Sunday, October 21, 2018

ಇಂದಿನ ಇತಿಹಾಸ History Today ಅಕ್ಟೋಬರ್ 21

ಇಂದಿನ ಇತಿಹಾಸ History Today ಅಕ್ಟೋಬರ್ 21
2018: ನವದೆಹಲಿ: ಆಜಾದ್ ಹಿಂದ್ ಫೌಜ್ ಸರ್ಕಾರ ಸ್ಥಾಪನೆಯ ೭೫ನೇ ವರ್ಷಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಾರಿತ್ರಿಕ ಕೆಂಪುಕೋಟೆಯಲ್ಲಿ ತ್ರಿವರ್ಣಧ್ವಜವನ್ನು ಅರಳಿಸಿ, ನಾಮಫಲಕವನ್ನು ಅನಾವರಣಗೊಳಿಸುವ ಅಭೂತಪೂರ್ವ ನಡೆಯ ಮೂಲಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ವಿಶಿಷ್ಟ ಗೌರವವನ್ನು ಅರ್ಪಿಸಿದರು. ಬಳಿಕ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೇವಲ ಒಂದು ಕುಟುಂಬದ ಅನುಕೂಲಕ್ಕಾಗಿ ನೇತಾಜಿ ಸುಭಾಶ್ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರ ಕೊಡುಗೆಯನ್ನು ಗೌಣಗೊಳಿಸಲು ನಡೆಸಿದ ಯತ್ನಗಳಿಗಾಗಿ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿ, ನೇತಾಜಿ ಕನಸುಗಳನ್ನು ನನಸುಗೊಳಿಸಲು ತಮ್ಮ ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿದರು. ನೇತಾಜಿ ಸುಭಾಶ್ ಚಂದ್ರ ಬೋಸ್ಅವರ ಸಹೋದರನ ಮಗ ಚಂದ್ರಕುಮಾರ ಬೋಸ್, ಐಎನ್ ನೇತಾರ ಲಾಲ್ತಿ ರಾಮ್ ಮತ್ತು ಬ್ರಿಗೇಡಿಯರ್ಆರ್.ಎಸ್. ಚಿಕ್ಕಾರ ಅವರೂ ಸಂದರ್ಭದಲ್ಲಿ ಹಾಜರಿದ್ದರು೧೯೪೩ರ ಅಕ್ಟೋಬರ್ ೨೧ರಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದ್ದರು. ನೇತಾಜಿ ಬೋಸ್ ಅವರು ತಾತ್ಕಾಲಿಕ ಗಡೀಪಾರು ಭಾರತೀಯ ಸರ್ಕಾರದ ಮುಖ್ಯಸ್ಥರಾಗಿದ್ದರು. ನೇತಾಜಿ ಅವರು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳಿರುವ ಭಾರತದ ಭರವಸೆಯನ್ನು ನೀಡಿದ್ದರು. ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಹೆಮ್ಮೆ ಹೊಂದಿದ್ದ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ ಸಮೃದ್ಧ ರಾಷ್ಟ್ರದ ವಚನವನ್ನು ಅವರು ನೀಡಿದ್ದರು. ಒಡೆದು ಆಳುವ ನೀತಿಯನ್ನು ಬೇರು ಸಹಿತವಾಗಿ ನಿರ್ಮೂಲನಗೈಯುವ ಭರವಸೆಯನ್ನು ಅವರು ಕೊಟ್ಟಿದ್ದರು. ಇಷ್ಟೊಂದು ವರ್ಷಗಳಾದರೂ ಅವರ ಕನಸುಗಳು ನನಸಾಗಿಯೇ ಉಳಿದಿವೆ ಎಂದು ಮೋದಿ ಹೇಳಿದರುಅಗಣಿತ ತ್ಯಾಗ, ಬಲಿದಾನಗಳ ಬಳಿಕ ನಾವು ಸ್ವರಾಜ್ಯದತ್ತ ತಲುಪಿದ್ದೇವೆ. ಬಂದೂಕು ಮತ್ತು ರಕ್ತದ ಮೂಲಕ ನಾವು ನಮ್ಮ ಸ್ವಾತಂತ್ರ್ಯವನ್ನು ಗಳಿಸಬೇಕು ಎಂದು ನೇತಾಜಿ ಹೇಳಿದ್ದರು. ಸ್ವಾತಂತ್ರ್ಯ  ಗಳಿಸಿದ ಬಳಿಕ ನಮಗೆ ಸದೃಢ ರಕ್ಷಣಾ ಪಡೆಯ ಅಗತ್ಯವಿದೆ ಎಂದು ಅವರು ಹೇಳಿದ್ದರು. ಪ್ರಬಲ ರಕ್ಷಣಾ ಪಡೆಯ ಕನಸು ಇಂದು ನನಸಾಗಿದೆ ಎಂದು ಘೋಷಿಸಲು ನಾನು ಹೆಮ್ಮೆ ಪಡುತ್ತೇನೆ ಎಂದು ಪ್ರಧಾನಿ ಹೇಳಿದರು.
ಸ್ವಾತಂತ್ರ್ಯ ಸಮರದ ಭಾಗವಾಗಿದ್ದ ಆಜಾದ್ ಹಿಂದ್ ಫೌಜ್ ೧೯೪೦ರ ದಶಕದಲ್ಲಿ ಮಿತ್ರಪಡೆಗಳ ಜೊತೆ ಸೇರಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೆಣಸುವ ಉದ್ದೇಶದೊಂದಿಗೆ ವಿದೇಶದಲ್ಲಿ ಜನ್ಮತಾಳಿತ್ತು. ಬ್ರಿಟಿಷರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಆಜಾದ್ ಹಿಂದ್ ಸರ್ಕಾರದ ಅಸ್ತಿತ್ವವು ಹೆಚ್ಚಿನ ಕಾನೂನು ಬದ್ಧತೆಯನ್ನು ಒದಗಿಸಿತ್ತು. ನಿರ್ದಿಷ್ಟವಾಗಿ, ಆಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯು (ಐಎನ್ ) ಸ್ವಾತಂತ್ರ್ಯ ಹಸ್ತಾಂತರಕ್ಕೆ ನಿರ್ಣಾಯಕ ಪ್ರಚೋದನೆಯಾಗಿತ್ತು.
ಸುಭಾಶ್ ಚಂದ್ರ ಬೋಸ್ ಅವರ ನಿಕಟವರ್ತಿಯೊಬ್ಬರು ನೀಡಿದ ಆಜಾದ್ ಹಿಂದ್ ಪೌಜ್  ಟೋಪಿಯನ್ನು ಧರಿಸಿಕೊಂಡೇ ಮಾತನಾಡಿದ ಪ್ರಧಾನಿಭಾರತ ಎಂದಿಗೂ ಇತರರ ನೆಲದ ಮೇಲೆ ಕಣ್ಣು ಹಾಕುವುದಿಲ್ಲ. ಆದರೆ ತನ್ಮ ಸಾರ್ವಭೌಮತ್ವನ್ನು ಪ್ರಶ್ನಿಸಿದರೆ ದುಪ್ಪಟ್ಟು ಶಕ್ತಿಯೊಂದಿಗೆ ಮರುಏಟು ನೀಡುವುದು ಎಂದು ಹೇಳಿದರು. ಸಶಸ್ತ್ರ ಪಡೆಗಳಿಗೆ ಅತ್ಯುತ್ತಮ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ನಿಟ್ಟಿನಲಿ ಸರ್ಕಾರ ಕೆಲಸ ಮಾಡುತ್ತಿದೆ. ಉತ್ತಮ ಸವಲತ್ತುಗಳನ್ನು ಒದಗಿಸುವ ಮೂಲಕ ಯೋಧರ ಜೀವನವನ್ನು ಹಸನುಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಅವರು ನುಡಿದರು. ನಿಯಂತ್ರಣ ರೇಖೆ ದಾಟಿ ಸರ್ಜಿಕಲ್ ನಡೆಸುವ ಮತ್ತು ಮಾಜಿ ಯೋಧರಿಗೆಸಮಾನ ಶ್ರೇಣಿ, ಸಮಾನ ಪಿಂಚಣಿ ಸವಲತ್ತುಗಳನ್ನು ಒದಗಿಸುವ ನಿರ್ಧಾರಗಳನ್ನು ಕೂಡಾ ತಮ್ಮ ಸರ್ಕಾರ ಕೈಗೊಂಡಿದೆ ಎಂದು ಅವರು ಹೇಳಿದರು.  ‘ಬೇರೆಯವರ ಭೂಪ್ರದೇಶದತ್ತ ಕಣ್ಣು ಹಾಕುವ ಪರಂಪರೆ ಭಾರತದ್ದಲ್ಲ, ಆದರೆ ನಮ್ಮ ಸಾರ್ವಭೌಮತ್ವಕ್ಕೆ ಸವಾಲು ಹಾಕಿದರೆ, ದುಪ್ಪಟ್ಟು ಶಕ್ತಿಯೊಂದಿಗೆ ನಾವು ಪ್ರತಿದಾಳಿ ನಡೆಸುತ್ತೇವೆ ಎಂದು ನುಡಿದ ಪ್ರಧಾನಿ, ರಾಷ್ಟ್ರ ಮತ್ತು ಅದರ ಸಂವಿಧಾನದ ಮೌಲ್ಯಗಳನ್ನು ಗುರಿಯಾಗಿಟ್ಟುಕೊಂಡು ಭಾರತದ ಒಳಗೆ ಮತ್ತು ಹೊರಗೆ ಕೆಲಸ ಮಾಡುತ್ತಿರುವ ಶಕ್ತಿಗಳ ಬಗ್ಗೆ ಜನತೆಗೆ ಎಚ್ಚರಿಕೆಯನ್ನೂ ನೀಡಿದರುಇಂತಹ ದುಷ್ಟ ಹಂಚಿಕೆಗಳನ್ನು ಸದೆ ಬಡಿಯಲು ರಾಷ್ಟ್ರೀಯತೆ ಮತ್ತು ಭಾರತೀಯತೆಯ ಭಾವನೆ ಇರುವುದು ಅತ್ಯಗತ್ಯ ಎಂದು ಪ್ರಧಾನಿ ಹೇಳಿದರು. ಐಎನ್ಎಯ ಸರ್ವ ಮಹಿಳಾ ಘಟಕವಾದ ರಾಣಿ ಝಾನ್ಸಿ ರೆಜಿಮೆಂಟ್ ಸ್ಥಾಪಿಸಲು ನಿರ್ಧರಿಸಿದಾಗ ಬೋಸ್ ಅವರು ವಿರೋಧ ಎದುರಿಸಬೇಕಾಗಿ ಬಂದಿದ್ದುದನ್ನು ಪ್ರಸ್ತಾಪಿಸಿದ ಪ್ರಧಾನಿ ’  ಅಕ್ಟೋಬರ್ 22ರಂದು ಈ ರೆಜಿಮೆಂಟ್ ಸ್ಥಾಪನೆಯ ೭೫ನೇ ವರ್ಷ ಪೂರ್ಣಗೊಳ್ಳುತ್ತದೆ ಎಂದು ನುಡಿದರು.  ಅಲ್ಪಾವಧಿ ಸೇವೆಯಿಂದ ಕಾಯಂ ಸೇವೆಗೆ ಬದಲಾಗಲು ಅವಕಾಶ ನೀಡುವ ಮೂಲಕ ಪ್ರಸ್ತುತ ಸರ್ಕಾರವು ಮಹಿಳೆಯರಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸುವ ನೇತಾಜಿ ಬೋಸ್ ಅವರ ಕನಸನ್ನು ನನಸು ಮಾಡಲು ಯತ್ನಿಸುತ್ತಿದೆ, ಇದಕ್ಕಾಗಿ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ಯತ್ನಿಸುತ್ತಿದೆ ಎಂದು ಮೋದಿ ಹೇಳಿದರು. ನಮ್ಮ ವಾಯುಪಡೆಯು ಮಹಿಳಾ ಸಮರ ಪೈಲಟ್ಗಳ ಮೊದಲ ತಂಡವನ್ನು ಹೊಂದಲು ಸಜ್ಜಾಗಿದೆ ಎಂದು ಅವರು ನುಡಿದರು. ‘ಒಂದು ಶ್ರೇಣಿ, ಒಂದು ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಜಿ ಯೋಧರಿಗೆ ೧೧,೦೦೦ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.  ೭ನೇ ವೇತನ ಆಯೋಗದ ಶಿಫಾರಸುಗಳನ್ನು ಒಳಗೊಂಡ ಯೋಜನೆಯು ಮಾಜಿ ಯೋಧರಿಗೆದುಪ್ಪಟ್ಟು ಕೊಡುಗೆ ಎಂದು ಮೋದಿ ಹೇಳಿದರು. ರಾಷ್ಟ್ರೀಯ ಸಮರ ಸ್ಮಾರಕವು ನಿರ್ಮಾಣದ ಅಂತಿಮ ಹಂತದಲ್ಲಿದೆ ಎಂದು ಪ್ರಧಾನಿ ನುಡಿದರು.

