Thursday, October 25, 2018

ಇಂದಿನ ಇತಿಹಾಸ History Today ಅಕ್ಟೋಬರ್ 25

ಇಂದಿನ ಇತಿಹಾಸ History Today ಅಕ್ಟೋಬರ್ 25
2018: ಕಾರವಾರ: ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾದ ಘಟಕ-1, ಸತತ 894 ದಿನ ವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲೂ ವಿದ್ಯುತ್ ಉತ್ಪಾದನೆ ಮುಂದುವರೆಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿತು. 2018 ಅಕ್ಟೋಬರ್ 24ರ ಬುಧವಾರ ಬೆಳಗ್ಗೆ 9 ಗಂಟೆ 19 ನಿಮಿಷಕ್ಕೆ ಕೈಗಾ ಘಟಕ-1ರಲ್ಲಿ 894 ದಿನ ಸತತ ವಿದ್ಯುತ್ ಉತ್ಪಾದಿಸಲಾಯಿತು. ಮೂಲಕ ಇಂಗ್ಲೆಂಡಿನ (ಯುನೈಟೆಡ್ ಕಿಂಗ್ಡಂ) ಏಷ್ಯನ್ ಅಣು ಸ್ಥಾವರ 894 ದಿನ ಕಾಲ ಸತತ ವಿದ್ಯುತ್ ಉತ್ಪಾದನೆ ಮಾಡಿದ್ದ ದಾಖಲೆಯನ್ನು ಸರಿಗಟ್ಟಿತು. ತನ್ನ ಸಾಧನೆಯನ್ನು ಮುಂದುವರೆಸಿದ  ಘಟಕವು  ಈದಿನ 895 ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರೆಸಿತು. ಬೆಳಗ್ಗೆ 9 ಗಂಟೆಗೆ 895 ದಿನ ಪೂರೈಸಿ 896ನೇ ದಿನಕ್ಕೆ ಕಾಲಿಟ್ಟಿತು. ವಿಶ್ವದಲ್ಲಿ ಸತತ 894 ದಿನ ಅಣು ವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರಿಸಿದ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೈಗಾ ಘಟಕ-1, ಜಾಗತಿಕವಾಗಿ ಎರಡನೇ ಸ್ಥಾನ ಪಡೆದಿದೆ. ಭಾರತದಲ್ಲಿ ಪ್ರಥಮ ಸ್ಥಾನ: ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಾಪನೆಯಾದ ರಿಯಾಕ್ಟರ್ ಹೆವಿ ವಾಟರ್ ರಿಯಾಕ್ಟರ್ (ಪಿಎಚ್ಡಬುಇಆರ್)ತಂತ್ರಜ್ಞಾನದ್ದು. ಮಾದರಿಯ ರಿಯಾಕ್ಟರ್ಗಳ ಪೈಕಿ ಸತತ 894 ದಿನ ವಿದ್ಯುತ್ ಉತ್ಪಾದಿಸಿದ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ. ಮಾದರಿಯ ಅಣು ರಿಯಾಕ್ಟರ್ಗಳಲ್ಲಿ ಸತತ 894 ದಿನಗಳ ಕಾಲ ಅಣು ವಿದ್ಯುತ್ ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ. ತಂತ್ರಜ್ಞಾನದ ದಿಸೆಯಲ್ಲಿ ಕೈಗಾ ಘಟಕ-1 ರಿಯಾಕ್ಟರ್ ದಾಖಲೆ ಬರೆದಿದೆ. ಹಿಂದಿನ ದಿನ ಬೆಳಗ್ಗೆ 9 ಗಂಟೆಗೆ ಭಾರತ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ವಿಶ್ವಮಟ್ಟದಲ್ಲಿ ಬರೆದಿದೆ ಎಂದು ಕೈಗಾದ ವಿಜ್ಞಾನಿ ದೇಶಪಾಂಡೆ ತಿಳಿಸಿದರು.


2018: ನವದೆಹಲಿ: ಏರ್ ಸೆಲ್ ಮ್ಯಾಕ್ಸಿಸ್ ವ್ಯವಹಾರ ಪ್ರಕರಣದಲ್ಲಿ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ಎರಡನೇ ಪೂರಕ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿತು. ಇದರೊಂದಿಗೆ ಚಿದಂಬರಂ ಅವರಿಗೆ ಇನ್ನಷ್ಟು ಸಂಕಷ್ಟ ಎದುರಾಯಿತು. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ಹಿಂದೆಯೇ ತಮ್ಮ ವಿರುದ್ಧದ ಎಲ್ಲ ಆಪಾದನೆಗಳನ್ನೂ ತಳ್ಳಿ ಹಾಕಿದ್ದರು. ಎಸ್. ಭಾಸ್ಕರರಾಮನ್, ಏರ್ ಸೆಲ್ ಟೆಲೆವೆಂಚರ್ಸ್ ಲಿಮಿಟೆಡ್, ವಿ. ಶ್ರೀನಿವಾಸನ್, ಆಸ್ಟ್ರೋ ಆಲ್ ಏಷ್ಯಾ ನೆಟ್ ವರ್ಕ್ಸ್ ಪ್ಲಾಕ್ (ಮಲೇಶ್ಯ), ಮ್ಯಾಕ್ಸಿಸ್ ಮೊಬೈಲ್ ಎಸ್ ಡಿಎನ್ ಬಿಎಚ್ ಡಿ (ಮಲೇಶ್ಯ) ಮತು ಮಲೇಶ್ಯ ನಿವಾಸಿ ಆಗಸ್ಟಸ್ ರಾಲ್ಫ್ ಮಾರ್ಶಲ್ ಅವರನ್ನೂ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಯಿತು. ೨೦೦೬ರ ಮಾರ್ಚ್ ತಿಂಗಳಲ್ಲಿ ಆಗಿನ ಹಣಕಾಸು ಸಚಿವರಿಂದ ಎಫ್ ಐಪಿಬಿ ಅನುಮೋದನೆಗಾಗಿ .೧೬ ಕೋಟಿ ರೂಪಾಯಿ ಹಣ ವರ್ಗಾವಣೆಯ ಆರೋಪಿತ ಅಪರಾಧಕ್ಕಾಗಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿತು. ವಿವಿಧ ನಿಯಮಾವಳಿಗಳನ್ನು ಮತ್ತು ನಿಯಂತ್ರಣಗಳನ್ನು ಉಲ್ಲಂಘಿಸಿ ಮ್ಯಾಕ್ಸಿಸ್ ಬೆರ್ಹಾಡ್ ಆಧೀನ ಸಂಸ್ಥೆಯಾಗಿರುವ ವಿದೇಶೀ ಹೂಡಿಕೆದಾರ ಗ್ಲೋಬಲ್ ಕಮ್ಯೂನಿಕೇಷನ್ ಅಂಡ್ ಸರ್ವೀಸಸ್ ಹೋಲ್ಡಿಂಗ್ಸ್ ಲಿಮಿಟೆಡ್, ಮಾರಿಷಸ್ ಇದಕ್ಕೆ ಅನುಮೋದನೆ ನೀಡಲಾಗಿತ್ತು. ಕಾರ್ತಿ ಮತ್ತು ಅವರ ನಿಕಟವರ್ತಿಗಳಿಂದ ವಶ ಪಡಿಸಿಕೊಳ್ಳಲಾದ ಸಾಧನಗಳಿಂದ ಪತ್ತೆ ಹಚ್ಚಲಾದ -ಮೇಲ್ ರೂಪದ ಸಂಪರ್ಕ ರೂಪದ ಸಾಕ್ಷ್ಯಾಧಾರಗಳ ಆಧಾರದಲ್ಲಿ ಇತ್ತೀಚಿನ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿತು. ‘ಮಾಹಿತಿಗಳು ಕಾರ್ತಿ ಕಂಪೆನಿಗಳಲ್ಲಿ ಅಕ್ರಮ ಎಫ್ ಐಪಿಬಿ ಅನುಮೋದನೆಯ ಫಲಾನುಭವಿಗಳಕಾನೂನು ಬದ್ಧ ವ್ಯವಹಾರದ ಸೋಗಿನಲ್ಲಿ  ನಡೆದ ವಂಚನೆಯನ್ನು ಬಹಿರಂಗ ಪಡಿಸಿದೆ ಎಂದು ಚಾರ್ಜ್ಶೀಟ್ ಹೇಳಿತು. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಲು ಜಾರಿ ನಿರ್ದೇಶನಾಲಯಕ್ಕೆ ಸೆಪ್ಟೆಂಬರ್ ೨೦ರಂದು ಮೂರು ತಿಂಗಳುಗಳ ಕಾಲಾವಕಾಶ ನೀಡಲಾಗಿತ್ತು.
ನಿರ್ದೇಶನಾಲಯವು ಕಾರ್ತಿ, ರವಿ ವಿಶ್ವನಾಥನ್, ಪದ್ಮ ಭಾಸ್ಕರರಾಮನ್, ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ ಸಲ್ಟಿಂಗ್ ಅಂಡ್ ಚೆಸ್ ಮ್ಯಾನೇಜ್ ಮೆಂಟ್ ಸರ್ವೀಸಸ್ ವಿರುದ್ಧ ಜೂನ್ ೧೩ರಂದು ತನ್ನ ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

