ಇಂದಿನ ಇತಿಹಾಸ History Today ಅಕ್ಟೋಬರ್ 11
2018: ಬೆಂಗಳೂರು: ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್ ಮಹೇಶ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳ ನಂತರ ಸಚಿವರೊಬ್ಬರು ರಾಜೀನಾಮೆ ನೀಡಿದ ಪ್ರಸಂಗ ಇದಾಯಿತು. ಒಂದೆಡೆ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ದೋಸ್ತಿ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಸರ್ಕಸ್ ನಡೆ ಸುತ್ತಿರುವ ಸಂದರ್ಭದಲ್ಲೇ ಮಹೇಶ್ ರಾಜೀನಾಮೆ ನೀಡಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ರುಜುವಾತು ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಸಿದ್ದವಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಮುಖಂಡ ಆರ್ ಅಶೋಕ್ ಹೇಳಿದ ಬೆಳವಣಿಗೆಯಲ್ಲಿ ಮಹೇಶ್ ರಾಜೀನಾಮೆ ನೀಡಿರುವುದು ರಾಜ್ಯ ರಾಜಕೀಯದಲ್ಲಿ ನಾನಾ ವ್ಯಾಖ್ಯಾನಗಳನ್ನು ಹುಟ್ಟು ಹಾಕಿತು. ಆರ್.ಅಶೋಕ್ ಹೇಳಿಕೆ ಬೆನ್ನಲ್ಲೇ ಎನ್.ಮಹೇಶ್ ರಾಜೀನಾಮೆ ನೀಡಿರುವುದು ಆಪರೇ?ನ್ ಕಮಲಕ್ಕೆ ಒಳಗಾದರಾ ಎಂಬ ಗೊಂದಲ ಹುಟ್ಟುಕೊಂಡಿದೆ. ಎನ್. ಮಹೇಶ್ ಅವರು ರಾಜೀನಾಮೆ ನೀಡುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮುಂದೆ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿತು. ತಮ್ಮ ರಾಜೀನಾಮೆ ಪತ್ರವನ್ನು ಮಹೇಶ್ ರಾಜ್ಯಪಾಲ ವಿ.ಆರ್. ವಾಲಾ ಹಾಗೂ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ರವಾನಿಸಿದ್ದು, ರಾಜೀನಾಮೆಯನ್ನು ಅಂಗೀಕರಿ ಸುವಂತೆ ಮನವಿ ಮಾಡಿದರು. ಬೆಳಿಗ್ಗೆ ಬಿಎಸ್ಪಿ ಪಕ್ಷದ ಸಂಸದ ಅಶೋಕ್ ಸಿದ್ಧಾರ್ಥ್ (ಇವರು ಬಿಎಸ್ಪಿ ಕರ್ನಾಟಕ ಇನ್- ಚಾರ್ಜ್ ಕೂಡ) ಬೆಂಗಳೂರಿಗೆ ಬಂದಿದ್ದರು. ಅವರ ಆಗಮನದ ಬೆನ್ನಲ್ಲೇ ಸಂಜೆ ಎನ್. ಮಹೇಶ್ ರಾಜೀ ನಾಮೆ ಹೊರ ಬಿದ್ದಿದೆ. ಇದು ವೈಯಕ್ತಿಕ ಕಾರಣಗಳಿ ಗಾಗಿ ನೀಡುತ್ತಿರುವ ರಾಜೀನಾಮೆ. ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ಪಕ್ಷದ ಕೆಲಸಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ, ಎಂದು ಎನ್. ಮಹೇಶ್ ಮಾಧ್ಯಮ ಗಳಿಗೆ ವಿವರಿಸಿದರು. ರಾಜೀನಾಮೆ ನೀಡುವ ಮುನ್ನ ಎನ್.ಮಹೇಶ್ ಬಿಎಸ್ಪಿಯ ರಾಷ್ಟ್ರೀಯ ನಾಯಕರ ಜತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದವು. ಖುದ್ದು ಮುಖ್ಯಸ್ಥೆ ಮಾಯಾವತಿ ಸೂಚನೆ ಮೇರೆಗೆ ಮಹೇಶ್ ರಾಜೀನಾಮೆ ನೀಡಿದ್ದಾರೆ ಎನ್ನಲಾಯಿತು. ಈ ವಿಚಾರ ಪಕ್ಷದ ರಾ?ಧ್ಯಕ್ಷೆ ಮಾಯಾವತಿಯ ವರ ಗಮನಕ್ಕೆ ಬಂದಿಲ್ಲ. ಮಹಾಘಟಬಂಧನಕ್ಕೂ ನನ್ನ ರಾಜೀನಾಮೆಗೂ ಸಂಬಂಧವಿಲ್ಲ. ಪಕ್ಷ ಸಂಘಟನೆಗೆ ತೊಡಕಾಗಬಾರದು ಎಂದು ರಾಜೀನಾಮೆ ನೀಡಿದ್ದೇನೆ ಎಂದು ಮಹೇಶ್ ತಿಳಿಸಿದರು. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತೇನೆ. ಲೋಕ ಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಬೇಕಿದೆ. ಶಾಸಕ ನಾಗಿ ಮುಂದುವರಿಯುತ್ತೇನೆ ಎಂದು ರಾಜೀನಾಮೆ ನೀಡಿದ ಕಾರಣ ವಿವರಿಸಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಪಕ್ಷದ ಚಟುವಟಿಕೆ ಗಳನ್ನು ಮಾಡಲು ಸಾಧ್ಯವಾಗಲಿಲ್ಲ. ಸಚಿವ ಸ್ಥಾನ ವಹಿಸಿಕೊಂಡ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪಕ್ಷದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ೨೦ ವ?ಗಳ ಸತತ ಪರಿ ಶ್ರಮದಿಂದ ಗೆದ್ದಿದ್ದೇನೆ. ಖಾತೆಯನ್ನು ಅರ್ಥ ಮಾಡಿ ಕೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿತು ಎಂದು ಹೇಳಿದರು
2018: ಡೆಹ್ರಾಡೂನ್: ’ಸ್ವಚ್ಛ ಗಂಗಾ’ ಆಗ್ರಹ ಮುಂದಿಟ್ಟು ೧೧೧ ದಿನಗಳಿಂದ ನಿರಶನ ನಡೆಸುತ್ತಿದ್ದ ೮೭ರ ಹರೆಯದ ಪರಿಸರವಾದಿ ’ಗಂಗಾಪುತ್ರ’ ಎಂಬುದಾಗಿಯೇ ಪರಿಚಿತರಾಗಿದ್ದ ಜಿಡಿ ಅಗರ್ ವಾಲ್ ಯಾನೆ ಸ್ವಾಮಿ ಗ್ಯಾನಸ್ವರೂಪ್ ಸಾನಂದ್ ಅವರು ಹರಿದ್ವಾರದಲ್ಲಿ ವಿಧಿವಶರಾದರು. ಸಾನಂದ್ ಅವರನ್ನು ಆರೋಗ್ಯ ಗಮನಾರ್ಹವಾಗಿ ಕುಸಿದುದನ್ನು ಅನುಸರಿಸಿ ದಿನದ ಹಿಂದೆಯಷ್ಟೇ ಅವರ ಮೈತ್ರಿಸದನ ಆಶ್ರಮದಿಂದ ಬಲವಂತವಾಗಿ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ನಿರಶನ ನಿರತ ಸಂತ ಈದಿನ ಮಧ್ಯಾಹ್ನ ೧ ಗಂಟೆ ವೇಳೆಗೆ ಕೊನೆಯುಸಿರು ಎಳೆದರು ಎಂದು ಅಧಿಕೃತ ಮೂಲಗಳು ತಿಳಿಸಿದವು. ತಮ್ಮ ಕೈಬರಹದ ಕೊನೆಯ ಲಿಖಿತ ಹೇಳಿಕೆಯಲ್ಲಿ ಸಾನಂದ್ ಅವರು ತಮ್ಮ ದೇಹದಲ್ಲಿ ಪೊಟೇಸಿಯಂ ಪ್ರಮಾಣ ಗಮನಾರ್ಹವಾಗಿ ಕುಸಿದಿದೆ ಎಂದು ಹೇಳಿದ್ದರು. ’ನಾನು ಮೌಖಿಕವಾಗಿ (ಏಮ್ಸ್ ನಲ್ಲಿ) ನೀಡಲಾದ ಪೊಟೇಸಿಯಂನ್ನು ಸ್ವೀಕರಿಸಿದ್ದೇನೆ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು. ಮಾಜಿ ಐಐಟಿ ಪ್ರಾಧ್ಯಾಪಕ ಅಗರ್ ವಾಲ್ ಅವರು ಗಂಗಾನದಿ ’ಅಡಚಣೆ ಮುಕ್ತವಾಗಿ’ ಹರಿಯಬೇಕು ಮತ್ತು ಗಂಗಾ ಜಲಾನಯನ ಪ್ರದೇಶದಲ್ಲಿನ ಎಲ್ಲ ಜಲ ವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಈ ವರ್ಷ ಜೂನ್ ತಿಂಗಳಿಂದ ನಿರಶನ ನಡೆಸುತ್ತಿದ್ದರು. ಈ ನಿಟ್ಟಿನಲ್ಲಿ ಗಂಗಾ ರಕ್ಷಣೆ ಮತು ನಿರ್ವಹಣಾ ಕಾಯ್ದೆಯನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದರು. ಸ್ವಾಮಿ ಸಾನಂದ್ ಅವರು ಯುಪಿಎ ಆಡಳಿತಾವಧಿಯಲ್ಲಿ ರಾಷ್ಟ್ರೀಯ ಗಂಗಾನದಿ ಜಲಾನಯನ ಪ್ರಾಧಿಕಾರದ ಸದಸ್ಯರೂ ಆಗಿದ್ದರು. ೨೦೧೦ರಲ್ಲಿ ಅವರು ಭಾಗೀರಥಿ ನದಿ ಮೇಲಿನ ೬೦೦ ಮೆವಾ ಲೋಹರಿ ನಾಗಪಾಲ ಯೋಜನೆ ರದ್ದುಪಡಿಸಬೇಕೆಂದು ಕೋರಿ ೩೮ ದಿನಗಳ ಕಾಲ ಉಪವಾಸ ನಡೆಸಿದ್ದರು. ಈ ಯೋಜನೆಯಿಂದ ನದಿಯ ಮುಕ್ತ ಹರಿವಿಗೆ ಅಡಚಣೆಯಾಗುತ್ತದೆ ಎಂಬುದು ಅವರ ದೂರಾಗಿತ್ತು. ಬಳಿಕ, ಮೂವರು ಸಚಿವರ ಸಮಿತಿಯು ಯೋಜನೆಯನ್ನು ರದ್ದು ಪಡಿಸಿತ್ತು. ವಾಸ್ತವವಾಗಿ, ಸಾನಂದ್ ಗಂಗಾನದಿಯ ಮುಕ್ತ ಹರಿವಿಗೆ ಒತ್ತಾಯಿಸಿ ನಿರಶನ ಹೂಡಿ ನಿಧನರಾದ ಎರಡನೇ ಸ್ವಾಮಿಯಾಗಿದ್ದಾರೆ. ೨೦೧೧ರಲ್ಲಿ ಇದೇ ಮೈತ್ರಿ ಸದನ ಆಶ್ರಮದ ಸ್ವಾಮಿ ನಿಗಮಾನಂದ (೩೬) ಅವರು ಗಂಗಾನದಿಯಲ್ಲಿ ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಎರಡು ತಿಂಗಳ ಕಾಲ ಉಪವಾಸ ಹೂಡಿ ಸಾವನ್ನಪ್ಪಿದ್ದರು.
2018: ನವದೆಹಲಿ: ಎರಡು ಕೊಲೆ ಪ್ರಕರಣಗಳಲ್ಲಿ ಸ್ವಯಂ ಘೋಷಿತ ದೇವಮಾನವ ಸಂತ ರಾಮ್ಪಾಲ್ ದೋಷಿ ಎಂದು ಹಿಸ್ಸಾರ್ ನ್ಯಾಯಾಲಯ ತೀರ್ಪು ನೀಡಿತು. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಮುಂದಿನ ವಾರ ಅಂದರೆ ಅಕ್ಟೋಬರ್ ೧೬ ಮತ್ತು ೧೭ರಂದು ಘೋ?ಣೆ ಮಾಡಲಿದೆ. ಈದಿನದ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಹಿಸ್ಸಾರ್ ನಗರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ನಗರದಲ್ಲಿ ಸಿಆರ್ ಪಿಸಿ ಸೆಕ್ಷನ್ ೧೪೪ ಜಾರಿಗೊಳಿಸ ಲಾಗಿತ್ತು. ೧೮೦೦ ಜನ ಪೊಲೀಸರು ನಗರದ ಭದ್ರತೆಯ ಹೊಣೆ ಹೊತ್ತಿ ದ್ದರು. ೨೦೧೭ರ ಆಗಸ್ಟ್ನಲ್ಲಿ ಪಂಚಕು ಲದಲ್ಲಿ ದೇರಾ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಶಿಕ್ಷೆ ಘೋ?ಣೆ ವೇಳೆ ನಡೆದ ಘಟನೆ ಗಳು ಮರು ಕಳುಹಿಸದಂತೆ ಈ ಏರ್ಪಾಟುಗಳನ್ನು ಮಾಡಿಕೊ ಳ್ಳಲಾಗಿತ್ತು. ಸದ್ಯ ರಾಮ್ಪಾಲ್ ಹಿಸ್ಸಾರ್ ಕೇಂದ್ರ ಕಾರಾಗೃಹದಲ್ಲಿ ದ್ದಾರೆ. ದೊಡ್ಡ ಮಟ್ಟದ ಅನುಯಾಯಿಗಳನ್ನು ಹೊಂದಿರುವ ಅವರನ್ನು ೨೦೧೪ರಲ್ಲಿ ಬಂಧಿಸಲಾಗಿತ್ತು. ನ್ಯಾಯಾಲಯದ ವಿಚಾರಣೆಗೆ ಗೈರು ಹಾಜರಾಗಿದ್ದ ಅವರನ್ನು ಬಂಧಿಸುವಂತೆ ಪಂಜಾಬ್ -ಹರ್ಯಾಣ ಹೈಕೋರ್ಟ್ ಆದೇಶ ನೀಡಿತು . ಈ ವೇಳೆ ರಾಮ್ಪಾಲ್ರನ್ನು ಬಂಧಿಸಲುಹಿಸ್ಸಾರ್ಗೆ ತೆರಳಿ ದ ಪೊಲೀಸರಿಗೆ ಜನರು ಅಡ್ಡಿಯಾಗಿದ್ದರು.
