Wednesday, October 24, 2018

ಇಂದಿನ ಇತಿಹಾಸ History Today ಅಕ್ಟೋಬರ್ 24

ಇಂದಿನ ಇತಿಹಾಸ History Today ಅಕ್ಟೋಬರ್ 24
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ೨೦೧೮ರ ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಲಭಿಸಿದೆಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಪ್ರಗತಿಗೆ ಪ್ರೋತ್ಸಾಹ ನೀಡಿದ್ದಕ್ಕಾಗಿ  ಪ್ರಶಸ್ತಿಯನ್ನು ಮೋದಿ ಅವರಿಗೆ ಘೋಷಿಸಲಾಯಿತು. ಪ್ರಧಾನಿ ಮೋದಿ ಅವರು ಭಾರತ ಜೊತೆಗಿನ ಕೊರಿಯಾ ಗಣರಾಜ್ಯ ಜೊತೆಗಿನ ಆಳವಾದ ಪಾಲುದಾರಿಕೆಯ ಬೆಳಕಿನಲ್ಲಿ ಪ್ರತಿಷ್ಠಿತ ಗೌರವಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತ ಪಡಿಸಿದ್ದಾರೆ. ಮತ್ತು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿತು.  ‘ವಿಶ್ವವು ಗುರುತಿಸಿದೆಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿನ ಉನ್ನತ ಆರ್ಥಿಕ ಬೆಳವಣಿಗೆ ಮತ್ತು ‘ಮೋದಿನೋಮಿಕ್ಸ್ ಮೂಲಕ ವಿಶ್ವದ ಆರ್ಥಿಕ ಬೆಳವಣಿಗೆಗೆ ನೀಡಿದ ಕೊಡುಗೆಮಾನವ ಕಲ್ಯಾಣದ ಮೂಲಕ ಜಾಗತಿಕ ಶಾಂತಿಗೆ ನೀಡಿದ ಕಾಣಿಕೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ಸದೃಢಗೊಳಿಸಿದ್ದಕ್ಕಾಗಿ ೨೦೧೮ರ ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆಸಿಯೊಲ್ ಶಾಂತಿ ಪ್ರಶಸ್ತಿ ಪ್ರತಿಷ್ಠಾನವು ಉಭಯರಿಗೂ ಸೂಕ್ತವಾದ ಸಮಯದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು ಎಂದು ಹೇಳಿಕೆ ತಿಳಿಸಿತು. ಸಿಯೋಲ್ನಲ್ಲಿ ನಡೆದ ೨೪ನೇ ಒಲಿಂಪಿಕ್ಸ್ ಕ್ರೀಡಾಕೂಟದ ಯಶಸ್ಸಿನ ಸ್ಮರಣೆಗಾಗಿ ೧೯೯೦ರಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತುಕೊರಿಯಾ ಪರ್ಯಾಯ ದ್ವೀಪ ಮತ್ತು ವಿಶ್ವದ ಇತರೆಡೆಗಳಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂಬ ಕೊರಿಯಾ ಜನತೆಯ ಆಶಯಕ್ಕೆ ಸ್ಪಷ್ಟ ರೂಪ ನೀಡುವ ಸಲುವಾಗಿ  ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತುಭಾರತ ಮತ್ತು ಜಾಗತಿಕ ಆರ್ಥಿಕತೆಯ ಬೆಳವಣಿಗೆಗೆ ಮೋದಿಯವರು ನೀಡಿದ ಕಾಣಿಕೆಯನ್ನು ಗುರುತಿಸಿರುವ ಪ್ರಶಸ್ತಿ ಸಮಿತಿಯು ಶ್ರೀಮಂತರು ಮತ್ತು ಬಡವರ ನಡುವಣ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಕಡಿಮೆಗೊಳಿಸಲು ‘ಮೋದಿನೋಮಿಕ್ಸ್ ಕಾರಣ ಎಂದು ಮಾನ್ಯ ಮಾಡಿತು. ಭ್ರಷ್ಟಾಚಾರ ನಿಗ್ರಹ ಕ್ರಮಗಳು ಮತ್ತು ನೋಟು ಅಮಾನ್ಯೀಕರಣ ಕ್ರಮಗಳ ಮೂಲಕ  ಸರ್ಕಾರವನ್ನು ಸ್ವಚ್ಛಗೊಳಿಸಲು ಮೋದಿಯವರು ಕೈಗೊಂಡ ಉಪಕ್ರಮಗಳನ್ನು  ಸಮಿತಿ ಪ್ರಶಂಸಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು. ಮೋದಿ ಡಾಕ್ಟ್ರಿನ್ (ಮೋದಿ ಸಿದ್ಧಾಂತಮತ್ತು ‘ಆಕ್ಟ್ ಈಸ್ಟ್ ಪಾಲಿಸಿ ಮೂಲಕ ಪ್ರಾದೇಶಿಕ ಮತ್ತು ಜಾಗತಿಕ  ಶಾಂತಿ ವೃದ್ಧಿಗಾಗಿ ಮೋದಿ ಅವರು ಕೈಗೊಂಡ ಕ್ರಮಗಳನ್ನು ಸಮಿತಿ ಶ್ಲಾಘಿಸಿತು. ಮೋದಿಯವರು  ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ ೧೪ನೇ ಗಣ್ಯ ವ್ಯಕ್ತಿಯಾಗಿದ್ದಾರೆ ಮುನ್ನ  ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ  ಕೋಫಿ ಅನ್ನಾನ್ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ಹಲವಾರು ಮಂದಿ ಅಂತಾರಾಷ್ಟ್ರೀಯ ವೈದ್ಯರು ಹಾಗೂ ಇತರ ಗಣ್ಯರು  ಪ್ರಶಸ್ತಿಗೆ ಪಾತ್ರರಾಗಿದ್ದರುಸಿಯೋಲ್ ಜುಂಗ್ಗುನಲ್ಲಿ ನಡೆದ ಆಯ್ಕೆ ಸಮಿತಿ ಸಭೆಯ ಬಳಿಕ ಸಮಿತಿಯ ಅಧ್ಯಕ್ಷ ಚೊ ಚಂಗ್ ಹೋ ಅವರು ಅಧಿಕೃತವಾಗಿ ಪ್ರಶಸ್ತಿಯನ್ನು ಘೋಷಿಸಿದರು೧೨ ಸದಸ್ಯರ ಸಮಿತಿಯು ವಿವಿಧ ದೇಶಗಳ ೧೦೦ ಸದಸ್ಯರ ಪಟ್ಟಿಯನ್ನು ಮಾಡಿತ್ತುಸಮಗ್ರ ಅಧ್ಯಯನದ ಬಳಿಕ ಮೋದಿ ಅವರನ್ನು ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಸಮಿತಿ ತಿಳಿಸಿತು.  ಸಿಯೋಲ್ ಶಾಂತಿ ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು  ಲಕ್ಷ ಡಾಲರ್ (೧೪ ಕೋಟಿ ರೂಪಾಯಿಗೌರವ ಧನವನ್ನು ಹೊಂದಿರುತ್ತದೆ

