ನಾನು ಮೆಚ್ಚಿದ ವಾಟ್ಸಪ್

Friday, January 4, 2019

ಅಯೋಧ್ಯಾ: ಜನವರಿ ೧೦ ರೊಳಗೆ ಹೊಸ ಸುಪ್ರೀಂ ಪೀಠ ರಚನೆ


ಅಯೋಧ್ಯಾ: ಜನವರಿ ೧೦ ರೊಳಗೆ ಹೊಸ ಸುಪ್ರೀಂ ಪೀಠ ರಚನೆ

ನವದೆಹಲಿ: 2019 ಜನವರಿ ೧೦ ರೊಳಗೆ ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿಮಸೀದಿ ಭೂವಿವಾದದ ವಿಚಾರಣೆಗಾಗಿ ಹೊಸ ಪೀಠವನ್ನು ರಚಿಸಲಾಗುವುದು ಎಂದು  ಸುಪ್ರೀಂ ಕೋರ್ಟ್ ೨೦೧೯ ಜನವರಿ ಶುಕ್ರವಾರ ತಿಳಿಸಿತು.
ನ್ಯಾಯಮೂರ್ತಿ
ರಂಜನ್ ಗೊಗೋಯಿ ಅವರು, ವಿಚಾರಣೆಗೆ ಸಂಬಂಧಿಸಿದಂತೆ ಹೊಸ ಪೀಠವು ಸೂಕ್ತವಾದ ಆದೇಶಗಳನ್ನು ನೀಡುವುದು ಎಂದು ಹೇಳಿದರು.

ವಿಚಾರಣೆಯನ್ನು ಮುಂದೂಡಿದ  ಸುಪ್ರೀಂಕೋಟ್, ‘ಅಯೋಧ್ಯಾ ಪ್ರಕರಣವನ್ನು ಆದ್ಯತೆಯ ನೆಲೆಯಲ್ಲಿ ಏಕೆ ತೆಗೆದುಕೊಳ್ಳಲಾಗದು ಎಂಬುದಕ್ಕೆ ಕಾರಣ ಸಹಿತವಾದ ತಾರ್ಕಿಕ ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯನ್ನೂ ತಳ್ಳಿಹಾಕಿತು.

ಅಯೋಧ್ಯೆಯಲ್ಲಿನ .೭೭ ಎಕರೆ ವಿವಾದಿತ ಭೂಮಿಯನ್ನು ಮೂರು ಕಕ್ಷಿದಾರರು, ಅಂದರೆ ರಾಮಲಲ್ಲಾ, ನಿರ್ಮೋಹಿ ಅಖಾರಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ವಿಂಗಡಿಸುವಂತೆ ನೀಡಲಾಗಿದ್ದ  ೨೦೧೦ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಹನ್ನೆರಡು ಅರ್ಜಿಗಳ  ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಪ್ರಕರಣವು ೨೦೧೦ ರಿಂದ ಸುಪ್ರೀಂ ಕೋರ್ಟಿನಲ್ಲಿ ಬಾಕಿ ಉಳಿದಿದೆ. ಸುಪ್ರೀಂ ಕೋರ್ಟಿನ  ವಿಚಾರಣೆಯ ವೇಳೆಯಲ್ಲಿ ಇತರ ವಿಷಯಗಳು ಕೂಡಾ ಇತ್ಯರ್ಥದ ಸಲುವಾಗಿ ಪೀಠದ ಮುಂದೆ ಬಂದಿದ್ದವು.
ಮಸೀದಿಯು  ಇಸ್ಲಾಮಿನ  ಒಂದು ಅವಿಭಾಜ್ಯ ಅಂಗವಾಗಿದೆಯೆ ಎಂಬ ಪ್ರಶ್ನೆ ಕೂಡಾ ಇವುಗಳಲ್ಲಿ ಒಂದಾಗಿತ್ತುಕಳೆದ ವರ್ಷ 2018 ಸೆಪ್ಟೆಂಬರ್ ೨೭ ರಂದು ಸುಪ್ರೀಂ ಕೋರ್ಟ್ ವಿಷಯದ ಬಗ್ಗೆ ೧೯೯೪ ರಲ್ಲಿ ನೀಡಿದ್ದ  ತೀರ್ಪಿನ ಮರುಪರಿಶೀಲನೆಗೆ ನಿರಾಕರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿತ್ತು.
ಬಳಿಕ  ಅಯೋಧ್ಯಾ ಭೂವಿವಾದದ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಿದ  ಸುಪ್ರೀಂ ಕೋರ್ಟ್ ಕಳೆದ ಅಕ್ಟೋಬರ್ ತಿಂಗಳಲ್ಲಿ 2019 ಜನವರಿ  ಮೊದಲ ವಾರದಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಕಟಿಸಿತ್ತು.

ಉತ್ತರ ಪ್ರದೇಶ ಸರ್ಕಾರ ಮತ್ತು ರಾಮಲಲ್ಲಾನನ್ನು ಪ್ರತಿನಿಧಿಸುವ ವಕೀಲರು ದೀಪಾವಳಿ ರಜೆಯ ಬಳಿಕ ವಿಚಾರಣೆ ಆರಂಭಿಸುವಂತೆ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದಾಗ ಆರೆಸ್ಸೆಸ್, ವಿಎಚ್ ಪಿ ಮತ್ತು ಬಿಜೆಪಿ ಕೂಡಾ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದವು.

ನ್ಯಾಯಾಲಯದ
ನಿರ್ಧಾರವು ಅಯೋಧ್ಯಾ ವಿವಾದದ ಇತ್ಯರ್ಥವನ್ನು 2019 ಏಪ್ರಿಲ್- ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗಳ ಮುಗಿಯುವವರೆಗೆ ವಿಳಂಬಿಸಬೇಕು ಎಂಬ ಆಗ್ರಹದ ಪರವಾದ ಒಲವು ನ್ಯಾಯಾಲಯದ್ದಾಗಿತ್ತು. ಹಿನ್ನೆಲೆಯಲ್ಲಿ ವಿವಾದಿತ ನಿವೇಶನದಲ್ಲಿ ಬೇಗನೇ ರಾಮಮಂದಿರಕ್ಕೆ ಅನುವು ಮಾಡಿಕೊಡಲು ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂಬ ಬೇಡಿಕೆಗಳು ತೀವ್ರಗೊಂಡವು.


ಇತ್ತೀಚೆಗೆ ಅಯೋಧ್ಯಾ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸುಗ್ರೀವಾಜ್ಞೆ ಕುರಿತು ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೇ ನಿರ್ಧರಿಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದರು.


ಅಯೋಧ್ಯೆಯ ಭೂವಿವಾದವು ೧೯೪೦ ರಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ.
ಫೈಜಾಬಾದ್ ಜಿಲ್ಲೆಯ ನ್ಯಾಯಾಲಯವು ೧೯೪೯ ರಲ್ಲಿ ಅಯೋಧ್ಯೆಯಲ್ಲಿನ ವಿವಾದಿತ ಭೂಮಿ ಮೇಲೆ ಮುಸ್ಲಿಮರು, ಹಿಂದೂಗಳು ಮತ್ತು ನಿರ್ಮೋಹಿ ಅಖಾರಾ ಒಡೆತನ ಹೊಂದಿದ್ದಾರೆ ಎಂದು ತೀರ್ಪು ನೀಡಿತ್ತು. ಅರವತ್ತೊಂದು ವರ್ಷಗಳ ನಂತರ, ಅಲಹಾಬಾದ್ ಹೈಕೋರ್ಟ್ ಕೂಡಾ ಇದೇ ಮಾದರಿಯ ತೀರ್ಪು ನೀಡಿತ್ತು.

No comments:

Post a Comment