2018: ಶಬರಿಮಲೈ: ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪಿನ ಜಾರಿ ವಿರುದ್ಧ ಅಯ್ಯಪ್ಪ ಭಕ್ತರು ನಡೆಸುತ್ತಿರುವ ರಾಜ್ಯವ್ಯಾಪಿ ಪ್ರತಿಭಟನೆ ಐದನೇ ದಿನವಾದ ಭಾನುವಾರವೂ ಮುಂದುವರೆಯಿತು.  ಆಂಧ್ರಪ್ರದೇಶದ ಇಬ್ಬರು ಮಹಿಳೆಯರು ಶಬರಿಗಿರಿ ಏರಲಾಗದೆ ವಾಪಸಾದರು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅಕ್ಟೋಬರ್ 17ರ ಬುಧವಾರ ಮೊದಲ ಬಾರಿಗೆ ತೆರೆಯಲ್ಪಟ್ಟಿರುವ ದೇವಾಲಯ ಪ್ರವೇಶಕ್ಕೆ ಈವರೆಗೆ ೫೦ ವರ್ಷಕ್ಕಿಂತ ಕೆಳಗಿನ ಯಾರೇ ಮಹಿಳೆ ಪ್ರವೇಶಿಸದಂತೆ ತಡೆಯುವಲ್ಲಿ ಪ್ರತಿಭಟನಕಾರರು ಯಶಸ್ವಿಯಾದರು.  ಈದಿನ ಶಬರಿಮಲೈಗೆ ಬಂದ ೪೦ರ ಹರೆಯದ ಭಕ್ತೆಯರು ತಮ್ಮ ದೇವಾಲಯ ಭೇಟಿ ಯಾತ್ರೆಯ ಅಂಗವಾಗಿ ತಾವು ಶಬರಿಮಲೈಗೆ ಬಂದಿದ್ದು, ಅಯ್ಯಪ್ಪಸ್ವಾಮಿ ದೇವಾಲಯದ ವಿಧಿ ವಿಧಾನಗಳ ಬಗ್ಗೆ ತಮಗೆ ಅರಿವಿರಲಿಲ್ಲ ಹೇಳಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿದ ವರದಿ ತಿಳಿಸಿತು. ಪಂಪಾ ಮೂಲಶಿಬಿರದಲ್ಲಿ ಪ್ರತಿಭಟನಕಾರರು ಮಹಿಳೆಯರನ್ನು ತಡೆದಾಗ ಪೊಲೀಸರು ಅವರನ್ನು ಬಿಗಿಭದ್ರತೆಯೊಂದಿಗೆ ಕಂಟ್ರೋಲ್ ರೂಮಿಗೆ ಕರೆದೊಯ್ದರು.  ‘ಅವರು ಆಂಧ್ರಪ್ರದೇಶದಿಂದ ಬಂದಿರುವ ಯಾತ್ರಾತಂಡದ ಸದಸ್ಯರಾಗಿದ್ದಾರೆ. ಇತರ ದೇವಾಲಯಗಳ ಭೇಟಿಗೆ ಬಂದಿದ್ದ ಅವರಿಗೆ ಶಬರಿಮಲೈಯ ವಿಶೇಷ ವಿಧಿಗಳ ಬಗ್ಗೆ ಗೊತ್ತಿರಲಿಲ್ಲ ಎಂದು ಐಜಿಪಿ ಶ್ರೀಜಿತ್ ಅವರು ಮಾಧ್ಯಮಗಳಿಗೆ ತಿಳಿಸಿದರು. ಮಹಿಳೆಯರಿಬ್ಬರೂ ತಾವು ಮುಂದುವರೆಯಲು ಇಚ್ಛಿಸುವುದಿಲ್ಲ ಎಂಬುದಾಗಿ ಲಿಖಿತ ಹೇಳಿಕೆ ನೀಡಿದ್ದಾರೆ ಎಂದೂ ಪೊಲೀಸರು ತಿಳಿಸಿದರು. ಇಬ್ಬರನ್ನೂ ಅವರ ವಾಹನ ನಿಲ್ಲಿಸಲಾಗಿದ್ದ ನಿಲಕ್ಕಲ್ಗೆ ಕರೆದೊಯ್ದು ಬಿಡಲಾಯಿತು. ತಮಿಳುನಾಡಿನ ಮಹಿಳೆಯೊಬ್ಬರನ್ನು ದೇವಾಲಯದ ಅತಿ ಸಮೀಪದಲ್ಲೇ ೫೦ ವರ್ಷಕ್ಕಿಂತ ಕೆಳಗಿನವರೆಂದು ಆಪಾದಿಸಿ ಪ್ರತಿಭಟನಕಾರರು ತಡೆದ ಒಂದು ದಿನದ ಬಳಿಕ ಈದಿನದ ಘಟನೆ ಘಟಿಸಿತು. ತಮಿಳುನಾಡಿನ ತಿರುಚ್ಚಿಯ ಲತಾ ಕುಮಾರ್ ಎಂಬ ೫೨ರ ಹರೆಯದ ಮಹಿಳೆ ಶಬರಿಮಲೈಗೆ ವರ್ಷ ತನ್ನ ಎರಡನೇ ವರ್ಷದ ಯಾತ್ರೆ ಸಲುವಾಗಿ ಆಗಮಿಸಿದ್ದು, ಆಕೆ ಆಧಾರ್ ಕಾರ್ಡ್ ತೋರಿಸಿದ ಬಳಿಕ ಮುಂದಕ್ಕೆ ಸಾಗಲು ಅವಕಾಶ ನೀಡಲಾಗಿತ್ತು. ದಲಿತ ಮಹಿಳಾ ನಾಯಕಿ ಎಸ್ ಪಿ ಮಂಜು (೩೮) ಅವರು ಶನಿವಾರ ದೇವಾಲಯಕ್ಕೆ ಭೇಟಿ ನೀಡಲು ಯೋಜನೆ ರೂಪಿಸಿಕೊಂಡಿದ್ದರು. ಭಾರೀ ಪೊಲೀಸ್ ರಕ್ಷಣೆ ಒದಗಿಸಲಾಗಿದ್ದರೂ ಭಾರೀ ಮಳೆಯ ಕಾರಣ ಆಕೆಗೆ ಬೆಟ್ಟ ಏರಲು ಸಾಧ್ಯವಾಗಲಿಲ್ಲ. ಪೊಲೀಸರು ಬೇರೆ ದಿನ ಬರುವಂತೆ ಸೂಚಿಸಿದರೂ, ಆಕೆ ಯಾತ್ರೆ ಸ್ಥಗಿತಗೊಳಿಸಿ ವಾಪಸಾಗಲು ನಿರ್ಧರಿಸಿದ್ದರು. 19ರ ಶುಕ್ರವಾರ ಹೈದರಾಬಾದ್ ಮೂಲದ ಪತ್ರಕರ್ತೆ ಕವಿತಾ ಜಾಕ್ಕಲ್ ಮತ್ತು ಸಾಮಾಜಿಕ ಕಾರ್ಯಕರ್ತೆ ರೆಹನಾ ಫಾತಿಮಾ ಅವರು ೧೦೦ ಮಂದಿ ಪೊಲೀಸರ ಬೆಂಗಾವಲಿನೊಂದಿಗೆ ಹೆಲ್ಮೆಟ್, ಪೊಲೀಸ್ ಜಾಕೆಟ್ ಧರಿಸಿಕೊಂಡು ದೇವಾಲಯದ ಅತ್ಯಂತ ಸಮೀಪಕ್ಕೆ ಬಂದಿದ್ದರು. ಆದರೆ ಭಕ್ತರು ಮತ್ತು ಅರ್ಚಕರ ಪ್ರತಿಭಟನೆಯ ಜೊತೆಗೆ ತಂತ್ರಿಯವರು (ಮುಖ್ಯ ಅರ್ಚಕ) ಮಹಿಳೆಯರು ಪ್ರವೇಶಿಸಿದರೆ ದೇವಾಲಯ ಮುಚ್ಚುವುದಾಗಿ ಎಚ್ಚರಿಸಿದ ಪರಿಣಾಮವಾಗಿ ಮಹಿಳೆಯರಿಬ್ಬರಿಗೂ ದೇವಾಲಯ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಬಳಿಕ ಮಧ್ಯಪ್ರಾಚ್ಯದಲ್ಲಿ ಕೆಲಸ ಮಾಡುವ ಮೇರಿ ಸ್ವೀಟಿ ಎಂಬ ಮೂರನೇ ಮಹಿಳೆಗೆ ರಕ್ಷಣೆ ಒದಗಿಸಲು ಪೊಲೀಸರೇ ನಿರಾಕರಿಸಿದ್ದರುಇದಕ್ಕೂ ಮುನ್ನ ಆಂಧ್ರಪ್ರದೇಶದ ಭಕ್ತೆ ಮಾಧವಿ ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿಗಾರ್ತಿ ಸುಹಾಸಿನಿ ರಾಜ್ 18ರ ಗುರುವಾರ ಪ್ರತಿಭಟನೆಗಳ ಬಳಿಕ ಮಾರ್ಗಮಧ್ಯದಲ್ಲೇ ತಮ್ಮ ಯಾತ್ರೆ ಕೈಬಿಟ್ಟಿದ್ದರು. ಪೊಲೀಸ್ ಠಾಣೆಗಳಿಗೆ ನಾಮಜಪ ಯಾತ್ರೆ: ಮಧ್ಯೆ ಋತುಮತಿ ವಯೋಮಾನದ ಮಹಿಳೆಯರ ದೇಗುಲ ಪ್ರವೇಶವನ್ನು ವಿರೋಧಿಸುತ್ತಿರುವ ಶಬರಿಮಲೈ ಕರ್ಮ ಸಮಿತಿಯು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷ ಪ್ರಜಾತಾಂತ್ರಿಕ ರಂಗ ಸರ್ಕಾರವು ಸುಪ್ರೀಂಕೋರ್ಟ್ ಆದೇಶವನ್ನು ತರಾತುರಿಯಲ್ಲಿ ಜಾರಿಗೊಳಿಸಲು ಹೊರಟದ್ದರ ವಿರುದ್ಧ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆತನ್ನ ಕಾರ್ಯಕರ್ತರ ಮೇಲೆ ನಡೆದ ಪೊಲೀಸ್ ದೌರ್ಜನ್ಯದ ವಿರುದ್ಧ ಕೇರಳದ ಎಲ್ಲ ಪೊಲೀಸ್ ಠಾಣೆಗಳಿಗೆ  ’ನಾಮಜಪ ಯಾತ್ರೆ (ಅಯ್ಯಪ್ಪಸಾಮಿ ಮಂತ್ರಪಠಣ ಜಾಥಾ) ನಡೆಸಲು ಸಮಿತಿಯು ಕರೆ ಕೊಟ್ಟಿತು. ತುರ್ತು ಅಧಿವೇಶನಕ್ಕೆ ಬಿಜೆಪಿ ಆಗ್ರಹ: ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ವಿಷಯವನ್ನು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಆಡಳಿತಾರೂಢ ಎಡ ಪಕ್ಷದ ಸದಸ್ಯರು ಕೂಡಾ ದೇವಾಲಯದ ಪ್ರಾಚೀನ ವಿಧಿವಿಧಾನಗಳನ್ನು ಮುರಿಯುವ ಯತ್ನಕ್ಕೆ ವಿರೋಧವಾಗಿದ್ದಾರೆ ಎಂದು ಅವರು ಹೇಳಿದರು. ಏನಿದ್ದರೂ, ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಎಸ್. ರಾಮಚಂದ್ರನ್ ಪಿಳ್ಳೈ ಅವರು ಪ್ರತಿಭಟನಕಾರರಿಗೆ ಕೇರಳ ಸಮಾಜದ ಬೆಂಬಲ ಇಲ್ಲ ಎಂದು ಪ್ರತಿಪಾದಿಸಿದರು. ಏತನ್ಮಧ್ಯೆ, ಶಬರಿಮಲೈಗೆ ಸಂಬಂಧಿಸಿದ ವಿಷಯಗಳ ನಿರ್ವಹಣೆ ಕಾಲದ ಪೊಲೀಸ್ ಲೋಪ ಆರೋಪಗಳ ಬಗ್ಗೆ ಸೋಮವಾರ ದೇವಾಲಯದ ಬಾಗಿಲು ಮುಚ್ಚಿದ ಬಳಿಕ ಪುನರ್ ಪರಿಶೀಲನೆ ಮಾಡಲಾಗುವುದು ಎಂದು ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಹೇಳಿದರು. ಮುಂದಿನ ತಿಂಗಳು ಆರಂಭವಾಗಲಿರುವ ಶಬರಿಮಲೈ ಯಾತ್ರಾ ಋತು ತಮಗೆ ಅತ್ಯಂತ ಪ್ರಮುಖ ಸವಾಲು ಆಗಲಿದೆ ಎಂದು ಅವರು ನುಡಿದರು. ಹಿಂದು ಮಕ್ಕಳ್ ಕಚ್ಚಿ ಪ್ರತಿಭಟನೆ: ಚೆನ್ನೈಯಲ್ಲಿ ಹಿಂದು ಮಕ್ಕಳ್ ಕಚ್ಚಿ ಕಾರ್ಯಕರ್ತರು ಅಣ್ಣಾನಗರ ಅಯ್ಯಪ್ಪ ದೇವಾಲಯದ ಹೊರಗೆ ಶಬರಿಮಲೈ ದೇವಾಲಯ ಭೇಟಿಗೆ ಯತ್ನಿಸಿದ ಮಹಿಳೆಯರ ವಿರುದ್ಧ ಪ್ರತಿಭಟನೆ ನಡೆಸಿದರು. ’ಅವರು ಪರಿಶುದ್ಧರಾಗಿರಲಿಲ್ಲ. ಅವರು ಅಯ್ಯಪ್ಪಸ್ವಾಮಿಯ ಬ್ರಹ್ಮಚರ್ಯೆಯ ಪಾವಿತ್ರ್ಯವನ್ನು ಹಾಳುಗೆಡವಿದ್ದಾರೆ. ಅವರು ಭಕ್ತರಲ್ಲ, ಪ್ರಚಾರಕ್ಕಾಗಿ ಆಗಮಿಸಿದ್ದಾರೆ ಎಂದು ಪ್ರತಿಭಟನಕಾರರಲ್ಲಿ ಒಬ್ಬರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿತು.

