Sunday, October 14, 2018

ಇಂದಿನ ಇತಿಹಾಸ History Today ಅಕ್ಟೋಬರ್ 14

ಇಂದಿನ ಇತಿಹಾಸ History Today ಅಕ್ಟೋಬರ್ 14
2018: ನವದೆಹಲಿ: ಪತ್ರಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದುದಾಗಿ ತಮ್ಮ ವಿರುದ್ಧ ಬಂದಿರುವ ಆರೋಪಗಳನ್ನುಸುಳ್ಳು ಹಾಗೂ ಸೃಷ್ಟಿತ ದುರುದ್ದೇಶದ ಮಸಾಲೆಭರಿತ ರಾಜಕೀಯ ಹಿನ್ನೆಲೆಯ ಆರೋಪ ಎಂಬುದಾಗಿ  ತಳ್ಳಿಹಾಕಿದ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರು ವಿಚಾರದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ಪ್ರಕಟಿಸಿದರು. ರಾಜೀನಾಮೆ ಬೇಡಿಕೆಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆಯನ್ನೂ ನೀಡಲಿಲ್ಲ. ‘ನನ್ನ ವಿರುದ್ಧ ಮಾಡಲಾಗಿರುವ ದುರ್ವರ್ತನೆಯ ಆರೋಪಗಳು ಸುಳ್ಳು ಮತ್ತು ಸೃಷ್ಟಿತ. ಕಿಡಿಗೇಡಿಗಳ ದ್ವೇಷಭರಿತ ಮಸಾಲೆ. ನಾನು ಅಧಿಕೃತ ವಿದೇಶ ಪ್ರವಾಸದಲ್ಲಿ ಇದ್ದುದರಿಂದ ಮೊದಲೇ ಇದಕ್ಕೆ ಉತ್ತರ ನೀಡಲಾಗಲಿಲ್ಲ ಎಂದು ಅಕ್ಬರ್ ಹೇಳಿದರು‘ಸಾಕ್ಷ್ಯಾಧಾರಗಳಿಲ್ಲದೆ ಆರೋಪ ಮಾಡುವುದು ಕೆಲವು ವರ್ಗಗಳಲ್ಲಿ ಈಗ ವೈರಲ್ ಜ್ವರವಾಗಿದೆ. ಏನೇ ಇದ್ದರೂ, ನಾನೀಗ ವಿದೇಶದಿಂದ ವಾಪಸಾಗಿದ್ದೇನೆ. ಇಂತಹ ಸ್ವೇಚ್ಛಾಚಾರ ಬುಡರಹಿತ ಆರೋಪಗಳ ಬಗ್ಗೆ ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮದ ಬಗ್ಗೆ ನನ್ನ ವಕೀಲರು ನೋಡಿಕೊಳ್ಳುತ್ತಾರೆ ಎಂದು ತಮ್ಮ ಆಫ್ರಿಕಾ ಪ್ರವಾಸದಿಂದ ವಾಪಸಾದ ಬಳಿಕ ನೀಡಿದ ಹೇಳಿಕೆಯಲ್ಲಿ ಅಕ್ಬರ್ ತಿಳಿಸಿದರುಮಹಾಚುನಾವಣೆಗೆ ಕೆಲವೇ ತಿಂಗಳುಗಳು ಇರುವಾಗ ಬಿರುಗಾಳಿ ಏಕೆ ಎದ್ದಿದೆ? ಇದರ ಹಿಂದೆ ಏನಾದರೂ ಕಾರ್ಯಸೂಚಿ ಇದೆಯೇ? ನೀವೇ ತೀರ್ಮಾನಿಸಿ. ಸುಳ್ಳು, ಬುಡರಹಿತ, ಸ್ವೇಚ್ಛಾಚಾರದ ಆಪಾದನೆಗಳು ನನ್ನ ವರ್ಚಸ್ಸು ಮತ್ತು ನನ್ನ ಬಗೆಗಿನ ಸದ್ಭಾವನೆಗೆ ದುರಸ್ತಿ ಪಡಿಸಲಾಗದಂತಹ ಹಾನಿಯನ್ನು ಉಂಟು ಮಾಡಿದೆ ಎಂದು ಅವರು ನುಡಿದರು‘ಸುಳ್ಳುಗಳಿಗೆ ಕಾಲುಗಳಿರುವುದಿಲ್ಲ, ಆದರೆ ಅವು ವಿಷವನ್ನು ಹೊಂದಿರುತ್ತವೆ. ಆದರೆ ಇವು ಮನಸ್ಸಿಗೆ ಚಾಟಿ ಏಟಿನಂತೆ ಹೊಡೆದು ಬುದ್ಧಿಭ್ರಮಣೆ ಮಾಡುತ್ತವೆ ಎಂದು ಅಕ್ಬರ್ ನುಡಿದರುಹಲವಾರು ಮಹಿಳಾ ಪತ್ರಕರ್ತರು ಅಕ್ಬರ್ ವಿರುದ್ಧ ಅವರು ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ವಿವಿಧ ಹಂತಗಳಲ್ಲಿ ಲೈಂಗಿಕ ಕಿರುಕುಳ ಮತ್ತು ದುರ್ವರ್ತನೆ ಪ್ರದರ್ಶಿಸಿದ ಆರೋಪ ಮಾಡಿದ್ದರು‘ನಾನು ಏನೂ ಮಾಡಿಲ್ಲವಾದರೆ, ಎಲ್ಲಿ ಮತ್ತು  ಏನು ಕಥೆ? ಅಲ್ಲಿ ಕಥೆಯೇ ಇಲ್ಲ. ಆದರೆ ವಕ್ರೋಕ್ತಿಗಳು, ಊಹಾಪೋಹಗಳು  ಮತ್ತು ಎಂದೂ ಘಟಿಸದ ಯಾವುದೋ ವಿಷಯದ ಸುತ್ತ ಹೆಣೆಯಲಾದ ದೂಷಣಾತ್ಮಕ ಟೀಕೆಗಳ ಸಾಗರವೇ ಇದೆ. ಇವುಗಳಲ್ಲಿ ಕೆಲವು ಸಂಪೂರ್ಣ ಆಧಾರವಿಲ್ಲದ ಗಾಳಿ ಮಾತುಗಳು; ಉಳಿದವು ನಾನು ಏನೂ ಮಾಡಿಲ್ಲ ಎಂಬುದಾಗಿ ದಾಖಲೆಯಲ್ಲಿ ಇರುವಂತಹವುಗಳು ಎಂದು ಅಕ್ಬರ್ ಹೇಳಿದರು.  ‘ನನ್ನ ಬಗ್ಗೆ ಲೈಂಗಿಕ ಕಿರುಕುಳದ ಆಪಾದನೆ ಮಾಡಿರುವ ಘಜಾಲಾ ವಹಾಬ್ ಎಂಬ ಪತ್ರಕರ್ತೆಯ ಜೊತೆಗೆ ನಾನು ಕೆಲಸ ಮಾಡಿದ್ದು ದಿ ಏಷ್ಯನ್ ಏಜ್ ಪತ್ರಿಕೆಯ ಒಂದೇ ಒಂದು ಕಚೇರಿಯಲ್ಲಿ. ’ಸಂಪಾದಕೀಯ ತಂಡದ ಭಾಗವಾಗಿ ಸಣ್ಣ ಸಭಾಂಗಣವೊಂದರಲ್ಲಿ ಕೆಲಸ ಮಾಡಿದ್ದೆವು. ವೇಳೆಯಲ್ಲಿ ನನಗೆ ಇದ್ದದ್ದು ಪ್ಲೈವುಡ್ ಮತ್ತು ಗಾಜಿನಿಂದ ಬೇರ್ಪಟ್ಟ ಒಂದು ಪುಟ್ಟ ಕೋಣೆ. ಎರಡು ಅಡಿ ದೂರದಲ್ಲಿ ಉಳಿದವರಿಗೆ ಮೇಜು ಮತ್ತು ಕುರ್ಚಿಗಳು ಇದ್ದವು. ಇಂತಹ ಪುಟ್ಟ ಸ್ಥಳದಲ್ಲಿ ಏನು ಬೇಕಾದರೂ ಆಗಬಹುದಾಗಿತ್ತು ಎಂದು ನಂಬುವುದು, ಅದಕ್ಕೂ ಹೆಚ್ಚಾಗಿ ಕೆಲಸದ ನಡುವೆ ಹತ್ತಿರದಲ್ಲಿರುವ ಯಾರಿಗೂ ಗೊತ್ತಾಗದೇ ಇರುವುದು ಅತ್ಯಂತ ವಿಲಕ್ಷಣ ಎಂದು ಅವರು ನುಡಿದರು‘ನನ್ನ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಮಾಡಿದ ಮೊದಲ ಪತ್ರಕರ್ತೆ ಮತ್ತು ವಹಾಬ್ ಅವರು ಆರೋಪಿದ ಘಟನೆಗಳ ಬಳಿಕವೂ ನನ್ನ್ಮ ಜೊತೆಗೆ ಕೆಲಸ ಮಾಡಿದ್ದಾರೆ. ಇದು ಅವರಿಗೆ ಯಾವುದೇ ಆತಂಕ ಮತ್ತು ಇರುಸುಮುರುಸು ಇರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತು ಪಡಿಸುತ್ತದೆ. ದಶಕಗಳ ಕಾಲ ಮೌನವಾಗಿರಲು ಕಾರಣವೇನು ಎಂಬುದು ಕಣ್ಣಿಗೆ ಕಾಣುವಂತಹ ವಿಚಾರ, ನಾನು ಎಂದೂ ಏನನ್ನೂ ಮಾಡಿಲ್ಲ ಎಂದು ರಮಣಿ ಅವರು ಸ್ವತಃ ಬರೆದಿದ್ದಾರೆ ಎಂದು ಅಕ್ಬರ್ ಹೇಳಿದರು.   ಕಾಂಗ್ರೆಸ್ ಆಗ್ರಹ: ಮಧ್ಯೆ ಕಾಂಗ್ರೆಸ್ ಪಕ್ಷವು ಅಕ್ಬರ್ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿ, ಪ್ರದಾನಿ ನರೇಂದ್ರ ಮೋದಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿತು.  ‘ಪ್ರಧಾನಿಯ ಮೌನ ಕಣ್ಣಿಗೆ ಕಾಣುವಂತಹುದು. ಎಲ್ಲದರ ಬಗ್ಗೆ ಮಾತನಾಡುವ ಪ್ರಧಾನಿ #ಮಿ ಟೂ ಬಗ್ಗೆ ಮೌನ ತಾಳಿದ್ದಾರೆ. ಮೌನವು ಪ್ರಧಾನಿ ಕಚೇರಿಯ ಘನತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಪ್ರಧಾನಿಯವರ ಸ್ಪಷ್ಟ ನಿಲುವು ಏನು ಎಂಬುದನ್ನು ತಿಳಿಯಲು ರಾಷ್ಟ್ರವು ಕಳೆದ ಹಲವಾರು ದಿನಗಳಿಂದ ಕಾಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಆನಂದ ಶರ್ಮ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನೈಜೀರಿಯಾ ಪ್ರವಾಸದಿಂದ ಭಾನುವಾರ ವಾಪಸಾದ ಮಾಜಿ ಪತ್ರಕರ್ತ ಅಕ್ಬರ್ ಅವರಿಗೆ ವಿಮಾನನಿಲ್ದಾಣದಲ್ಲಿಯೇ ದೆಹಲಿ ಪತ್ರಕರ್ತರು ಪ್ರಶ್ನೆಗಳ ಸುರಿಮಳೆಗೈದರು. ಗಂಟೆ ವೇಳೆಗೆ ಅಕ್ಬರ್ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲು ತೆರಳಿದರು.
# ಮಿ ಟೂ ಚಳವಳಿಯ ಭಾಗವಾಗಿ ಅನೇಕ ಮಹಿಳೆಯರು ಅಕ್ಬರ್ ವಿರುದ್ಧ ಮಾಡುತ್ತಿರುವ ಆರೋಪಗಳ ಹಿನ್ನೆಲೆಯಲ್ಲಿ ಅಕ್ಬರ್ ಅವರನ್ನು ಸಮರ್ಥಿಸಿಕೊಳ್ಳವುದು ಕಷ್ಟದ ವಿಚಾರ ಎಂಬುದಾಗಿ ಸರ್ಕಾರಿ ಮೂಲಗಳು ಇದಕ್ಕೆ ಮುನ್ನ ಹೇಳಿದ್ದವು. ಅಕ್ಬರ್ ಅವರು ದೇಶಕ್ಕೆ ವಾಪಸಾದ ಸ್ವಲ್ಪ ಹೊತ್ತಿನಲ್ಲೇ ಅವರು ರಾಜೀನಾಮೆಯನ್ನು ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ ಅವರಿಗೆ ಕಳುಹಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿಯನ್ನೂ ಮಾಡಿದ್ದವು. ಸಾಹಿತ್ಯ, ಮನರಂಜನೆ, ಪತ್ರಿಕೋದ್ಯಮ ಮತ್ತು ಜಾಹೀರಾತು ಕ್ಷೇತ್ರಗಳಲ್ಲಿ ದೊಡ್ಡ ವ್ಯಕ್ತಿಗಳ ಹೆಸರಿನ ಜೊತೆ ಲೈಂಗಿಕ ಕಿರುಕುಳದ ಆರೋಪಗಳು ತಳಕು ಹಾಕಿಕೊಳ್ಳುತ್ತಿದ್ದು, ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮನ್ನುಅಕ್ಬರ್ ಅವರಿಗೆ ಸಂಬಂಧಿಸಿದಂತೆ ಪ್ರಶ್ನಿಸಲಾಗುತ್ತಿದೆ ಎಂದು ಇತರ ಅನೇಕ ಸಚಿವರು ದೂರುತ್ತಿದ್ದಾರೆ ಎಂದು ವರದಿಗಳು ಹೇಳಿದ್ದವು. ವಿಷಯದಲ್ಲಿ ಭಾರತೀಯ ಜನತಾ ಪಕ್ಷವು ಅಧ್ಯಯನಪೂರ್ಣ  ಮೌನವನ್ನು ತಾಳಿದ್ದು, ಅಕ್ಬರ್ ವಿರುದ್ಧದ  ಆರೋಪಗಳು ಗಂಭೀರ ಸ್ವರೂಪದವಾಗಿವೆ ಎಂದು ಪಕ್ಷದ ಮೂಲಗಳು ಹೇಳಿದ್ದವು.  ಅಕ್ಬರ್ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಈಗ ಕೇಳಿ ಬರುತ್ತಿರುವ ಆರೋಪಗಳು ಕೂಡಾ ಅವರು ಸಚಿವರಾಗುವುದಕ್ಕಿಂತ ಸಾಕಷ್ಟು ಹಿಂದಿನವು ಎಂಬ ಅಭಿಪ್ರಾಯ ಕೂಡಾ ಪಕ್ಷದ ಕೆಲವು ವಲಯಗಳಲ್ಲಿ ಇದೆ ಎಂದು ವರದಿಗಳು ತಿಳಿಸಿದ್ದವುಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು  ಪ್ರಸ್ತುತ ಮಧ್ಯಪ್ರದೇಶದಲ್ಲಿ  ಎರಡು ದಿನಗಳ ಚುನಾವಣಾ ಸಮೀಕ್ಷಾ ಪ್ರವಾಸ ನಡೆಸಿದರು. ಕ್ಬರ್ ದುರ್ವರ್ತನೆಯ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಅವರ ಹೆಸರನ್ನು ಉಲ್ಲೇಖಿಸದೆಯೇ ಕಳೆದ ವರ್ಷ ನಿಯತಕಾಲಿಕ ಒಂದಕ್ಕೆ ಬರೆದಿದ್ದರು. ವಾರ ಅವರು ತಮ್ಮ ಆರೋಪವು ಅಕ್ಬರ್ ವಿರುದ್ಧ ಎಂಬುದಾಗಿ ದೃಢ ಪಡಿಸಿದ್ದರು. ನನ್ನ ಬರಹದ ತುಣುಕನ್ನು ಎಂ.ಜೆ.ಅಕ್ಬರ್ ಕಥೆಯೊಂದಿಗೆ ಪ್ರಾರಂಭಿಸಿದ್ದೆ. ಅವರು "ಏನೂ" ಮಾಡದ ಕಾರಣ ಅವರ ಹೆಸರನ್ನು ಎಂದೂ ಉಲ್ಲೇಖಿಸಲಿಲ್ಲ. ಬಹಳಷ್ಟು ಮಹಿಳೆಯರ ಬಳಿ ಪರಭಕ್ಷಕನ ಬಗ್ಗೆ ಕೆಟ್ಟ ಕಥೆಗಳಿವೆ. ಬಹುಶಃ ಅವರು ಹಂಚಿಕೊಳ್ಳಬಹುದು ಎಂದು ರಮಣಿ ಬರೆದಿದ್ದರು. ದಿ ಟೆಲಿಗ್ರಾಫ್, ಏಷ್ಯನ್ಏಜ್ ಮತ್ತು ದಿ ಸಂಡೇಗಾರ್ಡಿಯನ್ ಮುಂತಾದ ಪ್ರಮುಖ ಪತ್ರಿಕೆಗಳ ಸಂಪಾದಕರಾಗಿದ್ದ ಅಕ್ಬರ್ ಅವರು ಬಳಿಕ ಬಿಜೆಪಿ ಮೂಲಕ ರಾಜ್ಯಸಭೆ ಪ್ರವೇಶಿಸಿದ್ದರುತಮಗಾಗಿದ್ದ ಅನುಭವವನ್ನು ವಿವರಿಸಿದ್ದ ರಮಣಿ, ‘ನನಗೆ ೨೩ ವರ್ಷ ಮತ್ತು ಅವರಿಗೆ ೪೩ ವರ್ಷವಾಗಿದ್ದಾಗ ಅವರು ದಕ್ಷಿಣ ಮುಂಬೈ ಹೋಟೆಲ್ ಒಂದಕ್ಕೆ ಕೆಲಸದ ಸಂದರ್ಶನ ಒಂದಕ್ಕಾಗಿ ಕರೆದಿದ್ದರು. ಅಲ್ಲಿ ಹೋಟೆಲ್ ಮೊಗಸಾಲೆಯಲ್ಲಿ ಅವರು ನನ್ನನ್ನು ಭೇಟಿ ಮಾಡಲಿಲ್ಲ. ಬದಲಿಗೆ ತಮ್ಮ ಕೊಠಡಿಗೆ ಕರೆಸಿದರು. ಅಲ್ಲಿ ಪಾನೀಯ ಕೊಟ್ಟರು. ನಾನು ನಿರಾಕರಿಸಿದರೂ ತಾವು ವೋಡ್ಕಾ ಸೇವಿಸುತ್ತಾ ಹಳೆಯ ಹಾಡು ಗುನುಗುನಿಸಿದರು. ತಮ್ಮ ಪಕ್ಕದಲ್ಲೇ ಕುಳಿತುಕೊಳ್ಳುವಂತೆ ಸೂಚಿಸಿದರು ಎಂದು ರಮಣಿ ಆಪಾದಿಸಿದ್ದರು. ತಾನು ಕೆಲಸದ ಕೊಡುಗೆ ಬಂದರೂ ನಿರಾಕರಿಸಿದ್ದೆ ಎಂದು ಅವರು ಬರೆದಿದ್ದರುರಮಣಿ ಅವರ ಬಳಿಕ ಶುಮಾರಾಹ ಎಂಬ ಪತ್ರಕರ್ತೆ ಮತ್ತು ಪ್ರೇರಣಾ ಸಿಂಗ್ ಬಿಂದ್ರಾ ಎಂಬ ಪತ್ರಕರ್ತೆ ಸೇರಿದಂತೆ ಹಲವರು ತಮಗಾದ ಕೆಟ್ಟ ಅನುಭವಗಳನ್ನು ಬಹಿರಂಗ ಪಡಿಸಿದ್ದರು.

