು ಪ್ರಾರಂಭವಾಗಿತ್ತು ಎಂದು ತೇವಾನಿ ತಿಳಿಸಿದರು. “ನಾನು 2001ರಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದೆ, ನಂತರ ಪಾಕಿಸ್ತಾನದ ವಧುವಿನೊಂದಿಗೆ ಮಗನ ಮದುವೆ ಮಾಡಿಸಬೇಕು ಎಂಬ ಆಸೆಯಾಗಿತ್ತು. ಮೂಲಕ ಎರಡೂ ದೇಶಗಳ ಸಂಸ್ಕೃತಿಯನ್ನು ಬೆಸೆಯುವುದು ನಮ್ಮ ಉದ್ದೇಶವಾಗಿತ್ತು. ಹಾಗಾಗಿ ಕರಾಚಿಯ ವಧುವನ್ನು ಹುಡುಕಿ ಮದುವೆ ನಿಶ್ಚಯ ಮಾಡಿದ್ದೆವು. ಆದರೆ ವೀಸಾ ತೊಂದರೆಯಿಂದಾಗಿ ನನ್ನ ಕನಸು ಈಡೇರುವುದಿಲ್ಲ ಅಂದುಕೊಂಡಿದ್ದೆ’ ಎಂದು ವರನ ತಂದೆ ಕನ್ಹಯ್ಯಾ ಲಾಲ್ ತಿಳಿಸಿದರು.
 2016: ಕೃಷ್ಣರಾಜಸಾಗರ: ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿಸಲಾದ ತಜ್ಞರ ಅಧ್ಯಯನ ತಂಡ ಈದಿನ ಬೆಳಗ್ಗೆ ಕೃಷ್ಣರಾಜಸಾಗರಕ್ಕೆ ಭೇಟಿ ನೀಡಿ ಅಣೆಕಟ್ಟೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದುಕೊಂಡಿತು. ಸುಮಾರು ಎರಡು ಗಂಟೆಯ ಕಾಲ ನೀರಿನ ಒಳ ಮತ್ತು ಹೊರ ಹರಿವಿನ ಬಗ್ಗೆ ಮಾಹಿತಿ ಪಡೆದುಕೊಂಡಿರುವ ತಜ್ಞರ ತಂಡ ಇಲ್ಲಿನ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿತು.

2016: ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಿಂದ ಕಾಶ್ಮೀರ ಕಣಿವೆಯೊಳಕ್ಕೆ ನೌಗಾಮ್ ವಿಭಾಗದಲ್ಲಿ ನುಸುಳಲು ನಡೆಸಿದ ಯತ್ನದ ವೇಳೆ ಸಂಭವಿಸಿದ ಗುಂಡಿನ ಘರ್ಷಣೆಯ ವೇಳೆ ಸಾವನ್ನಪ್ಪಿದ ನಾಲ್ವರು ಭಯೋತ್ಪಾದಕರಿಂದ ವಶಪಡಿಸಿಕೊಳ್ಳಲಾದ ಗ್ರೆನೇಡ್ಗಳಲ್ಲಿ ಪಾಕಿಸ್ತಾನದ ಮೊಹರುಗಳಿದ್ದುದು ಬೆಳಕಿಗೆ ಬಂದಿತು. ಇದರೊಂದಿಗೆ ರಾಷ್ಟ್ರದಲ್ಲಿ ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವುದಕ್ಕೆ ಇನ್ನೊಂದು ಸಾಕ್ಷ್ಯಾಧಾರ ಲಭಿಸಿದಂತಾಯಿತು. ಪಾಕಿಸ್ತಾನ ಆರ್ಡಿನೆನ್ಸ್ ಫ್ಯಾಕ್ಟರಿ (ಪಾಕಿಸ್ತಾನ ಮದ್ದುಗುಂಡು ಕಾರ್ಖಾನೆಯ) ಮೊಹರುಗಳು ಹ್ಯಾಂಡ್ ಗ್ರೆನೇಡ್ಗಳು (ಎಆರ್ಜಿಇಎಸ್ 84) ಮತ್ತು ಯುಬಿಜಿಎಲ್ ಗ್ರೆನೇಡ್ಗಳಲ್ಲಿ ಕಂಡು ಬಂದಿದೆಎಂದು ಸೇನಾ ವಕ್ತಾರರೊಬ್ಬರು ತಿಳಿಸಿದರು. ‘ಪಾಕಿಸ್ತಾನಿ ಮೊಹರುಗಳು ಔಷಧ ಮತ್ತು ಖಾದ್ಯ ವಸ್ತುಗಳ ಪೊಟ್ಟಣಗಳಲ್ಲೂ ಕಂಡು ಬಂದಿದೆಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರದ ನೌಗಾಮ್ ವಿಭಾಗದಲ್ಲಿ ಭಯೋತ್ಪಾದಕರು ನಡೆಸಿದ ನುಸುಳುವಿಕೆ ಸಂದರ್ಭದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ನಾಲ್ವರು ಭಯೋತ್ಪಾದಕರು ಹತರಾಗಿದ್ದರು.
2016: ನವದೆಹಲಿ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ವತಃ ಮೈದಾನದಲ್ಲಿರುವ ಖಾಲಿ ನೀರಿನ ಬಾಟಲಿಗಳನ್ನು ಹೆಕ್ಕಿ, ಕಸದ ತೊಟ್ಟಿಗೆ ಹಾಕುವ ಮೂಲಕ ಮಾದರಿಯಾದರು. ಸ್ವಚ್ಛತೆ ಬಗ್ಗೆ ವಿರಾಟ್ ಹೊಂದಿರುವ ಕಾಳಜಿಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.  ದೇಶದ ಸ್ವಚ್ಛತೆ ಕಾಪಾಡುವುದು ತನ್ನ ಆದ್ಯ ಕರ್ತವ್ಯ ಎನ್ನುವುದನ್ನು ವಿರಾಟ್ ಸಾಬೀತು ಪಡಿಸಿದರು. ಕಿವೀಸ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಅಭ್ಯಾಸದ ನಂತರ ಕೆಲವು ಆಟಗಾರರು ಕುಡಿದ ನೀರಿನ ಬಾಟಲಿಗಳನ್ನು ಮೈದಾನದಲ್ಲೇ ಎಸೆದು ಪೆವೆಲಿಯನ್ಗೆ ತೆರಳಿದ್ದರು. ಇದನ್ನು ಗಮನಿಸಿದ ಕೊಹ್ಲಿ ಅವುಗಳನ್ನು ಒಟ್ಟುಗೂಡಿಸಿ ಕಸದ ತೊಟ್ಟಿಗೆ ಹಾಕಿದರು. ಮೂಲಕ ತಾವೊಬ್ಬ ಸ್ಟಾರ್ ಕ್ರಿಕೆಟಿಗನಾದರೂ ಸ್ವಚ್ಛತೆ ವಿಚಾರದಲ್ಲಿ ಸಾಮಾನ್ಯ ಪ್ರಜೆ ಎನ್ನುವುದನ್ನು ತಮ್ಮ ಕಾರ್ಯದ ಮೂಲಕವೇ ನಿರೂಪಿಸಿದರು. ಕೊಹ್ಲಿ ಬಾಟಲ್ಗಳನ್ನು ಹೆಕ್ಕುತ್ತಿರುವುದನ್ನು ಗಮನಿಸಿದ ಮೈದಾನದ ಕಾರ್ವಿುಕನೊಬ್ಬಸರ್ ಇದು ನಮ್ಮ ಕೆಲಸ ನೀವೇಕೆ ಕೆಲಸಗಳನ್ನು ಮಾಡುತ್ತಿದ್ದಿರಾಎಂದು ಮಧ್ಯಪ್ರವೇಶಿಸಲು ಮುಂದಾದಾಗ, ನೀರಿನ ಬಾಟಲ್ಗಳನ್ನು ಮೈದಾನದಲ್ಲಿ ಎಸೆದವರು ನನ್ನ ತಂಡದ ಸಹ ಆಟಗಾರರು. ಆದ್ದರಿಂದ ಇದು ನನ್ನ ಕರ್ತವ್ಯ ಎಂದು ತಿಳಿಸಿ, ಮೈದಾನದ ತುಂಬ ಬಿದ್ದಿದ್ದ ಎಲ್ಲ್ಲ ಬಾಟಲ್ಗಳನ್ನು ಹೆಕ್ಕಿ ಕಸದತೊಟ್ಟಿಗೆ ಹಾಕಿದರು. ವಿರಾಟ್ ಅವರ ಕಾರ್ಯವನ್ನು ಟಿವಿ ಚಾನೆಲ್ಗಳಲ್ಲಿ ಕಂಡ ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಅಭಿನಂದನೆ ಸಲ್ಲಿಸಿ, ನಿಮ್ಮ ಕಾರ್ಯ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲಿದೆ ಎಂದು ತಿಳಿಸಿದರು. ಇದಕ್ಕೆ ಮರು ಟ್ವೀಟ್ ಮಾಡಿದ ಕೊಹ್ಲಿ, ಮೋದಿಜೀ ಧನ್ಯವಾದಗಳು. ದೇಶದ ಸ್ವಚ್ಛತೆ ಕಾಪಾಡುವುದು ನನ್ನ ಆದ್ಯ ಕರ್ತವ್ಯ ಎಂದು ತಿಳಿಸಿದರು.