2018: ನವದೆಹಲಿ:
ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಂದ ಐಎನ್ಎಕ್ಸ್ ಮೀಡಿಯಾ ಕೇಸ್ ಗೆ ಸಂಬಂಧಿಸಿದಂತೆ ಸುಮಾರು ೫೪ ಕೋಟಿ ಮೊತ್ತದ ಆಸ್ತಿ ಯನ್ನು ಇಡಿ ವಶಪಡಿಸಿಕೊಂಡಿತು. ಕೇಂದ್ರ ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕಾರ್ತಿ ಚಿದಂಬರಂ ಭಾರತದ ಕೊಡೈಕನಾಲ್, ತಮಿಳುನಾಡಿನ ಊಟಿ ಮತ್ತು ದೆಹಲಿಯ ಜೊರ್ಬಗ್ ನಲ್ಲಿ ಹೊಂದಿರುವ ಫ್ಲಾಟ್ ಗಳ ನ್ನು ವಶಕ್ಕೆ ತೆಗೆದುಕೊಳ್ಳುವ ಕುರಿತು ಸಹ ತಾತ್ಕಾಲಿಕ ಆದೇಶ ಹೊರಡಿಸಿತು. ಕಾರ್ತಿ ಅವರಿಗೆ ಸೇರಿದ ಇಂಗ್ಲೆಂಡಿನ ಸೊಮರ್ಸೆಟ್ ನಲ್ಲಿ ಮನೆ ಮತ್ತು ಹಳ್ಳಿ ಮನೆ, ಬಾರ್ಸಿಲೊನಾ ಹಾಗೂ ಸ್ಪೈನ್ ನಲ್ಲಿ ಟೆನ್ನಿಸ್ ಕ್ಲಬ್ ಗಳ ವಿವರಗಳನ್ನು ಸಹ ಪಡೆದು ಕೊಂಡಿದೆ. ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಚೆನ್ನೈಯ ಬ್ಯಾಂಕೊಂದರಲ್ಲಿ ಇರಿಸಿರುವ ೯೦ ಲಕ್ಷ ಸ್ಥಿರ ಠೇವಣಿ ವಿವರಗಳನ್ನು ಕೂಡ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ಈ ಸಂಸ್ಥೆ ಅಕ್ರಮವಾಗಿ ಕಾರ್ತಿ ಚಿದಂಬರಂಗೆ ಸೇರಿದ್ದಾಗಿದ್ದು ಇಲ್ಲೆಲ್ಲಾ ಇರುವ ಆಸ್ತಿಗಳನ್ನು ಒಟ್ಟು ಸೇರಿಸಿದರೆ ಸುಮಾರು ೫೪ ಸಾವಿರ ಕೋಟಿ ರೂಪಾ ಯಿಗಳಾಗುತ್ತವೆ. ಚಿದಂಬರಂ ಅವರು ಕೇಂದ್ರ ಸಚಿವ ರಾಗಿದ್ದ ಸಂದರ್ಭದಲ್ಲಿ ಐಎನ್ ಎಕ್ಸ್ ಮೀಡಿಯಾಗೆ ೨೦೦೭ನೇ ಇಸವಿಯಲ್ಲಿ ಸುಮಾರು ೩೦೫ ಕೋಟಿ ಸಾಗರೋತ್ತರ ಹಣ ವನ್ನು ಸ್ವೀಕರಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಜಾರಿ ನಿರ್ದೇ ಶನಾಲಯ ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು.
2018: ಬೆಂಗಳೂರು:
ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧ ಎಚ್ಎಎಲ್ ಅಧಿಕಾರಿಗಳ ಜೊತೆ ಸಂವಾದ ನಡೆಸಲು ಬೆಂಗಳೂ ರಿಗೆ ಆಗಮಿಸಬೇಕಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವಕಾಶ ನೀಡಲು ಎಚ್ಎಎಲ್ ನಿರಾಕರಿಸಿತು.
ರಫೇಲ್ ಡೀಲ್ ಕುರಿತಾಗಿ ವಿವಾದ ಎದ್ದಿರೋ ಹಿನ್ನೆಲೆಯಲ್ಲಿ ರಾಹುಲ್‌ರ ಈ ಸಂವಾದ ರಾಷ್ಟ್ರ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಆದರೆ, ಈಗ ಹೆಚ್ಎಎಲ್ ರಾಹುಲ್ ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತು. ಹೆಚ್‌ಎ ಎಲ್ ಆವರಣದಲ್ಲಿ ನೌಕರರೊಂದಿಗೆ ನಡೆಯ ಬೇಕಿದ್ದ ಸಂವಾದ ಕಾರ್ಯಕ್ರಮಕ್ಕೆ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸಂವಾದ ಕಾರ್ಯಕ್ರಮಕ್ಕೆ ಸೂಕ್ತ ಸ್ಥಳದ ಹುಡುಕಾಟ ನಡೆಸುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದ ಮಿನ್ಸ್ ಸ್ಕ್ವೇರ್ ಬಳಿ ಇರುವ ವಿಮಾನ ಪ್ರತಿಮೆ ಪಕ್ಕದಲ್ಲಿ ಸಂವಾದ ಕಾರ್ಯಕ್ರಮಕ್ಕೆ ಚಿಂತನೆ ನಡೆಸುತ್ತಿದೆ. ಈ ಕುರಿತು ಕೆಪಿಸಿಸಿ ಪೊಲೀಸರ ಬಳಿ ಅನುಮತಿ ಕೋರಿದೆ. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣ ವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರ ನಡೆದಿದೆ.ಒಂದು ವೇಳೆ ಎಚ್ಎಎಲ್ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೆ ಅನು ಮತಿ ನೀಡದಿದ್ದರೆ ಪ್ರತಿಭಟನೆ ನಡೆಸಬೇ ಕಾಗುತ್ತದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಆದರೆ ಬಿಜೆಪಿ ಮಾತ್ರ ತನಗೂ ಇದಕ್ಕೂ ಸಂಬಂ ಧವಿಲ್ಲ ಎಂದು ಅಂತರಕಾಯ್ದುಕೊಂಡಿತು.
2018: ನವದೆಹಲಿ:
ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಬೆಂಗಳೂರಿನಲ್ಲಿನ ಆಸ್ತಿಪಾಸ್ತಿಯನ್ನು ಫೆರಾ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಮುಟ್ಟುಗೋಲು ಹಾಕಿಕೊಳ್ಳಲು ದೆಹಲಿಯ ನ್ಯಾಯಾಲಯವೊಂದು ಆದೇಶ ನೀಡಿತು. ನ್ಯಾಯಾಲಯದ ಹಿಂದಿನ ಆದೇಶ ಜಾರಿಗೆ ಜಾರಿ ನಿರ್ದೇಶನಾಲಯದ ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಎನ್.ಕೆ. ಮಟ್ಟ ಮತ್ತು ವಕೀಲ ಸಂವೇದ್ನ ವರ್ಮ ಅವರು ಕಾಲಾವಕಾಶ ಕೋರಿದ ಬಳಿಕ ಮೆಟ್ರೋಪಾಲಿನಟ್ ಮ್ಯಾಜಿಸ್ಟ್ರೇಟ್ ದೀಪಕ್ ಶೆರಾವತ್ ಅವರು ಬೆಂಗಳೂರು ಪೊಲೀಸರಿಗೆ ವಿಶೇಷ ನಿರ್ದೇಶನಗಳನ್ನು ನೀಡಿದರು. ಇದಕ್ಕೆ ಮುನ್ನ ಬೆಂಗಳೂರು ಪೊಲೀಸರು ತಾವು ಮಲ್ಯ ಅವರಿಗೆ ಸೇರಿದ ೧೫೯ ಆಸ್ತಿಗಳನ್ನು ಗುರುತಿಸಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಅವುಗಳಲ್ಲಿ ಯಾವುದೇ ಆಸ್ತಿಯನ್ನೂ ವಶಪಡಿಸಿಕೊಳ್ಳಲಾಗಿಲ್ಲ ಎಂದು ಹೇಳಿದ್ದರು. ನ್ಯಾಯಾಲಯವು ಪ್ರಕರಣದಲ್ಲಿ ತಾನು ಜಾರಿ ಮಾಡಿದ್ದ ಸಮನ್ಸ್ ನ್ನು ಗೌರವಿಸದೆ ತಪ್ಪಿಸಿಕೊಳ್ಳುತ್ತಿರುವುದಕ್ಕಾಗಿ ಜನವರಿ ೪ರಂದು ಮಲ್ಯ ಅವರನ್ನು ಘೋಷಿತ ಅಪರಾಧಿ ಎಂಬುದಾಗಿ ಘೋಷಣೆ ಮಾಡಿತ್ತು. ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಯ ಅವರ ಆಸ್ತಿಗಳನ್ನು ಬೆಂಗಳೂರು ಪೊಲೀಸ್ ಕಮೀಷನರ್ ಅವರ ಮೂಲಕ ಮುಟ್ಟುಗೋಲು ಹಾಕುವಂತೆ ಮೇ ೮ರಂದು ನಿರ್ದೇಶನ ನೀಡಿತ್ತು ಮತ್ತು ಈ ಸಂಬಂಧ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಮಲ್ಯ ಅವರನ್ನು ಫೆರಾ ಉಲ್ಲಂಘನೆ ಪ್ರಕರಣದಲ್ಲಿ ತಲೆ ತಪ್ಪಿಸಿಕೊಂಡದ್ದಕ್ಕಾಗಿ ’ಘೋಷಿತ ಅಪರಾಧಿ’ ಎಂಬುದಾಗಿ ನ್ಯಾಯಾಲಯ ಘೋಷಿಸಿತ್ತು. ಪದೇ ಪದೇ ಜಾರಿಗೊಳಿಸಲಾಗಿದ್ದ ಸಮನ್ಸ್ ಗಳನ್ನು ಗೌರವಿಸದೆ, ತಪ್ಪಿಸಿಕೊಂಡಿದ್ದರಿಂದ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂಬುದಾಗಿ ನ್ಯಾಯಾಲಯ ಘೋಷಿಸಿತ್ತು. ಕಳೆದ ವರ್ಷ ಏಪ್ರಿಲ್ ೧೨ರಂದು ನ್ಯಾಯಾಲಯ ಮಲ್ಯ ವಿರುದ್ಧ ಓಪನ್ ಎಂಡೆಡ್ ಜಾಮೀನುರಹಿತ ವಾರಂಟ್ ಜಾರಿ ಮಾಡಿತ್ತು. ಓಪನ್ ಎಂಡೆಡ್ ಜಾಮೀನು ರಹಿತ ವಾರಂಟ್ ಜಾರಿಗೆ ಯಾವುದೇ ಸಮಯದ ಮಿತಿ ಇರುವುದಿಲ್ಲ.
2018: ನವದೆಹಲಿ: ಆಮ್ರಪಾಲಿ ರಿಯಲ್ ಎಸ್ಟೇಟ್ ಸಂಸ್ಥೆಯಿಂದ ವಿಧಿವಿಜ್ಞಾನ ತಜ್ಞರಿಗೆ ಅದರ ದಾಖಲೆಗಳ ಹಸ್ತಾಂತರ ಸಲುವಾಗಿ, ಸುಪ್ರೀಂಕೋರ್ಟ್ ಅಮ್ರಪಾಲಿ ಅಧ್ಯಕ್ಷ ಅನಿಲ್ ಶರ್ಮ ಮತ್ತು ಇಬ್ಬರು ಕಂಪೆನಿ ನಿರ್ದೇಶಕರಿಗೆ ಅಕ್ಟೋಬರ್ 12ರ ಶುಕ್ರವಾರ ಬೆಳಗ್ಗೆ ಪೊಲೀಸರ ಮುಂದೆ ಹಾಜರಾಗಿ ಬೀಗಮುದ್ರೆ ಮಾಡಲಾಗಿರುವ ಅದರ ೯ ಆಸ್ತಿಗಳ ದಾಖಲೆಗಳನ್ನು ಪಟ್ಟಿ ಮಾಡುವಂತೆ ಆಜ್ಞಾಪಿಸಿತು. ಆಮ್ರಪಾಲಿ ಅಧ್ಯಕ್ಷರು ಮತ್ತು ನಿರ್ದೇಶಕರು ನೋಯಿಡಾದ ಸೆಕ್ಟರ್ ೫೭ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಬೆಳಗ್ಗೆ ೮ ಗಂಟೆಗೆ ಮುನ್ನ ಹಾಜರಾಗಬೇಕು. ಪೊಲೀಸರು ಅವರನ್ನು ಒಂಬತ್ತು ಆಸ್ತಿಗಳ ಪೈಕಿ ಒಂದಕ್ಕೆ ಕರೆದೊಯ್ಯುವರು ಮತ್ತು ರಾತ್ರಿಯ ವೇಳೆಗೆ ಅವರನ್ನು ಇರಿಸಲಾಗಿರುವ ಹೊಟೇಲಿಗೆ ವಾಪಸ್ ಕರೆತರುವರು. ಪಟ್ಟಿ ತಯಾರಿಸುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಪ್ರಕ್ರಿಯೆ ನಡೆಯುವುದು. ಈ ಹೊಟೇಲ್ ವಾಸ್ತವ್ಯದ ವೇಳೆಯಲ್ಲಿ ಬೆಳಗ್ಗೆ ೮ರಿಂದ ಸಂಜೆ ೬ ಗಂಟೆಯವರೆಗೆ ಮಾತ್ರ ಅವರು ಫೋನ್ ಬಳಸಬಹುದು. ಆಮ್ರಪಾಲಿ ನಿರ್ದೇಶಕರಾದ ಅನಿಲ್ ಶರ್ಮ, ಶಿವ ಪ್ರಿಯ ಮತ್ತು ಅಜಯ್ ಕುಮ ಅವರನ್ನು ಹೊಟೇಲ್ ಪಾರ್ಕ್ ಅಸೆಂಟ್ ಗೆ ಸಂಜೆ ೬ ಗಂಟೆಯ ಬಳಿಕ ರಾತ್ರಿ ವೇಳೆಯನ್ನು ಕಳೆಯಲು ಕರೆದೊಯ್ಯುವಂತೆ ಸುಪ್ರೀಂಕೋರ್ಟ್ ಆಜ್ಞಾಪಿಸಿದೆ. ಅವರು ಹೊಟೇಲಿನಲ್ಲೇ ರಾತ್ರಿಗಳನ್ನು ಪೊಲೀಸ್ ಕಣ್ಗಾವಲಿನಲ್ಲಿ ಕಳೆಯುವರು, ಅವರ ಫೋನ್ ಗಳನ್ನು ಪೊಲೀಸರು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಳ್ಳುವರು ಎಂದು ಕೋರ್ಟ್ ಹೇಳಿದೆ.
2018: ತಿರುವನಂತಪುರಂ: ಮಸೀದಿಗಳಲ್ಲಿ ಮುಸ್ಲಿಮ್ ಮಹಿಳೆಯರಿಗೆ ಪ್ರವೇಶ- ಪ್ರಾರ್ಥನೆಗೆ ಅವಕಾಶ ನೀಡುವಂತೆ ಕೋರಿ ಬಲಪಂಥೀಯ ಹಿಂದು ಸಂಘಟನೆಯೊಂದು ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತು. ಈ ಮಧ್ಯೆ ಈ ವಿಷಯದ ಮೇಲೆ ಸುಪ್ರೀಂಕೋರ್ಟಿನ ಮೆಟ್ಟಿಲು ತುಳಿಯುವುದಾಗಿ ಮುಸ್ಲಿಮ್ ಸುಧಾರಣಾವಧಿ ಸಂಘಟನೆ ಪ್ರಕಟಿಸಿತು. ಮುಖ್ಯ ನ್ಯಾಯಮೂರ್ತಿ ರಿಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಎಕೆ ಜಯಕೃಷ್ಣನ್ ನಂಬಿಯಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಅಖಿಲ ಭಾರತೀಯ ಹಿಂದು ಮಹಾಸಭಾ ರಾಜ್ಯ ಅಧ್ಯಕ್ಷ ಸಾಮಿ ಸಾಯಿ ಸ್ವರೂಪನಾಥ್ ಅವರು ಸಲ್ಲಿಸಿದ್ದ ಮನವಿಯನ್ನು ಅರ್ಜಿದಾರರು ಮುಸ್ಲಿಮ್ ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರವೇಶ ನಿರಾಕರಿಸಲಾಗಿದೆ ಎಂಬುದನ್ನು ತೋರಿಸುವಲ್ಲಿ ಸಾಕಷ್ಟು ಸಾಕ್ಷ್ಯಾಧಾರ ಸಲ್ಲಿಸಲು ವಿಫಲರಾಗಿದ್ದಾರೆ ಎಂದು ಹೇಳಿ ವಜಾಗೊಳಿಸಿತು. ೧೦ರಿಂದ ೫೦ ವರ್ಷಗಳ ನಡುವಣ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದ್ದ ಶಬರಿಮಲೈ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಮುಸ್ಲಿಮ್ ಮಹಿಳೆಯರಿಗೂ ಎಲ್ಲ ಮಸೀದಿಗಳಲ್ಲೂ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಸ್ವರೂಪನಾಥ್ ಅವರು ಪ್ರತಿಪಾದಿಸಿದ್ದರು. ಮುಸ್ಲಿಮ್ ಮಹಿಳೆಯರಿಗೆ ಇತರರು ನೋಡಬಾರದೆಂಬ ಕಾರಣಕ್ಕಾಗಿ ತಲೆಯಿಂದ ಪಾದದವರೆಗೆ ಬುರ್ಖಾ ಹಾಕಿಕೊಳ್ಳುವಂತೆ ಬಲವಂತ ಮಾಡಲಾಗುತ್ತದೆ. ಇದು ಅವರನ್ನು ಪ್ರತ್ಯೇಕಿಸುವ ಮತ್ತು ಕೀಳು ಮಾಡುವ ಕ್ರಮವಾಗಿದ್ದು, ಸಂವಿಧಾನದ ೨೧ ಮತ್ತು ೧೪ನೇ ಅನುಚ್ಛೇದಗಳನ್ನು ಉಲ್ಲಂಘಿಸಿ ಎಸಗಲಾಗುವ ತಾರತಮ್ಯವಾಗಿದೆ ಎಂದು ಸ್ವರೂಪನಾಥ್ ವಾದಿಸಿದ್ದರು. ಏನಿದ್ದರೂ, ಮಹಿಳೆಯರಿಗೆ ಮಸೀದಿಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬುದನ್ನು ಸಾಬೀತು ಪಡಿಸುವಲ್ಲಿ ಅರ್ಜಿದಾರರು ವಿಫಲರಾಗಿದ್ದಾರೆ ಎಂದು ಹೇಳಿ ಪೀಠವು ಅರ್ಜಿಯನ್ನು ವಜಾ ಮಾಡಿತು. ಶಬರಿಮಲೈ ಪ್ರಕರಣದಲ್ಲಿ ನೀಡಿದ ತೀರ್ಪು ಈ ಅರ್ಜಿಯಲ್ಲಿ ಅನ್ವಯವಾಗುವುದಿಲ್ಲ ಎಂದು ಹೇಳಿದ ಪೀಠ, ತಮಗೆ ತಾರತಮ್ಯವಾಗಿದೆ ಎಂದು ಅನಿಸಿದಲ್ಲಿ ಮುಸ್ಲಿಂ ಮಹಿಳೆಯರು ನ್ಯಾಯಾಲಯಕ್ಕೆ ಹೋಗಲು ಮುಕ್ತರಾಗಿದ್ದಾರೆ ಎಂದು ಹೇಳಿತು. ಸುಪ್ರೀಂಗೆ ನಿಸಾ ವೇದಿಕೆ: ಈ ಮಧ್ಯೆ ಉತ್ತರ ಕೇರಳದ ನಿಸಾ ಹೆಸರಿನ ಮುಸ್ಲಿಮ್ ಸುಧಾರಣಾವಾದಿ ವೇದಿಕೆಯು ಎಲ್ಲ ಮಸೀದಿಗಳಲ್ಲೂ ಮುಸ್ಲಿಮ್ ಮಹಿಳೆಯರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಮತ್ತು ಮಹಿಳೆಯರಿಗೆ ಇಮಾಮರಾಗಲೂ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಮುಂದಿನವಾರ ತಾನು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸುವುದಾಗಿ ಪ್ರಕಟಿಸಿತು. ತ್ರಿವಳಿ ತಲಾಖ್ ತೀರ್ಪಿನ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾಗಿದ್ದ ನಿಸಾ ಅಧ್ಯಕ್ಷೆ ವಿ ಪಿ ಜುಹ್ರಾ ಅವರು ತಮ್ಮ ಸಂಘಟನೆಯು ಸಮಾನಮನಸ್ಕ ಜನರೊಂದಿಗೆ ಸಂಪರ್ಕದಲ್ಲಿದ್ದು ಮುಂದಿನ ವಾರ ಸುಪ್ರೀಂಮೆಟ್ಟಿಲು ಏರಲಿದೆ ಎಂದು ಹೇಳಿದರು. ‘ನಾನು ಮೆಕ್ಕಾಕ್ಕೆ ಹೋಗಿದ್ದೇನೆ. ಅಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಸ್ಲಾಮಿಕ್ ಧರ್ಮ ಗ್ರಂಥಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು ಮತ್ತು ಸ್ಥಾನಮಾನ ನೀಡಲಾಗಿದೆ. ಮಹಿಳೆಯರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಪ್ರವಾದಿಯವರಿಗೆ ಸಮಸ್ಯೆ ಇಲ್ಲದೇ ಇರುವಾಗ, ಮಹಿಳೆಯರಿಗೆ ಈ ಹಕ್ಕನ್ನು ನಿರಾಕರಿಸಿರುವುದು ಏಕೆ’ ಎಂದು ಅವರು ಪ್ರಶ್ನಿಸಿದರು. ಮುಸ್ಲಿಮ್ ಮಹಿಳೆಯರಿಗೆ ಅವರು ಧಾರ್ಮಿಕ ವಿಧ್ವಾಂಸರಾಗಿದ್ದರೂ, ಇಮಾಮ್ ಆಗಲೂ ಅವಕಾಶ ನೀಡಲಾಗುತ್ತಿಲ್ಲ ಎಂದು ಜುಹ್ರಾ ನುಡಿದರು. ‘ಶಬರಿಮಲೈ ದೇವಾಲಯಕ್ಕೆ ಸಂಬಂಧಿಸಿದ ಚಾರಿತ್ರಿಕ ತೀರ್ಪು ಇತರ ಧರ್ಮಗಳಲ್ಲಿನ ತಾರತಮ್ಯ ಕೊನೆಗೊಳಿಸಲೂ ನೆರವಾಗುವುದು ಎಂಬುದಾಗಿ ನಾನು ಹಾರೈಸುವೆ’ ಎಂದು ಅವರು ಹೇಳಿದರು. ಮಹಿಳೆಯರಿಗೆ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ನೀಡಬೇಕು ಮತ್ತು ಮುಸ್ಲಿಮ್ ಮದುವೆ ಕಾಯ್ದೆಯನ್ನು ಮರುಪರಿಶೀಲಿಸಬೇಕು ಎಂಬುದಾಗಿ ಕೋರಿ ಜುಹ್ರಾ ಅವರು ಸಲ್ಲಿಸಿದ ಎರಡು ಅರ್ಜಿಗಳು ಈಗಾಗಲೇ ಸುಪ್ರೀಂಕೋರ್ಟ್ ಅಂಗಣದಲ್ಲಿವೆ. ಶಬರಿಮಲೈ, ಪ್ರತಿಭಟನೆ ತೀವ್ರ: ಈ ಮಧ್ಯೆ ಶಬರಿಮಲೈ ತೀರ್ಪಿನ ವಿರುದ್ಧ ಕೇರಳದಲ್ಲಿ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್ ತೀರ್ಪಿನ ಜಾರಿ ಅನಿವಾರ್ಯತೆಯನ್ನು ಜನರಿಗೆ ವಿವರಿಸಲು ಪ್ರಚಾರ ಅಭಿಯಾನ ಹಮ್ಮಿಕೊಳ್ಳಲು ಕೇರಳ ಎಡ ಪ್ರಜಾತಾಂತ್ರಿಕ ರಂಗ ನೇತೃತ್ವದ ಆಡಳಿತಾರೂಢ ಸರ್ಕಾರ ನಿರ್ಧರಿಸಿದೆ. ತೀರ್ಪಿನ ಹಿನ್ನೆಲೆಯಲ್ಲಿ ಚುನಾಯಿತ ಸರ್ಕಾರವನ್ನು ಉರುಳಿಸುವ ಗುರಿ ಇಟ್ಟುಕೊಂಡು ಕಾಂಗ್ರೆಸ್ ಮತ್ತು ಸಂಘ ಪರಿವಾರ ವಿಷಪೂರಿತ ಪ್ರಚಾರ ನಡೆಸುತ್ತಿವೆ. ತೀರ್ಪಿಗಾಗಿ ಮುಖ್ಯಮಂತ್ರಿಯನ್ನು ವೈಯಕ್ತಿಕ ನಿಂದನೆಗೆ ಗುರಿ ಪಡಿಸಲಾಗುತ್ತಿದೆ ನಾವು ಜನರಿಗೆ ವಾಸ್ತವಾಂಶವನ್ನು ವಿವರಿಸುತ್ತೇವೆ ಮತ್ತು ತೀರ್ಪು ಅನುಷ್ಠಾನದ ಅಗತ್ಯವನ್ನು ವಿವರಿಸುತ್ತೇವೆ’ ಎಂದು ಎಲ್ ಡಿಎಫ್ ಸಂಚಾಲಕ ಎ. ವಿಜಯರಾಘವನ್ ಹೇಳಿದರು.
2016: ಲಕ್ನೊ: ಭಯೋತ್ಪಾದನೆ ಮಾನವೀಯತೆಯ ವೈರಿ. ಜಾಗೃತ ಜನರು ಭಯೋತ್ಪಾದನೆ ನಿರ್ಮೂಲನೆಗೆ ಸಹಕರಿಸುತ್ತಾರೆ. ಭಯೋತ್ಪಾದನೆಗೆ ಸಹಕಾರ ಮತ್ತು ಆಶ್ರಯ ನೀಡುವವರನ್ನು ಸದೆಬಡಿಯಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಗುಡುಗಿದರು. ಇಲ್ಲಿನ ಐಷ್‌ಬಾಗ್ ಮೈದಾನದಲ್ಲಿ ಆಯೋಜಿಸಿದ್ದ ರಾಮೋತ್ಸವದಲ್ಲಿ ರಾಷ್ಟ್ರದ ಜನರಿಗೆ ವಿಜಯ ದಶಮಿ ಶಭಾಶಯ ಕೋರಿ ಭಾಷಣ ಮಾಡಿದ ಅವರು, ಉಗ್ರವಾದವನ್ನು ನಿರ್ಮೂಲನೆ ಮಾಡದೆ ಮಾನವೀಯತೆಗೆ ಆಶ್ರಯ ನೀಡಲು ಸಾಧ್ಯವಿಲ್ಲ. ಜಗತ್ತಿನ ಮಾನವತಾ ಶಕ್ತಿಗಳು ಒಂದಾಗಿವೆ ಎಂದು ಭಯೋತ್ಪಾದನೆಗೆ ಆಶ್ರಯ ನೀಡಿರುವ ರಾಷ್ಟ್ರಕ್ಕೆ ಎಚ್ಚರಿಕೆ ಸಂದೇಶ ನೀಡಿದರು. ವಿಜಯ ದಶಮಿಯಂದು ರಾವಣನ ದಹನ ಮಾಡಲಾಗುತ್ತದೆ. ರಾವಣನ ದಹನ ಕಾರ್ಯದಿಂದ ಅರಿಯುವುದ ಸಾಕಷ್ಟಿದೆ. ನಮ್ಮೊಳಗಿನ ದುಷ್ಟತನ ದಹಿಸದೆ ಒಳಿತಾಗದು. ರಾಮಾಯಣದಲ್ಲಿ ಬರುವ ಜಟಾಯು ಮಾಡಿದ ದಾಳಿ ಸಣ್ಣದಾದರೂ ಅದು ಕಡಿಮೆಯೇನಲ್ಲ. ಒಬ್ಬ ಸೀತೆಗಾಗಿ ಜಟಾಯು ಹೋರಾಟ ಮಾಡಿದ. ಈಗ ನಮ್ಮ ಮನೆಯಲ್ಲಿನ ಸೀತೆಯರ ರಕ್ಷಣೆಗೆ ನಾವು ಹೋರಾಟಕ್ಕೆ ಸಿದ್ಧರಾಗಬೇಕು. ಮಹಿಳೆ ಗೌರವ ಉಳಿಸಲು ಸಿದ್ಧರಾಗಿ. ಜಾತಿ, ಮತ, ಪಂಥಗಳನ್ನು ಬದಿಗಿಟ್ಟು ಒಂದಾಗಿ ಎಂದು ಕರೆ ನೀಡಿದರು. ಯುದ್ಧಕ್ಕಿಂತ ಬುದ್ಧನತ್ತ ಹೋಗಲು ನಾವು ಬಯಸುತ್ತೇವೆ. ಯುದ್ಧಭೂಮಿಯಲ್ಲಿ ಗೀತೆಯನ್ನು ಬೋಧಿಸಿದ ನೆಲ ನಮ್ಮದು. ಯುದ್ಧ ಮತ್ತು ಶಾಂತಿಯನ್ನು ಸಮಾನವಾಗಿ ಪರಿಗಣಿಸಿದ ದೇಶ ನಮ್ಮದು ಎಂದು ಅವರು ನುಡಿದರು.