2018: ನವದೆಹಲಿ: ರಾತ್ರೋರಾತ್ರಿ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಖ್ಯಸ್ಥರನ್ನು ಬದಲಾಯಿಸಿದ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಸಂಸ್ಥೆಯು ರಫೇಲ್ ಯುದ್ಧ ವಿಮಾನ ವ್ಯವಹಾರದ ತನಿಖೆ ನಡೆಸುವುದೆಂಬ ಕಾರಣಕ್ಕೆ ಭಯಭೀತರಾಗಿ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಅವರನ್ನು ಕಿತ್ತುಹಾಕುವ ಮಧ್ಯರಾತ್ರಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟೀಕಿಸಿದರು. ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪಕ್ಷ ನಾಯಕರ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ವರ್ಮ ಅವರನ್ನು ಹುದ್ದೆಯಿಂದ ಕಿತ್ತು ಹಾಕಿರುವುದು ಭಾರತದ ಸಂವಿಧಾನಕ್ಕೆ ಮಾಡಿರುವ ಅಪಮಾನವಷ್ಟೇ ಅಲ್ಲ, ಅಕ್ರಮ ಹಾಗೂ ಕ್ರಿಮಿನಲ್ ಕೃತ್ಯ ಎಂದು ಬಣ್ಣಿಸಿದರು. ‘ರಾತ್ರಿ ಗಂಟೆಗೆ ವರ್ಮ ಅವರನ್ನು ಏಕೆ ಕಿತ್ತು ಹಾಕಲಾಯಿತು ಎಂಬುದು ಪ್ರಶ್ನೆ. ಮುಖ್ಯ ಕಾರಣ ಸಿಬಿಐಯು ರಫೇಲ್ ವ್ಯವಹಾರದಲ್ಲಿ ಪ್ರಧಾನಿಯವರ ಪಾತ್ರ ಮತ್ತು ರಫೇಲ್ ವ್ಯವಹಾರದಲ್ಲಿನ ಪ್ರಧಾನಿಯವರ ಭ್ರಷ್ಟಾಚಾರದ ಬಗ್ಗೆ ತನಿಖೆ ಆರಂಭಿಸಲಿದೆ ಎಂಬ ಭೀತಿ ಎಂದು ರಾಹುಲ್ ಹೇಳಿದರು. ಎರಡು ವರ್ಷಗಳ ಅವಧಿಗಾಗಿ ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅಲೋಕ್ ವರ್ಮ ಅವರ ಅಧಿಕಾರಾವಧಿ ಜನವರಿ ಕೊನೆಯವರೆಗೆ ಇದ್ದಾಗ ಅವರನ್ನು ಕಿತ್ತು ಹಾಕಿದ ಕ್ರಮದ ಕಾನೂನು ಬದ್ಧತೆ ಏನು ಎಂದು ಕಾಂಗ್ರೆಸ್ ಪ್ರಶ್ನಿಸಿತು. ವಿವಾದಾತ್ಮಕ ರಫೇಲ್ ವ್ಯವಹಾರದ ಬಗ್ಗೆ ತನಿಖೆ ನಡೆಸಲು ವರ್ಮ ಸಜ್ಜಾಗಿದ್ದುದರಿಂದ ಪ್ರಧಾನಿ ಭಯಭೀತರಾಗಿದ್ದರು ಮತ್ತು ತನಿಖಾ ಸಂಸ್ಥೆಯನ್ನು ಸ್ವಚ್ಛಗೊಳಿಸುವ ನೆಪದಲ್ಲಿ ಅವರನ್ನು ಹುದ್ದೆಯಿಂದ ಕಿತ್ತು ಹಾಕಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.ವರ್ಮ ಅವರ ಕಚೇರಿಗೆ ಬೀಗಮುದ್ರೆ ಹಾಕಬಹುದು ಮತ್ತು ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದ ಆಪಾದನೆಗಳನ್ನು ಪುಷ್ಟೀಕರಿಸುವ ದಾಖಲೆಗಳನ್ನು ನಾಶಪಡಿಸಬಹುದು ಎಂಬ ಕಾರಣಕ್ಕಾಗಿ ಮಧ್ಯರಾತ್ರಿಯಲ್ಲಿ ಸಿಬಿಐ ಮುಖ್ಯಸ್ಥರನ್ನು ಕಿತ್ತುಹಾಕುವ ಕ್ರಮ ಕೈಗೊಳ್ಳಲಾಯಿತು ಎಂದು ಕಾಂಗ್ರೆಸ್ ಅಧ್ಯಕ್ಷರು ನುಡಿದರು.ಸಿಬಿಐ ನಕಾರ: ಮಧ್ಯೆ, ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಗೆ ವರ್ಮ ಆದೇಶ ನೀಡಿದ್ದರು ಎಂಬ ವರದಿಗಳನ್ನು ಸಿಬಿಐ ನಿರಾಕರಿಸಿದೆ. ’ಸ್ಥಾಪಿತ ಹಿತಾಸಕ್ತಿಯ ಉದ್ದೇಶಕ್ಕಾಗಿ ತಪ್ಪು ಮಾಧ್ಯಮ ವರದಿಗಳನ್ನು ಸೃಷ್ಟಿಸಲಾಗುತ್ತಿದೆ. ಸಿಬಿಐಯಲ್ಲಿನ ಪ್ರತಿಯೊಂದು ದಾಖಲೆ ಬಗೆಗೂ ಪ್ರತಿಹಂತದಲ್ಲೂ ಉತ್ತರದಾಯಿತ್ವ ಇರುತ್ತದೆ ಎಂದು ಸಿಬಿಐ ವಕ್ತಾರರು ಹೇಳಿದರು.ಫ್ರಾನ್ಸ್ ಜೊತೆಗಿನ ರಫೇಲ್ ಯುದ್ಧ ವಿಮಾನ ವ್ಯವಹಾರದಲ್ಲಿನ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದ ೧೩೨ ಪುಟಗಳ ದೂರೊಂದು ತನಗೆ ಲಭಿಸಿರುವುದಾಗಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ವರ್ಮ ಅವರು ಎರಡನೇ ಸ್ಥಾನದಲ್ಲಿದ್ದ ಅಸ್ತಾನ ಜೊತೆಗೆ ಆಂತರಿಕ ಘರ್ಷಣೆ ತಾರಕಕ್ಕೆ ಏರಿದ್ದ ಸಂದರ್ಭದಲ್ಲೇ ರಫೇಲ್ ವ್ಯವಹಾರ ಕುರಿತ ದೂರಿನ ತನಿಖೆಗೆ ಆಜ್ಞಾಪಿಸಿದ್ದರು ಎಂದು ಹೇಳಲಾಗಿತ್ತುಸಿಬಿಐ ಮುಖ್ಯಸ್ಥರ ಬದಲಾವಣೆಗೆ ಕೈಗೊಂಡ ತೀರ್ಮಾನವನ್ನು ಪ್ರಶ್ನಿಸಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಟು ಶಬ್ದಗಳ ಪತ್ರವನ್ನು ಬರೆದರು. ‘ಅವರು ಬಹುಶಃ ರಫೇಲ್ ಹಗರಣದ ಬಗ್ಗೆ ಮತ್ತು ಸಾಲದೊಂದಿಗೆ ರಾಷ್ಟ್ರದಿಂದ ಪರಾರಿಯಾಗಿರುವ ತಮ್ಮ ಗೆಳೆಯರ ಬಗ್ಗೆ ಕನಸು ಕಾಣುತ್ತಿದ್ದರು. ಹೀಗಾಗಿಯೇ ರಾತ್ರೋರಾತ್ರಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಪತ್ರಿಕಾಗೋಷ್ಠಿಯಲ್ಲಿ ನುಡಿದರು.ಇದಕ್ಕೆ ಮುನ್ನ ಅಲೋಕ್ ವರ್ಮ ಅವರ ನಿವಾಸದ ಹೊರಭಾಗದಲ್ಲಿ ಗುಪ್ತಚರ ದಳದ ನಾಲ್ವರುಶಂಕಿತರನ್ನು ಬಂಧಿಸಿದ ಬಳಿಕ ಕಾಂಗ್ರೆಸ್ಜಾಗೃತಾ ದಳವು ಸಿಬಿಐ ಮಾರ್ಗದಲ್ಲಿ ಸಾಗುತ್ತಿದೆ ಎಂದು ಆಪಾದಿಸಿತ್ತು.ಪೊಲೀಸರಿಂದ ಬಂಧನಕ್ಕೆ ಒಳಗಾದ ವ್ಯಕ್ತಿಗಳು ವರ್ಮ ಅವರ ಸಿಬಿಐ ನಿವಾಸದ ಹೊರಗೆ ಎರಡು ಕಾರುಗಳಲ್ಲಿ ಕಾದಿದ್ದರು. ಅವರನ್ನು ಧೀರಜ್ ಕುಮಾರ್, ಅಜಯ್ ಕುಮಾರ್, ಪ್ರಶಾಂತ್ ಮತ್ತು ವಿನೀತ್ ಕುಮಾರ್ ಗುಪ್ತ ಎಂಬುದಾಗಿ ಗುರುತಿಸಲಾಗಿತ್ತು. ಕೇಂದ್ರ ಸರ್ಕಾರವು ಗುಪ್ತಚರ ದಳದ ಮೂಲಕ ಸಿಬಿಐ ನಿರ್ದೇಶಕರ ಮೇಲೆಯೇ ಕಣ್ಣಿಟ್ಟಿದೆ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಆಪಾದಿಸಿದ್ದರು.

2018: ನವದೆಹಲಿ: ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಅವರನ್ನು ಅಧಿಕಾರದಿಂದ ಇಳಿಸಿ, ಅವರ ಸ್ಥಾನಕ್ಕೆ ಹಂಗಾಮಿ ಮುಖ್ಯಸ್ಥರನ್ನು ನೇಮಕ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಹಾಗೂ ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಖಡಕ್ ಪತ್ರವೊಂದರಲ್ಲಿ ಕಾಂಗ್ರೆಸ್ ನಾಯಕ, ಪ್ರಧಾನಿಗಾಗಲೀ ಕೇಂದ್ರೀಯ ವಿಚಕ್ಷಣಾ ಆಯೋಗಕ್ಕಾಗಲೀ (ಸಿವಿಸಿ) ಸಿಬಿಐ ನಿರ್ದೇಶಕರ ಸೇವಾಶರತ್ತುಗಳ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರ ಇಲ್ಲ ಎಂದು ಹೇಳಿದರು. ‘ಈ ಕ್ರಮಕ್ಕೆ ಆಯ್ಕೆ ಸಮಿತಿಯ ಅನುಮೋದನೆ ಪಡೆಯಬೇಕಾಗಿತ್ತು ಎಂದು ಅವರು ಪ್ರತಿಪಾದಿಸಿದರು. ಪ್ರಧಾನ ಮಂತ್ರಿ ಅಧ್ಯಕ್ಷತೆ ಹಾಗೂ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮತ್ತು ಇತರರು ಸದಸ್ಯರಾಗಿರುವ ಆಯ್ಕೆ ಸಮಿತಿಯು ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡುತ್ತದೆ.ಭ್ರಮನಿರಸನದಾಯಕ ಮತ್ತು ಅವಸರದ ಕ್ರಮಕ್ಕೆ ನೀಡಿರುವ ವಿವರಣೆ ಬರೇ ತೋರಿಕೆಯದ್ದು ಎಂದು ಹೇಳಿರುವ ಖರ್ಗೆ, ಸರ್ಕಾರಕ್ಕೆ ಮುಜುಗರ ಉಂಟು ಮಾಡಬಹುದಾಗಿದ್ದ ವಿಶೇಷ ನಿರ್ದೇಶಕರ ವಿರುದ್ಧದ ಮತ್ತು ಇತರ ಪ್ರಕರಣಗಳ ತನಿಖೆಯನ್ನು ದಿಕ್ಕುತಪ್ಪಿಸುವ ಯತ್ನವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ತಮ್ಮ ಪತ್ರದಲ್ಲಿ ದೂರಿದರು. ಖರ್ಗೆ ಅವರು ಅಲೋಕ್ ವರ್ಮ ಅವರನ್ನು ೨೦೧೭ರಲ್ಲಿ ಸಿಬಿಐ ಮುಖ್ಯಸ್ಥರಾಗಿ ನೇಮಿಸುವ ಸಂದರ್ಭದಲ್ಲಿ ವಿರೋಧ ವ್ಯಕ್ತ ಪಡಿಸಿ ಭಿನ್ನಮತದ ಟಿಪ್ಪಣಿ ನೀಡಿದ್ದರು.ಈದಿನ ವರ್ಮ ಅವರಿಗೆ ಬೆಂಬಲವಾಗಿ ನಿಂತ ಕಾಂಗ್ರೆಸ್ ನಾಯಕ, ’ನಾನು ೨೦೧೭ರಲ್ಲಿ  ಸರ್ಕಾರವು ಅತ್ಯಂತ ಹಿರಿಯ ಅಧಿಕಾರಿ ಆರ್.ಕೆ. ದತ್ತ ಅವರನ್ನು ನಿರ್ಲಕ್ಷಿಸಿ, ವರ್ಮ ಅವರನ್ನು ನೇಮಿಸಿದ್ದಕ್ಕಾಗಿ ಭಿನ್ನಮತದ ಟಿಪ್ಪಣಿ ನೀಡಿದ್ದೆ ಎಂದೂ ಪತ್ರದಲ್ಲಿ ನೆನಪಿಸಿದರು.

