Wednesday, October 24, 2018

ಪ್ರಧಾನಿ ನರೇಂದ್ರ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ


ಪ್ರಧಾನಿ ನರೇಂದ್ರ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ 2018 ಸಾಲಿನ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಲಭಿಸಿದೆ. ಅಂತಾರಾಷ್ಟ್ರೀಯ ಸಹಕಾರ ಮತ್ತು ಜಾಗತಿಕ ಆರ್ಥಿಕ ಪ್ರಗತಿಗೆ ಪ್ರೋತ್ಸಾಹ ನೀಡಿದ್ದಕ್ಕಾಗಿ ಪ್ರಶಸ್ತಿಯನ್ನು ಮೋದಿ ಅವರಿಗೆ ಘೋಷಿಸಲಾಗಿದೆ.

ಪ್ರಧಾನಿ ಮೋದಿ ಅವರು ಭಾರತ ಜೊತೆಗಿನ ಕೊರಿಯಾ ಗಣರಾಜ್ಯ ಜೊತೆಗಿನ ಆಳವಾದ ಪಾಲುದಾರಿಕೆಯ ಬೆಳಕಿನಲ್ಲಿ ಪ್ರತಿಷ್ಠಿತ ಗೌರವಕ್ಕಾಗಿ ಕೃತಜ್ಞತೆಗಳನ್ನು ವ್ಯಕ್ತ ಪಡಿಸಿದ್ದಾರೆ ಮತ್ತು ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯು 2018 ಅಕ್ಟೋಬರ್ 24 ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ವಿಶ್ವವು ಗುರುತಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತದಲ್ಲಿನ ಉನ್ನತ ಆರ್ಥಿಕ ಬೆಳವಣಿಗೆ ಮತ್ತುಮೋದಿನೋಮಿಕ್ಸ್ಮೂಲಕ ವಿಶ್ವದ ಆರ್ಥಿಕ ಬೆಳವಣಿಗೆಗೆ ನೀಡಿದ ಕೊಡುಗೆ, ಮಾನವ ಕಲ್ಯಾಣದ ಮೂಲಕ ಜಾಗತಿಕ ಶಾಂತಿಗೆ ನೀಡಿದ ಕಾಣಿಕೆ ಮತ್ತು ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ದೃಢ ಪಡಿಸಿದ್ದಕ್ಕಾಗಿ 2018 ಸಾಲಿನ ಪ್ರತಿಷ್ಠಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ ಕುಮಾರ್ ಟ್ವೀಟ್ ಮಾಡಿದ್ದಾರೆ.

ಸಿಯೊಲ್ ಶಾಂತಿ ಪ್ರಶಸ್ತಿ ಪ್ರತಿಷ್ಠಾನವು ಉಭಯರಿಗೂ ಸೂಕ್ತವಾದ ಸಮಯದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದು ಎಂದು ಹೇಳಿಕೆ ತಿಳಿಸಿದೆ.

ಸಿಯೋಲ್ ನಲ್ಲಿ ನಡೆದ 24ನೇ ಒಲಿಂಪಿಕ್ಸ್ ಕ್ರೀಡಾಕೂಟದ ಯಶಸ್ಸಿನ ಸ್ಮರಣೆಗಾಗಿ 1990ರಲ್ಲಿ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.

ಕೊರಿಯಾ ಪರ್ಯಾಯದ್ವೀಪ ಮತ್ತು ವಿಶ್ವದ ಇತರೆಡೆಗಳಲ್ಲಿ ಶಾಂತಿ ಸ್ಥಾಪನೆಯಾಗಬೇಕು ಎಂಬ ಕೊರಿಯಾ ಜನತೆಯ ಆಶಯಕ್ಕೆ ಸ್ಪಷ್ಟ ರೂಪ ನೀಡುವ ಸಲುವಾಗಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.

ಭಾರತ ಮತ್ತು ಜಾಗತಿಕ ಆರ್ಥಿಕತೆಯ ಬೆಳವಣಿಗೆಗೆ ಮೋದಿಯವರು ನೀಡಿದ ಕಾಣಿಕೆಯನ್ನು ಗುರುತಿಸಿರುವ ಪ್ರಶಸ್ತಿ ಸಮಿತಿಯು ಶ್ರೀಮಂತರು ಮತ್ತು ಬಡವರ ನಡುವಣ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು  ಕಡಿಮೆಗೊಳಿಸಲುಮೋದಿನೋಮಿಕ್ಸ್ಕಾರಣ ಎಂದು ಮಾನ್ಯ ಮಾಡಿದೆ.

ಭ್ರಷ್ಟಾಚಾರ ನಿಗ್ರಹ ಕ್ರಮಗಳು ಮತ್ತು ನೋಟು ಅಮಾನ್ಯೀಕರಣ ಕ್ರಮಗಳ ಮೂಲಕ  ಸರ್ಕಾರವನ್ನು ಸ್ವಚ್ಛಗೊಳಿಸಲು ಮೋದಿಯವರು ಕೈಗೊಂಡ ಉಪಕ್ರಮಗಳನ್ನು  ಸಮಿತಿ ಪ್ರಶಂಸಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಮೋದಿ ಡಾಕ್ಟ್ರಿನ್’ (ಮೋದಿ ಸಿದ್ಧಾಂತ) ಮತ್ತುಆಕ್ಟ್ ಈಸ್ಟ್ ಪಾಲಿಸಿಮೂಲಕ ಪ್ರಾದೇಶಿಕ ಮತ್ತು ಜಾಗತಿಕ  ಶಾಂತಿ ವೃದ್ಧಿಗಾಗಿ ಮೋದಿ ಅವರು ಕೈಗೊಂಡ ಕ್ರಮಗಳನ್ನು ಸಮಿತಿ ಶ್ಲಾಘಿಸಿದೆ.

ಮೋದಿಯವರು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾದ 14ನೇ ಗಣ್ಯ ವ್ಯಕ್ತಿಯಾಗಿದ್ದಾರೆ. ಮುನ್ನ  ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ  ಕೋಫಿ ಅನ್ನಾನ್, ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್, ಹಲವಾರು ಮಂದಿ ಅಂತಾರಾಷ್ಟ್ರೀಯ ವೈದ್ಯರು ಹಾಗೂ ಇತರ ಗಣ್ಯರು ಪ್ರಶಸ್ತಿಗೆ ಪಾತ್ರರಾಗಿದ್ದರು.

No comments:

Post a Comment