Showing posts with label ಪ್ರಧಾನಿ. Show all posts
Showing posts with label ಪ್ರಧಾನಿ. Show all posts

Monday, April 6, 2026

PARYAYA: ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!

 ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!

ಚೆನ್ನೈ: ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈಲ್ಲಿ ಭಾರತೀಯ ಸಂಸ್ಕೃತಿ ಮತ್ತು ಕಲೆಯ ಕಡೆಗೆ ತಮ್ಮ ಪ್ರೀತಿಯನ್ನು ಮೆರೆದಿದ್ದಾರೆ. ಇತ್ತೀಚೆಗೆ ಅವರು ಖ್ಯಾತ ಸಂಗೀತ ಸಂಯೋಜಕ ತಿರು ರಮೇಶ್ ವಿನಾಯಕಮ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಿಭಾರತೀಯ ಸಂಗೀತ ಜಗತ್ತಿನ ಹೊಸ ಆವಿಷ್ಕಾರವೊಂದನ್ನು ಕಣ್ತುಂಬಿಕೊಂಡರು.

ಭಾರತೀಯ ಸಂಗೀತಕ್ಕೆ ಜಾಗತಿಕ ಮನ್ನಣೆ: ಏನಿದು 'ಗಮಕ ಬಾಕ್ಸ್'?

ರಮೇಶ್ ವಿನಾಯಕಮ್ ಅವರು ತಮ್ಮ ಜೀವನವನ್ನೇ ಭಾರತೀಯ ಸಂಗೀತದ ಪ್ರಸಾರಕ್ಕಾಗಿ ಮುಡಿಪಾಗಿಟ್ಟವರು. ಅವರು ತಾವು ಅಭಿವೃದ್ಧಿಪಡಿಸಿರುವ 'ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್' (Gamaka Box Notation System) ಬಗ್ಗೆ ಪ್ರಧಾನಿಯವರಿಗೆ ವಿವರಿಸಿದರು.

  • ವಿಶೇಷತೆ: ಭಾರತೀಯ ಶಾಸ್ತ್ರೀಯ ಸಂಗೀತದ ಅವಿಭಾಜ್ಯ ಅಂಗವಾದ 'ಗಮಕ'ಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಅರ್ಥೈಸಲು ಈ ವ್ಯವಸ್ಥೆ ಸಹಕಾರಿ.
  • ಪ್ರಧಾನಿಯವರ ಮೆಚ್ಚುಗೆ: ಈ ಕುರಿತು ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡಿರುವ ಮೋದಿ, "ಇದು ನಮ್ಮ ಸಂಗೀತವನ್ನು ವಿಶ್ವದಾದ್ಯಂತ ಕೊಂಡೊಯ್ಯುವ ಒಂದು ನವೀನ ಮಾರ್ಗ" ಎಂದು ಶ್ಲಾಘಿಸಿದ್ದಾರೆ. 

"ಚುನಾವಣಾ ಪ್ರಚಾರದ ನಡುವೆ ರಮೇಶ್ ವಿನಾಯಕಮ್‌ ಜೀ ಮತ್ತು ಅವರ ಕುಟುಂಬವನ್ನು ಭೇಟಿಯಾದದ್ದು ಸಂತಸ ತಂದಿದೆ. ಭಾರತೀಯ ಸಂಗೀತವನ್ನು ಜಗತ್ತಿಗೆ ಪರಿಚಯಿಸಲು ಅವರು ಮಾಡುತ್ತಿರುವ ಕೆಲಸ ಅದ್ಭುತವಾಗಿದೆ," ಎಂದು ಪ್ರಧಾನಿ ಬಣ್ಣಿಸಿದ್ದಾರೆ. ☝ ವಿಡಿಯೋ ನೋಡಿ.

ನವೀನ ಆವಿಷ್ಕಾರಕ್ಕೆ ಪ್ರಧಾನಿ ಸಾಕ್ಷಿ

ರಮೇಶ್ ವಿನಾಯಕಮ್‌ ಅವರು ತಮ್ಮ ಸಂಶೋಧನೆಯ ಒಂದು ಸಣ್ಣ ಝಲಕ್ ಅನ್ನು ಪ್ರಧಾನಿಯವರಿಗೆ ಪ್ರದರ್ಶಿಸಿದರು. ಕೇವಲ ರಾಜಕೀಯ ಮಾತ್ರವಲ್ಲದೆಕಲೆ ಮತ್ತು ತಂತ್ರಜ್ಞಾನದ ಸಮ್ಮಿಲನಕ್ಕೆ ಪ್ರಧಾನಿ ನೀಡುತ್ತಿರುವ ಪ್ರೋತ್ಸಾಹಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾರತೀಯ ಸಂಗೀತದ ಈ ಹೊಸ ಹೆಜ್ಜೆ ಮುಂದಿನ ದಿನಗಳಲ್ಲಿ ಜಾಗತಿಕ ವೇದಿಕೆಯಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

 
PARYAYA: ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ!:   ಗಮಕ ಬಾಕ್ಸ್ ನೋಟೇಶನ್ ಸಿಸ್ಟಮ್‌ಗೆ ಮೋದಿ ಫಿದಾ! ಚೆ ನ್ನೈ: ಬಿರುಸಿನ ಚುನಾವಣಾ ಪ್ರಚಾರದ ನಡುವೆಯೂ ಪ್ರಧಾನಿ ನರೇಂದ್ರ ಮೋದಿಯವರು ಚೆನ್ನೈ ಯ ಲ್ಲಿ ಭಾರತೀಯ ಸಂಸ್ಕೃತಿ ...

Saturday, January 3, 2026

PARYAYA: ಭಾರತಕ್ಕೆ ಮರಳಿತು ಬುದ್ಧನ ಅವಶೇಷ..

 ಭಾರತಕ್ಕೆ ಮರಳಿತು ಬುದ್ಧನ ಅವಶೇಷ..

ತಮಾನಕ್ಕೂ ಅಧಿಕ ಕಾಲದ ಕಾಯುವಿಕೆಯ ನಂತರಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳು (Piprahwa Relics) ಭಾರತಕ್ಕೆ ಮರಳಿವೆ.

ಈ ಕ್ಷಣ ಭಾರತೀಯರೆಲ್ಲರಿಗೂ ಹೆಮ್ಮೆಯಭಕ್ತಿಯ ಹಾಗೂ ಸಾಂಸ್ಕೃತಿಕ ಭಾವೈಕ್ಯತೆಯ ಕ್ಷಣ. ದೆಹಲಿಯಲ್ಲಿ ೨೦೨೬ ಜನವರಿ ೩ರ ಶನಿವಾರ ನಡೆದ ಕಾರ್ಯಕ್ರಮದ ಪ್ರಮುಖ ಹೈಲೈಟ್ಸ್ ಇಲ್ಲಿದೆ:

  • ಭವ್ಯ ಉದ್ಘಾಟನೆ: ನವದೆಹಲಿಯ ರೈ ಪಿತೋರಾ ಸಾಂಸ್ಕೃತಿಕ ಸಂಕೀರ್ಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು "ದಿ ಲೈಟ್ ಅಂಡ್ ದಿ ಲೋಟಸ್: ರೆಲಿಕ್ಸ್ ಆಫ್ ದಿ ಅವೇಕನ್ಡ್ ಒನ್" ಎಂಬ ಶೀರ್ಷಿಕೆಯಡಿ ಆಯೋಜಿಸಲಾದ ಪವಿತ್ರ ಪಿಪ್ರಹ್ವಾ ಅವಶೇಷಗಳ ಬೃಹತ್ ಅಂತರರಾಷ್ಟ್ರೀಯ ಪ್ರದರ್ಶನವನ್ನು ಉದ್ಘಾಟಿಸಿದರು.
  • ಹೆಮ್ಮೆಯ ನುಡಿಗಳು: ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಯವರು, "ಸುಮಾರು 125 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರಭಾರತದ ಪರಂಪರೆ ಮತ್ತು ಅದರ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತೆ ತನ್ನ ತಾಯ್ನಾಡಿಗೆ ಮರಳಿದೆ," ಎಂದು ಸಂತಸ ವ್ಯಕ್ತಪಡಿಸಿದರು.
  • ಭಾರತದ ಅಸ್ಮಿತೆ: ಈ ಅವಶೇಷಗಳ ಆಗಮನವು ಕೇವಲ ಇತಿಹಾಸದ ಮರುಕಳಿಕೆಯಷ್ಟೇ ಅಲ್ಲ, ಬದಲಿಗೆ ಭಗವಾನ್ ಬುದ್ಧನ ಶಾಂತಿ ಮತ್ತು ಜ್ಞಾನದ ಸಂದೇಶವನ್ನು ಜಗತ್ತಿಗೆ ಸಾರುವ ಭಾರತದ ಸಾಂಸ್ಕೃತಿಕ ಶಕ್ತಿಯ ಸಂಕೇತ. ಈ ಸಂದರ್ಭದ ವಿಡಿಯೋ ಇಲ್ಲಿದೆ.
PARYAYA: ಭಾರತಕ್ಕೆ ಮರಳಿತು ಬುದ್ಧನ ಅವಶೇಷ..:   ಭಾರತ ಕ್ಕೆ ಮರಳಿತು ಬುದ್ಧನ ಅವಶೇಷ.. ಶ ತಮಾನಕ್ಕೂ ಅಧಿಕ ಕಾಲದ ಕಾಯುವಿಕೆಯ ನಂತರ , ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪವಿತ್ರ ಪಿಪ್ರಹ್ವಾ ಅವಶೇಷಗಳು ( Piprahwa Rel...

Tuesday, November 25, 2025

PARYAYA: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!

ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನು ಹಾರಿಸಿದರು.

ಇದರೊಂದಿಗೆ ದೇವಾಲಯ ನಿರ್ಮಾಣದ ಆಚರಣೆಯ ಪ್ರತಿವಿಧಿಯೂ ಶುದ್ಧತೆ ಮತ್ತು ಶ್ರದ್ಧೆಯೊಂದಿಗೆ ಸಂಪೂರ್ಣಗೊಂಡಿತು.

ಈ ಕ್ಷಣವು ಕೋಟ್ಯಂತರ ಜನರ ಭಕ್ತಿ ಮತ್ತು ತಲೆತಲಾಂತರದ ಪ್ರಾರ್ಥನೆಗಳಿಂದ ಸಂಪನ್ನಗೊಂಡಿದೆ.

ಯಾವುದೇ ದೇವಾಲಯದ ಆಚರಣೆಗಳು ಅಂತಿಮ ಹಂತಕ್ಕೆ ತಲುಪಿದಾಗಪ್ರತಿ ವಿಧಿಯು ಶುದ್ಧತೆ ಮತ್ತು ಶ್ರದ್ಧೆಯಿಂದ ಸಂಪೂರ್ಣಗೊಂಡಿದೆ ಎಂಬುದನ್ನು ಸೂಚಿಸಲು ಈ ಪವಿತ್ರ ಧ್ವಜವನ್ನು ಏರಿಸಲಾಗುತ್ತದೆ.

ಶ್ರೀರಾಮ ಮತ್ತು ಸೀತಾಮಾತೆಯ ಕಲ್ಯಾಣ ಸಂಪನ್ನಗೊಂಡ ದಿನ ಎಂಬುದಾಗಿ ನಂಬಲಾಗಿರುವ ಈದಿನ ನಡೆದ ಈ ಸಮಾರಂಭದೊಂದಿಗೆಶ್ರೀ ರಾಮ ಜನ್ಮಭೂಮಿ ಮಂದಿರವು ಈಗ ವಿಧ್ಯುಕ್ತವಾಗಿ ಪೂರ್ಣಗೊಂಡಿತು. ಇದು ಪ್ರತಿಯೊಬ್ಬ ಭಕ್ತನ ಹೃದಯವನ್ನೂ ಭಾವನೆಗಳಿಂದ ತುಂಬುವಂತೆ ಮಾಡಿತು.

ಧರ್ಮಧ್ವಜಾರೋಹಣದ ಈ ಸಂದರ್ಭಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ನೂರಾರು ಮಂದಿ ಸಂತರು ಸೇರಿದಂತೆ ಸಹಸ್ರಾರು ಗಣ್ಯರು ಸಾಕ್ಷಿಯಾದರು.

(ವೀಡಿಯೊ ಕೃಪೆ: Instagram ನಲ್ಲಿ MyGovindia)

PARYAYA: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ!: ಧರ್ಮ ಧ್ವಜಾರೋಹಣ: ಅಯೋಧ್ಯೆ ಈಗ ಸಂಪೂರ್ಣ! ಪ್ರ ಧಾ ನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದಲ್ಲಿ 2025 ನವೆಂಬರ್‌ 25ರ ಸೋಮವಾರ ಧರ್ಮ ಧ್ವಜವನ್ನ...

Monday, October 20, 2025

PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

 ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯೋಧರ ಜೊತೆಗೆ ಆಚರಿಸಿದರು.

ಗೋವಾದ ಕರಾವಳಿಯಲ್ಲಿ ಮತ್ತು ಐಎನ್‌ಎಸ್‌ ವಿಕ್ರಾಂತ್‌ನಲ್ಲಿ ಯೋಧರ ಜೊತೆಗೆ ಸಂವಾದ ನಡೆಸಿದ ಪ್ರಧಾನಿ, ಅವರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.

ಐಎನ್‌ ಎಸ್‌ ವಿಕ್ರಾಂತ್‌ ನಲ್ಲಿ ಯೋಧರು ಮತ್ತು ಸಿಬ್ಬಂದಿ ಪ್ರದರ್ಶಿಸಿದ “ಕಸಮ್‌ ಸಿಂದೂರ್‌ ಕಿʼ ಹಾಡನ್ನು ಮೆಚ್ಚಿಕೊಂಡರು.

ಐಎನ್‌ಎಸ್‌ ಮುಖಾಂತರ ಪ್ರದರ್ಶನಗೊಂಡ ವಾಯುಬಲದ ವಿಡಿಯೋವನ್ನೂ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡರು.

ಪ್ರಧಾನಿ ಹಂಚಿಕೊಂಡ ವಿಡಿಯೋಗಳು ಇಲ್ಲಿವೆ.


PARYAYA: ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ:   ಐಎನ್‌ಎಸ್‌ ವಿಕ್ರಾಂತ್‌ ನಲ್ಲಿ ದೀಪಾವಳಿ ಸಂಭ್ರಮ ದೀ ಪಾವಳಿ ಹಬ್ಬವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿವರ್ಷದಂತೆ, ಈದಿನ (೨೦.೧೦.೨೦೨೫) ಭಾರತದ ನೌಕಾಕಾಪಡೆಯ ಯ...

Saturday, August 30, 2025

PARYAYA: ದಾರೂಮಾ ಬೊಂಬೆ: ಏನಿದರ ಅರ್ಥ ಮತ್ತು ಮಹತ್ವ?

 ದಾರೂಮಾ ಬೊಂಬೆ: ಏನಿದರ ಅರ್ಥ ಮತ್ತು ಮಹತ್ವ?

ಪ್ರಧಾನಿ ಮೋದಿಗೆ ಇದನ್ನು ಕೊಟ್ಟದ್ದೇಕೆ?

ದಾರೂಮಾ ಬೊಂಬೆಯು ಜಪಾನಿನ ಸಾಂಸ್ಕೃತಿಕ ಪ್ರತೀಕ ಹಾಗೂ ಜನಪ್ರಿಯ ಸ್ಮರಣಿಕೆಯಾಗಿದೆ. ಇದು ಝೆನ್ ಬೌದ್ಧಧರ್ಮದ ಸ್ಥಾಪಕರಾದ ಬೋಧಿಧರ್ಮನ ಪ್ರತಿರೂಪವಾಗಿದ್ದುಪರಿಶ್ರಮ ಮತ್ತು ಅದೃಷ್ಟವನ್ನು ಸಂಕೇತಿಸುತ್ತದೆ.
ಸಾಂಪ್ರದಾಯಿಕವಾಗಿ
ಗುರಿಗಳನ್ನು ನಿಗದಿಪಡಿಸಲು ಮತ್ತು ಸಾಧಿಸಲು ಈ ಬೊಂಬೆಯನ್ನು ಬಳಸಲಾಗುತ್ತದೆ: ಒಂದು ಗುರಿಯನ್ನು ನಿಗದಿಪಡಿಸಿದಾಗ ಒಂದು ಕಣ್ಣಿಗೆ ಬಣ್ಣ ಹಚ್ಚಲಾಗುತ್ತದೆ ಮತ್ತು ಅದನ್ನು ಸಾಧಿಸಿದಾಗ ಇನ್ನೊಂದು ಕಣ್ಣಿಗೆ ಬಣ್ಣ ತುಂಬಲಾಗುತ್ತದೆ. ಇದರ ದುಂಡಾದ ತಳವು ಅದನ್ನು ಬದಿಗೆ ವಾಲಿಸಿದಾಗಲೂ ನೇರವಾಗಿ ನಿಲ್ಲಲು ಸಹಾಯ ಮಾಡುತ್ತದೆಇದು ಚೇತರಿಸಿಕೊಳ್ಳುವ ಸಾಮರ್ಥ್ಯವನ್ನು ಮತ್ತು "ಏಳು ಬಾರಿ ಬಿದ್ದರೂ ಎಂಟು ಬಾರಿ ನಿಲ್ಲು" ಎಂಬ ಗಾದೆಯನ್ನು ಸಂಕೇತಿಸುತ್ತದೆ.