2018: ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ನಂ ಮತ್ತು ನಂಬರ್ ಅಧಿಕಾರಿಗಳ ಜಗಳ ತಾರಕಕ್ಕೆ ಏರುತ್ತಿದ್ದಂತೆಯೇ ಮಧ್ಯಪ್ರವೇಶ ಮಾಡಿದ ಕೇಂದ್ರ ಸರ್ಕಾರವು ಉಭಯ ಅಧಿಕಾರಿಗಳನ್ನೂ ಅವರ ಹುದ್ದೆಗಳಿಂದ ಮುಕ್ತಗೊಳಿಸಿ, ಸಿಬಿಐ ನಿರ್ದೇಶಕ ಸ್ಥಾನಕ್ಕೆ ಜಂಟಿ ನಿರ್ದೇಶಕ ನಾಗೇಶ್ವರ ರಾವ್ ಅವರನ್ನು ಹಂಗಾಮೀ ನಿರ್ದೇಶಕರಾಗಿ, ನಿರ್ದೇಶಕ ಅಲೋಕ ವರ್ಮ ಸ್ಥಾನದಲ್ಲಿ ನೇಮಿಸಿತು. ಜೊತೆಗೇ ಅಲೋಕ ವರ್ಮ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಇಬ್ಬರಿಗೂ ಕಡ್ಡಾಯ ರಜೆಯಲ್ಲಿ ತೆರಳಲು ಸೂಚನೆ ನೀಡಿತು.  ಜಂಟಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರು ತತ್ ಕ್ಷಣದಿಂದ ಸಿಬಿಐ ಹಂಗಾಮೀ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದು, ಅಧಿಕಾರಿಗಳ ವ್ಯಾಪಕ ವರ್ಗಾವಣೆಯನ್ನೂ ಮಾಡಿದರು. ಸಚಿವ ಸಂಪುಟದ ನೇಮಕಾತಿ ಸಮಿತಿ ನೀಡಿರುವ ಅಕ್ಟೋಬರ್ ೨೩ರ ದಿನಾಂಕದ ಸರ್ಕಾರಿ ಆದೇಶವುನಾಗೇಶ್ವರ ರಾವ್ ಅವರು ತತ್ ಕ್ಷಣದಿಂದ ಅನ್ವಯವಾಗುವಂತೆಮಧ್ಯಂತರ ಕ್ರಮವಾಗಿ ಸಿಬಿಐ ನಿರ್ದೇಶಕರ ಕರ್ತವ್ಯಗಳನ್ನು ನೋಡಿಕೊಳ್ಳುವರು ಎಂದು ತಿಳಿಸಿತುರಾತ್ರೋರಾತ್ರಿ ತಮ್ಮನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ಮುಕ್ತಗೊಳಿಸಿದ ಕ್ರಮದ ವಿರುದ್ಧ ಅಲೋಕ ವರ್ಮ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು.   ‘ಕೇಂದ್ರೀಯ ವಿಚಕ್ಷಣಾ ಕಮೀಷನರ್ ಮತ್ತು ಕೇಂದ್ರ ಸರ್ಕಾರವು ರಾತ್ರೋರಾತ್ರಿ ನನ್ನನ್ನು ಸಿಬಿಐ ನಿರ್ದೇಕ ಹುದ್ದೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸುವ ನಿರ್ಧಾರವನ್ನು ಕೈಗೊಂಡಿದೆ. ಇದು ದೆಹಲಿ ವಿಶೇಷ ಪೊಲೀಸ್ ವ್ಯವಸ್ಥಾ (ಡಿಪಿಎಸ್ ) ಕಾಯ್ದೆಯ ಸೆಕ್ಷನ್ ಬಿ ಗೆ ವ್ಯತಿರಿಕ್ತವಾಗಿದೆ. ಕಾಯ್ದೆಯು ಸಿಬಿಐ ನಿರ್ದೇಶಕರಿಗೆ ಸ್ವಾತಂತ್ರ್ಯದ ಖಾತರಿಗಾಗಿ ವರ್ಷಗಳ ಸುಭದ್ರ ಅವಧಿಯನ್ನು ನೀಡುತ್ತದೆ ಎಂದು ಅಲೋಕ್ ವರ್ಮ ಸುಪ್ರೀಂಕೋರ್ಟಿಗೆ ತಿಳಿಸಿದರು.  ‘ಈಗಿನ ಬೆಳವಣಿಗೆಗಳಿಗೆ ಕಾರಣವಾದ ಹಲವಾರು ಪ್ರಕರಣಗಳ ವಿವರಗಳನ್ನು ಹಾಜರು ಪಡಿಸಬಲ್ಲೆ. ಅವೆಲ್ಲವೂ ಅತ್ಯಂತ ಸೂಕ್ಷ್ಮ ಸ್ವರೂಪದವು. ಸಿಬಿಐ ಸ್ವತಂತ್ರವಾಗಿರಬೇಕಾದ ಅಗತ್ಯ ಇದೆ. ಸರ್ಕಾರ ಅಪೇಕ್ಷಿಸಿದ ನಿಟ್ಟಿನ ನಿರ್ದೇಶನಗಳನ್ನು ಪಾಲಿಸಲು ಕೆಲವು ತನಿಖೆಗಳಲ್ಲಿ ಉನ್ನತ ಅಧಿಕಾರಿಗಳು ಪಾಲಿಸದ ಕಾರಣ ಹಾಲಿ ಪರಿಸ್ಥಿತಿ ಉದ್ಭವಿಸಿದೆ ಎಂದು ವರ್ಮ ತನ್ನ ಅರ್ಜಿಯಲ್ಲಿ ತಿಳಿಸಿದರು. ‘ಪ್ರಧಾನಿ, ಎಲ್ ಒಪಿ, ಸಿಜೆಐ ಅವರನ್ನು ಒಳಗೊಂಡ ಉನ್ನತಾಧಿಕಾರ ಸಮಿತಿಯು ಸಿಬಿಐ ನಿರ್ದೇಶಕರನ್ನು ನೇಮಕ ಮಾಡುವುದನ್ನು ಡಿಪಿಎಸ್ ಕಾಯ್ದೆಯ ಸೆಕ್ಷನ್ ಕಡ್ಡಾಯಗೊಳಿಸಿದೆ. ಈಗಿನ ಕ್ರಮವು ಸಮಿತಿಯ ಆದೇಶವನ್ನು ಕಡೆಗಣಿಸಿದೆ ಎಂದು ವರ್ಮ ಪ್ರತಿಪಾದಿಸಿದರು.  ‘ಐಒ ರಿಂದ ಜಂಟಿ ನಿರ್ದೇಶಕರವರೆಗಗೆ ಸಿಬಿಐಯ ಎಲ್ಲರೂ ಪ್ರಕರಣಗಳಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಒಪ್ಪಿದರೂ, ವಿಶೇಷ ನಿರ್ದೇಶಕರು ಮಾತ್ರಭಿನ್ನ ಅಭಿಪ್ರಾಯ ಹೊಂದಿದ್ದರು ಎಂದೂ ವರ್ಮ ನ್ಯಾಯಾಲಯಕ್ಕೆ ತಿಳಿಸಿದರು. ಸಿವಿಸಿ ಜೊತೆ ಸಹಕರಿಸಿಲ್ಲ: ಸರ್ಕಾರದ ಪತ್ರಿಕಾ ಪ್ರಕಟಣೆಯು ಅಲೋಕ್ ವರ್ಮ ಅವರು ಗಂಭೀರ ಆಪಾದನೆಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ಜಾಗೃತಾ ಆಯೋಗವು (ಸಿವಿಸಿ) ಕೇಳಿದ ಕಡತಗಳು/ ದಾಖಲೆಗಳನ್ನು ಒದಗಿಸುವಲ್ಲಿ ಸಹಕರಿಸಿಲ್ಲ ಎಂದು ಹೇಳಿತು.  ಸೆಪ್ಟೆಂಬರ್ ೧೧ರಂದು ದಾಖಲೆಗಳನ್ನು ಸಲ್ಲಿಸುವಂತೆ ಮೂರು ನೋಟಿಸ್ಗಳನ್ನು ಸಿಬಿಐ ನಿರ್ದೇಶಕರಿಗೆ ನೀಡಲಾಗಿತ್ತು. ಹಲವಾರು ಮುಂದೂಡಿಕೆಗಳ ಬಳಿಕ ಸಿಬಿಐ ನಿರ್ದೇಶಕರು ಸೆಪ್ಟೆಂಬರ್ ೨೪ರಂದು  ಉತ್ತರ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಪದೇಪದೇ ನೆನಪೋಲೆಗಳನ್ನು ಕಳುಹಿಸಿದರೂ, ಸಿವಿಸಿ ಎದುರು ದಾಖಲೆಗಳನ್ನು ಹಾಜರು ಪಡಿಸುವಲ್ಲಿ ಅವರು ವಿಫಲರಾದರು ಎಂದು ಸರ್ಕಾರದ ಪ್ರಕಟಣೆ ಹೇಳಿತು. ತನಗೆ ಲಭಿಸಿದ  ಮಾಹಿತಿಯನ್ನು ಭಾರತ ಸರ್ಕಾರವು ಎಚ್ಚರಿಕೆಯಿಂದ ಪರಿಶೀಲಿಸಿ ಮೌಲ್ಯ ಮಾಪನ ಮಾಡಿದೆ. ಅಸಾಧಾರಣ ಮತ್ತು ಅಭೂತಪೂರ್ವ ಪರಿಸ್ಥಿತಿ ಉದ್ಭವಿಸಿರುವ ಬಗ್ಗೆ ಮನನ ಮಾಡಿಕೊಂಡ ಬಳಿಕವೇ ಸರ್ಕಾರವು ಡಿಪಿಎಸ್ ಕಾಯ್ದೆಯ  ಸೆಕ್ಷನ್ () ಅಡಿಯಲ್ಲಿನ ತನ್ನ ಅಧಿಕಾರಗಳನ್ನು ಚಲಾಯಿಸಿದೆ ಎಂದು ಪ್ರಕಟಣೆ ಹೇಳಿತು. ಭಾರತ ಸರ್ಕಾರವು ತನ್ನ ಮುಂದಿದ್ದ ಮಾಹಿತಿಯನ್ನು ಸಮಾನತೆಯ ಹಿತರಕ್ಷಣೆ, ನ್ಯಾಯೋಚಿತ ಮತ್ತು ಸಹಜ ನ್ಯಾಯದ ತತ್ವಗಳ ಅಡಿಯಲ್ಲಿ ಪರಿಶೀಲಿಸಿದೆ ಮತ್ತು ಶ್ರೀ ಅಲೋಕ ವರ್ಮ, ನಿರ್ದೇಶಕರು, ಸಿಬಿಐ ಮತ್ತು ಶ್ರೀ ರಾಕೇಶ್ ಅಸ್ತಾನ, ವಿಶೇಷ ನಿರ್ದೇಶಕರು, ಸಿಬಿಐ ಇವರನ್ನು ಸಿಬಿಐ ನಿರ್ದೇಶಕರು ಮತ್ತು ಸಿಬಿಐ ವಿಶೇಷ ನಿರ್ದೇಶಕಾರಾಗಿ ಹೊಂದಿರುವ ಅವರ ಕರ್ತವ್ಯಗಳು, ಅಧಿಕಾರ, ಕಾರ್ಯಗಳು ಹಾಗೂ ಮೇಲ್ವಿಚಾರಣಾ ಪಾತ್ರಗಳಿಂದ ಮುಕ್ತರನ್ನಾಗಿ ಮಾಡಲು ನಿರ್ಧರಿಸಿದೆ ಎಂದು ಪ್ರಕಟಣೆ ತಿಳಿಸಿತು. ಸಿಬಿಐಯ ಉನ್ನತ ಅಧಿಕಾರಿಗಳ ಪರಸ್ಪರ ಮಾಡಿಕೊಂಡಿರುವ ಭ್ರಷ್ಟಾಚಾರದ ಗಂಭೀರ ಆಪಾದನೆಗಳು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆದಿದ್ದು ಸಂಸ್ಥೆಗೆ ಕಳಂಕವನ್ನು ತಂದಿತ್ತು. ಅಸಾಧಾರಣ ಪರಿಸ್ಥಿತಿ: ಜೇಟ್ಲಿ: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಿಬಿಐಗೆ ಸಂಬಂಧಿಸಿದ ಹಾಲಿ ಪರಿಸ್ಥಿತಿಯನ್ನು ಅಸಾಧಾರಣ ಸ್ಥಿತಿ ಎಂದು ಬಣ್ಣಿಸಿದರು. ವರ್ಮ ಮತ್ತು ಅಸ್ತಾನ ಅವರು ಪರಸ್ಪರ ಮಾಡಿಕೊಂಡಿರುವ ಆಪಾದನೆಗಳ ಅರ್ಹತೆ ಬಗ್ಗೆ ಮಾತನಾಡುವುದಿಲ್ಲ, ಇದು ಸರ್ಕಾರದ ವ್ಯಾಪ್ತಿಗೆ ಬಾರದ ಕಾರಣ ನಾವು ಆರೋಪಗಳ ಬಗ್ಗೆ ತನಿಖೆ ನಡೆಸುವುದಿಲ್ಲ ಎಂದು ಅವರು ಹೇಳಿದರು. ಕೇಂದ್ರೀಯ ಜಾಗೃತಾ ಆಯೋಗದ (ಸಿವಿಸಿ) ಮುಂದೆ ಉಭಯ ಅಧಿಕಾರಿಗಳು ಪರಸ್ಪರ ಮಾಡಿಕೊಂಡಿರುವ ಆರೋಪಗಳ ಎಲ್ಲ ಮಾಹಿತಿಗಳೂ ಇವೆ. ಆದ್ದರಿಂದ ಸಂಸ್ಥೆಯ ಸಮಗ್ರತೆಯ ರಕ್ಷಣೆಗಾಗಿ, ಸಿವಿಸಿಯು ತನಿಖೆ ಪೂರ್ಣಗೊಳ್ಳುವವರೆಗೆ ಉಭಯರೂ ರಜೆಯಲ್ಲಿ ತೆರಳುವ ಮೂಲಕ ಕರ್ತವ್ಯ ನಿರ್ವಹಣೆಯಿಂದ ಹೊರಹೋಗಬೇಕು ಎಂದು ಶಿಫಾರಸು ಮಾಡಿದೆ ಎಂದು ಜೇಟ್ಲಿ ನುಡಿದರು.  ‘ಯಾರು ತಪ್ಪಿತಸ್ಥರು ಎಂದು ನಾವು ಮೊದಲೇ ನಿರ್ಧರಿಸುವುದಿಲ್ಲ. ಅಧಿಕಾರಿಗಳು ನಿರಪರಾಧಿಗಳಾಗಿದ್ದರೆ ಅವರು ವಾಪಸ್ ಬರುತ್ತಾರೆ ಮತ್ತು ವಿಶೇಷ ತನಿಖಾ ತಂಡವು ಅವರ ವಿರುದ್ಧದ ಆರೋಪಗಳ ತನಿಖೆ ನಡೆಸುತ್ತದೆ ಎಂದು ಜೇಟ್ಲಿ ಹೇಳಿದರುಸೂಕ್ಷ್ಮ ತನಿಖೆಗೆ ಧಕ್ಕೆ; ಸುಪ್ರೀಂಗೆ ವರ್ಮ ಅರಿಕೆಬೆಳಗ್ಗೆ ಗಂಟೆಗಷ್ಟೇ ಸಿಬಿಐ ನಿರ್ದೇಶಕ ಸ್ಥಾನದಿಂದ ತಮ್ಮನ್ನು ಕಿತ್ತುಹಾಕಿರುವುದು ಗೊತ್ತಾಯಿತು ಎಂದು ವರ್ಮ ಅವರು ಭಾರತದ ಮುಖ್ಯ ನ್ಯಾಯಮೂರ್ತಿ  (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪೀಠದ ಮುಂದೆ ಮೌಖಿಕ ಅರಿಕೆಯಲ್ಲಿ ತಿಳಿಸಿದರು. ದಿಢೀರ್ ಮತ್ತು ಅನಿರೀಕ್ಷಿತ ಘಟನಾವಳಿಗಳ ಪರಿಣಾಮವಾಗಿ ಹಲವಾರು ಸೂಕ್ಷ್ಮ ಪ್ರಕರಣಗಳ ತನಿಖೆ ಅಸ್ತವ್ಯಸ್ತವಾಗುವ ಸಾಧ್ಯತೆಗಳಿವೆ  ಎಂದೂ ಅವರು ನ್ಯಾಯಾಲಯಕ್ಕೆ ತಿಳಿಸಿದರು. ವಕೀಲರಾದ ಪೂಜಾ ಧರ್ ಮತ್ತು ಗೋಪಾಲ್ ಶಂಕರನಾರಾಯಣನ್ ಮೂಲಕ ವರ್ಮ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಹಲವಾರು ಸೂಕ್ಷ್ಮ ಪ್ರಕರಣಗಳ ತಮ್ಮ ಕೈಕೆಳಗೆ ಇರುವುದರಿಂದ ತಮ್ಮಬಲವಂತ ವರ್ಗಾವಣೆಯನ್ನು ರದ್ದು ಪಡಿಸಬೇಕು, ತಮ್ಮ ಸಿಬಿಐ ನಿರ್ದೇಶಕ ಸ್ಥಾನದಿಂದ ಕಿತ್ತು ಹಾಕಿದ ಡಿಒಪಿಟಿ ಅಧಿಸೂಚನೆಯನ್ನು ರದ್ದು ಪಡಿಸಬೇಕು ಮತ್ತು ಎಂ. ನಾಗೇಶ್ವರ ರಾವ್ ಅವರನ್ನು ಸಿಬಿಐ ಮುಖ್ಯಸ್ಥರಾಗಿ ನೇಮಕ ಮಾಡಿದ್ದನ್ನು ರದ್ದು ಪಡಿಸಬೇಕು ಎಂದು ವರ್ಮ ತಮ್ಮ ಅರ್ಜಿಯಲ್ಲಿ ಕೋರಿದರು. ಈ ಮಧ್ಯೆ ಹಿರಿಯ ವಕೀಲ ಪ್ರಶಾಂತ ಭೂಷಣ್ ಅವರು ಸರ್ಕಾರದ ಆದೇಶವನ್ನುಅಕ್ರಮ ಎಂಬುದಾಗಿ ಹೇಳಿ, ತಾವು ಆದೇಶವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸುವುದಾಗಿ ಹೇಳಿದರು.  ‘ಅವರು ಪ್ರಧಾನಮಂತ್ರಿ ಕಚೇರಿ ಮೂಲಕ ಸಿಬಿಐಗೆ ಬಂದಿರುವ ಭ್ರಷ್ಟ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಕ್ರಮ ಕೈಗೊಂಡಿರುವುದಕ್ಕಾಗಿಭೀತಿ ಹಾಗೂ ಸಂಶಯ ಪಟ್ಟಂತೆಯೇ, ಸರ್ಕಾರವು ಸಿಬಿಐ ನಿರ್ದೇಶಕರನ್ನು ಅವರ ಹೊಣೆಗಾರಿಕೆಯಿಂದ ಕಿತ್ತುಹಾಕಿದೆಇದು ಸಂಪೂರ್ಣ ಅಕ್ರಮ. ಇದನ್ನು ಪ್ರಶ್ನಿಸಲಾಗುವುದುಎಂದು ಅವರು ಟ್ವಿಟ್ಟರಿನಲ್ಲಿ ಬರೆದರು. ೧೩ ಅಧಿಕಾರಿಗಳ ವರ್ಗಾವಣೆ: ಸಿಬಿಐ ಹಂಗಾಮೀ ನಿರ್ದೇಶಕರಾಗಿ ಈದಿನ ಅಧಿಕಾರ  ವಹಿಸಿಕೊಂಡ ನಾಗೇಶ್ವರ ರಾವ್ ಅವರು ೧೩ ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರಿಗೆ ಹೆಚ್ಚುವರಿ ಹೊಣೆಗಾರಿಕೆಗಳನ್ನು ವಹಿಸಿದರು. ಅಸ್ತಾನಾ ಮತ್ತು ಇತರರ ವಿರುದ್ಧದ ತನಿಖೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಿಐಜಿ ಮನೋಜ್ ಕುಮಾರ್ ಸಿನ್ಹ ಮತ್ತು ಪ್ರಕರಣ ತನಿಖಾಧಿಕಾರಿ ಅಜಯ್ ಬಸ್ಸಿ ಹಾಗೂ ಹೆಚ್ಚುವರಿ ಎಸ್ ಪಿ ಎಸ್.ಎಸ್. ಗುರ್ಮ್ ಅವರೂ ವರ್ಗಾವಣೆ ಪಟ್ಟಿಯಲ್ಲಿ ಸೇರಿದ್ದರು. ವರ್ಗಾವಣೆಗೊಂಡಿರುವ ಮತ್ತು ಹೆಚ್ಚುವರಿ ಹೊಣೆಗಾರಿಕೆಗಳನ್ನು ನೀಡಲಾಗಿರುವ ಅಧಿಕಾರಿಗಳು ಕೆಳಗಿನಂತಿದ್ದಾರೆ: . .ಕೆ.ಬಸ್ಸಿ, ಡಿವೈಎಸ್ಪಿ, ದೆಹಲಿಯಿಂದ ಪೋರ್ಟ್ ಬ್ಲೇರ್ ಗೆ ವರ್ಗ. . ಮನೋಜ್ ಕುಮಾರ್ ಸಿನ್ಹ, ಎಚ್ ಒಬಿ/ಡಿಐಜಿ ನಾಗಪುರದಿಂದ ದೆಹಲಿಗೆ ವರ್ಗ. . ತರುಣ್ ಗೌಬಾ, ರೇಂಜ್ ಡಿಐಜಿ ಮತ್ತು ಎಚ್ ಒಬಿ ಚಂಡೀಗಢದಿಂದ ದೆಹಲಿಗೆ ವರ್ಗ. . ಜಸ್ಬೀರ್ ಸಿಂಗ್, ಡಿಐಜಿ/ಎಚ್ ಒಬಿ, ಎಸ್ ಸಿ - ಅವರಿಗೆ ಹೆಚ್ ಒಬಿ, ಬಿಎಸ್ ಮತ್ತು ಎಫ್ಸಿಯ ಹೆಚ್ಚುವರಿ ಹೊಣೆಗಾರಿಕೆ. . ಎಸ್ ಎಸ್ ಗುರ್ಮ್, ಅಡಿಷನಲ್ ಎಸ್ ಪಿ ಜಬಲ್ಪುರಕ್ಕೆ ವರ್ಗ. . ಕೆ.ಆರ್. ಚೌರಾಸಿಯಾ, ಡಿಐಜಿ/ ಎಚ್ ಒಬಿ, .ರಾಮ್ ಗೋಪಾಲ್, ಎಚ್ ಒಬಿ, .ಸತೀಸ್ ದಗರ, ಎಸ್ ಪಿ, .ಅನಿಶ್ ಪ್ರಸಾದ್ ಡಿಐಜಿ/ಎಸ್ ಯು-, ೧೦. ಅರುಣ್ ಕುಮಾರ ಶರ್ಮ (ಜೆಡಿ(ಪಿ), ೧೧. .ಸಾಯಿ ಮನೋಹರ್, ಜೆಡಿ(ಪಿ), ೧೨. ವಿ. ಮುರುಗೇಸನ್, ಎಚ್.ಒಝಡ್/ಎಸಿ-(ಎಚ್ ಕ್ಯೂ), ೧೩.ಅಮಿತ್ ಕುಮಾರ್, ಡಿಐಜಿ/ಎಚ್ಒಬಿ. ವರ್ಮ, ಅಸ್ತಾನ ಮನೆಗಳ ಶೋಧ: ತನ್ಮಧ್ಯೆ, ಅಲೋಕ ವರ್ಮ ಮತ್ತು ಅಸ್ತಾನ ಅವರ ಮನೆಗಳಲ್ಲಿ ಹಂಗಾಮಿ ಸಿಬಿಐ ನಿರ್ದೇಶಕ ನಾಗೇಶ್ವರ ರಾವ್ ಆದೇಶದ ಮೇರೆಗೆ ಶೋಧ ನಡೆಸಲಾಯಿತು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದರು.

