Friday, October 5, 2018

ಇಂದಿನ ಇತಿಹಾಸ History Today ಅಕ್ಟೋಬರ್ 05

ಇಂದಿನ ಇತಿಹಾಸ History Today ಅಕ್ಟೋಬರ್ 05
2018: ನವದೆಹಲಿ: ಭಾರತಕ್ಕೆ ಐದು ಎಸ್-೪೦೦ ಟ್ರಯಂಫ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳನ್ನು ಒದಗಿಸುವ .೪೩ ಬಿಲಿಯನ್ ( ಶತಕೋಟಿ ಅಂದರೆ ಸುಮಾರು ೩೯,೦೦೦ ಕೋಟಿ ರೂ) ಮೊತ್ತದ ವ್ಯವಹಾರ ಒಪ್ಪಂದಕ್ಕೆ  ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯದ ಅಧಕ್ಷ ವ್ಲಾಡಿಮೀರ್ ಪುಟಿನ್ ಅವರ ಭಾರತ-ರಷ್ಯ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆ ಕಾಲದಲ್ಲಿ ಭಾರತ ಮತ್ತು ರಷ್ಯ ಸಹಿ ಹಾಕಿದವುಭಾರತ-ರಷ್ಯ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪುಟಿನ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಹಿಂದಿನ  ರಾತ್ರಿ ನವದೆಹಲಿಗೆ ಆಗಮಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಬಳಿಕ ಪ್ರಧಾನಿ ಮೋದಿ ಆತ್ಮೀಯ ಆಲಿಂಗನದ ಮೂಲಕ ತಮ್ಮ ನಿವಾಸಕ್ಕೆ ಬರಮಾಡಿಕೊಂಡಿದ್ದರು.   ‘ನಾವು ವಾಣಿಜ್ಯ ಮತ್ತು ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದೇವೆ. ಇವುಗಳನ್ನು ವಿಸ್ತರಿಸುವುದು ಅತ್ಯಂತ ಅಗತ್ಯವಾಗಿದೆ. ೨೦೨೫ರ ವೇಳೆಗೆ ೩೦ ಬಿಲಿಯನ್ (೩೦೦೦ ಕೋಟಿ) ಡಾಲರ್ ಮೊತ್ತದ ದ್ವಿಪಕ್ಷೀಯ ವ್ಯವಹಾರದ ಗುರಿಯನ್ನು ನಾವು ನಿರ್ಧರಿಸಿದ್ದೇವೆ ಎಂದು ಪುಟಿನ್ ಅವರು ಶೃಂಗಸಭೆಯ ಬಳಿಕ ನರೇಂದ್ರ ಮೋದಿ ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ೨೦೧೯ರ ಸೆಪ್ಟೆಂಬರಿನಲ್ಲಿ ವ್ಲಾಡಿವೊಸ್ತೋಕ್ ನಲ್ಲಿ ನಡೆಯಲಿರುವ ವಾಣಿಜ್ಯ ಶೃಂಗಕ್ಕೆ ತಾವು ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುತ್ತಿರುವುದಾಗಿ ಪುಟಿನ್ ನುಡಿದರು. ‘ಪ್ರಧಾನಿ ಮೋದಿ ಮತ್ತು ನಾನು ಇಂಧನ ಸಹಕಾರದ ಬಗ್ಗೆ ಚರ್ಚಿಸಿದೆವು ಮತ್ತು ತೈಲ, ಎನ್ ಎನ್ ಜಿ ಸರಬರಾಜು ಬಗ್ಗೆ ಒಪ್ಪಂದಗಳಿಗೆ ನಾವು ಸಹಿ ಹಾಕುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಕೂಡಂಕುಳಂನಲ್ಲಿ ಮತ್ತು ೬ನೇ ರಿಯಾಕ್ಟರ್ ಗಳನ್ನು ನಿರ್ಮಿಸಲಾಗುವುದು. ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ೧೨ ಪರಮಾಣು ರಿಯಾಕ್ಟರ್ ಗಳನ್ನು ನಿರ್ಮಿಸಲು ನಾವು ಯೋಜಿಸಿದ್ದೇವೆ. ಭಾರತೀಯ ಗಗನಯಾನಿಗಳಿಗೆ ಬಾಹ್ಯಾಕಾಶ ಯಾನದ ತರಬೇತಿ ನೀಡುವಲ್ಲೂ ರಷ್ಯಾ ನೆರವಾಗಲಿದೆ ಎಂದು ಪುಟಿನ್ ನುಡಿದರು.  ನಮ್ಮ ಬಾಂಧವ್ಯ ಸೇನಾ ಹಾರ್ಡ್ವೇರ್ ಮತ್ತು ಸೇನಾ ವಿನಿಮಯಗಳನ್ನು ಮೀರಿ ಮುಂದಕ್ಕೆ ಸಾಗಲಿದೆ. ಮಾನವೀಯ ಸ್ಪಂದನೆಯ ವ್ಯವಸ್ಥೆಯೆಡೆಗೂ ನಾವು ಗಮನ ಹರಿಸಿದ್ದೇವೆ ಎಂದು ರಷ್ಯದ ಅಧ್ಯಕ್ಷರು ಹೇಳಿದರು. ಪ್ರವಾಸೋದ್ಯಮದ ಬಗೆಗೂ ರಷ್ಯದ ಅಧ್ಯಕ್ಷರು ಮಾತನಾಡಿದರು. ’೨೦೧೭ರಲ್ಲಿ ರಷ್ಯಕ್ಕೆ ೯೪,೦೦೦ ಭಾರತೀಯ ಪ್ರವಾಸಿಗಳು ಆಗಮಿಸಿದ್ದಾರೆ ಮತ್ತು ,೨೦,೦೦೦ ಪ್ರವಾಸಿಗಳನ್ನು ರಷ್ಯವು ಭಾರತಕ್ಕೆ ಕಳುಹಿಸಿದೆ ಎಂದು ಪುಟಿನ್ ಉಲ್ಲೇಖಿಸಿದರು.  ‘ಭಾರತ ಮತ್ತು ರಷ್ಯ ಅಂತಾರಾಷ್ಟ್ರೀಯ ಸಹಕಾರ ವರ್ಧನೆಗೂ ಒಪ್ಪಿವೆ. ಸಿರಿಯಾದ ಪರಿಸ್ಥಿತಿ ಮತ್ತು ಇರಾನ್ನಿಂದ ಜೆಸಿಪಿಒಎ ವಾಪಸ್ ಕರೆಸಿಕೊಳ್ಳುವ ಅಮೆರಿಕದ ಏಕಪಕ್ಷೀಯ ನಿರ್ಧಾರದಿಂದ ಆಗುವ ಪರಿಣಾಮ ಬಗ್ಗೆ ನಾನು ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದೇನೆ ಎಂದು  ಪುಟಿನ್ ಹೇಳಿದರುಭಾರತ- ರಷ್ಯ ಆಯಕಟ್ಟಿನ ಪಾಲುದಾರಿಕೆಗೆ ಹೊಸ ದಿಕ್ಕು- ಮೋದಿ: ’ಸೂಚಿಯಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿದ್ದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. ಭಾರತವು ರಷ್ಯ ಜೊತೆಗಿನ ಬಾಂಧವ್ಯಕ್ಕೆ ಉನ್ನತ ಆದ್ಯತೆಯನ್ನು ನೀಡುತ್ತದೆಬದಲಾಗುತ್ತಿರುವ ವಿಶ್ವದಲ್ಲಿ ಬಾಂಧವ್ಯಗಳು ಇನ್ನೂ ಹೆಚ್ಚು ಮಹತ್ವ ಪಡೆದಿವೆಎಂದು ಪ್ರಧಾನಿ ಮೋದಿ ಹೇಳಿದರು.  ‘ರಷ್ಯವು ಯಾವಾಗಲೂ ಭಾರತದ ಅಭಿವೃದ್ಧಿಯ ಜೊತೆಗೆ ನಿಂತಿದೆ. ಇಂದು ರಷ್ಯವು ನಮ್ಮ ಗಗನಯಾನ ಕಾರ್ಯಕ್ರಮವನ್ನು ಬೆಂಬಲಿಸುತ್ತಿದ್ದು ಭಾರತೀಯ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ನೆರವು ನೀಡುತ್ತಿದೆ. ಭಾರತ ಮತ್ತು ರಷ್ಯ ವಿಶ್ವದಲ್ಲಿ ಬಹುಪಕ್ಷೀಯ ಮಾತುಕತೆಗಳಿಗೆ ಒಪ್ಪಿಗೆ ಸೂಚಿಸಿವೆ ಎಂದು ಅವರು ನುಡಿದರು. ಭಾರತ-ರಷ್ಯ ಸಹಕಾರ ಒಪ್ಪಂಧಧ ಅಡಿಯಲ್ಲಿ ರಷ್ಯದ ಸಿಬೆರಿಯಲ್ಲಿರುವ ನೊವೊಸಿಬಿರಿಸ್ಕ್  ನಗರದ ಸಮೀಪ ಭಾರತ ಬಾಹ್ಯಾಕಾಶ ನಿರ್ವಹಣಾ ಕೇಂದ್ರ ಸ್ಥಾಪಿಸಲು ನೆರವು ನೀಡಲು ರಷ್ಯ ಒಪ್ಪಿಕೊಂಡಿತು. ‘ಅಧ್ಯಕ್ಷ ಪುಟಿನ್ ಜೊತೆಗಿನ ಮಾತುಕತೆಗಳು ಭಾರತ-ರಷ್ಯಾ ಆಯಕಟ್ಟಿನ ಪಾಲುದಾರಿಕೆಗೆ ಹೊಸ ದಿಕ್ಕನ್ನು ಕೊಟ್ಟಿದೆ ಎಂದು ಮೋದಿ ಹೇಳಿದರು. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಅವರು ದೆಹಲಿಯ ಹೈದರಾಬಾದ್ ಭವನದಲ್ಲಿ ಉಭಯ ರಾಷ್ಟ್ರಗಳ ಶೃಂಗ ಸಭೆಯನ್ನು ನಡೆಸಿದರು. ಭದ್ರತೆಯಿಂದ ಹಿಡಿದು ಆರ್ಥಿಕ ಸಹಕಾರದ ವರೆಗೆ ವಿವಿಧ ವಿಷಯಗಳನ್ನು ಅವರು ಚರ್ಚಿಸಿದರುಮಾತುಕತೆಯ ವೇಳೆಯಲ್ಲಿ ಉಭಯ ರಾಷ್ಟ್ರಗಳು ಬಾಹ್ಯಾಕಾಶ, ಪರಮಾಣು ಇಂಧನ, ರೈಲ್ವೇ ಸೇರಿದಂತೆ ವಿವಿಧ ಕ್ಷೇತ್ರಗಳೀಗೆ ಸಂಬಂಧಿಸಿದಂತೆ ತಿಳುವಳಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡವು ಮತ್ತು ಎಂಟಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿದವುಎಸ್-೪೦೦ ಕ್ಷಿಪಣಿ ವ್ಯವಸ್ಥೆ ವ್ಯವಹಾರವು ಅತ್ಯಂತ ಮಹತ್ವದ ಒಪ್ಪಂದವಾಗಿದ್ದು, ೪೦೦ ಕಿಮೀ ದೂರದಿಂದ ಬರುವ ವೈರಿ ಕ್ಷಿಪಣಿಗಳನ್ನು ಹೊಡೆದುರುಳಿಸಬಲ್ಲ ದೂರಗಾಮೀ ಕ್ಷಿಪಣಿ ರಕ್ಷಣಾ ಸಾಮರ್ಥ್ಯ ಹೊಂದಿರುವ ವ್ಯವಸ್ಥೆಯಾಗಿದೆಕಳೆದ ತಿಂಗಳು ಅಮೆರಿಕವು ರಷ್ಯದಿಂದ ಎಸ್-೪೦೦ ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರ ಖರೀದಿಸಿದ್ದಕ್ಕಾಗಿ ಚೀನೀ ಸೇನೆ ಮೇಲೆ ದಿಗ್ಬಂಧನಗಳನ್ನು ಹೇರಿತ್ತು  ಮತ್ತು ಇಂತಹ ವ್ಯವಹಾರದ ಗುರಿ ಹೊಂದಿರುವ ರಾಷ್ಟ್ರಗಳು ತಮ್ಮ ಯೋಜನೆಗಳ ಬಗ್ಗೆ ಎರಡೆರಡು ಬಾರಿ ಚಿಂತಿಸುವಂತೆ ಎಚ್ಚರಿಕೆ ನೀಡಿತ್ತು. ಭಾರತವು ಹಿನ್ನೆಲೆಯಲ್ಲಿ ಅಮೆರಿಕ ಇತ್ತೀಚೆಗೆ ಅಂಗೀಕರಿಸಿದ ಕಾನೂನನ್ನು ಮನ್ನಾ ಮಾಡುವಂತೆ ಆಮೆರಿಕವನ್ನು ಒತ್ತಾಯಿಸಿತ್ತುಅಮೆರಿಕವು ಇತ್ತೀಚೆಗೆ  ಕಾಟ್ಸಾ ಕಾಯ್ದೆಗೆ ತಿದ್ದುಪಡಿಗಳನ್ನು ತರುವ ಮೂಲಕ ರಷ್ಯ, ಇರಾನ್, ಉತ್ತರ ಕೊರಿಯಾ ರಕ್ಷಣಾ ಕಂಪೆನಿಗಳ ಜೊತೆ ವ್ಯವಹರಿಸಿದರೆ ದಿಗ್ಬಂಧನ ವಿಧಿಸಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿಕೊಂಡಿತ್ತುಅಮೆರಿಕದ ದಿಗ್ಬಂಧನಗಳ ಹೊರತಾಗಿಯೂ ತಾನು ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳುವುದಾಗಿ ಭಾರತ ಈಗಾಗಲೇ ಸುಳಿವು ನೀಡಿದೆ.

2018: ನವದೆಹಲಿ: ಭಾರತ ಮತ್ತು ರಷ್ಯ ದೇಶಗಳು ಎಸ್-೪೦೦ ಕ್ಷಿಪಣಿ ಖರೀದಿ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ತನ್ನದಿಗ್ಬಂಧನ ಬೆದರಿಕೆಯನ್ನು ಜಾರಿಗೊಳಿಸಲಾಗುವುದೇ ಎಂಬ ಬಗ್ಗೆ ಅಮೆರಿಕ ಅತ್ಯಂತ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿತು.  ರಷ್ಯಾದ ವಿರುದ್ಧದ ದಿಗ್ಬಂಧನ ಬೆದರಿಕೆಯು ಅದರ ಮಿತ್ರರು ಮತ್ತು ಪಾಲುದಾರರ ಸೇನಾ ಸಾಮರ್ಥ್ಯಕ್ಕೆ ಹಾನಿ ಮಾಡುವ ಉದ್ದೇಶದ್ದಲ್ಲ, ರಷ್ಯದ ವರ್ತನೆಗಾಗಿ ದಂಡ ವಿಧಿಸುವ ಉದ್ದೇಶದಿಂದಷ್ಟೇ ನೀಡಿದ ಎಚ್ಚರಿಕೆ ಎಂದು ಅಮೆರಿಕದ ರಾಯಭಾರ ಕಚೇರಿ ಹೇಳಿದೆರಷ್ಯದ ಜೊತೆಗಿನ ಭಾರತದ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷರಿಂದ ಮನ್ನಾ ಲಭಿಸಬಹುದೇ ಎಂಬುದಾಗಿ ಅಮೆರಿಕ ಸ್ಪಷ್ಟ ಪಡಿಸಿಲ್ಲ. ಪ್ರತಿ ವಹಿವಾಟನ್ನು ಆಧರಿಸಿ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ಹೇಳಿದ ಅಮೆರಿಕ, ಯಾವುದೇ ದಿಗ್ಬಂಧನ ನಿರ್ಧಾರವನ್ನು ಮೊದಲೇ ನಿರ್ಧರಿಸಲಾಗದು ಎಂದು ಹೇಳಿತು. ೫ ಶತಕೋಟಿ ಅಮೆರಿಕನ್ ಡಾಲರ್ ಮೌಲ್ಯದ ಎಸ್-೪೦೦ ವಾಯು ರಕ್ಷಣಾ ವ್ಯವಸ್ಥೆ ವಹಿವಾಟಿಗೆ ಭಾರತ ಮತ್ತು ರಷ್ಯ ಸಹಿ ಹಾಕಿದ ಬಳಿಕ ಅಮೆರಿಕ ಪ್ರತಿಕ್ರಿಯೆ ನೀಡಿದೆ. ರಷ್ಯದ ಜೊತೆಗಿನ ಮಹತ್ವದ ವ್ಯವಹಾರ ನಡೆಸುವ ರಾಷ್ಟ್ರದ ವಿರುದ್ಧ ದಂಡನಾತ್ಮಕ ದಿಗ್ಬಂಧನಗಳನ್ನು ಹೇರುವುದಾಗಿ ಅಮೆರಿಕ ಮುನ್ನ ಎಚ್ಚರಿಕೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ವಾರ್ಷಿಕ ಶೃಂಗಸಭೆಗಾಗಿ ರಷ್ಯದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರು ನವದೆಹಲಿಗೆ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ರಾಷ್ಟ್ರಗಳು ವಾಯುರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದ ಅಡಿಯಲ್ಲಿ ಒದಗಿಸಲಾಗುವ ದೂರಗಾಮೀ ಕ್ಷಿಪಣಿಗಳು ಭಾರತಕ್ಕೆ ತನ್ನ ಗಡಿಯಲ್ಲಿ, ನಿರ್ದಿಷ್ಟವಾಗಿ ೪೦೦೦ ಕಿಮೀ ಉದ್ದದ ಚೀನಾ-ಭಾರತ ಗಡಿಯಲ್ಲಿ ರಕ್ಷಣಾ ವ್ಯವಸ್ಥೆಯನ್ನು ಬಲ ಪಡಿಸಲು ನೆರವಾಗಲಿವೆ

2018: ಸ್ಟಾಕ್ ಹೋಮ್:  ಕಾಂಗೋದ ಸ್ತ್ರೀರೋಗ ತಜ್ಞ ಡಾ. ಡೆನಿಸ್ ಮುಕ್ವೀಗಿ ಮತ್ತು ಯಾಜಿಡಿ ಮಾನವ ಹಕ್ಕುಗಳ ಕಾರ್ಯಕರ್ತೆ  ನಾಡಿಯಾ ಮುರದ್ ಅವರಿಗೆ ಲೈಂಗಿಕ  ಹಿಂಸಾಚಾರವನ್ನು ಸಮರ ಮತ್ತು ಸಶಸ್ತ್ರ ಘರ್ಷಣೆಗಳಲ್ಲಿ ಯುದ್ಧಾಸ್ತ್ರವಾಗಿ ಬಳಸುವುದರ ವಿರುದ್ಧ ನಡೆಸಿದ ಯತ್ನಗಳಿಗಾಗಿ ೨೦೧೮ರ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಘೋಷಿಸಲಾಯಿತು. ಸಮರ ಕಾಲದಲ್ಲಿ ಲೈಂಗಿಕ ಹಿಂಸೆಗೆ ಒಳಗಾದವರನ್ನು ರಕ್ಷಿಸಲು ಡೆನಿಸ್ ಮುಕ್ವೀಗಿ ಅವರು ತಮ್ಮ ಬದುಕನ್ನೇ ಮುಡಿಪಾಗಿ ಇಟ್ಟಿದ್ದಾರೆ. ಡೆನಿಸ್ ಅವರೊಂದಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು  ಹಂಚಿಕೊಂಡಿರುವ ನಾಡಿಯಾ ಮುರದ್ ಅವರು ಸ್ವತಃ ತಾನು ಹಾಗೂ ಇತರರು ಅನುಭವಿಸಿದ ಲೈಂಗಿಕ ಹಿಂಸಾಚಾರಗಳಿಗೆ ಸಾಕ್ಷಿಯಾಗಿದ್ದಾರೆ ಎಂದು ನೊಬೆಲ್ ಸಮಿತಿಯ ಅಧಿಕಾರಿ ಟ್ವೀಟ್ ಮಾಡಿದರು. ಡಾ. ಡೆನಿಸ್ ಮುಕ್ವೀಗಿ ಅವರು ತಮ್ಮ ತಾರುಣ್ಯದ ಬಹುಭಾಗವನ್ನು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲಿ ನಡೆದ ಲೈಂಗಿಕ ಹಿಂಸಾಚಾರ ಸಂತ್ರಸ್ತರ ಸೇವೆ ಮಾಡುವುದರಲ್ಲಿಯೇ ಕಳೆದಿದ್ದಾರೆ. ಡಾ. ಮುಕ್ವೀಗಿ ಮತ್ತು ಅವರ ಸಿಬ್ಬಂದಿ ಇಂತಹ ಹಲ್ಲೆಗೆ ಒಳಗಾದ ಸಹಸ್ರಾರು ಮಂದಿ ಸಂತ್ರಸ್ತರಿಗೆ ಸೇವೆ ಸಲ್ಲಿಸಿದ್ದಾರೆನಾಡಿಯಾ ಮುರದ್ ಅವರು ಐಸಿಸ್ (ಇಸ್ಲಾಮಿಕ್ ಸ್ಟೇಟ್) ನಡೆಸಿದ ಅತ್ಯಾಚಾರ ಮತ್ತು ಇತರ ಲೈಂಗಿಕ ಹಿಂಸೆಗೆ ಗುರಿಯಾದ ೩೦೦೦ ಮಂದಿ ಯಾಜಿಡಿ ಸಮುದಾಯದ ತರುಣಿಯರಲ್ಲಿ ಒಬ್ಬರಾಗಿದ್ದಾರೆಐಸಿಸ್ ಇವರೆಲ್ಲರನ್ನೂ ಲೈಂಗಿಕ ಗುಲಾಮರನ್ನಾಗಿ ಬಳಸಿಕೊಂಡಿತ್ತು.  ಸಂತ್ರಸ್ತ ಮಹಿಳೆಯರ ಪರವಾಗಿ, ಅವರೆಲ್ಲರೂ ಅನುಭವಿಸುತ್ತಿದ್ದ ಹಿಂಸೆಯನ್ನು ಜಗತ್ತಿನ ಮುಂದೆ ತೆರೆದು ಇಡುವ ಅಪಾರ ಧೈರ್ಯವನ್ನು ನಾಡಿಯಾ ಮುರದ್ ಅವರು ತೋರಿದ್ದಾರೆ ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿತು. ೨೧೬ ವ್ಯಕ್ತಿಗಳು ಮತ್ತು ೧೧೫ ಸಂಸ್ಥೆಗಳನ್ನು ನೊಬೆಲ್  ಶಾಂತಿ ಪ್ರಶಸ್ತಿಗೆ ಸೂಚಿಸಿ ನೊಬೆಲ್ ಸಮಿತಿಗೆ ಪ್ರಸ್ತಾವನೆಗಳು ಬಂದಿದ್ದವು. ಆದರೆ ಅವುಗಳಲ್ಲಿ ಕೆಲವು ಮಾತ್ರ ಪರಿಚಿತವಾದವುಗಳಾಗಿದ್ದವು.  ಸಿರಿಯನ್ ಸಿವಿಲಿಯನ್ ನೆರವು ಗುಂಪು ವೈಟ್ ಹೆಲ್ಮೆಟ್ಸ್, ರಷ್ಯದ ನೊವಾಯ ಗಜೆಟಾ ವೃತ್ತ ಪತ್ರಿಕೆ, ವಿಷಲ್ ಬ್ಲೋಯರ್ ಎಡ್ವರ್ಡ್ ಸ್ನೋಡೆನ್  ಮತ್ತು  ನಿರಾಶ್ರಿತರ ವಿಶ್ವ ಸಂಸ್ಥೆ ಹೈಕಮೀಷನರ್  ಹೆಸರುಗಳು ಇವುಗಳಲ್ಲಿ ಸೇರಿದ್ದವು. ಅಣ್ವಸ್ತ್ರಗಳನ್ನು ನಿವಾರಿಸುವಂತೆ ನಡೆದಿದ್ದ ಅಂತಾರಾಷ್ಟ್ರೀಯ ಪ್ರಚಾರ ಅಭಿಯಾನಕ್ಕೆ ಕಳೆದ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಪ್ರಾಪ್ತವಾಗಿತ್ತು೨೦೧೮ರ ನೊಬೆಲ್ ಶಾಂತಿ ಪ್ರಶಸ್ತಿಯ ಮಿಲಿಯನ್ ಸ್ವೀಡಿಶ್ ಕ್ರೋನರ್ (. ಮಿಲಿಯನ್ ಡಾಲರ್) ಮೊತ್ತವನ್ನು ಇವರಿಬ್ಬರು ಹಂಚಿಕೊಂಡಿದ್ದಾರೆ.

2018: ಪ್ಯಾರಿಸ್: ಇಂಟರ್ ಪೋಲ್ ಅಧ್ಯಕ್ಷ, ಚೀನಾದ ಮಾಜಿ ಹಿರಿಯ ಭದ್ರತಾ ಅಧಿಕಾರಿ  ಮೆಂಗ್ ಹಾಂಗ್ವೀ  ಸೆಪ್ಟೆಂಬರ್ ಅಂತ್ಯದಲ್ಲಿ ತಮ್ಮ ಸ್ವದೇಶಕ್ಕೆ ಪ್ರವಾಸ ಹೋದ ಬಳಿಕ ಕಣ್ಮರೆಯಾಗಿದ್ದಾರೆ ಎಂದು ಫ್ರೆಂಚ್ ಜ್ಯುಡಿಷಿಯಲ್ ಅಧಿಕಾರಿಯೊಬ್ಬರು ಹೇಳಿದರು. ೬೪ರ ಹರೆಯದ ತಮ್ಮ ಪತಿ ಇಂಟರ್ ಪೋಲ್ ಕೇಂದ್ರ ಕಚೇರಿ ಇರುವ ಫ್ರಾನ್ಸಿನ ಲ್ಯೋನ್ ಬಿಟ್ಟ ಬಳಿಕ ತಮಗೆ ಅವರ ಬಗ್ಗೆ ಯಾವುದೇ ವರ್ತಮಾನವೂ ಬಂದಿಲ್ಲ ಎಂಬುದಾಗಿ ಮೆಂಗ್ ಹಾಂಗ್ವೀ ಅವರ ಪತ್ನಿ ವರದಿ ಮಾಡಿದ್ದಾರೆ ಎಂದು ತಮ್ಮ ಪರಿಚಯ ಬಹಿರಂಗ ಪಡಿಸಲು ಇಚ್ಛಿಸದ ಅಧಿಕಾರಿ ತಿಳಿಸಿದರು.  ಮೆಂಗ್ ಅವರು ಚೀನಾ ತಲುಪಿದ್ದಾರೆ. ಚೀನಾದಲ್ಲಿ ಅವರ ಪ್ರವಾಸದ ವಿವರಗಳೇನು ಎಂಬ ಬಗ್ಗೆ ಮಾಹಿತಿಗಳು ಇಲ್ಲ. ಅವರ ಕಣ್ಮರೆ ಬಗ್ಗೆ ಪತ್ನಿ ಇಲ್ಲಿಯವರೆಗೆ ಕಾದದ್ದು ಏಕೆ ಎಂಬುದೂ ಗೊತ್ತಾಗಿಲ್ಲ. ಮೆಂಗ್ ಅವರ ಕಣ್ಮರೆ ಬಗೆಗಿನ ವರದಿಗಳ ಬಗ್ಗೆ ತನಗೆ ಅರಿವಿದೆ ಎಂದು ಹೇಳಿಕೆ ನೀಡಿರುವ ಇಂಟರ್ಪೋಲ್ಇದು ಫ್ರಾನ್ಸ್ ಮತ್ತು ಚೀನಾ ಎರಡೂ ರಾಷ್ಟ್ರಗಳ ಸಂಬಂಧ ಪಟ್ಟ ಅಧಿಕಾರಿಗಳು ಗಮನಹರಿಸಬೇಕಾದ ವಿಚಾರ ಎಂದು ಹೇಳಿದೆ. ಇಂಟರ್ ಪೋಲ್ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಅದರ ಪ್ರಧಾನ ಕಾರ್ಯದರ್ಶಿ ಜವಾಬ್ದಾರರೇ ಹೊರತು ಅಧ್ಯಕ್ಷರಲ್ಲ ಎಂದೂ ಹೇಳಿಕೆ ತಿಳಿಸಿತು. ಮೆಂಗ್ ಅವರ ಕಣ್ಮರೆ ಕುರಿತು ತನಿಖೆಯ ಸುದ್ದಿ ಚೀನಾದ ಒಂದು ವಾರ ಕಾಲದ ಸಾರ್ವಜನಿಕ ರಜಾ ವೇಳೆಯಲ್ಲಿ ಬಂದಿದೆ. ಬೀಜಿಂಗ್ ನಲ್ಲಿ ವಿದೇಶಾಂಗ ಮತ್ತು ಸಾರ್ವಜನಿಕ ಭದ್ರತಾ ಸಚಿವಾಲಯಗಳು ಯಾವುದೇ ಕರೆಗಳಿಗೆ ಮತ್ತು ಫ್ಯಾಕ್ಸ್ ಮನವಿಗಳಿಗೆ ತತ್ ಕ್ಷಣ ಸ್ಪಂದಿಸಿಲ್ಲ ಮತ್ತು ಉತ್ತರ ನೀಡಿಲ್ಲ. ಮೆಂಗ್ ಅವರು೨೦೧೬ರಲ್ಲಿ ಇಂಟರ್ ಪೋಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರ ಅಧಿಕಾರಾವಧಿ ೨೦೨೦ರವರೆಗೆ ಇದೆಚೀನಾದ ಭದ್ರತಾ ವ್ಯವಸ್ಥೆಯಲ್ಲಿ ಮೆಂಗ್ ಅವರು ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ೨೦೦೪ರಿಂದ ರಾಷ್ಟ್ರೀಯ ಪೊಲೀಸ್ ಪಡೆಯ ಸಾರ್ವಜನಿಕ ಭದ್ರತಾ ಉಪ ಸಚಿವರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಇಂಟರ್ ಪೋಲ್ ನಲ್ಲಿ ಹೊಣೆಗಳನ್ನು ಹೊತ್ತಿದ್ದಾಗಲೇ ಕರಾವಳಿ ಕಾವಲು ಪಡೆಯ ಶಾಖೆಗಳ ಮುಖ್ಯಸ್ಥ ಹಾಗೂ ಉಪಮುಖ್ಯಸ್ಥರಾಗಿಯೂ ಅವರು ಕಾರ್ ನಿರ್ವಹಿಸಿದ್ದರುಮೆಂಗ್ ಕರ್ತವ್ಯಗಳು ಅವರನ್ನು ಮಾಜಿ ನಾಯಕರಿಗೆ ಸಮೀಪವರ್ತಿಯಾಗುವಂತೆ ಮಾಡಿದ್ದವು. ಅವರಲ್ಲಿ ಕೆಲವರು ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರ ಭ್ರಷ್ಟಾಚಾರ ನಿಗ್ರಹ ಕ್ರಮಗಳ ಕಾಲದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಭ್ರಷ್ಟಾಚಾರಕ್ಕಾಗಿ ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಭದ್ರತಾ ಮುಖ್ಯಸ್ಥ ಝುಹು ಯೊಂಗ್ ಅವರ ಜೊತೆಗೆ ಮೆಂಗ್ ಅವರು ನಿಕಟ ಬಾಂಧವ್ಯ ಹೊಂದಿದ್ದ ಸಾಧ್ಯತೆಗಳಿವೆವಂಚನೆ ಮತ್ತು ಭ್ರಷ್ಟಾಚಾರ ಆರೋಪಗಳಿಗೆ ಗುರಿಯಾದ ಅಧಿಕಾರಿಗಳು ಮತ್ತು ವ್ಯಾಪಾರಸ್ಥರನ್ನು ರಾಷ್ಟ್ರಕ್ಕೆ ವಾಪಸ್ ಕರೆಸಿಕೊಳ್ಳುವ ಬಗ್ಗೆ ಕ್ಷಿ ಗಮನ  ಇಟ್ಟಿದ್ದುದು ಮೆಂಗ್ ಅವರ ಸ್ಥಾನವನ್ನು ಅತ್ಯಂತ ಸೂಕ್ಷ್ಮ ಸ್ಥಾನವಾಗುವಂತೆ ಮಾಡಿತ್ತು. ಮೆಂಗ್ ಅವರು ೨೦೧೬ರಲ್ಲಿ ಇಂಟರ್ ಪೋಲ್ ಅಧ್ಯಕ್ಷರಾಗಿ ಆಯ್ಕೆಯಾದಾಗ, ಕ್ಷಿ ವಿರೋಧಿಗಳ ವಿರುದ್ಧ ರಾಜಕೀಯ ಪೊಲೀಸಿಂಗ್ ಕಾರ್ಯಸೂಚಿಯನ್ನು ಮೆಂಗ್ ಅವರು ಮುಂದುವರೆಸಬಹುದು ಎಂದು  ಮಾನವ ಹಕ್ಕುಗಳ ಗುಂಪುಗಳು ಕಳವಳ ವ್ಯಕ್ತ ಪಡಿಸಿದ್ದವು.

2018: ಕೋಚಿ: ಪ್ರಸಕ್ತ ವರ್ಷದ ಯಾತ್ರಾ ಕಾಲದಲ್ಲಿ ಶಬರಿಮಲೈ ದೇವಾಲಯದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ಕೇರಳ ಸರ್ಕಾರ ಸಜ್ಜಾಗಿರುವ ಹಿನ್ನೆಲೆಯಲ್ಲಿ ಮಹಿಳೆಯರ ಭದ್ರತೆ ಖಾತರಿಗೆ ೬೦೦ ಮಹಿಳಾ ಪೊಲೀಸ್ ಸಿಬ್ಬಂದಿಯ ಅಗತ್ಯವಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ ಬೆಹ್ರಾ ಹೇಳಿದರು. ಶಬರಿಮಲೈ ದೇವಾಲಯಕ್ಕೆ ಭೇಟಿ ನೀಡುವ ಮಹಿಳೆಯರ ಭದ್ರತೆ ಮತ್ತು ಸುರಕ್ಷತೆ ಅತ್ಯಂತ ಅಗತ್ಯ. ಅವರ ಸುರಕ್ಷತೆಯ ಖಾತರಿಗಾಗಿ ೬೦೦ ಮಹಿಳಾ ಪೊಲೀಸ್ ಸಿಬ್ಬಂದಿಯ ಅಗತ್ಯ ಇದೆ ಎಂದು ಬೆಹ್ರಾ ಅವರು ಮಾಧ್ಯಮ ವ್ಯಕ್ತಿಗಳ ಜೊತೆ ಮಾತನಾಡುತ್ತಾ ಹೇಳಿದರು. ಶಬರಿಮಲೈಯಲ್ಲಿ ತಿಂಗಳಲ್ಲೇ ಮಹಿಳಾ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ನುಡಿದ ಅವರು ತಮ್ಮ ಧರ್ಮ ಮತ್ತು ರಾಜಕೀಯ ಏನೇ ಇದ್ದರೂ ಬದಿಗಿಟ್ಟು ಪ್ರತಿಯೊಬ್ಬರೂ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.  ‘ಅವರನ್ನು (ಮಹಿಳೆಯರನ್ನು) ಅಲ್ಲಿ (ಶಬರಿಮಲೆ) ನಿಯೋಜಿಸಲಾಗುವುದು. ಅವರು ಕಾನೂನು ಜಾರಿ ಸಂಸ್ಥೆಯಾಗಿರುತ್ತಾರೆ. ಯಾವುದೇ ಲಿಂಗವಿಲ್ಲ, ಯಾವುದೇ ಧರ್ಮವಿಲ್ಲ, ಏನೂ ಇಲ್ಲ. ಎಲ್ಲರೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಅವರು ನುಡಿದರು. ಅಕ್ಟೋಬರ್ ೧೬ರಿಂದ ಆರಂಭವಾಗುವ ವರ್ಷದ ಯಾತ್ರಾ ಕಾಲದಿಂದಲೇ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನ ಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಪ್ರಕಟಿಸಿದ್ದರು. ತಿರುವಾಂಕೂರು ದೇವಸ್ವಂ ಮಂಡಳಿ ಕೂಡಾ ಮಹಿಳಾ ಯಾತ್ರಿಗಳಿಗೆ ಅಗತ್ಯ ಸವಲತ್ತುಗಳನ್ನು ಒದಗಿಸಲು ನಿರ್ಧರಿಸಿತು. ಈ ಮಧ್ಯೆ ಸಾಮಾಜಿಕ-ರಾಜಕೀಯ ಸಂಘಟನೆಯಾಗಿರುವ ನಾಯರ್ ಸರ್ವೀಸ್ ಸೊಸೈಟಿ  (ಎನ್ ಎಸ್ ಎಸ್), ಪಂದಳ ರಾಜಕುಟುಂಬ ಮತ್ತು ದೇವಾಲಯದ ಮುಖ್ಯ ಅರ್ಚಕರ ಕುಟುಂಬ ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೪ರ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಪ್ರಕಟಿಸಿವೆ. ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನಪೀಠವು :೧ರ ಬಹುಮತದ ತೀರ್ಪಿನಲ್ಲಿ ೧೦ರಿಂದ ೫೦ ವರ್ಷಗಳ ನಡುವಣ ವಯಸ್ಸಿನ ಎಲ್ಲ ಮಹಿಳೆಯರ ದೇಗುಲ ಪ್ರವೇಶಕ್ಕೆ ಶತಮಾನಗಳಿಂದ ಇದ್ದ ನಿಷೇಧವನ್ನು ರದ್ದು ಪಡಿಸಿತ್ತು.


2014: ನವದೆಹಲಿ: ಮಾವೋವಾದಿ ಗೆರಿಲ್ಲಾಗಳ ಜೊತೆ ಸಂಪರ್ಕ ಇಟ್ಟುಕೊಂಡ ಆರೋಪದಲ್ಲಿ ಜಾರ್ಖಂಡ್​ನ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಶಾಸಕ ಯೋಗೇಂದ್ರ ಸಾವೋ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಇಲ್ಲಿ ತಿಳಿಸಿದರು. 'ಸಿಐಡಿ ತಂಡವು ದೆಹಲಿ ಪೊಲೀಸರ ನೆರವಿನೊಂದಿಗೆ ಸುಭಾಶ್ ನಗರದ ಮನೆಯೊಂದರಿಂದ ಸಾವೋ ಅವರನ್ನು ಹಿಂದಿನ ರಾತ್ರಿ ಬಂಧಿಸಿತು. ಅವರನ್ನು ರಾಂಚಿಗೆ ಕರೆತರಲಾಗುವುದು ಎಂದು ಪೊಲೀಸ್ ವಕ್ತಾರ ಅನುರಾಗ್ ಗುಪ್ತ ದೆಹಲಿಯಲ್ಲಿ ವರದಿಗಾರರಿಗೆ ವಿವರಿಸಿದರು.. ಬಂಡುಕೋರರೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಕಾರಣಕ್ಕಾಗಿ ಹಜಾರಿಬಾಗ್ ನ್ಯಾಯಾಲಯ ಕಳೆದ ತಿಂಗಳು ಸಾವೋ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಿತ್ತು. 50ರ ಹರೆಯದ ಸಾವೋ ಅವರು ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು

2014: ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಯ (ಇಪಿಎಪ್​ಒ) ಸುಮಾರು 4 ಕೋಟಿಗೂ ಹೆಚ್ಚಿನ ಚಂದಾದಾರರಿಗೆ ತಮ್ಮ ಖಾತೆಯ ವಿವರಗಳನ್ನು ಅಂತರ್ಜಾಲದ ಮೂಲಕವೇ ಪಡೆದುಕೊಳ್ಳಲು ಸಾಧ್ಯವಾಗುವಂತಹ 'ಅನ್​ಲೈನ್ ಆನ್ ರಿಯಲ್ ಟೈಮ್ ಆಧಾರದಲ್ಲಿ ಸದಸ್ಯರಿಗೇ ಮೀಸಲಾದ ವೆಬ್ ಪೋರ್ಟಲ್ ಅಕ್ಟೋಬರ್ 16ರಿಂದ ಕಾರ್ಯ ನಿರ್ವಹಿಸಲಿದೆ. ಸಾರ್ವತ್ರಿಕ ಖಾತಾ ಸಂಖ್ಯೆ (ಯುನಿವರ್ಸಲ್ ಅಕೌಂಟ್ ನಂಬರ್- ಯುಎಎನ್) ಸದಸ್ಯರ ಪೋರ್ಟಲ್ ನೌಕರರ ಭವಿಷ್ಯನಿಧಿ ಸಂಘಟನೆಗೆ ತಮ್ಮ ಮಾಲೀಕರು ಪಿಫ್ ಕೊಡುಗೆಗಳನ್ನು ಪಾವತಿ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೆರವಾಗುವುದು. ಯುಎ ಎನ್ ಸದಸ್ಯರ ಪೋರ್ಟಲ್ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಕ್ಟೋಬರ್ 16ರಂದು ಉದ್ಘಾಟನೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

2014: ನವದೆಹಲಿ: ವಯಸ್ಸಿನ ನಕಲಿ ದಾಖಲೆಗಳನ್ನು ನೀಡಿ ಕಡಿಮೆ ವಯಸ್ಸಿನ ಗುಂಪುಗಳ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಆಪಾದನೆ ಹಿನ್ನೆಲೆಯಲ್ಲಿ ಸಿಬಿಐ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಟೇಬಲ್ ಟೆನಿಸ್ ಆಟಗಾರರ ಮೇಲೆ ಕಣ್ಣಿಟ್ಟಿತು. ಹೊಸದಾಗಿ ರಚಿಸಲಾದ ಸಿಬಿಐನ ಕ್ರೀಡಾ ಋಜುತ್ವ ಘಟಕವು ಹಿರಿಯ ಅಧಿಕಾರಿಯೊಬ್ಬರು ತಮ್ಮ ಪುತ್ರಿಗೆ ಅನ್ಯಾಯವಾಗಿದೆ ಎಂದು ನೀಡಿದ ದೂರಿನ ವಿಚಾರವನ್ನು ತನ್ನ ಪರಿಶೀಲನೆಗೆ ಎತ್ತಿಕೊಂಡಿತು.. ಹೆಚ್ಚು ವಯಸ್ಸಿನ ವ್ಯಕ್ತಿಗಳು ಸ್ಪರ್ಧಾಕಣದಲ್ಲಿ ಇದ್ದುದರಿಂದ ತಮ್ಮ ಪುತ್ರಿ ಒಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂದು ಈ ಹಿರಿಯ ಅಧಿಕಾರಿ ದೂರು ನೀಡಿದ್ದರು. ಸಂಸ್ಥೆಯು ಪ್ರಾಥಮಿಕ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿ, ಪಶ್ಚಿಮ ಬಂಗಾಳದ ಆಟಗಾರರಿಗೆ ನೋಟಿಸ್​ಗಳನ್ನು ಜಾರಿ ಮಾಡಿತು ಎಂದು ಮೂಲಗಳು ಹೇಳಿದವು. ಶಿಷ್ಯವೇತನ ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳುವುದು ಇಂತಹ ಚಟುವಟಿಕೆಯ ಗುರಿ ಎಂದು ಹೇಳಲಾಯಿತು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹಲವಾರು ಟೇಬಲ್ ಟೆನಿಸ್ ಆಟಗಾರರು ಕಡಿಮೆ ವಯಸ್ಸಿನ ದಾಖಲೆಗಳನ್ನು ತೋರಿಸಿ ಕ್ರೀಡಾ ಕೂಟಗಳಲ್ಲಿ ಕಡಿಮೆ ವಯಸ್ಸಿನ ಗುಂಪುಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು ಎಂದು ತನಿಖೆಯ ನೇತೃತ್ವ ವಹಿಸಿರುವ ಸಿಬಿಐ ಅಧಿಕಾರಿಯೊಬ್ಬರು ಹೇಳಿದರು.

2014: ಜಕಾರ್ತಾ (ಇಂಡೋನೇಷ್ಯ): ಇಂಡೋನೇಷ್ಯಾದ ಉತ್ತರ ಸುಮಾತ್ರದಲ್ಲಿನ ಸಿನಾಬಂಗ್ ಪರ್ವತದ ಜ್ವಾಲಾಮುಖಿ ಈದಿನ ಸಕ್ರಿಯಗೊಂಡು ಬಾಯ್ದೆರೆಯಿತು. ಜ್ವಾಲಾಮುಖಿಯಿಂದ ಚಿಮ್ಮಿದ ಬೂದಿ ಆಕಾಶದಲ್ಲಿ ಸುಮಾರು 3,000 ಮೀಟರ್ ಎತ್ತರಕ್ಕೆ ವ್ಯಾಪಿಸಿತು. ನಸುಕಿನಿಂದ ಸಂಜೆಯವರೆಗೆ ಜ್ವಾಲಾಮುಖಿ ನಾಲ್ಕು ಬಾರಿ ಸ್ಪೋಟಗೊಂಡಿತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ವಕ್ತಾರ ಸುತೊಪೊ ಪೂರ್ಣೇ ಅವರು ದೂರವಾಣಿ ಮೂಲಕ ಕ್ಷಿನ್​ಹುವಾಕ್ಕೆ ತಿಳಿಸಿದರು. ಜ್ವಾಲಾಮುಖಿಯಿಂದ ಎದ್ದ ಹೊಗೆ ಮತ್ತು ಬೂದಿ ದಕ್ಷಿಣದ ಕಡೆಗೆ ಸಾಗಿತು ಎಂದು ಸುತೊಪೊ ಹೇಳಿದರು. ಸಿನಾಬಂಗ್ ಜ್ವಾಲಾಮುಖಿ ಪರ್ವತ ಕಳೆದ ಜೂನ್ ಮತ್ತು ಸೆಪ್ಟೆಂಬರಿನಲ್ಲಿ ಬಾಯ್ದೆರೆದಿದಿತ್ತು. ಅದಕ್ಕೆ ಮೊದಲು 2013ರ ಸೆಪ್ಟೆಂಬರ್​ನಿಂದ 2014ರ ಫೆಬ್ರುವರಿವರೆಗೆ ಜ್ವಾಲಾಮುಖಿ ಬಾಯ್ದೆರೆದು ಲಾವಾರಸ ಹಾಗೂ ಬೂದಿಯನ್ನು ಹೊರಚೆಲ್ಲಿತ್ತು. ಈ ಸಂದರ್ಭದಲ್ಲಿ 15 ಜನ ಮೃತರಾಗಿ, 30,000ಕ್ಕೂ ಹೆಚ್ಚು ಮಂದಿಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕಾಗಿ ಬಂದಿತ್ತು.


2014: ವಾಷಿಂಗ್ಟನ್: ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗಾಗಿ ಅಮೆರಿಕ ಸರ್ಕಾರ ಕೊಡಮಾಡುವ ಪ್ರತಿಷ್ಠಿತ ಪ್ರಶಸ್ತಿಗೆ ಭಾರತೀಯ ಮೂಲದ ವಿಜ್ಞಾನಿ ಥಾಮಸ್ ಕೈಲಾಥ್(79) ಪಾತ್ರರಾದರು. ಒಟ್ಟು 10 ಮಂದಿ ವಿಜ್ಞಾನಿಗಳಿಗೆ ವಾರ್ಷಿಕವಾಗಿ ನೀಡಲಾಗುವ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಅಧ್ಯಕ್ಷ ಬರಾಕ್ ಒಬಾಮ ಘೋಷಿಸಿದರು. ಕೇರಳದಲ್ಲಿ ಜನಿಸಿದ್ದ ಥಾಮಸ್ 1956ರಲ್ಲಿ ಪುಣೆ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿದ್ದರು. ಇವರು ಪದ್ಮಭೂಷಣಕ್ಕೂ ಪಾತ್ರರಾಗಿದ್ದರು.

2014: ಮಾಲ್ದೀವ್ಸ್: ರಾಜಸ್ಥಾನದ ಮಾಜಿ ಬ್ಯಾಟ್ಸ್​ಮನ್ ರಾಜೇಶ ಸಂಘಿ ಅವರು ಮಾಲ್ದೀವ್ಸ್​ನಲ್ಲಿ ನಿಧನರಾದರು. ರಜಾ ಕಾಲದ ಪ್ರವಾಸದಲ್ಲಿದ್ದ ರಾಜೇಶ ಸಂಘಿ (42) ಹೃದಯಾಘಾತದಿಂದ ನಿಧನರಾದರು. ಸಂಘಿ ಅವರು ರಾಜಸ್ಥಾನ ಪರವಾಗಿ ಆಡಲು ಹೋಗುವ ಮುನ್ನ ಮುಂಬೈಯಲ್ಲಿ ಬಿಸಿಸಿಐ ನಡೆಸಿದ್ದ 15 ವಯಸ್ಸಿಗಿಂತ ಕೆಳಗಿನವರ ಟೂರ್ನಮೆಂಟ್​ನಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಮೊದಲ ಕ್ಯಾಪ್ಟನ್ ಆಗಿದ್ದರು. ಓಪನಿಂಗ್ ಬ್ಯಾಟ್ಸ್​ಮನ್ ಮತ್ತು ಲೆಗ್​ಸ್ಪಿನ್ನರ್ ಆಗಿದ್ದ ಸಂಘಿ ನಾಲ್ಕು ಫಸ್ಟ್ ಕ್ಲಾಸ್ ಹಾಗೂ ಹಲವಾರು ಲಿಸ್ಟ್ ಎ ಪಂದ್ಯಗಳನ್ನು 1993-94ರ ಅವಧಿಯಲ್ಲಿ ಆಡಿದ್ದರು. ಫಸ್ಟ್ ಕ್ಲಾಸ್ ಪಂದ್ಯಗಳಲ್ಲಿ ಅವರು ಒಂದು ಶತಕ ಸೇರಿ 218 ರನ್ ಗಳಿಸಿದ್ದರೆ, ಲಿಸ್ಟ್ ಎ ಪಂದ್ಯದಲ್ಲಿ 72 ರನ್ ಗಳಿಸಿದ್ದರು.
2014: ಡಮಾಸ್ಕಸ್: ಅಮೆರಿಕ ನೇತೃತ್ವದ ಭಯೋತ್ಪಾದಕ ವಿರೋಧಿ ಮೈತ್ರಿಕೂಟವು ಉತ್ತರ ಕೊರಿಯಾದಲ್ಲಿ ನಡೆಸಿದ ವೈಮಾನಿಕ ದಾಳಿಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳ ಗುಂಪಿನ ಕನಿಷ್ಠ 35 ಮಂದಿ ಸದಸ್ಯರು ಹತರಾದರು. ಮಾನವ ಹಕ್ಕುಗಳ ಸಿರಿಯಾ ವೀಕ್ಷಣಾಲಯವನ್ನು ಉಲ್ಲೇಖಿಸಿ ಮಾಡಿರುವ ವರದಿಯಲ್ಲಿ ಪಾನ್-ಅರಬ್ ಅಲ್-ಮಯಾದೀನ್ ಟಿವಿ ಈ ದಾಳಿಗಳ ಬಗ್ಗೆ ತಿಳಿಸಿತು. ಅಮೆರಿಕದ ಡ್ರೋನ್​ಗಳು ಜೋರ್ಡಾನ ಸಮರ ವಿಮಾನಗಳ ಜೊತೆಗೂಡಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಸಿರಿಯಾದ ಉತ್ತರ ಪ್ರಾಂತ ಹಸಾಕಾ ಮತ್ತು ಕುರ್ದಿಶ್ ನಗರ ಕೊಬಾನೆಯ ಆಸುಪಾಸಿನ ಇಸ್ಲಾಮಿಕ್ ಸ್ಟೇಟ್ ನೆಲೆಗಳನ್ನು ಪ್ರಮುಖ ಗುರಿಯಾಗಿ ಇಟ್ಟುಕೊಳ್ಳಲಾಗಿತ್ತು. ಈ ಮಧ್ಯೆ 24 ಗಂಟೆಗಳ ಅವಧಿಯಲ್ಲಿ 67 ಮಂದಿ ಉಗ್ರಗಾಮಿಗಳನ್ನು ಕೊಲ್ಲುವ ಮೂಲಕ ಕೊಬಾನೆ ಕಡೆಗೆ ಅವರು ಮುಂದೊತ್ತಿ ಬರದಂತೆ ತಡೆಯಲಾಗಿದೆ ಎಂದು ಕುರ್ದಿಶ್ ಪೀಪಲ್ಸ್ ಪ್ರೊಟೆಕ್ಷನ್ ಯುನೈಟ್ಸ್/ ವೈಪಿಜಿ ಹೇಳಿಕೆಯಲ್ಲಿ ತಿಳಿಸಿತು. 

2008: ಮೂರು ದಿನಗಳಿಂದ ಅಸ್ಸಾಂನ ಉದಲ್ಗುರಿ ಮತ್ತು ಡರ್ರಾಂಗ್ ಜಿಲ್ಲೆಗಳಲ್ಲಿ ನಡೆದ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 30ಕ್ಕೆ ಏರಿತು. ಉದಲ್ಗುರಿ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಗುಡಿಸಲಿಗೆ ಬೆಂಕಿ ಹಚ್ಚಲು ಯತ್ನಿಸಿದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ನಾಲ್ಕು ಮಂದಿ ಸಾವನ್ನಪ್ಪಿದರು. ಮೃತಪಟ್ಟವರೆಲ್ಲರೂ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸರೊಬ್ಬರು ತಿಳಿಸಿದರು. ಮೂರು ದಿನಗಳಿಂದ ಈ ಎರಡು ಜಿಲ್ಲೆಯಲ್ಲಿ ನಡೆದ ಘರ್ಷಣೆಯಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು.. 250ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿಯಾದವು. 10 ಸಾವಿರ ಮಂದಿ ಭಯಭೀತರಾಗಿ ತಮ್ಮ ಹಳ್ಳಿಗಳನ್ನು ತೊರೆದು ಸರ್ಕಾರ ನಿರ್ಮಿಸಿದ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದರು.

2008: ಮೆಕ್ಕೆ ಜೋಳದಂತಹ ಧಾನ್ಯ ಆಧಾರಿತ ಜೈವಿಕ ಇಂಧನಕ್ಕಿಂತ ಹುಲ್ಲು ಬೆಳೆಯ ತ್ಯಾಜ್ಯ ಮತ್ತು ಗಿಡಗಳ ತಿನ್ನಲನರ್ಹ ಭಾಗಗಳಿಂದ ಉತ್ಪಾದಿಸುವ ಜೈವಿಕ ಇಂಧನವೇ ಹೆಚ್ಚು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಎಂದು ತಜ್ಞರ ತಂಡವೊಂದು ವಾಷಿಂಗ್ಟನ್ನಿನಲ್ಲಿ ಪ್ರಕಟಿಸಿತು.. ಈ ಬಗ್ಗೆ ಪರಸ್ಪರ ಸಹಕಾರದಡಿ ಸಮಗ್ರ ಸಂಶೋಧನೆ ನಡೆಸಬೇಕಾದ ಅಗತ್ಯವಿದೆ. ಇದರಿಂದ ಪೌಷ್ಟಿಕಾಂಶದ ನಷ್ಟ ಮತ್ತು ಆಹಾರ ಉತ್ಪಾದನೆಗಾಗಿ ಹೊಸ ಭೂಮಿಯನ್ನು ಸಜ್ಜುಗೊಳಿಸಿ ಮುಂದಿನ ಪೀಳಿಗೆ ಧಾನ್ಯ ಆಧಾರಿತ ಜೈವಿಕ ಇಂಧನದಿಂದ ಅನುಭವಿಸಬೇಕಾದ ಹೊರೆಯನ್ನು ತಪ್ಪಿಸಿದಂತಾಗುತ್ತದೆ ಎಂದು ಪುರ್ಡ್ಯೂ ಕೃಷಿ ವಿಶ್ವವಿದ್ಯಾಲಯದ ತಜ್ಞ ಒಟ್ಟೊ ಡೋರಿಂಗ್ ಮತ್ತು 22 ವಿಜ್ಞಾನಿಗಳ ತಂಡ ಸಲ್ಲಿಸಿದ ವರದಿ ಅಭಿಪ್ರಾಯಪಟ್ಟಿತು. ಗಿಡಮರಗಳ ಜೀವಕೋಶ ದ್ರವ್ಯಗಳಲ್ಲಿನ ಜೈವಿಕ ಇಂಧನಕ್ಕೆ ಉತ್ತಮ ಭವಿಷ್ಯವಿದೆ ಎಂದು ಹಿಂದಿನ ವರ್ಷದ ಇಂಧನ ಮಸೂದೆ ಸ್ಪಷ್ಟಪಡಿಸಿದೆ.. ಅಮೆರಿಕದ ಕಂಪೆನಿಗಳು 2022ರ ಹೊತ್ತಿಗೆ ಇಂತಹ 21 ಶತಕೋಟಿ ಗ್ಯಾಲನ್ ಇಂಧನ ಖರೀದಿಸುವುದಾಗಿ ಹೇಳಿವೆ. ಆದರೆ ಇದಕ್ಕಾಗಿ ಬಳಸಬೇಕಾದ ನೀರಿನ ಪ್ರಮಾಣ, ಪೌಷ್ಟಿಕಾಂಶಗಳ ನಷ್ಟ, ಹಸಿರುಮನೆ ಅನಿಲ ತ್ಯಾಜ್ಯದ ಜೊತೆಗೆ ಮಣ್ಣಿನ ಮೇಲಾಗುವ ಪರಿಣಾಮಗಳನ್ನೂ ನಾವು ಪರಿಗಣಿಸಬೇಕಾಗುತ್ತದೆ ಎಂದು ತಂಡ ಹೇಳಿತು..

2007: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡುವ ಮೂಲಕ ಜೆಡಿಎಸ್ ನೇತೃತ್ವದ ಸರ್ಕಾರ ಸೇಡಿನ ರಾಜಕೀಯ ಆರಂಭಿಸಿತು. ಬಿಜೆಪಿಯು ಕುಮಾರಸ್ವಾಮಿ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಒಂದೆರಡು ದಿನದಲ್ಲಿ ಹಿಂದೆಗೆದುಕೊಳ್ಳುವ ಸೂಚನೆ ಲಭಿಸಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆಯಿತು. ಬಿಜೆಪಿಗೆ ಅಂಕುಶ ಹಾಕುವ ಪ್ರಯತ್ನವಾಗಿ ಇದು ನಡೆದಿದ್ದು, ಜೆಡಿಎಸ್ ನ ಮಹಮ್ಮದ್ ಆಸಿಫ್ ನಿಗಮದ ನೂತನ ಅಧ್ಯಕ್ಷರಾದರು.

2007: ಭಾರತದ ಮೊದಲ ಮಧ್ಯಗಾಮಿ ಕ್ಷಿಪಣಿ `ಅಗ್ನಿ-1'ನ್ನು ಒರಿಸ್ಸಾದ ಬಾಲಸೋರ್ ಬಳಿ ಕಡಲ ತೀರದಿಂದ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಕ್ಷಿಪಣಿಗೆ 1000 ಕೆಜಿ ಭಾರದ ಸಿಡಿತಲೆಯನ್ನು ಸೆಕೆಂಡಿಗೆ 2.5 ಕಿಮೀ ವೇಗದಲ್ಲಿ 700 ಕಿಮೀ ದೂರ ಹೊತ್ತೊಯ್ಯುವ ಸಾಮರ್ಥ್ಯವಿದೆ. ಇದು 15 ಮೀಟರ್ ಉದ್ದವಿದ್ದು, 12 ಟನ್ ಭಾರವಿದೆ. ಇದು ಈ ಕ್ಷಿಪಣಿಯ ನಾಲ್ಕನೇ ಪರಿಕ್ಷಾ ಉಡಾವಣೆ. 25 ಜನವರಿ 2002, 9 ಜನವರಿ 2003 ಮತ್ತು 4 ಜುಲೈ 2004ರಲ್ಲಿ ಈ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಲಾಗಿತ್ತು.

2007: ಸ್ಥಳೀಯರಿಂದ ಪ್ರಬಲ ವಿರೋಧ ವ್ಯಕ್ತವಾಗಿದ್ದರೂ ಹೊಸಕೋಟೆಯ ನಂದಗುಡಿಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಮುಂದಾಗಿರುವ `ಸ್ಕಿಲ್' ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಳ್ಳಲು ಸರ್ಕಾರ ಪ್ರಥಮ ಹೆಜ್ಜೆ ಇರಿಸಿತು. ಸಚಿವ ಸಂಪುಟ ನಿರ್ಧಾರ ಹಾಗೂ ಉನ್ನತ ಅನುಮೋದನಾ ಸಮಿತಿಯ ತೀರ್ಮಾನದಂತೆ ಒಪ್ಪಂದ ಪರಿಶೀಲನೆಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಸಚಿವ ಸಂಪುಟ ನಿರ್ಧರಿಸಿತು. ಬಿಜೆಪಿ ಸಚಿವರ ಅನುಪಸ್ಥಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೊ ಜತೆ ಅಧಿಕಾರ ಹಂಚಿಕೆಗೆ ಅನುವು ಮಾಡಿಕೊಳ್ಳುವ ಉದ್ದೇಶದಿಂದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು `ರಾಷ್ಟ್ರೀಯ ರಾಜಿ' ಸುಗ್ರೀವಾಜ್ಞೆಗೆ ಸಹಿ ಹಾಕಿದರು. ಈ ಆಜ್ಞೆಯ ಪ್ರಕಾರ ಬೆನಜಿರ್ ಭುಟ್ಟೊ ಮತ್ತಿತರ ರಾಜಕೀಯ ಧುರೀಣರಿಗೆ ದೇಶದ ವಿವಿಧ ನ್ಯಾಯಾಲಯಗಳಲ್ಲಿನ ಭ್ರಷ್ಟಾಚಾರ ಮತ್ತಿತರ ಪ್ರಕರಣಗಳಲ್ಲಿ ಕ್ಷಮಾದಾನ ದೊರೆಯಲಿದೆ. ಮತ್ತೊಬ್ಬ ಮಾಜಿ, ಮುಷರಫ್ ಕಡುವಿರೋಧಿ ಪ್ರಧಾನಿ ನವಾಜ್ ಷರೀಫ್ ಹೊರತುಪಡಿಸಿ ಉಳಿದ ರಾಜಕೀಯ ಧುರೀಣರಿಗೆ ಈ ಸುಗ್ರೀವಾಜ್ಞೆ ಅನ್ವಯವಾಗುತ್ತದೆ.

2007: ಸಿಡ್ನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಐದು ಪದಕ ಗೆದ್ದ ಸಂದರ್ಭದಲ್ಲಿಯೇ ವಿಶ್ವ ಖ್ಯಾತ ಮಹಿಳಾ ಅಥ್ಲೆಟ್ ಮೇರಿಯನ್ ಜೋನ್ಸ್ ಉದ್ದೀಪನ ಮದ್ದು ಸೇವಿಸಿದ್ದರೆಂಬುದು ಖಚಿತಗೊಂಡಿತು. ದೀರ್ಘ ಕಾಲದ ವಿಚಾರಣೆಯ ನಂತರ ಆರೋಪ ಸಾಬೀತಾಗಿ, ಇಷ್ಟೊಂದು ಸಮಯ ಸತ್ಯವನ್ನು ಮುಚ್ಚಿಟ್ಟ ಅಥ್ಲೆಟ್ ವರ್ತನೆಯನ್ನೂ ವಿಚಾರಣಾ ಸಮಿತಿಯು ಗಂಭೀರವಾಗಿ ಪರಿಗಣಿಸಿತು. ಈ ಹಿನ್ನೆಲೆಯಲ್ಲಿ ಅವರು ಸಿಡ್ನಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಪದಕಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳೂ ಹೆಚ್ಚಿದವು.

2007: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಲಾಹೋರಿನಲ್ಲಿ ನಡೆಯುವ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿಯಾಗುವುದಾಗಿ ಪಾಕಿಸ್ಥಾನ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಕರಾಚಿಯಲ್ಲಿ ಪ್ರಕಟಿಸಿದರು. ಲಾಹೋರಿನಲ್ಲಿ ನಡೆವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯ ಮುಲ್ತಾನಿನ 37ರ ಹರೆಯದ ಈ ಬ್ಯಾಟಿಗನ ಕೊನೆಯ ಪಂದ್ಯವಾಗಲಿದೆ. ಇಂಜಿ ಅವರು ಕೆರಿಬಿಯನ್ನಿನಲ್ಲಿ ನಡೆದ ವಿಶ್ವಕಪ್ ಟೂರ್ನಿಯೊಂದಿಗೆ ಏಕದಿನ ಕ್ರಿಕೆಟಿಗೆ ವಿದಾಯ ಹೇಳಿದ್ದರು. ಇದೀಗ ಟೆಸ್ಟ್ನಿಂದಲೂ ಅವರು ವಿರಮಿಸುವುದರೊಂದಿಗೆ ಪಾಕಿಸ್ಥಾನ ಕ್ರಿಕೆಟಿನ ಒಂದು ಯುಗ ಅಂತ್ಯವಾಗುವುದು. ಇಂಜಮಾಮ್ ಅವರು ಇದುವರೆಗೆ ಒಟ್ಟು 119 ಟೆಸ್ಟ್ ಪಂದ್ಯಗಳಲ್ಲಿ ಪಾಕಿಸ್ಥಾನ ತಂಡವನ್ನು ಪ್ರತಿನಿಧಿಸಿದ್ದಾರೆ.

2006: ಭಜರಂಗದಳವು ಕರೆ ನೀಡಿದ್ದ ಮಂಗಳೂರು ಬಂದ್ ಕಾಲದಲ್ಲಿ ವ್ಯಾಪಕ ಹಿಂಸಾಚಾರ ನಡೆದು ಮಂಗಳೂರು, ಬಿ.ಸಿ.ರೋಡ್, ಸುರತ್ಕಲ್ಲಿನಲ್ಲಿ 3 ದಿನ ಕರ್ಫ್ಯೂ ಜಾರಿಗೊಳಿಸಲಾಯಿತು. ದನಗಳನ್ನು ಸಾಗಿಸುತ್ತ್ದಿದ ವಾಹನವೊಂದು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಾರಿಯಾದಾಗ ಅದನ್ನು ಬೆನ್ನತ್ತಿದವರ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಘರ್ಷಣೆ ನಡೆದಿದ್ದು, ಭಜರಂಗದಳ ಮಂಗಳೂರು ಬಂದ್ ಗೆ ಕರೆ ನೀಡಿತ್ತು.

1991: ಪತ್ರಕರ್ತ, ಇಂಡಿಯನ್ ಎಕ್ಸ್ಪ್ರೆಸ್ ಗ್ರೂಪಿನ ಸಂಸ್ಥಾಪಕ ಅಧ್ಯಕ್ಷ ರಾಮನಾಥ ಗೋಯೆಂಕಾ (87) ನಿಧನ.

1989: ಮೀರಾ ಸಾಹಿಬ್ ಫಾತಿಮಾ ಬೀವಿ ಅವರು ಭಾರತದ ಸುಪ್ರೀಂ ಕೋರ್ಟಿನ ಮೊದಲ ಮಹಿಳಾ ನ್ಯಾಯಾಧೀಶರಾದರು.

1957: ಸಾಹಿತಿ ಭಾರತಿ ಪಾಟೀಲ ಜನನ.

1951: ಭಾರತದ ಮೊದಲ ಮಹಾ ಚುನಾವಣೆ ಆರಂಭವಾಯಿತು. ಅದು 1952ರ ಫೆಬ್ರುವರಿ 21ರಂದು ಅದು ಅಂತ್ಯಗೊಂಡಿತು.

1949: ಸಮಾಜ ಸುಧಾರಕ, ರಾಜಕಾರಣಿ ಎ.ಕೆ. ಪಿಳ್ಳೈ ನಿಧನ.

1935: ಸಾಹಿತಿ ಎನ್.ಎಸ್. ಸೋಮಪ್ಪ ಜನನ.

1932: ಕ್ರಿಕೆಟಿಗ ಮಾಧವರಾವ್ ಲಕ್ಷ್ಮಣ ರಾವ್ ಆಪ್ಟೆ ಜನನ.

1930: ಸಾಹಿತಿ ಎಚ್. ಆರ್. ಭಸ್ಮೆ ಜನನ.

1919: ಖ್ಯಾತ ಸಾಹಿತಿ ಬಸವರಾಜ ಕಟ್ಟೀಮನಿ (5-10-1919ರಿಂದ 23-10-1989ರವರೆಗೆ) ಅವರು ಅಪ್ಪಯ್ಯ- ಬಾಳವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಾಲಮರಡಿಯಲ್ಲಿ ಜನಿಸಿದರು.

1919: ಸಾಹಿತಿ ಎಲ್. ಬಸವರಾಜು ಜನನ.

1882: ರಾಬರ್ಟ್ ಹಚಿಂಗ್ಸ್ ಗೊಡ್ಡಾರ್ಡ್ (1882-1945) ಜನ್ಮದಿನ. ಅಮೆರಿಕನ್ ಪ್ರೊಫೆಸರ್ ಹಾಗೂ ಸಂಶೋಧಕನಾಗಿದ್ದ ಈತ `ಆಧುನಿಕ ರಾಕೆಟ್ ತಂತ್ರಜ್ಞಾನದ ಜನಕ' ಎಂದೇ ಖ್ಯಾತ.

1864: ಫ್ರೆಂಚ್ ಸಂಶೋಧಕ ಆಗಸ್ಟ್ ಲ್ಯುಮಿರೆ (1864-1948) ಜನ್ಮದಿನ. ತಮ್ಮ ಸಹೋದರ ಲೂಯಿ ಜೊತೆ ಸೇರಿ ಪ್ರಾರಂಭದ ದಿನಗಳ ಚಲನಚಿತ್ರ ಕ್ಯಾಮರಾ ಹಾಗೂ `ಸಿನಿಮಾಟೋಗ್ರಾಫ್' ಹೆಸರಿನ ಪ್ರೊಜೆಕ್ಟರ್ ಉಪಕರಣವನ್ನು ಇವರು ನಿರ್ಮಿಸಿದ್ದರು. ಇವರು ಸಂಶೋಧಿಸಿದ ಈ ಫೊಟೋಗ್ರಾಫಿಕ್ ಉಪಕರಣದಿಂದಾಗಿಯೇ `ಸಿನಿಮಾ' ಶಬ್ದ ಹುಟ್ಟಿತು.

1864: ಭಾರತದ ಕಲ್ಕತ್ತ (ಈಗಿನ ಕೋಲ್ಕತ್ತ್ತ) ನಗರ ಭೀಕರ ಚಂಡಮಾರುತದ ಪರಿಣಾಮವಾಗಿ ಬಹುತೇಕ ನಾಶಗೊಂಡಿತು. 60,000 ಜನ ಅಸು ನೀಗಿದರು.

1805: ಚಾರ್ಲ್ಸ್ ಕಾರ್ನವಾಲಿಸ್ ತನ್ನ 66ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಘಾಜಿಪುರದಲ್ಲಿ ಮೃತನಾದ. ಬ್ರಿಟಿಷ್ ಸೈನಿಕ ಹಾಗೂ ರಾಜಕಾರಣಿಯಾಗಿದ್ದ ಈತ 1786-1793ರ ಅವಧಿಯಲ್ಲಿ ಭಾರತದ ಬ್ರಿಟಿಷ್ ಗವರ್ನರ್ ಜನರಲ್ ಆಗಿದ್ದ.

1713: `ಎನ್ ಸೈಕ್ಲೋಪೀಡೀ' ಮುಖ್ಯ ಸಂಪಾದಕ, ಫ್ರೆಂಚ್ ವಿದ್ವಾಂಸ ಹಾಗೂ ತತ್ವಜ್ಞಾನಿ ಡೇನಿಸ್ ಡಿಡೆರೊಟ್ (1713-1784) ಜನ್ಮದಿನ. 1745ರಿಂದ 1772ರವರೆಗೆ `ಎನ್ ಸೈಕ್ಲೋಪೀಡೀ' ಮುಖ್ಯಸಂಪಾದಕನಾಗಿ ಆತ ಸೇವೆ ಸಲ್ಲಿಸಿದ್ದ.

1676: ಬಾಂಬಯಲ್ಲಿ (ಈಗಿನ ಮುಂಬೈ) ರೂಪಾಯಿ ಮತ್ತು ಪೈಸೆ ಹೆಸರಿನ ನಾಣ್ಯಗಳನ್ನು ಟಂಕಿಸಲು ಈಸ್ಟ್ ಇಂಡಿಯಾ ಕಂಪೆನಿಗೆ ಇಂಗ್ಲೆಂಡಿನ ದೊರೆ ಅಧಿಕಾರ ನೀಡಿದ.

No comments:

Post a Comment