2018: ಅಹಮದಾಬಾದ್: ದೇಶದ ಮುಂಚೂಣಿ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ) ಲಂಚ ಹಗರಣ ಒಂದಕ್ಕೆ ಸಂಬಂಧಿಸಿದಂತೆ ತನ್ನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧವೇ  ಪ್ರಕರಣ ದಾಖಲಿಸಿತು. ಅಸ್ತಾನಾ ಅವರು ೧೯೮೪ರ ಗುಜರಾತ್ ತಂಡದ ಐಪಿಎಸ್ ಅಧಿಕಾರಿಯಾಗಿದ್ದು, ಮೊಯಿನ್ ಖುರೇಶಿ ಎಂಬ ಉದ್ಯಮಿಗೆ ಸಂಬಂಧಿಸಿದ ಪ್ರಕರಣ ಒಂದರಲ್ಲಿ ಕೋಟಿ ರೂಪಾಯಿ ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾದರು. ಖುರೇಶಿ ವಿರುದ್ಧ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರದ ಹಲವಾರು ಪ್ರಕರಣಗಳಿವೆತನ್ನ ನಂಬರ್ ಅಧಿಕಾರಿಯನ್ನು ಹೆಸರಿಸಿ ಎಫ್ ಆರ್ ದಾಖಲಿಸಿರುವುದನ್ನು ಸಿಬಿಐ ಬಹಿರಂಗ ಪಡಿಸಿಲ್ಲವಾದರೂ, ಸಂಸ್ಥೆಯೊಳಗಿನ ಮತ್ತು ಸರ್ಕಾರದ ಹಲವಾರು ಮೂಲಗಳು ವಿಚಾರವನ್ನು ದೃಢಪಡಿಸಿದವು. ಸಿಬಿಐ ನಿರ್ದೇಶಕ ಅಲೋಕ್ ವರ್ಮ ಮತ್ತು ಅಸ್ತಾನಾ ಅವರ ನಡುವೆ ಉನ್ನತ ತನಿಖಾ ಸಂಸ್ಥೆಯಲ್ಲಿ ನಡೆಯುತ್ತಿರುವ ಆಂತರಿಕ ಘರ್ಷಣೆ ತೀವ್ರಗೊಂಡಿರುವುದರ ಇನ್ನೊಂದು ಸೂಚನೆ ವಿದ್ಯಮಾನ ಎಂದೂ ಮೂಲಗಳು ಹೇಳಿದವು. ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಾನು ಅಸ್ತಾನ ಅವರಿಗೆ ಕೋಟಿ ರೂಪಾಯಿ ನೀಡಿರುವುದಾಗಿ ದೃಢಪಡಿಸಿದ್ದ ಮನೋಜ್ ಕುಮಾರ್ ಎಂದು ಗುರುತಿಸಲಾಗಿರುವ ಮಧ್ಯವರ್ತಿಯ ಬಂಧನದ ಬಳಿಕ ಸಂಸ್ಥೆಯು ಹೊಸ ಎಫ್ ಐಆರ್ ದಾಖಲಿಸಿದೆ ಎಂದು ಮೂಲಗಳು ಹೇಳಿದವು. ಖುರೇಶಿ ಪರವಾಗಿ ತಾನು ಲಂಚ ನೀಡಿರುವುದಾಗಿ ಮನೋಜ್ ಒಪ್ಪಿಕೊಂಡಿರುವುದಾಗಿ ವರದಿಗಳು ಹೇಳಿದವು. ಇದಕ್ಕೆ ಮುನ್ನ ಆರ್ ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮ ವಿರುದ್ಧ ಆಪಾದಿಸಿ ಅಸ್ತಾನ ಅವರು ದೂರು ದಾಖಲಿಸಿದ್ದರು. ಬಳಿಕ ಸಂಸ್ಥೆಯು ಅಸ್ತಾನ ಅವರು ಸಿಬಿಐ ನಿರ್ದೇಶಕರ ವಿರುದ್ಧ ಮಾಡಿದ್ದ ಆರೋಪಗಳನ್ನು ಪತ್ರಿಕಾ ಹೇಳಿಕೆಯೊಂದರಲ್ಲಿ ನಿರಾಕರಿಸಿ, ವಿಶೇಷ ನಿರ್ದೇಕರ ವಿರುದ್ಧವೇ ಸುಮಾರು ಅರ್ಧ ಡಜನ್ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣಗಳಲ್ಲಿ ವಿಶೇಷ ನಿರ್ದೇಶಕರು ಹಸ್ತಕ್ಷೇಪ ನಡೆಸಿದ ಆರೋಪಗಳಿವೆ ಎಂದು ಹೇಳಿತ್ತು. ಅಸ್ತಾನ ಅವರು ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾಗಿರುವುದು ಇದೇ ಮೊದಲಲ್ಲ. ಹಿಂದೆ ಸಂದೇಸರ ಸಹೋದರರ ಪ್ರಕರಣದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಪ್ರಸ್ತುತ ವಿದೇಶದಲ್ಲಿರುವ ವಡೋದರಾ ಮೂಲದ ಉದ್ಯಮಿಗಳಾದ ಸಂದೇಸರ ಸಹೋದರರು ೫೨೦೦ ಕೋಟಿ ರೂಪಾಯಿ ಮೊತ್ತದ ಸಾಲ ಸುಸ್ತಿ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆ ಮತ್ತು ಬಂಧನಗಳಿಂದ ತಪ್ಪಿಸಿಕೊಂಡಿದ್ದರು.

2018: ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸತತ ನಾಲ್ಕನೇ ದಿನವೂ ಇಳಿಕೆಯ ಮಾರ್ಗದಲ್ಲೇ ಸಾಗಿದ್ದು, ಎರಡು ತಿಂಗಳುಗಳಿಂದ ನಿರಂತರ ದರ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಸ್ವಲ್ಪ ಮಟ್ಟಿನ ನಿರಾಳತೆಯನ್ನು ಒದಗಿಸಿದವು. ಅಂತಾರಾಷ್ಟ್ರೀಯ ತೈಲ ದರಗಳು ಇಳಿಕೆಯಾದ ಪರಿಣಾಮವಾಗಿ ನಾಲ್ಕು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಿದ್ದು, ಭಾನುವಾರ ಪೆಟ್ರೋಲ್ ಲೀಟರಿಗೆ ೨೫ ಪೈಸೆ ಮತ್ತು ಡೀಸೆಲ್ ಲೀಟರಿಗೆ ೧೭ ಪೈಸೆಯಷ್ಟು ದರ ತಗ್ಗಿದೆ ಎಂದು ಸರ್ಕಾರಿ  ಸ್ವಾಮ್ಯದ ತೈಲ ಕಂಪೆನಿಗಳ ಪ್ರಕಟಣೆ ತಿಳಿಸಿತು. ದೆಹಲಿಯಲ್ಲಿ ಈದಿನ ಪೆಟ್ರೋಲ್ ದರ ಲೀಟರಿಗೆ ೮೧.೭೪ ರೂಪಾಯಿ ಇದ್ದರೆ, ಡೀಸೆಲ್ ದರ ಲೀಟರಿಗೆ ೭೫.೧೯ ರೂಪಾಯಿ ಇತ್ತು. ಮುಂಬೈಯಲ್ಲಿ ಪೆಟ್ರೋಲ್ ಲೀಟರಿಗೆ ೮೭.೨೧ ರೂಪಾಯಿ ಮತ್ತು ಡೀಸೆಲ್ ಲೀಟರಿಗೆ ೭೮.೮೨ ರೂಪಾಯಿಗೆ ಮಾರಾಟವಾಯಿತು ಅಂತಾರಾಷ್ಟೀಯ ತೈಲದರಗಳು ಇಳಿದ ಕಾರಣ ಇಂಧನ ದರಗಳು ಇಳಿಯುತ್ತಿವೆ ಎಂದು ತೈಲಕಂಪೆನಿಗಳು ಹೇಳಿವೆ. ನಾಲ್ಕು ದಿನಗಳಲ್ಲಿ ಪೆಟ್ರೋಲ್ ದರವು ಲೀಟರಿಗೆ .೦೯ ರೂಪಾಯಿಯಷ್ಟು ಇಳಿದಿದ್ದರೆ, ಡೀಸೆಲ್ ದರವು ೫೦ ಪೈಸೆಯಷ್ಟು ಇಳಿಯಿತು. ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಪ್ರತಿದಿನ  ಬೆಳಗ್ಗೆ ಗಂಟೆಗೆ ಇಂಧನ ಬೆಲೆಗಳನ್ನು ಪರಿಷ್ಕರಿಸುತ್ತಿವೆ. ಅಕ್ಟೋಬರ್ ೫ರಂದು ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರಿಗೆ .೫೦ ರೂಪಾಯಿಯಷ್ಟು ಕಡಿತಗೊಳಿಸಿ, ಸರ್ಕಾರಿ ಸ್ವಾಮ್ಯದ ತೈಲಕಂಪೆನಿಗಳಿಗೆ ಲೀಟರಿಗೆ ರೂಪಾಯಿ ಸಬ್ಸಿಡಿ ನೀಡುವಂತೆ ಸೂಚಿಸಿತ್ತು. ಬಿಜೆಪಿ ಆಡಳಿತವಿರುವ ರಾಜ್ಯಗಳೂ ಅಷ್ಟೇ ಪ್ರಮಾಣದಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ದರ ಇಳಿಸಿದ್ದರಿಂದ ರಾಜ್ಯಗಳಲ್ಲಿ ಇಂಧನ ಬೆಲೆ ಲೀಟರಿಗೆ ರೂಪಾಯಿಗಳಷ್ಟು ಇಳಿದಿತ್ತು.  ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ತಿಂಗಳಲ್ಲೇ ಅತ್ಯಂತ ಕೆಳಕ್ಕೆ ಇಳಿದಿದೆ. ಶುಕ್ರವಾರ ಪಶ್ಚಿಮ ಟೆಕ್ಸಾ ಇಂಟರ್ ಮೀಡಿಯೇಟ್ ನವೆಂಬರ್ ಸರಬರಾಜಿಗೆ ನ್ಯೂಯಾರ್ಕ್ ಮರ್ಕೆಂಟೈಲ್ ಎಕ್ಸ್ಚೇಂಜ್ನಲ್ಲಿ ಬ್ಯಾರೆಲ್ ಗೆ ೬೯.೧೨ ಅಮೆರಿಕನ್ ಡಾಲರ್ ನಿಗದಿ ಪಡಿಸಿತ್ತು. ಇದೇ ವೇಳೆಗೆ ಬ್ರೆಂಟ್ ಡಿಸೆಂಬರ್ ತಿಂಗಳಿಗೆ ಲಂಡನ್ ಮೂಲದ ಐಸಿಇ ಫ್ಯೂಚರ್ ಯುರೋಪ್ ಎಕ್ಸ್ ಚೇಂಜ್ನಲ್ಲಿ ಬ್ಯಾರೆಲ್ ಗೆ ೭೯.೭೮ ಅಮೆರಿಕನ್ ಡಾಲರ್ ದರವನ್ನು ನಿಗದಿ ಪಡಿಸಿದೆ. ಬ್ರೆಂಟ್ ಮುನ್ನ ತಿಂಗಳಲ್ಲಿ ಬ್ಯಾರೆಲ್ ಗೆ ವರ್ಷಗಳಲ್ಲೇ ಅತ್ಯಧಿಕ ಅಂದರೆ ೮೬.೭೪ ಅಮೆರಿಕನ್ ಡಾಲರ್ ದರ ನಿಗದಿ ಪಡಿಸಿತ್ತು. ದರ ಕಡಿತಕ್ಕೆ ಮುನ್ನ ಅಕ್ಟೋಬರ್ ೫ರಿಂದೀಚೆಗೆ ಡೀಸೆಲ್ ದರ ಲೀಟರಿಗೆ .೭೪ ರೂಪಾಯಿಯಷ್ಟು ಏರಿತ್ತು. ಇದರಿಂದ ಕೇಂದ್ರ ಸರ್ಕಾರದ ಅಬಕಾರಿ ಸುಂಕದರ ಇಳಿಕೆ ಮತ್ತು ತೈಲ ಕಂಪೆನಿಗಳ ಸಬ್ಸಿಡಿ ಕೊಡುಗೆ ಕೊಚ್ಚಿಕೊಂಡು ಹೋಗಿತ್ತು. ಅವಧಿಯಲ್ಲಿ ಪೆಟ್ರೋಲ್ ದರ ಲೀಟರಿಗೆ .೩೩ ರೂಪಾಯಿಯಷ್ಟು ಏರಿತ್ತು. ಅಕ್ಟೋಬರ್ ೫ರ ದರ ಕಡಿತಕ್ಕೆ ಮುನ್ನ ದೆಹಲಿಯಲ್ಲಿ ಪೆಟ್ರೋಲ್ ದರ ಸಾರ್ವಕಾಲಿಕ ದಾಖಲೆಯನ್ನು ಮುರಿದು ಲೀಟರಿಗೆ ೮೪ ರೂಪಾಯಿ ತಲುಪಿತ್ತು. ಇದೇ ವೇಳೆಗೆ ಡೀಸೆಲ್ ದರ ಲೀಟರಿಗೆ ೭೫.೪೫ ರೂಪಾಯಿಗಳ ದಾಖಲೆ ಮಟ್ಟಕ್ಕೆ ಏರಿತ್ತು. ದರ ಕಡಿತದ ಪರಿಣಾಮವಾಗಿ ಪೆಟ್ರೋಲ್ ದರ ಲೀಟರಿಗೆ ೮೧.೫೦ ರೂಪಾಯಿ ಮತ್ತು ಡೀಸೆಲ್ ದರ ಲೀಟರಿಗೆ ೭೨.೯೫ ರೂಪಾಯಿಗೆ ಇಳಿದಿತ್ತು. ಮುಂಬೈಯಲ್ಲಿ ಪೆಟ್ರೋಲ್ ದರ ಅಕ್ಟೋಬರ್ ೪ರಂದು ಸಾರ್ವಕಾಲಿಕ ದಾಖಲೆ ಮುರಿದು ಲೀಟರಿಗೆ ೯೧.೩೪ ರೂಪಾಯಿ ಮತ್ತು ಡೀಸೆಲ್ ಲೀಟರಿಗೆ ೮೦.೧೦ ರೂಪಾಯಿಗಳ ಗರಿಷ್ಠ ಮಟ್ಟಕ್ಕೆ ಮುಟ್ಟಿತ್ತು

2018: ಪುಣೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ತಮ್ಮಿಂದ ಸಾಧ್ಯವಿಲ್ಲ ಎಂಬುದಾಗಿ ಬಿಜೆಪಿಯು ಒಪ್ಪಿಕೊಳ್ಳಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಕೇಸರಿ ಮಿತ್ರ ಪಕ್ಷ ಆಡಳಿತಾರೂಢ ಬಿಜೆಪಿಯನ್ನು ಚುಚ್ಚಿದರು.  ‘೧೯೮೯ರಿಂದ, ಪಕ್ಷವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಘೋಷಣೆಗಳನ್ನು ಕೂಗುತ್ತಿದೆ. ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರು ಮಹಾರಾಷ್ಟ್ರದಲ್ಲಿ ದೇವಾಲಯದ ಬಗ್ಗೆ ಜನರಲ್ಲಿ ಉತ್ಸಾಹ ತುಂಬುವಂತೆ ಮಾಡುವಲ್ಲಿ ಬಿಜೆಪಿಗೆ ನೆರವಾದರು. ಆದರೆ ಇಷ್ಟೆಲ್ಲ ವರ್ಷಗಳ ಬಳಿಕವೂ ಯೋಜನೆ ತ್ರಿಶಂಕು ಸ್ಥಿತಿಯಲ್ಲಿ ಇರುವುದು ಏಕೆ? ಎಂದು ಪುಣೆಯಿಂದ ೨೦೦ ಕಿಮೀ ದೂರದ ಅಹ್ಮದ್ ನಗರ ಜಿಲ್ಲೆಯ ಶಿರಡಿ ದೇಗುಲ ಪಟ್ಟಣದಲ್ಲಿ ಶಿವಸೈನಿಕರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಉದ್ಧವ್ ಠಾಕ್ರೆ ಪ್ರಶ್ನಿಸಿದರುಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಶಿರಡಿಗೆ ಭೇಟಿ ನೀಡಿದ ಬೆನ್ನಲ್ಲೇ ಶಿವಸೇನಾ ಮುಖ್ಯಸ್ಥರೂ ಶಿರಡಿಗೆ ಭೇಟಿ ನೀಡುವ ಮೂಲಕ ೨೦೧೯ರ ಲೋಕಸಭಾ ಚುನಾವಣೆಗೆ ತಮ್ಮ ಪಕ್ಷದ ಪ್ರಚಾರವನ್ನು ಆರಂಭಿಸಿದರು.  ‘ರಾಮಮಂದಿರ ವಿಚಾರದಲ್ಲಿ ಜನರನ್ನು ಏಕೆ ವಂಚಿಸುತ್ತಿದ್ದೀರಿ? ಮೋದಿ ಸರ್ಕಾರದ ಇತರ ಎಲ್ಲ ಸುಳ್ಳು ಭರವಸೆಗಳಂತೆ ರಾಮಮಂದಿರ ನಿರ್ಮಾಣದ ಭರವಸೆಯೂ ಸುಳ್ಳು ಎಂದು ಅದು ಅಂತಿಮವಾಗಿ ಒಪ್ಪಿಕೊಳ್ಳಲೇಬೇಕು ಎಂದು ಶಿವಸೇನಾ ಮುಖ್ಯಸ್ಥ ಹೇಳಿದರು. ಬಿಜೆಪಿಯಿಂದ ಕಟ್ಟಾ ಹಿಂದುಗಳ ಮತಗಳನ್ನು ಸೆಳೆಯುವತ್ತ ಕಣ್ಣಿಟ್ಟುಕೊಂಡೇ ಅವರು ಮಾತುಗಳನ್ನು ಆಡಿದರು. ಮೋದಿ ಅವರ ಶಿರಡಿ ಭೇಟಿಯನ್ನೂ ಪ್ರಸ್ತಾಪಿಸಿದ ಠಾಕ್ರೆ  ’ಪ್ರಧಾನಿಯವರು ಮುಂದಿನ ಐದು ವರ್ಷ ಅಧಿಕಾರದಲ್ಲಿ ಉಳಿಸುವಂತೆ ಸಂತ ಸಾಯಿಬಾಬಾ ಅವರ ಆಶೀರ್ವಾದ ಪಡೆದುಕೊಳ್ಳುವ ಸಲುವಾಗಿ ಮಾತ್ರವೇ ಶಿರಡಿಗೆ ಆಗಮಿಸಿದ್ದರು ಎಂದು ಟೀಕಿಸಿದರು.  ‘ನನಗೆ ಯಾವುದೇ ಹುದ್ದೆಯ ಆಸೆಯಿಲ್ಲ. ನಾನು ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ನನಗಿಂತ ಮುಂಚೆ ಯಾರೋ ಒಬ್ಬರು (ಪ್ರಧಾನಿ ಮೋದಿ) ಸಾಯಿಬಾಬಾ ಅವರ ಆಶೀರ್ವಾದ ಕೋರಲು ಬಂದಿದ್ದರು. ಆದರೆ ಅದನ್ನು ಪಡೆದುಕೊಂಡು ಅವರೇನು ಮಾಡಿದ್ದಾರೆ? ರಾಷ್ಟ್ರದ ಜನಸಾಮಾನ್ಯರ ಮತ್ತು ಬಡವರ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯೂ ಆಗಿಲ್ಲ ಎಂದು ಹರಿಹಾಯುವ ಮೂಲಕ ಠಾಕ್ರೆ ಅವರು ಪ್ರಧಾನಿ ಮೋದಿ ಅವರ ಶಿರಡಿ ಯಾತ್ರೆಯನ್ನು ತರಾಟೆಗೆ ತೆಗೆದುಕೊಂಡರು. ಹಿಂದಿನ ವಾರ ಸಾಯಿ ಬಾಬಾ ಸಮಾಧಿ ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದ ಸಮಯದಲ್ಲಿ ಶಿರಡಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಸಾಯಿಬಾಬಾ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಪ್ರಧಾನಮಂತ್ರಿ ಆವಾಸ್ ಯೋಜನಾ -ಗ್ರಾಮೀಣ (ಪಿಎಂಎವೈ-ಜಿ) ಯೋಜನೆಯ ಸುಮಾರು ೪೦,೦೦೦ ಫಲಾನುಭವಿಗಳಿಗೆ ಅವರು ಸಂದರ್ಭದಲ್ಲಿ ಮನೆಗಳ ಕೀಲಿ ಕೈಗಳನ್ನು ವಿತರಿಸಿದ್ದರು. 

2008: ಸರ್ಕಾರಕ್ಕೇ ಸವಾಲೆಸೆದಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಮ್ಮೆನ್ನೆಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಈದಿನ ಬೆಳಗಿನ ಜಾವ 4 ಗಂಟೆಗೆ ರತ್ನಗಿರಿಯಲ್ಲಿ ಪೊಲೀಸರು ಬಂಧಿಸಿದರು. ಈ ಸುದ್ದಿ ಹರಡುತ್ತಿದ್ದಂತೆ ಮಹಾರಾಷ್ಟ್ರದೆಲ್ಲೆಡೆ ಹಿಂಸಾ ಘಟನೆಗಳು ವರದಿಯಾದವು. ಮುಂಬೈ, ನಾಸಿಕ್, ಪುಣೆ, ಥಾಣೆ ಮುಂತಾದ ನಗರಗಳಲ್ಲಿ ಎಮ್ಮೆನ್ನೆಸ್ ಕಾರ್ಯಕರ್ತರು ದಾಂದಲೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಶೆಲ್ ಸಿಡಿಸಬೇಕಾಯಿತು. ಬಸ್, ಪೊಲೀಸ್ ವ್ಯಾನ್, ಆಟೋ, ಟ್ಯಾಕ್ಸಿ ಹೀಗೆ ಕಣ್ಣಿಗೆ ಬಿದ್ದ ವಾಹನಗಳಿಗೆ ಎಮ್ಮೆನ್ನೆಸ್ ಕಾರ್ಯಕರ್ತರು ಬೆಂಕಿ ಹಚ್ಚಿದರು.

2008: ಆಸ್ಟ್ರೇಲಿಯಾ ತಂಡದ ವಿರುದ್ಧ ಮೊಹಾಲಿಯಲ್ಲಿ ಕೊನೆಗೊಂಡ ಎರಡನೇ ಕ್ರಿಕೆಟ್ ಟೆಸ್ಟ್ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತದ ವೇಗದ ಬೌಲರ್ ಜಹೀರ್ ಖಾನ್ ಮೇಲೆ ರೆಫರಿ ಕ್ರಿಸ್ ಬ್ರಾಡ್ ಅವರು ಪಂದ್ಯ ಶುಲ್ಕದ ಶೇ. 80 ರಷ್ಟು ಮೊತ್ತ ದಂಡ ವಿಧಿಸಿದರು. ನಾಲ್ಕನೇ ದಿನದಾಟದಲ್ಲಿ ಆಸೀಸ್ ಬ್ಯಾಟ್ಸ್ ಮನ್ ಹೇಡನ್ ಔಟಾಗಿ ಪೆವಿಲಿಯನ್ ಗೆ ತೆರಳುತ್ತಿದ್ದ ಸಂದರ್ಭ ಜಹೀರ್ ಅವರ ಬಳಿಗೆ ಧಾವಿಸಿ ದೊಡ್ಡ ಸ್ವರದಲ್ಲಿ ಕಿರುಚಿದ್ದರು.

2008: ಮೊಬೈಲ್ ಫೋನ್ ಬಳಕೆ ಸಿಗರೇಟಿಗಿಂತ ಆರೋಗ್ಯಕ್ಕೆ ಅಪಾಯಕಾರಿ. ದೀರ್ಘಕಾಲ ಸೆಲ್ ಫೋನ್ ಬಳಸುವುದರಿಂದ ಮೆದುಳಿನ ಗೆಡ್ಡೆ, ಕ್ಯಾನ್ಸರುಗಳಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ವರದಿಯೊಂದು ಬಳಕೆದಾರರನ್ನು ಎಚ್ಚರಿಸಿತು. ಅಮೆರಿಕದ ಇಲಿನಾಯ್ನ ಲೇಕ್ ಫಾರೆಸ್ಟ್ ಆಸ್ಪತ್ರೆಯ ನರರೋಗ ತಜ್ಞ ರಾನ್ ಪಾವ್ಲ್ ಅವರ ನೇತೃತ್ವದ ತಂಡ ಈ ಅಂಶವನ್ನು ಬಹಿರಂಗ ಪಡಿಸಿತು. ಮೊಬೈಲ್ ಫೋನ್ ಬಳಕೆಯಿಂದ ಮೆದುಳಿನ ಗೆಡ್ಡೆ, ಕ್ಯಾನ್ಸರ್ ರೋಗ ಬರುವುದು ಎಂಬ ಆರೋಪದಲ್ಲಿ ನಿಜಾಂಶ ಇದೆಯೇ ಎಂಬ ವಿಷಯದಲ್ಲಿ ತಂಡ ಅಧ್ಯಯನ ನಡೆಸಿತ್ತು. ಮೊಬೈಲ್ ಫೋನುಗಳನ್ನು ಸಣ್ಣಮಕ್ಕಳು, ವಿದ್ಯಾರ್ಥಿಗಳು, ಹದಿಹರೆಯದವರು, ಯುವಜನರು ಹೆಚ್ಚು ಬಳಸುವುದು ಅಪಾಯಕಾರಿ. ಅವರ ಮೆದುಳು ಬೆಳವಣಿಗೆ ಹಂತದಲ್ಲಿ ಇರುವುದರಿಂದ ಹೆಚ್ಚಿನ ಹಾನಿಯಾಗುತ್ತದೆ. ಹತ್ತುವರ್ಷಗಳಿಗಿಂತ ಹೆಚ್ಚುಕಾಲ ಸೆಲ್ ಫೋನ್ ಬಳಸಿದ ಹಿರಿಯರಿಗೂ ಕ್ಯಾನ್ಸರ್, ಮೆದುಳು ಗಡ್ಡೆಯ ಸಾಧ್ಯತೆ ಹೆಚ್ಚು. ಮೆದುಳು ಸೆಲ್ ಫೋನಿನ ವಿದ್ಯುತ್ ಕಾಂತೀಯ ಕ್ಷೇತ್ರದ (ಇ ಎಲ್ ಎಫ್) ವ್ಯಾಪ್ತಿಯಲ್ಲಿ ಬರುವುದರಿಂದ ರೋಗ ಸಾಧ್ಯತೆ ಹೆಚ್ಚು. ಸೆಲ್ ಫೋನನ್ನು ತಲೆಯ ಯಾವಭಾಗದಲ್ಲಿ ಹೆಚ್ಚು ಬಳಸಲಾಗುವುದೋ ಅಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು ಅನ್ನುತ್ತದೆ ವರದಿ. ಮೊಬೈಲ್ ಫೋನ್ ಮತ್ತು ಮೆದುಳಿನ ಕ್ಯಾನ್ಸರ್ ಇತ್ಯಾದಿಗಳ ರೋಗ ಸಂಬಂಧ ದೃಢಪಟ್ಟಿದೆ. ಕಳೆದ ಒಂದು ದಶಕದಿಂದೀಚೆಗೆ ಪ್ರಕರಣಗಳು ಹೆಚ್ಚಿವೆ. ಮನೆಯಲ್ಲಿ ಬಳಸುವ ನಿಸ್ತಂತು ಫೋನುಗಳೂ (ಕಾರ್ಡ್ ಲೆಸ್ ಫೋನ್) ಇದೇ ಪರಿಣಾಮ ಉಂಟುಮಾಡುತ್ತವೆ ಎಂದು ವರದಿ ತಿಳಿಸಿತು.

2008: ಮಣಿಪುರದ ರಾಜಧಾನಿ ಇಂಫಾಲದಲ್ಲಿ ಬಿಗಿ ಭದ್ರತೆಯ ಪೊಲೀಸ್ ಕಮಾಂಡೊ ತರಬೇತಿ ಕೇಂದ್ರದ ಬಳಿ ಈದಿನ ಸಂಜೆ ಶಕ್ತಿಶಾಲಿ ಬಾಂಬ್ ಸ್ಛೋಟಿಸಿದ್ದರಿಂದ ಕನಿಷ್ಠ 11 ಮಂದಿ ಸತ್ತು ಹಲವರು ಗಾಯಗೊಂಡರು. ಸಂಜೆ 7.30ಕ್ಕೆ ಈ ಸ್ಛೋಟ ಸಂಭವಿಸಿತು.

2008: ರಾಜ್ಯ ವೀರಶೈವ ಪಂಚಮಸಾಲಿ ಸಂಘ ಪ್ರಸಕ್ತ ಸಾಲಿನ ವೀರರಾಣಿ ಕಿತ್ತೂರು ಚನ್ನಮ್ಮ ಪ್ರಶಸ್ತಿಗೆ ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಪ್ರಭುದೇವ ಅವರನ್ನು ಆಯ್ಕೆ ಮಾಡಿತು. ಪ್ರಶಸ್ತಿಯನ್ನು ಹೊನ್ನಾಳಿ ತಾಲ್ಲೂಕು ಸಾಸ್ವೆಹಳ್ಳಿಯಲ್ಲಿ ಯುವ ವೀರರಾಣಿ ಕಿತ್ತೂರು ಚನ್ನಮ್ಮ ಅವರ 185ನೇ ವಿಜಯೋತ್ಸವ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳ ಪುರಪ್ರವೇಶ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು ಜಿಲ್ಲಾ ವೀರಶೈವ ಪಂಚಮಸಾಲಿ ಸಂಘ ಅಧ್ಯಕ್ಷ ಬಿ.ಸಿ.ಉಮಾಪತಿ ಪ್ರಕಟಿಸಿದರು.

2007: ಹಿಮಾಲಯದಂಚಿನ ಹಲವು ಕಡೆ ಕೆಲವು ವಿಶಿಷ್ಟ ಗೋತಳಿಗಳು ಕಣ್ಮರೆಯಾಗ ತೊಡಗಿರುವುದು ಅಧ್ಯಯನವೊಂದರಿಂದ ದೃಢಪಟ್ಟಿತು. ಈ ಅಧ್ಯಯನದಲ್ಲಿ ಗುಜ್ಜರ್ ಜನರ ಬದುಕು, ವಹಿವಾಟುಗಳ ಬಗ್ಗೆಯೂ ವಿಶೇಷ ಗಮನ ನೀಡಲಾಗಿದೆ. ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಉತ್ತರ ಭಾರತದ ಕೆಲವು ಕಡೆ ಕಳೆದ ನಾಲ್ಕು ದಶಕಗಳಲ್ಲಿ ಅಪರೂಪದ ಗೋವು, ಕುರಿ, ಕುದುರೆ ಮತ್ತು ನಾಯಿಗಳ ತಳಿಗಳು ಕಣ್ಮರೆಯಾಗಿವೆ ಎಂದೂ ಈ ಅಧ್ಯಯನ ತಿಳಿಸಿತು. ಬುಡಕಟ್ಟು ಜನಾಂಗಳ ಬಗ್ಗೆ ವಿಶೇಷ ಸಂಶೋಧನೆಗಳನ್ನು ನಡೆಸುತ್ತಿರುವ ಕೇಂದ್ರ ಸರ್ಕಾರದ ಬುಡಕಟ್ಟು ಸಂಶೋಧನೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ನಡೆಸಿರುವ ಈ ಅಧ್ಯಯನದಲ್ಲಿ 1968ರಿಂದ ಈ ಅಪರೂಪದ ತಳಿಗಳು ಕಾಣೆಯಾಗುತ್ತಿವೆ ಎಂದು ತಿಳಿಸಲಾಗಿದ್ದು, `ಜಮ್ಮು ಮತ್ತು ಕಾಶ್ಮೀರದಲ್ಲಿ ವಿದೇಶಿ ತಳಿಗಳನ್ನು ಅದೇ ವರ್ಷ ಮೊದಲ ಬಾರಿಗೆ ರೈತರಿಗೆ ನೀಡಲಾಗಿತ್ತು' ಎಂದು ಸ್ಮರಿಸಲಾಗಿದೆ. `ಅಧಿಕ ಉಣ್ಣೆ ಮತ್ತು ಮಾಂಸಕ್ಕಾಗಿ ವಿದೇಶಿ ತಳಿಗಳನ್ನು ಸಾಕಲು ರೈತರಿಗೆ ಆ ಸಂದರ್ಭದಲ್ಲಿ ಪ್ರೋತ್ಸಾಹ ನೀಡಲಾಗಿತ್ತು' ಎಂದು ಬುಡಕಟ್ಟು ಸಂಶೋಧನೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜಾವೇದ್ ರಾಹಿ ತಿಳಿಸಿದರು. `ಇಂತಹ ಅಪರೂಪದ ತಳಿಗಳನ್ನು ಉಳಿಸಿಕೊಳ್ಳುವ ದಿಸೆಯಲ್ಲಿ ಈವರೆಗೂ ಯಾವುದೇ ಸಂಶೋಧನೆಗಳೂ ನಡೆದಿಲ್ಲ' ಎಂದಿರುವ ಅವರು ಕುರಿತಳಿಗಳಾದ ಘಿರೋಡ್ ಫಾಂಫ್ರಿ, ಪುಂಚಿ ಬೇಕರ್ ವಾಲಿ, ಬನಿ, ಕರ್ನಾಯ್ ಮುಂತಾದ ತಳಿಗಳಂತೂ ಮಾಯವಾಗಿವೆ ಎಂದರು. ಇದೇ ರೀತಿ ಯಾರ್ಕಂಡಿ, ನುಕ್ರಾ ಮತ್ತು ಭಾರ್ಸಿ ಮುಂತಾದ ಕುದುರೆಯ ತಳಿಗಳೂ ಈಗ ಕಾಣುತ್ತಿಲ್ಲ ಎಂದು ಹೇಳಿದರು. ಗುಜ್ಜರ್ ಗಳ ಕೊಟ್ಟಿಗೆಗಳಲ್ಲಿ ಇವತ್ತು ಆಸ್ಟ್ರೇಲಿಯಾದ ತಳಿಗಳಷ್ಟೇ ಕಂಡು ಬರುತ್ತಿವೆ ಎಂದೂ ಅವರು ತಿಳಿಸಿದರು. ಲಡಾಖ್ ಪ್ರದೇಶದ ಬ್ರೋಕ್ಟಾ, ಚಾಂಗ್ಪಾ ಮತ್ತು ದಾರ್ದ್ ಬುಡಕಟ್ಟು ಜನ ತಮ್ಮ ಕೊಟ್ಟಿಗೆಗಳಲ್ಲಿ ಇವತ್ತಿಗೂ ಕೆಲವು ಅಪರೂಪದ ಸ್ಥಳೀಯ ತಳಿಗಳನ್ನು ಪೋಷಿಸುತ್ತಿದ್ದಾರೆ ಎಂದು ಅಧ್ಯಯನ ಹೇಳಿತು. ಆಸ್ಟ್ರೇಲಿಯ, ಕೆನಡಾ, ಅಮೆರಿಕ, ಇಂಗ್ಲೆಂಡ್, ರಶ್ಯಾ ಮತ್ತು ಬ್ರೆಜಿಲ್ ಮುಂತಾದ ದೇಶಗಳು ತಮ್ಮಲ್ಲಿನ ಅಪರೂಪದ ತಳಿಗಳನ್ನು ರಕ್ಷಿಸುತ್ತಿವೆ. ಭಾರತದಲ್ಲಿ ಮಾತ್ರ ಹಾಗಾಗಿಲ್ಲ ಎಂದೂ ಈ ವರದಿ ತಿಳಿಸಿತು. ಪ್ರಸಕ್ತ ಗುಜ್ಜರ್ ಸೇರಿದಂತೆ ಹಲವು ಬುಡಕಟ್ಟಿನ ಮಂದಿ ಈ ವಿದೇಶಿ ತಳಿಗಳ ಬಗ್ಗೆ ತೃಪ್ತಿಯನ್ನಂತೂ ಹೊಂದಿಲ್ಲ. ಹೀಗಾಗಿ ಇವರು ಹಳೆಯ ಅಪರೂಪದ ತಳಿಗಳನ್ನೇ ಸಾಕಲು ಇಚ್ಛಿಸಿದ್ದಾರೆ. ಆದರೆ ಅವರಿಗೆ ಆ ತಳಿಗಳು ಈಗ ಸಿಗುತ್ತಲೇ ಇಲ್ಲ ಎಂದೂ ಈ ವರದಿ ಹೇಳಿತು. ಈ ಹಿನ್ನೆಲೆಯಲ್ಲಿ ಸರ್ಕಾರವು ಹಳೆಯ ತಳಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಗುಜ್ಜರ್ ಸೇರಿದಂತೆ ಹಲವು ಬುಡಕಟ್ಟುಗಳ ಮಂದಿ ಒತ್ತಾಯಿಸುತ್ತಿದ್ದಾರೆ ಎಂದೂ ಈ ಅಧ್ಯಯನ ತಿಳಿಸಿತು.

2007: ಮಕ್ಕಳು ಶಾಲೆಯಿಂದ ಮನೆಗೆ ವಾಪಸಾಗುವವರೆಗೆ ಹೆತ್ತವರ ಆತಂಕ ಈಚಿನ ದಿನಗಳಲ್ಲಿ ಹೆಚ್ಚು. ಉದ್ಯಮಿಗಳಾಗಿದ್ದರೆ ಅಂತಹವರ ಮಕ್ಕಳು ಅಪಹರಣಕ್ಕೆ ಒಳಗಾಗುವ ಭೀತಿ ಒಂದೆಡೆಯಾದರೆ, ವಾಹನ ದಟ್ಟಣೆಯ ನಡುವೆ ಮಕ್ಕಳೆಲ್ಲಿ ಸಿಲುಕಿಕೊಳ್ಳುವರೋ ಎಂಬ ಭಯ ಮಧ್ಯಮ ವರ್ಗದವರಿಗೆ. `ಮೊಬೈಲ್ ಫೋನ್' ಲೋಕದಲ್ಲಿನ ವಿಶಿಷ್ಟ ಸಂಶೋಧನೆಯೊಂದು ಹೆತ್ತವರ ಇಂತಹದೊಂದು ಆತಂಕಕ್ಕೆ ಪರಿಹಾರ ಒದಗಿಸುವ ಸಾಧ್ಯತೆ ಇದೆ ಎಂದು ನವದೆಹಲಿಯ ಎಸ್ ಐ ಆರ್ ಎಫ್ ಟೆಕ್ನಾಲಜಿ ಸಂಸ್ಥೆಯ ಆಡಳಿತ ನಿರ್ದೇಶಕ ಅಶುತೋಷ್ ಪಾಂಡೆ ಪ್ರಕಟಿಸಿದರು. `ನಮ್ಮ ಸಂಸ್ಥೆಯು ಮಾರುಕಟ್ಟೆಗೆ ನೀಡಲಿರುವ ನೂತನ ಮೊಬೈಲ್ ಉಪಗ್ರಹ ಆಧಾರಿತ ಕಾರ್ಯಕ್ರಮವಾಗಿದ್ದು, ಆ ಮೂಲಕ ದೂರವಾಣಿಯಲ್ಲಿ ಮಾತನಾಡುವವರಿಗೆ ಸಂಬಂಧಪಟ್ಟ ಮೊಬೈಲ್ ಯಾವ ಸ್ಥಳದಲ್ಲಿದೆ ಎಂಬ ಮಾಹಿತಿ ಕೂಡಾ ಸಿಗುತ್ತದೆ' ಎಂಬುದು ಅವರ ವಿವರಣೆ. `ಶಾಲೆಗೆ ಹೋಗುವ ಮಗುವಿನ ಕಿಸೆಯಲ್ಲಿ ಈ ಮೊಬೈಲ್ ಇರಿಸಿದರೆ, ಆ ಮಗು ಇರುವ ಸ್ಥಳದ ಖಚಿತ ಮಾಹಿತಿಯು ದೂರದ ಮನೆಯಲ್ಲಿಯೋ, ಕಚೇರಿಯಲ್ಲಿಯೋ ಕುಳಿತ ಹೆತ್ತವರಿಗೆ ಲಭ್ಯ. ಮೊಬೈಲಿನೊಳಗೆ ಕಾರ್ಯಕ್ರಮವೊಂದನ್ನು ಹುದುಗಿಸಿಟ್ಟು ಹೆತ್ತವರು ತಮ್ಮ ಮಗು ಓದುವ ಶಾಲೆಯ ಸುತ್ತಲೂ ವೃತ್ತದೋಪಾದಿಯಲ್ಲಿ ಗುರುತಿಸಿಡಬೇಕು. ಮಗು ಯಾವುದೇ ಕ್ಷಣ ಆ ನಿಗದಿತ ವೃತ್ತವನ್ನು ದಾಟಿದ ತತ್ ಕ್ಷಣ ಹೆತ್ತವರ ಮೊಬೈಲ್ ರಿಂಗಣಿಸತೊಡಗುತ್ತದೆ' ಎಂಬ ಮಾಹಿತಿಯನ್ನೂ ಪಾಂಡೆ ನೀಡಿದರು. `ಆ ನಂತರ ಮೊಬೈಲಿನೊಂದಿಗಿನ `ಭದ್ರತಾ ಕಾರ್ಯಕ್ರಮ'ದ ಮೂಲಕ ಆ ಮಗು ಯಾವ ಸ್ಥಳದಲ್ಲಿದೆ ಎಂಬುದನ್ನು ಖಚಿತವಾಗಿಯೇ ಪತ್ತೆ ಹಚ್ಚಬಹುದು' ಎಂಬುದು ಅವರ ಹೇಳಿಕೆ. ಯಾರು ಎಲ್ಲಿದ್ದಾರೆ ಎಂಬ ಬಗ್ಗೆ ಖಚಿತ ಮಾಹಿತಿ ನೀಡುವ `ರೇಡಿಯೊ ಕಾಲರ್'ನಂತಹ ಮೊಬೈಲ್ ಸಲಕರಣೆಯು ಭಾರತದ ಮಾರುಕಟ್ಟೆಯಲ್ಲಿ ಶೀಘ್ರ ಲಭಿಸಲಿದೆ ಎಂಬುದು ಅವರ ಭರವಸೆ.

2007: ಮಾರಕ ರೋಗ ಏಡ್ಸ್ ಗೆ ಕಾರಣವಾಗಿರುವ ಎಚ್ ಐ ವಿ ವೈರಸ್ಸಿನ ಸೋಂಕಿನ ವಿರುದ್ಧ ಹೋರಾಡುವ ಸಹಜ ರೋಗ ನಿರೋಧಕ ಶಕ್ತಿ ಕೆಲವರಲ್ಲಿ ಇರುವುದು ಅಧ್ಯಯನವೊಂದರಿಂದ ಪತ್ತೆಯಾಯಿತು. ಎಚ್ ಐ ವಿ ವೈರಸ್ಸಿನ ಸೋಂಕಿಗೊಳಗಾದ ಕೆಲವರಲ್ಲಿ ಮಾತ್ರ ಈ ಅಂಶ ಕಂಡು ಬಂದಿದೆ. ಇದರಿಂದ ಎಚ್ ಐ ವಿ ವೈರಸ್ಸಿನ ಸೋಂಕಿನ ವಿರುದ್ಧ ಲಸಿಕೆಯನ್ನು ಅಭಿವೃದ್ಧಿ ಪಡಿಸಬಹುದು ಎಂದು ಚಂಡೀಗಢದ ಪ್ರಸಿದ್ಧ ವೈದ್ಯಕೀಯ ಕಾಲೇಜಿನ ಡಾ. ಅಜಯ್ ವಾಂಚೂ ತಿಳಿಸಿದರು. ಈ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ಚಂಡೀಗಢದ ಪಿಜಿಮೆರ್ ನ ಔಷಧೀಯ ವಿಭಾಗದ ಸಹಯೋಗದೊಂದಿಗೆ ನಡೆಸಿತು. `ವೈರಸ್ಸಿನ ಸೋಂಕಿಗೆ ಒಂದಕ್ಕಿಂತ ಹೆಚ್ಚು ಬಾರಿ ಒಳಗಾದಾಗ ವೈರಸ್ಸಿನ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಉಂಟಾಗುತ್ತದೆ. ಆದರೆ ಈ ಶಕ್ತಿ ಕೆಲವರಲ್ಲಿ ಮಾತ್ರವೇ ಇರುತ್ತದೆ' ಎಂದು ಪತ್ರಿಕಾಗೋಷ್ಠಿಯಲ್ಲಿ ಡಾ. ಅಜಯ್ ವಾಂಚೂ ಪ್ರತಿಪಾದಿಸಿದರು. `ವಂಶವಾಹಿ ತಳಿಯ ವಿಶಿಷ್ಟತೆಯ ಕಾರಣದಿಂದ ಕೆಲವರು ಕೆಲವು ರೋಗಗಳ ಸೋಂಕಿಗೆ ಒಳಗಾಗುವುದಿಲ್ಲ. ಎಚ್ ಐ ವಿ ವೈರಸ್ಸಿನ ಸಂಪರ್ಕಕ್ಕೆ ಬಂದ ಎಲ್ಲರೂ ಸೋಂಕಿಗೆ ಒಳಗಾಗುವುದಿಲ್ಲ. ಈ ವಿಶಿಷ್ಟ ಗುಣವನ್ನು ಆಫ್ರಿಕಾದ ಕೆಲವು ಲೈಂಗಿಕ ಕಾರ್ಯಕರ್ತೆಯರಲ್ಲಿ ಗುರುತಿಸಬಹುದು' ಎಂದೂ ವಾಂಚೂ ಅಭಿಪ್ರಾಯ.

2008: ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯಸಭೆ ಮಾಜಿ ಸದಸ್ಯ ಜೆ.ಪಿ. ಮಾಥೂರ್ ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಈದಿನ ಬೆಳಿಗ್ಗೆ 5 ಗಂಟೆ ಸುಮಾರಿಗೆ ನಿಧನರಾದರು. ಬ್ರಹ್ಮಚಾರಿಯಾಗಿದ್ದ ಅವರಿಗೆ 86 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದ ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ಈ ಮೊದಲು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು. ಕೊನೆಯದಾಗಿ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಾಗಿದ್ದರು. 1945ರಲ್ಲಿ ಪ್ರಚಾರಕರಾಗಿ ಆರೆಸ್ಸೆಸ್ಸಿಗೆ ಸೇರಿದ ಮಾಥೂರ್ ಅವರು ಜನಸಂಘದ ಮೂಲಕ ರಾಜಕೀಯ ಹೆಜ್ಜೆಗಳನ್ನು ಗುರುತಿಸಿ ಕೊಂಡರು. ಜನಸಂಘ ಮುಂದೆ ಬಿಜೆಪಿಯಾಗಿ ಅಸ್ತಿತ್ವಕ್ಕೆ ಬಂದಾಗ ಅದರ ಸ್ಥಾಪಕ ಸದಸ್ಯರಲ್ಲಿ ಮಾಥೂರ್ ಒಬ್ಬರಾಗಿದ್ದರು. ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರ ಜತೆ ಆಪ್ತ ಸಂಬಂಧ ಹೊಂದಿದ್ದ ಮಾಥೂರ್ ಪಕ್ಷದ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಉತ್ತರ ಪ್ರದೇಶದ ಬಿಜನೌರ್ ಜಿಲ್ಲೆಯಲ್ಲಿ 1921ರ ನವೆಂಬರ್ 9ರಂದು ಜನಿಸಿದ ಮಾಥೂರ್ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. ಒಂದು ಸಲ ಲೋಕಸಭೆಯಲ್ಲಿ ಬಿಜೆಪಿಯ ಉಪ ನಾಯಕರಾಗಿ ಸೇವೆ ಸಲ್ಲಿಸಿದ್ದರು.

2007: ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದ ನಕಲಿ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಮ್ ತೆಲಗಿ ಹಾಗೂ ಆತನ ಮೂವರು ಸಹಚರರು ತಪ್ಪಿತಸ್ಥರು ಎಂದು ಮುಂಬೈ ನ್ಯಾಯಾಲಯವೊಂದು ತೀರ್ಪು ನೀಡಿತು.

2007: ವಿವಿಧ ಜಾನಪದ ಕಲಾ ತಂಡಗಳ ಆಕರ್ಷಕ ನೃತ್ಯ, ವಾದ್ಯಗಳ ನಿನಾದ, ನೆರಳು ಬೆಳಕಿನ ಚಿತ್ತಾರದ ನಡುವೆ ಎಂಟು ದಿನಗಳ ಕಾಲ ಹೈದರಾಬಾದಿನಲ್ಲಿ ನಡೆದ ವಿಶ್ವದ ಎರಡನೇ ಅತ್ಯಂತ ದೊಡ್ಡ ಕ್ರೀಡಾಕೂಟ ಎನಿಸಿದ `4ನೇ ಸಿಐಎಸ್ ಎಂ ವಿಶ್ವ ಸೇನಾ ಕ್ರೀಡಾಕೂಟ' ಮುಕ್ತಾಯವಾಯಿತು. ಕೂಟದಲ್ಲಿ 46 ಚಿನ್ನ, 26 ಬೆಳ್ಳಿ ಹಾಗೂ 28 ಕಂಚಿನ ಪದಕ ಗೆದ್ದ ರಷ್ಯಾ ತಂಡ ತನ್ನ ಅಗ್ರಸ್ಥಾನವನ್ನು ಕಾಪಾಡಿಕೊಂಡಿತು. ಚೀನಾ 36 ಚಿನ್ನ, 22 ಬೆಳ್ಳಿ ಹಾಗೂ 13 ಕಂಚಿನ ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು. ಭಾರತ ತಂಡ ಇದೇ ಮೊತ್ತ ಮೊದಲ ಬಾರಿಗೆ 2 ಬಂಗಾರ, 1 ಬೆಳ್ಳಿ ಹಾಗೂ 7 ಕಂಚಿನ ಪದಕಗಳೊಂದಿಗೆ ಒಟ್ಟು 10 ಪದಕಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತು.

2006: ಹಂಪಿ ಉತ್ಸವಕ್ಕೆ ಸಿದ್ಧವಾಗುತ್ತಿದ್ದ ವೇಳೆಯಲ್ಲಿ ಬಳ್ಳಾರಿ ಜಿಲ್ಲೆಯ ವಿಶ್ವಖ್ಯಾತಿಯ ಹಂಪಿಯ ವಿಷ್ಣು ದೇವಾಲಯ ಆವರಣದಲ್ಲಿ ವಿಜಯನಗರ ಕಾಲದ ಏಳು ಅಪರೂಪದ ಶಂಖಗಳು ಪತ್ತೆಯಾದವು. ಐತಿಹಾಸಿಕವಾಗಿ ಹೆಚ್ಚು ಮಹತ್ವ ಇರುವ ಈ ಶಂಖಗಳು ಶ್ವೇತ ವರ್ಣದವಾಗಿದ್ದು ಹೆಚ್ಚು ತೂಕದಿಂದ ಕೂಡಿವೆ.

2006: ಕರ್ನಾಟಕದ ಜೆಡಿ (ಎಸ್)- ಬಿಜೆಪಿ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷಿ `ಭಾಗ್ಯಲಕ್ಷ್ಮಿ' ಯೋಜನೆ ಜಾರಿ ಸಂಬಂಧ ಸರ್ಕಾರಿ ಆದೇಶ ಹೊರಬಿತ್ತು. 2006ರ ಮಾರ್ಚ್ 31ರ ನಡುರಾತ್ರಿ ನಂತರ ಜನಿಸಿದ ಬಡ ಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರ 10,000 ರೂಪಾಯಿ ಠೇವಣಿ ಇಡಲಿದ್ದು ಇದಕ್ಕೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಯಿತು. 18 ವರ್ಷ ತುಂಬಿದಾಗ ಆ ಮಗುವಿಗೆ ಬಡ್ಡಿ ಸಹಿತವಾಗಿ ಈ ಹಣವನ್ನು ನೀಡಲಾಗುವುದು.

2000: ಸ್ಯಾಂಟಿಯಾಗೋದಲ್ಲಿ ನಡೆದ ಜಾಗತಿಕ ಜ್ಯೂನಿಯರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಡಿಸ್ಕಸ್ ನಲ್ಲಿ ಸ್ವರ್ಣಪದಕ ಗೆಲ್ಲುವ ಮೂಲಕ ಸೀಮಾ ಅಂಟಿಲ್ ಅವರು ಅಥ್ಲೆಟಿಕ್ಸಿನಲ್ಲಿ ಜಾಗತಿಕ ಪ್ರಶಸ್ತಿ ಗೆದ್ದ ಪ್ರಥಮ ಭಾರತೀಯಳೆಂಬ ಕೀರ್ತಿಗೆ ಭಾಜನರಾದರು. ಆದರೆ ಆಕೆಯ ಸಂತಸ ಅಲ್ಪಕಾಲದ್ದಾಗಿತ್ತು. ಉತ್ತೇಜಕ ಮದ್ದು ಸೇವಿಸಿದ್ದು ಹೌದೆಂದು ರುಜುವಾತಾದುದರ ವಿರುದ್ಧ ಆಕೆ ಸಲ್ಲಿಸಿದ್ದ ಮೇಲ್ಮನವಿ ವಜಾಗೊಂಡದ್ದನ್ನು ಅನುಸರಿಸಿ ಆಕೆಗೆ ನೀಡಲಾಗಿದ್ದ ಪದಕವನ್ನು 2001ರಲ್ಲಿ ಕಿತ್ತುಕೊಳ್ಳಲಾಯಿತು.

1999: ಚಿತ್ರ ನಿರ್ಮಾಪಕ ಬಿ.ಆರ್. ಚೋಪ್ರಾ ಅವರಿಂದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕಾರ.

1995: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಲ್.ಕೆ. ಅಡ್ವಾಣಿ ಅವಿರೋಧ ಆಯ್ಕೆ.

1990: ದೂರದರ್ಶನದಿಂದ ಮಧ್ಯಾಹ್ನದ ಸುದ್ದಿ ಪ್ರಸಾರ ಆರಂಭ.

1983: ಸಿಖ್ ಉಗ್ರಗಾಮಿಗಳ ದುಷ್ಕೃತ್ಯದಿಂದ ಜಮ್ಮು ತಾವಿ ಸಿಯಾಲ್ಡಾ ಎಕ್ಸ್ ಪ್ರೆಸ್ ರೈಲು ಈದಿನ ಬೆಳಗಿನ ಜಾವ ಅಂಬಾಲ ಬಳಿ ಹಳಿತಪ್ಪಿ 17 ಪ್ರಯಾಣಿಕರು ಮೃತರಾದರು. ಅಂಬಾಲ- ಲೂಧಿಯಾನ ವಲಯದ ಗೋವಿಂದಗಢದ ಸಮೀಪ ಈ ದುರ್ಘಟನೆ ನಡೆಯಿತು. ಕನಿಷ್ಠ 133 ಮಂದಿ ಗಾಯಗೊಂಡರು. ರೈಲಿನ 11 ಬೋಗಿಗಳು ಉರುಳಿದವು.

1973: ಡ್ಯಾನಿಷ್ ಶಿಲ್ಪಿ ಜೋರ್ನ್ ಉಟ್ ಜೋನ್ ಅವರ ವಿನ್ಯಾಸದ ಸಿಡ್ನಿ ಒಪೇರಾ ಹೌಸನ್ನು ರಾಣಿ ಎರಡನೇ ಎಲಿಜಬೆತ್ ಉದ್ಘಾಟಿಸಿದರು.

1958: ಕೇರಳದ ಬೆಟ್ಟಗಳಲ್ಲಿರುವ ಗುಡಿರಳ್ಳಿ ಮತ್ತು ತಾಳಾಯರ್ ಎಂಬಲ್ಲಿನ ಎಸ್ಟೇಟುಗಳಲ್ಲಿ ಮುಷ್ಕರ ಹೂಡಿದ ಕಮ್ಯೂನಿಸ್ಟ್ ನಾಯಕತ್ವದ ಕಾರ್ಮಿಕರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ ಇಬ್ಬರು ಕಾರ್ಮಿಕರು ಸತ್ತು ನಾಲ್ವರು ಗಾಯಗೊಂಡರು.

1953: ಸಾಹಿತಿ ಕುಸುಮಲತಾ ಜನನ.

1951: ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರು ಭಾರತೀಯ ಜನಸಂಘವನ್ನು ದೆಹಲಿಯಲ್ಲಿ ಸ್ಥಾಪಿಸಿದರು.

1946: ಸಾಹಿತಿ ಎಚ್. ಆರ್. ರಘುನಾಥ ಭಟ್ ಜನನ.

1945: ಫ್ರಾನ್ಸಿನಲ್ಲಿ ಮತದಾನ ಮಾಡಲು ಮಹಿಳೆಯರಿಗೆ ಮೊದಲ ಬಾರಿಗೆ ಅವಕಾಶ.

1943: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಸಿಂಗಪುರದಲ್ಲಿ ಸ್ವತಂತ್ರ ಭಾರತದ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದರು.

1939: ಸಾಹಿತಿ ಸೀತಾರಾಮ ಪ್ರಭು ಜನನ.

1934: ಲೋಕನಾಯಕ ಜಯಪ್ರಕಾಶ ನಾರಾಯಣ ಮತ್ತು ಸ್ನೇಹಿತರಿಂದ ಕಾಂಗ್ರೆಸ್ ಸಮಾಜವಾದಿ ಪಕ್ಷದ ರಚನೆ.

1931: ಚಿತ್ರನಟ ಶಮ್ಮಿ ಕಪೂರ್ ಜನ್ಮದಿನ.

1931: ಸಾಹಿತಿ ಚಂದ್ರಕಾಂತ ಕುಸನೂರ ಜನನ.

1931: ಸಾಹಿತಿ ಲೀಲಾಶೇಖರ್ ಜನನ.

1920: ಇತಿಹಾಸ ತಜ್ಞ, ಶಿಲಾ ಶಾಸನ ತಜ್ಞ ಬಾ.ರಾ. ಗೋಪಾಲ್ (21-10-1920ರಿಂದ 16-6-1997) ಅವರು ಬಾಲಕೃಷ್ಣನ್- ಜಾನಕಿ ದಂಪತಿಯ ಮಗನಾಗಿ ಚಿಕ್ಕಬಳ್ಳಾಪುರದಲ್ಲಿ ಜನಿಸಿದರು.

1577: ಸಿಖ್ ಗುರು ರಾಮದಾಸ್ ಅವರಿಂದ ಅಮೃತಸರ ನಗರ ಸ್ಥಾಪನೆಗೊಂಡಿತು. ಮೊದಲಿಗೆ ಅದನ್ನು ರಾಮದಾಸ್ ಪುರ ಎಂದೇ ಕರೆಯಲಾಯಿತು. ಐದನೇ ಸಿಖ್ ಗುರು ಅರ್ಜುನ್ ದೇವ್ ಅವರು ಈ ನಗರಕ್ಕೆ `ಅಮೃತಸರ' ಹೆಸರನ್ನು ನೀಡಿದರು. ಗುರು ರಾಮದಾಸ್ ಅವರು ಈ ನಗರದಲ್ಲಿ `ಅಮೃತ ಸರೋವರ' ತೋಡಿದ್ದುದರ ನೆನಪಿಗೆ ಗುರು ಅಜರ್ುನ್ ದೇವ್ ಈ ಹೆಸರನ್ನು ಇರಿಸಿದರು. ಅಮೃತ ಸರದ ಸ್ವರ್ಣದೇಗುಲದಲ್ಲಿ ಹರ್ಮಿಂದರ್ ಸಾಹಿಬ್ ನ್ನು ಗುರು ಅರ್ಜುನ್ ದೇವ್ ನಿರ್ಮಿಸಿದರು.

No comments:

Post a Comment