2018: ನ್ಯೂಯಾರ್ಕ್: ಅಮೆರಿಕದ ರಾಜಕಾರಣಿ, ರಾಜತಂತ್ರಜ್ಞೆ ಮತ್ತು ೧೯೯೩ರಿಂದ ೨೦೦೧ರವರೆಗೆ ಅಮೆರಿಕದ ಪ್ರಥಮ ಮಹಿಳೆಯಾಗಿದ್ದ ಹಿಲರಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ನ್ಯೂಯಾರ್ಕ್ ಹೊರವಲಯದ ಮನೆ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ವಾಷಿಂಗ್ಟನ್ ಮನೆಗೆ ಅಂಚೆಯಲ್ಲಿ ಬಂದ ಸಜೀವ ಬಾಂಬ್ಗಳು (ಸಜೀವ ಸ್ಫೋಟಕ ಸಾಧನ) ಪತ್ತೆಯಾಯಿತು. ಲಿಬರಲ್ ಕೋಟ್ಯಧಿಪತಿ ಜಾಜ್ ಸೊರೊಸ್ ಅವರ ಮನೆ ಆವರಣದಲ್ಲಿ ಪತ್ತೆಯಾದ ಸ್ಫೋಟಕಕ್ಕೂ ಸ್ಫೋಟಕ ಸಾಧನಗಳಿಗೂ ಸಂಬಂಧ ಇದೆ ಎಂಬುದಾಗಿ ತನಿಖೆಗಾರರು ಶಂಕಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದರು. ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆ ಬಗ್ಗೆ ಅಧಿಕೃತವಾಗಿ ಮಾತನಾಡಲು ತಮಗೆ ಅಧಿಕಾರವಿಲ್ಲ ಎಂದು ಅಧಿಕಾರಿ ಹೇಳಿದರು. ನ್ಯೂಯಾರ್ಕ್ ಚಪ್ಪಖ್ವಾದಲ್ಲಿರುವ ಕ್ಲಿಂಟನ್ ಅವರ ಮನೆಯಲ್ಲಿ ನಸುಕಿನ ವೇಳೆಯಲ್ಲಿ ಸ್ಫೋಟಕ ಸಾಧನ ಪತ್ತೆಯಾಯಿತು. ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಫ್ ಬಿಐ, ಸೀಕ್ರೆಟ್ ಸರ್ವೀಸ್ ಮತ್ತು ವೆಸ್ಟ್ಚೆಸ್ಟರ್ ಕಂಟ್ರಿ ಅಧಿಕಾರಿಗಳಿಗೆ ತಾವು ನೆರವು ನೀಡುತ್ತಿರುವುದಾಗಿ ಚಪ್ಪಖ್ವಾ ಪ್ರದೇಶದ ಉಸ್ತುವಾರಿ ವಹಿಸಿರುವ ನ್ಯೂಯಾರ್ಕ್ ನ್ಯೂ ಕ್ಯಾಸಲ್ ಪೊಲೀಸರು ಹೇಳಿದರು. ಕೋಟ್ಯಧೀಶ ಡೆಮಾಕ್ರಾಟ್ ದಾನಿ ಜಾರ್ಜ್ ಸೊರೋಸ್ ಅವರ ಬೆಡ್ ಫೋರ್ಡ್ ಪಟ್ಟಣದ  ಮನೆಯಲ್ಲಿ ಇಂತಹುದೇ ಸ್ಫೋಟಕ ಸಾಧನ ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು. ಮಾಜಿ ಅಧ್ಯಕ್ಷ ಕ್ಲಿಂಟನ್ ಮನೆಯಲ್ಲಿ ಸ್ಥಳೀಯ ಕಾಲಮಾನ ನಸುಕಿನ ಗಂಟೆ ವೇಳೆಗೆ ಅನುಮಾನಾಸ್ಪದ ಪೊಟ್ಟಣ ಪತ್ತೆಯಾಯಿತು ಎಂದು ಹಿರಿಯ ಕಾನೂನು ಜಾರಿ ಮೂಲಗಳು ಹೇಳಿದವು. ಕ್ಲಿಂಟನ್ ಮನೆಯ ಪತ್ರಗಳನ್ನು ಪರಿಶೀಲಿಸುವ ತಂತ್ರಜ್ಞನಿಗೆ ಸ್ಫೋಟಕ ಸಾಧನದ ಪೊಟ್ಟಣ ಕಾಣಿಸಿದ್ದು, ಅಂಚೆ ಮೂಲಕ ಇದನ್ನು ಕಳುಹಿಸಿರಬಹುದು ಎಂದು ಶಂಕಿಸಲಾಯಿತು. ಕ್ಲಿಂಟನ್ ಮನೆಗೆ ಕಳುಹಿಸಲಾಗಿದ್ದ ಮಾದರಿಯಂತಹುದೇ ಪೊಟ್ಟಣ ವಾಷಿಂಗ್ಟನ್ ನಲ್ಲಿ ಇರುವ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಮನೆಯಲ್ಲೂ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದರು. ‘ಪ್ರೊಟೆಕ್ಟೀಸ್ ಎಂಬುದಾಗಿ ಹೆಸರಿಸಲಾಗಿರುವ ಎರಡೂ ಅನುಮಾನಾಸ್ಪದ ಪೊಟ್ಟಣಗಳನ್ನು ಸೀಕ್ರೆಟ್ ಸರ್ವೀಸ್ ಪರಿಶೀಲಿಸಿದೆ ಎಂದು ಸರ್ವೀಸ್ ಹೇಳಿಕೆ ತಿಳಿಸಿತು. ಕ್ಲಿಂಟನ್ ಮತ್ತು ಒಬಾಮಾ ಅವರನ್ನು ಉದ್ದೇಶಿಸಿ ಕಳುಹಿಸಲಾದ ಪೊಟ್ಟಣಗಳನ್ನು ಅಂಚೆ ತಪಾಸಣೆ ವೇಳೆಯಲ್ಲಿಯೇ ಪತ್ತೆ ಹಚ್ಚಲಾಗಿದ್ದು, ಅವುಗಳ ಬಗ್ಗೆ ಸೂಕ್ತವಾಗಿ ವ್ಯವಹರಿಸಲಾಗಿದೆ. ಪೊಟ್ಟಣಗಳು ಅವರಿಗೆ ತಲುಪಿಲ್ಲ ಇಲ್ಲವೇ ಅವರಿಗೆ ಅದು ತಲುಪುವ ಅಪಾಯವೂ ಇಲ್ಲ ಎಂದು ಸೀಕ್ರೆಟ್ ಸರ್ವೀಸ್ ಹೇಳಿಕೆ ತಿಳಿಸಿತು.

