Showing posts with label ಭಯೋತ್ಪಾದಕ. Show all posts
Showing posts with label ಭಯೋತ್ಪಾದಕ. Show all posts

Wednesday, July 24, 2019

ಸರ್ಕಾರಗಳು ಸತ್ಯ ಹೇಳಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್

ಸರ್ಕಾರಗಳು ಸತ್ಯ ಹೇಳಲಿಲ್ಲ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕಿಸ್ತಾನದಲ್ಲಿ 40  ಭಯೋತ್ಪಾದಕ  ಗುಂಪುಗಳ ಕಾರ್ಯಾಚರಣೆ
ವಾಷಿಂಗ್ಟನ್: ಪಾಕಿಸ್ತಾನದ ಸರ್ಕಾರಗಳು ನಿರಂತರವಾಗಿ ಕಳೆದ 15 ವರ್ಷಗಳಲ್ಲಿ ಅಮೆರಿಕಕ್ಕೆ ಸತ್ಯ ಹೇಳಲಿಲ್ಲ, ನಮ್ಮ ದೇಶದಲ್ಲಿ 40 ವಿವಿಧ ಭಯೋತ್ಪಾದಕ ಗುಂಪುಗಳು ಕಾರ್ಯಾಚರಿಸುತ್ತಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ 2019 ಜುಲೈ 23ರ ಮಂಗಳವಾರ (ಭಾರತದಲ್ಲಿ ಬುಧವಾರ ಜುಲೈ 24) ಇಲ್ಲಿ ಹೇಳಿದರು.
ನಾವು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಿದ್ದ  ಅಮೆರಿಕದ  ಜೊತೆ ಹೋರಾಟ ನಡೆಸಿದ್ದೆವು. 9/11 ಭಯೋತ್ಪಾದಕ ದಾಳಿಯವರೆಗೆ ಪಾಕಿಸ್ತಾನ ವಿಚಾರಕ್ಕೆ ಕೈಹಾಕಿರಲಿಲ್ಲ.  ಅಲ್ ಖೈದಾ ಆಫ್ಘಾನಿಸ್ಥಾನದಲ್ಲಿತ್ತು. ಪಾಕಿಸ್ತಾನದಲ್ಲಿ ಉಗ್ರಗಾಮಿ ತಾಲಿಬಾನಿಗಳು ಇರಲಿಲ್ಲಆದರೆ  ನಾವು ಹೋರಾಟದಲ್ಲಿ ಅಮೆರಿಕದ ಜೊತೆ ಸೇರಿದೆವು. ದುರದೃಷ್ಟವೆಂದರೆ ಪರಿಸ್ಥಿತಿಗಳು ಬದಲಾದಾಗ ನಾವು ಅಮೆರಿಕಕ್ಕೆ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬ ಸತ್ಯವನ್ನು ಹೇಳಲಿಲ್ಲಇದಕ್ಕೆ ನಾನು ನಮ್ಮ ಸರ್ಕಾರಗಳನ್ನೇ  ದೂಷಿಸಬೇಕಾಗಿದೆ ಎಂದು ಇಮ್ರಾನ್ ಖಾನ್ ನುಡಿದರು.
ಕಾಂಗ್ರೆಸ್ ಸದಸ್ಯೆ ಶೀಲಾ ಜ್ಯಾಕ್ಸನ್ ಲೀ ಅವರ  ಏರ್ಪಡಿಸಿದ್ದ ಕ್ಯಾಪಿಟಲ್ ಹಿಲ್ ಸತ್ಕಾರ ಕೂಟದಲ್ಲಿ ಖಾನ್ ಮಾತನಾಡುತ್ತಿದ್ದರು. ಲೀ ಅವರು ಕಾಂಗ್ರೆಸ್ಸನಲ್ ಪಾಕಿಸ್ತಾನ ಕ್ಯಾಕಸ್ ಅಧ್ಯಕ್ಷರಾಗಿದ್ದಾರೆ. ಅವರು ಭಾರತದ ಕಾಂಗ್ರೆಸ್ಸನಲ್  ಅಂಡ್  ಇಂಡಿಯನ್  ಅಮೆರಿಕನ್ಸ್  ಸಂಸ್ಥೆಯ ಸದಸ್ಯರೂ ಆಗಿದ್ದಾರೆ.
ಪಾಕಿಸ್ತಾನಿ ಸರ್ಕಾರಳಿಗೆ ಭಯೋತ್ಪಾದಕರ ಮೇಲೆ ಯಾವುದೇ ನಿಯಂತ್ರಣವೂ ಇರದಿದ್ದುದೇ ಇದಕ್ಕೆ ಕಾರಣವಾಗಿತ್ತು ಎಂದು ಖಾನ್ ಹೇಳಿದರು.
ವಿವರಗಳಿಗೆ  ಕೆಳಗಿನ ಚಿತ್ರ ಕ್ಲಿಕ್ಕಿಸಿ:


Saturday, April 20, 2019

ಶ್ರೀಲಂಕಾ: ವ್ಯಾಪಕ ಉಗ್ರ ದಾಳಿ: 160ಕ್ಕೂ ಹೆಚ್ಚು ಸಾವು,450 ಜನರಿಗೆ ಗಾಯ

ಶ್ರೀಲಂಕಾ: ವ್ಯಾಪಕ ಉಗ್ರ ದಾಳಿ: 160ಕ್ಕೂ ಹೆಚ್ಚು ಸಾವು450 ಜನರಿಗೆ ಗಾಯ
ಕೊಲಂಬೋ:  ಶ್ರೀಲಂಕೆಯ  ಇಗರ್ಜಿಗಳು ಮತ್ತು ಪಂಚತಾರಾ ಹೋಟೆಲುಗಳಲ್ಲಿ 2019 ಏಪ್ರಿಲ್ 21ರ ಭಾನುವಾರ ಈಸ್ಟರ್ ಸಂದರ್ಭದಲ್ಲಿ ಆರು ಸರಣಿ ಭಯೋತ್ಪಾದಕ ದಾಳಿಗಳು ನಡೆದಿದ್ದು 160ಕ್ಕೂ ಹೆಚ್ಚು ಮಂದಿ ಮೃತರಾಗಿ 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈಸ್ಟರ್ ಶುಭ ಸಂದರ್ಭದಲ್ಲಿ ಪ್ರಾರ್ಥನೆಗೆ ಸೇರಿದ್ದವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿರಬಹುದೆಂದು ಶಂಕಿಸಲಾಗಿದೆ.


ಕೊಚ್ಚಿಕಾಡೆಯಲ್ಲಿರುವ ಸೈಂಟ್ ಆಂಟೋನಿ ಇಗರ್ಜಿ, ಕಟುವಾಪಿಟಿಯಾದಲ್ಲಿರುವ ಸೈಂಟ್ ಸೆಬಾಸ್ಟಿಯನ್ ಇಗರ್ಜಿ ಮತ್ತು ಬಟ್ಟಿಕಲೋವಾದಲ್ಲಿನ ಇಗರ್ಜಿಗಳಲ್ಲಿ ಬಾಂಬ್ ಸ್ಪೋಟ ನಡೆದಿರುವುದಾಗಿ ಶ್ರೀಲಂಕಾದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಎರಡು ಸ್ಫೋಟ ಘಟನೆಗಳಲ್ಲಿ ಕನಿಷ್ಠ 80  ಜನರು ಗಾಯಗೊಂಡಿರುವುದಾಗಿ ತಿಳಿಬಂದಿದೆ.

ನಗರದಲ್ಲಿರುವ ಎರಡು ಪಂಚತಾರಾ ಹೊಟೇಲುಗಳಲ್ಲೂ ಬಾಂಬ್ ಸ್ಪೋಟ ಸಂಭವಿಸಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿನ ಶಾಂಗ್ರಿ ಲಾ, ಸಿನಾಮೊನ್ ಗ್ರ್ಯಾಂಡ್ ಹಾಗೂ ಕಿಂಗ್ಸ್ ಬರಿ ಹೊಟೇಲುಗಳಲ್ಲಿ ಬಾಂಬ್ ಸ್ಫೋಟಗಳು ನಡೆದಿವೆ.


ಹೆಚ್ಚಿನ ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

Friday, March 15, 2019

ನ್ಯೂಜಿಲೆಂಡ್: 2 ಮಸೀದಿಗಳಲ್ಲಿ ಭಯೋತ್ಪಾದಕ ಹತ್ಯಾಕಾಂಡ: 40ಕ್ಕೂ ಹೆಚ್ಚು ಸಾವು

ನ್ಯೂಜಿಲೆಂಡ್: 2 ಮಸೀದಿಗಳಲ್ಲಿ ಭಯೋತ್ಪಾದಕ ಹತ್ಯಾಕಾಂಡ:  40ಕ್ಕೂ ಹೆಚ್ಚು ಸಾವು
ವೆಲ್ಲಿಂಗ್ಟನ್:  ಶಸ್ತ್ರಧಾರಿಯೊಬ್ಬ ನ್ಯೂಜಿಲೆಂಡಿನ ಎರಡು ಮಸೀದಿಗಳಲ್ಲಿ 2019 ಮಾರ್ಚ್ 15ರ ಶುಕ್ರವಾರ ಪ್ರಾರ್ಥನೆಯ ವೇಳೆಯಲ್ಲಿ ಯದ್ವಾತದ್ವ ಗುಂಡು ಹಾರಿಸಿ 40ಕ್ಕೂ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡಿದ್ದಾನೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗುಂಡಿನ ದಾಳಿಯಲ್ಲಿ 40ಕ್ಕೂ ಹೆಚ್ಚು ಮಂದಿ ಸತ್ತಿರುವುದನ್ನು ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡೆನ್ ದೃಢ ಪಡಿಸಿದ್ದಾರೆ.

ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೋರ್ರಿಸನ್ ಶಸ್ತ್ರಧಾರಿ ತಮ್ಮ ರಾಷ್ಟ್ರದವನು ಎಂದು ಹೇಳಿದ್ದಾರೆ. ‘ಆತ  ಬಲಪಂಥೀಯ ಉಗ್ರಗಾಮಿ, ಭಯೋತ್ಪಾದಕ’ ಎಂದು ಅವರು ಹೇಳಿದ್ದಾರೆ.

ಗುಂಡು ಹಾರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಪ್ರಶ್ನಿಸುತ್ತಿದ್ದಾರೆ.

ಹತ್ಯಾಕಾಂಡದ ಹೊಣೆಗಾರಿಕೆ ತನ್ನದು ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಹತ್ಯಾಕಾಂಡದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾನೆ. ಘಟನೆಯ ಹೊತ್ತಿನಲ್ಲೇ ವಿಡಿಯೋ ಮಾಡಿಕೊಂಡು ಪ್ರಕಟಿಸಿದಂತಿರುವ ಈ ವಿಡಿಯೋದ  ಸಾಚಾತನವನ್ನು ಪೊಲೀಸರು ದೃಢ ಪಡಿಸಿಲ್ಲ.

ನ್ಯೂಜಿಲೆಂಡಿಗೆ ದಾಳಿ ನಡೆಸಲು ತರಬೇತಿ ನೀಡಲು ತಾನು ಬಂದಿರುವುದಾಗಿ ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಸತ್ತಿರುವ 40 ಮಂದಿಯ ಪೈಕಿ 30 ಮಂದಿ ಅಲ್ ನೂರ್ ಮಸೀದಿಯಲ್ಲಿ ಸಾವನ್ನಪ್ಪಿದ್ದು, 10 ಮಂದಿ ಲಿನ್ ವುಡ್ ಮಸೀದಿಯಲ್ಲಿ ಹತರಾಗಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:

Sunday, November 18, 2018

ಶೋಪಿಯಾನ್: ಉಗ್ರಗಾಮಿಗಳಿಂದ ಇನ್ನೊಬ್ಬ ಯುವಕನ ಅಪಹರಣ

ಶೋಪಿಯಾನ್: ಉಗ್ರಗಾಮಿಗಳಿಂದ ಇನ್ನೊಬ್ಬ ಯುವಕನ ಅಪಹರಣ
ಶ್ರೀನಗರ: ಐಸಿಸ್ (ಐಎಸ್ಐಎಸ್)-ಶೈಲಿಯಲ್ಲಿ  ಭಯೋತ್ಪಾದಕರು ಹದಿಹರೆಯದ  ಎರಡನೇ ವ್ಯಕ್ತಿಯನ್ನು ಕೊಲೆ ಮಾಡಿದ ಒಂದು ದಿನದ ನಂತರ, ೨೦೧೮ ನವೆಂಬರ್ ೧೮ ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶಂಕಿತ ಉಗ್ರಗಾಮಿಗಳು ಮತ್ತೊಬ್ಬ  ಯುವಕನನ್ನು ಅಪಹರಿಸಿದ್ದಾರೆ.

ಅಪಹೃತ ಯುವಕನನ್ನು ಶೋಪಿಯಾನ್   ನಿವಾಸಿ ಸುಹೈಲ್ ಅಹ್ಮದ್ ಎಂಬುದಾಗಿ ಗುರುತಿಸಲಾಗಿದೆ.

೧೭ ವರ್ಷ ವಯಸ್ಸಿನ ನದೀಮ್ ಮಂಜೂರ್ ಮತ್ತು ೧೯ ವರ್ಷದ ಹುಜೈಫ್ ಕುಟ್ಟೆ ಅವರ ಭೀಕರ ಹತ್ಯೆಗಳ ಬಳಿಕ  ಇದೀಗ  ಯುವಕನ ಅಪಹರಣ ನಡೆದಿದೆ.

ಮಂಜೂರನನ್ನು ಗುಂಡಿಟ್ಟು ಕೊಂದರೆ, ಹುಜೈಫ್ ಗಂಟಲನ್ನು ಸೀಳಿ ಭೀಕರವಾಗಿ ಕೊಲ್ಲಲಾಗಿತ್ತು. ಇವರಿಬ್ಬರೂ  ಶೋಪಿಯಾನ್ ನಿವಾಸಿಗಳು.

ಶೋಪಿಯಾನ್ ನಲ್ಲಿ ಅಲ್-ಬದರ್ ಗುಂಪಿನ  ಇಬ್ಬರು ಉಗ್ರಗಾಮಿಗಳನ್ನು ಶೋಪಿಯನ್ ನಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕರು ಸುಹೈಲ್ ನನ್ನು ಅಪಹರಿಸಿದ್ದಾರೆ.

ಗುಂಡಿನ ಘರ್ಷಣೆಯಲ್ಲಿ ಹತರಾದ ಭಯೋತ್ಪಾದಕರನ್ನು ರೆಬ್ಬಾನ್  ಜೈನಪೊರಾ ನಿವಾಸಿ ನವಾಜ್ ಅಹ್ಮದ್ ವಾಗೆ ಮತ್ತು ಬಟ್ನೂರ್ ಲಿಟ್ಟರ್ ಪುಲ್ವಾಮಾದ ಯಾವರ್ ವಾನಿ ಎಂದು ಗುರುತಿಸಲಾಗಿದೆ.

 ಮಂಜೂರನ ಕ್ರೂರ ಹತ್ಯೆಯ ವಿಡಿಯೋ ಜೊತೆಗೆ ಬಿಡುಗಡೆ ಮಾಡಲಾದ  ಆಡಿಯೋ ಸಂದೇಶದಲ್ಲಿ ಹೆಚ್ಚು ಯುವಕರನ್ನು ಕೊಲ್ಲುವುದಾಗಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಜ್ ನೈಕೂ ಬೆದರಿಕೆ ಹಾಕಿದ್ದ.  ವೈರಲ್ ಆದ  ವಿಡಿಯೋದಲ್ಲಿ ಉಗ್ರಗಾಮಿಗಳು ಮಂಜೂರನ ಮೇಲೆ ಗುಂಡಿನ ಮಳೆಗರೆದದ್ದನ್ನು ಚಿತ್ರೀಕರಿಸಿ ತೋರಿಸಿದ್ದರು.
ಕೊಲ್ಲುವುದಕ್ಕೆ
ಮುಂಚೆ ಚಿತ್ರೀಕರಿಸಲಾಗಿದ್ದ  ಇನ್ನೊಂದು ವಿಡಿಯೋದಲ್ಲಿ ತನ್ನ ಗ್ರಾಮದಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ತಾನು ಸೇನೆಗೆ ತಿಳಿಸಿದ್ದುದಾಗಿ ಮಂಜೂರ ಹೇಳಿದ್ದನ್ನು ಚಿತ್ರೀಕರಿಸಿ ಅದನ್ನೂ ಬಿಡುಗಡೆ ಮಾಡಿದ್ದರು.

ಮಂಜೂರ ಒಬ್ಬ ಸೇನಾ ಮಾಹಿತಿದಾರನಾಗಿದ್ದ. ಸೇನೆಗೆ ಉಗ್ರಗಾಮಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಇಬ್ಬರು ಉಗ್ರಗಾಮಿಗಳ ಬಗ್ಗೆ ಮಾಹಿತಿ ನೀಡಿದ ಬಳಿಕ  ಅವರಿಬ್ಬರೂ ಗುಂಡಿನ ಘರ್ಷಣೆಯಲ್ಲಿ ಹತರಾದರು ಎಂದು ನವೆಂಬರ್ 6 ಗುಂಡಿನ ಘರ್ಷಣೆಯಲ್ಲಿ ಉಗ್ರಗಾಮಿಗಳಿಬ್ಬರು ಹತರಾದುದನ್ನು ಉಲ್ಲೇಖಿಸಿದ ನೈಕೂ ಅದಕ್ಕಾಗಿ ಮಂಜೂರನನ್ನು ಕೊಲ್ಲಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ.

"ನಾವು ಯಾರನ್ನೂ ಕೊಲ್ಲಲು ಬಯಸುವುದಿಲ್ಲ, ಆದರೆ ಅವರು (ಮಾಹಿತಿದಾರರು) ನಮ್ಮನ್ನು ಇಂತಹ ಕೃತ್ಯಕ್ಕೆ ಎಳಸುವಂತೆ ಮಾಡುತ್ತಿದ್ದಾರೆ.  ಭವಿಷ್ಯದಲ್ಲಿ ಇಂತಹ ಇನ್ನಷ್ಟು ವೀಡಿಯೋಗಳನ್ನು ನಾವು ಬಹಿರಂಗಪಡಿಸುತ್ತೇವೆ ಮತ್ತು ದ್ರೋಹಿಗಗಳಿಗೆ ಇದೇ ರೀತಿಯ ಹಣೆಬರಹ ಕಾದಿದೆ ಎಂದು ಆತ ಹೇಳಿದ್ದಾನೆ.

ನ್ಯಾಯ  ಪಂಚರು ಮತ್ತು ಸರಪಂಚರಿಗೂ ಇದೇ ಗತಿ ಕಾದಿದೆ ಎಂದೂ ಆತ ಎಚ್ಚರಿಸಿದ್ದಾನೆ.