ಸಿಬಿಐ
ಮುಖ್ಯಸ್ಥರ ವಿರುದ್ಧದ
ತನಿಖೆಗೆ
ಸುಪ್ರೀಂಕೋರ್ಟ್
ನಿಗಾ
ನವದೆಹಲಿ : ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ಮೇಲುಸ್ತುವಾರಿಯಲ್ಲಿ
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ
ವಿರುದ್ಧದ ಕೇಂದ್ರೀಯ ವಿಚಕ್ಷಣಾ
ಆಯೋಗ
(ಸಿವಿಸಿ)
ತನಿಖೆಯ ನಡೆಯಲಿದೆ
ಎಂದು
2018 ಅಕ್ಟೋಬರ್ 26ರ ಶುಕ್ರವಾರ ಪ್ರಕಟಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪೀಠವು
ತನಿಖೆ
ಪೂರ್ಣಗೊಳಿಸಲು
ಸಿವಿಸಿಗೆ 2 ವಾರಗಳ
ಗಡುವು
ನೀಡಿತು.ಪೀಠವು ಪ್ರಕರಣದ ಮುಂದಿನ ವಿಚಾರಣೆಗೆ ನವೆಂಬರ್ 12ನೇ ದಿನಾಂಕವನ್ನು ನಿಗದಿ ಪಡಿಸಿತು.
ಅಲೋಕ್ ವರ್ಮಾ ಬಳಿಕ ಇದೀಗ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಕೂಡ ತಮ್ಮನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದಾರೆ.
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ಈಗಾಗಲೇ ಸರ್ಕಾರ ತನ್ನ ಎಲ್ಲ ಅಧಿಕಾರಗಳನ್ನು ಕಿತ್ತುಕೊಂಡು ತನ್ನನ್ನು ಬಲವಂತದ ರಜೆಯ ಮೇಲೆ ಕಳುಹಿಸಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅತ್ಯಂತ ಸೂಕ್ಷ್ಮ ಪ್ರಕರಣಗಳ ತನಿಖೆಯ ಹೊಣೆ ಹೊತ್ತಿರುವ ಸಿಬಿಐ ನ ಅನೇಕ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿರುವುದು ಸಿಬಿಐ ಕಾರ್ಯಕ್ಷಮತೆಗೆ ಸವಾಲಾಗಿ ಪರಿಣಮಿಸಿದೆ ಎಂದು ವರ್ಮಾ ಆರೋಪಿಸಿದ್ದರು.
ವಿವರಗಳಿಗೆ ಕೆಳಗಿನ ಚಿತ್ರವನ್ನು ಕ್ಲಿಕ್ಕಿಸಿ
No comments:
Post a Comment