2018: ತಿರುವನಂತಪುರಂ: ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯದ ತಂತ್ರಿ (ಮುಖ್ಯ ಅರ್ಚಕ) ಅವರನ್ನು ಟೀಕಿಸಿದ್ದಕ್ಕಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಇಲ್ಲಿ ಹರಿಹಾಯ್ದ ಕಾಂಗ್ರೆಸ್ ನೇತೃತ್ವದ ಯುಡಿಎಫ್  ‘ಇದು ವಿಶ್ವಾದ್ಯಂತದ ಅಯ್ಯಪ್ಪಸ್ವಾಮಿ ಭಕ್ತರ ಮೇಲಿನ ‘ಆಕ್ರಮಣ ಎಂದು ಖಂಡಿಸಿತು.  ‘ತಂತ್ರಿಯವರು (ಮುಖ್ಯ ಅರ್ಚಕ) ಅಯ್ಯಪ್ಪಸ್ವಾಮಿ ದೇವಾಲಯದ ವಿಧಿವಿಧಾನ, ಸಂಪ್ರದಾಯಗಳನ್ನು ನಿರ್ಧರಿಸುವಲ್ಲಿ ಅಂತಿಮ ಅಧಿಕಾರಿ. ಅವರ ವಿರುದ್ಧ ಯಾವುದೇ ಟೀಕೆ ಮಾಡುವುದು ಮುಖ್ಯಮಂತ್ರಿ ಹುದ್ದೆಗೆ ‘ಒಪ್ಪುವಂತಹುದಲ್ಲ ಎಂದು ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ಅವರು ಇಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ತಮ್ಮ ಆದೇಶಕ್ಕೆ ಅನುಗುಣವಾಗಿ ಕುಣಿಯುತ್ತಿಲ್ಲ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿಯವರು ತಿರುವಾಂಕೂರು ದೇವಸ್ವಂ ಮಂಡಳಿಯನ್ನು (ಟಿಡಿಬಿ) ಕೂಡಾ ಬೆದರಿಸುತ್ತಿದ್ದಾರೆ ಎಂದೂ ಚೆನ್ನಿತ್ತಲ ಆಪಾದಿಸಿದರು. ಹೇಗಾದರೂ ಮಾಡಿ ಮಹಿಳೆಯರನ್ನು ದೇವಾಲಯಕ್ಕೆ ಕರೆತರಬೇಕೆಂಬ ತನ್ನ ಆದೇಶವನ್ನು ಅನುಷ್ಠಾನಗೊಳಿಸಲಿಲ್ಲ ಎಂಬ ಸಿಟ್ಟು ಮುಖ್ಯಮಂತ್ರಿಯವರು ತಂತ್ರಿ ಮತ್ತು ಟಿಡಿಬಿ ವಿರುದ್ಧ ಆಡಿದ ಪದಗಳಲ್ಲಿ ಪ್ರತಿಫಲಿಸಿದೆ ಎಂದು ಕಾಂಗ್ರೆಸ್ ನಾಯಕ ನುಡಿದರುಪೊಲೀಸರು ಹೋರಾಟಗಾರ್ತಿ ಮಹಿಳೆಯರನ್ನು ತಮ್ಮ ಸಮವಸ್ತ್ರವನ್ನು ಕೊಟ್ಟು ಶಬರಿಮಲೈಗೆ ಕರೆತರಲು ಯತ್ನಿಸಿದರು. ಆದರೆ ಅವರ ಯತ್ನ ವಿಫಲವಾಯಿತು. ಸಿಟ್ಟನ್ನು ಮುಖ್ಯಮಂತ್ರಿಯವರು ತಂತ್ರಿ ವಿರುದ್ಧ ತೋರಿಸುತ್ತಿದ್ದಾರೆ ಎಂದು ಚೆನ್ನಿತ್ತಲ ಹೇಳಿದರುತಂತ್ರಿ ವಿರುದ್ಧ ಮುಖ್ಯಮಂತ್ರಿ ಮಾಡಿರುವ ದಾಳಿ ವಿಶ್ವಾದ್ಯಂತ ಇರುವ ಅಯ್ಯಪ್ಪಸ್ವಾಮಿ ಭಕ್ತರ ಮೇಲೆ ಮಾಡಿರುವ ದಾಳಿ ಎಂಬುದಾಗಿ ಕಾಂಗ್ರೆಸ್ ನಾಯಕ ಬಣ್ಣಿಸಿದರು.
ತಮ್ಮ ಹೇಳಿಕೆಗಳ ಮೂಲಕ ಭಕ್ತರಲ್ಲಿ ಭೀತಿ ಮತ್ತು ಕಾತರ ಸೃಷ್ಟಿಸಲು ವಿಜಯನ್ ಯತ್ನಿಸುತ್ತಿದ್ದಾರೆ ಎಂದೂ ಚೆನ್ನಿತ್ತಲ ನುಡಿದರುದೇವಾಲಯಗಳ ಸುಪರ್ದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಹಲವಾರು ತೀರ್ಪುಗಳನ್ನು ಉಲ್ಲೇಖಿಸಿದ ಚೆನ್ನಿತ್ತಲಶಬರಿಮಲೈಯಲ್ಲಿ ತಂತ್ರಿ ಅಧಿದೈವ ಅಯ್ಯಪ್ಪಸ್ವಾಮಿಗೆ ಸಂಬಂಧಿಸಿದಂತೆ ಪಿತೃಸ್ಥಾನವನ್ನು ಹೊಂದಿದ್ದಾರೆ. ವಂಶ ಪರಂಪರೆಯಿಂದ ಬರುವ ತಂತ್ರಿಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭಿಸುವಂತಹುದಲ್ಲ ಎಂದು ವಿರೋಧ ಪಕ್ಷದ ನಾಯಕ ಹೇಳಿದರು.

2018: ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಸ್ಮಾರಕಕ್ಕಾಗಿಪೂಜೆ ನೆರವೇರಿಸಲು ಹೊರಟಿದ್ದ ಮಹಾರಾಷ್ಟ್ರದ ಮುಖ್ಯಕಾರ್ಯದರ್ಶಿ (ಸಿಎಸ್) ಡಿ.ಕೆ. ಜೈನ್ ಸೇರಿದಂತೆ ಸುಮಾರು ೪೦ ಮಂದಿ ಅಧಿಕಾರಿಗಳುಮಾಧ್ಯಮ ಮಂದಿ ಮತ್ತು ಟಿವಿ ಸಿಬ್ಬಂದಿ ಇದ್ದ ದೋಣಿಯೊಂದು ಈದಿನ ಸಂಜೆ ಅರಬ್ಬಿ ಸಮುದ್ರದಲ್ಲಿ ಮುಳುಗಿತು ಎಂದು ಕರಾವಳಿ ಕಾವಲು ಪಡೆ ತಿಳಿಸಿತು. ಭಾರತೀಯ ಕರಾವಳಿ ಕಾವಲು ಪಡೆಯ ಎರಡು ಹೆಲಿಕಾಪ್ಟರುಗಳು, ಕಡಲು ಪೊಲೀಸರು ತತ್ ಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ವರದಿಗಳು ಹೇಳಿದವು.. ದುರಂತದ ಬಳಿಕ  ಕಾರ್ಯಕ್ರಮವನ್ನು ರದ್ದು ಪಡಿಸಲಾಯಿತು.

2018: ಜಲಸರಮ್: ಜಾಗತಿಕವಾಗಿ ಮುಂಚೂಣಿಯಲ್ಲಿರುವ ಇಸ್ರೇಲ್ ರಕ್ಷಣಾ ಉದ್ಯಮದ ಕಂಪನಿಯೊಂದು ಭಾರತ ನೌಕಾಪಡೆಯ ಏಳು ಹಡಗುಗಳಿಗೆ ಬರಾಕ್- ಆರ್ ಸ್ಯಾಮ್ ಏರ್ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುವ ದಿಸೆಯಲ್ಲಿ ೭೭೭ ಮಿಲಿಯನ್ ಡಾಲರ್ ವ್ಯವಹಾರವೊಂದನ್ನು ಕುದುರಿಸಿತು. ಭೂಮಿಯಿಂದ ಆಕಾಶಕ್ಕೆ ನೆಗೆಯುವ ದೂರಗಾಮಿ ಕ್ಷಿಪಣಿ ವ್ಯವಸ್ಥೆಯನ್ನು ಇದು ಹೊಂದಿದ್ದು ಇಸ್ರೇಲ್ ಮತ್ತು ಭಾರತದ ನೌಕಾಪಡೆಗಳು ಅಲ್ಲದೆ ವಾಯು ಮತ್ತು ಭೂದಳಗಳ ಕಾರ್ಯಾಚರಣೆಗೆ ತೊಡಗಿಸಿಕೊಳ್ಳುತ್ತವೆ ಎಂದು ಕಂಪನಿಯ ಮೂಲಗಳು ರಕ್ಷಣಾ ವ್ಯವಹಾರದ ಬಗ್ಗೆ ವರದಿಮಾಡಿದವು. ಈಚೆಗಿನ ವ್ಯವಹಾರದ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್ ಏರೋಸ್ಪೇಸ್ ಉದ್ಯಮ (ಐಎಐ) ಬರಾಕ್- ರಕ್ಷಣಾ ವ್ಯವಸ್ಥೆಯನ್ನು ಭಾರತ ಮತ್ತು ಇಸ್ರೇಲ್ ಜಂಟಿ ಯಾಗಿ ಅಭಿವೃದ್ಧಿ ಪಡಿಸಿದ್ದು ಇದು ಉಭಯ ದೇಶಗಳ ಸಹಭಾಗಿತ್ವದ ಬಲಿ? ಸಂಕೇತವಾಗಿದೆ ಎಂದು ಕಂಪನಿ ಹೇಳಿತು. ಕಡಲ ಯುದ್ದಗಳಲ್ಲಿ ವಾಯು, ಕಡಲ ಮತ್ತು ಭೂಮಿಯಿಂದ ವಿವಿಧ ದೂರಗಳಿಂದ ಎರಗಬಹುದಾದ ದಾಳಿಗಳ ಬೆದರಿಕೆಯನ್ನು ಎದುರಿಸಲು ರಕ್ಷಣಾ ವ್ಯವಸ್ಥೆ ವಿಶಾಲವಾದ ಆಕಾಶದಲ್ಲಿ ಮತ್ತು ಆಯಾ ನಿಗದಿತ ಗುರಿಗಳ ಸಂದರ್ಭದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಈವ್ಯವಸ್ಥೆಯು ಮುಂದುವರೆದ ಡಿಜಿಟಲ್ ರಾಡಾರ್, ಆಜ್ಞೆ ಮತ್ತು ನಿಯಂತ್ರಣ, ಲಾಂಚರ್ಗಳು ಮತ್ತು ಇಂಟರ್ಸೆಪ್ಟರ್ಗಳನ್ನು ಅಂತರ್ಗತಗೊಂಡಿದ್ದು ಇದು ಆಧುನಿಕ ರೇಡಿಯೋ ತರಂಗಾತರ ಅನ್ವೇ?ಣೆ, ಮಾಹಿತಿ ಸಂಪರ್ಕ ಮತ್ತು ಪೂರ್ಣ ವ್ಯವಸ್ಥೆಯ ಸಂಪರ್ಕವನ್ನು ಸಂಯೋಜಿಸುತ್ತದೆ.  ದೂರಗಾಮಿ ಮತ್ತು ಸಮೀಪದ ವಿವಿಧ ವಾಯು ದಾಳಿಗಳಿಂದ ರಕ್ಷಣೆ ಪಡೆಯಲು ವ್ಯವಸ್ಥೆ ವಿನ್ಯಾಸ ಗೊಂಡಿದೆ. ಸ್ಥಿರ-ರೆಕ್ಕೆ (ಪಿಕ್ಸಡರಿಂಗ್) ದಾಳಿ ವಿಮಾನ, ಹೆಲಿಕಾಪ್ಟರ್ಗಳು, ಡ್ರೋಣ್ಗಳು, ಪ್ರೊಜೆಕ್ಟಾಲ್ಗಳು, ಮತ್ತಿತರ ದಾಳಿಗಳನ್ನು ಎದುರಿಸುವ ರಕ್ಷಣಾ ಕೌಶಲ್ಯವನ್ನು ಬರಾಕ್- ವ್ಯವಸ್ಥೆ ಹೊಂದಿದೆ.   ಮಲ್ಟಿಮಿಷನ್ ರಾಡರ್, ದ್ವೀಮಾರ್ಗಿ ಮಾಹಿತಿ ಸಂಪರ್ಕ, ಬಹುವಿಧದ ಆಜ್ಞೆ ಮತ್ತು ನಿಯಂತ್ರಣ ವ್ಯವಸ್ಥೆ ಯನ್ನು ಹಂತ ಹಂತವಾಗಿ ಒಳಗೊಂಡ ರಕ್ಷಣಾ ತಂತ್ರಜ್ಞಾನ ವ್ಯವಸ್ಥೆ ಎಲ್ಲಾ ಋತುಮಾನಗಳಲ್ಲಿ ರಾತ್ರಿ ಹಗಲು ಬಹುಮುಖಿ ಗುರಿಗಳನ್ನು ಸತತವಾಗಿ ತಲುಪಲು ಬಳಸುವವರಿಗೆ ಅನುಕೂಲವಾಗಲಿದೆ.  ಕ್ಷಿಪಣಿ ವ್ಯವಸ್ಥೆಯನ್ನು ಎಐ, ಭಾರತದ ಡಿಆರ್ ಡಿಒ, ಇಸ್ರೇಲ್ ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ತಂತ್ರಜ್ಞಾನ ಮೂಲಸೌಕರ್ಯಗಳ ಆಡಳಿತ, ಎಲ್ಟಾ ವ್ಯವಸ್ಥೆ, ರಫೇಲ್ ಮತ್ತು ಇತರ ಭಾರತೀಯ ರಕ್ಷಣಾ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿ ಪಡಿಸಿವೆ. ಐಎಐನೊಂದಿಗೆ ಭಾರತ ಹೊಸ ಗುತ್ತಿಗೆಯನ್ನು ಪಡೆದಿದ್ದು, ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಯೋಜನೆಯಲ್ಲಿ ಪ್ರಮಖ ಗುತ್ತಿಗೆದಾರನಾಗಿದೆ. ಇಸ್ರೇಲ್ ರಕ್ಷಣಾ ಸಚಿವ ಅವಿಗ್ಡೋರ್ ಲಿಬರ್ಮನ್ರವರು ಟ್ವಿಟ್ಟರ್ನಲ್ಲಿ ವ್ಯವ ಹಾರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಇಸ್ರೇಲ್ ಏರೋಸ್ಪೇಸ್ ಉದ್ಯಮ ಮತ್ತು ರಕ್ಷಣಾ ಮಂಡಳಿಗೆ ಭಾರತದೊಂದಿಗೆ ಕೈಗೊಂಡ ರಕ್ಷಣಾ ಸರಕುಗಳ ಮಾರಾಟಕ್ಕಾಗಿ ಅಭಿನಂದಿಸಿದರು.

2018: ನವದೆಹಲಿ: ಕರ್ನಾ ಟಕದ ಹೈ ಕೋರ್ಟ್ ನ್ಯಾಯಮೂರ್ತಿ .ಎಸ್ .ಬೋಪಣ್ಣ ಅವರನ್ನು ಗುಹವಾಟಿ ಹೈ ಕೋರ್ಟ್ ಮು ಖ್ಯ ನ್ಯಾಯಮೂರ್ತಿಯನ್ನಾಗಿ ಕೇಂದ್ರ ಸರ್ಕಾರ ನೇಮಿಸಿತು. ದೇಶದ ವಿವಿಧ ನ್ಯಾಯಾಲ ಯಗಳಲ್ಲಿ ಖಾಲಿ ಇದ್ದ ಐದು ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಳ ಹುದ್ದೆ ಗಳನ್ನು ಭರ್ತಿ ಮಾಡಲಾಯಿತು.

2018: ವಿಶಾಖಪಟ್ಟಣ:  ವೆಸ್ಟ್ಇಂಡೀಸ್ವಿರುದ್ಧ  2 ನೇ ಏಕದಿನ ಪಂದ್ಯದಲ್ಲಿ  ಭಾರತ ಕ್ರಿಕೆಟ್ತಂಡದ
ನಾಯಕ ವಿರಾಟ್ಕೊಹ್ಲಿ  ಏಕದಿನ ಕ್ರಿಕೆಟ್ಇತಿಹಾಸದ ಅತೀ ವೇಗದಲ್ಲಿ 10 ಸಾವಿರ ರನ್ಗಳನ್ನು ಪೂರೈಸಿದ ದಾಖಲೆ ಬರೆದರು. ತನ್ಮೂಲಕ ಸಚಿನ್ತೆಂಡುಲ್ಕರ್ಅವರ ಹೆಸರಿನಲ್ಲಿದ್ದ 2 ದಾಖಲೆಗಳನ್ನು ವಿರಾಟ್ ಕೊಹ್ಲಿ ಒಂದೇ ದಿನ ಮುರಿದರು.  ಕೊಹ್ಲಿ 205 ಇನ್ನಿಂಗ್ಸ್ಗಳಲ್ಲಿ ಆಡುವ ಮೂಲಕ 10 ಸಾವಿರ ರನ್ಗಳ ಗಡಿ ದಾಟಿ ದಾಖಲೆ ಬರೆದರು. ಕ್ರಿಕೆಟ್ದೇವರು ಸಚಿನ್ಏಕದಿನ ಪಂದ್ಯಗಳಲ್ಲಿ 10 ಸಾವಿರ ರನ್ಪೂರೈಸಲು 259 ಇನ್ನಿಂಗ್ಸ್ಗಳಲ್ಲಿ ಆಡಿದ್ದರು. ಸೌರವ್ಗಂಗೂಲಿ ಮೂರನೇ ಸ್ಥಾನದಲ್ಲಿದ್ದು  263 ಇನ್ನಿಂಗ್ಸ್ಗಳಲ್ಲಿ ಆಡಿದ್ದರುಕೊಹ್ಲಿ ಸಚಿನ್ಅವರ ಇನ್ನೊಂದು ದಾಖಲೆಯನ್ನು ಮುರಿದರು. ಇದುವರೆಗೆ ಸಚಿನ್‌  ವಿಂಡೀಸ್ಎದುರಿನ ಅತೀ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಆಗಿದ್ದರು.1573 ರನ್ಗಳ ದಾಖಲೆ ಸಚಿನ್ಹೆಸರಿನಲ್ಲಿತ್ತುಟಾಸ್ಗೆದ್ದು  ಬ್ಯಾಟಿಂಗ್ಆಯ್ಕೆ ಮಾಡಿಕೊಂಡ ಭಾರತ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ಶರ್ಮಾ 4 ರನ್ಗಳಿಸಿ ಔಟಾದರು. ಬಳಿಕ ಧವನ್‌ 29 ರನ್ಗಳಿಸಿ ಔಟಾದರುಭರ್ಜರಿ ಬ್ಯಾಟಿಂಗ್ಪ್ರದರ್ಶಿಸಿದ ಕೊಹ್ಲಿ 106 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರುಕೊಹ್ಲಿಗೆ ಸಾಥ್ನೀಡಿದ ಅಂಬಾಟಿ ರಾಯಡು 73 , ಧೋನಿ 20, ರಿಷಭ್ಪಂತ್‌ 17 ರನ್ಗಳಿಸಿ ಔಟಾದರು.

1947: ಇಂದು ವಿಶ್ವಸಂಸ್ಥೆ ದಿನ. 1947ರಲ್ಲಿ ವಿಶ್ವ ಸಂಸ್ಥೆಯು ಅಕ್ಟೋಬರ್ 24ರ ದಿನವನ್ನು ವಿಶ್ವಸಂಸ್ಥೆ ದಿನವಾಗಿ ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು 1945ರಲ್ಲಿ ಈ ದಿನ ವಿಶ್ವಸಂಸ್ಥೆ ಔಪಚಾರಿಕವಾಗಿ ಅಸ್ತಿತ್ವಕ್ಕೆ ಬಂದದ್ದರಿಂದ ಈ ದಿನವನ್ನು ವಿಶ್ವಸಂಸ್ಥೆ ದಿನವಾಗಿ ಆಚರಿಸಲು ಆಯ್ಕೆ ಮಾಡಲಾಯಿತು. (ವಿಶ್ವಸಂಸ್ಥೆ ಚಾರ್ಟರನ್ನು 1945ರ ಜೂನ್ 26ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು.)

2008:ದೀಪಾವಳಿ ಬೆಳಕಿನ ಪ್ರಭಾವಳಿಯಲ್ಲಿ ಮೀಯಬೇಕಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಹಬ್ಬದ ಮುಂಚೆಯೇ ವಾರಾಂತ್ಯ 1071 ಅಂಶಗಳ ಭಾರಿ ಕುಸಿತ ದಾಖಲಿಸಿ ಬೆಳಕಿನ ಸುಳಿವೇ ಕಾಣದಂತೆ ಮಾಡಿತು. 9000ಕ್ಕೂ ಕೆಳಗೆ ಕುಸಿದ ಸೆನ್ಸೆಕ್ಸ್ 8,701ರಲ್ಲಿ ದಿನದ ವಹಿವಾಟನ್ನು ಅಂತ್ಯಗೊಳಿಸಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ (ಆರ್ ಬಿ ಐ) ಪ್ರಕಟಿಸಿದ ಸಾಲನೀತಿಯಲ್ಲಿ, ಮುಖ್ಯ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಯಥಾಸ್ಥಿತಿ ಕಾಯ್ದುಕೊಂಡದ್ದು ಷೇರುಪೇಟೆಯನ್ನು ಪಾತಾಳಕ್ಕೆ ತಳ್ಳಿತು.

2008: ರಷ್ಯಾದ ಗಗನಯಾನಿಗಳು ಮತ್ತು ಅಮೆರಿಕದ ಬಾಹ್ಯಾಕಾಶ ಪ್ರವಾಸಿಯನ್ನು ಒಳಗೊಂಡ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆ ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿತು. ನಾಸಾ ಖಗೋಳ ವಿಜ್ಞಾನಿ ಓವನ್ ಗಾರಿಯಟ್ ಅವರ ಮಗ ಹಾಗೂ ಕಂಪ್ಯೂಟರ್ ಗೇಮ್ ಗಳ ವಿನ್ಯಾಸಕ ರಿಚರ್ಡ್ ಗಾರಿಯಟ್ (ತಮ್ಮ ತಂದೆಯ ಹಾದಿ ತುಳಿಯಲು 3 ಕೋಟಿ ಡಾಲರುಗಳನ್ನು ನೀಡಿದ್ದ) ಕಝಕ್ ಬಯಲು ಪ್ರದೇಶದಲ್ಲಿ ಜಿಎಂಟಿ 3.30ರ ಸಮಯಕ್ಕೆ ಸುರಕ್ಷಿತವಾಗಿ ಇಳಿದರು.

