Showing posts with label Masood Azhar. Show all posts
Showing posts with label Masood Azhar. Show all posts

Sunday, March 3, 2019

ಬೆನ್ನ ಹುರಿಯಲ್ಲಿ ಕ್ಯಾನ್ಸರ್ ಉರಿ, ಎದೆಯಲ್ಲಿ ಭಾರತ ವಿರೋಧಿ ಉರಿ!

ಬೆನ್ನ ಹುರಿಯಲ್ಲಿ ಕ್ಯಾನ್ಸರ್ ಉರಿ, ಎದೆಯಲ್ಲಿ ಭಾರತ ವಿರೋಧಿ ಉರಿ!
ನವದೆಹಲಿ:  ಬೆನ್ನ ಹುರಿಯಲ್ಲಿ ಮಾರಣಾಂತಿಕ ಕ್ಯಾನ್ಸರ್ ಉರಿ, ಆದರೂ ಈತನ ಎದೆಯಲ್ಲಿ ಭಾರತದ ವಿರುದ್ಧ ಉರಿ. ಈತನೊಬ್ಬನೇ ಅಲ್ಲ, ಈತನ ಇಡೀ ಕುಟುಂಬವೇ ಪಾಕಿಸ್ತಾನದ ನೆಲದಲ್ಲಿ ಇದ್ದುಕೊಂಡೇ ಭಾರತದ ವಿರುದ್ಧ  ಕಾರ್ಯಾಚರಿಸುತ್ತಿದೆ. ಆಸ್ಪತ್ರೆಯ ಮಂಚದಲ್ಲಿ ಹೊರಳಾಡುತ್ತಿದ್ದರೂ, ಈಗಲೂ ಈತನ ಮಾತೇ ಅಂತಿಮ.

ಈತ ಬೇರೆ ಯಾರೂ ಅಲ್ಲ, ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ 14ರಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಯೋಧರ ಬೆಂಗಾವಲು ವಾಹನದ ಮೇಲೆ ಪೈಶಾಚಿಕ ಆತ್ಮಹತ್ಯಾ ದಾಳಿ ನಡೆಸಿ, 40 ಯೋಧರನ್ನು ಬಲಿಪಡೆದ ಪಾಕಿಸ್ತಾನ ಮೂಲಕ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್.

ಮಸೂದ್ ಅಜರ್ ಪಾಕಿಸ್ತಾನದ ನೆಲದಲ್ಲೇ ಇದ್ದಾನೆ ಎಂದು ಅಲ್ಲಿನ ವಿದೇಶಾಂಗ ಸಚಿವ ಮಕ್ದೂಮ್ ಶಾ ಮೆಹಮೂದ್ ಖುರೇಶಿ ಒಪ್ಪಿಕೊಂಡಿದ್ದಾರೆ. ಆದರೆ, ಆತನಷ್ಟೇ ಅಲ್ಲ, ಆತನ ಇಡೀ ಕುಟುಂಬವೇ ಭಾರತ ವಿರೋಧಿ ಉಗ್ರ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂಬ ಸತ್ಯವನ್ನು ಅತ್ಯಂತ ಜಾಣ್ಮೆಯಿಂದ  ಅವರು ಮರೆ ಮಾಚಿದ್ದಾರೆ.

ಜೈಶ್-ಮೊಹಮ್ಮದ್ ಉಗ್ರಗಾಮಿ ಸಂಘಟನೆಯು ತನ್ನ 2ನೇ ಕೇಂದ್ರಕಚೇರಿಯನ್ನು ಪಂಜಾಬ್ ಪ್ರಾಂತ್ಯದ ಭವಾಲ್ ಪುರದಲ್ಲಿ 2017ರಲ್ಲಿ ಸ್ಥಾಪಿಸಿಕೊಂಡಿದ್ದು ಇಡೀ ಕುಟುಂಬ ಕೇಂದ್ರದ ಮೂಲಕ ಜೈಶ್- ಮೊಹಮ್ಮದ್ ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದೆ ಎಂದು ವರದಿಗಳು ಹೇಳಿವೆ.
ವರದಿಗಳ ಪ್ರಕಾರ ಮಸೂದ್ ಅಜರನ ಇಬ್ಬರು ಮಕ್ಕಳಾದ ಅಬ್ದುಲ್ಲ ಮತ್ತು ವಲಿ,  ಮಸೂದ್ ಅಜರನ ಹಿರಿಯ ಸಹೋದರ  ಇಬ್ರಾಹಿಂ ಅಜರ್, ಇನ್ನೊಬ್ಬ ಸಹೋದರ ಮುಫ್ತಿ ಅಬ್ದುಲ್ ರೌಫ್ ಅಸ್ಗರ್. ಇನ್ನಿಬ್ಬರು ಕಿರಿಯ ಸಹೋದರರಾದ  ಮೌಲಾನಾ ಅಮ್ಮರ್, ಮತ್ತು ತಲ್ಹಾ ಸೈಫ್, ಇಬ್ರಾಹಿಂನ ಕಿರಿಯ ಪುತ್ರ ಉಮೈರ್ ಈಗಲೂ ಜೈಶ್ ಶಿಬಿರಗಳಲ್ಲಿ ಭಯೋತ್ಪಾದನೆ ತರಬೇತಿ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಬ್ರಾಹಿಂ ಹಿರಿಯ ಪುತ್ರ ಉಸ್ಮಾನ್ ಹೈದರ್, ಅಜರನ ಭಾವ ಯೂಸುಫ್ ಅಜರ್, ಸಹೋದರ ಅಬ್ದುಲ್ ರಶೀದ್ ಕಮ್ರಾನನ ಪುತ್ರ ತಲ್ಹಾ ರಶೀದ್ ಭಾರತದ ಕಾರ್ಯಾಚರಣೆಗಳಲ್ಲಿ ಅಸು ನೀಗಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ.

