Showing posts with label ಭಾರತ. Show all posts
Showing posts with label ಭಾರತ. Show all posts

Saturday, August 15, 2026

PARYAYA: ಸ್ವಾತಂತ್ರ್ಯೋತ್ಸವ ಸಡಗರ ೨೦೨೬

 ಸ್ವಾತಂತ್ರ್ಯೋತ್ಸವ ಸಡಗರ ೨೦೨೬

ದೇಶದ ಇತರೆಡೆಗಳಂತೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿಯೂ ೨೦೨೬ ಆಗಸ್ಟ್‌ ೧೬ರ ಶನಿವಾರ ಭಾರತದ ೮೦ನೇ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು.

ನಿವೃತ್ತ ಯೋಧ, ಬಡಾವಣೆಯ ನಿವಾಸಿ ಕೆ. ಥೋಮಸ್‌ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ತ್ರಿವರ್ಣ ಧ್ವಜವನ್ನು ಅರಳಿಸಿದರು. ಈ ಸಂದರ್ಭದಲ್ಲಿ ಶ್ರೀ ಥೋಮಸ್‌ ಮತ್ತು ಅವರ ಪತ್ನಿಯನ್ನು ಸನ್ಮಾನಿಸಲಾಯಿತು.

ಬಡಾವಣೆಯ ಹಿರಿಯ ಸದಸ್ಯ, ಶ್ರೀ ಬಾಲಾಜಿ ಮಹಾಗಣಪತಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಶ್ರೀ ಚೌಡರೆಡ್ಡಿ ಮತ್ತು ಶ್ರೀ ಬಾಲಾಜಿ ಕೃಪಾ ನಿವಾಸಿಗಳ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀ ರಾಜೇಶ ಹೆಗಡೆ ಅವರು ಮಹಾತ್ಮ ಗಾಂಧಿ ಮತ್ತು ಡಾ. ಅಂಬೇಡ್ಕರ್‌ ಭಾವಚಿತ್ರಗಳಿಗೆ ಪುಷ್ಟಾರ್ಚನೆ ಮಾಡಿದರು.

ಬಡಾವಣೆಯ ಹಿರಿಯ ನಿವಾಸಿ ಶ್ರೀ ಶಿವಪ್ಪ ಶಾಂತಪ್ಪನವರ ಸ್ವಾತಂತ್ರ್ಯದ ಮಹತ್ವ ಕುರಿತು ಮಾತನಾಡಿದರು. ಶ್ರೀ ರಾಜೇಶ ಹೆಗಡೆ ಅಧ್ಯಕ್ಷ ಭಾಷಣ ಮಾಡಿದರು. ಶ್ರೀ ನೆತ್ರಕೆರೆ ಉದಯಶಂಕರ ಕಾರ್ಯಕ್ರಮ ನಿರ್ವಹಿಸಿದರು.

ಬಡಾವಣೆಯ ಹಿರಿಯ ಸದಸ್ಯ ವಕೀಲ ಮುನಿರಾಜು ಅವರು ಉಪಾಹಾರದ ವ್ಯವಸ್ಥೆ ಮಾಡಿದ್ದರು. ಶ್ರೀ ಎಚ್.ವಿ. ಉದಯಶಂಕರ್‌, ಶ್ರೀ ರಾಘವೇಂದ್ರ ಕಾಮತ್‌, ಹಂಪಣ್ಣ, ರಶ್ಮಿ, ಸ್ವಾತಿ ಮತ್ತಿತರರು ಕಾರ್ಯಕ್ರಮ ಸಂಘಟಿಸುವಲ್ಲಿ ನೆರವಾಗಿದ್ದರು. ಬಡಾವಣೆಯ ಮತ್ತು ಆಸುಪಾಸಿನ ಪ್ರದೇಶಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಸಡಗರದೊಂದಿಗೆ ಪಾಲ್ಗೊಂಡರು. 
ಈ ಸಂದರ್ಭದ ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿ.


PARYAYA: ಸ್ವಾತಂತ್ರ್ಯೋತ್ಸವ ಸಡಗರ ೨೦೨೬:   ಸ್ವಾತಂತ್ರ್ಯೋತ್ಸವ ಸಡಗರ ೨೦೨೬ ದೇ ಶದ ಇತರೆಡೆಗಳಂತೆ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿಯೂ ೨೦೨೬ ಆಗಸ್ಟ್‌ ೧೬ರ ಶನಿವಾರ ಭಾರತದ ೮೦ನ...

Friday, August 14, 2026

PARYAYA: ನಡುರಾತ್ರಿಯಲ್ಲಿ ಏಕೆ ಸ್ವಾತಂತ್ರ್ಯ? 1947ರ ಒಂದು ಕಥೆ

 ನಡುರಾತ್ರಿಯಲ್ಲಿ ಏಕೆ ಸ್ವಾತಂತ್ರ್ಯ? 1947ರ ಒಂದು ಕಥೆ

1947 ಜೂನ್ 4ರ ಮಧ್ಯಾಹ್ನ. ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಖ್ಯಾತ ಜ್ಯೋತಿಷಿ ಸ್ವಾಮಿ ಮದನಾನಂದ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ (AIR) ಬ್ರಿಟಿಷ್ ಭಾರತದ ಕೊನೆಯ ವೈಸ್‌ರಾಯ್ ಲಾರ್ಡ್ ಮೌಂಟ್ ಬ್ಯಾಟನ್ ಅವರ ಪತ್ರಿಕಾ ಗೋಷ್ಠಿಯನ್ನು ಆಲಿಸುತ್ತಿದ್ದರು. "ಆಗಸ್ಟ್ 15, 1947ರಂದು ಬ್ರಿಟಿಷರು ಭಾರತೀಯರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ" ಎಂದು ಮೌಂಟ್ ಬ್ಯಾಟನ್ ಘೋಷಿಸಿದರು.

ದೇಶವೇ ದಶಕಗಳಿಂದ ಕಾಯುತ್ತಿದ್ದ ಸ್ವಾತಂತ್ರ್ಯದ ದಿನ ನಿಗದಿಯಾಗಿತ್ತು. ಆದರೆ ಮದನಾನಂದರ ಮುಖದಲ್ಲಿ ಖುಷಿಯ ಬದಲಿಗೆ ಆತಂಕ ಕವಿಯಿತು.
"ಅಯ್ಯೋ, ಅವರು ಏನು ಮಾಡಿಬಿಟ್ಟರು? ಏನು ಮಾಡಿಬಿಟ್ಟರು?
ಎಂದು ಮದನಾನಂದರು ದಿಗ್ಭ್ರಮೆಯಿಂದ ಕೂಗಿಕೊಂಡರು. ತಕ್ಷಣ ತಮ್ಮ ಜ್ಯೋತಿಷ್ಯದ ಖಗೋಳ ನಕ್ಷತ್ರ ನಕಾಶೆಗಳನ್ನು ತೆಗೆದು ಪರಿಶೀಲಿಸಿದರು. ರಾಷ್ಟ್ರಕ್ಕೆ ಕಾದಿರುವ ಭಯಾನಕ  ಭವಿಷ್ಯದ ಮುನ್ಸೂಚನೆ ಅವರಿಗೆ ಸಿಕ್ಕಿತು.