2008: ಹಿಂದೂ ಬಲಪಂಥೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಿ, ಮಾಲೆಗಾಂವ್ ಮತ್ತು ಮೊಡಸಾ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಯುವ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಮತ್ತು ಇನ್ನೂ ಇಬ್ಬರನ್ನು ಮುಂಬೈ ಭಯೋತ್ಪಾದನೆ ನಿಗ್ರಹ ದಳದ ಪೊಲೀಸರು ಬಂಧಿಸಿದರು. ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್, ಶಾಂಲಾಲ್ ಸಾಹು ಮತ್ತು ಶಿವನಾರಾಯಣ ಸಿಂಗ್ ಅವರನ್ನು ಪೊಲೀಸರು ನಾಸಿಕ್ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ನ್ಯಾಯಾಧೀಶರು ಆಪಾದಿತರನ್ನು ನವೆಂಬರ್ ಮೂರರವರೆಗೆ ಪೊಲೀಸರ ವಶಕ್ಕೆ ಒಪ್ಪಿಸಿದರು.

2008: ಉತ್ತರ ಚೀನಾದ ಹೆಬಿ ಪ್ರಾಂತ್ಯದಲ್ಲಿ ಸುಮಾರು 3 ತಿಂಗಳ ಕಾಲ ಗುಟ್ಟಾಗಿಡಲಾಗಿದ್ದ ಕಲ್ಲಿದ್ದಲು ಗಣಿ ದುರಂತದಲ್ಲಿ 35 ಜನರು ಪ್ರಾಣ ಕಳೆದುಕೊಂಡದ್ದು ದೃಢಪಟ್ಟಿತು. ಲಿಜಿಯಾವ ಎಂಬ ಗಣಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕಗಳು ಜುಲೈ 14ರಂದು ಸ್ಫೋಟಿಸಿ ಒಬ್ಬ ರಕ್ಷಣಾ ಕಾರ್ಯಕರ್ತ ಮತ್ತು 34 ಗಣಿ ಕಾಮರ್ಿಕರು ಮೃತರಾಗಿದ್ದರು. ಆದರೆ ವಿಷಯ ಹೊರಬೀಳದಂತೆ ಎಚ್ಚರ ವಹಿಸಿದ ಗಣಿ ಮಾಲೀಕರು ಮೃತರ ಕುಟುಂಬಗಳಿಗೆ ಪರಿಹಾರ ನೀಡಿ ಹೊರಗೆಲ್ಲೂ ಹೇಳದಂತೆ ಬೆದರಿಕೆ ಒಡ್ಡ್ದಿದರು. ಗ್ರಾಮದ ಕೆಲ ಮುಖ್ಯಸ್ಥರು , ಪೊಲೀಸರು ಇದರ್ಲಲಿ ಶಾಮೀಲಾಗಿದ್ದರು. ಸಂತ್ರಸ್ತರು ಅಂತರ್ಜಾಲದ ಮೂಲಕ ವಿಷಯವನ್ನು ಬಹಿರಂಗಪಡಿಸಿ ನ್ಯಾಯಕ್ಕಾಗಿ ಸರ್ಕಾರವನ್ನು ಒತ್ತಾಯಿಸಿದಾಗ ಅಕ್ಟೋಬರ್ 7ರಂದು ಈ ಸ್ಫೋಟಕ ಸುದ್ದಿ ಬಹಿರಂಗಗೊಂಡಿತ್ತು.

2008: ವಿಶ್ವದ ಅತ್ಯಂತ ಪರಿಣಾಮಕಾರಿ ಸಿಲಿಕಾನ್ ಸೋಲಾರ್ ಸೆಲ್ ಗಳನ್ನು ಅಭಿವೃದ್ಧಿ ಪಡಿಸಿರುವುದಾಗಿ ಆಸ್ಟ್ರೇಲಿಯಾದ ವಿಜ್ಞಾನಿಗಳು ಸಿಡ್ನಿಯಲ್ಲಿ ಪ್ರಕಟಿಸಿದರು. ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಫೊಟೋವೊಲ್ಟಾಯಿಕ್ ಸೆಂಟರ್ ಆಫ್ ಎಕ್ಸಲೆನ್ಸ್ ವಿಶ್ವದಾಖಲೆಯ ಶೇ 24.7ರಷ್ಟು ಪರಿಣಾಮಕಾರಿಯಾದ ಈ ಸಿಲಿಕಾನ್ ಸೋಲಾರ್ ಸೆಲ್ ಹೊಂದಿದೆ. ಸೂರ್ಯನ ಬೆಳಕನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುವುದು ಆರು ನೂತನ ವಿಶ್ವ ದಾಖಲೆಗಳಲ್ಲಿ ಒಂದಾಗಿದ್ದು ಸಿಲಿಕಾನ್ ಸೋಲಾರ್ ತಾಂತ್ರಿಕತೆ ವಿಶ್ವವಿದ್ಯಾಲಯದ ದಾಖಲೆಯಾಗಿದೆ.

2007: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಅಕ್ಟೋಬರ್ 20ರಂದು ಹೊತ್ತಿಕೊಂಡ ಕಾಳ್ಗಿಚ್ಚಿನ ಜ್ವಾಲೆಗಳನ್ನು ಹತೋಟಿಗೆ ತರಲು ಸ್ಥಳೀಯ ಆಡಳಿತ ನಾಲ್ಕನೇ ದಿನವೂ ವಿಫಲವಾಗಿ, 5 ಲಕ್ಷ ಜನ ಸಾನ್ ಡಿಯಾಗೊ ಪ್ರಾಂತ್ಯವನ್ನು ತೊರೆದರು. ಕಾಳ್ಗಿಚ್ಚು ಉಗ್ರ ಸ್ವರೂಪ ತಾಳಿ, 1,220 ಚದರ ಕಿ.ಮೀ. ದೂರಕ್ಕೆ ವ್ಯಾಪಿಸಿತು. ಅಗ್ನಿ ಪ್ರತಾಪ ಸಾನ್ ಡಿಯಾಗೊ ಪ್ರದೇಶದಲ್ಲಿ ಹೆಚ್ಚಾಗಿತ್ತು. ಪರ್ವತದ ಮೇಲಿರುವ ಸಾನ್ ಡಿಯಾಗೊ ಪಟ್ಟಣವನ್ನು ಅಗ್ನಿಯ ಜ್ವಾಲೆಗಳಿಂದ ರಕ್ಷಿಸಲು 10,000ದಷ್ಟ ಅಗ್ನಿಶಾಮಕ ಸಿಬ್ಬಂದಿ ಅಹೋರಾತ್ರಿ ಶ್ರಮಿಸಿದರು. ಕಾಳ್ಗಿಚ್ಚಿಗೆ ಐವರು ಬಲಿಯಾಗಿ 36 ಜನ ಗಾಯಗೊಂಡರು. 1500ಕ್ಕೂ ಹೆಚ್ಚು ಮನೆಗಳು, ಕಟ್ಟಡಗಳು ಬೆಂಕಿಗೆ ಆಹುತಿಯಾದವು. ರಸ್ತೆಯ ಮೇಲೆಲ್ಲ ಬೂದಿ, ಪಟ್ಟಣದ ತುಂಬೆಲ್ಲ ಕಪ್ಪು ಹೊಗೆ ಆವರಿಸಿತು. ಕ್ಯಾಲಿಫೋರ್ನಿಯಾದ ಇತಿಹಾಸದಲ್ಲೇ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಜನರನ್ನು ಸ್ಥಳಾಂತರಗೊಳಿಸಿದ ಮೊದಲ ಘಟನೆ ಇದು. 2005ರ ಕತ್ರಿನಾ ಚಂಡಮಾರುತದ ನಂತರ ಅಮೆರಿಕದಲ್ಲಿ ಸಂಭವಿಸಿದ ಬಹುದೊಡ್ಡ ನೈಸರ್ಗಿಕ ವಿಕೋಪ ಇದು. ಕತ್ರಿನಾ ಚಂಡಮಾರುತ ಅಪಾರ ಪ್ರಮಾಣದ ನಾಶಕ್ಕೆ ಕಾರಣವಾಗಿತ್ತು.

2007: ಬಾಬರಿ ಮಸೀದಿ ಧ್ವಂಸ ನಂತರ ದೇಶದ ವಿವಿಧೆಡೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಕಾನ್ಪುರದ ಸ್ಥಳೀಯ ನ್ಯಾಯಾಲಯವೊಂದು 15 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಶಿಕ್ಷೆಗೆ ಗುರಿಯಾದ ಆರೋಪಿಗಳು 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿ ಧ್ವಂಸವಾದ ಮೇಲೆ ನಡೆದ ಕೋಮು ಗಲಭೆಯಲ್ಲಿ ಭಾಗವಹಿಸಿ ಹತ್ಯಾಕಾಂಡ ಮಾಡಿದ್ದರು ಎನ್ನಲಾಗಿತ್ತು. ಈ ಘಟನೆಯಲ್ಲಿ 11 ಮಂದಿ ಮೃತರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಧೀಶ ಎಸ್. ಎಂ. ಹಾಸೆಬ್ ಅವರು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದರು.

2007: ಭಾರತೀಯ ಜನತಾ ಪಕ್ಷದ ಮುಖಂಡ ಎಲ್. ಕೆ .ಅಡ್ವಾಣಿ ಅವರು 1998ರ ಫೆಬ್ರುವರಿ 14ರಂದು ಕೊಯಮತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಅಲ್-ಉಮ್ಮಾ ಸಂಘಟನೆಯ ಅಧ್ಯಕ್ಷ ಎಸ್. ಎ. ಬಾಷಾ ಮತ್ತು ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ ಸೇರಿದಂತೆ 31 ಮಂದಿಗೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಡ್ವಾಣಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿ ಈ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಸ್ಫೋಟದಲ್ಲಿ 58 ಜನ ಮೃತರಾಗಿ 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸ್ಫೋಟ ಸಲುವಾಗಿ ಕ್ರಿಮಿನಲ್ ಸಂಚು ರೂಪಿಸಿದ್ದಕ್ಕಾಗಿ ಬಾಷಾ ಮತ್ತು ಅನ್ಸಾರಿ ಅವರಿಗೆ ಶಿಕ್ಷೆ ವಿಧಿಸಲಾಯಿತು. ನ್ಯಾಯಾಧೀಶ ಕೆ. ಉತ್ತರಾಪತಿ ಅವರು ಈ ಪ್ರಕರಣದ 70 ಜನ ಅಪರಾಧಿಗಳಲ್ಲಿ 35 ಮಂದಿಗೆ ಶಿಕ್ಷೆ ಪ್ರಕಟಿಸಿದರು.

2007: ಕವಯಿತ್ರಿ ಮಧುಮಿತಾ ಶುಕ್ಲಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸಮಾಜವಾದಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಅಮರಮಣಿ ತ್ರಿಪಾಠಿ, ಅವರ ಪತ್ನಿ ಮಧುಮಣಿ ಹಾಗೂ ಇತರ ಇಬ್ಬರಿಗೆ ಡೆಹ್ರಾಡೂನಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಅಮರಮಣಿ ಸೋದರ ಸಂಬಂಧಿ ರೋಹಿತ್ ಚತುರ್ವೇದಿ ಹಾಗೂ ಸುಪಾರಿ ಹಂತಕ ಸಂತೋಷ ರೈ ಅವರು ಕೂಡಾ ಜೀವಾವಧಿ ಶಿಕ್ಷೆಗೀಡಾದರು. ಸಾಕ್ಷ್ಯಾಧಾರದ ಕೊರತೆಯಿಂದ ರೈ ಸಹಚರ ರಾಕೇಶ್ ಪಾಂಡೆಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು. ಸಮಾಜವಾದಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಅಮರಮಣಿ ತ್ರಿಪಾಠಿ ಅವರು ಕವಯಿತ್ರಿ ಮಧುಮಿತಾ ಅವರೊಂದಿಗೆ ಸಂಬಂಧವಿರಿಸಿಕೊಂಡದ್ದಕ್ಕೆ ತ್ರಿಪಾಠಿ ಅವರ ಪತ್ನಿ ಮಧುಮಣಿ ಆಕ್ಷೇಪ ವ್ಯಕ್ತಪಡಿಸಿದ್ದರು. ಕವಯಿತ್ರಿಯ ಹತ್ಯೆಗಾಗಿ ಸಂತೋಷ ರೈಗೆ ಅವರು ಸುಪಾರಿ ನೀಡಿದ್ದರು. ಏಳು ತಿಂಗಳ ಗರ್ಭಿಣಿ ಮಧುಮಿತಾ ಶವ ನಂತರ 2003ರ ಮೇ 9ರಂದು ಲಖನೌ ನಿವಾಸದಲ್ಲಿ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ ಆರೋಪಿಗಳಿಗೆ ಮರಣ ದಂಡನೆ ವಿಧಿಸುವಂತೆ ವಾದಿಸಿತ್ತು. ಆದರೆ ಪ್ರಕರಣ ತೀರ ಅಪರೂಪದ್ದಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಎಲ್ಲ ನಾಲ್ವರೂ ಆಪಾದಿತರಿಗೆ ತಲಾ ರೂ 50,000 ದಂಡವನ್ನೂ ವಿಧಿಸಲಾಯಿತು.