2016: ನವದೆಹಲಿ: ಚೀನಾವು ತನ್ನ ಯುದ್ಧ ವಿಮಾನವಾಹಕ ನೌಕೆಯನ್ನು ಸಮರೋಪಾದಿಯಲ್ಲಿ ಸಜ್ಜುಗೊಳಿಸುತ್ತಿರುವುದು ಬೆಳಕಿಗೆ ಬಂದಿದ್ದು, ತನ್ನ ಮೊದಲ ದೇಶೀ ವಿಮಾನ ವಾಹಕ ನೌಕೆ ನಿರ್ಮಾಣವನ್ನು ಪೂರ್ಣಗೊಳಿಸುತ್ತ ದಾಪುಗಾಲು ಹಾಕುತ್ತಿದೆ. ಲಭ್ಯವಾಗಿರುವ ಚೀನೀ ವಿಮಾನ ವಾಹಕ ನೌಕೆಯ ಚಿತ್ರವು ಈ ವರ್ಷದ ಆರಂಭದ ಸ್ಥಿತಿಗೂ ಈಗಿನ ಸ್ಥಿತಿಗೂ ಅಜಗಜಾಂತರವನ್ನು ತೋರಿಸುತ್ತಿರುವುದು ಭಾರತಕ್ಕೆ ಆತಂಕ ತರುವ ವಿದ್ಯಮಾನವಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಚೀನಾದ ಮೊದಲ ದೇಶೀ ನಿರ್ಮಿತ ವಿಮಾನ ವಾಹಕವು 2019ರಲ್ಲಿ ನೌಕಾಪಡೆಗೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಆದರೆ ಇದಕ್ಕೆ ಪ್ರತಿಯಾಗಿ ಭಾರತ ನಿರ್ಮಿಸುತ್ತಿರುವ ವಿಮಾನ ವಾಹಕದ ಪ್ರಗತಿ ಅತ್ಯಂತ ನಿಧಾನಗತಿಯಲ್ಲಿದೆ. ಚೀನಾ ಇದೀಗ ಅಭಿವೃದ್ಧಿ ಪಡಿಸುತ್ತಿರುವ ವಿಮಾನವಾಹಕ ಸಮರ ನೌಕೆಯು 50 ವಿಮಾನಗಳನ್ನು ಒಯ್ಯುವ ಸಾಮರ್ಥ್ಯನ್ನು ಹೊಂದಿದ್ದು, ಇತರ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದೆ. ಈ ಸಮರ ನೌಕೆಯಲ್ಲಿ ಸೇತುವೆ, ವಿಮಾನ ಹಾರಾಟ ಸವಲತ್ತುಗಳು, ಸಮರ ನಿಯಂತ್ರಣ ಸವಲತ್ತುಗಳು, ರಾಡಾರ್, ಸೆನ್ಸರ್ ಇತ್ಯಾದಿಗಳನ್ನು ಅಳವಡಿಸಲಾಗಿದೆ ಎಂದು ಸುದ್ದಿಮೂಲಗಳು ಹೇಳಿದವು.
2016: ಮೈಸೂರು: ವಿಜಯದಶಮಿಯ ದಿನವಾದ ಈದಿನ ವಿಶ್ವಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿ ಮಳೆಯ ನಡುವೆಯೂ ಜನರ ಗಮನ ಸೆಳೆಯಿತು. 720 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಗಜ ನಡೆಯ ವೈಭವಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು. ಇದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕರ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ನಾಡಿನ ಜನತೆಗೆ ದಸರಾ ಶುಭಾಶಯ ಹೇಳಿದರು. ಜಂಬೂ ಸವಾರಿಗೆ ಮಳೆರಾಯ ಅಡ್ಡಿಪಡಿಸಿದರೂ ಅದನ್ನು ಲೆಕ್ಕಿಸದೇ ಲಕ್ಷಾಂತರ ಮಂದಿ ಜಂಬೂಸವಾರಿಯನ್ನು
ಕಾದು ನಿಂತು ವೀಕ್ಷಿಸಿದರು. ವಿವಿಧ ಟ್ಯಾಬ್ಲೋಗಳು, ಜಾನಪದ ತಂಡಗಳು ಗಮನ ಸೆಳೆದವು.
2016: ಶ್ರೀನಗರ: ಶ್ರೀನಗರದಲ್ಲಿ ಮತ್ತೆ ಅಟ್ಟಹಾಸ ಮೆರೆದಿರುವ ಉಗ್ರರು ಶೋಪಿಯಾನ್
ಜಿಲ್ಲೆಯಲ್ಲಿ ಸೇನಾ ವಾಹನದ ಮೇಲೆ ಗ್ರೆನೆಡ್ ದಾಳಿ ನಡೆಸಿದ್ದು, ಇಬ್ಬರು ಸೇನಾ ಸಿಬ್ಬಂದಿ ಸೇರಿ 9 ಮಂದಿ ಗಾಯಗೊಂಡರು. ಬೆಳಗ್ಗೆ 11.40ಕ್ಕೆ ಸಿಆರ್‌ಪಿಎಫ್‌ನ ವಾಹದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದರು. ಇಬ್ಬರು ಯೋಧರು ಹಾಗೂ ಏಳು ಮಂದಿ ನಾಗರಿಕರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಗ್ರರ ವಿರುದ್ಧ ಕಾರ್ಯಚರಣೆ ಕೈಗೊಂಡಿರುವ ಭದ್ರತಾ ಸಿಬ್ಬಂದಿ ಉಗ್ರರಿಗಾಗಿ ಶೋಧ ಮುಂದುವರೆಸಲಾಯಿತು. ಈ ಮದ್ಯೆ ಪಾಂಪೋರೆಯಲ್ಲಿ ಭಯೋತ್ಪಾದಕರ
ಜೊತೆಗಿನ ಚಕಮಕಿ ಮುಂದುವರೆಯಿತು.
2016: ಇಂದೋರ್: ಚೇತೇಶ್ವರ ಪೂಜಾರ (101*ರನ್) ಶತಕ ಹಾಗೂ ರವಿಚಂದ್ರನ್ ಅಶ್ವಿನ್ (59ಕ್ಕೆ 7) ಸ್ನಿನ್ ಮೋಡಿಯ ನೆರವಿನಿಂದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಎದುರಾಳಿ ನ್ಯೂಜಿಲೆಂಡ್ ವಿರುದ್ಧದ 3ನೇ ಮತ್ತು ಕಡೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಕೇಕೆ ಹಾಕಿತು. ಈ ಮೂಲಕ ಭಾರತ ಕಿವೀಸ್ ವಿರುದ್ಧದ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದು ಬೀಗಿತು. ದ್ವಿತೀಯ ಇನಿಂಗ್ಸ್ ನ್ಯೂಜಿಲೆಂಡ್ 38ನೇ ಓವರ್ನಲ್ಲೇ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಗಳಿಸಿದ್ದು 143 ರನ್. ನಾಲ್ಕನೇ ದಿನದಾಟ ಆರಂಭಿಸಿದ ಭಾರತ ತಂಡ ದ್ವಿತೀಯ ಇನಿಂಗ್ಸ್ನಲ್ಲಿ ಗೌತಮ್ ಗಂಭೀರ್ (50) ಅವರ ಅರ್ಧಶತಕ ಮತ್ತು ಪೂಜಾರ ಅವರ ಅಜೇಯ ಶತಕ ಸೇರಿ 49 ಓವರ್ಗಳಲ್ಲಿ 3ವಿಕೆಟ್ಗೆ 216 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಈ ಮೂಲಕ ನ್ಯೂಜಿಲೆಂಡ್ಗೆ ಪಂದ್ಯ ಗೆಲ್ಲಲು ಒಟ್ಟು 475 ರನ್ಗಳ ಗುರಿ ನೀಡಿತು. ಭಾರತದ ಪರ ಮುರಳಿವಿಜಯ್ 19, ವಿರಾಟ್ ಕೊಹ್ಲಿ 17, ಅಜಿಂಕ್ಯಾ ರಹಾನೆ ಔಟಾಗದೇ 23 ರನ್ ಗಳಿಸಿಕೊಟ್ಟರು. ಭಾರತ ನೀಡಿದ ಬೃಹತ್ ಸವಾಲು ಬೆನ್ನತ್ತಿದ ನ್ಯೂಜಿಲೆಂಡ್ಗೆ ಉಮೇಶ್ ಯಾದವ್ ಆರಂಭಿಕ ಟಾಮ್ ಲಥಾನ್ (6) ಅವರನ್ನು ಪೆವಿಲಿಯನ್ಗೆ ಅಟ್ಟುವ ಮೂಲಕ ಆಘಾತ ನೀಡಿದರು. ಬಳಿಕ ಮಾರ್ಟಿನ್ ಗುಪ್ಟಿಲ್ಗೆ ಜತೆಯಾದ ಕೇನ್ ವಿಲಿಯಮ್ನ್ (27) ಕೆಲ ಸಮಯ ವಿಕೆಟ್ ಕಾದುಕೊಂಡರಾದರೂ, ಅವರ ರನ್ ಓಟಕ್ಕೆ ಅಶ್ವಿನ್ ಕಡಿವಾಣ ಹಾಕಿದರು. ಎರಡು ವಿಕೆಟ್ ಕಳೆದುಕೊಂಡ ನಂತರ ನ್ಯೂಜಿಲೆಂಡ್ ಬ್ಯಾಟ್ಸ್ಮನ್ಗಳು ಅಶ್ವಿನ್ ಸ್ಪಿನ್ಗೆ ತತ್ತರಿಸಿದರು. ರಾಸ್ ಟೇಲರ್ (32) ಮತ್ತು ಲೂಕ್ ರಾಂಚಿ (15) ಕೂಡ ಅಶ್ವಿನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿ ತಂಡಕ್ಕೆ ಇನ್ನಷ್ಟು ಆಘಾತ ನೀಡಿದರು. ಜೇಮ್್ಸ ನೀಶಾಮ್ ಖಾತೆ ತೆರೆಯದೇ ರವೀಂದ್ರ ಜಡೇಜ ಎಸೆತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆರಂಭಿಕ ಮಾರ್ಟಿನ್ ಗುಪ್ಟಿಲ್ ಕೂಡ ತಾಳ್ಮೆ ಕಳೆದುಕೊಂಡು ಜಡೇಜಾಗೆ ವಿಕೆಟ್ ಒಪ್ಪಿಸಿದರು. ಆನಂತರ ಬಂದ ಯಾವುದೇ ಬ್ಯಾಟ್ಸ್ಮನ್ ತಾಳ್ಮೆಯ ಆಟ ಪ್ರದರ್ಶಿಸಲಿಲ್ಲ. ಪರಿಣಾಮ ಭಾರತ ಅಂತಿಮ ಪಂದ್ಯದಲ್ಲಿಯೂ ಗೆಲುವು ಸಾಧಿಸಿ ಸರಣಿ ತನ್ನದಾಗಿಸಿಕೊಂಡಿತು.
2016; ಕಾನ್ಪುರ: ದೇಶಾದ್ಯಂತ ದಸರಾ ಸಂದರ್ಭದಲ್ಲಿ ರಾಮನು ರಾವಣನನ್ನು ಸಂಹರಿಸಿ, ವಿಜಯ ಸಾಧಿಸಿದ ಸಂಭ್ರಮವನ್ನು ಆಚರಿಸುತ್ತಿದ್ದರೆ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಸ್ಥಳೀಯರು ಇದೇ ಅವಧಿಯಲ್ಲಿ ರಾವಣನನ್ನು ಪೂಜಿಸುತ್ತಾರೆ. ಕಾನ್ಪುರದ ರಾವಣ ದೇವಾಲಯವನ್ನು ವರ್ಷದಲ್ಲಿ ಒಂದೇ ಬಾರಿ, ದಸರಾ ಸಮಯದಲ್ಲಿ ತೆರೆಯಲಾಗುತ್ತದೆ ಮತ್ತು ರಾವಣನಿಗೆ ಪೂಜೆ ಸಲ್ಲಿಸಲಾಗುತ್ತದೆ. ರಾವಣನಿಗೆ ಇದ್ದ ಅಪಾರ ಜ್ಞಾನವನ್ನು ಗೌರವಿಸುವುದಕ್ಕಾಗಿ ನಾವು ವರ್ಷಕ್ಕೆ ಒಮ್ಮೆ ಈ ದೇವಾಲಯದಲ್ಲಿ ರಾವಣ ಪ್ರತಿಮೆಗೆ ಪೂಜೆ ಸಲ್ಲಿಸುತ್ತೇವೆ ಎಂದು ಸ್ಥಳೀಯರು ಹೇಳುತ್ತಾರೆ. ದೇಶದಲ್ಲಿ ನಾಲ್ಕು ಕಡೆ ರಾವಣನಿಗೆ ಪೂಜೆ ಸಲ್ಲಿಸುವಂತಹ ಸ್ಥಳಗಳಿವೆ. ಅಲ್ಲಿನ ರಾವಣ ದೇವಾಲಯಗಳಲ್ಲಿ ರಾವಣನಿಗೆ ಪೂಜೆ ಸಲ್ಲುತ್ತದೆ. ರಾವಣದ ಜನ್ಮಸ್ಥಳ ಎನ್ನಲಾಗಿರುವ ದೆಹಲಿ ಎನ್ಸಿಆರ್ನ ಬಿಸರ್ಖ್ನಲ್ಲಿನ ರಾವಣ ದೇವಾಲಯ, ಉತ್ತರ ಪ್ರದೇಶದ ಕಾನ್ಪುರದ ದಶಾನನ ರಾವಣ ದೇವಾಲಯ, ಮಧ್ಯಪ್ರದೇಶದ ರಾವಣಗ್ರಾಮ ರಾವಣ ದೇವಾಲಯ ಮತ್ತು ಆಂಧ್ರ ಪ್ರದೇಶದ ಕಾಕಿನಾಡ ರಾವಣ ದೇವಾಲಯ ಇವು ದೇಶದಲ್ಲಿರುವ ವಿಶಿಷ್ಠ ರಾವಣ ದೇವಾಲಯಗಳು.
2016: ಮುಂಬೈ: ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಅವರು ಈದಿನ ನಿಧನರಾದರು. ರಾತ್ರಿ ನಿದ್ದೆಯಲ್ಲಿದ್ದಾಗ ಅವರಿಗೆ ತೀವ್ರ ಹೃದಯಾಘಾತವಾಗಿದ್ದು, ಈದಿನ ಬೆಳಗ್ಗೆ ಅವರು ಕೊನೆಯುಸಿರು ಎಳೆದರು ಎಂದು ವರದಿಗಳು ತಿಳಿಸಿದವು. ನಟಿ ಶಿಲ್ಪಾ ಶೆಟ್ಟಿ ಮತ್ತು ಆಕೆಯ ಸಹೋದರಿ ಶಮಿತಾ ಇಬ್ಬರೂ ಅಪ್ಪ ಸುರೇಂದ್ರ ಅವರ ಜೊತೆಗೆ ಅತ್ಯಂತ ಹೆಚ್ಚಿನ ಆಪ್ತತೆ ಹೊಂದಿದ್ದರು. ಉದ್ಯಮಿಯಾಗಿದ್ದ ಸುರೇಂದ್ರ ಅವರು ಶಿಲ್ಪಾ ಮತ್ತು ಶಮಿತಾ ಇಬ್ಬರ ಮೇಲೂ ಅಪಾರ ಪ್ರಭಾವ ಬೀರಿದ್ದರು. ಇಬ್ಬರೂ ಮಕ್ಕಳ ಬೆಳವಣಿಗೆಗೆ ತುಂಬು ಹೃದಯದ ಬೆಂಬಲ ನೀಡಿದ್ದರು. ಸಲ್ಮಾನ್ ಖಾನ್ ಸೇರಿದಂತೆ ಶಿಲ್ಪಾ ಶೆಟ್ಟಿ ಅವರ ಸಹನಟರ ಜೊತೆಗೂ ಸುರೇಂದ್ರ ಅವರಿಗೆ ಆತ್ಮೀಯ ಸಂಬಂಧವಿತ್ತು. ಸ್ವಯಂಘೋಷಿತ ‘ದೇವ ಮಾನವ’ನೊಬ್ಬನಿಂದ ಕೆಲವು ತಿಂಗಳ ಹಿಂದೆ ವಂಚಿತರಾಗಿದ್ದ ಸುರೇಂದ್ರ ಅವರು ಕೆಲವು ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದುದು ಸುದ್ದಿಯಾಗಿತ್ತು. ಸುರೇಂದ್ರ ಕುಟುಂಬ ಪೊಲೀಸರಿಗೆ ನೀಡಿದ ದೂರಿನ ಬಳಿಕ ಕಪಟ ಬಾಬಾ ಬಂಧನವಾಗಿತ್ತು.
2016: ಬೀಜಿಂಗ್: ಚೀನಾದಲ್ಲಿ ಕುಸಿದು ಬೀಳುತ್ತಿದ್ದ ಬಹುಮಹಡಿ ಕಟ್ಟಡದ ಅವಶೇಷಗಳು ಬೀಳದಂತೆ ಮಗಳನ್ನು ಬಿಗಿದಪ್ಪಿ ತಂದೆ ನೀಡಿದ ರಕ್ಷಣೆ 3 ವರ್ಷದ ಮಗುವಿನ ಪ್ರಾಣವನ್ನು ಉಳಿಸಿದ ಘಟನೆ ಘಟಿಸಿತು. ಸತ್ತ ಅಪ್ಪನ ಅಪ್ಪುಗೆಯಲ್ಲಿದ್ದ ಪುತ್ರಿಯನ್ನು 12 ಗಂಟೆಗಳಿಗೂ ಹೆಚ್ಚಿನ ಅವಧಿಯ ಶೋಧ ಕಾರ್ಯಾಚರಣೆ ಬಳಿಕ ಬಳಿಕ ರಕ್ಷಣಾ ಸಿಬ್ಬಂದಿ ಈದಿನ ರಕ್ಷಿಸಿದರು ಎಂದು ವರದಿಗಳು ತಿಳಿಸಿದವು. ಝೆಜಿಯಾಂಗ್ ಪೂರ್ವ ಪ್ರಾಂತ್ಯದ ವೆಂಝೋಹುವಿನಲ್ಲಿ ಕುಸಿದ ಆರು ಮಹಡಿಗಳ ವಸತಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಅತ್ಯಂತ ಆಳದಲ್ಲಿ ವು ನಿಂಗ್ಸಿ ಹೆಸರಿನ 3 ವರ್ಷದ ಮಗು ಸಿಕ್ಕಿಹಾಕಿಕೊಂಡಿತ್ತು. ಅಪ್ಪನ ಅಪ್ಪುಗೆಯ ಪರಿಣಾಮವಾಗಿ ಆಕೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾಳೆ. ಕುಸಿದ ಕಟ್ಟಡದ ಅಡಿಯಲ್ಲಿ ಆಕೆಯ ಅಪ್ಪ, ಅಮ್ಮ ಸೇರಿದಂತೆ ಇಡೀ ಕುಟಂಬ ಸರ್ವ ನಾಶವಾಗಿವೆ. ಕಟ್ಟಡ ಕುಸಿತ ದುರಂತದಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಸಿಟಿವಿ ವರದಿ ತಿಳಿಸಿತು. ತಾನು ಸಾಯುವ ಮುನ್ನ ತನ್ನ ಪುಟ್ಟ ಮಗುವನ್ನು ಅಪ್ಪಿ ಹಿಡಿದು ಉಸಿರಾಡಲು ಸಾಧ್ಯವಾಗುವಂತೆ ಅವಕಾಶ ಕಲ್ಪಿಸಿಕೊಟ್ಟ ಆಕೆಯ ತಂದೆಯ ಕಾರಣದಿಂದಲೇ ಪುಟ್ಟ ಮಗು ಬದುಕಿದೆ. ಇದಕ್ಕಾಗಿ ತನ್ನ ಜೀವಬಲಿ ನೀಡಿದ ಅಪ್ಪನಿಗೆ ಧನ್ಯವಾದ ಹೇಳಬೇಕು ಎಂದು ಆಕೆಯನ್ನು ರಕ್ಷಿಸಿ ಹೊರತಂದ ಸಿಬ್ಬಂದಿ ಸ್ಥಳೀಯ ದೈನಿಕಕ್ಕೆ ತಿಳಿಸಿದರು. 26ರ ಹರೆಯದ ಮೃತ ತಂದೆ ಷೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಯಿತು.
2016: ನವದೆಹಲಿ: ದೇಶದಲ್ಲಿ ಗೋ ರಕ್ಷಾದಳ ಕಾರ್ಯಕರ್ತರು ಕಾನೂನಿನ ಅಡಿಯಲ್ಲೇ ತಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಗೋ ರಕ್ಷಕರ ಪರ ಬ್ಯಾಟಿಂಗ್ ನಡೆಸಿದರು. 91ನೇ ಆರ್.ಎಸ್.ಎಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಮೋಹನ್ ಭಾಗವತ್, ದೇಶದಲ್ಲಿನ ಗೋವುಗಳನ್ನು ರಕ್ಷಿಸುವ ನೀಟ್ಟಿನಲ್ಲಿ ಗೋ ರಕ್ಷಾದಳ ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಾನೂನಿನ ಅಡಿಯಲ್ಲಿ ಕಾರ್ಯ ಕೈಗೊಂಡಿದ್ದಾರೆ. ಇದು ಪ್ರತಿ ರಾಜ್ಯದ ನೀತಿ ನಿಯಮಗಳ ಭಾಗವಾಗಿದೆ. ಗೋರಕ್ಷಕರು ಯಾವಾಗಲೂ ಕಾನೂನನ್ನು ಕೈಗೆತ್ತಿಕೊಂಡಿಲ್ಲ. ಕಾನೂನಿನ ಪರಿಧಿ ಹೊರಗೆ ಗೋ ರಕ್ಷಣೆಗೆ ಮುಂದಾಗುವವರು ನಿಜವಾದ ಗೋರಕ್ಷರಲ್ಲ ಎಂದು ಹೇಳಿದರು. ಪಾಕಿಸ್ತಾನಿಗಳು ಕಾಶ್ಮೀರಿಗರು ದಂಗೆಯೇಳಲು ಪ್ರೋತ್ಸಾಹ ನೀಡುತ್ತಿದ್ದಾರೆ. ಎಲ್ಲಾ ಕಾಶ್ಮೀರಿಗರು, ಮಣಿಪುರಿ, ಮುಜಾಫರ್ಬಾದ್ ಮತ್ತು ಗಿಲ್ಗಿಟ್ – ಬಾಲ್ಟಿಸ್ಥಾನ ಭಾರತಕ್ಕೇ ಸೇರಿದ್ದು. ಗಡಿಯಲ್ಲಿ ಪದೇ ಪದೇ ದಾಳಿ ನಡೆಸುತ್ತಿದ್ದ ಉಗ್ರರ ಮೇಲೆ ಸೀಮಿತ ದಾಳಿ ನಡೆಸುವ ಮೂಲಕ ಭಾರತ ತಕ್ಕ ಉತ್ತರ ನೀಡಿದೆ. ಉಗ್ರರಿಗೆ ಕುಮ್ಮಕ್ಕು ನೀಡುತ್ತಿದ್ದ ಪಾಕಿಸ್ತಾನ ಇನ್ನಾದರೂ ತನ್ನ ಮೊಂಡುತನವನ್ನು ಬಿಟ್ಟು, ತಪ್ಪೊಪ್ಪಿಕೊಳ್ಳಲಿ ಎಂದು ಆಗ್ರಹಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು 1925ರಲ್ಲಿ ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ್ದರು.
2016: ನವದೆಹಲಿ: ಭಾರತೀಯ ರೈಲ್ವೆ ಪ್ರವಾಸಿಗರನ್ನು ಆಕರ್ಷಿಸಲು ಸ್ವಿಜರ್ಲ್ಯಾಂಡ್ ಮಾದರಿಯ ಗ್ಲಾಸ್ ಸೀಲಿಂಗ್ ಕೋಚ್ ರೈಲುಗಳನ್ನು ಪರಿಚಯಿಸಲು ಮುಂದಾಯಿತು. ಇದರಿಂದಾಗಿ ಮಾರ್ಗದುದ್ದಕ್ಕೂ ಪ್ರಯಾಣಿಕರು ಅಕ್ಕಪಕ್ಕದ ಪರಿಸರ ಸೌಂದರ್ಯವನ್ನು ಸವಿಯುತ್ತಾ ಸಾಗುಬಹುದು. ರೈಲ್ವೆ ಪ್ರಯಾಣ ಎಂದರೆ ಮೂಗು ಮುರಿಯುವ ಕಾಲ ಇದೀಗ ಅಂತ್ಯವಾಗಿದೆ. ಈಗಾಗಲೇ ಹೈಟೆಕ್ ಸ್ಪರ್ಷ ಪಡೆಯುತ್ತಿರುವ ಭಾರತೀಯ ರೈಲ್ವೆ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸಲು ಮತ್ತು ಪ್ರಯಾಣಿಕ ಸ್ನೇಹಿಯನ್ನಾಗಿಸಲು ಮುಂದಾಯಿತು. ಈ ಕುರಿತು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೆರೇಶನ್ ಅಧ್ಯಕ್ಷ ಎ.ಕೆ. ಮನೋಚ ಪ್ರತಿಕ್ರಿಯಿಸಿ, ಪ್ರವಾಸಿಗರನ್ನು ಆಕರ್ಶಿಸಲು ಈ ನಿರ್ಣಯ ಕೈಗೊಳ್ಳಲಾಗಿದೆ. ರೈಲ್ವೆ ಕೋಚ್ಗಳಿಗೆ ಗ್ಲಾಸ್ ಸೀಲಿಂಗ್ ಅಳವಡಿಕೆ ಮತ್ತು ಟಿ.ವಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಡಿಸೆಂಬರ್ ತಿಂಗಳಿನಿಂದ ಪ್ರಯೋಗಾರ್ಥ ಕಾರ್ಯಾರಂಭ ಮಾಡಲು ಚಿಂತಿಸಲಾಗಿದ್ದು, ಕಾಶ್ಮೀರ ಕಣಿಮೆ ಮತ್ತು ವಿಶಾಖಪಟ್ಟಣದ ಚಿತ್ರಸದೃಶ ಅರಕು ಕಣಿವೆಯಲ್ಲಿ ಪ್ರಯಾಣ ಆರಂಭಿಸಲಿದೆ. ಇದರ ವಿನ್ಯಾಸ 2015ರಲ್ಲೇ ಆರಂಭವಾಗಿತ್ತು ಎಂದು ಮನೋಚ ಮಾಹಿತಿ ನೀಡಿದರು.
1902, 1942: ಭಾರತದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮುತ್ಸದ್ದಿ ಜಯಪ್ರಕಾಶ್ ನಾರಾಯಣ್ (1902-1979) ಹಾಗೂ ಬಾಲಿವುಡ್ಡಿನ ಖ್ಯಾತ ಚಿತ್ರನಟ ಅಮಿತಾಭ್ ಬಚ್ಚನ್ ಅವರ ಜನ್ಮದಿನವಿದು. ಜೆ.ಪಿ. ಎಂದೇ ಖ್ಯಾತರಾದ ಜಯಪ್ರಕಾಶ್ ನಾರಾಯಣ್ ಅವರು 1902ರ ಅಕ್ಟೋಬರ್ 11ರಂದು ಜನಿಸಿದರು. ಸಿನಿಮಾ ಜೊತೆಗೆ ಕಿರುತೆರೆಯಲ್ಲೂ ಹೆಸರು ಮಾಡಿದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹುಟ್ಟಿದ್ದು 1942ರ ಅಕ್ಟೋಬರ್ 11ರಂದು.
2014: ನವದೆಹಲಿ : ತಮ್ಮ ಕನಸಿನ ಗ್ರಾಮೀಣಾಭಿವೃದ್ಧಿ ಯೋಜನೆಯಾದ ‘ಸಂಸದರ ಆದರ್ಶ ಗ್ರಾಮ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಮಹತ್ವಾಕಾಂಕ್ಷೆಯ ‘ಸಂಸದ ಆದರ್ಶ ಗ್ರಾಮ ಯೋಜನೆ’ಯಡಿ ಐದು ವರ್ಷಗಳಲ್ಲಿ ಪ್ರತಿಯೊಬ್ಬ ಸಂಸದನೂ ಕನಿಷ್ಠ ಮೂರು ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಲಹೆ ನೀಡಿದರು. ಲೋಕನಾಯಕ ಜಯಪ್ರಕಾಶ ನಾರಾಯಣ್ ಜನ್ಮದಿನದಂದು ಚಾಲನೆ ಪಡೆದ ಯೋಜನೆಯನ್ನು ಮೊದಲು ದೆಹಲಿ, ಲಖನೌ ಅಥವಾ ಗಾಂಧಿನಗರದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗುವುದು. ಬಳಿಕ ದೇಶದ ಉಳಿದೆಡೆ ಅನುಷ್ಠಾನಕ್ಕೆ ತರಲಾಗುವುದು ಎಂದರು.
ಮೋದಿ 14 ರಂದು ವಾರಾಣಸಿಗೆ: ಪ್ರಧಾನಿ ನರೇಂದ್ರ ಮೋದಿ ಅವರು ಅ.೧೪ರಂದು ತಮ್ಮ ಕ್ಷೇತ್ರವಾದ ವಾರಾಣಸಿಗೆ ಮುಂದಿನ ವಾರ ಹೋಗಿ ತಾವು ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಗ್ರಾಮವನ್ನು ಆಯ್ಕೆ ಮಾಡುವರು. ಸ್ವಾತಂತ್ರೋತ್ಸವದಂದು ದೆಹಲಿಯ ಕೆಂಪುಕೋಟೆ ಮೇಲೆ ಮೊದಲ ಬಾರಿಗೆ ಧ್ವಜರೋಹಣ ಮಾಡಿದ ಬಳಿಕ ಪ್ರಧಾನಿ ಈ ಯೋಜನೆಯನ್ನು ಘೋಷಿಸಿದ್ದರು. ‘ಬದಲಾಗುತ್ತಿರುವ ಸಮಾಜ ದೊಂದಿಗೆ ಗ್ರಾಮಗಳು ಬದಲಾಗಬೇಕು. ಪ್ರತಿ ಗ್ರಾಮಸ್ಥನೂ ತನ್ನ ಗ್ರಾಮದ ಪರಿಸರ ಮತ್ತು ಅಭಿವೃದ್ಧಿ ಬಗ್ಗೆ ಹೆಮ್ಮೆ ಪಡುವಂತಾಗಬೇಕು. ಆ ದಿಸೆಯಲ್ಲಿ ಗ್ರಾಮಗಳನ್ನು ಅಭಿವೃದ್ಧಿಪಡಿಸಿ’ ಎಂದು ಪ್ರಧಾನಿ ಸಲಹೆ ಮಾಡಿದರು. ‘ಇಡೀ ದೇಶವನ್ನು ಸುತ್ತಾಡಿದ ಬಳಿಕ ನನಗಾದ ಅನುಭವ ಎಂದರೆ ಜನರ ಸಹಭಾಗಿತ್ವ ಇಲ್ಲದೇ ಈ ರಾಷ್ಟ್ರದಲ್ಲಿ ಯಾವ ಯೋಜನೆಯೂ ಯಶಸ್ವಿಯಾಗುವುದಿಲ್ಲ. ಜನರ ಪಾಲ್ಗೊಳ್ಳುವಿಕೆಯಿಂದ ಮಾತ್ರ ಏನಾದರೂ ಬದಲಾವಣೆ ತರಲು ಸಾಧ್ಯ’ ಎಂದರು. ‘ಇದು ಹಣದ ಯೋಜನೆ ಅಲ್ಲ. ಜನ ಹಿತದ ಯೋಜನೆ. ಎಲ್ಲವನ್ನೂ ಒಂದೇ ದಿನದಲ್ಲಿ ಬದಲಾವಣೆ ಮಾಡಿಬಿಡುತ್ತೇನೆ ಎಂದು ನಾನು ಹೇಳುವುದಿಲ್ಲ. ಈ ಯೋಜನೆಯಿಂದಲೇ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಿ ಬಿಡುತ್ತವೆ ಎಂದೂ ಹೇಳುವುದಿಲ್ಲ. ಮೊದಲು ಕೆಲಸ ಮಾಡೋಣ. ಕಾಲಕ್ರಮೇಣ ಬದಲಾವಣೆ ಮತ್ತು ಅಭಿವೃದ್ಧಿ ತಾವಾಗಿಯೇ ಗೋಚರಿಸುತ್ತವೆ’ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಯೋಜನೆಯ ಮುಖ್ಯಾಂಶಗಳು
* ಮಹಾತ್ಮ ಗಾಂಧಿ ಅವರ ‘ಸ್ವರಾಜ್’ ಅನ್ನು ‘ಸುರಾಜ್’ (ಉತ್ತಮ ಆಡಳಿತ) ಆಗಿ ಪರಿವರ್ತಿಸುವ ಆಶಯವನ್ನು ಆಧರಿಸಿ ಯೋಜನೆಯ ನೀಲನಕ್ಷೆ ಸಿದ್ಧ
* ಯಾವುದೇ ಸಂಸದ ತನ್ನದೇ ಗ್ರಾಮವನ್ನು ಅಥವಾ ತನ್ನ ಪತ್ನಿಯ ತವರು ಗ್ರಾಮವನ್ನು ಆಯ್ದುಕೊಳ್ಳಬಾರದು
* 543 ಲೋಕಸಭಾ ಸದಸ್ಯರು, 250 ರಾಜ್ಯಸಭಾ ಸದಸ್ಯರು ಸೇರಿ ಒಟ್ಟು 793 ಸಂಸದರು.
* ಬಯಲು ಸೀಮೆಯಲ್ಲಿ ಮೂರು ಸಾವಿರದಿಂದ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮ ಆಯ್ಕೆ ಮಾಡಬೇಕು
* ಗುಡ್ಡಗಾಡು ಪ್ರದೇಶದಲ್ಲಿ ಒಂದು ಸಾವಿರದಿಂದ ಮೂರು ಸಾವಿರ ಜನಸಂಖ್ಯೆ ಇರುವ ಗ್ರಾಮ ಆಯ್ಕೆ ಮಾಡಬೇಕು
* ಗ್ರಾಮಸ್ಥರ ವೈಯಕ್ತಿಕ ಅಭಿವೃದ್ಧಿ, ಗ್ರಾಮಗಳಲ್ಲಿನ ಮಾನವ ಸಂಪನ್ಮೂಲ, ಸಾಮಾಜಿಕ ಮತ್ತು ಪರಿಸರ ಅಭಿವೃದ್ಧಿಗೆ ಒತ್ತು
* ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಅಭಿವೃದ್ಧಿ ಯೋಜನೆ
* ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಜತೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಹಣದ ಬಳಕೆ
* ಯೋಜನೆಯ ಅನುಷ್ಠಾನ ಮೇಲ್ವಿಚಾರಣೆಗೆ ರಾಷ್ಟ್ರ ಮಟ್ಟದಲ್ಲಿ ಎರಡು ಸಮಿತಿಗಳ ರಚನೆ
* 2016ರ ವೇಳೆಗೆ ಪ್ರತಿ ಸಂಸದರಿಂದ ತಲಾ ಒಂದರಂತೆ 800 ಗ್ರಾಮಗಳ ಅಭಿವೃದ್ಧಿ ಗುರಿ
* 2019ರ ವೇಳೆಗೆ 2400 ಗ್ರಾಮಗಳ ಅಭಿವೃದ್ಧಿ ಗುರಿ
ಮಾವನ ಊರು ಬೇಡ: ಸಂಸದರು ತಮ್ಮ ಕ್ಷೇತ್ರದ ಯಾವುದಾದರೂ ಮೂರು ಗ್ರಾಮಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲು ಸ್ವತಂತ್ರರು. ಆದರೆ ನಿಮ್ಮದೇ ಗ್ರಾಮ ಅಥವಾ ಪತ್ನಿಯ ಗ್ರಾಮ ಬೇಡ. ನಾವು 800 ಸಂಸದರಿದ್ದೇವೆ. ಪ್ರತಿಯೊಬ್ಬರೂ 3 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಲ್ಲಿ 2019ರ ವೇಳೆಗೆ 2400 ಮಾದರಿ ಗ್ರಾಮಗಳನ್ನು ರೂಪಿಸಬಹುದು. ಇದನ್ನೇ ಎಲ್ಲ ಶಾಸಕರು ಅನುಸರಿಸಿದರೆ ಆರೇಳು ಸಾವಿರ ಗ್ರಾಮಗಳು ಅಭಿವೃದ್ಧಿ ಕಾಣುತ್ತವೆ. –ಪ್ರಧಾನಿ ನರೇಂದ್ರ ಮೋದಿ
2008: ಕಾಶ್ಮೀರದ ಪ್ರಪ್ರಥಮ ರೈಲು ಸೇವೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ಉದ್ಘಾಟಿಸಿದರು. ಇದರೊಂದಿಗೆ ಕಠಿಣ ಭೌಗೋಳಿಕ ಪರಿಸರ ಹಾಗೂ ಪ್ರತಿಕೂಲ ಹವಾಮಾನ ಒಡ್ಡಿದ ಸವಾಲುಗಳನ್ನು ಎದುರಿಸಿ ರೈಲ್ವೇ ಸೇವೆ ಆರಂಭಿಸಲು ದಶಕಗಳಿಂದ ನಡೆಸಿದ್ದ ಮಾರ್ಗ ನಿರ್ಮಾಣ ಯತ್ನ ಹಾಗೂ ರೈಲ್ವೇ ಸಂಚಾರದ ಕಾಶ್ಮೀರಿ ಜನರ ಕನಸು ನನಸಾಯಿತು. ಪ್ರಧಾನಿ ಭೇಟಿಯ ವಿರುದ್ಧ ಪ್ರತ್ಯೇಕತಾವಾದಿಗಳು ನೀಡಿದ್ದ ಬಂದ್ ಕರೆ ಹಾಗೂ ಇಬ್ಬರನ್ನು ಬಲಿ ತೆಗೆದುಕೊಂಡು ಇತರ 75 ಮಂದಿ ಗಾಯಗೊಳ್ಳಲು ಕಾರಣವಾದ ಕಣಿವೆಯ ಹಿಂಸಾತ್ಮಕ ಪ್ರತಿಭಟನೆ ಹಾಗೂ ಗೋಲಿಬಾರ್ ಹಿನ್ನೆಲಯಲ್ಲಿ ಏರ್ಪಡಿಸಲಾಗಿದ್ದ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆಯ ಮಧ್ಯೆ ಪ್ರಧಾನಿಯವರು ನೌಗಮ್ನಲ್ಲಿ ಹೂಗಳಿಂದ ಸಿಂಗರಿಸಲಾಗಿದ್ದ ರೈಲುಗಾಡಿಗೆ ಹಸಿರು ಧ್ವಜ ತೋರಿಸಿದರು.
2008: 'ಪರಸ್ಪರ ಒಪ್ಪಲಾದ 123 ಒಪ್ಪಂದದ ಪಠ್ಯ'ಕ್ಕೆ ಮಾತ್ರ ತಾವು ಬದ್ಧ ಎಂಬ ಭಾರತದ ಘೋಷಣೆಯೊಂದಿಗೆ ಭಾರತ ಮತ್ತು ಅಮೆರಿಕ ಚಾರಿತ್ರಿಕ `ಪರಮಾಣು ಒಪ್ಪಂದ'ಕ್ಕೆ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದವು. 2005ರಲ್ಲಿ ಆರಂಭಗೊಂಡ ಕಠಿಣ ಪ್ರಕ್ರಿಯೆ ಈ ಒಪ್ಪಂದದೊಂದಿಗೆ ಮುಕ್ತಾಯಗೊಂಡು, ಪರಮಾಣು ಕ್ಷೇತ್ರದಲ್ಲಿ 34 ವರ್ಷಗಳಿಂದ ಕಾಡುತ್ತಿದ್ದ ಪ್ರತ್ಯೇಕತೆಯಿಂದ ಭಾರತ ಮುಕ್ತಗೊಂಡಿತು. ಅಮೆರಿಕದ ವಿದೇಶಾಂಗ ಇಲಾಖೆಯ ಬೆಂಜಮಿನ್ ಫ್ರಾಂಕ್ಲಿನ್ ಕೊಠಡಿಯಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲೀಸಾ ರೈಸ್ ಅವರು ದ್ವಿಪಕ್ಷೀಯ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು.
2008: ರಾಹುಲ್ ದ್ರಾವಿಡ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಹೊಸ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡರು. ಭಾರತದ ಮೊದಲ ವಿಕೆಟ್ ಪತನಗೊಂಡ ಬಳಿಕ ದ್ರಾವಿಡ್ ಕ್ರೀಸಿಗೆ ಆಗಮಿಸಿದಾಗ ಹೊಸ ದಾಖಲೆಯ ಒಡೆಯರಾಗಿದ್ದರು. ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ನೂರನೇ ಟೆಸ್ಟ್ ಪಂದ್ಯ ಇದು. ವಿಶ್ವದ ಯಾವುದೇ ಬ್ಯಾಟ್ಸ್ ಮನ್ ಈವರೆಗೆ ನೂರು ಟೆಸ್ಟ್ಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದಿರಲಿಲ್ಲ. ತವರೂರ ಪ್ರೇಕ್ಷಕರೆದುರು ಈ ಸಾಧನೆ ಮಾಡುವ ಅವಕಾಶ ದ್ರಾವಿಡ್ ಅವರಿಗೆ ಲಭಿಸಿತು. ಒಂದೆರಡು ಬಾರಿ ದ್ರಾವಿಡ್ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕ್ರೀಸಿಗೆ ಇಳಿದಿದ್ದರು. ಅದನ್ನು ಬಿಟ್ಟರೆ ಅವರಿಗೆ ಮೂರನೇ ಕ್ರಮಾಂಕ `ಖಾಯಂ' ಆಗಿತ್ತು. 51 ರನ್ ಗಳಿಸಿ ಪೆವಿಲಿಯನ್ ಸೇರುವ ಮೊದಲು ಅವರು ಮತ್ತೊಂದು ದಾಖಲೆಯನ್ನು ಸರಿಗಟ್ಟಿದರು. ಇದು ಸ್ವದೇಶದಲ್ಲಿ ಡ್ರಾವಿಡ್ ಗಳಿಸಿದ 23ನೇ ಟೆಸ್ಟ್ ಅರ್ಧ ಶತಕ. ಸುನಿಲ್ ಗಾವಸ್ಕರ್ ಅವರೂ 23 ಅರ್ಧಶತಕ ಗಳಿಸಿದ್ದರು.
2008: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಲಿಂಗಕಾಮಿಗಳು ಒಂದೊಂದೇ ವಿಜಯ ದಾಖಲಿಸಿದರು. ಕನೆಕ್ಟಿಕಟ್ ಪ್ರಾಂತ್ಯದ ಸುಪ್ರೀಂಕೋರ್ಟ್ `ಸಲಿಂಗಕಾಮಿಗಳಿಗೆ ಮದುವೆಯಾಗುವ ಹಕ್ಕು ಇದೆ' ಎಂದು ಈದಿನ ತೀರ್ಪು ನೀಡಿತು. ಅಮೆರಿಕದ ಮೆಸ್ಯಾಚುಸೆಟ್ಸ್ ಮತ್ತು ಕ್ಯಾಲಿಫೋರ್ನಿಯಾ ಪ್ರಾಂತ್ಯಗಳಲ್ಲಿ ಈ ಮೊದಲೇ ಇಂತಹ ಮದುವೆಗೆ ಕಾನೂನಿನ ಮಾನ್ಯತೆ ನೀಡಲಾಗಿತ್ತು. ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ಕನೆಕ್ಟಿಕಟ್ ಮೂರನೇ ಪ್ರಾಂತ್ಯವಾಗಿ ಪಟ್ಟಿಗೆ ಸೇರ್ಪಡೆಯಾಯಿತು.
2008: `ಪುಟ್ಟದಾಗಿರುವುದೆಲ್ಲಾ ಸುಂದರ' (ಸ್ಮಾಲ್ ಈಸ್ ಬ್ಯೂಟಿಫುಲ್ ) ಎಂಬುದು ಇಂಗ್ಲಿಷಿನ ಒಂದು ಜನಪ್ರಿಯ ಉಲ್ಲೇಖ. ಇದರಲ್ಲಿ ನಂಬಿಕೆ ಇಟ್ಟಿರುವ ಜಪಾನಿನ ಆಟಿಕೆ ತಯಾರಿಕೆ ಕಂಪನಿಯೊಂದು ಪ್ರಪಂಚದಲ್ಲೇ ಅತಿ ಪುಟ್ಟದಾದ ಕೇವಲ ಹೆಬ್ಬೆರಳಿನಷ್ಟು ಗಾತ್ರದ ನಡೆದಾಡಬಲ್ಲ ರೋಬೊ (ಯಂತ್ರಮಾನವ) ತಯಾರಿಸಿದ್ದನ್ನು ಬಹಿರಂಗ ಪಡಿಸಿತು. `ರೋಬೋ- ಕ್ಯು' ಎಂಬ ಹೆಸರು ಹೊತ್ತ ಎರಡು ಕಾಲುಗಳ ಈ ಆಟಿಕೆಯು 3.4 ಸೆಂ.ಮೀ. ಉದ್ದವಿದೆ. ಇದರಲ್ಲಿ ಅಡಕಗೊಳಿಸಲಾದ ಬುದ್ಧಿಮತ್ತೆಯು ತನ್ನ ಹಾದಿಗೆ ಅಡ್ಡಬರುವ / ಇರುವ ಅಡೆತಡೆಗಳನ್ನು ಸ್ವಯಂಚಾಲಿತವಾಗಿ ಪತ್ತೆ ಹಚ್ಚ ಬಲ್ಲುದು. ಹೀಗಾಗಿ ಎಂತಹ ಜನಸಂದಣಿಯ ಪ್ರದೇಶದಲ್ಲೂ ಈ ರೋಬೊ ಸ್ವತಂತ್ರವಾಗಿ ನಡೆದಾಡಬಲ್ಲುದು. ಇದಕ್ಕೆ ತೆರಿಗೆ ಹೊರತುಪಡಿಸಿ 3500 ಯೆನ್ (29 ಡಾಲರ್) ದರ ನಿಗದಿ ಮಾಡಲಾಯಿತು. ಈ ಆಟಿಕೆ ರೋಬೊದೊಳಗೆ ಅತಿ ನೇರಳೆ ಸಂವೇದನಾ ಕೋಶಗಳನ್ನು (ಇನ್ ಫ್ರಾರೆಡ್ ಸೆನ್ಸಾರ್ಸ್) ಅಳವಡಿಸಲಾಗಿದ್ದು, ನಿಯಂತ್ರಕವನ್ನು ಬಳಸಿದರೆ ಫುಟ್ ಬಾಲಿನಂತಹ ಕ್ರೀಡೆಯನ್ನೂ ಇದರಿಂದ ಆಡಿಸಬಹುದು ಎಂದು ವಿವರಿಸಲಾಯಿತು.. ಜಪಾನಿನಲ್ಲಿ ನಡೆದ ರೋಬೊ ಮೇಳದಲ್ಲಿ ಇದನ್ನು ಪ್ರದರ್ಶಿಸಲಾಯಿತು.
2008: ವೀಣಾ ಬನ್ನಂಜೆ ಅವರ ಅಕ್ಕಮಹಾದೇವಿ ದ್ವೈತ ವಚನ ಸಾಹಿತ್ಯ ವಿಮರ್ಶೆ ಕೃತಿಗೆ ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟಿನ 2007ನೇ ಸಾಲಿನ ಕಾವ್ಯಾನಂದ ಪುರಸ್ಕಾರ ದೊರಕಿತು.
2007: ಬ್ರಿಟನ್ನಿನ ಖ್ಯಾತ ಮಹಿಳಾ ಸಾಹಿತಿ ಡೊರಿಸ್ ಲೆಸ್ಸಿಂಗ್ ಅವರಿಗೆ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. ಐದು ದಶಕಗಳಿಂದ ಸಾಹಿತ್ಯ ಕೃಷಿ ನಡೆಸಿದ ಲೆಸ್ಸಿಂಗ್ ಅವರು ಮಹಿಳಾವಾದ, ರಾಜಕೀಯ ಮತ್ತು ಆಫ್ರಿಕದಲ್ಲಿ ತಮ್ಮ ಬಾಲ್ಯದ ಅನುಭವಗಳ ಕುರಿತು ಹಲವು ಕಾದಂಬರಿಗಳನ್ನು ರಚಿಸಿದವರು. ಮುಂದಿನ ವಾರ 88 ವರ್ಷ ತುಂಬಲಿರುವ ಡೊರಿಸ್ ನೊಬೆಲ್ ಪ್ರಶಸ್ತಿ ಪಡೆದ ಹನ್ನೊಂದನೇ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. `ಮಹಿಳಾ ಬರಹಗಾರ್ತಿಯಾಗಿ ಲೆಸ್ಸಿಂಗ್ ಅವರು ತಮ್ಮ ಅನುಭವಗಳನ್ನು, ಭವಿಷ್ಯದ ಹಿನ್ನೆಲೆಯಲ್ಲಿ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ' ಎಂದು ನೊಬೆಲ್ ಪ್ರಶಸ್ತಿ ಪ್ರಕಟಿಸಿದ ಸ್ವೀಡಿಷ್ ಅಕಾಡೆಮಿ ಹೇಳಿತು. `ದಿ ಗೋಲ್ಡನ್ ನೋಟ್ ಬುಕ್' ಲೆಸ್ಸಿಂಗ್ ಅವರ ಶ್ರೇಷ್ಠ ಕೃತಿ. 1949 ರಲ್ಲಿ ಅವರು `ದಿ ಗ್ರಾಸ್ ಈಸ್ ಸಿಂಗಿಂಗ್' ಕೃತಿಯೊಂದಿಗೆ ತಮ್ಮ ಸಾಹಿತ್ಯ ಜೀವನವನ್ನು ಆರಂಭಿಸಿದ್ದರು.
2007: ಆಸ್ಟ್ರೇಲಿಯದ ಸಿಡ್ನಿ ನಗರ ಸತತ 12ನೇ ಸಲ ವಿಶ್ವದ ಅತ್ಯುತ್ತಮ ನಗರ ಎಂಬ ಕೀರ್ತಿಗೆಪಾತ್ರವಾಯಿತು. ವಿಶ್ವದ ಹೆಸರಾಂತ ಪ್ರವಾಸಿ ನಿಯತಕಾಲಿಕವೊಂದುರ ಓದುಗರು ಈ ಆಯ್ಕೆ ಮಾಡಿದರು.
2007: ಹಸಿರು ಮನೆ ಅನಿಲದ ಪರಿಣಾಮವಾಗಿ ಓಜೋನ್ ಪದರದ ರಂದ್ರ ಹಿಗ್ಗುತ್ತಿದೆ. ಇದರಿಂದ ಭೂಮಿ ಮುಂಚಿಗಿಂತ ಹೆಚ್ಚು ಹಸಿ, ಅಂಟಾಗುತ್ತಿದೆ. ವಿಶುವೃತ್ತದ ಪ್ರದೇಶದಲ್ಲಿ ಇನ್ನಷ್ಟು ಬಲವಾದ ಚಂಡಮಾರುತ, ಬಿಸಿಯೇರುವಿಕೆ, ಮಳೆಯಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದರು.
2007: ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ 2007ರ ಸೆಪ್ಟೆಂಬರ್ 6ರಂದು ವಾಲಿ ನಿಂತು ಅಪಾಯಕ್ಕೆ ಸಿಲುಕಿದ್ದ ಚೀನಾ ಮೂಲದ ಚಾಂಗ್-ಲೆ-ಮೆನ್ ಹಡಗು, ತಿಂಗಳ ಬಳಿಕ ತವರಿಗೆ ಯಾನ ಆರಂಭಿಸಲಿದೆ ಎಂದು ಅಧಿಕಾರಿಗಳು ಪ್ರಕಟಿಸಿದರು. ಅದಿರು ತುಂಬಿ ಸಮತೋಲನ ತಪ್ಪಿದ ಹಡಗು ಕಡೆಗೂ `ರಕ್ಷಣಾ' ಕಾರ್ಯದಿಂದ ವಿಮೋಚನೆ ಪಡೆಯಿತು. ಹಲವು ಬಾರಿ ಗಾಳಿ ಸುದ್ದಿಯಾಗಿ ಮೀನುಗಾರರ ಕೆಂಗಣ್ಣಿಗೂ ಗುರಿಯಾಗಿದ್ದ ಈ `ಚೀನಿ ಕನ್ಯೆ' (ಹಡಗನ್ನು `ಶಿ' ಎಂದು ಸಂಬೋಧಿಸುವುದು) ಸುರಕ್ಷಿತವಾಗಿ ವಾಪಸಾಗಲಿದೆ. 'ಡೆನ್ ಡೆನ್ ಹಡಗು' ಮುಳುಗಡೆ ದುರಂತದ ಕೇವಲ 75 ದಿನಗಳಲ್ಲೇ ಇದೇ ಸ್ಥಳದಲ್ಲಿ ಚಾಂಗ್-ಲೆ-ಮೆನ್ ಲಂಬಕ್ಕಿಂತ 16 ಡಿಗ್ರಿ ವಾಲಿ, ತಳ ಮರಳಿನಲ್ಲಿ ಹೂತುಹೋಗಿ ಮುಳುಗಡೆಯ ಅಪಾಯ ಎದುರಿಸಿತ್ತು. ಕ್ಯಾಪ್ಟನ್ ಸೇರಿದಂತೆ ಒಟ್ಟು 28 ಮಂದಿ ನಾವಿಕರಿದ್ದ ಈ ಹಡಗು, ಮಂಗಳೂರಿನ ಎನ್ನೆಂಪಿಟಿ ಬಂದರಿನಿಂದ 11,100 ಟನ್ ಕಬ್ಬಿಣದ ಅದಿರು ತುಂಬಿಕೊಂಡು ಸಿಂಗಪುರ ಮಾರ್ಗವಾಗಿ ಚೀನಾಕ್ಕೆ ಹೊರಟಿತ್ತು. ಆದರೆ ಸಂಚಾರ ಆರಂಭಿಸಿದ ಕೆಲವೇ ಗಂಟೆಯೊಳಗೆ ಅವಘಡ ಸಂಭವಿಸಿತ್ತು. ಸಿಂಗಪುರ ಮೂಲದ (ಡಚ್ ತಜ್ಞರೂ ಸೇರಿ) ವಿದೇಶಿ ವಿಮೋಚನಾ ತಂಡವು ಸ್ಥಳೀಯ ಯೋಜಕಾ ಸಂಸ್ಥೆಯ ನೆರವಿನೊಂದಿಗೆ ಕೇವಲ ಏಳು ದಿನಗಳಲ್ಲಿ ಹಡಗಿನ ರಕ್ಷಣೆ ಮಾಡಿದ್ದರು. ಅಲ್ಲದೇ ಸೆ.13ರಂದು ಆಳ ಸಮುದ್ರಕ್ಕೆ ಎಳೆದೊಯ್ದಿದ್ದರು. ಸುಮಾರು 2ಕೋಟಿ ರೂಪಾಯಿಯಷ್ಟು ವಿಮೋಚನಾ ವೆಚ್ಚವೂ ತಗುಲಿತ್ತು.
2007: ಮನೆ, ಬಸ್ ನಿಲ್ದಾಣ, ವಿಧಾನಸೌಧ, ಲೋಕಸಭಾ ಕಟ್ಟಡ, ವಿಮಾನ ನಿಲ್ದಾಣ, ಬಂದರು, ವಾಯುನೆಲೆ, ನೌಕಾನೆಲೆ ಮುಂತಾದ ಕಡೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ ಹಾಗೂ ಅಪರಿಚಿತರು ಪ್ರವೇಶಿಸಿದರೆ ತಕ್ಷಣವೇ ಎಚ್ಚರಿಕೆಯನ್ನು ನೀಡುವ ತಂತ್ರಜ್ಞಾನವನ್ನು ಕನ್ನಡಿಗರೊಬ್ಬರ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಿರುವುದಾಗಿ ಸಿಂಗಪುರದ ಸಂಸ್ಥೆಯೊಂದು ಪ್ರಕಟಿಸಿತು. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಎಸ್. ಶೇಖರ್ ಸಿಂಗಪುರದ ನ್ಯಾನೋಸಾಫ್ಟ್ ಟೆಕ್ನಾಲಜಿ ಸಂಸ್ಥೆಯಲ್ಲಿ ತಾಂತ್ರಿಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದು ಇಸ್ರೇಲಿನ ಡಾ. ಆಫಲ್ ಮಿಲ್ಲರ್ ಅವರ ಜೊತೆಗೂಡಿ ಸುರಕ್ಷತಾ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸಿದರು. ಐವಿಎಸ್-1000, ಐವಿಎಸ್-3000 ಹಾಗೂ ಐವಿಎಸ್-5000 ಎಂಬ ಯಂತ್ರಗಳನ್ನು ಸಿದ್ಧಪಡಿಸಲಾಗಿದ್ದು ಈ ಯಂತ್ರಗಳನ್ನು ಕೈಗಾರಿಕೆ ಕಟ್ಟಡಗಳು, ವಿಮಾನ ನಿಲ್ದಾಣ, ನೌಕಾನೆಲೆ, ಬಂದರು, ಪೊಲೀಸ್ ಇಲಾಖೆ, ಅಪಾರ್ಟ್ ಮೆಂಟುಗಳು, ಬ್ಯಾಂಕು, ವಾಣಿಜ್ಯ ಸಂಕೀರ್ಣ, ಅಣೆಕಟ್ಟು ಮುಂತಾದ ಕಡೆ ಅಳವಡಿಸಿದರೆ ಸೂಕ್ತ ಸುರಕ್ಷತೆ ಒದಗಿಸುತ್ತದೆ ಎಂಬುದು ಶೇಖರ್ ಅಭಿಪ್ರಾಯ.
2007: ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ ಶಿಪ್ ವೇಳೆಯಲ್ಲಿ ಸಹ ಆಟಗಾರ ಮೊಹಮ್ಮದ್ ಆಸಿಫ್ ಮೇಲೆ ಹಲ್ಲೆ ನಡೆಸಿದ್ದ ಪಾಕಿಸ್ಥಾನ ತಂಡದ ವೇಗದ ಬೌಲರ್ ಶೋಯಬ್ ಅಖ್ತರ್ ಅವರಿಗೆ 13 ಏಕದಿನ ಪಂದ್ಯಗಳನ್ನು ಆಡದಂತೆ ನಿಷೇಧ ಹೇರಲಾಯಿತು. ಜೊತೆಗೆ 34 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಹಲ್ಲೆ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ಥಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಶಿಸ್ತು ಸಮಿತಿಯು ಈ ನಿರ್ಧಾರ ಕೈಗೊಂಡಿತು. ಅಖ್ತರ್ ತಂಡದ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಸಮಿತಿ ಹೇಳಿತು.
2007: ಪ್ರಮುಖ ಖಾಸಗಿ ದೂರವಾಣಿ ಸೇವಾ ಕಂಪೆನಿ ಏರ್ಟೆಲ್, ಅಂತರ್ಜಾಲ ಸೇವೆಯನ್ನು ಪರಿಣಾಮಕಾರಿಯಾಗಿ ಪೂರೈಸುವ ಉದ್ದೇಶದಿಂದ ಪ್ರತಿ ಸೆಕೆಂಡಿಗೆ 8 ಮೆಗಾಬೈಟ್ (ಎಂಬಿಪಿಎಸ್) ಸಾಮರ್ಥ್ಯದ ಮಾಹಿತಿ ರವಾನೆ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಭಾರ್ತಿ ಏರ್ ಟೆಲ್ ಲಿಮಿಟೆಡ್ಡಿನ ಬ್ರಾಡ್ ಬ್ಯಾಂಡ್ ಮತ್ತು ಟೆಲಿಫೋನ್ ಸರ್ವೀಸಸ್ ಅಧ್ಯಕ್ಷ ಅತುಲ್ ಬಿಂದಾಲ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದೊಂದು ವಿಶ್ವದರ್ಜೆ ಮಟ್ಟದ ಸೇವೆಯಾಗಿದ್ದು, ಅಧಿಕ ಸಾಮರ್ಥ್ಯದ ಅಂತರ್ಜಾಲ ಸೇವೆ ಒದಗಿಸುತ್ತಿರುವ ದೇಶದ ಪ್ರಥಮ ಖಾಸಗಿ ಕಂಪೆನಿ ಎನ್ನುವ ಹೆಗ್ಗಳಿಕೆಗೆ ಏರ್ ಟೆಲ್ ಪಾತ್ರವಾಗಿದೆ ಎಂದು ಅವರು ಹೇಳಿದರು. ಈ ಹೊಸ ಅಂತರ್ಜಾಲ ಸೇವೆಯಿಂದ ಏಕಕಾಲಕ್ಕೆ ಆಟ, ಚಿತ್ರ ವೀಕ್ಷಣೆ ಮತ್ತು ಮಾಹಿತಿ ಪಡೆಯುವ ಕಾರ್ಯವನ್ನು ಅತಿ ವೇಗವಾಗಿ ಮಾಡಬಹುದು. ಇದು ಏಕಕಾಲಕ್ಕೆ ಆನ್ ಲೈನ್ ಆಟ, ಸಂಗೀತ ಆಲಿಸುವುದು, ಚಿತ್ರ ವೀಕ್ಷಣೆ (ಕಲಿಕೆ, ಕೆಲಸ ಮತ್ತು ಆಟ ಆಡುವ) ಅವಕಾಶವನ್ನು ನೀಡುತ್ತದೆ.
2007: ಉತ್ತರಖಂಡದ ಚಮೋಲಿ ಜಿಲ್ಲೆಯ ವಿಷ್ಣುಪ್ರಯಾಗ ಸಮೀಪ ಬಸ್ಸೊಂದು ಅಲಕನಂದಾ ನದಿಗೆ ಉರುಳಿ, ಅದರಲ್ಲಿ ಪ್ರಯಾಣಿಸುತ್ತಿದ್ದ 41 ಜನ ಬದರಿನಾಥ ಯಾತ್ರಿಗಳು ಮೃತರಾದರು. ಎಲ್ಲ ಯಾತ್ರಾರ್ಥಿಗಳು ಒರಿಸ್ಸಾದವರಾಗಿದ್ದು ಬದರಿನಾಥ ದರ್ಶನ ಪಡೆದು ಹೃಷಿಕೇಶಕ್ಕೆ ವಾಪಸಾಗುತ್ತಿದ್ದರು. ಕಡಿದಾದ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಬಸ್ ಉರುಳಿ 100 ಅಡಿಗಳಷ್ಟು ಕೆಳಗೆ ಹರಿಯುತ್ತಿದ್ದ ಅಲಕನಂದಾ ನದಿಯಲ್ಲಿ ಬಿದ್ದಿತು.
2007: ರೈತರಿಗೆ ವರದಾನವಾಗಬಲ್ಲ ಹೊಸ ಭೂಸ್ವಾಧೀನ ನೀತಿಯನ್ನು ಪ್ರಕಟಿಸಿದ ಕೇಂದ್ರ ಸರ್ಕಾರ, ಇದಕ್ಕಾಗಿ ಮರು ವಸತಿ ಹಾಗೂ ಮರು ನೆಲೆ ರಾಷ್ಟ್ರೀಯ ನೀತಿ-2007ಕ್ಕೆ ಒಪ್ಪಿಗೆ ನೀಡಿತು. 2003ರ ಕಾಯ್ದೆ ಬದಲಿಗೆ ಇದು ಅಸ್ತಿತ್ವಕ್ಕೆ ಬರುವುದು. ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಈ ಕುರಿತು ತೀರ್ಮಾನ ತೆಗೆದುಕೊಂಡು, ರೈತರ ಹಿತರಕ್ಷಣೆ ಕಾಪಾಡಲು ಬದ್ಧತೆ ವ್ಯಕ್ತಪಡಿಸಿತು. ಹೊಸ ನೀತಿಯನ್ನು ಜಾರಿಗೆ ತರುವ ಉದ್ದೇಶದಿಂದ 1894ರ ಭೂಸ್ವಾಧೀನ ಕಾಯಿದೆಗೆ ಶೀಘ್ರ ತಿದ್ದುಪಡಿ ತರಲಾಗುವುದು. ಇದರ ಅನ್ವಯ ಅಭಿವೃದ್ಧಿ ಯೋಜನೆಗಳಿಗಾಗಿ ಭೂಮಿ ಕಳೆದುಕೊಳ್ಳುವ ರೈತರು ಯೋಜನೆ ಸ್ಥಳದ ಹತ್ತಿರವೇ ಪರ್ಯಾಯ ಭೂಮಿ ಪಡೆಯುವರು. ಜೊತೆಗೆ, ಅವರಿಗೆ ಅಲ್ಲಿ ಕೆಲಸವನ್ನೂ ನೀಡಲಾಗುವುದು. ಒಂದು ವೇಳೆ ಸಾಕಷ್ಟು ಪರ್ಯಾಯ ಭೂಮಿ ಲಭ್ಯವಿಲ್ಲದಿದ್ದರೆ, ಕಳೆದುಕೊಂಡ ಭೂಮಿಗೆ ನಗದು ಪರಿಹಾರ ದೊರೆಯುವುದು. ಕೃಷಿ ಭೂಮಿಗಿಂತ ಬಂಜರು ಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಈ ರೀತಿ ವಶಪಡಿಸಿಕೊಂಡ ಭೂಮಿಯಲ್ಲಿ ಐದು ವರ್ಷದೊಳಗೆ ಉದ್ಯಮ ಪ್ರಾರಂಭವಾಗದಿದ್ದರೆ ಅದು ವಾಪಸ್ ಸರ್ಕಾರದ ವಶಕ್ಕೆ ಹೋಗುವುದು.
2006: `ಅಮರ ಕೋಲ್ಕತ್ತಾ' ಮತ್ತು `ಈಸ್ಟರ್ನ್ ಹಾರಿಜನ್' ಎಂಬ ಎರಡು ಪಾಕ್ಷಿಕ ನಿಯತಕಾಲಿಕಗಳನ್ನು ಅನುಕ್ರಮವಾಗಿ ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಭಾರತೀಯ ಜನಸಂಖ್ಯೆ ಹೆಚ್ಚಿರುವ ಕೆನಡಾದ ಟೊರೆಂಟೊದಲ್ಲಿ ಕೋಲ್ಕತ್ತಾದ ಮಹಿಳಾ ಉದ್ಯಮಿ ಬೂಬೂನ್ ಬಿಸ್ವಾಸ್ ಆರಂಭಿಸಿದರು. ದುರ್ಗಾ ಪೂಜೆಯ ಸಮಯದಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು. ಬಿಸ್ವಾಸ್ ಅವರು ತಮ್ಮ ಪತಿಯೊಂದಿಗೆ ಕೆನಡಾಕ್ಕೆ ವಲಸೆ ಬಂದವರು.
2006: ಮುಸ್ತಾಖ್ ಶೇಖ್ ಅವರು ಬರೆದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಜೀವನ ಕುರಿತಾದ `ಸ್ಟಿಲ್ ರೀಡಿಂಗ್ ಖಾನ್' ಪುಸ್ತಕವನ್ನು ಮುಂಬೈಯಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕವು 460 ಪುಟಗಳನ್ನು ಒಳಗೊಂಡಿದೆ.
2006: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಫ್ರಾನ್ಸ್ ಸರ್ಕಾರವು ತನ್ನ ದೇಶದ ಅತ್ಯುನ್ನತ ಗೌರವವಾದ `ಆಫೀಸರ್ ಆಫ್ ದಿ ಆರ್ಡರ್ ಆಫ್ ದಿ ಲೀಜನ್ ಆಫ್ ಆನರ್' ನ್ನು ಪ್ರಕಟಿಸಿತು.
2001: ಸರ್ ವಿದ್ಯಾಧರ್ ಸೂರಜ್ ಪ್ರಸಾದ್ ನೈಪಾಲ್ ಅವರಿಗೆ ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿತು.
1995: ಕ್ಲೋರೋಫ್ಲುರೋಕಾರ್ಬನ್ ಗಳು (ಸಿಎಫ್ ಸಿ) ಭೂಮಿಯ ಓಝೋನ್ ಪದರವನ್ನು ತಿಂದು ಹಾಕುತ್ತಿವೆ ಎಂದು ಎಚ್ಚರಿಸುವ ನಿಟ್ಟಿನಲ್ಲಿ ಮಾಡಿದ ರಾಸಾಯನಿಕ ಕ್ಷೇತ್ರದ ಸಾಧನೆಗಾಗಿ ಅಮೆರಿಕದ ಮಾರಿಯೋ ಮೊಲೀನಾ, ಶೆರ್ ವೂಡ್ ರಾಲೆಂಡ್ ಮತ್ತು ಡಚ್ ವಿಜ್ಞಾನಿ ಪೌಲ್ ಕ್ರಟ್ಜೆನ್ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು. ಒಂದು ದಶಕಕ್ಕೂ ಮೊದಲೇ ಅಂಟಾರ್ಕ್ಟಿಕ್ ಓಝೋನ್ ಪದರದಲ್ಲಿ ತೂತು ಪತ್ತೆಯಾಗಿತ್ತು. ಈ ವಿಜ್ಞಾನಿಗಳ ಸಂಶೋಧನೆಯು ಓಝೋನ್ ಪದರವನ್ನು ರಕ್ಷಿಸಲು ಸಿಎಫ್ ಸಿಗಳ ಹೊಗೆಯನ್ನು ನಿಯಂತ್ರಿಸಬೇಕೆಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಾಯ ತೀವ್ರಗೊಳ್ಳಲು ಸ್ಫೂರ್ತಿ ನೀಡಿತು.
1984: ಬಾಹ್ಯಾಕಾಶ ನೌಕೆ ಚಾಲೆಂಜರಿನ ಗಗನಯಾನಿ ಕಾಥಿ ಸುಲ್ಲಿವಾನ್ ಅವರು ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಅಮೆರಿಕನ್ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.
1981: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ ಪಡುಕೋಣೆ ಅವರು ಕ್ವಾಲಾಲಂಪುರದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ವಿಶ್ವಕಪ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಪಡುಕೋಣೆ ಅವರು ಪುರುಷರ ಸಿಂಗಲ್ಸ್ ಫೈನಲಿನಲ್ಲಿ ಚೀನಾದ ಅಗ್ರಮಾನ್ಯ ಆಟಗಾರ ಹ್ಯಾನ್ ಜಿಯಾನ್ ಅವರನ್ನು 15-10, 18-16ರಲ್ಲಿ ಪರಾಭವಗೊಳಿಸಿದರು.
1968: ಮೊತ್ತ ಮೊದಲ ಮಾನವ ಸಹಿತ ಅಪೋಲೊ 7 ಗಗನನೌಕೆಯನ್ನು ಗಗನಕ್ಕೆ ಹಾರಿಸಲಾಯಿತು. ವಾಲ್ಲಿ ಸಚಿರ್ರಾ, ಡಾನ್ ಫಾಲ್ಟನ್ ಐಸೆಲ್ ಮತ್ತು ಆರ್. ವಾಲ್ಟರ್ ಕನ್ಹಿಂಗಾಮ್ ಅವರು ಈ ಗಗನ ನೌಕೆಯಲ್ಲಿ ಇದ್ದರು.
1900: ಖ್ಯಾತ ಸಾಹಿತಿ ಭಾಸ್ಕರ ಆನಂದ ಸಾಲೆತ್ತೂರು (11-10-1900ರಿಂದ 18-12-1963) ಅವರು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಸಾಲೆತ್ತೂರು ಗ್ರಾಮದಲ್ಲಿನಾರಾಯಣ ರಾಯರು- ಪಾರ್ವತಿ ದಂಪತಿಯು ಮಗನಾಗಿ ಜನಿಸಿದರು.
No comments:
Post a Comment