Thursday, January 3, 2019

ರೂ ೨,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ


ರೂ ,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ

ನವದೆಹಲಿ: ಭಾರತವು 2016ರಲ್ಲಿ ನೋಟು ಅಮಾನ್ಯೀಕರಣ ಕಾಲದಲ್ಲಿ ಚಾಲ್ತಿಗೆ ತಂದ 2000 ರೂಪಾಯಿಗಳ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತನಗೆ ತಿಳಿಸಿರುವುದಾಗಿದಿ ಪ್ರಿಂಟ್ವರದಿ ಮಾಡಿದೆ.

2000
ರೂಪಾಯಿ ಕರೆನ್ಸಿಯ ಪ್ರಸಾರವನ್ನು ಕ್ರಮೇಣ ತಗ್ಗಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದೆ.

2000 ರೂಪಾಯಿ ನೋಟುಗಳ ಮುದ್ರಣ ಸ್ಥಗಿತದಿಂದ ಚಾಲ್ತಿಯಲ್ಲಿರುವ ನೋಟುಗಳು ಅಮಾನ್ಯವಾಗಿವೆ ಎಂದು ಅರ್ಥವಲ್ಲ. ಅವುಗಳ ಮಾನ್ಯತೆ ಮುಂದುವರೆದಿದೆ. ಆದರೆ ಕ್ರಮೇಣವಾಗಿ ನೋಟುಗಳು ಮಾರುಕಟ್ಟೆಯಿಂದ ಕಣ್ಮರೆಯಾಗುವ ಸಾಧ್ಯತೆ ಇದೆ.

ಕಾಳಧನ ಸಂಗ್ರಹ, ಹಣ ವರ್ಗಾವಣೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉನ್ನತ ಮೌಲ್ಯದ ನೋಟುಗಳನ್ನು ಬಳಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ನೋಟು ಮುದ್ರಣ ಸ್ಥಗಿತ ಬಗ್ಗೆ ಮಿಂಚಂಚೆ ಮೂಲಕ ಕೇಳಲಾದ ಸ್ಪಷ್ಟನೆಗೆ ಭಾರತದ ಕೇಂದ್ರೀಯ ಬ್ಯಾಂಕ್ ಹಾಗೂ ಕರೆನ್ಸಿ ವಿತರಣಾ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಉತ್ತರ ನೀಡಿಲ್ಲ. ಅದು ಸ್ಪಂದಿಸಿದಾಗ ವರದಿಯನ್ನು ಪರಿಷ್ಕರಿಸಲಾಗುವುದು ಎಂದುದಿ ಪ್ರಿಂಟ್ವರದಿ ತಿಳಿಸಿದೆ.

ಕಾಳಸಂತೆ, ಕಪ್ಪು ಹಣ ನಿಗ್ರಹಕ್ಕಾಗಿ ಸರ್ಕಾರವು 2016ರಲ್ಲಿ 1000 ರೂಪಾಯಿ ಮತ್ತು 500 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಬಳಿಕ ನವೆಂಬರ್ ತಿಂಗಳಲ್ಲಿ 2000 ರೂಪಾಯಿಗಳ ಹೊಸ ನೋಟನ್ನು ಬಿಡುಗಡೆ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:


No comments:

Post a Comment