ನಾನು ಮೆಚ್ಚಿದ ವಾಟ್ಸಪ್

Monday, October 15, 2018

ಇಂದಿನ ಇತಿಹಾಸ History Today ಅಕ್ಟೋಬರ್ 15

ಇಂದಿನ ಇತಿಹಾಸ History Today ಅಕ್ಟೋಬರ್ 15
2018: ನವದೆಹಲಿ: ’ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಲ್ಲಬೇಡಿ ಎಂಬುದಾಗಿ ಹೇಳುವ ಮೂಲಕ, ಹಣದ ಹೊಳೆ ಹರಿಸುವ ಇಂಧನ ಗ್ರಾಹಕರನ್ನು ಕೊಲ್ಲದಂತೆ ಸೌದಿ ಅರೇಬಿಯಾ ಸೇರಿದಂತೆ ತೈಲ ಉತ್ಪಾದಕ ರಾಷ್ಟ್ರಗಳಿಗೆ  ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು. ಅತಿಯಾದ ಕಚ್ಚಾ ತೈಲ ಬೆಲೆಗಳು ಜಾಗತಿಕ ಆರ್ಥಿಕತೆಗೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಜಾಗತಿಕ ತೈಲ ಕಂಪೆನಿಗಳ ಮುಖ್ಯಸ್ಥರ ಸಮಾವೇಶದಲ್ಲಿ ಎಚ್ಚರಿಸಿದ ಪ್ರಧಾನಿ ಸ್ಥಳೀಯ ಕರೆನ್ಸಿಗೆ ತಾತ್ಕಾಲಿಕ ಪರಿಹಾರ ಒದಗಿಸಲು ಪಾವತಿ ಶರತ್ತುಗಳನ್ನು ಮರುಪರಿಶೀಲನೆ ಮಾಡುವಂತೆ ಆಗ್ರಹಿಸಿದರು. ಸೌದಿ ಅರೇಬಿಯಾ ಮತ್ತು ಯುಎಇಯ ಸಚಿವರು ಮತ್ತು ಜಾಗತಿಕ ಹಾಗೂ ಭಾರತದ ಉನ್ನತ ತೈಲ ಕಂಪೆನಿಗಳ ಮುಖ್ಯ ಕಾರ್ ನಿರ್ವಹಣಾಧಿಕಾರಿಗಳ ಜೊತೆಗಿನ ಸಮಾಲೋಚನಾ ಸಭೆಯಲ್ಲಿ ಪ್ರಧಾನಿ ಮೋದಿ ಆಗ್ರಹ ಮಾಡಿದರು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಎಡೆಬಿಡದೆ ಹೆಚ್ಚುತ್ತಿರುವುದರ ಮಧ್ಯೆ, ತಮ್ಮ ಪಾವತಿ ಶರತ್ತುಗಳನ್ನು ಸಡಿಲಿಸಿ ಸರಳಗೊಳಿಸುವಂತೆ ಮತ್ತು ಹೂಡಿಕೆ ಮಾಡಬಹುದಾದ ತಮ್ಮ ಹೆಚ್ಚುವರಿ ಹಣವನ್ನು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ವಾಣಿಜ್ಯ ಬಳಕೆಗೆ ಬಳಸುವಂತೆ ಪ್ರಧಾನಿ ವಿದೇಶೀ ತೈಲ ಕಂಪೆನಿಗಳನ್ನು ಕೋರಿದರುಜಗತ್ತಿನ ಮೂರನೇ ದೊಡ್ಡ ತೈಲ ಗ್ರಾಹಕನಾಗಿರುವ ಭಾರತ ಕಳೆದ ಎರಡು ತಿಂಗಳುಗಳಿಂದ ಕಚ್ಚಾ ತೈಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದು, ಪೆಟ್ರೋಲ್, ಡೀಸೆಲ್ ಮತ್ತು ನೈಸರ್ಗಿಕ ಅನಿಲ (ಎಲ್ ಪಿಜಿ) ದರಗಳು ದಾಖಲೆ ಮಟ್ಟಕ್ಕೆ ಏರಿವೆ. ಇದರ ಜೊತೆಗೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಹಣದುಬ್ಬರದ ಅಪಾಯವನ್ನು ತಂದೊಡ್ಡಿದೆ. ಏಪ್ರಿಲ್ ಮಧ್ಯಾವಧಿಯಿಂದ ನಿರಂತರ ಏರುತ್ತಿರುವ ತೈಲ ಬೆಲೆಗಳು ಕೇಂದ್ರ ಸರ್ಕಾರವು ಮಧ್ಯಂತರ ಪರಿಹಾರ ಒದಗಿಸಲು ಅಬಕಾರಿ ಸುಂಕ ಕಡಿತ ಮತ್ತು ತೈಲ ಕಂಪೆನಿಗಳಿಂದ ಸಬ್ಸಿಡಿ ಮೂಲಕ ಲೀಟರಿಗೆ .೫೦ ರೂಪಾಯಿಗಳ ಕಡಿತವನ್ನೂ ಕೊಚ್ಚಿಕೊಂಡು ಹೋಗಿದೆ.  ಪ್ರಧಾನಿ ಮೋದಿ ಅವರ ಮಾತುಗಳನ್ನು ಆಲಿಸಿದ ಸೌದಿ ಅರೇಬಿಯಾದ ತೈಲ ಸಚಿವ ಖಲೀದ್ ಎಲ್-ಫಲೀಹ್ ಮತ್ತು ಯುಎಇ ಸಚಿವರು ಕೂಡಾ ಜಾಗತಿಕ ಮತ್ತು ಭಾರತೀಯ ಉನ್ನತ ತೈಲ ಕಂಪೆನಿಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡುತ್ತಾ ಮೋದಿ ಮಾತಿಗೆ ದನಿಗೂಡಿಸಿದರು. ಕಚ್ಚಾ ತೈಲ ಬೆಲೆ ಕಳೆದ ನಾಲ್ಕು ವರ್ಷಗಳಲ್ಲಿ ಹೇಗೆ ಏರಿಕೆಯಾಗಿದೆ ಮತ್ತು ಜಾಗತಿಕ ಪ್ರಗತಿಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಅವರು ವಿವರಿಸಿದರು. ಹಿಂದಿನ ಇಂತಹ ಸಭೆಗಳಲ್ಲಿ ಸರ್ಕಾರ ಸಲಹೆಗಳನ್ನು ಮಾಡಿದ್ದರ ಹೊರತಾಗಿಯೂ ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ತೈಲ ಮತ್ತು ಅನಿಲ ಅನ್ವೇಷಣೆ ಮತ್ತು ಉತ್ಪಾದನೆಯ  ಕ್ಷೇತ್ರಗಳಲ್ಲಿ ಏಕೆ ಹೊಸ ಹೂಡಿಕೆಗಳನ್ನು ಮಾಡುತ್ತಿಲ್ಲ ಎಂದು ಮೋದಿ ಅವರು ಜಾಗತಿಕ ತೈಲ ಕಂಪೆನಿಗಳ ಮುಖ್ಯಸ್ಥರನ್ನು ಪ್ರಶ್ನಿಸಿದರು ಎಂದು ಮೂಲಗಳು ಹೇಳಿದವು. ಸಭೆಯ ಬಳಿಕ ನೀಡಲಾದ ಅಧಿಕೃತ ಹೇಳಿಕೆಯುಸಭೆಯಲ್ಲಿ ತೈಲ ಮಾರುಕಟ್ಟೆಯು ಉತ್ಪಾದನೆ ಮತ್ತು ಬೆಲೆಗಳನ್ನು ನಿರ್ಧರಿಸುವಲ್ಲಿ ಉತ್ಪಾದಕ ರಾಷ್ಟ್ರಗಳ ಸ್ವಾಮ್ಯಕ್ಕೆ ಸಿಲುಕಿದೆ. ಬೇಕಾದಷ್ಟು ಉತ್ಪಾದನೆಯಾಗಿದ್ದರೂ, ತೈಲ ಕ್ಷೇತ್ರದಲ್ಲಿ ತೈಲ ಬೆಲೆಗಳ ಏರಿಕೆಯ ವಿಶಿಷ್ಟ ಗುಣವನ್ನು ತೈಲ ಮಾರುಕಟ್ಟೆ ಪ್ರದರ್ಶಿಸುತ್ತಿದೆ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದನ್ನು  ಉಲ್ಲೇಖಿಸಿತು.
ಬಳಕೆದಾರ ರಾಷ್ಟ್ರಗಳು ಕಚ್ಚಾ ತೈಲ ಬೆಲೆಗಳ ಏರಿಕೆಯಿಂದಾಗಿ ಗಂಭೀರವಾದ ಸಂಪನ್ಮೂಲ ಕ್ರೋಢೀಕರಣದಂತಹ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ ಎಂಬುದಾಗಿ ಹೇಳಿದ ಮೋದಿ, ಇತರ ಮಾರುಕಟ್ಟೆಗಳಲ್ಲಿ ಇರುವಂತೆಯೇ ಉತ್ಪಾದಕರು ಮತ್ತು ತೈಲ ಮಾರುಕಟ್ಟೆಯ ಗ್ರಾಹಕರ ಮಧ್ಯೆ ಪಾಲುದಾರಿಕೆಯ ಅಗತ್ಯ ಇದೆ ಎಂದು ಪ್ರಬಲವಾಗಿ ಪ್ರತಿಪಾದಿಸಿದರು. ಇದು ಜಾಗತಿಕ ಆರ್ಥಿಕತೆಯನ್ನು ಸ್ಥಿರಗೊಳಿಸಲು ಮತ್ತು ಅದು ಪುನಃಶ್ಚೇತನದ ಹಾದಿಯಲ್ಲಿ ಸಾಗಲು ನೆರವಾಗಲಿದೆ ಎಂದು ಮೋದಿ ನುಡಿದರು.
ಹೂಡಿಕೆ ಮಾಡಬಹುದಾದ ಹೆಚ್ಚುವರಿ ಬಂಡವಾಳವನ್ನು ತೈಲ ಉತ್ಪಾದಕ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳತ್ತ ಹರಿಸಬೇಕಾದ ಅಗತ್ಯ ಇದೆ. ಜೊತೆಗೆ ಉತ್ಪಾದಕರು ಮತ್ತು ಗ್ರಾಹಕರ ಮಧ್ಯೆ ತಾಂತ್ರಿಕ ಸಹಕಾರದ ಅಗತ್ಯವೂ ಇದೆ ಎಂದು ಪ್ರಧಾನಿ ಒತ್ತಿ ಹೇಳಿದರುತನಗೆ ಬೇಕಾದ ತೈಲದಲ್ಲಿ ಶೇಕಡಾ ೮೦ರಷ್ಟನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಕಚ್ಚಾ ತೈಲಗಳ ಬೆಲೆ ಏರಿಕೆ ಮತ್ತು ರೂಪಾಯಿ ದುರ್ಬಲಗೊಂಡದ್ದರ ಪರಿಣಾಮವಾಗಿ ತೀವ್ರ ಒತ್ತಡಕ್ಕೆ ಒಳಗಾಗಿದೆ ಎಂದು ಪ್ರಧಾನಿ ಹೇಳಿದರು.  ‘ ಅಂತರವನ್ನು ನಿವಾರಿಸಲು ತೈಲ ಉತ್ಪಾದಕ ರಾಷ್ಟ್ರಗಳ ಸಹಕಾರ ಅತ್ಯಂತ ನಿರ್ಣಾಯಕ ಎಂದು ಇಂಧನ ಕ್ಷೇತ್ರದ ಜಾಗತಿಕ ನಾಯಕರಿಗೆ ನಾಲ್ಕಂಶದ ಸಂದೇಶ ನೀಡಿದ ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿತು.  ‘ಕೊನೆಯದಾಗಿ ಮತ್ತು ಮುಖ್ಯವಾಗಿ ಪಾವತಿ ಶರತ್ತುಗಳನ್ನು ಮರುಪರಿಶೀಲನೆ ಮಾಡುವ ಮೂಲಕ ಸ್ಥಳೀಯ ಕರೆನ್ಸಿಗೆ ತಾತ್ಕಾಲಿಕ ನಿರಾಳತೆ ಒದಗಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ ಎಂದು ಹೇಳಿಕೆ ತಿಳಿಸಿತು. ಭಾರತದ ರೂಪಾಯಿ ಮೌಲ್ಯ ವರ್ಷ ಶೇಕಡಾ ೧೪.೫ರಷ್ಟು ಕುಸಿದಿದೆ, ಇದು ಆಮದನ್ನು ತುಟ್ಟಿಗೊಳಿಸಿದೆ ಎಂದು ಬಳಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸೌದಿ ತೈಲ ಸಚಿವ ಅಲ್ ಫಲೀಹಾ ಅವರು ಮೋದಿ ಅಭಿಪ್ರಾಯವನ್ನು ಸಮರ್ಥಿಸಿದರು. ಮೋದಿಯವರು ಸಭೆಯಲ್ಲಿ ಕಚ್ಚಾ ತೈಲ ಬೆಲೆ ವಿಪರೀತ ಏರಿಕೆಯಾಗಿರುವುದರಿಂದ ಆಗುತ್ತಿರುವ ಗ್ರಾಹಕರ ನೋವನ್ನು ಪ್ರಸ್ತಾಪಿಸಿದ್ದಾರೆ. ನಮ್ಮನ್ನೂ ಸೇರಿದಂತೆ ಎಲ್ಲ ತೈಲ ಉತ್ಪಾದಕರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕೊಲ್ಲಬೇಡಿ ಎಂದು ಎಚ್ಚರಿಸಿದ್ದಾರೆ ಎಂದು ಅವರು ನುಡಿದರು. ಸಮ್ಮೇಳನವನ್ನು ಉದ್ದೇಶಿಸಿ ಭಾರತದ ತೈಲ ಸಚಿವ ಧರ್ಮೇಂದ್ರ ಪ್ರಧಾನ್ ಅವರೂ ಮಾತನಾಡಿದರು. ವಿತ್ತ ಸಚಿವ ಅರುಣ್ ಜೇಟ್ಲಿ, ನೀತಿ ಆಯೋಗದ ಅಧ್ಯಕ್ಷ ರಾಜೀವ ಕುಮಾರ್ ಅವರೂ ತೈಲ ಬೆಲೆ ಏರಿಕೆಯಿಂದ ಜಾಗತಿಕ ಬೆಳವಣಿಗೆಗೆ ಬೀಳುತ್ತಿರುವ ಪೆಟ್ಟು ಮತ್ತು ಇರಾನ್ ವಿರುದ್ಧ ಅಮೆರಿಕ ವಿಧಿಸಿರುವ ದಿಗ್ಬಂಧನ ಪರಿಣಾಮ ಕುರಿತೂ ಸಮಾವೇಶ ಚರ್ಚಿಸಬೇಕು ಎಂದು ಹೇಳಿದರು. ಕೇಂದ್ರ ಸರ್ಕಾರ, ನೀತಿ ಆಯೋಗದ ಹಿರಿಯ ಅಧಿಕಾರಿಗಳು ಹಾಜರಿದ್ದು ಸಂವಾದದಲ್ಲಿ ಪಾಲ್ಗೊಂಡರು. ಡೀಸೆಲ್ ದರ ಏರಿಕೆಯು ನಿರಂತರ ೧೦ನೇ ದಿನಕ್ಕೆ ತಲುಪಿ, ಕೇಂದ್ರ ಸರ್ಕಾರವು ತಿಂಗಳ ಆದಿಯಲ್ಲಿ ಪ್ರಕಟಿಸಿದ್ದ ಲೀಟರಿಗೆ .೫೦ ರೂಪಾಯಿಗಳ ಅಬಕಾರಿ ಸುಂಕ ಕಡಿತ ಮತ್ತು ತೈಲ ಕಂಪೆನಿ ಸಬ್ಸಿಡಿಯ ಪರಿಹಾರವನ್ನೂ ಕೊಚ್ಚಿಕೊಂಡು ಹೋದ ದಿನವೇ ಪ್ರಧಾನಿಯವರು ಜಾಗತಿಕ ತೈಲ ಕಂಪೆನಿಗಳ ಮುಖ್ಯಸ್ಥರೊಂದಿಗೆ ದುಂಡು ಮೇಜಿನ ಸಭೆ ನಡೆಸಿದರು. ದೆಹಲಿಯಲ್ಲಿ ಈದಿನ  ಡೀಸೆಲ್ ಬೆಲೆ ಲೀಟರ್ ಒಂದಕ್ಕೆ ೭೫.೪೬ ರೂಪಾಯಿಗೆ ಮುಟ್ಟಿದರೆ, ಮುಂಬೈಯಲ್ಲಿ ೭೯.೧೧ ರೂಪಾಯಿಗೆ, ಚೆನ್ನೈಯಲ್ಲಿ ೭೯.೮೦ ರೂಪಾಯಿಗೆ ಮುಟ್ಟಿತು. ಇದೇ ವೇಳೆಗೆ ಪೆಟ್ರೋಲ್ ಬೆಲೆ ಲೀಟರಿಗೆ ದೆಹಲಿಯಲ್ಲಿ ೮೨.೭೨ ರೂ, ಮುಂಬೈಯಲ್ಲಿ ೮೮.೧೮ ರೂ ಮತ್ತು ಚೆನ್ನೈಯಲ್ಲಿ ೮೫.೯೯ ರೂಪಾಯಿಗೆ ತಲುಪಿತು. ಭಾರತ ಮತ್ತು ವಿದೇಶೀ ತೈಲ ಕಂಪೆನಿಗಳಲ್ಲದೆ ಬಹುರಾಷ್ಟ್ರೀಯ ಕಂಪೆನಿಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ಸಭೆಗೆ ಪ್ರಧಾನಿ ಮೋದಿ ಅವರು ನೈಸರ್ಗಿಕ ಅನಿಲದ ವಾಣಿಜ್ಯ ಬಳಕೆಗೆ ನೆರವಾಗುವಂತೆಯೂ ಮನವಿ ಮಾಡಿದರು.

2018: ನವದೆಹಲಿ: ತಮ್ಮ ವಿರುದ್ಧ ಲೈಂಗಿಕ ಕಿರುಕುಳ ನೀಡಿರುವುದಾಗಿ ಆಪಾದನೆ ಮಾಡಿದ ಪತ್ರಕರ್ತೆ ಪ್ರಿಯಾ ರಮಣಿ ಅವರ ವಿರುದ್ಧ ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ರಮಣಿ ಅವರು ತಮ್ಮ ವಿರುದ್ಧ ತಿಳಿದೂ ತಿಳಿದೂ, ಬೇಕೆಂದೇ, ದುರುದ್ದೇಶದಿಂದ, ಬುದ್ಧಿ ಪೂರ್ವಕವಾಗಿ ತಮ್ಮ ವರ್ಚಸ್ಸಿಗೆ ಮಸಿ ಬಳಿದಿದ್ದಾರೆ ಎಂದು ಆಪಾದಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು, ಮಾನನಷ್ಟಕ್ಕಾಗಿ ದಂಡನೆಗೆ ಗುರಿಪಡಿಸುವ ವಿಧಿಗಳ ಅಡಿಯಲ್ಲಿ ಅವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಕೋರಿದರು.  ‘ದೂರುದಾರರು (ಅಕ್ಬರ್) ಪತ್ರಿಕೋದ್ಯಮದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಭಾರತದ ಮೊತ್ತ ಮೊದಲ ರಾಜಕೀಯ ಸುದ್ದಿ ನಿಯತಕಾಲಿಕವನ್ನು ಆರಂಭಿಸಿದ್ದರು.’ ಎಂಬುದಾಗಿ ವಿವರಿಸಿರುವ ಅರ್ಜಿಯು, ರಮಣಿ ಅವರು ಸಾಮಾಜಿಕ ಮಾಧ್ಯಮದಲ್ಲಿ ದೂರುದಾರರ ವಿರುದ್ಧ ಮಾಡಿದ ಮಾನನಷ್ಟಕರ ಆರೋಪಗಳನ್ನು ಪಟ್ಟಿ ಮಾಡಿತು. ಆರೋಪಿಯು ದುರುದ್ದೇಶದಿಂದ ಗಂಭೀರವಾದ ಸರಣಿ ಆರೋಪಗಳನ್ನು ಮಾಡಿದ್ದು ಅದನ್ನು ಮಾಧ್ಯಮದಲ್ಲಿ ಉದ್ದೇಶಪೂರ್ವಕವಾಗಿಯೇ ಪ್ರಚಾರ ಮಾಡುತ್ತಿದ್ದಾರೆ. ನಿರ್ದಿಷ್ಟ ಕಾರ್ಯಸೂಚಿ ಜಾರಿಯ ಗುರಿ ಇಟ್ಟುಕೊಂಡೇ ಅವರು ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು. ತಮ್ಮ ವಿರುದ್ಧ ಮಾಡಲಾಗಿರುವ ಆಪಾದನೆಗಳುಹಗರಣ ಮತ್ತುಮಾನಹಾನಿಕರ ಸ್ವರೂಪದವಾಗಿದ್ದು, ಇವು ಸಾಮಾಜಿಕ ವಲಯದಲ್ಲಿನ ತಮ್ಮ ಕುರಿತ ಸದ್ಭಾವನೆ, ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿರುವುದರ ಜೊತೆಗೆ ಸಮುದಾಯ, ಗೆಳೆಯರು, ಕುಟುಂಬ ಮತ್ತು ಸಹೋದ್ಯೋಗಿಗಳು ತಮ್ಮ ಬಗ್ಗೆ ಹೊಂದಿದ್ದ ಗೌರವಕ್ಕೆ ಚ್ಯುತಿ ಉಂಟು ಮಾಡಿವೆ ಮತ್ತು ತುಂಬಲಾಗದ ನಷ್ಟ ಹಾಗೂ ಅತಿಯಾದ ಯಾತನೆಯನ್ನು ನೀಡಿವೆ ಎಂದು ಎಂದು ದೂರು ತಿಳಿಸಿತು.  ವಕೀಲ ಸಂದೀಪ್ ಕಪೂರ್ ಅವರ ಮೂಲಕ ಸಲ್ಲಿಸಲಾಗಿರುವ ದೂರು ರಮಣಿ ಅವರಿಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ೪೯೯ ನೇ ಸೆಕ್ಷನ್ (ಮಾನನಷ್ಟ) ಅಡಿಯಲ್ಲಿ ನೋಟಿಸ್ ಜಾರಿ ಮಾಡುವಂತೆ ಕೋರಿತು. ಅಪರಾಧವು ಸಾಬೀತಾದರೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೫೦೦ರ ಅಡಿಯಲ್ಲಿ ಆರೋಪಿಗೆ ಎರಡು ವರ್ಷಗಳ ಸೆರೆವಾಸ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಇದೆ.  ನೈಜೀರಿಯಾಕ್ಕೆ ಅಧಿಕೃತ ಪ್ರವಾಸ ಹೋಗಿದ್ದ ಅಕ್ಬರ್ ಅವರು ಹಿಂದಿನ ದಿನ  ವಾಪಸಾದ ಬಳಿಕ ತಮ್ಮ ವಿರುದ್ಧ ಹಲವಾರು ಮಹಿಳೆಯರು ಮಾಡಿದ್ದ ಆರೋಪಗಳನ್ನುಸುಳ್ಳು, ಸೃಷ್ಟಿತ ಮತ್ತು ತೀವ್ರ ಯಾತನೆ ನೀಡುವಂತಹವು ಎಂಬುದಾಗಿ ಬಣ್ಣಿಸಿ ತಳ್ಳಿಹಾಕಿದ್ದರು. ತಮ್ಮ ವಿರುದ್ಧದ ಆಪಾದನೆಗಳಿಗೂ ಮುಂಬರುವ ಲೋಕಸಭಾ ಚುನಾವಣೆಗೂ ಸಂಬಂಧ ಇದೆ ಎಂಬುದಾಗಿ ಹೇಳುವ ಮೂಲಕ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಆಗ್ರಹಗಳನ್ನು ಅವರು ವಸ್ತುಶಃ ತಳ್ಳಿಹಾಕಿದ್ದರು. ಬಿಜೆಪಿ ಪ್ರತಿಕ್ರಿಯೆ: ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಮೊತ್ತ ಮೊದಲ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಅಕ್ಬರ್ ಅವರು ತಮ್ಮ ನಿರೂಪಣೆಯನ್ನು ನೀಡಿದ್ದಾರೆ. ಪಕ್ಷವು ಅದನ್ನು ಒಪ್ಪುತ್ತದೆ ಅಥವಾ ಅವರ ನಿರೂಪಣೆಯನ್ನು ಒಪ್ಪುವುದಿಲ್ಲ ಎಂದು ಇದರ ಅರ್ಥವಲ್ಲ ಎಂದು ಹೇಳಿದೆ. ಆಳುವ ಪಕ್ಷವು ಅಕ್ಬರ್ ಅವರ ಹೇಳಿಕೆಯನ್ನು ಒಪ್ಪುವುದೇ ಎಂಬುದಾಗಿ ಪತ್ರಿಕಾಗೋಷ್ಠಿಯಲ್ಲಿ ಕೇಳಲಾದ ಪ್ರಶ್ನೆಗೆ ಪಕ್ಷದ ವಕ್ತಾರ ಜಿವಿಎಲ್ ನರಸಿಂಹ ರಾವ್ ಅವರುಇದು ಒಪ್ಪುವುದಕ್ಕೆ ಅಥವಾ ಒಪ್ಪದೇ ಇರುವುದಕ್ಕೆ ಸಂಬಂಧಿಸಿದ್ದಲ್ಲ. ಅವರು (ಅಕ್ಬರ್) ತಮ್ಮ ನಿರೂಪಣೆಯನ್ನು ನೀಡಿದ್ದಾರೆ ಎಂದು ಉತ್ತರಿಸಿದರು. # ಮಿ ಟೂ ಅಭಿಯಾನವನ್ನು ಬೆಂಬಲಿಸಿದ್ದ ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಸ್ಮೃತಿ ಇರಾನಿ ಅವರು ಅಕ್ಬರ್ ವಿರುದ್ಧದ ಆಪಾದನೆಗಳ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಲಿಲ್ಲ.  #ಮಿ ಟೂ ಇಂಡಿಯಾ ಅಭಿಯಾನದಲ್ಲಿ ಹಲವಾರು ಮಹಿಳೆಯರು ತಾವು ಅಕ್ಬರ್ ಅವರು ಪತ್ರಕರ್ತರಾಗಿದ್ದಾಗ ಅವರಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ  ಆಪಾದಿಸಿದ ಬಳಿಕ ಕೇಂದ್ರ ಸಚಿವ ಸಂಪುಟದ ಕೆಲವು ಸದಸ್ಯರೂ ಸೇರಿದಂತೆ ಹಲವೆಡೆಗಳಿಂದ ಅಕ್ಬರ್ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು ಎಂಬ ಬೇಡಿಕೆ ಹೆಚಿತ್ತು. ತಮ್ಮ ವಿರುದ್ಧದ ಲೈಂಗಿಕ ದುರ್ವರ್ತನೆಯ ಆರೋಪಗಳು ಬುಡರಹಿತ, ರಾಜಕೀಯ ದುರುದ್ಧೇಶದ ನಕಲಿ, ಮಸಾಲೆ ಭರಿತ ಆರೋಪಗಳು ಎಂಬುದಾಗಿ ಭಾನುವಾರ ಅಧಿಕೃತ ವಿದೇಶ ಪ್ರವಾಸದಿಂದ ವಾಪಸಾದ ಬಳಿಕ ಅಕ್ಬರ್ ಹೇಳಿಕೆ ನೀಡಿದ್ದರು. ವಿದೇಶ ಪ್ರವಾಸದಲ್ಲಿ ಇದ್ದುದರಿಂದ ತಮಗೆ ಉತ್ತರ ನೀಡಲಾಗಲಿಲ್ಲ ಎಂದೂ ಅವರು ತಿಳಿಸಿದ್ದರು. ಸಾಕ್ಷ್ಯಾಧಾರವಿಲ್ಲದ ಆರೋಪಗಳು ಕೆಲವು ವರ್ಗಗಳಲ್ಲಿ ವೈರಲ್ ಜ್ವರದಂತೆ ಹರಡುತ್ತಿದೆ. ಏನೇ ಇದ್ದರೂ, ನಾನೀಗ ವಿದೇಶದಿಂದ ವಾಪಸಾಗಿದ್ದೇನೆ ಮತ್ತು ಬುಡರಹಿತ ಆರೋಪಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದಾಗಿ ನನ್ನ ವಕೀಲರು ನಿರ್ಧರಿಸುತ್ತಾರೆ ಎಂದು ಅವರು ಹೇಳಿದ್ದರು. ರಮಣಿ ಅವರ ಹೊರತಾಗಿ, ಘಜಾಲಾ ವಹಾಬ್, ಶುಮಾ ರಹ, ಅಂಜು ಭಾರತಿ ಮತ್ತು ಶುತಾಪ ಪೌಲ್ ಅವರೂ ಅಕ್ಬರ್ ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು.  ‘ಪ್ರಿಯಾ ರಮಣಿ ಅವರು ವರ್ಷದ ಹಿಂದೆ ನಿಯತಕಾಲಿಕ ಒಂದರಲ್ಲಿ ಲೇಖನ ಪ್ರಕಟಿಸುವ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಏನಿದ್ದರೂ ಅದು ಅಸಮರ್ಪಕ ಕಥೆ ಎಂಬುದಾಗಿ ಗೊತ್ತಿದ್ದ ಕಾರಣ ಆಕೆ ಅದರಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಲಿಲ್ಲ. ಇತ್ತೀಚೆಗೆ ನನ್ನ ಹೆಸರನ್ನು ಏಕೆ ಪ್ರಸ್ತಾಪಿಸಿಲ್ಲ ಎಂಬುದಾಗಿ ಕೇಳಿದಾಗ ಆಕೆ ಟ್ವೀಟ್ ಮೂಲಕಅವರು ಏನೂ ಮಾಡದ ಕಾರಣ ಅವರನ್ನು ಹೆಸರಿಸಿಲ್ಲ ಎಂದು ಹೇಳಿದ್ದರು. ನಾನು ಏನೂ ಮಾಡಿಲ್ಲ ಎಂದಾದರೆ ಎಲ್ಲಿ ಮತ್ತು ಏನು ಕಥೆ?’ ಎಂದು ಅಕ್ಬರ್ ಪ್ರಶ್ನಿಸಿದ್ದರು.  ‘ಶುತಾಪ ಪೌಲ್ ಅವರುವ್ಯಕ್ತಿ ನನ್ನ ಮೇಲೆ ಕೈ ಇಟ್ಟಿಲ್ಲ ಎಂದಿದ್ದಾರೆ. ಶುಮಾ ರಹನಾನು ಸ್ಪಷ್ಟನೆ ನೀಡಬೇಕು ಎಂದಿದ್ದಾರೆ, ಏನಿದ್ದರೂ ಅವರು ನೈಜವಾಗಿ ಏನೂ ಮಾಡಿಲ್ಲ ಎಂದೂ ಹೇಳಿದ್ದಾರೆ. ಅಂಜು ಭಾರತಿ ಎಂಬ ಮಹಿಳೆ ನಾನು ಈಜುಕೊಳದಲ್ಲಿ ಪಾರ್ಟಿ ಮಾಡುತ್ತಿದ್ದೆ ಎಂದಿದ್ದಾರೆ. ನನಗೆ ಹೇಗೆ ಈಜುವುದು ಎಂದೇ ಗೊತ್ತಿಲ್ಲ ಎಂದು ಅಕ್ಬರ್ ಹೇಳಿದ್ದರು. ರಮಣಿ ಮತ್ತು ವಹಾಬ್ ಅವರು ಆರೋಪಿತ ಘಟನೆಗಳ ಬಳಿಕವೂ ನನ್ನೊಂದಿಗೆ ಕೆಲಸ ಮಾಡಿದ್ದರು. ಇದು ಅವರಿಗೆ ಯಾವುದೇ ಆತಂಕ, ಅನಾನುಕೂಲತೆ ಇರಲಿಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದೂ ಅಕ್ಬರ್ ಪ್ರತಿಪಾದಿಸಿದ್ದರು.

2018: ತಿರುವನಂತಪುರಂ: ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದ ದ್ವಾರಗಳನ್ನು ತೆರೆದ ಸುಪ್ರೀಂಕೋರ್ಟ್ ಪಂಚ ಸದಸ್ಯ  ಪೀಠದ ತೀರ್ಪು ಜಾರಿಗೆ ನಿರ್ಧರಿಸಿದ ಕೇರಳ ಸರ್ಕಾರದ ಕ್ರಮವನ್ನು ವಿರೋಧಿಸಿ ಸಹಸ್ರಾರು ಮಂದಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಸಚಿವಾಲಯಕ್ಕೆ ಬೃಹತ್ ಜಾಥಾ ನಡೆಸಿ, ವಿಷಯ ಇತ್ಯರ್ಥ ಪಡಿಸಲು ರಾಜ್ಯ ಸರ್ಕಾರಕ್ಕೆ ೨೪ ಗಂಟೆಗಳ ಗಡುವು ನೀಡಿದರು. ಇದೇ ವೇಳೆಗೆ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡು ಹುಡುಕುವ ಸಲುವಾಗಿ ಸರ್ಕಾರವು ದೇವಾಲಯದ ತಂತ್ರಿ (ಮುಖ್ಯ ಅರ್ಚಕರು) ಕುಟುಂಬ, ಪಂದಳ ರಾಜಕುಟುಂಬ ಮತ್ತು ಅಯ್ಯಪ್ಪ ಸೇವಾ ಸಂಗಮ್ ಸೇರಿದಂತೆ ವಿವಿಧ ಪಾಲುದಾರರ ಸಭೆಯನ್ನು ಮಂಗಳವಾರ ಕರೆಯಿತು.  ಏನಿದ್ದರೂ ಬಿಜೆಪಿ ಸಭೆಯನ್ನು ಬಹಿಷ್ಕರಿಸಿತು.  ಆದರೆ ತಂತ್ರಿ ಮತ್ತು ಪಂದಳ ರಾಜಕುಟುಂಬದವರುತಮ್ಮ ನಿರ್ಧಾರವನ್ನು ನಂತರ ಘೋಷಿಸುವುದಾಗಿ ಹೇಳಿದರು. ಭಾರೀ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ಬಿಜೆಪಿ ಕಾರ್ಯಕರ್ತರು ಈದಿನ ಹಾರ ಹಾಕಲಾದ ಅಯ್ಯಪ್ಪ ಸ್ವಾಮಿಯ ಚಿತ್ರಗಳೊಂದಿಗೆ ಅಯ್ಯಪ್ಪ ಸ್ವಾಮಿ ಮಂತ್ರಗಳನ್ನು ಪಠಿಸುತ್ತಾ ಸರ್ಕಾರದ ಆಡಳಿತ ಕೇಂದ್ರವಾಗಿರುವ ಸಚಿವಾಲಯಕ್ಕೆ ಮೆರವಣಿಗೆ ನಡೆಸಿದರುಅಯ್ಯಪ್ಪ ಸ್ವಾಮಿ ಭಕ್ತರ ಭಾವನೆಗಳನ್ನು ಪರಿಗಣಿಸದೆ ಸುಪ್ರಿಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಎಡರಂಗ ಸರ್ಕಾರ ಕೈಗೊಂಡ ತೀರ್ಮಾನವನ್ನು ವಿರೋಧಿಸಿ ಕಳೆದ ವಾರ ಪಂದಳದಿಂದ ಬೃಹತ್ ಕಾಲ್ನಡಿಗೆ ಜಾಥಾವನ್ನು ಬಿಜೆಪಿ ಆರಂಭಿಸಿತ್ತು.
ತೀರ್ಪು ಜಾರಿಯ ಸರ್ಕಾರದ ಯತ್ನವು ದೇಶ-ವಿದೇಶಗಳಿಂದ ನವೆಂಬರ್ ಮಧ್ಯದಿಂದ ಮೂರು ತಿಂಗಳ ಯಾತ್ರಾಕಾಲದಲ್ಲಿ ಲಕ್ಷಾಂತರ ಭಕ್ತರನು ಆಕರ್ಷಿಸುವ ಬೆಟ್ಟದ ಮೇಲಿನ ದೇವಾಲಯವನ್ನು ನಾಶಪಡಿಸುವ ಸಂಚು ಎಂದೂ ಬಿಜೆಪಿ ಆಪಾದಿಸಿತು. ನಟ -ಸಂಸದ ಸುರೇಶ್ ಗೋಪಿ, ಭಾರತೀಯ ಧರ್ಮ ಜನ ಸೇನಾ ಮುಖ್ಯಸ್ಥ ತುಷಾರ್ ವೆಲ್ಲಪಲ್ಲಿ ಸೇರಿದಂತೆ ಎನ್ ಡಿಎಯ ಹಲವಾರು ನಾಯಕರು ಪಾಲ್ಗೊಂಡಿದ್ದ ಜಾಥಾದ ನೇತೃತ್ವವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಪಿಎಸ್ ಶ್ರೀಧರನ್ ಪಿಳ್ಳೈ ವಹಿಸಿದ್ದರು. ರಾಜ್ಯ ಸರ್ಕಾರವು ವಿಷಯವನ್ನು ಇತ್ಯರ್ಥಗೊಳಿಸಲು ವಿಫಲಗೊಂಡಲ್ಲಿ ಬಿಜೆಪಿ-ಎನ್ ಡಿಎ ಚಳವಳಿ ಹೊಸ ತಿರುವು ಪಡೆಯುವುದು ಎಂದು ಶ್ರೀಧರನ್ ಪಿಳೈ ಎಚ್ಚರಿಸಿದರು.  ‘ನಾವು ಕೇರಳದ ಪ್ರತಿಯೊಬ್ಬ ಗ್ರಾಮಸ್ಥನನ್ನೂ ಭೇಟಿ ಮಾಡುತ್ತೇವೆ ಮತ್ತು ಶಬರಿಮಲೈ ದೇವಾಲಯ, ಅದರ ಶತಮಾನಗಳಷ್ಟು ಹಳೆಯದಾದ ಸಂಪ್ರದಾಯಗಳು ಮತ್ತು ಅಯ್ಯಪ್ಪ ಸ್ವಾಮಿ ಭಕ್ತರ ಭಾವನೆಗಳ ರಕ್ಷಣೆಗಾಗಿ ಬೃಹತ್ ಜನಾಂದೋಲನದ ಯೋಜನೆಯನ್ನು ರೂಪಿಸಲಿದ್ದೇವೆ ಎಂದು ಅವರು ನುಡಿದರು. ಶಬರಿಮಲೈ ಆಂದೋಲನದ ಮೊದಲ ಹಂತವು ಯಶಸ್ವಿಯಾಗಿದ್ದು, ಇದೊಂದು ಮೈಲುಗಲ್ಲು. ಸಿಪಿಐ(ಎಂ) ನೇತೃತ್ವದ ಎಲ್ ಡಿಎಫ್ ಸರ್ಕಾರ ೨೪ ಗಂಟೆಗಳ ಒಳಗಾಗಿ ಇತ್ಯರ್ಥ ಕಂಡುಕೊಳ್ಳದೇ ಇದ್ದಲ್ಲಿ ನಮ್ಮ ಗುರಿ ಮುಟ್ಟಲು ಬೃಹತ್ ಜನಾಂದೋಲನವನ್ನು ಪಕ್ಷ ನೇತೃತ್ವದ ಎನ್ಡಿಎ ರೂಪಿಸುವುದು ಎಂದು ಅವರು ನುಡಿದರು. ದೇವಸ್ವಂ ಮಂಡಳಿ ಸಭೆ: ಈಮಧ್ಯೆ ದೇವಸ್ವಂಮಂಡಳಿಯು ಮಂಗಳವಾರ ಕರೆದಿರುವ ಸಭೆಯು ನವೆಂಬರ್ ೧೭ರಂದು ಆರಂಭವಾಗುವ ಮೂರು ತಿಂಗಳ ವಾರ್ಷಿಕ ಮಂಡಲಂ-ಮಕರವಿಳಕ್ಕು ಯಾತ್ರಾ ಋತುವಿನ ಸಿದ್ಧತೆಗಳ ಬಗ್ಗೆ ಚರ್ಚಿಸಲಿದೆ. ಸಭೆಯು ಸುಪ್ರೀಂಕೋರ್ಟ್ ತೀರ್ಪಿನ ಬಗೆಗೂ ಚರ್ಚಿಸುವ ನಿರೀಕ್ಷೆಯಿದೆ.  " ವಿಷಯವನ್ನು ಸ್ನೇಹಯುತವಾಗಿ ಇತ್ಯರ್ಥ ಪಡಿಸಲಾಗುವುದುಎಂದು ನಾವು ನಂಬಿದ್ದೇವೆ. ನಾವು ಎಲ್ಲಾ ಪಾಲುದಾರರನ್ನು ತಾಳ್ಮೆಯಿಂದ ಆಲಿಸುತ್ತೇವೆ. ಇದನ್ನುರಾಜಕೀಯ ಸಮಸ್ಯೆಯನ್ನಾಗಿ ಮಾಡಲು ಬಯಸುವುದಿಲ್ಲ. ಇದೇ ವೇಳೆಯಲ್ಲಿ ನಮ್ಮ ಮಿತಿಗಳನ್ನು ನಾವು ಮನವರಿಕೆ ಮಾಡಿಸುತ್ತೇವೆ ಎಂದು ಮಂಡಳಿ ಅಧ್ಯಕ್ಷ ಪದ್ಮಕುಮಾರ್ ಹೇಳಿದರು. ಮಾಸಿಕ ಪೂಜಾ ವಿಧಿಗಳಿಗಾಗಿ ದೇವಾಲಯವನ್ನು ಬುಧವಾರ ತೆರೆಯಲಾಗುವುದು. ಮಲಯಾಳಿತುಲಾ ತಿಂಗಳಲ್ಲಿ ನಡೆಯುವ ಐದು ದಿನಗಳ ಮಾಸಿಕ ಪೂಜೆಯ ಬಳಿಕ ಅಕ್ಟೋಬರ್ ೨೨ರಂದು ದೇವಾಲಯವನ್ನು ಮುಚ್ಚಲಾಗುವುದು. ಮಾಸಿಕ ಪೂಜಾ ವಿಧಿಗಳ ಸಲುವಾಗಿ ಅಕ್ಟೋಬರ್ ೧೭ರಂದು ದೇವಾಲಯವನ್ನು ತೆರೆಯಲಾಗುತ್ತಿದ್ದು, ಇದಕ್ಕೆ ಕೇವಲ ಮೂರು ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರಗೊಂಡಿರುವ ಪ್ರತಿಭಟನೆಗಳು ರಾಜ್ಯ ಸರ್ಕಾರಕ್ಕೆ ಚಿಂತೆ ಉಂಟು ಮಾಡಿವೆ. "ಆಡಳಿತಾರೂಢ ಸಿಪಿಐ (ಎಮ್) ಕೈಗೊಂಬೆಯಾಗಿರುವ ದೇವಸ್ವಂ ಮಂಡಳಿ ಅಧ್ಯಕ್ಷರಿಂದ ನಾವು ಹೆಚ್ಚು ನಿರೀಕ್ಷಿಸಲಾಗದು ಎಂದು ಬಿಜೆಪಿ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಇಲ್ಲಿ ಹೇಳಿದರು. ಭಕ್ತರಿಗೆ ಸವಾಲು ಎಸೆಯುವ ಮೂಲಕ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದೆ ಎಂದು ಅವರು ನುಡಿದರು. "ತೀರ್ಪು ಹೊರ ಬಂದಾಗ ಸರ್ಕಾರವು ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಬದಲಾಗಿ, ಮಹಿಳಾ ಪೊಲೀಸ್ ಮತ್ತು ಅಧಿಕಾರಿಗಳ ನಿಯೋಜನೆಇತ್ಯಾದಿ ಪ್ರಚೋದನಕಾರಿ ಹೇಳಿಕೆಗಳನ್ನು ಅದು ನೀಡಿದೆ.ಪ್ರಸ್ತುತ ಅವ್ಯವಸ್ಥೆಗೆ ಸರ್ಕಾರವೇ ಹೊಣೆ ಎಂದು ಮೂ ವರು ತಂತ್ರಿಗಳ ಪೈಕಿ ಒಬ್ಬರಾಗಿರುವ ಮೋಹನರುಕಂಡಾರರು ಹೇಳಿದರು ಮಧ್ಯೆ, ಭಕ್ತರ ಕಾಳಜಿಯನ್ನು ಗಮನಿಸುವಂತೆರಾಜ್ಯ ಮತ್ತುಕೇಂದ್ರ ಸರ್ಕಾರವನ್ನು ಒತ್ತಾಯಿಸಿಅಂತಾರಾಷ್ಟ್ರೀಯ ಹಿಂದು ಪರಿಷತ್ (ಎಎಚ್ ಪಿ) ನೇತೃತ್ವದಲ್ಲೂ ನೂರಾರುಕಾರ್ಯಕರ್ತರು ಮೆರವಣಿಗೆ ನಡೆಸಿದರು. ಎಡರಂಗ ಸರ್ಕಾರವು ಸುಪ್ರೀಂಕೋರ್ಟ್ಆದೇಶವನ್ನು ಅನುಷ್ಠಾನಗೊಳಿಸಿದರೆ, ಅಕ್ಟೋಬರ್ ೧೮ರಂದು ರಾಜ್ಯದಲ್ಲಿ ಮುಷ್ಕರ ನಡೆಸುವಂತೆ ಎಎಚ್ ಪಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಕರೆ ನೀಡಿದರುಯುವ ಮೋರ್ಚಾ ಕಾರ್ಯಕರ್ತg ಒಂದು ಗುಂಪು ಉತ್ತರ ಕಣ್ಣೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸಕ್ಕೆ ಮೆರವಣಿಗೆ ನಡೆಸಿತು. ನಿವಾಸದಿಂದ ಕೆಲವೇ ಕಿಲೋಮೀಟರ್ ದೂರದಲಿ ಅಡೆತಡೆ ಹಾಕುವ ಮೂಲಕ ಆಂದೋಲನಗಾರರನ್ನು ಪೊಲೀಸರು ನಿರ್ಬಂಧಿಸಿದರು. ಸೆಪ್ಟೆಂಬರ್ ೨೮ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವುಋತುಮತಿ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶದ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿತ್ತು.

2018: ಬೆಂಗಳೂರು: ಹಿರಿಯ ಪತ್ರಕರ್ತ ಕೆ.ಸಿ.ಸದಾನಂದ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯ ಅಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಹಿಂದಿನವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯದಂತೆ  ಈ ನೇಮಕಕ್ಕೆ ಅನುಮೋದನೆ ನೀಡಲಾಗಿತ್ತು.  ೨೦೧೮ ಮೇ ೨೫ರಿಂದ ಪೂರ್ವಾನ್ವಯ ಆಗುವಂತೆ ಕೆ.ಸಿ.ಸದಾನಂದ ಅವರನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯ ಅಧಿಕಾರಿಯನ್ನಾಗಿ ನೇಮಕ ಮಾಡಲಾಯಿತು.  ಈ ಹಿಂದೆ ಸದಾನಂದ  ಅವರು ಮುಂಬೈನ ಕರ್ನಾಟಕ ಮಲ್ಲ ಪತ್ರಿಕೆಯಲ್ಲಿ ಎರಡು ವರ್ಷ, ಬೆಂಗಳೂರಿನ ಸಂಜೆವಾಣಿ ಪತ್ರಿಕೆಯಲ್ಲಿ ೧೨ ವರ್ಷ ಹಾಗೂ ಕನ್ನಡಪ್ರಭ ಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಕಳೆದ ೧೦ ವರ್ಷಗಳಿಂದ ಕೆ.ಸಿ. ಸದಾನಂದ ಅವರು ಎಚ್.ಡಿ.ಕುಮಾರಸ್ವಾಮಿ ಅವರ ಮಾಧ್ಯಮ ನಿರ್ವಹಣೆ ಮಾಡುತ್ತಿದ್ದರು.
  

2016: ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ ಸಂಸದೀಯ ಕ್ಷೇತ್ರವಾಗಿರುವ ವಾರಾಣಸಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು 24 ಮಂದಿ ಸಾವನ್ನಪ್ಪಿ, 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ರಾಜಘಾಟ್ ಸೇತುವೆಯಲ್ಲಿ ದುರಂತ ಸಂಭವಿಸಿದ್ದು, ಗಾಯಾಳುಗಳ ಸಂಖ್ಯೆ 20ಕ್ಕೂ ಹೆಚ್ಚಿದೆ ಎಂದು ಹೇಳಲಾಯಿತು. ಸಾವನ್ನಪ್ಪಿದವರಲ್ಲಿ ಬಹುತೇಕ ಮಂದಿ ಮಹಿಳೆಯರು.
ಜೈ ಗುರುದೇವ ಸಭಾ ಸಮಾರಂಭದಲ್ಲಿ ಕಾಲ್ತುಳಿತದ ಘಟನೆ ಘಟಿಸಿತು. ಧಾರ್ಮಿಕ ಗುರು ಸಂಘಟಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸಹಸ್ರಾರು ಭಕ್ತರು ಆಶ್ರಮಕ್ಕೆ ಹೋಗುವ ಸಲುವಾಗಿ ಒಮ್ಮಿಂದೊಮ್ಮೆಗೇ ಸೇತುವೆ ದಾಟಲು ಯತ್ನಿಸಿದಾಗ, ಒಬ್ಬ ವ್ಯಕ್ತಿ ಉಸಿರು ಕಟ್ಟಿ ಸತ್ತದ್ದರ ಜೊತೆಗೆ ಸೇತುವೆ ಕುಸಿಯಿತು ಎಂಬ ವದಂತಿ ಹರಡಿ ನೂಕು ನುಗ್ಗಲು ಸಂಭವಿಸಿತು. ಪರಿಣಾಮವಾಗಿ ಕಾಲ್ತುಳಿತ ಉಂಟಾಯಿತು ಎಂದು ವರದಿಗಳು ತಿಳಿಸಿದವು. 4000 ಮಂದಿ ಬರಬಹುದೆಂದು ನಿರೀಕ್ಷಿಸಲಾಗಿದ್ದ ಸಮಾರಂಭಕ್ಕೆ 50,000 ಮಂದಿ ಆಗಮಿಸಿದ್ದರಿಂದ ಗುಂಪನ್ನು ನಿಯಂತ್ರಿಸುವುದು ಆಡಳಿತಕ್ಕೆ ಕಷ್ಟಕರವಾಗಿ ಪರಿಣಮಿಸಿತು ಎಂದೂ ಮೂಲಗಳು ಹೇಳಿದವು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಪ್ರತ್ಯೇಕವಾಗಿ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ 50,000 ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ. ಘಟನೆಯ ತನಿಖೆಗೂ ಯಾದವ್ ಆಜ್ಞಾಪಿಸಿದರು. ಮೋದಿ ಸಂತಾಪ: ಕಾಲ್ತುಳಿತದಲ್ಲಿ ಆಗಿರುವ ಪ್ರಾಣಹಾನಿಗೆ ತೀವ್ರ ದುಃಖ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದರು. ಗಾಯಾಳುಗಳು ಗುಣಮುಖರಾಗಲಿ ಎಂದು ಹಾರೈಸಿದರು. ದುರಂತದಲ್ಲಿ ತೊಂದರೆಗೆ ಒಳಗಾದವರಿಗೆ ಎಲ್ಲ ರೀತಿಯ ನೆರವು ಒದಗಿಸುವಂತೆ ಅಧಿಕಾರಿಗಳನ್ನು ಸಂರ್ಪಸಿ ಸೂಚಿಸಿರುವುದಾಗಿಯೂ ಮೋದಿ ನುಡಿದರು. ಕಾಂಗ್ರೆಸ್ ಅದ್ಯಕ್ಷೆ ಸೋನಿಯಾಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಸೋಕ ವ್ಯಕ್ತ ಪಡಿಸಿದರು.
2016: ಪಣಜಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ಸಮ್ಮುಖದಲ್ಲಿ ಭಾರತ ಮತ್ತು ರಷ್ಯಾ 16 ಮಹತ್ವದ ಒಪ್ಪಂದಗಳು ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಮೂರು ಪ್ರಕಟಣೆಗಳಿಗೆ ಸಹಿ ಮಾಡಿದವು. ಸೇನೆ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಸಹಕಾರ ವರ್ಧನೆಗೆ ಸಂಬಂಧಿಸಿದ ಒಪ್ಪಂಗಳು ಇವುಗಳಲ್ಲಿ ಸೇರಿವೆ. ವಿಜ್ಞಾನ- ತಂತ್ರಜ್ಞಾನ ಆಯೋಗ ರಚನೆಗೆ ಉಭಯರಾಷ್ಟ್ರಗಳು ಸಮ್ಮತಿಸಿದವು. ಸಹಿಯ ಬಳಿ ಒಪ್ಪಂದ ಪ್ರತಿಗಳನ್ನು ಉಭಯ ರಾಷ್ಟ್ರಗಳ ನಿಯೋಗಗಳ ಪ್ರಮುಖರು ವಿನಿಮಯ ಮಾಡಿಕೊಂಡರು. ಗೋವಾದ ರಾಜಧಾನಿ ಪಣಜಿಯಲ್ಲಿ ಎರಡುದಿನಗಳ ಕಾಲ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಗೆ ಚಾಲನೆ ಸಿಕ್ಕಿದ್ದು, ದ್ವಿಪಕ್ಷೀಯ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಉಭಯ ರಾಷ್ಟ್ರಗಳ ನಿಯೋಗ ಮಟ್ಟದ ಮಾತುಕತೆಯೂ ನಡೆಯಿತು.

2016: ಪಣಜಿ (ಗೋವಾ): ಭಾರತ ಮತ್ತು ರಷ್ಯಾ ಉಜ್ವಲ ಭವಿಷ್ಯದೆಡೆಗೆ ಮುನ್ನಡೆಯುತ್ತಿದ್ದು, ಸೇನೆ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ನಿರ್ಧರಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಭಾರತ ಮತ್ತು ರಷ್ಯಾ 16 ಮಹತ್ವದ ಒಪ್ಪಂದಗಳು ಮತ್ತು 3 ಪ್ರಕಟಣೆಗಳಿಗೆ ಸಹಿ ಮಾಡಿದ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ರಚನೆಗೆ ನಾವು ನಿರ್ಧರಿಸಿದ್ದೇವೆ. ಆರ್ಥಿಕ ಕ್ಷೇತ್ರ, ವ್ಯಾಪಾರ, ಕೈಗಾರಿಕೆ. ರಕ್ಷಣಾ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ನಾವು ಒಪ್ಪಿದ್ದೇವೆ ಎಂದು ಅವರು ನುಡಿದರು.
ಭಯೋತ್ಪಾದನೆಯನ್ನು ನಿಗ್ರಹಿಸಬೇಕಾದ ಅಗತ್ಯ ಇದೆ ಎಂಬ ರಷ್ಯಾದ ನಿಲುವು ನಮ್ಮ ನಿಲುವಿನ ಪ್ರತಿಬಿಂಬವಾಗಿದೆ. ಭಯೋತ್ಪಾದನೆಯನ್ನು ಮತ್ತು ಆಫ್ಘಾನಿಸ್ತಾನದಲ್ಲಿನ ಸ್ಥಿತಿಯನ್ನು ಸಹಿಸಬಾರದು ಎಂದು ಉಭಯರೂ ಒಪ್ಪಿದ್ದೇವೆ. ಗಡಿಯಾಚೆಯ ಭಯೋತ್ಪಾದನೆ ಇಡೀ ಪ್ರದೇಶಕ್ಕೆ ಬೆದರಿಕೆ ಒಡ್ಡಿದೆ ಎಂಬ ಹಿನ್ನೆಲೆಯಲ್ಲಿ ಅದರ ವಿರುದ್ಧದ ನಮ್ಮ ಕ್ರಮಗಳನ್ನು ರಷ್ಯಾ ಅರ್ಥ ಮಾಡಿಕೊಂಡಿರುವುದಕ್ಕೆ ನಮ್ಮ ಅತೀವ ಮೆಚ್ಚುಗೆ ಇದೆ ಎಂದು ಮೋದಿ ಹೇಳಿದರು. ಕಳೆದ ನಾಲ್ಕು ತಿಂಗಳುಗಳಲ್ಲಿ ಹೈಡ್ರೋಕಾರ್ಬನ್ ರಂಗದಲ್ಲಿ ಭಾರತೀಯ ಕಂಪೆನಿಗಳು ರಷ್ಯಾದ ತೈಲ ಮತ್ತು ಅನಿಲ ರಂಗದಲ್ಲಿ 5.5 ಬಿಲಿಯನ್ (550 ಕೋಟಿ) ಡಾಲರ್ ಗಳಷ್ಟು ಹಣವನ್ನು ಹೂಡಿಕೆ ಮಾಡಿವೆ ಎಂದು ಅವರು ನುಡಿದರು. ಉಭಯ ರಾಷ್ಟ್ರಗಳ ಕಂಪೆನಿಗಳು ಕೈಗಾರಿಕೆ, ಸೇನೆ ಮತ್ತು ತಾಂತ್ರಿಕ ಸಹಕಾರ ಕ್ಷೇತ್ರಗಳಲ್ಲಿನ ಸಹಕಾರವನ್ನು ವಿಸ್ತರಿಸುತ್ತಿವೆ ಎಂದು ಪುಟಿನ್ ಹೇಳಿದರು.
2016: ಗೋವಾ: ಭಯೋತ್ಪಾದನೆ ನಿರ್ಮೂಲನೆಗಾಗಿಶೂನ್ಯ ಸೈರಣ ನೀತಿಗೆ ಭಾರತ ಮತ್ತು ರಷ್ಯಾ ಸಹಿ ಮಾಡಿವೆ. ಇದೇ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಭಾರತದಹಳೆಯ ಗೆಳೆಯಎಂದು ಹೇಳಿದರು. ಒಪ್ಪಂದದ ವಿವರಗಳು:  * ಕಾಮೋವ್‌ –ಕೆಎ226 ಹೆಲಿಕಾಪ್ಟರ್ಉತ್ಪಾದನಾ ಒಪ್ಪಂದ,, * ಎಸ್‌400 ಕ್ಷಿಪಣಿ ವ್ಯವಸ್ಥೆ ಒಪ್ಪಂದ,, * ಭಯೋತ್ಪಾದನಾ ಚಟುವಟಿಕೆಗಳಿಗೆ ತಕ್ಕ ಉತ್ತರ ನೀಡಲುಜೀರೋ ಟಾಲರೆನ್ಸ್ಪಾಲಿಸಿ’(ಶೂನ್ಯ ಸೈರಣ ನೀತಿ), * ಕೂಡುಕುಳಂ ಅಣುಸ್ಥಾವರದ 3 ಮತ್ತು 4ನೇ ಘಟಕಗಳ ಕಾಮಗಾರಿಗೆ ಚಾಲನೆ. ಕೂಡಂಕುಳಮ್ ಅಣುಸ್ಥಾವರದ 2ನೇ ಘಟಕದಲ್ಲಿ ವಿದ್ಯುತ್  ಉತ್ಪಾದನೆ ಆರಂಭ, * ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ ರಚನೆ ಸ್ಥಾಪನೆ,  * ಆಂಧ್ರ ಪ್ರದೇಶದಲ್ಲಿ ಹಡಗು ನಿರ್ಮಾಣ ಮತ್ತು ಪರಿಣತ ತರಬೇತಿ, * ಹರಿಯಾಣ ಸ್ಮಾರ್ಟ್ಸಿಟಿ ಯೋಜನೆ,  * ರಾಸ್ನೆಫ್ಟ್ಮತ್ತು ಎಸ್ಸಾರ್ತೈಲ ಶುದ್ಧೀಕರಣ ಮೂಲಸೌಕರ್ಯ ಅಭಿವೃದ್ಧಿ, * ರಾಸ್ನೆಫ್ಟ್ಮತ್ತು ಒವಿಎಲ್ಇಂಧನ, * ನಾಗಪುರ ಸಿಕಂದರಾಬಾದ್ಹೈದರಾಬಾದ್ಹೈ ಸ್ಪೀಡ್ರೈಲು ಯೋಜನೆ, * ಇಂಧನ ಸಹಕಾರ ಒಪ್ಪಂದ 2016 ಮತ್ತು 2017, * ಭಾರತ ಮತ್ತು ರಷ್ಯಾ ನಡುವಿನ ಸಚಿವಾಲಯಗಳ ನಡುವಿನ ಸಮಾಲೋಚನೆಗೆ ಶಿಷ್ಟಾಚಾರ ಸಂಹಿತೆ,  * ಸೈಬರ್ರಕ್ಷಣೆ, * ಜಾಗತಿಕ ರಕ್ಷಣೆ ಕುರಿತಂತೆ ಭಾರತ ಮತ್ತು ರಷ್ಯಾ ಜಂಟಿ ಒಪ್ಪಂದ, * ರಷ್ಯಾದಿಂದ ಯುದ್ಧನೌಕೆ ಖರೀದಿ ಕುರಿತು ಸರ್ಕಾರದ ಆಂತರಿಕ ಒಪ್ಪಂದ.
2016: ಕಿಗಾಲಿ: ಇಂಗಾಲದ ಡೈಆಕ್ಸೈಡ್ಗಿಂತಲೂ ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಸಾವಿರ ಪಟ್ಟು ಅಧಿಕ ಪ್ರಭಾವ ಬೀರುವ  ಹೈಡ್ರೋಫ್ಲೂರೋಕಾರ್ಬನ್‌ (ಎಚ್ಎಫ್ಸಿ) ನಿಯಂತ್ರಿಸಲು ರುವಾಂಡಾದ ಕಿಗಾಲಿಯಲ್ಲಿ ಅಧಿಕೃತ ಒಪ್ಪಂದಕ್ಕೆ ಬರಲಾಯಿತು.  ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುವ ಪ್ರಭಾವಯುತ ಹಸಿರುಮನೆ ಅನಿಲ ಉತ್ಪಾದನೆ ನಿಯಂತ್ರಣ ಹಾಗೂ 2050 ವೇಳೆಗೆ 0.5 ಸೆಲ್ಸಿಯಸ್ಉಷ್ಣಾಂಶ ಏರಿಕೆಯನ್ನು ನಿಯಂತ್ರಿಸುವ ಒಪ್ಪಂದಕ್ಕೆ 200 ರಾಷ್ಟ್ರಗಳು ಒಮ್ಮತ ಸೂಚಿಸಿದವು. ಗೃಹ ಮತ್ತು ಕಾರುಗಳ ಹವಾನಿಯಂತ್ರಕಗಳಲ್ಲಿ ಶೈತ್ಯಕಾರಿಯಾಗಿ ಹೈಡ್ರೋಫ್ಲೂರೋಕಾರ್ಬನ್‌ (ಎಚ್ಎಫ್ಸಿ) ಅನಿಲ ಹೆಚ್ಚು ಬಳಕೆಯಾಗುತ್ತಿದೆ. ಜಾಗತಿಕ ತಾಪಮಾನ ಹೆಚ್ಚಳದಲ್ಲಿ ಇದರ ಪ್ರಭಾವ ಅಧಿಕವಾಗಿದ್ದು, 2045 ವೇಳೆಗೆ ಶೇ.85ರಷ್ಟು ಎಚ್ಎಫ್ಸಿ ಬಳಕೆ ತಗ್ಗಿಸುವ ನಿಟ್ಟಿನಲ್ಲಿ ಭಾರತ, ಚೀನಾ, ಅಮೆರಿಕ ಹಾಗೂ ಯುರೋಪ್ ಹಿಂದಿನ ದಿನ ಸಮ್ಮತಿಸಿದ್ದವು. ಅತಿ ಹೆಚ್ಚು ಎಚ್ಎಫ್ಸಿ ಉತ್ಪಾದಕ ರಾಷ್ಟ್ರವಾಗಿರುವ ಚೀನಾ 2045ರಲ್ಲಿ ಶೇ.80 ಬಳಕೆ ಕಡಿಮೆ ಮಾಡುವ ಗುರಿ ಹೊಂದಿದೆಕ್ಲೋರೋಡೈಫ್ಲೂರೋಮಿಥೇನ್‌ (ಎಚ್ಸಿಎಫ್ಸಿ–22) ಉಪ ಉತ್ಪನ್ನವಾಗಿರುವ ಟ್ರೈಫ್ಲೂರೋಮಿಥೇನ್‌(ಎಚ್ಎಫ್ಸಿ–23) ಶಕ್ತಿಯುವ ಹಸಿರುಮನೆ ಅನಿಲವಾಗಿದ್ದು, ಭಾರತ ಇದರ ನಿಯಂತ್ರಣಕ್ಕೆ ಈಗಾಗಲೇ ಕಾರ್ಯತಂತ್ರ ಪ್ರಕಟಿಸಿದೆ. ಎಚ್ಸಿಎಫ್ಸಿ–22 ದೇಶದಲ್ಲಿ ಶೈತ್ಯಕಾರಿಯಾಗಿ ಹೆಚ್ಚು ಬಳಕೆಯಲ್ಲಿದೆ.

2016: ಮುಂಬೈ: ಸಿಮ್ರಾನ್‌’ ಚಿತ್ರದ ಚಿತ್ರೀಕರಣಕ್ಕೆಂದು ಅಮೆರಿಕಕ್ಕೆ ತೆರಳಿದ ಬಾಲಿವುಡ್ನಟಿ ಕಂಗನಾ ಅವರ ಕಾರು ಅಪಘಾತಕ್ಕೀಡಾದ ಘಟನೆ ಈದಿನ ಘಟಿಸಿತು.  29 ವರ್ಷದ ನಟಿ ಕಂಗನಾಸಿಮ್ರಾನ್‌’ ಚಿತ್ರದ ಚಿತ್ರೀಕರಣ ಮುಗಿಸಿ ಹೊಟೇಲ್ಗೆ ಹಿಂದಿರುಗುತ್ತಿದ್ದಾಗ ಅಟ್ಲಾಂಟಾದ ಸಮೀಪ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿತು. ಘಟನೆಯಲ್ಲಿ ಕಂಗನಾ ಅವರಿಗೆ ಕಣ್ಣಿ ಹುಬ್ಬು ಬಳಿ ಬಳಿ ಸಣ್ಣ ಗಾಯವಾಗಿದ್ದು, ಅತಂಕಪಡುವ ಅಗತ್ಯವಿಲ್ಲ ಶೀಘ್ರವೇ ಚಿತ್ರಕರಣಕ್ಕೆ ಮರಳಲ್ಲಿದ್ದಾರೆ ಎಂದು ಕಂಗನಾ ಅವರ ಆಪ್ತ ಮೂಲಗಳು ತಿಳಿಸಿದವು. ‘ಸಿಮ್ರಾನ್‌’ ಚಿತ್ರವನ್ನು ಹನ್ಸಾಲ್ಮೆಹ್ತಾ ನಿರ್ದೇಶಿಸುತ್ತಿದ್ದಾರೆ.
2016: ಪಣಜಿ (ಗೋವಾ): ಟಿಬೆಟ್ನ್ನು ಅಕ್ರಮವಾಗಿ ಅತಿಕ್ರಮಿಸಿ ಕೊಂಡಿರುವುದನ್ನು ಪ್ರತಿಭಟಿಸಿ ಟಿಬೆಟ್ ಪ್ರಜೆಗಳು ಬ್ರಿಕ್ಸ್ ಸಮ್ಮೇಳನಕ್ಕಾಗಿ ಆಗಮಿಸಿದ ಚೀನಾ ವಿರುದ್ಧ ಮಾಗೋವಾದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು. ’ಟಿಬೆಟ್ನ್ನು ಮುಕ್ತ ಗೊಳಿಸಿ, ಅತಿಕ್ರಮಣಕ್ಕೆ ಕೊನೆಹಾಡಿ’ (ಫ್ರೀ ಟಿಬೆಟ್ ಆಂಡ್ ಎಂಡ್ ದಿ ಆಕ್ಯುಪೇಷನ್), ‘ಚೀನಾ ಈಗಲೇ ಟಿಬೆಟ್ನಿಂದ ಹೊರಕ್ಕೆ ಹೋಗು’ (ಚೈನಾ ಔಟ್ ಆಫ್ ಟಿಬೆಟ್ ನೌ) ಘೊಷಣೆಗಳಿದ್ದ ಫಲಕಗಳನ್ನು ಅವರು ಹಿಡಿದುಕೊಂಡಿದ್ದರು. ಟಿಬೆಟ್ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದರು.

2016: ಖೋಸ್ಟ್ (ಅಫ್ಘಾನಿಸ್ತಾನ): ಪಾಕಿಸ್ತಾನ ಸೇನೆಯ ಮತ್ತೊಂದು ಕರಾಳ ಮುಖ ಬಯಲಾಯಿತು. ಪಾಕ್ ಸೇನೆಯ ಹಠಾತ್ ದಾಳಿಗೆ ಬೆದರಿರುವ ಅರ್ಧ ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಗಳು ಗಡಿದಾಟಿ ಅಫ್ಘಾನಿಸ್ತಾನ ಸೇರಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿದವು. ಖೋಸ್ಟ್ ಪ್ರಾಂತ್ಯದ ಗಡಿ ಪ್ರದೇಶಗಳಲ್ಲಿನ ಸಾವಿರಾರು ನಿರಾಶ್ರಿತರ ಗುಡಿಸಲುಗಳಲ್ಲಿ ತಂಗಿದ್ದು, ಭಯದಲ್ಲಿಯೇ ದಿನ ಕಳೆಯುತ್ತಿರುವುದಾಗಿ ವರದಿಯಾಯಿತು. ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಪ್ರದೇಶವಾದ ಡಟ್ಟಾ ಖೇಲ್ ಪರ್ವತ ಪ್ರದೇಶಗಳಿಂದ ಅಂದಾಜು 20 ಕಿಲೋಮೀಟರ್ ದೂರಕ್ಕೆ ಕ್ರಮಿಸಿ ಬಂದಿರುವ ಪಾಕಿಸ್ತಾನಿಗಳು ಸೇನೆಯ ದಾಳಿಗೆ ಬೆದರಿ ಬಂದಿರುವುದಾಗಿ ಹೇಳಿದರು. ಉತ್ತರ ವಾಜಿರಿಸ್ತಾನಗಳಲ್ಲಿನ ಬುಡಕಟ್ಟು ಜನಾಂಗಕ್ಕೆ ಸೇರಿದವರು ಅಫ್ಘನ್ನತ್ತ ಸ್ಥಳಾಂತರಗೊಂಡಿದ್ದಾರೆ ಎಂದೂ ಹೇಳಲಾಯಿತು.

2016: ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ .ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 85ನೇ ಜನ್ಮ ದಿನದ ಅಂಗವಾಗಿ ಪುಷ್ಪಾಂಜಲಿ ಹಾಗೂ ಟ್ವೀಟ್ ಮೂಲಕ ಗೌರವ ಸಲ್ಲಿಸಿದರು.  2002ರಿಂದ 2007ರವರೆಗೆ ರಾಷ್ಟ್ರಪತಿಯಾಗಿ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಎಂಬ ಖ್ಯಾತಿ ಪಡೆದಿದ್ದ ಕಲಾಂ ಅವರು ಕಳೆದ ವರ್ಷ ಜುಲೈ 27ರಂದು ನಿಧನರಾಗಿದ್ದರು. ‘ಮುಖರ್ಜಿಯವರು ರಾಷ್ಟ್ರಪತಿ ಭವನದಲ್ಲಿ ಜನ್ಮದಿನದ ಅಂಗವಾಗಿ .ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪುಷ್ಪಾಂಜಲಿ ಸಲ್ಲಿಸಿದರು. ರಾಷ್ಟ್ರಪತಿ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಲಾಂ ಅವರ ಕುಟುಂಬ ಸದಸ್ಯರ ಜೊತೆಗೂಡಿ ಪುಷ್ಪಾಂಜಲಿ ಸಲ್ಲಿಸಿದರುಎಂದು ರಾಷ್ಟ್ರಪತಿ ಭವನದ ಪತ್ರಿಕಾ ಪ್ರಕಟಣೆ ತಿಳಿಸಿತು. ಗೋವಾದ ಪಣಜಿಗೆ ಬ್ರಿಕ್ಸ್ ಶೃಂಗ ಸಭೆಗಾಗಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ರಾಷ್ಟ್ರಪತಿ ಹಾಗೂ ಭಾರತದಕ್ಷಿಪಣಿ ಮಾನವಅಬ್ದುಲ್ ಕಲಾಂ ಅವರನ್ನು ಜನ್ಮದಿನದ ಸಂದರ್ಭದಲ್ಲಿ ಟ್ವೀಟ್ ಮೂಲಕ ಸ್ಮರಿಸಿ ತಮ್ಮ ಗೌರವ ಸಲ್ಲಿಸಿದರು. ‘ಪ್ರತಿಯೊಬ್ಬ ಭಾರತೀಯನ ಕಲ್ಪನೆಯನ್ನು ಸೆರೆ ಹಿಡಿದ ವ್ಯಕ್ತಿ, ನಮ್ಮ ಮಾಜಿ ರಾಷ್ಟ್ರಪತಿ ಡಾ. .ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶ್ರದ್ಧಾಂಜಲಿಗಳುಎಂದು ಮೋದಿ ಟ್ವೀಟ್ ಮಾಡಿದರು.

2016: ರಾಮೇಶ್ವರಂ: ಮಾಜಿ ರಾಷ್ಟ್ರಪತಿ .ಪಿ.ಜೆ.ಅಬ್ದುಲ್ ಕಲಾಂ 85ನೇ ಹುಟ್ಟುಹಬ್ಬದ ಅಂಗವಾಗಿ ಅವರ ಸ್ಮಾರಕ ಕಟ್ಟಡ ನಿರ್ಮಾಣ ಕಾರ್ಯಕ್ಕೆ ರಾಮೇಶ್ವರಂನಲ್ಲಿ ಚಾಲನೆ ನೀಡಲಾಯಿತು. ಅಬ್ದುಲ್ ಕಲಾಂ ಅವರ ಹಿರಿಯ ಸಹೋದರ ಮುತ್ತುಮೀರನ್ ಮರೈಕಯರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಸಂದರ್ಭದಲ್ಲಿ ಕಲಾಂ ಕುಟುಂಬದ ಸದಸ್ಯರು, ವಿದ್ಯಾರ್ಥಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು. ಕಟ್ಟಡ ನಿರ್ಮಾಣ ಕಾಮಗಾರಿ ಪರಿಶೀಲಿಸಲು ಡಿಆರ್ಡಿಒದ ಅಧಿಕಾರಿಗಳ ತಂಡ ರಾಮೇಶ್ವರಂಗೆ ಭೇಟಿ ನೀಡಿತ್ತು. ಸ್ಥಳೀಯ ಅಧಿಕಾರಿಗಳೊಂದಿಗೆ ಕಾಮಗಾರಿಯ ಸಿದ್ಧತೆಗಳ ಕುರಿತು ಚರ್ಚೆ ನಡೆಸಿತ್ತು. ಕೇಂದ್ರ ಸರ್ಕಾರ ಸ್ಮಾರಕ ನಿರ್ಮಾಣಕ್ಕಾಗಿ 50 ಕೋಟಿ ರೂ. ಮಂಜೂರು ಮಾಡಿದೆ. ಮೊದಲ ಹಂತದಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಒಟ್ಟು 27 ಸಾವಿರ ಚದರಡಿ ವಿಸ್ತೀರ್ಣದಲ್ಲಿ ಸ್ಮಾರಕ ಕಟ್ಟಡ ನಿರ್ಮಾಣವಾಗಲಿದೆ ಎಂದು ಡಿಆರ್ಡಿಒ ತಂಡದ ಸದಸ್ಯ ಪಿ.ಕೆ.ಸಿಂಗ್ ತಿಳಿಸಿದರು. ಸ್ಮಾರಕ ನಿರ್ಮಾಣ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. 2017 ಜುಲೈ 27ರಂದು ಕಲಾಂ ಅವರ 2ನೇ ಪುಣ್ಯತಿಥಿಯ ಸಂದರ್ಭದಲ್ಲಿ ಸ್ಮಾರಕವನ್ನು ಉದ್ಘಾಟಿಸಲು ಯೋಜಿಸಿದ್ದೇವೆ. ಎರಡನೇ ಹಂತದಲ್ಲಿ ಜ್ಞಾನ ಕೇಂದ್ರದ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ಸಿಂಗ್ ತಿಳಿಸಿದರು.
2016: ಇಸ್ಲಾಮಾಬಾದ್‌: ವಿದೇಶ ಪ್ರವಾಸ ಕೈಗೊಳ್ಳದಂತೆ ಪತ್ರಕರ್ತ ಸಿರಿಲ್ಅಲ್ಮೀಡಾ ಅವರ
ಮೇಲೆ ವಿಧಿಸಿದ್ದ ನಿಷೇಧವನ್ನು ಪಾಕಿಸ್ತಾನ ಹಿಂದಕ್ಕೆ ಪಡೆಯಿತು. ನಾಗರಿಕರು ಮತ್ತು ಸೇನಾ ನಾಯಕತ್ವದ ನಡುವೆ ನಡೆದ ಪ್ರಮುಖ ಸಭೆಯಲ್ಲಿ ಉಂಟಾದ ಮನಸ್ತಾಪ ಕುರಿತು ವರದಿ ಮಾಡಿದ್ದಕ್ಕೆ ಸಿರಿಲ್ವಿರುದ್ಧ ಪಾಕಿಸ್ತಾನ ಕೈಗೊಂಡ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಕ್ರಮಕ್ಕೆ ಪತ್ರಕರ್ತರು ಮತ್ತು ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾದ ಕಾರಣ ಸರ್ಕಾರ ಒತ್ತಡಕ್ಕೆ ಮಣಿದು ನಿಷೇಧವನ್ನು ರದ್ದುಪಡಿಸಿತು. ಡಾನ್ಪತ್ರಿಕೆಯ ವರದಿಗಾರ ಮತ್ತು ಅಂಕಣಕಾರರಾಗಿರುವ ಸಿರಿಲ್ಅವರ ಹೆಸರನ್ನು ಪಾಕಿಸ್ತಾನ ಸರ್ಕಾರವು ದೇಶದಿಂದ ಹೊರ ಹೋಗದಂತೆ ನಿರ್ಬಂಧಿಸಿರುವ ಜನರ ಪಟ್ಟಿಯಲ್ಲಿ ಸೇರಿಸಿದ್ದನ್ನು ತೆಗೆದು ಹಾಕಲಾಗಿದೆ ಎಂದು ಅಧಿಕೃತವಾಗಿ ತಿಳಿಸಲಾಯಿತು.

2016: ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಯಿತು. ಪೆಟ್ರೋಲ್ ದರ ಲೀಟರ್ಗೆ 1.34 ರೂಪಾಯಿಯಷ್ಟು ಏರಿಕೆಯಾಗಿದ್ದು, ಡೀಸೆಲ್ ದರ ಲೀಟರ್ಗೆ 2.37 ರೂಪಾಯಿ ಏರಿಕೆಯಾಯಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸಲಾಯಿತು.

2008: ಬುಕ್ಕಿಗಳು ಸೇರಿದಂತೆ ಎಲ್ಲರ ನಿರೀಕ್ಷೆ ಮೀರಿ ಭಾರತದ ಲೇಖಕ ಅರವಿಂದ್ ಅಡಿಗ (33) ಅವರ
`ದಿ ವೈಟ್ ಟೈಗರ್' ಕಾದಂಬರಿಗೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಲಭಿಸಿತು.. ಇದರೊಂದಿಗೆ ಅರವಿಂದ ಅಡಿಗ ಅವರು ಬೂಕರ್ ಪ್ರಶಸ್ತಿ ಪಡೆದ ಐದನೇ ಭಾರತೀಯರೆನಿಸಿದರು. ಕಣದಲ್ಲಿ ಅಂತಿಮ ಹಂತದಲ್ಲಿದ್ದ ಭಾರತದವರೇ ಆದ ಅಮಿತಾವ್ ಘೋಷ್, ಸ್ಟೀವ್ ಟೋಲ್ಟಾ, ಲಿಂಡಾ ಗ್ರಾಂಟ್ ಹಾಗೂ ಫಿಲಿಪ್ ಹೆನ್ಶೆರ್ ಅವರನ್ನು ಹಿಂದಿಕ್ಕಿ ಅರವಿಂದ್ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. 87 ಸಾವಿರ ಅಮೆರಿಕ ಡಾಲರ್ (ರೂ.40,02 ಲಕ್ಷ) ಮೊತ್ತದ ಪ್ರಶಸ್ತಿ ಇದು. ಇದಕ್ಕೂ ಮುಂಚೆ ಭಾರತ ಮೂಲದ ವಿ.ಎಸ್. ನೈಪಾಲ್ (1971), ಸಲ್ಮಾನ್ ರಶ್ದಿ (1981), ಅರುಂಧತಿ ರಾಯ್ (1997) ಹಾಗೂ ಕಿರಣ್ ದೇಸಾಯಿ (2006) ಅವರಿಗೆ ಈ ಗೌರವ ಲಭಿಸಿತ್ತು. ಕೃತಿಯ ಕುರಿತಂತೆ ಪ್ರತಿಕ್ರಿಯಿಸಿದ ತೀರ್ಪುಗಾರರ ಮಂಡಳಿಯು ಅಧ್ಯಕ್ಷ ಮಿಖೇಲ್ ಪೊರ್ಟಿಲೊ ಅವರು `ಬಹಳಷ್ಟು ಅರ್ಥದಲ್ಲಿ ಇದೊಂದು ಪರಿಪೂರ್ಣ ಕಾದಂಬರಿ' ಎಂದು ಅಭಿಪ್ರಾಯಪಟ್ಟರು. 1974ರಲ್ಲಿ ಚೆನ್ನೈಯಲ್ಲಿ ಹುಟ್ಟಿದ ಅರವಿಂದ್ ಅವರು ಬೆಳೆದದ್ದು ಕರ್ನಾಟಕದ ಮಂಗಳೂರು ಹಾಗೂ ಆಸ್ಟ್ರೇಲಿಯಾದಲ್ಲಿ. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡಿದ ಇವರು ಪತ್ರಕರ್ತರಾಗಿ ತಮ್ಮ ವೃತ್ತಿ ಆರಂಭಿಸಿದರು. ಹಲವು ಪ್ರಮುಖ ಇಂಗ್ಲಿಷ್ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಇವರದು. ಸದ್ಯಕ್ಕೆ ಇವರ ವಾಸ ಮುಂಬೈಯಲ್ಲಿ.

2008: ಡಿಎಂಕೆಯ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಪಕ್ಷದ ಮುಖ್ಯಸ್ಥರೂ ಮತ್ತು ತಮ್ಮ ತಂದೆಯವರಾದ ಎಂ ಕರುಣಾನಿಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕನಿಮೋಳಿ ಸಲ್ಲಿಸಿದರು. ಶ್ರೀಲಂಕಾ ತಮಿಳರ ವಿಷಯಕ್ಕೆ ಸಂಬಂಧಿಸಿದಂತೆ ಹದಿನೈದು ದಿನದೊಳಗಾಗಿ ತಮಿಳುನಾಡಿನ ಲೋಕಸಭಾ ಸದಸ್ಯರೆಲ್ಲರೂ ರಾಜೀನಾಮೆ ನೀಡಬೇಕೆಂಬ ನಿರ್ಣಯವನ್ನು ಹಿಂದಿನ ದಿನ ನಡೆದ ಸರ್ವ ಪಕ್ಷ ಸಭೆಯಲ್ಲಿ ಅಂಗೀಕರಿಸಲಾಗಿತ್ತು.

2008: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 2ರಿಂದ ಜಾರಿಗೆ ತಂದಿರುವ ಕಾನೂನನ್ನು ಕ್ಲಬ್ಬುಗಳೂ ಪಾಲಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡುವ ಮೂಲಕ ಕ್ಲಬ್ಬುಗಳಲ್ಲಿ ಧೂಮಪಾನಕ್ಕೆ ಸಂಬಂಧಿಸಿಂದಂತೆ ಉಂಟಾಗಿದ್ದ ಗೊಂದಲಗಳಿಗೆ ತೆರೆ ಎಳೆಯಿತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕಾನೂನನ್ನು ಕ್ಲಬ್ಬುಗಳೂ ಪಾಲಿಸಬೇಕು ಎಂದು ಹೇಳಿದ ಸಚಿವಾಲಯವು, ಕ್ಲಬ್ಬುಗಳು ಸಾರ್ವಜನಿಕ ಸ್ಥಳಗಳು ಎಂದು ಸ್ಪಷ್ಟವಾಗಿ ಹೇಳಿತು.

2008: ಪುಣೆಯಲ್ಲಿ ನಡೆದ ಮೂರನೇ ಕಾಮನ್ವೆಲ್ತ್ ಕ್ರೀಡಾಕೂಟದ ಬಾಲಕರ `ಡಬಲ್ ಟ್ರ್ಯಾಪ್' ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಅಶಹರ್ ಭಾರತಕ್ಕೆ ಚಿನ್ನದ ಪದಕ ಗೆಲ್ಲುವ ಮೂಲಕ ಮೂಲಕ ಶೂಟಿಂಗ್ ರೇಂಜ್ನಿಂದ ಮೂರನೇ ದಿನ ದೇಶಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟು `ಹ್ಯಾಟ್ರಿಕ್' ಪಡೆದ ಗೌರವಕ್ಕೆ ಪಾತ್ರರಾದರು.

2007: ಅಮೆರಿಕದ ಅರ್ಥಶಾಸ್ತ್ರಜ್ಞರಾದ ಲಿಯೋನಿದ್ ಹರ್ವಿಜ್, ಎರಿಕ್ ಮಸ್ಕಿನ್ ಮತ್ತು ರೋಜರ್ ಮೈರ್ಸನ್ ಅವರು ಅರ್ಥಶಾಸ್ತ್ರಕ್ಕೆ ನೀಡಲಾಗುವ 2007ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಲಿಯೋನಿದ್ ಅವರು ರಷ್ಯಾದಲ್ಲಿ ಜನಿಸಿದವರಾಗಿದ್ದು ಅಮೆರಿಕದ ಪೌರತ್ವ ಪಡೆದಿದ್ದಾರೆ. ಇವರಿಗೆ 90 ವರ್ಷ ವಯಸ್ಸಾಗಿದ್ದು ನೊಬೆಲ್ ಪ್ರಶಸ್ತಿ ಪುರಸ್ಕೃತರಲ್ಲಿಯೇ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿದಂತೆ ಸರ್ಕಾರದ ಪಾತ್ರ ಇತ್ಯಾದಿ ಅರ್ಥ ವಿಷಯಗಳಿಗೆ ಸಂಬಂಧಿಸಿದಂತೆ ಈ ಮೂವರು ರೂಪಿಸಿರುವ ಸಿದ್ಧಾಂತಕ್ಕೆ ಈ ಪ್ರಶಸ್ತಿ ನೀಡಲಾಯಿತು. ಲಿಯೊನಿದ್ ಈ ಸಿದ್ಧಾಂತವನ್ನು ಮೊದಲಿಗೆ ರೂಪಿಸಿದರಾದರೂ ನಂತರ ಪ್ರಿನ್ಸ್ ಟನ್ ವಿವಿಯ ಮಸ್ಕಿನ್ ಮತ್ತು ಚಿಕಾಗೊ ವಿವಿಯ ಮೈರ್ಸನ್ ಈ ಸಿದ್ಧಾಂತ ಅಭಿವೃದ್ಧಿ ಪಡಿಸಿದರು.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್ಇ) ಅಕ್ಟೋಬರ್ 9ರಂದು ಮಾಡಿದ್ದ 18000ದ ದಾಖಲೆಯನ್ನು ಒಂದೇ ವಾರದಲ್ಲಿ ಮುರಿದು ಈದಿನ ಮತ್ತೆ ಸಾವಿರ ಅಂಶಗಳ ಏರಿಕೆ ಕಂಡಿತು. ಈದಿನ ಅದು 19000 ಗಡಿಯನ್ನು ಸ್ಪರ್ಶಿಸಿ ಇತಿಹಾಸ ನಿರ್ಮಿಸಿತು. ಸಂವೇದಿ ಸೂಚ್ಯಂಕ 19,000 ಗಡಿ ತಲುಪಿದ್ದರಿಂದ ಒಟ್ಟು ಹೂಡಿಕೆದಾರರ ಬಂಡವಾಳ ಮೊತ್ತ ರೂ 58.30 ಲಕ್ಷ ಕೋಟಿ ರೂಪಾಯಿ ಹೆಚ್ಚಾಯಿತು.

2007: ಸುನಾಮಿಯ ಕುರಿತು ಮುನ್ನೆಚ್ಚರಿಕೆ ನೀಡುವ ಭಾರತದ ಮೊದಲ ತಂತ್ರಜ್ಞಾನ ವ್ಯವಸ್ಥೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸಿಬಲ್ ಈದಿನ ಹೈದರಾಬಾದಿನಲ್ಲಿ ದೇಶಕ್ಕೆ ಸಮರ್ಪಿಸಿದರು. ಮೂರು ವರ್ಷಗಳ ಹಿಂದೆ ದಿಢೀರನೆ ದೇಶದ ದಕ್ಷಿಣ ಕರಾವಳಿಗೆ ಅಪ್ಪಳಿಸಿದ ಸುನಾಮಿ ಸಾವಿರಾರು ಜನರನ್ನು ಆಹುತಿ ತೆಗೆದುಕೊಂಡಿತ್ತು. ರಾಷ್ಟ್ರೀಯ ಸುನಾಮಿ ಮತ್ತು ಬಿರುಗಾಳಿ ಮುನ್ನೆಚ್ಚರಿಕೆ ವ್ಯವಸ್ಥೆ (ಎನ್ ಇಡಬ್ಲ್ಯುಎಸ್ ಟಿ ಎಸ್ ಎಸ್) ಎಂದು ಕರೆಯಲಾಗುವ ಈ ಸಾಧನ, ಭೂಕಂಪ ಸಂಭವಿಸಿದ 30 ನಿಮಿಷಗಳೊಳಗೆ ಸುನಾಮಿ ರಾಕ್ಷಸ ಅಲೆಗಳ ಕುರಿತು ಮಾಹಿತಿ ನೀಡುವುದು.
125 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕೇಂದ್ರವನ್ನು ಭೂವಿಜ್ಞಾನ ಸಚಿವಾಲಯ ನಿರ್ಮಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬಾಹ್ಯಾಕಾಶ ಇಲಾಖೆ ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಇದರ ಸಹಭಾಗಿತ್ವ ವಹಿಸಿವೆ.

2007: ಕೊಯಮತ್ತೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಒಂಬತ್ತು ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿತು. ಕೊಲೆ ಯತ್ನ, ಸ್ಫೋಟಕಗಳನ್ನು ಹೊಂದಿದ್ದ ಆರೋಪಕ್ಕಾಗಿ ಈ ಒಂಬತ್ತು ಆರೋಪಿಗಳಿಗೆ ವಿಶೇಷ ನ್ಯಾಯಾಧೀಶ ಕೆ. ಉತ್ತಿರಪ್ತಿ ಅವರು ಮೂರರಿಂದ ಒಂಬತ್ತು ವರ್ಷ ಸೆರೆಮನೆವಾಸದ ಶಿಕ್ಷೆ ವಿಧಿಸಿದರು.

2007: ಅತ್ಯುತ್ತಮ ನಿರ್ವಹಣೆಗೆ `ವಿಶ್ವ ಪರ್ಯಾವರಣ ಪ್ರತಿಷ್ಠಾನ'ದಿಂದ `ಸ್ವರ್ಣಮಯೂರ' ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ದೇಶದ ಪ್ರತಿಷ್ಠಿತ ಕೈಗಾ ಅಣುವಿದ್ಯುತ್ ಯೋಜನೆ ಮತ್ತೊಂದು ಸಾಧನೆಯತ್ತ ದಾಪುಗಾಲಿಟ್ಟಿದೆ ಎಂದು ಈದಿನ ಪ್ರಕಟಿಸಲಾಯಿತು. 440 ಮೆ. ವ್ಯಾಟ್ ಸಾಮರ್ಥ್ಯದ ಮೊದಲ ಮತ್ತು ಎರಡನೇ ಘಟಕಗಳಲ್ಲಿ ಎರಡನೇ ಘಟಕ ಮೂರೇ ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿದರೆ ಜಾಗತಿಕ ದಾಖಲೆಗೆ ಕಾರಣವಾಗಲಿದೆ. ಅಮೆರಿಕದ ಅಣು ವಿದ್ಯುತ್ ಘಟಕವೊಂದು ಸತತ 406 ದಿನಗಳ ಕಾಲ ವಿದ್ಯುತ್ ಉತ್ಪಾದಿಸಿ ದಾಖಲೆ ನಿರ್ಮಿಸಿತ್ತು. ಈ ದಾಖಲೆಯನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಸ್ಥಾವರದ ಎರಡನೇ ಘಟಕ ಮುರಿಯಲಿದ್ದು 408 ದಿನಗಳ ಕಾಲ ವಿದ್ಯುತ್ ಉತ್ಪಾದಿಸಲು ಸಜ್ಜುಗೊಂಡಿದೆ. ಕೈಗಾದಲ್ಲಿ ಇದೇ ಸಾಮರ್ಥ್ಯದ 3ನೇ ಮತ್ತು 4ನೇ ಘಟಕಗಳು ವಿದ್ಯುತ್ ಉತ್ಪಾದನೆಗೂ ಸಜ್ಜಾಗಿದೆ. ಅತ್ಯುತ್ತಮ ನಿರ್ವಹಣೆಗೆ ಹಲವು ಪ್ರಶಸ್ತಿ ಗಳಿಸಿರುವ ಕೈಗಾ ಘಟಕ ಉತ್ಕೃಷ್ಟ ಸಾಧನೆಗಾಗಿ ಕೇಂದ್ರ ವಿದ್ಯುತ್ ಪ್ರಾಧಿಕಾರ ನೀಡುವ ಸ್ವರ್ಣ ಪದಕ, ಸ್ವರ್ಣ ಮಯೂರ ಸೇರಿದಂತೆ ರಾಷ್ಟ್ರೀಯ ಸುರಕ್ಷಾ ಸಂಸ್ಥೆಯಿಂದ `ಅತ್ಯುತ್ತಮ ಸುರಕ್ಷಾ ಘಟಕ' ಎಂಬ ಪ್ರಶಸ್ತಿಯನ್ನೂ ಗಳಿಸಿದೆ.

2007: ಪರಮಾಣು ನಿರ್ವಾಹಕರ ಜಾಗೃತಿ ಸಂಘಟನೆಯಾದ `ವಾನೋ' ಅಧ್ಯಕ್ಷರಾಗಿ ಭಾರತೀಯ ಅಣುವಿದ್ಯುತ್ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೇಯನ್ ಕುಮಾರ್ ಜೈನ್ ಅವರು ಚಿಕಾಗೊದಲ್ಲಿ ನಡೆದ ಸಂಸ್ಥೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಆಯ್ಕೆಯಾದರು. ಇದೇ ವೇಳೆಯಲ್ಲಿ ಎನ್ ಪಿ ಸಿ ಎಲ್ ನ ಆಪರೇಟರ್ ವಿಭಾಗದ ನಿರ್ದೇಶಕ ಸಿ. ನಾಗೇಶ್ವರ ರಾವ್ ಅವರನ್ನು `ನ್ಯೂಕ್ಲಿಯರ್ ಎಕ್ಸಲೆನ್ಸಿ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

2007: ಕಾರವಾರ ಸಮೀಪದ ದೇವಗಡ ಕಡಲತೀರದಲ್ಲಿ ದುರಂತಕ್ಕೆ ಈಡಾಗಿದ್ದ ಓಸಿಯನ್ ಸೆರಾಯ್ ಹಡಗನ್ನು ಗುಜರಾತಿನ ಅಲಂಗ್ ಕಡಲ ತೀರಕ್ಕೆ ಒಯ್ದು ತುಂಡರಿಸಲು ಜಿಲ್ಲಾಡಳಿತ ಅನುಮತಿ ನೀಡಿತು. ಇದರಿಂದ ಎರಡು ವರ್ಷಗಳಿಂದ ವಾದ ವಿವಾದಕ್ಕೆ ಕಾರಣವಾಗಿದ್ದ ಹಡಗಿನ ಅನಿಶ್ಚಿತ ಬದುಕಿಗೆ ಕೊನೆ ಬೀಳುವುದು. ಹಡಗನ್ನು ದೇವಗಡ ದ್ವೀಪದಲ್ಲಿ ಒಡೆಯುವ ಜಿಲ್ಲಾಡಳಿತದ ನಿರ್ಧಾರಕ್ಕೆ ಮೀನುಗಾರರು, ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಡಗು ಕಟ್ಟಲು ಬಳಸುವ ಅಪಾಯಕಾರಿ ಕಲ್ನಾರು ಸಮುದ್ರಕ್ಕೆ ಬಿದ್ದು ಮೀನು ಸಂತತಿಗೆ ಅಪಾಯ ಆಗಬಹುದು ಎಂಬ ಭೀತಿ ಭುಗಿಲೆದ್ದಿತ್ತು. 2006ರ ಜೂನ್ 11ರ ರಾತ್ರಿ ಬೀಸಿದ ಬಿರುಗಾಳಿಯಿಂದ ತತ್ತರಿಸಿದ್ದ ಓಸಿಯಾನ ಸೆರಾಯಿ ಹಡಗು ಬೃಹತ್ ಬಂಡೆಗೆ ಡಿಕ್ಕಿಹೊಡೆದು ಎರಡು ತುಂಡಾಗಿತ್ತು. ಈ ದುರಂತದಲ್ಲಿ ಹಡಗಿನ ಚಾಲಕರೊಬ್ಬರು ಮೃತರಾಗಿ, ಹಡಗಿನಲ್ಲಿದ್ದ ಅಪಾರ ಪ್ರಮಾಣದ ತೈಲ ಸೋರಿಕೆಯಾಗಿ ಸಮುದ್ರ ಸೇರಿತ್ತು.

2007: ಕೊಲಂಬಿಯಾದ ಬೊಗೊಟಾದಲ್ಲಿ ಚಿನ್ನದ ಗಣಿಯೊಂದು ಕುಸಿದು 22 ಜನ ಮೃತರಾದರು. ಖಾಸಗಿ ಕಂಪೆನಿಗೆ ಸೇರಿದ ಈ ಸುರೆಜ್ ಗೋಲ್ಡ್ ಗಣಿ ಕುಸಿತದಲ್ಲಿ ಇತರ ಇನ್ನೂ 15 ಮಂದಿ ಕಣ್ಮರೆಯಾದರು.

2007: ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರು ಅಮೆರಿಕದ ಪ್ರತಿಷ್ಠಿತ ನಿಯತಕಾಲಿಕ `ನ್ಯೂಸ್ ವೀಕ್' ನಲ್ಲಿ ಈದಿನ ವಿಜೃಂಭಿಸಿದರು. ಎಲ್ಲ ಅಡೆತಡೆಗಳನ್ನೂ ಮೀರಿ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಎಂಟು ಮಂದಿಯ ಜೀವನ ಚಿತ್ರಣವನ್ನು ಈ ಪತ್ರಿಕೆ ಪ್ರಕಟಿಸಿದ್ದು ಅದರಲ್ಲಿ ಮಾಯಾವತಿ ಹೆಸರೂ ಸೇರ್ಪಡೆಯಾಯಿತು. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿಗೆ ಈಗ 51 ವಯಸ್ಸು. ಜಾತಿ ಲೆಕ್ಕಾಚಾರಗಳ ತಲೆಬುಡ ಅಲುಗಿಸಿದ ಇವರ ಮುಸ್ಲಿಂ-ದಲಿತ-ಬ್ರಾಹ್ಮಣ ಮೈತ್ರಿಕೂಟ ರಾಷ್ಟ್ರ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ನಾಂದಿ ಹಾಡಿದೆ. ಇತರೆ ರಾಜ್ಯಗಳಲ್ಲೂ ಇದೇ ಮೋಡಿ ಪ್ರದರ್ಶಿಸುವ ಅವರ ಇರಾದೆ ಯಶಸ್ವಿಯಾದರೆ, ಹೊಸ ಸಮೀಕರಣ ಫಲಿಸಬಹುದೆಂದು ಪತ್ರಿಕೆ ಹೇಳಿತು. ಮಾಯಾವತಿ ಜೊತೆಗೆ ಫ್ರಾನ್ಸ್ ಇಂಧನ ಸಂಸ್ಥೆ ಮುಖ್ಯಾಧಿಕಾರಿ ಅನ್ನೆ ಲಾವರ್ ಜಿಯಾನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಾಧಿಕಾರಿ ಮಾರ್ಗರೆಟ್ ಚಾನ್ ವ್ಯಕ್ತಿ ಚಿತ್ರಣಗಳು ಈ ನಿಯತಕಾಲಿಕೆಯಲ್ಲಿ ಪ್ರಕಟವಾದವು.

2006: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ಮೊದಲನೇ ಸ್ಥಾನದಲ್ಲಿದ್ದ ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರನ್ನು ಹಿಂದಕ್ಕೆ ತಳ್ಳಿ ಭಾರತದ ಅತಿ ಶ್ರೀಮಂತ ಖ್ಯಾತಿಗೆ ಪಾತ್ರರಾದರು. ಮುಖೇಶ್ ಗಳಿಕೆ 70,000 ಕೋಟಿ ರೂಪಾಯಿಗಳಿಗೆ ಏರಿದ್ದು, ಪ್ರೇಮ್ ಜಿ ಗಳಿಕೆ 66,700 ಕೋಟಿ ರೂಪಾಯಿಗಳು ಎಂದು ರಿಚ್ಚಿ ರಿಚ್ ಕ್ಲಬ್ ಪ್ರಕಟಿಸಿತು.

2006: ಅತೀ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ ಸಾಧನೆ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ವಿಶ್ವದಾಖಲೆ ನಿರ್ಮಿಸಿದರು. 368 ಪಂದ್ಯಗಳನ್ನು ಆಡುವ ಮೂಲಕ ಅವರು ಪಾಕಿಸ್ತಾನದ ಇಂಜಮಾಮ್ ಉಲ್ ಹಕ್ ಅವರನ್ನು ಹಿಂದೆ ತಳ್ಳಿದರು. ಇಂಜಮಾಮ್ ಮತ್ತು ಶ್ರೀಲಂಕಾದ ಸನತ್ ಜಯಸೂರ್ಯ ಅವರು 367 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

2000: ಒಂದು ದಿನದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ (9379) ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಸಚಿನ್ ತೆಂಡೂಲ್ಕರ್ ಪಾತ್ರರಾದರು. ನೈರೋಬಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಐಸಿಸಿ ಕ್ರಿಕೆಟ್ ಟೂರ್ನಮೆಂಟಿನ ಅಂತಿಮ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಅವರ ರನ್ ಗಳಿಕೆಯ ಮೊತ್ತ 2002ರಲ್ಲಿ 11,000 ರ ಗಡಿ ದಾಟಿತು.

1997: ಬ್ರಿಟಿಷ್ ರಾಯಲ್ ಏರ್ ಫೋರ್ಸ್ ಪೈಲಟ್ ಆಂಡಿ ಗ್ರೀನ್ ಅವರು ನೆವಾಡಾ ಮರುಭೂಮಿಯಲ್ಲಿ ಜೆಟ್ ಚಾಲಿತ ಕಾರನ್ನು ಧ್ವನಿತರಂಗದ ವೇಗಕ್ಕಿಂತಲೂ (ಸೂಪರ್ಸಾನಿಕ್) ವೇಗವಾಗಿ ಎರಡು ಬಾರಿ ಓಡಿಸಿ, ಭೂಮಿ ಮೇಲಣ ಚಾಲನಾ ವೇಗದ ವಿಶ್ವ ದಾಖಲೆಯನ್ನು ಅಧಿಕೃತವಾಗಿ ಮುರಿದರು.

1953: ಸಾಹಿತಿ ಸಿ. ನಾಗಣ್ಣ ಜನನ.

1950: ಸಾಹಿತಿ ಬಿ.ಎನ್. ಸುಮಿತ್ರಾಬಾಯಿ ಜನನ.

1934: ಸಾಹಿತಿ ಇಂದಿರಾ ಹಾಲಂಬಿ ಜನನ.

1932: ಸಾಹಿತಿ ಲಲಿತಮ್ಮ ಚಂದ್ರಶೇಖರ್ ಜನನ.

1932: ಜಹಾಂಗೀರ್ ರತನ್ ಜಿ ದಾದಾಭಾಯ್ `ಜೆ ಆರ್ ಡಿ' ಟಾಟಾ ಅವರು ಏಕ ಆಸನದ `ಪುಸ್ ಮೋತ್' ವಾಣಿಜ್ಯ ವಿಮಾನವನ್ನು ಕರಾಚಿಯಿಂದ ಬಾಂಬೆಗೆ (ಈಗಿನ ಮುಂಬೈ) ಹಾರಿಸುವ ಮೂಲಕ ಭಾರತದ ಮೊತ್ತ ಮೊದಲ ವಾಣಿಜ್ಯ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು. ತಮ್ಮ ಪ್ರಥಮ ವಿಮಾನ ಹಾರಾಟದ 30ನೇ ವಾರ್ಷಿಕೋತ್ಸವದ ನೆನಪಿಗಾಗಿ 1962ರಲ್ಲಿ ಅವರು ಇದೇ ಹಾರಾಟವನ್ನು ಪುನರಾವರ್ತಿಸಿದರು. 1982ರಲ್ಲಿ ತಮ್ಮ ಚಾರಿತ್ರಿಕ ಹಾರಾಟದ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೊಮ್ಮೆ ಅವರು ಇದೇ ಹಾರಾಟವನ್ನು ಎರಡನೇ ಬಾರಿಗೆ ಪುನರಾವರ್ತನೆ ಮಾಡಿದರು.

1931: ಭಾರತದ 11ನೇ ರಾಷ್ಟ್ರಪತಿಯಾಗಿದ್ದ ವಿಜ್ಞಾನಿ ಅವುಲ್ ಫಕೀರ್ ಜಲಾಲುದ್ದೀನ್ (ಎಪಿಜೆ) ಅಬ್ದುಲ್ ಕಲಾಂ ಅವರು ತಮಿಳುನಾಡಿನ ರಾಮೇಶ್ವರಂನಲ್ಲಿ ಈದಿನ ಜನಿಸಿದರು.

1926: ಸಾಹಿತಿ ರಾಜಗೋಪಾಲಾಚಾರ್ಯ ಎಂ. ಜನನ.

1920: ಅಮೆರಿಕದ ಖ್ಯಾತ ಕಾದಂಬರಿಕಾರ ಮಾರಿಯೋ ಪುಝೋ (1920-1999) ಜನ್ಮದಿನ. `ದಿ ಗಾಡ್ಫಾದರ್' ಇವರ ಕೃತಿಗಳಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿದೆ.

1918: ಜಗತ್ತಿನಾದ್ಯಂತ ಲಕ್ಷಾಂತರ ಮಂದಿಯ ಭಕ್ತಿ, ಗೌರವಕ್ಕೆ ಪಾತ್ರರಾಗಿದ್ದ ಶಿರಡಿಯ ಸಾಯಿಬಾಬಾ ಅವರು ಶಿರಡಿಯಲ್ಲಿ ಈ ದಿನ (ವಿಜಯದಶಮಿ) `ಮಹಾಸಮಾಧಿ' ಹೊಂದಿದರು.

1915: ಸಾಹಿತಿ ಆರ್.ಎಸ್. ರಾಮರಾವ್ ಜನನ.

1866: ಹೊಸಗನ್ನಡದ ಆರಂಭದ ದಿನಗಳ ಗಮನಾರ್ಹ ಕಾದಂಬರಿಗಳಲ್ಲಿ ಒಂದಾಗಿದ್ದ `ಇಂದಿರೆ'ಯ (1908) ಕತೃ ಕೆರೂರು ವಾಸುದೇವಾಚಾರ್ಯ ಅವರು ಶ್ರೀನಿವಾಸಾಚಾರ್ಯ- ಪದ್ಮಾವತಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬಾಗಲಕೋಟೆಯಲ್ಲಿ ಜನಿಸಿದರು.

1542: ಭಾರತದ ಖ್ಯಾತ ಮೊಘಲ್ ದೊರೆ ಅಕ್ಬರ್ (1542-1605) ಜನ್ಮದಿನ.

No comments:

Post a Comment