Tuesday, October 30, 2018

ಭಯೋತ್ಪಾದಕ ಮಸೂದ್ ಅಜರನ ಅಣ್ಣನ ಮಗ ಖತಮ್

ಭಯೋತ್ಪಾದಕ ಮಸೂದ್ ಅಜರನ ಅಣ್ಣನ ಮಗ ಖತಮ್

ನವದೆಹಲಿ: ಜೈಶ್-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ, ಮುಂಬೈ ಭಯೋತ್ಪಾದಕ ದಾಳಿಯ ಪಾತಕಿ ಮೌಲಾನಾ ಮಸೂದ್ ಅಜರ ಸಹೋದರ ಸಂಬಂಧಿ (ಅಣ್ಣನ ಮಗ)  ಉಗ್ರಗಾಮಿ ಮೊಹಮ್ಮದ್ ಉಸ್ಮಾನನನ್ನು ಭದ್ರತಾ ಪಡೆಗಳು ಮಂಗಳವಾರ 30 ಅಕ್ಟೋಬರ್ 2018 ಮಂಗಳವಾರ ಕೊಂದು ಹಾಕಿವೆ.

ಕಾಶ್ಮೀರ ಕಣಿವೆಯಲ್ಲಿ ಕಳೆದ 10 ದಿನಗಳಿಂದ ಭದ್ರತಾ ಪಡೆಗಳ ಮೇಲೆ ಮರೆಯಿಂದ ಅಡಗಿ ದಾಳಿಗಳನ್ನು ನಡೆಸುತ್ತಿದ್ದ ಪಾಕಿಸ್ತಾನ ಮೂಲದ ಉಗ್ರಗಾಮಿ ಮೊಹಮ್ಮದ್ ಉಸ್ಮಾನ್ನ ಹತ್ಯೆಯು  ಭದ್ರತಾ ಪಡೆಗಳು ವರ್ಷ ಸಾಧಿಸಿದ ಮಹಾನ್ ಯಶಸ್ಸುಗಳಲ್ಲಿ ಒಂದು ಎಂದು ಭದ್ರತಾ ಪಡೆಗಳು ಹೇಳಿವೆ.

ಮೊಹಮ್ಮದ್ ಉಸ್ಮಾನ್ ಜೆಇಎಂ  ಮುಖ್ಯಸ್ಥ ಮೌಲಾನಾ ಮಸೂದ್ ಅಜರನ ಹಿರಿಯ ಸಹೋದರ  ಇಬ್ರಾಹಿಂನ ಪುತ್ರ. ಈತ 1999ರಲ್ಲಿ ಜೆಇಎಂ ಮುಖ್ಯಸ್ಥ ಮಸೂದ್ ಅಜರನನ್ನು ಬಿಡಿಸಿಕೊಳ್ಳುವ ಸಲುವಾಗಿ ನಡೆದಿದ್ದ ಐಟಿ-814 ವಿಮಾನ ಅಪಹರಣದಲ್ಲಿ ಶಾಮೀಲಾಗಿದ್ದ.

ವರ್ಷದ ಹಿಂದೆ ಕಾಶ್ಮೀರ ಕಣಿವೆಗೆ ನುಸುಳಿದ್ದ ಎನ್ನಲಾಗಿರುವ ಮೊಹಮ್ಮದ್ ಉಸ್ಮಾನ್ ಜೈಶ್ ಸಂಘಟನೆಯನ್ನು ಬಲಾಢ್ಯ ಪಡಿಸುವ ಸಲುವಾಗಿ  ಸದ್ದಿಲ್ಲದೆ ಕೆಲಸ ಮಾಡುತ್ತಿದ್ದ. ಆದರೆ ಕಳೆದ ಎರಡು ವಾರಗಳಿಂದ ಸಕ್ರಿಯನಾಗಿದ್ದ ಈತ 4 ಸದಸ್ಯರ ಮರೆಯಿಂದ ದಾಳಿ ನಡೆಸುವ ಉಗ್ರರ ತಂಡಗಳನ್ನು ರಚಿಸಿ ಅವುಗಳ ಮೂಲಕ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸುತ್ತಿದ್ದ.ಈದಿನ ನಡೆದ ಭದ್ರತಾ ಪಡೆಗಳ ಜೊತೆಗೆ ನಡೆದ ಘರ್ಷಣೆಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಅವರ ಪೈಕಿ ಮೊಹಮ್ಮದ್ ಒಬ್ಬನಾಗಿದ್ದ ಎಂದು ಮೂಲಗಳು ಹೇಳಿವೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: