ನಾನು ಮೆಚ್ಚಿದ ವಾಟ್ಸಪ್

Tuesday, January 22, 2019

ಇಂದಿನ ಇತಿಹಾಸ History Today ಜನವರಿ 22

ಇಂದಿನ ಇತಿಹಾಸ History Today ಜನವರಿ 22
2019: ತುಮಕೂರು: ವಿಶ್ವಚೇತನ, ವಿಶ್ವರತ್ನ, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿ ಯುಗಾಂತ್ಯವಾಯಿತು.  ಕಾಯಕ ಯೋಗಿ, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಸಿದ್ಧಗಂಗೆ ಮಠದಲ್ಲಿ ಕ್ರಿಯಾ ಸಮಾಧಿಯಲ್ಲಿ ಲೀನರಾದರು. ಹಿಂದಿನ ದಿನ  ೧೧ ಗಂಟೆ ೪೪ ನಿಮಿಷಕ್ಕೆ ಲಿಂಗೈಕ್ಯರಾಗಿದ್ದ ಮಹಾನ್ ಮಾನವತಾವಾದಿಗೆ ಕೋಟಿ ಮನಸುಗಳು ಭಾರ ಹೃದ ಯದಿಂದ ಬೀಳ್ಕೊಡುಗೆ ನೀಡಿದವು. ಸಿದ್ದಗಂಗಾ ಮಠದ ಆವ ರಣದಲ್ಲಿ ಗುರು ಉದ್ಧಾನ ಶಿವಯೋಗಿಗಳ ಪಕ್ಕದಲ್ಲಿ ಶಿವಕುಮಾರ ಸ್ವಾಮೀಜಿಯವರನ್ನು ಗದ್ದುಗೆಯಲ್ಲಿ ಐಕ್ಯ ಮಾಡಲಾಯಿತು. ಮಧ್ಯಾಹ್ನ .೩೦ರ ವೇಳೆಗೆ ಆರಂಭವಾದ ಕ್ರಿಯಾ ವಿಧಾನ, ವಿಧಿ ವಿಧಾನಗಳು ಅಂತಿಮವಾಗಿ .೩೦ ಗಂಟೆಗೆ ಪೂರ್ಣ ಗೊಂಡಿತು. ಶ್ರೀಗಳು ಚೈತನ್ಯ ದೇಹವನ್ನು ಬಿಟ್ಟು ಹೋದ ಬಳಿಕ ಅವರ ದೇಹಕ್ಕೆ ಮತ್ತೆ ಚೈತನ್ಯ ತುಂಬಲು ಕ್ರಿಯಾ ಸಮಾಧಿ ವಿಧಿ ವಿಧಾನ ಮಾಡಲಾಯಿತು. ಲಿಂಗಧಾರಣೆ ಮಾಡಿ, ಇಷ್ಟಲಿಂಗ ಪೂಜೆ ಮಾಡುವ ಅಧ್ಯಾತ್ಮ ಸಾಧಕರಿಗೆ ಮಾತ್ರ ಲಿಂಗಾಯತ ಕ್ರಿಯಾ ಸಮಾಧಿ ಮಾಡಲಾಗುತ್ತದೆ. ಸಂಜೆ .೩೦ಕ್ಕೆ ಆರಂಭವಾದ ಪ್ರಕ್ರಿಯೆಯಲ್ಲಿ ಕಿರಿಯ ಶ್ರೀಗಳು ಮುಂದಿದ್ದು ಎಲ್ಲಾ ವಿಧಿ ವಿಧಾನ ಗಳನ್ನು ನೆರವೇರಿಸಿದರು. ಗಂಟೆಗೆ ಶ್ರೀಗಳು ಮಹಾ ಮಂಗಳಾರತಿ ಮಾಡಿದ ಬಳಿಕ ಮೆರವಣಿಗೆಗೆ ಆರಂಭ ಮಾಡಲಾಯಿತು. .೧೫ ಗಂಟೆಗೆ ಸುಮಾರಿಗೆ ಲಿಂಗೈಕ್ಯ ದೇಹವನ್ನು ಲಕ್ಷದ ರುದ್ರಾಕ್ಷಿ ಹಾಗೂ ಹೂಗಳಿಂದ ಅಲಂಕಾರ ಮಾಡಿದ್ದ ವಿಮಾನಗೋಪುರದ ಮೂಲಕ ಅಂತಿಮ ಯಾತ್ರೆ ಮೆರವಣಿಗೆ ಆರಂಭ ಮಾಡಲಾಯಿತು.  ಸಂಜೆ ಗಂಟೆ ವೇಳೆಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ದಿನೇಶ್ ಗುಂಡೂರಾವ್, ವೀರಪ್ಪ ಮೊಯ್ಲಿ, ದೇಶಪಾಂಡೆ, ಶೋಭಾ ಕರಂದ್ಲಾಜೆ, ಶ್ರೀರಾಮುಲು, ಜನಾರ್ದನ ರೆಡ್ಡಿ, ಡಿಸಿಎಂ ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಚಿವ ವಿ.ಸೋಮಣ್ಣ, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಗಣ್ಯರು, ಸಂಸದರು, ಶಾಸಕರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದು, ಗೌರವ ಸಲ್ಲಿಸಿದರು. ಬಳಿಕ ಸುತ್ತು ಕುಶಾಲುತೋಪು ಹಾರಿಸಿ, ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ ಶ್ರೀಗಳ ಲಿಂಗ ದೇಹದ ಮೇಲೆ ಹೊದಿಸಿದ್ದ ತ್ರಿವರ್ಣ ಧ್ವಜವನ್ನು ಸಿಎಂ ಕುಮಾರಸ್ವಾಮಿ ಅವರು ಕಿರಿಯ ಶ್ರೀಗಳಿಗೆ ಹಸ್ತಾಂತರಿಸಿದರು. ಮೂಲಕ ಅಧಿಕೃತವಾಗಿ ಶ್ರೀಗಳ ಲಿಂಗಕಾಯವನ್ನು ಮಠಕ್ಕೆ ಹಸ್ತಾಂತರ ಮಾಡಿದರು.  ಪಂಚ ವಾದ್ಯಗಳ ಮೂಲಕ ಶಿವಯೋಗಿಗಳ ಗದ್ದುಗೆವರೆಗೂ ಮೆರವಣಿಗೆ ಮಾಡಲಾಯಿತು. ಗದ್ದುಗೆಯ ಸಮಾಧಿ ಸ್ಥಳದಲ್ಲಿ ಐವರು ಸ್ವಾಮೀಜಿಗಳು ವೇಳೆ ಕ್ರಿಯಾ ವಿಧಿ ವಿಧಾನಗಳನ್ನು ಆರಂಭಿಸಿದರು. ಗದ್ದುಗೆ ಪೂಜೆ ಸ್ಥಳದಲ್ಲಿ ಕ್ರಿಯಾ ಸಮಾಧಿ ಶಾಸ್ತ್ರಗಳು, ಮಂತ್ರ ಪಠಣ ಮೂಲಕ ಕಾರ್ಯ ನಡೆಯಿತು. ಅಟವೀ ಶಿವಯೋಗಿಗಳ ಗದ್ದುಗೆಯ ಅರ್ಚಕರೂ ಕೂಡ ಪೂಜೆಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದಲೇ ನಡೆದ ಪೂಜೆ ಶಾಸ್ತ್ರಗಳನ್ನು ಕಿರಿಯ ಸ್ವಾಮೀಜಿಗಳು ಪೂರ್ಣಗೊಳಿಸಿದರು. ಕ್ರಿಯಾ ಸಮಾಧಿ ವೇಳೆ ೧೦ ರಿಂದ ೧೧ ಸಾವಿರ ವಿಭೂತಿ ಗಟ್ಟಿ, ೨೦ ಚೀಲ ಅಂದರೆ ೫೦೦ ಕೆಜಿ ಉಪ್ಪು, ೧೦ ಚೀಲ ಮರಳು, ೧೦೦೧ ವಿವಿಧ ರೀತಿಯ ಪತ್ರೆಗಳನ್ನು ಬಳಕೆ ಮಾಡಲಾಯಿತು. ವೀರಶೈವ ಲಿಂಗಾಯಿತ ಆಗಮೋಕ್ತ ಕ್ರಿಯಾ ಸಮಾಧಿ ವಿಧಿ ವಿಧಾನಗಳ ಮೂಲಕ ಶ್ರೀಗಳ ಕ್ರಿಯಾ ಸಮಾಧಿಯನ್ನು ಮಾಡಲಾ ಯಿತು. ಪಾದ ಆಳ, ಪಾದ ಉದ್ದ, ಪಾದ ಅಗಲದಲ್ಲಿ ನಿರ್ಮಾಣವಾಗಿರುವ ಕ್ರಿಯಾ ಸಮಾಧಿಯಲ್ಲಿ ಹಂತಗಳಲ್ಲಿ ಮೆಟ್ಟಿಲು (ಸೋಪಾನ) ನಿರ್ಮಾಣ ಮಾಡಲಾಗಿದೆ. ಶ್ರೀಗಳ ಪಾರ್ಥಿವ ಶರೀರವನ್ನು ಕೂರಿ ಸಲು ಆದರೊಳಗೆ ತ್ರಿಕೋನಾಕೃತಿಯಲ್ಲಿ ಗೂಡು ನಿರ್ಮಿ ಸಲಾಗಿತ್ತು. ಇದರಲ್ಲಿ ಶ್ರೀಗಳ ಐಕ್ಯವನ್ನಿಟ್ಟು, ವಿಭೂತಿ, ಪತ್ರೆ, ಉಪ್ಪು ಸೇರಿದಂತೆ ವಿವಿಧ ಬಿಲ್ವಪತ್ರೆಗಳಲ್ಲಿ ಕ್ರಿಯಾ ಸಮಾಧಿಯನ್ನು ಮುಚ್ಚಲಾಯಿತು.

2019: ತಿರುವನಂತಪುರಂ: ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪಾಲಿಸಲಾಗುತ್ತಿದ್ದ ಋತುಮತಿ ವಯಸ್ಸಿನ ಮಹಿಳಾ ಪ್ರವೇಶ ನಿಷೇಧದ ವಿಧಿಗಳನ್ನು ಉಲ್ಲಂಘಿಸಿ, ದೇವಾಲಯ ಪ್ರವೇಶಿದ್ದ ಇಬ್ಬರು ಮಹಿಳೆಯರ ಪೈಕಿ ಒಬ್ಬರಾದ ಕನಕದುರ್ಗ ಅವರಿಗೆ ಕುಟುಂಬವು ಪ್ರವೇಶ ನಿರಾಕರಿಸಿದ ಪರಿಣಾಮವಾಗಿ ಆಕೆಯನ್ನು  ಸರ್ಕಾರಿ ವಸತಿ ಗೃಹ ಒಂದಕ್ಕೆ ಕಳುಹಿಸಲಾಯಿತು. ಇಬ್ಬರು ಮಕ್ಕಳ ತಾಯಿಯಾದ ಕನಕದುರ್ಗ ಶಬರಿಮಲೈ ದೇವಾಲಯ ಪ್ರವೇಶದ ತನ್ನ ಯೋಜನೆ ಬಗ್ಗೆ ತಮ್ಮನ್ನು ಕತ್ತಲಲ್ಲಿ ಇಟ್ಟಿದ್ದಕ್ಕಾಗಿ ಸಿಟ್ಟಿಗೆದ್ದಿರುವ ಅವರ ಕುಟುಂಬವು ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿತು. ಬಹಿರಂಗ ಕ್ಷಮಾಯಾಚನೆ ಮೂಲಕ ಆಕೆ ತನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು ಎಂದು ಕುಟುಂಬ ಆಗ್ರಹಿಸಿತು.  ಕುಟುಂಬದ ಪ್ರಕಾರ ಡಿಸೆಂಬರ್ ೨೨ರಂದು ಕನಕದುರ್ಗ ಮಲಪ್ಪುರಂ ಜಿಲ್ಲೆಯ ಅರೆಕ್ಕೋಡಿನ ತನ್ನ ಮನೆಯಿಂದ ರಾಜ್ಯ ರಾಜಧಾನಿಗೆ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವುದಾಗಿ ಹೇಳಿ ಹೋಗಿದ್ದುದಾಗಿ ಹೇಳಲಾಗಿತ್ತು. ೩೯ರ ಹರೆಯದ ಕನಕದುರ್ಗ  ಮತ್ತು ೪೦ರ ಹರೆಯದ ಬಿಂದು ಅಮ್ಮಣ್ಣಿ ಡಿಸೆಂಬರ್ ೨೪ರಂದು ದೇವಾಲಯ ಪ್ರವೇಶಕ್ಕೆ ಯತ್ನಿಸಿದ್ದರು. ಆದರೆ ಭಕ್ತರು ಪ್ರತಿಭಟಿಸಿ ಹಿಮ್ಮೆಟ್ಟಿಸಿದ್ದರು. ಪ್ರಯತ್ನ ವಿಫಲಗೊಂಡ ಬಳಿಕ ಇಬ್ಬರೂ ತಮ್ಮ ಮನೆಗಳಿಗೆ ವಾಪಸಾಗಲು ನಿರಾಕರಿಸಿದ್ದರಿಂದ ಅವರನ್ನು ಪೊಲೀಸ್ ರಕ್ಷಣೆಯಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಪೊಲೀಸರ ನೆರವಿನೊಂದಿಗೆ ಜನವರಿ ೨ರಂದು ನಸುಕಿನ ವೇಳೆಯಲ್ಲಿ ಅವರು ದೇವಾಲಯ ಪ್ರವೇಶಿಸಿದ್ದರು. ದೇವಾಲಯ ಪ್ರವೇಶದ ಬಳಿಕ ಕೆಲ ದಿನ ಆಜ್ಞಾತವಾಸದಲ್ಲಿದ್ದು, ಜನವರಿ ೧೫ರಂದು ಮನೆಗೆ ವಾಪಸಾದ ಕನಕದುರ್ಗ ಅತ್ತೆಯಿಂದ ಮರದ ತುಂಡಿನಿಂದ ಏಟು ತಿಂದು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಸರ್ಕಾರಿ ನೌಕರಿಯಲ್ಲಿರುವ ಕನಕದುರ್ಗ ತನ್ನ ಮೇಲೆ ಹಲ್ಲೆ ನಡೆಸಿದುದಾಗಿ ದೂರು ನೀಡಿದ ಕನಕದುರ್ಗ ಅತ್ತೆ ಕೂಡಾ ಮಪ್ಪುರಂ ಜಿಲ್ಲೆಯ ಪೆರಿಂಥಲಮನ್ನಾದ ಆಸ್ಪತ್ರೆಗೆ ದಾಖಲಾಗಿದ್ದರು. ಕುಟುಂಬದ ಮನವೊಲಿಸಲು ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ಪ್ರಯತ್ನಿಸಿದರೂ, ಅವರ ಮಾತುಗಳನ್ನು ಆಲಿಸಲು ನಿರಾಕರಿಸಿದ ಕುಟುಂಬವು ಕನಕದುರ್ಗ ಅವರನ್ನು ಮನೆಗೆ ಸೇರಿಸಲು ನಿರಾಕರಿಸಿತು. ಭಕ್ತರು ಮತ್ತು ಹಿಂದೂ ಸಮುದಾಯದ ಮುಂದೆ ಬಹಿರಂಗವಾಗಿ ಕ್ಷಮೆಯಾಚನೆ ಮಾಡಿ ಪ್ರಾಯಶ್ಚಿತ್ತ ಮಾಡಿಕೊಂಡ ಬಳಿಕ ಮಾತ್ರವೇ ಕುಟುಂಬದೊಳಕ್ಕೆ ಪ್ರವೇಶ ನೀಡುವುದಾಗಿ ಕುಟುಂಬ ಪಟ್ಟು ಹಿಡಿಯಿತು. ಲಕ್ಷಾಂತರ ಭಕ್ತರ ಭಾವನೆಗಳಿಗೆ ಘಾಸಿ ಮಾಡುವ ಮೂಲಕ ಆಕೆ ಸಮುದಾಯವೇ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ್ದಾಳೆ. ಆದ್ದರಿಂದ ತನ್ನ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳದ ವಿನಃ ಆಕೆಯನ್ನು ಕುಟುಂಬಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಕಟ್ಟಾ ಸಂಪ್ರದಾಯವಾದಿ ನಾಯರ್ ಕುಟುಂಬ ಹೇಳಿತು.  ಆಕೆ ಪತಿ ಕೂಡಾ ಸರ್ಕಾರಿ ನೌಕರರಾಗಿದ್ದಾರೆ.  ‘ಆಕೆ ಬಾರದಂತೆ ತಡೆಯುವ ಸಲುವಾಗಿ ಆಕೆಯ ಗಂಡ ಮನೆಗೆ ಬೀಗಹಾಕಿ ಕುಟುಂಬವನ್ನೇ ಬಂಧುವೊಬ್ಬರ ಮನೆಗೆ ಸ್ಥಳಾಂತರಿಸಿದ್ದರು. ಆಕೆಯನ್ನು ಪೆರಿಂಥಲಮನ್ನಾದ ಸರ್ಕಾರಿ ವಸತಿ ಗೃಹ ಒಂದರಲ್ಲಿ ಇರಿಸಲಾಯಿತು.  ಆಕೆಯ ಬಂಧುಗಳ ವಿರುದ್ಧ ನಾವು ಕೋರ್ಟಿಗೆ ಹೋಗುತ್ತೇವೆ ಎಂದು ಕನಕದುರ್ಗ ಜೊತೆಗೆ ದೇವಾಲಯ ಪ್ರವೇಶಿಸಿದ್ದ ಕಣ್ಣೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕಿ ಬಿಂದು ಅಮ್ಮಿನಿ ಹೇಳಿದರು.  ‘ಕನಕದುರ್ಗಳನ್ನು ತುಳಿಯುವ ಆಕೆಯ ಬಂಧುಗಳ ಯತ್ನ ನಡೆಯುವುದಿಲ್ಲ. ಕಾನೂನು ಬದ್ಧವಾಗಿ ಅವರೊಂದಿಗೆ ವ್ಯವಹರಿಸುತ್ತೇವೆ. ನಾನು ಈದಿನ ಬೆಳಗ್ಗೆ ಕೂಡಾ ಕನಕದುರ್ಗ ಜೊತೆ ಮಾತನಾಡಿದ್ದೇನೆ. ಆಕೆ ಸ್ಫೂರ್ತಿಯಿಂದ ಇದ್ದಾಳೆ. ಕೆಲವು ಶಕ್ತಿಗಳು ಆಕೆಯ ಕುಟುಂಬದ ಮೇಲೆ ಒತ್ತಡ ಹಾಕುತ್ತಿದೆ. ಇದು ಯಶಸ್ವಿಯಾಗದು ಎಂದು ಅಮ್ಮಣ್ಣಿ ನುಡಿದರು.
ತನ್ನ ಗಂಡ ಮತ್ತು ಪುತ್ರಿ ತನಗೆ ಸಂಪೂರ್ಣ ಬೆಂಬಲ ನೀಡಿರುವುದರಿಂದ ತಾನು ಇಂತಹ ಸಮಸ್ಯೆ ಎದುರಿಸಬೇಕಾಗಲಿಲ್ಲ ಎಂದು ಬಿಂದು ನುಡಿದರು. ತಿರುವನಂತಪುರಂನಲ್ಲಿ ಅಯ್ಯಪ್ಪ ಭಕ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕನಕದುರ್ಗ ಸಹೋದರ ಭರತ್ ಭೂಷಣ್ ತಮ್ಮ ಕುಟುಂಬ ಕೂಡಾ ಆಕೆಯನ್ನು ಬಹಿಷ್ಕರಿಸಿರುವುದಾಗಿ ಹೇಳಿದರು.  ’ಬಹಿರಂಗ ಕ್ಷಮಾಯಾಚನೆಯ ಬಳಿಕ ಮಾತ್ರವೇ ಆಕೆಯನ್ನು ಅಂಗೀಕರಿಸುತ್ತೇವೆ ಎಂದು ಭರತ್ ಭೂಷಣ್ ನುಡಿದರು. ಭೂಷಣ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತ.  ಬಲಪಂಥೀಯ ಸಂಘಟನೆಗಳ ಬೆದರಿಕೆಗಳನ್ನು ಅನುಸರಿಸಿ ಇಬ್ಬರೂ ಮಹಿಳೆಯರು ದೇವಾಲಯ ಪ್ರವೇಶದ ಬಳಿಕ ಕೆಲವು ದಿನ ಅಜ್ಞಾತವಾಸಕ್ಕೆ ತೆರಳಿದ್ದರು. ಅವರ ದೇವಾಲಯ ಪ್ರವೇಶವು ಕೇರಳ ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಹಲವಡೆ ಪ್ರತಿಭಟನೆ ಹಿಂಸೆಗೂ ತಿರುಗಿತ್ತು. ಬಹುತೇಕ ಆರ್ ಎಸ್ ಎಸ್ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ೭೦೦೦ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದರುಉಭಯ ಮಹಿಳೆಯರೂ ರಕ್ಷಣೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಲು ತುಳಿದ ಬಳಿಕ, ಕಳೆದ ವಾರ ಸುಪ್ರೀಂಕೋರ್ಟ್ ಇಬ್ಬರಿಗೂ ದಿನದ ೨೪ ಗಂಟೆ ಕೂಡಾ ರಕ್ಷಣೆ ಒದಗಿಸುವಂತೆ ಆಜ್ಞಾಪಿಸಿತ್ತು. ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ಸುಪ್ರೀಂಕೋರ್ಟ್ ನೀಡಿದ ಸೆಪ್ಟೆಂಬರ್ ೨೮ರ ತೀರ್ಪಿನ ಬಳಿಕ ದೇವಾಲಯ ಪರಿಸರದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಪರಿಣಾಮವಾಗಿ ದೇವಾಲಯದ ಆದಾಯದ ಮೇಲೂ ವ್ಯತಿರಿಕ್ತ ಪರಿಣಾಮವಾಗಿತ್ತುತಿರುವಾಂಕೂರು ದೇವಸ್ವಂ ಮಂಡಳಿಯ ಟ್ರಸ್ಟಿ ಒಬ್ಬರ ಪ್ರಕಾರ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ, ಯಾತ್ರಿಕರ ಸಂಖ್ಯೆ ಶೇಕಡಾ ೩೦ರಷ್ಟು ಕುಗ್ಗಿದ್ದು, ಆದಾಯ ೯೬.೫೫ ಕೋಟಿ ರೂಪಾಯಿಗಳಷ್ಟು ತಗ್ಗಿದೆ. ಎರಡು ತಿಂಗಳ ಯಾತ್ರಾ ಋತುವಿನ ಬಳಿಕ ಭಾನುವಾರ ದೇವಾಲಯವನ್ನು ಮುಚ್ಚಲಾಗಿತ್ತು.

2019: ಕೋಲ್ಕತ: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ವಿಪಕ್ಷ ಮೈತ್ರಿಕೂಟ ರಚನೆಯ ಯತ್ನಕ್ಕಾಗಿ ದಾಳಿ ನಡೆಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಲೋಕಸಭಾ ಚುನಾವಣೆಗಾಗಿ ಪಕ್ಷದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು.  ‘೨೦-೨೫ ಮಂದಿ ನಾಯಕರು ಕೈ ಕೈ ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರಾಭವಗೊಳಿಸಲು ಸಾಧ್ಯವಿಲ್ಲ, ಮಮತಾ ದೀದಿ. ಪ್ರಧಾನಿಯವರನ್ನು ೧೦೦ ಕೋಟಿ ಜನ ಬೆಂಬಲಿಸುತ್ತಿದ್ದಾರೆ ಎಂದು ಅಮಿತ್ ಶಾ ಅವರು ಮಮತಾ ಬ್ಯಾನರ್ಜಿ ಅವರಿಗೆ ಟಾಂಗ್ ನೀಡಿದರುವಿಪಕ್ಷ ನಾಯಕರು ಒಟ್ಟಾಗುತ್ತಿರುವುದನ್ನುಮೋದಿ ವಿರೋಧಿ ವೇದಿಕೆ ಎಂಬುದಾಗಿ ಬಣ್ಣಿಸಿದ ಶಾ, ’ಮಮತಾ ಬ್ಯಾನರ್ಜಿ ಅವರು ಕಳೆದ ಶನಿವಾರ ಕೋಲ್ಕತದಲಿ ಸಂಘಟಿಸಿದ ವಿರೋಧ ಪಕ್ಷಗಳ ರಾಲಿಯಲ್ಲಿ ಮಂದಿ ಪ್ರಧಾನಿ ಮಂತ್ರಿ ಅಭ್ಯರ್ಥಿಗಳಿದ್ದರು ಎಂದು ಛೇಡಿಸಿದರು.   ‘ಇದು ಎಂತಹ ಘಟಬಂಧನ್? ಇದು ಅಧಿಕಾರ ಮತ್ತು ಸ್ವ ಹಿತದ ಮೈತ್ರಿ. ಅವರು (ವಿರೋಧಿ ನಾಯಕರು) ವಂದೇ ಮಾತರಂ ಮತ್ತು ಭಾರತ್ ಮಾತಾ ಕೀ ಜೈ ಪಠಿಸಲಾರರು ಎಂದು ಅವರು ನುಡಿದರು. ಅಕ್ರಮ ವಲಸೆಗಾರರು ರಾಜ್ಯವನ್ನು ಪ್ರವೇಶಿದಂತೆ ತಡೆಯಲು ಖಾತ್ರಿ ನೀಡುವ ಪಕ್ಷಕ್ಕೆ ಮತದಾನ ಮಾಡಿ ಎಂದು ಜನತೆಯನ್ನು ಒತ್ತಾಯಿಸಿದ ಬಿಜೆಪಿ ಮುಖ್ಯಸ್ಥ, ’ಪೌರತ್ವ ಮಸೂದೆ ಬಗೆಗಿನ ನಿಮ್ಮ ನಿಲುವು ಏನೆಂಬುದನ್ನು ಸ್ಪಷ್ಟ ಪಡಿಸಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯನ್ನು ಆಗ್ರಹಿಸಿದರು.  ‘ಮಮತಾ ಬ್ಯಾನರ್ಜಿಯವರು ಮಸೂದೆಯನ್ನು ವಿರೋಧಿಸುತ್ತಾರೆ, ಏಕೆಂದರೆ ಅವರಿಗೆ ತಮ್ಮ ವೋಟ್ ಬ್ಯಾಂಕ್ ಬಗ್ಗೆ ಮಾತ್ರ ಕಾಳಜಿ ಇದೆ ಎಂದು ಶಾ ನುಡಿದರು. ಪೌರತ್ವ (ತಿದ್ದುಪಡಿ) ಮಸೂದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ಬರುವ ಹಿಂದುಗಳು, ಸಿಕ್ಖರು, ಕ್ರೈಸ್ತರು, ಪಾರ್ಸಿಗಳು, ಜೈನರು ಮತ್ತು ಬೌದ್ಧರಿಗೆ ಪೌರತ್ವವನ್ನು ಕಲ್ಪಿಸುತ್ತದೆಪಶ್ಚಿಮ ಬಂಗಾಳ ರಾಜ್ಯ ಸರ್ಕಾರವು ಬಂಗಾಳದ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ ಎಂದು ಆಪಾದಿಸಿದ ಅಮಿತ್ ಶಾ ಅವರು ೨೦೧೯ರ ಲೋಕಸಭಾ ಚುನಾವಣೆಯು ಭ್ರಷ್ಟ ತೃಣಮೂಲ ಕಾಂಗ್ರೆಸ್ ಅಧಿಕಾರದಲ್ಲಿ ಇನ್ನೂ ಉಳಿಯಲಿದೆಯೇ ಎಂಬ ತೀರ್ಮಾನವನ್ನು ಮಾಡುತ್ತದೆ ಎಂದು ಹೇಳಿದರು. ಬಂಗಾಳವು ಒಂದು ಕಾಲದಲ್ಲಿ ರಾಷ್ಟ್ರದ ನಾಯಕನಾಗಿತ್ತು. ಆದರೆ ಈಗ ಅತ್ಯಂತ ಕೆಳಮಟ್ಟದ ರಾಜ್ಯಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಬಂಗಾಳ ಸರ್ಕಾರದ ನೌಕರರು ಕೇಂದ್ರ ಸರ್ಕಾರಿ ನೌಕರರಿಗಿಂತ ಶೇಕಡಾ ೪೯ರಷ್ಟು ಕಡಿಮೆ ತುಟಿಭತ್ಯೆ (ಡಿಎ) ಪಡೆಯುತ್ತಿದ್ದಾರೆ ಎಂದು ಹೇಳಿದ ಅಮಿತ್, ’ಹಣವೆಲ್ಲ ಎಲ್ಲಿಗೆ ಹೋಯಿತು?’ ಎಂದು ಪ್ರಶ್ನಿಸಿದರು. ’ಇದು ಮಮತಾ ಬ್ಯಾನರ್ಜಿ ಸರ್ಕಾರದ ಆಡಳಿತ ನಿರ್ವಹಣೆಯ ವೈಖರಿ. ಇದಕ್ಕಿಂತ ಎಡ ರಂಗ ಸರ್ಕಾರವರೇ ಉತ್ತಮವಾಗಿತ್ತು ಎಂಬುದಾಗಿ ಈಗ ಜನರು ಭಾವಿಸುವಂತಾಗಿದೆ ಎಂದು ಶಾ ಹೇಳಿದರುತೃಣಮೂಲ ಸರ್ಕಾರಕ್ಕೆ ಬಿಜೆಪಿ ಬೆಳವಣಿಗೆ ಬಗ್ಗೆ ಭಯವಾಗಿದೆ. ಹೀಗಾಗಿ ಅದು ಬಂಗಾಳದಲ್ಲ ಬಿಜೆಪಿ ರಥಯಾತ್ರೆಗಳನ್ನು ಸ್ಥಗಿತಗೊಳಿಸಿತು. ’ಆಡಳಿತವನ್ನು ರಾಜಕೀಯಗೊಳಿಸಲಾಗಿದೆ. ನನ್ನ ಹೆಲಿಕಾಪ್ಟರ್ ಕೆಳಗಿಳಿಯಲು ಮತ್ತು ರಥಯಾತ್ರೆಗೆ ಅನುಮತಿ ಇರಲಿಲ್ಲ ಎಂದು ನುಡಿದ ಬಿಜೆಪಿ ಅಧ್ಯಕ್ಷ, ಮಮತಾ ಅವರು ನಮ್ಮ ಯಾತ್ರೆಗಳನ್ನು ನಿಲ್ಲಿಸಬಹುದು, ಆದರೆ ಜನರ ಹೃದಯಗಳಿಂದ ಬಿಜೆಪಿಯನ್ನು ಕಿತ್ತುಹಾಕಲು ಸಾಧ್ಯವಿಲ್ಲ ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಸಮಸ್ಯೆಯಾಗುತ್ತದೆ ಎಂದು ನೆಪ ಹೇಳಿ ಬಿಜೆಪಿ ರಥಯಾತ್ರೆಗಳಿಗೆ ಬಂಗಾಳ ಸರ್ಕಾರ ಅನುಮತಿ ನಿರಾಕರಿಸಿತ್ತು. ಬಿಜೆಪಿಯು ಅನುಮತಿ ನಿರಾಕರಣೆಯನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸಿತ್ತು. ಆದರೆ ಯಾವುದೇ ಪರಿಹಾರ ಪಡೆಯುವಲ್ಲಿ ವಿಫಲವಾಗಿತ್ತು. ಏನಿದ್ದರೂ, ಸುಪ್ರೀಂಕೋರ್ಟ್ ಬಿಜೆಪಿಗೆ ಸಾರ್ವಜನಿಕ ಸಭೆಗಳನ್ನು ನಡೆಸಲು ಅನುಮತಿ ನೀಡಿತುಮಾಲ್ಡಾದಲ್ಲಿ ಶಾ ಅವರ ರ್ಯಾಲಿಗೂ ಮುಂಚಿತವಾಗಿ ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯುವುದಕ್ಕೆ ಸಂಬಂಧಿಸಿದಂತೆ ಉಗ್ರ ವಾಕ್ಸಮರ ನಡೆದಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಮಾನವೂ ಬಂದಿಳಿಯುವ ಹೋಟೆಲ್ ಗೋಲ್ಡನ್ ಪಾಕ್ ಎದುರಿನ ಮೈದಾನದಲ್ಲಿ ಅಮಿತ್ ಶಾ ಅವರ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡಲಾದು ಎಂದು ಜಿಲ್ಲಾಡಳಿತವು ಮೊದಲು ಬಿಜೆಪಿಗೆ ತಿಳಿಸಿತ್ತು. ವಿಮಾನ ನಿಲ್ದಾಣದ ನವೀಕರಣ ಕಾರ್ ನಡೆಯುತ್ತಿದ್ದು, ನಿರ್ಮಾಣಕ್ಕೆ ಸಂಬಂಧಿಸಿದ ವಸ್ತುಗಳ ರನ್ ವೇಯಲ್ಲಿ ಚೆಲ್ಲಾ ಚೆದರಾಗಿ ಬಿದ್ದಿರುವುದರಿಂದ ಹೆಲಿಕಾಪ್ಟರ್ ಇಳಿಸಲು ಅನುಮತಿ ನೀಡಲಾಗದು ಎಂದು ಜಿಲ್ಲಾಡಳಿತ ಹೇಳಿತ್ತುಆದರೆ, ರಾಜ್ಯ ಸರ್ಕಾರವು ಮೈದಾನವನ್ನು ಈಗಾಗಲೇ ಬಳಸುತ್ತಿರುವ ಬಗ್ಗೆ ಸ್ಥಳೀಯ ಬಿಜೆಪಿ ಘಟಕವು ಬೊಟ್ಟು ಮಾಡಿತು. ಕೇಂದ್ರ ಸಚಿವ ರವಿ ಶಂಕರ ಪ್ರಸಾದ್ ಅವರು ಬ್ಯಾನರ್ಜಿ ಸರ್ಕಾರವು ಶಾ ಅವರ ಹೆಲಿಕಾಪ್ಟರ್ ಮಾಲ್ಡಾದಲ್ಲಿ ಇಳಿಯದಂತೆ ಮಾಡಲು ಅಧಿಕಾರವನ್ನು ದುರುಪಯೋಗ ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರುಹೆಲಿಕಾಪ್ಟರ್ ಇಳಿಯಲು ನಿರಾಕರಣೆಗೆ ಸುಳ್ಳು ಕಾರಣಗಳನ್ನು ನೀಡಲಾಗುತ್ತಿದೆ ಎಂದೂ ಪ್ರಸಾದ್ ಮಮತಾ ಸರ್ಕಾರದ ವಿರುದ್ಧ ಹರಿ ಹಾಯ್ದರು. ತಾವು ಪ್ರಜಾಪ್ರಭುತ್ವವನ್ನು ನಂಬುವುದರಿಂದ ಟ್ಟಣಗಳಲ್ಲಿನ ಹೆಲಿಪ್ಯಾಡುಗಳನ್ನು ಬಳಸಲು ಬಿಜೆಪಿ ಮುಖ್ಯಸ್ಥರಿಗೆ ತಮ್ಮ ಸರ್ಕಾರವು ಅನುಮತಿ ನೀಡಿದೆ ಎಂದು ಮುಖ್ಯಮಂತ್ರಿ ಬ್ಯಾನರ್ಜಿ ಬಳಿಕ ಹೇಳಿದರು.
  
2019: ಸೂರತ್: ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರವನ್ನು ಅಂತಿಮಗೊಳಿಸಿದ ಎನ್ಡಿಎ ಸರ್ಕಾರದ ನಿರ್ಣಯವನ್ನು ಸಮರ್ಥಿಸಿ ಒಪ್ಪಂದದ ವಿವರಗಳನ್ನು ಸರಳವಾಗಿ ಜನರಿಗೆ ಅರ್ಥವಾಗುವಂತೆ ವಿವರಿಸಿದ್ದಕ್ಕಾಗಿ ಗುಜರಾತಿಯ ಯುವ ಜೋಡಿಯೊಂದು ಪ್ರಧಾನಿ ನರೇಂದ್ರ ಮೋದಿ ಅವರ ಶ್ಲಾಘನೆಗೆ ಪಾತ್ರವಾಯಿತು. ಸೂರತ್ ಮೂಲದ ಯುವ  ಜೋಡಿ ಯುವರಾಜ್ ಪೊಖಾರ್ಣ ಮತ್ತು ವಧು ಸಾಕ್ಷಿ ಅಗರ್ವಾಲ್ ಅವರಿಗೆ  ಬರೆದಿರುವ ಪತ್ರದಲ್ಲಿ ಪ್ರಧಾನಿ ಮದುವೆ ಆಮಂತ್ರಣಪತ್ರಿಕೆಯಲ್ಲಿ ಇರುವ ಮಾಹಿತಿ ಕೌಶಲಪೂರ್ಣವಾದುದು ಎಂದು ಬಣ್ಣಿಸಿ ವಿಶಿಷ್ಠ ವಿವಾಹ ಆಮಂತ್ರಣ ಪತ್ರಿಕೆಯು ರಾಷ್ಟ್ರಕ್ಕಾಗಿ ಇನ್ನಷ್ಟು ಶ್ರಮವಹಿಸಿ ದುಡಿಯಲು ತಮಗೆ ಪ್ರೇರಣೆ ನೀಡಿದೆ ಎಂದು ಹೇಳಿದರು. ಈ ಯುವಜೋಡಿ ಈದಿನ  (ಜನವರಿ ೨೨ರಂದು) ವೈವಾಹಿಕ ಬದುಕಿಗೆ ಪದಾರ್ಪಣ ಮಾಡಿತು. ಹಿಂದಿನ ದಿನ ಮಾಧ್ಯಮದ ಜೊತೆಗೆ ಮಾತನಾಡಿದ ಪೊಖಾರ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಬಬಿತಾ ಪ್ರಕಾಶ್ ಪೊಖಾರ್ಣ ಅವರ ಹೆಸರಿಗೆ ಬರೆದಿರುವ ಜನವರಿ ೧೭ರ ಮಿಂಚಂಚೆ (-ಮೇಲ್) ತಮಗೆ ತಲುಪಿದೆ ಎಂದು ಹೇಳಿದರು.  ‘ಯುವರಾಜ್ ಮತ್ತು ಸಾಕ್ಷಿ ಅವರ ವಿವಾಹ ಸಂಭ್ರಮದಲ್ಲಿರುವ ಪೊಖಾರ್ಣ ಕುಟುಂಬಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಅತಿಥಿಗಳಿಗೆ ಕಳುಹಿಸಿದ ಮದುವೆ ಆಮಂತ್ರಣ ಪತ್ರಿಕೆಯಲ್ಲಿನ ವಿಶಿಷ್ಠ ಸಂದೇಶವನ್ನು ನಾನು ಗಮನಿಸಿದ್ದೇನೆ ಎಂದು ಪ್ರಧಾನಿಯವರು ತಮ್ಮ ಸಹಿ ಸಹಿತವಾಗಿ ಕಳುಹಿಸಿರುವ ಪತ್ರದಲ್ಲಿ ಬರೆದಿದ್ದರು. ಕೌಶಲಪೂರ್ಣವಾದ ವಿವಾಹ ಆಮಂತ್ರಣ ಪತ್ರಿಕೆಯಲ್ಲಿನ ಮಾಹಿತಿ ರಾಷ್ಟ್ರದ ಬಗೆಗಿನ ನಿಮ್ಮ ಅಚಲ ಪ್ರೇಮ ಮತ್ತು ಕಾಳಜಿಯನ್ನು ಪ್ರತಿಫಲಿಸಿದೆ. ಇದು ನನಗೂ ರಾಷ್ಟ್ರಕ್ಕಾಗಿ ಇನ್ನಷ್ಟು ಶ್ರಮ ವಹಿಸಿ ದುಡಿಯಲು ಪ್ರೇರಣೆ ನೀಡುತ್ತಿದೆ ಎಂದು ಮೋದಿ ಬರೆದಿದ್ದರು.  ‘ಯುವ ಜೋಡಿಗೆ ಸಂತಸಮಯ ಮತ್ತು ಸಮೃದ್ಧ ಬದುಕನ್ನು ಹಾರೈಸುವೆ ಮತ್ತು ಆಶೀರ್ವಾದಗಳನ್ನು ನೀಡುವೆ ಎಂದು ಮೋದಿಯವರು ಪತ್ರದಲ್ಲಿ ಬರೆದಿದ್ದು, ಪತ್ರವನ್ನು ಯುವರಾಜ್ ಪೊಖಾರ್ಣ ಮಾಧ್ಯಮದ ಜೊತೆಗೆ ಹಂಚಿಕೊಂಡರು. ಮದುವೆ ಆಮಂತ್ರಣದ ಎರಡನೇ ಪುಟದಲ್ಲಿ ಯುವ ಜೋಡಿಯು,  ’ರಫೇಲ್ ವ್ಯವಹಾರ ಕುರಿತ ವಾಸ್ತವಾಂಶಗಳು ಶೀರ್ಷಿಕೆಯಡಿಯಲ್ಲಿ ಫ್ರಾನ್ಸ್ ಜೊತೆಗಿನ ಬಹುಕೋಟಿ ರಕ್ಷಣಾ ಒಪಂದದ ಅಂಶಗಳನ್ನು ವಿವರಿಸಿ ಸಮರ್ಥಿಸಲು ಯತ್ನಿಸಸಲಾಗಿತ್ತು. ಮೂರ್ಖ ಕೂಡಾ ಸರಳವಾಗಿ ಹಾರಲು ಸನ್ನದ್ಧವಾಗಿರುವ ವಿಮಾನದ ಬೆಲೆಯನ್ನು ಶಸ್ತ್ರ ಸಜ್ಜಿತ ವಿಮಾನದ ಬೆಲೆಯ ಜೊತೆಗೆ ಹೋಲಿಸಲಾರ ಎಂದು ಪ್ರಾರಂಭವಾಗುವ ವಾಕ್ಯವು ಕೆಲವು ಅಂಕಿಅಂಶಗಳು, ಹೋಲಿಕೆಗಳು ಮತ್ತು ಮಾಹಿತಿಗಳನ್ನು ನೀಡಿತ್ತು. ಎನ್ಡಿಎ ಕುದುರಿಸಿರುವ ಒಪ್ಪಂದದಡಿಯಲ್ಲಿ ಯುದ್ಧ ವಿಮಾನದ ಬೆಲೆಯು ಯುಪಿಎ ಮಾತುಕತೆ ನಡೆಸಿದ್ದ ಬೆಲೆಗಿಂತಲೂ ಕಡಿಮೆಯಾಗುತ್ತದೆ. ಕಾಂಗ್ರೆಸ್ ಪಕ್ಷವು ಉಲ್ಲೇಖಿಸುವ ಬೆಲೆಯ (೫೨೬ ಕೋಟಿ ರೂಪಾಯಿ) ಅಧಿಕೃತ ದಾಖಲೆಗಳಲ್ಲಿ ಎಲ್ಲೂ ಕಂಡುಬರುವುದಿಲ್ಲ. ಶಸ್ತ್ರಸಜ್ಜಿತ ಯುದ್ಧ ವಿಮಾನವು ಶೇಕಡಾ ೨ರಷ್ಟು ಅಗ್ಗವಾಗಿದೆ ಎಂದು ಅದು ಹೇಳಿತ್ತು. ಡಿಆರ್ಡಿಒ, ಟಾಟಾ, ಮಹೀಂದ್ರ ಸೇರಿದಂತೆ ೭೨ ಕಂಪೆನಿಗಳಿಗೆ ಆಫ್ ಸೆಟ್ ನೀಡಲಾಗಿದೆ. ಇವುಗಳಲ್ಲಿ ಎಚ್ಎಎಲ್ ಕೂಡಾ ಸೇರಿದೆ ಎಂದು ಪತ್ರಿಕೆ ಹೇಳಿತ್ತು. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ನ್ನು (ಎಚ್ ಎಎಲ್) ಕೊನೆಯ ಗಳಿಗೆಯಲ್ಲಿ ಹೊರಗಿಡಲಾಯಿತು ಎಂಬ ಆಪಾದನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಪ್ರಸ್ತಾಪಿಸಿದ ಯುವಜೋಡಿ, ’ಸ್ವತಃ ಯುಪಿಎ ಸರ್ಕಾರವೇ ಕೆಲಸ ಮಾಡಲು . ಪಟ್ಟು ಹೆಚ್ಚುವರಿ ಮಾನವ ಗಂಟೆಗಳು ಬೇಕಾಗುತ್ತವೆ ಎಂದು ಉಲ್ಲೇಖಿಸಿ ಎಚ್ಎಎಲ್ಗೆ ಗುತ್ತಿಗೆ ನೀಡಲು ನಿರಾಕರಿಸಿತ್ತು ಎಂದು ಬರೆಯುವ ಮೂಲಕ ಮೋದಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿತು. ಮೋದಿಯವರು ತಮ್ಮ ಪ್ರಯತ್ನವನ್ನು ಸೌಜನ್ಯ ಪೂರ್ವಕವಾಗಿ ಗಮನಿಸಿ ಶ್ಲಾಘಿಸಿರುವುದು ತಮಗೆ ಅತೀವ ಹರ್ಷವನ್ನುಂಟು ಮಾಡಿದೆ ಎಂದು ಪೊಖಾರ್ಣ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ‘ಪ್ರಧಾನಿಯವರು ನನ್ನಂತಹ ಸಾಮಾನ್ಯ ವ್ಯಕ್ತಿಗೂ ಇಷ್ಟೊಂದು ಮಹತ್ವ ನೀಡಿರುವುದು ಕಂಡು ನನಗೆ ಅಚ್ಚರಿಯಾಗಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿನ ವಿವರಗಳು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಜನರ ಸಂಶಯಗಳನ್ನು ನಿವಾರಿಸುವುದು ಎಂಬುದು ನನ್ನ ಆಶಯ ಎಂದು ತಾವು ಬಿಜೆಪಿ ಬೆಂಬಲಿಗ ಎಂಬುದಾಗಿ ಒಪ್ಪಿಕೊಂಡ ಪೊಖಾರ್ಣ ನುಡಿದರು.  ಮಹಿಳೆಯರು ಅದರಲ್ಲೂ ಮುಖ್ಯವಾಗಿ ಗೃಹಿಣಿಯರಿಗೆ ವ್ಯವಹಾರದ ಬಗ್ಗೆ ಜಾಗೃತಿ ಮೂಡಿಸುವುದು ತಮ್ಮ ಕೆಲಸದ ಉದ್ದೇಶ ಎಂದು ಪೊಖಾರ್ಣ ಅವರ ವಧು ಸಾಕ್ಷಿ ಅಗರ್ವಾಲ್ ಹೇಳಿದರು. ಒಪ್ಪಂದಕ್ಕೆ ಸಂಬಂಧಿಸಿದಂತೆ ಅಕ್ರಮಗಳು ನಡೆದಿವೆ ಎಂಬುದಾಗಿ ಕಾಂಗ್ರೆಸ್ ಮಾಡಿದ ಆಪಾದನೆಗಳನ್ನು ಬಿಜೆಪಿ ಮತ್ತು ಮೋದಿ ಸರ್ಕಾರ ಖಂಡತುಂಡವಾಗಿ ನಿರಾಕರಿಸಿತ್ತು. ಈ ಒಪ್ಪಂದವು ರಾಷ್ಸ್ರಕ್ಕೆ ಅನುಕೂಲಕರವಾದದ್ದು ಎಂಬುದನ್ನು ಜನರಿಗೆ ತಿಳಿಸುವುದು ನಮ್ಮ ಆಶಯ. ಹಲವಾರು ಮಹಿಳೆಯರು, ವಿಶೇಷವಾಗಿ ಗೃಹಿಣಿಯರಿಗೆ ಒಪ್ಪಂದ ತಾಂತ್ರಿಕತೆಗಳ ಬಗ್ಗೆ ಗೊತ್ತಿಲ್ಲ. ಆದ್ದರಿಂದ ಅವರಿಗೆ ಅರ್ಥವಾಗುವಂತೆ ನಾವು ಸರಳವಾಗಿ ವ್ಯವಹಾರದ ಬಗ್ಗೆ ತಿಳಿಸಿದ್ದೇವೆ ಎಂದು ಸಾಕ್ಷಿ ನುಡಿದರು. ಯುವ ಜೋಡಿಯು ಆಮಂತ್ರಣ ಪತ್ರಿಕೆಯಲ್ಲೇ ಅತಿಥಿಗಳಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಮತದಾನ ಮಾಡುವಂತೆಯೂ ಮನವಿ ಮಾಡಿತು.  ‘ನಮೋ ಆಪ್ ಮೂಲಕ ಬಿಜೆಪಿಗೆ ನೀವು ಕೊಡುವ ಯಾವುದೇ ಮೊತ್ತದ ಕಾಣಿಕೆ ಮತ್ತು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ನೀಡುವ ಮತವೇ ನಮಗೆ ನೀಡುವ ಉಡುಗೊರೆ ಮತ್ತು ಆಶೀರ್ವಾದ ಎಂದು ಆಹ್ವಾನ ಪತ್ರಿಕೆಯ ಮೊದಲ ಪುಟದಲ್ಲಿನ ಅಡಿ ಟಪ್ಪಣಿ ಹೇಳಿತು.

2019: ನವದೆಹಲಿ: ವಿಶ್ವ ವಿದ್ಯಾಲಯ ಅನುದಾನ ಆಯೋಗದ ನೆರವು ಪಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಮೀಸಲಾತಿ ಕೋಟಾ ನಿರ್ಧರಿಸುವಾಗಇಲಾಖೆಯನ್ನು ಘಟಕವಾಗಿ ಪರಿಗಣಿಸಬೇಕು ಹೊರತುವಿಶ್ವವಿದ್ಯಾಲಯವನ್ನು ಅಲ್ಲ ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್, ಸಂಬಂಧ ಕೇಂದ್ರ ಸರ್ಕಾರವು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿತು. ಇದರಿಂದಾಗಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಜಾತಿಗಳು (ಎಸ್ಟಿ), ಪರಿಶಿಷ್ಟ ಪಂಗಡಗಳು (ಎಸ್ಟಿ) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮೀಸಲಾದ ಹುದ್ದೆಗಳು ಭಾರೀ ಪ್ರಮಾಣದಲ್ಲಿ ಕಡಿತಗೊಳ್ಳುವ ಸಾಧ್ಯತೆಗಳಿವೆ ನ್ಯಾಯಮೂರ್ತಿ ಉದಯ್ ಯು ಲಲಿತ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ೨೦೧೭ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಯುಜಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ, ಹೈಕೋರ್ಟ್ ತೀರ್ಪುತರ್ಕಬದ್ಧವಾಗಿದೆ ಎಂದು ಹೇಳಿತು. ವಿಶ್ವ ವಿದ್ಯಾಲಯಗಳಲ್ಲಿ ಒಂದೇ ಮಾದರಿಯ ಅರ್ಹತೆ, ವೇತನ ಶ್ರೇಣಿ ಮತ್ತು ಸ್ಥಾನಮಾನ ಆಧರಿಸಿ ಹುದ್ದೆಗಳನ್ನು  ಗುಂಪುಗೂಡಿಸುವುದಕ್ಕೆ ಪೀಠವು ಒಪ್ಪಿಗೆ ನಿರಾಕರಿಸಿತು.  ‘ಅಂಗರಚನಾಶಾಸ್ರ್ರದ ಉಪನ್ಯಾಸನಕನ ಹುದ್ದೆಯನ್ನು ಭೂಗರ್ಭ ಶಾಸ್ತ್ರದ ಉಪನ್ಯಾಸಕನ ಹುದ್ದೆ ಜೊತೆಗೆ ಹೇಗೆ ಹೋಲಿಸಲು ಸಾಧ್ಯ? ನೀವು ಕಿತ್ತಳೆಗಳನ್ನು ಏಪಲ್ ಜೊತೆಗೆ ಸೇರಿಸುತ್ತೀರಾ?’ ಎಂದು ಪ್ರಶ್ನಿಸಿದ ಪೀಠ, ವಿವಿಧ ಇಲಾಖೆಗಳಿಗೆ ತುಂಬಲಾದ ಶಿಕ್ಷಕ ಹುದ್ದೆಗಳು ಪರಸ್ಪರ ಬದಲಾವಣೆ ಮಾಡುವಂತಹವು ಅಲ್ಲವಾದ ಕಾರಣ ಮೀಸಲಾತಿ ಹುದ್ದೆಗಳ ಘೋಷಣೆಗೆ ವಿಶ್ವವಿದ್ಯಾಲಯವನ್ನು  ಘಟಕವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತು. ಮೀಸಲಾತಿಗಳನ್ನು ನೀಡಲು ಇಲಾಖೆಯನ್ನು ಘಟಕವಾಗಿ ಪರಿಗಣಿಸುವುದು ಹಲವಾರು ತಾರತಮ್ಯಗಳಿಗೆ ಕಾರಣವಾಗುತ್ತದೆ ಮತ್ತು ಮೀಸಲಾತಿ ನೀಡಿಕೆಯ ಸಂವಿಧಾನದ ಆದೇಶಕ್ಕೆ ಅನುಗುಣವಾಗುವುದಿಲ್ಲ ಎಂಬುದಾಗಿ ಪೀಠದ ಮನವೊಲಿಸಲು ಅಡಿಷನಲ್ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಯತ್ನಿಸಿದರು. ಆದರೆ ಪೀಠಕ್ಕೆ ಅವರ ವಾದ ಸಮಾಧಾನವಾಗಲಿಲ್ಲ. ವಿಷಯಕ್ಕೆ ಸಂಬಂಧ ಪಟ್ಟಂತೆ ಕಾನೂನಿನ ಪ್ರಶ್ನೆಯನ್ನು ಮುಕ್ತವಾಗಿಡಲೂ ನಿರಾಕರಿಸಿದ ಪೀಠ, ಬಗ್ಗೆ ಯಾವುದೇ ಸ್ಪಷ್ಟನೆಗಳನ್ನು ನೀಡಲೂ ಅವಕಾಶ ನಿರಾಕರಿಸಿತು. ಕೇಂದ್ರದ ಮೇಲ್ಮನವಿ ವಜಾದ ಪರಿಣಾಮವಾಗಿ, ಕೇಂದ್ರೀಯ ವಿಶ್ವ ವಿದ್ಯಾಲಯಗಳಲ್ಲಿ ಶೇಕಡಾ ೩೫ರಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧದ ನನೆಗುದಿ ಸ್ಥಿತಿ ಇತ್ಯರ್ಥವಾದಂತಾಗಿದೆ.
ವಿಷಯ ಸುಪ್ರೀಂಕೋರ್ಟಿನಲ್ಲಿ ಇತ್ಯರ್ಥವಾಗದೆ ಉಳಿದಿದ್ದ ಕಾರಣ ಕೇಂದ್ರೀಯ ವಿಶ್ವವಿದ್ಯಾಲಯಗಳ ಸುಮಾರು ೬೦೦೦ ಖಾಲಿ ಹುದ್ದೆಗಳ ನೇಮಕಾತಿ ಸಾಧ್ಯವಾಗಿರಲಿಲ್ಲಯುಜಿಸಿ ಅನುದಾನಿತ ವಿಶ್ವ ವಿದ್ಯಾಲಯಗಳಲ್ಲಿ ರೋಸ್ಟರ್ ಆಧಾರಿತ ಮೀಸಲಾತಿ ೨೦೦೬ರಿಂದ ಜಾರಿಯಲ್ಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ)ಸೇರಿದ ಅಭ್ಯರ್ಥಿಗಳು ರೋಸ್ಟರ್ ಅಡಿಯಲ್ಲಿ ಮೀಸಲಾತಿಗೆ ಅರ್ಹರಾಗಿದ್ದಾರೆ. ವಿಶ್ವ ವಿದ್ಯಾಲಯ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಶೇಕಡಾ ೧೫, ಪರಿಶಿಷ್ಟ ಪಂಗಡಗಳಿಗೆ ಶೇಕಡಾ . ಮತ್ತು ಒಬಿಸಿ ಅರ್ಜಿದಾರಿಗೆ ಶೇಕಡಾ ೨೭ರಷ್ಟು ಮೀಸಲಾತಿ ಇದೆ. ಯುಜಿಸಿ ನಿಯಮಗಳು ಖಾಲಿ ಹುದ್ದೆಗಳನ್ನು ತುಂಬಲು ವಿಶ್ವವಿದ್ಯಾಲಯ ಮಟ್ಟದಲ್ಲಿ ಮೀಸಲಾತಿ ನೀಡಲು ಅವಕಾಶ ಕಲ್ಪಿಸಿವೆ. ಸೂಚಿತವಾದ ಸಮಾನ ಅರ್ಹತೆ ಮತ್ತು ಸಮಾನ ವೇತನ ಶ್ರೇಣಿ ಹಾಗೂ ಸ್ಥಾನಮಾನ ಹೊಂದಿರುವ ವಿಶ್ವ ವಿದ್ಯಾಲಯ ಅಥವಾ ಕಾಲೇಜಿನ ಹುದ್ದೆಗಳನ್ನು ಒಟ್ಟುಗೂಡಿಲು ಮತ್ತು ಮೀಸಲಾತಿ ಕೋಟಾ ನಿಗದಿ ಪಡಿಸಲೂ ಅವು ಅವಕಾಶ ನೀಡಿವೆ. ಆದರೆ ಬಿಎಚ್ಯು ವಿದ್ಯಾರ್ಥಿ ವಿವೇಕಾನಂದ ತಿವಾರಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಪುರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ನಿಯಮಾವಳಿಯನ್ನು ತಾರತಮ್ಯದ್ದು ಹಾಗೂ ತರ್ಕಹೀನವಾದದ್ದು ಎಂದು ಹೇಳಿ ರದ್ದು ಪಡಿಸಿತ್ತು. ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಪೀಠ ಈಗ ಎತ್ತಿ ಹಿಡಿಯಿತು. ಅಲಹಾಬಾದ್ ತೀರ್ಪನ್ನು ಆಧರಿಸಿ ಯುಜಿಸಿ ೨೦೧೮ರ ಮಾರ್ಚ್ತಿಂಗಳಲ್ಲಿ ೨೦೦೬ರಕ್ಕೆ ಹಿಂದಿನ ನಿಯಮಾವಳಿಯನ್ನು ರದ್ದು ಪಡಿಸಿ ಆದೇಶ ಹೊರಡಿಸಿತ್ತು. ಆದರೆ ಬಳಿಕದ ನೇಮಕಾತಿಗಳು ಒಟ್ಟು ನೇಮಕಾತಿಯ ಮೂರನೇ ಎರಡರಷ್ಟು ಹುದ್ದೆಗಳು ಮೀಸಲು ಇಲ್ಲದ ಸಾಮಾನ್ಯ ವರ್ಗಗಳ ಪಾಲಾದವು. ಪರಿಣಾಮವಾಗಿ ಮೀಸಲಾತಿ ವರ್ಗಗಳ ಹುದ್ದೆಗಳ ಸಂಖ್ಯೆಗಳು ಗಣನೀಯವಾಗಿ  ಕುಸಿದಿದ್ದವು. ಇದು ಸಾಮಾಜಿಕ ಹಕ್ಕುಗಳ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿಭಟನೆಗೆ ಕಾರಣವಾಗಿದ್ದವು. ವಿಷಯ ಸಂಸತ್ತಿನಲ್ಲೂ ಪ್ರತಿಧ್ವನಿಸಿತ್ತು. ಇದನ್ನು ಅನುಸರಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಯುಜಿಸಿ ಅಲಹಾಬಾದ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.


2019: ನವದೆಹಲಿ: ಭಾರತದಲ್ಲಿ ಬಳಸಲಾದ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಹ್ಯಾಕ್ ಮಾಡಬಹುದು ಎಂಬುದಾಗಿ ಲಂಡನ್ನಿನಲ್ಲಿ ಕಾರ್ಯಕ್ರಮವೊಂದರಲ್ಲಿ ಆಪಾದಿಸಿದ ಅಮೆರಿಕ ಮೂಲದ ಭಾರತೀಯಸೈಬರ್ ತಜ್ಞನೊಬ್ಬನ ವಿರುದ್ಧ ಭಾರತದ ಚುನಾವಣಾ ಆಯೋಗವು ಪೊಲೀಸರಿಗೆ ದೂರು ನೀಡಿತು. ಶೂಜಾ ಎಂಬ ವ್ಯಕ್ತಿಯೊಬ್ಬರು ಲಂಡನ್ನಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ತಾವು ವಿದ್ಯುನ್ಮಾನ ಮತಯಂತ್ರ  (ಇವಿಎಂ) ವಿನ್ಯಾಸ ತಂಡದ ಸದಸ್ಯನಾಗಿದ್ದು, ಭಾರತದಲ್ಲಿ ಚುನಾವಣೆಗಳಿಗೆ ಬಳಸಲಾಗುತ್ತಿರುವ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂಬುದಾಗಿ ಪ್ರತಿಪಾದಿಸಿದ್ದು ಮಾಧ್ಯಮ ವರದಿಗಳ ಮೂಲಕ ತಮ್ಮ ಗಮನಕ್ಕೆ ಬಂದಿದ್ದು, ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗ ತನ್ನ ದೂರಿನಲ್ಲಿ ತಿಳಿಸಿತು. ತಾನು ಎಲೆಕ್ಟ್ರಾನಿಕ್ ಕಾರ್ಪೋರೇಷನ್ ಆಫ್ ಇಂಡಿಯಾದ ಮಾಜಿ ನೌಕರ ಎಂಬುದಾಗಿಯೂ ಪ್ರತಿಪಾದಿಸಿರುವ ಶೂಜಾ ಎಂಬ ವ್ಯಕ್ತಿ, ೨೦೧೪ರ ಮಹಾ ಚುನಾವಣೆ ಸೇರಿದಂತೆ ಭಾರತದ ವಿವಿಧ ಚುನಾವಣೆಗಳಲ್ಲಿ ಬಳಸಲಾದ  ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ದುರ್ಬಲತೆ ಬಗ್ಗೆ ಸರಣಿ ಪೊಳ್ಳು ಆಪಾದನೆಗಳನ್ನು ಮಾಡಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿತು. ಸ್ಕೈಪ್ ಮೂಲಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೂಜಾ, ತಾನು ಅಮೆರಿಕದಲ್ಲಿ ನೆಲೆಸಿರುವುದಾಗಿ ಹೇಳಿದ್ದು, ಭಾರತದಲ್ಲಿ ಪ್ರಾಣಬೆದರಿಕೆಗಳು ಬಂದ ಬಳಿಕ ಅಮೆರಿಕದಲ್ಲಿ ರಾಜಕೀಯ ಆಶ್ರಯ ಪಡೆದಿರುವುದಾಗಿ ಹೇಳಿದರು. ೨೦೧೪ರ ಚುನಾವಣೆಯಲ್ಲಿಮಿಲಿಟರಿ ಗ್ರೇಡ್ ಮೊಡ್ಯುಲೆಟರುಗಳನ್ನು ರಾಷ್ಟ್ರದ ವಿವಿಧ ಕಡೆಗಳಲ್ಲಿ ಸ್ಥಾಪಿಸಿ ಅವುಗಳ ಮೂಲಕ ಮಾಹಿತಿ ವರ್ಗಾವಣೆಯನ್ನು ಭಾರತೀಯ ಜನತಾ ಪಕ್ಷದ ಪರವಾಗಿ ಮಾಡುವ ಮೂಲಕ ರಿಗ್ಗಿಂಗ್ ಮಾಡದೇ ಇದ್ದಿದ್ದಲ್ಲಿ ಕಾಂಗ್ರೆಸ್ ಪಕ್ಷವು ೨೦೦ ಸ್ಥಾನಗಳನ್ನಾದರೂ ಗೆಲ್ಲುತ್ತಿತ್ತು ಎಂದು ಶೂಜಾ ಪ್ರತಿಪಾದಿಸಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸುವಂತಹ ಸಾಕ್ಷ್ಯವನ್ನು ಅವರು ಒದಗಿಸಲಿಲ್ಲ. ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಶನ್ ಮತ್ತು ಫಾರಿನ್ ಪ್ರೆಸ್ ಅಸೋಸಿಯೇಶನ್ ಕಾರ್ಯಕ್ರಮವನ್ನು ಸಂಘಟಿಸಿದ್ದವು. ಇವಿಎಂಗಳನ್ನು ಹ್ಯಾಕ್ ಮಾಡುವ ಲೈವ್ ಪ್ರದರ್ಶನ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ಆದರೆ, ಶೂಜಾ ತನ್ನ ಮೇಲೆ ಇತ್ತೀಚೆಗೆ ದಾಳಿ ನಡೆದಿದೆ ಎಂಬುದಾಗಿ ಹೇಳಿ ಇವಿಎಂ ಹ್ಯಾಕ್ ಲೈವ್ ಪ್ರದರ್ಶನವನ್ನು ನೀಡಲು ಶೂಜಾ ನಿರಾಕರಿಸಿದರು. ಕೆಲವು ಗಂಟೆಗಳ ಬಳಿಕ ಭಾರತದ ಚುನಾವಣಾ ಆಯೋಗವು ಇವಿಎಂಗಳುಫೂಲ್ಪ್ರೂಫ್ ಆಗಿವೆ ಎಂದು ಹೇಳಿ, ವಿಷಯಕ್ಕೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ತಾನು ಪರಿಶೀಲಿಸುತ್ತಿರುವುದಾಗಿ ಹೇಳಿತ್ತು.
2018: ನವದೆಹಲಿ: ಸಿಬಿಐ ನ್ಯಾಯಮೂರ್ತಿ ಬಿ.ಎಚ್. ಲೋಯ ಸಾವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟಿನಲ್ಲಿ ಬಾಕಿ ಉಳಿದಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ ತನಗೆ ವರ್ಗಾಯಿಸಿಕೊಂಡಿತು ಮತ್ತು ಬೇರೆ ಯಾವುದೇ ಹೈಕೋರ್ಟ್ ವಿಷಯಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಬಾರದು ಎಂದು ನಿರ್ದೇಶನ ನೀಡಿತು. ನ್ಯಾಯಮೂರ್ತಿ ಲೋಯ ಸಾವಿಗೆ ಸಂಬಂಧಿಸಿದಂತೆ ಕಕ್ಷಿದಾರರು ಒದಗಿಸುವ ದಾಖಲೆಗಳನ್ನು ಆಧರಿಸಿ ಸುಪ್ರೀಂಕೋರ್ಟ್ ವಾಸ್ತವಿಕ ವಿಶ್ಲೇಷಣೆ ನಡೆಸಲಿದೆ ಎಂದು ಹೇಳಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ವಿಷಯದ ಬೇರು ಪತ್ತೆಗಾಗಿ ಸಹಕರಿಸುವಂತೆ ಎಲ್ಲ ಕಕ್ಷಿದಾರರಿಗೆ ಸೂಚಿಸಿದರು. ನ್ಯಾಯಮೂರ್ತಿಯ ಸಾವಿಗೆ ಸಂಬಂಧಿಸಿದ ವಿಷಯದಲ್ಲಿ ಹಾಜರಾಗುವ ಯಾರೇ ವ್ಯಕ್ತಿಗಳ ವಿರುದ್ಧ ಯಾವುದೇ ಟೀಕೆಗಳನ್ನು ಮಾಡಬೇಡಿ. ಯಾರೇ ವ್ಯಕ್ತಿ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಹಾಜರಾಗುತ್ತಾರೆ ಎಂದು ಅವರು ನುಡಿದರು. ಈ ಮಧ್ಯೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ  ವರು  ಮಾಧ್ಯಮಗಳು ಬಾಯಿಗಿಟ್ಟ ಆದೇಶವನ್ನು ಸುಪ್ರೀಂಕೋರ್ಟ್ ನೀಡಲಿದೆ ಎಂದು ಕೆಲವು ವಕೀಲರು ಮಾಡುತ್ತಿರುವ ಲೇವಡಿಯಿಂದ ನನಗೆ ಅತೀವ ನೋವಾಗಿದೆಎಂದು ಹೇಳಿದರು. ’ನಾನು ಒಂದು ಶಬ್ದವನ್ನು ಕೂಡಾ ಉಸುರಿಲ್ಲ. ನಾನು ಮಾಧ್ಯಮ ಬಾಯಿಗಿಟ್ಟ ಆದೇಶವನ್ನು ಹೊರಡಿಸಿದ್ದೇನೆಯೇ? ನಾವು ಚರ್ಚಿಸುತ್ತಿದ್ದೇವಷ್ಟೆ. ನೀವೆಲ್ಲ ನಿರ್ಣಯಗಳಿಗೆ ಬರುತ್ತಿದ್ದೀರಿ ಎಂದು ಸಿಜೆಐ ನುಡಿದರು.  ‘ವಿಷಯವನ್ನು ಅತ್ಯಂತ ಗಂಭೀರ ಎಂಬುದಾಗಿ ಬಣ್ಣಿಸಿದ ಸುಪ್ರೀಂಕೋರ್ಟ್ ಸಿಬಿಐ ನ್ಯಾಯಮೂರ್ತಿಯ ಸಾವಿನ ಸಂದರ್ಭಗಳ ಬಗ್ಗೆ ತನಿಗೆ ಆಗ್ರಹಿಸುತ್ತಿರುವ ಅರ್ಜಿಗಳನ್ನು ತಾನು ವಸ್ತುನಿಷ್ಠವಾಗಿ ಪರಿಶೀಲಿಸುವುದಾಗಿ ಹೇಳಿತು. ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಭಾವರಹಿತವಾಗಿ ವಾಸ್ತವಾಂಶಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಹೆಚ್ಚಿನ ತನಿಖೆಗೆ ಆದೇಶ ನೀಡುವುದಾಗಿ ಸಿಜೆಐ ದೀಪಕ್ ಮಿಶ್ರ ನೇತೃತ್ವದ ಪೀಠ ತಿಳಿಸಿತು. ‘ಜಿಲ್ಲಾ ನ್ಯಾಯಾಂಗದಲ್ಲಿ ನ್ಯಾಯಾಧೀಶರೊಬ್ಬರು ಮೃತರಾದರೆ ಹಲವಾರು ಮಾಧ್ಯಮಗಳು ನಮ್ಮನ್ನು ಹಸ್ತಕ್ಷೇಪ ಮಾಡುವಂತೆ ಒತ್ತಾಯಿಸಿ ವರದಿ ಮಾಡುತ್ತವೆ. ಅವುಗಳ ಪರಿಶೀಲನೆಯೇ ಗಂಭೀರವಾಗುತ್ತದೆ. ಆದರೆ ನಾವು ಕೇವಲ ಮಾಧ್ಯಮ ವರದಿಗಳನ್ನು ಆಧರಿಸಿ ನಿರ್ಧರಿಸುವಂತಿಲ್ಲ. ವಿಷಯವನ್ನು ವಸ್ತುನಿಷ್ಠವಾಗಿ ನಾವು ಪರಿಶೀಲಿಸಬೇಕು. ನಾವು ಈ ಬಗ್ಗೆ ನಿಮಗೆ ಭರವಸೆ ನೀಡುತ್ತೇವೆ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠ ಹೇಳಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರುವರಿ ೨ಕ್ಕೆ ನಿಗದಿಪಡಿಸಿದ ಪೀಠ, ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಲಭ್ಯವಿರುವ ಎಲ್ಲ ದಾಖಲೆಗಳನ್ನೂ ಹಾಜರು ಪಡಿಸುವಂತೆ ಎಲ್ಲ ಕಕ್ಷಿದಾರರಿಗೂ ಸೂಚಿಸಿತು. ನ್ಯಾಯಮೂರ್ತಿ ಲೋಯ ಸಾವಿಗೆ ಸಂಬಂಧಿಸಿದಂತೆ ತನ್ನ ಮುಂದೆ ವಿಚಾರಣೆಗೆ ಬಾಕಿ ಉಳಿದಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಆದೇಶ ಮಾಡಿದ ಪೀಠ, ಸುಪ್ರೀಂಕೋರ್ಟ್ ನಿರ್ಧಾರ ಮಾಡುವವರೆಗೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರಣೆಗಳನ್ನು ನಡೆಸದಂತೆ ಇತರ ನ್ಯಾಯಾಲಯಗಳಿಗೆ ನಿರ್ಬಂಧ ಹೇರಿತು. ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾದ ಹಿರಿಯ ವಕೀಲರಾದ ಹರೀಶ ಸಾಳ್ವೆ ಮತ್ತು ಮುಕುಲ್ ರೋಹ್ಟಗಿ ಅವರು ನ್ಯಾಯಾಲಯಕ್ಕೆ ರಹಸ್ಯ ತನಿಖಾ ವರದಿಯನ್ನು ಸಲ್ಲಿಸಿದ ಬಳಿಕ ಪೀಠ ಈ ಆದೇಶ ಮಾಡಿತು. ೨೦೧೪ರ ಡಿಸೆಂಬರ್‌ನಲ್ಲಿ ಮೃತರಾದ ನ್ಯಾಯಮೂರ್ತಿ ಲೋಯ ಸಾವಿನ ಸಂದರ್ಭಗಳ ಬಗ್ಗೆ ತನಿಖೆಗೆ ವಿವಿಧ ಮಾಧ್ಯಮ ವರದಿಗಳು ಪ್ರಕಟವಾದ ಬಳಿಕ ನ್ಯಾಯಾಲಯ ಆದೇಶಿಸಿತು ಎಂದು ಸಾಳ್ವೆ ಪೀಠಕ್ಕೆ ತಿಳಿಸಿದರು. ನ್ಯಾಯಮೂರ್ತಿ ಲೋಯ ಅವರಿಗೆ ಎದೆ ನೋವು ಕಾಣಿಸಿದ ಬಳಿಕ ಅವರನ್ನು ಆಸ್ಪತ್ರೆಗೆ ಒಯ್ಯುವಾಗ ಅವರ ಜೊತೆಗಿದ್ದ ನಾಲ್ವರು ನ್ಯಾಯಾಂಗ ಅಧಿಕಾರಿಗಳು ತಮ್ಮ ಹೇಳಿಕೆಗಳಲ್ಲಿ ಯಾವುದೇ ಅನ್ಯಾಯ ಮಾಡಿಲ್ಲ ಎಂದು ತಿಳಿಸಿರುವುದಾಗಿ ಸಾಳ್ವೆ ಪೀಠಕ್ಕೆ ಮಾಹಿತಿ ನೀಡಿದರು. ಈ ವರದಿಯನ್ನು ಬಾಂಬೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರಿಗೆ ೨೦೧೭ರ ನವೆಂಬರ್ ೨೩ರಂದು ಸಲ್ಲಿಸಲಾಗಿದೆ ಎಂದು ಸಾಳ್ವೆ ಹೇಳಿದರು. ವರದಿಯು ನಿಸ್ಸಂದಿಗ್ಧವಾದುದು ಎಂದು ವಾದಿಸಿದ ಸಾಳ್ವೆ ಮತ್ತು ರೋಹ್ಟಗಿ ’ಸುಪ್ರೀಂಕೋರ್ಟಿಗೆ ಸೂಕ್ತ ನಿರ್ದೇಶನ ನೀಡುವ ಅಧಿಕಾರ ಇದೆ ಎಂದು ನುಡಿದರು. ಈ ಹಂತದಲ್ಲಿ ಹಿರಿಯ ವಕೀಲ ದುಷ್ಯಂತ ದವೆ ಅವರು ಮುಂಬೈ ವಕೀಲರ ಪರವಾಗಿ ಮಧ್ಯಪ್ರವೇಶ  ಮಾಡಬಯಸಿದರು.  ನಿಗೂಢವಾಗಿ ಸಾವಿಗೀಡಾದ ಸಂದರ್ಭದಲ್ಲಿ ನ್ಯಾಯಮೂರ್ತಿ ಲೋಯ ಅವರು ರಾಜಕೀಯವಾಗಿ ಸೂಕ್ಷ್ಮವಾಗಿದ್ದ ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದರು ಎಂಬ ವಾಸ್ತವವನ್ನು ಮುಚ್ಚಿಡಲು ಯತ್ನ ನಡೆಯುತ್ತಿದೆ. ಎಂದು ಆಪಾದಿಸಿದ ದವೆ, ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಒಮ್ಮೆ ಸಾಳ್ವೆ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪರವಾಗಿ ಹಾಜರಾಗಿದ್ದರು, ಹೀಗಾಗಿ ಅವರು ಈಗ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಬಾರದು ಎಂದು ಹೇಳಿದರು. ಇದನ್ನು ಪ್ರತಿಭಟಿಸಿದ ಸಾಳ್ವೆ ’ಪ್ರಾಮಾಣಿಕತೆ ಬಗ್ಗೆ ದವೆ ಅವರ ಉಪನ್ಯಾಸಗಳು ನನಗೆ ಬೇಕಾಗಿಲ್ಲ ಎಂದರು. ದವೆ ಅವರು ಪ್ರಕರಣದಲ್ಲಿ ಕಕ್ಷಿದಾರರೇ ಅಲ್ಲ ಎಂದು ರೋಹ್ಟಗಿ ಹೇಳಿದರು. ‘ನೀವೆಲ್ಲರೂ ಆತ್ಮಸಾಕ್ಷಿ ಹೊಂದಿರುವವರು. ನ್ಯಾಯಾಧೀಶರ ಬಾರ್ ಅಸೋಸಿಯೇಶನ್ ನಿಮಗೆ ಹಾಜರಾಗಲು ಅಥವಾ ಹಾಜರಾಗದೇ ಇರಲು ಹೇಳಲಾಗದು. ನೀವು ಕಕ್ಷಿದಾರರ ಪರವಾಗಿ ಹಾಜರಾಗಬೇಕೆ ಅಥವಾ ಬೇಡವೆ ಎಂಬುದಾಗಿ ನಾವು ನಿಮಗೆ ಹೇಳಲು ಸಾಧ್ಯವಿಲ್ಲ. ಅದನ್ನು ನಿಮ್ಮ ಆತ್ಮಸಾಕ್ಷಿಯ ಬಳಿಯೇ ನೀವು ಕೇಳಬೇಕು ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

2018: ಭೋಪಾಲ್: ಲಾಭದಾಯಕ ಹುದ್ದೆ ಹೊಂದಿರುವುದಕ್ಕಾಗಿ ಆಮ್ ಆದ್ಮಿ ಪಕ್ಷದ (ಆಪ್) ೨೦ ಶಾಸಕರ  ಅನರ್ಹತೆಗೆ ರಾಷ್ಟ್ರಪತಿಯವರು ಅಂಕಿತ ಹಾಕಿದ ಒಂದು ದಿನದ ಬಳಿಕ ಪಕ್ಷವು ಮಧ್ಯಪ್ರದೇಶದ ೧೧೬ ಬಿಜೆಪಿ ಶಾಸಕರ ವಿರುದ್ಧ ಲಾಭದಾಯಕ ಹುದ್ದೆಗಳನ್ನು ಹೊಂದಿರುವುದಕ್ಕಾಗಿ ಆಪ್ ಶಾಸಕರ ವಿರುದ್ಧ ಕೈಗೊಂಡಂತಹುದೇ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಆಗ್ರಹಿಸಿತು. ಆಪ್ ಸಂಚಾಲಕ ಅಲೋಕ್ ಅಗರ್‌ವಾಲ್ ಅವರು ಪಕ್ಷವು ಈ ವಿಷಯವನ್ನು ೨೦೧೬ರ ಜುಲೈ ೪ರಂದೇ ಪ್ರಸ್ತಾಪಿಸಿತ್ತು ಮತ್ತು ಶಾಸಕರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿತ್ತು. ಆದರೆ ಚುನಾವಣಾ ಆಯೋಗ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ಹೇಳಿದರು. ಸಂವಿಧಾನದ ೧೯೧(ಎ) ಮತ್ತು ೧೯೨ ಸೆಕ್ಷನ್ ಮತ್ತು ೧೯೫೧ರ ಜನತಾ ಪ್ರಾತಿನಿಧ್ಯ ಕಾಯ್ದೆಯ ವಿಧಿಗಳ ಅಡಿಯಲ್ಲಿ ನಾವು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದೆವು. ಆದರೆ ನಮಗೆ ಯಾವುದೇ ಸ್ಪಂದನೆ ಲಭಿಸಿಲ್ಲ ಎಂದು ಅವರು ನುಡಿದರು. ೧೧೬ ಮಂದಿ ಶಾಸಕರ ಸದಸ್ಯತ್ವವನ್ನು ತತ್ ಕ್ಷಣವೇ ರದ್ದು ಪಡಿಸುವಂತೆ ಪಕ್ಷವು ಇದೀಗ ಮತ್ತೊಮ್ಮೆ ಆಯೋಗವನ್ನು ಒತ್ತಾಯಿಸಿತು. ೨೦೧೬ರಲ್ಲಿ ಬಹುತೇಕ ಪ್ರಶ್ನಿತ ಶಾಸಕರು ಕಾಲೇಜುಗಳ ಜನ ಭಾಗೀದಾರಿ ಸಮಿತಿಗಳ ಸದಸ್ಯರಾಗಿದ್ದರು.. ಈ ಸಮಿತಿಗಳು ಲಾಭದಾಯಕ ಹುದ್ದೆಗಳ ವ್ಯಾಪ್ತಿಗೆ ಬರುತ್ತವೆ ಎಂದು ರಾಜ್ಯದ ಮಾಜಿ ಆಪ್ ಕಾರ್ಯದರ್ಶಿ ಅಕ್ಷಯ್ ಹಂಕಾ ನುಡಿದರು. ಈ ಶಾಸಕರಿಗೆ ವೇತನ ಪಾವತಿ ಮಾಡುತ್ತಿರಲಿಲ್ಲ, ಆದರೆ ಅವರು ಕಾಲೇಜುಗಳಿಂದ ಪ್ರವಾಸಿ ಭತ್ಯೆಗಳನ್ನು ಪಡೆಯುತ್ತಿದ್ದರು ಎಂದು ಅವರು ವಿವರಿಸಿದರು. ಪಾರಸ್ ಜೈನ್ ಮತ್ತು ದೀಪಕ್ ಜೋಶಿ ಈ ಇಬ್ಬರು ಸಚಿವರು ಇಂಡಿಯನ್ ಸ್ಕೌಟ್ ಮತ್ತು ಗೈಡ್ ಸಂಸ್ಥೆಗಳ ಪದಾಧಿಕಾರಿಗಳಾಗುವ ಮೂಲಕ ಲಾಭದಾಯಕ ಹುದ್ದೆ ಹೊಂದಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಇತರ ಅನೇಕ ಸಚಿವರೂ ಲಾಭದಾಯಕ ಹುದ್ದೆ ಕಾಯ್ದೆಯ ವ್ಯಾಪ್ತಿಯೊಳಗೆ ಇದ್ದಾರೆ ಎಂದೂ ಅವರು ನುಡಿದರು. ಲಾಭದಾಯಕ ಹುದ್ದೆಗಳನ್ನು ಹೊಂದಿರುವುದಕ್ಕಾಗಿ ಕಾಂಗ್ರೆಸ್ ಪಕ್ಷ ಕೂಡಾ ಆಡಳಿತಾರೂಢ ಬಿಜೆಪಿ ವಿರುದ್ಧ ರಾಜ್ಯದಲ್ಲಿ ಹರಿಹಾಯ್ದಿದೆ. ’ಇಬ್ಬರು ಸಚಿವರು ಇಂಡಿಯನ್ ಸ್ಕೌಟ್ಸ್ ಮತ್ತು ಗೈಡ್ಸ್ ಪದಾಧಿಕಾರಿಗಳಾಗುವ ಮೂಲಕ ಲಾಭದಾಯಕ ಹುದ್ದೆ ಹೊಂದಿರುವುದಾಗಿ ನಾವು ಆಪಾದಿಸಿದ್ದೆವು. ಆದರೆ ಈ ಸಚಿವರು ಯಾವುದೇ ಭತ್ಯೆಗಳನ್ನು ಪಡೆಯುತ್ತಿಲ್ಲ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ ಎಂದು ಕಾಂಗ್ರೆಸ್ ವಕ್ತಾರ ಜೆಪಿ ಧನೋಪಿಯ ಹೇಳಿದರು.

2018: ದಾವೋಸ್: ಎಲ್ಲರನ್ನು ಒಳಗೊಂಡ ಅಭಿವೃದ್ಧಿ - ಸೇರ್ಪಡೆ ಅಭಿವೃದ್ಧಿ (ಇನ್ ಕ್ಲೂಸಿವ್ ಡೆವಲಪ್ ಮೆಂಟ್) ಸಾಧನೆಯ ಸೂಚ್ಯಂಕ ಪಟ್ಟಿಯಲ್ಲಿ ಭಾರತವು ಚೀನಾ ಮತ್ತು ಪಾಕಿಸ್ತಾನಕ್ಕಿಂತಲೂ ಕೆಳಗಿದೆ. ಇದೇ ವೇಳೆಗೆ ಭಾರತದ ಶೇಕಡಾ ೭೩ರಷ್ಟು ಸಂಪತ್ತು ಶೇಕಡಾ ೧ರಷ್ಟು ಇರುವ ಶ್ರೀಮಂತರ ಕೈಸೇರುತ್ತಿದೆ ಎಂಬ ಆತಂಕಾರಿ ವಿಚಾರ ಬಹಿರಂಗಗೊಂಡಿತು. ಸೇರ್ಪಡೆ ಅಭಿವೃದ್ಧಿ ಸಾಧನೆಯ ಸೂಚ್ಯಂಕ ಪಟ್ಟಿಯನ್ನು ದಾವೋಸ್ ನಲ್ಲಿ ಜಾಗತಿಕ ಆರ್ಥಿಕ ವೇದಿಕೆ (ವರ್ಲ್ಡ ಇಕನಾಮಿಕ್ ಫೋರಂ- ಡಬ್ಲ್ಯೂ ಇ ಎಫ್) ಬಿಡುಗಡೆ ಮಾಡಿದ್ದರೆ, ಸಂಪತ್ತಿನ ಅಸಮಾನ ಹಂಚಿಕೆ ಕುರಿತ ವರದಿಯನ್ನು ಜಾಗತಿಕ ಅಭಿವೃದ್ಧಿ ಅಧ್ಯಯನ ನಡೆಸುವ ಸರ್ಕಾರೇತರ ಸಂಸ್ಥೆ ’ಆಕ್ಸ್ ಫಾಮ್ ಇದೇ ವೇಳೆಗೆ ದಾವೋಸ್ ನಲ್ಲೇ ಬಿಡುಗಡೆ ಮಾಡಿತು. ಭಾರತದಲ್ಲಿ ಆದಾಯ ಅಸಮಾನತೆ ಹೆಚ್ಚುತ್ತಿದ್ದು, ದೇಶದಲ್ಲಿನ ಶೇಕಡಾ ೭೩ ರಷ್ಟು ಸಂಪತ್ತು ಶೇಕಡಾ ೧ರಷ್ಟಿರುವ ಶ್ರೀಮಂತರ ಬಳಿ ಇದೆ.  ಕಳೆದ ವರ್ಷದ ಸಮೀಕ್ಷೆಯಲ್ಲಿ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇಕಡಾ ೧ ರಷ್ಟಿರುವ ಶ್ರೀಮಂತರು ದೇಶದ ಶೇ ೫೮ರಷ್ಟು ಸಂಪತ್ತು ಹೊಂದಿದ್ದರು. ಇದು ಈ ವರ್ಷ ಶೇಕಡಾ ೧೫ ರಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್‌ಫಾಮ್ ಸಂಸ್ಥೆ ಹೇಳಿತು. ದೇಶದಲ್ಲಿ ೬೭ ಕೋಟಿ ಬಡ ಜನರ ಸಂಪತ್ತು ಶೇಕಡಾ ೧ ರಷ್ಟು ಮಾತ್ರ ಹೆಚ್ಚಳವಾಗಿದೆ. ಆದರೆ ಶೇಕಡಾ ೧ ರಷ್ಟಿರುವ ಶ್ರೀಮಂತರ ಸಂಪತ್ತು ಶೇಕಡಾ ೭೩ ರಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್‌ಫಾಮ್ ಹೇಳಿತು. ಶೇಕಡಾ ಒಂದರಷ್ಟಿರುವ ಶ್ರೀಮಂತರ ಬಳಿ ೨೦.೯ ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತು ಇರುವುದು ತಿಳಿದು ಬಂದಿದೆ. ಇದು ಕೇಂದ್ರ ಸರ್ಕಾರದ ೨೦೧೭-೧೮ನೇ ಸಾಲಿನ ಬಜೆಟ್ ಮೊತ್ತಕ್ಕೆ ಸಮವಾಗಿದೆ. ಭಾರತದ ಆರ್ಥಿಕ ಪ್ರಗತಿ ಕೆಲವೇ ಜನರ ಕೈಯಲ್ಲಿ ಇರುವುದು ಅಸಮಾನತೆಯನ್ನು ಹೆಚ್ಚಿಸುತ್ತಿದೆ ಎಂದು ಆಕ್ಸ್‌ಫಾಮ್ ಇಂಡಿಯಾದ ಸಿಇಒ ನಿಶಾ ಅಗರ್‌ವಾಲ್ ಆತಂಕ ವ್ಯಕ್ತಪಡಿಸಿದರು.  ‘ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್) ವರದಿಯ ಬೆನ್ನಲ್ಲೇ ‘ಆಕ್ಸ್‌ಫಾಮ್ ಸಂಸ್ಥೆ, ಸಂಪತ್ತಿನ ಅಸಮಾನ ಹಂಚಿಕೆ ಕುರಿತು ‘ರಿವಾರ್ಡ್ ವರ್ಕ್ ನಾಟ್ ವೆಲ್ತ್  ಎಂಬ ಹೆಸರಿನಲ್ಲಿ ವರದಿ ಪ್ರಕಟಿಸಿತು.  ಸೇರ್ಪಡೆ ಅಭಿವೃದ್ಧಿ ಸೂಚ್ಯಂಕ: ಸೇರ್ಪಡೆ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ, ವಿಶ್ವದ ಉದಯೋನ್ಮುಖ ಆರ್ಥಿಕತೆಯ ದೇಶಗಳ ಪೈಕಿ ಭಾರತ ೬೨ನೇ ಸ್ಥಾನದಲ್ಲಿದೆ. ಚೀನ (೨೬ನೇ ಸ್ಥಾನ) ಮತ್ತು ಪಾಕಿಸ್ತಾನಕ್ಕಿಂತ (೪೭ನೇ ಸ್ಥಾನ) ಭಾರತ  ಕೆಳ ಮಟ್ಟದಲ್ಲಿದೆ ಎಂದು ವಿಶ್ವ ಆರ್ಥಿಕ ವೇದಿಕೆಯ ವರದಿ ಹೇಳಿತು. ವಿಶ್ವ ಅರ್ಥಿಕ ವೇದಿಕೆಯ ಸಮಾವೇಶದ ಹೊತ್ತಿನಲ್ಲೆ ಈ ಎರಡು ವರದಿಗಳು ಪ್ರಕಟವಾಗಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ವಿಷಯ ಎಂದು ಭಾವಿಸಲಾಯಿತು. ನಾರ್ವೆ ಈ ಪಟ್ಟಿಯಲ್ಲಿ ವಿಶ್ವದಲ್ಲೇ ಅತ್ಯುನ್ನತ ಮುಂದುವರಿದ ಆರ್ಥಿಕತೆಯ ದೇಶವಾಗಿ ಮೂಡಿ ಬಂದಿತು. ಉದಯೋನ್ಮುಖ ಆರ್ಥಿಕತೆಗಳ ಪೈಕಿ ಲಿಥುವೇನಿಯಾ ಅಗ್ರಸ್ಥಾನದಲ್ಲಿದೆ. ವಿಶ್ವ ಆರ್ಥಿಕ ವೇದಿಕೆ ಈ ಪಟ್ಟಿಯನ್ನು ವರ್ಷಂಪ್ರತಿ ಬಿಡುಗಡೆ ಮಾಡುತ್ತದೆ. ದಾವೋಸ್‌ನಲ್ಲಿ ಈ ಬಾರಿ ಅದರ ವಾರ್ಷಿಕ ಸಭೆ ಆರಂಭವಾಗುವುದಕ್ಕೆ ಮುನ್ನ ಅದು ಪಟ್ಟಿಯನ್ನು ಬಿಡುಗಡೆ ಮಾಡಿತು.  ದಾವೋಸ್ ಆರ್ಥಿಕ ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಶ್ವದ ಅನೇಕ ನಾಯಕರು ಭಾಗವಹಿಸುತ್ತಾರೆ.
ಎಲ್ಲರನ್ನೂ ಒಳಗೊಳಿಸಿಕೊಂಡು ಅಭಿವೃದ್ಧಿ ಸಾಧಿಸುವುದನ್ನು ಸೂಚಿಸುವ ಸೇರ್ಪಡೆ ಅಭಿವೃದ್ಧಿ ಸೂಚ್ಯಂಕ ಪಟ್ಟಿಯನ್ನು ತಯಾರಿಸುವಾಗ ದೇಶವೊಂದರ ಜನಜೀವನ ಮಟ್ಟ, ಪರಿಸರ ಸಹನಶೀಲತೆ ಮತ್ತು ಇನ್ನಷ್ಟು  ಋಣಭಾರದಿಂದ ಮುಂದಿನ ತಲೆಮಾರುಗಳ ರಕ್ಷಣೆ ಮುಂತಾದ ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ಡಬ್ಲ್ಯುಇಎಫ್ ಹೇಳಿತು.