2016: ಚಂತಾಲ್(ಹೈಟಿ): ಮ್ಯೂಥ್ಯೂ ಚಂಡಮಾರುತದ ಅಬ್ಬರ ಮುಂದುವರೆಯಿತು. ದ್ವೀಪ ರಾಷ್ಟ್ರ ಹೈಟಿಯಲ್ಲಿ ಭಾರೀ ಮಳೆ ಗಾಳಿಯಿಂದಾಗಿ 842 ಜನರು ಮೃತರಾಗಿ, ಅಪಾರ ಪ್ರಮಾಣದ ಹಾನಿ ಸಂಭವಿಸಿತು. ಜನ ಜೀವನ ಅಸ್ತವ್ಯಸ್ಥಗೊಂಡಿತು. ಸುಮಾರು 200 ಕಿ.ಮೀ. ವೇಗದಲ್ಲಿ ಬೀಸಿದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಬಡ ರಾಷ್ಟ್ರ ಹೈಟಿಯಲ್ಲಿ ಭಾರೀ ಹಾನಿಯಾಗಿ, ಹಲವು ಪ್ರದೇಶಗಳು ನಗರಗಳ ಸಂಪರ್ಕ ಕಳೆದುಕೊಂಡವು.  ಹೈಟಿ ಸರ್ಕಾರ ತಾತ್ಕಾಲಿಕ ಗಂಜಿ ಕೇಂದ್ರಗಳನ್ನು ತೆರೆದು ಸಂತ್ರಸ್ತ ಜನರಿಗೆ ಆಶ್ರಯ ಕಲ್ಪಿಸಿತು.


2016: ನ್ಯೂಯಾರ್ಕ್ಕ್ಯಾಲಿಫೋರ್ನಿಯಾದಲ್ಲಿ ಐಟಿ ಉದ್ಯೋಗಿಯಾಗಿರುವ ಸಿಖ್ ವ್ಯಕ್ತಿಯೊಬ್ಬರ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿ ಅವರ ತಲೆಗೂದಲು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆಯುಂಟು ಮಾಡಿರುವ ಘಟನೆ ಘಟಿಸಿತು. ಸೆಪ್ಟೆಂಬರ್ 25 ರಂದು ಮಾನ್ ಸಿಂಗ್ ಖಾಸ್ಲಾ ಎಂಬ ವ್ಯಕ್ತಿ ಕಾರು ಚಲಾಯಿಸಿಕೊಂಡು ತಮ್ಮ ಮನೆಗೆ ತೆರಳುತ್ತಿದ್ದರು. ಸಂದರ್ಭದಲ್ಲಿ ಸುಮಾರು 5-6 ಜನರಿದ್ದ ಯುವಕರ ಗುಂಪೊಂದು ಇವರ ಕಾರಿನ ಮೇಲೆ ಬಿಯರ್ ಬಾಟಲ್ ಎಸೆದು ಗಲಭೆ ಪ್ರಾರಂಭಿಸಿತು. ನಂತರ ಖಾಸ್ಲಾ ಅವರ ಕಾರನ್ನು ಹಿಂಬಾಲಿಸಿದ ಯುವಕರು ಅವರ ಮೇಲೆ ದೈಹಿಕ ಹಲ್ಲೆ ನಡೆಸಿದರು. ನಂತರ ಖಾಸ್ಲಾ ಅವರ ಪೇಟವನ್ನು ಬಿಚ್ಚಿ ಚಾಕುವಿನಿಂದ ಅವರ ತಲೆಗೂದಲನ್ನು ಕತ್ತರಿಸಿದರು.  ಹಲ್ಲೆಯಿಂದಾಗಿ ಖಾಸ್ಲಾ ಅವರ ಮುಖ, ಕಣ್ಣು, ಕೈಗಳಿಗೆ ಗಾಯಗಳಾದವು. ಈ ಘಟನೆ ಸಂಬಂಧ ಖಾಲ್ಸಾ ಮತ್ತು ಸಿಖ್ ಸಂಘಟನೆ ಪೊಲೀಸರಿಗೆ ದೂರು ಸಲ್ಲಿಸಿದ್ದು, ಹಲ್ಲೆ ನಡೆಸಿದ ಯುವಕರಿಗೆ ಸೂಕ್ತ ಶಿಕ್ಷೆ ಕೊಡಿಸುವಂತೆ ಕೋರಿದರು.

