ಕೈಗಾ ಅಣು ಸ್ಥಾವರ: ವಿಶ್ವದಾಖಲೆ ನಿರ್ಮಾಣ
ಕಾರವಾರ: ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾದ ಘಟಕ-1, ಸತತ 894 ದಿನ ವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲೂ ವಿದ್ಯುತ್ ಉತ್ಪಾದನೆ ಮುಂದುವರೆಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.
2018 ಅಕ್ಟೋಬರ್ 24ರ ಬುಧವಾರ ಬೆಳಗ್ಗೆ 9 ಗಂಟೆ 19 ನಿಮಿಷಕ್ಕೆ ಕೈಗಾ ಘಟಕ-1ರಲ್ಲಿ 894 ದಿನ ಸತತ ವಿದ್ಯುತ್ ಉತ್ಪಾದಿಸಲಾಯಿತು. ಆ ಮೂಲಕ ಇಂಗ್ಲೆಂಡಿನ (ಯುನೈಟೆಡ್ ಕಿಂಗ್ಡಂ) ಏಷ್ಯನ್ ಅಣು ಸ್ಥಾವರ 894 ದಿನ ಕಾಲ ಸತತ ವಿದ್ಯುತ್ ಉತ್ಪಾದನೆ ಮಾಡಿದ್ದ ದಾಖಲೆಯನ್ನು ಸರಿಗಟ್ಟಿತು.
ತನ್ನ ಸಾಧನೆಯನ್ನು ಮುಂದುವರೆಸಿರುವ ಘಟಕವು ಗುರುವಾರ 895 ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರೆಸಿತು. ಗುರುವಾರ ಬೆಳಗ್ಗೆ 9 ಗಂಟೆಗೆ 895 ದಿನ ಪೂರೈಸಿ 896ನೇ ದಿನಕ್ಕೆ ಕಾಲಿಟ್ಟಿದೆ. ವಿಶ್ವದಲ್ಲಿ ಸತತ 894 ದಿನ ಅಣು ವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರಿಸಿದ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೈಗಾ ಘಟಕ-1, ಜಾಗತಿಕವಾಗಿ ಎರಡನೇ ಸ್ಥಾನ ಪಡೆದಿದೆ.
ಭಾರತದಲ್ಲಿ ಪ್ರಥಮ ಸ್ಥಾನ
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಾಪನೆಯಾದ ರಿಯಾಕ್ಟರ್ ಹೆವಿ ವಾಟರ್ ರಿಯಾಕ್ಟರ್ (ಪಿಎಚ್‌ಡಬುಇಆರ್)ತಂತ್ರಜ್ಞಾನದ್ದು. ಈ ಮಾದರಿಯ ರಿಯಾಕ್ಟರ್ಗಳ ಪೈಕಿ ಸತತ 894
ದಿನ ವಿದ್ಯುತ್ ಉತ್ಪಾದಿಸಿದ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ.ಈ ಮಾದರಿಯ ಅಣು ರಿಯಾಕ್ಟರ್ಗಳಲ್ಲಿ ಸತತ 894
ದಿನಗಳ ಕಾಲ ಅಣು ವಿದ್ಯುತ್ ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ.
ಈ ತಂತ್ರಜ್ಞಾನದ ದಿಸೆಯಲ್ಲಿ ಕೈಗಾ ಘಟಕ-1 ರಿಯಾಕ್ಟರ್ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಭಾರತ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ವಿಶ್ವಮಟ್ಟದಲ್ಲಿ ಬರೆದಿದೆ ಎಂದು ಕೈಗಾದ ವಿಜ್ಞಾನಿ ದೇಶಪಾಂಡೆ ತಿಳಿಸಿದರು.
ಈ ತಂತ್ರಜ್ಞಾನದ ದಿಸೆಯಲ್ಲಿ ಕೈಗಾ ಘಟಕ-1 ರಿಯಾಕ್ಟರ್ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಭಾರತ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ವಿಶ್ವಮಟ್ಟದಲ್ಲಿ ಬರೆದಿದೆ ಎಂದು ಕೈಗಾದ ವಿಜ್ಞಾನಿ ದೇಶಪಾಂಡೆ ತಿಳಿಸಿದರು.
No comments:
Post a Comment