Friday, January 25, 2019

ಇಂದಿನ ಇತಿಹಾಸ History Today ಜನವರಿ 25

ಇಂದಿನ ಇತಿಹಾಸ History Today ಜನವರಿ 25
2019: ನವದೆಹಲಿ:  ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ವನ್ನು  ಮೂವರು ದಿಗ್ಗಜ ಸಾಧಕರಿಗೆ ಪ್ರಕಟಿಸಲಾಯಿತು. ಮಾಜಿ ರಾಷ್ಟ್ರಪತಿ ಪ್ರಣಬ್ಮುಖರ್ಜಿ ಮತ್ತು ಮರಣೋತ್ತರವಾಗಿ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶ್ಮುಖ್ಮತ್ತು ಸಂಗೀತ ಮಾಂತ್ರಿಕ ಭೂಪೇನ್ಹಝಾರಿಕಾ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಲಾಯಿತು. ರಾಷ್ಟ್ರಪತಿ ಭವನ ಮೂವರ ಹೆಸರನ್ನು ಪ್ರಕಟಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ಮಾಡಿ ಪ್ರಣಬ್ಮುಖರ್ಜಿ ಅವರನ್ನು ಅಭಿನಂದಿಸಿದರು. ಭೂಪೇನ್‌ ಹಝಾರಿಕಾ ಅವರು ಗಾಯಕ,ಸಾಹಿತಿ , ಸಂಗೀತ ನಿರ್ದೇಶಕ ಮತ್ತು ಸಿನಿ ಸಾಹಿತ್ಯವನ್ನು ಬರೆದು  ಪ್ರಖ್ಯಾತಿಯ ಉತ್ತುಂಗಕ್ಕೇರಿದವರು. 1926 ರಲ್ಲಿ ಜನಿಸಿದ್ದ ಅವರು ತನ್ನ 85 ನೇ ವಯಸ್ಸಿನಲ್ಲಿ 2011 ರಲ್ಲಿ ಇಹಲೋಕ ತ್ಯಜಿಸಿದ್ದರು. ಸಿನಿ ಕ್ಷೇತ್ರ ಮಾತ್ರವಲ್ಲದೆ ಬಿಜೆಪಿಯಲ್ಲೂ ಗುರುತಿಸಿಕೊಂಡಿದ್ದರು. ಪದ್ಮ ವಿಭೂಷಣ, ಪದ್ಮಶ್ರಿ , ದಾದಾ ಸಾಹೇಬ್ಫಾಲ್ಕೆ ಪ್ರಶಸ್ತಿಗೂ ಭಾಜನರಾಗಿದ್ದರುಚಂದಿಕಾದಾಸ್ಅಮೃತರಾವ್ದೇಶ್ಮುಖ್ (ನಾನಾಜಿ ದೇಶ್ಮುಖ್‌) ಅವರು ಸಾಮಾಜಿಕ ಕಾರ್ಯಕರ್ತರಾಗಿ ಅಪಾರ ಸೇವೆ ಸಲ್ಲಿಸಿದವರು. ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಕೇತ್ರದಲ್ಲಿ ಸೇವೆ ಸಲ್ಲಿಸಿದವರು. ಭಾರತೀಯ ಜನ ಸಂಘದಲ್ಲಿ ಕೆಲಸ ಮಾಡಿದ್ದ ಅವರು ರಾಜ್ಯ ಸಭಾ ಸದಸ್ಯರಾಗಿಯೂ ಕೆಲಸ ನಿರ್ವಹಿಸಿದ್ದರು. 1916ರಲ್ಲಿ ಜನಿಸಿದ್ದ ಅವರು 2010 ಫೆಬ್ರವರಿ 27 ರಂದು 93 ನೇ ವಯಸ್ಸಿನಲ್ಲಿ  ನಿಧನಹೊಂದಿದ್ದರು .

2019: ಬೆಂಗಳೂರು: ರಾಜ್ಯದಲ್ಲಿ ನಡೆದ ೨೦೧೮ರ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಿದ ಕರ್ನಾಟಕ ಚುನಾವಣಾ ಆಯೋಗಕ್ಕೆ ಕೇಂದ್ರದ ಚುನಾವಣಾ ಆಯೋಗದ ಶಿಫಾರಸ್ಸಿನ ಮೇರೆಗೆರಾಷ್ಟ್ರಪ್ರಶಸ್ತಿ ಗೌರವ ಲಭಿಸಿತು. ರಾಷ್ಟ್ರೀಯ ಮತದಾರರ ದಿನಾಚರಣೆ ೨೦೧೯ರ ಅಂಗವಾಗಿ ಚುನಾವಣಾ ಆಯೋಗ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳಿಂದ ರಾಜ್ಯದ ಮುಖ್ಯ ಚುನಾವಣಾ ಧಿಕಾರಿ ಸಂಜೀವ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯ ಕ್ರಮಗಳು, ಭಾರತ ಚುನಾವಣಾ ಆಯೋಗ ಮತದಾರರ ಜಾಗೃತಿಗಾಗಿ ಬಿಡುಗಡೆ ಮಾಡಿದ್ದ ಪುಸ್ತಕ, ಕೈಪಿಡಿಗಳನ್ನು ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿದ್ದು, ಮತದಾನ ಮಾಡುವ ಕುರಿತು ಇವಿಎಮ್ ಮತ್ತು ವಿವಿಪ್ಯಾಟ್ ಮಾದರಿಗಳನ್ನು ಸಾರ್ವಜನಿಕ ಪ್ರದೇಶಗ ಳಲ್ಲಿ ಅಳವಡಿಸಿ ಜನರಿಗೆ ಬಳಸಿ ನೋಡಿ ಅನುಭವ ನೀಡುವ ಜಾಗೃತಿ ಕೈಗೊಂಡಿದ್ದು, ವಿಶೇ?ವಾಗಿ ದಿವ್ಯಾಂಗ ಮತದಾರರು ಮತದಾನ ಮಾಡಲು ಮನೆಯಿಂದ - ಮತಗಟ್ಟೆಗೆ - ಮರಳಿ ಮನೆಗೆ ಬಿಡಲು ವಾಹನ ವ್ಯವಸ್ಥೆ ಮಾಡಿದ್ದು ಇಡೀ ದೇಶಕ್ಕೆ ಮಾದರಿಯಾಗಿತ್ತು. ದೃಷ್ಠಿ ದಿವ್ಯಾಂಗರಿಗಾಗಿ ಮತದಾನದ ಕುರಿತು ತಿಳಿದುಕೊಳ್ಳಲು ಮೊದಲ ಬಾರಿಗೆ ಬ್ರೈಲ್ ಲಿಪಿಯಲ್ಲಿ ಕೈಪಿಡಿಗಳನ್ನು ಮತ್ತು ಮತದಾರರ ಗುರುತಿನ ಚೀಟಿಯನ್ನು ಸಹ ಮುದ್ರಿಸಲಾಗಿತ್ತು. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಕೈಗೊಂಡ ರೀತಿಯ ವಿನೂತನ ಜಾಗೃತಿ ಕಾರ್ಯಕ್ರಮಗಳು ಮತ್ತು ಚುನಾವಣಾ ಪ್ರಕ್ರಿಯೆಗಳು ದೇಶದಲ್ಲಿ ಗಮನ ಸೆಳೆದಿದ್ದವು.

2019: ನವದೆಹಲಿ: ಲೋಕಸಭಾ ಚುನಾವಣೆ ಹತ್ತಿರ ಬರುತ್ರಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜನತೆಗೆ ವರ್ಷ ಬರಲಿರುವ ಚುನಾವಣೆಯಲ್ಲಿಮತದಾನದ ಪವಿತ್ರ ಕೆಲಸವನ್ನು ನಿರ್ವಹಿಸುವಂತೆ ಕರೆ ನೀಡಿದರು. ೭೦ನೇ ಗಣರಾಜ್ಯೋತ್ಸವದ ಮುನ್ನಾದಿನ ದೇಶವನ್ನು ಉದ್ದೇಶಿಸಿ ಸಾಂಪ್ರದಾಯಿಕ ಭಾಷಣ ಮಾಡಿದ ರಾಷ್ಟ್ರಪತಿಯವರು ವರ್ಷದ ಚುನಾವಣೆಯು ೨೧ನೇ ಶತಮಾನದಲ್ಲಿ ಭಾರತವನ್ನು ರೂಪಿಸಲಿರುವಶತಮಾನದಲ್ಲಿ ಒಮ್ಮೆ ಬರುವ ಕ್ಷಣ ಎಂದು ಒತ್ತಿ ಹೇಳಿದರು. ಚುನಾವಣೆಯು ಕೇವಲ ರಾಜಕೀಯ ಕವಾಯತು ಅಲ್ಲ. ಅದು ವಿವೇಚನೆ ಪ್ರದರ್ಶಿಸುವ, ಕಾರ್ಯ ನಿರ್ವಹಣೆಗೆ ನೀಡುವ ಸಾಮೂಹಿಕ ಕರೆ. ೧೭ನೆಯ ಲೋಕಸಭೆಯ ಆಯ್ಕೆ ಮಾಡುವಲ್ಲಿ ನಮ್ಮ ಪ್ರಜಾಪ್ರಭುತ್ವದ ಕಲ್ಪನೆಗಳು ಮತ್ತು ಅದರ್ಶಗಳು ಸಾಕಾರಗೊಳ್ಳಲಿವೆ ಎಂದು ಅವರು ನುಡಿದರುವೈವಿಧ್ಯ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಮೂಲವಾದ ಎಲ್ಲರನ್ನೂ ಒಳಗೊಳ್ಳುವಂತಹ ಮತ್ತು ವೈವಿಧ್ಯತೆಯನ್ನು ಮೆರೆಯುವಂತಹ ಸ್ಫೂರ್ತಿಗೆ ಗೌರವ ನೀಡದ ವಿನಹ ರಾಷ್ಟ್ರದ ಅಭಿವೃದ್ಧಿಯು ಪೂರ್ಣಗೊಳ್ಳುವುದಿಲ್ಲ ಎಂದು ಕೋವಿಂದ್ ಹೇಳಿದರು. ಶತಮಾನವು ನಮ್ಮೆಲ್ಲರಿಗೆ, ಪ್ರತಿಯೊಂದು ಗುಂಪಿಗೆ, ಪ್ರತಿ ಸಮುದಾಯ, ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವ್ಯಕ್ತಿತ್ವಕ್ಕೆ ಸೇರಿದ್ದು. ಇದು ಪ್ರತಿಯೊಬ್ಬ ನಾಗರಿಕರಿಗೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸೇರಿದ್ದು. ಭಾರತದ ವಿವಿಧತೆಯು ಅದರ ಮಹಾನ್ ಶಕ್ತಿ ಮತ್ತು ವಿಶ್ವಕ್ಕೆ ಅದರ ಅತ್ಯಂತ ಮಹಾನ್ ಉದಾಹರಣೆ ಎಂದು ರಾಷ್ಟ್ರಪತಿ ನುಡಿದರು. ‘ಭಾರತೀಯ ಮಾದರಿಯು  ವಿವಿಧತೆ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಯ ತ್ರಿಭುಜದ ಮೇಲೆ ನಿಂತಿದೆ. ನಾವು ಒಂದಕ್ಕಿಂತ ಒಂದನ್ನು ಮೇಲು ಎಂಬುದಾಗಿ ಆಯ್ಕೆ ಮಾಡಲಾಗದು. ನಾವು ಮೂರನ್ನೂ ಹೊಂದಿರಬೇಕು ಮತ್ತು ನಾವು ಮೂರನ್ನೂ ಹೊಂದಿರುತ್ತೇವೆ ಎಂದು ದೇಶಾದ್ಯಂತ ಬಾನುಲಿ, ಟಿವಿ ಮೂಲಕ ಪ್ರಸಾರಗೊಂಡ ಭಾಷಣದಲ್ಲಿ ಕೋವಿಂದ್ ನುಡಿದರು. ಮುಂಬರುವ ಜೂನ್ ತಿಂಗಳಿಗೂ ಮುನ್ನ ನಡೆಯಲಿರುವ ಮಹಾ ಚುನಾವಣೆಯನ್ನು ಉಲ್ಲೇಖಿಸಿದ ರಾಷ್ಟ್ರಪತಿ, ೨೧ನೇ ಶತಮಾನzದ್ಲ್ಲಿ ಹುಟ್ಟಿದ ಮತದಾರರು ಇದೇ ಮೊದಲ ಬಾರಿಗೆ ಹೊಸ ಲೋಕಸಭೆಯ ಆಯ್ಕೆಗೆ ತಮ್ಮ ಕಾಣಿಕೆ ನೀಡಲಿದ್ದಾರೆ  ಎಂದು ಹೇಳಿದರು. ಚುನಾವಣೆಯು ಜನರು ಮತ್ತು ಭಾರತ ಗಣರಾಜ್ಯದ ವೈವಿಧ್ಯಮಯ ಅಪೇಕ್ಷೆಗಳನ್ನು ಪ್ರತಿನಿಧಿಸುತ್ತದೆ ಎಂದು ಅವರು ನುಡಿದರು.’ಇದು ಮತದಾನದ ಕೆಲಸವನ್ನು ಪವಿತ್ರ ಕೆಲಸವನ್ನಾಗಿ ಮಾಡುತ್ತದೆ. ದಯವಿಟ್ಟು ಕೆಲಸವನ್ನು ನಿರ್ವಹಿಸಿ. ಯಾರಿಗೆ ಮತದಾನ ಮಾಡಬೇಕು ಎಂಬುದು ಮತದಾರನಿಗೆ / ಮತದಾರಳಿಗೆ ಬಿಟ್ಟ ವಿಷಯ. ಅರ್ಹ ಮತದಾರರು ಹೊರಕ್ಕೆ ಬಂದು ಮತ ಚಲಾಯಿಸಬೇಕು  ಎಂದಷ್ಟೇ ನಾನು ಮನವಿ ಮಾಡುತ್ತೇನೆ ಎಂದು ರಾಷ್ಟ್ರಪತಿ ಹೇಳಿದರು. ‘ನಮ್ಮ ರಾಷ್ಟ್ರವು ಅತ್ಯಂತ ಮಹತ್ವದ ತಿರುವಿನಲ್ಲಿದೆ. ಕೆಲವು ದೃಷ್ಟಿಯಿಂದ ಇದು  ೧೯೪೦ರ ಕೊನೆ ಮತ್ತು ೧೯೫೦ರ ಆದಿಯಂತೆಯೇ ಅತ್ಯಂತ ನಿರ್ಣಾಯಕ ಕಾಲಘಟ್ಟ. ಇಂದಿನ ನಿರ್ಣಯಗಳು ಮತ್ತು ಕ್ರಮಗಳು ೨೧ನೇ ಶತಮಾನದ ಉಳಿಕೆಯ ಭಾರತವನ್ನು ರೂಪಿಸುತ್ತವೆ. ಇದು ತಲೆಮಾರಿನಲ್ಲಿ ಒಮ್ಮೆ ಬರುವ ಕ್ಷಣವಲ್ಲ ಇದು ಶತಮಾನದಲ್ಲಿ ಒಮ್ಮೆ ಬರುವ ಕ್ಷಣ ಎಂದು ಅವರು ನುಡಿದರು. ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ಕಲ್ಪನೆಗಳು ಮತ್ತು ಆದರ್ಶಗಳು ಪೂರ್ಣ ಶಕ್ತಿಯೊಂದಿಗೆ ಸಾಕಾರಗೊಳ್ಳಲಿದೆ. ಇದು ಜನರ ಆಶಯಗಳನ್ನು ಈಡೇರಿಸುವಂತಹ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ಪಯಣದ ಮೈಲಿಗಲ್ಲು ಎಂದು ಅವರು ಹೇಳಿದರು.ರಾಷ್ಟ್ರ ನಿರ್ಮಾಣದಲ್ಲಿ ಸತತ ತಲೆಮಾರುಗಳು ವಹಿಸಿದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ರಾಷ್ಟ್ರಪತಿನಮ್ಮ ಪಯಣ ಇನ್ನೂ ಪೂರ್ಣಗೊಂಡಿಲ್ಲ ಎಂದು ಜನತೆಗೆ ನೆನಪಿಸಿದರು.ಇನ್ನಷ್ಟು ಅಂತರಗಳನ್ನು ನಾವು ಕಡಿಮೆಗೊಳಿಸಬೇಕಾಗಿದೆ. ಇನ್ನಷ್ಟು ಕಣ್ಣೀರನ್ನು ಒರೆಸಬೇಕಾಗಿದೆ. ಸಾಧನೆ ಮತ್ತು ಯಶಸ್ಸಿನ ಮಾನದಂಡವನ್ನು ನಾವು ಪ್ರಮಾಣದಿಂದ ಗುಣಮಟ್ಟದೆಡೆಗೆ, ಅಕ್ಷರಸ್ಥ ಸಮಾಜದಿಂದ ಜ್ಞಾನವಂತ ಸಮಾಜದೆಡೆಗೆ, ಪ್ರತಿಯೊಬ್ಬ ವ್ಯಕ್ತಿಯ, ಪ್ರತಿಯೊಬ್ಬ ಪುತ್ರಿಯ, ಪ್ರತಿಯೊಬ್ಬ ಪುತ್ರನ ಸಾಮರ್ಥ್ಯ, ಪ್ರತಿಭೆ, ವಿಶಿಷ್ಟತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮರುರೂಪಿಸಬೇಕಾಗಿದೆ ಎಂದು ಅವರು ಹೇಳಿದರು.ಎಲ್ಲ ಜನರೂ ಸಂಪೂರ್ಣ ಸೌಹಾರ್ದದೊಂದಿಗೆ ಸತತ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳುತ್ತಾ ಬದುಕಬೇಕೆಂಬ ಮಹಾತ್ಮ ಗಾಂಧಿಯವರ ಆದರ್ಶ ನಮಗೆ ಸದಾಕಾಲಕ್ಕೂ ನೆನಪಾಗಬೇಕು ಎಂದು ಅವರು ನುಡಿದರು.ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡಾ ೧೦ರ ಮೀಸಲಾತಿ ಕಲ್ಪಿಸಿದ ಸರ್ಕಾರದ ಕ್ರಮವನ್ನು ಪ್ರಸ್ತಾಪಿಸಿದ ರಾಷ್ಟ್ರಪತಿ, ’ಇತ್ತೀಚಿನ ಸಂವಿಧಾನ ತಿದ್ದುಪಡಿಯು ಅತ್ಯಂತ ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ಒದಗಿಸುವ ಮೂಲಕ ನಮ್ಮ ಕನಸುಗಳ ಮತ್ತು ಗಾಂಧೀಜಿಯವರ ಕನಸುಗಳ ಸಾಕಾರದೆಡೆಗೆ ಇನ್ನೊಂದು ಹೆಜ್ಜೆಯಾಗಿದೆ ಎಂದು ಹೇಳಿದರು. ಚಾರಿತ್ರಿಕವಾಗಿ ಅನುಕೂಲಗಳಿಂದ ವಂಚಿತರಾದ ಗುಂಪುಗಳ ಜೊತೆಗೆ ನಿರಂತರ ಸಂಭಾಷಣೆ ನಡೆಯಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದರು.ಪ್ರಜಾಪ್ರಭುತ್ವದ ಗುರಿಗಳನ್ನು ಪ್ರಜಾತಾಂತ್ರಿಕ ಮಾರ್ಗಗಳು, ಬಹುವಿಧ ಗುರಿಗಳನ್ನು ಬಹುವಿಧ ಮಾರ್ಗಗಳು, ಪ್ರಭುದ್ಧ ಗುರಿಗಳನ್ನು ಪ್ರಭುದ್ಧ ಮಾರ್ಗಗಳು, ಎಲ್ಲವನ್ನೂ ಒಳಗೊಳ್ಳುವಂತಹ ಗುರಿಗಳನ್ನು ಎಲ್ಲವನ್ನೂ ಒಳಗೊಳ್ಳುವ ಮಾರ್ಗಗಳು, ಅನುಕಂಪದ ಗುರಿಗಳನ್ನು ಅನುಕಂಪದ ಮಾರ್ಗಗಳು ಮತ್ತು ಸಾಂವಿಧಾನಿಕ ಗುರಿಗಳನ್ನು ಸಾಂವಿಧಾನಿಕ ಮಾರ್ಗಗಳ ಮೂಲಕ ತಲುಪಬೇಕು ಎಂಬುದು ಭಾರತದ ಗಣರಾಜ್ಯದ ದೃಷ್ಟಿ ಎಂದು ರಾಷ್ಟ್ರಪತಿ ವಿವರಿಸಿದರು. ತತ್ವಗಳು ನಮ್ಮ ದಾರಿಗಳನ್ನು ಬೆಳಗಲಿ. ಅಂತಿಮವಾಗಿ, ನಾವು ಜನರೇ ನಮ್ಮ ಸಂವಿಧಾನವನ್ನು ನೀಡಿದ್ದೇವೆ. ಅದರ ತತ್ವಗಳ ರಕ್ಷಕರೂ ಆಗಿದ್ದೇವೆ ಎಂದು ಕೋವಿಂದ್ ನುಡಿದರು.
ಭಾರತದ ಸಾಮಾಜಿಕ ಬದಲಾವಣೆಯ ಅತ್ಯುತ್ತಮ ಸೂಚಕ ಎಂದರೆ ಲೈಂಗಿಕ ಸಮಾನತೆ ಮತ್ತು ಪ್ರತಿಯೊಂದು ಹೆಣ್ಣು ಮಗು ಮತ್ತು ಪ್ರತಿಯೊಬ್ಬ ಮಹಿಳೆಗೂ, ಸಮಾನ ಪರಿಸರದಲ್ಲಿ ಸಮಾನ ಅವಕಾಶಗಳನ್ನು ಒದಗಿಸುವುದು ಎಂದು ರಾಷ್ಟ್ರಪತಿ ನುಡಿದರುರಾಷ್ಟ್ರವು ಬಡತನ ನಿವಾರಣೆ, ಸಮಾನ ಆರೋಗ್ಯ ಸವಲತ್ತುಗಳನ್ನು ಪಡೆಯುತ್ತ ಸಾಗುತ್ತಿದೆ ಎಂದು ಹೇಳಿದ ಅವರು ರಸ್ತೆ, ನೀರು, ರೈಲು, ವಿಮಾನ ಸಂಪರ್ಕ ಸುಧಾರಣೆಗೊಂಡಿದೆ ಎಂದು ಹೇಳಿದರು.