2018: ತಿರುವನಂತಪುರಂ:  ಸುಪ್ರೀಂಕೋರ್ಟ್ ಆದೇಶದ ಹೊರತಾಗಿಯೂ ಶಬರಿಮಲೈ ದೇವಾಲಯಕ್ಕೆ ಋತುಮತಿ ವಯೋಮಾನದ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಹಿಂಸಾಚಾರಕ್ಕೆ ಇಳಿದ ಪ್ರತಿಭಟನಕಾರರ ಬಂಧನಕ್ಕಾಗಿ ಕೇರಳ ಪೊಲೀಸರು ಕಳೆದೆರಡು ದಿನಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡು ೧೫೦೦ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು. ಸುಮಾರು ೨೧೦ಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ ಗಳನ್ನು ಜಾರಿ ಮಾಡಿದ್ದು, ಸುಮಾರು ೨೦೦೦ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣಗಳನ್ನು ದಾಖಲಿಸಿದರು. ಎರ್ನಾಕುಲಂ ಗ್ರಾಮೀಣ, ಟ್ರಿಪುನಿಥುರ, ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶ್ಯೂರು, ಕೊಟ್ಟಾಯಂ ಮತ್ತು ಅಲಪ್ಪುಳದಲ್ಲಿ ಎರಡು ದಿನಗಳಲ್ಲಿ ಸಹಸ್ರಾರು ಮಂದಿಯನ್ನು ಬಂಧಿಸಲಾಯಿತು. ಋತುಮತಿ ವಯೋಮಾನದ ಮಹಿಳೆಯರ ಪ್ರವೇಶದ ಮೇಲಿದ್ದ ನಿಷೇಧವನ್ನು ರದ್ದು ಪಡಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಶಬರಿಮಲೈ ದೇವಾಲಯದ ಬಾಗಿಲುಗಳನ್ನು ಭಕ್ತರಿಗಾಗಿ ಅಕ್ಟೋಬರ್ ೧೭ರಂದು ತೆರೆಯಲಾಗಿತ್ತು. ಆದರೆ ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಕೇರಳ ಸರ್ಕಾರ ಕೈಗೊಂಡ ತೀರ್ಮಾನವನ್ನು ಪ್ರತಿಭಟಿಸಿ ಆರು ದಿನಗಳ ಕಾಲ ಪ್ರತಿಭಟನೆಗಳು ನಡೆದ ಪರಿಣಾಮವಾಗಿ ಯಾರೊಬ್ಬ ಮಹಿಳೆಗೂ ದೇಗುಲ ಪ್ರವೇಶ ಸಾಧ್ಯವಾಗಿರಲಿಲ್ಲ.
ಪ್ರತಿಭಟನೆ ಹಲವೆಡೆಗಳಲ್ಲಿ ಹಿಂಸೆಗೆ ತಿರುಗಿ, ಪೊಲೀಸ್ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ ಆರ್ ಟಿಸಿ) ಬಸ್ಸುಗಳ ಮೇಲೆ ಉದ್ರಿಕ್ತ ಗುಂಪುಗಳು ದಾಳಿ ನಡೆಸಿ ಮಹಿಳೆಯರು, ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತರನ್ನು ದೇವಾಲಯದತ್ತ ಸಾಗದಂತೆ ಅಡ್ಡ ಗಟ್ಟಿದ್ದವು. ಶೀಘ್ರದಲ್ಲೇ ಇನ್ನಷ್ಟು ಮಂದಿಯನ್ನು ಬಂಧಿಸುವುದಾಗಿ ತಿಳಿಸಿರುವ ಪೊಲೀಸರು ಅಪರಾಧಿಗಳ ಬಗ್ಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಕೋಯಿಕ್ಕೋಡಿನಲ್ಲಿ ಪೂರ್ವಾನುಮತಿ ಇಲ್ಲದೆ ಪ್ರತಿಭಟನಾ ಮೆರವಣಿಗೆಗಳನ್ನು ಸಂಘಟಿಸಿ, ಹಿಂಸೆಗೆ ಪ್ರಚೋದನೆ ನೀಡಿದ್ದಕ್ಕಾಗಿ ಮತ್ತು ಸಾರ್ವಜನಿಕ ಆಸ್ತಿ ಹಾನಿಪಡಿಸಿದ್ದಕ್ಕಾಗಿ ಹಿಂದುತ್ವ ಸಂಘಟನೆಗಳ ಸದಸ್ಯರು ಎನ್ನಲಾದ ೩೦ ಮಂದಿಯನ್ನು ಪೊಲೀಸರು ಬಂಧಿಸಿದರು. ಶಂಕಿತರನ್ನು ಬಳಿಕ ಜಾಮೀನಿನಲ್ಲಿ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ಹೇಳಿದರು. ಪಟ್ಟಣಂತಿಟ್ಟ ಜಿಲ್ಲೆಯಲ್ಲಿ ಕಳೆದ ವಾರದ ಪ್ರತಿಭಟನೆಗಳ ಕಾಲದಲ್ಲಿ ಹಿಂಸಾಚಾರ ಎಸಗಿದ ದುಷ್ಕರ್ಮಿಗಳ ಬಂಧನಕ್ಕಾಗಿ ವಿಡಿಯೋ ದೃಶ್ಯಾವಳಿಗಳ ನೆರವು ಪಡೆದಿರುವ ಆಡಳಿತವು ಶಂಕಿತ ವ್ಯಕ್ತಿಗಳ ಆಲ್ಬಂ ತಯಾರಿಸಿ, ಪಟ್ಟಿ ಮಾಡಿ ಕೇರಳ ಪೊಲೀಸರಿಗೆ ಕಳುಹಿಸಿಕೊಟ್ಟಿದೆ ಎಂದು ಮೂಲಗಳು ಹೇಳಿದವು.

2018: ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಎಐ ಎಡಿಎಂಕೆಯ ೧೮ ಬಂಡಾಯ ಶಾಸಕರ ಅನರ್ಹತೆ ಮಾಡಿರುವ ಸ್ಪೀಕರ್ ನಿರ್ಧಾರವನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿಯಿತು. ಇದರಿಂದಾಗಿ ಟಿಟಿವಿ ದಿನಕರನ್ ಗುಂಪಿಗೆ ಭಾರೀ ಹಿನ್ನಡೆ ಯಾಯಿತು. ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಹಾಗೂ ಸಿಎಂ ಪಳನಿಸ್ವಾಮಿ ಬಣ ವಿಲೀನದ ಬಳಿಕ, ದಿನಕರನ್ ಜೊತೆ ಗುರುತಿಸಿಕೊಂಡಿದ್ದ ಎಐಎಡಿಎಂಕೆ ಪಕ್ಷದ ೧೮ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ನ್ಯಾಯಮೂರ್ತಿ ಎಂ ಸತ್ಯನಾರಾಯಣ ತೀರ್ಪು ಪ್ರಕಟಿಸಿದರು. ಜೂನ್ ೧೪ರಂದು ಹೈಕೋರ್ಟ್ ನ್ಯಾಯಪೀಠ ವೈರುಧ್ಯ ತೀರ್ಪು ನೀಡಿದ ನಂತರ ಸುಪ್ರೀಂ ಕೋರ್ಟ್ ನಿಂದ ನೇಮಕಗೊಂಡಿರುವ ಮೂರನೇ ನ್ಯಾಯಾಧೀಶರು ನೀಡಿದ  ತೀರ್ಪು ಇದು. ಅಣ್ಣಾ ಡಿಎಂಕೆಯ ೧೮ ಬಂಡಾಯ ಶಾಸಕರ ಅನರ್ಹತೆಗೊಳಿಸಿ ಸ್ಪೀಕರ್ ನೀಡಿದ್ದ ತೀರ್ಮಾನವನ್ನು ಎತ್ತಿಹಿಡಿದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ತೀರ್ಪು ನೀಡಿದ್ದರೆ, ಮೂಲ ನ್ಯಾಯಪೀಠದಲ್ಲಿ ಎರಡನೇ ನ್ಯಾಯಾಧೀಶರು ಅದಕ್ಕೆ ವಿರುದ್ಧ ತೀರ್ಪು ನೀಡಿದ್ದರು.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾವಿರಾರು ಕೋಟಿ ರೂ. ಸಾಲ ಮಾಡಿ ಹಿಂದಿರುಗಿಸದೇ ವಿದೇಶದಲ್ಲಿ ತಲೆಮರೆಸಿಕೊಂಡ  ಉದ್ಯಮಿ ನೀರವ್ ಮೋದಿ ಅವರಿಗೆ ಸೇರಿದ ಹಾಂಗ್ ಕಾಂಗ್ ಮೂಲದ ೨೫೫ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾ ಲಯ ಮುಟ್ಟುಗೋಲು ಹಾಕಿಕೊಂಡಿತು. ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ ಅಡಿ ಆಸ್ತಿಯನ್ನು ವಶಪಡಿಸಿ ಕೊಳ್ಳಲಾಯಿತು. ಪಿಎನ್ ಬಿ ಹಗರಣ ದಿಂದ ಇಲ್ಲಿಯವರೆಗೂ ನೀರವ್ ಮೋದಿಗೆ ಸಂಬಂಧಿಸಿದ ಅಂದಾಜು ,೭೪೪ ಕೋಟಿ ರೂ. ಮೌಲ್ಯದ ಆಸ್ತಿಯನ್ನು .ಡಿ. ಮುಟ್ಟುಗೋಲು ಹಾಕಿಕೊಂಡಿತು.
ಪಿಎನ್ ಬಿ ಹಗರಣದಲ್ಲಿ ನೀರವ್ ಮೋದಿ ಹೆಸರು ಕೇಳಿ ಬರುತ್ತಿದ್ದಂತೆಯೇ ನೀರವ್, ವಿದೇಶಕ್ಕೆ ಪರಾರಿಯಾಗಿದ್ದು, ಮೋದಿ ವಿರುದ್ಧ ಇಂಟರ್ಪೋಲ್ ಬಂಧನದ ವಾರಂಟ್ ಕೂಡ ಜಾರಿಗೊಳಿಸಿತ್ತು. ಇದೇ ತಿಂಗಳ ಆರಂಭದಲ್ಲಿ ಭಾರತ ಸೇರಿ ದೇಶಗಳಲ್ಲಿ ನೀರವ್ ಗೆ ಸಂಬಂಧಿಸಿದ ಅಂದಾಜು ೬೩೭ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಸಂಪತ್ತು ವಶಪಡಿಸಿಕೊಳ್ಳಲು ತಾತ್ಕಾಲಿಕ ಆದೇ ಶವನ್ನು ಹೊರಡಿಸಲಾಗಿದೆ ಎಂದು ಇಡಿ ತಿಳಿಸಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಪ್ರಕರಣ ದಾಖಲಾದ ನಂತರ ದುಬೈ ಮೂಲದ ಕಂಪನಿಯೊಂದರ ಮೂಲಕ ಭಾರೀ ಮೌಲ್ಯದ ಚಿನ್ನಾ ಭರಣವನ್ನು ಹಾಂಗ್ ಕಾಂಗ್ ಗೆ ರಪ್ತು ಮಾಡಲಾಗಿತ್ತು.


2008: ಬಾಹ್ಯಾಕಾಶ ಇಲಾಖೆ ಹಾಗೂ ಸೇನಾ ವಿಭಾಗದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದನ್ನು ಕೇಂದ್ರ ಮಹಾಲೇಖಪಾಲರ ವರದಿ ಪತ್ತೆಹಚ್ಚಿತು. 1986ರ ನಂತರ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ಇಲಾಖೆಯ ವ್ಯವಹಾರಗಳ ಬಗ್ಗೆ ಲೆಕ್ಕಪರಿಶೋಧನೆ ಮಾಡಿದ ಈ ವಿಸ್ತೃತ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಜಗತ್ತಿನ ಅತಿ ಎತ್ತರದ ಯುದ್ಧಭೂಮಿಗಳ ಪೈಕಿ ಒಂದಾಗಿರುವ ಹಿಮಾಚ್ಛಾದಿತ ಸಿಯಾಚಿನ್ ಪ್ರದೇಶದಲ್ಲಿ ಗಡಿ ಕಾಯುವ ಯೋಧರಿಗೆ ಚಳಿ ತಡೆದುಕೊಳ್ಳಲು ನೀಡಲಾಗುವ ವಿಶೇಷ ಬಟ್ಟೆಗಳು `ಭಾಗಶಃ ಹರಿದುಹೋಗಿರುವಂತಹವು ಹಾಗೂ ಬಳಕೆ ಮಾಡಿರುವಂತಹವು' ಎಂದು ಇನ್ನೊಂದು (ಸಿಎಜಿ) ವರದಿ ಹೇಳಿತು. ಹಿಮ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಯೋಧರಿಗೆ ಸಮರ್ಪಕವಾದ ವಿಶೇಷ ಬಟ್ಟೆ ಹಾಗೂ ಬೆಟ್ಟಗುಡ್ಡಗಳನ್ನು ಹತ್ತಲು ಬಳಸುವ ವಿಶೇಷ ಸಲಕರಣೆಗಳನ್ನು ಸಮಯಕ್ಕೆ ಸರಿಯಾಗಿ ನೀಡುವಲ್ಲಿ ಸೇನೆ ವಿಫಲವಾಗಿದೆ ಎಂದು ವರದಿ ತಿಳಿಸಿತು.

2008: ಅಮೆರಿಕದಲ್ಲಿ ಆರ್ಥಿಕ ಹಿನ್ನಡೆ ಇನ್ನೂ ಮುಂದುವರಿದು, ಜಾರ್ಜಿಯಾದ ಅಲ್ಫಾ ಬ್ಯಾಂಕ್ ಕೂಡಾ ನಷ್ಟದ ದವಡೆಗೆ ಸಿಲುಕಿತು. ಹಣಕಾಸು ಬಿಕ್ಕಟ್ಟಿಗೆ ತುತ್ತಾದ ಅಮೆರಿಕದ ಹಣಕಾಸು ಸಂಸ್ಥೆಗಳಲ್ಲಿ ಇದು 16ನೆಯದಾಗಿದ್ದು, ಇದೇ ವೇಳೆಗೆ ಸ್ಟೀಮ್ಸ್ ಬ್ಯಾಂಕ್ ಮುಂದೆ ಬಂದು ಅಲ್ಫಾ ಬ್ಯಾಂಕನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿ ಪ್ರಕಟಿಸಿತು.

2008: ತಿರುಪತಿ-ತಿರುಮಲ ದೇವಸ್ಥಾನದ ಬೆಟ್ಟಕ್ಕೆ `ರೋಪ್ ವೇ' ನಿರ್ಮಿಸಲು ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತಾದಿಗಳಿಗೆ ಅನುಕೂಲವಾಗುವುದು. ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಪೀಠ `ರೋಪ್ ವೇ' ನಿರ್ಮಿಸಲು ಸಮ್ಮತಿ ನೀಡಿತು. ರೋಪ್ ವೇ ಕುರಿತಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ)ಯು ಪರಿಸರ ಸಂಬಂಧಿ ವಿಷಯಗಳ ಬಗ್ಗೆ ಸ್ಪಷ್ಟೀಕರಣವನ್ನು ಸುಪ್ರೀಂಕೋರ್ಟಿನಿಂದ ಬಯಸಿತ್ತು. ಈ ವಿಷಯವನ್ನು ಕೋರ್ಟ್ ಕೇಂದ್ರ ಸಬಲೀಕರಣ ಸಮಿತಿ ಗಮನಕ್ಕೆ ತಂದಿತ್ತು.

2008: ಗುತ್ತಿಗೆ ಕಾಮಗಾರಿ ನೀಡಿಕೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪದ ಮೇರೆಗೆ ಸಿಬಿಐ ನ್ಯಾಯಾಲಯವೊಂದು ಸಿಕ್ಕಿಮಿನ ಮಾಜಿ ಮುಖ್ಯಮಂತ್ರಿ ನರ ಬಹಾದ್ದೂರ್ ಭಂಡಾರಿ ಮತ್ತು ಐಎಎಸ್ ಅಧಿಕಾರಿ ಪಿ. ಕೆ. ಪ್ರಧಾನ್ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿತು. 1984ರಲ್ಲಿ ದಾಖಲಾದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಧೀಶ ಎಸ್. ಡಬ್ಲ್ಯು. ಲೆಪಚ ಅವರು ಇತರ 8 ಮಂದಿ ಗುತ್ತಿಗೆದಾರರಿಗೆ ತಲಾ 5 ತಿಂಗಳ ಜೈಲು ಶಿಕ್ಷೆ ವಿಧಿಸಿದರು. ಅಂದಿನ ಬಿ. ಬಿ. ಗುರುಂಗ್ ಸರ್ಕಾರದ ಅವದಿಯಲ್ಲಿ ಭಂಡಾರಿ ಮತ್ತು ಅಂದಿನ ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಪ್ರಧಾನ್ ಅವರು ತಮ್ಮ ಹುದ್ದೆಯ ಘನತೆ ಬದಿಗಿಟ್ಟು ತಮಗೆ ಇಷ್ಟಬಂದ ಗುತ್ತಿಗೆದಾರರಿಗೆ ಕಾಮಗಾರಿ ನೀಡಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ್ದರು.

2008: ಯೂರೋಪಿನ ಮುಂಚೂಣಿ ಮರುಸಂಸ್ಕರಣಾ ಕಂಪೆನಿ ಬಕ್ಷಿಯ ಒಡೆಯ ಅನಿವಾಸಿ ಭಾರತೀಯ ರಂಜಿತ್ ಸಿಂಗ್ ಬಕ್ಷಿ ಅವರು ಈ ಬಾರಿಯ ಪ್ರತಿಷ್ಠಿತ `ಏಷ್ಯಾ ವರ್ಷದ ವ್ಯಕ್ತಿ' ಪ್ರಶಸ್ತಿಗೆ ಆಯ್ಕೆಯಾದರು. `ಜೆ ಅಂಡ್ ಎಚ್ ಸೇಲ್ಸ್ ಇಂಟರ್ ನ್ಯಾಷನಲ್' ಸಂಸ್ಥೆಯ ಅಧ್ಯಕ್ಷರೂ ಆದ ಬಕ್ಷಿ ಇತ್ತೀಚೆಗೆ ಬ್ರಷೆಲ್ಸಿನಲ್ಲಿರುವ ಅಂತಾರಾಷ್ಟ್ರೀಯ ಪಿಡಿಬಿಯ ಅಧ್ಯಕ್ಷರಾಗಿ ನೇಮಕವಾದರು. ಇದು ಪುನರ್ ಸಂಸ್ಕರಣಾ ರಂಗದ 70 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ.

2008: ಹಿರಿಯ ಸಾಹಿತಿ ಹಾಗೂ ನಿವೃತ್ತ ಶಿಕ್ಷಕ ಆರ್.ವಿ. ಭಂಡಾರಿ (72) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಚಿರಪರಿಚಿತರಾಗಿದ್ದ ಇವರು ಬಂಡಾಯ ಸಾಹಿತ್ಯದ ಆರಂಭದ ಚಳವಳಿಯ ದಿನಗಳಲ್ಲಿ ಅದರ ಮುಂಚೂಣಿಯಲ್ಲಿದ್ದ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಕಣ್ಣೇಕಟ್ಟೆ ಕಾಡೆಗೂಡೆ (ಕವನ ಸಂಕಲನ), ಬೆಂಕಿಯ ಮಧ್ಯೆ, ಬಿರುಗಾಳಿ, ಯಶವಂತನ ಯಶೋಗೀತೆ (ಮೂರೂ ಕಾದಂಬರಿ), ಯಾನ, ಬೆಳಕಿನೆಡೆಗೆ (ಮಕ್ಕಳ ನಾಟಕಗಳು), ಕನ್ನಡ ಕಾದಂಬರಿಯಲ್ಲಿ ವರ್ಣ ಮತ್ತು ವರ್ಗ ಸಂಘರ್é್ (ವೈಚಾರಿಕ ವಿಮರ್ಶಾ ಸಂಕಲನ) ಮೊದಲಾದ ಕೃತಿಗಳನ್ನು ರಚಿಸಿದ್ದ ಭಂಡಾರಿಯವರಿಗೆ 2005ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿತ್ತು. ಅವರು ಜೊಯಿಡಾದಲ್ಲಿ ನಡೆದ 12ನೇ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

2007: ಪ್ರಯಾಣಿಕರ ಅತಿ ದೊಡ್ಡ 'ಜಂಬೋ ವಿಮಾನ' ಏರ್ಬಸ್ ಎ380 ಈದಿನ ಸಿಂಗಪುರದಿಂದ ಆಸ್ಟ್ರೇಲಿಯಾದ ಸಿಡ್ನಿಗೆ ತನ್ನ ಮೊದಲ ವಾಣಿಜ್ಯ ಹಾರಾಟವನ್ನು ಆರಂಭಿಸಿತು. ಸಿಂಗಪುರ ಏರ್ ಲೈನ್ಸಿಗೆ ಸೇರಿದ ಈ ವಿಮಾನದ ಮೊದಲ ಐತಿಹಾಸಿಕ ಹಾರಾಟದಲ್ಲಿ ಪ್ರಯಾಣಿಸಲು ಜನರು ಮುಗಿಬಿದ್ದು ಟಿಕೆಟುಗಳನ್ನು ಖರೀದಿಸಿದರು. ಬ್ರಿಟನ್ ನಾಗರಿಕನೊಬ್ಬ ಒಂದು ಲಕ್ಷ ಡಾಲರ್ (40 ಲಕ್ಷ ರೂಪಾಯಿ) ಹಣ ಕೊಟ್ಟು ಟಿಕೆಟ್ ಖರೀದಿಸಿದ್ದು ದಾಖಲೆಯಾಯಿತು. ಆನ್ ಲೈನ್ ಹರಾಜು ಮೂಲಕ ಟಿಕೆಟ್ ಮಾರಾಟ ಮಾಡಲಾಯಿತು. ಎಲ್ಲ 455 ಪ್ರಯಾಣಿಕರಿಗೆ ಸಿಂಗಪುರ ಏರ್ ಲೈನ್ಸ್ ಶಾಂಪೇನ್ ಕಾಣಿಕೆಯಾಗಿ ನೀಡಿತು. ಮಾನವ ನಿರ್ಮಿತ ಅತಿ ದೊಡ್ಡ ಹಾರಾಟದ ವಸ್ತು ಇದಾಗಿದೆ ಎಂಬ ಹೆಗ್ಗಳಿಕೆ ಹೊತ್ತಿರುವ ಎರಡು ಅಂತಸ್ತಿನ ಈ ವಿಮಾನದಲ್ಲಿ 853 ಜನರಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿತ್ತು.

2007: ವಿವಾಹ ನೋಂದಣಿಯನ್ನು ಎಲ್ಲ ಧರ್ಮದವರಿಗೂ ಕಡ್ಡಾಯಗೊಳಿಸುವ ಆದೇಶವನ್ನು ಸುಪ್ರೀಂಕೋರ್ಟ್ ಹೊರಡಿಸಿತು. ವಿವಾಹ ನೋಂದಣಿ ಕಡ್ಡಾಯ ಎಂಬುದಾಗಿ ಹಿಂದೆ ನೀಡಿದ್ದ ಆದೇಶವು ಸರ್ವ ಧರ್ಮೀಯರಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಆದೇಶ ನೀಡಿದರು. ವಿವಾಹ ನೋಂದಣಿ ಕಾಯ್ದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವೂ ಸೇರಿದಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಮೂರು ತಿಂಗಳ ಕಾಲಾವಕಾಶ ನೀಡಿತು.

2007: ಬಳ್ಳಾರಿ ಜಿಲ್ಲೆಯ ಜೆಎಸ್ ಡಬ್ಲು ಸ್ಟೀಲ್ಸ್ ಲಿಮಿಟೆಡ್ ಕಂಪೆನಿಯು ಪ್ರಸ್ತುತ ಹಣಕಾಸು ಸಾಲಿನ ಅರ್ಧ ವರ್ಷದ ಅಂತ್ಯಕ್ಕೆ 511.23 ಕೋಟಿ ರೂಪಾಯಿಗಳ ಲಾಭ ಗಳಿಸುವ ಮೂಲಕ ದಾಖಲೆ ನಿರ್ಮಿಸಿತು. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಗಳಿಕೆಯಲ್ಲಿ ಈ ಬಾರಿ ಶೇ 48ರಷ್ಟು ಪ್ರಗತಿಯಾಗಿದೆ. ಜಾಗತಿಕ ಮಾರುಕಟ್ಟೆ ಹಾಗೂ ಭಾರತದಲ್ಲಿ ಉಕ್ಕು ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದದ್ದರಿಂದ ಈ ಸಾಧನೆ ಸಾಧ್ಯವಾಯಿತು ಎಂದು ಕಂಪೆನಿಯ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ಪಡಿಸಿದರು.

2007: ಬಿಜೆಪಿ ನಾಯಕ ಎಲ್. ಕೆ. ಆಡ್ವಾಣಿ ಅವರನ್ನು ಸರಣಿ ಬಾಂಬ್ ಸ್ಫೋಟಿಸಿ ಕೊಲ್ಲಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಯಮತ್ತೂರಿನ ವಿಶೇಷ ನ್ಯಾಯಾಲಯವು ಈದಿನ ಮತ್ತೆ ಒಂಬತ್ತು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರಿಂದಾಗಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರ ಸಂಖ್ಯೆ 40ಕ್ಕೆ ಏರಿತು. ನ್ಯಾಯಾಧೀಶ ಕೆ. ಉದಿರಪತಿ ಅವರು ಬಾಂಬ್ ಸ್ಫೋಟದ ರೂವಾರಿ ಅಲ್ ಉಮ್ಮಾ ಸಂಘಟನೆ ಸಂಸ್ಥಾಪಕ ಎಸ್. ಎ. ಬಾಷಾ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಆಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ರೂಪಿಸಲಾಗಿದ್ದ `ಆಪರೇಶನ್ ಅಲ್ಲ್ಲಾಹೋ ಅಕ್ಬರ್' ಹೆಸರಿನ ಸರಣಿ ಬಾಂಬ್ ಸ್ಫೋಟಗಳಿಂದಾಗಿ ಒಟ್ಟು 58 ಜನರು ಸತ್ತು 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಬಾಂಬುಗಳನ್ನು ಇಟ್ಟದ್ದಕ್ಕಾಗಿ ವಜೀರ್ ಉರುಫ್ ಅಬ್ದುಲ್ ವಜೀರ್ ಎಂಬಾತನಿಗೆ ಅತಿ ಹೆಚ್ಚು, ಅಂದರೆ ನಾಲ್ಕು ಜೀವಾವಧಿ ಶಿಕ್ಷೆ ಹಾಗೂ ಇತರ ಅಪರಾಧಗಳಿಗೆ 124 ವರ್ಷ ಅವಧಿಯ ಶಿಕ್ಷೆ ಪ್ರಕಟಿಸಲಾಯಿತು.

2007: ಮಂಡ್ಯದಲ್ಲಿ ನವೆಂಬರ್ 24 ಮತ್ತು 25ರಂದು ನಡೆಯುವ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಲೇಖಕಿ, ಸಾಹಿತಿ ನೀಳಾದೇವಿ ಆಯ್ಕೆಯಾದರು.

2007: ಗುಜರಾತಿನ ಜಾಮ್ನಗರದ ಅಂತಾರಾಷ್ಟ್ರೀಯ ಆಯುರ್ವೇದ ವೈದ್ಯರ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ಒಟ್ಟು 21 ಜನ ಖ್ಯಾತ ವೈದ್ಯರಿಗೆ ಪ್ರಶಸ್ತಿ ನೀಡಿ ಗೌರವಿಸಿತು. ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಅಹಮ್ಮದಾಬಾದಿನ ಡಾ. ತಪನ್ ಕುಮಾರ್ ವೈದ್ಯ ಆಯುರ್ವೇದ ಭೂಷಣ ಪ್ರಶಸ್ತಿಗೆ ಬಾಜನರಾದರು. ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ: ಡಾ. ಪ್ರಸನ್ನ ಎನ್. ರಾವ್ (ಆಯುರ್ವೇದ ಚಾಣಕ್ಯ), ಕೊಟ್ಟಕ್ಕಲ್ಲಿನ ಡಾ. ಈ. ಸುರೇಂದ್ರನ್ (ಪಂಚಕರ್ಮ ರತ್ನ), ಉಡುಪಿಯ ಡಾ. ಯು. ಶ್ರೀಕಾಂತ್ (ಪಂಚಕರ್ಮ ಭೂಷಣ), ಅಹಮದಾಬಾದಿನ ಡಾ.ತಪನ್ ಕುಮಾರ್ ವೈದ್ಯ (ಆಯುರ್ವೇದ ಭೂಷಣ 2007), ಡಾ. ಭೀಮಸೇನ್ ಬೆಹರಾ (ಆಯುರ್ವೇದ ಭೂಷಣ 2006), ಮಣಿಪಾಲದ ಡಾ.ಕೆ.ಜೆ. ಮಳಗಿ (ಆಯುರ್ವೇದ ಭೂಷಣ 2005), ಡಾ. ಸಂಜಯ್ (ಆಯುರ್ವೇದ ಭೂಷಣ 2004), ಕೋಲ್ಕತ್ತದ ಡಾ. ಬಿ.ಪಿ. ವಾ (ಸಂಸ್ಥೆಯ ಶ್ರೇಷ್ಠ ಮುಖ್ಯಸ್ಥ), ಹಾಸನದ ಡಾ. ಮುರಳೀಧರ್ ಪೂಜಾರ್ (ಶ್ರೇಷ್ಠ ಶಿಕ್ಷಕ 2005), ಹಾಸನದ ಡಾ. ನಾರಾಯಣ ಪ್ರಕಾಶ್ (ಶ್ರೇಷ್ಠ ಮಾನಸಿಕ ರೋಗ ತಜ್ಞ), ಕೇರಳದ ಡಾ. ಸಂತೋಷ್ ನಾಯರ್ (ಆಯುರ್ವೇದ ಭೂಷಣ ಸಿದ್ಧಾಂತ), ಡಾ. ಶ್ರೀನಿವಾಸ್ ಸಾಹಿ (ಶ್ರೇಷ್ಠ ಸಂಶೋಧನಾ ಅಧಿಕಾರಿ 2007), ಜಾಮ್ನಗರದ ಡಾ. ಸಂತೋಷ್ ಭಟ್ಟದ್ (ಶ್ರೇಷ್ಠ ಪಂಚಕರ್ಮ ವೈದ್ಯ 2005), ಡಾ. ಎಂ. ಅಶ್ವಿನಿಕುಮಾರ್ (ಶ್ರೇಷ್ಠ ಪಂಚಕರ್ಮ ವೈದ್ಯ 2006), ಮೂಡುಬಿದರೆಯ ಡಾ. ಪ್ರಸನ್ನ ಐತಾಳ್ (ಶ್ರೇಷ್ಠ ಜಾಗತಿಕ ಪಂಚಕರ್ಮ ಶಿಕ್ಷಕ), ಬೆಂಗಳೂರಿನ ಡಾ. ಬಿ.ಎನ್. ಶ್ರೀಧರ್ (ಶ್ರೇಷ್ಠ ಸಂಶೋಧನಾ ಅಧಿಕಾರಿ), ಸುಳ್ಯದ ಡಾ.ಎಚ್. ಗುರುರಾಜ್ (ಶ್ರೇಷ್ಠ ಪಂಚಕರ್ಮ ವೈದ್ಯ 2007). ಇದೇ ಸಂದರ್ಭದಲ್ಲಿ ಡಾ. ಬಿ.ಕೆ. ಶೋಭಾ, ಡಾ. ಬಿ.ಎ. ಲೋಹಿತ್, ಡಾ. ಪಿ.ಕೆ. ಪಂಡ ಅವರು ಅಕಾಡೆಮಿ ಫೆಲೋಶಿಪ್ ಪಡೆದರು.

2007: ವಿದ್ಯುನ್ಮಾನ ಸರಕು ಅಭಿವೃದ್ಧಿ, ತಯಾರಿಕೆ ಮತ್ತು ಮಾರಾಟದ ಜಾಗತಿಕ ಸಂಸ್ಥೆ ಕೂಕ್ಸನ್ ಎಲೆಕ್ಟ್ರಾನಿಕ್ಸ್, ಬೆಂಗಳೂರಿನಲ್ಲಿ ತನ್ನ ಹೊಸ ಸಂಶೋಧನಾ ಕೇಂದ್ರ ಆರಂಭಿಸಿತು.

2006: ಮರೆಯಾಗಿ ಹೋಗುತ್ತಿರುವ ಸಾಂಪ್ರದಾಯಿಕ `ಎಂಬ್ರಾಯಿಡರಿ ಕಲೆ'ಗೊಂದು ಪುಟ್ಟ ಉದ್ಯಮದ ರೂಪ ಕೊಟ್ಟು ಅಂತಾರಾಷ್ಟ್ರೀಯ ಗಮನ ಸೆಳೆದ ಗುಜರಾತಿನ ಕಛ್ ನ 73ರ ಹರೆಯದ ಗೃಹಿಣಿ ಚಂದಾ ಶ್ರಾಫ್ ಅವರು 1ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ `ರೋಲೆಕ್ಸ್ ಅವಾರ್ಡ್ ಫಾರ್ ಎಂಟರ್ ಪ್ರೈಸ್' ಗೆ ಆಯ್ಕೆಯಾದರು.. ಈಕೆ ಈ ಪ್ರಶಸ್ತಿ ಪಡೆದ ಮೊತ್ತ ಮೊದಲ ಭಾರತೀಯ ಪ್ರಜೆ. 117 ದೇಶಗಳ ಸುಮಾರು 1700 ಅಭ್ಯರ್ಥಿಗಳ ಪೈಕಿ ಪ್ರಶಸ್ತಿಗೆ ಆಯ್ಕೆಯಾದ ಐವರಲ್ಲಿ ಚಂದಾ ಒಬ್ಬರು. ಭುಜ್ ನ ವಾಸಿಯಾಗಿರುವ ಈಕೆ ಕಛ್ ನಲ್ಲಿ ಸೃಜನ್ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದನ್ನು ನಡೆಸುತ್ತಾ ಕಳೆದ 38 ವರ್ಷಗಳಿಂದ ಗ್ರಾಮೀಣ ಮಹಿಳೆಯರಿಗೆ ಕಲಿಸುವ ಮುಖಾಂತರ ಅಳಿದು ಹೋಗುತ್ತಿರುವ ಎಂಬ್ರಾಯಿಡರಿ ಕಲೆಗಳನ್ನು ಉಳಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. `ಎಂಬ್ರಾಯಿಡರಿ ಉತ್ಪನ್ನ ತಯಾರಿ' ಬಗ್ಗೆ ವಿಶೇಷ ಡಿಪ್ಲೋಮಾ ಪದವಿ ಪಡೆದಿರುವ ಚಂದಾ ಶ್ರಾಫ್ ಅವರು ಎಂಬ್ರಾಯಿಡರಿ ಉತ್ಪನ್ನಗಳ ತಯಾರಿಗೆ ಉದ್ಯಮದ ರೂಪ ಕೊಡುವುದಕ್ಕಾಗಿ ಗ್ರಾಮೀಣ ಮಹಿಳೆಯರನ್ನೊಳಗೊಂಡ ಪುಟ್ಟ ಸ್ವಸಹಾಯ ಗುಂಪುಗಳನ್ನು ಹುಟ್ಟು ಹಾಕಿ, ಉತ್ಪನ್ನಗಳನ್ನು ವಿವಿಧೆಡೆಗೆ ಕೊಂಡೊಯ್ದು ಜನರಿಗೆ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ. ಈಗ ಈ ಉತ್ಪನ್ನಗಳು ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ ಬರುತ್ತಿದ್ದು, ಕಛ್ ಸುತ್ತಮುತ್ತಲಿನ 120 ಗ್ರಾಮದ ಸುಮಾರು 22,000 ಗ್ರಾಮೀಣ ಮಹಿಳೆಯರಿಗೆ ಅನುಕೂಲವಾಗಿದೆ.

2006: ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಬಳಿ ಇಂಡೋನೇಷ್ಯದ ಉತ್ತರ ಸುಮಾತ್ರ ಪ್ರದೇಶದಲ್ಲಿ ಲಘು ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5ರಷ್ಟು ಇತ್ತು.

2006: ಬೆಂಗಳೂರಿನಲ್ಲಿ ಪಾಸುದಾರರ ಅನುಕೂಲಕ್ಕಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ 10 ಮಾರ್ಗಗಳಲ್ಲಿ ಹಸಿರು ಬಣ್ಣದ `ಪಾಸುದಾರರ ಬಸ್ಸು ಸೇವೆ' ಆರಂಭಿಸಿತು.

2006: ಭಾರತೀಯ ಗೋವು ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಸಲುವಾಗಿ 2007ರ ಏಪ್ರಿಲ್ 21ರಿಂದ 29ರವರೆಗೆ ಹೊಸನಗರದಲ್ಲಿ ಒಂಬತ್ತು ದಿನಗಳ ವಿಶ್ವ ಗೋ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು. ಗೋವು ಎಂದರೆ ಬರೀ ಹಾಲು ಮಾತ್ರ ಅಲ್ಲ, ಗೋವಿನ ಮೂತ್ರಕ್ಕೆ 80 ರೂಪಾಯಿ ಬೆಲೆ ಇದೆ. ಈ ಹಿನ್ನೆಲೆಯಲ್ಲಿ ಗೋವುಗಳು ಹೇಗೆ ಆರ್ಥಿಕವಾಗಿ ಲಾಭ ತರಬಲ್ಲವು ಎಂಬ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸಲು ಮತ್ತು ಗೋವಿನಿಂದ ಲಭಿಸುವ ವಿವಿಧ ಉತ್ಪನ್ನಗಳ ಬಗ್ಗೆ ಸಂಶೋಧನಾ ಮಾಹಿತಿ ಸಂಗ್ರಹಿಸುವ ಸಲುವಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

1955: ಹಿಚಿ. ಬೋರಲಿಂಗಯ್ಯ ಜನನ.

1950: ಸಾಹಿತಿ ಪರಿಮಳಾಬಾಯಿ ಜನನ.

1949: ಸಾಹಿತಿ ಭಾಷ್ಯಂ ತನುಜೆ ಜನನ.

1944: ಅಮೆರಿಕದ ಮೂರನೇ ಮತ್ತು ಏಳನೇ ನೌಕಾಪಡೆಗಳು ದ್ವಿತೀಯ ಜಾಗತಿಕ ಸಮರಕಾಲದಲ್ಲಿ ನಡೆದ ಗಲ್ಫ್ ಯುದ್ಧದಲ್ಲಿ ಜಪಾನಿನ ಮುಖ್ಯ ನೌಕಾಪಡೆಯನ್ನು ಸೋಲಿಸಿದವು. ಇದರೊಂದಿಗೆ ಜಪಾನಿನ ಸಮುದ್ರ ಶಕ್ತಿ ಪತನಗೊಂಡಿತು.

1943: ಲೇಖಕ ಪ್ರಕಾಶಕ ಅನಂತರಾಮು ಅವರು ಎನ್. ಎಸ್. ಕೃಷ್ಣಪ್ಪ- ಸುಬ್ಬಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ಜನಿಸಿದರು.

1930: ಸಾಹಿತಿ ಡಿ.ಎಂ. ನಂಜುಂಡಪ್ಪ ಜನನ.

1883: ಭಾರತದ ಖ್ಯಾತ ಭೂಗರ್ಭ ತಜ್ಞ ದಾರಾಶಾ ನೊಶೆರ್ ವಾನ್ ವಾಡಿಯಾ (1883-1969) ಜನ್ಮದಿನ. 1957ರಲ್ಲಿ ಇವರು ಫೆಲೋ ಆಫ್ ರಾಯಲ್ ಸೊಸೈಟಿ ಗೌರವಕ್ಕೆ ಆಯ್ಕೆಯಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1881: ಪಾಬ್ಲೊ ಪಿಕಾಸೊ (1881-1973) ಜನ್ಮದಿನ. ಸ್ಪೇನಿನ ವರ್ಣಚಿತ್ರಗಾರ, ಶಿಲ್ಪಿ, ರಂಗಸ್ಥಳ ವಿನ್ಯಾಸಕಾರನಾದ ಈತ 20ನೇ ಶತಮಾನದ ಪ್ರಮುಖ ಕಲಾವಿದರಲ್ಲಿ ಒಬ್ಬನೆಂದು ಖ್ಯಾತಿ ಗಳಿಸಿದ ವ್ಯಕ್ತಿ.

1839: ಬ್ರಾಡ್ ಶಾ ಅವರ `ರೈಲ್ವೇ ಕಂಪಾನಿಯನ್' ಮೊತ್ತ ಮೊದಲ ಪ್ರಕಟಿತ ರೈಲ್ವೇ ಟೈಮ್-ಟೇಬಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದು ಮ್ಯಾಂಚೆಸ್ಟರಿನಲ್ಲಿ ಪ್ರಕಟಗೊಂಡಿತು.

1825: ಎರೀ ಕಾಲುವೆ ಸಂಚಾರಕ್ಕೆ ಮುಕ್ತವಾಯಿತು. ಅದು ನ್ಯೂಯಾರ್ಕಿನ ಗ್ರೇಟ್ ಲೇಕ್ಸ್ ನ್ನು ಹಡ್ಸನ್ ನದಿಯ ಮುಖಾಂತರವಾಗಿ ಸಂಪರ್ಕಿಸಿತು. ಅದರ ಉದ್ದ 365 ಮೈಲುಗಳು, ಅಗಲ 40 ಅಡಿಗಳು ಮತ್ತು ಆಳ 1.2 ಮೀಟರುಗಳು.

1605: ಮೊಘಲ್ ಚಕ್ರವರ್ತಿಗಳ ಪೈಕಿ ಅತ್ಯಂತ ಹೆಚ್ಚು ಖ್ಯಾತಿ ಪಡೆದ ಅಕ್ಬರ್ ಆಗ್ರಾದಲ್ಲಿ ತನ್ನ 63ನೇ ವಯಸ್ಸಿನಲ್ಲಿ ಮೃತನಾದ. ಆಗ್ರಾ ಬಳಿಯ ಸಿಕಂದ್ರಾದಲ್ಲಿ ಆತನ ಅಂತ್ಯಕ್ರಿಯೆ ನೆರವೇರಿಸಲಾಯಿತು. 1691ರಲ್ಲಿ ಜಾಟರು ಸಮಾಧಿಯನ್ನು ಹಾನಿ ಪಡಿಸಿ ಎಲುಬುಗಳನ್ನು ಸುಟ್ಟು ಹಾಕಿದರು.

No comments:

Post a Comment