2018: ಕೊಲ್ಲಂ (ಕೇರಳ): ಶಬರಿಮಲೈಯಲ್ಲಿ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸಂಬಂಧಿಸಿದಂತೆ ನಡೆದ ಎನ್ಡಿಎ ಪ್ರತಿಭಟನಾ ಸಭೆಯಲ್ಲಿ  ಮಹಿಳೆಯರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಾಗಿ ಕೊಲ್ಲಂ ತುಳಸಿ ಎಂದೇ ಖ್ಯಾತನಾಗಿರುವ ಮಲಯಾಳಿ ಚಿತ್ರನಟ ತುಳಸೀಧರನ್ ನಾಯರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಕೊಲ್ಲಂನಲ್ಲಿ ಪತ್ರಿಭಟನಕಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಬಿಜೆಪಿ ಬೆಂಬಗಲಿಗರಾದ ತುಳಸಿ ಅವರುಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ನಿರ್ಬಂಧಿತ ವಯೋಮಿತಿಯ ಯುವತಿಯರನ್ನು ಕತ್ತರಿಸಿ ಹಾಕಲಾಗುವುದು ಹೇಳಿದ್ದರುಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಘನತೆಗೆ ಕುಂದು ಉಂಟು ಮಾಡುವ ಕೃತ್ಯ ಎಸಗಿದ್ದಕ್ಕಾಗಿ  ಕೊಲ್ಲಂ ತುಳಸಿ ವಿರುದ್ಧ  ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೨೯೫ () (ಧಾರ್ಮಿಕ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಕೆರಳಿಸುವ ದುಷ್ಕೃತ್ಯ) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ ೧೧೯() ಅನ್ವಯ ಎಫ್ ಆರ್ ದಾಖಲಿಸಲಾಗಿದೆಸ್ಥಳೀಯ ಡಿವೈಎಫ್ ನಾಯಕ ರಾತೀಶ್ ದೂರನ್ನು ಅನುಸರಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು. ತಮ್ಮ ಹೇಳಿಕೆಗಾಗಿ ಖಂಡನೆಗಳನ್ನು ಎದುರಿಸಬೇಕಾಗಿ ಬಂದ ಬಳಿಕ ಚಿತ್ರ ನಟ ತುಳಸಿ, ತಾವು ಭಾವೋದ್ರೇಕದ ಸ್ಥಿತಿಯಲ್ಲಿ ತಾವು ಹೇಳಿಕೆ ನೀಡಿದ್ದುದಾಗಿ ಹೇಳಿ ವಿಷಾದ ವ್ಯಕ್ತ ಪಡಿಸಿದ್ದರು. ಶಬರಿಮಲೈ ದೇವಾಲಯ ಪ್ರವೇಶಿಸಲು ೧೦ರಿಂದ ೫೦ರ ನಡುವಣ ವಯಸ್ಸಿನ ಮಹಿಳೆಯರ ವಿರುದ್ಧ ಇದ್ದ ಶತಮಾನಗಳ ನಿಷೇಧವನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದೇ ಇರಲು ರಾಜ್ಯ ಎಲ್ ಡಿಎಫ್ ಸರ್ಕಾರ ನಿರ್ಧರಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ನೇತೃತ್ವದ ಎನ್ಡಿಎ ಪ್ರದರ್ಶನವನ್ನು ಸಂಘಟಿಸಿತ್ತು. ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ ಸರ್ಕಾರಿ ಕ್ರಮದ ವಿರುದ್ಧ ರಾಜ್ಯಾದ್ಯಂತ  ಕಾಂಗ್ರೆಸ್, ಬಿಜೆಪಿ ಮತ್ತು ಹಿಂದು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದವು.