2007: ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಐದು ಪ್ರಭೇದದ ಕೀಟಗಳು ಸೇರಿದಂತೆ ಒಂದು ಸಿಹಿ ನೀರಿನ `ಕ್ಯಾಟ್ ಫಿಷ್' ಹೊಸದಾಗಿ ಪತ್ತೆಯಾಗಿವೆ ಎಂದು ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷಾ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಭೇದಗಳು ಬೆಳಕಿಗೆ ಬಂದವು. ಪಶ್ಚಿಮ ಘಟ್ಟದ ಪರ್ವತಗಳ ನಡುವೆ ಹರಿಯುವ ನದಿ ಹಾಗೂ ಅವುಗಳ ತಪ್ಪಲಿನಲ್ಲಿ ಈ ಹೊಸ ಪ್ರಭೇದಗಳು ಕಂಡು ಬಂದವು. ಉದ್ಯಾನದ ಮುಡುಬಾ ಪ್ರದೇಶದಲ್ಲಿ ಹರಿಯುವ ತುಂಗಾ ನದಿಯಲ್ಲಿ ಹೊಸ ಬಗೆಯ `ಕ್ಯಾಟ್ ಫಿಷ್' ದೊರೆತಿದ್ದು, ಇದಕ್ಕೆ `ಗ್ಲೈಪಟೋಥ್ರಾಕ್ಸ್ ಕುದುರೆಮುಖ್ ಜೆನ್ಸಿಸ್' ಎಂದು ನಾಮಕರಣ ಮಾಡಲಾಗಿದೆ ಎಂದು ಭಾರತ ಪ್ರಾಣಿಶಾಸ್ತ್ರ ಸಮೀಕ್ಷಾ ಸಂಸ್ಥೆಯ ನಿರ್ದೇಶಕ ಡಾ. ರಾಮಕೃಷ್ಣ ತಿಳಿಸಿದರು. ರಾಜ್ಯ ಅರಣ್ಯ ಇಲಾಖೆ ಬೆಂಗಳೂರಿನ ಮಲ್ಲೇಶ್ವರದ ಅರಣ್ಯ ಭವನದಲ್ಲಿ ಏರ್ಪಡಿಸಿದ್ದ `ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಬಿಳಿಗಿರಿ ರಂಗನಬೆಟ್ಟದಲ್ಲಿರುವ ವನ್ಯಜೀವಿಗಳ' ಕುರಿತ ಸಮೀಕ್ಷಾ ವರದಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ವಿವರ ಬಹಿರಂಗಪಡಿಸಿದರು. ಹೊಸ ಸಂಶೋಧನೆಯಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿ ಪ್ರಭೇದದ ಸಂಖ್ಯೆ 522ಕ್ಕೆ ಏರಿದಂತಾಯಿತು.

2007: ಬಾಹ್ಯಾಕಾಶದಲ್ಲಿ ಗರ್ಭ ಧರಿಸಿದ ಮೊತ್ತಮೊದಲ ಜಿರಲೆಯೊಂದು ಮರಿಗಳನ್ನು ಹಾಕಿದ್ದು ರಷ್ಯಾ ವಿಜ್ಞಾನಿಗಳಲ್ಲಿ ಸಂಭ್ರಮವನ್ನು ಉಂಟು ಮಾಡಿತು. 2007ರ ಸೆಪ್ಟೆಂಬರ್ 14ರಂದು ಬಾಹ್ಯಾಕಾಶಕ್ಕೆ ಉಡಾಯಿಸಿದ್ದ ಫೊಟಾನ್-ಎಂ ಜೈವಿಕ ಉಪಗ್ರಹದಲ್ಲಿ ಜಿರಲೆಗಳನ್ನು ಕಳುಹಿಸಲಾಗಿತ್ತು. ಈ ಉಪಗ್ರಹ ಸೆಪ್ಟೆಂಬರ್ 26ರಂದು ಭೂಮಿಗೆ ಮರಳಿತ್ತು. ಬಾಹ್ಯಾಕಾಶದ ಗುರುತ್ವರಹಿತ ಸ್ಥಿತಿಯಲ್ಲಿ ಗರ್ಭ ಧರಿಸಿದ 33 ಜಿರಲೆಗಳು ನಮ್ಮ ಬಳಿ ಇವೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಅಟ್ಯಾಕ್ಶಿನ್ ಹೇಳಿದರು. ಹೊಸದಾಗಿ ಹುಟ್ಟಿದ ಜಿರಲೆ ಮರಿಗಳು ಚೆನ್ನಾಗಿ ತಿನ್ನುತ್ತಿವೆ. ಆದರೆ, ಗುರುತ್ವರಹಿತ ಸ್ಥಿತಿ ಅವುಗಳ ಚರ್ಮದ ಮೇಲೆ ಪರಿಣಾಮ ಬೀರಿದಂತೆ ಕಾಣುತ್ತಿದ್ದು ಅವುಗಳ ಹೊರಮೈ ಬಹುಬೇಗ ಕಪ್ಪಗಾಗಿದೆ ಎಂದು ಅವರು ತಿಳಿಸಿದರು. ಜಿರಲೆ ಮರಿಗಳು ಹುಟ್ಟಿದಾಗ ತಿಳಿ ವರ್ಣದಲ್ಲಿದ್ದು, ಕ್ರಮೇಣ ದಟ್ಟ ಬಣ್ಣಕ್ಕೆ ತಿರುಗುತ್ತವೆ.

2007: ದೇಶದ ಬಾಹ್ಯಾಕಾಶ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ ಚೀನಾವು, ಚಂದ್ರ ಕಕ್ಷೆಯಲ್ಲಿ ಸುತ್ತುವ `ಚಾಂಗ್-1' ಉಪಗ್ರಹವನ್ನು ಕ್ಸಿಚಾಂಗ್ ಉಡಾವಣಾ ಕೇಂದ್ರದಿಂದ ಸ್ಥಳೀಯ ಕಾಲಮಾನ ಸಂಜೆ 6.05 ಗಂಟೆಗೆ ಗಗನಕ್ಕೆ ಹಾರಿಸಿತು. ಉಪಗ್ರಹವನ್ನು 'ಲಾಂಗ್ ಮಾರ್ಚ್ 3ಎ' ವಾಹಕದ ರಾಕೆಟ್ ಮೂಲಕ ಹಾರಿ ಬಿಡಲಾಯಿತು. ಚೀನಾದ ಪೌರಾಣಿಕ ದೇವತೆಯಾದ `ಚಾಂಗ್' ಹೆಸರನ್ನು ಉಪಗ್ರಹಕ್ಕೆ ನೀಡಲಾಗಿದೆ.

2007: ವಿವಾದಿತ ಸೇತು ಸಮುದ್ರಂ ಯೋಜನೆಯನ್ನು ತಜ್ಞರ ಸಮಿತಿ ಪುನರ್ರಚಿಸಿ, ಪರಿಶೀಲಿಸುವಂತೆ ಕೋರಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. `ಸಮಿತಿಯಲ್ಲಿ ಕೋರ್ಟ್ ಶಾಮೀಲಾಗಲು ಸಾಧ್ಯವಿಲ್ಲ. ತಜ್ಞರ ಸಮಿತಿಯನ್ನು ಕೋರ್ಟ್ ನಿಯೋಜಿಸಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರನ್ನು ಒಳಗೊಂಡ ನ್ಯಾಯಪೀಠ ತಿಳಿಸಿತು. `ಸೇತು ಸಮುದ್ರಂ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಸಮಿತಿ ನೀಡುತ್ತಿಲ್ಲ' ಎಂದು ಆರೋಪಿಸಿ ಸ್ವಾಮಿ ಅರ್ಜಿ ಸಲ್ಲಿಸಿದ್ದರು.

2007: ಲಂಡನ್ನಿನಲ್ಲಿ ನಡೆದ ಹರಾಜಿನಲ್ಲಿ 13ನೇ ಶತಮಾನದ ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ವಿಶ್ವ ದಾಖಲೆ ಬೆಲೆಗೆ (2,320,917 ಅಮೆರಿಕನ್ ಡಾಲರ್) ಮಾರಾಟವಾಯಿತು. ಇಸ್ಲಾಮ್ ಮತ್ತು ಭಾರತೀಯ ಕಲೆಗಳ ಹರಾಜು ನಡೆಯುತ್ತಿದ್ದ ಸಂದರ್ಭದಲ್ಲಿ 250,000 ರಿಂದ 300,000 ಪೌಂಡುಗಳಿಗೆ ಮಾರಾಟವಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ನಿರೀಕ್ಷೆ ಮೀರಿದ ಬೆಲೆ ಅದಕ್ಕೆ ಬಂತು. ಇಲ್ಲಿ ಮಾರಾಟವಾದ ಕೃತಿ, ಕಲಾಕೃತಿಗಳಿಂದ 5.9 ದಶಲಕ್ಷ ಪೌಂಡ್ ಸಂಗ್ರಹವಾಯಿತು. ಈ ಕುರಾನನ್ನು ಸಂಪೂರ್ಣವಾಗಿ ಚಿನ್ನದಿಂದ ಬರೆಯಲಾಗಿದ್ದು, ಬೆಳ್ಳಿಯ ಅಕ್ಷರಗಳ ಅಡಿಟಿಪ್ಪಣಿ ಇದೆ. ಈ ಗ್ರಂಥ ಎಲ್ಲಾ ಇಸ್ಲಾಮೀ ಗ್ರಂಥಗಳ ಮಾರಾಟ ಬೆಲೆಯ ದಾಖಲೆಯನ್ನೂ ಮುರಿಯಿತು.

2006: ಅಮೆರಿಕದ ಪ್ರತಿಷ್ಠಿತ ಎನ್ರಾನ್ ಕಂಪನಿಗೆ ವ್ಯಾಪಕ ವಂಚನೆ ಮಾಡಿ, ದಿವಾಳಿಯಾಗಲು ಸಂಚು ರೂಪಿಸಿದ ಆರೋಪದ ಮೇಲೆ ಸಂಸ್ಥೆಯ ಮಾಜಿ ಮುಖ್ಯ ಕಾರ್ಯನಿರ್ವಾಹಕ ಜೆಫ್ರಿ ಕೆ. ಸಿಲ್ಲಿಂಗ್ ಅವರಿಗೆ ಅವರಿಗೆ ಹ್ಯೂಸ್ಟನ್ನಿನಲ್ಲಿ ನ್ಯಾಯಾಧೀಶ ಸೈಮನ್ ಟಿ. ಲೇಕ್ ಥರ್ಡ್ ಅವರು 24 ವರ್ಷ ಮತ್ತು ನಾಲ್ಕು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿದರು. ಈವರೆಗೆ ಅತಿ ದೀರ್ಘಾವಧಿಯ ಜೈಲುಶಿಕ್ಷೆಗೆ ಒಳಗಾದವರಲ್ಲಿ ವರ್ಲ್ಡ್ಡ್ ಕಾಮ್ ಸಂಸ್ಥೆಯ ಮಾಜಿ ಮುಖ್ಯ ಕಾರ್ಯ ನಿರ್ವಾಹಕ ಬರ್ನಾರ್ಡ್ ಜೆ. ಎಬ್ಬರ್ಸ್ ಅವರು ಪ್ರಮುಖರಾಗಿದ್ದು ಇವರಿಗೆ ಕಳೆದ ವರ್ಷ 11 ಶತಕೋಟಿ ಡಾಲರುಗಳ ವಂಚನೆ ಪ್ರಕರಣದಲ್ಲಿ ಕಂಪನಿ ಸಂಪೂರ್ಣವಾಗಿ ಕುಸಿಯಲು ಕಾರಣರಾದ ಆರೋಪದ ಮೇಲೆ 25 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಲಾಗಿತ್ತು. 52 ವರ್ಷದ ಜೆಫ್ರಿ ಸಿಲ್ಲಿಂಗ್ ಅವರಿಗೆ ಇದು ಇನ್ನು ಬಹುತೇಕ ಜೀವಾವಧಿ ಶಿಕ್ಷೆಯಾಗಿದೆ. ಇವರು ಒಂದೇ ದಶಕದಲ್ಲಿ ಸಾಮಾನ್ಯ ಪೈಪ್ ಲೈನ್ ಕಂಪನಿಯಾಗಿದ್ದ ಎನ್ರಾನನ್ನು ವಿದ್ಯುತ್ ವ್ಯಾಪಾರ ಕಂಪನಿಯಾಗಿ ಮಾರ್ಪಡಿಸಿದರು. ಕಂಪೆನಿಯಲ್ಲಿ ಜೆಫ್ರಿ ಸಿಲ್ಲಿಂಗ್ ಅವರು ಅಪಾರ ಸಾಲ ಮತ್ತು ಹಣಕಾಸಿನ ಸೋರಿಕೆಗೆ ಅವಕಾಶ ನೀಡಿದ ಪರಿಣಾಮ ಅಂತಿಮವಾಗಿ ದಿವಾಳಿಯಾಯಿತು. ಒಂದು ಕಾಲದಲ್ಲಿ ದೇಶದ ಏಳನೇ ಅತಿ ದೊಡ್ಡ ಕಂಪೆನಿಯಾಗಿದ್ದ ಎನ್ರಾನಿನಲ್ಲಿ ಷೇರು ಮತ್ತು ನಿವೃತ್ತಿ ಉಳಿತಾಯದಲ್ಲಿ ಶತಕೋಟಿಗಟ್ಟಲೆ ಡಾಲರ್ ತೊಡಗಿಸಿ, ಕಳೆದುಕೊಂಡ ಷೇರುದಾರರು ಅತಿ ಸಂಕಷ್ಟಕ್ಕೆ ಸಿಲುಕಿದರು.