ಭಾರತದ ಜೊತೆ ದಾರೂಮಾ ನಂಟು

ದಾರೂಮಾ ಬೊಂಬೆಬೋಧಿಧರ್ಮನಿಂದ ಪ್ರೇರಿತವಾಗಿದೆ. ಬೋಧಿಧರ್ಮನು ಕಾಂಚೀಪುರಂನ ಭಾರತೀಯ ಸನ್ಯಾಸಿ. ಜಪಾನಿನಲ್ಲಿ ದಾರೂಮಾ ದೈಶಿ ಎಂದು ಪೂಜಿಸಲ್ಪಡುತ್ತಾನೆ. ಪ್ರತೀತಿಯ ಪ್ರಕಾರಬೋಧಿಧರ್ಮನು ತನ್ನ ಕಾಲುಗಳನ್ನು ಮಡಚಿ ಒಂಬತ್ತು ವರ್ಷಗಳ ಕಾಲ ನಿರಂತರವಾಗಿ ಗೋಡೆಯತ್ತ ಮುಖ ಮಾಡಿ ಧ್ಯಾನ ಮಾಡಿದ್ದನು. ಈ ಕಾರಣಕ್ಕಾಗಿಯೇ ದಾರೂಮಾ ಬೊಂಬೆಯನ್ನು ಅಂಗಗಳು ಅಥವಾ ಕಣ್ಣುಗಳಿಲ್ಲದೆ ದುಂಡಾದ ಆಕಾರದಲ್ಲಿ ತಯಾರಿಸಲಾಗುತ್ತದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಶೋರಿನ್ಜಾನ್ ದಾರೂಮಾ-ಜಿ ದೇವಾಲಯದ ಅರ್ಚಕರು ದಾರೂಮಾ ಬೊಂಬೆಯನ್ನು ೨೦೨೫ ಆಗಸ್ಟ್‌ ೮ರ ಶುಕ್ರವಾರ ಉಡುಗೊರೆಯಾಗಿ ನೀಡಿದರು. ಪ್ರಧಾನಿಯವರು ತಮ್ಮ ಎರಡು ದಿನಗಳ ಭೇಟಿಗಾಗಿ ಟೋಕಿಯೊಗೆ ಆಗಮಿಸಿದ್ದರು.

ಪ್ರಧಾನಿ ಮೋದಿ ಅವರು ದಾರೂಮಾ ಬೊಂಬೆಯನ್ನು ಉಡುಗೊರೆಯಾಗಿ ನೀಡಿದಕ್ಕಾಗಿ ಸೀಶಿ ಹಿರೋಸೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.

"ಟಕಾಸಾಕಿ-ಗುನ್ಮಾದ ಶೋರಿನ್ಜಾನ್ ದಾರೂಮಾ-ಜಿ ದೇವಾಲಯದ ಮುಖ್ಯ ಅರ್ಚಕ ರೆವ್ ಸೀಶಿ ಹಿರೋಸೆ ಅವರನ್ನು ಭೇಟಿ ಮಾಡಿದ್ದು ಗೌರವದ ವಿಷಯ. ಅವರು ದಾರೂಮಾ ಬೊಂಬೆಯನ್ನು ನನಗೆ ಉಡುಗೊರೆಯಾಗಿ ನೀಡಿದ್ದಕ್ಕೆ ಅವರಿಗೆ ನನ್ನ ಕೃತಜ್ಞತೆಗಳು. ದಾರೂಮಾ ಜಪಾನಿನಲ್ಲಿ ಒಂದು ಪ್ರಮುಖ ಸಾಂಸ್ಕೃತಿಕ ಪ್ರತೀಕವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಭಾರತದೊಂದಿಗೆ ಸಂಬಂಧ ಹೊಂದಿದೆ. ಇದು ಪ್ರಸಿದ್ಧ ಸನ್ಯಾಸಿ ಬೋಧಿಧರ್ಮನಿಂದ ಪ್ರಭಾವಿತವಾಗಿದೆ" ಎಂದು ಪ್ರಧಾನಿ ಮೋದಿ ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.


PARYAYA: ದಾರೂಮಾ ಬೊಂಬೆ: ಏನಿದರ ಅರ್ಥ ಮತ್ತು ಮಹತ್ವ?:   ದಾರೂ ಮಾ ಬೊಂಬೆ: ಏನಿದರ ಅರ್ಥ ಮತ್ತು ಮಹತ್ವ ? ಪ್ರಧಾನಿ ಮೋದಿಗೆ ಇದನ್ನು ಕೊಟ್ಟದ್ದೇಕೆ ? ದಾ ರೂ ಮಾ ಬೊಂಬೆಯು ಜಪಾ ನಿನ ಸಾಂಸ್ಕೃತಿಕ ಪ್ರತೀಕ ಹಾಗೂ ಜನಪ್ರಿಯ ಸ್ಮ...

Wednesday, August 13, 2025

PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

 ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !

ಬೆಂಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ! ಒಂದೇ ಫ್ರೇಮ್‌ನಲ್ಲಿ ನಾಲ್ಕು ಮೆಟ್ರೋ ರೈಲುಗಳು ಏಕಕಾಲದಲ್ಲಿ ಚಲಿಸುತ್ತಿರುವ ಅಪರೂಪದ ದೃಶ್ಯವನ್ನು ಈ ವಿಡಿಯೋ ಸೆರೆಹಿಡಿದಿದೆ.

ಆರ್‌ವಿ ರಸ್ತೆ ಇಂಟರ್‌ಚೇಂಜ್ ಬಳಿ ಸೆರೆಹಿಡಿಯಲಾದ ಈ ವಿಡಿಯೋನಗರವಾಸಿಗಳು ಮತ್ತು ಮೆಟ್ರೋ ಪ್ರಯಾಣಿಕರ ಪ್ರಶಂಸೆಗೆ ಪಾತ್ರವಾಗಿದೆ. ಬೆಂಗಳೂರು ಮೂಲದ ವಿಷಯ ರಚನೆಕಾರ ಶ್ರೀಹರಿ ಕಾರಂತ್ ಅವರು ತಮ್ಮ X (ಹಿಂದೆ ಟ್ವಿಟರ್) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ನಗರದ ರಮಣೀಯ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ಹೆಸರುವಾಸಿಯಾಗಿರುವ ಶ್ರೀಹರಿ, "ಈ ಪರಿಪೂರ್ಣ ಶಾಟ್‌ಗಾಗಿ ಬಹಳ ಸಮಯ ಕಾಯುತ್ತಿದ್ದೆ – ಹಳದಿ ಮತ್ತು ಹಸಿರು ಮಾರ್ಗಗಳು ಒಂದೇ ಫ್ರೇಮ್‌ನಲ್ಲಿ!" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಕೆಳಗೆ ಕ್ಲಿಕ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ದೃಶ್ಯ ವೈಭವವನ್ನು ನೀವೂ ಕಣ್ತುಂಬಿಕೊಳ್ಳಿ ಅಥವಾ ಶ್ರೀ ಹರಿ ಕಾರಂತ್‌ ಅವರ ಈ ಎಕ್ಸ್‌ ಲಿಂಕ್‌ ಕ್ಲಿಕ್‌ ಮಾಡಿರಿ


ಇನ್ನಷ್ಟು ಸುದ್ದಿಗಳಿಗೆ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ.
PARYAYA: ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ !:   ಬೆಂಗಳೂರು ಮೆಟ್ರೋದ ಅದ್ಭುತ ವಿಡಿಯೋ ! ಬೆಂ ಗಳೂರು ಮೆಟ್ರೋದ ಹಳದಿ ಮತ್ತು ಹಸಿರು ಮಾರ್ಗಗಳು ಒಂದನ್ನೊಂದು ದಾಟಿ ಸಾಗುತ್ತಿರುವ ಅದ್ಭುತ ಡ್ರೋನ್ ವಿಡಿಯೋ ಇಂಟರ್ನೆಟ್‌ನಲ...

Sunday, August 10, 2025

PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

 ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ

ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ

ಬೆಂಗಳೂರು: ದೇಶದಲ್ಲಿ ಅತಿದೊಡ್ಡ ಮೆಟ್ರೋ ಜಾಲವನ್ನು ಹೊಂದಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ೨೦೨೫ ಆಗಸ್ಟ್‌ ೧೦ರ ಭಾನುವಾರ ಪಾತ್ರವಾಯಿತು. ಬೆಂಗಳೂರಿನ ರಾಗಿಗುಡ್ಡದಲ್ಲಿ ʼನಮ್ಮ ಮೆಟ್ರೋʼ ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವುದರೊಂದಿಗೆ ಈ ಹೆಗ್ಗಳಿಕೆ ಬೆಂಗಳೂರಿನ ಮುಡಿಗೇರಿತು.

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಚಿವರ ಸಮ್ಮುಖದಲ್ಲಿ ಪ್ರಧಾನಿ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದರು. ಬಳಿಕ ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿವರೆಗೆ ಮೆಟ್ರೋದಲ್ಲೇ ಪಯಣಿಸಿದರು. ಸಿದ್ದರಾಮಯ್ಯ, ಶಿವಕುಮಾರ್‌ ಸೇರಿದಂತೆ ಇತರ ಗಣ್ಯರೂ ಪ್ರಧಾನಿಯರೊಂದಿಗೆ ಇದ್ದರು.

೧೯.೧೫ ಕಿಮೀ ಉದ್ದದ ಹಳದಿ ಮಾರ್ಗದ ಉದ್ಘಾಟನೆಯೊಂದಿಗೆ ಬೆಂಗಳೂರಿನ ಮೆಟ್ರೋ ಜಾಲ ೭೬.೯೫ ಕಿಮೀಯಿಂದ ೯೬.೧೦ ಕಿಮೀಗೆ ವಿಸ್ತರಣೆಗೊಂಡಿತು. ಈ ಮಾರ್ಗದಲ್ಲಿ ೧೬ ನಿಲ್ದಾಣಗಳಿದ್ದು  ಮೂರು ರೈಲುಗಳು ನಿತ್ಯ ಸಂಚರಿಸಲಿವೆ.

ಇದಕ್ಕೂ ಮುನ್ನ ಪ್ರಧಾನಿಯವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬೆಳಗಾವಿ- ಬೆಂಗಳೂರು ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಕಟ್ರಾ ಮತ್ತು ಮಹಾರಾಷ್ಟ್ರದ ಪುಣೆ-ಅಜ್ನಿ (ನಾಗ್ಪುರ) ವಂದೇ ಭಾರತ್‌ ಎಕ್ಸ್‌ ಪ್ರಸ್‌ ರೈಲುಗಳ ಸಂಚಾರವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಇಲ್ಲಿದೆ ಭಾರತದ ಮೆಟ್ರೋ ಕಥೆ

ಇಲ್ಲಿದೆ ಭಾರತದ ಮೆಟ್ರೋ ಕಥೆಯ ವಿಡಿಯೋ. ಇದನ್ನು ಈದಿನ ಮೆಟ್ರೋ ಹಳದಿ ಮಾರ್ಗದ ಉದ್ಘಾಟನೆಯ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಯೂ ಟ್ಯೂಬ್‌ ವಿಡಿಯೋ ಲಿಂಕ್‌ ಕ್ಲಿಕ್‌ ಮಾಡಿರಿ.


ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಏನು ಹೇಳಿದರು?

ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ

ಇನ್ನಷ್ಟು ಸುದ್ದಿಗಳಿಗಾಗಿ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ
PARYAYA: ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ:   ಬೆಂಗಳೂರು: ಈಗ ದೇಶದ ಅತಿದೊಡ್ಡ ಮೆಟ್ರೋ ಜಾಲ ಹೊಂದಿದ ೨ನೇ ನಗರ ಮೆಟ್ರೋ ಹಳದಿ ಮಾರ್ಗ, ವಂದೇ ಮಾತರಂ ಎಕ್ಸ್‌ ಪ್ರಸ್‌ ರೈಲಿಗೆ ಪ್ರಧಾನಿ ಹಸಿರು ನಿಶಾನೆ ಬೆಂ ಗಳೂರು: ...

Wednesday, August 6, 2025

PARYAYA: ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ

 ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ

ದೆಹಲಿಯ ಜನಪಥ್‌ನಲ್ಲಿ ಹಿಂದೆ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಇದ್ದ ಜಾಗದಲ್ಲಿಈಗ ಹೈಟೆಕ್ ಕರ್ತವ್ಯ ಭವನ ತಲೆ ಎತ್ತಿದೆ.! ಇದು ನಮ್ಮ ಕೇಂದ್ರ ಸರ್ಕಾರದ ಎಲ್ಲಾ ಸಚಿವಾಲಯಗಳಿಗೆ ಹೊಸ ಆಡಳಿತ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಹಂತ ಹಂತವಾಗಿ ಇದರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದುಆಧುನಿಕ ಭಾರತದ ಆಡಳಿತಕ್ಕೆ ಹೊಸ ಮೆರುಗು ನೀಡಲು ಸಜ್ಜಾಗಿದೆ.

ಹೊಸತನದ ಸ್ಪರ್ಶ: ಹೇಗಿರಲಿದೆ ಕರ್ತವ್ಯ ಭವನ?

  • ಸುರಕ್ಷಿತ ಪ್ರವೇಶ: ಇದು ಪ್ರವೇಶ ನಿಯಂತ್ರಿತ ಕಚೇರಿಗಳನ್ನು ಹೊಂದಿದ್ದುಪ್ರವೇಶಕ್ಕೆ ಐಡಿ ಕಾರ್ಡ್ ಆಧರಿತ ವ್ಯವಸ್ಥೆ ಇರಲಿದೆ. ಇದು ಅಧಿಕಾರಿಗಳು ಮತ್ತು ಸಂದರ್ಶಕರು ಇಬ್ಬರಿಗೂ ಅನ್ವಯಿಸುತ್ತದೆ.
  • ಆಧುನಿಕ ಸಭಾ ಕೊಠಡಿಗಳು: ಅತ್ಯಾಧುನಿಕ ಸಮ್ಮೇಳನ ಕೊಠಡಿಗಳು (ಸ್ವಾಂಕಿ ಕಾನ್ಫರೆನ್ಸ್ ರೂಮ್ಸ್)ವಿಶಾಲವಾದ ಕಾರ್ಯಕ್ಷೇತ್ರಗಳು (ಓಪನ್ ಫ್ಲೋರ್ ವರ್ಕ್ ಹಾಲ್ಸ್) ಇಲ್ಲಿ ಲಭ್ಯ.
  • ಸಂಪೂರ್ಣ ನಿಗಾ: ಪ್ರತಿ ಮಹಡಿಯಲ್ಲೂ ಸಿಸಿಟಿವಿ ಕ್ಯಾಮೆರಾಗಳು ಅಳವಡಿಕೆಯಾಗಿರುತ್ತದೆ. ಇಡೀ ಕೇಂದ್ರ ವಿಸ್ತಾರದ ಚಲನವಲಗಳನ್ನು ನಿಗಾ ವಹಿಸಲು ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
  • ಹಸಿರು ತಂತ್ರಜ್ಞಾನ: ಪರಿಸರ ಸ್ನೇಹಿ ವೈಶಿಷ್ಟ್ಯಗಳಾದ ಡಬಲ್-ಗ್ಲೇಜ್ಡ್ ಗ್ಲಾಸ್ ಕಿಟಕಿಗಳುಥರ್ಮಲ್ ಇನ್ಸುಲೇಶನ್ಕಡಿಮೆ ಶಬ್ದಮತ್ತು ಕಡಿಮೆ ಘನೀಕರಣಕ್ಕೆ ಸಹಾಯಕವಾಗಿವೆ. ಶಕ್ತಿ ದಕ್ಷತೆಯ ಎಲ್ಇಡಿ ದೀಪಗಳುಆಕ್ಯುಪೆನ್ಸಿ ಸೆನ್ಸರ್‌ಗಳು ಮತ್ತು ಡೇಲೈಟ್ ಸೆನ್ಸರ್‌ಗಳನ್ನು ಬಳಸಿ ಶಕ್ತಿಯ ಬಳಕೆಯಲ್ಲಿ ಶೇ. 30ರಷ್ಟು ಉಳಿತಾಯ ಮಾಡುವ ಗುರಿ ಹೊಂದಲಾಗಿದೆ.

ಈ ಬೃಹತ್ ಯೋಜನೆಯು ಲುಟ್ಯೆನ್ಸ್ ದೆಹಲಿಯ ಅತ್ಯಂತ ಮಹತ್ವಾಕಾಂಕ್ಷೆಯ ನಗರ ನವೀಕರಣ ಯೋಜನೆಗಳಲ್ಲಿ ಒಂದಾಗಿದ್ದು, 2019 ರಲ್ಲಿ ಪ್ರಾರಂಭಿಸಲಾದ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ.

ಪ್ರಧಾನಿ ಮೋದಿ ಉದ್ಘಾಟನೆ

ಒಟ್ಟು ಹತ್ತು ಕಟ್ಟಡಗಳಲ್ಲಿಮೊದಲನೆಯದಾದ CCS-3 ಸಂಪೂರ್ಣಗೊಂಡಿದ್ದುಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೦೬ ಆಗಸ್ಟ್‌ ೨೦೨೫ರ ಬುಧವಾರ ಇದನ್ನು ಉದ್ಘಾಟಿಸಿದರು. ಮೂಲತಃ ನವೆಂಬರ್ 2023 ರ ವೇಳೆಗೆ ಮೂರು ಸಿ.ಸಿ.ಎಸ್ ಕಟ್ಟಡಗಳನ್ನು ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು. ಮುಂದಿನ ತಿಂಗಳು ಇನ್ನೂ ಎರಡು ಕಟ್ಟಡಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಸದ್ಯಕ್ಕೆಗೃಹ ಸಚಿವಾಲಯ ಮಾತ್ರ CCS-3 ಗೆ ತನ್ನ ಹಳೆಯ ನಾರ್ತ್ ಬ್ಲಾಕ್ ವಿಳಾಸದಿಂದ ಸ್ಥಳಾಂತರಗೊಂಡಿದೆ. ನಂತರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯಗಳು ಸ್ಥಳಾಂತರಗೊಳ್ಳಲಿವೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದಾರೆ. CCS 1, 2 ಮತ್ತು ರ ನಿರ್ಮಾಣಕ್ಕಾಗಿ ಕೇಂದ್ರವು 3,690 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ಒಟ್ಟಾರೆಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳನ್ನು ಒಳಗೊಳ್ಳುವ ಹತ್ತು ಹೊಸ ಕಟ್ಟಡಗಳ ಬ್ಲಾಕ್‌ಗಳನ್ನು CCS ಹೊಂದಿರುತ್ತದೆ. 2027ರ ಮಧ್ಯದ ವೇಳೆಗೆ CCS ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ವಸತಿ ಕಾರ್ಯದರ್ಶಿ ಕೆ. ಶ್ರೀನಿವಾಸ್ ಹೇಳುತ್ತಾರೆ. "ಡಿಸೆಂಬರ್ 2025 ರ ವೇಳೆಗೆಉಳಿದ ಎಲ್ಲಾ ಕಟ್ಟಡಗಳ ಕೆಲಸ ಪ್ರಾರಂಭವಾಗುತ್ತದೆ ಮತ್ತು ನಾವು ಬಳಸುತ್ತಿರುವ ಹೊಸ ಕಟ್ಟಡ ತಂತ್ರಜ್ಞಾನದೊಂದಿಗೆಅದನ್ನು 24 ತಿಂಗಳೊಳಗೆ ಪೂರ್ಣಗೊಳಿಸಲು ನಮಗೆ ಸಾಧ್ಯವಾಗುತ್ತದೆ" ಎಂಬುದು ಶ್ರೀನಿವಾಸ್ ವಿಶ್ವಾಸ.

ಹೊಸ ಕರ್ತವ್ಯ ಭವನವು 45 ಜನರಿಗೆ ಆಸನ ಸಾಮರ್ಥ್ಯವಿರುವ 24 ಮುಖ್ಯ ಸಭಾ ಕೊಠಡಿಗಳುತಲಾ 25 ಜನರಿಗೆ ಆಸನ ಸಾಮರ್ಥ್ಯವಿರುವ 26 ಸಣ್ಣ ಸಭಾ ಕೊಠಡಿಗಳುಮತ್ತು ತಲಾ ಜನರಿಗೆ ಆಸನ ಸಾಮರ್ಥ್ಯವಿರುವ 67 ಸಣ್ಣ ಸಭಾ ಕೊಠಡಿಗಳನ್ನು ಹೊಂದಿರುತ್ತದೆ.

ಸದ್ಯಕ್ಕೆ ಹಳೆಯ ಸೆಂಟ್ರಲ್ ಸೆಕ್ರೆಟರಿಯೇಟ್ ಕಾಂಪ್ಲೆಕ್ಸ್‌ನಲ್ಲಿ 22 ಕೇಂದ್ರ ಸಚಿವಾಲಯಗಳು ಮತ್ತು 41,000 ಉದ್ಯೋಗಿಗಳ ಕಚೇರಿಗಳಿವೆ. ಶಾಸ್ತ್ರಿ ಭವನನಿರ್ಮಾಣ ಭವನಉದ್ಯೋಗ ಭವನಕೃಷಿ ಭವನ ಮತ್ತು ವಾಯು ಭವನ ಸೇರಿದಂತೆ ಹಲವು ಕಟ್ಟಡಗಳು ಇದರಲ್ಲಿ ಸೇರಿವೆ. ಹೆಚ್ಚಿನ ಕೇಂದ್ರ ಸಚಿವಾಲಯಗಳು CCS ಗೆ ಸ್ಥಳಾಂತರಗೊಳ್ಳಲಿದ್ದರೂವಾಣಿಜ್ಯ ಸಚಿವಾಲಯದ ಕಚೇರಿಗಳನ್ನು ಹೊಂದಿರುವ ವಾಣಿಜ್ಯ ಭವನ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಚೇರಿಗಳನ್ನು ಹೊಂದಿರುವ ಜವಾಹರಲಾಲ್ ನೆಹರು ಭವನದಂತಹ ಕೆಲವು ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತದೆ. ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಅಂಬೇಡ್ಕರ್ ಆಡಿಟೋರಿಯಂ ಕೂಡ ಉಳಿಯಲಿವೆ.

ಪ್ರಧಾನಿ ನಿವಾಸ ಮತ್ತು ಕಾರ್ಯಾಲಯಕ್ಕೆ ಹೊಸ ರೂಪ!

ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಡಿಯಲ್ಲಿಹೊಸ ಪ್ರಧಾನಮಂತ್ರಿ ಕಾರ್ಯಾಲಯ (PMO)ಇದನ್ನು ಕಾರ್ಯನಿರ್ವಾಹಕ ಎನ್‌ಕ್ಲೇವ್ ಎಂದು ಕರೆಯಲಾಗುತ್ತದೆಮತ್ತು ಪ್ರಧಾನಮಂತ್ರಿ ನಿವಾಸ ಕೂಡ ಸಿದ್ಧವಾಗುತ್ತಿದೆ. PMO ಗಾಗಿ ಕಾರ್ಯನಿರ್ವಾಹಕ ಎನ್‌ಕ್ಲೇವ್ ಕೆಲಸ ನಡೆಯುತ್ತಿದ್ದುಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಖಟ್ಟರ್ ಹೇಳಿದ್ದಾರೆ.

ಈ ಕಾರ್ಯನಿರ್ವಾಹಕ ಎನ್‌ಕ್ಲೇವ್ ಸದ್ಯದ ಸೌತ್ ಬ್ಲಾಕ್ ಇರುವ ಜಾಗದಲ್ಲಿ ನಿರ್ಮಾಣವಾಗುತ್ತಿದೆ. ಪ್ರಧಾನಮಂತ್ರಿಗಳ ಹೊಸ ನಿವಾಸದ ಕೆಲಸವೂ ಪ್ರಾರಂಭವಾಗಿದೆ. "ನಾವು ಯೋಜನೆಗೆ ಬಿಡ್ ಸಲ್ಲಿಸಿದ್ದೇವೆ" ಎಂಬುದು ಹಿರಿಯ ವಸತಿ ಸಚಿವಾಲಯದ ಅಧಿಕಾರಿಯೊಬ್ಬರ ಹೇಳಿಕೆ.

ಕಾರ್ಯನಿರ್ವಾಹಕ ಎನ್‌ಕ್ಲೇವ್-II ಭಾಗವಾಗಿರುವ ಪ್ರಧಾನಮಂತ್ರಿ ನಿವಾಸ ಸಂಕೀರ್ಣವು ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಪ್ರಮುಖ ಮತ್ತು ಹೈ-ಪ್ರೊಫೈಲ್ ಅಂಶಗಳಲ್ಲಿ ಒಂದಾಗಿದೆ. ದೆಹಲಿಯ ಸೌತ್ ಬ್ಲಾಕ್ ಬಳಿಯ ದಾರಾ ಶಿಕೋ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸಂಕೀರ್ಣವು ಒಟ್ಟು 2,26,203 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ ಮತ್ತು ಅಂದಾಜು 467 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ ಪ್ರಧಾನಮಂತ್ರಿಗಳ ನಿವಾಸವು 36,328 ಚದರ ಅಡಿ ಪ್ರದೇಶದಲ್ಲಿ ನಿರ್ಮಾಣವಾಗಲಿದೆ.

ಈ ಸಂಕೀರ್ಣದಲ್ಲಿ ಪ್ರಧಾನಮಂತ್ರಿಗಳ ಮುಖ್ಯ ನಿವಾಸ (ನೆಲ ಮತ್ತು ಮೊದಲ ಮಹಡಿ), PMO, ಒಳಾಂಗಣ ಕ್ರೀಡಾ ಸೌಲಭ್ಯಸಹಾಯಕ ಸಿಬ್ಬಂದಿ ಕ್ವಾರ್ಟರ್ಸ್ವಿಶೇಷ ರಕ್ಷಣಾ ಗುಂಪು (SPG) ಕಚೇರಿಸೇವಾ ಸದನ ಮತ್ತು ಭದ್ರತಾ ಕಚೇರಿ ಇರಲಿದೆ ಎಂದು ವರದಿ ತಿಳಿಸಿದೆ. ಈ ಸಂಕೀರ್ಣದ ಒಂದು ಪ್ರಮುಖ ಅಂಶವೆಂದರೆ, PMO ನಿವಾಸದಿಂದ ನೇರವಾಗಿ ಕಾರ್ಯನಿರ್ವಾಹಕ ಎನ್‌ಕ್ಲೇವ್‌ಗೆ ಸಂಪರ್ಕ ಕಲ್ಪಿಸುವ ಭೂಗತ ವಿಐಪಿ ಸುರಂಗಇದು ಪ್ರಧಾನಮಂತ್ರಿ ಕಾರ್ಯಾಲಯಹೊಸ ಸಂಸತ್ತು ಮತ್ತು ಉಪರಾಷ್ಟ್ರಪತಿ ನಿವಾಸವನ್ನು ಒಳಗೊಂಡಿರುತ್ತದೆ.
PARYAYA: ಹೈಟೆಕ್ 'ಕರ್ತವ್ಯ ಭವನ': ಸಮಗ್ರ ಸಚಿವಾಲಯಗಳ ಹೊಸ ತಾಣ:   ಹೈಟೆಕ್ ' ಕರ್ತವ್ಯ ಭವನ ': ಸಮಗ್ರ ಸಚಿವಾಲಯಗಳ ಹೊಸ ತಾಣ ದೆ ಹಲಿಯ ಜನಪಥ್‌ನಲ್ಲಿ ಹಿಂದೆ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದಿ ಆರ್ಟ್ಸ್ ಇದ್ದ ಜಾಗದಲ್...

Monday, April 14, 2025

PARYAYA: ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ಹೀಗೆ ಬೂಟು ಹಿಡಿದು ಗದರಿದ್ದೇಕೆ?

ಪ್ರಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್ಮ ಕೈಯಾರೆ ಬೂಟುಗಳನ್ನು ನೀಡಿ ಅವುಗಳನ್ನು ಧರಿಸುವಂತೆ ವಿನಂತಿಸಿದರು.

ಏಕೆ ಗೊತ್ತೇ?

ಈ ವ್ಯಕ್ತಿ ೧೪ ವರ್ಷಗಳ ಹಿಂದೆ ಪ್ರತಿಜ್ಞೆಯೊಂದನ್ನು ಮಾಡಿ ಪಾದರಕ್ಷೆ ಧರಿಸುವುದನ್ನು ಬಿಟ್ಟು ಬಿಟ್ಟಿದ್ದರು. ಪಾದರಕ್ಷೆ ಧಾರಣೆಯನ್ನು ಬಿಟ್ಟ ಈ ಸಂದರ್ಭದಲ್ಲಿ ಅವರು ಮಾಡಿದ್ದ ಪ್ರತಿಜ್ಞೆ ಏನೆಂದರೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ತನಗೆ ಅವರ ಭೇಟಿಯ ಅವಕಾಶ ಲಭಿಸಿದ ಬಳಿಕ ಮಾತ್ರವೇ ಪಾದರಕ್ಷೆ ಧರಿಸುವೆ ಅಂತ.

ಈ ವಿಷಯ ನರೇಂದ್ರ ಮೋದಿ ಅವರಿಗೆ ಈದಿನ ಗೊತ್ತಾಯಿತು. ಯಮುನಾ ನಗರದಲ್ಲಿ ಸಾರ್ವಜನಿಕ ಸಭೆಯ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಕರೆಸಿಕೊಂಡು ತಮ್ಮ ಕೈಗಳಿಂದಲೇ ಅವರಿಗೆ ಪಾದರಕ್ಷೆಗಳನ್ನು ನೀಡಿದ ಮೋದಿ ಹೀಗೆ ಮಾಡಿದ್ದು ಏಕೆ ಎಂದು ಗದರಿದರು. ಮುಂದೆಂದೂ ಹೀಗೆಲ್ಲ ಮಾಡಬಾರದು. ಸಾಮಾಜಿಕ ಕೆಲಸ ಮಾಡಿ ಎಂದು ಕಿವಿ ಮಾತು ಹೇಳಿದರು.

ಈ ವಿಡಿಯೋವನ್ನು ಎಕ್ಸ್‌ ನಲ್ಲಿ (ಹಿಂದಿನ ಟ್ವಿಟ್ಟರ್)‌ ಹಂಚಿಕೊಂಡ ಪ್ರಧಾನಿಯವರು ʼಅಭಿಮಾನಿಗಳ ಇಂತಹ ಪ್ರೀತಿಯನ್ನು ಗೌರವಿಸುತ್ತೇನೆ. ಆದರೆ ಇಂತಹ ಪ್ರತಿಜ್ಞೆಗಳನ್ನೆಲ್ಲ ಮಾಡುವ ಬದಲಿಗೆ ಸಾಮಾಜಿಕ ಕೆಲಸ ಮಾಡಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಂಬಂಧಿಸಿದ ಯಾವುದಾದರೂ ಕೆಲಸ ಮಾಡಿʼ ಎಂದು ಮನವಿ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

PARYAYA: ಕೈಯಾರೆ ಬೂಟು ಕೊಟ್ಟು ಧರಿಸಲು ಹೇಳಿದ ಪ್ರಧಾನಿ:   ಕೈಯಾರೆ ಬೂಟು ಕೊಟ್ಟು ಧರಿಸಲು ಹೇಳಿದ ಪ್ರಧಾನಿ ಪ್ರ ಧಾನಿ ನರೇಂದ್ರ ಮೋದಿ ಅವರು ಈದಿನ (೨೦೨೫ ಏಪ್ರಿಲ್‌ ೧೪) ಯಮುನಾ ನಗರದಲ್ಲಿ ರಾಮ್‌ ಪಾಲ್‌ ಕಶ್ಯಪ್‌ ಎಂಬವರಿಗೆ ತಮ್...

Monday, December 23, 2024

PARYAYA: ವಾಟ್- ಸುದ್ದಿ

ಹಗರಣ-ದೂರು-ತನಿಖೆ-ನಿಂದನೆ!

ದೆಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.
ಈ ಸಂಬಂಧವಾಗಿ ಸಂಸತ್ತಿನಲ್ಲಿ ಕಾಂಗ್ರೆಸ್‌ ಮಾಡಿದ್ದ ಆರೋಪಕ್ಕೆ ಪ್ರಧಾನಿ ನೀಡಿದ್ದ ಉತ್ತರದಲ್ಲಿನ ಈ ಭಾಗದ ವಿಡಿಯೋ ತುಣುಕು ಇದೀಗ ಎಕ್ಸ್‌ (ಹಿಂದಿನ ಟ್ವಿಟ್ಟರ್)‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ:
PARYAYA: ವಾಟ್- ಸುದ್ದಿ: ಹಗರಣ-ದೂರು-ತನಿಖೆ-ನಿಂದನೆ! ದೆ ಹಲಿಯ ಆಪ್‌ ಸರ್ಕಾರದ ಹಗರಣಗಳ ಕುರಿತು ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರಸ್ತ...

Monday, June 10, 2024

PARYAYA: ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?

ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?

ವದೆಹಲಿ:  ಐತಿಹಾಸಿಕ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರಪ್ರಧಾನಿ ನರೇಂದ್ರ ಮೋದಿ ಅವರು 2024 ಜೂನ್‌ 10ರ ಸೋಮವಾರ ತಮ್ಮ 71 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದರು.

ಹೊಸ ಕೇಂದ್ರ ಸಚಿವ ಸಂಪುಟವು ಸಂಜೆ ಪ್ರಧಾನಿ ನಿವಾಸದಲ್ಲಿ ತನ್ನ ಮೊದಲ ಸಭೆಯನ್ನು ನಡೆಸಿತು. ಆ ಬಳಿಕ ಪೂರ್ಣ ಪ್ರಮಾಣದ ಖಾತೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಸಚಿವರ ಖಾತೆಗಳ ವಿವರಗಳು ಹೀಗಿವೆ:
ಸಂಪುಟ ದರ್ಜೆ ಸಚಿವರು

1. ಪ್ರಧಾನಿ ನರೇಂದ್ರ ಮೋದಿ - ಸಿಬ್ಬಂದಿಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ; ಅಣು ಶಕ್ತಿ ಇಲಾಖೆಬಾಹ್ಯಾಕಾಶ ಇಲಾಖೆ; ಪ್ರಮುಖ ನೀತಿ ನಿರೂಪಣೆ ಮತ್ತು ಹಂಚಿಕೆಯಾಗದ ಎಲ್ಲ ಖಾತೆಗಳು.

2. ರಾಜನಾಥ್ ಸಿಂಗ್ - ರಕ್ಷಣೆ

3. ಅಮಿತ್ ಶಾ - ಗೃಹ ವ್ಯವಹಾರಗಳು ಹಾಗೂ ಸಹಕಾರ

4. ನಿತಿನ್ ಗಡ್ಕರಿ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು: ರಾಸಾಯನಿಕಗಳು ಮತ್ತು ರಸಗೊಬ್ಬರಗಳು

5. ಜೆಪಿ ನಡ್ಡಾ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ

6. ಶಿವರಾಜ್ ಸಿಂಗ್ ಚೌಹಾಣ್ - ಕೃಷಿ ಮತ್ತು ರೈತರ ಕಲ್ಯಾಣಗ್ರಾಮೀಣಾಭಿವೃದ್ಧಿ

7. ನಿರ್ಮಲಾ ಸೀತಾರಾಮನ್ - ಹಣಕಾಸುಕಾರ್ಪೊರೇಟ್ ವ್ಯವಹಾರಗಳು

8. ಸುಬ್ರಹ್ಮಣ್ಯಂ ಜೈಶಂಕರ್ - ವಿದೇಶಾಂಗ ವ್ಯವಹಾರ

9. ಮನೋಹರ್ ಲಾಲ್ ಖಟ್ಟರ್ - ವಸತಿ ಮತ್ತು ನಗರ ವ್ಯವಹಾರಗಳು, ಇಂಧನ

10. ಜೆಡಿ (ಎಸ್)‌ ನಾಯಕ ಎಚ್‌ಡಿ ಕುಮಾರಸ್ವಾಮಿ - ಭಾರೀ ಕೈಗಾರಿಕೆ; ಕ್ಕು

11. ಪಿಯೂಷ್ ಗೋಯಲ್ - ವಾಣಿಜ್ಯ ಮತ್ತು ಕೈಗಾರಿಕೆ

12. ಧರ್ಮೇಂದ್ರ ಪ್ರಧಾನ್ - ಶಿಕ್ಷಣ

13. HAM ನಾಯಕ ಜಿತನ್ ರಾಮ್ ಮಾಂಝಿ - ಸೂಕ್ಷ್ಮಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು

14. JD(U) ನಾಯಕ ಲಾಲನ್ ಸಿಂಗ್ (ರಾಜೀವ ರಂಜನ್‌ ಸಿಂಗ್)- ಪಂಚಾಯತ್ ರಾಜ್‌; ಮೀನುಗಾರಿಕೆಪಶುಸಂಗೋಪನೆ ಮತ್ತು ಹೈನುಗಾರಿಕೆ

15. ಸರ್ಬಾನಂದ ಸೋನೊವಾಲ್ - ಬಂದರುಗಳುಹಡಗು ಮತ್ತು ಜಲಮಾರ್ಗಗಳು

16. ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

17. ಟಿಡಿಪಿ ನಾಯಕ ಕಿಂಜರಾಪು ರಾಮ್ ಮೋಹನ್ ನಾಯ್ಡು - ನಾಗರಿಕ ವಿಮಾನಯಾನ

18. ಪ್ರಹ್ಲಾದ್ ಜೋಶಿ - ಗ್ರಾಹಕ ವ್ಯವಹಾರಗಳುಆಹಾರ ಮತ್ತು ಸಾರ್ವಜನಿಕ ವಿತರಣೆಹೊಸ ಮತ್ತು ನವೀಕರಿಸಬಹುದಾದ ಇಂಧನ

19. ಜುಯಲ್ ಓರಮ್ - ಬುಡಕಟ್ಟು ವ್ಯವಹಾರಗಳು

20. ಗಿರಿರಾಜ್ ಸಿಂಗ್ - ಜವಳಿ

21. ಅಶ್ವಿನಿ ವೈಷ್ಣವ್ - ರೈಲ್ವೆಮಾಹಿತಿ ಮತ್ತು ಪ್ರಸಾರ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ

22. ಜ್ಯೋತಿರಾದಿತ್ಯ ಸಿಂಧಿಯಾ - ಸಂವಹನಈಶಾನ್ಯ ಪ್ರದೇಶದ ಅಭಿವೃದ್ಧಿ

23. ಭೂಪೇಂದ್ರ ಯಾದವ್ - ಪರಿಸರ ಮತ್ತು ಅರಣ್ಯ

24. ಗಜೇಂದ್ರ ಸಿಂಗ್ ಶೇಖಾವತ್ – ಪ್ರವಾಸೋದ್ಯಮ; ಸಂಸ್ಕೃತಿ

25. ಅನ್ನಪೂರ್ಣ ದೇವಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

26. ಕಿರಣ್ ರಿಜಿಜು - ಸಂಸದೀಯ ವ್ಯವಹಾರಗಳು; ಅಲ್ಪಸಂಖ್ಯಾತ ವ್ಯವಹಾರಗಳು

27. ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ

28. ಮನ್ಸುಖ್ ಮಾಂಡವಿಯಾ - ಕಾರ್ಮಿಕ ಮತ್ತು ಉದ್ಯೋಗಯುವ ವ್ಯವಹಾರಗಳು ಮತ್ತು ಕ್ರೀಡೆ

29. ಜಿ ಕಿಶನ್ ರೆಡ್ಡಿ – ಕಲ್ಲಿದ್ದಲು; ಗಣಿ

30. LJP(RV) ಚಿರಾಗ್ ಪಾಸ್ವಾನ್ - ಆಹಾರ ಸಂಸ್ಕರಣಾ ಕೈಗಾರಿಕೆಗಳು

31. ಸಿ ಆರ್ ಪಾಟೀಲ್ - ಜಲ ಸಂಪನ್ಮೂಲ

 ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ)

1. ರಾವ್ ಇಂದರ್‌ಜಿತ್ ಸಿಂಗ್ - ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನಯೋಜನೆಸಂಸ್ಕೃತಿ

2. ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನಭೂ ವಿಜ್ಞಾನಪ್ರಧಾನ ಮಂತ್ರಿ ಕಚೇರಿಯಲ್ಲಿ ರಾಜ್ಯ ಸಚಿವಸಿಬ್ಬಂದಿಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳ ಸಚಿವಾಲಯದ ರಾಜ್ಯ ಸಚಿವಪರಮಾಣು ಶಕ್ತಿ ಇಲಾಖೆಯಲ್ಲಿ ರಾಜ್ಯ ಸಚಿವಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವ

3. ಅರ್ಜುನ್ ರಾಮ್ ಮೇಘವಾಲ್ - ಕಾನೂನು ಮತ್ತು ನ್ಯಾಯಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ

4. ಪ್ರತಾಪ ರಾವ್ ಗಣಪತ್‌ ರಾವ್‌ ಜಾಧವ್ - ಆಯುಷ್ ಸಚಿವಾಲಯಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ

5. RLD ಮುಖ್ಯಸ್ಥ ಜಯಂತ್ ಚೌಧರಿ - ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯಶಿಕ್ಷಣ ಸಚಿವಾಲಯದ ರಾಜ್ಯ ಸಚಿವ

 ರಾಜ್ಯ ಸಚಿವರು (ಸಹಾಯಕ ಸಚಿವರು)

1. ಜಿತಿನ್ ಪ್ರಸಾದ - ವಾಣಿಜ್ಯ ಮತ್ತು ಕೈಗಾರಿಕೆ;  ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.

2. ಶ್ರೀಪಾದ್ ಯೆಸ್ಸೋ ನಾಯಕ್ – ವಿದ್ಯುತ್; ಹೊಸ ಮತ್ತು ನವೀಕರಿಸಬಹುದಾದ ಇಂಧನ

3. ಪಂಕಜ್ ಚೌಧರಿ - ಹಣಕಾಸು

4. ಕ್ರಿಶನ್ ಪಾಲ್ -  ಸಹಕಾರ

5. RPI(A) ನಾಯಕ ಅಠವಳೆ ರಾಮದಾಸ್ ಬಂಡು -  ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

6. ರಾಮ್ ನಾಥ್ ಠಾಕೂರ್ - ಕೃಷಿ ಮತ್ತು ರೈತರ ಕಲ್ಯಾಣ

7. ನಿತ್ಯಾನಂದ ರೈ - ಗೃಹ ವ್ಯವಹಾರ

8. ಅನುಪ್ರಿಯಾ ಸಿಂಗ್ ಪಟೇಲ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ; ರಾಸಾಯನಿಕಗಳು ಮತ್ತು ರಸಗೊಬ್ಬರ

9. ವಿ ಸೋಮಣ್ಣ - ಜಲ ಸಂಪನ್ಮೂಲರೈಲ್ವೆ

10. ಟಿಡಿಪಿ ಸಂಸದ ಚಂದ್ರಶೇಖರ್ ಪೆಮ್ಮಸಾನಿ – ಗ್ರಾಮೀಣಾಭಿವೃದ್ಧಿ; ಸಂವಹನ

11. S. P. ಸಿಂಗ್ ಬಘೇಲ್ - ಮೀನುಗಾರಿಕೆಪಶುಸಂಗೋಪನೆ ಮತ್ತು ಹೈನುಗಾರಿಕೆ;  ಪಂಚಾಯತ್ ರಾಜ್

12. ಶೋಭಾ ಕರಂದ್ಲಾಜೆ - ಸೂಕ್ಷ್ಮಸಣ್ಣ ಮತ್ತು ಮಧ್ಯಮ ಕೈಗಾರಿಕೆ; ಕಾರ್ಮಿಕ ಮತ್ತು ಉದ್ಯೋಗ

13. ಕೀರ್ತಿ ವರ್ಧನ್ ಸಿಂಗ್ - ಪರಿಸರಅರಣ್ಯ ಮತ್ತು ಹವಾಮಾನ ಬದಲಾವಣೆ; ವಿದೇಶಾಂಗ ವ್ಯವಹಾರಗಳು

14. ಬಿಎಲ್ ವರ್ಮಾ - ಗ್ರಾಹಕ ವ್ಯವಹಾರಗಳುಆಹಾರ ಮತ್ತು ಸಾರ್ವಜನಿಕ ವಿತರಣೆ; ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

15. ಶಂತನು ಠಾಕೂರ್ - ಬಂದರುಹಡಗು ಮತ್ತು ಜಲಮಾರ್ಗ

16. ಸುರೇಶ್ ಗೋಪಿ - ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ; ಪ್ರವಾಸೋದ್ಯಮ

17. L. ಮುರುಗನ್ - ಮಾಹಿತಿ ಮತ್ತು ಪ್ರಸಾರಸಂಸದೀಯ ವ್ಯವಹಾರ

18. ಅಜಯ್ ತಮ್ತಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು

19. ಬಂಡಿ ಸಂಜಯ್ ಕುಮಾರ್ - ಗೃಹ ವ್ಯವಹಾರ

20. ಕಮಲೇಶ್ ಪಾಸ್ವಾನ್ - ಗ್ರಾಮೀಣಾಭಿವೃದ್ಧಿ

21. ಭಗೀರಥ ಚೌಧರಿ - ಕೃಷಿ ಮತ್ತು ರೈತರ ಕಲ್ಯಾಣ.

22. ಸತೀಶ್ ಚಂದ್ರ ದುಬೆ – ಕಲ್ಲಿದ್ದಲು; ಗಣಿ

23. ಸಂಜಯ್ ಸೇಠ್ - ರಕ್ಷಣೆ

24. ರವನೀತ್ ಸಿಂಗ್ ಬಿಟ್ಟು - ಆಹಾರ ಸಂಸ್ಕರಣಾ ಉದ್ಯಮ; ರೈಲ್ವೆ

25. ದುರ್ಗಾ ದಾಸ್ ಯುಕೆ - ಬುಡಕಟ್ಟು ವ್ಯವಹಾರ

26. ರಕ್ಷಾ ನಿಖಿಲ್ ಖಡ್ಸೆ - ಯುವ ವ್ಯವಹಾರಗಳು ಮತ್ತು ಕ್ರೀಡೆ

27. ಸುಕಾಂತ ಮಜುಂದಾರ್ – ಶಿಕ್ಷಣ; ಈಶಾನ್ಯ ಪ್ರದೇಶದ ಅಭಿವೃದ್ಧಿ.

28. ಸಾವಿತ್ರಿ ಠಾಕೂರ್ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ.

29. ತೋಖಾನ್ ಸಾಹು - ವಸತಿ ಮತ್ತು ನಗರ ವ್ಯವಹಾರ

30. ರಾಜ್ ಭೂಷಣ್ ಚೌಧರಿ - ಜಲ ಸಂಪನ್ಮೂಲ

31. ಭೂಪತಿ ರಾಜು ಶ್ರೀನಿವಾಸ ವರ್ಮ - ಭಾರೀ ಕೈಗಾರಿಕೆ; ಕ್ಕು

32. ಹರ್ಷ್ ಮಲ್ಹೋತ್ರಾ - ರಸ್ತೆ ಸಾರಿಗೆ ಮತ್ತು ಹೆದ್ದಾರಿ; ಕಾರ್ಪೊರೇಟ್ ವ್ಯವಹಾರಗಳು

33. ನಿಮುಬೆನ್ ಬಂಭಾನಿಯಾ - ಗ್ರಾಹಕ ವ್ಯವಹಾರಆಹಾರ ಮತ್ತು ಸಾರ್ವಜನಿಕ ವಿತರಣೆ

34. ಮುರಳೀಧರ್ ಮೊಹೋಲ್ - ಸಹಕಾರ ಸಚಿವಾಲಯನಾಗರಿಕ ವಿಮಾನಯಾನ

35. ಜಾರ್ಜ್ ಕುರಿಯನ್ - ಅಲ್ಪಸಂಖ್ಯಾತ ವ್ಯವಹಾರಗಳು; ಮೀನುಗಾರಿಕೆಪಶುಸಂಗೋಪನೆ ಮತ್ತು ಹೈನುಗಾರಿಕೆ 36. ಪಬಿತ್ರಾ ಮಾರ್ಗರಿಟಾ - ವಿದೇಶಾಂಗ ವ್ಯವಹಾರ; ಜವಳಿ.

ಇವುಗಳನ್ನೂ ಓದಿ:

ಮೂರನೇ ಅವಧಿ: ಪ್ರಧಾನಿ ಮೋದಿ ಮೊದಲ ಕೆಲಸ ಯಾವುದು?
ನರೇಂದ್ರ ದಾಮೋದರದಾಸ್‌ ಮೋದಿ 3.0 ಯುಗಾರಂಭ
ಮೋದಿ 3.0 ಯುಗ: 5 ವರ್ಷಗಳ ಕಾರ್ಯಸೂಚಿ ಸಿದ್ಧ
ಮೋದಿ 3.0 ಆಡಳಿತ ಆರಂಭ: ನೆರೆ ರಾಷ್ಟ್ರಗಳಿಂದ ಯಾರು ಬರ್ತಿದ್ದಾರೆ?
ದೆಹಲಿ ಹಾರಾಟ ನಿಷೇಧ ವಲಯ, ಜೂನ್‌ 9ಕ್ಕೆ ಮೋದಿ ಪ್ರಮಾಣ
ಮೋದಿಗೆ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಲಿಖಿತ ಬೆಂಬಲ
ಪ್ರಧಾನಿ ಮೋದಿ ರಾಜೀನಾಮೆ, ಶನಿವಾರ ಪ್ರಮಾಣ ವಚನ?
ಇವರೆಲ್ಲ ಭಾರತದ ಈವರೆಗಿನ ಪ್ರಧಾನಿಗಳು, ಮುಂದಿನ ಪ್ರಧಾನಿ …… ?
ಕನ್ಯಾಕುಮಾರಿಯ ಧ್ಯಾನ: ಪ್ರಧಾನಿ ಮೋದಿ ಹೊಸ ಸಂಕಲ್ಪಗಳು
ಅರುಣಾಚಲ ಪ್ರದೇಶ: ಬಿಜೆಪಿ ಹ್ಯಾಟ್ರಿಕ್, ಸಿಕ್ಕಿಂನಲ್ಲಿ ಎಸ್‌ಕೆಎಂ ಜಯಭೇರಿ


PARYAYA: ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ?:   ಪ್ರಧಾನಿ ಮೋದಿ 3.0 ಸರ್ಕಾರ: ಯಾರಿಗೆ ಏನು ಖಾತೆ? ನ ವದೆಹಲಿ:   ಐತಿಹಾಸಿಕ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ , ಪ್ರಧಾನಿ ನರೇಂದ್ರ ಮೋದಿ ...