ನಕ್ಷತ್ರ ದೋಷದ ಆತಂಕ

ವಾರಾಣಸಿ, ಕಲ್ಕತ್ತಾ ಮತ್ತು ದಕ್ಷಿಣ ಭಾರತದಾದ್ಯಂತ ಜ್ಯೋತಿಷಿಗಳು ಈ ದಿನಾಂಕವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರು. ಆಗಸ್ಟ್ 15, 1947 ಶುಕ್ರವಾರವಾಗಿತ್ತು. ಹಿಂದೂ ಜ್ಯೋತಿಷ್ಯದ ಪ್ರಕಾರ ಶುಕ್ರವಾರ ಮತ್ತು ಭಾನುವಾರಗಳು ಯಾವುದೇ ಶುಭ ಕಾರ್ಯಗಳಿಗೆ ಅಶುಭ ದಿನಗಳು. ಭಾರತವು ಮಕರ ರಾಶಿಯಲ್ಲಿ, ಶನಿ ಮತ್ತು ರಾಹುವಿನ ಪ್ರಭಾವದೊಂದಿಗೆ ಜನಿಸಲಿದೆ ಎಂದು ಜ್ಯೋತಿಷಿಗಳು ಕಂಡುಕೊಂಡರು.

"ಪ್ರಳಯ, ಬರಗಾಲ, ಕ್ಷಾಮ ಮತ್ತು ನರಮೇಧಗಳು ಸಂಭವಿಸಿದರೆ, ಸ್ವತಂತ್ರ ಭಾರತವು ನಕ್ಷತ್ರಗಳ ಶಾಪಗ್ರಸ್ತ ದಿನದಂದು ಜನಿಸಿದ್ದೇ ಕಾರಣವಾಗುತ್ತದೆ" ಎಂದು ಸ್ವಾಮಿ ಮದನಾನಂದರು ಮೌಂಟ್ ಬ್ಯಾಟನ್ ಅವರಿಗೆ ಪತ್ರ ಬರೆದು ಎಚ್ಚರಿಸಿದರು. ದೇಶದ ನಾಯಕರಿಗೂ ಸಹ ಜ್ಯೋತಿಷಿಗಳು ಈ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ ಮೌಂಟ್ ಬ್ಯಾಟನ್ ಅವರಿಗೆ ತಮ್ಮ ನಿರ್ಧಾರ ಮುಖ್ಯವಾಗಿತ್ತು. ಆಗಸ್ಟ್‌ 15 ಜಪಾನ್‌ ಶರಣಾಗತಿಯ ಎರಡನೇ ವಾರ್ಷಿಕೋತ್ಸವದ ದಿನ. ಈ ನೆನಪಿಗಾಗಿ ಮೌಂಟ್‌ ಬ್ಯಾಟನ್‌ ಈದಿನವನ್ನು ಆಯ್ದುಕೊಂಡಿದ್ದರು. ಹೀಗಾಗಿ ದಿನ ಬದಲಾವಣೆ ಅಸಾಧ್ಯವಾಗಿತ್ತು.

ನೆಹರೂ ಉಪಾಯ

ದಿನಾಂಕವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಾದಾಗ, ಆ ದಿನದೊಳಗೆ ಒಂದು ಶುಭ ಮುಹೂರ್ತವನ್ನು ಕಂಡುಹಿಡಿಯುವ ಜವಾಬ್ದಾರಿ ನಾಯಕರ ಮೇಲಿತ್ತು. ಜ್ಯೋತಿಷಿಗಳು ರಾತ್ರಿ 12 ಗಂಟೆಯ ಸಮಯವನ್ನು (ಅಭಿಜಿತ್ ಮುಹೂರ್ತ ಹಾಗೂ ಪುಷ್ಯ ನಕ್ಷತ್ರದ ಸಂಯೋಜನೆ) ಅತ್ಯಂತ ಅನುಕೂಲಕರವೆಂದು ಸೂಚಿಸಿದರು.

ಪಂಡಿತ್ ಜವಾಹರಲಾಲ್ ನೆಹರೂ ಅವರು ಈ ಸಂದರ್ಭದಲ್ಲಿ ಒಂದು ಅತ್ಯುತ್ತಮ ರಾಜೀ ಮಾರ್ಗವನ್ನು ಕಂಡುಕೊಂಡರು. ಪತ್ರಕರ್ತ ದುರ್ಗಾ ದಾಸ್ ಅವರ ಪುಸ್ತಕದ ಪ್ರಕಾರ, ನೆಹರೂ ಅವರು ಆಗಸ್ಟ್ 14ರ ಮಧ್ಯಾಹ್ನವೇ ಸಂವಿಧಾನ ಸಭೆಯನ್ನು ಕರೆದರು ಮತ್ತು ಅದರ ಕಲಾಪವನ್ನು ಮಧ್ಯರಾತ್ರಿಯವರೆಗೆ ಮುಂದುವರಿಸಿದರು.

ಹಿಂದೂ ಕ್ಯಾಲೆಂಡರ್ ಪ್ರಕಾರ ಸೂರ್ಯೋದಯದ ಬಳಿಕವೇ 15ರ ಆರಂಭ. ಆದರೆ ಪಾಶ್ಚಿಮಾತ್ಯ ಪದ್ಧತಿಯ ಪ್ರಕಾರ ರಾತ್ರಿ 12 ಗಂಟೆಯಿಂದಲೇ ಆಗಸ್ಟ್ 15 ಆರಂಭವಾಗಿತ್ತು. ಹೀಗಾಗಿ, ಆಗಸ್ಟ್ 15ರ ಆರಂಭದ ಮೊದಲ ಕ್ಷಣದಲ್ಲೇ (ಮಧ್ಯರಾತ್ರಿ) ಭಾರತವು ಸ್ವಾತಂತ್ರ್ಯ ಪಡೆಯಿತು. ಇದು ಜ್ಯೋತಿಷಿಗಳು ಬಯಸಿದ್ದ ಶುಭ ಮುಹೂರ್ತವೂ ಆಗಿತ್ತು, ಮೌಂಟ್ ಬ್ಯಾಟನ್ ಘೋಷಿಸಿದ ಆಗಸ್ಟ್ 15ರ ದಿನವೂ ಕೂಡಾ!

ಹೀಗೆ ನಕ್ಷತ್ರಗಳ ದೋಷವನ್ನು ಪರಿಹರಿಸಲು ನೆಹರೂ ಅವರು ಕಂಡುಕೊಂಡ ಈ ʼನಡುರಾತ್ರಿʼಯ ದಾರಿಯಿಂದಾಗಿ, ಭಾರತದ ಸ್ವಾತಂತ್ರ್ಯದ ಇತಿಹಾಸದಲ್ಲಿ ʼನಡುರಾತ್ರಿʼ ಎಂಬ ಪದವು ಶಾಶ್ವತವಾಗಿ ಅಂಟಿಕೊಂಡಿತು. ಆಗಸ್ಟ್ 14ರ ರಾತ್ರಿ ಇಡೀ ದೇಶ ಎಚ್ಚರದಿಂದಿತ್ತು. ಗಡಿಯಾರದ ಮುಳ್ಳುಗಳು ಹನ್ನೆರಡು ಭಾರಿಸಿದಾಗ, ನೆಹರೂ ಅವರು ತಮ್ಮ ಐತಿಹಾಸಿಕ ಭಾಷಣವನ್ನು ಮೊಳಗಿಸಿದರು:

"ಇಡೀ ಜಗತ್ತು ನಿದ್ರಿಸುತ್ತಿರುವಾಗ, ಭಾರತವು ಜೀವ ಮತ್ತು ಸ್ವಾತಂತ್ರ್ಯಕ್ಕಾಗಿ ಹೊಸ ಚೈತನ್ಯದೊಂದಿಗೆ ಎಚ್ಚೆತ್ತುಕೊಳ್ಳುತ್ತದೆ."

ಮಾಹಿತಿ ಸೌಜನ್ಯ: ಇಂಡಿಯಾ ಟುಡೆ

PARYAYA: ನಡುರಾತ್ರಿಯಲ್ಲಿ ಏಕೆ ಸ್ವಾತಂತ್ರ್ಯ? 1947ರ ಒಂದು ಕಥೆ:   ನಡು ರಾತ್ರಿಯ ಲ್ಲಿ ಏಕೆ ಸ್ವಾತಂತ್ರ್ಯ ? 1947 ರ ಒಂದು ಕಥೆ 1947 ರ ಜೂನ್ 4 ರ ಮಧ್ಯಾಹ್ನ. ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಖ್ಯಾತ ಜ್ಯೋತಿಷಿ ಸ್ವಾಮಿ ಮದನಾನಂದ ಅ...

Friday, August 7, 2026

PARYAYA: ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ..

 ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ..

ರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ ಐ ಆರ್)‌ ಎಎಸ್‌ಡಿಡಿಒ ಎಂಬುದಾಗಿ ವರ್ಗೀಕರಿಸಲಾದ ೧.೧೦ ಕೋಟಿಗೂ ಹೆಚ್ಚಿನ ಮತದಾರರ ಪಟ್ಟಿಯನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಅನ್ಬು ಕುಮಾರ್‌ ಪ್ರಕಟಿಸಿದ್ದಾರೆ.

ಎಎಸ್‌ಡಿಡಿಒ ಅಂದರೆ ಪತ್ತೆಯಾಗದ (ಅಬ್ಸೆಂಟ್-ಎ) ಶಾಶ್ವತ ಸ್ಥಳಾಂತರ (ಶಿಫ್ಟೆಡ್-‌ ಎಸ್)‌, ಮೃತ (ಡೆಡ್-ಡಿ), ಹೆಚ್ಚು ಕಡೆ ನೋಂದಣಿ (ಡೂಪ್ಲಿಕೇಟ್-‌ ಡಿ) ಮತ್ತು ಇತರೆ (ಅದರ್ಸ್-ಒ) ಎಂದು ಅರ್ಥ. ಅಂದರೆ, ಪತ್ತೆಯಾಗದ, ಶಾಶ್ವತವಾಗಿ ಸ್ಥಳಾಂತರಗೊಂಡಿರುವ, ಮೃತರಾಗಿರುವ, ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಣಿಯಾಗಿರುವ ಮತ್ತು ಇತರೆ ಮತದಾರರು ಎಂದು ಅರ್ಥ.

ನಿಮ್ಮ ಹೆಸರು ಈ ಪಟ್ಟಿಗೆ ಸೇರ್ಪಡೆಯಾಗಿದೆಯೇ ಎಂದು ಪರಿಶೀಲಿಸಲು ಈ ಕೊಂಡಿಯನ್ನು (Link) ceo.karnataka.gov.in/asddo.html ಕ್ಲಿಕ್‌ ಮಾಡಿ ಪರಿಶೀಲಿಸಬಹುದು.

ನಿಮ್ಮ ಹೆಸರು ಈ ಪಟ್ಟಿಗೆ ಸೇರ್ಪಡೆ ಆಗಿದ್ದರೆ, ನಿಮ್ಮ ಬಿಎಲ್‌ ಒ ಅವರನ್ನು ಸಂಪರ್ಕಿಸಿ ಏನು ಮಾಡಬೇಕು ಎಂದು ವಿಚಾರಿಸಿ. ಚುನಾವಣಾ ಆಯೋಗವು ಪಟ್ಟಿ ಮಾಡಿರುವ ೧೧ ದಾಖಲೆಗಳಲ್ಲಿ ಯಾವ ದಾಖಲೆ ಸಲ್ಲಿಸಿ, ನಿಮ್ಮ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಹೇಗೆ ಸೇರ್ಪಡೆ ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಬಹುದು.

ಈ ಸುದ್ದಿಯನ್ನೂ ಓದಿ: 

ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ

PARYAYA: ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ..:   ನಿಮ್ಮ ಹೆಸರು ಈ ಪಟ್ಟಿಗೆ ಸೇರಿದೆಯಾ? ಈಗಲೇ ನೋಡಿಕೊಳ್ಳಿ.. ಕ ರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ ಐ ಆರ್)‌ ಎಎಸ್‌ಡಿಡಿಒ ಎಂಬುದಾಗಿ ವರ್...

Thursday, July 9, 2026

PARYAYA: ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ

 ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6'  ಪರಿಹಾರ

 ಬೆಂಗಳೂರು: ಮತದಾರರ ಪಟ್ಟಿಯಲ್ಲಿರುವ ಹಳೆಯ ವಿಳಾಸ ಈಗ ಬದಲಾಗಿದ್ದರೆ, ಅಂತಹವರಿಗೆ ಎಣಿಕೆ ನಮೂನೆ (Enumeration Form) ತಲುಪುವುದಿಲ್ಲ ಎಂಬ ಆತಂಕ ಸದ್ಯ ನಗರದ ಮತದಾರರಲ್ಲಿ ಮನೆಮಾಡಿದೆ. ಆದರೆ, ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (CEO) ಅವರು ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತ ಸಭೆಯಲ್ಲಿ ಈ ಮಹತ್ವದ ಮಾಹಿತಿ ಹಂಚಿಕೊಳ್ಳಲಾಗಿದೆ.

ಪ್ರಮುಖ ಅಂಶಗಳು:

  • ವಿಳಾಸ ಬದಲಾವಣೆ: ಹಾಲಿ ಮತದಾರರ ಪಟ್ಟಿಯಲ್ಲಿರುವ ವಿಳಾಸಕ್ಕಿಂತ ಪ್ರಸ್ತುತ ವಾಸವಿರುವ ವಿಳಾಸ ಬದಲಾಗಿದ್ದರೆ, ಅವರಿಗೆ ಎಣಿಕೆ ನಮೂನೆಗಳನ್ನು ವಿತರಿಸಲಾಗುವುದಿಲ್ಲ. ಹೀಗಾಗಿ, ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ.
  • ಪರಿಹಾರವೇನು?: ಆಗಸ್ಟ್ 5ರ ನಂತರ ಕರಡು ಮತದಾರರ ಪಟ್ಟಿಯು ಪ್ರಕಟವಾಗಲಿದೆ. ಆ ನಂತರ ನಡೆಯುವ ಪರಿಶೀಲನೆ ಹಾಗೂ ಆಕ್ಷೇಪಣೆಗಳ ಅವಧಿಯಲ್ಲಿ, ಮತದಾರರು 'ಫಾರ್ಮ್ 6' (Form 6) ಭರ್ತಿ ಮಾಡಿ ಸಲ್ಲಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು.
  • ನಗರ ಪ್ರದೇಶಗಳಿಗೆ ವಿಶೇಷ ಗಮನ: ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಮನೆ ಬದಲಾವಣೆ ಸಾಮಾನ್ಯ. ಈ ಸ್ಪಷ್ಟನೆಯು ಇಂತಹ ಸಾವಿರಾರು ಮತದಾರರಲ್ಲಿ ಇದ್ದ ಗೊಂದಲವನ್ನು ನಿವಾರಿಸಲಿದೆ ಎಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಭೆಯಲ್ಲಿ ಚರ್ಚಿಸಲ್ಪಟ್ಟ ಇತರ ವಿಷಯಗಳು:

ಸಭೆಯು ಕೇವಲ ವಿಳಾಸ ಬದಲಾವಣೆಗೆ ಸೀಮಿತವಾಗಿರಲಿಲ್ಲ; ಹಲವು ಪ್ರಮುಖ ವಿಚಾರಗಳ ಕುರಿತು ಪಕ್ಷಗಳ ಪ್ರತಿನಿಧಿಗಳು ಆಯೋಗದ ಗಮನ ಸೆಳೆದಿದ್ದಾರೆ:

  • ವಿತರಣೆಯ ಅಂಕಿಅಂಶ: ಎಣಿಕೆ ನಮೂನೆಗಳ ವಿತರಣೆ ಶೇ. 80ರಷ್ಟು ಪೂರ್ಣಗೊಂಡಿದೆ ಎಂಬ ಆಯೋಗದ ಹೇಳಿಕೆಯ ಬಗ್ಗೆ ಬಿಜೆಪಿ ಪ್ರತಿನಿಧಿಗಳು ಪ್ರಶ್ನಿಸಿದ್ದಾರೆ. ಕೇವಲ ನಮೂನೆಗಳನ್ನು ಮನೆಗೆ ತಲುಪಿಸುವುದು ಮಾತ್ರವಲ್ಲದೆ, ಬೂತ್ ಮಟ್ಟದ ಅಧಿಕಾರಿಗಳು (BLOs) ಮತದಾರರಿಗೆ ಪ್ರಕ್ರಿಯೆಯನ್ನು ಸರಿಯಾಗಿ ವಿವರಿಸಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟನೆ ಕೋರಿದ್ದಾರೆ.
  • ಕ್ಷೇತ್ರ ಮಟ್ಟದ ಪರಿಶೀಲನೆ: ಜಿಲ್ಲೆಗಳು, ತಾಲೂಕುಗಳು ಮತ್ತು ಮತಗಟ್ಟೆಗಳಲ್ಲಿನ ವಾಸ್ತವ ಸ್ಥಿತಿಯನ್ನು ತಿಳಿಯಲು ಮುಖ್ಯ ಚುನಾವಣಾಧಿಕಾರಿಗಳು ಸ್ವತಃ ಕ್ಷೇತ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರತಿನಿಧಿಗಳು ಸಲಹೆ ನೀಡಿದ್ದಾರೆ.
  • ಇತರೆ ಸುಧಾರಣೆಗಳು: ಮತದಾರರ ಹೆಸರು ಅಥವಾ ಉಪನಾಮದಲ್ಲಿನ ಕಾಗುಣಿತ ದೋಷಗಳನ್ನು ಸರಿಪಡಿಸುವುದು, ಮದುವೆಯಾದ ಮಹಿಳೆಯರ ಹೆಸರಿನಲ್ಲಿ ಪತಿಯ ಹೆಸರನ್ನು ಸೇರಿಸುವಂತಹ ತಾಂತ್ರಿಕ ಬದಲಾವಣೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ರಾಜಕೀಯ ಪಕ್ಷಗಳು ಮನವಿ ಮಾಡಿವೆ. ಅಲ್ಲದೆ, ಬಿಎಲ್‌ಒಗಳು (BLO) ಮತ್ತು ಬೂತ್ ಮಟ್ಟದ ಏಜೆಂಟರ (BLA) ನಡುವಿನ ಸಮನ್ವಯವನ್ನು ಬಲಪಡಿಸುವ ಅಗತ್ಯವನ್ನೂ ಒತ್ತಿ ಹೇಳಲಾಗಿದೆ.

ಈ ಹೊಸ ಮಾಹಿತಿಯು ಮತದಾರರಿಗೆ ತಮ್ಮ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಕೊಳ್ಳಲು ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳಲು ಸೂಕ್ತ ಅವಕಾಶ ಕಲ್ಪಿಸಿದೆ. 

PARYAYA: ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: 'ಫಾರ್ಮ್ 6' ಪರಿಹಾರ:   ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ: ' ಫಾರ್ಮ್ 6'  ಪರಿಹಾರ   ಬೆಂ ಗಳೂರು: ಮತದಾರರ ಪಟ್ಟಿಯಲ್ಲಿರುವ ಹಳೆಯ ವಿಳಾಸ ಈಗ ಬದಲಾಗಿದ್ದರೆ , ಅಂತಹವರಿಗೆ ಎಣಿಕ...

Wednesday, July 8, 2026

PARYAYA: ಜುಲೈ 17ರಂದು ಹಳಿ ಏರಲಿದೆ ದೇಶದ ಮೊದಲ ಹೈಡ್ರೋಜನ್ ರೈಲು!

 ಜುಲೈ 17ರಂದು ಹಳಿ ಏರಲಿದೆ ದೇಶದ ಮೊದಲ ಹೈಡ್ರೋಜನ್ ರೈಲು!

ವದೆಹಲಿ: ಭಾರತೀಯ ರೈಲ್ವೆಯು ಪರಿಸರ ಸ್ನೇಹಿ ಪ್ರಯಾಣದತ್ತ ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ. ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 17 ರಂದು ಹಸಿರು ನಿಶಾನೆ ತೋರಲಿದ್ದಾರೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಈ ರೈಲು ತನ್ನ ಮೊದಲ ಪಯಣ ಆರಂಭಿಸಲಿದೆ.

ಯೋಜನೆಯ ಮುಖ್ಯಾಂಶಗಳು:

  • ಮಾರ್ಗ: ಹರಿಯಾಣದ ಜಿಂದ್ – ಸೋನಿಪತ್ ನಡುವೆ ಈ ರೈಲು ಸಂಚರಿಸಲಿದೆ.
  • ದೈನಂದಿನ ಪ್ರಯಾಣ: ಪ್ರತಿದಿನ ಒಟ್ಟು 356 ಕಿ.ಮೀ ಅಂತರವನ್ನು ಕ್ರಮಿಸಲಿದೆ.
  • ಸಂಚಾರ: ದಿನಕ್ಕೆ ಎರಡು ರೌಂಡ್ ಟ್ರಿಪ್‌ಗಳನ್ನು ಪೂರೈಸಲಿದೆ.
  • ಸಾಮರ್ಥ್ಯ: ಒಟ್ಟು 682 ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದು, ಒಟ್ಟಾರೆ ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲದು.

ಹೈಡ್ರೋಜನ್ ರೈಲು ಹೇಗೆ ಕೆಲಸ ಮಾಡುತ್ತದೆ?

ಈ ರೈಲು ಡೀಸೆಲ್ ಅಥವಾ ವಿದ್ಯುತ್ ಬದಲಿಗೆ 'ಹೈಡ್ರೋಜನ್ ಫ್ಯೂಯಲ್ ಸೆಲ್' ತಂತ್ರಜ್ಞಾನವನ್ನು ಬಳಸುತ್ತದೆ. ಇದು ಹೈಡ್ರೋಜನ್ ಅನ್ನು ವಿದ್ಯುತ್ ಆಗಿ ಪರಿವರ್ತಿಸುವ ಮೂಲಕ ರೈಲನ್ನು ಚಲಾಯಿಸುತ್ತದೆ.

  • ಪರಿಸರ ಸ್ನೇಹಿ: ಈ ತಂತ್ರಜ್ಞಾನದಲ್ಲಿ ಯಾವುದೇ ಮಾಲಿನ್ಯಕಾರಕ ಹೊಗೆ ಬರುವುದಿಲ್ಲ. ಬದಲಾಗಿ, ಕೇವಲ ನೀರಿನ ಹಬೆ (Water Vapour) ಮಾತ್ರ ಹೊರಸೂಸುತ್ತದೆ, ಇದು ಪರಿಸರಕ್ಕೆ ಅತ್ಯಂತ ಸುರಕ್ಷಿತವಾಗಿದೆ.
  • ಶಕ್ತಿ: ಈ ರೈಲಿನಲ್ಲಿ ಎರಡು ಡ್ರೈವಿಂಗ್ ಪವರ್ ಕಾರ್‌ಗಳಿದ್ದು, ತಲಾ 1,200 kW ಶಕ್ತಿಯನ್ನು ಉತ್ಪಾದಿಸುತ್ತವೆ. ಒಟ್ಟಾರೆಯಾಗಿ ಇದು ಸುಮಾರು 3,200 ಕುದುರೆ ಶಕ್ತಿ (hp) ಸಾಮರ್ಥ್ಯವನ್ನು ಹೊಂದಿದೆ.

ವೇಗ ಮತ್ತು ಸುರಕ್ಷತೆ:

ರೈಲು ಗರಿಷ್ಠ 110 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ಸುರಕ್ಷತೆಯ ದೃಷ್ಟಿಯಿಂದ ಪ್ರಸ್ತುತ ಜಿಂದ್-ಸೋನಿಪತ್ ಮಾರ್ಗದಲ್ಲಿ 75 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಟ್ಯೂವಿ ಸುಡ್ (TÜV SÜD) ಸಂಸ್ಥೆಯಿಂದ ಈ ರೈಲಿನ ಸುರಕ್ಷತಾ ವ್ಯವಸ್ಥೆಗಳು ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ದೃಢೀಕರಿಸಲ್ಪಟ್ಟಿವೆ.

ಈ ರೈಲಿನ ಆಗಮನದಿಂದ ಭಾರತವು ಜರ್ಮನಿ, ಜಪಾನ್ ಮತ್ತು ಚೀನಾದಂತಹ ಮುಂದುವರಿದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದ್ದು, ಇದು ಭಾರತೀಯ ರೈಲ್ವೆಯ ಇಂಗಾಲ ಮುಕ್ತ (Net-Zero) ಗುರಿಯತ್ತ ಇಟ್ಟ ದೊಡ್ಡ ಹೆಜ್ಜೆಯಾಗಿದೆ.

PARYAYA: ಜುಲೈ 17ರಂದು ಹಳಿ ಏರಲಿದೆ ದೇಶದ ಮೊದಲ ಹೈಡ್ರೋಜನ್ ರೈಲು!:   ಜುಲೈ 17 ರಂದು ಹಳಿ ಏರಲಿದೆ ದೇಶದ ಮೊದಲ ಹೈಡ್ರೋಜನ್ ರೈಲು! ನ ವದೆಹಲಿ: ಭಾರತೀಯ ರೈಲ್ವೆಯು ಪರಿಸರ ಸ್ನೇಹಿ ಪ್ರಯಾಣದತ್ತ ಐತಿಹಾಸಿಕ ಹೆಜ್ಜೆ ಇಡಲು ಸಜ್ಜಾಗಿದೆ. ದೇಶದ...

Thursday, June 11, 2026

PARYAYA: ಗೃಹಿಣಿಯರು 'ರಾಷ್ಟ್ರ ನಿರ್ಮಾಪಕರು': ಅವರ ಶ್ರಮಕ್ಕೆ ಮಾಸಿಕ...

 ಗೃಹಿಣಿಯರು 'ರಾಷ್ಟ್ರ ನಿರ್ಮಾಪಕರು': ಅವರ ಶ್ರಮಕ್ಕೆ ಮಾಸಿಕ ₹30,000 ಮೌಲ್ಯ!

ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಒಂದು ಐತಿಹಾಸಿಕ ಮತ್ತು ಭಾವನಾತ್ಮಕ ತೀರ್ಪನ್ನು ಸುಪ್ರೀಂ ಕೋರ್ಟ್ 2026 ಜೂನ್‌ 11ರ ಗುರುವಾರ ನೀಡಿದೆ. ಇನ್ನು ಮುಂದೆ ಗೃಹಿಣಿಯರನ್ನು ಕೇವಲ 'ಮನೆಯಲ್ಲಿ ಇರುವವರು' ಎಂದು ನೋಡುವಂತಿಲ್ಲ, ಬದಲಾಗಿ ಅವರನ್ನು 'ರಾಷ್ಟ್ರ ನಿರ್ಮಾಪಕರು' (Nation Builders) ಎಂದು ಗೌರವಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಘೋಷಿಸಿದೆ.

ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಗೃಹಿಣಿಯರ ಕುಟುಂಬಕ್ಕೆ ಪರಿಹಾರ ನೀಡುವಾಗ, ಅವರ ಮನೆಯ ಕೆಲಸದ ಮೌಲ್ಯವನ್ನು ಮಾಸಿಕ ಕನಿಷ್ಠ ₹30,000 ಎಂದು ಪರಿಗಣಿಸಬೇಕೆಂದು ನ್ಯಾಯಪೀಠ ಆದೇಶ ನೀಡಿದೆ.

ಈ ತೀರ್ಪು ಪಂಜಾಬ್‌ನ ಮೋಟಾರು ಅಪಘಾತ ಪರಿಹಾರ ಪ್ರಕರಣವೊಂದಕ್ಕೆ ಸಂಬಂಧಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ  ಬಂದಿದೆ. 2001ರ ನವೆಂಬರ್‌ನಲ್ಲಿ ರೇಷ್ಮಾ ಎಂಬ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಪತಿ ಮತ್ತು ಮೂವರು ಮಕ್ಕಳು ಪರಿಹಾರ ಕೋರಿ ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣವನ್ನು (Motor Accident Claims Tribunal) ಸಂಪರ್ಕಿಸಿದ್ದರು.
2003ರಲ್ಲಿ ನ್ಯಾಯಾಧಿಕರಣವು ಪರಿಹಾರವನ್ನು ಘೋಷಿಸಿದ್ದರೂ, ಈ ವಿಷಯವು ಹಲವು ವರ್ಷಗಳ ಕಾಲ ಕಾನೂನು ಸಮರದಲ್ಲಿ ಸಿಲುಕಿಕೊಂಡಿತ್ತು. ಅಂತಿಮವಾಗಿ, ಅಪಘಾತ ನಡೆದ ಎರಡು ದಶಕಗಳಿಗೂ ಹೆಚ್ಚು ಸಮಯದ ನಂತರ, 2024ರ ಡಿಸೆಂಬರ್‌ನಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಪ್ರಕರಣವನ್ನು ಇತ್ಯರ್ಥ ಪಡಿಸಿತ್ತು. ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ   ಈ ಮೇಲ್ಮನವಿ ಬಂದಿತ್ತು.

ತೀರ್ಪಿನ ಪ್ರಮುಖ ಮುಖ್ಯಾಂಶಗಳು:

  • ಗೃಹಿಣಿಯರ ಶ್ರಮಕ್ಕೆ ಬೆಲೆ: ದಶಕಗಳಿಂದ ರಸ್ತೆ ಅಪಘಾತ ಪರಿಹಾರ ಪ್ರಕರಣಗಳಲ್ಲಿ, ಗೃಹಿಣಿಯರ ಕೆಲಸವನ್ನು ಕೌಶಲ್ಯರಹಿತ ಕಾರ್ಮಿಕರ ವೇತನಕ್ಕೆ ಹೋಲಿಸಲಾಗುತ್ತಿತ್ತು. ಇದನ್ನು ತಳ್ಳಿಹಾಕಿರುವ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್. ಕೋಟಿಸ್ವರ್ ಸಿಂಗ್ ಅವರ ಪೀಠ, ಗೃಹಿಣಿಯರ ಕೆಲಸದ ಸಾಮಾಜಿಕ ಮತ್ತು ಆರ್ಥಿಕ ಮೌಲ್ಯ ಅಪಾರವಾದುದು ಎಂದು ಅಭಿಪ್ರಾಯಪಟ್ಟಿದೆ.
  • ಹೊಸ ಮಾನದಂಡ: "ನಾವು ಒಂದು ಹೊಸ ತತ್ವವನ್ನು ರೂಪಿಸಿದ್ದೇವೆ. ಪ್ರಣಯ್ ಸೇಥಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಜೊತೆಗೆ, ಗೃಹಸೇವೆ ಅಥವಾ ಮನೆಯ ನಿರ್ವಹಣೆಯ ನಷ್ಟವನ್ನು ಮಾಸಿಕ ಕನಿಷ್ಠ ₹30,000 ಎಂದು ಪರಿಗಣಿಸಬೇಕು" ಎಂದು ನ್ಯಾಯಮೂರ್ತಿ ಕರೋಲ್ ತಿಳಿಸಿದ್ದಾರೆ.
  • ನ್ಯಾಯಕ್ಕಾಗಿ ಎರಡು ದಶಕಗಳ ಕಾಯುವಿಕೆ: ಪಂಜಾಬ್‌ನ ರೇಷ್ಮಾ ಎಂಬ ಮಹಿಳೆ 2001ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ನ್ಯಾಯ ಸಿಗಲು ಬರೋಬ್ಬರಿ 20 ವರ್ಷಕ್ಕೂ ಹೆಚ್ಚು ಸಮಯ ಬೇಕಾಯಿತು. ಈ ವಿಳಂಬದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ, ಇಂತಹ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಪಡಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಈ ತೀರ್ಪು ಯಾಕೆ ಐತಿಹಾಸಿಕ?

ಹಿಂದೆ, ಗೃಹಿಣಿಯರು ವೇತನ ಪಡೆಯದ ಕಾರಣ ಅವರ ಕೆಲಸಕ್ಕೆ ಮೌಲ್ಯವೇ ಇಲ್ಲ ಎಂಬಂತೆ ಪರಿಗಣಿಸಲಾಗುತ್ತಿತ್ತು. ಆದರೆ, 2010ರ ಅರುಣ್ ಕುಮಾರ್ ಅಗರ್ವಾಲ್ ಪ್ರಕರಣ ಮತ್ತು 2021ರ ಕೀರ್ತಿ ಪ್ರಕರಣಗಳಲ್ಲಿ ನ್ಯಾಯಾಲಯವು ಈ ಅಸಮಾನತೆಯನ್ನು ಪ್ರಶ್ನಿಸುತ್ತಾ ಬಂದಿತ್ತು. ಈಗ ಸುಪ್ರೀಂ ಕೋರ್ಟ್ ₹30,000 ರೂಪಾಯಿಯ ನಿಶ್ಚಿತ ಮಾನದಂಡವನ್ನು ನಿಗದಿಪಡಿಸುವ ಮೂಲಕ ಗೃಹಿಣಿಯರ ನಿರಂತರ ಸೇವೆಯನ್ನು ಅಧಿಕೃತವಾಗಿ ಮಾನ್ಯ ಮಾಡಿದೆ.

ಅಪಘಾತ ಪರಿಹಾರ ಪ್ರಕರಣಗಳಲ್ಲಿ ಸುಧಾರಣೆ

ಸುಪ್ರೀಂ ಕೋರ್ಟಿನ ಈ ಆದೇಶವು ಕೇವಲ ಪರಿಹಾರದ ಮೊತ್ತವನ್ನು ಹೆಚ್ಚಿಸುವುದಷ್ಟೇ ಅಲ್ಲ, ಬದಲಾಗಿ ಪರಿಹಾರ ಪ್ರಕರಣಗಳ ಇತ್ಯರ್ಥದಲ್ಲಿನ ವಿಳಂಬವನ್ನು ಹೋಗಲಾಡಿಸಲು ಎಲ್ಲಾ ಹೈಕೋರ್ಟುಗಳ ಮುಖ್ಯ ನ್ಯಾಯಮೂರ್ತಿಗಳಿಗೆ ನಿರ್ದೇಶನವನ್ನೂ  ನೀಡಿದೆ. "ಮೋಟಾರು ವಾಹನ ಕಾಯ್ದೆಯು ಸಂತ್ರಸ್ತ ಕುಟುಂಬಗಳಿಗೆ ಕಲ್ಯಾಣವನ್ನು ತಲುಪಿಸುವ ಉದ್ದೇಶವನ್ನು ಹೊಂದಿದೆ, ಆದರೆ ದಶಕಗಳ ಕಾಲ ಕಾಯುವಿಕೆ ಈ ಉದ್ದೇಶವನ್ನೇ ಸೋಲಿಸುತ್ತದೆ" ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ತೀರ್ಮಾನ: ಈ ತೀರ್ಪು ಭಾರತದ ಲಕ್ಷಾಂತರ ಗೃಹಿಣಿಯರ ಶ್ರಮಕ್ಕೆ ದೊರೆತ ದೊಡ್ಡ ಮನ್ನಣೆ. ಮನೆ ಎಂಬ ಸಂಸ್ಥೆಯನ್ನು ಕಟ್ಟುವಲ್ಲಿ ಮಹಿಳೆಯರ ಕೊಡುಗೆ ಕೇವಲ ವೈಯಕ್ತಿಕವಲ್ಲ, ಅದು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆ ಎಂಬುದನ್ನು ಸುಪ್ರೀಂ ಕೋರ್ಟ್ ಈ ಮೂಲಕ ಜಗತ್ತಿಗೆ ಸಾರಿದೆ.

ಈ ಐತಿಹಾಸಿಕ ತೀರ್ಪಿನ ಬಗ್ಗೆ ನಿಮ್ಮ ಅನಿಸಿಕೆಗಳೇನು? ಈ ತೀರ್ಪು ಸಾಮಾನ್ಯ ಜನರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ನೀವು ಭಾವಿಸುತ್ತೀರಿ? ನಿಮ್ಮ ಅನಿಸಿಕೆಯನ್ನು ಕೆಳಗೆ ‘comments’ ವಿಭಾಗದಲ್ಲಿ ಬರೆಯಿರಿ.

PARYAYA: ಗೃಹಿಣಿಯರು 'ರಾಷ್ಟ್ರ ನಿರ್ಮಾಪಕರು': ಅವರ ಶ್ರಮಕ್ಕೆ ಮಾಸಿಕ...:   ಗೃಹಿಣಿಯರು ' ರಾಷ್ಟ್ರ ನಿರ್ಮಾಪಕರು ': ಅವರ ಶ್ರಮಕ್ಕೆ ಮಾಸಿಕ ₹30,000 ಮೌಲ್ಯ! ಭಾ ರತೀಯ ನ್ಯಾಯಾಂಗ ಇತಿಹಾಸದಲ್ಲಿ ಒಂದು ಐತಿಹಾಸಿಕ ಮತ್ತು ಭಾವನಾತ್ಮಕ ತೀರ...

Tuesday, June 9, 2026

PARYAYA: ಭಾರತದ ಪರಮಾಣು ಕಾರ್ಯತಂತ್ರ ಬದಲು?

 ಭಾರತದ ಪರಮಾಣು ಕಾರ್ಯತಂತ್ರ ಬದಲು?

ಇದೇ ಮೊದಲು 12 ಪರಮಾಣು ಸಿಡಿತಲೆಗಳ ನಿಯೋಜನೆ

ಭಾರತದ ಪರಮಾಣು ಶಸ್ತ್ರಾಸ್ತ್ರ ನೀತಿಯಲ್ಲಿ ಒಂದು ದೊಡ್ಡ ಬದಲಾವಣೆ ಕಂಡುಬಂದಿದೆ. ಭಾರತವು ಮೊದಲ ಬಾರಿಗೆ 12 ಪರಮಾಣು ಸಿಡಿತಲೆಗಳನ್ನು (Nuclear Warheads) ಸಕ್ರಿಯವಾಗಿ ನಿಯೋಜಿಸಿದೆ ಎಂದು ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಬಿಡುಗಡೆ ಮಾಡಿರುವ ಇತ್ತೀಚಿನ ವರದಿ ತಿಳಿಸಿದೆ.

ಸಾಮಾನ್ಯವಾಗಿ ಭಾರತವು ತನ್ನ ಪರಮಾಣು ಸಿಡಿತಲೆಗಳನ್ನು ಮತ್ತು ಅವುಗಳನ್ನು ಉಡಾಯಿಸುವ ವ್ಯವಸ್ಥೆಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಆದರೆ, ಈ ಹೊಸ ಬೆಳವಣಿಗೆಯು ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿದೆ.

ವರದಿಯ ಮುಖ್ಯಾಂಶಗಳು:

  • ಹೆಚ್ಚಿದ ಶಕ್ತಿ: 2026 ಜೂನ್ 8ರ ಸೋಮವಾರ ಬಿಡುಗಡೆಯಾದ 'SIPRI ಇಯರ್‌ಬುಕ್ 2026'ರ ಪ್ರಕಾರ, ಭಾರತವು ಈಗ ಒಟ್ಟು 190 ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ 10 ಹೆಚ್ಚಾಗಿದೆ.
  • ಪ್ರಥಮ ಬಾರಿಗೆ ನಿಯೋಜನೆ: ಒಟ್ಟು 190 ಶಸ್ತ್ರಾಸ್ತ್ರಗಳ ಪೈಕಿ, 12 ಸಿಡಿತಲೆಗಳನ್ನು ಸಕ್ರಿಯವಾಗಿ ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ. ಜಾಗತಿಕ ಶಸ್ತ್ರಾಸ್ತ್ರಗಳ ಮೇಲ್ವಿಚಾರಣಾ ಸಂಸ್ಥೆಯೊಂದು, ಭಾರತದ ಪರಮಾಣು ಅಸ್ತ್ರಗಳ ಒಂದು ಭಾಗವು ಕೇವಲ ಮೀಸಲು ಸಂಗ್ರಹವಾಗಿ ಉಳಿದಿಲ್ಲ, ಬದಲಿಗೆ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಗುರುತಿಸಿರುವುದು ಇದೇ ಮೊದಲು.
  • ನೀತಿಯಲ್ಲಿ ಬದಲಾವಣೆ?: "ಶಾಂತಿಕಾಲದಲ್ಲಿ ಭಾರತವು ತನ್ನ ಸಿಡಿತಲೆಗಳನ್ನು ಉಡಾವಣಾ ವಾಹಕಗಳಿಂದ ಬೇರ್ಪಡಿಸಿ ಸಂಗ್ರಹಿಸುತ್ತದೆ ಎಂದು ದೀರ್ಘಕಾಲದಿಂದ ಭಾವಿಸಲಾಗಿತ್ತು, ಆದರೆ, ಈಗ ಭಾರತವು 'ಕ್ಯಾನಿಸ್ಟರ್-ಲಾಂಚ್ಡ್' ಕ್ಷಿಪಣಿಗಳು ಮತ್ತು ಸಮುದ್ರ ಆಧಾರಿತ ರಕ್ಷಣಾ ಕಾರ್ಯಾಚರಣೆಗಳ ಮೇಲೆ ಹೆಚ್ಚು ಅವಲಂಬಿತವಾಗುತ್ತಿದ್ದು, ಇದು ಶಾಂತಿಕಾಲದಲ್ಲೂ ಸಿಡಿತಲೆಗಳನ್ನು ಉಡಾವಣಾ ವಾಹಕಗಳೊಂದಿಗೆ ಜೋಡಿಸುವತ್ತ ಬದಲಾಗುತ್ತಿರಬಹುದು ಎಂಬುದನ್ನು ಸೂಚಿಸುತ್ತದೆ ಎಂದು ವರದಿ ಹೇಳಿದೆ.
  • ಸಾಗರ ಬಲ: ವರದಿಯ ಪ್ರಕಾರ, 2027ರ ವೇಳೆಗೆ ಭಾರತವು ತನ್ನ ನಾಲ್ಕನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಯನ್ನು (SSBN) ಲೋಕಾರ್ಪಣೆ ಮಾಡಲಿದೆ.

ಭಾರತದ ನ್ಯೂಕ್ಲಿಯರ್ ಟ್ರೈಯಾಡ್ (Nuclear Triad)

ಭಾರತದ ಬಳಿ ಇರುವ ಈ 190 ಪರಮಾಣು ಶಸ್ತ್ರಾಸ್ತ್ರಗಳನ್ನು ವಾಯುಪಡೆ (ವಿಮಾನಗಳು), ಭೂಸೇನಾ ಕ್ಷಿಪಣಿಗಳು ಮತ್ತು ಜಲಾಂತರ್ಗಾಮಿ ನೌಕೆಗಳ (SSBNs) ಮೂಲಕ ಹರಡುವ ವ್ಯವಸ್ಥಿತ 'ನ್ಯೂಕ್ಲಿಯರ್ ಟ್ರೈಯಾಡ್'ಗೆ ಒಳಪಡಿಸಲಾಗಿದೆ.

ಗಮನಿಸಬೇಕಾದ ಅಂಶ: ಭಾರತವು ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯ ವಿಷಯದಲ್ಲಿ 'ಮೊದಲು ಬಳಸುವುದಿಲ್ಲ' (No First Use) ಎಂಬ ಸ್ಪಷ್ಟ ನೀತಿಯನ್ನು ದಶಕಗಳಿಂದ ಅನುಸರಿಸುತ್ತಾ ಬಂದಿದೆ.

ಈ ವರದಿಯು ಭಾರತದ ರಕ್ಷಣಾ ಸಿದ್ಧತೆಯಲ್ಲಿನ ಹೊಸ ಆಯಾಮವನ್ನು ಜಗತ್ತಿನ ಮುಂದೆ ಇಟ್ಟಿದೆ.

PARYAYA: ಭಾರತದ ಪರಮಾಣು ಕಾರ್ಯತಂತ್ರ ಬದಲು?:   ಭಾರತದ ಪರಮಾಣು ಕಾರ್ಯತಂತ್ರ ಬದಲು? ಇದೇ ಮೊದಲು 12 ಪರಮಾಣು ಸಿಡಿತಲೆಗಳ ನಿಯೋಜನೆ ಭಾ ರತದ ಪರಮಾಣು ಶಸ್ತ್ರಾಸ್ತ್ರ ನೀತಿಯಲ್ಲಿ ಒಂದು ದೊಡ್ಡ ಬದಲಾವಣೆ ಕಂಡುಬಂದಿದೆ....

Sunday, June 7, 2026

PARYAYA: ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ...

 ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ ಅನಿಲ ಅಗ್ಗ ಏಕೆ?

ಕೇಂದ್ರ ಸರ್ಕಾರವು ಅಡುಗೆ ಅನಿಲ ದರವನ್ನು ಮತ್ತೊಮ್ಮೆ ಏರಿಸಿದೆ. ಎಲ್‌ ಪಿಜಿ ಸಿಲಿಂಡರ್‌ ದರ ಮತ್ತೆ 29 ರೂಪಾಯಿಗಳಷ್ಟು ಏರಿದೆ. ಅಂದರೆ ದೆಹಲಿಯಲ್ಲಿ 14.2 ಕೆಜಿ ಎಲ್‌ ಪಿಜಿ ಸಿಲಿಂಡರ್‌ ದರ 913 ರೂಗಳಿಂದ 942ರೂಪಾಯಿಗೆ ಏರಿಕೆಯಾಗಿದೆ. ಕೇಂದ್ರದ ಈ ಕ್ರಮ ವಿರೋಧ ಪಕ್ಷಗಳ ಕೆಂಗಣ್ಣಿಗೂ ಸಹಜವಾಗಿಯೇ ಗುರಿಯಾಗಿದೆ. ಆದರೂ, ಜಾಗತಿಕ ಇಂಧನ ದರಗಳಿಗೆ ಹೋಲಿಸಿದರೆ ಭಾರತದಲ್ಲೇ ಅಡುಗೆ ಅನಿಲ ಅತ್ಯಂತ ಅಗ್ಗವಾಗಿದೆ. ಅದು ಹೇಗೆ ಎಂಬುದನ್ನು ಕೇರಳಂನ ʼಮಾತೃಭೂಮಿʼ ವಿವರಿಸಿದೆ.

ಜಾಗತಿಕವಾಗಿ ಇಂಧನ ದರಗಳು ಗಗನಕ್ಕೇರುತ್ತಿವೆ. ಇದಕ್ಕೆ ಪ್ರಮುಖ ಕಾರಣ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷಗಳು. ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಬೆಲೆಗಳು ಏರಿಕೆಯಾಗಿವೆ.  ಆದರೂ,
ಭಾರತದ ಅಡುಗೆಮನೆಗಳಲ್ಲಿನ ಎಲ್‌ಪಿಜಿ (LPG) ದರಗಳು ಏಕೆ ನಿಯಂತ್ರಣದಲ್ಲಿವೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಗ್ರಾಹಕರು ಪಾವತಿಸುತ್ತಿರುವ ಬೆಲೆ ಅತ್ಯಂತ ಕಡಿಮೆ.

ವಾಸ್ತವಿಕ ಬೆಲೆ ವರ್ಸಸ್ ಗ್ರಾಹಕರು ಪಾವತಿಸುವ ಬೆಲೆ

ದೆಹಲಿಯಲ್ಲಿ ಈಗ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹913 ರಿಂದ ₹942 ಕ್ಕೆ ಏರಿಕೆಯಾಗಿದೆ. ಆದರೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಒಂದು ಸಿಲಿಂಡರನ್ನು ಗ್ರಾಹಕರ ಮನೆಗೆ ತಲುಪಿಸುವ ನಿಜವಾದ ವೆಚ್ಚವು ₹1,600 ಕ್ಕಿಂತ ಹೆಚ್ಚಿದೆ. ಅಂದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯ ಸಂಪೂರ್ಣ ಹೊರೆಯನ್ನು ಗ್ರಾಹಕರ ಮೇಲೆ ಹಾಕದೆ, ಸರ್ಕಾರ ಮತ್ತು ತೈಲ ಮಾರಾಟ ಕಂಪನಿಗಳು ಆ ಹೊರೆಯ ಬಹುಪಾಲನ್ನು ಭರಿಸುತ್ತಿವೆ.

ಉಜ್ವಲ ಫಲಾನುಭವಿಗಳಿಗೆ ವಿಶೇಷ ರಿಯಾಯಿತಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ ಸರ್ಕಾರ ವಿಶೇಷ ಬೆಂಬಲ ನೀಡುತ್ತಿದೆ. ಪ್ರತಿ ವರ್ಷ ಮೊದಲ ನಾಲ್ಕು ರೀಫಿಲ್‌ಗಳ ಮೇಲೆ ₹300 ನೇರ ನಗದು ವರ್ಗಾವಣೆ (DBT) ಸೌಲಭ್ಯವಿರುವುದರಿಂದ, ಅರ್ಹ ಕುಟುಂಬಗಳು ಕೇವಲ ₹642 ಕ್ಕೆ ಸಿಲಿಂಡರ್ ಪಡೆಯುತ್ತಿದ್ದಾರೆ.

ಜಾಗತಿಕ ಹೋಲಿಕೆ: ಭಾರತದ ಸ್ಥಿತಿ ಏನು?

ಭಾರತದ ಎಲ್‌ಪಿಜಿ ದರಗಳು ನೆರೆಯ ದೇಶಗಳು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಎಷ್ಟು ಭಿನ್ನವಾಗಿವೆ ಎಂಬುದನ್ನು ಈ ಕೆಳಗಿನ ಕೋಷ್ಟಕದಲ್ಲಿ ಗಮನಿಸಬಹುದು:

ದೇಶ / ಮಾರುಕಟ್ಟೆ

14.2 ಕೆಜಿ ಸಿಲಿಂಡರ್ ಬೆಲೆ (₹)

 ಭಾರತದ ಉಜ್ವಲ ದರಕ್ಕೆ ಹೋಲಿಸಿದರೆ ವ್ಯತ್ಯಾಸ

ಭಾರತ (ಉಜ್ವಲ ಫಲಾನುಭವಿ)

642

--

ಪಾಕಿಸ್ತಾನ

1,046

~63% ಹೆಚ್ಚು

ನೇಪಾಳ

1,207

~88% ಹೆಚ್ಚು

ಬಾಂಗ್ಲಾದೇಶ

1,225

~91% ಹೆಚ್ಚು

ಶ್ರೀಲಂಕಾ

1,241

~93% ಹೆಚ್ಚು

ಅಮೆರಿಕ

1,755

~173% ಹೆಚ್ಚು

ಆಸ್ಟ್ರೇಲಿಯಾ

1,765

~175% ಹೆಚ್ಚು

ಕೆನಡಾ

2,411

~276% ಹೆಚ್ಚು

ಸರ್ಕಾರದ ರಕ್ಷಣಾ ಕವಚ

  • ಉಜ್ವಲ ಫಲಾನುಭವಿಗಳು: ಇವರು ಅಂತರಾಷ್ಟ್ರೀಯ ಮಟ್ಟದ ಬೆಲೆಗಿಂತ ಸುಮಾರು 60% ಕಡಿಮೆ ದರದಲ್ಲಿ ಅನಿಲವನ್ನು ಪಡೆಯುತ್ತಿದ್ದಾರೆ.
  • ಸಾಮಾನ್ಯ ಗ್ರಾಹಕರು: ಪಿಎಂಜಿಯುವೈ ವ್ಯಾಪ್ತಿಗೆ ಬಾರದ ಗ್ರಾಹಕರು ಕೂಡ ಮಾರುಕಟ್ಟೆಯ ನಿಜವಾದ ವೆಚ್ಚಕ್ಕಿಂತ ಸುಮಾರು 45% ಕಡಿಮೆ ಬೆಲೆಯನ್ನು ಪಾವತಿಸುತ್ತಿದ್ದಾರೆ.

ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಸಾಗರ ಮಾರ್ಗಗಳಲ್ಲಿನ ಅನಿಶ್ಚಿತತೆಯು ಜಾಗತಿಕ ಇಂಧನ ಪೂರೈಕೆಯ ಮೇಲೆ ಭಾರಿ ಒತ್ತಡ ಹೇರುತ್ತಿದ್ದರೂ, ಭಾರತದ ಕೇಂದ್ರ ಸರ್ಕಾರವು ಸಬ್ಸಿಡಿ ಮತ್ತು ಬೆಲೆ ನಿಯಂತ್ರಣ ಕ್ರಮಗಳ ಮೂಲಕ ದೇಶದ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಬೀಳದಂತೆ ಸಮರ್ಥವಾಗಿ ರಕ್ಷಿಸುತ್ತಿದೆ ಎಂದು ʼಮಾತೃಭೂಮಿʼ ವರದಿ ತಿಳಿಸಿದೆ.

PARYAYA: ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ...:   ₹642 vs ₹2,411: ಜಾಗತಿಕ ಏರಿಳಿತದಲ್ಲೂ ಭಾರತದಲ್ಲಿ ಅಡುಗೆ ಅನಿಲ ಅಗ್ಗ ಏಕೆ ? ಕೇಂ ದ್ರ ಸರ್ಕಾರವು ಅಡುಗೆ ಅನಿಲ ದರವನ್ನು ಮತ್ತೊಮ್ಮೆ ಏರಿಸಿದೆ. ಎಲ್‌ ಪಿಜಿ ಸಿಲಿಂಡ...