2018: ನವದೆಹಲಿ: ಅನರ್ಹತೆ ಆದೇಶದ ವಿರುದ್ಧ ದೆಹಲಿ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ತಮ್ಮ ಅರ್ಜಿಗಳನ್ನು ಆಮ್ ಆದ್ಮಿ ಪಕ್ಷದ (ಆಪ್) ೨೦ ಮಂದಿ ಶಾಸಕರು ’ಹೊಸ ಅರ್ಜಿ ಸಲ್ಲಿಸುವ ಸಲುವಾಗಿ ಹಿಂತೆಗೆದುಕೊಂಡರು. ಶಾಸಕರನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ ಕ್ರಮಕ್ಕೆ ತಡೆಯಾಜ್ಞೆ ಕೋರಿ ಜನವರಿ ೧೯ರಂದು ಆಪ್ ಶಾಸಕರು ಅರ್ಜಿಗಳನ್ನು ದೆಹಲಿ ಹೈಕೋರ್ಟಿಗೆ ಸಲ್ಲಿಸಿದ್ದರು. ಆದರೆ ಭಾನುವಾರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈದಿನ ಆ ಅರ್ಜಿಯನ್ನು ಹಿಂತೆಗೆದುಕೊಳ್ಳಲಾಯಿತು ಎಂದು ಪಕ್ಷ ಮೂಲಗಳು ತಿಳಿಸಿದವು. ನ್ಯಾಯಮೂರ್ತಿ ರೇಖಾ ಪಲ್ಲಿ ಅವರು ಶಾಸಕರಿಗೆ ತಮ್ಮ ಅರ್ಜಿಗಳನ್ನು ಹಿಂತೆಗೆದುಕೊಳ್ಳಲು ಅವಕಾಶ ನೀಡಿ ಅದನ್ನು ’ಹಿಂತೆಗೆದುಕೊಂಡದ್ದರಿಂದ ವಜಾ ಮಾಡಲಾಗಿದೆ ಎಂದು ಆದೇಶಿಸಿದರು. ಆಪ್ ಶಾಸಕರ ಪರವಾಗಿ ಹಾಜರಾಗಿದ್ದ ವಕೀಲ ಮನಿಶ್ ವಶಿಷ್ಠ ಅವರು ’ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗವು ರಾಷ್ಟ್ರಪತಿಯವರಿಗೆ ಮಾಡಿದ್ದ ಶಿಫಾರಸನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ, ಈ ವಿಚಾರದಲ್ಲಿ ಜನವರಿ ೨೦ರಂದೇ ಸರ್ಕಾರ ಅಧಿಸೂಚನೆ ಹೊರಡಿಸಿರುವುದರಿಂದ ವ್ಯರ್ಥವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆಪ್ ಶಾಸಕರ ಪರವಾಗಿ ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ಜನವರಿ ೧೯ರಂದು ನಿರಾಕರಿಸಿತ್ತು.  ೨೦ ಮಂದಿ ಆಪ್ ಶಾಸಕರು ಸಂಸದೀಯ ಕಾರ್ಯದರ್ಶಿಗಳ ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಕಾರಣ ದೆಹಲಿ ವಿಧಾನಸಭೆಯ ಸದಸ್ಯತ್ವದಿಂದ ವಜಾಕ್ಕೆ ಅರ್ಹರಾಗಿದ್ದಾರೆ ಎಂದು ಚುನಾವಣಾ ಆಯೋಗ ರಾಷ್ಟ್ರಪತಿಯವರಿಗೆ ತನ್ನ ವರದಿಯನ್ನು ಸಲ್ಲಿಸಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ  ಅವರು ಚುನಾವಣಾ ಆಯೋಗದ ಶಿಫಾರಸಿಗೆ ಭಾನುವಾರ ತಮ್ಮ ಒಪ್ಪಿಗೆ ಮುದ್ರೆ ಒತ್ತಿದ್ದರು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಪರಿಹಾರ ಪಡೆಯುವ ವಿಚಾರದಲ್ಲಿ ಪರಿಶೀಲನೆಗೆ ನಮಗೆ ಕಾಲಾವಕಾಶ ಬೇಕಾಗುತ್ತದೆ ಎಂದು ಆಪ್ ವಕೀಲರು ಹೇಳಿದರು.

2018: ಜುರಿಚ್: ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ  ಪಾಲ್ಗೊಳ್ಳುವ ಸಲುವಾಗಿ ದಾವೋಸ್‌ಗೆ ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಜುರಿಚ್ ಗೆ ಆಗಮಿಸಿದರು. ದಾವೋಸ್ ನಲ್ಲಿ ಭಾರತದ ಭವಿಷ್ಯದ ಯೋಜನೆಗಳ ಬಗ್ಗೆ ಮೋದಿ ಅವರು ಜಾಗತಿಕ ನಾಯಕರ ಜೊತೆ ಮಾತುಕತೆಗಳನ್ನು ನಡೆಸಲಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಹೂ ಡಬ್ಲ್ಯೂಎಫ್) ಶೃಂಗ ಸಭೆಯಲ್ಲಿ ಜನವರಿ 23ರ ಮಂಗಳವಾರ ಉದ್ಘಾಟನಾ ಸಮಾರಂಭದಲ್ಲಿ ಭಾಷಣ ಮಾಡಲಿರುವ ಮೋದಿ ಅವರು ತಾವು ಸ್ವಿಸ್ ಅಧ್ಯಕ್ಷ ಅಲೈನ್ ಬರ್ಸೆಟ್ ಮತ್ತು ಸ್ವೀಡಿಶ್ ಪ್ರಧಾನಿ ಸ್ಟೆಫಲ್ ಲೊಫ್ವೆನ್ ಅವರ ಜೊತೆ ದಾವೋಸ್‌ನಲ್ಲಿ ಮಾತುಕತೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳನ್ನು ಎದುರು ನೋಡುತ್ತಿರುವುದಾಗಿ ಹೇಳಿದರು.  ಇತ್ತೀಚಿನ ವರ್ಷಗಳಲ್ಲಿ ಹೊರಜಗತ್ತಿನ ಜೊತೆಗೆ ಭಾರತದ ಬಾಂಧವ್ಯವು ರಾಜಕೀಯ, ಆರ್ಥಿಕ, ಜನರಿಂದ ಜನರ ಸಂಪರ್ಕ, ಭದ್ರತೆ ಮತ್ತು ಇತರ ಕ್ಷೇತ್ರಗಳಲ್ಲಿ ನೈಜ ಹಾಗೂ ಪರಿಣಾಮಕಾರಿಯಾಗಿ ಬಹು ಆಯಾಮಗಳನ್ನು ಪಡೆದಿದೆ ಎಂದು ಮೋದಿ ಅವರು ದಾವೋಸ್ ಗೆ ಹೊರಡುವ ಮುನ್ನ ನೀಡಿದ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ‘ದಾವೋಸ್ ನಲ್ಲಿ ನಾನು ಅಂತಾರಾಷ್ಟ್ರೀಯ ಸಮುದಾಯದ ಜೊತೆಗಿನ ಭವಿಷ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಭಾರತಕ್ಕಾಗಿ ಭವಿಷ್ಯದ ದೃಷ್ಟಿಕೋನವನ್ನು ಹಂಚಿಕೊಳ್ಳಲು ಕಾತರನಾಗಿದ್ದೇನೆ ಎಂದು ಪ್ರಧಾನಿ ಹೇಳಿದರು.  ಮೋದಿ ಅವರು ಜಾಗತಿಕ ಸಿಇಒಗಳಿಗೆ ರಾತ್ರಿಯ ಭೋಜನಕೂಟಕ್ಕೆ ಆತಿಥ್ಯ ನೀಡಿದರು. ಜನವರಿ ೨೩ರ ಮಂಗಳವಾರ ಪ್ರಧಾನಿಯವರು ಮುಖ್ಯ ಭಾಷಣ ಮಾಡುವುದರ ಹೊರತಾಗಿ ಜಾಗತಿಕ ವರ್ತಕ ಸಮುದಾಯ ಸದಸ್ಯರ ಜೊತೆಗೆ ಸಂವಹನ ನಡೆಸುವರು.

2018: ನವದೆಹಲಿ: ೧೭ನೇ ಶತಮಾನದ ಮೊಘಲ್ ಸ್ಮಾರಕ ಕೆಂಪುಕೋಟೆಯ ಹೊರಗಿನ ಪ್ರದೇಶದಲ್ಲಿ ರಾಷ್ಟ್ರದ ವಿರುದ್ಧ ಹೆಣೆಯಲಾಗುತ್ತಿರುವ ಒಳಸಂಚುಗಳನ್ನು ನಿಗ್ರಹಿಸುವ ಸಲುವಾಗಿ ಒಂದು ವಾರದ ’ವೈದಿಕ ಮಹಾಯಜ್ಞ ಮಾರ್ಚ್ ತಿಂಗಳಲ್ಲಿ ನಡೆಯಲಿದೆ ಎಂದು ಬಿಜೆಪಿ ಸಂಸದ ಮಹೇಶ್ ಗಿರಿ  ನವದೆಹಲಿಯಲ್ಲಿ ಪ್ರಕಟಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರನ್ನು ಯಜ್ಞಕ್ಕೆ ಆಹ್ವಾನಿಸಲಾಗುವುದು. ಮಾರ್ಚ್ ೧೮ರಿಂದ ೨೫ರವರೆಗೆ ನಡೆಯಲಿರುವ ಮಹಾ ಯಜ್ಞದಲ್ಲಿ ಸುಮಾರು ೧,೧೦೦ ಅರ್ಚಕರು ಪಾಲ್ಗೊಳ್ಳಲಿದ್ದು ಸುಮಾರು ೧೦೮ ಹೋಮಕುಂಡಗಳನ್ನು ರಚಿಸಲಾಗುವುದು. ರಾಷ್ಟ್ರಾದ್ಯಂತ ರಥಯಾತ್ರೆಗಳ ಮೂಲಕ ಹೋಮಕ್ಕೆ ಬೇಕಾಗುವ ತುಪ್ಪವನ್ನು ಸಂಗ್ರಹಿಸಲಾಗುವುದು ಎಂದು ಯಜ್ಞದ ಸಂಘಟಕರಾದ ಗಿರಿ ಹೇಳಿದರು. ಯಜ್ಞಕ್ಕೆ ಅಗತ್ಯವಿರುವ ನಿಧಿ ಒದಗಿಸಲು ದೆಹಲಿ ಮೂಲದ ವರ್ತಕರು ಮುಂದೆ ಬಂದಿದ್ದಾರೆ. ಒಂದೇ ಉಸಿರಿನಲ್ಲಿ ವೇದಗಳು ಮತ್ತು ರಾಷ್ಟ್ರವನ್ನು ಪೂಜಿಸುವುದು ಈ ಯಜ್ಜದ ಉದ್ದೇಶ ಎಂದು ಅವರು ನುಡಿದರು. ಪ್ರತಿವರ್ಷ ಆಗಸ್ಟ್ ೧೫ರಂದು ಕೆಂಪುಕೋಟೆಯ ಮೇಲೆ ಪ್ರಧಾನಿ ರಾಷ್ಟ್ರಧ್ವವನ್ನು ಅರಳಿಸುತ್ತಾರೆ. ೧೯೪೭ರಲ್ಲಿ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಕಾಲದಿಂದಲೇ ಇದು ನಡೆಯುತ್ತಾ ಬಂದಿದೆ. ‘ರಾಷ್ಟ್ರೀಯ ರಕ್ಷಾ ಮಹಾಯಜ್ಞದ ನೀಲನಕ್ಷೆಯನ್ನು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಗಿರಿ ಭಾರತ-ಚೀನಾ ಮಧ್ಯೆ ಘರ್ಷಣೆ ನಡೆಯುತ್ತಿರುವ ಡೊಕ್ಲಾಮ್ ಮತ್ತು ಗಡಿ ನಿಯಂತ್ರಣ ರೇಖೆಯ ಬಳಿ ಇರುವ ಪೂಂಚ್ ನಿಂದ ಯಜ್ಞ ವೇದಿಕೆ ನಿರ್ಮಾಣಕ್ಕಾಗಿ ನೆಲ ಮತ್ತು ಜಲ ತರಲಾಗುವುದು ಎಂದು ವಿವರಿಸಿದರು. ರಾಷ್ಟ್ರದ ಹಿತಕ್ಕೆ ಧಕ್ಕೆ ತರಲು ಬಾಹ್ಯ ಹಾಗೂ ಆಂತರಿಕ ಶಕ್ತಿಗಳು ಪ್ರಯತ್ನಿಸುತ್ತಿವೆ. ಪ್ರಾಚೀನ ಪರಂಪರೆಗೆ ಅನುಗುಣವಾಗಿ ಇಂತಹ ಯತ್ನಗಳನ್ನು ವಿಫಲಗೊಳಿಸಲು ನಾವು ಯಜ್ಞ ಸಂಘಟಿಸುತ್ತಿದ್ದೇವೆ ಮತ್ತು ನವಭಾರತ ನಿರ್ಮಾಣದ ಪಣ ತೊಡಲಿದ್ದೇವೆ ಎಂದು ಬಿಜೆಪಿ ಸಂಸದ ಹೇಳಿದರು. ಯಜ್ಞಕ್ಕಾಗಿ ಪ್ರತಿಯೊಬ್ಬನೂ ಒಂದು ಚಮಚ ತುಪ್ಪ ನೀಡುವಂತೆ ನಾವು ಮನವಿ ಮಾಡುತ್ತೇವೆ ಎಂದು ಅವರು ನುಡಿದರು. ಮಹಾಯಜ್ಞಕ್ಕಾಗಿ ಪ್ರತಿವರ್ಷ ರಾಮಲೀಲಾ ನಡೆಯುವ ಪ್ರದೇಶದಲ್ಲಿ ತಾತ್ಕಾಲಿಕ ವೇದ ಗ್ರಾಮವನ್ನು ರಚಿಸಲಾಗುವುದು. ಖ್ಯಾತ ಗಾಯಕರಾದ ಶಂಕರ ಮಹಾದೇವನ್ ಮತ್ತು ಕೈಲಾಶ್ ಖೇರ್ ಅವರು ವೇದಿಕೆಯನ್ನು ತಮ್ಮ ಹಾಡುಗಳಿಂದ ಶ್ರೀಮಂತಗೊಳಿಸಲಿದ್ದಾರೆ. ಪ್ರಮುಖ ರಾಜಕೀಯ ನಾಯಕರು, ಧಾರ್ಮಿಕ ಗುರುಗಳೂ, ಅಧಿಕಾರಿಗಳು, ಬಾಲಿವುಡ್ ಸೆಲೆಬ್ರಿಟಿಗಳು, ಕಾರ್ಪೋರೇಟ್ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದು ನುಡಿದ ಅವರು ಹೆಸರುಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದರು. ಜಾತಿವಾದ, ಕೋಮುವಾದ ಸೇರಿದಂತೆ ಎಂಟು ದುಷ್ಟಪ್ರವೃತ್ತಿಗಳನ್ನು ನಿಗ್ರಹಿಸುವ ಪ್ರತಿಜ್ಞೆಯನ್ನು ಯಜ್ಞದಲ್ಲಿ ಪಾಲ್ಗೊಳ್ಳುವವರು ಕೈಗೊಳ್ಳಲಿದ್ದಾರೆ ಎಂದು ಅವರು ನುಡಿದರು.

2017: ಸರವಕ್ (ಮಲೇಷ್ಯಾ): ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡ ನಂತರ ಕಳಪೆ ಫಾರ್ಮ್ನಲ್ಲಿದ್ದ ಸೈನಾ ನೆಹ್ವಾಲ್ ಮತ್ತೆ ಫಾರ್ಮ್ಗೆ ಮರಳಿದರು. ಈದಿನ ನಡೆದ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯ ಸಿಂಗಲ್ಸ್ ವಿಭಾಗದಲ್ಲಿ ಗೆಲುವು ಸಾಧಿಸುವ ಮೂಲಕ ಮಲೇಷ್ಯಾ ಮಾಸ್ಟರಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಈದಿನ  ನಡೆದ ಫೈನಲ್ ಪಂದ್ಯದಲ್ಲಿ ವಿಶ್ವ ನಂ. 10 ಆಟಗಾರ್ತಿ ಸೈನಾ ನೆಹ್ವಾಲ್ 67ನೇ ಶ್ರೇಯಾಂಕದ 18 ಹರೆಯದ ಥಾಯ್ಲೆಂಡ್ ಪೊರ್ನ್ಪಾವೀ ಚುಚುವಾಂಗ್ ವಿರುದ್ಧ 22-20, 22-20 ನೇರ ಗೇಮ್ ಗಳ ಅಂತರದಿಂದ ಜಯ ಗಳಿಸಿದರು. 46 ನಿಮಿಷ ನಡೆದ ಪಂದ್ಯದಲ್ಲಿ ಚುಚುವಾಂಗ್ ಅವರ ಸವಾಲನ್ನು ಮೆಟ್ಟಿ ನಿಂತ ಸೈನಾ ಪ್ರಶಸ್ತಿ ಜಯಿಸಲು ಸಫಲರಾದರು. ಮೂಲಕ ಸೈನಾ ತಮ್ಮ ವೃತ್ತಿಜೀವನದ 23ನೇ ಪ್ರಶಸ್ತಿಯನ್ನು  ಗೆದ್ದರು. ಸೈನಾ ಕಳೆದ ವರ್ಷ ಆಸ್ಟ್ರೇಲಿಯಾ ಓಪನ್ ಜಯಸಿದ ನಂತರ ಮೊಣಕಾಲಿನ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದರಿಂದಾಗಿ ರಿಯೋ ಒಲಿಂಪಿಕ್ಸ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ಸೈನಾ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಫಾರ್ಮ್ಗೆ ಮರಳಿದರು.
2017: ಲಂಡನ್‌: ತನಗಿಂತಲೂಹೆಚ್ಚು ತೂಕ ಮತ್ತು ದೊಡ್ಡ ಗಾತ್ರದ ಆಹಾರ ಪದಾರ್ಥಗಳನ್ನು
ಹೊತ್ತು ಹಿಮ್ಮುಖವಾಗಿ ಸಾಗುವ ಇರುವೆಗಳಿಗೆ ಸೂರ್ಯಪಥ ಮತ್ತು ದೃಶ್ಯ ಸ್ಮರಣೆಯೇ ಆಧಾರ ಎಂಬುದು ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿತು. ಹೊಸ ಅಧ್ಯಯನದ ಪ್ರಕಾರ, ಇರುವೆಗಳಲ್ಲಿನ ಸಾಗುವ ಹಾದಿ ಗುರುತಿಟ್ಟುಕೊಳ್ಳುವ ಕಲೆ ಹಿಂದೆ ತಿಳಿದಿರುವುದಕ್ಕಿಂತೂ ಸೂಕ್ಷ್ಮವಾದುದಾಗಿದೆ. ವಸ್ತುಗಳನ್ನು ಎಳೆದು ಸಾಗಿಸುವಾಗ ಹಿಂದಕ್ಕೆ ಹೆಜ್ಜೆಯಿಡುವ ಇರುವೆಗಳು ಸೂರ್ಯನ ಪಥವನ್ನು ಗಮನಿಸುತ್ತವೆ. ಹಾಗೂ ಬಂದ ಹಾದಿಯ ದೃಶ್ಯ ಸ್ಮರಣೆಯನ್ನು ಬಳಸಿ ನಿರ್ದಿಷ್ಟ ಜಾಗವನ್ನು ತಲುಪುತ್ತವೆ. ಇಂಗ್ಲೆಂಡ್ ಎಡಿನ್ಬರೋ ವಿಶ್ವವಿದ್ಯಾಲಯ ಸೇರಿದಂತೆ ಇತರೆ ವಿಜ್ಞಾನಿಗಳು 'ಇರುವೆ ಚಲನೆ' ಕುರಿತು ನಡೆಸಿರುವ ಅಧ್ಯಯನದಲ್ಲಿ ಅಂಶ ಬೆಳಕಿಗೆ ಬಂದಿತು. ಈ ಅಧ್ಯಯನವು ರೋಬೋಟ್ಚಲನಾ ವ್ಯವಸ್ಥೆ ರೂಪಿಸುವಲ್ಲಿ ಸಹಕಾರಿಯಾಗಬಹುದು ಎನ್ನಲಾಯಿತು.
2017: ಚೆನ್ನೈ: ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ
ಎಂದು ಜಗತಿನಾದ್ಯಂತ ಚರ್ಚೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಅದನ್ನು ಮರುಬಳಕೆ ಮಾಡಿಕೊಳ್ಳುವ ಕುರಿತೂ ಸಹ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಐಐಟಿ ಮದ್ರಾಸ್ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಮರುಬಳಕೆ ಕುರಿತು ಕೈಗೊಂಡ ಸಂಶೋಧನೆ ಯಶಸ್ವಿಯಾಗಿದ್ದು, ಪ್ಲಾಸ್ಟಿಕ್ ಬಾಟಲ್ ಉಪಯೋಗಿಕೊಂಡು ಶೌಚಗೃಹ ನಿರ್ಮಿಸಲು ಸಾಧ್ಯವಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ಬಾಟಲಿಗಳಿಂದ ಇಟ್ಟಿಗೆ ತಯಾರಿಸಿ ಆದನ್ನು ಕಟ್ಟಡ ನಿರ್ಮಾಣಕ್ಕೆ ಬಳಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳ ಒಳಗೆ ಮರಳು ಮತ್ತು ಮಣ್ಣನ್ನು ತುಂಬಿಸಿ ಇಟ್ಟಿಗೆಯಂತೆ ಗಟ್ಟಿಯಾಗಿ ಮಾಡಲಾಗುತ್ತದೆ. ನಂತರ ಬಾಟಲಿಗಳನ್ನು ಗೋಡೆ ನಿರ್ಮಾಣದಲ್ಲಿ ಬಳಸಿಕೊಳ್ಳಬಹುದು. ಇದರಿಂದಾಗಿ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣ ಸಹ ಕಡಿಮೆಯಾಗುತ್ತದೆ ಮತ್ತು ಗ್ರಾಮೀಣ ಭಾಗದಲ್ಲಿ ಕಡಿಮೆ ಖರ್ಚಿನಲ್ಲಿ ಶೌಚಗೃಹ ನಿರ್ಮಿಸಬಹುದಾಗಿದೆ ಎಂದು ಐಐಟಿ ವಿದ್ಯಾರ್ಥಿ ಕೀರ್ತನಾ ತಮ್ಮ ಸಂಶೋಧನೆಯ ಕುರಿತು ತಿಳಿಸಿದರು. ವಿದ್ಯಾರ್ಥಿಗಳು ಪ್ರಯೋಗಾರ್ಥವಾಗಿ ಸುಮಾರು 3500 ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿಕೊಂಡು ಬೆಂಚ್ ನಿರ್ಮಾಣ ಮಾಡಿದರು.  ಈಗ ಚೆನ್ನೈನ ವಿವಿಧ ಹೋಟೆಲ್ಗಳಿಂದ ಖಾಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ಅದರಿಂದ ಶೌಚಗೃಹ ನಿರ್ಮಿಸಲು ಸಿದ್ಧತೆ ನಡೆಸಿದರು.. ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿ ಶೌಚಗೃಹ ನಿರ್ಮಿಸುವುದರಿಂದ ಕಸದ ಬುಟ್ಟಿಗೆ ಸೇರುತ್ತಿದ್ದ ಬಾಟಲಿಗಳನ್ನು ಪೂರ್ಣ ಪ್ರಮಾಣದಲ್ಲಿ ಮರು ಬಳಸಿಕೊಂಡಂತಾಗುತ್ತದೆ. ಹೀಗೆ ನಿರ್ಮಿಸಿದ ಕಟ್ಟಡ ಸುಮಾರು 10 ವರ್ಷ ಬಾಳಿಕೆ ಬರುತ್ತದೆ ಎಂದು ಐಐಟಿ ವಿದ್ಯಾರ್ಥಿಗಳು ತಿಳಿಸಿದರು.
2017: ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿದ್ದು,
ಮಹಾಮೈತ್ರಿಗೆ ಮುಂದಾಗಿದ್ದ ಸಮಾಜವಾದಿ ಪಕ್ಷ ಕನಿಷ್ಠ ಕಾಂಗ್ರೆಸ್ ಕೈ ಹಿಡಿಯುವುದೂ  ಅನುಮಾನ ಎಂಬಂತಿದ್ದ ಸಂದರ್ಭದಲ್ಲೇ ಎಸ್ಪಿ-ಕಾಂಗ್ರೆಸ್ ಮೈತ್ರಿ ಸ್ಪರ್ಧೆ ಖಚಿತವಾಯಿತು. 110 ಸೀಟುಗಳಿಗೆ ಪಟ್ಟು ಹಿಡಿದಿದ್ದ ಕಾಂಗ್ರೆಸ್ಗೆ ಹೆಚ್ಚುವರಿಯಾಗಿ 6 ಕ್ಷೇತ್ರಗಳು ಲಭ್ಯವಾದವು.. ಒಟ್ಟು 105 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ. 403 ಕ್ಷೇತ್ರಗಳ ಪೈಕಿ ಎಸ್ಪಿ 298 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಆರಂಭದಲ್ಲಿ 120 ಸೀಟುಗಳನ್ನು ಬಯಸಿದ್ದ ಕಾಂಗ್ರೆಸ್ಗೆ ಅಖಿಲೇಶ್ ಯಾದವ್ ಕೇವಲ 99 ಸೀಟುಗಳನ್ನು ನೀಡಿದ್ದು ಮುನಿಸಿಗೆ ಕಾರಣವಾಗಿತ್ತು. ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಪರಸ್ಪರ ಚರ್ಚೆ ನಡೆಸಿದ್ದರು.
2017: ಲಾಸ್ಏಂಜಲಿಸ್:  ಅಮೆರಿಕದ 45ನೇ ಅಧ್ಯಕ್ಷರಾಗಿ ಡೊನಾಲ್ಡ್ಟ್ರಂಪ್ಅವರ ಆಯ್ಕೆಯನ್ನು ವಿರೋಧಿಸಿ ಮಹಿಳೆಯರು ವಾಷಿಂಗ್ಟನ್ನಿನಲ್ಲಿ ನಡೆಸಿದ ಪ್ರತಿಭಟನೆಗೆ ಬಾಲಿವುಡ್ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದರು.  34 ವರ್ಷದ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ಡಿನಬೇವಾಚ್‌’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ ಕಾರಣ, ಮಹಿಳೆಯರ ಹಕ್ಕುಗಳನ್ನು ರಕ್ಷಿಸಬೇಕು ಎಂಬ ಸಂದೇಶದೊಂದಿಗೆ ನಡೆಸಿದ ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
2017: ಕೋಲ್ಕತ: 6ನೇ ವಿಕೆಟ್ ಜತೆಯಾಟದಲ್ಲಿ ಕೇದರ್ ಜಾದವ್ (90) ಮತ್ತು ಹಾರ್ದಿಕ್ ಪಾಂಡ್ಯ
(56) ಗಳಿಸಿದ 104 ರನ್ಗಳ ಜವಾಬ್ದಾರಿಯುತ ಪ್ರದರ್ಶನದ ನಡುವೆಯೂ ಭಾರತ ತಂಡ ಈಡನ್ ಗಾರ್ಡನ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಮತ್ತು ಮೂರನೇ ಪಂದ್ಯದಲ್ಲಿ 5 ರನ್ ಸೋಲನುಭವಿಸಿತು. ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಅವಕಾಶ ಕೈಚೆಲ್ಲಿತು. ಕಡೇ ಎಸೆತದಲ್ಲೂ ಗೆಲುವಿಗಾಗಿ ಹೋರಾಡಿದ ಕೊಹ್ಲಿ ಪಡೆ ನಿಗದಿತ ಓವರ್ನಲ್ಲಿ ಗಳಿಸಿದ್ದು 316 ರನ್. ಅಜಿಂಕ್ಯ ರಹಾನೆ (1), ಕನ್ನಡಿಗ ಕೆ.ಎಲ್.ರಾಹುಲ್ (11), ನಾಯಕ ವಿರಾಟ್ ಕೊಹ್ಲಿ (55), ಯುವರಾಜ್ ಸಿಂಗ್ (45) ಮತ್ತು ಮಹೇಂದ್ರ ಸಿಂಗ್ ಧೋನಿ (25) ಅವರ ವಿಕೆಟ್ ಪತನದಿಂದ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಗೆಲುವಿನ ದಡ ಸೇರಿಸಿದ್ದೇ ಜಾದವ್ ಮತ್ತು ಪಾಂಡ್ಯ ಜೋಡಿ. ಜವಾಬ್ದಾರಿಯುತ ಆಟ ಪ್ರದರ್ಶಿಸಿ ಜಯಭೇರಿ ಭಾರಿಸುವಲ್ಲಿ ಮಹತ್ವದ ಪಾತ್ರವಹಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ನಿಗದಿತ ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321ರನ್ ಸವಾಲು ನೀಡಿತ್ತು. ಇಂಗ್ಲೆಂಡ್ ಪರ ಆರಂಭಿಕ ಆಟಗಾರರಾದ ಜೇಸನ್ ರಾಯ್ (65) ಮತ್ತು ಸ್ಯಾಮ್ ಬಿಲ್ಲಿಂಗ್ಸ್ (35) ಮೊದಲ ವಿಕೆಟ್ಗೆ 98 ರನ್ ಕಲೆ ಹಾಕಿದರು. ಇಬ್ಬರೂ ಬ್ಯಾಟ್ಸ್ಮನ್ಗಳು ಜಡೇಜಾಗೆ ವಿಕೆಟ್ ಒಪ್ಪಿಸಿದರು. ಮೊದಲ ವಿಕೆಟ್ ಪತನದ ಬಳಿಕ ಕ್ರೀಸ್ಗೆ ಬಂದ ಬೆಸ್ಟ್ರೋವ್ (56) ಹಾಗೂ 2ನೇ ವಿಕೆಟ್ ಪತನದ ಬಳಿಕ ಕಣಕ್ಕಿಳಿದ ಮಾರ್ಗನ್ (43)ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಇನಿಂಗ್ಸ್ ಕೊನೆಯಲ್ಲಿ ಬೆನ್ ಸ್ಟೋಕ್ಸ್ (57*) ಮತ್ತು ಕ್ರಿಸ್ ವೋಕ್ಸ್ (34) ತಂಡದ ಮೊತ್ತವನ್ನು 300 ಗಡಿ ದಾಟಿಸಿದರು. ಭಾರತದ ಪರ ಉತ್ತಮ ನಿರ್ವಹಣೆ ತೋರಿದ ಹಾರ್ದಿಕ್ ಪಾಂಡ್ಯ 49 ಕ್ಕೆ 3 ವಿಕೆಟ್ ಪಡೆದರು. ಉಳಿದಂತೆ ಜಡೇಜಾ 62 ಕ್ಕೆ 2 ಮತ್ತು ಬೂಮ್ರಾ 68 ಕ್ಕೆ 1 ವಿಕೆಟ್ ಪಡೆದರು. 150 ವಿಕೆಟ್, ಜಡೇಜಾ ದೇಶದ ಮೊದಲ ಎಡಗೈ ಸ್ಪಿನ್ನರ್! ಕೋಲ್ಕತ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಮಹತ್ವದ ಎರಡು ವಿಕೆಟ್ ಸಂಪಾದಿಸಿದ ಆಲ್ರೌಂಡರ್ ರವೀಂದ್ರ ಜಡೇಜಾ ಹೊಸ ದಾಖಲೆಯೊಂದನ್ನು ನಿರ್ಮಿಸಿದರು. ಭಾರತ ಏಕದಿನ ತಂಡದ ಪರ ಈವರೆಗೆ ಆಡಿರುವ ಎಡಗೈ ಬೌಲರ್ಗಳಲ್ಲಿ 150 ವಿಕೆಟ್ ಸಂಪಾದಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇಂಗ್ಲೆಂಡ್ ಆರಂಭಿಕ ಸ್ಯಾಮ್ ಬಿಲ್ಲಿಂಗ್ಸ್ರನ್ನು ಔಟ್ ಮಾಡಿ 150ನೇ ವಿಕೆಟ್ ಸಂಪಾದಿಸಿದ ಜಡೇಜಾ ಜೀವನದ ಶ್ರೇಷ್ಠ ಸಾಧನೆ ಮಾಡಿದ ಗೌರವಕ್ಕೆ ಪಾತ್ರರಾದರು. ಜಡೇಜಾ ಅವರಿಗೆ ಇದು ವೃತ್ತಿಜೀವನದ 129ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿದೆ. ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ 111 ವಿಕೆಟ್ಗಳನ್ನು, ಟ್ವೆಂಟಿ20ಯಲ್ಲಿ 31 ವಿಕೆಟ್ಗಳನ್ನೂ ಗಳಿಸಿದ್ದಾರೆ.
2017: ಮೆಲ್ಬೋರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ
ಭಾರತದ ಲಿಯಾಂಡರ್ ಪೇಸ್ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದರೆ, ಮಹಿಳೆಯರ ಡಬಲ್ಸ್ನಲ್ಲಿ ಸಾನಿಯಾ ಮಿರ್ಜಾ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದರು. ಈದಿನ ನಡೆದ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಮತ್ತು ಸ್ವಿಜರ್ಲೆಂಡ್ ಮಾರ್ಟಿನಾ ಹಿಂಗಿಸ್ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಡೆಸ್ಟಾನೆ ಐವಾ ಮತ್ತು ಮಾರ್ಕ್ ಪೋಲಮನ್ಸ್ ಜೋಡಿಯನ್ನು 6-4, 6-3 ನೇರ ಸೆಟ್ಗಳಿಂದ ಸೋಲಿಸಿದರು. ಆದರೆ ಮಹಿಳೆಯರ ಡಬಲ್ಸ್ ಪ್ರೀ ಕ್ವಾರ್ಟ್ರ್ ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬರಾ ಸ್ಟ್ರೈಕೋವಾ ಜೋಡಿ ಜಪಾನಿನ ಹೊಜುಮಿ ಮತ್ತು ಎಂ ಕಾಟೋ ಜೋಡಿಯ ವಿರುದ್ಧ 3-6, 6-2, 2-6 ಅಂತರದಿಂದ ಸೋಲು ಅನುಭವಿಸಿದರು. ಸಾನಿಯಾ ಮಿರ್ಜಾ ಮಿಶ್ರ ಡಬಲ್ಸ್ನಲ್ಲಿ ಕ್ರಯೇಷಿಯಾದ ಇವಾನ್ ಡೋಡಿಗ್ ಅವರೊಂದಿಗೆ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಉಳಿದಂತೆ ಭಾರತದ ರೋಹನ್ ಬೋಪಣ್ಣ ಮತ್ತು ಕೆನಡಾದ ಗ್ಯಾಬ್ರಿಲ್ಲಾ ದೆಬ್ರೋವಸ್ಕಿ ಜೋಡಿ ಮಿಶ್ರ ಡಬಲ್ಸ್ ಎರಡನೇ ಸುತ್ತು ಪ್ರವೇಶಿಸಿತು..

2017: ಚೆನ್ನೈ, ಮಧುರೈ: ಜಲ್ಲಿಕಟ್ಟು ಮೇಲಿನ ನಿಷೇಧ ತೆರವುಗೊಂಡ ನಂತರ ತಮಿಳುನಾಡಿನ
ಹಲವು ಭಾಗಗಳಲ್ಲಿ ಜಲ್ಲಿಕಟ್ಟು ಆಯೋಜಿಸಲಾಗಿದ್ದು ಈದಿನ  ಪುದುಕೋಟ್ಟೈನಲ್ಲಿ ನಡೆದ ಜಲ್ಲಿಕಟ್ಟು ಕ್ರೀಡೆಯ ವೇಳೆ ಗೂಳಿ ತಿವಿದು ಇಬ್ಬರು ಮೃತರಾದರೆ,, 83 ಜನರು ಗಾಯಗೊಂಡರು. ಪುದುಕೋಟ್ಟೈ ಜಿಲ್ಲೆಯ ಹಲವು ಭಾಗಗಳಲ್ಲಿ ಜಲ್ಲಿಕಟ್ಟು ಆಯೋಜಿಸಲಾಗಿತ್ತು. ರಾಪೋಸಲ್ನಲ್ಲಿ ನಡೆದ ಜಲ್ಲಿಕಟ್ಟಿನಲ್ಲಿ ಗೂಳಿ ತಿವಿದ ಪರಿಣಾಮ ಇಬ್ಬರು ಮೃತರಾದರು. ಮೃತರನ್ನು ಮೋಹನ್ ಮತ್ತು ರಾಜಾ ಎಂದು ಗುರುತಿಸಲಾಯಿತು.. ಇದೇ ವೇಳೆ 83 ಜನರು ಗಾಯಗೊಂಡರು. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.. ಮಧುರೈಯಲ್ಲಿ ಜಲ್ಲಿಕಟ್ಟಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ನಿರ್ಜಲೀಕರಣದಿಂದಾಗಿ ಓರ್ವ ವ್ಯಕ್ತಿ ಮೃತರಾದರು ಎಂದು ಪೊಲೀಸರು ತಿಳಿಸಿದರು. ಈಮಧ್ಯೆ  ಜಲ್ಲಿಕಟ್ಟು ಸುಗ್ರೀವಾಜ್ಞೆ ತಾತ್ಕಾಲಿಕ ಪರಿಹಾರವಾಗಿದ್ದು, ಸಂಬಂಧ ಶೀಘ್ರ ಶಾಶ್ವತ ಪರಿಹಾರ ಸೂಚಿಸಬೇಕು ಎಂದು ಒತ್ತಾಯಿಸಿ ಮಧುರೈನ ಅಲಂಗನಲ್ಲೂರಿನಲ್ಲಿ ಜನರು ಪ್ರತಿಭಟನೆ ನಡೆಸಿದ ಕಾರಣದಿಂದಾಗಿ ಸಿಎಂ ಪನ್ನೀರ ಸೆಲ್ವಂ ಕಾರ್ಯಕ್ರಮವನ್ನು ಉದ್ಘಾಟಿಸದೆ ಚೆನ್ನೈಗೆ ವಾಪಸ್ಸಾದರು. ಅಲಂಗನಲ್ಲೂರಿನಲ್ಲಿ ಆಯೋಜಿಸುವ ಜಲ್ಲಿಕಟ್ಟು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಆದರೆ ಶಾಶ್ವತ ಪರಿಹಾರಕ್ಕಾಗಿ ಒತ್ತಾಯಿಸಿ ಅಲಂಗನಲ್ಲೂರಿನಲ್ಲಿ ಪ್ರತಿಭಟನೆ ಹೆಚ್ಚಾದ ನಂತರ ದಿಂಡಿಗಲ್ನಲ್ಲಿ ಜಲ್ಲಿಕಟ್ಟು ಉದ್ಘಾಟಿಸಲು ಸಿಎಂ ಚಿಂತಿಸಿದ್ದರು. ಆದರೆ ದಿಂಡಿಗಲ್ನಲ್ಲೂ ಸಹ ಪ್ರತಿಭಟನೆ ಹೆಚ್ಚಾದ ಹಿನ್ನೆಲೆಯಲ್ಲಿ ಪನ್ನೀರ್ ಸೆಲ್ವಂ ಚೆನ್ನೈಗೆ ವಾಪಸಾದರು. ಸುಗ್ರೀವಾಜ್ಞೆಯನ್ನು ಕಾನೂನಾಗಿ ಪರಿವರ್ತಿಸಲು ಮಸೂದೆ ಸಿದ್ಧಪಡಿಸಲಾಗುತ್ತಿದೆ. 23ರಂದು  ಪ್ರಾರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು. ಜಲ್ಲಿಕಟ್ಟು ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಅಲಂಗನಲ್ಲೂರಿನಲ್ಲಿ ಜನರು ಬಯಸಿದಾಗ ಜಲ್ಲಿಕಟ್ಟು ಆಯೋಜಿಸಲಾಗುವುದು. ಜಲ್ಲಿಕಟ್ಟು ಆಚರಣೆ ಅವರ ಇಚ್ಛೆಯಂತೆಯೇ ನಡೆಯಲಿದೆ. ರಾಜ್ಯದ ಹಲವು ಭಾಗಗಳಲ್ಲಿ ಸ್ಥಳೀಯ ಆಡಳಿತದ ಸಹಯೋಗದಲ್ಲಿ ಜಲ್ಲಿಕಟ್ಟು ಆಯೋಜಿಸಲಾಗಿದೆ. ಎಂದು ಕಾರ್ಯಕ್ರಮದ ರದ್ಧದ ಕುರಿತು ಪನ್ನೀರ ಸೆಲ್ವಂ ಪ್ರತಿಕ್ರಿಯೆ ನೀಡಿದರು.
2009: ಬೆಂಗಳೂರು ನಗರದಲ್ಲಿ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ ಅನಿಶ್ಚಿತತೆ ಕೊನೆಗೊಂಡಿತು. ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಅಂಗೀಕೃತವಾದ ಮಸೂದೆ ಅನುಸಾರ ಫೆ. 1ರಿಂದಲೇ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸಲಾಯಿತು. ಜತೆಗೆ ಉದ್ದೇಶಿತ ಶೇ 20ರಷ್ಟು ತೆರಿಗೆ ಹೆಚ್ಚಳ ಕೈ ಬಿಡಲಾಯಿತು. ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಘಟಕ ಪ್ರದೇಶ ಮೌಲ್ಯ (ಯುಎವಿ) ತೆರಿಗೆ ಪದ್ಧತಿಯನ್ನು ಬಿ.ಬಿ.ಎಂ.ಪಿ. ವ್ಯಾಪ್ತಿಯಲ್ಲಿ ಜಾರಿಗೆ ತರಲು ಅನುವು ಮಾಡಿಕೊಡುವ ಕರ್ನಾಟಕ ಪೌರನಿಗಮಗಳ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆ ಧ್ವನಿಮತದಿಂದ ಆಂಗೀಕರಿಸಿತು. ಇದರೊಂದಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 2003ರಿಂದ ಜಾರಿಯಲ್ಲಿದ್ದ ಸಿವಿಎಸ್ (ಕ್ಯಾಪಿಟಲ್ ವ್ಯಾಲ್ಯೂ ಸ್ಕೀಮ್) ತೆರಿಗೆ ಪದ್ಧತಿ ಬದಲಾಗಿ ತೆರಿಗೆ ಪಾವತಿದಾರರು ಸ್ವಯಂಘೋಷಿತ ಪದ್ಧತಿಯ ಮೂಲಕ ತಾವೇ ತೆರಿಗೆಯನ್ನು ನಿರ್ಧರಿಸಿಕೊಳ್ಳಬಹುದು.

2009: ಕುಂದಾನಗರ ಬೆಳಗಾವಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸರ್ಕಾರವು ಉತ್ತರ ಕರ್ನಾಟಕ ಭಾಗದ ಜನರಿಗೆ ಭಾರಿ ಕೊಡುಗೆಗಳ ಮೂಲಕ 'ಸಿಹಿ' ಉಣಿಸಲು ತೀರ್ಮಾನಿಸಿತು. ಈ ಭಾಗದಲ್ಲಿ ಸುಮಾರು 500 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ಸಂಪುಟ ಅನುಮೋದನೆ ನೀಡಿತು. ಮಾಜಿ ದೇವದಾಸಿಯರಿಗೆ 2500 ಮನೆ ನಿರ್ಮಾಣ, ಗದಗದಲ್ಲಿ ಪಶುವೈದ್ಯಕೀಯ ಕಾಲೇಜು, ಉತ್ತರ ಕರ್ನಾಟಕದಲ್ಲಿ 1000 ಹಾಲು ಉತ್ಪಾದಕರ ಸಂಘಗಳ ರಚನೆ, ಬೆಳಗಾವಿಯಲ್ಲಿ ನೇಕಾರರಿಗೆ 'ಸೈಜಿಂಗ್ ಘಟಕ', ಬೀದರ್ ಮತ್ತು ಬೆಳಗಾವಿ ಸರ್ಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ, ಕಿತ್ತೂರು ಹಾಗೂ ಗಡಿ ಅಭಿವೃದ್ಧಿ ಮತ್ತು ರೇಣುಕಾ ಯಲ್ಲಮ್ಮ ದೇವಾಲಯದ ಸಮಗ್ರ ಅಭಿವೃದ್ಧಿಗೆ ಪ್ರಾಧಿಕಾರಗಳ ರಚನೆ, ಹಿಡಕಲ್ಲಿನಲ್ಲಿ ಕೆ.ಆರ್.ಎಸ್. ಮಾದರಿಯ ಬೃಂದಾವನ, ಧಾರವಾಡದಲ್ಲಿರುವ ಮಾನಸಿಕ ಆಸ್ಪತ್ರೆಯನ್ನು ಬೆಂಗಳೂರಿನ 'ನಿಮ್ಹಾನ್ಸ್‌' ಮಾದರಿಯಲ್ಲಿ ಅಭಿವೃದ್ಧಿ, ಐನಾಪುರ, ಕರಿಮಸೂತಿಯಲ್ಲಿ ಎರಡು ಏತನೀರಾವರಿ ಯೋಜನೆಗಳು, ಶಹಾಪುರ ಉಪನಾಲೆಯ ಮೂಲಕ ನೀರು ತಲುಪದ ಪ್ರದೇಶಗಳಿಗೆ ಬೋನಾಳ್ ಕೆರೆ ಏತ ನೀರಾವರಿ, ಸುಮಾರು 5,500 ಕಿ.ಮೀ. ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಸಂಪುಟ ಅನುಮೋದನೆ ನೀಡಿತು.

2009: ಬೆಳಗಾವಿ ನಗರದ ಹೊರವಲಯ ಹಲಗಾ-ಬಸ್ತವಾಡ ಬಳಿ ಸುವರ್ಣ ಸೌಧ ಕಟ್ಟಡಕ್ಕಾಗಿ ಭೂಮಿ ಪೂಜೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈದಿನ ನೆರವೇರಿಸಿದರು. ಸುವರ್ಣ ಸೌಧದ ಭೂಮಿ ಸ್ವಾಧೀನಕ್ಕಾಗಿ 19.50 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ಸೌಧದ ಒಂದು ಕಿ.ಮೀ. ಸುತ್ತ-ಮುತ್ತ ಹಸಿರು ವಲಯ ನಿರ್ಮಿಸಬೇಕು. ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಮುಖ್ಯಮಂತ್ರಿ ಅಧಿಕಾರಿಗಳಿಗೆ ಸೂಚಿಸಿದರು.

2009: ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಐತಿಹಾಸಿಕ ಹಂಪಿಗೆ ಸಂಪರ್ಕ ಕಲ್ಪಿಸುವ ಬಹುಚರ್ಚಿತ ಚರ್ಚಿತ ಆನೆಗೊಂದಿ ತೂಗು ಸೇತುವೆ ಕುಸಿದು ಸುಮಾರು 7 ಮಂದಿ ಕಾಣೆಯಾಗಿ, 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ನಾಪತ್ತೆಯಾದವರನ್ನು ಕೇರಳದ ಭರತ್, ಹೈದರಾಬಾದಿನ ಪಾಟೀಲ್, ಆನೆಗೊಂದಿಯ ರಸೂಲ್, ಭೀಮಪ್ಪ ಹಾಗೂ ಹೊಸಪೇಟೆ ತಾಲ್ಲೂಕು ವೆಂಕಟಾಪುರ ಗ್ರಾಮದ ಹುಲಗೇಶಿ, ದುರ್ಗೇಶಿ ಮತ್ತು ಗಾದಿಲಿಂಗಪ್ಪ ಎಂದು ಗುರುತಿಸಲಾಯಿತು.

2009: ಮಾಣಿಕ್‌ಚಂದ್ ಗುಟ್ಕಾ ಪ್ರಿಯರಿಗೆ ಕಹಿ ಸುದ್ದಿಯೊಂದು ಬಂತು. ಈ ಗುಟ್ಕಾದ ತಯಾರಿ, ಮಾರಾಟ ಮತ್ತು ವಿತರಣೆಯನ್ನು ನಿಷೇಧ ಮಾಡಿ ಹೈಕೋರ್ಟ್ ಆದೇಶಿಸಿತು. ಈ ಗುಟ್ಕಾ ತಯಾರು ಮಾಡುವ ಪುಣೆ ಮೂಲದ 'ಧಾರಿವಾಲ್ ರಸಿಕ್‌ಲಾಲ್ ಮಾಣಿಕ್‌ಚಂದ್ ಕಂಪೆನಿ' ವಿರುದ್ಧ ಮಹಾರಾಷ್ಟ್ರ ಮೂಲದ ರಾಜು ಪಾಚ್ಚಾಪುರೆ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಪಿ.ಡಿ.ದಿನಕರನ್ ಹಾಗೂ ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿತು. ಮನುಷ್ಯನ ಪ್ರಾಣಕ್ಕೆ ಸಂಚಕಾರ ತರುವಷ್ಟು ಪ್ರಮಾಣದಲ್ಲಿ ಈ ಗುಟ್ಕಾದಲ್ಲಿ ರಾಸಾಯನಿಕ ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ಕೋರ್ಟಿನಲ್ಲಿ ದೂರಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕಳೆದ ಬಾರಿ ವಿಚಾರಣೆ ವೇಳೆ ಆಹಾರ ಮತ್ತು ನಾಗರಿಕ ಸರ್ಗರಾಜು ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿತ್ತು. ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆಸಿದ್ದ ಇಲಾಖೆ, ಇದರಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮೆಗ್ನೀಷಿಯಂ ಕಾರ್ಬೊನೇಟ್ ಬಳಕೆ ಆಗಿರುವ ಬಗ್ಗೆ 2008ರ ನವೆಂಬರ್ 24ರಂದು ಸಾರ್ವಜನಿಕ ಆರೋಗ್ಯ ಸಂಸ್ಥೆ ವರದಿ ನೀಡಿತ್ತು. ಗುಟ್ಕಾಕ್ಕೆ ಬಳಕೆ ಆಗುವ ಅಡಿಕೆ ಈ ರಾಸಾಯನಿಕ ಅಂಶವನ್ನು ಒಳಗೊಂಡಿಲ್ಲ. ಬದಲಿಗೆ ಪ್ಯಾಕೆಟಿನಲ್ಲಿ ಇರುವ ಗುಟ್ಕಾದ ಮಾದರಿಯನ್ನು ತಪಾಸಣೆಗೆ ಒಳಪಡಿಸಿದಾಗ, ಅದರಲ್ಲಿ ರಾಸಾಯನಿಕ ಬಳಕೆ ಆಗುವುದು ಕಂಡು ಬಂದಿದೆ. ಇದರ ಸೇವನೆ ಮಾಡುವವರ ಆರೋಗ್ಯಕ್ಕೆ ಅಪಾರ ಹಾನಿ ಉಂಟಾಗುತ್ತದೆ ಎಂದು ವರದಿ ತಿಳಿಸಿತ್ತು. 15 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಬೀದಿ ಮಕ್ಕಳು ಇದರ ಸೇವನೆ ಮಾಡುತ್ತಿರುವುದು ಕಂಡು ಬಂದಿದೆ. ತಮ್ಮ ದಿನದ ದುಡಿಮೆಯನ್ನು ಇದರ ಮೇಲೆಯೇ ಸುರಿಯುತ್ತಿದ್ದಾರೆ. ಇದರಿಂದ ಅವರ ಜೀವನ ಮಾತ್ರವಲ್ಲದೇ ಆರೋಗ್ಯದ ಮೇಲೂ ಈ ಗುಟ್ಕಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ವರದಿ ವಿವರಿಸಿತ್ತು. ಈ ವರದಿಯನ್ನು ಸರ್ಕಾರಿ ವಕೀಲರು ಈದಿನ ಹೈಕೋರ್ಟ್ ಗಮನಕ್ಕೆ ತಂದರು. ವರದಿಯನ್ನು ಗಮನಿಸಿದ ಪೀಠ, ಅದರ ತಯಾರಿ, ಮಾರಾಟ ಹಾಗೂ ವಿತರಣೆಗೆ ನಿಷೇಧ ಹೇರಿ ಆದೇಶಿಸಿತು.

2009: 125 ಗಂಟೆ ನಿರಂತರ ಪಾಠ ಮಾಡುವ ಮೂಲಕ ಮಧ್ಯಪ್ರದೇಶದ ಸಿಯೋನಿ ಜಿಲ್ಲೆ ಗ್ರಾಮವೊಂದರ ಗಣಿತ ಶಿಕ್ಷಕರೊಬ್ಬರು ವಿಶ್ವ ದಾಖಲೆ ನಿರ್ಮಿಸಿದರು. ದಿಲೀಪ್ ಕುಮಾರ್ ಚಾಂದೆಲ್ ಎಂಬ 23ರ ಹರೆಯದ ಗಣಿತ ಶಿಕ್ಷಕ ಈ ಸಾಧನೆ ಮಾಡಿದವರು. ಇವರು ಇಲ್ಲಿಯವರೆಗೂ ದಾಖಲಾಗಿದ್ದ ಹೈದರಾಬಾದಿನ ಜೈಸಿಂಗ್ ರವಿರಾಲ ಅವರ 120 ಗಂಟೆಗಳ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸ್ದಿದರು. ಮಧ್ಯಪ್ರದೇಶದ ಜಮ್ಮುನ್‌ಪಾಣಿ ಗ್ರಾಮದ ಪ್ರಾಥಮಿಕ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಈ ಕಾರ್ಯಕ್ರಮ ಇಂಡಿಯಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ವೀಕ್ಷಕರ ಸಮ್ಮುಖದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನ ಚೇತನ್ ಉಪಾಧ್ಯಾಯ್ ವೀಕ್ಷಕರಾಗಿ ಭಾಗವಹಿಸಿದ್ದರು. ಹೊಸ ದಾಖಲೆ ಸೃಷ್ಟಿಯಾದ ನಂತರ 2007ರ ಗಿನ್ನೆಸ್ ವಿಶ್ವದಾಖಲೆ ಪುಸ್ತಕದ ಪಟ್ಟಿಯಿಂದ ಜೈಸಿಂಗ್ ಹೆಸರನ್ನು ತೆಗೆಯಲಾಯಿತು. ಚಾಂದೇಲ್ ಅವರ ಪಾಠ ಜನವರಿ 16ರಂದು ಬೆಳಿಗ್ಗೆ 11.71ಕ್ಕೆ ಆರಂಭವಾಗಿ 21ರ ಮಧ್ಯಾಹ್ನ 12.17ರವರೆಗೂ ಮುಂದುವರೆಯಿತು. ನಿಯಮಾನುಸಾರ ಒಂದು ಗಂಟೆಗೊಮ್ಮೆ 5ನಿಮಿಷಗಳ ವಿಶ್ರಾಂತಿಯನ್ನು ಚಾಂದೇಲ್ ತೆಗೆದು ಕೊಂಡರು. ಈ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ವಿಧಾನಸಭೆಯ ಉಪಸಭಾಪತಿ ಹರ್‌ವಂಶ್ ಸಿಂಗ್ ಹಾಜರಿದ್ದ, ಸಾಧಕ ಚಾಂದೇಲ್‌ಗೆ 5001 ರೂಪಾಯಿ ನಗದು ಬಹುಮಾನ ನೀಡಿದರು.

2009: ಬರಾಕ್ ಒಬಾಮ ಅವರು ಈದಿನ ಸಂಜೆ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಹೀಗೆ ಅತ್ಯುನ್ನತ ಹ್ದುದೆಯಲ್ಲಿ ಇರುವವರು ಎರಡನೇ ಬಾರಿ ಪ್ರಮಾಣ ವಚನ ಸ್ವೀಕರಿಸುವುದು ತೀರಾ ಅಪರೂಪ. ಅಮೆರಿಕದ ಯಾವೊಬ್ಬ ಹಿಂದಿನ ಅಧ್ಯಕ್ಷರಿಗೂ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಪ್ರಮಾಣ ವಚನ ಬೋಧಿಸುವಾಗ ತೊದಲಿದ್ದೇ ಇದಕ್ಕೆ ಕಾರಣ. ಈ ತಪ್ಪನ್ನು ಸರಿಪಡಿಸುವ ಸಲುವಾಗಿ ತುಂಬಾ ಎಚ್ಚರಿಕೆ ವಹಿಸಿ ಈದಿನ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ವಿಧಿ ಪೂರೈಸಲಾಯಿತು ಎಂದು ಶ್ವೇತಭವನದ ಪ್ರಕಟಣೆ ಸ್ಪಷ್ಟಪಡಿಸಿತು. ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಏರುವವರಿಗೆ ಪ್ರಮಾಣ ವಚನದಲ್ಲಿ ಬೋಧನೆಯಾಗುವ ಒಕ್ಕಣೆ ಅಲ್ಲಿನ ಸಂವಿಧಾನದಲ್ಲೇ ಅಡಕವಾಗಿದೆ. ಅದು 35 ಪದಗಳನ್ನು ಒಳಗೊಂಡ ಒಕ್ಕಣೆ.

2008: ವಿಶ್ವದ ಅತ್ಯುನ್ನತ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿದ ಸಾಹಸಿ ಸರ್ ಎಡ್ಮಂಡ್ ಹಿಲೆರಿ ಅವರ ಪಾರ್ಥಿವ ಶರೀರಕ್ಕೆ ಈದಿನ ಆಕ್ಲೆಂಡಿನ ಸೈಂಟ್ ಮೇರಿ ಇಗರ್ಜಿಯಲ್ಲಿ (ಚರ್ಚ್) ಸಾವಿರಾರು ಜನರ ಗೌರವಾರ್ಪಣೆಯ ಮಧ್ಯೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪ್ರಮುಖ ಬೀದಿಗಳಲ್ಲಿ ಶವಪೆಟ್ಟಿಗೆಯ ಮೆರವಣಿಗೆ ನಡೆದಂತೆಯೇ ಸಾವಿರಾರು ಮಂದಿ ತಮ್ಮ ಅಂತಿಮ ನಮನ ಸಲ್ಲಿಸಿದರು. ಪ್ರಧಾನಿ ಹೆಲೆನ್ ಕ್ಲರ್ಕ್ ಅವರೂ ಸಹ ಇದರಲ್ಲಿ ಸೇರಿದ್ದರು. ಜಗತ್ತಿನ ನಾನಾ ಭಾಗಗಳಲ್ಲಿ ಟಿವಿ ನೇರ ಪ್ರಸಾರದ ಮೂಲಕ ಅಂತಿಮ ಸಂಸ್ಕಾರವನ್ನು ತೋರಿಸಲಾಯಿತು. ಆದರೆ ಪ್ರಸಾರ ಸಮಯದಲ್ಲಿನ ವ್ಯತ್ಯಾಸದಿಂದಾಗಿ ನೇಪಾಳದಲ್ಲಿ ಮಾತ್ರ ಜನರು ಈ ಮಹಾನ್ ಸಾಹಸಿಯ ಅಂತಿಮ ಯಾತ್ರೆಯನ್ನು ನೋಡಲು ಸಾಧ್ಯವಾಗಲಿಲ್ಲ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಶೆರ್ಪಾ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಪರ್ವತಾರೋಹಣದ ಸಂಕೇತವನ್ನು ಗೌರವ ಸೂಚಕವಾಗಿ ತೋರಿಸಲಾಯಿತು. ಭಾರತ, ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಐರ್ಲೆಂಡ್, ಅಮೆರಿಕ ಸಹಿತ ಹಲವು ದೇಶಗಳ ಉನ್ನತ ಮಟ್ಟದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. 2008ರ ಜನವರಿ 11ರಂದು ತಮ್ಮ 88ರ ಹರೆಯದಲ್ಲಿ ಕೊನೆಯುಸಿರೆಳೆದ ಹಿಲೆರಿ ಅವರಿಗೆ ನ್ಯೂಜಿಲೆಂಡ್ ಅತ್ಯಂತ ಉನ್ನತ ನಾಗರಿಕ ಸ್ಥಾನಮಾನ ನೀಡಿತ್ತು. ಆ ರಾಷ್ಟ್ರದ ಕರೆನ್ಸಿಯಲ್ಲಿ ಜೀವಿತ ವ್ಯಕ್ತಿಯೊಬ್ಬರ ಚಿತ್ರ ಅಚ್ಚು ಹಾಕಿಸಿದ ಏಕೈಕ ವ್ಯಕ್ತಿ ಎಂಬ ಗೌರವಕ್ಕೆ ಹಿಲೆರಿ ಪಾತ್ರರಾಗಿದ್ದರು.

2008: ಹಳೆಯ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯ ಮಾಡುವುದಿಲ್ಲ ಎಂದು ಕರ್ನಾಟಕ ಸರ್ಕಾರ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಾಣಿಜ್ಯ ಉದ್ದೇಶದ ವಾಹನಗಳ ಸಂಘಟನೆಗಳು ಎರಡು ದಿನಗಳಿಂದ ರಾಜ್ಯದಾದ್ಯಂತ ನಡೆಸಿದ ಮುಷ್ಕರ ಈದಿನ ರಾತ್ರಿ ಅಂತ್ಯಗೊಂಡಿತು. ಲಾರಿ, ಖಾಸಗಿ, ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬುಗಳುಗಳು ರಾತ್ರಿಯಿಂದಲೇ ಸಂಚಾರ ಆರಂಭಿಸಿದವು.

2008: ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಮುಂದಿನ ಚುನಾವಣೆಯನ್ನು ಬಿಜೆಪಿಯ ಧುರೀಣ ಎಲ್. ಕೆ. ಅಡ್ವಾಣಿ ಅವರ ನಾಯಕತ್ವದಲ್ಲಿ ಎದುರಿಸಲು ಎನ್ ಡಿ ಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿರಂಗ) ನಿರ್ಧರಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಎನ್ ಡಿ ಎ ಯ ಅಧ್ಯಕ್ಷರಾಗಿ ಮುಂದುವರಿಯುವರು. ಅಡ್ವಾಣಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಎನ್ ಡಿ ಎ ಸಂಚಾಲಕ ಜಾರ್ಜ್ ಫರ್ನಾಂಡಿಸ್ ಮೊದಲು ಗೊತ್ತುವಳಿ ಮಂಡಿಸಿದರು. ಎನ್ ಡಿ ಎ ಯ ಅಂಗಪಕ್ಷಗಳು ಈ ಗೊತ್ತುವಳಿಯನ್ನು ಒಕ್ಕೊರಲಿನಿಂದ ಅನುಮೋದಿಸಿದವು.

2008: ಮುಂಬೈ ಷೇರುಪೇಟೆ ವಹಿವಾಟು ಕುಸಿತವು ಈದಿನವೂ ಮುಂದುವರಿದು ತೀವ್ರ ಸ್ವರೂಪದ ಆತಂಕ ಸೃಷ್ಟಿಸಿತು. ಸಂವೇದಿ ಸೂಚ್ಯಂಕವು ದಿನವೊಂದರ ಅತಿ ಗರಿಷ್ಠ ಮಟ್ಟವಾದ 2,274 ಅಂಶಗಳಿಗೆ ಕುಸಿಯಿತು. ಷೇರು ವಹಿವಾಟುದಾರರ ಪಾಲಿಗೆ ಇನ್ನೊಂದು `ಕರಾಳ ಮಂಗಳವಾರ'ವು ಮಾರುಕಟ್ಟೆಯ ಇತಿಹಾಸದಲ್ಲಿ ದಾಖಲಾಯಿತು. ಸೂಚ್ಯಂಕವು ಹಿಂದಿನ ದಿನವಷ್ಟೇ ದಿನದ ಅತಿ ಹೆಚ್ಚು ದಾಖಲೆ (2,050 ಅಂಶಗಳಷ್ಟು) ಕುಸಿತ ಕಂಡಿತ್ತು.

2008: ಮುಂಬೈಯ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕುಸಿದವು. ಬೆಳ್ಳಿ ಪ್ರತಿ ಕೆಜಿಗೆ ರೂ 320 ರಷ್ಟು ಮತ್ತು ಚಿನ್ನ ಪ್ರತಿ 10 ಗ್ರಾಂಗಳಿಗೆ ರೂ 135 ರಷ್ಟು ಇಳಿಕೆ ದಾಖಲಿಸಿದವು. ಖರೀದಿ ಬೆಂಬಲ ಅಭಾವದಿಂದಾಗಿ ಈ ಬೆಲೆ ಇಳಿಕೆ ದಾಖಲಾಯಿತು.
2008: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು 1945ರ ಆಗಸ್ಟ್ 18ರಂದು ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತರಾಗಿದ್ದಾರೆ ಎಂದು ನೇತಾಜಿ ಸಾವಿನ ಕುರಿತಂತೆ ಸರ್ಕಾರ ಸಂಗ್ರಹಿಸಿದ ಸಮಗ್ರ ದಾಖಲೆಗಳ ಅನುಸಾರ ಕೇಂದ್ರ ಗೃಹ ಸಚಿವಾಲಯ ನಿರ್ಧಾರಕ್ಕೆ ಬಂದಿರುವುಗಾಗಿ ಮಿಷನ್ ನೇತಾಜಿ ಸಂಸ್ಥೆಗೆ ನೀಡಲಾದ ಮಾಹಿತಿಯಲ್ಲಿ ಕೇಂದ್ರ ಸರ್ಕಾರ ತಿಳಿಸಿತು. ದೆಹಲಿ ಮೂಲದ ಮಿಷನ್ ನೇತಾಜಿ ಸಂಘಟನೆಯು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯಕ್ಕೆ ನೇತಾಜಿ ಮರಣದ ಕುರಿತಂತೆ ವಿವರ ಕೇಳಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಉತ್ತರಿಸಿದ ಸಚಿವಾಲಯ ಈ ವಿಚಾರವನ್ನು ಬಹಿರಂಗಪಡಿಸಿತು. ನೇತಾಜಿಯವರ ಸಮೀಪವರ್ತಿ ಹಾಗೂ ಅವರೊಟ್ಟಿಗೆ ಅಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಹಬೀಬ್ ಉರ್ ರಹಮಾನ್ ಅವರ ಹೇಳಿಕೆ ಅನುಸಾರ, ಅಂದು ತೈವಾನಿ ತೈಪೆಯಿಂದ ನೇತಾಜಿಯವರನ್ನು ಹೊತ್ತು ಮೇಲಕ್ಕೆ ಹಾರಿದ ಕೆ-21 ಯುದ್ಧ ವಿಮಾನ ಎತ್ತರಕ್ಕೆ ಹಾರಲೇ ಇಲ್ಲ. ಅದು ಕೆಲವೇ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತು. ವಿಮಾನ ಟೇಕ್ ಆಫ್ ತೆಗೆದುಕೊಂಡ ನಂತರ ಅದು ತನ್ನ ನಿಯಂತ್ರಣ ಕಳೆದುಕೊಂಡಿತು ಮತ್ತು ಜ್ವಾಲೆಗಳನ್ನು ಹೊರಸೂಸಲು ಆರಂಭಿಸಿತು ಎಂದು ರಹಮಾನ್ ನಂತರದಲ್ಲಿ ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ. ನೇತಾಜಿ ಕುಳಿತಿದ್ದ ಸೀಟಿನ ಪಕ್ಕದಲ್ಲೇ ಪೆಟ್ರೋಲ್ ಟ್ಯಾಂಕ್ ಇತ್ತು. ದುರಂತದಲ್ಲಿ ಅದು ಸ್ಫೋಟಗೊಂಡಿತು. ಅದರಿಂದ ಹೊರಬಂದ ಬೆಂಕಿಯ ಕಿಡಿಗಳು ಬೋಸ್ ಅವರ ಬಟ್ಟೆಗೆ ತಾಗಿ ಅದು ಹೊತ್ತಿಕೊಂಡಿತು ಎಂದು ಗುಪ್ತದಳ ಪೊಲೀಸರು ನೀಡಿರುವ ಹೇಳಿಕೆಯನ್ನೂ ನೇತಾಜಿ ಸಾವಿನ ಕುರಿತ ಪ್ರಮುಖ ದಾಖಲೆಯನ್ನಾಗಿ ಗೃಹ ಖಾತೆ ಪರಿಗಣಿಸಿದೆ. ಈ ದಾಖಲೆಗಳ ಅನುಸಾರ ನೇತಾಜಿಯವರ ಸಾವು ವಿಮಾನ ಅಪಘಾತದಲ್ಲೇ ಸಂಭವಿಸಿದೆ ಎಂದು ಈಗ ಸರ್ಕಾರ ದಾಖಲಿಸಿದೆ. ನೇತಾಜಿ ಅವರ ಸಾವಿನ ಕುರಿತಂತೆ ಒಟ್ಟು 91 ಪ್ರಮುಖ ದಾಖಲೆಗಳನ್ನು ಪರಿಗಣಿಸಲಾಗಿದೆ ಎಂದು ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿತು.

2008: ಮೋಸದಾಟ ಆಡಲು ತಮಗೆ ಆಮಿಷ ಒಡ್ಡಲಾಗಿತ್ತೆಂದು ಮಹೇಶ್ ಭೂಪತಿ ನೀಡಿದ ಹೇಳಿಕೆಯ ಸತ್ಯಾಸತ್ಯತೆ ಅರಿಯಲು ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ನಿರ್ಧರಿಸಿತು. ತೊಂಬತ್ತರ ದಶಕದ ಮಧ್ಯ ಭಾಗದಲ್ಲಿ ತಮಗೆ ಪಂದ್ಯವನ್ನು ಸೋಲುವಂತೆ ದೂರವಾಣಿಯ ಮೂಲಕ ಕೇಳಿಕೊಳ್ಳಲಾಗಿತ್ತು ಎಂದು ಮಹೇಶ್ ಸಂದರ್ಶನವೊಂದೊರಲ್ಲಿ ಹೇಳಿದ್ದರು.

2008: ಜಗತ್ತಿನೆಲ್ಲೆಡೆ ಸಂಸ್ಕೃತಿ ತಿಳಿವಳಿಕೆಯನ್ನು ಸಮರ್ಥವಾಗಿ ಬೆಂಬಿಸುತ್ತಿರುವುದಕ್ಕಾಗಿ ಅಮೆರಿಕದ ನಾಗರಿಕ ರಾಜತಾಂತ್ರಿಕ ಕೇಂದ್ರವು ಪ್ರಕಟಿಸಿದ `ಸಿಟಿಜನ್ ಡಿಪ್ಲೊಮೆಸಿ' ಪ್ರಶಸ್ತಿಗೆ ಭಾರತೀಯ ಮೂಲದ ಅಂಜಲಿ ಭಾಟಿಯಾ (19) ಅವರೂ ಪಾತ್ರರಾದರು. ಒಟ್ಟು ಆರು ಮಂದಿ ಈ ಪ್ರಶಸ್ತಿ ಪಡೆದರು. ನ್ಯೂಜೆರ್ಸಿಯ ಕಿನ್ನೆಲೊನಿನಲ್ಲಿ ಇರುವ ಅಂಜಲಿ ತನ್ನ 16ನೇ ವಯಸ್ಸಿಗೇ `ಜಗತ್ತಿನ ಆವಿಷ್ಕಾರ' ಎಂಬ ಸಂಘಟನೆ ಸ್ಥಾಪಿಸಿದ್ದರು. ಅಮೆರಿಕ ಮತ್ತು ರುವಾಂಡಾ ನಡುವಿನ ಸಂಸ್ಕೃತಿ ಸಂಬಂಧ ಸುಧಾರಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿತ್ತು.

2008: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಕೊಡುವ ಪ್ರಸಕ್ತ ಸಾಲಿನ `ಸಂದೇಶ' ಪ್ರಶಸ್ತಿಗೆ ಸುಳ್ಯದ ಸುಬ್ರಾಯ ಚೊಕ್ಕಾಡಿ (ಕನ್ನಡ ಸಾಹಿತ್ಯ), ಮಂಗಳೂರಿನ ಡೊಲ್ಫಿ ಲೋಬೊ ಕಾಸ್ಸಿಯಾ (ಕೊಂಕಣಿ ಸಾಹಿತ್ಯ), ಅಮ್ಮೆಂಬಳದ ಪ್ರೊ. ಎ.ವಿ.ನಾವಡ (ತುಳು ಸಾಹಿತ್ಯ), ಬೆಂಗಳೂರಿನ ಅರುಂಧತಿ ನಾಗ್ (ಕಲಾ), `ಪ್ರಜಾವಾಣಿ'ಯ ಲಕ್ಷ್ಮಣ ಕೊಡಸೆ (ಪತ್ರಿಕೋದ್ಯಮ), ಚಿತ್ರದುರ್ಗದ ಶಿವಸಂಚಾರ ನಾಟಕ ತಂಡ (ಮಾಧ್ಯಮ ಶಿಕ್ಷಣ), ಮೂಲ್ಕಿಯ ಫ್ರಾನ್ಸಿಸ್ ಡಿ'ಕುನ್ಹಾ (ಶಿಕ್ಷಣ) ಮತ್ತು ವಿಶೇಷ ಪ್ರಶಸ್ತಿಗೆ ಬಿಜೈಯ ಹ್ಯಾರಿ ಡಿ'ಸೋಜ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರಶಸ್ತಿ ಆಯ್ಕೆ ಮಂಡಳಿ ಅಧ್ಯಕ್ಷ, ಸಾಹಿತಿ ನಾ. ಡಿಸೋಜ ಮಂಗಳೂರಿನಲ್ಲಿ ಪ್ರಕಟಿಸಿದರು.

2007: ಗಗನಕ್ಕೇರಿಸಿದ್ದ `ಎಸ್ ಆರ್ ಇ-1 ಮರುಬಳಕೆ ಉಪಗ್ರಹ'ವನ್ನು ಸುರಕ್ಷಿತವಾಗಿ ಭೂಮಿಗೆ ವಾಪಸ್ಸು ಕರೆಸಿಕೊಳ್ಳುವಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ವಿಜ್ಞಾನಿಗಳು ಯಶಸ್ವಿಯಾದರು. ಇದರೊಂದಿಗೆ ಭಾರತ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇನ್ನೊಂದು ಗರಿ ಮೂಡಿಸಿಕೊಂಡದ್ದಲ್ಲದೆ ಈ ಸಾಧನೆ ಗೈದ ಜಗತ್ತಿನ ನಾಲ್ಕನೇ ರಾಷ್ಟ್ರ ಎನಿಸಿಕೊಂಡಿತು. ಇಂಥ ಮರುಬಳಕೆ ಉಪಗ್ರಹವನ್ನು ಕಕ್ಷೆಗೆ ಅಮೆರಿಕ, ಚೀನಾ ಹಾಗೂ ರಷ್ಯಾದೇಶಗಳು ಮಾತ್ರ ಈ ಹಿಂದೆ ಗಗನಕ್ಕೆ ಏರಿಸಿ ವಾಪಸ್ ಕರೆಸಿಕೊಂಡಿದ್ದವು.
550 ಕೆಜಿ ತೂಕವಿರುವ ಮರುಬಳಕೆ ಉಪಗ್ರಹ, ಬಾಹ್ಯಾಕಾಶದಲ್ಲಿ ಹನ್ನೆರಡು ದಿನಗಳ ಕಾಲ ಹಾರಾಟ ನಡೆಸಿ, ಈದಿನ ಬೆಳಗ್ಗೆ 9.46ಕ್ಕೆ ಬಂಗಾಳ ಕೊಲ್ಲಿಗೆ ಬಂದು ಇಳಿಯಿತು. ಪೂರ್ವ ನಿರ್ಧರಿತ ಯೋಜನೆಯಂತೆ ಎಸ್ ಆರ್ ಇ ಉಪಗ್ರಹವನ್ನು ಭೂಮಿಗೆ ಹಿಂದಕ್ಕೆ ಕರೆಸಿಕೊಳ್ಳುವ ಕಾರ್ಯವನ್ನು ಭಾರತೀಯ ನೌಕಾಪಡೆಯ ಕರಾವಳಿ ರಕ್ಷಕ ಪಡೆಗೆ ವಹಿಸಲಾಗಿತ್ತು. ಈ ದಳದವರು ಉಪಗ್ರಹವನ್ನು ಇಳಿಸಿಕೊಳ್ಳಲು ಶ್ರೀಹರಿಕೋಟಾದ ಪಶ್ಚಿಮ ಭಾಗದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಉಪಗ್ರಹವು 140 ಕಿಮೀ ವೇಗದಲ್ಲಿ ಬಂದು ಬಂಗಾಳ ಕೊಲ್ಲಿಗೆ ಅಪ್ಪಳಿಸಿತು. ಇಳಿಯುವ ಮುನ್ನ ಉಪಗ್ರಹದ ವೇಗ ತಗ್ಗಿಸಲು ನಾಲ್ಕು ಚಿಕ್ಕ ರಾಕೆಟ್, ಪ್ಯಾರಾಚೂಟ್ಗಳನ್ನು ಜೋಡಿಸಲಾಗಿತ್ತು. ಇವೆಲ್ಲದರ ನೆರವಿನಿಂದ ಉಪಗ್ರಹ ತನ್ನ ವೇಗವನ್ನು ತಗ್ಗಿಸಿಕೊಂಡು ಭೂ ಪರಿಸರ ಪ್ರವೇಶಿಸುವಲ್ಲಿ ಯಶಸ್ವಿಯಾಯಿತು. ಬಂಗಾಳ ಉಪಸಾಗರದಲ್ಲಿ ತೇಲುತ್ತಿರುವ ಉಪಗ್ರಹವನ್ನು ರಾತ್ರಿ `ಸಾರಂಗ' ಹಡಗಿನಲ್ಲಿ ಶ್ರೀಹರಿಕೋಟಾ ಮುಖಾಂತರ ಎನ್ನೋರ್ ಬಂದರಿಗೆ ತರಲಾಯಿತು. ಜನವರಿ 10ರಂದು ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನದ (ಪಿಎಸ್ಎಲ್ವಿ-ಸಿ7) ಮೂಲಕ ಭಾರತೀಯ ದೂರ ಸಂವೇದಿ ಉಪಗ್ರಹ `ಕಾರ್ಟೊಸ್ಯಾಟ್-2' ಜೊತೆಗೆ ಈ 550 ಕೆ.ಜಿ. ತೂಕದ ಮರು ಬಳಸಬಹುದಾದ ಉಪಗ್ರಹವನ್ನು ಶ್ರೀ ಹರಿಕೋಟ ಬಾಹ್ಯಾಕಾಶ ನಿಲ್ದಾಣದಿಂದ ಕಕ್ಷೆಗೆ ಹಾರಿಬಿಡಲಾಗಿತ್ತು. ಭಾರತದ ಈ ಪ್ರಯತ್ನವನ್ನು `ಎರಡನೆಯ ಸ್ಪೇಸ್ ರೇಸ್ ಆರಂಭ' ಎಂದು ಪಾಶ್ಚಾತ್ಯ ವಿಶ್ಲೇಷಕರು ಬಣ್ಣಿಸಿದ್ದರು. ಅವರ ವಿಶ್ಲೇಷಣೆಯಂತೆ ನಾಲ್ಕೂ ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದವು.

2007: ಎಡಪಕ್ಷಗಳ ಆಳ್ವಿಕೆಯ ರಾಜ್ಯಗಳ ವಿರೋಧದ ಹೊರತಾಗಿಯೂ ಎನ್ ಡಿ ಎ ಆಡಳಿತ ಇರುವ ರಾಜ್ಯಗಳು ಸೇರಿದಂತೆ 19 ಇತರ ರಾಜ್ಯಗಳು ನೀಡಿದ ಬೆಂಬಲವನ್ನು ಅನುಸರಿಸಿ ಹೊಸ ಪಿಂಚಣಿ ಯೋಜನೆ ನಿಧಿಯನ್ನು ಷೇರು ಮಾರುಕಟೆಯಲ್ಲಿ ತೊಡಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಪಿಂಚಣಿ ಸುಧಾರಣೆಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕೇಂದ್ರದ ಪ್ರಸ್ತಾವನೆಗೆ 19 ರಾಜ್ಯಗಳು ಬೆಂಬಲ ವ್ಯಕ್ತಪಡಿಸಿದವು. `ಹೊಸ ಪದ್ಧತಿಯ ಪ್ರಕಾರ ಪಿಂಚಣಿಯ ಶೇ 5ರಷ್ಟನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಲು ಅಥವಾ ಪೂರ್ತಿ ನಿಧಿಯನ್ನು ಸರ್ಕಾರಿ ಬಾಂಡುಗಳಲ್ಲಿ ತೊಡಗಿಸಲು ಅವಕಾಶ ಇರುತ್ತದೆ' ಎಂದು ಸಭೆಯ ಬಳಿಕ ಹಣಕಾಸು ಸಚಿವ ಪಿ. ಚಿದಂಬರಂ ತಿಳಿಸಿದರು.

2007: ಅಂತಾರಾಷ್ಟ್ರೀಯ ಖ್ಯಾತಿಯ ಗುಜರಾತಿನ ಗೀತ್ ಸೇಥಿ ಎಂಟು ವರ್ಷಗಳ ನಂತರ ಮತ್ತೊಮ್ಮೆ ಬಿಲಿಯರ್ಡಿನಲ್ಲಿ ರಾಷ್ಟ್ರೀಯ ಚಾಂಪಿಯನ್ ಆದರು. ಕರ್ನಾಟಕದ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಸಂಸ್ಥೆ ಆವರಣದಲ್ಲಿ ನಡೆದ ಫೈನಲ್ ಸುತ್ತಿನ ಮುಖಾಮುಖಿಯಲ್ಲಿ ಸೇಥಿ ಅವರು ಕರ್ನಾಟಕದ ಪಂಕಜ್ ಅಡ್ವಾಣಿ ಅವರನ್ನು ಸೋಲಿಸಿದರು.

2007: ಬಾಗ್ದಾದಿನ ಕೇಂದ್ರ ಭಾಗದಲ್ಲಿ ಶಿಯಾ ಮುಸ್ಲಿಮರು ಅಧಿಕವಿದ್ದ ವಾಣಿಜ್ಯ ಪ್ರದೇಶದಲ್ಲಿ ಎರಡು ಶಕ್ತಿಶಾಲಿ ಬಾಂಬುಗಳು ಸ್ಫೋಟಗೊಂಡು 72 ಮಂದಿ ಮೃತರಾಗಿ ಇತರ 113 ಮಂದಿ ಗಾಯಗೊಂಡರು.

2006: ಹಿರಿಯ ಹಿಂದಿ ಭಾಷಾ ವಿದ್ವಾಂಸ ಡಾ. ಮಂಡಗದ್ದೆ ಕಟ್ಟೆ ಭಾರತಿ ರಮಣಾರ್ಯ (86) ಅವರು ನಿಧನರಾದರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾಗಿದ್ದರು. ಹಿಂದಿಯ ತುಳಸಿ ರಾಮಾಯಣವನ್ನು ಮಕರಂದ ವ್ಯಾಖ್ಯೆ ಹೆಸರಿನಲ್ಲಿ ಕನ್ನಡಕ್ಕೆ ಅನುವಾದ ಮಾಡಿದ್ದರು. ಐದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು ಪೂರ್ಣಪ್ರಜ್ಞ ವಿದ್ಯಾಪೀಠದ ಸ್ಥಾಪಕ ಕಾರ್ಯದರ್ಶಿಯಾಗಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.

2006: ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ನಡೆಯುವ ಇತಿಹಾಸ ಪ್ರಸಿದ್ಧ ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಚಾಲನೆ ನೀಡಿದರು.

2006: ಟೊರಾಂಟೋದ ಬಾಟಾ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ, ಕ್ರಿ.ಶ. 1790ರಲ್ಲಿ ಹೈದರಾಬಾದಿನ ನಿಜಾಮ ಧರಿಸುತ್ತಿದ್ದ ಮುತ್ತು ರತ್ನ ಖಚಿತ ಪಾದರಕ್ಷೆಗಳ ಜೊತೆ ಕಳವಾಯಿತು. ಈ ಪಾದರಕ್ಷೆಗಳ ಮೌಲ್ಯ 1,40,000 ಅಮೆರಿಕನ್ ಡಾಲರುಗಳು. ವಸ್ತು ಸಂಗ್ರಹಾಲಯದಲ್ಲಿ ಕ್ರಿ.ಶ. 1500ರಷ್ಟು ಹಳೆಯ ಕಾಲದ 10,000 ಪಾದರಕ್ಷೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಸಂಜೆ ವಸ್ತುಸಂಗ್ರಹಾಲಯ ಮುಚ್ಚುವ ವೇಳೆಗೆ ಹೈದರಾಬಾದ್ ನಿಜಾಮನ ಪಾದರಕ್ಷೆಗಳು ಕಳುವಾದದ್ದು ಬೆಳಕಿಗೆ ಬಂತು.

2001: `ಐ ಎನ್ ಎಸ್ ಮುಂಬೈ' ಮತ್ತು `ಐ ಎನ್ ಎಸ್ ಕಿರ್ಕ್' ಸಮರನೌಕೆಗಳು ಏಕಕಾಲಕ್ಕೆ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡವು.

1995: ಜಾನ್ ಎಫ್. ಕೆನಡಿ ಅವರ ತಾಯಿ ರೋಸ್ ಫಿಟ್ಜೆರಾಲ್ಡ್ ಕೆನಡಿ ಅವರು ಮೆಸ್ಸಾಚ್ಯುಸೆಟ್ಸಿನ ಹಯಾನಿಸ್ ಬಂದರಿನಲ್ಲಿ ತಮ್ಮ 104ನೇ ವಯಸ್ಸಿನಲ್ಲಿ ಮೃತರಾದರು.

1909: ಈದಿನ ಜನಿಸಿದ ಉ-ಥಾಂಟ್ (1909-1974) ಅವರು ಮ್ಯಾನ್ಮಾರಿನ (ಆಗಿನ ಬರ್ಮಾ) ಅಧಿಕಾರಿಯಾಗಿ ನಂತರ, ವಿಶ್ವಸಂಸ್ಥೆಯ ಮೂರನೇ ಸೆಕ್ರೆಟರಿ ಜನರಲ್ ಆದರು. 1962ರಿಂದ 1971ರವರೆಗೆ ಅವರು ವಿಶ್ವಸಂಸ್ಥೆಯ ಈ ಹುದ್ದೆಯಲ್ಲಿ ಇದ್ದರು.

1905: ರಷ್ಯಾದ ಸೇಂಟ್ ಪೀಟರ್ಸ್ ಬರ್ಗಿನಲ್ಲಿ ಶಾಂತಿಯುತ ಪ್ರದರ್ಶನಕಾರರ ಹತ್ಯಾಕಾಂಡ ನಡೆಯಿತು. `ರಕ್ತಪಾತದ ರವಿವಾರ' (ಬ್ಲಡಿ ಸಂಡೆ) ಎಂದೇ ಹೆಸರಾದ ಈ ಘಟನೆ 1905ರ ರಷ್ಯಾ ಕ್ರಾಂತಿಯ ಹಿಂಸಾತ್ಮಕ ಸ್ವರೂಪಕ್ಕೆ ನಾಂದಿ ಹಾಡಿತು. ಫಾದರ್ ಗ್ಯಾಪನ್ ಎಂಬಾತನ ನೇತೃತ್ವದಲ್ಲಿ ಕಾರ್ಮಿಕರ ಗುಂಪೊಂದು ಗುಂಡು ಹಾರಿಸಿ 100ಕ್ಕೂ ಹೆಚ್ಚು ಜನರನ್ನು ಕೊಂದು ಹಲವರನ್ನು ಗಾಯಗೊಳಿಸಿತು. ಸರಣಿ ಮುಷ್ಕರಗಳು ಹಾಗೂ ರೈತ ಬಂಡಾಯಗಳು ತ್ಸಾರ್ ಆಡಳಿತಕ್ಕೆ ಗಂಭೀರ ಬೆದರಿಕೆ ಒಡ್ಡಿದವು. ಈ ಘಟನೆ 1905ರ ಕ್ರಾಂತಿ ಎಂದೇ ಹೆಸರು ಪಡೆಯಿತು.

1896: ಈದಿನ ಹುಟ್ಟಿದ ಸೂರ್ಯಕಾಂತ ತ್ರಿಪಾಠಿ (1896-1961) ಅವರು ಹಿಂದಿ ಕವಿ, ಕಾದಂಬರಿಕಾರ, ಪ್ರಬಂಧಕಾರರಾಗಿ `ನಿರಾಲಾ' ಹೆಸರಿನಲ್ಲಿ ಖ್ಯಾತರಾದರು.

1901: ಅರವತ್ತನಾಲ್ಕು ವರ್ಷಗಳ ಸುದೀರ್ಘ ಆಳ್ವಿಕೆಯ ಬಳಿಕ ರಾಣಿ ವಿಕ್ಟೋರಿಯಾ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

1760: ವಾಂಡಿವಾಶ್ ಕದನದಲ್ಲಿ ಬ್ರಿಟಿಷರು ಫ್ರೆಂಚರನ್ನು ಸೋಲಿಸಿದರು. ಇದರಿಂದಾಗಿ ಬ್ರಿಟಿಷರು ದಕ್ಷಿಣ ಭಾರತದ ವಿವಾದ ರಹಿತ ಆಡಳಿತಗಾರರೆನಿಸಿಕೊಂಡರು.

No comments:

Post a Comment