2019: ನವದೆಹಲಿ: ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಬಡವರಿಗೆ ೧೦ ಶೇ.ರಷ್ಟು ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರದ ಎಕ್ಸಿಕ್ಯೂಟಿವ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ನಿರಾಕರಿಸಿತು.ಹೊಸ ಮೀಸಲಾತಿಯ ಅಡಿಯಲ್ಲಿ ಮಾಡಲಾಗುವ ನೇಮಕಾತಿಗಳು ಸುಪ್ರೀಂಕೋರ್ಟಿನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಶರತ್ತು ವಿಧಿಸುವಂತೆ ಮಾಡಲಾದ ಮನವಿಯನ್ನು ಕೂಡಾ ತಿರಸ್ಕರಿಸಿದ ಪೀಠ, ನಾವು ವಿಷಯವನ್ನು ಪರಿಶೀಲಿಸುತ್ತೇವೆ ಎಂದು ಹೇಳಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ  ಸೂಚಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.ಮನವಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಪೀಠ ಹೇಳಿತು.ಸರ್ಕಾರಿ ಉದ್ಯೋಗಗಳಲ್ಲಿ  ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡಾ ೧೦% ಮೀಸಲಾತಿ ಕಲ್ಪಿಸಿರುವ  ೧೦೩ನೇ ಸಂವಿಧಾನ ತಿದ್ದುಪಡಿ  ಕಾನೂನು ಜಾರಿ ವಿರುದ್ಧ ಸಾರ್ವಜನಿಕ ಹಿತಾಸಕಿ ಅರ್ಜಿಯನ್ನು (ಪಿಐಎಲ್) ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ. ‘ಸಮಾನತೆಗಾಗಿ ಯುವಕರು (ಯೂತ್ ಫಾರ್ ಈಕ್ವಾಲಿಟಿ) ಸರ್ಕಾರೇತರ ಸಂಘಟನೆಯು ಅರ್ಜಿಯನ್ನು ಸಲ್ಲಿಸಿದೆ. ಸದರಿ ಕಾನೂನು, ಸಂವಿಧಾನದ "ಮೂಲ ರಚನೆಯನ್ನು" ಬದಲಾಯಿಸುತ್ತದೆ ಎಂದು ಅರ್ಜಿಯು ಪ್ರತಿಪಾದಿಸಿತು. ೨೦೧೯ರ ಲೋಕಸಭೆ ಚುನಾವಣೆಗಳಿಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವಾಗ ಮಸೂದೆಯನ್ನು ಅಂಗೀಕರಿಸಲು ಕೇಂದ್ರ ಸರ್ಕಾರವು "ತ್ವರೆ" ಮಾಡಿದ್ದುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಪ್ರಶ್ನಿಸಿದ ಬಳಿಕ ಮಸೂದೆಗೆ ಸಂಸತ್ತಿನ ಅನುಮತಿ ಲಭಿಸಿತ್ತು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ಮೂರು  ಪ್ರಮುಖ ಹಿಂದಿ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕೇಂದ್ರದ ಅಧಿಕಾರಾರೂಢ ಬಿಜೆಪಿ ಸೋಲುಂಡ ಬಳಿಕ ಕೇಂದ್ರ ಸರ್ಕಾರವು ಮಸೂದೆಯನ್ನು ತಂದಿದೆ ಎಂದು ಪ್ರತಿಪಕ್ಷಗಳು ದಾಳಿ ನಡೆಸಿದ್ದವು.ಮಸೂದೆಯನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ೧೯೯೨ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಸಂವಿಧಾನ ಪೀಠವು ನೀಡಿದ್ದ ಆದೇಶವನ್ನು ಉಲ್ಲೇಖಿಸಿತ್ತು. ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕ ಹಿಂದುಳಿದಿರುವಿಕೆಯು ಮೀಸಲಾತಿಗೆ ಆಧಾರವಾಗಿರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಬಂಧನಕಾರಿಯಾದ ತೀರ್ಪನ್ನು ಸದರಿ ಕಾನೂನು ಉಲ್ಲಂಘಿಸಿದೆ ಎಂದು ಅರ್ಜಿ ಪ್ರತಿಪಾದಿಸಿತ್ತು.  ಹೊಸ ಮೀಸಲಾತಿ  ಕಾನೂನು ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಧಿಸಿರುವ ಶೇಕಡಾ ೫೦ರ ಒಟ್ಟಾರೆ ಮಿತಿಯನ್ನೂ ಉಲ್ಲಂಘಿಸುತ್ತದೆ ಎಂದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾದಿಸಿದೆ. ೨೦೦೬ ರಲ್ಲಿ ಎಂ ನಾಗರಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಿತಿಯನ್ನು  ನಿಗದಿಪಡಿಸಿದೆ ಎಂದು ಅರ್ಜಿ ಹೇಳಿತ್ತು. ಪ್ರಸ್ತುತ ಜಾರಿಯಲ್ಲಿರುವ  ಸಾಂವಿಧಾನಿಕ ವ್ಯವಸ್ಥೆಗಳಡಿಯಲ್ಲಿ, ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳ  (ಓಬಿಸಿ) ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ವ್ಯವಸ್ಥೆ ಇದೆಏನಿದ್ದರೂ, ಸದರಿ ಕಾನೂನು ನ್ಯಾಯಾಲಯದ ಪರಿಶೀಲನೆಯಲ್ಲಿ ಪಾರಾಗಬಲ್ಲುದು ಎಂದು ಸರ್ಕಾರ ಪ್ರತಿಪಾದಿಸಿತ್ತು. ಲೋಕಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿ ಅರುಣ್ ಜೇಟ್ಲಿ ಅವರುಶೇಕಡಾ ೫೦ರ ಮೀಸಲಾತಿ ಮಿತಿಯು ಹಿಂದುಳಿದ ಜಾತಿ, ವರ್ಗಗಳ ಮೀಸಲಾತಿಗೆ ಮಾತ್ರ ಅನ್ವಯವಾಗುತ್ತದೆ ಎಂಬುದಾಗಿ  ಸುಪ್ರೀಂಕೋರ್ಟ್ ಹೇಳಿದೆ. ಮಸೂದೆಯುಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುತ್ತದೆ ಎಂದು ವಿತ್ತ ಸಚಿವರು ಪ್ರತಿಪಾದಿಸಿದ್ದರು. ಸದರಿ ಕಾನೂನು  ಖಾಸಗಿ ಅನುದಾನರಹಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೂಡಾ  ಮೀಸಲಾತಿಯನ್ನು ಕಲ್ಪಿಸುತ್ತದೆ. ಹಿಂದಿನ ಎರಡು ತೀರ್ಪುಗಳ ಮೂಲಕ ಸುಪ್ರೀಂಕೋರ್ಟ್ ಇದನ್ನು ನಿಷೇಧಿಸಿತ್ತು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾದಿಸಿತ್ತು.

2019: ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರನ್ನುನಿರಂಕುಶ ವ್ಯಕ್ತಿ ಎಂಬುದಾಗಿ ಟೀಕಿಸಿದ ಕಾಂಗ್ರೆಸ್ ಅಧ್ಯಕ ರಾಹುಲ್ ಗಾಂಧಿ ಅವರುಕೇಂದ್ರದ ಇಡೀ ಸಚಿವ ಸಂಪುಟ ಪ್ರಧಾನಿಯ ಕಾರ್ಯ ವೈಖರಿಯನ್ನು ಒಪ್ಪುವಿವುದಿಲ್ಲ, ಅದರೆ ಪ್ರಧಾನಿಯ ಮುಂದೆ ಮಾತನಾಡುವ ಧೈರ್ಯ ಅವರಲ್ಲಿ ಯಾರಿಗೂ ಇಲ್ಲ ಎಂದು ಹೇಳಿದರು.ಸದಾ ಕಾಲವೂ ಕ್ರಿಯಾತ್ಮಕವಾಗಿರುವ ಮತ್ತು ಜನರ ಮಾತು ಆಲಿಸುವ ಕಾಂಗ್ರೆಸ್ ನಡೆನುಡಿಗೆ ವ್ಯತಿರಿಕ್ತವಾಗಿ, ಮೋದಿಯವರು ತಮಗೆ ಎಲ್ಲವೂ ಗೊತ್ತು ಎಂದು ಭಾವಿಸುತ್ತಾರೆ. ಅಧಿಕಾರದಲ್ಲಿರುವ ಇರುವ ಅವರಿಗೆ ಹಿಮ್ಮಾಹಿತಿ ಪಡೆಯುವ ಅವಕಾಶವಿಲ್ಲ. ಇದು ನಮ್ಮ ಮತ್ತು ಬಿಜೆಪಿ ನಡುವಣ ಮೂಲ ವ್ಯತ್ಯಾಸ ಎಂದು ಭುವನೇಶ್ವರದಲ್ಲಿಒಡಿಶಾ ಸಂಭಾಷಣೆ ನಡೆಸಿದ ರಾಹುಲ್ ನುಡಿದರು.
ಬಿಜೆಪಿ ಮತ್ತು ರಾಜ್ಯದ ಆಡಳಿತಾರೂಢ ಬಿಜೆಡಿಯನ್ನು ಒಂದೇ ಬಡಿಗೆಯಿಂದ ಭಾರಿಸಿದ ರಾಹುಲ್, ’ಉಭಯ ನಾಯಕರೂಒಂದೇ ಮಾದರಿಯನ್ನು ಅನುಸರಿಸುತ್ತಾರೆ- ಅದು ಗುಜರಾತ್ ಮಾದರಿ. ಇದರ ಅಡಿಯಲ್ಲಿ ಮುಖ್ಯಮಂತ್ರಿಯ ಮಾರ್ಕೆಟಿಂಗ್ಗೆ ಕೈಗಾರಿಕೋದ್ಯಮಿಗಳು ಹಣ ಪಾವತಿ ಮಾಡುತ್ತಾರೆ. ಪ್ರತಿಫಲವಾಗಿ ಸರ್ಕಾರದ ನೀತಿಗಳಲ್ಲಿ ತಮ್ಮ ಮಾತು ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂದು ರಾಹುಲ್ ಹೇಳಿದರು.ಒಡಿಶಾ ಮುಖ್ಯಮಂತ್ರಿ  ನವೀನ್ ಪಟ್ನಾಯಕ್ ಅವರನ್ನು ನರೇಂದ್ರ ಮೋದಿ ಅವರಿಗೆ ಹೋಲಿಸಿದ ರಾಹುಲ್, ’ಕೇಂದ್ರದಲ್ಲಿ ನಾವು ಪ್ರಧಾನಿ ಮೋದಿ ಜೊತೆಗೆ ಹೋರಾಡುತ್ತಿದ್ದೇವೆ. ಒಡಿಶಾದಲ್ಲಿ ನಾವು ಮೋದಿಯವರ ಇನ್ನೊಂದು ಆವೃತ್ತಿ ಜೊತೆಗೆ ಹೋರಾಟ ಮಾಡುತ್ತಿದ್ದೇವೆ. ಬಿಜೆಡಿ ಮಾದರಿ ಮತ್ತು ಬಿಜೆಪಿ ಮಾದರಿ ಎರಡೂ ಒಂದೇ ಎಂದು ಕಾಂಗ್ರೆಸ್ ಅಧ್ಯಕ್ಷ ನುಡಿದರು.
  
2019: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಅಯೋಧ್ಯಾ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಗಾಗಿ ಪಂಚ ಸದಸ್ಯ ಸಂವಿಧಾನ ಪೀಠವನ್ನು ಪುನರ್ರಚಿಸಿ, ಪೀಠವು ಜನವರಿ ೨೯ರಿಂದ ಪುನಃ ವಿಚಾರಣೆ ಆರಂಭಿಸುವುದೆಂದು ತಿಳಿಸಿತು. ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರನ್ನು ಪೀಠಕ್ಕೆ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಪಂಚ ಸದಸ್ಯ ಪೀಠದಲ್ಲಿ ಇವರಿಬ್ಬರಲ್ಲದೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ, ನ್ಯಾಯಮೂರ್ತಿ ಗಳಾದ ಎಸ್.. ಬೊಬ್ಡೆ ಮತ್ತು ಡಿವೈ ಚಂದ್ರಚೂಡ್ ಅವರು ಇರುತ್ತಾರೆ.ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ರಾಮಜನ್ಮಭೂಮಿ -ಬಾಬರಿ ಮಸೀದಿ ಭೂವಿವಾದ ಪ್ರಕರಣವು ಅಕ್ಟೋಬರ್ ತಿಂಗಳಲ್ಲಿ ವಿಚಾರಣೆಯಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ನ್ಯಾಯಾಲಯವು ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು.ಜನವರಿ ೪ರಂದು ಸಿಜೆಐ ಗೊಗೋಯಿ ಅವರು ಪ್ರಕರಣದ ವಿಚಾರಣೆಗೆ ಹೊಸ ಪೀಠವನ್ನು ರಚಿಸಲಾಗುವುದು ಎಂದು ಹೇಳಿದ್ದರು.ಜನವರಿ ೧೦ರಂದು ಪ್ರಕರಣವು ವಿಚಾರಣೆಗೆ ಬಂದಾಗ ಪಂಚ ಸದಸ್ಯ ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಉದಯ್ ಯು ಲಲಿತ್ ಅವರು ಎರಡು ದಶಕಗಳ ಹಿಂದೆ ಕಕ್ಷಿದಾರರೊಬ್ಬರನ್ನು ಪ್ರತಿನಿಧಿಸಿದ್ದುದಾಗಿ ವಕೀಲರೊಬ್ಬರು  ಹೇಳಿದಾಗ ನ್ಯಾಯಮೂರ್ತಿ ಲಲಿತ್ ಅವರು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಮತ್ತೆ ವಿಚಾರಣೆ ಮುಂದಕ್ಕೆ ಹೋಗಿತ್ತು.ಅಯೋಧ್ಯೆಯ ವಿವಾದಿತ ಪ್ರದೇಶವು ಶ್ರೀರಾಮನ ಜನ್ಮಭೂಮಿಯಾಗಿದ್ದು, ಮೊಘಲರಿಂದ ನೆಲಸಮವಾಗಿದ್ದ  ದೇವಾಲಯದ ಅವಶೇಷಗಳ ಮೇಲೆ ೧೬ನೇ ಶತಮಾನದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದು ಹಿಂದೂ ಸಂಘಟನೆಗಳು ಪ್ರತಿಪಾದಿಸಿವೆ. ವಿವಾದಿತ ಕಟ್ಟಡವನ್ನು ೧೯೯೨ರಲ್ಲಿ ಹಿಂದೂ ಕರಸೇವಕರು ಧ್ವಂಸಗೊಳಿಸಿದ್ದರು.ಅಯೋಧ್ಯಾ ಪ್ರಕರಣವನ್ನು ಆದ್ಯತೆ ಆಧಾರದಲ್ಲಿ ಏಕೆ ವಿಚಾರಣೆ ನಡೆಸಲಾಗದು ಎಂಬುದಕ್ಕೆ ಕಾರಣಸಹಿತವಾದ ಆದೇಶವನ್ನು ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಹೊಸ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.ವಿಚಾರಣೆ ವಿಳಂಬದ ಹಿನ್ನೆಲೆಯಲ್ಲಿ ಹಲವಾರು ಬಲಪಂಥೀಯ ಸಂಘಟನೆಗಳು ಮತ್ತು ಭಾರತೀಯ ಜನತಾ ಪಕ್ಷದ ಒಂದು ವರ್ಗವು ವಿವಾದಿತ ನಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿ ಸುಗ್ರೀವಾಜ್ಞೆ ಅಥವಾ ಕಾನೂನು ರೂಪಿಸುವಂತೆ ಆಗ್ರಹಿಸಿದ್ದವು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡುವವರೆಗೆ ತಮ್ಮ ಸರ್ಕಾರ ಕಾಯುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ತಿಳಿಸಿದ್ದರು.

2019: ಚಂಡೀಗಢ: ಮದುವೆಗೆ ಕೆಲವೇ ಗಂಟೆಗಳ ಮುನ್ನ ಮಹಿಳೆಯೊಬ್ಬಳನ್ನು ಶಸ್ತ್ರಸಜ್ಜಿತ ವ್ಯಕ್ತಿಗಳು ಬಲಾತ್ಕಾರವಾಗಿ ಅಪಹರಿಸಿ ಕಾರಿನಲ್ಲಿ ಪರಾರಿಯಾದ ಘಟನೆ ಪಂಜಾಬಿನಲ್ಲಿ ನಸುಕಿನಲ್ಲಿ ಘಟಿಸಿತು. ಮಹಿಳೆ ಪಂಜಾಬಿನ ಮುಕ್ತಸರದಲ್ಲಿ ಬ್ಯೂಟಿ ಪಾರ್ಲರಿನಿಂದ ನಸುಕಿನ ವೇಳೆಯಲ್ಲಿ ಹೊರಕ್ಕೆ ಬರುತ್ತಿದ್ದಂತೆಯೇ ಭಯಾನಕ ಘಟನೆ ಘಟಿಸಿದೆ. ಅಪಹರಣದ ಸಂಪೂರ್ಣ ದೃಶ್ಯ ಬ್ಯೂಟಿ ಪಾರ್ಲರಿನ ಮುಂಭಾಗದ ಇನ್ನೊಂದು ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಯಿತು. ಕೆಲವು ಯುವಕರು ತರುಣಿಯನ್ನು ಅಪಹರಿಸಿದ್ದಾರೆ ಎಂದು ಮುಕ್ತಸರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಣಬೀರ್ ಸಿಂಗ್ ತಿಳಿಸಿದರು. ಅಪಹರಣ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ಒಂದನ್ನು ದಾಖಲಿಸಲಾಗಿದ್ದು ಶೋಧ ಕಾರ್ಯಾಚರಣೆ ಆರಂಭಿಸಲಾಯಿತು. ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಯಲ್ಲಿ ಬ್ಯೂಟಿ ಪಾರ್ಲರಿನ ಮುಂಭಾಗದಲ್ಲಿ ಆರೋಪಿಗಳು ನಸುಕಿನ .೩೦ ಗಂಟೆಯ ವೇಳೆಯಲ್ಲಿ ಕಾಯುತ್ತಾ ನಿಂತಿದ್ದುದು ಕಾಣಿಸುತ್ತದೆ. ತರುಣಿ ಬ್ಯೂಟಿ ಪಾರ್ಲರಿನಿಂದ ಹೊರಬರುತ್ತಿದ್ದಂತೆಯೇ ಯುವಕರು ಆಕೆಯತ್ತ ನುಗ್ಗಿ ಬಲವಂತವಾಗಿ ಆಕೆಯನ್ನು ಕಾರಿನತ್ತ ಎಳೆದೊಯ್ದರು. ತೀವ್ರವಾಗಿ ಪ್ರತಿಭಟಿಸಿದ ತರುಣಿ, ತಪ್ಪಿಸಿಕೊಳ್ಳುವ ಯತ್ನದಲ್ಲಿ ರಸ್ತೆಗೆ ಬೀಳುತ್ತಾಳೆ. ದುಷ್ಕರ್ಮಿಗಳು ಆಕೆಯನ್ನು ಅನಾಮತ್ತಾಗಿ ಎತ್ತಿಕೊಂಡು ಕಾರಿನೊಳಕ್ಕೆ ತದುಕುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾಣಿಸಿತು.  ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

2019: ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿ ತಲೆತಪ್ಪಿಸಿಕೊಂಡಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರಿಗೆ ಸೇರಿದ ಮುಂಬೈಯ ಅಂದಾಜು ೧೦೦ ಕೋಟಿ ರೂಪಾಯಿ ಮೌಲ್ಯದ ಐಷಾರಾಮೀ ಬಂಗಲೆಯ ನೆಲಸಮ ಕಾರ್ಯವನ್ನು ರಾಯಗಢ ಕಲೆಕ್ಟೋರೇಟ್ ಆರಂಭಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿದವು. ಅಲಿಬಾಗಿನ ಎಸ್ಡಿಒ ಶಾರದಾ ಪವಾರ್ ನೇತೃತ್ವದ  ಕಟ್ಟಡ ಧ್ವಂಸ ತಂಡವು ಸಂಜೆ ಗಂಟೆಗೆ ಕಟ್ಟಡ ಧ್ವಂಸ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಮಾರ್ಬಲ್ ಹಾಸಿನ ಅರಮನೆ ಸದೃಶ ಬಂಗಲೆಯ ಸಂಪೂರ್ಣ ನಾಶಕ್ಕೆ ಕನಿಷ್ಠ ಒಂದು ವಾರದವರೆಗೂ ಕಾರ್ಯಾಚರಣೆ ನಡೆಯಬಹುದು ಎಂದು ಮೂಲಗಳು ಹೇಳಿದವು. ಪ್ರಖ್ಯಾತ ಕಿಹಿಮ್ ಸಮುದ್ರದಂಡೆಯ ಹಸಿರು ನಿವೇಶನದಲ್ಲಿ ಬಂಗಲೆ ಇದೆ.ಅಧಿಕೃತ ದಾಖಲೆಗಳ ಪ್ರಕಾರ, ೩೩,೦೦೦ ಚದರ ಅಡಿಗಳ ಐಷಾರಾಮೀ ಬಂಗಲೆಯನ್ನು ಭಾಗಶಃ ನೆಲದ ಮೇಲೆ ಮತ್ತು ಭಾಗಶಃ ಮಹಡಿಯ ಮೇಲೆ ಒಟ್ಟು ೭೦,೦೦೦ ಚದರ ಅಡಿಗಳ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಡ್ರೈವ್ ವೇ, ಎತ್ತರವಾದ ಲೋಹದ ಬೇಲಿ ಮತ್ತು ಬೃಹತ್ ಭದ್ರತಾ ದ್ವಾರಗಳನ್ನು ಬಂಗಲೆ ಹೊಂದಿದೆ. ೧೩,೫೦೦ ಕೋಟಿ ರೂಪಾಯಿ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಮುಖ್ಯ ಆರೋಪಿಯಾಗಿರುವ ನೀರವ್ ಮೋದಿ ತನ್ನ ಗೆಳೆಯರು ಮತ್ತು ಕುಟುಂಬ ಸದಸ್ಯರಿಗಾಗಿ ನಡೆಸುತಿದ್ದ ಅದ್ದೂರಿಯ ಭೋಜನಕೂಟಗಳಿಗೆ ಬಳಸಲಾಗುತ್ತಿದ್ದ ಬಂಗಲೆಯನ್ನು ೨೦೦೯-೨೦೧೦ರ ಸುಮಾರಿನಲ್ಲಿ ನಿರ್ಮಿಸಲಾಗಿತ್ತು.ರಾಯಗಢದ ಪುಟ್ಟ ಗ್ರಾಮಗಳ ಸಮುದ್ರ ದಂಡೆಗಳಲ್ಲಿ ಸಮುದ್ರದ ಅಲೆಗಳ ದೊಡ್ಡ ಹಾಗೂ ಸಣ್ಣ ಪ್ರಮಾಣದ ಉಬ್ಬರ -ಇಳಿತ ವಲಯಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ವಿವಿಧ ಅಕ್ರಮ ಬಂಗಲೆಗಳು, ಹೋಟೆಲುಗಳು ಮತ್ತು ರೆಸಾರ್ಟ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಂಬುರಾಜೆ ಯುವ ಕ್ರಾಂತಿ ಹೆಸರಿನ ಸರ್ಕಾರೇತರ ಸಂಘಟನೆಯು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಬಾಂಬೆ ಹೈಕೋರ್ಟ್ ನೀಡಿದ ಆದೇಶದ ಪ್ರಕಾರ ಬಂಗಲೆಯ ಧ್ವಂಸ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಸರ್ಕಾರೇತರ ಸಂಘಟನೆಯ ರಾಜ್ಯ ಮುಖ್ಯಸ್ಥ ಸುರೇಂದ್ರ ಧವಳೆ ಅವರ ಪ್ರಕಾರ ಕಳೆದ ಕೆಲವು ವಾರಗಳಲ್ಲಿ ೧೦ ಬಂಗಲೆಗಳನ್ನು ಧ್ವಂಸಗೊಳಿಸಲಾಗಿದ್ದು ಈಗ ನೀರವ್ ಮೋದಿ ಬಂಗಲೆಯನ್ನು ನಾಶಗೊಳಿಸಲಾಯಿತು. ಈ ಬಂಗಲೆಯ ಮೌಲ್ಯ ೧೩ ಕೋಟಿ ರೂಪಾಯಿಗಳು ಎಂಬುದಾಗಿ ಪ್ರತಿಪಾದಿಸಲಾಯಿತು.  ಆದರೆ ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಇದರ ಬೆಲೆ ೧೦೦ ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಧವಳೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದರು.ಜಿಲ್ಲಾ ಕಲೆಕ್ಟರ್ ವಿಜಯ್ ಸೂರ್ಯವಂಶಿ ಅವರು ಜಾರಿ ನಿರ್ದೇಶನಾಲಯವು ಆಸ್ತಿಯನ್ನು ತನ್ನ ವಶಕ್ಕೆ ಒಪ್ಪಿಸಿದ ಬಳಿಕ ಧ್ವಂಸ ಆದೇಶವನ್ನು ನೀಡಿದರು ಎಂದು ವರದಿ ತಿಳಿಸಿತು. ಕಳೆದ ವರ್ಷ ರಾಜ್ಯ ಸರ್ಕಾರವು ಜಾರಿ ನಿರ್ದೇಶನಾಲಯಕ್ಕೆ ಕಿಹಿಮ್ ಸಮುದ್ರ ದಂಡೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ನಾಶಕ್ಕೆ ಅನುಮತಿ ನೀಡುವಂತೆ ಪತ್ರ ಬರೆದಿತ್ತು. ನೀರವ್ ಮೋದಿಗೆ ಸೇರಿದ ಸ್ವತ್ತನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿತ್ತು.ತಮ್ಮ ಆಸ್ತಿಗಳ ಧ್ವಂಸ ಬೆದರಿಕೆಗೆ ಗುರಿಯಾಗಿರುವ ೨೦೨ ಬಂಗಲೆ ಮಾಲೀಕರ ಪೈಕಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಆರೋಪಿಯಗಿರುವ ನೀರವ್ ಮೋದಿ ಕೂಡಾ ಒಬ್ಬರಾಗಿದ್ದಾರೆ.ಎಲ್ಲ ಪರಿಸರ ನಿಯಮಾವಳಿಗಳನ್ನೂ ಗಾಳಿಗೆ ತೂರಿ ಅಕ್ರಮವಾಗಿ ಬಂಗಲೆಯನ್ನು ನಿರ್ಮಿಸಲಾಗಿತ್ತು. ಅಲಿಬಾಗ್ ಮತ್ತು ಮುರಡ್ ತೆಹ್ಸಿಲ್ನಲ್ಲಿ ೨೦೨ ಅಕ್ರಮ ಬಂಗಲೆಗಳನ್ನು ನಾಶ ಪಡಿಸುವ ಕಾರ್ಯಾಚರಣೆಯನ್ನು ನಾವು ಆರಂಭಿಸಿದ್ದೇವೆ ಎಂದು ರಾಯಗಢದ ಕಲೆಕ್ಟರ್ ಸೂರ್ಯವಂಶಿ ಹೇಳಿದರು.ಭದ್ರತೆಯ ಕಾರಣ ಮತ್ತು ತಮ್ಮ ಪ್ರಕರಣವನ್ನು ರಾಜಕೀಯಗೊಳಿಸಲಾಗಿರುವ ಹಿನ್ನೆಲೆಯಲ್ಲಿ ತಾನು ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದು ನೀರವ್ ಮೋದಿ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದರು. 


2018: ನವದೆಹಲಿ: ರಾಜ್ಯದ ಹಿರಿಮೆಯನ್ನು ಜಗತ್ತಿನಾದ್ಯಂತ ಪಸರಿಸಿದ ನವರತ್ನಗಳಿಗೆ ಬಾರಿಯ ಪದ್ಮ ಪ್ರಶಸ್ತಿ ಸಂದಿತು. ದೇಶದ ಎರಡನೇ ಅತ್ಯುನ್ನತ ಪ್ರಶಸ್ತಿ ಎಂದೇ ಖ್ಯಾತಿವೆತ್ತಿರುವ ಪದ್ಮವಿಭೂಷಣಕ್ಕೆ ದಕ್ಷಿಣ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕ ಇಳಯರಾಜ, ಮೂರನೇ ಅತ್ಯುನ್ನತ ಪ್ರಶಸ್ತಿ ಪದ್ಮಭೂಷಣಕ್ಕೆ ಬಿಲಿಯರ್ಡ್ಸ್ಆಟಗಾರ ಕರ್ನಾಟಕದ ಪಂಕಜ್ಆಡ್ವಾಣಿ, ಕ್ರಿಕೆಟಿಗ ಮಹೇಂದ್ರ ಸಿಂಗ್ಧೋನಿ ಭಾಜನರಾಗಿದರು.  ಹಿರಿಯ ಚಿತ್ರ ಸಾಹಿತಿ ದೊಡ್ಡರಂಗೇ ಗೌಡ, ಬಿಜಾಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕರ್ನಾಟಕ ಶಾಸ್ತ್ರೀಯ ಸಂಗೀತಗಾರ ಸಹೋದರರಾದ ರುದ್ರಪಟ್ಟಣಂ ನಾರಾ ಯಣ ಸ್ವಾಮಿ ತಾರಾನಾಥನ್ಮತ್ತು ತ್ಯಾಗರಾಜನ್‌, ಸಮಾಜ ಸೇವಕಿಯರಾದ ಡಾ| ಸೂಲಗಿತ್ತಿ ನರಸಮ್ಮ, ಸೀತಮ್ಮ ಜೋಡಟ್ಟಿ, ಬಾಗಲಕೋಟೆಯ ಸೂಫಿ ಸಾಧಕ, ಕನ್ನಡ ಕಬೀರರೆಂದು ಖ್ಯಾತರಾದ ಇಬ್ರಾಹಿಂ ಸುತಾರ್‌,  ಸಂಗೀತ ವಿದ್ವಾಂಸ ಆರ್‌. ಸತ್ಯನಾರಾಯಣ ಅವರಿಗೆ ಪದ್ಮಶ್ರೀ ಗೌರವ ದಕ್ಕಿತು. ಈದಿನ ರಾತ್ರಿ ಕೇಂದ್ರ ಗೃಹ ಸಚಿವಾಲಯ ಒಟ್ಟು 85 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಣೆ ಮಾಡಿತು.  ವಿಶೇಷವೆಂದರೆ, ಬಾರಿಯೂ ಸರಕಾರ 'ಎಲೆ ಮರೆಯ ಕಾಯಿಯಂಥ ಸಾಧಕ'ರನ್ನೇ ಗುರುತಿಸಿ ಪ್ರಶಸ್ತಿ ನೀಡಿತು. ಇವರಲ್ಲದೆ, ವಿಜ್ಞಾನಿ ಹಾಗೂ ಬೊಂಬೆ ತಯಾರಕ ಅರವಿಂದ್ಗುಪ್ತಾ, ಚಿಕಿತ್ಸಕಿ ಲಕ್ಷ್ಮೀ ಕುಟ್ಟಿ, ಗೋಂದ್ಕಲಾವಿದ ಭಜ್ಜು ಶ್ಯಾಮ್ಹಾಗೂ 98 ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಸುಧಾಂಶು ಬಿಸ್ವಾಸ್‌, ಬೌದ್ಧ ಗುರು ಯಶಿ ದೊಧೇನ್ಹಾಗೂ 'ಪ್ಲಾಸ್ಟಿಕ್ರಸ್ತೆಯ ಅನ್ವೇಷಕ' ಎಂ.ಆರ್‌. ರಾಜಗೋಪಾಲ್ಅವರಿಗೂ ಬಾರಿಯ ಪದ್ಮ ಪ್ರಶಸ್ತಿಗಳು ಲಭಿಸಿದವು.   ಬಾರಿಯ ಪದ್ಮ ಪ್ರಶಸ್ತಿಗಳಿಗೆ ಸುಮಾರು 15,700 ಜನರು ಅರ್ಜಿ ಹಾಕಿದ್ದು, ಇವರಲ್ಲಿ 73 ಜನರಿಗೆ ಪದ್ಮಶ್ರೀ, ಒಂಭತ್ತು ಸಾಧಕರಿಗೆ ಪದ್ಮಭೂಷಣ  ಹಾಗೂ ಮೂವರಿಗೆ ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿದವು. ಈ  ಬಾರಿಯೂ ಕೇಂದ್ರ ಸರಕಾರ ಹೆಚ್ಚು ಪ್ರಸಿದ್ಧಿಯಾದವರಿಗೆ ಪ್ರಶಸ್ತಿ ನೀಡಲು ಹೋಗದೇ, ಎಲ್ಲೋ ದೂರದಲ್ಲಿ ತಮ್ಮ ಪಾಡಿಗಿರುವಂಥವರನ್ನೇ ಹುಡುಕಿ ಗೌರವಿಸಿತು. ಇದರಲ್ಲಿ ಕರ್ನಾಟಕದ ಸೂಲಗಿತ್ತಿ ನರಸಮ್ಮ, ಸೀತಮ್ಮ ಜೋಡಟ್ಟಿಯವರೇ ಉದಾಹರಣೆ. 16 ಅನಿವಾಸಿ ಭಾರತೀಯರು, ಮೂವರಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಯಿತು. - 2009ರಲ್ಲೇ ಪದ್ಮಭೂಷಣಕ್ಕೆ ಭಾಜನರಾಗಿದ್ದ ಇಳಯರಾಜ ಅವರಿಗೆ, ಬಾರಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2018: ನವದೆಹಲಿ: ದೀಪಿಕಾ ಪಡುಕೋಣೆ ನಟಿಸಿರುವ, ಸಂಜಯ್ ಲೀಲಾ ಭನ್ಸಾಲಿ ಅವರ ಚಿತ್ರ ’ಪದ್ಮಾವತ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ವಿರುದ್ಧದ ಹಿಂಸಾಚಾರವೂ ಸೇರಿದಂತೆ ವಿವಿಧೆಡೆಗಳಲ್ಲಿ ನಡೆಯತ್ತಿರುವ ಕರ್ಣೀಸೇನಾ ಹಿಂಸಾಚಾರಕ್ಕಾಗಿ ಗುಜರಾತ್, ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸುವಂತೆ ಕೋರಿದ ಮನವಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿತು. ಸಾಮಾಜಿಕ ಕಾರ್ಯಕರ್ತ ತೆಹ್ಸೀನ್ ಪೂನಾವಾಲ ಮತ್ತು ಸುಪ್ರೀಂಕೋರ್ಟ್ ವಕೀಲ ವಿನೀತ್ ಧಂಡಾ ಅವರು ಸಲ್ಲಿಸಿದ ಅರ್ಜಿಗಳು ಥಿಯೇಟರ್ ಆವರಣಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಮಾಡಲಾಗಿರುವ ಹಾನಿಯನ್ನು ವಿವರವಾಗಿ ಬಣ್ಣಿಸಿವೆ. ಕರ್ಣಿಸೇನಾ ಸದಸ್ಯರು ಎಂದು ಶಂಕಿಸಲಾದ ವ್ಯಕ್ತಿಗಳು ಗುರುಗ್ರಾಮದಲ್ಲಿ ಶಾಲಾ ಮಕ್ಕಳನ್ನು ಒಯ್ಯುತ್ತಿದ್ದ ಬಸ್ಸಿನ ಮೇಲೆ ಹೇಗೆ ಕಲ್ಲೆಸೆದರು ಎಂಬುದನ್ನು ಅರ್ಜಿಗಳು ವಿಶೇಷವಾಗಿ ವರ್ಣಿಸಿದವು. ಭನ್ಸಾಲಿ ಅವರ ’ಪದ್ಮಾವತ್ ಚಿತ್ರ ಈದಿನ ಬಿಡುಗಡೆಯಾಗುವ ಮುನ್ನವೇ ಉತ್ತರ ಭಾರತದ ವಿವಿಧೆಡೆಗಳಲ್ಲಿ ಆರಂಭವಾದ ಹಿಂಸಾತ್ಮಕ ಪ್ರತಿಭಟನೆಗಳು ಈದಿನವೂ ಮುಂದುವರೆದಿದ್ದು, ಈ ಹಿಂಸಾಚಾರಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ರಾಜ್ಯಸರ್ಕಾರಗಳದ್ದು ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು. ಚಿತ್ರ ಬಿಡುಗಡೆಗೆ ಸುಪ್ರೀಂಕೋರ್ಟಿನ ಸಮ್ಮತಿಯ ಹೊರತಾಗಿಯೂ, ’ಪದ್ಮಾವತ್ ವಿರುದ್ಧ ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್, ಮಧ್ಯಪ್ರದೇಶದಲ್ಲಿ ಈದಿನವೂ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದವು. ಕಲ್ಲೆಸೆತ, ಬೆಂಕಿ ಹಚ್ಚುವ ಘಟನೆಗಳು ನಡೆದ ಬಗ್ಗೆ ಹಲವೆಡೆಗಳಿಂದ ವರದಿಗಳು ಬಂದವು. ರಾಜ್ಯ ಸರ್ಕಾರಗಳು ಮತ್ತು ಚಿತ್ರಮಂದಿರ ಮಾಲೀಕರು ಭವಿಷ್ಯದಲ್ಲಿ ಹಿಂಸಾಚಾರ ಇನ್ನಷ್ಟು ಹೆಚ್ಚಬಹುದು ಎಂಬ ಭೀತಿಗೆ ಒಳಗಾದರು. ಸುಪ್ರೀಂಕೋರ್ಟ್ ಕರ್ಣಿಸೇನಾ ಹಿಂಸಾಚಾರದ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣದ ವಿಚಾರಣೆಗೆ ಒಪ್ಪಿದ್ದು, ದೆಹಲಿ ಹೈಕೋರ್ಟ್ ಚಿತ್ರದ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ನಿರಾಕರಿಸಿತು. ಗುರುಗ್ರಾಮದಲ್ಲಿ ಜನವರಿ 24ರ ಬುಧವಾರ ಶಾಲಾ ಮಕ್ಕಳ ಬಸ್ಸಿನ ಮೇಲೆ ಕಲ್ಲುತೂರಾಟ ನಡೆಸಿದ ಘಟನೆ ಸಂಬಂಧ ದಾಖಲಿಸಲಾಗಿರುವ ದೂರಿನಲ್ಲಿ ಘಟನೆಗೆ ಕರ್ಣಿಸೇನೆ ಕಾರಣ ಎಂದು ದೂಷಿಸಲಾಯಿತು. ಶಾಲಾ ಬಸ್ಸಿನ ಮೇಲೆ ಕಲ್ಲೆಸೆದ ೧೪ ಮಂದಿಯನ್ನು ಬಂಧಿಸಲಾಗಿದ್ದು ಅವರನ್ನು ೧೪ ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಯಿತು.  ಯಾವುದೇ ದಾಳಿಕೋರನನ್ನೂ ಬಿಟ್ಟು ಬಿಡಲಾಗುವುದಿಲ್ಲ ಹೇಳಿರುವ ಹರಿಯಾಣ ಡಿಜಿಪಿ ಬಿ.ಎಸ್. ಸಂಧು ಚಿತ್ರಮಂದಿರಗಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದರು. ಪ್ರತಿಭಟನೆಯ ಬೆದರಿಕೆಗಳ ಹೊರತಾಗಿಯೂ ಹಲವಾರು ರಾಜ್ಯ ಸರ್ಕಾರಗಳು ಚಲನಚಿತ್ರದ ಸಸೂತ್ರ ಬಿಡುಗಡೆಗೆ ಸರ್ವಪ್ರಯತ್ನ ಮಾಡಿದವು. ಕೋಲ್ಕತ ಶಾಂತ: ಕೋಲ್ಕತದಲ್ಲಿ ಯಾವುದೇ ಪ್ರತಿಭಟನೆಗಳಿಲ್ಲದೆ ’ಪದ್ಮಾವತ್ ಚಿತ್ರ ಎಲ್ಲೆಡೆಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಎಲ್ಲ ಕಡೆಗಳಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಒಂದೇ ಪರದೆ ಇರುವ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್ ಗಳು ಸೇರಿದಂತೆ ಕೋಲ್ಕತದ ೧೨೮ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದೆ. ಈವರೆಗೆ ಎಲ್ಲೂ ಪ್ರತಿಭಟನೆಯ ವರದಿಗಳಿಲ್ಲ ಎಂದು ಚಲನಚಿತ್ರ ವಿತರಕ ಎಸ್ ವಿ ಎಫ್ ವಕ್ತಾರರು ಹೇಳಿದರು.  ಈ ಮಧ್ಯೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಜನರ ಭಾವನೆಗಳಿಗೆ ನೋವು ಉಂಟುಮಾಡುವಂತಹ ಮತ್ತು ಚಾರಿತ್ರಿಕ ವಾಸ್ತವಾಂಶಗಳನ್ನು ಆಧರಿಸದ ಚಿತ್ರಗಳನ್ನು ಮಾಡಬಾರದು ಎಂದು ಅಭಿಪ್ರಾಯಪಟ್ಟರು.  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮುಸ್ಲಿಮರು ಮತ್ತು ದಲಿತರನ್ನು ಸುಟ್ಟುಕೊಂದ ಶಕ್ತಿಗಳು ಈಗ ನಮ್ಮ ಮನೆಗಳನ್ನು ಅತಿಕ್ರಮಿಸುತ್ತಿವೆ ಮತ್ತು ಮಕ್ಕಳ ಮೇಲೆ ಎರಗುತ್ತಿವೆ ಎಂದು ಟೀಕಿಸಿದರು. ಗುರುಗ್ರಾಮದಲ್ಲಿ ಶಾಲಾ ಮಕ್ಕಳ ಬಸ್ಸಿನ ಮೇಲೆ ಪದ್ಮಾವತ್ ವಿರೋಧಿ ಪ್ರತಿಭಟನಕಾರರ ಗುಂಪು ನಡೆಸಿದ ದಾಳಿಯನ್ನು ಖಂಡಿಸಿದ ಕೇಜ್ರಿವಾಲ್ ’ಮುಸ್ಲಿಮರು ಮತ್ತು ದಲಿತರ ವಿರುದ್ಧದ ದಾಳಿಗಳ ಬಗ್ಗೆ ಹೊಂದಿದ್ದ ಮೌನವನ್ನು ಜನರು ಈಗಲೂ ಮುಂದುವರೆಸಬಾರದು ಎಂದು ಹೇಳಿದರು. ಪಾಕಿಸ್ತಾನದಲ್ಲಿ ಯಥಾವತ್ ಚಿತ್ರ ಬಿಡುಗಡೆ: ಈ ಮಧ್ಯೆ ಪಾಕಿಸ್ತಾನದ ಸೆನ್ಸಾರ್ ಮಂಡಳಿಯು ಪದ್ಮಾವತ್ ಚಿತ್ರವನ್ನು ಯಾವುದೇ ಕತ್ತರಿಪ್ರಯೋಗಕ್ಕೂ ಒಳಪಡಿಸದೆ, ಯಥಾವತ್ತಾಗಿ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸೆನ್ಸರ್‍ಸ್ (ಸಿಬಿಎಫ್ ಸಿ) ಅಧ್ಯಕ್ಷ ಮೊಬಶೀರ್ ಹಸನ್ ಅವರು ಚಿತ್ರಕ್ಕೆ ಮಂಡಳಿ ಒಪ್ಪಿಗೆ ನೀಡಿದೆ ಎಂಬುದಾಗಿ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದರು.  ಗುಜರಾತ್, ರಾಜಸ್ಥಾನದಲ್ಲಿ ’ಪದ್ಮಾವತ್ ಇಲ್ಲ:  ಚಿತ್ರ ಬಿಡುಗಡೆಗೂ ಒಂದು ದಿನ ಮುನ್ನವೇ ಸಂಭವಿಸಿದ ಹಿಂಸಾಚಾರಗಳ ಹಿನ್ನೆಲೆಯಲ್ಲಿ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಚಿತ್ರ ಬಿಡುಗಡೆ ಮಾಡದೇ ಇರಲು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಇಂಡಿಯಾ ಸೂಚಿಸಿತ್ತು.
ಹರಿಯಾಣ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮುವಿನಲ್ಲಿ ಈದಿನವೂ ಹಿಂಸಾಚಾರಗಳು ಮುಂದುವರೆದ ವರದಿಗಳು ಬಂದವು.  ಪ್ರತಿಭಟನಕಾರರು ಬಸ್ಸುಗಳಿಗೆ ಕಿಚ್ಚಿಟ್ಟ, ಹೆದ್ದಾರಿಗಳನ್ನು ಬಂದ್ ಮಾಡಿದ ಹಾಗೂ ಚಿತ್ರ ಮಂದಿರಗಳ ಹೊರಗೆ ದಾಂಧಲೆ ನಡೆಸಿ ಘಟನೆಗಳು ಘಟಿಸಿವೆ ಎಂದು ವರದಿಗಳು ಹೇಳಿದವು.

2018: ಬೆಂಗಳೂರು: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ’ಪದ್ಮಾವತ್ ಚಿತ್ರ ಬಿಡುಗಡೆಯಾದ ದಿನವೇ ಫೇಸ್‌ಬುಕ್ ಮೂಲಕ ಲೈವ್ ಸ್ಟ್ರೀಮ್‌ನಲ್ಲಿ ಇಡೀ ಸಿನಿಮಾ ಸೋರಿಕೆಯಾಗಿದೆ, ಆದರೆ ಬಳಿಕ ಅದನ್ನು ಅಳಿಸಿಹಾಕಲಾಗಿದೆ ಎಂದು ವರದಿಗಳು ತಿಳಿಸಿದವು. ಚಿತ್ರ ಬಿಡುಗಡೆಯನ್ನು ವಿರೋಧಿಸಿ ಉತ್ತರ ಭಾರತದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇನ್ನೊಂದೆಡೆ ಆಸಕ್ತರಿಗೆ ಇಡೀ ಸಿನಿಮಾ ಫೇಸ್‌ಬುಕ್‌ನಲ್ಲೇ ವೀಕ್ಷಿಸಲು ಸಿಕ್ಕಿದೆ ಎಂದು ವರದಿ ಹೇಳಿತು. ಜಾತೋಂಕಾ ಅಡ (जाटों का अड्डा/Jaaton Ka Adda)  ಎಂಬ ಹೆಸರಿನ ಫೇಸ್‌ಬುಕ್ ಪುಟ ಪದ್ಮಾವತ್ ಸಿನಿಮಾವನ್ನು ಚಿತ್ರಮಂದಿರದಿಂದ ನೇರವಾಗಿ ಪ್ರದರ್ಶಿಸಿದೆ. ಈ ಲಿಂಕ್ ಅನ್ನು ೧೫ ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ.  ಇದು ೩.೫ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿತ್ತು. ಆದರೆ, ಬಳಿಕ ಪುಟದಿಂದ ವಿಡಿಯೋ ತೆಗೆದು ಹಾಕಲಾಯಿತು ಎಂದು ವರದಿ ತಿಳಿಸಿತು.  ಫೇಸ್ ಬುಕ್ ನಿಂದ ಸಿನಿಮಾವನ್ನು ಅಳಿಸಿಹಾಕಲಾಗಿದ್ದರೂ ಫೇಸ್‌ಬುಕ್ ಬಳಕೆದಾರರಲ್ಲಿ ಹಲವರು ಲೈವ್‌ಸ್ಟ್ರೀಮ್ ಅನ್ನು  ಹಂಚಿಕೊಳ್ಳುವುದು ಮುಂದುವರೆದಿದೆ ಎಂದೂ ವರದಿ ಹೇಳಿತು. ರಾಣಿ ಪದ್ಮಾವತಿ ಮತ್ತು ರಾಜ ರತನ್ ಸಿಂಗ್ ಭೇಟಿ, ಅವರ ನಡುವಿನ ಪ್ರೇಮಾಂಕರದ ದೃಶ್ಯಗಳಿರುವ ಪ್ರಾರಂಭದ ೨೫ ನಿಮಿಷಕ್ಕೂ ಹೆಚ್ಚು ಅವಧಿಯ ವಿಡಿಯೋವನ್ನು ಹೆಚ್ಚು ಮಂದಿ ಹಂಚಿಕೊಂಡರು. ‘ಸಿನಿಮಾದಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ. ಆದ್ದರಿಂದ ವಿರೋಧ ವ್ಯಕ್ತಪಡಿಸುವುದು ಬೇಡ ಪ್ರಕಟಿಸಿ ಲೈವ್ ವಿಡಿಯೊ ಅಳಿಸಿ ಹಾಕಲಾಗಿದೆ ಎಂದು ವರದಿ ತಿಳಿಸಿತು.

2018: ನವದೆಹಲಿ: ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂಡಿಯಾ ಗೇಟ್ ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನದ ಪರೇಡಿನಲ್ಲಿ ಕುಳಿತುಕೊಳ್ಳಲು ನಾಲ್ಕನೇ ಸಾಲಿನಲ್ಲಿ ಆಸನ ಒದಗಿಸುವ ಮೂಲಕ ಬಿಜೆಪಿ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ಆಪಾದಿಸಿತು. ‘ಇದು ರಾಹುಲ್ ಗಾಂಧಿ ಅವರನ್ನು ಅವಮಾನಿಸುವ ಯತ್ನ. ಕಾಂಗ್ರೆಸಿನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳೆದ ಮೂರು ವರ್ಷಗಳಲ್ಲಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಮುಂಭಾಗದ ಸಾಲಿನಲ್ಲಿಯೇ ಆಸನ ಒದಗಿಸಲಾಗುತ್ತಿತ್ತು ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ಹೇಳಿದವು.  ಏನಿದ್ದರೂ ಈ ಅವಮಾನದ ಹೊರತಾಗಿಯೂ ರಾಹುಲ್ ಗಾಂಧಿ ಅವರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು. ಅಮಿತ್ ಶಾ ಅವರು ಕೇವಲ ಶಾಸಕರಾಗಿದ್ದರೂ ಪಕ್ಷಾಧ್ಯಕ್ಷರು ಎಂಬ ಕಾರಣಕ್ಕಾಗಿ ಕಳೆದ ವರ್ಷದ ಗಣರಾಜ್ಯೋತ್ಸವ ಸಮಾರಂಭದ ಪರೇಡಿನಲ್ಲಿ ಮುಂಭಾಗದ ಸಾಲಿನಲ್ಲಿ ಕುಳಿತುಕೊಳ್ಳಲು ಆಸನ ಕಲ್ಪಿಸಲಾಗಿತ್ತು ಎಂದು ಕಾಂಗ್ರೆಸ್ ಹೇಳಿತು. ವಾರದ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಗಿನ ಭೇಟಿಯನ್ನು ತಪ್ಪಿಸಲೂ ಬಿಜೆಪಿ ಮತ್ತು ಸರ್ಕಾರ ಯತ್ನಿಸಿತ್ತು ಎಂದೂ ಕಾಂಗ್ರೆಸ್ ಆಪಾದಿಸಿತು. ಶಿಷ್ಟಾಚಾರದಂತೆ ನವದೆಹಲಿಗೆ ಭೇಟಿ ನೀಡುವ ವಿದೇಶೀ ನಾಯಕರನ್ನು ಭೇಟಿ ಮಾಡುವ ಅವಕಾಶ ವಿರೋಧಿ ನಾಯಕರಿಗೆ ಇದೆ. ಆದರೆ ರಾಹುಲ್ ಗಾಂಧಿ ಅವರಿಗೆ ನೆತನ್ಯಾಹು ಅವರನ್ನು ಯಾವುದೇ ವೇಳೆಯಲ್ಲೂ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಕಾಂಗ್ರೆಸ್ ಆಪಾದಿಸಿತು. ’ಸರ್ಕಾರ ಈ ಭೇಟಿಗಳನ್ನು ನಿಗದಿ ಪಡಿಸುತ್ತದೆ. ನಿಶ್ಚಿತವಾಗಿ ಬಿಜೆಪಿಗೆ ನೆತನ್ಯಾಹು ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವುದು ಬೇಕಿರಲಿಲ್ಲ ಎಂದು ಆನಂದ ಶರ್ಮ ಹೇಳಿದರು. ‘ಮಾಟಬೇಟೆ ನಡೆಸುತ್ತಿಲ್ಲ ಎಂದು ಸರ್ಕಾರ ಹೇಳಿದ್ದರೂ, ’ರಾಜಕಾರಣಿಗಳು ಸಹನೆ ತೋರಿಸಬೇಕು, ದೂರಬಾರದು ಎಂದು ಬಿಜೆಪಿಯ ಸುಧಾಂಶು ಮಿತ್ತಲ್ ಮಾಧ್ಯಮಗಳ ಬಳಿ ಹೇಳಿದರು. ೧೦ ಮಂದಿ ಅಸಿಯಾನ್ ಮುಖ್ಯಸ್ಥರಿಗೆ ಆಸನ ವ್ಯವಸ್ಥೆ ಮಾಡುವ ಸಲುವಾಗಿ ಆದ್ಯತೆಗೆ ಅನುಗುಣವಾಗಿ ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ವ್ಯತ್ಯಾಸ ಮಾಡಿರಬಹುದು. ರಾಹುಲ್ ಗಾಂಧಿ ಅವರನ್ನು ಗೌಣಗೊಳಿಸುವ ಯತ್ನ ನಡೆದಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿದವು.  ವಿರೋಧ ಪಕ್ಷದ ನಾಯಕರಿಗೆ ಯಾವಾಗಲೂ ಪರೇಡಿನಲ್ಲಿ ಮುಂಭಾಗದ ಸಾಲಿನಲ್ಲಿ ಆಸನ ಒದಗಿಸಲಾಗುತ್ತದೆ. ಯುಪಿಎ ಆಡಳಿತಾವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಎಲ್ ಕೆ ಅಡ್ವಾಣಿ ಅವರಿಗೆ ಯಾವಾಗಲೂ ಮುಂಭಾಗದ ಸಾಲಿನಲ್ಲಿಯೇ ಆಸನ ಒದಗಿಸಲಾಗುತ್ತಿತ್ತು ಎಂದು ಕಾಂಗ್ರೆಸ್ ತಿಳಿಸಿತು.

2018: ಬೀಜಿಂಗ್: ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಇತ್ತೀಚೆಗೆ ಡೊಕ್ಲಾಮ್ ವಿವಾದಿತ ಪ್ರದೇಶ ಎಂಬುದಾಗಿ ಹೇಳಿದ್ದನ್ನು  ಇಲ್ಲಿ ಟೀಕಿಸಿದ ಚೀನೀ ಸೇನೆ ’ಡೊಕ್ಲಾಮ್ ಚೀನಾದ ಭಾಗವೇ. ಭಾರತ ೭೩ ದಿನಗಳ ಬಿಕ್ಕಟ್ಟಿನಿಂದ ಪಾಠ ಕಲಿತು ಭವಿಷ್ಯದಲ್ಲಿ ಇಂತಹ ಘಟನೆಗಳು ಘಟಿಸದಂತೆ ಎಚ್ಚರವಹಿಸಬೇಕು ಎಂದು ಸಲಹೆ ಮಾಡಿತು. ಭಾರತದ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗಳಿಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಚೀನೀ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ವು ಕ್ವಿಯಾನ್ ಅವರು ’ಡೊಕ್ಲಾಮ್ ಚೀನಾದ್ದೇ ಭಾಗ ಎಂದು ಪುನರುಚ್ಚರಿಸಿದರು. ಈ ತಿಂಗಳ ಆದಿಯಲ್ಲಿ ಜನವರಿ ೧೨ರಂದು ಸೇನಾ ದಿನದ ಸಂದರ್ಭದಲ್ಲಿ ಮಾತನಾಡಿದ ಜನರಲ್ ರಾವತ್ ಅವರು ಭಾರತವು ತನ್ನ ಗಮನವನ್ನು ಪಾಕಿಸ್ತಾನದ ಗಡಿಯಿಂದ ಚೀನಾ ಕಡೆಗೆ ಹರಿಸಬೇಕಾದ ಅಗತ್ಯ ಇದೆ ಎಂದು ಹೇಳಿ ಬೀಜಿಂಗ್ ನೈಜ ನಿಯಂತ್ರಣ ರೇಖೆಯಲ್ಲಿ ಭಾರತದ ಮೇಲೆ ಒತ್ತಡ ನಿರ್ಮಾಣ ಮಾಡುತ್ತಿದೆ ಎಂದು ಹೇಳಿದ್ದರು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ ಎ) ಉತ್ತರ ಡೊಕ್ಲಾಮ್ ಎಂದು ಕರೆಯಲಾಗುವ ತೊರ್ಸಾ ನಾಲಾದ ಪಶ್ಚಿಮ ಭಾಗವನ್ನು ಅತಿಕ್ರಮಿಸಿದೆ. ಇದು ಉಭಯ ಕಡೆಗಳನ್ನು ಬೇರ್ಪಡಿಸುವ ಜಾಗ. ಇಲ್ಲಿ ಟೆಂಟುಗಳು ಉಳಿದಿವೆ. ವೀಕ್ಷಣಾ ಠಾಣೆಗಳು ಉಳಿದಿವೆ. ಇದು ಭೂತಾನ್ ಮತ್ತು ಚೀನಾ ನಡುವಣ ವಿವಾದಿತ ಪ್ರದೇಶ ಎಂದು ಸೇನಾ ಮುಖ್ಯಸ್ಥರು ಹೇಳಿದ್ದರು. ‘ಭಾರತದ ಕಡೆಯ ಟೀಕೆಗಳು ಭಾರತದ ಗಡಿ ಪಡೆಗಳು ಅಕ್ರಮವಾಗಿ ಅತಿಕ್ರಮಿಸಿದ್ದನ್ನು ತೋರಿಸುತ್ತಿರುವುದು ಸ್ಪಷ್ಟ ಎಂದು ವು ಹೇಳಿದರು. ‘ಡೊಂಗ್ಲಾಂಗ್ (ಡೊಕ್ಲಾಮ್) ಚೀನಾದ ಭಾಗ ಎಂದು ವು ಅವರು ಜನರಲ್ ರಾವತ್ ಅವರ ’ಡೊಕ್ಲಾಮ್ ಚೀನಾ ಮತ್ತು ಭೂತಾನ ನಡುವಣ ವಿವಾದಿತ ಪ್ರದೇಶ ಎಂಬ ಮಾತಿಗೆ ಪ್ರತಿಕ್ರಿಯಿಸುತ್ತಾ ನುಡಿದರು. ಭಾರತವು ೭೩ ದಿನಗಳ ಬಿಕ್ಕಟ್ಟಿನಿಂದ ಪಾಠ ಕಲಿತು ಭವಿಷ್ಯದಲ್ಲಿ ಇಂತಹ ಘಟನೆಗಳಾಗದಂತೆ ನೋಡಿಕೊಳ್ಳಬೇಕು ಎಂದು ಅವರು ನುಡಿದರು. ಚೀನೀ ಸೇನೆಯು ವಿವಾದಿತ ಪ್ರದೇಶದಲ್ಲಿ ರಸ್ತೆ ನಿರ್ಮಿಸಿದ್ದನ್ನು ಭಾರತೀಯ ಸೇನೆಯು ತಡೆದ ಬಳಿಕ ಜೂನ್ ೧೬ರಿಂದ ಊಭಯ ಸೇನೆಗಳ ಮಧ್ಯೆ ೭೩ ದಿನಗಳ ಕಾಲ ಪ್ರಕ್ಷುಬ್ಧತೆಯ ಸನ್ನಿವೇಶ ಸೃಷ್ಟಿಯಾಗಿತ್ತು. ಈ ಬಿಕ್ಕಟ್ಟು ಆಗಸ್ಟ್ ೨೮ರಂದು ಕೊನೆಗೊಂಡಿತ್ತು. ಭಾರತವು ನೆರೆಯ ದೇಶಗಳನ್ನು ತನ್ನ ಜೊತೆಗೆ ಕರೆದೊಯ್ಯಬೇಕು ಎಂಬ ಜನರಲ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವು, ’ಯಾವುದೇ ರಾಷ್ಟ್ರದ ಗಾತ್ರದ ಹೊರತಾಗಿಯೂ ಎಲ್ಲ ರಾಷ್ಟ್ರಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಎಂದು ನಾನು ಒತ್ತಿ ಹೇಳಬಯಸುತ್ತೇನೆ ಎಂದು ಎಂದರು. ಭಾರತದ್ದು ಶೀತಲ ಸಮರದ ಮನೋಭಾವ. ಚೀನಾ ಯಾವಾಗಲೂ ಇದನ್ನು ವಿರೋಧಿಸುತ್ತದೆ ಎಂದು ವು ನುಡಿದರು.
ನೇಪಾಳ, ಭೂತಾನ್, ಮ್ಯಾನ್ಮಾರ್, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಆಫ್ಘಾನಿಸ್ಥಾನದಂತಹ ರಾಷ್ಟ್ರಗಳನ್ನು ಚೀನಾ ಜೊತೆಗೆ ವ್ಯವಹರಿಸುವಲ್ಲಿ ಜೊತೆಯಾಗಿ ಇರಿಸಿಕೊಂಡು ಅವುಗಳಿಗೆ ಬೆಂಬಲ ನೀಡುವ ಯತ್ನವನ್ನು ಭಾರತ ಹೃತ್ಪೂರ್ವಕವಾಗಿ ಮುಂದುವರೆಸಬೇಕು ಎಂದು ರಾವತ್ ಹೇಳಿದ್ದರು. ಆಫ್ಘಾನಿಸ್ಥಾನದಲ್ಲಿ ಭಯೋತ್ಪಾದನೆ ನಿಗ್ರಹ ಅಥವಾ ಸೇನಾ ನೆಲೆ ಸ್ಥಾಪಿಸಲು ಚೀನಾ ಯೋಜಿಸಿದೆ ಎಂಬ ವರದಿಗಳನ್ನು  ಬುಡರಹಿತ ಎಂದು ವು ತಳ್ಳಿಹಾಕಿದರು.

2018: ನವದೆಹಲಿ: ಸಮಾನತೆ, ಜಾತ್ಯತೀತತೆ ಮತ್ತು ಮಿತ್ರತ್ವ ನಮ್ಮ ರಾಷ್ಟ್ರದ ಅಡಿಪಾಯ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಇಲ್ಲಿ ಹೇಳಿದರು. ೬೯ನೇ ಗಣರಾಜ್ಯೋತ್ಸವ ಮುನ್ನಾದಿನ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ, ’ಈದಿನ ನಾವು ರಾಷ್ಟ್ರಕ್ಕಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಬೇಕಾದ ದಿನ ಎಂದು ಹೇಳಿದರು. ಎಲ್ಲ ಸೇನಾ ಸಿಬ್ಬಂದಿ, ವೈದ್ಯರು, ರೈತರು, ಶುಶ್ರೂಷಕರು, ವಿಜ್ಞಾನಿಗಳು, ಎಂಜಿನಿಯರುಗಳು ಮತ್ತು ರಾಷ್ಟ್ರದ ತಾಯಂದಿರನ್ನು ನೆನೆದು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ ರಾಷ್ಟ್ರಪತಿ ’ಸಮಾನತೆ, ಜಾತ್ಯತೀತತೆ ಮತ್ತು ಮಿತ್ರತ್ವ ನಮ್ಮ ರಾಷ್ಟ್ರದ ಅಡಿಪಾಯ ಎಂದು ನುಡಿದರು. ರಾಷ್ಟ್ರಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿರುವ ಇನ್ನಷ್ಟು ಮಂದಿ ಇದ್ದಾರೆ. ಅವರೆಲ್ಲರನ್ನೂ ಇಲ್ಲಿ ಪ್ರಸ್ತಾಪಿಸಲು ಆಗಿಲ್ಲ, ಆದರೆ ಅವರೆಲ್ಲರ ಸೇವೆಗಾಗಿ ನಾನು ಧನ್ಯವಾದ ಅರ್ಪಿಸಲು ಬಯಸುತ್ತೇನೆ ಎಂದು ಕೋವಿಂದ್ ಹೇಳಿದರು. ರಾಷ್ಟ್ರದ ಸ್ವಾತಂತ್ರ್ಯ ಯೋಧರು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಮಾತ್ರವೇ ಹೋರಾಡಿಲ್ಲ, ಸಾಮಾಜಿಕ ಬದಲಾವಣೆಗಾಗಿಯೂ ಹೋರಾಡಿದ್ದಾರೆ. ಅವರು ಕಲಿಸಿದ ಪಾಠಗಳು ಪ್ರತಿಯೊಂದು ಕ್ಷೇತ್ರದಲ್ಲಿಯೂ ಈಗಲೂ ಪ್ರಸ್ತುತವಾಗಿದ್ದು ರಾಷ್ಟ್ರದ ಅಭಿವೃದ್ಧಿಗಾಗಿ ಶ್ರಮಿಸಲು ಪ್ರೇರಣೆ ನೀಡುತ್ತಿವೆ ಎಂದು ರಾಷ್ಟ್ರಪತಿ ನುಡಿದರು. ಶೇಕಡಾ ೬೦ಕ್ಕಿಂತ ಹೆಚ್ಚಿನ ಭಾರತೀಯರು ೩೫ ವರ್ಷಕ್ಕಿಂತ ಕೆಳಗಿನವರು. ಅವರು ನಮ್ಮ ದೇಶದ ಭವಿಷ್ಯವಾಗಿದ್ದಾರೆ. ಯುವಕರಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ ಸರ್ಕಾರ ವಿವಿಧ ಕಾರ್‍ಯಕ್ರಮಗಳನ್ನು ಆರಂಭಿಸಿದೆ. ಯುವಕರು ಇವುಗಳ ಲಾಭ ಪಡೆದುಕೊಳ್ಳಬೇಕು ಎಂದು ಕೋವಿಂದ್ ಕರೆ ನೀಡಿದರು. ರಾಷ್ಟ್ರದ ಮಕ್ಕಳ ಅಪೌಷ್ಟಿಕತೆ ನಮ್ಮ ಮುಂದಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದು. ಈ ನಿಟ್ಟಿನಲ್ಲಿ ಸಾಕಷ್ಟು ಸಾಧನೆ ಮಾಡಲಾಗಿದ್ದರೂ, ಮಾಡಬೇಕಾದುದು ಇನ್ನೂ ಬಹಳಷ್ಟಿದೆ ಎಂದು ಅವರು ಹೇಳಿದರು. ಸ್ವಾರ್ಥ ರಹಿತರು ನಿಸ್ವಾರ್ಥ ರಾಷ್ಟ್ರವನ್ನು ನಿರ್ಮಿಸಬಲ್ಲರು. ನಮ್ಮ ರಾಷ್ಟ್ರದಲ್ಲಿ ನಾವು ಇತರರಿಗಾಗಿ ನೆರವಾಗಲು ಸದಾ ಸಿದ್ಧರಾಗಿದ್ದೇವೆ. ಅಗತ್ಯ ಬಿದ್ದಾಗ ರಕ್ತಕೊಡಲೂ ಹಿಂಜರಿಯುವುದಿಲ್ಲ ಎಂದು ರಾಷ್ಟ್ರಪತಿ ನುಡಿದರು. ನಮ್ಮ ಸಮಾಜವು ಪರಸ್ಪರ ಸಹಕರಿಸುವ ತತ್ವದ ಮೇಲೆ ನಿಂತಿದೆ. ವಿದೇಶಗಳಲ್ಲಿನ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದಾಗ ನಾವು ಅವರಿಗಾಗಿ ಸಹಾಯ ಹಸ್ತ ಚಾಚುತ್ತೇವೆ ಎಂದು ಕೋವಿಂದ್ ಹೇಳಿದರು. ನಾವು ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಪೂರ್ಣ ಶಕ್ತಿಯೊಂದಿಗೆ ದುಡಿಯಬೇಕು ಎಂದು ರಾಷ್ಟ್ರಪತಿ ಹೇಳಿದರು. ಪದ್ಮಾವತ್ ಪ್ರತಿಭಟನೆಗೆ ಟೀಕೆ: ವಿವಾದಾತ್ಮಕ ಹಿಂದಿ ಚಲನಚಿತ್ರ ’ಪದ್ಮಾವತ್ ಚಿತ್ರದ ವಿರುದ್ಧ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ರಾಷ್ಟ್ರಪತಿ ತರಾಟೆಗೆ  ತೆಗೆದುಕೊಂಡರು. ’ಒಪ್ಪಕೊಳ್ಳದಿರುವಿಕೆಯ ಸಹ ನಾಗರಿಕರ ಘನತೆಯನ್ನು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಅಣಕಿಸಬಾರದು ಎಂದು ಅವರು ನುಡಿದರು. ಪೌರ ಮನೋಭಾವದ ರಾಷ್ಟ್ರವು ನಮ್ಮ ನಗರಗಳಲ್ಲಾಗಲೀ, ಹಳ್ಳಿಗಳಲ್ಲಾಗಲೀ ಪೌರ ಮನೋಭಾವದ ನೆರೆಹೊರೆ ಬಾಂಧವ್ಯದಿಂದ ನಿರ್ಮಿಸಲ್ಪಡುತ್ತದೆ. ಇಂತಹ ಕಡೆಗಳಲ್ಲಿ ನಾವು ನೆರಮನೆಯ ವ್ಯಕ್ತಿಯ ಸ್ವಾತಂತ್ರ್ಯ, ಖಾಸಗಿತನ ಮತ್ತು ಹಕ್ಕುಗಳನ್ನು ಗೌರವಿಸುತ್ತೇವೆ. ನಮ್ಮ ಉತ್ಸವ ಆಚರಿಸುವಾಗ ಅಥವಾ ಯಾವುದೇ ಪ್ರತಿಭಟನೆ ನಡೆಸುವಾಗ ಅಥವಾ ಬೇರಾವುದೇ ಸಂದರ್ಭದಲ್ಲಿ ನಮ್ಮ ನೆರೆಹೊರೆಯವರಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ರಾಷ್ಟ್ರಪತಿ ನುಡಿದರು. ‘ಬೇರೆಯವರ ಅಭಿಪ್ರಾಯಗಳನ್ನು ನಾವು ಒಪ್ಪದೇ ಇರುವಾಗ, ಚಾರಿತ್ರಿಕ ವಿಚಾರಗಳ ಸಂದರ್ಭಗಳಲ್ಲಿ ಕೂಡಾ, ಸಹ ನಾಗರಿಕನ ಘನತೆಯನ್ನು, ವೈಯಕ್ತಿಕ ಸ್ವಾತಂತ್ರ್ಯವನ್ನು ಅಣಕಿಸುವುದಿಲ್ಲ. ಇದು ನಮ್ಮ ಭ್ರಾತೃತ್ವದ ವರ್ತನೆ ಎಂದು ಅವರು ಹೇಳಿದರು.   ಅಸಿಯಾನ್ ಮುಖ್ಯಸ್ಥರಿಗೆ ಸ್ವಾಗತ: ಇದಕ್ಕೆ ಮುನ್ನ ರಾಷ್ಟ್ರಪತಿಯವರು ರಾಷ್ಟ್ರಪತಿ ಭವನಕ್ಕೆ ಅಸಿಯಾನ್ ಮುಖ್ಯಸ್ಥರನ್ನು ಸ್ವಾಗತಿಸಿ ಅವರಿಗಾಗಿ ಭೋಜನಕೂಟ ಏರ್ಪಡಿಸಿದ್ದರು. ಭಾರತವು ೧೯೯೨ರ ಜನವರಿ ೨೮ರಿಂದ ಅಸಿಯಾನ್ ಜೊತೆಗೆ ಬಾಂಧವ್ಯ ಇಟ್ಟುಕೊಂಡಿದೆ. ಇಂದು ಅಸಿಯಾನ್ ಭಾರತದ ಮಟ್ಟಿಗೆ ಆಯಕಟ್ಟಿನ ಪಾಲುದಾರ. ಭಾರತ ಮತ್ತು ಅಸಿಯಾನ್ ಮಧ್ಯೆ ವಾರ್ಷಿಕ ಶೃಂಗಸಭೆ ಮತ್ತು ೭ ಸಚಿವಾಲಯ ಮಟ್ಟದ ಮಾತುಕತೆಗಳು ಸೇರಿದಂತೆ ನಾವು ೩೦ ಸಂವಹನ  ವ್ಯವಸ್ಥೆಗಳನ್ನು ಹೊಂದಿದ್ದೇವೆ ಎಂದು ರಾಷ್ಟ್ರಪತಿ ಹೇಳಿದರು.

2017: ನವದೆಹಲಿ: ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ 2017 ಸಾಲಿನ ಪದ್ಮ ಪ್ರಶಸ್ತಿಗಳು
ಪ್ರಕಟಗೊಂಡವು. ಕರ್ನಾಟಕದ 7 ಮಂದಿ ಸಾಧಕರಿಗೆ “ಪದ್ಮ’ ಪ್ರಶಸ್ತಿ ಗೌರವ ಲಭಿಸಿತು. ಪದ್ಮ ವಿಭೂಷಣ ಪ್ರಶಸ್ತಿಗೆ ಕರ್ನಾಟಕದ ಪ್ರೊ.ಉಡುಪಿ ರಾಮಚಂದ್ರ ರಾವ್ ಅವರು (ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದ ಸಾಧನೆ) ಪಾತ್ರರಾದರು. ಚಿತ್ರನಟಿ ಭಾರತಿ (ಕಲೆ- ಸಿನಿಮಾ), ಸುಕ್ರಿ ಬೊಮ್ಮಗೌಡ (ಸಂಗೀತ), ಪ್ರೊ. ಜಿ. ವೆಂಕಟಸುಬ್ಬಯ್ಯ (ಸಾಹಿತ್ಯ, ಶಿಕ್ಷಣ) , ಗಿರೀಶ್ ಭಾರದ್ವಾಜ್ (ಸಮಾಜ ಸೇವೆ), ಶೇಖರ ನಾಯ್ಕ್ (ಕ್ರಿಕೆಟ್), ವಿಕಾಸ್ ಗೌಡ (ಡಿಸ್ಕಸ್ ಥ್ರೋ) ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.  ಗಾಯಕ ಯೇಸುದಾಸ್ (ಸಂಗೀತ), ಸದ್ಗುರು ಜಗ್ಗಿ ವಾಸುದೇವ್ (ಅಧ್ಯಾತ್ಮ), ಶರದ್ ಪವಾರ್, ಮುರಳಿ ಮನೋಹರ ಜೋಷಿ (ಸಾರ್ವಜನಿಕ ವ್ಯವಹಾರ), ದಿವಂಗತ ಸುಂದರ ಲಾಲ್ ಪಟ್ವಾ (ಮರಣೋತ್ತರ), ಪಿ. ಸಂಗ್ಮಾ (ಮರಣೋತ್ತರ) ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾದರು. ಒಟ್ಟು 89 ಮಂದಿಯನ್ನು ಪ್ರಸ್ತುತ ಸಾಲಿನಪದ್ಮಪ್ರಶಸ್ತಿಗಳಿಗಾಗಿ ಆಯ್ಕೆ ಮಾಡಲಾಗಿದ್ದು, ತಲಾ 7 ಮಂದಿಗೆ ಪದ್ಮ ವಿಭೂಷಣ ಮತ್ತು ಪದ್ಮ ಭೂಷಣ ಪ್ರಶಸ್ತಿ ಲಭಿಸಿತು. 75 ಮಂದಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದರು.. ಪ್ರಶಸ್ತಿ ಪುರಸ್ಕೃತರಲ್ಲಿ 19 ಮಂದಿ ಮಹಿಳೆಯರಾಗಿದ್ದು, ಐವರು ವಿದೇಶೀಯರು. 6 ಮಂದಿಗೆ ಮರಣೋತ್ತರ ಪ್ರಶಸ್ತಿ ನೀಡಲಾಯಿತು.
2017: ನವದೆಹಲಿ: ಎಲ್ಲೂ ಪ್ರಚಾರಕ್ಕೆ ಬಾರದ ಅತ್ಯಂತ ಮಹತ್ವದ ಸಮಾಜ ಸೇವಾ
ಕಾರ್ಯಗಳನ್ನು ಮಾಡಿದ ಅಪರಿಚಿತ ವ್ಯಕ್ತಿಗಳನ್ನು ಗುರುತಿಸಿ 2017ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತು. ಪದ್ಮಶ್ರೀ ಪಟ್ಟಿಯಲ್ಲಿ ಒಲಿಂಪಿಯನ್ ದೀಪಾ ಕರ್ಮಾಕರ್, ಪ್ಯಾರಾಲಿಂಪಿಕ್ ಸ್ವರ್ಣ ಪದಕ ವಿಜೇತ ಮರಿಯಪ್ಪನ್ ತಂಗವೇಲು, ಇಂದೋರಿನ ಭಕ್ತಿ ಯಾದವ್ ಮತ್ತು ಏಡ್ಸ್ ವಿರುದ್ಧ ಸಮರ ಸಾರಿದ ಸುನೀತಿ ಸೊಲೊಮನ್, ಕರ್ನಾಟಕದ ಪುಟ್ಟ ಪುಟ್ಟ ಗ್ರಾಮಗಳಲ್ಲಿ ಕಡಿಮೆ ವೆಚ್ಚದ ಸೇತುವೆಗಳನ್ನು ನಿರ್ಮಿಸಿದ ಎಂಜಿನಿಯರ್ ಗಿರೀಶ ಭಾರದ್ವಾಜ್ (66) ಸೇರಿದರು. ದೀಪಾ ಕರ್ಮಾಕರ್ ಅವರು 2016 ಒಲಿಂಪಿಕ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಿದ ಪ್ರಪ್ರಥಮ ಮಹಿಳಾ ಜಿಮ್ನಾಸ್ಟ್ ಆಗಿದ್ದು, ಗೆಲ್ಲಲಾಗದಿದ್ದರೂ ಅಪೂರ್ವ ಹೋರಾಟ ನೀಡಿ ಜನಮನದಲ್ಲಿ ಚಿರಸ್ಥಾಯಿಯಾದವರು. ಮರಿಯಪ್ಪನ್ ತಂಗವೇಲು ಪ್ಯಾರಾಲಿಂಪಿಕ್ ಹೈಜಂಪರ್ ಆಗಿದ್ದು 2016 ರಿಯೋಡಿಜನೈರೋ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕ ತಂದಿದ್ದರು. ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿರುವ ಮಧ್ಯಪ್ರದೇಶದ ಇಂದೋರಿನ ಸ್ತ್ರೀ ತಜ್ಞೆ ಭಕ್ತಿ ಯಾದವ್ (91) ‘ಡಾಕ್ಟರ್ ದಾದಿಎಂಬುದಾಗಿ ಪರಿಚಿತರಾಗಿದ್ದರೆ, ತಮಿಳುನಾಡಿನ ಸುನೀತಿ ಸೊಲೊಮನ್ (76) ಭಾರತದಲ್ಲಿ ಏಡ್ಸ್ ಪತ್ತೆ ಹೆಚ್ಚಿದ ಮೊದಲಿಗರಾಗಿದ್ದು ಏಡ್ಸ್ ವಿರುದ್ಧದ ತಮ್ಮ ಸಮರಕ್ಕಾಗಿ ಖ್ಯಾತರಾದವರು. ಪದ್ಮ ಪ್ರಶಸ್ತಿ ಪಡೆದ ಇತರರು: ಮೀನಾಕ್ಷಿ ಅಮ್ಮ (68) ಅತ್ಯಂತ ಹಿರಿಯ ಮಹಿಳಾ ಖಳರಿಪಟು (ಮಾರ್ಷಲ್ ಆರ್ಟ್) ಕೇರಳ, ಚಿಂತಕಿಂಡಿ ಮಲ್ಲೇಶಂ (44), ಲಕ್ಷ್ಮಿ .ಎಸ್.ಯು ಮೆಷಿನ್ ಸಂಶೋಧಕ, ತೆಲಂಗಾಣ, ದಾರಿಪಲ್ಲಿ ರಾಮಯ್ಯ (68), ಒಂದು ಕೋಟಿ ಮರನೆಟ್ಟ ವೀರ, ತೆಲಂಗಾಣ, ಬಿಪಿನ್ ಗಣತ್ರ (59) ಅಗ್ನಿ ದುರಂತವಾದಲ್ಲೆಲ್ಲ ಧಾವಿಸಿ ರಕ್ಷಿಸಿದ ವ್ಯಕ್ತಿ, ಪಶ್ಚಿಮ ಬಂಗಾಳ, ಡಾ. ಸುಬ್ರತೊ ದಾಸ್ (51) ಹೆದ್ದಾರಿ ದುರಂತದ ಆಪದ್ಬಾಂಧವ, ಗುಜರಾತ್, ಇಕೋಬಾಬಾ ಎಂದೇ ಖ್ಯಾತರಾದ ಬಲಬೀರ್ ಸಿಂಗ್ ಸೀಚೆವಾಲ್ (51) ಪಂಜಾಬಿನ ಕಾಳಿಬೀನ್ ನದಿಯಲ್ಲಿ ಮತ್ತೆ ನೀರು ಹರಿಸಿದ ವ್ಯಕ್ತಿ, ಪಂಜಾಬ್, ಅನೂರಾಧಾ ಕೊಯಿರಾಲ (67) ಮೈಥಿ ನೇಪಾಳ (ಮದರ್ಸ್ ಹೋಮ್ ಸ್ಥಾಪಕಿ, ಲೈಂಗಿಕ ಶೋಷಿತ ಮಹಿಳೆಯರ ರಕ್ಷಕಿ, ನೇಪಾಳ.
2017: ನವದೆಹಲಿ: ಗಣರಾಜ್ಯ ದಿನದ ಪರೇಡ್ ಸಂದರ್ಭದಲ್ಲಿ ಭಯೋತ್ಪಾದಕರು ವಾಯು ದಾಳಿ
ನಡೆಸುವ ಸಾಧ್ಯತೆಗಳು ಇರುವ ಬಗ್ಗೆ ಗುಪ್ತಚರ ದಳ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ಜನವರಿ 26ರಂದು ಸಹಸ್ರಾರು ಪೊಲೀಸರು ಮತ್ತು ಅರೆಸೇನಾ ಪಡೆಗಳು ಸಂಭಾವ್ಯ ವಾಯುದಾಳಿ ಹಿಮ್ಮೆಟ್ಟಿಸಲು ವಿಶೇಷ ಗಮನ ನೀಡಿ ಕಟ್ಟೆಚ್ಚರ ವಹಿಸಲಿವೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಸಶಸ್ತ್ರ ಪಡೆಗಳ ಮಹಾದಂಡ ನಾಯಕರಾಗಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಷ್ಟ್ರದ ಸೇನಾ ಪಡೆಗಳ ಪರೇಡ್ ವೀಕ್ಷಿಸಲಿರುವ ಚಾರಿತ್ರಿಕ ರಾಜಪಥದಲ್ಲಿ ಅತ್ಯಂತ ವಿಶೇಷ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಸುದ್ದಿ ಮೂಲಗಳು ಹೇಳಿದವು.  ಸಂಪೂರ್ಣ ಕೇಂದ್ರ ಮತ್ತು ನವದೆಹಲಿ ಪ್ರದೇಶದಲ್ಲಿ ಗಣರಾಜ್ಯ ದಿನದಂದು ದೆಹಲಿ ಪೊಲೀಸ್ ಪಡೆ ಮತ್ತು ಕೇಂದ್ರೀಯ ಭದ್ರತಾ ಪಡೆಗಳಿಂದ ಆರಿಸಲಾದ ಸುಮಾರು 50,000 ಮಂದಿ ಭದ್ರತಾ ಸಿಬ್ಬಂದಿ ರಾಜಧಾನಿಯ ಮೂಲೆ ಮೂಲೆಗಳಲ್ಲು ಕಣ್ಗಾವಲು ಇಡಲಿದ್ದಾರೆ ಎಂದು ಸುದ್ದಿಮೂಲಗಳು ಹೇಳಿವದವು.  ಲಷ್ಕರ್ --ತೊಯಿಬಾದಂತಹ ಭಯೋತ್ಪಾದಕ ಸಂಘಟನೆಗಳು ದಾಳಿಗೆ ಹೆಲಿಕಾಪ್ಟರ್ ಚಾರ್ಟರ್ ಸೇವೆ ಮತ್ತು ಚಾರ್ಟರ್ ವಿಮಾನಗಳನ್ನು ಬಳಸುವ ಸಾಧ್ಯತೆಗಳಿವೆ ಎಂಬುದಾಗು ಗುಪ್ತಚರ ಮೂಲಗಳು ತಿಳಿಸಿದವು. ಹಿನ್ನೆಲೆಯಲ್ಲಿ ಯಾವುದೇ ದಾಳಿಯನ್ನು ವಿಫಲಗೊಳಿಸಲು ಅಥವಾ ಅನುಮಾನಾಸ್ಪದ ಹಾರುವ ವಸ್ತುವನ್ನು ಗುರುತಿಸಲು ಡ್ರೋಣ್ -ನಿರೋಧಿ ತಂತ್ರಜ್ಞಾನವನ್ನು ಪೊಲೀಸರು ಬಳಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
2017: ನವದೆಹಲಿ: ಆಯಕಟ್ಟಿನ ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದ ಸೇರಿದಂತೆ 13 ಒಪ್ಪಂದಗಳಿಗೆ
ಭಾರತ ಮತ್ತು ಯುಎಇ  ಇಲ್ಲಿ ಸಹಿ ಹಾಕಿದವು. ತಮ್ಮ ಹಾಗೂ ಅಬುಧಾಬಿಯ ಯುವರಾಜ ಮೊಹಮ್ಮದ್ ಬಿನ್ ಜಯೀದ್ ಅಲ್ ನಹ್ಯನ್ ಸಮ್ಮುಖದಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಗಳ ವಿನಿಮಯ ಮಾಡಿಕೊಂಡ ಬಳಿಕ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರುಇಂಧನ ಬಾಂಧವ್ಯವನ್ನು ಆಯಕಟ್ಟಿನ ಬಾಂಧವ್ಯವಾಗಿ ಪರಿವರ್ತಿಸುವ ವಿಚಾರ ಯುವರಾಜ ಮೊಹಮ್ಮದ್ ಬಿನ್ ಜಯೀದ್ ಅಲ್ ನಹ್ಯನ್ ಜೊತೆಗಿನ ಚರ್ಚೆಯಲ್ಲಿ ಒಳಗೊಂಡಿತ್ತುಎಂದು ಹೇಳಿದರು. ಉಗ್ರವಾದ ಮತ್ತು ಭಯೋತ್ಪಾದನೆ ಹೆಚ್ಚಳದಿಂದಾಗಿ ಹೆಚ್ಚುತ್ತಿರುವ ಅಪಾಯ ಬಗ್ಗೆ ಉಭಯ ರಾಷ್ಟ್ರಗಳೂ ಕಳವಳ ಹಂಚಿಕೊಂಡಿದ್ದು, ಮಾತುಕತೆಯು ರಕ್ಷಣಾ ಕ್ಷೇತ್ರದಲ್ಲಿ ಸಹಕಾರವರ್ಧನೆಗೆ ಬುನಾದಿ ಹಾಕಿದೆ ಎಂದು ಪ್ರಧಾನಿ ನುಡಿದರು. ರಕ್ಷಣಾ ಸಹಕಾರ ಕುರಿತ ತಿಳಿವಳಿಕೆ ಪತ್ರವು ನಮ್ಮ ರಕ್ಷಣಾ ಬಾಂಧವ್ಯವನ್ನು ಸರಿಯಾದ ದಿಕ್ಕಿನತ್ತ ಒಯ್ಯಲು ನೆರವಾಗಲಿದೆ ಎಂದು ನುಡಿದ ಮೋದಿ, ಭಾರತ ಮತ್ತು ಯುಎಇ ನಡುವಣ ನಿಕಟ ಬಾಂಧವ್ಯಗಳು ಉಭಯ ರಾಷ್ಟ್ರಗಳಿಗೆ ಮಾತ್ರವಲ್ಲ ಸಂಪೂರ್ಣ ನೆರೆಹೊರೆಗೆ ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ಹೇಳಿದರು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು,
ಸೋನಮಾರ್ಗದಲ್ಲಿರುವ ಸೇನಾ ಶಿಬಿರ ಮತ್ತು ಗುರೆಜ್ ಸೆಕ್ಟರ್ನಲ್ಲಿ ಮನೆಯೊಂದರ ಮೇಲೆ ಹಿಮಕುಸಿತವಾಗಿ, ಓರ್ವ ಸೇನಾ ಅಧಿಕಾರಿ ಸೇರಿ 5 ಜನರು ಮೃತರಾದರು. 8 ಯೋಧರನ್ನು ರಕ್ಷಿಸಲಾಯಿತು. ಈದಿನ  ಬೆಳಗ್ಗೆ ಸೇನಾ ಶಿಬಿರದ ಮೇಲೆ ಹಿಮ ಕುಸಿಯಿತು. ಶಿಬಿರದಲ್ಲಿದ್ದ ಹಲವು ಯೋಧರು ಕಣ್ಮರೆಯಾದರು. ಗಡಿ ನಿಯಂತ್ರಣ ರೇಖೆ ಬಳಿಯ ಗುರೆಜ್ ಸೆಕ್ಟರ್ ಬಡೋಗಾಮ್ ಗ್ರಾಮದಲ್ಲಿ ಬೆಳಗಿನ ಜಾವ ಮನೆಯೊಂದರ ಮೇಲೆ ಹಿಮ ಕುಸಿದು, ಒಂದೇ ಕುಟುಂಬದ ನಾಲ್ವರು ಮೃತರಾದರು. ಮೃತರನ್ನು ಲೋನಿ (55), ಆತನ ಪತ್ನಿ ಅಜೀಜಿ (50), ಮಗ ಇರ್ಫಾನ್ (22) ಮತ್ತು ಮಗಳು ಗುಲ್ಶನ್ (19) ಎಂದು ಗುರುತಿಸಲಾಯಿತು.  ಹಿಮದಡಿ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಲೋನಿಯ ಮತ್ತೋರ್ವ ಮಗ ರಿಯಾಜ್ ಅಹಮದ್ನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.  ಕಣಿವೆ ರಾಜ್ಯದಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಹಲವು ಪ್ರದೇಶಗಳಲ್ಲಿ ಹಿಮ ಕುಸಿತವಾಗುವ ಸಾಧ್ಯತೆ ಇದೆ ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತು. ಜತೆಗೆ ಪರ್ವತಗಳ ತಪ್ಪಲಿನಲ್ಲಿ ಇರುವವರು ಸ್ಥಳಾಂತರಗೊಳ್ಳುವಂತೆ ಸೂಚಿಸಿತು. ಜತೆಗೆ ತುರ್ತು ಸಂದರ್ಭದಲ್ಲಿ ಕಾರ್ಯ ಪ್ರವೃತ್ತರಾಗಲು ರಕ್ಷಣಾ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಯಿತು. ಉಧಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿತು.
2017: ನವದೆಹಲಿ: ಎರಡು ದಿನಗಳ ಹಿಂದೆ ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ನೂತನ
ಜಲ್ಲಿಕಟ್ಟು ಕಾನೂನನ್ನು ಪ್ರಶ್ನಿಸಿ ಮತ್ತೆ ಪ್ರಾಣಿಗಳ ಹಕ್ಕುಗಳ ಕಾರ್ಯಕರ್ತರು ಮತ್ತೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಹೊಸ ಕಾನೂನು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿರುವುದರಿಂದ ಅದನ್ನು ಅನೂರ್ಜಿತಗೊಳಿಸಬೇಕು ಮತ್ತು ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಬೇಕು ಎಂದು ಮನವಿಯಲ್ಲಿ ಕೋರಲಾಯಿತು. ಸುಪ್ರೀಂಕೋರ್ಟ್ ಜ.30ರಂದು  ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿತು.  ಜಲ್ಲಿಕಟ್ಟು ಕ್ರೀಡೆಯನ್ನು ಬೆಂಬಲಿಸಿ ಲಕ್ಷಾಂತರ ಮಂದಿ ಮರೀನಾ ಬೀಚ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಗೆ ಹಿನ್ನೆಲೆಯಲ್ಲಿ ಮನವಿ ಸಲ್ಲಿಸಿದ ತಮಿಳುನಾಡು ಬಳಿಕ ಕಳುಹಿಸಿಕೊಟ್ಟ ಸುಗ್ರೀವಾಜ್ಞೆಗೆ ಕೇಂದ್ರ ಒಪ್ಪಿಗೆ ನೀಡಿತ್ತು. ತಮಿಳುನಾಡು ರಾಜ್ಯಪಾಲರು ಸಹಿ ಹಾಕಿ ಸುಗ್ರೀವಾಜ್ಞೆ ಜಾರಿಗೊಳಿಸಿದರೂ ಹೋರಾಟ ನಿಲ್ಲದೇ ಇದ್ದಾಗ ಸರ್ಕಾರ ಜಲ್ಲಿ ಕಟ್ಟು ಮಸೂದೆಯನ್ನು ವಿಧಾನ ಮಂಡಲದಲ್ಲಿ ಮಂಡಿಸಿತ್ತು. ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ವಿಧಾನಸಭೆಯು ಮಸೂದೆಯನ್ನು ಅಂಗೀಕರಿಸುವ ಮುನ್ನ ಮರೀನಾ ಬೀಚ್ನಲ್ಲಿ ಹೋರಾಟ ನಡೆಸುತ್ತಿದ್ದ ಪ್ರದರ್ಶನಕಾರರನ್ನು ಬಲವಂತವಾಗಿ ತೆರವುಗೊಳಿಸಲು ಪೊಲೀಸರು ಯತ್ನಿಸಿದ್ದರು. ಪರಿಣಾಮವಾಗಿ 6 ದಿನಗಳ ಕಾಲ ನಡೆದ ಶಾಂತಿಯುತ ಹೋರಾಟ ಹಿಂಸೆಗೆ ತಿರುಗಿ ಹಲವರು ಗಾಯಗೊಂಡದ್ದಲ್ಲದೆ, ಹಲವಾರು ವಾಹನಗಳು ಅಗ್ನಿಗಾಹುತಿಯಾಗಿದ್ದವು.
2017: ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು 52ನೇಘಟಿಕೋತ್ಸವದ  ಅಂಗವಾಗಿ ತಮಗೆ
ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್ಪದವಿಯನ್ನು ನಯವಾಗಿ ನಿರಾಕರಿಸಿದ ಮಾಜಿ ಕ್ರಿಕೆಟಿಗ ರಾಹುಲ್ದ್ರಾವಿಡ್ಸಂಶೋಧನೆ ಮಾಡಿಯೇ ಡಾಕ್ಟರೇಟ್ಪಡೆಯುವುದಾಗಿ ತಿಳಿಸಿದರು. ದಶಕಗಳಿಗೂ ಹೆಚ್ಚುಕಾಲ ಭಾರತೀಯ ಕ್ರಿಕೆಟ್ತಂಡದಲ್ಲಿ ಆಡಿದ್ದ ರಾಹುಲ್ಭಾರತ ಕ್ರಿಕೆಟ್ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಸಾಧನೆಯನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯ ಜನವರಿ 27ರಂದು ನಡೆಯುವ ಘಟಿಕೋತ್ಸವ ಕಾರ್ಯಕ್ರಮದಲ್ಲಿ ದ್ರಾವಿಡ್ಅವರಿಗೆ ಗೌರವ ಡಾಕ್ಟರೇಟ್ನೀಡಲು ನಿರ್ಧರಿಸಿತ್ತು. ದ್ರಾವಿಡ್ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್ಪಡೆಯಲಿರುವ ಬೆಂಗಳೂರು ಮೂಲದ ಎರಡನೇ ಕ್ರಿಕೆಟಿಗ ಎನಿಸಿದ್ದರು. ಮೊದಲು ಭಾರತ ಕ್ರಿಕೆಟ್ತಂಡದ ಮಾಜಿ ಆಟಗಾರ ಗುಂಡಪ್ಪ ವಿಶ್ವನಾಥ್ಅವರು 2013ರಲ್ಲಿ ವಿವಿಯ ಗೌರವ ಡಾಕ್ಟರೇಟ್ಸ್ವೀಕರಿಸಿದ್ದರು
2017: ಪಣಜಿ: ಗೋವಾದ ಸದಾ ಸಬ್ ಜೈಲಿನಲ್ಲಿ ಸುಮಾರು 49 ಕೈದಿಗಳು ಅಧಿಕಾರಿಗಳು ಮತ್ತು ಇತರ ಕೈದಿಗಳನ್ನು ಒತ್ತೆಯಾಳಾಗಿಸಿಕೊಂಡು ಜೈಲಿನಿಂದ ತಪ್ಪಿಸಿಕೊಳ್ಳುವ ಯತ್ನ ವಿಫಲಗೊಂಡಿದ್ದು, ಘಟನೆಯಲ್ಲಿ ಓರ್ವ ಕೈದಿ ಮೃತನಾಗಿ, ಜೈಲರ್ ಸೇರಿದಂತೆ 13 ಜನರು ಗಾಯಗೊಂಡರು. ಹಿಂದಿನ ದಿನ ರಾತ್ರಿ 11 ಗಂಟೆ ಸುಮಾರಿಗೆ 49 ಕೈದಿಗಳು ಇಡೀ ಜೈಲನ್ನು ತಮ್ಮ ವಶಕ್ಕೆ ತೆಗೆದುಕ್ಳೊಲು ಪಯತ್ನಿಸಿದರು. ಸಂದರ್ಭದಲ್ಲಿ ಕೈದಿಗಳು ಜೈಲರ್ ಸೇರಿದಂತೆ ಜೈಲಿನ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು. ಜತೆಗೆ ಇತರ ಕೈದಿಗಳ ಮೇಲೂ ಸಹ ಹಲ್ಲೆ ನಡೆಸಿದರು, ಮತ್ತು ಜೈಲಿನಲ್ಲಿನ ವಸ್ತುಗಳನ್ನು ಪುಡಿಗಟ್ಟಿದರು.. ಸಂದರ್ಭದಲ್ಲಿ ಉಂಟಾದ ಗಲಿಬಿಲಿಯಲ್ಲಿ ವಿನಾಯಕ್ ಕೋರ್ಬಟ್ಕರ್ ಎಂಬ ಕೈದಿಯನ್ನು ಹತ್ಯೆ ಮಾಡಲಾಯಿತು. ಕೈದಿಗಳು ಜೈಲಿನ ಭದ್ರತಾ ವ್ಯವಸ್ಥೆಯನ್ನು ದಾಟಿ ಮೇನ್ ಗೇಟ್ ಬಳಿಗೆ ಧಾವಿಸಿದ್ದರು. ಆದರೆ ಸಂದರ್ಭಕ್ಕೆ ಅಲ್ಲಿಗೆ ಆಗಮಿಸಿದ್ದ ಹೆಚ್ಚುವರಿ ಪೊಲೀಸರು ಕೈದಿಗಳನ್ನು ತಡೆದು ಪರಿಸ್ಥಿತಿಯನ್ನು ತಹಬದಿಗೆ ತಂದಿದ್ದಾರೆ. ಘಟನೆಯಲ್ಲಿ ಜೈಲರ್ ವಿಟ್ಟಲ್ ಗವಾಸ್, ಇಬ್ಬರು ಗಾರ್ಡ್ಗಳು ಮತ್ತು 9 ಕೈದಿಗಳಿಗೆ ಗಾಯಗಳಾಗಿವೆ. ಜೈಲಿಗೆ ಅಪಾರ ಪ್ರಮಾಣದ ಹಾನಿಯಾಗಿರುವುದರಿಂದ ಕೈದಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಕಾರಾಗೃಹ ಇಲಾಖೆ ಹೆಚ್ಚುವರಿ ಐಜಿ ಸಿದ್ದಿವಿನಾಯಕ ನಾಯಕ್ ತಿಳಿಸಿದರು.
2009: ಹಲವು ಔಷಧೀಯ ಗುಣಗಳನ್ನು ಹೊಂದಿರುವ ಗೋಮೂತ್ರದ ಅಧಿಕ ಉತ್ಪಾದನೆಗಾಗಿ ಉತ್ತರಾಖಂಡ ಸರ್ಕಾರವು ರಾಜ್ಯದ ಎಲ್ಲೆಡೆ 100 ಗೋಮೂತ್ರ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಯಿತು. ಇದರಿಂದ ಪಶುಸಂಗೋಪನೆಯಲ್ಲಿ ತೊಡಗಿದ ರೈತರು ಗೋಮೂತ್ರ ಮಾರಾಟ ಮಾಡಿ ಹಣ ಗಳಿಸಲು ಅವಕಾಶ ಲಭಿಸಿತು. 'ಗೋಮೂತ್ರದಿಂದ ಔಷಧ ತಯಾರಿ ಮಾಡುವ ಹಾಗೂ ಅವುಗಳನ್ನು ಇತರ ರಾಜ್ಯಗಳಿಗೆ ಕಳುಹಿಸಿಕೊಡುವ ಯೋಜನೆಗೆ ರಾಜ್ಯ ಸರ್ಕಾರ ಅಂತಿಮ ಸ್ಪರ್ಶ ನೀಡುತ್ತಿದೆ' ಎಂದು ಪಶುಸಂಗೋಪನೆ ಮತ್ತು ಕೃಷಿ ಸಚಿವ ತ್ರಿವೇಂದ್ರ ರಾವತ್ ಹೇಳಿದರು. ರಾಜ್ಯದ ಹಲವೆಡೆ ಈಗಾಗಲೇ ಇಂತಹ ಕೇಂದ್ರಗಳು ಆರಂಭವಾಗಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರವು ಈ ನಿಟ್ಟಿನಲ್ಲಿ ಆಯುರ್ವೇದ ವೈದ್ಯರನ್ನೂ ಸಂಪರ್ಕಿಸಿ ಸೂಕ್ತ ಸಲಹೆ ಸೂಚನೆ ಪಡೆದು ಕೇಂದ್ರಗಳ ಸ್ಥಾಪನೆಗೆ ಗಂಭೀರ ಪ್ರಯತ್ನ ನಡೆಸಿದೆ ಎಂದು ಅವರು ತಿಳಿಸಿದರು.

2009: ನವದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಪಾಕಿಸ್ಥಾನಿ ಉಗ್ರರು ನೊಯಿಡಾದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಪೊಲೀಸರ ಗುಂಡಿಗೆ ಬಲಿಯಾದರು.

2009: ಲಾಹೋರಿನ ಮುರ್ದಿಕೆಯಲ್ಲಿ ಲಷ್ಕರ್ -ಎ-ತೊಯ್ಬಾದ ಧಾರ್ಮಿಕ ಘಟಕ ಜಮಾತ್ ಉದ್-ದಾವಾದ (ಜೆಯುಡಿ) ಪ್ರಧಾನ ಕಚೇರಿಯನ್ನು ಪಾಕಿಸ್ಥಾನ ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡಿತು. ಇತ್ತೀಚೆಗೆ ತಾನೆ ಪಾಕಿಸ್ಥಾನದ ಪಂಜಾಬಿನ ಪ್ರಾಂತೀಯ ಸರ್ಕಾರದಿಂದ ಮುಖ್ಯ ಆಡಳಿತಗಾರರಾಗಿ ನೇಮಕಗೊಂಡ ಖಕನ್ ಬಾಬರ್ ಅವರು ಜೆಯುಡಿ ಕೇಂದ್ರ ಕಚೇರಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಲಾಹೋರ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಧಾರ್ಮಿಕ ವ್ಯವಹಾರ ಖಾತೆ ಅಧಿಕಾರಿಯೊಬ್ಬರು ಹಾಗೂ ಪೊಲೀಸ್ ತಂಡದ ಸಮ್ಮುಖದಲ್ಲಿ ಜೆಯುಡಿ ಕಚೇರಿ ಸ್ವಾಧೀನ ಪ್ರಕ್ರಿಯೆ ನಡೆಯಿತು.

2009: ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಪ್ರಧಾನಿ ಮನಮೋಹನ ಸಿಂಗ್ ನಿರೀಕ್ಷೆಗಿಂತ ತ್ವರಿತವಾಗಿ ಚೇತರಿಸಿಕೊಂಡರು. ಅವರಿಗೆ ಅಳವಡಿಸಿದ್ದ ಕೃತಕ ಉಸಿರಾಟದ ಸಾಧನವನ್ನು ಈದಿನ ತೆಗೆದು ಹಾಕಲಾಯಿತು.

2009: ಕರ್ನಾಟಕ ಮೂಲದ ಮಾಧವನ್ ನಾಯರ್ (ಪದ್ಮವಿಭೂಷಣ), ರಾಮಚಂದ್ರ ಗುಹಾ (ಪದ್ಮಭೂಷಣ) ಹಾಗೂ ಐಶ್ವರ್ಯಾ ರೈ ಬಚ್ಚನ್, ಬನ್ನಂಜೆ ಗೋವಿಂದಾಚಾರ್ಯ, ಮತ್ತೂರು ಕೃಷ್ಣಮೂರ್ತಿ, ಶಶಿ ದೇಶಪಾಂಡೆ, ಪಂಕಜ್ ಅಡ್ವಾಣಿ, ಬಿ. ಆರ್. ಶೆಟ್ಟಿ ಅವರಿಗೆ ಪದ್ಮಶ್ರೀ ಸಹಿತ 133 ಮಂದಿ ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಆಯ್ಕೆಯಾದರು. ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ 'ಪದ್ಮವಿಭೂಷಣ'ಕ್ಕೆ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ, ಯಶಸ್ವಿ 'ಚಂದ್ರಯಾನ'ದ ರೂವಾರಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೀಸ್‌ನ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ, ಖ್ಯಾತ ಅಣು ವಿಜ್ಞಾನಿ ಅನಿಲ್ ಕಾಕೋಡ್ಕರ್ ಸಹಿತ 10 ಮಂದಿ ಪಾತ್ರರಾದರು. ದೇಶದ ಅತ್ಯುತ್ನತ ನಾಗರಿಕ ಪ್ರಶಸ್ತಿ 'ಭಾರತ ರತ್ನ'ಕ್ಕೆ ಪಂಡಿತ್ ಭೀಮಸೇನ್ ಜೋಶಿ ಅವರ ಹೆಸರನ್ನು ಕಳೆದ ನವೆಂಬರಿನಲ್ಲೇ ಪ್ರಕಟಿಸಲಾಗಿತ್ತು. ಪದ್ಮವಿಭೂಷಣಕ್ಕೆ ಪಾತ್ರರಾದ ಇತರರೆಂದರೆ ಸ್ವೀಡನ್ ಮೂಲದ ವಿಶ್ವ ಸಮುದ್ರಯಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ, ಖ್ಯಾತ ಇತಿಹಾಸಕಾರ ಡಿ. ಪಿ. ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಬೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ. ಮೂರನೇ ಅತ್ಯುನ್ನತ ಸನ್ಮಾನ 'ಪದ್ಮಭೂಷಣ'ಕ್ಕೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಬಂಗಾರದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ಅರ್ಥಶಾಸ್ತ್ರಜ್ಞ ಇಷಾರ್ ಜಜ್ ಅಹುವ್ಲಾಲಿಯಾ. ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸಹಿತ 30 ಮಂದಿ ಪಾತ್ರರಾದರು.

2009: ಸಶಸ್ತ್ರ ಪಡೆ ಸಿಬ್ಬಂದಿಗೆ 9 ಮರಣೋತ್ತರ ಅಶೋಕ ಚಕ್ರ, 13 ಕೀರ್ತಿ ಚಕ್ರ ಪ್ರಶಸ್ತಿ ಸೇರಿದಂತೆ ಒಟ್ಟು 428 ಶೌರ್ಯ ಪ್ರಶಸ್ತಿಗಳಿಗೆ ರಾಷ್ಟ್ರಪತಿ ಅನುಮೋದನೆ ನೀಡಿದರು. ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆಯ ಕಮಾಂಡೊ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮಟೆ ಹಾಗೂ ವಿಜಯ್ ಸಾಲಸ್ಕರ್ ಅವರಿಗೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮರಣೋತ್ತರ 'ಅಶೋಕ ಚಕ್ರ' ಪ್ರಶಸ್ತಿ ಘೋಷಿಸಲಾಯಿತು.

2009: ಭಾರತ ಮತ್ತು ಬ್ರಿಟನ್‌ನ ಜಂಟಿ ನಿರ್ಮಾಣದ 'ಸಮ್ಲ್‌ಡಾಗ್ ಮಿಲಿಯನೇರ್' ಚಲನಚಿತ್ರ, ಅಮೆರಿಕದ ನಿರ್ಮಾಪಕರ ವೇದಿಕೆ (ಪಿಜಿಎ)ಯ ಪುರಸ್ಕಾರಕ್ಕೂ ಪಾತ್ರವಾಯಿತು. ಚಿತ್ರದ ನಿರ್ಮಾಪಕ ಕ್ರಿಶ್ಚಿಯನ್ ಕೋಲ್ಸನ್ ಅವರಿಗೆ 'ಡ್ಯಾರಿಲ್ ಎಫ್ ಝಾನುಕ್ ವರ್ಷದ ನಿರ್ಮಾಪಕ' ಪ್ರಶಸ್ತಿ ದೊರೆಕಿತು, ಲಾಸ್ ಏಂಜೆಲಿಸಿನಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.

2009: ಗೃಹ ಸಚಿವ ಪಿ. ಚಿದಂಬರಮ್ ಅವರ ಆಂತರಿಕ ಭದ್ರತಾ ಸಲಹೆಗಾರ ಕೆ.ಸಿ.ವರ್ಮಾ ಅವರು ದೇಶದ ಅಗ್ರಮಾನ್ಯ ಗೂಢಚರ್ಯ ಸಂಸ್ಥೆ 'ರಾ' ಮುಖ್ಯಸ್ಥರಾಗಿ ನೇಮಕಗೊಂಡರು.

2009: ತಮಿಳು ಬಂಡುಕೋರರ (ಎಲ್‌ಟಿಟಿಇ) ಬಿಗಿ ಹಿಡಿತದಲ್ಲಿರುವ ಕಟ್ಟಕಡೆಯ ತಾಣವಾದ ಮುಲ್ಲೈತೀವು ಪಟ್ಟಣವನ್ನು ಸೇನಾ ಪಡೆಗಳು ಪ್ರವೇಶಿಸಿದವು.

2008: ಜಗತ್ತಿನಲ್ಲಿಯೇ ಅತಿ ಉದ್ದದ ರಂಗೋಲಿ ಬಿಡಿಸಿ, ದಾಖಲೆ ನಿರ್ಮಿಸಲು ಹೊರಟ ಬೆಂಗಳೂರಿನ `ಸುವರ್ಣ ಜ್ಯೋತಿ ಟ್ರಸ್ಟ್' ಜೊತೆಗೆ ಒಂದು ಸಾವಿರ ಜನರು ಕೈಜೋಡಿಸಿ ಅರಮನೆ ಮೈದಾನದಲ್ಲಿ 1.50 ಲಕ್ಷ ಚದರ ಅಡಿಯಲ್ಲಿ ದೇವತೆಗಳು, ಸೈನಿಕರು, ಸ್ವಾತಂತ್ರ್ಯ ಯೋಧರ ಚಿತ್ರಗಳನ್ನು ಒಳಗೊಂಡ 'ಅಖಂಡ ಭಾರತ'ದ ಬೃಹತ್ ರಂಗೋಲಿ ಬಿಡಿಸಲು ಆರಂಭಿಸಿದರು. ಈ ಹಿಂದೆ ದಾಖಲೆ ನಿರ್ಮಿಸಿದ್ದ 48 ಸಾವಿರ ಚದರ ಅಡಿಯ ರಂಗೋಲಿಯನ್ನು ಬದಿಗೆ ತಳ್ಳಿ ನೂತನ ಇತಿಹಾಸ ಸೃಷ್ಟಿಸುವ ಸಲುವಾಗಿ ಈ ರಂಗೋಲಿ ಬಿಡಿಸುವ ಕಾರ್ಯ ಶುರುವಾಯಿತು.

2008: ಆಸ್ಟ್ರೇಲಿಯಾದ 15ರ ಹರೆಯದ ಹುಡುಗಿ ಡೆಮಿ ಲಿ ಬ್ರೆನನ್ ಎಂಬಾಕೆ ಯಕೃತ್ ಕಸಿ ಮಾಡಿಸಿಕೊಂಡ ಬಳಿಕ ತನ್ನ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನೇ ಸಂಪೂರ್ಣವಾಗಿ ಬದಲಿಸಿಕೊಂಡು ವೈದ್ಯ ಲೋಕದಲ್ಲಿ ಅಚ್ಚರಿ ಮೂಡಿಸಿದಳು. ಜೊತೆಗೇ ಇದು ಜಗತ್ತಿನಲ್ಲಿ ದಾಖಲಾದ ಇಂತಹ ಮೊದಲ ಪ್ರಕರಣ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಬ್ರೆನನ್ 9 ವರ್ಷದವಳಿದ್ದಾಗ ದಾನಿಯೊಬ್ಬರ ಯಕೃತ್ತನ್ನು ಕಸಿ ಮಾಡಿಸಿಕೊಂಡಿದ್ದಳು. ಬಳಿಕ ದಾನಿಯ ರೋಗ ನಿರೋಧಕ ಶಕ್ತಿಯೇ (ಬಿಳಿ ರಕ್ತ ಕಣ) ಅವಳ ದೇಹವನ್ನು ಸಂಪೂರ್ಣವಾಗಿ ಆವರಿಸಲು ಆರಂಭಿಸಿತು. ಇದರಿಂದಾಗಿ ಆಕೆಯ ದೇಹದಲ್ಲಿನ ರಕ್ತದ ಗುಂಪು `ಒ ನೆಗೆಟಿವ್'ನಿಂದ `ಒ ಪಾಸಿಟಿವ್'ಗೆ ಬದಲಾಯಿತು. ಸಿಡ್ನಿಯ ವೆಸ್ಟ್ ಮೆಡ್ ಮಕ್ಕಳ ಆಸ್ಪತ್ರೆಯ ವೈದ್ಯರಿಗೆ ಅಚ್ಚರಿ ಮೂಡಲು ಇನ್ನೂ ಹಲವು ಕಾರಣಗಳು ಇದ್ದವು. ಬದಲಿ ಅಂಗ ದೇಹಕ್ಕೆ ಹೊಂದಿಕೊಳ್ಳುವ ಸಲುವಾಗಿ ನೀಡಿದ್ದ ಔಷಧವನ್ನು ದೇಹ ಸ್ವೀಕರಿಸದೇ ಇದ್ದಾಗ ದೇಹದಲ್ಲಿ ಏನೋ ಎಡವಟ್ಟು ಆಗಿರುವುದು ಗೊತ್ತಾಯಿತು. ಇದು ಅವಳಿಗೆ ಪೂರಕವಾಯಿತೇ ಹೊರತು ಮಾರಕವಾಗಲಿಲ್ಲ. ಬಹುಶಃ ಹುಡುಗಿಯ ಮೂಲ ರಕ್ತದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆ ತೀರಾ ಕಡಿಮೆ ಇದ್ದುದರಿಂದ ಆಕೆಯ ದೇಹ ದಾನಿಯ ಯಕೃತ್ತಿನ ಪ್ರಭಾವಕ್ಕೆ ಒಳಗಾಗಿರಬೇಕು ಎಂಬ ತೀರ್ಮಾನಕ್ಕೆ ವೈದ್ಯರು ಬಂದರು. ಅಂತೂ ಇದರಿಂದಾಗಿ ಬ್ರೆನನ್ ಗೆ ಮರು ಜನ್ಮ ಲಭಿಸಿದಂತಾಯಿತು.

2008: ಇನ್ಫೊಸಿಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ, ಗಾಯಕಿ ಆಶಾ ಭೋಂಸ್ಲೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹದಿಮೂರು ಗಣ್ಯರಿಗೆ ಪದ್ಮ ವಿಭೂಷಣ, ಐಸಿಐಸಿಐ ಆಡಳಿತ ನಿರ್ದೇಶಕ ಕುಂದಾಪುರ ವಾಮನ ಕಾಮತ್, ಗಾಯಕಿ ಪಿ.ಸುಶೀಲಾ, ಬಾಹ್ಯಾಕಾಶಯಾನಿ ಸುನೀತಾ ವಿಲಿಯಮ್ಸ್ ಸೇರಿದಂತೆ 35 ಗಣ್ಯರಿಗೆ ಪದ್ಮಭೂಷಣ ಹಾಗೂ ಕವಿ ಕೆ.ಎಸ್. ನಿಸಾರ್ ಅಹಮದ್, ಶೃಂಗೇರಿಯ ಸಾಮಾಜಿಕ ಕಾರ್ಯಕರ್ತ ವಿ.ಆರ್. ಗೌರಿಶಂಕರ್ ಸೇರಿದಂತೆ 71 ಗಣ್ಯರಿಗೆ ಪದ್ಮಶ್ರೀ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಘೋಷಿಸಿದರು. ಕೊಂಕಣ್ ಮತ್ತು ಮೆಟ್ರೋ ರೈಲಿನ ಶಿಲ್ಪಿ ಈ. ಶ್ರೀಧರನ್, ವಿಶ್ವಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದನ್, ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಪರಿಸರವಾದಿ ಡಾ.ಆರ್. ಕೆ. ಪಚೂರಿ, ನಿವೃತ್ತ ಸುಪ್ರೀಂಕೋರ್ಟ್ ಮುಖ್ಯನ್ಯಾಯಾಧೀಶ ಎ.ಎಸ್.ಆನಂದ್, ಎವರೆಸ್ಟ್ ಪರ್ವತಾರೋಹಿ ದಿವಂಗತ ಎಡ್ಮಂಡ್ ಹಿಲೆರಿ, ರಾಜತಾಂತ್ರಿಕ ಪಿ.ಎನ್. ಧರ್ ಹಾಗೂ ಉದ್ಯಮಿಗಳಾದ ಎಲ್.ಎನ್. ಮಿತ್ತಲ್ ಮತ್ತು ಪಿ. ಆರ್. ಎಸ್. ಒಬೆರಾಯ್ ಪದ್ಮವಿಭೂಷಣ ಪ್ರಶಸ್ತಿ ಪಡೆದ ಇತರ ಗಣ್ಯರು. ಪದ್ಮಭೂಷಣ ಪಡೆದವರಲ್ಲಿ ಎಚ್ ಸಿ ಎಲ್ ಸ್ಥಾಪಕ ಶಿವನಾಡರ್, ಸಿಟಿಬ್ಯಾಂಕ್ ಅಧ್ಯಕ್ಷ ವಿಕ್ರಮ್ ಪಂಡಿತ್ ಸೇರಿದರೆ, ಹಿಂದಿ ಚಿತ್ರನಟಿ ಮಾಧುರಿ ದೀಕ್ಷಿತ್, ನಟ ಟಾಮ್ ಆಲ್ಟರ್, ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾದರು.

2008: ತಿರುಮಲದ ತಿಮ್ಮಪ್ಪನಿಗೆ ನಂದಮುರಿ ಲತಾ ಎಂಬ ಭಕ್ತರೊಬ್ಬರು 5 ಲಕ್ಷ ರೂಪಾಯಿ ಮೌಲ್ಯದ 5 ತಂಜಾವೂರು ಪೇಂಟಿಂಗುಗಳನ್ನು ದಾನವಾಗಿ ನೀಡಿದರು. ಈ ಚಿತ್ರಗಳು ಬ್ರಹ್ಮೋತ್ಸವಕ್ಕೆ ಸಂಬಂದಿಸಿದವುಗಳು. ಹಿಂದಿನ ಬ್ರಹ್ಮೋತ್ಸವದ ಸಂದರ್ಭದಲ್ಲೂ ಅವರು ತಮ್ಮ ಪೇಂಟಿಂಗುಗಳನ್ನು ತಿಮ್ಮಪ್ಪನಿಗೆ ದಾನ ಮಾಡಿದ್ದರು.

2008: ಸಿಗರೇಟ್ ಪೊಟ್ಟಣಗಳ ಮೇಲೆ `ಧೂಮಪಾನ ಆರೋಗ್ಯಕ್ಕೆ ಹಾನಿಕರ' ಎಂಬ ಸಚಿತ್ರ ಸಂದೇಶವನ್ನು 2007ರ ಫೆಬ್ರುವರಿ 1ರಿಂದ ಮುದ್ರಿಸುವುದು ಕಡ್ಡಾಯ ಎಂದು 2006ರ ಜುಲೈ ತಿಂಗಳಲ್ಲಿಯೇ ಆದೇಶ ಹೊರಡಿಸಿ ಅದನ್ನು ಜಾರಿ ಮಾಡದ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ತಂಬಾಕು ಲಾಬಿಗೆ ಮಣಿದಿರುವ ಸರ್ಕಾರ ತನ್ನದೇ ನಿರ್ಧಾರವನ್ನು ಜಾರಿ ಮಾಡುತ್ತಿಲ್ಲ ಎಂದು ದೂರಿ ವಕೀಲರಾದ ನರಿಂದರ್ ಶಮಾ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತು. 2007ರ ಫೆಬ್ರುವರಿ 1ರಂದು ಜಾರಿಯಾಗಬೇಕಾಗಿದ್ದ ನಿರ್ಧಾರವನ್ನು ಸರ್ಕಾರ ಡಿಸೆಂಬರ್ ತಿಂಗಳಿಗೆ ಮುಂದೂಡಿ ನಂತರ ಅದನ್ನು ಜಾರಿ ಮಾಡಿಲ್ಲ ಎಂದು ಅರ್ಜಿದಾರರು ದೂರಿದರು.

2008: ಪಶ್ಚಿಮ ಬಂಗಾಳದ 19 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಿಗೆ ಪಕ್ಷಿಜ್ವರ (ಕೋಳಿಜ್ವರ) ಸೋಂಕು ಹರಡಿದ ಹಿನ್ನೆಲೆಯಲ್ಲಿ ಅಲ್ಲಿನ ಪರಿಸ್ಥಿತಿ ಬಿಗಡಾಯಿಸದಂತೆ ತಡೆಯಲು ಪಶ್ಚಿಮ ಬಂಗಾಳ ಸರ್ಕಾರ ಸೋಂಕು ಪೀಡಿತ ಕೋಳಿಗಳ ಸಾಮೂಹಿಕ ನಾಶಕ್ಕೆ ಸಮರೋಪಾದಿ ಯತ್ನ ಕೈಗೊಂಡಿತು. ಪುರೂಲಿಯಾ ಮತ್ತು ಹೌರಾ ಜಿಲ್ಲೆಗಳನ್ನು ಸೋಂಕು ಪೀಡಿತ ಎಂದು ಘೋಷಿಸಲಾಯಿತು. ಕೂಚ್ ಬಿಹಾರ ಜಿಲ್ಲೆಯಲ್ಲಿ ಕೋಳಿಗಳ ಹತ್ಯೆ ಕಾರ್ಯ ಆರಂಭವಾಯಿತು.

2008: ತಮಿಳುನಾಡಿನ ತೆಂಕಾಸಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಮೇಲೆ ಅಪರಿಚಿತರು ರಾತ್ರಿ ಬಾಂಬ್ ಎಸೆದರು. ಪರಿಣಾಮವಾಗಿ ಪಟ್ಟಣದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿತು.

2008: ಅಕ್ರಮವಾಗಿ ಕಿಡ್ನಿ ಕಸಿ ಮಾಡಿ ಬಡವರನ್ನು ವಂಚಿಸುತ್ತಿದ್ದ ಹಾಗೂ ಕೋಟ್ಯಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿದ್ದ ಐವರು ವಿದೇಶಿಯರು ಹಾಗೂ ನಾಲ್ವರು ಸ್ಥಳೀಯ ವೈದ್ಯರನ್ನು ಗುಡಗಾಂವಿನ ಪೊಲೀಸರು ಬಂಧಿಸಿ, ಅಕ್ರಮ ಕಿಡ್ನಿ ಮಾರಾಟದ ಬೃಹತ್ ಜಾಲವೊಂದನ್ನು ಭೇದಿಸಿದರು. ಹರಿಯಾಣ ಮತ್ತು ಉತ್ತರ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಡಗಾಂವಿನ ಎರಡು ಮನೆಗಳ ಮೇಲೆ ದಾಳಿ ನಡೆಸಿ ಈ ಜಾಲ ಪತ್ತೆ ಹಚ್ಚಲಾಯಿತು. ಬಂಧಿತರನ್ನು ಜಾಯ್ ಮೆಹತಬ್ (53), ಸೋನಮ್ ಜಾಯ್ (52), ಲಿಯೊನಿಡಾ ದಯಾಸಿ (56), ಲಿಯೊನಿದಾಸ್ ದಯಾಸಿಸ್ (63) ಮತ್ತು ಹೆಲೆನಿ ಕಿತ್ಕೊಸಿ (53) ಎಂದು ಗುರುತಿಸಲಾಯಿತು. ಇವರೆಲ್ಲರೂ ಗ್ರೀಸ್ ದೇಶದ ಪ್ರಜೆಗಳು. ವಲ್ಲಭಗಢ ಹಾಗೂ ಇತರೆಡೆಯ ಮೂವರು ವೈದ್ಯರನ್ನೂ ಬಂಧಿಸಲಾಯಿತು. ಜಾಲದ ಪ್ರಮುಖ ಸೂತ್ರಧಾರ ಎನ್ನಲಾದ ಡಾ.ಅಮಿತ್ ಸಿಂಗ್ ಹಾಗೂ ಆತನ ಸಹೋದರ ಜೀವನ್ ಮತ್ತು ಅರೆವಳಿಕೆ ತಜ್ಞ ಸರೋಜ್ ಕುಮಾರ್ ತಲೆಮರೆಸಿಕೊಂಡರು.

2008: ಬೆಂಗಳೂರಿನ ಭಾರತೀಯ ವಾಯುಪಡೆ (ಐಎಎಫ್) ತರಬೇತಿ ಕೇಂದ್ರದ ಮುಖ್ಯಸ್ಥ ಏರ್ ಮಾರ್ಷಲ್ ಗುರುನಾಮ್ ಸಿಂಗ್ ಚೌಧರಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ (ಪಿವಿಎಸ್ಎಂ) ಲಭಿಸಿತು.

2008: ಅಡಿಲೇಡಿನಲ್ಲಿ ಆಸ್ಟ್ರೇಲಿಯಾ - ಟೀಮ್ ಇಂಡಿಯಾ ನಡುವಣ ನಾಲ್ಕನೇ ಹಾಗೂ ಅಂತಿಮ
ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಮಿಚೆಲ್ ಜಾನ್ಸನ್ ಬೌಲಿಂಗಿನಲ್ಲಿ ಅನಿಲ್ ಕುಂಬ್ಳೆ ನೀಡಿದ ಕ್ಯಾಚ್ ಪಡೆದ ಆಡಮ್ ಗಿಲ್ ಕ್ರಿಸ್ಟ್ ವಿಕೆಟ್ ಹಿಂಬದಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್ ಎಂಬ ಹೆಗ್ಗಳಿಗೆ ಪಾತ್ರರಾಗಿ ವಿಶ್ವದಾಖಲೆ ನಿರ್ಮಿಸಿದರು. ಅವರು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಅಳಿಸಿ ಹಾಕಿದರು. ಇದರಿಂದಾಗಿ `ಗಿಲಿ' ವಿಕೆಟ್ ಹಿಂಬದಿ ಒಟ್ಟು 414 ಬಲಿ ಪಡೆದಂತಾಯಿತು. ಅದರಲ್ಲಿ 377 ಕ್ಯಾಚ್ ಹಾಗೂ 37 ಸ್ಟಂಪಿಂಗ್ ಸೇರಿವೆ. ಬೌಷರ್ 413 (394 ಕ್ಯಾಚ್, 19 ಸ್ಟಂಪಿಂಗ್) ಬಲಿ ಪಡೆದರು.

2008: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಪ್ರತಿಷ್ಠಿತ ಐಷಾರಾಮಿ ಸುವರ್ಣ ರಥ ರೈಲು ಈದಿನ ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ಹೊರವಲಯದ ವೈಟ್ಫೀಲ್ಡ್ ರೈಲು ನಿಲ್ದಾಣಕ್ಕೆ ಆಗಮಿಸಿತು. ಮುಂದಿನ ಒಂದು ವಾರದಲ್ಲಿ ರೈಲಿನ ಒಳಾಂಗಣ ವಿನ್ಯಾಸ, ನೆಲಹಾಸು, ಸೂಕ್ಷ್ಮ ಮರಗೆಲಸ, ಹಾಸಿಗೆ ಮತ್ತು ಹೊದಿಕೆ ಹಾಕುವ ಕೆಲಸ ನಡೆಸಲಾಯಿತು. ಇದು ದಕ್ಷಿಣ ಭಾರತದ ಪ್ರಥಮ ಪ್ರವಾಸಿ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

2007: ಆರ್ಥಿಕ ಸಂಕಷ್ಟದಿಂದ ಬೇಸತ್ತು ಹಾಸನ ನಗರದ ವ್ಯಾಪಾರಿ ಕೀರ್ತಿ ಗುಪ್ತ ಅವರು ತಮ್ಮ ಮೂವರು ಮಕ್ಕಳು ಸೇರಿದಂತೆ ಕುಟುಂಬದ 6 ಜನ ಸದಸ್ಯರನ್ನು ಕ್ಲೋರೋಫಾರಂ ಬಳಸಿ ಕೊಲೆಗೈದು, ತಾವೂ ಆತ್ಮಹತ್ಯೆ ಮಾಡಿಕೊಂಡರು.

2007: ವಿಶ್ವದ ಹಿರಿಯಜ್ಜ ಎಂದು ಪರಿಗಣಿಸಲಾಗಿದ್ದ ಸಾನ್ ಜುವಾನಾದ (ಪೋರ್ಟೊರಿಕೊ) ಎಮಿಲಿಯಾನೊ ಮರ್ಕೆಡೊ ಡೆಲ್ ಟೊರೊ ಅವರು ತಮ್ಮ 115ನೇ ವರ್ಷದಲ್ಲಿ ನಿಧನರಾದರು. ಈ ಅಜ್ಜ ಹುಟ್ಟಿದಾಗ ಪೊರ್ಟೊರಿಕೊ ಸ್ಪೇನಿನ ವಸಾಹತಾಗಿತ್ತು. `ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ' ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಈ ಅಜ್ಜನ ಹೆಸರು ದಾಖಲಾದಾಗ ಕರಾವಳಿ ನಗರ ಇಸಬೆಲ್ಲಾದಲ್ಲಿ ಜನ ಹಬ್ಬ ಆಚರಿಸಿ ಸಂಭ್ರಮಿಸಿದ್ದರು. 1891ರ ಆಗಸ್ಟ್ 21ರಂದು ಜನಿಸಿದ್ದ ಎಮಿಲಿಯಾನೊ ಮೆರ್ಕಡೊ ಡೆಲ್ ಟೊರೊ ಅವಿವಾಹಿತರಾಗಿದ್ದರು. 1892ರ ನವೆಂಬರ್ 22ರಂದು ಜನಿಸಿದ ಕನೆಕ್ಟಿಕಟ್ ಮಹಿಳೆ ಎಮ್ಮಾ ಫಾಸ್ಟ್ ಟಿಲ್ ಮ್ಯಾನ್ (114) ಈತನ ಬಳಿಕ ಬದುಕುಳಿದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ.

2007: ಕರ್ನಾಟಕದ ದಿವಂಗತ ಸಾಹಿತಿ `ಕಾಂತಾಪುರ' ಖ್ಯಾತಿಯ ಹಾಸನ ರಾಜಾರಾವ್ ಅವರಿಗೆ ಮರಣೋತ್ತರ ಪದ್ಮವಿಭೂಷಣ, ಕರ್ನಾಟಕದ ಸೊಸೆ ಮತ್ತು ಪೆಪ್ಸೆ ಕಂಪೆನಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಇಂದ್ರಾ ನೂಯಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಒಟ್ಟು 10 ಗಣ್ಯರಿಗೆ ಪದ್ಮವಿಭೂಷಣ, 32 ಮಂದಿಗೆ ಪದ್ಮಭೂಷಣ ಮತ್ತು 79 ಮಂದಿ ಪದ್ಮಶ್ರೀ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರವು ಪ್ರಕಟಿಸಿತು.

2007: ಕಾಶ್ಮೀರದಲ್ಲಿ ಶರಣಾಗತರಾದ ಉಗ್ರರಿಗೆ ಆರ್ಥಿಕ ಸಹಾಯ ಮತ್ತು ಮಾಸಿಕ ವೇತನ ನೀಡುವುದನ್ನು ಪ್ರಶ್ನಿಸಿ ಮಾನವ ಹಕ್ಕು ಇಲಾಖೆಯು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತು. ನ್ಯಾಯಮೂರ್ತಿ ಜಿ.ಪಿ.ಮಾಥೂರ್ ಮತ್ತು ಆರ್. ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠವು ಈ ಅರ್ಜಿಯನ್ನು ದಾಖಲು ಮಾಡಿಕೊಂಡು, `ಗಂಭೀರವಾದ ವಿಷಯಗಳನ್ನು ಈ ಅರ್ಜಿಯು ಎತ್ತಿದ್ದು, ವಿವರವಾಗಿ ಪರಿಶೀಲಿಸಬೇಕಾದ ಅಗತ್ಯ ಇದೆ' ಎಂದು ಹೇಳಿತು. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಸರ್ಕಾರಕ್ಕೆ ಶರಣಾದ ಉಗ್ರರಿಗೆ ಮರುಪಾವತಿ ಮಾಡದಂಥ 3 ಲಕ್ಷ ರೂಪಾಯಿಗಳ ಸಾಲ ನೀಡುವುದಲ್ಲದೆ ಮಾಸಿಕ 3000 ರೂಪಾಯಿಗಳ ಸ್ಟೈಪೆಂಡ್ ನೀಡುವ ಕ್ರಮವೂ ಇದೆ. ಇದು ದೇಶದ ಯುವ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುವುದರ ಜೊತೆಗೆ ದೇಶದ ಇತರ ಕಡೆಗಳಲ್ಲಿ ಭಯೋತ್ಪಾದನೆಯ ಮಾರ್ಗ ಅನುಸರಿಸಲು ಪ್ರೋತ್ಸಾಹಿಸುವಂತಿದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ದೂರಿದ್ದರು.

2007: ತಮಿಳುನಾಡಿನ ಕುದಂಕುಲಮ್ ವಿದ್ಯುತ್ ಯೋಜನೆ ಹಾಗೂ ಇತರ ಹೊಸ ಪ್ರದೇಶಗಳಲ್ಲಿ ಇನ್ನಷ್ಟು ಅಣುಸ್ಥಾವರಗಳನ್ನು ನಿರ್ಮಿಸುವ ಸಲುವಾಗಿ ಭಾರತ ಮತ್ತು ರಷ್ಯ ಒಪ್ಪಂದಕ್ಕೆ ಸಹಿ ಹಾಕಿದವು.

2006: ಕರ್ನಾಟಕ ಸಂಗೀತದ ಖ್ಯಾತ ವಯೋಲಿನ್ ವಾದಕ ನೆಲ್ಲೈ ಕೃಷ್ಣಮೂರ್ತಿ (85) ಕೇರಳದ ತಿರುವನಂತಪುರದಲ್ಲಿ ನಿಧನರಾದರು.

2006: ಸ್ವಿಟ್ಜರ್ ಲ್ಯಾಂಡಿನ ದಾವೋಸಿನಲ್ಲಿ ಆರಂಭವಾದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಖೇಶ ಅಂಬಾನಿ ಅವರನ್ನು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. ಈ ಹುದ್ದೆಗೆ ನೇಮಕಗೊಂಡಿರುವ ಭಾರತದ ಅತ್ಯಂತ ಕಿರಿಯ ಉದ್ಯಮಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು.

2006: ಸಾಫ್ಟವೇರ್ ಸಂಸ್ಥೆ ಇನ್ಫೋಸಿಸ್ಸಿನ ಸಿಇಒ ನಂದನ್ ನೀಲೇಕಣಿ (ಪದ್ಮಭೂಷಣ), ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮತ್ತು ಯುವ ಟೆನಿಸ್ ತಾರೆ ಸಾನಿಯಾ ಮಿರ್ಜಾ (ಪದ್ಮಶ್ರೀ) ಸೇರಿದಂತೆ 106 ಮಂದಿ ಗಣ್ಯರು 2006ನೇ ಸಾಲಿನ ಪದ್ಮ ಪ್ರಶಸ್ತಿಗಳಿಗೆ ಭಾಜನರಾದರು. ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣ, ಸಮಾಜಸೇವಕಿ ಗಾಂಧಿವಾದಿ ನಿರ್ಮಲಾ ದೇಶಪಾಂಡೆ, ಲೇಖಕಿ ಮಹಾಶ್ವೇತಾದೇವಿ ಸೇರಿದಂತೆ 9 ಗಣ್ಯರು ಪದ್ಮಿವಿಭೂಷಣ ಪ್ರಶಸ್ತಿಗೆ ಭಾಜನರಾದರು.

2006: ಎವರೆಸ್ಟ್ ಆರೋಹಣದ ಸಂದರ್ಭದಲ್ಲಿ ಹಿಮಶೃಂಗದಲ್ಲೇ ಜೀವತೆತ್ತ ಕನ್ನಡಿಗ ಸ್ಕ್ವಾಡ್ರನ್ ಲೀಡರ್ ಎಸ್. ಎಸ್. ಚೈತನ್ಯ ಮತ್ತು ದೇಶದ ಪ್ರಥಮ ಮಹಿಳಾ ಏರ್ ಮಾರ್ಷಲ್ ಪದ್ಮಾ ಬಂಡೋಪಾಧ್ಯಾಯ ಸಹಿತ 311 ಯೋಧರು 2006ನೇ ಸಾಲಿನ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾದರು.

2002: ರಷ್ಯಾದ ರಸ್ಲನ್ ಪೊನೊಮರಿವ್ ಅವರು ಮಾಸ್ಕೊದಲ್ಲಿ ವಸಿಲಿ ಇವಾಂಚುಕ್ ಅವರನ್ನು 4.5-2.5 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಫಿಡೆ ವಿಶ್ವ ಚೆಸ್ ಚಾಂಪಿಯನ್ ಎನಿಸಿಕೊಂಡ ಮೊತ್ತ ಮೊದಲ ಕಿರಿಯ ಆಟಗಾರರಾದರು. ಆಗ ಅವರ ವಯಸ್ಸು: 18 ವರ್ಷ, 104 ದಿನಗಳು.

1971: ಸೇನಾದಂಗೆಯೊಂದರಲ್ಲಿ ಮಿಲ್ಟನ್ ಒಬೊಟೆ ಅವರನ್ನು ಪದಚ್ಯುತಿಗೊಳಿಸಿ ಇದಿ ಅಮಿನ್ ಉಗಾಂಡಾದ ಅಧ್ಯಕ್ಷರಾದರು.

1971: ಹಿಮಾಚಲ ಪ್ರದೇಶ ಭಾರತದ ಒಂದು ರಾಜ್ಯವಾಯಿತು. 1948ರಿಂದ ಇಲ್ಲಿವರೆಗೆ ಇದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1950: ಭಾರತದ ಚುನಾವಣಾ ಆಯೋಗ ಸ್ಥಾಪನೆಗೊಂಡಿತು. ಪ್ರಾರಂಭದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಒಬ್ಬರೇ ಅದರ ಮುಖ್ಯಸ್ಥರಾಗಿದ್ದರು. ನಂತರ ಇಬ್ಬರು ಹೆಚ್ಚುವರಿ ಕಮೀಷನರುಗಳನ್ನು ನೇಮಿಸಲಾಯಿತು.

1939: ರಂಗಭೂಮಿಯ ಖ್ಯಾತ ನಟ, ಚಲನಚಿತ್ರ ರಂಗದ ಖಳನಾಯಕ ದಿನೇಶ್ (25-1-1939ರಿಂದ 20-12-1990) ಅವರು ಬೆಂಗಳೂರಿನಲ್ಲಿ ಈದಿನ ಜನಿಸಿದರು.

1933: ಫಿಲಿಪ್ಪೈನ್ಸಿನ ನಾಯಕಿ ಕೊರಜಾನ್ ಅಕ್ವಿನೊ ಹುಟ್ಟಿದರು. ದಿವಂಗತ ಬೆನಿಗ್ನೊ ಅಕ್ವಿನೊ ಅವರ ಕೈಹಿಡಿದ ಅವರು 1983ರಿಂದ ಪಿಲಿಪ್ಪೈನ್ಸಿನ ರಾಜಕೀಯ ನಾಯಕಿಯಾದರು. 1986-1992ರ ಅವಧಿಯಲ್ಲಿ ಅಲ್ಲಿನ ಅಧ್ಯಕ್ಷರಾದರು.

1924: ಫ್ರೆಂಚ್ ಆಲ್ಫ್ ನ ಚಾಮೊನಿಕ್ಸಿನಲ್ಲಿ ಮೊದಲ ಚಳಿಗಾಲದ ಒಲಿಂಪಿಕ್ಸ್ ಆರಂಭವಾಯಿತು.

1921: ಖ್ಯಾತ ಸಾಹಿತಿ, ಹಿರಿಯ ಪತ್ರಕರ್ತ ನಾಡಿಗ ಕೃಷ್ಣಮೂರ್ತಿ (1921-1983) ಅವರು ಶಿವಮೊಗ್ಗ ಜಿಲ್ಲೆಯ ಅನವಟ್ಟಿ ಗ್ರಾಮದಲ್ಲಿ ನರಸಿಂಗರಾವ್ ನಾಡಿಗ -ಕಮಲಾಬಾಯಿ ದಂಪತಿಯ ಪುತ್ರನಾಗಿ ಜನಿಸಿದರು. ಪತ್ರಿಕೋದ್ಯಮ ಇತಿಹಾಸ ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ನಾಡಿಗ ಕೃಷ್ಣಮೂರ್ತಿ ಅವರು ರಚಿಸಿದ ಕೃತಿಗಳು 40ಕ್ಕೂ ಹೆಚ್ಚು. ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಅವರು ಸಂದರ್ಶಿಸಿದ ರಾಷ್ಟ್ರಗಳು ಹತ್ತಕ್ಕೂ ಹೆಚ್ಚು. ಅಖಿಲ ಭಾರತ ಪತ್ರಿಕೋದ್ಯಮ ಶಿಕ್ಷಣ ಸಂಘ ಸ್ಥಾಪಿಸಿದ ನಾಡಿಗ ಕೃಷ್ಣಮೂರ್ತಿ ಅಂದಿನ ರಾಜ್ಯ ಪತ್ರಿಕಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದರು (16-3-1982ರಿಂದ 1-5-1983ರವರೆಗೆ). ಕೇಂದ್ರ, ರಾಜ್ಯಮಟ್ಟದ ಹಲವಾರು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರು.

1915: ಟೆಲಿಫೋನ್ ಸಂಶೋಧಕ ಅಲೆಗ್ಸಾಂಡರ್ ಗ್ರಹಾಂಬೆಲ್ ಅಮೆರಿಕದ ಖಂಡಾಂತರ (ಟ್ರಾನ್ಸ್ ಕಾಂಟಿನೆಂಟಲ್) ಟೆಲಿಫೋನ್ ಸೇವೆ ಉದ್ಘಾಟಿಸಿದರು. ಬೆಲ್ ಅವರು ತಮ್ಮ ಮಾಜಿ ಸಹಯೋಗಿ ವಾಟ್ಸನ್ ಅವರ ಜೊತೆ ನ್ಯೂಯಾರ್ಕ್ ಮತ್ತು ಸಾನ್ ಫ್ರಾನ್ಸಿಸ್ಕೊ ನಡುವಣ 3400 ಮೈಲು ಉದ್ದದ ತಂತಿ ಮೂಲಕ ಸಂಪರ್ಕಿಸಲಾದ ಟೆಲಿಫೋನಿನಲ್ಲಿ ಮಾತನಾಡಿದರು.

1824: ಮೈಕೆಲ್ ಮಧುಸೂದನ ದತ್ (1824-1873) ಹುಟ್ಟಿದ ದಿನ. ಇವರು ಕವಿ ಹಾಗೂ ನಾಟಕಕಾರರಾಗಿ ಆಧುನಿಕ ಬಂಗಾಳಿ ಸಾಹಿತ್ಯದ ಮಹಾನ್ ಕವಿ ಎಂದು ಖ್ಯಾತರಾಗಿದ್ದಾರೆ.

No comments:

Post a Comment