2014: ನ್ಯೂಯಾರ್ಕ್ : ಸಾಮೂಹಿಕ ಶುಚಿತ್ವ ಕಾರ್ಯ­ಕ್ರಮ­­ಕ್ಕಾಗಿ ಭಾರ­ತದ ಯುವಕ ಅನೂಪ್ ಜೈನ್ ಅವರು 2014ರ ಸಾಲಿನ ‘ವೈಸ್ ಲಿಟ್ಜ್ ಜಾಗತಿಕ ನಾಗರಿಕ’ ಪ್ರಶಸ್ತಿಗೆ ಆಯ್ಕೆ­ಯಾದರು. ಪ್ರಶಸ್ತಿ ಸುಮಾರು ₨61 ಲಕ್ಷ (1 ಲಕ್ಷ ಡಾಲರ್) ನಗದು ಒಳ­ಗೊಂಡಿದೆ. ಬಿಹಾರದಲ್ಲಿ 2011ಕ್ಕೆ ‘ಹ್ಯೂಮ­ನರ್ ಪವರ್ (ಎಚ್­ಪಿ)’ ಸಂಸ್ಥೆ ಸ್ಥಾಪಿಸಿ ಗ್ರಾಮೀಣ ಭಾರತದಲ್ಲಿ ಸಮುದಾಯ ನಿರ್ಮಲೀ­ಕರಣ ಸೌಲಭ್ಯಗಳನ್ನು ಅಭಿ­ವೃದ್ಧಿ­ಪಡಿಸಿ ವಿಶ್ವಕ್ಕೆ ಮಾದ­ರಿ­ಯಾಗುವ ಮೂಲಕ ಅನೂಪ್ ಜೈನ್ ಈ ಪ್ರಶಸ್ತಿಗೆ ಭಾಜನರಾದರು. ಕಾಕತಾಳಿಯವೆಂದರೆ, ಇಲ್ಲಿನ ಸೆಂಟ್ರ­ಲ್­­ಪಾರ್ಕ್­­ನಲ್ಲಿ ನಡೆದ ವಿಶ್ವ ನಾಗರಿಕ ಉತ್ಸವದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಸಾವಿರಾರು ಜನ­ರನದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲೇ ಈ ಪ್ರಶಸ್ತಿ ಘೋಷಣೆಯಾಯಿತು. ‘ಅನೂಪ್ ಅವರು ಮಾಡಿರುವ ಕಾರ್ಯ­ಗಳು 2019ರೊಳಗೆ ಭಾರತ­ವನ್ನು ಶೌಚಾ­ಲಯ ಮುಕ್ತ­ ರಾಷ್ಟ್ರ­ವ­ನ್ನಾಗಿ­ಸ­ಬೇಕೆಂಬ ಪ್ರಧಾನಿ ಮೋದಿ ಅವರ ಆಶಯಕ್ಕೆ ಅನುಗುಣವಾಗಿದೆ’ ಎಂದು ಸಂಘಟಕರು ತಿಳಿಸಿದರು. ಅನೂಪ್ ಮಾಡಿರುವ ಪ್ರಯತ್ನ­ಗಳು ರೋಗ ತಡೆಯಲು ಸಹಾಯ ಮತ್ತು ಮಲಮೂತ್ರ ನೀರಿನಲ್ಲಿ ಬೆರೆತು ಜಲಜನ್ಯ ಕಾಯಿಲೆ ಹರಡುವುದನ್ನು ಶೌಚಾಲಯಗಳು ತಡೆಗಟ್ಟುತ್ತವೆ. ಇದು ಭಾರತಕ್ಕೆ ತೀರಾ ಅಗತ್ಯವಿರುವ ಸದೃಢ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ  ಕಾರಣ­ವಾಗಲಿದೆ. ‘ಜನರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಏನು ಮಾಡ­­ಬೇಕು ಎನ್ನುವುದನ್ನು ಅನೂಪ್ ತೋರಿಸಿ­ಕೊಟ್ಟಿದ್ದಾರೆ. ಇದು ಸಾವಿ­ರಾರು ಜನ­ರಿಗೆ ಸ್ಫೂರ್ತಿಯಾಗಲಿದೆ’ ಎಂದು ಮೆಲ್ಬರ್ನ್ ಮೂಲದ ವೈಸ್ಲಿಟ್ಜ್ ಫೌಂಡೇ­ಶನ್ನ ಸ್ಥಾಪಕ ಮತ್ತು ಅಧ್ಯಕ್ಷ ಅಲೆಕ್ಸ್ ವೈಸ್ಲಿಟ್ಜ್ ಹೇಳಿದರು.

2014: ಸ್ಟಾಕ್ಹೋಂ : ‘ಸೂಕ್ಷ್ಮದರ್ಶಕದ ದೃಷ್ಟಿಯನ್ನು ತೀಕ್ಷ್ಣ’ಗೊಳಿಸಿದ ಮೂವರು ವಿಜ್ಞಾನಿ­ಗಳು 2014ರ ಸಾಲಿನ ರಸಾಯನ­ಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ­ಯಾದರು. ಅಮೆರಿಕದ ಎರಿಕ್ ಬೆಟ್ಜಿಗ್ ಮತ್ತು ವಿಲಿಯಂ ಮೊಯೆರ್ನರ್ ಹಾಗೂ ಜರ್ಮನಿಯ ಸ್ಟಿಫನ್ ಹೆಲ್ ಈ ಗೌರ­ವಕ್ಕೆ ಪಾತ್ರರಾದವರು. ಈ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸೂಕ್ಷ್ಮ­­­ದರ್ಶಕವು ಸಾಂಪ್ರದಾಯಿಕ ದ್ಯುತಿ­ಸೂಕ್ಷ್ಮ­ದರ್ಶಕದ ದೃಷ್ಟಿ ಸಾಮರ್ಥ್ಯದ ಮಿತಿಯನ್ನು ವಿಸ್ತರಿಸಿದೆ ಎಂದು ದಿ ರಾಯಲ್ ಸ್ವೀಡಿಸ್ ಅಕಾ­ಡೆಮಿ ಹೇಳಿತು.  ‘ಸಾಂಪ್ರದಾಯಿಕ ದ್ಯುತಿ ಸೂಕ್ಷ್ಮ­ದರ್ಶ­ಕ­ದಿಂದ ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ವಿಜ್ಞಾನಿಗಳ ಆವಿಷ್ಕಾರದಿಂದಾಗಿ ಇದೇ ಸೂಕ್ಷ್ಮದರ್ಶಕಗಳನ್ನು ಬಳಸಿ ನ್ಯಾನೊ ಕಣಗಳನ್ನೂ ನೋಡಲು ಸಾಧ್ಯ­ವಾಗಿದೆ’ ಎಂದು ಸ್ವೀಡಿಸ್ ಅಕಾಡೆಮಿ ತಿಳಿಸಿತು. 54 ವರ್ಷದ ಬೆಟ್ಜಿಗ್ ಅವರು ವರ್ಜಿನಿ­ಯಾದ ಆಶ್ಬರ್ನ್ನ ಹೊವಾರ್ಡ್ ಹ್ಯೂಸ್ ಮೆಡಿಕಲ್ ವೈದ್ಯ­ಕೀಯ ಸಂಸ್ಥೆ­ಯಲ್ಲಿ ಉದ್ಯೋಗಿ­. ಮೊಯೆರ್ನರ್ ಅವರು ಕ್ಯಾಲಿ­ಫೋರ್ನಿಯಾದ ಸ್ಟ್ಯಾನ್­ಫೊರ್ಡ್ ವಿಶ್ವ­ವಿದ್ಯಾಲಯದಲ್ಲಿ  ಪ್ರೊಫೆ­ಸರ್. 51 ವರ್ಷದ ಹೆಲ್ ಅವರು ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿ­ಟ್ಯೂಟ್ ಫಾರ್ ಬಯೋಪಿಸಿಕಲ್ ಕೆಮೆ­ಸ್ಟ್ರಿಯ ನಿರ್ದೇಶಕರು. ‘ನನಗೆ ಆಶ್ಚರ್ಯವಾಗಿದೆ. ಈ ಸುದ್ದಿ  ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ಹೆಲ್ ಪ್ರತಿಕ್ರಿಯಿಸಿದ್ದಾರೆ.
2008: ಶಾಸ್ತ್ರೋಕ್ತ ಅಥವಾ ಕಾನೂನು ಬದ್ಧ ವಿಧಿ ವಿಧಾನಗಳ ಹೊರತಾಗಿ ಯಾವುದೇ ಪುರುಷ ಮತ್ತು ಮಹಿಳೆ ಸಕಾರಣಗಳಿಂದಾಗಿ ದೀರ್ಘಕಾಲ ಒಟ್ಟಿಗೇ ವಾಸಿಸುತ್ತಿದ್ದರೆ ಅಂತಹ ಪ್ರಕರಣಗಳಲ್ಲಿ ಅವರನ್ನು ದಂಪತಿ ಎಂದೇ ಮಾನ್ಯ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿತು. ನ್ಯಾಯಮೂರ್ತಿ ವಿ.ಎಸ್.ಮಳೀಮಠ್ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ ಈ ನಿರ್ಧಾರ ಕೈಗೊಂಡಿತು. 'ದೀರ್ಘ ಕಾಲದಿಂದ ಗಂಡ-ಹೆಂಡತಿಯಂತೆ ಒಟ್ಟಿಗೇ ವಾಸಿಸುವ ಪುರುಷ-ಮಹಿಳೆಯರ ಕೆಲ ಪ್ರಕರಣಗಳಲ್ಲಿ ಮಹಿಳೆಯರು ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿ ಸಂಘರ್ಷ ನಡೆಸುತ್ತಿದ್ದಾರೆ. ಈ ಪ್ರಕರಣಗಳಲ್ಲಿ ಪುರುಷರು ಹಿಂದೂ ವಿವಾಹ ಕಾಯ್ದೆ ಹಾಗೂ ಇತರೆ ಮದುವೆ ಕಾಯ್ದೆಗಳನ್ನು ಮುಂದಿಟ್ಟುಕೊಂಡು ತಾವು ಈ ಮಹಿಳೆಯೊಂದಿಗೆ ಮದುವೆಯೇ ಆಗಿಲ್ಲ ಎಂದೇ ವಾದಿಸುತ್ತಿರುವ ಸಂದರ್ಭಗಳು ಅಧಿಕವಾಗಿ ಕಂಡು ಬರುತ್ತಿವೆ. ಇವರು ತಮ್ಮ ಜವಾಬ್ದಾರಿ ಹಾಗೂ ಪರಿಹಾರ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ ಈ ದಿಸೆಯಲ್ಲಿ ಅಪರಾಧ ದಂಡ ಸಂಹಿತೆ ಕಲಂ 125ಕ್ಕೆ ತಿದ್ದುಪಡಿ ತರಬೇಕು' ಎಂದು ನ್ಯಾಯಮೂರ್ತಿ ವಿ.ಎಸ್. ಮಳೀಮಠ್ ನೇತೃತ್ವದ ಸಮಿತಿ ಮಾಡಿದ್ದ ಶಿಫಾರಸುಗಳನ್ನು ಮಹಾರಾಷ್ಟ್ರ ಸರ್ಕಾರ ಈದಿನ ಒಪ್ಪಿಕೊಂಡಿತು.

2008: ಹಿಂದಿನ ಎಲ್ಲ ದಾಖಲೆಗಳನ್ನು ದಾಟಿಕೊಂಡು ಏರಿಕೆ ಕಂಡ ಚಿನ್ನದ ದರ, ಪ್ರತಿ 10 ಗ್ರಾಂಗೆ ಈದಿನ ರೂ 450 ರಷ್ಟು ಹೆಚ್ಚಳವಾಗಿ ರೂ. 13,850 ಆಯಿತು. ಜುಲೈ 15 ರಂದು ಚಿನ್ನದ ದರ ಗರಿಷ್ಠ ಪ್ರತಿ 10 ಗ್ರಾಂಗೆ ರೂ 13,650 ರಷ್ಟು ಏರಿಕೆ ಕಂಡಿತ್ತು.

2008: ಫ್ರೆಂಚ್ ಪ್ರಜೆ ಹಾಗೂ ಕುಖ್ಯಾತ ಕೊಲೆಗಾರ 64 ವರ್ಷದ ಚಾರ್ಲ್ಸ್ ಗುರುಮುಖ್ ಶೋಭರಾಜ್ ಈದಿನ ತನ್ನ 20 ವರ್ಷದ ನೇಪಾಳಿ ಪ್ರಿಯತಮೆ ನಿಹಿತಾ ಬಿಸ್ವಾಸ್ ಜೊತೆ ಮದುವೆಯಾದ. ಇಡೀ ನೇಪಾಳ ದಸರಾ ಸಂಭ್ರಮದಲ್ಲಿ ಮುಳುಗಿದ್ದಾಗ ಕಠ್ಮಂಡು ಜೈಲಿನಲ್ಲಿ ಕಾನೂನು ವಿಧಿ ವಿಧಾನಗಳ ಮೂಲಕ ಶೋಭರಾಜ್ ಮದುವೆಯಾದ. ಸರಳ-ಕ್ಲುಪ್ತ ಘಳಿಗಯಲ್ಲಿ ಸಾಂಪ್ರದಾಯಿಕವಾಗಿ ಆತ ನಿಹಿತಾಳ ಪಾಣಿಗ್ರಹಣ ಮಾಡಿದ ಎಂದು ವಧುವಿನ ಹಿರಿಯ ಸಹೋದರ ವಿಜಯ್ ತಿಳಿಸಿದರು. ಈ ಸಂದರ್ಭದಲ್ಲಿ ನಿಹಿತಾಳ ತಾಯಿ ಹಾಗೂ ಶೋಭರಾಜ್ ಪರ ವಕಾಲತ್ತು ವಹಿಸಿರುವ ವಕೀಲೆ ಶಕುಂತಲಾ ಥಾಪಾ ಹಾಜರಿದ್ದರು. ಈ ವರ್ಷದ ಆರಂಭದಲ್ಲಿ ಜೈಲಿನಲ್ಲಿ ಶೋಭರಾಜ್ ಗೆ ಫ್ರೆಂಚ್ ದ್ವಿಭಾಷಿಯಾಗಿ ಕೆಲಸ ಮಾಡಲು ನಿಹಿತಾ ಆಗಮಿಸಿದ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿತ್ತು. ಮೊದಲ ನೋಟದಲ್ಲೇ ಪ್ರೇಮ ಗಟ್ಟಿಗೊಂಡ ಪರಿಣಾಮ ಇವರು ಜುಲೈ ತಿಂಗಳಲ್ಲಿ ತಮ್ಮ `ನಿಶ್ಚಿತಾರ್ಥ' ಕಾರ್ಯಕ್ರಮವನ್ನೂ ಪೂರೈಸಿಕೊಂಡಿದ್ದರು.

2007: ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ಸಂಜೆ ರಾಜೀನಾಮೆ ಸಲ್ಲಿಸಿದರು. ರಾಜೀನಾಮೆ ಅಂಗೀಕರಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ವಿಧಾನಸಭೆ ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದರು. ಇದರಿಂದಾಗಿ ಜನತಾದಳ (ಎಸ್) ಶಾಸಕರು ಮಿತ್ರ ಪಕ್ಷವಾದ ಬಿಜೆಪಿಗೆ ಸರ್ಕಾರ ರಚಿಸಲು ಬೆಂಬಲ ನೀಡಲು ಕೊನೆ ಗಳಿಗೆಯಲ್ಲಿ ತೆಗೆದುಕೊಂಡ ತೀರ್ಮಾನ ಅರ್ಥ ಕಳೆದುಕೊಂಡಿತು. ಆದರೆ ಸರ್ಕಾರ ರಚಿಸುವ ಯಾವ ಪ್ರಸ್ತಾವವನ್ನೂ ಬಿಜೆಪಿ ಮಂಡಿಸಿರಲಿಲ್ಲ. ಮುಖ್ಯಮಂತ್ರಿ ರಾಜೀನಾಮೆಗೆ ಮುನ್ನ ಇಡೀ ದಿನ ರಾಜಧಾನಿಯಲ್ಲಿ ಹಠಾತ್ ರಾಜಕೀಯ ಬೆಳವಣಿಗೆಗಳು ನಡೆದವು. ಬೆಳಿಗ್ಗೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ, ಕುಮಾರಸ್ವಾಮಿ ಸರ್ಕಾರವನ್ನು ತತ್ ಕ್ಷಣವೇ ವಜಾ ಮಾಡಬೇಕೆಂದು ಆಗ್ರಹಿಸಿತು. ಮಧ್ಯಾಹ್ನ ಮುಖ್ಯಮಂತ್ರಿಗಳನ್ನು ರಾಜಭವನಕ್ಕೆ ಕರೆಸಿದ ರಾಜ್ಯಪಾಲರು ಸರ್ಕಾರಕ್ಕೆ ಇರುವ ಬಹುಮತ ಸಾಬೀತುಪಡಿಸಲು ಸೂಚಿಸಿ, ಸರ್ಕಾರಕ್ಕೆ ಬೆಂಬಲ ನೀಡಿದ 113 ಶಾಸಕರ ಹೆಸರು ನೀಡಲು ಆದೇಶಿಸಿದರು. ಸಂಜೆ 7.30ರೊಳಗೆ ಈ ಪ್ರಕ್ರಿಯೆ ಪೂರ್ಣವಾಗದಿದ್ದರೆ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು. ಸಂಜೆ 6.30ಕ್ಕೆ ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ'ದಲ್ಲಿ ಆರಂಭವಾದ ದಳ (ಎಸ್) ಶಾಸಕಾಂಗ ಪಕ್ಷದ ಸಭೆಯಲ್ಲಿ ಬಹುತೇಕ ಶಾಸಕರು ಪಕ್ಷದ ವರಿಷ್ಠರ ತೀರ್ಮಾನಕ್ಕೆ ವಿರುದ್ಧವಾದ ನಿರ್ಧಾರ ತೆಗೆದುಕೊಂಡರು. ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲು ಬೆಂಬಲ ನೀಡುವ ಪತ್ರ ಸಿದ್ಧಗೊಂಡು, ಮುಖ್ಯಮಂತ್ರಿ ರಾಜೀನಾಮೆಯೊಂದಿಗೆ ಆ ಪತ್ರವನ್ನೂ ರಾಜ್ಯಪಾಲರಿಗೆ ಸಲ್ಲಿಸಲಾಯಿತು. ಅತ್ತ ಜನತಾದಳ ವಿರುದ್ಧ ಧರ್ಮಯಾತ್ರೆ ಆರಂಭಿಸಿದ್ದ ಬಿಜೆಪಿ ಧುರೀಣ ಯಡಿಯೂರಪ್ಪ ಅವರಿಗೆ ಈ ಸಂದೇಶ ರವಾನೆಯಾಗಿ, ಯಡಿಯೂರಪ್ಪ ಪಕ್ಷಾಧ್ಯಕ್ಷ ಡಿ.ವಿ. ಸದಾನಂದಗೌಡರ ಜೊತೆಗೆ ಬೆಂಗಳೂರಿಗೆ ಧಾವಿಸಿದರು. ಆದರೆ ರಾಷ್ಟ್ರೀಯ ನಾಯಕರಿಂದ ಒಪ್ಪಿಗೆ ಲಭಿಸದ ಕಾರಣ ಬಿಜೆಪಿ ಧುರೀಣರು ಸರ್ಕಾರ ರಚನೆಯ ಕೋರಿಕೆ ಮಂಡಿಸಲು ಮುಂದಾಗಲಿಲ್ಲ. ರಾಷ್ಟ್ರಪತಿ ಆಡಳಿತದ ಹೇರಿಕೆಯೇ ಖಚಿತವಾಯಿತು.
2006ರ ಜನವರಿ 18ರಂದು ಬಿಜೆಪಿ ಜತೆ ಕೈ ಜೋಡಿಸಿದ ಎಚ್. ಡಿ. ಕುಮಾರಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು. ಬಹುಮತ ಕಳೆದುಕೊಂಡ ಆಗಿನ ಮುಖ್ಯಮಂತ್ರಿ ಧರ್ಮಸಿಂಗ್ ರಾಜ್ಯಪಾಲ ಟಿ.ಎನ್. ಚತುರ್ವೇದಿ ಸೂಚನೆಯಂತೆ ಜನವರಿ 27ರಂದು ವಿಶ್ವಾಸ ಮತ ಗಳಿಸಲು ವಿಫಲರಾಗಿ 28ರಂದು ರಾಜೀನಾಮೆ ಸಲ್ಲಿಸಿದ್ದರು. ಫೆಬ್ರುವರಿ 3ರಂದು ಜನತಾದಳ- ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.

2007: ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡದ್ದಕ್ಕಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಜನತಾದಳ ಎಸ್. ಮುಖಂಡ ಮಹಿಮ ಪಟೇಲ್ ಮೌಲ್ಯ- ಆದರ್ಶಗಳನ್ನು ಪ್ರತಿಪಾದಿಸುವ ಹೊಸ ರಾಜಕೀಯ ಪಕ್ಷ ಕಟ್ಟುವುದಾಗಿ ಘೋಷಿಸಿದರು.

2007: ಈಗ ಎಲ್ಲರ ಕೈಯಲ್ಲೂ ಮೊಬೈಲ್. ಅದರೊಂದಿಗೆ ಬಿಡಲಾಗದ ನಂಟು. ಅದನ್ನು ಅಂಗಿಯ ಜೇಬಲ್ಲಿ ಇಟ್ಟುಕೊಂಡರೆ ಹೃದಯ ಸಂಬಂಧಿ ಕಾಯಿಲೆ, ಪ್ಯಾಂಟಿಗೆ ಸಿಕ್ಕಿಸಿಕೊಂಡ ಮೊಬೈಲ್ ಪೌಚಿನಲ್ಲಿ ಇಟ್ಟುಕೊಂಡರೆ ಕಿಡ್ನಿ ಪ್ರಾಬ್ಲೆಮ್ ಹೀಗೆ ಮೊಬೈಲ್ ಬಳಕೆಯ ಅಪಾಯಗಳ ಸುದ್ದಿ ಬರುತ್ತಿರುವಾಗಲೇ ಲಂಡನ್ನಿನಿಂದ ಬಂದ ಸುದ್ದಿ ಇನ್ನಷ್ಟು ಆತಂಕಕಾರಿ. ದಶಕಕ್ಕೂ ಹೆಚ್ಚು ಕಾಲ ಮೊಬೈಲ್ ಬಳಸುವುದರಿಂದ ಮೆದುಳು ಸಂಬಂಧಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ಸ್ವೀಡನ್ನಿನ ಸಂಶೋಧಕರು ವಿಶ್ವಮಟ್ಟದಲ್ಲಿ ನಡೆಸಿದ 11 ಅಧ್ಯಯನಗಳು ತಿಳಿಸಿವೆ ಎಂಬ ಸುದ್ದಿ ಲಂಡನ್ನಿನಿಂದ ಪ್ರಕಟಗೊಂಡಿತು. ಮೊಬೈಲ್ ಹೊರಹಾಕುವ ವಿಕಿರಣಗಳೇ ಈ ಅವಾಂತರಕ್ಕೆ ಮುಖ್ಯ ಕಾರಣ. ದೀರ್ಘಕಾಲ ಮೊಬೈಲ್ ಬಳಸುವವರಲ್ಲಿ ಮೆದುಳು ಸಂಬಂಧಿ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಎರಡರಷ್ಟು ಹೆಚ್ಚು ಎನ್ನುತ್ತದೆ ಒರೆಬ್ರೋ ವಿಶ್ವವಿದ್ಯಾಲಯದ ಪ್ರೊಫೆಸರ್ ಲರ್ನೆಟ್ ಹಾರ್ಡೆಲ್ ಅವರ ನೇತ್ವತ್ವದ ಸಂಶೋಧಕರ ತಂಡ. ಮೆದುಳಿನ ಬಳಿ ಕ್ಯಾನ್ಸರ್ ಗಡ್ಡೆ ಬೆಳೆಯಲು ಸಾಕಷ್ಟು ಸಮಯ ಹಿಡಿಯಬಹುದು. ಹಾಗಾಗಿ 10 ವರ್ಷಗಳ ಕಾಲ ದಿನಕ್ಕೆ 1 ಗಂಟೆಗೂ ಹೊತ್ತು ಮೊಬೈಲ್ ಬಳಸಿದರೂ ಮೆದುಳಿನಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿವೆ ಈ ಅಧ್ಯಯನಗಳು. ಮಕ್ಕಳು ಮೊಬೈಲ್ ಬಳಸುವುದಕ್ಕೆ ಕಡಿವಾಣ ಹಾಕದಿದ್ದರೆ ಅವರ ಸುಕೋಮಲ ಕೆನ್ನೆಗಳಿಗೆ ಹಾಗೂ ಇಡೀ ನರ ವ್ಯವಸ್ಥೆಗೆ ಧಕ್ಕೆಯುಂಟಾಗಿ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂಬುದು ಅಧ್ಯಯನಗಳ ಎಚ್ಚರಿಕೆ.

2007: ವೈದ್ಯಕೀಯ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಆಕರಕೋಶಗಳ ಸಂಶೋಧನೆಗಾಗಿ ಮಾರಿಯೊ ಕೇಪ್ಚಿ, ಮಾರ್ಟಿನ್ ಇವಾನ್ಸ್ ಹಾಗೂ ಆಲಿವರ್ ಸ್ಮಿತ್ಸ್ ತಂಡಕ್ಕೆ 2007ನೇ ಸಾಲಿನ ನೊಬೆಲ್ (ವೈದ್ಯಕೀಯ) ಪ್ರಶಸ್ತಿ ಘೋಷಿಸಲಾಯಿತು. ಆಕರಕೋಶಗಳನ್ನು ಬಳಸಿ ವಂಶವಾಹಿಯಲ್ಲಿ ಬದಲಾವಣೆ ತರುವುದರ ಕುರಿತು ಇಲಿಗಳ ಮೇಲೆ ನಡೆಸಿದ ಸಂಶೋಧನೆಗಾಗಿ ಈ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ದೊರಕಿತು. ಪ್ರಶಸ್ತಿಯು 10 ದಶಲಕ್ಷ ಸ್ವೀಡಿಷ್ ಕ್ರೌನ್ (15.40 ಕೋಟಿ ರೂಪಾಯಿ) ನಗದು ಬಹುಮಾನ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ ಎಂದು ಸ್ವೀಡನ್ನಿನ ಕಾರ್ಲೊನಿಸ್ಕಾ ಸಂಸ್ಥೆ ಪ್ರಕಟಿಸಿತು. ಇಟಲಿಯಲ್ಲಿ ಜನಿಸಿದ ಕೇಪ್ಚಿ ಸದ್ಯ ಅಮೆರಿಕದ ಪ್ರಜೆ. ಇವಾನ್ ಹಾಗೂ ಸ್ಮಿತ್ಸ್ ಅವರು ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಆದರೆ ಈಗ ಇವಾನ್, ಬ್ರಿಟನ್ನಿನ ಹಾಗೂ ಸ್ಮಿತ್ಸ್ ಅಮೆರಿಕದ ಪ್ರಜೆ.

2007: ಅತಿ ಕಡಿಮೆ ದರದಲ್ಲಿ ಚಲನಚಿತ್ರಗಳ ವಿಸಿಡಿ ಮತ್ತು ಡಿವಿಡಿಗಳನ್ನು ಬಿಡುಗಡೆ ಮಾಡಿ ಗೃಹ ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ ಬರೆದಿದ್ದ ಪ್ರಮುಖ ಐಟಿ ಸಂಸ್ಥೆ `ಮೌಸರ್ ಬೇರ್' ಭಾರತದ ಅತಿ ದೊಡ್ಡ ವಿಡಿಯೋ ಸಂಸ್ಥೆ `ಅಲ್ಟ್ರಾ ವಿಡಿಯೋ'ದಿಂದ 900 ಚಲನಚಿತ್ರಗಳ ಹಕ್ಕು ಖರೀದಿಸಿತು. `ಅಲ್ಟ್ರಾ ವಿಡಿಯೋ'ದಿಂದ 800 ಹಿಂದಿ ಮತ್ತು 100 ಗುಜರಾತಿ ಚಲನಚಿತ್ರಗಳ ಹಕ್ಕು ಖರೀದಿಸಿರುವುದಾಗಿ `ಮೌಸರ್ ಬೇರ್' ಪ್ರಕಟಣೆ ತಿಳಿಸಿತು. ಮೌಸರ್ ಬೇರ್ ಪ್ರಸ್ತುತ 2,200 ಚಿತ್ರಗಳ ಹಕ್ಕು ಸ್ವಾಮ್ಯ ಪಡೆದಿದೆ. ಈ ಹೊಸ ಖರೀದಿಯಿಂದ ಸಂಸ್ಥೆಗೆ ಒಟ್ಟು 2,500 ಹಿಂದಿ ಮತ್ತು 400 ಗುಜರಾತಿ ಚಿತ್ರಗಳ ಹಕ್ಕು ಸಿಕ್ಕಿದಂತಾಯಿತು ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ (ಮನರಂಜನಾ ವ್ಯಾಪಾರ) ಹರೀಶ್ ದಯಾನಿ ಹೇಳಿದರು. ಅಲ್ಟ್ರಾ ವಿಡಿಯೋದಿಂದ ಹಕ್ಕು ಖರೀದಿಸಿರುವ ಚಿತ್ರಗಳಲ್ಲಿ ಶೋಲೆ, ಕೋಯಿ ಮಿಲ್ ಗಯಾ, ಬಾಂಬೆ ಟು ಗೋವಾ, ಹೀರೋ ನಂ.1, ಸಾಗರ್, ಮೈನೇ ಪ್ಯಾರ್ ಕಿಯಾ, ಹಂ ಆಪ್ಕೇ ಹೈ ಕೌನ್, ಆರಾಧನಾ, ಆಂದಾಜ್ ಅಪ್ನಾ ಅಪ್ನಾ, ಅಮರ್ ಪ್ರೇಮ್, 36 ಚೈನಾ ಟೌನ್, ಇಕ್ಬಾಲ್ ಹಾಗೂ ಇತರ ಚಿತ್ರಗಳೂ ಸೇರಿವೆ.

2006: ದಲಿತ ಮಹಿಳೆಯೊಬ್ಬಳು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಂತಹ ರಾಜಕೀಯ ವೇದಿಕೆ ಕಲ್ಪಿಸಿ, ಮನುವಾದಿ ಸಂಸ್ಕೃತಿ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿ 1981ರಲ್ಲಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿ ಒಕ್ಕೂಟ ರಚಿಸಿ, 1984ರಲ್ಲಿ ಅದನ್ನೇ ಬಹುಜನ ಸಮಾಜ ಪಕ್ಷವಾಗಿ (ಬಿಎಸ್ಪಿ) ಪರಿವರ್ತಿಸಿದ ದಲಿತ ನಾಯಕ ಕಾನ್ಶಿರಾಂ (1934-2006) ನವದೆಹಲಿಯಲ್ಲಿ ನಿಧನರಾದರು. 72 ವರ್ಷಗಳ ಕಾನ್ಶಿರಾಂ ಅವಿವಾಹಿತರಾಗಿ ಉಳಿದು ತಾವು ಹೊಂದಿದ್ದ ಸರ್ಕಾರಿ ಉದ್ಯೋಗವನ್ನೂ 1971ರಲ್ಲಿ ತ್ಯಜಿಸಿ ದಲಿತರು ಮತ್ತು ಶೋಷಿತ ವರ್ಗಗಳ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 1992ರಲ್ಲಿ ಉತ್ತರ ಪ್ರದೇಶದ ಇತವಾಹ್ ಮತ್ತು 1996ರಲ್ಲಿ ಪಂಜಾಬಿನ ಹಾಶೀರ್ಪುರ ಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ ರಾಜ್ಯಸಭೆ ಸದಸ್ಯರೂ ಆಗಿದ್ದರು. 1934ರಲ್ಲಿ ಪಂಜಾಬಿನ ರೋಪರ್ ಜಿಲ್ಲೆಯ ಖವಾಸ್ಪುರ ಗ್ರಾಮದ ಸಿಖ್ ದಲಿತ ಕುಟುಂಬದಲ್ಲಿ ಹರಿಸಿಂಗ್ ಎಂಬ ಸಾಮಾನ್ಯ ರೈತನ ಮಗನಾಗಿ ಜನಿಸಿದ್ದರು. ಅವರು ಸ್ಥಾಪಿಸಿದ ಬಿಎಸ್ಪಿ 90ರ ದಶಕದಲ್ಲಿ ರಾಷ್ಟ್ರೀಯ ಪಕ್ಷವಾಗಿ ಮನ್ನಣೆ ಪಡೆದು ಉತ್ತರ ಪ್ರದೇಶದಲ್ಲಿ ಅಧಿಕಾರವನ್ನು ಹಿಡಿಯಿತು. ಅವರ ಶಿಷ್ಯೆ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರು.

2005: ಪಾಕಿಸ್ಥಾನದ ವಶದಲ್ಲಿರುವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರಿ ಭೂಕಂಪ ಸಂಭವಿಸಿ 73,000ಕ್ಕೂ ಹೆಚ್ಚು ಮಂದಿ ಮೃತರಾದರು. ಭಾರತದ ಭಾಗದಲ್ಲಿ ಇರುವ ಕಾಶ್ಮೀರದಲ್ಲೂ ಭೂಕಂಪಕ್ಕೆ ಸಿಲುಕಿ 1500ಕ್ಕೂ ಹೆಚ್ಚು ಜನ ಅಸು ನೀಗಿದರು.

1979: ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (ಜೆಪಿ) ಅವರು ತಮ್ಮ 77ನೇ ಹುಟ್ಟು ಹಬ್ಬಕ್ಕಿಂತ ಮೂರುದಿನಗಳ ಮೊದಲು ಪಟ್ನಾದಲ್ಲಿ ನಿಧನರಾದರು.

1958: ಸ್ಟಾಕ್ ಹೋಮಿನ ಕರೋಲಿನ್ ಸ್ಕಾ ಇನ್ ಸ್ಟಿಟ್ಯೂಟಿನಲ್ಲಿ ಡಾ. ಆರ್ನಿ ಸೆನ್ನಿಂಗ್ ಅವರು ಮೊತ್ತ ಮೊದಲ ಆಂತರಿಕ ಹೃದಯ ಪೇಸ್ ಮೇಕರನ್ನು ಸ್ವೀಡಿಷ್ ವ್ಯಕ್ತಿ ಅರ್ನೆ ಲಾರ್ಸೆನ್ ಗೆ ಅಳವಡಿಸಿದರು. ಈ ಪೇಸ್ ಮೇಕರಿನ ಮಾದರಿ (ಪ್ರೊಟೊಟೈಪ್) ಕೇವಲ 3 ಗಂಟೆಗಳ ಕಾಲ ಮಾತ್ರ ಕೆಲಸ ಮಾಡಿತು. ಆದರೆ ಅರ್ನೆ ಲಾರ್ಸೆನ್ ನಂತರ 26 ಪೇಸ್ ಮೇಕರುಗಳನ್ನು ಕಾಲ ಕಾಲಕ್ಕೆ ಅಳವಡಿಸಿಕೊಂಡು 40 ವರ್ಷಗಳ ಕಾಲ ಎಲ್ಲರಂತೆಯೇ ಬದುಕಿದ.

1955: ಸಾಹಿತಿ ಡಿ. ನಂಜಪ್ಪ ಜನನ.

1952: ಸಾಹಿತಿ ಡಾ. ರಂಗಾರೆಡ್ಡಿ ಕೋಡಿರಾಂಪುರ ಜನನ.

1936: ಖ್ಯಾತ ಹಿಂದಿ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರರಾದ ಮುನ್ಶಿ ಪ್ರೇಮ್ ಚಂದ್ (1880-1936) ಅವರು ತಮ್ಮ 56ನೇ ವಯಸ್ಸಿನಲ್ಲಿ ವಾರಾಣಸಿಯಲ್ಲಿ ನಿಧನರಾದರು.

1935: ಭಾರತೀಯ ಅಥ್ಲೆಟ್ ಮಿಲ್ಖಾಸಿಂಗ್ ಜನ್ಮದಿನ. 1960ರ ರೋಮ್ ಒಲಿಂಪಿಕ್ಸ್ ನಲ್ಲಿ 400 ಮೀಟರ್ ಓಟದಲ್ಲಿ ಒಲಿಂಪಿಕ್ ದಾಖಲೆಯನ್ನು ಅವರು ಸೃಷ್ಟಿಸಿದರು. ಆದರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

1933: ಸಾಹಿತಿ, ಗ್ರಂಥಪಾಲಕ ಟಿ.ವಿ. ವೆಂಕಟರಮಣಯ್ಯ ಅವರು ವೆಂಕಟರಮಣಯ್ಯ, ತಿಮ್ಮಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಣ್ಣೂರಿನಲ್ಲಿ ಜನಿಸಿದರು.

1929: ಸಾಹಿತಿ ಮಾಲತಿ ಸುಬ್ರಹ್ಮಣ್ಯಂ ಜನನ.

1918: ಯೂರೋಪಿನ ಕಾಲಾಳು ಸೇನೆಯ 82ನೇ ವಿಭಾಗದ ಅಮೆರಿಕನ್ ಸಾರ್ಜೆಂಟ್ ಆಲ್ವಿನ್ ಸಿ. ಯಾರ್ಕ್ ಏಕಾಂಗಿಯಾಗಿ ಒಬ್ಬ ಜರ್ಮನ್ ಮೇಜರ್ ಹಾಗೂ 132 ಮಂದಿಯನ್ನು ಸೆರೆ ಹಿಡಿದು 35 ಮೆಷಿನ್ಗನ್ಗಳನ್ನು ವಶಪಡಿಸಿಕೊಂಡದ್ದಲ್ಲದೆ ವೈರಿ ಪಡೆಯ 25 ಸೈನಿಕರನ್ನು ಕೊಂದು ಮೊದಲನೇ ಜಾಗತಿಕ ಸಮರದ ಹೀರೊ ಎನ್ನಿಸಿಕೊಂಡರು.

1871: ಶಿಕಾಗೋ ನಗರದ ಕೈಗಾರಿಕಾ ಪ್ರದೇಶ ಸೇರಿದಂತೆ ನಾಲ್ಕು ಚದರ ಮೈಲುಗಳ ವ್ಯಾಪ್ತಿಯಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿತು. ನಗರದ ನೈಋತ್ಯಭಾಗದಿಂದ ಆರಂಭವಾದ ಬೆಂಕಿ ಮರದ ಕಟ್ಟಡಗಳು ಸೇರಿದಂತೆ ಸಿಕ್ಕಿದ್ದೆಲ್ಲವನ್ನೂ ನುಂಗಿ ಹಾಕಿತು. ಮಿಶಿಗನ್ ಪಟ್ಟಣಕ್ಕೆ ತಲುಪುವ ವೇಳೆಗೆ ಬೆಂಕಿಯ ಕೆನ್ನಾಲಿಗೆ ದುರ್ಬಲಗೊಂಡು ಆರಿತು. ಅಕ್ಟೋಬರ್ 8ರಿಂದ 10ರವರೆಗೆ ನಡೆದ ಈ ಅಗ್ನಿಕಾಂಡದ್ಲಲಿ 250 ಜನ ಪ್ರಾಣ ಕಳೆದುಕೊಂಡರು. 90,000 ಜನ ನಿರಾಶ್ರಿತರಾದರು. ಅಂದಾಜು 20 ಲಕ್ಷ ಡಾಲರ್ ಮೊತ್ತದ ಆಸ್ತಿಪಾಸ್ತಿ ನಷ್ಟವಾಯಿತು.

No comments:

Post a Comment