2018: ಪಣಜಿ: ಅಸ್ವಸ್ಥರಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಸುಮಾರು ಒಂದು ತಿಂಗಳ ಚಿಕಿತ್ಸೆಯ ಬಳಿಕ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ (ಏಮ್ಸ್) ಬಿಡುಗಡೆಯಾಗಿ ಗೋವಾಕ್ಕೆ  ವೈಮಾನಿಕ ಆಂಬುಲೆನ್ಸ್ ಮೂಲಕ ವಾಪಸಾದರು. ದಕ್ಷಿಣ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಆಂಬುಲೆನ್ಸ್ ಮೂಲಕ ಪರಿಕ್ಕರ್ ಅವರನ್ನು ನೇರವಾಗಿ ಬಿಗಿ ಭದ್ರತೆಯ ನಡುವೆ ಅವರ ಖಾಸಗಿ ನಿವಾಸಕ್ಕೆ ಕರೆದೊಯ್ಯಲಾಯಿತು. ಸರ್ಕಾರಿ ಆಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅವರ ನಿವಾಸದಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.
ಮೇಧೋಜೀರಕ ಗ್ರಂಥಿಯಲ್ಲಿನ ಸಮಸ್ಯೆಗಾಗಿ ಚಿಕಿತ್ಸೆ ಪಡೆಯುತ್ತಿರುವ ಪರಿಕ್ಕರ್ ಅವರ ಅರೋಗ್ಯ ಕಳದ ೧೫ ದಿನಗಳಿಂದ ಸುಧಾರಿಸಿದೆ. ಅವರ ಚಿಕಿತ್ಸೆ ಮುಗಿದಿದೆ. ಇನ್ನು ಅವರು ವಿಶ್ರಾಂತಿ ಪಡೆಯಬೇಕಾಗಿದೆ ಎಂದು ಕೇಂದ್ರದ ಆಯುಷ್ ರಾಜ್ಯ ಸಚಿವ ಮತ್ತು ಉತ್ತರ ಗೋವಾ ಸಂಸದ ಶ್ರೀಪಾದ ನಾಯ್ಕ್ ಹೇಳಿದರು.  ಮುಂದಿನ ಚಿಕಿತ್ಸೆ ಹಾಗೂ ವಿಶ್ರಾಂತಿಯನ್ನು ಅವರು ಗೋವಾದಲ್ಲೇ ಪಡೆಯಬಹುದು ಎಂದು ನಾಯ್ಕ್ ಹೇಳಿದರು. ಸೆಪ್ಟೆಂಬರ್ ೧೫ರಂದು ಪರಿಕ್ಕರ್ ಅವರನ್ನು ಏಮ್ಸ್ ಗೆ ದಾಖಲು ಮಾಡಲಾಗಿತ್ತು. ಪರಿಕ್ಕರ್ ಅವರು ವರ್ಷ ಫೆಬ್ರವರಿಯಿಂದ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಗೋವಾ, ಮುಂಬೈ, ನ್ಯೂಯಾಕ್ ಮತ್ತು ನವದೆಹಲಿಯ ಹಲವಾರು ಹಲವಾರು ಆಸ್ಪತ್ರೆಗಳಿಗೆ ದಾಖಲಾಗಿ ವಾಪಸಾದರು. ಪರಿಕ್ಕರ್ ಅವರು ಏಮ್ಸ್ ನಲ್ಲೇ ತಮ್ಮ ಸಂಪುಟ ಸಚಿವರು ಮತ್ತು ಹಿರಿಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯರ ಸಭೆ ನಡೆಸಿದ್ದರು. ಸಭೆಯ ಬಳಿಕ ಅವರ ದೇಹಸ್ಥಿತಿ ಬಿಗಡಾಯಿಸಿತು ಎಂದು ಹೇಳಲಾಯಿತು. ಪರಿಕ್ಕರ್ ಅವರು ದೀರ್ಘಕಾಲದಿಂದ ಅಸ್ವಸ್ಥರಾಗಿದ್ದು, ಕಚೇರಿಗೆ ಗೈರು ಹಾಜರಾಗಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧಿ ಕಾಂಗ್ರೆಸ್ ಒತ್ತಾಯಿಸಿತು. ಪರಿಕ್ಕರ್ ಅವರ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಗೋವಾ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಮುಂದಿನ ಕೆಲದಿನಗಳಲ್ಲಿ ಗರಿಗೆದರುವ ಸಾಧ್ಯತೆಗಳಿವೆ ಎಂದು ಇಲ್ಲಿನ ರಾಜಕೀಯ ವಲಯ ಮೂಲಗಳು ಹೇಳಿದವು.

2018: ನವದೆಹಲಿ: ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನ ಮತ್ತು ಚಂಚಲ ತೈಲಬೆಲೆಗಳಿಂದ ಪ್ರಗತಿಗೆ ಉಂಟಾಗಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಪ್ರಸ್ತುತ ಇಂಧನ ಪರಿಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಉನ್ನತ ಜಾಗತಿಕ ಹಾಗೂ ಭಾರತೀಯ ತೈಲ ಮತ್ತು ಅನಿಲ ಕಂಪೆನಿಗಳ ಮುಖ್ಯಸ್ಥರು, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳ (ಸಿಇಒ) ಮಹತ್ವದ ಸಭೆ ನಡೆಸಲಿದ್ದಾರೆ. ತೈಲ ಮತ್ತು ಅನಿಲ ಅನ್ವೇಷಣೆ ಹಾಗೂ ಉತ್ಪಾದನೆಗೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಕೂಡಾ ಪ್ರಧಾನಿಯವರು ಇಂಧನ ಕಂಪೆನಿಗಳ ಪ್ರಮುಖರ ಮೂರನೇ ವಾರ್ಷಿಕ ಸಮಾವೇಶದಲ್ಲಿ ಚರ್ಚಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಜಾಗತಿಕ ಮತ್ತು ಭಾರತೀಯ ಇಂಧನ ಕಂಪೆನಿಗಳ ಮುಖ್ಯ ಕಾರ್ ನಿರ್ವಹಣಾ ಅಧಿಕಾರಿಗಳ ಮೊದಲ ಸಮಾವೇಶವನ್ನು ಪ್ರಧಾನಿ ಮೋದಿ ೨೦೧೬ರ ಜನವರಿ ೫ರಂದು ಕರೆದಿದ್ದರು. ಸಭೆಯಲ್ಲಿ ನೈಸರ್ಗಿಕ ಅನಿಲ ಬೆಲೆಗಳ ಸುಧಾರಣೆ ಕುರಿತ ಸಲಹೆಗಳನ್ನು ಮಾಡಲಾಗಿತ್ತು. ಒಂದು ವರ್ಷದ ಬಳಿಕ ಸರ್ಕಾರ ಆಳ ಸಮುದ್ರದಂತಹ ಕಷ್ಟಕರ ತಾಣಗಳಿಂದ ಉತ್ಪಾದಿಸಲಾಗುವ ನೈಸರ್ಗಿಕ ಅನಿಲದ ಬೆಲೆ ಏರಿಕೆಗೆ ಒಪ್ಪಿಗೆ ನೀಡಿತ್ತು. ೨೦೧೭ರ ಸಮಾವೇಶದಲ್ಲಿ ಸರ್ಕಾರಿ ಮಾಲೀಕತ್ವದ ಒಎನ್ ಜಿಸಿ ಮತ್ತು ತೈಲ ಉತ್ಪಾದನಾ ಕ್ಷೇತ್ರಗಳಲ್ಲಿ ತೈಲ ಉತ್ಪಾದನೆ ಮಾಡುವ ವಿದೇಶೀ ಮತ್ತು ಖಾಸಗಿ ಕಂಪೆನಿಗಳಿಗೆ ಈಕ್ವಿಟಿ ನೀಡುವ ಸಲಹೆಗಳನ್ನು ಮಾಡಲಾಗಿತ್ತು. ಆದರೆ ತೈಲ ಮತ್ತು ನೈಸರ್ಗಿಕ ಅನಿಲ ಕಾಪೋರೇಷನ್ (ಒಎನ್ ಜಿಸಿ) ತೀವ್ರ ವಿರೋಧ ವ್ಯಕ್ತ ಪಡಿಸಿದ್ದರಿಂದ ಅದು ಕಾರ್ಯಗತವಾಗಿರಲಿಲ್ಲ. ಸಮಾವೇಶದಲ್ಲಿ ಸೌದಿ ತೈಲ ಸಚಿವ ಖಲೀದ್ ಅಲ್ ಫಲೀಹ್, ಬಿಪಿ ಸಿಇಒ ಬಾಬ್ ಡುಡ್ಲೆ, ಟೋಟಲ್ ಮುಖ್ಯಸ್ಥ ಪ್ಯಾಟ್ರಿಕ್ ಫೌಯಾನೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಮತ್ತು ವೇದಾಂತ ಮುಖ್ಯಸ್ಥ ಅನಿಲ್ ಅಗರ್ ವಾಲ್ ಮತ್ತಿತರರು ಪಾಲ್ಗೊಳ್ಳುವ  ನಿರೀಕ್ಷೆ ಇದೆ. ನೀತಿ ಆಯೋಗದ ಸಮನ್ವಯದೊಂದಗೆ ನಡೆಯಲಿರುವ ಸಭೆಯು ಅಸ್ಥಿರ ತೈಲ ಬೆಲೆ ಮತ್ತು ಇರಾನ್ ಮೇಲಿನ ಅಮೆರಿಕ ದಿಗ್ಬಂಧನ ಬಗ್ಗೆ ಪರಾಮರ್ಶೆ ನಡೆಲಿದೆ ಮತ್ತು ಭಾರತದಲ್ಲಿ ವ್ಯವಹಾರ ಸುಲಭಗೊಳಿಸಲು ಹಾಗೂ ಬಂಡವಾಳ ಆಕರ್ಷಿಸಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಬೆಳಕು ಚೆಲ್ಲುವ ನಿರೀಕ್ಷೆಯಿದೆ.  ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಮುಕ್ತ ನೀತಿ, ಬೆಲೆ ಸುಧಾರಣೆ, ಉದಾರ ಪರವಾನಗಿ ನೀತಿ, ಕಳೆದ ನಾಲ್ಕು ವರ್ಷಗಳಲ್ಲಿ ಜಾರಿಗೊಳಿಸಲಾದ ಸುಧಾರಣೆಗಳು ಇತ್ಯಾದಿಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುವುದು ಮತ್ತು ಇನ್ನಷ್ಟು ಬೆಳವಣಿಗೆ ಸಾಧಿಸಲು ಸಲಹೆಗಳನ್ನು ಸಭೆಯಲ್ಲಿ ಕೋರಲಾಗುತ್ತದೆ ಎಂದು ಮೂಲಗಳು ಹೇಳಿವೆ.  ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆಯ (ಒಪೆಕ್) ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಬಾರ್ಕಿಂಡೊ, ಭಾರತದ ತೈಲ ಸಚಿವ ಧರ್ಮೇಂದ್ರ ಪ್ರಧಾನ್, ಒಎನ್ ಜಿಸಿ ಅಧ್ಯಕ್ಷ, ಆಡಳಿತ ನಿರ್ದೇಶಕ ಶಶಿ ಶಂಕರ್, ಭಾರತೀಯ ತೈಲ ನಿಗಮ (ಐಒಸಿ) ಅಧ್ಯಕ್ಷ ಸಂಜೀವ್ ಸಿಂಗ್, ಗೈಲ್ ಇಂಡಿಯಾ ಮುಖ್ಯಸ್ಥ ಬಿಸಿ ತ್ರಿಪಾಠಿ, ಎಚ್ ಪಿ ಸಿಎಲ್ ಮುಖ್ಯಸ್ಥ ಮುಖೇಶ್ ಕುಮಾರ್ ಸುರನ್, ಆಯಲ್ ಇಂಡಿಯಾ ಅಧ್ಯಕ್ಷ ಉತ್ಪಲ್ ಬೋರಾ, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಅಧ್ಯಕ್ಷ ರಾಜ್ ಕುಮಾರ್ ಮತ್ತಿತರರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

2018: ಲಕ್ನೋ: ಉತ್ತರ ಪ್ರದೇಶದ ಶಹಜಾನ್ ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಒಂದರ ಛಾವಣಿ ಕುಸಿದ ಪರಿಣಾಮವಾಗಿ ಹಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಭೀತಿ ಪಡಲಾಯಿತು. ಖಾಸಗಿ ಇಂಟರ್ ಕಾಲೇಜಿನ ನಿರ್ಮಾಣ ಹಂತದ ಕಟ್ಟಡದ ಛಾವಣಿ ಕುಸಿದು ಬಿದ್ದಿತ್ತು ವೇಳೆಯಲ್ಲಿ ಒಂದು ಡಜನ್ ಗೂ ಹೆಚ್ಚು ಕಾರ್ಮಿಕರು ಕಟ್ಟಡ ನಿರ್ಮಾಣದ ಕೆಲಸ ಮಾಡುತ್ತಿದ್ದರು. ಪರಿಣಾಮವಾಗಿ ಹಲವಾರು ಕಾರ್ಮಿಕರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಸದರ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಾಮಜಿ ಮಿಶ್ರ ಹೇಳಿದರು. ಜಿಲ್ಲೆಯ ರಾಮಚಂದರ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುರ್ಘಟನೆ ಘಟಿಸಿದ್ದು, ಈಗಾಗಲೇ ರಕ್ಷಣ ಕಾರ್ಯಾಚರಣೆ ಆರಂಭಿಸಲಾಗಿದೆ. ಈವರೆಗೆ ಸಾವಿನ ವರದಿ ಬಂದಿಲ್ಲ ಎಂದು ಅವರು ನುಡಿದರು. ಅವಶೇಷಗಳ ಅಡಿಯಿಂದ ಸುಮಾರು ಒಂದು ಡಜನ್ ಕಾರ್ಮಿಕರನ್ನು ರಕ್ಷಿಸಲಾಗಿದೆ. ಇನ್ನೂ ಇಬ್ಬರು ಮೂವರು ಅವಶೇಷಗಳ ಅಡಿ ಇರಬಹುದೆಂಬ ಗುಮಾನಿ ಇದೆ. ಜೆಸಿಬಿ ಯಂತ್ರಗಳು ಮತ್ತು ಕ್ರೇನ್ ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ. ಅವಶೇಷಗಳ ಅಡಿಯಲ್ಲಿ ಇನ್ನು ಎಷ್ಟು ಜನ ಇರಬಹುದು ಎಂಬ ಬಗ್ಗೆ ನಿಖರವಾಗಿ ಹೇಳುವುದು ಕಷ್ಟಕರ ಎಂದು ಮಿಶ್ರ ನುಡಿದರು.


2016: ಭೋಪಾಲ್ (ಮಧ್ಯ ಪ್ರದೇಶ): ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಭಾರತೀಯ ಸೇನೆಯ ಯೋಧರಿಗೆ ಗೌರವ ಸಲ್ಲಿಸಿಶೌರ್ಯ ಸ್ಮಾರಕವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿನಮ್ಮ ಸೈನಿಕರು ಸಮರ ವೀರರಷ್ಟೇ ಅಲ್ಲ, ಮಾನವತೆಯ ಸಾಕಾರ ಮೂರ್ತಿಗಳುಎಂದು ಶ್ಲಾಘಿಸಿದರು. ಚಾರಿತ್ರಿಕ ದಿನ ಯೋಧರನ್ನು ಉದ್ದೇಶಿಸಿ ಮಾತನಾಡಲು ಅವಕಾಶ ಲಭಿಸಿದ್ದು ನನ್ನ ಸೌಭಾಗ್ಯ ಎಂದು ನುಡಿದ ಪ್ರಧಾನಿಯೋಧರ ಬಗ್ಗೆ ಮಾತನಾಡುವಾಗ ಬಹುತೇಕ ಅವರ ಸಮವಸ್ತ್ರ, ಶೌರ್ಯದ ಬಗ್ಗೆ ಮಾತ್ರ ಮಾತನಾಡುತ್ತೇವೆ. ಆದರೆ ಅವರು ಮಾನವತೆಯ ಸಾಕಾರ ಮೂರ್ತಿಗಳು ಎಂಬುದನ್ನೂ ನಾವು ಗಮನಿಸಬೇಕುಎಂದು ಹೇಳಿದರು. ಶ್ರೀನಗರ ಪ್ರವಾಹದಲ್ಲಿ ಸಿಲುಕಿ ಕಂಗೆಟ್ಟಾಗ ನಮ್ಮ ಸೈನಿಕರು ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಪ್ರವಾಹದ ಮಧ್ಯೆ ಸಿಲುಕಿದ್ದವರನ್ನು ರಕ್ಷಿಸಿ ಹೊರ ತಂದರು. ಹೀಗೆ ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುವಾಗ ಸೈನಿಕರು ಎಂದೂ ಇವರಲ್ಲಿ ನಮಗೆ ಕಲ್ಲು ಹೊಡೆದವರೂ ಇರಬಹುದು ಎಂದು ಕ್ಷಣಕ್ಕೂ ಯೋಚಿಸುವುದಿಲ್ಲ. ನೈಸರ್ಗಿಕ ಪ್ರಕೋಪಗಳ ಸಂದರ್ಭದಲ್ಲಿ ನೆರವಿನ ಕಾರ್ಯಾಚರಣೆಗೆ ಇಳಿಯುವಾಗ ಅವರು ಸಂಕಷ್ಟದಲ್ಲಿ ಇದ್ದ ಎಲ್ಲರಿಗೂ ಮನಃಪೂರ್ವಕ ನೆರವು ನೀಡುತ್ತಾರೆ ಎಂದು ಪ್ರಧಾನಿ ನುಡಿದರುವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗಳಿಗೆ ಭಾರತ
ಅತ್ಯಂತ ದೊಡ್ಡ ಪ್ರಮಾಣದ ಸಹಾಯ ಹಸ್ತವನ್ನು ನೀಡಿದೆ. ಯೆಮೆನ್ನಲ್ಲಿ ಭಾರತೀಯರನ್ನು ರಕ್ಷಿಸುವ ಸಂದರ್ಭದಲ್ಲಿ ಭಾರತೀಯ ಸೇನೆ ಕೆಲವು ಪಾಕಿಸ್ತಾನೀಯರನ್ನೂ ರಕ್ಷಿಸಿತು. ಇದು ಭಾರತೀಯ ಸೇನೆಯ ಮಾನವತ್ವಕ್ಕೆ ಉದಾಹರಣೆ ಎಂದು ಮೋದಿ ಹೇಳಿದರುಎರಡು ಜಾಗತಿಕ ಸಮರಗಳಲ್ಲಿ 1.5 ಲಕ್ಷ ಮಂದಿ ಭಾರತೀಯ ಯೋಧರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ವಿಶ್ವವು ಇದನ್ನು ಎಂದಿಗೂ ಮರೆಯಬಾರದು. ಸೇನೆ, ಬಿಎಸ್ಎಫ್, ಸಿಆರ್ಪಿಎಫ್, ಕರಾವಳಿ ಕಾವಲು ಪಡೆಗಳ ಯೋಧರು ತಮ್ಮ ಜೀವ ಬಲಿದಾನ ಮಾಡುತ್ತಿರುವ ಕಾರಣ ನಾವು ಶಾಂತಚಿತ್ತರಾಗಿ ನಿದ್ರಿಸಲು ಸಾಧ್ಯವಾಗಿದೆ ಎಂದು ಪ್ರಧಾನಿ ನುಡಿದರು. ಯೋಧರಿಗಾಗಿ ನಿರ್ಮಿಸಲಾಗಿರುವ ಶೌರ್ಯ ಸ್ಮಾರಕ ನಮಗೆ ಮತ್ತು ಮುಂಬರುವ ತಲೆಮಾರುಗಳಿಗೆ ತೀರ್ಥಸ್ಥಾನ ಎಂದು ಮೋದಿ ಹೇಳಿದರು. ಭಾರತೀಯ ಸೇನೆ ಮಾತನಾಡುವುದಿಲ್ಲ; ಬದಲಿಗೆ ಶೌರ್ಯ ಪ್ರದರ್ಶಿಸುತ್ತದೆ ಎಂದು ಪ್ರಧಾನಿ ಹೇಳಿದರು. ಪ್ರಧಾನಿ ಮಾತನಾಡುವುದಕ್ಕೆ ಮುನ್ನ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತರರರು ಮಾತನಾಡಿದರು.
2016: ಢಾಕಾ/ಬೀಜಿಂಗ್: ಬಾಂಗ್ಲಾದೇಶದಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡಲು ಚೀನಾ ಕಾರ್ಯ ತಂತ್ರವನ್ನು ರೂಪಿಸುತ್ತಿದ್ದು, ಬಾಂಗ್ಲಾದೇಶಕ್ಕೆ 24 ಬಿಲಿಯನ್ ಡಾಲರ್ (ಸುಮಾರು 1 ಲಕ್ಷದ 60 ಸಾವಿರ ಕೋಟಿ ರೂ.) ಸಾಲ ನೀಡಲು ಮುಂದಾಯಿತು. ಸಂಬಂಧ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಬಾಂಗ್ಲಾದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆಕ್ಸಿ ಜಿನ್ಪಿಂಗ್ ಶುಕ್ರವಾರ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿದ್ದು, ರೈಲ್ವೆ, ವಿದ್ಯುತ್ ಘಟಕಗಳು ಮತ್ತು ಬಂದರು ನಿರ್ಮಾಣಕ್ಕೆ ನೆರವು ಘೋಷಿಸಲಿದ್ದಾರೆ. ಚೀನಾ ಸುಮಾರು 25 ಯೋಜನೆಗಳಿಗೆ ಆರ್ಥಿಕ ನೆರವು ನೀಡಲಿದೆ. ಅದರಲ್ಲಿ 1320 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ, ಬಂದರು ನಿರ್ಮಾಣ ಮತ್ತು ಇನ್ನೂ ಹಲವು ಮೂಲ ಸೌಕರ್ಯ ಯೋಜನೆಗಳಿಗೆ ನೆರವು ನೀಡಲಿದೆ ಎಂದು ಬಾಂಗ್ಲಾದೇಶದ ಹಣಕಾಸು ಸಚಿವ ಎಂಎ ಮನ್ನನ್ ತಿಳಿಸಿದರು.  ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ 2 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ತಿಳಿಸಿದ್ದರು. ಪರಿಸ್ಥಿತಿಯ ಲಾಭ ಪಡೆಯಲು ಚಿಂತಿಸಿರುವ ಚೀನಾ ಬಾಂಗ್ಲಾದೇಶಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಅಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ಯೋಜಿಸಿತು.
2016: ನವದೆಹಲಿ: ಸೀಮಿತ ದಾಳಿಯ ಕುರಿತು ಮಾಹಿತಿ ಹಂಚಿಕೊಳ್ಳುವಂತೆ ವಿರೋಧ ಪಕ್ಷಗಳಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿಯ ಸದಸ್ಯರಿಗೆ ಸೇನೆ ಈದಿನ ಮಾಹಿತಿಯನ್ನು ನೀಡಿತುಸೆಪ್ಟೆಂಬರ್ 29 ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತು ಲೆ.ಜನರಲ್ ಬಿಪಿನ್ ರಾವತ್ ಮಾಹಿತಿಯನ್ನು ಒದಗಿಸಿದರು. ಸೇನೆ ಕಾರ್ಯಾಚರಣೆ ಕುರಿತು ವಿವರವಾದ ಮಾಹಿತಿಯನ್ನು ಒದಗಿಸಿತು. ಪ್ರಶ್ನೆಗಳನ್ನು ಕೇಳಲು ಅವಕಾಶವಿರಲಿಲ್ಲ ಎಂದು ಸಭೆಯಲ್ಲಿದ್ದ ಸದಸ್ಯರು ತಿಳಿಸಿದರು. ಕಾಂಗ್ರೆಸ್ ಮಧುಸೂದನ್ ಮಿಸ್ತ್ರಿ ಸೇನಾಧಿಕಾರಿಗಳಿಗೆ ಪ್ರಶ್ನೆ ಕೇಳಲು ಬಯಸಿದ್ದರು. ಆದರೆ ಮಿಸ್ತ್ರಿ ಅವರಿಗೆ ಪ್ರಶ್ನೆ ಕೇಳಲು ಸಮಿತಿಯ ಅಧ್ಯಕ್ಷ ನಿವೃತ್ತ ಮೇ.ಜನರಲ್ ಬಿ.ಸಿ. ಖಂಡೂರಿ ಅವಕಾಶ ನೀಡಲಿಲ್ಲ. ಸಂಬಂಧ ಇಬ್ಬರ ನಡುವೆ ಸಣ್ಣ ವಾಗ್ವಾದ ಸಹ ನಡೆದಿದ್ದು, ಯಾವುದೇ ಪ್ರಶ್ನೆಗಳನ್ನು ಕೇಳದೆ ಸಭೆ ಮುಕ್ತಾಯಗೊಳಿಸಲಾಯಿತು ಎಂದು ಎನ್ಡಿಎ ಸರ್ಕಾರದ ಸದಸ್ಯರೊಬ್ಬರು ತಿಳಿಸಿದರು.
2016: ಭೋಪಾಲ್ (ಮಧ್ಯ ಪ್ರದೇಶ): ಹುತಾತ್ಮ ಯೋಧರನ್ನು ಗೌರವಿಸಲು ಮತ್ತು ಸಮರ ಸ್ಮಾರಕ ಉದ್ಘಾಟನೆಗೆ ಭೋಪಾಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಜ್ಜಾಗಿದ್ದರೆ, 1994ರರಲ್ಲಿ ಹುತಾತ್ಮನಾದ ಯೋಧ ದೇವಶಿಸ್ ಶರ್ಮಾ ಅವರ ತಾಯಿ ಎರಡು ವರ್ಷಗಳ ಹಿಂದೆ ಕಳುವಾಗಿದ್ದ ತನ್ನ ಹುತಾತ್ಮ ಪುತ್ರನ ಪದಕಗಳನ್ನು ನೋಡಲು ಪೊಲೀಸರು ಲಂಚ ಕೇಳಿರುವುದಾಗಿ ಆಪಾದಿಸಿದರು.  ಸುದ್ದಿ ತಿಳಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹುತಾತ್ಮ ಯೋಧ ದೇವಶಿಸ್ ಶರ್ಮಾ ಅವರ ತಾಯಿ ಬಳಿ ಲಂಚ ಕೇಳಿದ ಅಧಿಕಾರಿಗಳನ್ನು ಅಮಾತನುಗೊಳಿಸುವುದಾಗಿ ಪ್ರಕಟಿಸಿದರು. ನಿರ್ಮಲಾ ದೇವಿ ಅವರ ಪುತ್ರ ಕ್ಯಾಪ್ಟನ್ ದೇವಶಿಸ್ ಶರ್ಮಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ಕಾಲದಲ್ಲಿ ಹುತಾತ್ಮರಾಗಿದ್ದರು. ಶರ್ಮಾ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಮತ್ತು ವಿರಾಟ ಚಕ್ರ ಪದಕಗಳನ್ನು ಪ್ರದಾನ ಮಾಡಲಾಗಿತ್ತು. 2014 ಅಕ್ಟೋಬರ್ನಲ್ಲಿ ನಿರ್ಮಲಾ ದೇವಿ ಅವರು ಮನೆಯಲ್ಲಿ ಇಲ್ಲದೇ ಇದ್ದಾಗ ಮನೆಗಳ್ಳತನ ನಡೆಸಿದ್ದ ಕಳ್ಳರು ಹುತಾತ್ಮ ಪುತ್ರನ ಪದಕಗಳು ಸೇರಿದಂತೆ ಹಲವಾರು ವಸ್ತುಗಳನ್ನು ಕದ್ದೊಯ್ದಿದ್ದರು. ತಾನು ಎಫ್ಐಆರ್ ದಾಖಲಿಸಿದ ಮೂರು ತಿಂಗಳ ಬಳಿಕ ಪೊಲೀಸರನ್ನು ಸಂರ್ಪಸಿದರೆ ಪೊಲೀಸರು ಹಣ ನೀಡುವಂತೆ ತಮ್ಮನ್ನು ಆಗ್ರಹಿಸಿದರು ಎಂದು ನಿರ್ಮಲಾ ದೇವಿ ದೂರಿದ್ದರು.
2016: ನವದೆಹಲಿ: ಪಾಕಿಸ್ತಾನದ ನಟ ಫವಾದ್ಖಾನ್ನಟಿಸಿರುವ ದಿಲ್ ಹೈ ಮುಷ್ಕಿಲ್ಚಿತ್ರದ
ಪ್ರದರ್ಶನವನ್ನು ಭಾರತೀಯ ಸಿನಿಮಾ ಮಾಲೀಕರು ಮತ್ತು ಪ್ರದರ್ಶಕರ ಸಂಘಟನೆಯು (ಸಿಒಇಎಐ) ನಿಷೇಧಿಸಿತು. ಕರಣ್ಜೋಹರ್ನಿರ್ದೇಶನದ ಚಿತ್ರವನ್ನು ದೀಪಾವಳಿಯ ಮುನ್ನಾ ದಿನವಾದ ಮುಂದಿನ ಶುಕ್ರವಾರ (.28) ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಫವಾದ್ಖಾನ್ನಟಿಸಿರುವ ಕಾರಣಕ್ಕೆ ಈಗ ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರಲಾಯಿತು.  ಪಾಕಿಸ್ತಾನದ ಕಲಾವಿದರು, ತಂತ್ರಜ್ಞರು, ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಪಾಕಿಸ್ತಾನಿಯರನ್ನು ಒಳಗೊಂಡಿರುವ ಯಾವುದೇ ಚಿತ್ರವನ್ನು ಭಾರತದಲ್ಲಿ ಪ್ರದರ್ಶಿಸದಿರಲು ತೀರ್ಮಾನಿಸಲಾಗಿದೆ. ದೇಶಭಕ್ತಿ ಹಾಗೂರಾಷ್ಟ್ರೀಯ ಏಕತೆಯನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಕ್ಕೆ ಬರಲಾಗಿದೆಎಂದು ಸಿಒಇಎಐ ಅಧ್ಯಕ್ಷ ನಿತಿನ್ದಾತಾರ್ತಿಳಿಸಿದರು.  ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ನಲ್ಲಿ ಚಿತ್ರದ ಪ್ರದರ್ಶನದ ಮೇಲೆ ನಿಷೇಧ ಹೇರಲಾಗಿದೆ. ಇತರೆ ರಾಜ್ಯಗಳ ಪ್ರದರ್ಶಕರಿಗೂಚಿತ್ರ ಪ್ರದರ್ಶಿಸದಂತೆ ತಿಳಿಸಲಾಗಿದೆ ಎಂದು ಅವರು ಹೇಳಿ್ದರು. ಉರಿ ವಾಯನೆಲೆಯ ಮೇಲೆ ನಡೆದ ದಾಳಿ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ನಡೆಸಿರುವ ಸರ್ಜಿಕಲ್ ದಾಳಿಯ ಬಳಿಕ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟಿದೆ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ಪಾಕಿಸ್ತಾನ ಕಲಾವಿದರಿಗೆ ನಿಷೇಧ ಹೇರಿತ್ತು. ಇದಾದ ಬಳಿಕ ಈಗ ಪಾಕಿಸ್ತಾನ ಕಲಾವಿದರು ನಟಿಸಿರುವ ಚಿತ್ರವನ್ನೂ ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವುದು ಸಹಜವಾಗಿಯೇ ನಿರ್ಮಾಪಕರು ಮತ್ತು ನಿರ್ದೇಶಕರ ಆತಂಕಕ್ಕೆ ಕಾರಣವಾಯಿತು.
2016: ನವದೆಹಲಿ: ಕುಟುಂಬ ಸದಸ್ಯರನ್ನೇ ಸರ್ಕಾರಿ ರಂಗದ ಉದ್ದಿಮೆಗಳ ಮುಖ್ಯಸ್ಥರನ್ನಾಗಿ ನೇಮಿಸುವ ಮೂಲಕ ಸ್ವಜನ ಪಕ್ಷಪಾತದ ಆರೋಪಕ್ಕೆ ಗುರಿಯಾದ ಕೇರಳದ ಕೈಗಾರಿಕಾ ಸಚಿವ .ಪಿ.ಜಯರಾಜನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರು ಸುದ್ದಿಯನ್ನು ದೃಢಪಡಿಸಿದರು. ನಿಕಟ ಬಂಧುಗಳನ್ನು ನೇಮಿಸುವ ಮೂಲಕ ತಪ್ಪೆಸಗಿದ್ದೇನೆ ಎಂಬುದಾಗಿ ಜಯರಾಜನ್ ಸಿಪಿಎಂ ರಾಜ್ಯ ಸಮಿತಿ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದೂ ಬಾಲಕೃಷ್ಣನ್ ಹೇಳಿದರು. ಇದಕ್ಕೆ ಮುನ್ನ ಸಿಪಿಎಂ ರಾಜ್ಯ ಸಚಿವಾಲಯವು ಜಯರಾಜನ್ ವಿರುದ್ಧ ಕೇಳಿಬಂದ ಸ್ವಜನ ಪಕ್ಷಪಾತದ ಆರೋಪಗಳ ಬಗ್ಗೆ ಚಿರ್ಚಿಸಿತ್ತು. ವಿವಾದದ ಹಿನ್ನೆಲೆಯಲ್ಲಿ ಜಯರಾಜನ್ ಅವರು ಸಚಿವರಾಗಿ ಮುಂದುವರೆಯಬಾರದು ಎಂಬುದಾಗಿ ಸಿಪಿಎಂ ಸಚಿವಾಲಯ ಅಭಿಪ್ರಾಯ ಪಟ್ಟಿತ್ತು. ಜಯರಾಜನ್ ಅವರು ಸಚಿವರಾಗಿ ಕೇವಲ ನಾಲ್ಕು ತಿಂಗಳ ಕಾಲ ಇದ್ದರು. ಸರ್ಕಾರಿ ರಂಗದ ಉದ್ದಿಮೆ ಮತ್ತು ಕೇರಳ ಹೈಕೋರ್ಟಿನ ಎರಡು ಪ್ರಮುಖ ಹುದ್ದೆಗಳಿಗೆ ಜಯರಾಜನ್ ಅವರ ಕುಟುಂಬದ ಸದಸ್ಯರನ್ನು ನೇಮಕ ಮಾಡಲಾಗಿತ್ತು. ನೇಮಕಗೊಂಡರವಲ್ಲಿ ಕನಿಷ್ಠ ಇತರ ಇಬ್ಬರು ಸಿಪಿಎಂ ನಾಯಕರಿಗೆ ಆಪ್ತರಾಗಿದ್ದರು.

2016: ನವದೆಹಲಿ: ಸಮಾನ ನಾಗರಿಕ ಸಂಹಿತೆ ಮತ್ತು ತ್ರಿವಳಿ ತಲಾಖ್ಗೆ ಸಂಬಂಧಿಸಿದಂತೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ವ್ಯಕ್ತ ಪಡಿಸಿರುವ ಅಭಿಪ್ರಾಯ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನುಸರ್ವಾಧಿಕಾರಿಎಂಬುದಾಗಿ ಮಾಡಿದ ಟೀಕೆಗೆ ಕೇಂದ್ರ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪ್ರಶ್ನಾವಳಿ ಬಹಿಷ್ಕಾರದ ಮಂಡಳಿ ಕ್ರಮಸರ್ವಾಧಿಕಾರಎಂದು ಬಣ್ಣಿಸಿತು. ಮಹಿಳೆಯರ ವಿರುದ್ಧದ ತಾರತಮ್ಯಕ್ಕೆ ಕೊನೆ ಹಾಡಲು ಸರ್ಕಾರ ಬದ್ಧವಾಗಿದೆ ಎಂದು ಶುಕ್ರವಾರ ಸ್ಪಷ್ಟಪಡಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಅವರು ಭಾರತದಲ್ಲಿ ವಿವಾಹ, ವಿಚ್ಛೇದನ, ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಸಮಾನ ನಾಗರಿಕ ಸಂಹಿತೆ ಜಾರಿಗೆ ತರುವ ಯತ್ನವನ್ನು ಟೀಕಿಸಿದರು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆಪಾದಿಸಿದರು.
ಸರ್ವಾನುಮತದ ಪ್ರಕ್ರಿಯೆ ಮೂಲಕ ಸಮಾನ ನಾಗರಿಕ ಸಂಹಿತೆ ಬರಲಿದೆ, ಅವಸರದಲ್ಲಿ ಅಲ್ಲಎಂದು ಹೇಳಿದ ನಾಯ್ಡು, ಪ್ರತಿಯೊಬ್ಬನೂ ಪ್ರಕ್ರಿಯೆಯಲ್ಲಿ ರಾಜಕೀಯವನ್ನು ದೂರ ಇಡಬೇಕುಎಂದು ಆಗ್ರಹಿಸಿದರು. ‘ಮೂರು ಮೂಲಭೂತ ವಿಷಯಗಳಿವೆ- ಲೈಂಗಿಕ ನ್ಯಾಯ, ತಾರತಮ್ಯ ಕೊನೆಗೊಳಿಸುವುದು ಮತ್ತು ಮಹಿಳೆಯರ ಘನತೆಯನ್ನು ಎತ್ತಿ ಹಿಡಿಯುವುದುಎಂದು ಅವರು ನುಡಿದರು. ಒಳಜಗಳದಿಂದ ನಲುಗುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅದರಿಂದ ಪಾರಾಗಲು ಮುಸ್ಲಿಮ್ ವೈಯಕ್ತಿಕ ಕಾನೂನು ರದ್ದತಿಗೆ ಯತ್ನಿಸುತ್ತಿದೆ ಎಂದು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಟೀಕಿಸಿದ ಮರುದಿನ ನಾಯ್ಡು ಪ್ರತಿಕ್ರಿಯೆ ನೀಡಿದ್ದಾರೆ. ಸಮಾನ ನಾಗರಿಕ ಸಂಹಿತೆ ಮತ್ತು ತ್ರಿವಳಿ ತಲಾಖ್ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಜನಮತ ಸಂಗ್ರಹಕ್ಕಾಗಿ ಕಾನೂನು ಆಯೋಗವು ಪ್ರಕಟಿಸಿರುವ ಪ್ರಶ್ನಾವಳಿಯನ್ನು ಬಹಿಷ್ಕರಿಸುವುದಾಗಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಮುಖಂಡರು ಗುರುವಾರ ಪ್ರಕಟಿಸಿದ್ದರು.
2016: ಭೋಪಾಲ್ (ಮಧ್ಯ ಪ್ರದೇಶ): ಮಧ್ಯ ಪ್ರದೇಶದ ರತ್ಲಮ್ ನಗರದ ಸಮೀಪ 40 ಜನರಿದ್ದ ಬಸ್ಸೊಂದು ಕಂದಕಕ್ಕೆ ಬಿದ್ದ ಪರಿಣಾಮವಾಗಿ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿದವು. ಬೆಳಗ್ಗೆ ದುರಂತ ಸಂಭವಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಗಳು ತಿಳಿಸಿದವು. ಗಾಯಾಳುಗಳನ್ನು ರತ್ಲಮ್ ಆಸ್ಪತೆಗೆ ಸೇರಿಸಲಾಯಿತು.

2016: ನವದೆಹಲಿ: ಕೂಡಂಕುಳಮ್ ಪರಮಾಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳಿಗಾಗಿ ಸಾಮಾನ್ಯ ಒಪ್ಪಂದ ಚೌಕಟ್ಟು ಮತ್ತು ಸಾಲ ಶಿಷ್ಟಾಚಾರವನ್ನು ಭಾರತ ಮತ್ತು ರಷ್ಯಾ ಅಂತಿಮಗೊಳಿಸಿವೆ ಎಂದು ರಷ್ಯಾ ಮೂಲಗಳು ತಿಳಿಸಿದವು.  ರಷ್ಯಾದ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಅವರು ಗೋವಾದಲ್ಲಿ ಅಕ್ಟೋಬರ್ 15 ಶನಿವಾರ 17ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ (ಬ್ರಿಕ್ಸ್ ಶೃಂಗಸಭೆ) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿರುವ ಸಂದರ್ಭದಲ್ಲಿ ಕೂಡಂಕುಳಮ್ ಪರಮಾಣು ವಿದ್ಯುತ್ ಸ್ಥಾವರಕ್ಕೆ ಸಂಬಂಧಿಸಿದ ಅಂತರ್-ಸರ್ಕಾರ ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಮಾಡಲಿವೆ. ಸ್ಥಾವರದ ಮೊದಲ ಮತ್ತು ಎರಡನೇ ಘಟಕಗಳು ವರ್ಷ ಕಾರ್ಯಾರಂಭ ಮಾಡಿದ್ದು, ಮೂರು ಮತ್ತು ನಾಲ್ಕನೇ ಘಟಕಗಳಿಗಾಗಿ ಕಾಮಗಾರಿ ಆರಂಭವಾಗಿದೆ. ಸಹಿ ಹಾಕಿದ ಬಳಿಕ ರಷ್ಯಾದ ಪರಮಾಣು ರಿಯಾಕ್ಟರ್ಗಳಿಗೆ ಸಂಬಂಧಿಸಿದಂತೆ ಪರಮಾಣು ಬಾಧ್ಯತಾ ವಿಧಿಗಳನ್ನು ಜಾರಿಗೊಳಿಸಿದ ಮಾದರಿಯ ಸಾಮಾನ್ಯ ಒಪ್ಪಂದ ಚೌಕಟ್ಟು ಮತ್ತು ಸಾಲ ಶಿಷ್ಟಾಚಾರದ ಮೊದಲ ಒಪ್ಪಂದ ಇದಾಗಲಿದೆ.

2016: ನವದೆಹಲಿ: ಮುಂದಿನ ವರ್ಷ ಪಂಜಾಬ್ನಲ್ಲಿ ನಡೆಯಲಿರುವ ವಿಧಾನ ಸಭೆ ಚುನಾವಣೆಯ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಸ್ಥಳೀಯ ಮತದಾರರು ಕಾಂಗ್ರೆಸ್ ಪಕ್ಷದ ಕಡೆ ಒಲವು ವ್ಯಕ್ತಪಡಿಸಿದರು. ಇಂಡಿಯಾ ಟುಡೆ-ಆಕ್ಸಿಸ್ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, ಒಟ್ಟು 117 ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಬಾರಿ 49ರಿಂದ 55 ಸೀಟುಗಳನ್ನು ಜಯಿಸಲಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿಪಕ್ಷ (ಆಪ್) ಎರಡನೇಯ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, 42ರಿಂದ 46 ಸೀಟುಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲಿದೆ. ಮೋದಿ ಅಲೆಯಲ್ಲಿರುವ ಭಾರತೀಯ ಜನತಾ ಪಕ್ಷ ಮತ್ತು ಶಿರೋಮಣಿ ಅಕಾಲಿದಳ ಒಕ್ಕೂಟ 17ರಿಂದ 21 ಸ್ಥಾನ ಜಯಿಸಲಿದೆ ಎಂದು ಸಮೀಕ್ಷೆ ತಿಳಿಸಿತು. ಕಾಂಗ್ರೆಸ್ ಅತೀ ಹೆಚ್ಚು ಸ್ಥಾನ ಜಯಿಸಿದರೂ ಕೂಡ ಬಹುಮತಕ್ಕೆ ಇನ್ನು ಐದು ಸ್ಥಾನದ ಆವಶ್ಯಕತೆಯಿದೆ. ಮತ ಹಂಚಿಕೆಯಲ್ಲಿ ಕಾಂಗ್ರೆಸ್ ಶೇ.33 ಹಾಗೂ ಆಪ್ ಶೇ. 30ರಷ್ಟು ಪಡೆಯಲಿದೆ.  ಜೆಪಿ-ಎಸ್ಎಡಿ ಕೇವಲ 15 ಪ್ರತಿಶತ ಮತ ಪಡೆಯಲಿದೆ. ಡ್ರಗ್ ಸಮಸ್ಯೆ ರಾಜ್ಯವನ್ನು ಹೈರಾಣ ಮಾಡಿದ್ದು, ಇದನ್ನು ತಡೆಯುವಲ್ಲಿ ಪ್ರಸ್ತುತ ಸರ್ಕಾರ ವೈಫಲ್ಯ ಅನುಭವಿಸಿದೆ ಎಂದು ಶೇ. 76ರಷ್ಟು ಜನತೆ ತಿಳಿಸಿದರು.

2016: ಸ್ಯಾನ್ಫ್ರಾನ್ಸಿಸ್ಕೊ: ವಿಶ್ವದ ಬಹುತೇಕ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸಿರುವ ಭಯೋತ್ಪಾದನೆ ಹುಟ್ಟಡಗಿಸಲು ಸಾಮಾಜಿಕ ಜಾಲತಾಣಗಳ ಪಾತ್ರ ಕೂಡ ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ ಮೈಕ್ರೋ ಬ್ಯಾಗ್ ಟ್ವಿಟರ್ ಬಳಿಕ ಈಗ ಫೇಸ್ಬುಕ್ ಕೂಡ ಕಾರ್ಯಾಚರಣೆಗೆ ಇಳಿಯಿತು. ಕಳೆದ ಕೆಲ ತಿಂಗಳಿಂದೀಚೆ ಟ್ವಿಟರ್ ವೇದಿಕೆ ಬಸಿಕೊಂಡು ಯುವಕರ ಗಮನ ಸೆಳೆದು, ಉಗ್ರ ಸಂಘಟನೆ ಸೇರಿಕೊಳ್ಳಲು ಪ್ರಚೋದಿಸುತ್ತಿದ್ದ ಭಯೋತ್ಪಾದಕರ ಖಾತೆಗಳನ್ನು ಹುಡುಕಿ ಅಂದಾಜು 2 ಲಕ್ಷದ 35 ಸಾವಿರ ಖಾತೆಗಳನ್ನು ನಿಷ್ಕ್ರಿಯಗೊಳಿಸಿತ್ತು. ಅದೇ ರೀತಿ ಇದೀಗ ಫೇಸ್ಬುಕ್ ಕೂಡ ಉಗ್ರವಾದಕ್ಕೆ ಪ್ರಚೋದನೆ ನೀಡಿ, ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವ ಖಾತೆಗಳ ಮೇಲೆ ಕಣ್ಣಿಡಲು ನಿರ್ಧರಿಸಿ ಕಾರ್ಯಾಚರಣೆ ಆರಂಭಿಸಿತು. ಇದಕ್ಕಾಗಿಯೇ ಸಿಬ್ಬಂದಿ ನೇಮಕಕ್ಕೂ ಮುಂದಾಯಿತು.ಕೌಂಟರ್ಟೆರರಿಸಮ್ ರಿಸರ್ಚರ್ವಿಭಾಗ ತೆರೆಯುವುದಾಗಿಯೂ ಹೇಳಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಭಯೋತ್ಪಾದನೆಯ ಪೋಸ್ಟ್ಗಳು ಕಂಡುಬಂದಲ್ಲಿ ಹೊಸ ಮಾದರಿ ತಂತ್ರಜ್ಞಾನದ ಟೂಲ್ ಮೂಲಕ ಅವರ ಚಟುವಟಿಕೆಗಳ ಮೇಲೆ ನಿಗಾ ಇಡುವುದು. ಏನೆಲ್ಲಾ ಪೋಸ್ಟ್ಗಳನ್ನು ಹಾಕಿರುತ್ತಾರೆ ಎನ್ನುವುದರ ಆಧಾರದ ಮೇಲೆ ಅವರ ಜಾತಕ ಜಾಲಾಡಿ, ಹಿಂಬಾಲಿಸುವುದೇ ಅವರ ಕೆಲಸವಾಗಲಿದೆ. ಅಷ್ಟೇ ಅಲ್ಲ ಒಂದೊಮ್ಮೆ ಅಂಥ ಚಟುವಟಿಕೆಗಳು ಕಂಡುಬಂದಲ್ಲಿ ಅವರ ಖಾತೆ ನಿಷ್ಕ್ರಿಯಗೊಳಿಸುವ ಅಧಿಕಾರ ಕೂಡ ಅವರು ಹೊಂದಿರುತ್ತಾರೆ ಎನ್ನಲಾಯಿತು.

ಕಳೆದ ಕೆಲವು ವರ್ಷಗಳಿಂದೀಚೆ ಭಯೋತ್ಪಾದಕರು ಟ್ವಿಟರ್ ಮೂಲಕ ಸಂಘಟನೆಗೆ ಯುವಕರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವುದು ಗಮನಕ್ಕೆ ಬಂದ ಬಳಿಕ ಟ್ವಿಟರ್ ಕಂಪನಿ ಕಾರ್ಯಾಚರಣೆಗಿಳಿದಿತ್ತು.
2008: ಮ್ಯೂಚುವಲ್ ಫಂಡ್ಗಳ ನಗದು ಹಣದ ಅಗತ್ಯ ಪೂರೈಸಲು ಮತ್ತು ಹಣ ಬಿಡುಗಡೆ ಒತ್ತಡ ನಿವಾರಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಅಲ್ಪಾವಧಿ ಸಾಲದ ರೂಪದಲ್ಲಿ ರೂ 20 ಸಾವಿರ ಕೋಟಿಗಳಷ್ಟು ಬಿಡುಗಡೆ ಮಾಡಲು ನಿರ್ಧರಿಸಿತು. ಹಣಕಾಸು ಮಾರುಕಟೆಯಲ್ಲಿ ಉದ್ಭವಿಸಿದ ಸಾಲದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹಣ ಬಿಡುಗಡೆಯ ಒತ್ತಡ ನಿವಾರಿಸಿಕೊಳ್ಳಲು ಈ ಕ್ರಮವು ಫಂಡ್ಗಳಿಗೆ ಗಮನಾರ್ಹವಾಗಿ ನೆರವಾಗುವುದು.

2008: ಉತ್ತರ ಭಾರತದ ಐದು ರಾಜ್ಯಗಳಲ್ಲಿ ನವೆಂಬರ್ 14ರಿಂದ ಡಿ.4ರ ನಡುವೆ ವಿಧಾನಸಭಾ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವು ನಿರ್ಧರಿಸಿ ದಿನಾಂಕಗಳನ್ನು ಪ್ರಕಟಿಸಿತು.. ಆದರೆ ರಾಷ್ಟ್ರಪತಿ ಆಳ್ವಿಕೆಯಲ್ಲಿದ್ದ ಜಮ್ಮು - ಕಾಶ್ಮೀರದಲ್ಲಿ ತತ್ ಕ್ಷಣಕ್ಕೆ ಚುನಾವಣೆ ನಡೆಸದಿರಲು ಆಯೋಗ ತೀರ್ಮಾನಿಸಿತು. ಛತ್ತೀಸ್ಘಡ, ಮಧ್ಯಪ್ರದೇಶ, ದೆಹಲಿ, ಮಿಜೋರಾಂ ಮತ್ತು ರಾಜಸ್ಥಾನಗಳಲ್ಲಿ ಚುನಾವಣೆ ನಡೆಯುವುದು.

2008: ಕೀಲ್ಲಿನೋಚಿ ಪಟ್ಟಣದ ಮೇಲೆ ಹತೋಟಿ ಸಾಧಿಸಲು ನಡೆದ ಭೀಕರ ಗುಂಡಿನ ಕಾಳಗದಲ್ಲಿ ಭದ್ರತಾ ಪಡೆಯ ಮೂವರು ಯೋಧರು ಹಾಗೂ 38 ಮಂದಿ ಎಲ್ ಟಿ ಟಿ ಇ ಉಗ್ರರು ಹತರಾದರು. ಕೀಲ್ಲಿನೋಚಿ ಪಟ್ಟಣವನ್ನು ಭದ್ರತಾ ಪಡೆಗಳು ಸುತ್ತುವರೆದದ್ದರಿಂದ ಅಪಾರ ಪ್ರಮಾಣದ ಹಾನಿ ಅನುಭವಿಸಿದ ಎಲ್ಟಿಟಿಇ ಕದನವನ್ನು ತೀವ್ರಗೊಳಿಸಿದ್ದರಿಂದ ಸಾವು ನೋವುಗಳು ಹೆಚ್ಚಿದವು..

2008: ಹಿರಿಯ ಪತ್ರಕರ್ತ ಎಂ. ವಿ. ಕಾಮತ್ ಅವರಿಗೆ ಕೋಯಿಕೋಡಿನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್. ಕೆ. ಅಡ್ವಾಣಿ ಅವರು ವಿ. ಎಂ. ಕೊರಾಟ್ ಪ್ರಶಸ್ತಿ ನೀಡಿ ಗೌರವಿಸಿದರು. ತಪಸ್ಯ ಕಲಾ ಸಾಹಿತ್ಯ ವೇದಿಕೆ ಸ್ಥಾಪಿಸಿರುವ ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು, ಫಲಕ ಹೊಂದಿದೆ.

2007: ದ್ವಿಪಕ್ಷೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರ ಅಭಿವೃದ್ಧಿಗೆ ಕೊಡುಗೆ ನೀಡಿದ ರಷ್ಯಾದ ನಾಲ್ವರು ವಿಜ್ಞಾನಿಗಳಿಗೆ ಭಾರತವು ಪ್ರಶಸ್ತಿ ನೀಡಿ ಗೌರವಿಸಿತು. ಭಾರತ ರಷ್ಯಾ ಜಂಟಿ ವಿಜ್ಞಾನ ಮತ್ತು ತಂತ್ರಜ್ಞಾನ ಕಾರ್ಯಕ್ರಮ ಮಂಡಳಿಯ ಉಪಾಧ್ಯಕ್ಷೆ ಗೊರಿ ಮಾರ್ಚುಕ್ ರಷ್ಯಾದ ವಿಜ್ಞಾನ ಅಕಾಡೆಮಿಯ (ಆರ್ ಎ ಎಸ್) ಅಧ್ಯಕ್ಷ ಯುರಿ ಒಸಿಪೊವ್, ಆರ್ ಎ ಎಸ್ ನ ಅಜೈವಿಕ ರಾಸಾಯನಿಕ ಸಂಸ್ಥೆಯ ಎಫ್. ಖುಜ್ನೇತ್ಸೊವ್ ಮತ್ತು ಕಂಪ್ಯೂಟರ್ ಏಯ್ಡೆಡ್ ಡಿಸೈನಿನ ಒಲೆಗ್ ಬೆಲೊಟ್ಸೆರ್ ಅವರಿಗೆ ಪ್ರಶಸ್ತಿ ಲಭಿಸಿತು.

2007: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ವಾಡೋ ಅಂತಾರಾಷ್ಟ್ರೀಯ ಕರಾಟೆ ಸಂಸ್ಥೆ ಆಯೋಜಿಸಿದ ಸುಜುಕಿ ಕಪ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್ ನ ಮಹಿಳೆಯರ ಬ್ಲ್ಯಾಕ್ ಬೆಲ್ಟ್ `ಕುಮಿಟೆ' (45-50 ಕೆ.ಜಿ.) ವಿಭಾಗದಲ್ಲಿ ಚಾಕಚಕ್ಯತೆಯ ಪ್ರದರ್ಶನ ನೀಡಿದ ತಾರಾ ಲೋಲನಾಥ್ ರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಆಗಿ ಹೊರಹೊಮ್ಮಿದರು.

2007: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಸೇನಾ ಕ್ರೀಡಾಕೂಟದ ನಾಲ್ಕನೇ ಅಧ್ಯಾಯವು ರಾಷ್ಟ್ರಪತಿ ಹಾಗೂ ಭಾರತೀಯ ಸೇನೆಯ ಪ್ರಧಾನ ದಂಡನಾಯಕಿ ಪ್ರತಿಭಾ ಪಾಟೀಲ್ ಅವರ `ಕ್ರೀಡಾಕೂಟ ಆರಂಭವಾಗಿದೆ' ಎಂಬ ಘೋಷಣೆಯೊಂದಿಗೆ ಬೆಂಗಳೂರಿನಲ್ಲಿ ಸಡಗರದೊಂದಿಗೆ ಆರಂಭಗೊಂಡಿತು. ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಚಿತ್ತಾಕರ್ಷಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಲಾತ್ಮಕ ಕಾರ್ಯಕ್ರಮಗಳು ಹಾಗೂ ಸೇನಾ ಪಡೆಯ ಶಕ್ತಿ ಪ್ರದರ್ಶನ ಗಚ್ಚಿಬೌಳಿಯ ಜಿ.ಎಂ.ಸಿ.ಬಾಲಯೋಗಿ ಕ್ರೀಡಾಂಗಣದಲ್ಲಿ ಸೇರಿದ್ದ ಸಹಸ್ರಾರು ಕ್ರೀಡಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

2007: ಗುಜರಾತಿನ ಪಂಚಮಹಲಿನ ಪಾವಗಡ ಬೆಟ್ಟದ ಮೇಲಿನ ಪ್ರಸಿದ್ಧ ಮಹಾಕಾಳಿ ದೇವಸ್ಥಾನದ ಮಾರ್ಗದಲ್ಲಿ ಕಾಲ್ತುಳಿತದಿಂದ 15 ಭಕ್ತರು ಸಾವನ್ನಪ್ಪಿ , ಅನೇಕರು ಗಾಯಗೊಂಡರು. 2004ರಲ್ಲಿಯೂ ಇಲ್ಲಿ ಇಂತಹುದೇ ದುರಂತ ಸಂಭವಿಸಿ 9 ಮಂದಿ ಮೃತರಾಗಿದ್ದರು. ಬೆಟ್ಟದ ಮೇಲಿನ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಬೆಳಗ್ಗೆ ಸುಮಾರು 6 ಲಕ್ಷ ಭಕ್ತರು ದೇವಿ ದರ್ಶನಕ್ಕಾಗಿ ಸೇರಿದ್ದರು. ಬೆಟ್ಟದ ಇಕ್ಕಟ್ಟಾದ ಪಾಟಿಯಾಪುಲ್ ಬಳಿ ದಾರಿಯಲ್ಲಿ ಇಳಿಯುವವರು ಮತ್ತು ಹತ್ತುವವರ ನೂಕುನುಗ್ಗಲಿನಿಂದ ಈ ದುರಂತ ಸಂಭವಿಸಿತು.

2007: ಪಂಜಾಬಿನ ಲೂಧಿಯಾನದ ಶಿಂಗಾರ್ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರದಲ್ಲಿ ರಾತ್ರಿ ಬಾಂಬ್ ಸ್ಫೋಟ ಸಂಭವಿಸಿ ಆರು ಜನರು ಸತ್ತು ಇತರ 25ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ವಿವಾಹ ಬಾಹಿರ ಮತ್ತು ಅಕ್ರಮ ಸಂಬಂಧದಿಂದ ಹುಟ್ಟಿದ ಮಗು ಕೂಡ ತಂದೆಯಿಂದ ನಿರ್ವಹಣಾ ಭತ್ಯೆ ಪಡೆಯಲು ಅರ್ಹ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಅಪರಾಧ ದಂಡ ಸಂಹಿತೆ ಸೆಕ್ಷನ್ 125 ರ ಅನ್ವಯ ವಿವಾಹ ಬಾಹಿರ ಸಂಬಂಧದ ಮೂಲಕ ಜನಿಸುವ ಮಗುವಿಗೆ ತಂದೆ ನಿರ್ವಹಣಾ ಭತ್ಯೆ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಎಸ್.ಬಿ.ಸಿನ್ಹ ಹಾಗೂ ಹರ್ಜಿತ್ ಸಿಂಗ್ ಬೇಡಿ ಅವರನ್ನು ಒಳಗೊಂಡ ಪೀಠವು ಅಕ್ಟೋಬರ್ 12 ರಂದು ನೀಡಿದ ತೀರ್ಪಿನಲ್ಲಿ ತಿಳಿಸಿತು. ಈ ಸಂಬಂಧ ಡಿಂಪಲ್ ಗುಪ್ತಾ ಎಂಬುವವರು ತಮ್ಮ ತಾಯಿ ನರೇನ್ ದೇಸಾಯಿ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಅರ್ಜಿಯನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ತಳ್ಳಿಹಾಕಿತ್ತು. ಹೈಕೋರ್ಟ್ ಆದೇಶ ಬದಿಗಿರಿಸಿದ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿತು. ತಂದೆ ರಾಜೀವ್ ಗುಪ್ತ ಹಾಗೂ ತಾಯಿ ನರೇನ್ ದೇಸಾಯಿ ಹಿಮಾಚಲ ಪ್ರದೇಶದಲ್ಲಿ ಒಟ್ಟಿಗೆ ವಾಸವಾಗಿದ್ದಾಗ ತಾವು ಜನಿಸಿದ್ದು, ಈ ಹಿನ್ನೆಲೆಯಲ್ಲಿ ರಾಜೀಪ್ ಗುಪ್ತಾ ತಮಗೆ ನಿರ್ವಹಣಾ ವೆಚ್ಚ ನೀಡಬೇಕೆಂದು ಡಿಂಪಲ್ ಕೋರಿದ್ದರು. ನರೇನ್ ದೇಸಾಯಿ ರಾಮ್ ಪುರ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯಲ್ಲಿ 10 ನೇ ತರಗತಿ ಓದುತ್ತಿರುವಾಗಲೇ ಗರ್ಭವತಿ ಆಗಿದ್ದರು. ಆದರೆ ರಾಜೀವ್ ಗುಪ್ತ ಗರ್ಭಪಾತ ಮಾಡಿಸಿಕೊಳ್ಳುವಂತೆ ಆಕೆಗೆ ಬಲವಂತ ಮಾಡಿದ್ದರು. ವೈದ್ಯರು ಇದಕ್ಕೆ ಒಪ್ಪಿರಲಿಲ್ಲ ಎಂದು ಕೋರ್ಟಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿತ್ತು.

2007: ಅಮೆರಿಕದಿಂದ ಭಾರತಕ್ಕೆ ಆಮದಾಗುತ್ತಿರುವ ಸೇಬಿನ ಹಣ್ಣಿನಲ್ಲಿ ಸುಮಾರು 184 ಬಗೆಯ ಕೀಟಗಳು ಪತ್ತೆಯಾಗಿರುವುದಾಗಿ ಬ್ರಿಟನ್ ಮೂಲದ ಅಂತಾರಾಷ್ಟ್ರೀಯ ಕೃಷಿ ಸಂಘಟನೆ ಎಚ್ಚರಿಸಿತು. ಈ ಸಂಘಟನೆಯ ವರದಿ ಪ್ರಕಾರ, ಅಮೆರಿಕದಲ್ಲಿ ಬೆಳೆಯುವ ಸೇಬಿನಲ್ಲಿ 184 ಕ್ರಿಮಿ- ಕೀಟಗಳಿದ್ದು, ಇವುಗಳಲ್ಲಿ 94 ಕ್ರಿಮಿ-ಕೀಟಗಳನ್ನು ಫೈಟೋ ಸ್ಯಾನಿಟರಿ (ಸಸ್ಯ ಸಂಬಂಧಿ ರೋಗ ಪರೀಕ್ಷೆ) ಎಂಬ ಪರೀಕ್ಷೆಗೆ ಒಳಪಡಿಸಿ, ಇವುಗಳಿಂದ ಆಹಾರ ಸುರಕ್ಷತೆಗೆ ಏನಾದರೂ ತೊಂದರೆಯಾಗುತ್ತದೆಯೇ ಎಂಬುದನ್ನೂ ಅರಿಯಬೇಕೆಂದು ವರದಿ ಹೇಳಿತು. ವಿಶ್ವದಾದ್ಯಂತ ಸೇಬಿನಲ್ಲಿ 381 ಕ್ರಿಮಿ-ಕೀಟಗಳು ಕಂಡುಬಂದಿದೆ. ಅದರಲ್ಲಿ 111 ಕ್ರಿಮಿ-ಕೀಟಗಳು ಭಾರತದ ಸೇಬುಗಳಲ್ಲಿ ಇರುವುದಾಗಿ ಗೊತ್ತಾಗಿದೆ. ಇಂಥ ಕ್ರಿಮಿ-ಕೀಟಯುಕ್ತ ಹಣ್ಣುಗಳು ದೇಶದೊಳಕ್ಕೆ ಆಮದಾಗುವುದನ್ನು ತಡೆಯಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಂಪರ್ಕ ನಿಷೇಧ ವಿಭಾಗವನ್ನು ಮತ್ತಷ್ಟು ಚುರುಕುಗೊಳಿಸಬೇಕು. ಮಾತ್ರವಲ್ಲ, ಅಂತಾರಾಷ್ಟ್ರೀಯ ಸಾಂಪ್ರದಾಯಿಕ ಸಸ್ಯ ಸಂರಕ್ಷಣಾ ಸಂಸ್ಥೆ ಹಣ್ಣುಗಳಲ್ಲಿ ಹೊಸ ಹೊಸ ಕ್ರಿಮಿ-ಕೀಟಗಳು ಉತ್ಪತ್ತಿಯಾಗುತ್ತಿರುವುದನ್ನು ಗುರುತಿಸಬೇಕು ಎಂದು ಎಂದು ಕೃಷಿ ಮತ್ತು ಮೌಲ್ಯವರ್ಧಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಇಲಾಖೆಯ ನಿರ್ದೇಶಕ ಎಸ್. ದೇವ್ ಹೇಳಿದರು.

2006: ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿಯಾಗಿ ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಬಾನ್ ಕಿ ಮೂನ್ ಅಧಿಕೃತವಾಗಿ ನಿಯುಕ್ತಿಗೊಂಡರು. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ 192 ಸದಸ್ಯ ರಾಷ್ಟ್ರಗಳು ಬಾನ್ ಆಯ್ಕೆಯನ್ನು ಸಮರ್ಥಿಸಿದವು. ಬಾನ್ ಅವಿರೋಧವಾಗಿ ವಿಶ್ವಸಂಸ್ಥೆಯ ಚುಕ್ಕಾಣಿ ಹಿಡಿದರು. ಇದಕ್ಕೂ ಮುನ್ನ ನಡೆದ ಪೂರಕ ಚುನಾವಣೆಗಳಲ್ಲಿ ಭಾರತದ ಶಶಿ ತರೂರ್ ಸೇರಿದಂತೆ ಇತರ ಸ್ಪರ್ಧಿಗಳನ್ನು ಬಾನ್ ಹಿಂದೆ ಹಾಕಿದ್ದರು.

2006: ಟೋಕಿಯೋ ಕರಾವಳಿ ಪ್ರದೇಶದಲ್ಲಿ ಬೆಳಗಿನ ಜಾವ ಭೂಕಂಪ ಸಂಭವಿಸಿತು. ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ಇತ್ತು.

2006: ಕೊಲೆ ಬೆದರಿಕೆ ಹಾಕಿ ವಿಮಾನ ಅಪಹರಿಸಿದ್ದ ಪೀಟರ್ ಡಫ್ಫಿ ಎಂಬ ಅಪಹರಣಕಾರ ಏರ್ ಇಂಡಿಯಾದ ಮಾಜಿ ಪೈಲಟ್ ಉಮೇಶ ಸಕ್ಸೇನಾ ಅವರನ್ನು ಮುಂಬೈ ಹೊರವಲಯದ ಅವರ ಮನೆಯಲ್ಲಿ ಭೇಟಿ ಮಾಡಿ ಇಪ್ಪತ್ತೈದು ವರ್ಷಗಳ ಹಿಂದೆ ಕೊಟ್ಟ ಮಾತನ್ನು ಈಡೇರಿಸಿದ. ಈ ವ್ಯಕ್ತಿ 1981ರ ನವೆಂಬರ್ 25ರಂದು 44 ಮಂದಿ ಕೂಲಿ ಸಿಪಾಯಿಗಳೊಂದಿಗೆ ವಿಮಾನಕ್ಕೆ ಮುತ್ತಿಗೆ ಹಾಕಿ ಸಕ್ಸೇನಾ ಅವರಿಗೆ ಕೊಲೆ ಬೆದರಿಕೆ ಹಾಕಿ 79 ಜನ ಪ್ರಯಾಣಿಕರ ಸಹಿತವಾಗಿ ಅವರು ಚಲಾಯಿಸುತ್ತಿದ್ದ ವಿಮಾನವನ್ನು ಸೀಷೆಲ್ಸ್ ವಿಮಾನ ನಿಲ್ದಾಣದಿಂದ ಡರ್ಬಾನಿಗೆ ಅಪಹರಿಸಿದ್ದ. ಡರ್ಬಾನಿನಲ್ಲಿ ವಿಮಾನದಿಂದ ಇಳಿದ ಬಳಿಕ ಭವಿಷ್ಯದಲ್ಲಿ ಒಂದು ದಿನ ಮತ್ತೆ ಭೇಟಿ ಮಾಡುವುದಾಗಿ ಸಕ್ಸೇನಾಗೆ ಮಾತು ನೀಡಿದ್ದ. ಆತ ವಿಮಾನ ಅಪಹರಣ ಕೃತ್ಯಕ್ಕಾಗಿ ದಕ್ಷಿಣ ಆಫ್ರಿಕಾದ ಸೆರೆಮನೆಯಲ್ಲಿ 20 ತಿಂಗಳ ಸೆರೆವಾಸ ಅನುಭವಿಸಿದ್ದ.

2004: ನಟ ಲೋಕೇಶ್ ನಿಧನ.

2004: ನಟಿ ನಿರೂಪಾ ರಾಯ್ ನಿಧನ.

2004: ಆರೆಸ್ಸೆಸ್ ಧುರೀಣ ದತ್ತೋಪಂತ ಠೇಂಗಡಿ ನಿಧನ.

1998: ಭಾರತೀಯ ಆರ್ಥಿಕತಜ್ಞ , ಕೇಂಬ್ರಿಜ್ಜಿನ ಟ್ರಿನಿಟಿ ಕಾಲೇಜಿನ ಮಾಸ್ಟರ್, ಅಮರ್ತ್ಯಸೇನ್ ಅವರು ಅರ್ಥಶಾಸ್ತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್ ಪ್ರಶಸ್ತಿ ಗೆದ್ದುಕೊಂಡರು.

1997: ಅರುಂಧತಿ ರಾಯ್ ಅವರು ಸಾಹಿತ್ಯಕ್ಕಾಗಿ ನೀಡಲಾಗುವ `ಬೂಕರ್ ಪ್ರಶಸ್ತಿ'ಯನ್ನು ಗೆದ್ದುಕೊಂಡರು. ಅವರ `ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' ಪುಸ್ತಕಕ್ಕೆ ಈ ಪ್ರಶಸ್ತಿ ಬಂತು.

1991: ಬರ್ಮಾದ (ಈಗಿನ ಮ್ಯಾನ್ಮಾರ್) ವಿರೋಧ ಪಕ್ಷದ ನಾಯಕಿ ಅಂಗ್ ಸಾನ್ ಸು ಕೀ ಅವರು ತಮ್ಮ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಮಾಡಿದ ಹೋರಾಟಕ್ಕಾಗಿ ನೊಬೆಲ್ ಪ್ರಶಸ್ತಿ ಗಳಿಸಿದರು.

1983:ಡಾ. ಐ.ಜಿ. ಪಟೇಲ್ ಅವರು ಲಂಡನ್ನಿನ ಸ್ಕೂಲ್ ಆಫ್ ಇಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸಿನ ನಿರ್ದೇಶಕರಾಗಿ (ಡೈರೆಕ್ಟರ್) ನೇಮಕಗೊಂಡರು.

1980: ಕ್ರಿಕೆಟಿಗ ಎಸ್.ಎನ್. ಬ್ಯಾನರ್ಜಿ ನಿಧನ.

1971: ಸಾಹಿತಿ ಡಾ. ಸಂತೋಷ ಕುಮಾರ ಶೆಟ್ಟಿ ಜನನ.

1964: ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಅವರು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಾದರು.

1960: ಸಾಹಿತಿ ಎಸ್. ಮಂಜುನಾಥ್ ಜನನ.

1956: ಬಿ.ಆರ್. ಅಂಬೇಡ್ಕರ್ ಅವರು ನಾಗಪುರದಲ್ಲಿ ಮಹರ್ ಸಮುದಾಯಕ್ಕೆ ಸೇರಿದ ತಮ್ಮ 2 ಲಕ್ಷ ಮಂದಿ ಅನುಯಾಯಿಗಳೊಂದಿಗೆ ಬೌದ್ಧಧರ್ಮಕ್ಕೆ ಸೇರ್ಪಡೆಯಾದರು.

1947: ಎರಡನೇ ಜಾಗತಿಕ ಸಮರ ಕಾಲದ ಫೈಟರ್ ಪೈಲಟ್ ಚುಕ್ ಯೀಗರ್ ಅವರು ಶಬ್ದಕ್ಕಿಂತಲೂ ವೇಗವಾಗಿ ಸಾಗಿದ ಪ್ರಥಮ ಮಾನವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಕೆಟ್ ಚಾಲಿತ ಬೆಲ್ ಎಕ್ಸ್ ಎಸ್-1 ಏರ್ ಪ್ಲೇನ್ ಮೂಲಕ ಕ್ಯಾಲಿಫೋರ್ನಿಯಾದ ಮುರಾಕ್ ಡ್ರೈ ಲೇಕ್ ಮೇಲಿನಿಂದ ಹಾರಿ ಅವರು ಈ ಸಾಧನೆ ಮಾಡಿದರು.

1945: ಸಾಹಿತಿ ಮಾಲತಿ ರಾಮದಾಸ್ ಜನನ.

1944: ಜರ್ಮನ್ ಫೀಲ್ಡ್ ಮಾರ್ಷಲ್ ಎರ್ವಿನ್ ರೊಮ್ಮೆಲ್ ಆತ್ಮಹತ್ಯೆ ಮಾಡಿಕೊಂಡ. ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ವಿರುದ್ಧ ಒಳಸಂಚು ಆಪಾದನೆಗೆ ಗುರಿಯಾಗಿ ಮರಣದಂಡನೆ ಎದುರಿಸುವುದಕ್ಕೆ ಬದಲಾಗಿ ಆತ್ಮಹತ್ಯೆ ಲೇಸು ಎಂದು ಭಾವಿಸಿ ಆತ ಈ ಕೃತ್ಯ ಎಸಗಿದ.

1938: ಖ್ಯಾತ ಪ್ರಬಂಧಕಾರ ವೀರೇಂದ್ರ ಸಿಂಪಿ ಅವರು ಜಾನಪದ ತಜ್ಞ ಸಿಂಪಿ ಲಿಂಗಣ್ಣ ಮತ್ತು ಸೊಬಲವ್ವ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣದಲ್ಲಿ ಜನಿಸಿದರು.

1884: ಭಾರತೀಯ ಕ್ರಾಂತಿಕಾರಿ ಲಾಲಾ ಹರ ದಯಾಳ್ (1884-1939) ಜನ್ಮದಿನ.

No comments:

Post a Comment