ಪ್ರೊಫೆಸರ್
ಆರ್.
ವಾಸುದೇವ
ಅವರಿಗೆ
ನವದೆಹಲಿ: ಕರ್ನಾಟಕದ ಶಿರಸಿ ಅರಣ್ಯ ಮಹಾವಿದ್ಯಾಲಯದ ಅರಣ್ಯ ಜೀವಶಾಸ್ತ್ರ ಮತ್ತು ಸಸ್ಯಾಭಿವೃದ್ಧಿ ಇಲಾಖೆಯ ಮುಖ್ಯಸ್ಥ ಪ್ರೊಫೆಸರ್ ಆರ್ ವಾಸುದೇವ ಅವರಿಗೆ ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ
2018ರ ಸಾಲಿನ
ಪ್ರತಿಷ್ಠಿತ ಇನ್ಸಾ (ಐಎನ್ಎಸ್ಎ) ಶಿಕ್ಷಕರ ಪ್ರಶಸ್ತಿ ಲಭಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ
ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಶಿಕ್ಷಕರನ್ನು ಮಾನ್ಯತೆ
ನೀಡಿ ಗೌರವಿಸಲು ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ನಿರಂತರ, ಉನ್ನತ ಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕಾಗಿ
ಶ್ರೀ ವಾಸುದೇವ ಅವರನ್ನು
ಪ್ರಸಕ್ತ ಸಾಲಿನ ಪ್ರತಿಷ್ಠಿತ ಇನ್ಸಾ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ (ಇನ್ಸಾ) ಅಧ್ಯಕ್ಷ ಪ್ರೊಫೆಸರ್ ಅಜಯ್ ಕೆ. ಸೂದ್ ಅವರು ಪ್ರಕಟಣೆ ಒಂದರಲ್ಲಿ ತಿಳಿಸಿದ್ದಾರೆ.
ಮುಂಬರುವ ವರ್ಷಗಳಲ್ಲೂ ಪ್ರತಿಭೆಗಳನ್ನು ಹೊರತರುವ ಕಾಯಕವನ್ನು ವಾಸುದೇವ ಅವರು ಮುಂದುವರೆಸುವರು ಎಂದು ಸೂದ್ ಅವರು ಹಾರೈಸಿದ್ದಾರೆ.
ಇನ್ಸಾ ಶಿಕ್ಷಕರ
ಪ್ರಶಸ್ತಿಯು ಪ್ರಶಸ್ತಿ ಫಲಕ (ಓಲೆ ಸುರುಳಿ)
50,000 ರೂಪಾಯಿಗಳ
ನಗದು ಪ್ರಶಸ್ತಿ ಮತ್ತು
20,000 ರೂಪಾಯಿಗಳ
ಗ್ರಂಥ ಅನುದಾನವನ್ನು ಹೊಂದಿರುತ್ತದೆ.
2018ರ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಕಾಡೆಮಿಯ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
No comments:
Post a Comment