ನಾನು ಮೆಚ್ಚಿದ ವಾಟ್ಸಪ್

Friday, October 19, 2018

ಶಬರಿಮಲೈ: ದೇವಾಲಯ ಪೂಜಾ ಕೈಂಕರ್ಯ ಕೆಲಕಾಲ ಸ್ಥಗಿತ


ಶಬರಿಮಲೈ: ದೇವಾಲಯ ಪೂಜಾ ಕೈಂಕರ್ಯ ಕೆಲಕಾಲ ಸ್ಥಗಿತ

ಶಬರಿಮಲೈ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದ ಸುಮಾರು 500 ಮೀಟರ್ ಸಮಿಪಕ್ಕೆ ಬಂದಿದ್ದ ಹೈದರಾಬಾದ್ ಮೂಲದ ಮೋಜೋ ಟಿವಿಯ ಕವಿತಾ ಜಾಕ್ಕಲ್ ಮತ್ತು ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರು ದೇವಸ್ಥಾನದ ಮುಖ್ಯತಂತ್ರಿ ದೇಗುಲ ಮುಚ್ಚುವ ಬೆದರಿಕೆ ಹಾಕಿದ ಬಳಿಕ 2018  ಅಕ್ಟೋಬರ್ 19 ಗುರುವಾರ ಹಿಂದಕ್ಕೆ ತೆರಳಬೇಕಾಯಿತು ಮತ್ತು 3ನೇಮಹಿಳೆ ಮೇರಿ ಸ್ವೀಟಿ ಅವರು ಪಂಬಾ ತಲುಪಿದ ಬಳಿಕ ಪ್ರತಿಭಟನೆಗಳ ನಡುವೆ ಯಾತ್ರೆ ಮುಂದುವರೆಸದೆ ಹಿಂದಿರುಗಿದರು.

ಇಬ್ಬರು ಮಹಿಳೆಯರು ಪ್ರತಿಭಟನೆಗಳ ನಡುವೆಯೇ ಪೊಲೀಸ್ ಸರ್ಪಗಾವಲಿನಲ್ಲಿ ದೇವಾಲಯದ ಅತಿ ಸಮೀಪಕ್ಕೆ ತಲುಪಿದಾಗ, ಅದನ್ನು ವಿರೋಧಿಸಿದ ತಂತ್ರಿಗಳ ಅರ್ಚಕ ಸಿಬ್ಬಂದಿ ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿ ಪೂಜಾ ಕೈಂಕರ್ಯಗಳನ್ನು ಕೆಲಕಾಲ ಸ್ಥಗಿತಗೊಳಿಸಿ, 18 ಮೆಟ್ಟಿಲುಗಳ ಬುಡದಲ್ಲಿ ಅಯ್ಯಪ್ಪ ಭಜನೆ ಮಾಡುತ್ತಾ ಧರಣಿ ಕುಳಿತರು.

"ಇದು ಅತ್ಯಂತ ನೋವಿನ ದಿನ. ಋತುಮತಿ ವಯಸ್ಸಿನ ಮಹಿಳೆಯರು ದೇವಾಲಯ ಸನ್ನಿಧಾನ ಪ್ರವೇಶಿಸಬೇಡಿ ಎಂದು ಮೊದಲೇ ಮನವಿ ಮಾಡಿದ್ದೇನೆ. ಆದರೂ ಪ್ರವೇಶಿಸಿದರೆ ಗರ್ಭಗುಡಿಯನ್ನು ಮುಚ್ಚಿ ಬೀಗ ಹಾಕಿಕೊಂಡು ಮನೆಗೆ ತೆರಳುತ್ತೇನೆ. ದೇವಸ್ಥಾನದ ವಿಧಿವಿಧಾನಗಳ ಉಲ್ಲಂಘನೆಯಲ್ಲಿ ನಾನು ಪಾಲುದಾರನಾಗಲಾರೆ, ವಿಚಾರದಲ್ಲಿ ನಾನು ಭಕ್ತರ ಜೊತೆಗಿದ್ದೇನೆಎಂದು ಮುಖ್ಯ ತಂತ್ರಿಗಳಲ್ಲಿ ಒಬ್ಬರಾದ ರಾಜೀವರು ಕಂದಾರರು ಸ್ಪಷ್ಟ ಶಬ್ಧಗಳಲ್ಲಿ ಎಚ್ಚರಿಸಿದರು.

ದೇವಾಲಯ ಮುಚ್ಚುವ ಬೆದರಿಕೆಯ ನಂತರ, ಇಬ್ಬರು ಮಹಿಳೆಯರು ಮುಂದಡಿ ಇಡದೆ ಪೊಲೀಸ್ ಭದ್ರತೆಯಲ್ಲೇ ಅಲ್ಲಿಂದ ವಾಪಸಾದರು.

ಇದಕ್ಕೆ ಮುನ್ನ ಪಂದಳ ರಾಜಕುಟುಂಬವು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ರೂಢಿಗತ ಪೂಜಾ ವಿಧಾನ ಪರಂಪರೆಗಳ ಉಲ್ಲಂಘನೆ ಆಗದಂತೆ ನೋಡಿಕೊಳ್ಳಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಯಾರಾದರೂ ಯುವತಿ ದೇವಾಲಯದ ಅಂಗಳವನ್ನು ಪ್ರವೇಶಿಸಿದರೆ ಅಥವಾ ದೇಗುಲ ಸಮೀಪ ಎಲ್ಲಾದರೂ ರಕ್ತಪಾತವಾಗಿ ಪಾವಿತ್ರಕ್ಕೆ ಧಕ್ಕೆಯಾದರೆ, ತತ್ ಕ್ಷಣ ಗರ್ಭಗುಡಿಯನ್ನು ಮುಚ್ಚುವಂತೆ ರಾಜಕುಟುಂಬವು ತಂತ್ರಿಗಳಿಗೆ ಸಂದೇಶ ನೀಡಿತ್ತು.

ದರೆ  ರನ್ನು ಹಿಂತಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪಂದಳ ಅರಮನೆಯ ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ಪಿ.ಎನ್. ನಾರಾಯಣ ವರ್ಮ ಅವರು ವಿಶೇಷ ದೂತನ ಮೂಲಕ ರಾಜಕುಟುಂಬದ ಸಂದೇಶವನ್ನು ರವಾನಿಸಿರುವುದಾಗಿ ಹೇಳಿದರು.

ಮಧ್ಯೆ ತಿರುವಾಂಕೂರು ದೇವಸ್ವಂ ಮಂಡಳಿಯು ಈದಿನ ತಿರುವನಂತಪುರದಲ್ಲಿ ಸಭೆ ಸೇರಲಿದ್ದು, ಪ್ರತಿಭಟನೆ ಹಿಂತೆಗೆದುಕೊಂಡರೆ, ಬಿಕ್ಕಟ್ಟು ಇತ್ಯರ್ಥಕ್ಕಾಗಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಸೇರಿದಂತೆ ಯಾವುದೇ ರಾಜಿಗೆ ಸಿದ್ಧ ಎಂಬ ಸಂದೇಶವನ್ನು ಮಂಡಳಿ ಅಧ್ಯಕ್ಷ . ಪದ್ಮ ಕುಮಾರ್ ಬುಧವಾರ ರಾತ್ರಿ ನೀಡಿದ್ದರು.

ನಡುವೆ ಪರಿಸ್ಥಿತಿಯನ್ನು ನಿಭಾಯಿಸುತ್ತಿರುವ ರಾಜ್ಯ ಸರ್ಕಾರ ಮತ್ತು ಪೊಲೀಸರ ವಿರುದ್ಧ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ನೇತಾರ ರಮೇಶ ಚೆನ್ನಿತ್ತಲ ಕಟು ಪ್ರಹಾರ ನಡೆಸಿದರು. ಯಾರು ಬೇಕಾದರೂ ಬರಲು ಶಬರಿಮಲೈ ಪ್ರವಾಸೀ ತಾಣವಲ್ಲ. ದೇವಸ್ಥಾನ ಭಕ್ತರ ಭಾವನೆಗಳಿಗೆ ನೋವುಂಟು ಮಾಡಬಾರದು ಎಂದು ಅವರು ಹೇಳಿದರು. ಬಿಜೆಪಿ ನಾಯಕರೂ ಸರ್ಕಾರವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.

ಪೊಲೀಸ್ ಬೆಂಗಾವಲಿನೊಂದಿಗೆ ದೇವಾಲಯದತ್ತ ಸಮೀಪಿಸಿದ್ದ ಇಬ್ಬರು ಮಹಿಳೆಯರು ಭಕ್ತರಾಗಿರಲಿಲ್ಲ, ಬದಲಿಗೆ ಸಾಮಾಜಿಕ ಕಾರ್ಯಕರ್ತರಾಗಿದ್ದರು ಎಂಬುದು ಗೊತ್ತಾಗಿದೆ. ಪೊಲೀಸರು ಇದಕ್ಕೆ ಅವಕಾಶ ನೀಡಬಾರದಿತ್ತು. ಭಕ್ತರ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರು.

No comments:

Post a Comment