ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ
ನವದೆಹಲಿ: ಇರಾಕಿನ ಗುಪ್ತಚರ ಮತ್ತು ಭದ್ರತಾ ಪಡೆಗಳ ಸಮನ್ವಯದೊಂದಿಗೆ, ಇರಾಕ್‌ನ ಅಲ್ ಅನ್ಬರ್ ಪ್ರಾಂತ್ಯದಲ್ಲಿ ನಡೆಸಿದ ನಿಖರವಾದ ವೈಮಾನಿಕ ದಾಳಿಯಲ್ಲಿ "ಅಬು ಖದೀಜಾ" ಎಂಬ ಅಡ್ಡ ಹೆಸರಿನ ಅಬ್ದುಲ್ಲಾ ಮಕ್ಕಿ ಮುಸ್ಲಿಹ್ ಅಲ್-ರಿಫಾಯಿ ಹತನಾಗಿದ್ದಾನೆ ಎಂದು ಅಮೆರಿಕ ೨೦೨೫ ಮಾರ್ಚ್ ದಿನಾಂಕ ೧೫ರಂದು ಘೋಷಿಸಿದೆ.
ಅಬು ಖದೀಜಾ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕ ಗುಂಪಿನ ಜಾಗತಿಕ ಕಾರ್ಯಾಚರಣೆಗಳ ಮುಖ್ಯಸ್ಥನಾಗಿದ್ದ ಮತ್ತು ಜಾಗತಿಕವಾಗಿ ಗುಂಪಿನ ಎರಡನೇ ಕಮಾಂಡರ್ ಸ್ಥಾನವನ್ನು ಹೊಂದಿದ್ದ. ಮಾರ್ಚ್ 13 ರಂದು ನಡೆದ ದಾಳಿಯಲ್ಲಿ ಮತ್ತೊಬ್ಬ ಐಸಿಸ್ ಭಯೋತ್ಪಾದಕ ಕೂಡಾ ಹತನಾಗಿದ್ದಾನೆ.
ಯುಎಸ್ ಮಿಲಿಟರಿ ಅಧಿಕಾರಿಗಳ ಪ್ರಕಾರ, ಅಬು ಖದೀಜಾ ವಿಶ್ವಾದ್ಯಂತ ಭಯೋತ್ಪಾದಕ ಗುಂಪಿನ ಸಾಗಣೆ, ಯೋಜನೆ ಮತ್ತು ಹಣಕಾಸು ನಿರ್ವಹಣೆಯ ಮೇಲ್ವಿಚಾರಣೆ ಮಾಡುತ್ತಿದ್ದ.
ವಾಯುದಾಳಿಯ ನಂತರ, ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ಮತ್ತು ಇರಾಕಿ ಪಡೆಗಳು ಸ್ಥಳಕ್ಕೆ ಆಗಮಿಸಿ ಅಬು ಖದೀಜಾ ಮತ್ತು ಇನ್ನೊಬ್ಬ ಐಸಿಸ್ ಹೋರಾಟಗಾರನ ಸಾವನ್ನು ದೃಢಪಡಿಸಿದವು. CENTCOM ಪ್ರಕಾರ, ಇರು ಕೂಡಾ ಸ್ಫೋಟಗೊಳ್ಳದ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದುದು ಕಂಡುಬಂದಿದೆ ಮತ್ತು ಅವರ ಬಳಿ ಬಹುವಿಧದ ಶಸ್ತ್ರಾಸ್ತ್ರಗಳಿದ್ದವು. ಅಬು ಖದೀಜಾನ ಗುರುತನ್ನು ಹಿಂದಿನ ದಾಳಿ ಕಾಲದಲ್ಲಿ ಸೆರೆ ಹಿಡಿದ ಸಂದರ್ಭದಲ್ಲಿ ಸಂಗ್ರಹಿಸಲಾದ ಮಾದರಿಗಳನ್ನು ಬಳಸಿ, ಡಿಎನ್ಎ ಹೊಂದಾಣಿಕೆಯ ಮೂಲಕ ದೃಢಪಡಿಸಲಾಯಿತು.
"ಇಡೀ ಜಾಗತಿಕ ಐಸಿಸ್ ಸಂಘಟನೆಯಲ್ಲಿ ಅಬು ಖದೀಜಾ ಪ್ರಮುಖ ಐಸಿಸ್ ಸದಸ್ಯರಲ್ಲಿ ಒಬ್ಬನಾಗಿದ್ದ. ನಮ್ಮ ತಾಯ್ನಾಡು ಪ್ರದೇಶ ಮತ್ತು ಅದರಾಚೆಗಿನ ಅಮೆರಿಕದ ಮಿತ್ರರು ಹಾಗೂ ಪಾಲುದಾರ ಸಿಬ್ಬಂದಿಗೆ ಬೆದರಿಕೆ ಹಾಕುವ ಭಯೋತ್ಪಾದಕರ ಹತ್ಯೆ, ಅವರ ಸಂಘಟನೆಗಳ ನಾಶವನ್ನು ನಾವು ಮುಂದುವರಿಸುತ್ತೇವೆ" ಎಂದು ಯುಎಸ್ ಸೆಂಟ್ರಲ್ ಕಮಾಂಡ್‌ನ ಕಮಾಂಡರ್ ಜನರಲ್ ಮೈಕೆಲ್ ಎರಿಕ್ ಕುರಿಲ್ಲಾ ಹೇಳಿದ್ದಾರೆ.
ಸೆಂಟ್ರಲ್ ಕಮಾಂಡ್ ಸೆರೆ ಹಿಡಿದ ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ.
No comments:
Post a Comment