2006: ಖ್ಯಾತ ವೈದ್ಯ ವಿಜ್ಞಾನಿ ಡಾ. ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ (ಡಾ. ಸ.ಜ. ನಾಗಲೋಟಿಮಠ) (66) (20-7-1940ರಿಂದ 24-10-2006) ಅಲ್ಪ ಕಾಲದ ಅಸ್ವಸ್ಥತೆಯ ಬಳಿಕ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ನರಗುಂದ ತಾಲ್ಲೂಕು ಶಿರೋಳದ ಜಂಬಯ್ಯ ಅವರ ಮಗನಾಗಿ ಗದುಗಿನಲ್ಲಿ 20-7-1940ರಲ್ಲಿ ಜನಿಸಿದರು. ಬಡತನದಲ್ಲೇ ವಿದ್ಯಾಭ್ಯಾಸ ಮಾಡಿ ಮುಂದಕ್ಕೆ ಬಂದ ನಾಗಲೋಟಿಮಠ ಅಖಿಲ ಭಾರತ ಮೈಕ್ರೊ ಬಯಾಲಜಿ ಮತ್ತು ಪೆಥಾಲಜಿ ಸಂಸ್ಥೆ ಖಜಾಂಚಿ, ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಕ್ಷ, ಹುಬ್ಬಳ್ಳಿ ಕಿಮ್ಸ್ ನ ಪ್ರಥಮ ನಿರ್ದೇಶಕ, ಜೀವನಾಡಿ ವೈದ್ಯಕೀಯ ಮಾಸಿಕದ ಗೌರವ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಬೆಳಗಾಗಿ ಪೆಥಾಲಜಿ ಮ್ಯೂಸಿಯಂ, ವಿಜಾಪುರ ವೈದ್ಯಕೀಯ ಕಾಲೇಜಿನ ದೇಹದ ಹರಳುಗಳ ಮ್ಯೂಸಿಯಂ ಸ್ಥಾಪಿಸಿದವರು. ಇಂಗ್ಲಿಷಿನಲ್ಲಿ 14, ಕನ್ನಡದಲ್ಲಿ 41 ಗ್ರಂಥಗಳನ್ನು ರಚಿಸಿದ ಅವರು ಡಾ. ಬಿ.ಸಿ. ರಾಯ್, ಹರಿ ಓಂ, ಡಾ. ಬಿ.ಕೆ. ಆಯ್ಕಟ್ ಸೇರಿದಂತೆ 12 ರಾಷ್ಟ್ರೀಯ ಪ್ರಶಸ್ತಿಗಳು, ಚಾಲುಕ್ಯ, ಡಾ. ಹಳಕಟ್ಟಿ, ಕುವೆಂಪು, ಮ್ಲಲಿಕಾರ್ಜುನ ಮನ್ಸೂರ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ 22 ಪ್ರಶಸ್ತಿ ಪುರಸ್ಕೃತರು.

2006: ಪಾಲೆಸ್ಟೈನಿ ದಂಗೆಕೋರರಿಂದ ಅಪಹರಣಕ್ಕೊಳಗಾಗಿದ್ದ ಸ್ಪೇನ್ ಮೂಲದ ಎಪಿ ಛಾಯಾಗ್ರಾಹಕ ಎಮಿಲಿಯೊ ಮೊರೆನಟ್ಟಿ (37) ಅವರನ್ನು ಈದಿನ ರಾತ್ರಿ ತಡವಾಗಿ ಬಿಡುಗಡೆ ಮಾಡಲಾಯಿತು. ಎಮಿಲಿಯೊ ಮೊರೆನಟ್ಟಿ ಅವರು ಎಪಿ ಸುದ್ದಿ ಸಂಸ್ಥೆಯ ಜೆರುಸಲೇಂ ಬ್ಯೂರೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದುಷ್ಕರ್ಮಿಗಳು 23-10-2006ರ ರಾತ್ರಿ ಬಂದೂಕು ತೋರಿಸಿ ಬೆದರಿಸಿ ಗಾಜಾದಿಂದ ಅವರನ್ನು ಅಪಹರಿಸಿದ್ದರು.

2000: ರಾಷ್ಟ್ರೀಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸೀತಾರಾಮ್ ಕೇಸರಿ ನಿಧನ.

1984: ಭಾರತದ ಮೊತ್ತ ಮೊದಲ ಭೂಗತ ಸಮೂಹ ಕ್ಷಿಪ್ರ ಸಾರಿಗೆ ವ್ಯವಸ್ಥೆ `ದಿ ಮೆಟ್ರೋ' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಉದ್ಘಾಟನೆಗೊಂಡಿತು. ಎಸ್ ಪ್ಲನೇಡಿನಿಂದ ಭವಾನಿಪುರದವರೆಗಿನ 3.4 ಕಿ.ಮೀ. ವ್ಯಾಪ್ತಿಯಲ್ಲಿ ಅದು ಭಾಗಶಃ ಸೇವೆ ಒದಗಿಸಿತು. ಡಮ್ ಡಮ್ಮಿನಿಂದ ಟೋಲಿಗಂಜ್ ವರೆಗಿನ 16.45 ಕಿ.ಮೀ. ದೂರದ ಪೂರ್ಣಮಾರ್ಗವು ಹಂತ ಹಂತಗಳಲ್ಲಿ 1995ರ ಸೆಪ್ಟೆಂಬರ್ 27ರ ವೇಳೆಗೆ ಪೂರ್ಣಗೊಂಡಿತು.

1968: ಸಾಹಿತಿ ಡಾ. ವಿನಯಾ ಜನನ.

1964: ಉತ್ತರ ರೊಡೇಸಿಯಾವು `ರಿಪಬ್ಲಿಕ್ ಆಫ್ ಝಾಂಬಿಯಾ' ಆಗಿ ಪರಿವರ್ತನೆಗೊಂಡಿತು. ಕೆನ್ನೆತ್ ಕೌಂಡಾ ಅದರ ಪ್ರಥಮ ಅಧ್ಯಕ್ಷರಾದರು.

1956: ಭಾರತ ಸರ್ಕಾರದ ಅಧಿಕೃತ ಕಾರ್ಯಗಳಿಗಾಗಿ ಈಗ ಅನುಸರಿಸುತ್ತಿರುವ ಗ್ರೆಗೋರಿಯನ್ ಪಂಚಾಂಗದ ಜೊತೆಗೆ ಶಾಲಿವಾಹನ ಶಕೆಯಂತೆ ಭಾರತೀಯ ಪಂಚಾಂಗವನ್ನೂ 1957ರ ಮಾರ್ಚ್ 20ರಿಂದ (ಸ್ರತ್ರ ಪ್ರಥಮ ಶಾಲಿವಾಹನ ಶಕೆ 1879) ಅಧಿಕೃತ ಕಾರ್ಯಗಳಿಗಾಗಿ ಅನುಸರಿಸಲು ಕೇಂದ್ರ ಸರ್ಕಾರವು ನಿರ್ಧರಿಸಿತು..

1951: ಸಾಹಿತಿ ಯು.ವಿ. ತಾರಿಣಿರಾವ್ ಜನನ.

1949: `ಅಭಿಯಾನ' ಪ್ರತಿಷ್ಠಾನದ ಮೂಲಕ ಮಹಿಳೆಯರ ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದ ಕಥೆ, ಕಾದಂಬರಿಗಾರ್ತಿ ಶಾರದಾ ಭಟ್ ಅವರು ಕೆ. ವಿಠಲ ಭಟ್- ಕಾವೇರಿಯಮ್ಮ ದಂಪತಿಯ ಮಗಳಾಗಿ ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ ಜನಿಸಿದರು.

1939: ಡ್ಯುಪಾಂಟ್'್ಸ ವಿಲ್ಲ್ಮಿಂಗ್ ಟನ್ನಿನ ದೆಲವಾರೆ ನೈಲಾನ್ ಫ್ಯಾಕ್ಟರಿಯ್ಲಲಿ ನೌಕರರಿಗೆ ನೈಲಾನ್ ದಾಸ್ತಾನು ಮಾರಾಟ ಮಾಡುವ ಮೂಲಕ ಅಮೆರಿಕದಲ್ಲಿ ನೈಲಾನ್ ಮಾರಾಟ ಆರಂಭವಾಯಿತು. ಡ್ಯುಪಾಂಟ್ ತನ್ನ ನೈಲಾನ್ ಉತ್ಪನ್ನವನ್ನು ವಾಣಿಜ್ಯೀಕರಣ ಮಾಡುವ ಮೂಲಕ 1938ರಲ್ಲಿ ಲವಣ ಸಂಪನ್ಮೂಲಗಳಿಂದ ನಿರ್ಮಿಸಲಾದ ಈ ಪ್ರಥಮ ಮಾನವ ನಿರ್ಮಿತ ಫೈಬರ್ ಉತ್ಪನ್ನದಲ್ಲಿ ಕ್ರಾಂತಿ ಆರಂಭವಾಯಿತು.

1930: ಸಾಹಿತಿ ಹಾಲಾಡಿ ಮಾರುತಿರಾವ್ ಜನನ.

1904: ಖ್ಯಾತ ಉದ್ಯಮಿ ಲಾಲ್ ಚಂದ್ ಹೀರಾಚಂದ್ ಜನನ.

1881: ಖ್ಯಾತ ಕಲಾವಿದ ಪಾಬ್ಲೋ ಪಿಕಾಸೋ ಜನ್ಮದಿನ.

1851: ಯುರೇನಸ್ ಗ್ರಹದ ಏರಿಯಲ್ ಮತ್ತು ಅಂಬ್ರಿಯಲ್ ಉಪಗ್ರಹಗಳನ್ನು ವಿಲಿಯಂ ಲಾಸ್ಸೆಲ್ ಪತ್ತೆ ಹಚ್ಚಿದ. `ಏರಿಯಲ್' ಅಂದರೆ ಷೇಕ್ಸ್ ಪೀಯರ್ನ ನಾಟಕ `ದಿ ಟೆಂಪೆಸ್ಟ್' ನಲ್ಲಿ ಬರುವ ದಿಗ್ಬಂಧಿತ `ದೆವ್ವ'. `ಅಂಬ್ರಿಯಲ್' ಹೆಸರು ಅಲೆಗ್ಸಾಂಡರ್ ಪೋಪ್ ನ `ದಿ ರೇಪ್ ಆಫ್ ದಿ ಲಾಕ್'ನಿಂದ ಬಂದಿದೆ.

1827: ವೈಸ್ ರಾಯ್ ಲಾರ್ಡ್ ರಿಪ್ಪನ್ ಜನನ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment