Tuesday, October 30, 2018

ಇಂದಿನ ಇತಿಹಾಸ History Today ಅಕ್ಟೋಬರ್ 30

ಇಂದಿನ ಇತಿಹಾಸ History Today ಅಕ್ಟೋಬರ್ 30
2018: ನವದೆಹಲಿ: ಜೈಶ್-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ, ಮುಂಬೈ ಭಯೋತ್ಪಾದಕ ದಾಳಿಯ ಪಾತಕಿ ಮೌಲಾನಾ ಮಸೂದ್ ಅಜರನ ಸಹೋದರ ಸಂಬಂಧಿ (ಅಣ್ಣನ ಮಗಉಗ್ರಗಾಮಿ ಮೊಹಮ್ಮದ್ ಉಸ್ಮಾನನನ್ನು ಭದ್ರತಾ ಪಡೆಗಳು ಕೊಂದು ಹಾಕಿದವು. ಕಾಶ್ಮೀರ ಕಣಿವೆಯಲ್ಲಿ 10 ದಿನಗಳಿಂದ ಭದ್ರತಾ ಪಡೆಗಳ ಮೇಲೆ ಮರೆಯಿಂದ ಅಡಗಿ ದಾಳಿಗಳನ್ನು ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಮೊಹಮ್ಮದ್ ಉಸ್ಮಾನನ ಹತ್ಯೆಯು  ಭದ್ರತಾ ಪಡೆಗಳು ವರ್ಷ ಸಾಧಿಸಿದ ಮಹಾನ್ ಯಶಸ್ಸುಗಳಲ್ಲಿ ಒಂದು ಎಂದು ಭದ್ರತಾ ಪಡೆಗಳು ಹೇಳಿದವು. ಮೊಹಮ್ಮದ್ ಉಸ್ಮಾನ್ ಜೆಇಎಂ  ಮುಖ್ಯಸ್ಥ ಮೌಲಾನಾ ಮಸೂದ್ ಅಜರನ ಹಿರಿಯ ಸಹೋದರ  ಇಬ್ರಾಹಿಂನ ಪುತ್ರ. ಈತ 1999ರಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರನನ್ನು ಬಿಡಿಸಿಕೊಳ್ಳುವ ಸಲುವಾಗಿ ನಡೆದಿದ್ದ ಐಟಿ-814 ವಿಮಾನ ಅಪಹರಣದಲ್ಲಿ ಶಾಮೀಲಾಗಿದ್ದ.  ವರ್ಷದ ಹಿಂದೆ ಕಾಶ್ಮೀರ ಕಣಿವೆಗೆ ನುಸುಳಿದ್ದ ಎನ್ನಲಾಗಿರುವ ಮೊಹಮ್ಮದ್ ಉಸ್ಮಾನ್ ಜೈಶ್ ಸಂಘಟನೆಯನ್ನು ಬಲಾಢ್ಯ ಪಡಿಸುವ ಸಲುವಾಗಿ  ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎರಡು ವಾರಗಳಿಂದ ಸಕ್ರಿಯನಾಗಿದ್ದ ಈತ 4 ಸದಸ್ಯರ ಮರೆಯಿಂದ ದಾಳಿ ನಡೆಸುವ ಉಗ್ರರ ತಂಡಗಳನ್ನು ರಚಿಸಿ ಅವುಗಳ ಮೂಲಕ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ. ಈದಿನ ನಡೆದ ಭದ್ರತಾ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಅವರ ಪೈಕಿ ಮೊಹಮ್ಮದ್ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿದವು.
2018: ಕೊಲಂಬೋ: ಶ್ರೀಲಂಕೆಯ ಪದಚ್ಯುತ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಬೆಂಬಲಿಗರು ಸಹಸ್ರಾರು ಸಂಖ್ಯೆಯಲ್ಲಿ ರಾಜಧಾನಿ ಕೊಲಂಬೋ ರಸ್ತೆಗಳಲ್ಲಿ ಜಮಾಯಿಸಿ ವಿಕ್ರಮಸಿಂಘೆ ಅವರಿಗೆ ಬೆಂಬಲ ವ್ಯಕ್ತ ಪಡಿಸುವುದರ ಜೊತೆಗೆ ನೂತನ ಪ್ರಧಾನಿಯಾಗಿ ಮಹಿಂದ ರಾಜಪಕ್ಸೆ ಅವರನ್ನು ನೇಮಿಸಿದ ಅಧ್ಯಕ್ಷ ಸಿರಿಸೇನಾ ಪ್ರತಿಕೃತಿಗಳನ್ನು ಚಿಂದಿಚಿಂದಿ ಮಾಡಿದರು. ಪ್ರಧಾನಿ ಪದದಿಂದ ವಜಾಗೊಂಡ ಬಳಿಕ, ಇದೇ ಮೊದಲ ಬಾರಿಗೆ ಮಂಗಳವಾರ ತಮ್ಮ ಅಧಿಕೃತ ನಿವಾಸದಿಂದ ಹೊರಬಂದ ವಿಕ್ರಮಸಿಂಘೆ ಅವರು ತಮ್ಮನ್ನು ವಜಾಗೊಳಿಸಿ, ಮಾನವ ಹಕ್ಕುಗಳ ಉಲ್ಲಂಘನೆ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದಕ್ಕಾಗಿ  ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಖಂಡಿಸಿದರು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕೊಲಂಬೋದ ಬೀದಿಗಳಲ್ಲಿ ಪ್ರವಾಹದೋಪಾದಿಯಲ್ಲಿ ಬಂದರು ಎಂದು ವಿಕ್ರಮಸಿಂಘೆ ಅವರ ಪಕ್ಷ ಪ್ರತಿಪಾದಿಸಿದರೆ, ಪೊಲೀಸ್ ಮೂಲಗಳು ಅಂದಾಜು ೨೫,೦೦೦ ಮಂದಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಿದ್ದಾರೆ. ದ್ವೀಪರಾಷ್ಟ್ರದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಉಂಟಾದ ಬಳಿಕ ರಾಜಧಾನಿಯಲ್ಲಿ ನಡೆದ ಮೊತ್ತ ಮೊದಲ ಬೃಹತ್  ಮೆರವಣಿಗೆ ಇದಾಗಿದ್ದು, ಬಸ್ಸುಗಳಲ್ಲಿ ಅಸಂಖ್ಯ ಮಂದಿ ರಾಜಧಾನಿಗೆ ಧಾವಿಸಿದರು.
ವಿಕ್ರಮಸಿಂಘೆ ಬೆಂಬಲಿಗರ ಬೃಹತ್ ಸಮೂಹ ಶಾಂತಿಯುತವಾಗಿ ಮೆರವಣಿಗೆ  ನಡೆಸಿದ್ದುಪುಂಡ ಪ್ರಧಾನಿ ಕೆಳಗಿಳಿಯಿರಿಡೌನ್ ವಿದ್ ರೋಗ್ ಪಿಎಂ ಎಂದು ಘೋಷಣೆಗಳನ್ನು ಕೂಗಿತು. ಅಧ್ಯಕ್ಷರ ಕ್ರಮಕ್ಕೆ ಸಾಂಕೇತಿಕ ಪ್ರತಿಭಟನೆಯಾಗಿ ಪ್ರದರ್ಶನಕಾರರು ಸಿರಿಸೇನಾ ಅವರ ಪ್ರತಿಕೃತಿಗಳನ್ನು ಚಿಂದಿ ಚಿಂದಿ ಮಾಡಿದರು. ‘ವಜಾಕ್ರಮಕ್ಕೆ ನಾವು ವಿರುದ್ಧವಾಗಿದ್ದೇವೆ. ಜನರು ಸಿರಿಸೇನಾ ಅವರಿಗೆ ರೀತಿಯಾಗಿ ವರ್ತಿಸಲು ಮತ ನೀಡಿಲ್ಲ ಎಂದು ವಿಕ್ರಮಸಿಂಘೆ ಅವರು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ’ಅಧ್ಯಕ್ಷರು ಕೈಗೊಂಡಿರುವ ಕ್ರಮದ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೇವೆ ಎಂದು ಅವರು ನುಡಿದರು. ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಕರು ಜಯಸೂರ್ಯ ಅವರು ಸಂಸತ್ತಿನ ಅಧಿವೇಶನ ಕರೆಯದೇ ಇದ್ದಲ್ಲಿ ಬಿಕ್ಕಟ್ಟು ರಸ್ತೆಗಳಲ್ಲಿ ರಕ್ತಪಾತಕ್ಕೆ ಕಾರಣವಾದೀತು ಎಂದು ಎಚ್ಚರಿಸಿದರು. ಶಾಂತಿಯುತವಾಗಿ ನಡೆದ ಬೃಹತ್ ಪ್ರದರ್ಶನವನ್ನು ೨೬೦೦ಕ್ಕೂ ಹೆಚ್ಚು ಪೊಲೀಸರು, ವಿಶೇಷ ಕಾರ್ಯಪಡೆ ಕಮಾಂಡೋಗಳು ವೀಕ್ಷಿಸಿದರು. ಪರದೆಯ ಹಿಂದೆ ಮಾತ್ರ ಶಾಸನಕರ್ತರನ್ನು ತಮ್ಮ ಕಡೆಗೆ ಸೆಳೆಯುವ ಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ ಎಂದು ವರದಿಗಳು ಹೇಳಿದವು. ಈ ಮಧ್ಯೆ, ೭೨ರ ಹರೆಯದ ರಾಜಪಕ್ಸೆ ಅವರು ವಿಕ್ರಮಸಿಂಘೆ ಅವರ ಪಕ್ಷದ ನಾಲ್ವರು ಶಾಸನಕರ್ತರನ್ನು ತಮ್ಮ ಕಡೆಗೆ ಪಕ್ಷಾಂತರ ಮಾಡುವಂತೆ ಮನವೊಲಿಸಿ ಅವರಿಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ದರು. ಇದಕ್ಕೆ ಪ್ರತಿಯಾಗಿ ವಿಕ್ರಮಸಿಂಘೆ ಅವರು ಸಿರಿಸೇನಾ ಶಿಬಿರದ ಇಬ್ಬರು ಶಾಸನಕರ್ತರನ್ನು ತಮ್ಮ ಯುನೈಟೆಡ್ ನ್ಯಾಷನಲ್ ಪಾರ್ಟಿ ಸೇರಿವಂತೆ ಮನವೊಲಿಸಿದರು. ಪಕ್ಷಾಂತರಗಳ ಪರಿಣಾಮವಾಗಿ ಪ್ರಸ್ತುತ ವಿಕ್ರಮಸಿಂಘೆ ಅವರು ೨೨೫ ಸದಸ್ಯ ಬಲದ ಸಂಸತ್ತಿನಲ್ಲಿ ೧೦೫ ಸಂಸತ್ ಸದಸ್ಯರನ್ನು ಹೊಂದಿದರೆ, . ರಾಜಪಕ್ಸೆ ಮತ್ತು ಸಿರಿಸೇನಾ ಒಟ್ಟಾಗಿ ೯೮ ಸ್ಥಾನಗಳನ್ನು ಹೊಂದಿದ್ದಾರೆ. ಉಳಿದ ೨೨ ಸಂಸತ್ ಸದಸ್ಯರಲ್ಲಿ ಬಹುಮತದ ಸದಸ್ಯರು ಮತದಾನ ನಡೆದರೆ ವಿಕ್ರಮಸಿಂಘೆ ಅವರನ್ನು ಬೆಂಬಲಿಸುವ ನಿರೀಕ್ಷೆ ಇದೆ, ಆದರೆ ಕುದುರೆ ವ್ಯಾಪಾರವೂ ಬಿರುಸಾಗುವ ಸಾಧ್ಯತೆಗಳಿವೆ ಎಂದು ವೀಕ್ಷಕರು ಹೇಳಿದರು. ಚೀನಾ ಹಸ್ತಕ್ಷೇಪ: ವಿಕ್ರಮಸಿಂಘೆ ಆಡಳಿತ ಉಪ ಸಚಿವ ರಂಜನ್ ರಾಮನಾಯಕೆ ಅವರು ಚೀನಾವು ರಾಜಪಕ್ಸೆ ಅವರಿಗೆ ಶಾಸನಕರ್ತರ ಖರೀದಿಗೆ ಹಣ ನೀಡುತ್ತಿದೆ ಎಂದು ಆಪಾದಿಸಿದರು. ಅಧ್ಯಕ್ಷರಾಗಿ ಸುದೀರ್ಘಕಾಲ ಆಡಳಿತ ನಡೆಸಿದ್ದ ರಾಜಪಕ್ಸೆ ಅವರು ಚೀನಾ ಪರ ಒಲವು ಹೊಂದಿದ್ದರು.  ‘ಶ್ರೀಲಂಕೆಯಲ್ಲಿ ಸಂಸತ್ ಸದಸ್ಯರ ಖರೀದಿಗಾಗಿ ನಿಮ್ಮ ಲಕ್ಷಾಂತರ ಹಣವನ್ನು ವೆಚ್ಚ ಮಾಡಬೇಡಿ ಎಂದು ನಾನು ಚೀನಾಕ್ಕೆ ಹೇಳುತ್ತಿದ್ದೇನೆ. ಅವರು ರಾಷ್ಟ್ರವನ್ನು ಸಾರಾಸಗಟು ಖರೀದಿ  ಮಾಡಬಯಸಿದ್ದಾರೆ ಎಂದು ರಂಜನ್ ದೂರಿದರು.
ಚೀನಾ ನಿರಾಕರಣೆ: ಏನಿದ್ದರೂ, ಕೊಲಂಬೋದಲ್ಲಿನ ಚೀನಾದ ರಾಜತಾಂತ್ರಿಕ ಕಚೇರಿಯು ಹಸ್ತಕ್ಷೇಪದ ಆರೋಪಗಳನ್ನು ನಿರಾಕರಿಸಿತು.  ‘ರಂಜನ್ ರಾಮನಾಯಕೆ ಅವರ ಇತ್ತೀಚಿನ ಆರೋಪಗಳು ಬುಡರಹಿತ ಮತ್ತು ಬೇಜವಾಬ್ದಾರಿಯದ್ದು. ಚೀನಾವು ಇತರ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ತತ್ವವನ್ನು ಅನುಸರಿಸುತ್ತಿದೆ ಎಂದು ಚೀನಾ ಹೇಳಿಕೆ ತಿಳಿಸಿತು. ಸಂಸತ್ತನ್ನು ನವೆಂಬರ್ ೧೬ಕ್ಕೆ ಮುಂದೂಡಿರುವ ಅಧ್ಯಕ್ಷ ಸಿರಿಸೇನಾ ಅವರು ತಮ್ಮ ಆದೇಶವನ್ನು ಹಿಂತೆಗೆದುಕೊಳ್ಳುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಹಿನ್ನೆಲೆಯಲ್ಲಿ ವಿಕ್ರಮ ಸಿಂಘೆ ಅವರ ಹಣಕಾಸು ಸಚಿವ ಮಂಗಲ ಸಮರವೀರ ಅವರುರಾಜಪಕ್ಸೆ ಅವರಿಗೆ ಮತಗಳನ್ನು ಭದ್ರಪಡಿಸಿಕೊಳ್ಳಲು ಸಿರಿಸೇನಾ ಅವರು ಕಾಲಾವಕಾಶ ನೀಡುತ್ತಿದ್ದಾರೆ ಎಂದು ಆಪಾದಿಸಿದರು. ರಕ್ತಪಾತದ ಎಚ್ಚರಿಕೆ ನೀಡಿದ್ದ ಸ್ಪೀಕರ್ ಜಯಸೂರ್ಯ ಅವರು ಈದಿನ ಅಧ್ಯಕ್ಷರಿಗೆ ಪತ್ರ ಬರೆದು, ’ಸಂಸತ್ ಅಮಾನತು ನಿರ್ಧಾರವನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ, ಜನರು ತಮ್ಮ ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಗಾಗಿ ಪರ್ಯಾಯ  ಕ್ರಮ ಕೈಗೊಳ್ಳುವುದನ್ನು ತಡೆಯಲು ನಮಗೆ ಸಾಧ್ಯವಿಲ್ಲ ಎಂದು ತಿಳಿಸಿದರು. ರಾಜಧಾನಿಯಲ್ಲಿಪದಚ್ಯುತ ಸಚಿವರ ಅಂಗರಕ್ಷಕ ಗುಂಡುಹಾರಿಸಿದ ಘಟನೆಯ ಬಳಿಕ ಪ್ರಕ್ಷುಬ್ಧತೆ ಹೆಚ್ಚಿತು. ಸೇನೆಯು ಬಿಕ್ಕಟ್ಟನ್ನು ಇತ್ಯರ್ಥ ಪಡಿಸುವುದು ರಾಜಕಾರಣಿಗಳಿಗೆ ಬಿಟ್ಟ ವಿಷಯ ಎಂದು ಹೇಳಿತು.  ’ರಾಜಕಾರಣಿಗಳು ವಿವಾದವನ್ನು ಸಂವಿಧಾನ ಬದ್ಧವಾಗಿ ಮತ್ತು ಕಾನೂನು ಬದ್ಧವಾಗಿ ಇತ್ಯರ್ಥ ಪಡಿಸುವರು ಎಂಬುದಾಗಿ ಸೇನೆ ನಿರೀಕ್ಷಿಸಿದೆ ಎಂದು ಶ್ರೀಲಂಕೆಯ ಸೇನಾ ಮುಖ್ಯಸ್ಥ ಮಹೇಶ್ ಸೇನಾನಾಯಕೆ ಹೇಳಿದರು. ಈ ಮಧ್ಯೆ  ರಾತ್ರಿ ತಡವಾಗಿ ಸಿರಿಸೇನಾ ಅವರು ೧೨ ಸದಸ್ಯರ ಸಂಪುಟವನ್ನು ನೇಮಿಸಿದ್ದು, ರಾಜಪಕ್ಸೆ ಅವರಿಗೆ ವಿತ್ತ ಖಾತೆಯನ್ನು ನೀಡಿದರು. ಸಂಪುಟವನ್ನು ಶೀಘ್ರ ವಿಸ್ತರಿಸಲಾಗುವುದು ಎಂದು ನಿಕಟವರ್ತಿಗಳು ಹೇಳಿದರು.

2018: ರಾಯ್ಪುರ: ಛತ್ತೀಸ್ಗಢದ ಮಾವೋವಾದಿ ಕೇಂದ್ರ ಪ್ರದೇಶವಾದ ಬಸ್ತಾರ್ನಲ್ಲಿ ಅಭಿವೃದ್ಧಿ ಯೋಜನೆಗಳ ವರದಿ ಸಲುವಾಗಿ ತೆರಳಿದ್ದ ದೂರದರ್ಶನ ಛಾಯಾಗ್ರಾಹಕ ಮತ್ತು ಇಬ್ಬರು ಭದ್ರತಾ ಸಿಬ್ಬಂದಿ ಬೆಳಗ್ಗೆ ಮಾವೋವಾದಿ ನಕ್ಸಲೀಯ ದಾಳಿಗೆ ಬಲಿಯಾದರು. ಮೃತ ದೂರದರ್ಶನ ಛಾಯಾಗ್ರಾಹಕನನ್ನು ಅಚ್ಯುತಾನಂದ ಸಾಹು ಎಂಬುದಾಗಿ ಗುರುತಿಸಲಾಯಿತು.  ಹತರಾಗಿರುವ ಪೊಲೀಸ್ ಸಿಬ್ಬಂದಿಯನ್ನು ಸಬ್ ಇನ್ಸ್ಪೆಕ್ಟರ್ ರುದ್ರ ಪ್ರತಾಪ್ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ ಮಂಗ್ಲು ಎಂಬುದಾಗಿ ಗುರುತಿಸಲಾಯಿತು. ದಾಂತೆವಾಡದ ನಿಲವಾಯ ಅರಣ್ಯ ಪ್ರದೇಶದಲ್ಲಿ ಬೆಳಗ್ಗೆ ೧೧.೨೦ರ ವೇಳೆಗೆ ನಕ್ಸಲೀಯ ದಾಳಿ ನಡೆಯಿತು. ದೂರದರ್ಶನ ತಂಡವು ದಾಂತೆವಾಡದ ಕೆಲವು ಅಭಿವೃದ್ಧಿ ಯೋಜನೆಗಳನ್ನು ವರದಿ ಮಾಡುವ ಸಲುವಾಗಿ ದೆಹಲಿಯಿಂದ ಬಂದಿತ್ತು ಎಂದು ಛತ್ತೀಸ್ಗಢದ ವಿಶೇಷ ಪೊಲೀಸ್ ಮಹಾನಿರ್ದೇಶಕ (ನಕ್ಸಲ್ ಕಾರ್ಯಾಚರಣೆ) ಡಿಎಂ ಅವಸ್ಥಿ ಹೇಳಿದರು. ರಾಜ್ಯ ಪೊಲೀಸ್ ಅಧಿಕಾರಿಗಳ ಜೊತೆಗೆ ಪತ್ರಕರ್ತರು ಅರನ್ಪುರ ಪೊಲೀಸ್ ಠಾಣೆಯಿಂದ ಅರಣ್ಯ ಪ್ರದೇಶದ ಒಳಭಾಗದಲ್ಲಿದ್ದ ಗ್ರಾಮವೊಂದರ ಕಡೆಗೆ ಹೊರಟಿದ್ದರು. ವೇಳೆಯಲ್ಲಿ ಅವರಿದ್ದ ವಾಹನಗಳ ಮೇಲೆ ನಕ್ಸಲೀಯರು ದಾಳಿ ನಡೆಸಿದರು ಎಂದು ಸಿಆರ್ ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದರು. ಘಟನೆ ಬಗ್ಗೆ ಸಂದೇಶ ಬಂದ ತತ್ ಕ್ಷಣವೇ ಸಿಆರ್ಪಿಎಫ್ ಹೆಚ್ಚುವರಿ ಪಡೆಯೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿತು. ‘ಅವರು (ವರದಿಗಾರರು) ಯಾವ ವಿಷಯದ ಕುರಿತು ವರದಿಗಾಗಿ ಅಲ್ಲಿಗೆ ತೆರಳಿದ್ದರು ಎಂದು ತಿಳಿಯಲು ನಾವು ಯತ್ನಿಸುತ್ತಿದ್ದೇವೆ. ಮಾವೋವಾದಿಗಳ ನೈಜ ಮುಖ ಅನಾವರಣಗೊಳ್ಳುತ್ತಿದೆ. ನಾವು ವಿಷಯದ ಬಗ್ಗೆ ತನಿಖೆ ನಡೆಸುತ್ತೇವೆ. ನಾವೆಲ್ಲರೂ ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಉಪ ಪೊಲೀಸ್ ಮಹಾ ನಿರ್ದೇಶಕ ಪಿ. ಸುಂದರರಾಜ್ ಹೇಳಿದರು.  ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ರಾಜ್ಯವರ್ಧನ ರಾಥೋಡ್ ಅವರೂ ನಕ್ಸಲೀಯ ದಾಳಿಯನ್ನು ಖಂಡಿಸಿದರು.  ‘ನಾವು ಛಾಯಾಗ್ರಾಹಕನ ಕುಟುಂಬದ ಜೊತೆಗಿದ್ದೇವೆ. ನಾವು ಅವರ ಕುಟುಂಬದ ಕಾಳಜಿ ವಹಿಸುತ್ತೇವೆ. ಇಂತಹ ಅಪಾಯಕಾರಿ ಪರಿಸ್ಥಿತಿಗಳಲ್ಲಿ ವರದಿ ಮಾಡಲು ಹೋಗುವ ಎಲ್ಲ ಮಾಧ್ಯಮ ಮಂದಿಗೂ ನಾವು ಗೌರವವಂದನೆ ಸಲ್ಲಿಸುತ್ತೇವೆ ಮತ್ತು ಅವರ ಧೈರ್ಯವನ್ನು ನೆನಪಿನಲ್ಲಿ ಇಡುತ್ತೇವೆ ಎಂದು ಸಚಿವ ರಾಥೋಡ್ ನುಡಿದರುಛಾಯಾಗ್ರಾಹಕ ಮತ್ತು ಭದ್ರತಾ ಸಿಬ್ಬಂದಿಯ ಸಾವಿಗೆ ಶೋಕ ವ್ಯಕ್ತ ಪಡಿಸಿ ಟ್ವೀಟ್ ಸಂದೇಶ ನೀಡಿರುವ ಪ್ರಸಾರ ಛಾಯಾಗ್ರಾಹಕ ಅಚ್ಯುತಾನಂದ ಸಾಹು, ವರದಿಗಾರ ಧೀರಜ್ ಕುಮಾರ್ ಮತ್ತು ಲೈಟ್ ಅಸಿಸ್ಟೆಂಟ್ ಮೊರ್ಮುಕ್ತ ಶರ್ಮ ಅವರ ತಂಡವನ್ನು ಚುನಾವಣಾ ಪ್ರಚಾರ ಕಾರ್ಯದ ವರದಿ ಸಲುವಾಗಿ ಪ್ರಸಾರ ಭಾರತಿಯು ಕಳುಹಿಸಿಕೊಟ್ಟಿತ್ತು

2018: ವಾಷಿಂಗ್ಟನ್: ಅಮೆರಿಕದ ಪೌರರಲ್ಲದವರು ಮತ್ತು ಅಕ್ರಮ ವಲಸಿಗರ ಅಮೆರಿಕದಲ್ಲಿ ಜನಿಸುವ ಮಕ್ಕಳ ಪೌರತ್ವದ ಸಾಂವಿಧಾನಿಕ ಹಕ್ಕನ್ನು ಕೊನೆಗೊಳಿಸಲು ಆದೇಶವೊಂದನ್ನು ಹೊರಡಿಸಲು ತಾವು ಬಯಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಅಮೆರಿಕದ ಪೌರರಲ್ಲದವರು ಮತ್ತು ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತ ಟ್ರಂಪ್ ಹೇಳಿಕೆಯು ಮಧ್ಯಂತರ ಚುನಾವಣೆಗೆ ಮುನ್ನ ಕಠಿಣ ವಲಸೆ ನೀತಿ ಜಾರಿಗೆ ಅವರು ಒತ್ತು ನೀಡಲಿರುವುದನ್ನು ಸೂಚಿಸಿತು. ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು ಮಾತುಗಳನ್ನು ಆಡಿದ್ದುವಲಸೆ ವಿಚಾರದ ಮೇಲೆ ಬೆಳಕು ಚೆಲ್ಲುವುದರಿಂದ ಮಧ್ಯಂತರ ಚುನಾವಣೆಗೆ ಮುನ್ನ ನನ್ನ ಬೆಂಬಲಿಗರಲ್ಲಿ ಶಕ್ತಿ ತುಂಬುವುದರ ಜೊತೆಗೆ ರಿಪಬ್ಲಿಕನ್ ಗೆ ಕಾಂಗೆಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬುದು ನನ್ನ ನಂಬಿಕೆ ಎಂದು ಹೇಳಿದರು. ಮಕ್ಕಳ ಜನ್ಮಸಿದ್ಧ ಹಕ್ಕನ್ನು ರದ್ದು ಪಡಿಸುವುದರಿಂದ ಸಂವಿಧಾನಕ್ಕೆ ತಿದ್ದುಪಡಿ ತರುವ ಅಧ್ಯಕ್ಷರ ಏಕಪಕ್ಷೀಯ ಸಾಮರ್ಥ್ಯದ ಬಗ್ಗೆ ನ್ಯಾಯಾಲಯದಲ್ಲಿ  ಹೋರಾಟದ ಕಿಡಿ ಹಾರುವ ಸಾಧ್ಯತೆಗಳಿವೆ. ಅಮೆರಿಕ ಸಂವಿಧಾನದ ೧೪ನೇ ತಿದ್ದುಪಡಿಯು ಅಮೆರಿಕದಲ್ಲಿ ಜನಿಸುವ ಮಗುವಿಗೆ ಪೌರತ್ವದ ಹಕ್ಕಿನ ಖಾತರಿಯನ್ನು ನೀಡಿದೆ. ಇಂತಹ ಎಕ್ಸಿಕ್ಯೂಟಿವ್ ಆದೇಶದ ಕಾನೂನುಬದ್ಧತೆ ಬಗ್ಗೆ ಕೇಳಲಾದ ಪ್ರಶ್ನೆಗೆ ಟ್ರಂಪ್ ಅವರುಶ್ವೇತಭವನದ ವಕೀಲರು ನನ್ನ ಪ್ರಸ್ತಾಪದ ಪರಿಶೀಲನೆ ಮಾಡುತ್ತಿದ್ದಾರೆ. ಎಕ್ಸಿಕ್ಯೂಟಿವ್ ಆದೇಶ ಹೊರಡಿಸುವ ಮೂಲಕ ನಾನು ಇದನ್ನು ಮಾಡಬಹುದು ಎಂದು ಅವರು ಹೇಳುತ್ತಿದ್ದಾರೆಎಂದು ನುಡಿದರು. ಎಷ್ಟು ಶೀಘ್ರವಾಗಿ ಅವರು ಎಕ್ಸಿಕ್ಯೂಟಿವ್ ಆದೇಶ ಹೊರಡಿಸಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಲಿಲ್ಲ.

2018: ನವದೆಹಲಿ: ೨೦೦೮ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ ) ನ್ಯಾಯಾಲಯವು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ ಪುರೋಹಿತ್, ಸಾದ್ವಿ ಪ್ರಗ್ಯಾ ಸಿಂಗ್ ಥಾಕೂರ್ ಮತ್ತು ಇತರ ಐವರ ವಿರುದ್ಧ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ದೋಷಾರೋಪ ಹೊರಿಸಿತು.  ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಪಡಲ್ಕರ್ ಅವರು ಆರೋಪಿಗಳ ವಿರುದ್ಧ ದೋಷಾರೋಪಗಳನ್ನು ಹೊರಿಸಿದರು. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಆರೋಪಿಗಳ ವಿರುದ್ಧ ಭಯೋತ್ಪಾದನೆ ಕೃತ್ಯದಲ್ಲಿ ಪಾಲ್ಗೊಂಡ ಆರೋಪ ಹಾಗೂ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಸಂಚು ಮತ್ತು ಕೊಲೆ ಕೃತ್ಯದ ಆರೋಪ ಹೊರಿಸಲಾಯಿತು. ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಾರೋಪ ಹೊರಿಸುವುದು ಒಂದು ಪ್ರಕ್ರಿಯೆಯಾಗಿದ್ದು, ಬಳಿಕ ವಿಚಾರಣೆ ಆರಂಭವಾಗುತ್ತದೆ. ಪುರೋಹಿತ್ ಮತ್ತು ಸಾಧ್ವಿ ಹೊರತಾಗಿ ಮೇಜರ್ (ನಿವೃತ್ತ) ರಮೇಶ ಉಪಾಧ್ಯಾಯ, ಅಜಯ್ ರಹೀರ್ಕರ್, ಸುಧಾಕರ ದ್ವಿವೇದಿ, ಸುಧಾಕರ ಚತುರ್ವೇದಿ ಮತ್ತು ಸಮೀರ್ ಕುಲಕರ್ಣಿ ಪ್ರಕರಣದ ಇತರ ಆರೋಪಿಗಳು. ನ್ಯಾಯಾಧೀಶರು ಆರೋಪಗಳನ್ನು ಓದಿ ಹೇಳುವಾಗ ಎಲ್ಲ ಆರೋಪಿಗಳೂ ನ್ಯಾಯಾಲಯದಲ್ಲಿ ಹಾಜರಿದ್ದರು. ಉತ್ತರ ಮಹಾರಾಷ್ಟ್ರದಲ್ಲಿ ಮಾಲೆಗಾಂವ್ ಪಟ್ಟಣದ ಮಸೀದಿಯ ಸಮೀಪ ಮೋಟಾರ್ ಸೈಕಲ್ ಒಂದರಲ್ಲಿ ಇಡಲಾಗಿದ್ದ ಸ್ಫೋಟಕ ಸಾಧನವು ೨೦೦೮ರ ಸೆಪ್ಟೆಂಬರ್ ೨೯ರಂದು ಸ್ಫೋಟಗೊಂಡ ಪರಿಣಾಮವಾಗಿ ಜನ ಮೃತರಾಗಿ ೧೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

2018: ನವದೆಹಲಿ: ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಅತಿಯಾದ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ದಶಕದಷ್ಟು ಹಳೆಯ ಡೀಸೆಲ್ ಹಾಗೂ ೧೫ ವರ್ಷ ಹಳೆಯ ಪೆಟ್ರೋಲ್ ವಾಹನಗಳ ಓಡಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿದ ಬೆನ್ನಲ್ಲೇ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರವು ದೆಹಲಿಯಲ್ಲಿ ಖಾಸಗಿ ವಾಹನಗಳ ಓಡಾಟವನ್ನೇ ನಿಷೇಧಿಸುವ ಚಿಂತನೆ ನಡೆಸಿತು. ದೆಹಲಿಯಲ್ಲಿ ವಾಯುಮಾಲಿನ್ಯ ಈಗಿನ ವೇಗದಲ್ಲೇ ಮುಂದುವರೆದರೆ ಖಾಸಗಿ ವಾಹನಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ನಿಷೇಧಿಸಲೇಬೇಕಾಗಿ ಬರುತ್ತದೆ ಎಂದು ಪ್ರಾಧಿಕಾರ ಹೇಳಿತು.  ‘ದೆಹಲಿಯಲ್ಲಿ ವಾಯುಮಾಲಿನ್ಯ ಸ್ಥಿತಿ ಇನ್ನಷ್ಟು ಹದಗೆಡವುದಿಲ್ಲ ಎಂದು ಹಾರೈಸೋಣ. ಇಲ್ಲದೇ ಇದ್ದಲ್ಲಿ ನಾವು ಖಾಸಗಿ ವಾಹನಗಳ ಓಡಾಟವನ್ನು ಸ್ಥಗಿತ ಗೊಳಿಸಲೇಬೇಕಾಗುತ್ತದೆ. ಸಾರ್ವಜನಿಕ ಸಾರಿಗೆಯನ್ನು ಮಾತ್ರವೇ ಬಳಸುವುದು ಅನಿವಾರ್ಯವಾಗುತ್ತದೆ ಎಂದು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಭುರೇ ಲಾಲ್ ಹೇಳಿದರು. ದೆಹಲಿಯ ವಾಯುಗುಣಮಟ್ಟ ಋತುವಿನಲ್ಲಿ ಇದೇ ಮೊದಲ ಬಾರಿಗೆದುಸ್ಸಹ ಮಟ್ಟಕ್ಕೆ ತಲುಪಿತು. ನೆರೆಯ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವಿಕೆ ಹೆಚ್ಚಿದ ಪರಿಣಾಮವಾಗಿ ದೆಹಲಿಯಲ್ಲಿ ಉಸಿರು ಕಟ್ಟುವ ಸ್ಥಿತಿ ಉಂಟಾಗಿದೆ ಎನ್ನಲಾಯಿತು.  ಈದಿನ  ಮಧ್ಯಾಹ್ನ ಗಂಟೆ ವೇಳೆಗೆ ಒಟ್ಟಾರೆ ವಾಯುಗುಣಮಟ್ಟ ಸೂಚ್ಯಂಕವು ದೆಹಲಿಯಲ್ಲಿ ೪೦೧ನ್ನು ಸೂಚಿಸಿತ್ತು. ಇದು ಋತುಮಾನದಲ್ಲೇ ಗರಿಷ್ಠವಾಗಿದ್ದು, ವಾಯು ಗುಣಮಟ್ಟವುದುಸ್ಸಹ (ಅಸಹನೀಯ) ವರ್ಗದ ವ್ಯಾಪ್ತಿಗೆ ಬಂದಿದೆ ಎಂದು ಇದರ ಅರ್ಥ ಎಂಬುದಾಗಿ ಕೇಂದ್ರೀಯ ವಾಯುಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಹೇಳಿದರು ವಾಯು ಗುಣಮಟ್ಟ ಸೂಚ್ಯಂಕವು ( ಕ್ಯೂ ) ೦ದಿಂದ ೫೦ರ ಒಳಗೆ ಇದ್ದರೆಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ. ೫೧ರಿಂದ ೧೦೦ರ ಒಳಗೆ ಇದ್ದರೆಸಮಾಧಾನಕರ, ೧೦೧ರಿಂದ ೨೦೦ರವರೆಗೆ ಇದ್ದರೆ ಮಧ್ಯಮ, ೨೦೧ರಿಂದ ೩೦೦ರವರೆಗೆ  ಇದ್ದರೆಬಡ, ೩೦೧ರಿಂದ ೪೦೦ರವರೆಗೆ ಇದ್ದರೆಅತ್ಯಂತ ಬಡ ಮತ್ತು ೪೦೧ರಿಂದ ೫೦೦ರವರೆಗೆ ಇದ್ದರೆದುಸ್ಸಹ ಎಂಬುದಾಗಿ ಪರಿಗಣಿಸಲಾಗುತ್ತ್ತದೆ.  ‘ಅತ್ಯಂತ ವ್ಯಾಪಕ ಪ್ರಮಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುತ್ತಿರುವುದು ಮತ್ತು ಕಳೆದ ೨೪ ಗಂಟೆಗಳಲ್ಲಿ ಗಾಳಿಯು ಶಾಂತವಾಗಿರುವುದು ವಾಯು ಗುಣಮಟ್ಟ ಸ್ಥಿತಿಗೆ ತಲುಪಲು ಕಾರಣ ಎಂದು ಕೇಂದ್ರ ಸರ್ಕಾರದ ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನಾ ಸಂಸ್ಥೆ (ಎಸ್ ಎಎಫ್ ಆರ್ -ಸಫರ್) ಹೇಳಿತು. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರೋಪಿಕಲ್ ಮೆಟ್ರೋಲಜಿ (ಐಐಟಿಎಂ) ಕೂಡಾ ಉಪಗ್ರಹ ಚಿತ್ರಗಳಲ್ಲಿ ದೆಹಲಿಯ ನೆರೆರಾಜ್ಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಸುಡುವಿಕೆಗಳನ್ನು ಗುರುತಿಸಿರುವುದಾಗಿ ಹೇಳಿತು. ಗಾಳಿಯ ವೇಗ ಅತ್ಯಂತ ಕಡಿಮೆ ಇರುವುದರಿಂದ ವಾಯುವಿನ ಗುಣಮಟ್ಟದ ಪ್ರಸ್ತುತ ಪರಿಸ್ಥಿತಿ ಮುಂದಿನ ಒಂದೆರಡು ದಿನಗಳಲ್ಲಿ ಸುಧಾರಣೆ ಕಾಣುವುದು ಅಥವಾ ಮಾಲಿನ್ಯಕಾರಕ ಅಂಶಗಳು ವಾಯುವಿನಿಂದ ನಿವಾರಣೆ ಆಗುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಅದು ತಿಳಿಸಿತು. ಹಾಲಿ ಪರಿಸ್ಥಿತಿಯಲ್ಲಿ ದೆಹಲಿಯ ವಾಯುಗುಣಮಟ್ಟ ಈಗಿನ ಸ್ಥಿತಿಯಲ್ಲೇ ಇನ್ನೂ ಒಂದೆರಡು ದಿನ ಮುಂದುವರೆಯಬಹುದು ಎಂದು ಐಐಟಿಎಂ ಹೇಳಿದೆ. ರಾಷ್ಟ್ರ ರಾಜಧಾನಿಯ ಮೇಲೆ ದಟ್ಟ ಹೊಗೆ ಕವಿದಿದೆ ಎಂದು ಅಧಿಕಾರಿಗಳು ಹೇಳಿದರು.  ಸುಪ್ರೀಂಕೋರ್ಟ್ ತೀರ್ಪು: ಮಧ್ಯೆ, ರಾಜಧಾನಿ ದೆಹಲಿಯ ರಸ್ತೆಗಳಲ್ಲಿ ೧೫ ವರ್ಷ ಹಳೆಯ ಪೆಟ್ರೋಲ್ ಮತ್ತು ೧೦ ವರ್ಷ ಹಳೆಯ ಡೀಸೆಲ್ ವಾಹನಗಳ ಬಳಕೆಯನ್ನು ನಿಷೇಧಿಸಿದ ಸುಪ್ರೀಂಕೋರ್ಟ್ ಇಂತಹ ವಾಹನಗಳು ರಾಜಧಾನಿ ರಸ್ತೆಗಳಲ್ಲಿ ಓಡಾಡಿದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆಜ್ಞಾಪಿಸಿತ್ತುದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಪ್ರಸ್ತುತ ವಾಯುಮಾಲಿನ್ಯದ ಪರಿಸ್ಥಿತಿ ಅತ್ಯಂತ ಗಂಭೀರ ಎಂದು ಬಣ್ಣಿಸಿದ ಸುಪ್ರೀಂಕೋರ್ಟ್ ೧೫ ವರ್ಷ ಹಳೆಯ ಪೆಟ್ರೋಲ್ ಮತ್ತು ೧೦ ವರ್ಷ ಹಳೆಯ ಡೀಸೆಲ್ ವಾಹನಗಳ ಪಟ್ಟಿಯನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಸಾರಿಗೆ ಇಲಾಖೆಯ ವೆಬ್ ಸೈಟ್ ಗಳಲ್ಲಿ ಪ್ರಕಟಿಸುವಂತೆ ಆದೇಶ ನೀಡಿತ್ತು.
ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್, ಎಸ್. ಅಬ್ದುಲ್ ನಜೀರ್ ಮತ್ತು ದೀಪಕ್ ಗುಪ್ತ ಅವರನ್ನು ಒಳಗೊಂಡ ಪೀಠವು ವಿಚಾರದ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತನ್ನೂ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿತ್ತು. ಮಾಲಿನ್ಯ ಕುರಿತು ನಾಗರಿಕರಿಗೆ ನೇರವಾಗಿ ದೂರು ದಾಖಲಿಸಲು ಸಾಧ್ಯವಾಗುವಂತೆ ತತ್ ಕ್ಷಣ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯುವಂತೆಯೂ ಸಿಪಿಸಿಬಿಗೆ ನಿರ್ದೇಶನ ನೀಡಿದ ಪೀಠ, ಇಂತಹ ದೂರುಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಆದೇಶಿಸಿತ್ತು.
ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರಿ) ನ್ಯಾಯಾಲಯಕ್ಕೆ ನೆರವಾದ ವಕೀಲೆ ಅಪರಾಜಿತಾ ಸಿಂಗ್ ಅವರು ವಾಯು ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ಟಿಪ್ಪಣಿಯ ಮೇಲೆ ಸುಪ್ರೀಂಕೋಟ್ ಪೀಠ ಆದೇಶ ನೀಡಿತ್ತು. ರಾಜಧಾನಿಯ ವಾಯುಮಾಲಿನ್ಯ ನಿವಾರಣೆಗೆ ತುರ್ತು ನಿರ್ದೇಶನ ನೀಡುವಂತೆ ಸಿಂಗ್ ಕೋರಿದ್ದರು. ಇದಕ್ಕೆ ಮುನ್ನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಕೂಡಾ ದೆಹಲಿ- ಎನ್ ಸಿಆರ್ ಪ್ರದೇಶದಲ್ಲಿ ೧೫ ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ನಿಷೇಧಿಸಿತ್ತು. ಎನ್ ಜಿಟಿಯ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಕೂಡಾ ಸುಪ್ರೀಂಕೋರ್ಟ್ ವಜಾ ಮಾಡಿತ್ತು.

2018: ನವದೆಹಲಿ: ೨೦೧೬ರಲ್ಲಿ ವರ್ಷಕ್ಕಿಂತ ಕೆಳಗಿನ ಒಂ ದು ಲಕ್ಷಕ್ಕೂ ಅಧಿಕ ಮಕ್ಕಳು ಕಲುಷಿತ ಗಾಳಿ ಸೇವಿ ಸಿ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋ ಗ್ಯ ಸಂಸ್ಥೆಯ ಹೊಸ ಅಧ್ಯಯನ ತಿಳಿಸಿತು. ಈ ಹೊಸ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್) ’ವಾಯು ಮಾಲಿನ್ಯ ಮತ್ತು ಮಕ್ಕಳ ಆರೋಗ್ಯ; ಸ್ವಚ್ಛ ಗಾಳಿ ಘೋಷಣೆ ಎಂಬ ಅಭಿಯಾನದಡಿ ಬಿಡುಗಡೆ ಮಾಡಿತು. ಕೆಳ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ಪ್ರಮಾಣ ಹೆಚ್ಚಾಗಿದೆ ಎಂದು ವಿಶ್ವ ಆರೋ ಗ್ಯ ಸಂಸ್ಥೆ ಜಾಗತಿಕ ವಾಯುಮಾಲಿನ್ಯ ಮತ್ತು ಆರೋ ಗ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡಿದ ವರದಿ ಯಲ್ಲಿ ತಿಳಿಸಿತು. ಮನೆಯೊಳಗೆ ಸೃಷ್ಟಿಯಾಗುವ ವಾಯುಮಾ ಲಿನ್ಯದಿಂದಾಗಿ ಭಾರತದಲ್ಲಿ ಐದು ವರ್ಷದೊಳಗಿನ ೬೭,೦೦೦ ಮಕ್ಕಳು ಅಸುನೀಗಿದ್ದಾರೆ. ಹೊರಭಾ ಗದ ವಾಯುಮಾಲಿನ್ಯದಿಂದಾಗಿ ಅಂದರೆ ವಾಹ ನಗಳಿಂದ ಉಂಟಾಗುವ ಮಾಲಿನ್ಯದಿಂದ ಸರಿಸು ಮಾರು ೬೧,೦೦೦ ಸಾವಿರ ಐದು ವರ್ಷದೊಳಗಿನ ಮಕ್ಕಳು ಭಾರತದಲ್ಲಿ ಮೃತಪಟ್ಟಿವೆ ಎಂದು ಅಧ್ಯಯನ ವರದಿ ಹೇಳಿದತು.  ದೇಶೀಯ ಸಮೀಕ್ಷಾ ವರದಿಗಳ ಪ್ರಕಾರ, ಐದು ವರ್ಷದೊಳಗಿನ ಮಕ್ಕಳು ಹೊರಭಾಗದ ಪರಿ ಸರ ಮಾಲಿನ್ಯದಿಂದಾಗಿಯೇ ಭಾರತದಲ್ಲಿ ಅಕಾ ಲಿಕ ಮರಣಕ್ಕೆ ತುತ್ತಾಗುತ್ತಿವೆ  ಎನ್ನಲಾಯಿತು. ವಿಶೇಷವಾಗಿ ಮಕ್ಕಳು ಭ್ರೂಣಾವಸ್ಥೆಯ ಬೆಳವ ಣಿಗೆ ಸಮಯದಲ್ಲಿ ಮತ್ತು ಅವರ ಆರಂಭಿಕ ವರ್ಷ ಗಳಲ್ಲಿ ವಾಯುಮಾಲಿನ್ಯದ ನೇರ ಪರಿಣಾಮ ವನ್ನು ಎದುರಿಸುತ್ತವೆ. ಸಾಮಾನ್ಯವಾಗಿ ಮಕ್ಕಳು ವಯಸ್ಕರಿಗಿಂತ ವೇಗವಾಗಿ ಉಸಿರಾಡಿ, ಹೆಚ್ಚು ಗಾಳಿ ಯನ್ನು ಸೇವಿಸುತ್ತವೆ. ಗಾಳಿಯಲ್ಲಿನ ಮಾಲಿನ್ಯ ನೇರ ವಾಗಿ ಮಕ್ಕಳ ದೇಹ ಸೇರುತ್ತದೆ ಮತ್ತು ಭೂಮಿ ಗೆ ಸಮೀಪದಲ್ಲೇ ಇರುವುದರಿಂದ ಮಾಲಿನ್ಯ ಪೂರಿತ ಗಾಳಿ ಅವರ ದೇಹ ಸೇರುತ್ತಿದೆ. ಇದರಿಂ ಮಕ್ಕಳ ಸೂಕ್ಷ್ಮ ಅಂಗಾಂಗಗಳ ಮೇಲೆ ಮಾರಣಾಂತಿಕ  ಪರಿಣಾಮ ಬೀರಿದೆ ಎಂದು ವರದಿ ಹೇಳಿತು. ಮಕ್ಕಳು ಹೆಚ್ಚು ಸಮಯದಲ್ಲಿ ಮೈದಾನದಲ್ಲಿ, ದೈಹಿಕ ಚಟುವಟಿಕೆಯ ಆಟೋಟಗಳಲ್ಲಿ ತೊಡ ಗಿಸಿಕೊಂಡರೆ, ವಾಯುಮಾಲಿನ್ಯವನ್ನು ಸಮರ್ಥ ವಾಗಿ ಎದುರಿಸಲು ಶಕ್ತಿ ಬರುತ್ತದೆ. ಆದರೆ, ಈಗಿನ ಮಕ್ಕಳು ದೈಹಿಕ ಚಟುವಟಿಕೆ ಇಲ್ಲದೆ, ನೆಯ ಒಳಗೆ ಹೆಚ್ಚು ಸಮಯ ಕಳೆಯುವುದರಿಂದ ಮನೆಯೊಳಗಿನ ವಾಯುಮಾಲಿನ್ಯಕ್ಕೆ ಹೆಚ್ಚು ಬಲಿ ಯಾಗುತ್ತಿದ್ದಾರೆ. ತಾಯಿ ಅಡುಗೆ ಮಾಡುವಾಗ ಮಕ್ಕಳು ಅವರೊಂದಿಗೆ ಇರುತ್ತದೆ. ಅಡುಗೆ ಮನೆ ಯಲ್ಲಿ ಇಂಧನ ಉರಿಸುತ್ತಿರುವುದರಿಂದ ಅದು ನೇರವಾಗಿ ಮಕ್ಕಳ ಆರೋಗ್ಯದ ಮೇಲೆ ಗಂ ಭೀರ ಪರಿಣಾಮ ಬೀರುತ್ತವೆ. ಹೆಚ್ಚಾಗಿ ಮಕ್ಕಳ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ವಾಗುತ್ತಿದೆ ಎಂದು ವರದಿ ತಿಳಿಸಿದೆಸಲ್ಫೇಟ್ ಮತ್ತು ಬ್ಲ್ಯಾಕ್ ಕಾರ್ಬನ್ನಂತಹ ರಾಸಾಯನಿಕ ಒಳಗೊಂಡ ವಿ?ನಿಲದ ಸೇವನೆ ಯಿಂದ ಹೃದಯ ರಕ್ತನಾಳ ಮತ್ತು ಶ್ವಾಸಕೊ ಶಗಳು ಸಮಸ್ಯೆಗೆ ತುತ್ತಾಗುತ್ತವೆಯಲ್ಲದೆ, ಗಂಭೀ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದೂ ವರದಿ ತಿಳಿಸಿತು. ಕಡಿಮೆ ಮತ್ತು ಮಧ್ಯಮ ಪ್ರಮಾಣದ ಆದಾಯ ವಿರುವ ದೇಶಗಳಲ್ಲಿ ಇದೇ ವಯಸ್ಸಿನ ಶೇಕಡಾ ೯೮ರಷ್ಟು ಮಕ್ಕಳು ವಾಯುಮಾಲಿನ್ಯಕ್ಕೆ ತುತ್ತಾಗು ತ್ತಾರೆ ಎಂದು ಅಧ್ಯಯನ ತಿಳಿಸಿತು. ವಾಯುಮಾಲಿನ್ಯ ಮತ್ತು ಮಕ್ಕಳ ಆರೋಗ್ಯ: ಸ್ವಚ್ಛ ವಾತಾವರಣ ಎಂಬ ಶೀರ್ಷಿಕೆಯಲ್ಲಿ ೧೫ ವರ್ಷಕ್ಕಿಂತ ಕೆಳವಯಸ್ಸಿನ ಸುಮಾರು ಲಕ್ಷ ಮಕ್ಕ ಳು ೨೦೧೬ರಲ್ಲಿ ಸುತ್ತಲಿನ ಮತ್ತು ಮನೆಯ ವಾಯು ಮಾಲಿನ್ಯಗಳಿಗೆ ತುತ್ತಾಗುತ್ತಿದ್ದಾರೆ. ಜಾಗತಿಕವಾಗಿ ವಿಶ್ವದ ೧೮ ವರ್ಷಕ್ಕಿಂತ ಕೆಳವಯಸ್ಸಿನ ಶೇಕಡಾ ೯೩ರಷ್ಟು ಮಕ್ಕಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾಯುಗುಣಮಟ್ಟದ ಮಾರ್ಗಸೂಚಿ ಪ್ರಕಾರ ವಾತಾವರಣದಲ್ಲಿ ಸುತ್ತುವರಿದ ಸೂಕ್ಷ್ಮ ಕಣದ ವಿಷಯ (Pಒ೨.) ಮಟ್ಟಗಳು ವರ್ಷಕ್ಕಿಂತ ಕೆಳ ಗಿನ ಮಕ್ಕಳಲ್ಲಿ ೬೩೦ ಮಿಲಿಯನ್ ಮತ್ತು ೧೫ ವರ್ಷ ಕ್ಕಿಂತ ಕೆಳಗಿನ ಮಕ್ಕಳಲ್ಲಿ . ಬಿಲಿಯನ್ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಅಧ್ಯಯನದಲ್ಲಿ ತಿಳಿಸಿತು.  ಸುಮಾರು .೦೧ ಲಕ್ಷದಷ್ಟು ಮಕ್ಕಳು ಮನೆಯೊ ಳಗಿನ ಮತ್ತು ಹೊರಗಿನ ವಾಯು ಮಾಲಿನ್ಯ ದಿಂದ ಬಳಲುತ್ತಿದ್ದಾರೆ. ಜಾಗತಿಕವಾಗಿ ವಾಯು ಮಾಲಿನ್ಯದಿಂದ ಮೃತಪಡುವ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳ ಪೈಕಿ ಐದನೇ ಒಂದರಷ್ಟು ಪ್ರಕರಣ ಭಾರತದಲ್ಲಿ ಕಂಡುಬಂದಿದೆ. ಮನೆಯೊ ಳಗಿನ ಮತ್ತು ಹೊರಗಿನ ಮಲಿನ ಗಾಳಿ ಸೇವನೆಯು ಉಸಿರಾಟ ಸಂಬಂಧಿ ಸೋಂಕು ತಗುಲಲು ಕಾರಣವಾಗುತ್ತಿದೆ ಎನ್ನಲಾಯಿತು.


2016: ನವದೆಹಲಿ: ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ದೇಶದ ಎಲ್ಲರಿಗೂ ದೀಪಾವಳಿ ಶುಭಾಶಯಗಳನ್ನು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗಡಿ ಕಾಯುತ್ತಿರುವ ವೀರ ಯೋಧರಿಗೆ ದೀಪಾವಳಿಯ ಶುಭ ಕೋರಿ ಸಂದೇಶಗಳ ಪ್ರವಾಹವನ್ನೇ ಹರಿಸಿದ್ದಕ್ಕಾಗಿ ಜನತೆಗೆ ವಂದಿಸಿ, ವರ್ಷದ ದೀಪಾವಳಿಯನ್ನು ಯೋಧರ  ಹೆಸರಿನಲ್ಲಿ ಹಣತೆ ಹಚ್ಚುವ ಮೂಲಕ ಆಚರಿಸುವಂತೆ ಕರೆ ನೀಡಿದರು. ‘ಸಂತಸದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ನನ್ನ ಹಾರ್ದಿಕ ಶುಭಾಶಯಗಳು. ಇದೇ ಸಂದರ್ಭದಲ್ಲಿ #ಸಂದೇಶ್2ಸೋಲ್ಜರ್ಸ್ (#Sandesh2Soldiers) ಮೂಲಕ ಗಡಿ ಕ್ಷಣೆ ಮಾಡುತ್ತಿರುವ ಯೋಧರಿಗೆ ಶುಭ ಹಾರೈಸಿದ್ದಕಾಗಿ ಎಲ್ಲರಿಗೂ ವಂದನೆ ಸಲ್ಲಿಸುವೆ ಎಂದು ಪ್ರಧಾನಿ ನುಡಿದರು. ನಮ್ಮ ಹಬ್ಬಗಳು ಪ್ರಕೃತಿ, ಆಹಾರ, ಹವಾಮಾನ ಎಲ್ಲರೊಂದಿಗೂ ಮಿಳಿತವಾಗಿವೆ. ಆದ್ದರಿಂದ ಅದು ತುಂಬಾ ಸಾಂಕೇತಿಕ. ನಮ್ಮೊಳಗಿನ ಮತ್ತು ಜಗತ್ತಿನ ಕತ್ತಲ ನಿವಾರಣೆಗಾಗಿ ನಾವು ಹಬ್ಬ ಆಚರಿಸುತ್ತಿದ್ದೇವೆ ಎಂದು ಮೋದಿ ಹೇಳಿದರು  ನೈರ್ಮಲ್ಯ ಮತ್ತು ಪರಿಸರದ ಬಗ್ಗೆ ಇಂದು ಎಲ್ಲರೂ ಮಾತನಾಡುತ್ತಿದ್ದಾರೆ. ವಾಸ್ತವವಾಗಿ ಪ್ರತಿಯೊಬ್ಬರೂ ದೀಪಾವಳಿಗಾಗಿ ತಮ್ಮ ಮನೆ, ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ. ಇಡೀ ಜಗತ್ತೇ ಈದಿನ ದೀಪಾವಳಿಯನ್ನು ಆಚರಿಸುತ್ತದೆ. ಇಲ್ಲಿ ನಾವು ಕತ್ತಲ ಮೇಲಿನ ಬೆಳಕಿನ ವಿಜಯದ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ನಮ್ಮ ಯೋಧರು ರಾಷ್ಟ್ರದ ರಕ್ಷಣೆಗಾಗಿ ಗಡಿಯಲ್ಲಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡುತ್ತಿದ್ದಾರೆ. ನಾವು ನಮ್ಮ ದೀಪಾವಳಿಯನ್ನು ಅವರ ಹೆಸರಿನಲ್ಲಿ ಆಚರಿಸಬೇಕು. ಅವರು ಅಲ್ಲಿರುವ ಕಾರಣ ನಾವಿಲ್ಲಿ ದೀಪಾವಳಿ ಆಚರಿಸಲು ಸಾಧ್ಯವಾಗಿದೆ. ಬದುಕಿನ ಎಲ್ಲ ರಂಗಗಳ ಜನರೂ ಯೋಧರಿಗೆ ದೀಪಾವಳಿ ಸಂದೇಶದ ಪ್ರವಾಹವನ್ನೇ ಹರಿಸಿದ್ದಾರೆ.
ಅದಕ್ಕಾಗಿ ನಾನು ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಪ್ರಧಾನಿ ಹೇಳಿದರು.
ಇದೇ ಸಂದರ್ಭದಲ್ಲಿ ದೇಶದ ಏಕತೆಗಾಗಿ ನಿರಂತರ ಶ್ರಮಿಸಿದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರನ್ನೂ ಸ್ಮರಿಸಿದ ಪ್ರಧಾನಿ ಈದಿನ ಅವರ ಜನ್ಮದಿನ ಎಂದು ಹೇಳಿದರು. ನಾಳೆ (.31) ನಾವು ದಿವಂಗತ ಪ್ರಧಾನಿ ಇಂದಿರಾ ಗಾಂಧೀಜಿ ಅವರನ್ನೂ ಸ್ಮರಿಸಲಿದ್ದೇವೆ ಎಂದು ಮೋದಿ ನುಡಿದರು. ಪಟೇಲ್ ಅವರು ದೇಶದ ಏಕತೆಗಾಗಿ ದುಡಿದರು. ಆದರೆ ಸಿಖ್ ಜನತೆ ಮತ್ತು ಸರ್ದಾರ್ಗಳು ದೇಶಾದ್ಯಂತ ಎಂತಹ ನೋವು ಅನುಭವಿಸಿದರು ಎಂಬುದನ್ನು ನಾವು ಮರೆಯಬಾರದು. ಒಗ್ಗಟ್ಟಿನ ಮಂತ್ರ ಹಾಡಿ ವಿಭಜನಕಾರಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು ಎಂದು ಪ್ರಧಾನಿ ಹೇಳಿದರುಬಳಿಕ ಪ್ರಧಾನಿ ಹಿಮಾಚಲ ಪ್ರದೇಶದ ಸಮಡೊನಲ್ಲಿ ಭಾರತೀಯ ಯೋಧರಿಗೆ ಸಿಹಿ ತಿನ್ನಿಸುವ ಮೂಲಕ ದೀಪಾವಳಿ ಆಚರಿಸಿದರು.

2016: ಲಾಸ್ ಏಂಜೆಲಿಸ್ (ಕ್ಯಾಲಿಫೋರ್ನಿಯಾ): ತಮ್ಮ ಟೆಸ್ಲಾ ಮೋಟಾರ್ಸ್ ಇನ್ಕಾರ್ಪೊರೇಷನ್
ನ್ನು ಸಂಪೂರ್ಣ ಸ್ವಚ್ಛ ಇಂಧನ ಕಟ್ಟಡವನ್ನಾಗಿ ಮಾಡುವ ಮಹತ್ವಾಕಾಂಕ್ಷೆಯನ್ನು ಎಲೋನ್ ಮಸ್ಕ್ ಅವರು ನೂತನ ಸೌರ ಛಾವಣಿ ಉತ್ಪನ್ನದ ಮೂಲಕ ಅನಾವರಣಗೊಳಿಸಿದರು. ಕ್ಯಾಲಿಫೋರ್ನಿಯಾದ ಲಾಸ್ ಏಂಜೆಲಿಸ್ ಯುನಿವರ್ಸಲ್ ಸ್ಟುಡಿಯೋದಲ್ಲಿ ಮಸ್ಕ್ ಅವರು ತಮ್ಮ ಸೌರ ಛಾವಣಿ ಉತ್ಪನ್ನವನ್ನು ಪ್ರದರ್ಶಿಸಿದರು.  ಸೂರ್ಯಾಸ್ತವಾಗುತ್ತಿದ್ದಂತೆಯೇ ಅಂಗಳದ ಹೊರಭಾಗದಲ್ಲಿ ಸೇರಿದ್ದ ನೂರಾರು ಅತಿಥಿಗಳಿಗೆ ಸೌರ ಛಾವಣಿಯನ್ನು ತೋರಿಸಿದ ಮಸ್ಕ್ ಅವರು ತಾವು ಖರೀದಿಸಲಿರುವ ಟೆಸ್ಲಾ ಅಂಡ್ ಸೋಲಾರ್ ಸಿಟಿ ಕಾರ್ಪೊರೇಷನ್ ಛಾವಣಿಗಳನ್ನು ಸಂಪೂರ್ಣವಾಗಿ ಸೌರ ಛಾವಣಿಗಳಾಗಿ ಮಾರ್ಪಡಿಸಲಿದ್ದೇವೆ, ಛಾವಣಿಗಳು ಸಾಮಾನ್ಯ ಛಾವಣಿಗಳಿಗಿಂತ ಉತ್ತಮ ಗುಣಮಟ್ಟದ್ದಾಗಿರುತ್ತವೆ ಎಂದು ತಿಳಿಸಿದರು. ಬಳಿಕ ಬಳಿಕ ಸೌರ ಟೈಲ್ಗಳನ್ನು ಹೊದಿಸಿದ ಹಲವಾರು ಮನೆಗಳನ್ನು ಅವರು ಅತಿಥಿಗಳಿಗೆ ತೋರಿಸಿದರು. ಸೌರ ಟೈಲ್ಗಳು ಸಂಪೂರ್ಣವಾಗಿ ಛಾವಣಿಯೊಳಗೆ ಸೇರಿಕೊಂಡಿದ್ದವು. ಹಲವಾರು ಅತಿಥಿಗಳಿಗೆ ಅವುಗಳು ಸೌರ ಗಾಜುಗಳು ಎಂದು ಗುರುತಿಸಲೂ ಸಾಧ್ಯವಾಗಲಿಲ್ಲ. ಸೌರ ಛಾವಣಿಗಳು ಇತರ ಸಾಮಾನ್ಯ ಛಾವಣಿಗಳಿಗಿಂತ ಉತ್ತಮವಾಗಿರುತ್ತದೆ. ನೋಡಲೂ ಅಂದವಾಗಿರುತ್ತವೆ, ದೀರ್ಘಕಾಲ ಬಾಳಿಕೆ ಬರುತ್ತವೆ ಎಂದು ನುಡಿದ ಮಸ್ಕ್, ಬೇಕಿದ್ದರೆ ನೆರೆ ಮನೆಯವರನ್ನು ಕರೆದು ಪರೀಕ್ಷಿಸಲು ಹೇಳಿ ಎಂದರು. ಸೌರ ಛಾವಣಿಗಳು ಟೆಕ್ಚರ್ಡ್ ಗ್ಲಾಸ್ ಟೈಲ್, ಸ್ಲೇಟ್ ಗ್ಲಾಸ್ ಟೈಲ್, ಟಸ್ಕನ್ ಗ್ಲಾಸ್ ಟೈಲ್ ಮತ್ತು ಸ್ಮೂಥ್ ಗ್ಲಾಸ್ ಟೈಲ್ ಹೀಗೆ ನಾಲ್ಕು ಸ್ಟೈಲ್ಗಳಲ್ಲಿ ಬರುತ್ತವೆ. ಉಕ್ಕಿನ ಛಾವಣಿಗಳಷ್ಟೇ ಗಟ್ಟಿಯಾಗಿರುತ್ತವೆ. 2017 ಮಧ್ಯದ ವೇಳೆಗೆ ಸೌರ ಚಾವಣಿ ಟೈಲ್ಗಳ ಉತ್ಪಾದನೆ ಆರಂಭವಾಗಲಿದೆ ಎಂದು ಸೋಲಾರ್ ಸಿಟಿ ವೆಬ್ ಸೈಟ್ ವರದಿ ಮಾಡಿದೆ. ಮನೆಗೆ ಬೇಕಾದ ವಿದ್ಯುತ್ ಸೌರ ಶಕ್ತಿಯಿಂದಲೇ ಲಭಿಸುತ್ತದೆ. ಸೌರ ವಿದ್ಯುತ್ತನ್ನು ಸಂಗ್ರಹಿಸಲು ಪವರ್ ವಾಲ್2 ಎಂಬ ಬ್ಯಾಟರಿಯನ್ನೂ ಇದಕ್ಕೆ ಅಳವಡಿಸಲಾಗಿರುತ್ತದೆ. ಸೌರ ಛಾವಣಿ ಉತ್ಪಾದಿಸುವ ಸೌರ ವಿದ್ಯುತ್ತನ್ನು ಹಗಲು ಸಂಗ್ರಹಿಸಿ ಇಡುವ ಬ್ಯಾಟರಿ ರಾತ್ರಿಯಾಗುತ್ತಿದ್ದಂತೆಯೇ ಅದರ ಮೂಲಕ ಮನೆಯ ದೀಪಗಳನ್ನು ಬೆಳಗಿಸುತ್ತದೆ.


2016: ಮುಂಬೈ: ಸಂಘಟಿತ ಹೋರಾಟದ ನೆರವಿನಿಂದ ಕರ್ನಾಟಕ ರಣಜಿ ತಂಡ ಇಲ್ಲಿ ನಡೆದ ಗ್ರೂಪ್ ಇನ್ನೊಂದು ಪಂದ್ಯದಲ್ಲಿ ಅಸ್ಸಾಂ ವಿರುದ್ಧ 10 ವಿಕೆಟ್ ಜಯ ದಾಖಲಿಸಿತು.  ದ್ವಿತೀಯ ಇನಿಂಗ್ಸ್ನಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಅಲ್ಪಮೊತ್ತಕ್ಕೆ ಕಟ್ಟುಹಾಕುವಲ್ಲಿ ಯಶಸ್ವಿಯಾದ ಕೆ.ಗೌತಮ್ (108ಕ್ಕೆ7) ಮತ್ತು ಶ್ರೇಯಸ್ ಗೋಪಾಲ್ (97ಕ್ಕೆ3), ಕರ್ನಾಟಕ ತಂಡ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು.  ದ್ವಿತೀಯ ಇನಿಂಗ್ಸ್ನಲ್ಲಿ 264 ರನ್ ಗಳಿಸಿದ ಅಸ್ಸಾಂ 19 ರನ್ಗಳಿಂದ ಮುನ್ನಡೆ ಕಂಡುಕೊಂಡಿತು. ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆರ್ ಸಮರ್ಥ್ (4*) ಮತ್ತು ಮಯಾಂಕ್ ಅಗರ್ವಾಲ್ (17*) ಅಜೇಯರಾಗಿ ಉಳಿದು ಗೆಲುವಿನ ದಡ ಸೇರಿಸಿದರು.  * ಅಸ್ಸಾಂ ಮೊದಲ ಇನಿಂಗ್ಸ್ನಲ್ಲಿ 325ಕ್ಕೆ ಆಲೌಟ್ * ಕರ್ನಾಟಕ ಮೊದಲ ಇನಿಂಗ್ಸ್ನಲ್ಲಿ 9ವಿಕೆಟ್ಗೆ 570* ಡಿಕ್ಲೇರ್ * ಅಸ್ಸಾಂ ದ್ವಿತೀಯ ಇನಿಂಗ್ಸ್ 264ಕ್ಕೆ ಆಲೌಟ್  * ಕರ್ನಾಟಕ ದ್ವಿತೀಯ ಇನಿಂಗ್ಸ್ ವಿಕೆಟ್ ನಷ್ಟವಿಲ್ಲದೇ 21*

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕಂಡಿ ಪ್ರದೇಶದಲ್ಲಿನ ಡ್ರಗ್ಮುಲ್ಲಾ ಗ್ರಾಮದಲ್ಲಿ ಈದಿನ  ಬೆಳಗ್ಗೆ 11 ಗಂಟೆಗೆ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಘರ್ಷಣೆ ಆರಂಭವಾಯಿತು.  ಕನಿಷ್ಠ ಇಬ್ಬರು ಭಯೋತ್ಪಾದಕರು ಪ್ರದೇಶದಲ್ಲಿ ಅಡಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದರು.  ಸಶಸ್ತ್ರ ಪಡೆಗಳು, ಸಿಆರ್ಪಿಎಫ್ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ತಂಡದ ನೇತೃತ್ವದಲ್ಲಿ ಪ್ರತಿದಾಳಿ ಕಾರ್ಯಾಚರಣೆ ನಡೆಸಲಾಯಿತು.  ಲಷ್ಕರ್--ತೊಯ್ಬಾಕ್ಕೆ ಸೇರಿದ ಭಯೋತ್ಪಾದಕರು ಪ್ರದೇಶದಲ್ಲಿ ಅವಿತಿದ್ದಾರೆ ಎಂಬ ಮಾಹಿತಿಯನ್ನು ಅನುಸರಿಸಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಹೋರಾಟ ಪ್ರಾರಂಭವಾಯಿತು ಎಂದು ಮೂಲಗಳು ತಿಳಿಸಿದವು.  ಘಟನೆಯಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ತತ್ ಕ್ಷಣದ ವರದಿಗಳಿಲ್ಲ. ಭಯೋತ್ಪಾದಕರು ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎನ್ನಲಾಗಿದ್ದರೂ ಅವರ ಸದ್ದಡಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿದವು.  ಇದಕ್ಕೆ ಮುನ್ನ ಜಮ್ಮು ಜಿಲ್ಲೆಯ ಆರ್.ಎಸ್. ಪುರ ವಿಭಾಗದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ರೇಂಜರ್ಗಳು ಪದೇ ಪದೇ ಕದನ ವಿರಾಮ ಉಲ್ಲಂಘಿಸಿದ್ದನ್ನು ಅನುಸರಿಸಿ ಹಿಂದಿನ ರಾತ್ರಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಾಕ್ ಸೇನೆ ಮೇಲೆ ಪ್ರಬಲ ಗುಂಡಿನ ದಾಳಿ ನಡೆಸಿ ಸೇಡು ತೀರಿಸಿಕೊಂಡಿತ್ತು. ದಾಳಿ ಪರಿಣಾಮವಾಗಿ ಪಾಕ್ ಕಡೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಹೇಳಿದ್ದವು.

2016: ಜೆರುಸಲೇಮ್ ಜೆರುಸಲೇಮ್ ಹೋಲಿ ಸೆಪುಲ್ಚ್ರೆ ಚರ್ಚ್ ಒಳಗೆ ಇರುವ ಯೇಸು ಕ್ರಿಸ್ತನ ಸಮಾಧಿ ಎಂಬುದಾಗಿ ಕ್ರೖೆಸ್ತರು ನಂಬಿರುವ ಸಮಾಧಿಯನ್ನು ಕನಿಷ್ಠ ಕಳೆದ ಎರಡು ಶತಮಾನಗಳ ಅವಧಿಯಲ್ಲಿ ಮೊದಲ ಬಾರಿಗೆ ಈದಿನ  ತೆರೆಯಲಾಯಿತು. ಕ್ರಿಸ್ತ ಶಕ 33ರಲ್ಲಿ ಯೇಸು ಕ್ರಿಸ್ತನನ್ನು ಸಮಾಧಿ ಮಾಡಿದ ಬಳಿಕ ಇಡಲಾಯಿತು ಎನ್ನಲಾದ ಅಮೃತಶಿಲೆಯ ಬೃಹತ್ ಕಲ್ಲನ್ನು ಹೊರತೆಗೆದ ಚಾರಿತ್ರಿಕ ದೃಶ್ಯವನ್ನು ಎಎಫ್ಪಿ ಛಾಯಾಗ್ರಾಹಕ ಗಲಿ ಟಿಬ್ಬನ್ ಸೆರೆ ಹಿಡಿದರು. ಸಮಾಧಿ ಮತ್ತು ಆಸುಪಾಸಿನ ಪ್ರದೇಶದ ಜೀಣೋದ್ಧಾರ ಯೋಜನೆಯ ಅಂಗವಾಗಿ ಕ್ರಿಸ್ತನ ಸಮಾಧಿಯನ್ನು ತೆರೆಯಲಾಯಿತು. ಜೀಣೋದ್ಧಾರದ ಕೆಲಸಗಳ ಸಲುವಾಗಿ ಮೂರು ದಿನಗಳ ಅವಧಿಗೆ ಸಮಾಧಿ ಮೇಲಿನ ಅಮೃತ ಶಿಲೆಯ ಕಲ್ಲನ್ನು ತೆಗೆದಿಡಲಾಗುತ್ತದೆ. ಜೀಣೋದ್ಧಾರ ಮತ್ತು ಪ್ರಾಕ್ತನ ವಿಶ್ಲೇಷಣೆ ಸಲುವಾಗಿ ಸಮಾಧಿಯನ್ನು ತೆರೆಯಲಾಗಿದೆ ಎಂದು ತಜ್ಞರು ಹೇಳಿದರು. 1810ರಿಂದೀಚೆಗೆ ಸಮಾಧಿ ಮೇಲಿನ ಅಮೃತ ಶಿಲೆಯನ್ನು ತೆಗೆದದ್ದು ಇದೇ ಮೊದಲು. ಅಗ್ನಿ ದುರಂತದ ಹಿನ್ನೆಲೆಯಲ್ಲಿ ಹಿಂದೆ ಜೀಣೋದ್ಧಾರ ಸಂದರ್ಭದಲ್ಲಿ ಸಮಾಧಿಯ ಅಮೃತ ಶಿಲೆಯನ್ನು ತೆಗೆಯಲಾಗಿತ್ತು ಎಂದು ಚರ್ಚ್ನ ಅರ್ಮೇನಿಯನ್ ಸುಪೀರಿಯರ್ ಫಾದರ್ ಸ್ಯಾಮ್ಯುಯೆಲ್ ಅಘೊಯನ್ ನುಡಿದರು. ಅಮೃತ ಶಿಲೆಯನ್ನು ತೆಗೆದ ಸ್ಥಳದ ಇಕ್ಕಟ್ಟಿನ ಭಾಗದಲ್ಲಿ ಯೇಸು ಕ್ರಿಸ್ತನ ವರ್ಣಚಿತ್ರವನ್ನು (ಪೆಂಟಿಂಗ್) ಕಾಣಬಹುದು ಎಂದು ವರದಿ ತಿಳಿಸಿತು. ಅಮೃತಶಿಲೆಯ ಕೆಳಗೆ ಲಭಿಸಿದ ಅವಶೇಷ ಮತ್ತು ಅದರಲ್ಲಿನ ವಸ್ತುಗಳ ಅಧ್ಯಯನ ಮಾಡಲಾಗುತ್ತಿದೆ ಎಂದು ಅಘೊಯನ್ ಹೇಳಿದರು.

2016: ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಮುಂದುವರೆದ ಹಿಂಸಾಚಾರದಲ್ಲಿ ದಕ್ಷಿಣ ಕಾಶ್ಮೀರ ಗ್ರಾಮದ ಸರ್ಕಾರಿ ಶಾಲೆಯೊಂದಕ್ಕೆ ಅನಾಮಿಕ ಗಲಭೆಕೋರರು ಬೆಂಕಿ ಹಚ್ಚಿದರು.. ಇದರೊಂದಿಗೆ 112 ದಿನಗಳಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಗಲಭೆಗಳ ಕಾಲದಲ್ಲಿ ಕಿಚ್ಚು ಹಚ್ಚಲಾದ ಶಿಕ್ಷಣ ಸಂಸ್ಥೆಗಳ ಸಂಖ್ಯೆ 25ಕ್ಕೆ ಏರಿತು. ಅನಂತನಾಗ್ ಜಿಲ್ಲೆಯ ಐಶ್ವುುಖಮ್ ನಲ್ಲಿ ಕೇಂದ್ರ ಸರ್ಕಾರದಿಂದ ನಡೆಯಲ್ಪಡುವ ಜವಾಹರ ನವೋದಯ ವಿದ್ಯಾಲಯಕ್ಕೆ ನಿಗೂಢವಾಗಿ ಬೆಂಕಿ ಬಿದ್ದಿದ್ದುದು ಸ್ಥಳೀಯರ ಗಮನಕ್ಕೆ ಬಂತು. ತತ್ ಕ್ಷಣವೇ ಬೆಂಕಿಯನ್ನು ಆರಿಸಿ ಆಗಬಹುದಾಗಿದ್ದ ಹೆಚ್ಚಿನ ಅನಾಹುತವನ್ನು ತಪ್ಪಿಸಲಾಯಿತು.   ಶಾಲೆಯೂ ಸೇರಿದಂತೆ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಅರಂಭವಾದಂದಿನಿಂದ ಇಲ್ಲಿಯವರೆಗೆ 25 ಶಾಲೆಗಳಿಗೆ ಬೆಂಕಿ ಬಿದ್ದಿದೆ. ಶಾಲೆಗಳಲ್ಲಿ ಬಹುತೇಕ ಶಾಲೆಗಳು ಸರ್ಕಾರಿ ಶಾಲೆಗಳು ಎಂದು ಮೂಲಗಳು ತಿಳಿಸಿದವು.
2016: ಬೆಂಗಳೂರು: 2016ನೇಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಾಗಿ ವಿವಿಧ ಕ್ಷೇತ್ರಗಳಲ್ಲಿ
ಗಣನೀಯ ಸೇವೆ ಸಲ್ಲಿಸಿರುವ 61 ಗಣ್ಯರನ್ನು ಆಯ್ಕೆ ಮಾಡಲಾಗಿದ್ದು ಅವರ ಹೆಸರುಗಳನ್ನು ಪ್ರಕಟಿಸಲಾಯಿತು. ನ್ಯಾಯಾಂಗ ಕ್ಷೇತ್ರದಿಂದ ಶಿವರಾಜ ಪಾಟೀಲ, ವೈದ್ಯಕೀಯ ವಿಭಾಗದಿಂದ ಉಡುಪಿಯ ಡಾ.ಹೆಬ್ರಿ ಸುಭಾಷ್ಕೃಷ್ಣ ಬಲ್ಲಾಳ್‌, ವಿಜ್ಞಾನತಂತ್ರಜ್ಞಾನದಿಂದ ಜೆ.ಆರ್‌.ಲಕ್ಷ್ಮಣರಾವ್ಸೇರಿದಂತೆ ಒಟ್ಟು 61 ಗಣ್ಯರು ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆಯಲಿದ್ದಾರೆ. ಪ್ರಶಸ್ತಿಯು 1 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ.  ಪ್ರಶಸ್ತಿ ಪುರಸ್ಕೃತರು:  * ಸ್ವಾತಂತ್ರ್ಯ ಹೋರಾಟಗಾರರು: ಮಹದೇವ ಶಿವಬಸಪ್ಪ ಪಟ್ಟಣ, ಬೆಳಗಾವಿ. * ನ್ಯಾಯಾಂಗಶಿವರಾಜ ಪಾಟೀಲ, ಬೆಂಗಳೂರು. * ಹೊರನಾಡುಬೇಜವಾಡ ವಿಲ್ಸನ್‌, ದೆಹಲಿ. * ಸಾಹಿತ್ಯ: ರಂ.ಶಾ.ಲೋಕಾಪುರ, ಬೆಳಗಾವಿ.  ಬಿಶಾಮಸುಂದರ,  ಮೈಸೂರು.  ಕೆ.ಟಿ.ಗಟ್ಟಿ, ದಕ್ಷಣ ಕನ್ನಡ, ಡಾ.ಸುಕನ್ಯಾ ಮಾರುತಿ, ಧಾರವಾಡ.  * ರಂಗಭೂಮಿಮೌಲಾಸಾಬ್ಇಮಾಂಸಾಬ್ನದಾಫ್‌(ಅಣ್ಣಿಗೇರಿ), ದಾವಣಗೆರೆ, ಟಿ.ಹೆಚ್.ಹೇಮಲತಿ, ತುಮಕೂರು.  ರಾಮೇಶ್ವರಿ ವರ್ಮಾ, ಮೈಸೂರು, ಉಮಾರಾಣಿ ಬಾರಿಗಿಡದ, ಬಾಗಲಕೋಟೆ, ಚಂದ್ರಕುಮಾರ್ಸಿಂಗ್‌, ಬೆಂಗಳೂರು.  * ಸಿನಿಮಾ ಕಿರುತೆರೆ:  ರೇವತಿ ಕಲ್ಯಾಣ್ಕುಮಾರ್‌, ಬೆಂಗಳೂರು,  ಜ್ಯೂಲಿ ಲಕ್ಷ್ಮೀ, ಚೆನ್ನೈ,  ಜಿ.ಕೆ.ಶ್ರೀನಿವಾಸ ಮೂರ್ತಿ, ಬೆಂಗಳೂರು ಗ್ರಾಮಾಂತರ, ಸಾ.ರಾ.ಗೋವಿಂದು, ಬೆಂಗಳೂರು.  ಸೈಯ್ಯದ್ಸತ್ಯಜಿತ್‌, ಧಾರವಾಡ. ಸಂಗೀತನೃತ್ಯ:  ಕೆ.ಮುರಳೀಧರ ರಾವ್‌, ದಕ್ಷಿಣ ಕನ್ನಡ, ದ್ವಾರಕೀ ಕೃಷ್ಣಸ್ವಾಮಿ(ಕೊಳಲು), ಬೆಂಗಳೂರು. ಹೈಮಾವತಮ್ಮ(ಗಮಕ), ಬೆಂಗಳೂರು
ಪಂಡಿತ್ ನಾರಾಯಣ ಢಗೆ, ರಾಯಚೂರು. ವ್ಹಿ.ಜಿ.ಮಹಾಪುರುಷ(ಸಿತಾರ್‌), ಬಾಗಲಕೋಟೆ. * ಜಾನಪದ:  ತಿಮ್ಮಮ್ಮ(ಸೋಬಾನೆ ಪದ), ಮಂಡ್ಯ, ಶಾರದಮ್ಮ(ತತ್ವಪದ), ಚಿಕ್ಕಮಗಳೂರು,  ಮಲ್ಲಯ್ಯ ಹಿಡಕಲ್‌(ಭಜನೆ), ಬಾಗಲಕೋಟೆ.  ಅಡಿವೆಪ್ಪ ಸಣ್ಣ ಬೀರಪ್ಪ ಕುರಿಯವರ(ಏಕತಾರಿ), ಹಾವೇರಿ, ಸೋಭಿನಾ ಮೋತೇಸ್ಕಾಂಬ್ರೆಕರ್‌(ಡಮಾಮಿ), ಉತ್ತರ ಕನ್ನಡ, ಚಿಕ್ಕ ಮರಿಗೌಡ (ಪೂಜಾ ಕುಣಿತ), ರಾಮನಗರ, ನಿಂಗಣ್ಣ ನಿಂಗಶೆಟ್ಟಿ (ನೀಲಗಾರರ ಪದ), ಚಾಮರಾಜ ನಗರ.  * ಯಕ್ಷಗಾನ ಬಯಲಾಟ: ಎಂ.ಆರ್‌.ರಂಗನಾಥರಾವ್‌(ಗೊಂಬೆಯಾಟ), ಬೆಂಗಳೂರು ಗ್ರಾಮಾಂತರ
ಪೇತ್ರಿ ಮಾಧವನಾಯ್ಕ, ಉಡುಪಿ, ಕಿನ್ನಿಗೋಳಿ ಮುಖ್ಯ ಪ್ರಾಣ ಶೆಟ್ಟಿಗಾರ, ಉಡುಪಿ, ಸುಜಾತಮ್ಮ(ಪಾರಿಜಾತ), ಬಳ್ಳಾರಿ, ದ್ಯಾನ್ಲೆಪ್ಪ ಚಾಂಪ್ಲೆಪ್ಪ  ಮಾಣಿ(ದೊಡ್ಡಾಟ), ಗದಗ.  * ಸಮಾಜ ಸೇವೆ: ತುಳಸಮ್ಮ ಕೆರೂರ, ಗದಗ, ಜಿ.ಎಂ.ಮುನಿಯಪ್ಪ, ಕೋಲಾರ, ನಜೀರ್ಅಹಮದ್ಯು.ಶೇಖ್, ಉತ್ತರ ಕನ್ನಡ. * ಸಂಕೀರ್ಣ: ಡಾ.ಎಂ.ಎನ್‌.ವಾಲಿ(ಜಾನಪದ ತಜ್ಞರು), ವಿಜಯಪುರ
ಆರ್‌.ಜೈ ಪ್ರಸಾದ್‌(ತಾಂತ್ರಿಕ ಸಲಹೆಗಾರರು), ಬೆಂಗಳೂರು, ಡಾ.ಶಕುಂತಲಾ ನರಸಿಂಹನ್‌(ಸಂಗೀತ ತಜ್ಞರು), ಬೆಂಗಳೂರು, ದೇವರಾಜ ರೆಡ್ಡಿ(ಅಂತರ್ಜಲ ತಜ್ಞರು), ಚಿತ್ರದುರ್ಗ. * ಶಿಲ್ಪಕಲೆಚಿತ್ರಕಲೆ:
ಧೃವ ರಾಮಚಂದ್ರ ಪತ್ತಾರ(ಶಿಲ್ಪ), ವಿಜಯಪುರ, ಕಾಶೀನಾಥ ಶಿಲ್ಪಿ(ಶಿಲ್ಪ), ಶಿವಮೊಗ್ಗ, ಬಸವರಾಜ್‌.ಎಲ್.ಜಾನೆ(ಚಿತ್ರಕಲೆ), ಕಲ್ಬುರ್ಗಿ, ಪಾರ್ವತಮ್ಮ ಕೌದಿ ಕಲೆ, ಯಾದಗಿರಿ. * ಕೃಷಿಪರಿಸರ: ಎಲ್.ಸಿ.ಸೋನ್ಸ್‌(ಪರಿಸರ), ದಕ್ಷಿಣ ಕನ್ನಡ, ಜಿ.ಕೆ.ವೀರೇಶ್‌, ಹಾಸನ, ಕೆ.ಪುಟ್ಟಣ್ಣಯ್ಯ, ಮೈಸೂರು, ಡಾ.ಎಂ..ಖಾದ್ರಿ, ಬೀದರ್‌, * ಮಾಧ್ಯಮ:  ಇಂಧೂದರ ಹೊನ್ನಾಪುರ, ಬೆಂಗಳೂರು, ಎಂ.ಎಂ.ಮಣ್ಣೂರ, ಕಲ್ಬುರ್ಗಿ, ಭವಾನಿ ಲಕ್ಷ್ಮಿನಾರಾಯಣ, ಚಿಕ್ಕಬಳ್ಳಾಪುರ, ಈಶ್ವರ ದೈತೋಟ, ಬೆಂಗಳೂರು . * ಸಂಘ ಸಂಸ್ಥೆ: ಟೀಂ ಯುವ, ಬೀದರ್‌. * ವಿಜ್ಞಾನತಂತ್ರಜ್ಞಾನ: ಜೆ.ಆರ್‌.ಲಕ್ಷ್ಮಣರಾವ್‌, ಮೈಸೂರು,  ಪ್ರೊ.ಕೆ.ಮುನಿಯಪ್ಪ, ಚಿಕ್ಕಬಳ್ಳಾಪುರ. * ವೈದ್ಯಕೀಯ: ಡಾ.ಹೆಬ್ರಿ ಸುಭಾಷ್ಕೃಷ್ಣ ಬಲ್ಲಾಳ್‌, ಉಡುಪಿ. * ಕ್ರೀಡೆ: ಸುರ್ಜಿತ್ಸಿಂಗ್‌(ಪ್ಯಾರಾ ಒಲಂಪಿಕ್ಕ್ರೀಡಾಪಟು), ಬೆಂಗಳೂರು, ಎಸ್‌.ವಿ.ಸುನಿಲ್‌(ಹಾಕಿ), ಕೊಡಗು, ಕೃಷ್ಣ ಅಮೋಗೆಪ್ಪಾ ನಾಯ್ಕೋಡಿ(ಸೈಕ್ಲಿಂಗ್‌), ವಿಜಯಪುರ. * ಶಿಕ್ಷಣ:  ತೇಜಸ್ವಿ ಕಟ್ಟಿಮನಿ, ಕೊಪ್ಪಳ.
2016: ಕಜಕಸ್ತಾನಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಅಂ.ಬಾ.ನಿ)ದಲ್ಲಿ 115 ದಿನ ಪೂರೈಸಿದ ಮೂವರು ಗಗನಯಾತ್ರಿಗಳು ಈದಿನ ಸುರಕ್ಷಿತವಾಗಿ ಕಜಕಸ್ತಾನದಲ್ಲಿ ಭೂಮಿಗೆ ಇಳಿದರು.  ಬಾಹ್ಯಾಕಾಶದಲ್ಲಿ ಮೊದಲ ಬಾರಿಗೆ ಡಿಎನ್ ಸೀಕ್ವೆನ್ಸ್ನಡೆಸಿದ್ದ ಅಮೆರಿಕದ ಗಗನಯಾತ್ರಿ ಕೇಟ್ರುಬಿನ್ಸ್ಸೇರಿದಂತೆ ರಷ್ಯಾದ ಅನಟೊಲಿ ಇವಾನಿಶಿನ್ಮತ್ತು ಜಪಾನ್ ಟಕುಯಾ ಒನಿಷಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಸುರಕ್ಷಿತವಾಗಿ ಮರಳಿದರು. ಅಣು ಜೀವಶಾಸ್ತ್ರರಾಗಿರುವ ರುಬಿನ್ಸ್ ಅಂ.ಬಾ.ನಿಯಲ್ಲಿ ಇಲಿ, ವೈರಸ್ಮತ್ತು ಬ್ಯಾಕ್ಟೀರಿಯಾಗಳ ಡಿಎನ್ ಮಾದರಿಯ ಸೀಕ್ವೆನ್ಸಿಂಗ್ ನಡೆಸಿದ್ದರು.  ‘ಮಿನ್ಅಯಾನ್ಸಾಧನದ ಮೂಲಕ ಪ್ರಯೋಗ ನಡೆಸಲಾಗಿದ್ದು, ಇದೇ ಸಮಯದಲ್ಲಿ ನೆಲದ ಮೇಲಿನ ಪ್ರಯೋಗಾಲಯದಲ್ಲಿಯೂ ಇಂಥದ್ದೇ ಪ್ರರೀಕ್ಷೆ ಮಾಡಲಾಗಿತ್ತು. ಬಾಹ್ಯಾಕಾಶ ಯಾನ ನಡೆಸಿದ 60ನೇ ಮಹಿಳೆ ರುಬಿನ್ಸ್ಮತ್ತು ಒಬಿಷಿ ಅವರಿಗೆ ಇದು ಮೊದಲ ಬಾಹ್ಯಾಕಾಶ ಯೋಜನೆಯಾಗಿತ್ತು. ಕಮಾಂಡರ್ಇವಾನಿಶಿನ್ ಹಿಂದೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 5 ತಿಂಗಳು ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರು. 
2016: ವಿಶ್ವಸಂಸ್ಥೆನ್ಯೂಯಾರ್ಕ್ನಲ್ಲಿನ ವಿಶ್ವಸಂಸ್ಥೆಯ ಮುಖ್ಯ ಕಚೇರಿಯ ಕಟ್ಟಡದ ಮೇಲೆಹ್ಯಾಪಿ ದಿವಾಲಿ’('Happy Diwali') ಎಂಬ ಅಕ್ಷರಗಳು ಅದರ ಮೇಲೆ ಬೆಳಗುವ ದೀಪದ ಚಿತ್ರ ಜಗಮಗಿಸಿತು. ಮೂಲಕ ಭಾರತೀಯ ಪರಂಪರೆಯ ದೀಪಾವಳಿಯನ್ನು ವಿಶ್ವಸಂಸ್ಥೆಯಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು. ದೀಪಾವಳಿ ಜ್ಞಾಪಕಾರ್ಥವಾಗಿ ಪ್ರಥಮ ಬಾರಿಗೆ ಮುಖ್ಯ ಕಚೇರಿ ಕಟ್ಟಡಕ್ಕೆ ದೀಪ ಬೆಳಗಿತು. 2014ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಸಾಂಪ್ರದಾಯಿಕ ಹಬ್ಬದೀಪಾವಳಿ ಮಹತ್ವಕುರಿತು ಅಂಗೀಕಾರವಾದ ಬಳಿಕ ಪ್ರಥಮಬಾರಿಗೆ ಆಚರಿಸಲಾಯಿತು. ವಿಶ್ವಸಂಸ್ಥೆ ಪ್ರಥಮ ಬಾರಿ ದೀಪಾವಳಿ ಬೆಳಕು ಬೆಳಗಿಸಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸಯ್ಯದ್ಅಕ್ಬರುದ್ದೀನ್ಟ್ವೀಟ್ಮಾಡಿದರು. ಕತ್ತಲೆ ಮೇಲೆ ಬೆಳಕು, ಹತಾಶೆ ಮೇಲೆ ಭರವಸೆ, ಅಜ್ಞಾನದ ಮೇಲೆ ಜ್ಞಾನ, ದುಷ್ಟತನದ ಮೇಲೆ ಒಳಿತನ್ನು ವಿಶ್ವಸಂಸ್ಥೆ ಬೆಳಗಿಸುತ್ತದೆ. ದೀಪಾವಳಿಯ ಶುಭಾಶಯಗಳುಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಪೀಟರ್ಥಾಮಸ್ಟ್ವೀಟ್ಮಾಡಿದರು.

2016: ಶಬರಿಮಲೆ: ಕೇರಳದ ವಕ್ಫ್ ಸಚಿವ ಡಾ.ಕೆಟಿ ಜಲೀಲ್  ಹಿಂದಿನ ದಿನ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು. ಇದೇ ಮೊದಲ ಬಾರಿಗೆ ಮುಸ್ಲಿಂ ಸಚಿವರೊಬ್ಬರು ದೇಗುಲಕ್ಕೆ ಭೇಟಿ ನೀಡುವ ಮೂಲಕ ಶಬರಿಮಲೆಗೆ ಭೇಟಿ ನೀಡಲು ಧರ್ಮಗಳ ತಡೆಗೋಡೆಯಿಲ್ಲ ಎಂಬುದನ್ನು ಸಾಬೀತು ಪಡಿಸಿದರು. ವಕ್ಫ್ ಜತೆ ಸ್ಥಳೀಯ ಸ್ವಯಮಾಡಳಿತ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿ ಖಾತೆಯನ್ನೂ ಜಲೀಲ್ ನಿಭಾಯಿಸುತ್ತಿದ್ದಾರೆ. ದೇವಸ್ವಂ ಮತ್ತು ವಿದ್ಯುತ್ ಮಂಡಳಿ ಸಚಿವ ಕಡಕ್ಕಂಪಳ್ಳಿ ಸುರೇಂದ್ರನ್ ಜತೆ ಜಲೀಲ್ ಅವರು ಭೇಟಿ ನೀಡಿದ್ದು, ಮುಂಬರುವ ಶಬರಿಮಲೆ ಯಾತ್ರೆಗೆ ದೇವಸ್ಥಾನದಲ್ಲಿ ಯಾವ ರೀತಿಯ ಸಿದ್ಧತೆಗಳನ್ನು ನಡೆಸಲಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆಸಿದರು. ನಾನು ರಾತ್ರಿ 1.15ಕ್ಕೆ ಶಬರಿಮಲೆಗೆ ತಲುಪಿದ್ದೆ. ಮುಂಜಾನೆ ನಾನು ಅಯ್ಯಪ್ಪ ದರ್ಶನ ಮಾಡಲು ಹೋದೆ. ನಾನು ದೇವಾಲಯ ಪ್ರವೇಶಿಸುವಾಗ ಯಾರೊಬ್ಬರೂ ನನ್ನನ್ನು ತಡೆಯಲಿಲ್ಲ.ಅಯ್ಯಪ್ಪ ಸ್ವಾಮಿ ದರ್ಶನದ ನಂತರ ವಾವರ್ ಮಸೀದಿಗೂ ಭೇಟಿ ನೀಡಿದೆ. ಅಯ್ಯಪ್ಪನ ಮುಸ್ಲಿಂ ಗೆಳೆಯ ವಾವರ್. ಶತಮಾನಗಳು ಕಳೆದರೂ ಅವರ ಗೆಳೆತನ ಚಿರವಾಗಿದೆ. ಹೀಗಿರುವ ಒಳ್ಳೆಯ ದಿನಗಳು ಮತ್ತೆ ಮರಳಿ ಬರಲಿ ಎಂದು ಜಲೀಲ್ ತಮ್ಮ ಫೇಸ್ಬುಕ್ ನಲ್ಲಿ ಬರೆದರು.
2008: ಅಸ್ಸಾಂನ ವಿವಿಧ ಜನನಿಬಿಡ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 61 ಮಂದಿ ಸಾವನ್ನಪ್ಪಿ, 350ಕ್ಕೂ ಹೆಚ್ಚು ಜನ ಗಾಯಗೊಂಡರು. ಭಾರತದ ಈ ಈಶಾನ್ಯ ರಾಜ್ಯದಲ್ಲಿ ಕೇವಲ ಒಂದು ಗಂಟೆ ಅವಧಿಯೊಳಗೆ ಒಂದರ ನಂತರ ಒಂದರಂತೆ 13 ಬಾಂಬುಗಳು ಸ್ಫೋಟಗೊಂಡವು. ಗುವಾಹಟಿ ನಗರದ ಜನನಿಬಿಡ ಮಾರುಕಟ್ಟೆ ಪ್ರದೇಶ ಮತ್ತು ಬರ್ಪೆಟಾ, ಕೋಕ್ರಜಾರ್ ಹಾಗೂ ಬೋಂಗಿಯಾಗಾಂವ್ ಜಿಲ್ಲೆಗಳಲ್ಲಿ ಏಕಕಾಲದಲ್ಲೇ ಈ ಬಾಂಬುಗಳು ಸ್ಫೋಟಿಸಿದವು.

2008: `ಚಂದ್ರಯಾನ-1' ಯಶಸ್ಸಿಗೆ ಕಾರಣರಾದ ಇಬ್ಬರು ವಿಜ್ಞಾನಿಗಳಾದ ಡಾ. ಎಸ್.ಕೆ.ಶಿವಕುಮಾರ್, ಎಂ.ಅಣ್ಣಾದೊರೈ, ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಇನ್ಫೋಸಿಸ್ಸಿನ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಟಿ.ವಿ.ಮೋಹನ್ ದಾಸ್ ಪೈ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಒಟ್ಟು 89 ಮಂದಿ ಗಣ್ಯರಿಗೆ 2008ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿತು.

2008: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಾತೃಭಾಷೆಯ ಜೊತೆಗೆ, ಎಳೆ ವಯಸ್ಸಿನಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸುವುದು ಅಗತ್ಯವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿತು. 1994-95ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಅಂಗೀಕೃತವಾಗಿರುವ ಎಲ್ಲ ಶಾಲೆಗಳಲ್ಲಿ 1ರಿಂದ 4ನೇ ತರಗತಿವರೆಗೆ ಮತ್ತು 2002-03ರಲ್ಲಿ ಅಂಗೀಕೃತವಾಗಿರುವ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗಿನ ಶಿಕ್ಷಣ ಮಾಧ್ಯಮವು ಮಾತೃಭಾಷೆ ಅಥವಾ ಕನ್ನಡ ಭಾಷೆ ಆಗಿರಬೇಕು ಎಂಬ 2002ರ ಸರ್ಕಾರಿ ಆದೇಶವನ್ನು ರದ್ದು ಮಾಡಿದ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇಂಗ್ಲಿಷ್ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಮಾತ್ರ ಅಂಗೀಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ವ್ಯಾಸಂಗ ಮಾಡಲು ಅನುಮತಿ ನೀಡಬಹುದು. ಇಲ್ಲದಿದ್ದರೆ ಅಂತಹ ಶಾಲೆಗಳನ್ನು ಮುಚ್ಚಬೇಕು ಎಂದು ಸರ್ಕಾರದ 2002ರ ಆದೇಶವನ್ನು ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅನೂರ್ಜಿತಗೊಳಿಸಿದರು. ಭಾಷಾ ಮಾಧ್ಯಮಕ್ಕೆ ಸಂಬಂಧಿಸಿದಂತೆ 1994ರ ಸರ್ಕಾರದ ಆದೇಶದ ಕುರಿತು ಪೂರ್ಣಪೀಠ ಕಳೆದ ಜುಲೈ ತಿಂಗಳಿನಲ್ಲಿ ನೀಡಿದ ತೀರ್ಪಿಗೆ ಅನುಗುಣವಾಗಿ 2002ನೇ ಸಾಲಿನ ಈ ಆದೇಶವನ್ನು ರದ್ದು ಮಾಡಲಾಗಿದೆ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು. 2002ರ ಮೇ 30ರಂದು ಸರ್ಕಾರ ಹೊರಡಿಸಿದ್ದ ಆದೇಶದ ರದ್ದತಿ ಕೋರಿ ಬೆಂಗಳೂರಿನ ಸೇಂಟ್ ಫಿಲೋಮಿನಾಸ್ ಇಂಗ್ಲಿಷ್ ಸ್ಕೂಲ್ ಸೇರಿದಂತೆ ರಾಜ್ಯದ ಹಲವಾರು ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ಹೊರಡಿಸಲಾಯಿತು.

2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟದ 129 ಶಾಸಕರು ಸಲ್ಲಿಸಿದ ವೈಯಕ್ತಿಕ ಪ್ರಮಾಣ ಪತ್ರವನ್ನು ಪರಿಶೀಲಿಸಿ ತೃಪ್ತಿ ವ್ಯಕ್ತಪಡಿಸಿದ ರಾಜ್ಯಪಾಲ ರಾಮೇಶ್ವರ ಠಾಕೂರ್, ಎರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಜಂಟಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ಅವರನ್ನು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲರು ಈ ವಿಷಯ ತಿಳಿಸಿದರು. ರಾಜಭವನದ ಈ ಬೆಳವಣಿಗೆಯಿಂದಾಗಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದಲ್ಲಿ ಒಂದು ರೀತಿಯ ಸಮಾಧಾನ ಕಂಡುಬಂದಿತು.

2007: ವಾಯುಭಾರ ಕುಸಿತದಿಂದಾಗಿ ಐದು ದಿನಗಳಿಂದ ಭಾರಿ ಹಿಂಗಾರು ಮಳೆಗೆ ಸಿಲುಕಿದ ಆಂಧ್ರಪ್ರದೇಶದ ಕರಾವಳಿ ಜಿಲ್ಲೆಗಳಾದ ಕಡಪಾ, ನೆಲ್ಲೂರು, ಪ್ರಕಾಶಮ್ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ 20 ಜನರು ಸಾವಿಗೀಡಾದರು.

2007: ವಿಶ್ವಕಪ್ ಫುಟ್ ಬಾಲ್ ಟೂರ್ನಿಗೆ ಆತಿಥ್ಯ ವಹಿಸಬೇಕೆಂಬ ಬ್ರೆಜಿಲ್ ದೇಶದ ಸುದೀರ್ಘ ಕಾಯುವಿಕೆ ಕೊನೆಗೊಂಡಿತು. 2014ರ ವಿಶ್ವಕಪ್ ಟೂರ್ನಿ ದಕ್ಷಿಣ ಅಮೆರಿಕದ ಈ ದೇಶದಲ್ಲಿ ನಡೆಯುವುದು ಖಚಿತಗೊಂಡಿತು. ಬ್ರೆಜಿಲ್ ಸಲ್ಲಿಸಿದ್ದ ಬಿಡ್ ಗೆ ಕಳೆದ ವಾರವೇ ಫಿಫಾ ತಾಂತ್ರಿಕ ಸಮಿತಿಯು ಅನುಮೋದನೆ ನೀಡಿತ್ತು. ವಿಶ್ವದ ಅತಿದೊಡ್ಡ ಕ್ರೀಡಾಮೇಳವನ್ನು ಸಂಘಟಿಸುವ ಅವಕಾಶ ಬ್ರೆಜಿಲ್ಲಿಗೆ ಲಭಿಸುವುದು ಆಗಲೇ ಖಚಿತವಾಗಿತ್ತು. ಇತರ ಯಾವುದೇ ದೇಶಗಳು ಬಿಡ್ ಸಲ್ಲಿಸಿರಲಿಲ್ಲ. 1950ರಲ್ಲಿ ಬ್ರೆಜಿಲಿನಲ್ಲಿ ಕೊನೆಯದಾಗಿ ವಿಶ್ವಕಪ್ ಟೂರ್ನಿ ನಡೆದಿತ್ತು. ಇದೀಗ 64 ವರ್ಷಗಳ ಬಳಿಕ ಮತ್ತೊಮ್ಮೆ ಅವರಿಗೆ ಆತಿಥ್ಯ ವಹಿಸುವ ಅವಕಾಶ ಒದಗಿತು. ಐದು ಬಾರಿ ವಿಶ್ವಕಪ್ ಗೆದ್ದಿರುವ ಬ್ರೆಜಿಲ್ ಗೆ ಲಭಿಸಿದ ಈ ಅವಕಾಶವನ್ನು ಯಾರಾದರೂ ಕಿತ್ತುಕೊಳ್ಳಬಹುದೇ ಎಂಬ ಪ್ರಶ್ನೆಗೆ ಫಿಫಾ ಅಧ್ಯಕ್ಷ ಸೆಪ್ ಬಾಟ್ಲರ್, `ಇಲ್ಲ. ಹಾಗಾಗಲು ಸಾಧ್ಯವಿಲ್ಲ. ಬ್ರೆಜಿಲ್ ಈ ಅವಕಾಶದಿಂದ ವಂಚಿತವಾಗಲು ಸಾಧ್ಯವಿಲ್ಲ. ಏಕೆಂದರೆ ಅವರಿಗೆ ಯಾರೂ ಸ್ಪರ್ಧೆ ನೀಡುತ್ತಿಲ್ಲ' ಎಂದು ಜ್ಯೂರಿಚ್ಚಿನಲ್ಲಿ ಉತ್ತರಿಸಿದರು.

2007: ನಾಲ್ಕುನೂರು ವರ್ಷಗಳಷ್ಟು ದೀರ್ಘಕಾಲ ಬದುಕಿದ್ದ ಜೀವಿಯೊಂದು ಬ್ರಿಟನ್ ವಿಜ್ಞಾನಿಗಳಿಗೆ ಕರಾವಳಿಯ ಐಸ್ ಲ್ಯಾಂಡಿನಲ್ಲಿ ದೊರಕಿತು. ಈ ಜೀವಿ ಕಪ್ಪೆ ಚಿಪ್ಪಿನಲ್ಲಿ ಬದುಕುತ್ತಿತ್ತು. ವಿಜ್ಞಾನಿಗಳು ಈ ಪುರಾತನ ಜೀವಿಯ ಆಯಸ್ಸಿನ ಹಿಂದಿರುವ ಗುಟ್ಟನ್ನು ರಟ್ಟು ಮಾಡಲು ಮುಂದಾದರು. ವಿಜ್ಞಾನಿಗಳ ಪ್ರಕಾರ ಜೀವಿಯ ವಯಸ್ಸು 405ರಿಂದ 410 ವರ್ಷಗಳು. ಜೀವಿಗೆ ಮಿಂಗ್ ಎಂದು ಹೆಸರಿಡಲಾಯಿತು. ಮಿಂಗ್ ಎನ್ನುವುದು ಚೀನಾದ ಒಂದು ಸಾಮ್ರಾಜ್ಯದ ಹೆಸರು. ಜೀವಿ ಹುಟ್ಟುವಾಗ ಆ ಸಾಮ್ರಾಜ್ಯ ಆಡಳಿತ ನಡೆಸುತ್ತಿತ್ತು ಎಂಬುದು ವಿಜ್ಞಾನಿಗಳ ವಿವರಣೆ. ಮರಗಳ ವಯಸ್ಸನ್ನು ಅಳೆದಂತೆ ಈ ಜೀವಿಯ ವಯಸ್ಸನ್ನು ಆ ಜೀವಿಯ ಕಪ್ಪೆಚಿಪ್ಪಿನ ಮೇಲಿನ ಗೆರೆಗಳನ್ನು ಆಧರಿಸಿ ಅಂದಾಜಿಸಲಾಗುತ್ತಿದೆ ಎನ್ನುತ್ತಾರೆ ವಿಜ್ಞಾನಿಗಳು. ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ `ಮಿಂಗ್' ಲಭ್ಯವಾಗುವುದಕ್ಕೆ ಮುನ್ನ 1982ರಲ್ಲಿ 220 ವರ್ಷ ಬದುಕಿದ್ದ ಜೀವಿಯೊಂದು ಸಿಕ್ಕಿತ್ತು. ಆಮೆಗಳೂ ಸುದೀರ್ಘ ವರ್ಷಗಳ ಕಾಲ ಬದುಕಿದ ಉದಾಹರಣೆಗಳಿವೆ.

2006: ಮಂಗಳೂರು ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿರುವ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ತನ್ನ ಜಲಾನಯನ ಅಭಿವೃದ್ಧಿ ಮತ್ತು ನಿರ್ವಹಣಾ ಕಾರ್ಯಕ್ರಮಕ್ಕಾಗಿ ಪ್ರಸ್ತುತ ಸಾಲಿನ ಅಮೆರಿಕದ ಪ್ರತಿಷ್ಠಿತ `ಜಿಮ್ಮಿ ಅಂಡ್ ರೋಸಲಿನ್ ಪಾರ್ಟ್ನರ್ ಶಿಪ್' ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಪ್ರಶಸ್ತಿಯ ಮೊತ್ತ 10,000 ಅಮೆರಿಕನ್ ಡಾಲರುಗಳು. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಅಮೆರಿಕದಿಂದ ಹೊರಗಿನ ಜಂಟಿ ಕಾರ್ಯಕ್ರಮವೊಂದಕ್ಕೆ ನೀಡಿರುವುದು ಇದೇ ಮೊದಲು. ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸ್ಥಳೀಯ ಸಮುದಾಯಗಳು ಪಾಲ್ಗೊಳ್ಳುವಂತೆ ಮಾಡಿ ಜನರನ್ನು ತಲುಪುವಂತಹ ವಿಶೇಷ ಕಾರ್ಯಕ್ರಮ ರೂಪಿಸುವ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ವಾರ್ಷಿಕ ಕಾರ್ಟರ್ ಪಾರ್ಟ್ನರ್ ಶಿಪ್ ಯೋಜನೆಯು ಈ ಪ್ರಶಸ್ತಿಯನ್ನು ನೀಡುತ್ತದೆ. ನೆರೆಯ ಹಳ್ಳಿಯೊಂದರಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರೇ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಂಡು ಸಮೀಕ್ಷೆ ನಡೆಸಿ, ಕಾಲುವೆ, ಬದುಗಳನ್ನು ನಿರ್ಮಿಸಿ ನೀರು ಇಂಗಲು ವ್ಯವಸ್ಥೆ ಮಾಡಿದ್ದಲ್ಲದೆ 10,000 ಗಿಡಗಳನ್ನೂ ನೆಟ್ಟು ಬೆಳೆಸಿದ್ದಕ್ಕಾಗಿ ಈ ಪ್ರಶಸ್ತಿ ಸಂದಿದೆ. ದ್ವಿತೀಯ ಮತ್ತು ತೃತೀಯ ಪ್ರಶಸ್ತಿಗಳನ್ನು ಗೆದ್ದಿರುವ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಕ್ರಮವಾಗಿ 3000 ಅಮೆರಿಕನ್ ಡಾಲರ್ ಹಾಗೂ 2000 ಅಮೆರಿಕನ್ ಡಾಲರುಗಳನ್ನು ಪಡೆದಿವೆ. ಪಂಜಾಬ್ ವಿಶ್ವವಿದ್ಯಾಲಯಕ್ಕೆ ಸಾಕ್ಷರತೆ ಕಾರ್ಯಕ್ರಮಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದರೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಉತ್ತರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡದ್ದಕ್ಕಾಗಿ ಈ ಪ್ರಶಸ್ತಿ ಬಂದಿದೆ.

2006: ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದ ಕಾನೂನು ವಿದ್ಯಾರ್ಥಿನಿ ಪ್ರಿಯದರ್ಶಿನಿ ಮಟ್ಟ ಹಂತಕ ಸಂತೋಷ ಕುಮಾರ್ ಸಿಂಗ್ ಗೆ ದೆಹಲಿ ಹೈಕೋರ್ಟ್ ಮರಣದಂಡನೆ ವಿಧಿಸಿತು. ನ್ಯಾಯಮೂರ್ತಿಗಳಾದ ಆರ್. ಎಸ್. ಸೋಧಿ ಮತ್ತು ಪಿ.ಕೆ. ಭಾಸಿನ್ ಅವರ ಪೀಠವು ಹಂತಕ ಸಂತೋಷನನ್ನು ಸಾಯುವ ತನಕ ಗಲ್ಲಿಗೆ ಏರಿಸಬೇಕು ಎಂದು ಆದೇಶ ನೀಡಿತು. 1996ರ ಜನವರಿ 3ರಂದು ಸಹಪಾಠಿ ಪ್ರಿಯದರ್ಶಿನಿ ಮನೆಗೆ ಬಂದ ಸಂತೋಷ ಕುಮಾರ್ ಸಿಂಗ್ ಆಕೆಯ ಮೇಲೆ ಅತ್ಯಾಚಾರ ಎಸಗಿ ಬರ್ಬರವಾಗಿ ಹತ್ಯೆ ಮಾಡಿದ್ದ.

2006: ಶಿರಸಿ ತಾಲ್ಲೂಕಿನ ಮತ್ತಿಘಟ್ಟದ ರಂಗಬಳಗದವರಿಂದ ಗೋಕರ್ಣದ ಓಂ ಬೀಚಿನಲ್ಲಿ `ಆವರ್ತನ' ನಾಟಕ ಪ್ರದರ್ಶನಗೊಂಡಿತು. ಮಾನಸಾ ಹೆಗಡೆ ರಚಿಸಿ, ಕೆ.ಆರ್. ಪ್ರಕಾಶ ನಿರ್ದೇಶಿಸಿದ ಈ ನಾಟಕದ ಪ್ರದರ್ಶನ ಸಮುದ್ರದ ತೆರೆಗಳ ಮಧ್ಯೆ ನಡೆದು ಇದನ್ನು ಒಂದು ಅಪರೂಪದ ಪ್ರಯೋಗವನ್ನಾಗಿಸಿತು.

2005: ಜಗತ್ತಿನ ಅತ್ಯಂತ ಪುರಾತನ ಖಗೋಲ ವೀಕ್ಷಣಾಲಯ ಉತ್ತರ ಚೀನಾದ ಶಾಂಕ್ಷಿ ಪ್ರಾಂತ್ಯದಲ್ಲಿ ಪತ್ತೆಯಾಯಿತು. 4300 ವರ್ಷಗಳಷ್ಟು ಹಳೆಯದು ಎನ್ನಲಾಗಿರುವ ಇದನ್ನು ಖಗೋಲ ವಿದ್ಯಮಾನ ವೀಕ್ಷಣೆ ಹಾಗೂ ಧಾರ್ಮಿಕ ಬಲಿ ಪದ್ಧತಿಗೂ ಬಳಸಲಾಗುತ್ತಿತ್ತು ಎಂಬುದು ಪುರಾತತ್ವ ಸಂಶೋಧಕರ ವರದಿ.

2005: ತಾವು ಕಲಿತ ಶಾಲೆಯಲ್ಲಿಯೇ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಮುಂದಿನ 15 ವರ್ಷಕಾಲ ಸಂಶೋಧನೆಯಲ್ಲಿ ತೊಡಗಿಸಿಕೊಂಡ ಮುಂಬೈಯ ಕನ್ನಡತಿ ಸಿ.ಆರ್. ಶ್ಯಾಮಲ ತಮ್ಮ 70ನೇ ವಯಸ್ಸಿನಲ್ಲಿ ಪಿ. ಎಚ್. ಡಿ. ಪದವಿ ಪಡೆದುಕೊಂಡರು. ಅವರು ಆಯ್ದುಕೊಂಡಿದ್ದ ವಿಷಯ `ಪೂರ್ವ ಕರ್ನಾಟಕದ ಪಾಳೆಯಗಾರರು'. ಡಾ. ವಿಶ್ವನಾಥ ಕಾರ್ನಾಡ್ ಹಾಗೂ ಡಾ. ಶ್ರೀನಿವಾಸ ಹಾವನೂರು ಮಾರ್ಗದರ್ಶಕರಾಗಿದ್ದರು.

1996: ಕ್ವೆಟ್ಟಾದಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ಥಾನ ಆಡಿದ ಪಂದ್ಯದಲ್ಲಿ ಆಟವಾಡುವ ಮೂಲಕ ಪಾಕಿಸ್ಥಾನದ 14 ವರ್ಷ 233 ದಿನಗಳ ವಯಸ್ಸಿನ ಹಸನ್ ರಝಾ ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಟವಾಡಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದೇ ಪಂದ್ಯದಲ್ಲಿ ವಾಸಿಮ್ ಆಕ್ರಮ್ ಅವರು ಒಂದು ದಿನದ ಕ್ರಿಕೆಟಿನಲ್ಲಿ 300 ವಿಕೆಟುಗಳನ್ನು ಪಡೆದ ಮೊದಲ ಬೌಲರ್ ಎನಿಸಿದರು.

1996: ಮುಂಬೈಯ ಶಿವಾಜಿ ಪಾರ್ಕಿನಲ್ಲಿ ಶಿವಸೇನೆಯ ಮೊದಲ ಸಭೆ.

1990: ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯತ್ತ ಹೊರಟಿದ್ದ ಕರ ಸೇವಕರನ್ನು ತಡೆಯಲು ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಹಲವರ ಸಾವು.

1956: ಭಾರತದ ಪ್ರಪ್ರಥಮ ಪಂಚತಾರಾ ಡಿಲಕ್ಸ್ ಹೋಟೆಲ್ `ಅಶೋಕ' ನವದೆಹಲಿಯ್ಲಲಿ ಉದ್ಘಾಟನೆಗೊಂಡಿತು.

1945: ಭಾರತವು ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದರೂ ಮೂಲ ರಾಷ್ಟ್ರಗಳ ಪೈಕಿ ಒಂದಾಗಿ ವಿಶ್ವಸಂಸ್ಥೆಗೆ ಸೇರ್ಪಡೆಯಾಯಿತು.

1928: ಆರ್ಯ ಸಮಾಜದ ಕಾರ್ಯಕರ್ತ, ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಅವರು ಲಾಹೋರಿನಲ್ಲಿ ಸೈಮನ್ ಕಮೀಷನ್ ವಿರುದ್ಧ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದಾಗ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡರು. ಇದೇ ಗಾಯಗಳ ಪರಿಣಾಮವಾಗಿ ಅವರು ನವೆಂಬರ್ 17ರಂದು ಮೃತರಾದರು.

1909: ಭಾರತೀಯ ಪರಮಾಣು ವಿಜ್ಞಾನಿ ಹೋಮಿ ಜಹಾಂಗೀರ್ ಭಾಭಾ (1909-66) ಜನ್ಮದಿನ. ಭಾರತೀಯ ಪರಮಾಣು ಯೋಜನೆಗೆ ಅಡಿಗಲ್ಲನ್ನು ಇಟ್ಟ ಭಾಭಾ 1966ರಲ್ಲಿ ಸ್ವಿಸ್ ಆಲ್ಪ್ಸ್ ನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಅಸುನೀಗಿದರು.

1895: ಜರ್ಮನ್ ಬ್ಯಾಕ್ಟೀರಿಯಾ ತಜ್ಞ ಗೆರ್ಹಾರ್ಡ್ ಡೊಮಾಗ್ಕ್ (1895-1964) ಜನ್ಮದಿನ. ಪ್ರೊಟೆನ್ ಸಿಲ್ ನ ಬ್ಯಾಕ್ಟೀರಿಯಾ ನಿರೋಧಿ ಪರಿಣಾಮಗಳ ಕುರಿತ ಸಂಶೋಧನೆಗಾಗಿ ಅವರಿಗೆ 1939ರಲ್ಲಿ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು. ಆದರೆ ನಾಝಿ ಸರ್ಕಾರ ಅವರಿಗೆ ಪ್ರಶಸ್ತಿಯನ್ನು ಸ್ವೀಕರಿಸಲು ಅವಕಾಶ ನೀಡಲಿಲ್ಲ. ಈ ರೀತಿ ನಿರಾಕರಿಸಿದ್ದು ನೊಬೆಲ್ ಪ್ರಶಸ್ತಿಗಳ ಚರಿತ್ರೆಯಲ್ಲಿ ಇದೇ ಪ್ರಥಮವೆನ್ನಿಸಿತು. ನಂತರ 1947ರಲ್ಲಿ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

1888: ಮೊದಲ ಬಾಲ್ ಪಾಯಿಂಟ್ ಪೆನ್ ಗೆ ಹಕ್ಕುಸ್ವಾಮ್ಯ.

1883: ಆರ್ಯ ಸಮಾಜದ ಸ್ಥಾಪಕ, ಸಮಾಜ ಸುಧಾರಕ ಮಹರ್ಷಿ ಸ್ವಾಮಿ ದಯಾನಂದ ಸರಸ್ವತಿ (1824-83) ಅವರು ನಿಧನರಾದರು.

No comments:

Post a Comment