Monday, January 14, 2019

ಇಂದಿನ ಇತಿಹಾಸ History Today ಜನವರಿ 14

ಇಂದಿನ ಇತಿಹಾಸ History Today ಜನವರಿ 14
2019: ನವದೆಹಲಿ: ೨೦೧೬ರ ಜೆಎನ್ಯು ರಾಷ್ಟ್ರದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ,೨೦೦ ಪುಟಗಳ ದೋಷಾರೋಪ ಪಟ್ಟಿಯನ್ನು (ಚಾರ್ಜ್ಶೀಟ್) ಪಾಟಿಯಾಲ ನ್ಯಾಯಾಯಕ್ಕೆ ಸಲ್ಲಿಸಿದರು. ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್, ಸೈಯದ್ ಉಮರ್ ಖಲೀದ್, ಅನಿರ್ಬನ್ ಭಟ್ಟಾಚಾರ್ ಮತ್ತು ಉಮರ್ ಗುಲ್ ಮತ್ತಿತರರನ್ನು ಆರೋಪಿಗಳಾಗಿ ಹೆಸರಿಸಲಾಯಿತು. ಮಾಜಿ ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್ಬನ್ ಭಟ್ಟಾಚಾರ್ ಅವರ ವಿರುದ್ಧ ಜೆಎನ್ಯು ಆವರಣದಲ್ಲಿ ೨೦೧೬ರ ಫೆಬ್ರುವರಿ ೯ರಂದು ಸಂಸತ್ತಿನ ಮೇಲಿನ ದಾಳಿಯ ಸಂಚುಕೋರ ಅಫ್ಜಲ್ ಗುರು ಸ್ಮರಣೆ ಕಾರ್ಯಕ್ರಮದಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪವನ್ನೂ ಹೊರಿಸಲಾಯಿತು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ಆನಂದ್ ಅವರು ದೋಷಾರೋಪ ಪಟ್ಟಿಯನ್ನು ಮರುದಿನ ನ್ಯಾಯಾಲಯವು ಪರಿಗಣಿಸುವುದು ಎಂದು ಪ್ರಕಟಿಸಿದರು. ಗುಂಪಿನಲ್ಲಿ ಇದ್ದುಕೊಂಡೇ ಭಾರತ ವಿರೋಧಿ ಘೋಷಣೆಗಳನ್ನು ಕೂಗುವಂತೆ ಕನ್ನಯ್ಯ ಪ್ರಚೋದನೆ ನೀಡುತ್ತಿದ್ದುದಾಗಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಆಪಾದಿಸಿದ್ದಾರೆ೨೦೧೬ರ ಫೆಬ್ರುವರಿ ೧೧ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೪ (ರಾಷ್ಟ್ರದ್ರೋಹ) ಮತ್ತು ೧೨೦ ಬಿ (ಕ್ರಿಮಿನಲ್ ಸಂಚು) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ವಸಂತ ಕುಂಜ್ (ಉತ್ತರ) ಪೊಲೀಸ್ ಠಾಣೆಯಲ್ಲಿ ಆಗ ಅಪರಿಚಿತ ವ್ಯಕ್ತಿಗಳ ವಿರುದ್ಧ ಬಿಜೆಪಿ ಸಂಸತ್ ಸದಸ್ಯ ಮಹೀಶ್ ಗಿರಿ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಉದ್ದೇಶಿತ ಕಾರ್ಯಕ್ರಮವನ್ನುರಾಷ್ಟ್ರ ವಿರೋಧಿ ಎಂಬುದಾಗಿ ಬಣ್ಣಿಸಿ ಎಬಿವಿಪಿ ನೀಡಿದ್ದ ದೂರನ್ನು ಅನುಸರಿಸಿ ವಿಶ್ವ ವಿದ್ಯಾಲಯದ ಆಡಳಿತವು ಅನುಮತಿ ರದ್ದು ಪಡಿಸಿದ್ದರ ಹೊರತಾಗಿಯೂ ಫೆಬ್ರುವರಿ ೯ರಂದು ಕಾರ್ಯಕ್ರಮ ನಡೆದಿತ್ತು. ಸಂಸತ್ ಮೇಲಿನ ದಾಳಿಯ ಸಂಚುಕೋರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಬಳಿಕ ಆತನ ಸ್ಮರಣೆ ಕಾರ್ಯಕ್ರಮವನ್ನು  ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮ ಸಂಘಟಿಸಿದ್ದಕ್ಕಾಗಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡದ್ದು ಮತ್ತು ಬಳಿಕ ಆರೋಪಿಗಳ ಬಂಧನವು ಭಾರೀ ವಿವಾದವನ್ನು ಹುಟ್ಟು ಹಾಕಿತ್ತು. ವಿರೋಧ ಪಕ್ಷಗಳು ಪೊಲೀಸರು ಆಡಳಿತಾರೂಢ ಬಿಜೆಪಿಯ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದವುದೆಹಲಿ ಪೊಲೀಸರು ಸೋಮವಾರ ದೊಡ್ಡ ಟ್ರಂಕ್ ಒಂದರಲ್ಲಿ ೧೨೦೦ ಪುಟಗಳ ದೋಷಾರೋಪ ಪಟ್ಟಿಯನ್ನು ತುಂಬಿಕೊಂಡು ಬಂದು ರಾಜಧಾನಿಯ ಪಾಟಿಯಾಲ ನ್ಯಾಯಾಲಯದಲ್ಲಿ ಸಲ್ಲಿಸಿದರು. ಸೂಕ್ತ ನ್ಯಾಯಾಲಯದ ಮುಂದೆ ದೋಷಾರೋಪ ಪಟ್ಟಿಯನ್ನು ಮರುದಿನ ಪರಿಗಣನೆ ಮಾಡಲಾಗುವುದು ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸುಮಿತ್ ಆನಂದ್ ಹೇಳಿದರು. ರಾಜಕೀಯ ಪ್ರೇರಿತ- ಕನ್ನಯ್ಯ ಕುಮಾರ್: ’ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂಬ ಸುದ್ದಿ ನಿಜವಾಗಿದ್ದಲ್ಲಿ ನಾನು ಪೊಲೀಸರು ಮತ್ತು ಮೋದಿ ಜಿ ಅವರಿಗೆ ಧನ್ಯವಾದ ಹೇಳಬಯಸುತ್ತೇನೆ. ಮೂರು ವರ್ಷಗಳ ಬಳಿಕ, ಚುನಾವಣೆಗಳಿಗೆ ಮುಂಚಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಸ್ಪಷ್ಟವಾಗಿ ಇದು ರಾಜಕೀಯ ಪ್ರೇರಿತ ಎಂಬುದನ್ನು ತೋರಿಸುತ್ತದೆ. ನಾನು ನನ್ನ ರಾಷ್ಟ್ರದ ನ್ಯಾಯಾಂಗವನ್ನು ನಂಬುತ್ತೇನೆ ಎಂದು ಕನ್ಹಯ್ಯ ಕುಮಾರ್ ಹೇಳಿದರು. ದೋಷಾರೋಪ ಪಟ್ಟಿಯಲ್ಲಿ ೧೦ ಮಂದಿ ಮುಖ್ಯ ಆರೋಪಿಗಳಾಗಿ ಕನ್ಹಯ್ಯ, ಖಲೀದ್, ಭಟ್ಟಾಚಾರ್ ಮತ್ತು ಕಾಶ್ಮೀರಿ ವಿದ್ಯಾರ್ಥಿಗಳು, ಅಕ್ವಿಬ್ ಹುಸೈನ್, ಮುಜೀಬ್ ಹುಸೈನ್, ಮುನೀಬ್ ಹುಸೈನ್, ಉಮರ್ ಗುಲ್, ರಯೀಯ ರಸೂಲ್, ಬಶೀರ್ ಬಟ್ ಮತ್ತು ಬಶರತ್ ಅವರನ್ನು ಹೆಸರಿಸಲಾಗಿತ್ತು. ಶೆಹ್ಲಾ ರಶೀದ್ ಮತ್ತು ಸಿಪಿಐ ನಾಯಕ ಡಿ ರಾಜಾ ಅವರ ಪುತ್ರಿ ಅಪರಾಜಿತ ರಾಜಾ ಅವರು ಪ್ರಕರಣದಲ್ಲಿ ಹೆಸರಿಸಲಾಗಿರುವ ಇತರ ೩೬ ಮಂದಿಯಲ್ಲಿ ಸೇರಿದ್ದಾರೆ. ಭಾರತೀಯ ದಂಡ ಸಂಹಿತಿಯ ಸೆಕ್ಷನ್ ೧೨೪ (ರಾಷ್ಟ್ರದ್ರೋಹ), ೩೨೩ (ಸ್ವಯಿಚ್ಛೆಯಿಂದ ನೋವುಂಟು ಮಾಡುವುದು), ೪೬೫ (ಫೋರ್ಜರಿ), ೪೭೧ (ನಕಲಿ/ ಫೋರ್ಜರಿ ದಾಖಲೆಯನ್ನು ನೈಜ ದಾಖಲೆಯಂತೆ ಬಳಸುವುದು), ೧೪೩ (ಅಕ್ರಮ ಸಭೆ), ೧೪೯ (ಸಾಮಾನ್ಯ ಉದ್ದೇಶಕ್ಕಾಗಿ ಅಕ್ರಮವಾಗಿ ಸಭೆ ಸೇರುವುದು), ೧೪೭ (ದಂಗೆ) ಮತ್ತು ೧೨೦ ಬಿ (ಕ್ರಿಮಿನಲ್ ಸಂಚು) ವಿಧಿಗಳ ಅಡಿಯಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆಕನ್ನಯ್ಯ ಕುಮಾರ್ ಮತ್ತು ಇತರರನ್ನು ಪ್ರಕರಣದಲ್ಲಿ ಬಂಧಿಸಿದ್ದು ಅವರಿಗೆ ರಾಷ್ಟ್ರವ್ಯಾಪಿ ಹೆಸರನ್ನೂ ತಂದು ಕೊಡುವುದರ ಜೊತೆಗೆ ದೇಶಾದ್ಯಂತ ಪ್ರತಿಭಟನೆಗಳಿಗೂ ಕಾರಣವಾಗಿತ್ತು.
.
2019: ನವದೆಹಲಿ: ಎಲ್ಲ ಸಾಮಾಜಿಕ ವೇದಿಕೆಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ನಿಗಾ ಇರಿಸಿ ಅವುಗಳಲ್ಲಿನ ಸಂವಹನದ ಮೇಲೆ ಕಣ್ಣಿಡಲು ಸರ್ಕಾರಿ ಸಂಸ್ಥೆಗಳಿಗೆ ಅವಕಾಶ ನೀಡಿದ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ಸರ್ಕಾರಿ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆರು ವಾರಗಳ ಬಳಿಕ ನಡೆಯಲಿರುವ ಮುಂದಿನ ಆಲಿಕೆಯಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಕೋರ್ಟ್ ಹೇಳಿತು. ಡಿಸೆಂಬರ್ ೨೦ರಂದು ಸರ್ಕಾರವು ೧೦ ಸರ್ಕಾರಿ ಸಂಸ್ಥೆಗಳಿಗೆ ಆಂತರಿಕ ಭದ್ರತೆಯ ನೆಲೆಯಲ್ಲಿ, ಯಾವುದೇ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಸಂಗ್ರಹಿಸಿ ಇಡಲಾಗಿರುವ ಯಾವುದೇ ಮಾಹಿತಿಯ ಮೇಲೆ ಕಣ್ಣಿಡುವ ಮತ್ತು ಪರಿಶೀಲಿಸುವ ಅಧಿಕಾರವನ್ನು ನೀಡಿ ಅಧಿಸೂಚನೆ ಹೊರಡಿಸಿತ್ತು. ಸರ್ಕಾರದ ಆದೇಶವು ರಾಜಕೀಯ ಬಿರುಗಾಳಿ ಎಬ್ಬಿಸಿತ್ತು ಮತ್ತು ರಾಜ್ಯ ಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ವಿರೋಧಪಕ್ಷಗಳು ಸದನದಲ್ಲಿ ಆದೇಶವುಅಪಾಯಕಾರಿ ಮತ್ತುದುರುಪಯೋಗವಾಗುವ ಸಾಧ್ಯತೆ ಇದೆ ಎಂಬುದಾಗಿ ಹೇಳಿ ತೀವ್ರ ಪ್ರತಿಭಟನೆ ವ್ಯಕ್ತ ಪಡಿಸಿದ್ದವು. ಗುಪ್ತಚರ ದಳ (ಐಬಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ತೆರಿಗೆ ಇಲಾಖೆಯಲ್ಲದೆ ಮಾದಕ ವಸ್ತು ನಿಯಂತ್ರಣ ದಳ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ), ಜಾರಿ ನಿರ್ದೇಶನಾಲಯ (ಇಡಿ), ಕಂದಾಯ ಜಾಗೃತಾ ನಿರ್ದೇಶನಾಲಯ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ), ಸಂಶೋಧನೆ ಮತ್ತು ವಿಶ್ಲೇಷಣಾ ದಳ (ಆರ್ ಡಬ್ಲ್ಯೂ- ರಾ) ಮತ್ತು ದೆಹಲಿ ಪೊಲೀಸ್ ಕಮೀಷನರ್ ಇಷ್ಟು ಸಂಸ್ಥೆಗಳಿಗೆ ಎಲೆಕ್ಟ್ರಾನಿಕ್ ಸಾಧನಗಳ ಮೇಲೆ ಕಣ್ಣಿಡುವ ಅಧಿಕಾರ ನೀಡಲಾಗಿತ್ತು. ಇದರ ಜೊತೆಗೆ ಸಶಸ್ತ್ರ ಪಡೆಗಳ ಸಿಗ್ನಲ್ ಇಂಟಲಿಜೆನ್ಸ್ ನಿದೇರ್ಶನಾಲಯಕ್ಕೆ ಕೂಡಾ ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ಅಸ್ಸಾಮಿನಲ್ಲಿ ತನ್ನ ಕಾರ್ಯಾಚರಣೆಗಳನ್ನು ನಡೆಸುವಲ್ಲಿ ಅಧಿಕಾರವನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿತ್ತು.  ಏನಿದ್ದರೂ ಆದೇಶದ ಬಗೆಗಿನ ಆಕ್ರೋಶಕ್ಕೆ ತಪ್ಪಭಿಪ್ರಾಯಗಳು ಕಾರಣ ಎಂದು ಅಧಿಕಾರಿಗಳು ಹೇಳಿದ್ದರು. ಸದರಿ  ಸಂಸ್ಥೆಗಳಿಗೆ ಈಗಾಗಲೇ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಅಡಿಯಲ್ಲಿ ಅಧಿಕಾರ ಇದೆ. ನಿಯಮಾವಳಿಯನ್ನು ಕಾಯ್ದೆಗೆ ಅನುಸಾರವಾಗಿ ರೂಪಿಸಲಾಗಿದೆ ಎಂದು ಮಾಜಿ ಮತ್ತು ಹಾಲಿ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದರು. ಆದರೂ, ಖಾಸಗಿತನದ ಹಕ್ಕಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಳೆದ ವರ್ಷ ಆಗಸ್ಟ್ ೨೩ರಂದು ನೀಡಿದ ತೀರ್ಪಿನಲ್ಲಿ ನೀಡಿದ ಆದೇಶವನ್ನು ನಿಯಮಾವಳಿ ಉಲ್ಲಂಘಿಸಬಹುದು ಎಂದು ತಜ್ಞರೊಬ್ಬರು ಹೇಳಿದ್ದರು.  ’ರಾಷ್ಟ್ರೀಯ ಸುರಕ್ಷತೆ, ರಕ್ಷಣೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಭಾರತದ ಸಮಗ್ರತೆಗೆ ಹಾನಿ ಉಂಟು ಮಾಡಲು ಯಾವುದೇ ಯತ್ನ ನಡೆಸಿದರೆ ಅದರ ಮೇಲೆ ಕಣ್ಗಾವಲು ಇಡುವ ಅಧಿಕಾರ ಕಾನೂನಿನ ಅಡಿಯಲ್ಲಿ ಅಧಿಕೃತ ಸಂಸ್ಥೆಗಳಿಗೆ ಇದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಸಭೆಯಲ್ಲಿ ಪ್ರತಿಪಾದಿಸಿದ್ದರು. ಆದರೆ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ದಾಳಿ ನಡೆಸಲು ಅವಕಾಶವನ್ನು ಬಳಸಿಕೊಂಡಿದ್ದರು.  ‘ಭಾರತವನ್ನು ಪೊಲೀಸ್ ರಾಜ್ಯವಾಗಿ ಪರಿವರ್ತಿಸುವುದರಿಂದ ನಿಮ್ಮ ಸಮಸ್ಯೆಗಳು ನಿವಾರಣೆಯಾಗುವುದಿಲ್ಲ ಮೋದಿ ಜಿ.. ನೀವು ನಿಜವಾಗಿಯೂ ಎಂತಹ ಅಭದ್ರ ಸರ್ವಾಧಿಕಾರಿ ಎಂಬುದನ್ನು ಒಂದು ಶತಕೋಟಿಗೂ ಹೆಚ್ಚಿನ ಭಾರತೀಯರಿಗೆ ಇದು ಸಾಬೀತು ಪಡಿಸಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

2019: ನವದೆಹಲಿ: ಚಿಲ್ಲರೆ ವಹಿವಾಟಿನಲ್ಲಿ ಹಣದುಬ್ಬರವು ೨೦೧೮ರ ಡಿಸೆಂಬರ್ ತಿಂಗಳಲ್ಲಿ, ಕಳೆದ ೧೮ ತಿಂಗಳುಗಳ ಅವಧಿಯಲ್ಲೇ ಅತ್ಯಂತ ಕೆಳಕ್ಕೆ ಅಂದರೆ ಶೇಕಡಾ .೧೯ಕ್ಕೆ ಇಳಿಯಿತು.  ಹಣ್ಣುಗಳು, ತರಕಾರಿ ಮತ್ತು ಇಂಧನ ಬೆಲೆ ಕಡಿತಗೊಂಡದ್ದು ಹಣದುಬ್ಬರ ಇಳಿಕೆಗೆ ಕಾರಣ ಎಂದು ಮಾರುಕಟ್ಟೆ ಮೂಲಗಳು ಹೇಳಿದವು. ಗ್ರಾಹಕ ದರ ಸೂಚ್ಯಂಕವನ್ನಾಧರಿಸಿ ಹಣದುಬ್ಬರವು ನವೆಂಬರ್ ತಿಂಗಳಲ್ಲಿ ಶೇಕಡಾ .೩೩ ಹಾಗೂ ೨೦೧೭ರ ಡಿಸೆಂಬರಿನಲ್ಲಿ ಶೇಕಡಾ .೨೧ರಷ್ಟು ಇತ್ತು. ಹಿಂದೆ, ೨೦೧೭ರ ಜೂನ್ ತಿಂಗಳಲ್ಲಿ ಅತ್ಯಂತ ಕಡಿಮೆ ಹಣದುಬ್ಬರ ಅಂದರೆ ಶೇಕಡಾ .೪೬ರಷ್ಟು ದಾಖಲಾಗಿತ್ತು. ಅಂಕಿಸಂಖ್ಯೆ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಆಹಾರ ಹಣದುಬ್ಬರವು ನವೆಂಬರ್ ತಿಂಗಳ ಶೇಕಡಾ (-).೬೧ಕ್ಕೆ ಹೋಲಿಸಿದರೆ ಶೇಕಡಾ .೫೧ರ ನಕಾರಾತ್ಮಕ ವಲಯದಲ್ಲಿಯೇ ಇತ್ತು.  ತರಕಾರಿಗಳು, ಹಣ್ಣುಗಳು, ಪ್ರೊಟೀನ್ ಸಮೃದ್ಧ ಮೊಟ್ಟೆಗಳ ದರ ನಿರಂತರವಾಗಿ ಇಳಿದಿವೆ. ಆದರೆ ಮಾಂಸ, ಮೀನು ಮತ್ತು ದ್ವಿದಳ ಧಾನ್ಯಗಳ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿತ್ತು.  ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯ ಪರಿಣಾಮವಾಗಿ ಇಂಧನ ಹಣದುಬ್ಬರವು ನವೆಂಬರ್ ತಿಂಗಳ ಶೇಕಡಾ .೩೯ರಿಂದ ಡಿಸೆಂಬರ್ ತಿಂಗಳಲ್ಲಿ ಶೇಕಡಾ .೫೪ಕ್ಕೆ ಇಳಿದಿತ್ತು. ಇನ್ನೊಂದು ಪತ್ರಿಕಾ ಪ್ರಕಟಣೆಯ ಪ್ರಕಾರ ಸಗಟು ದರಗಳು ಕೂಡಾ ೨೦೧೮ರ ಡಿಸೆಂಬರಿನಲ್ಲಿ ಎಂಟು ತಿಂಗಳುಗಳಲ್ಲೇ ಅತ್ಯಂತ ಕಡಿಮೆ ಅಂದರೆ ಶೇಕಡಾ .೮೦ಕ್ಕೆ ಇಳಿದಿದೆ. ೨೦೧೮ರ ನವೆಂಬರಿನಲ್ಲಿ ಸಗಟು ದರ ಆಧಾರಿತ ಹಣದುಬ್ಬರ ಶೇಕಡಾ .೬೪ರಷ್ಟು ಮತ್ತು ೨೦೧೭ರ ಡಿಸೆಂಬರಿನಲ್ಲಿ ಶೇಕಡಾ .೫೮ರಷ್ಟು ಇತ್ತು.

2019: ಮೀರತ್:  ಉತ್ತರ ಪ್ರದೇಶದ ಬುಲಂದ ಶಹರ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆಯಿತೆನ್ನಲಾದ ಗೋಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೂವರು ಆರೋಪಗಳ ವಿರುದ್ಧ ಬುಲಂದ ಶಹರ ಜಿಲ್ಲಾಡಳಿತವು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್ಎಸ್) ಜಾರಿಗೊಳಿಸಿತು. ಗೋವುಗಳ ಅಸ್ಥಿಪಂಜರಗಳು ಲಭಿಸಿದ್ದು ಡಿಸೆಂಬರ್ ೩ರಂದು ಜಿಲ್ಲೆಯಲ್ಲಿ ಗುಂಪು ಹಿಂಸಾಚಾರಕ್ಕೆ ಕಾರಣವಾಗಿತ್ತು. ಹಿಂಸಾಚಾರಕ್ಕೆ ಒಬ್ಬ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಒಬ್ಬ ಸ್ಥಳೀಯ ಯುವಕ ಬಲಿಯಾಗಿದ್ದರುಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಮಹವ್ ಗ್ರಾಮದಲ್ಲಿ ಡಿಸೆಂಬರ್ ೨ರ ರಾತ್ರಿ ಗೋಹತ್ಯಾ ಕೃತ್ಯದಲ್ಲಿ ಶಾಮೀಲಾಗಿದ್ದರು ಎಂದು ಆಪಾದಿಸಲಾಗಿದ್ದು, ಘಟನೆ ಮರುದಿನ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು. ಹಿಂಸಾಚಾರಕ್ಕೆ  ಇನ್ಸ್ಪೆಕ್ಟರ್ ಸುಬೋಧ ಕುಮಾರ್ ಸಿಂಗ್ ಮತ್ತು ಗ್ರಾಮಸ್ಥ ಸಮಿತ್ ಬಲಿಯಾಗಿದ್ದರು. ಆರೋಪಿಗಳಾದ ಸ್ಯಾನಾದ ಅಜರ್ ಖಾನ್, ನದೀಮ್ ಖಾನ್ ಮತ್ತು ಮೆಹಬೂಬ್ ಅಲಿ ಅವರನ್ನು ಬಂಧಿಸಿ ಸೆರೆಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.  ಬುಲಂದಶಹರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಜ್ ಕುಮಾರ್ ಝಾ ಅವರು ಪೊಲೀಸ್ ವರದಿಯನ್ನಯ ಆಧರಿಸಿ ಮೂವರು ಬಂಧಿತ ಆರೋಪಿಗಳ ವಿರುದ್ಧ ಎನ್ಎಸ್ ಎಯನ್ನು ಅನ್ವಯಿಸಲಾಗುವುದು ಎಂದು ತಿಳಿಸಿದರು.
ಆರೋಪಿಗಳು ಜಾಮೀನು ಪಡೆಯಲು ಯತ್ನಿಸುತ್ತಿದ್ದರು. ಅವರು ಬಿಡುಗಡೆಯಾದರೆ, ಸೆರೆಮನೆಯಿಂದ ಹೊರಕ್ಕೆ ಬಂದ ಬಳಿಕ  ಇಂತಹುದೇ ಕೃತ್ಯಗಳಲ್ಲಿ ಶಾಮೀಲಾಗುವ ಸಾಧ್ಯತೆ ಇದೆ. ಇದು ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಮತ್ತು ಕೋಮು ಸೌಹಾರ್ದಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಆದ್ದರಿಂದ ಅವರ ವಿರುದ್ಧ ಎನ್ ಎಸ್ ಅನ್ವಯಿಸಲು ನಿರ್ಧರಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು. ಜಿಲ್ಲೆಯಲ್ಲಿ ಹಿಂದೆ  ಗೋಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ  ಕಳೆದ ತಿಂಗಳು ಮಂದಿಯನ್ನು ಬಂಧಿಸಲಾಗಿತ್ತು. ಏನಿದ್ದರೂ, ಡಿಸೆಂಬರ್ ೪ರಂದು ಇಂತಹುದೇ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದ ನಾಲ್ವರ ಮೇಲಿನ ಆರೋಪಗಳು ಸುಳ್ಳೆಂದು ಬಳಿಕ ಕಂಡು ಬಂದಿದ್ದವು. ಬಜರಂಗ ದಳದ ಜಿಲ್ಲಾ ಸಂಚಾಲಕ ಯೋಗೇಶ್ ರಾಜ್ ಬಂಧಿತರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದುದಾಗಿ ಹೇಳಲಾಗಿತ್ತು. ಹಿಂಸಾಚಾರದ ನೇತೃತ್ವ ವಹಿಸಿದ ಕಾರಣಕ್ಕಾಗಿ ಬಂಧಿಸಲ್ಪಟ್ಟಿದ್ದ ಈತ ೧೬ ದಿನಗಳ ಸೆರೆವಾಸದ ಬಳಿಕ ಬಿಡುಗಡೆಯಾಗಿದ್ದ.

2019: ನವದೆಹಲಿ: ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯಲ್ಲಿ ಭಾರತೀಯ ಮಹಿಳೆಯೊಬ್ಬರ ಜೊತೆಗೆ ಜಗಳಾಡಿದ ಬಗ್ಗೆ ಸ್ಟಷ್ಟನೆ ಪಡೆಯುವ ಸಲುವಾಗಿ ದೆಹಲಿ ಪೊಲೀಸರು ಪಾಕಿಸ್ತಾನಿ ಹೈಕಮೀಷನ್ ಅಧಿಕಾರಿಯೊಬ್ಬರನ್ನು ಕರೆಸಿಕೊಂಡ ಘಟನೆ ಘಟಿಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳ ಪ್ರಕಾರ ಅಧಿಕಾರಿಯು ಘಟನೆಗೆ ಸಂಬಂಧಿಸಿದಂತೆ ಕ್ಷಮಾಯಾಚನೆ ಪತ್ರವನ್ನು ಬರೆದು ಪೊಲೀಸರಿಗೆ ನೀಡಿದ್ದು ಬಳಿಕ ಅದೇ ದಿನ ಪ್ರಕರಣವನ್ನು ಇತ್ಯರ್ಥ ಪಡಿಸಲಾಯಿತು ಎಂದು ಹೇಳಲಾಯಿತು. ಭಾರತೀಯ ಮಹಿಳೆ ಜಗಳದ ಬಳಿಕ ಪೊಲೀಸ್ ಠಾಣೆಗೆ ಆವರ (ಪಾಕಿಸ್ತಾನ ಹೈಕಮೀಷನ್ ಅಧಿಕಾರಿ) ವಿರುದ್ಧ ದೂರು ನೀಡಿದ್ದರು ಮತ್ತು  ಅವರನ್ನು ಠಾಣೆಗೆ ಕರೆ ತಂದಿದ್ದರು. ಅವರು ಮಹಿಳೆಯ ಬಳಿ ಕ್ಷಮೆ ಯಾಚಿಸಿದರು. ಬಳಿಕ ಅವರನ್ನು ಬಿಟ್ಟು ಬಿಡಲಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ  ಯಾರನ್ನೂ ಬಂಧಿಸಿಲ್ಲ ಎಂದು ಮೂಲ ಹೇಳಿತು. 
2018: ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಭೇಟಿ ಕಾಲದಲ್ಲಿ ಸ್ನೇಹದ ಸಂಕೇತವಾಗಿ ನವದೆಹಲಿಯ ತೀನ್ ಮೂರ್ತಿ ಚೌಕವನ್ನುತೀನ್ ಮೂರ್ತಿ ಹಫಿಯಾ ಚೌಕ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೆತನ್ಯಾಹು ಅವರ ಸಮ್ಮುಖದಲ್ಲಿ ಮರುನಾಮಕರಣ ಮಾಡಲಾಯಿತು. ಮರುನಾಮಕರಣ ಸಮಾರಂಭದಲ್ಲಿ ಹಾಜರಿದ್ದ ಉಭಯ ನಾಯಕರೂ ತೀನ್ ಮೂರ್ತಿ ಭವನದ ಸಮೀಪದಲ್ಲಿ ಇರುವ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಹುತಾತ್ಮ ಯೋಧರಿಗೆ ಗೌರವ ಅರ್ಪಿಸಿ ಬಳಿಕ ಸಂದರ್ಶಕರ ಪುಸ್ತಕದಲಿ ಸಹಿ ಮಾಡಿದರು. ನೆತನ್ಯಾಹು ಅವರು ಭಾರತಕ್ಕೆ ಆರು ದಿನಗಳ ಭೇಟಿಗಾಗಿ ಆಗಮಿಸಿದರು. ತೀನ್ ಮೂರ್ತಿ ಚೌಕದಲ್ಲಿರುವ ಮೂರು ಕಂಚಿನ ಪ್ರತಿಮೆಗಳು ೧೫ ಚಕ್ರಾಧಿಪತ್ಯ ಸೇವೆಯ ಅಶ್ವದಳ ಬ್ರಿಡೇಡಿನ (ಇಂಪೀರಿಯಲ್ ಸರ್ವೀಸ್ ಕ್ಯಾವಲ್ರಿ ಬ್ರಿಗೇಡ್) ಹೈದರಾಬಾದ್, ಜೋಧಪುರ ಮತ್ತು ಮೈಸೂರಿನ ಲ್ಯಾನ್ಸರುಗಳನ್ನು ಪ್ರತಿನಿಧಿಸುವ ಪ್ರತಿಮೆಗಳಿವೆ. ೧೯೧೮ರ ಸೆಪ್ಟೆಂಬರ್ ೨೩ರಂದು ಮೊದಲ ಜಾಗತಿಕ ಸಮರದ ಕಾಲದಲ್ಲಿ ಹಫಿಯಾ ನಗರದ ಮೇಲೆ ದಾಳಿ ನಡೆಸಿದ್ದ ಬ್ರಿಗೇಡ್ ಯಶಸ್ವಿಯಾಗಿ ವಿಜಯ ಸಾಧಿಸಿತ್ತು.  ಒಟ್ಟೋಮನ್ನರು, ಜರ್ಮನಿ ಮತ್ತು ಆಸ್ಟ್ರಿಯಾ-ಹಂಗೇರಿಯ ಜಂಟಿ ಪಡೆಯ ರಕ್ಷಣೆಯಲ್ಲಿದ್ದ ಹಫಿಯಾ ನಗರದ ಮೇಲೆ ದಾಳಿ ನಡೆಸಿದ್ದ ಲ್ಯಾನ್ಸರುಗಳ ಹೋರಾಟದ ವೀರಗಾಥೆಯನ್ನು ಮೂರ್ತಿಗಳು ಹೇಳುತ್ತವೆ. ಹೈಫಾ ವಿಮೋಚನೆಯಿಂದ ಮಿತ್ರಕೂಟದ ಪಡೆಗಳಿಗೆ ಸಮುದ್ರದ ಮೂಲಕ ಅಗತ್ಯವಸ್ತು ಸರಬರಾಜು ಮಾರ್ಗ ತೆರವುಗೊಂಡಿತ್ತು. ೪೪ ಮಂದಿ ಭಾರತೀಯ ಯೋಧರು ಮೊದಲ ಜಾಗತಿಕ ಸಮರ ಕಾಲದಲ್ಲಿ ನಗರದ ವಿಮೋಚನೆಗಾಗಿ ತಮ್ಮ ವೀರಬಲಿದಾನವನ್ನು ಮಾಡಿದ್ದರು.  ಈವರೆಗೆ ೬೧ ಅಶ್ವದಳವು ಸೆಪ್ಟೆಂಬರ್ ೨೩ರ ದಿನವನ್ನುವಿಜಯದಿನ ಅಥವಾಹಫಿಯಾ ದಿನವಾಗಿ ಆಚರಿಸುತ್ತವೆ. ತೀನ್ ಮೂರ್ತಿ ಭವನವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಧಿಕೃತ ನಿವಾಸವಾಗಿತ್ತು.ರಾಜಧಾನಿಯಲ್ಲಿನ ಸ್ಮಾರಕಕ್ಕೆ ಮರುನಾಮಕರಣ ಮಾಡುವ ನಿರ್ಧಾರವನ್ನು ೨೦೧೭ರ ಜುಲೈ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೈಗೊಳ್ಳಲಾಗಿತ್ತು.  ಮೊದಲ ಜಾಗತಿಕ ಸಮರ ಅಂತ್ಯ ಮತ್ತು ಹೈಪಾ ಸಮರದ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಸ್ಮಾರಕದ ಪುನರ್ ನಾಮಕರಣ ಮಾಡುವ ಸುಳಿವನ್ನು ಮೋದಿ ಅವರು ಹೈಫಾಕ್ಕೆ ಭೇಟಿ ನೀಡಿದ ವೇಳೆ ನೀಡಿದ್ದರು. ಮೇಜರ್ ದಲಪತ್ ಸಿಂಗ್ ನಾಯಕತ್ವದಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಿದ್ದನ್ನು ಸ್ಮರಿಸುವ ಫಲಕ ಅನಾವರಣ ಕಾಲದಲ್ಲಿ ಪ್ರಧಾನಿ ಸುಳಿವು ನೀಡಿದ್ದರು. ವಿಮಾನ ನಿಲ್ದಾಣದಲ್ಲೇ ಮೋದಿ ಸ್ವಾಗತ: ೧೫ ಬಳಿಕ ವರ್ಷಗಳ ಬಳಿಕ ಭಾರತಕ್ಕೆ ದಿನಗಳ ಭೇಟಿಗಾಗಿ ಆಗಮಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಪ್ರಧಾನಿ ನರೇಂದ್ರ ಮೋದಿ ಎಲ್ಲ ಶಿಷ್ಟಾಚಾರಗಳನ್ನು ಮೀರಿ ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸಿ, ಭೇಟಿಯನ್ನು ಚಾರಿತ್ರಿಕ ಎಂದು ಬಣ್ಣಿಸಿದರು. ವಿಶೇಷ ವಿಮಾನದಲ್ಲಿ ಬಂದಿಳಿದ ಬೆಂಜಮಿನ್ ಮತ್ತು ಅವರ ಪತ್ನಿ ಸಾರಾ ಅವರನ್ನು ಮೋದಿ ವಿಮಾನ ನಿಲ್ದಾಣದಲ್ಲೇ ಆಲಂಗಿಸಿ ಸ್ವಾಗತಿಸಿದರು. ರಾಷ್ಟ್ರಪತಿ ಭವನದ ಮುಂದೆ ಅಧಿಕೃತ ಸ್ವಾಗತ ಕಾರ್ಯಕ್ರಮ ಜರುಗಿತು. ರಾತ್ರಿ ಮೋದಿ ಅವರು ಬೆಂಜಮಿನ್ ದಂಪತಿಗೆ ಭೋಜನಕೂಟ ಆಯೋಜಿಸಿದರು. ‘ನನ್ನ ಸ್ನೇಹಿತ ನೆತನ್ಯಾಹು ಅವರನ್ನು ಭಾರತಕ್ಕೆ ಸ್ವಾಗತಿಸುತ್ತೇನೆ, ಇದೊಂದು ವಿಶೇಷವಾದ ಚಾರಿತ್ರಿಕ ಭೇಟಿ. ಇದು ಉಭಯ ರಾಷ್ಟ್ರಗಳ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ಬದ್ಧತೆಯಾಗಲಿದೆ,’ ಎಂದು ಮೋದಿ ಟ್ವೀಟ್ ಮಾಡಿದರು.



2018: ನವದೆಹಲಿ: ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರ ನೇತೃತ್ವದ ಸಪ್ತ ಸದಸ್ಯ ನಿಯೋಗವು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳನ್ನು ಭೇಟಿ ಮಾಡುವ ಮೂಲಕ ರಾಷ್ಟ್ರದ ನ್ಯಾಯಾಂಗದಲ್ಲಿ ಉದ್ಭವಿಸಿದ ಅಭೂತಪೂರ್ವ ಬಿಕ್ಕಟ್ಟು ಶಮನಕ್ಕೆ ಯತ್ನಗಳನ್ನು ಆರಂಭಿಸಿತು. ನ್ಯಾಯಮೂರ್ತಿಗಳ ಭೇಟಿಯ ಜೊತೆಗೇ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನೂ ಭೇಟಿ ಮಾಡುವ ಉದ್ದೇಶವನ್ನು ನಿಯೋಗ ಇಟ್ಟುಕೊಂಡಿತು. ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಿಂದ ಉದ್ಭವಿಸಿದ ವಿಷಯಗಳನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಲುವಾಗಿ ಸಪ್ತ ಸದಸ್ಯ ನಿಯೋಗವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಚಿಸಿತ್ತು. ಜನವರಿ ೧೨ರ ಶುಕ್ರವಾರ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ದೆಹಲಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣಗಳ ನಿಯೋಜನೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು.

2018: ಮುಂಬೈ: ಮುಂಬೈ ತೀರದಾಚೆ ಅರಬ್ಬಿ ಸಮುದ್ರದಲ್ಲಿ ಜನವರಿ ೧೩ರ ಶನಿವಾರ ಪತನಗೊಂಡ ಪವನ ಹಂಸ ಹೆಲಿಕಾಪ್ಟರಿನ ಏರ್ ಕ್ರಾಫ್ಟ್ ವಾಯ್ಸ್ ಡಾಟಾ ರೆಕಾರ್ಡರನ್ನು (ಕಪ್ಪು ಪೆಟ್ಟಿಗೆ) ಕರಾವಳಿ ಕಾವಲು ಪಡೆ ಪತ್ತೆ ಹಚ್ಚಿತು. ಉಳಿದ ಅವಶೇಷಗಳ ಶೋಧ ಕಾರ್ಯ ಮುಂದುವರೆಯಿತು. ಇದೇ ವೇಳೆಗೆ ನೌಕಾಪಡೆಯು ದುರಂತದಲ್ಲಿ ಕಣ್ಮರೆಯಾಗಿರುವ ಇನ್ನಿಬ್ಬರು ಹೆಲಿಕಾಪ್ಟರ್ ಪಯಣಿಗರ ಪತ್ತೆಗಾಗಿ ಶೋಧ ಕಾರ್ಯವನ್ನು ತೀವ್ರಗೊಳಿಸಿತು.’ ಕಣ್ಮರೆಯಾಗಿರುವ ಒಎನ್ ಜಿಸಿ ಸದಸ್ಯರ ಪತ್ತೆಯಾಗುವವರೆಗೂ ಶೋಧ ಕಾರ್ಯ ಮುಂದುವರೆಯಲಿದೆ. ಏರ್ ಕ್ರಾಫ್ಟ್ ವಾಯ್ಸ್ ಡಾಟಾ ರೆಕಾರ್ಡರ್ (ವಿಡಿಆರ್) ಪತ್ತೆಯಾಗಿದ್ದು, ಹೆಲಿಕಾಪ್ಟರಿನ ಇತರ ಅವಶೇಷಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಕರಾವಳಿ ಕಾವಲು ಪಡೆಯ ವಕ್ತಾರರು ತಿಳಿಸಿದರು. ಐವರು ಒಎನ್ ಜಿಸಿ ಅಧಿಕಾರಿಗಳು ಮತ್ತು ಇಬ್ಬರು ಪೈಲಟ್ ಗಳು ಸೇರಿ ಮಂದಿ ಇದ್ದ ಹೆಲಿಕಾಪ್ಟರ್ ಜನವರಿ ೧೩ರ ಶನಿವಾರ ಮುಂಬೈ ತೀರದಿಂದ ಗಗನಕ್ಕೆ ಏರಿದ ಕೆಲವೇ ನಿಮಿಷಗಳಲ್ಲಿ ಕಣ್ಮರೆಯಾಗಿತ್ತು. ಹೆಲಿಕಾಪ್ಟರ್ ಅರಬ್ಬಿ ಸಮುದ್ರದಲ್ಲಿರುವ ಸರ್ಕಾರಿ ಸ್ವಾಮ್ಯದ ಒಎನ್ಜಿಸಿಯ ತೈಲನೆಲೆಯತ್ತ ಹೊರಟಿದ್ದಾಗ ದುರಂತ ಸಂಭವಿಸಿತ್ತು.  ಐಎನ್ ಎಸ್ ಟಾರ್ಸಾ ಮತ್ತು ಐಎನ್ ಎಸ್ ಟೇಗ್ ಶೋಧ ಕಾರ್ಯದಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಸಮುದ್ರ ಪ್ರಹರಿ, ಅಚೂಕ್ ಮತ್ತು ಅಗ್ರಿಮ್ ನೌಕೆಗಳಿಗೆ ಸಹಯೋಗ ನೀಡುತ್ತಿವೆ ಎಂದು ನೌಕಾಪಡೆಯ ವಕ್ತಾರರು ಹೇಳಿದರು. ಐಎನ್ ಎಸ್ ಮಾರ್ಕರ್ ನೌಕೆಯೂ ಕಾರವಾರದಿಂದ ದುರಂತ ಸ್ಥಳದೆಗಡೆಗೆ ಶೋಧ ಕಾರ್ಯಕ್ಕೆ ನೆರವಾಗಲು ಹೊರಟಿದೆ ಎಂದು ಅವರು ನುಡಿದರು. ಐಸಿಜಿಎಸ್ ಸಾಮ್ರಾಟ್ ಮುಂಬೈಯಿಂದ ರಕ್ಷಣಾ ಕಾರ್ಯಾಚರಣೆಗಾಗಿ ತೆರಳಿದೆ. ಡಾಮನ್ ನಿಂದ ಐಸಿಜಿ ಡೋರ್ನಿಯರ್, ಶಿಕ್ರದಿಂದ ಐಎನ್ ಸಿಯಾಕಿಂಗ್ ೪೨ ಬಿ ಮತ್ತು ಒಎನ್ ಜಿಸಿಯಿಂದ ನೌಕೆಗಳನ್ನು ಕೂಡಾ ಶೋಧ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.

2018: ನವದೆಹಲಿ: ಐದು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಸ್ವಾಗತಿಸುವ ಸಂಭ್ರಮದಲ್ಲಿ ಪ್ರಧಾನಿ ಮೋದಿ ಅವರು ಇದ್ದಂತಹ ಸಂದರ್ಭದಲ್ಲಿ ಅವರ ವಿಶ್ವಾಸಿ ಜಾಫರ್ ಸರೇಶ್ವಾಲ ಅವರುಭಾರತವು ಕಡೆಗೂ ತನ್ನ ಪಶ್ಚಿಮ ಏಷ್ಯಾ ನೀತಿಯಲ್ಲಿನ ಸಾಂಕೇತಿಕತೆಯನ್ನು ತ್ಯಜಿಸುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು. ಇತ್ತೀಚೆಗೆ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಗೆ ಭೇಟಿ ನೀಡಿದ್ದ ಹೈದರಾಬಾದಿನ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಕುಲಪತಿ ಜಾಫರ್ ಸರೇಶ್ವಾಲ ಅವರು ಭಾರತವು ಅಂತಿಮವಾಗಿ ಇಸ್ರೇಲ್ ಮತ್ತು ಪ್ಯಾಲೆಸ್ತೈನ್ ಕುರಿತ ನೀತಿಯನ್ನು ಬದಲಾಯಿಸಿಕೊಂಡು ದಶಕಗಳಷ್ಟು ಹಳೆಯದಾದ ಸಂಪ್ರದಾಯವನ್ನು ಮುರಿದಿದೆ. ಪ್ರಧಾನಿ ಮೋದಿ ಕಳೆದ ವರ್ಷವಷ್ಟೇ ಇಸ್ರೇಲಿಗೆ ಭೇಟಿ ಕೊಟ್ಟಿದ್ದರು. ಪ್ಯಾಲೆಸ್ತೈನಿಗೆ ಪ್ರತ್ಯೇಕ ಭೇಟಿ ಶೀಘ್ರದಲ್ಲೇ ನಡೆಯಲಿದೆ ಎಂದು ಊಹಿಸಿದರು. ‘ನಾವು ಸಾಂಕೇತಿಕತೆಯನ್ನು ಬಯಸುವುದಿಲ್ಲ. ಹಿಂದೆ ನಾನು ಪ್ರಧಾನಿಯವರನ್ನು ಸ್ಕಲ್ ಕ್ಯಾಪ್ ಧರಿಸದೇ ಇರುವುದಕ್ಕಾಗಿ ಮತ್ತು ಇಫ್ತಾರ್ ಪಾರ್ಟಿಗಳನ್ನು ನಡೆಸದೇ ಇರುವುದಕ್ಕಾಗಿ ಅಭಿನಂದಿಸಿದ್ದೆ. ಇದೇ ಸಾಂಕೇತಿಕತೆ ರಾಜತಾಂತ್ರಿಕತೆಯಿಂದಲೂ ಈಗ ದೂರವಾಗಿದೆ ಎಂದು ಅವರು ನುಡಿದರು. ಇಸ್ರೇಲ್ ಜೊತೆಗಿನ ವ್ಯವಹಾರದಲ್ಲಿ ಕಾಂಗ್ರೆಸ್ ಮತ್ತು ಮೋದಿ ಅವರ ವೈಖರಿಯಲ್ಲಿನ ವ್ಯತ್ಯಾಸ ಏನೆಂದರೆ ಕಾಂಗ್ರೆಸ್ ನೆತನ್ಯಾಹು ಅವರನ್ನು ರಹಸ್ಯವಾಗಿ ಕೊಠಡಿಗಳಲ್ಲಿ ಭೇಟಿ ಮಾಡುತ್ತಿತ್ತು ಮೋದಿ ಅದನ್ನು ಬಹಿರಂಗವಾಗಿ ಮಾಡುತ್ತಿದ್ದಾರೆ ಎಂದು ಸರೇಶ್ವಾಲ ಹೇಳಿದರು. ರಾಜತಾಂತ್ರಿಕರು ಮತ್ತು ಸರ್ಕಾರಿ ಅಧಿಕಾರಿಗಳ ಹೊರತಾಗಿ, ನೆತನ್ಯಾಹು ಅವರ ಭಾರತ ಪ್ರವಾಸದಲ್ಲಿ ವ್ಯವಹಾರೋದ್ಯಮಿಗಳು ಕೂಡಾ ಸೇರಿದ್ದಾರೆ. ವ್ಯವಹಾರೋದ್ಯಮಿಗಳು ಸರೇಶ್ವಾಲ ಅವರ ಅಹಮದಾಬಾದ್ ಮೂಲದ ಪರ್ಸೋಲಿ ಕಾರ್ಪೋರೇಷನ್ ಜೊತೆಗೆ ಜಲಸಂರಕ್ಷಣೆ ಮತ್ತು ಉಪ್ಪು ನಿವಾರಣೆ ಸಂಬಂಧಿತ ಒಪ್ಪಂದಗಳಿಗೆ ಸಹಿ ಹಾಕುವರು. ಇಸ್ರೇಲಿ ಸಂಸ್ಥೆಗಳ ಜೊತೆಗಿನ ಸರೇಶ್ವಾಲ ಅವರ ಒಪ್ಪಂದಗಳು ಗುಜರಾತಿನ ವರ್ತಕರು ಇಸ್ರೇಲ್ ಜೊತೆಗೆ ಹೊಂದಿರುವ ಸುದೀರ್ಘ ಕಾಲದ ನಂಟನ್ನು ಮುಂದುವರೆಸಿಕೊಂಡು ಹೋಗಲಿದೆ. ಇಸ್ರೇಲಿಗೆ ಭೇಟಿ ಕೊಟ್ಟಿದ್ದ ಮೊತ್ತ ಮೊದಲ ಭಾರತೀಯ ರಾಜಕಾರಣಿ ಗುಜರಾತಿನ ಮಾಜಿ ಮುಖ್ಯಮಂತ್ರಿ ಚಿಮನ್ ಭಾಯಿ ಪಟೇಲ್. ಅವರು ೧೯೯೦ರಲ್ಲಿ, ನವದೆಹಲಿ ಮತ್ತು ಟೆಲ್ ಅವೀವ್ ರಾಜತಾಂತ್ರಿಕ ಬಾಂಧವ್ಯ ಸ್ಥಾಪಿಸಿಕೊಳ್ಳುವುದಕ್ಕೆ ಎರಡು ವರ್ಷ ಮೊದಲು ಇಸ್ರೇಲಿಗೆ ಪ್ರವಾಸ ಮಾಡಿದ್ದರು. ತಮ್ಮ ಪ್ಯಾಲೆಸ್ತೈನ್ ಭೇಟಿ ಬಗ್ಗೆ ವಿವರಿಸಿದ ಸರೇಶ್ವಾಲ ಅವರು ತಾನು ಪ್ಯಾಲೆಸ್ತೈನ್ ವೆಸ್ಟ್ ಬ್ಯಾಂಕಿನಲ್ಲಿ ಸ್ಥಾಪಿಸಿದ ಮೊದಲ ಯೋಜಿತ ನಗರ ರಾವಬಿಗೆ ಭೇಟಿ ನೀಡಿದ್ದುದಾಗಿ ಹೇಳಿದರು. ನಗರದ ೩೫ರ ಹರೆಯದ ಮೇಯರ್ ಶೇಖ್ ರಯ್ಯಾನ್ ಮತ್ತು ನೆತನ್ಯಾಹು ಅವರ ವಿಶ್ವಾಸಿ ಅನತ್ ಬೆರ್ಕೊ ಅವರ ಜೊತೆಗಿನ ತಮ್ಮ ಭೇಟಿ ಮರೆಯಲಾಗದಂತಹುದು ಎಂದು ಸರೇಶ್ವಾಲ ನುಡಿದರು. ಸಲ್ಮಾನ್ ಖಾನ್, ಶಾರುಖ್ ಖಾನ್, ನರೇಂದ್ರ ಮೋದಿ ಮತ್ತು ಸ್ಮೃತಿ ಇರಾನಿ ನಾಲ್ಕು ಹೆಸರುಗಳು ಮಾತ್ರ ಪ್ಯಾಲೆಸ್ತೈನಿನಲ್ಲಿ ಅತ್ಯಂತ ಜನಪ್ರಿಯವಾಗಿವೆ ಎಂದು ಅವರು ಹೇಳಿದರು.

2018: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗಾಗಿ ರಾಜಕೀಯ ಯತ್ನ ಮತ್ತು ಸೇನಾ ಕಾರ್ಯಾಚರಣೆ ಜೊತೆ ಜೊತೆಯಾಗಿ ಸಾಗಬೇಕು ಎಂದು ಇಲ್ಲಿ ಹೇಳಿದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನವು ಗಡಿಯಾಚೆಯಿಂದ ನಡೆಸುತ್ತಿರುವ ಭಯೋತ್ಪಾದನೆಯನ್ನು ನಿಲ್ಲಿಸಲು ಸೇನಾ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕು ಎಂದು ಅಭಿಪ್ರಾಯ ಪಟ್ಟರು. ರಾಜ್ಯದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಶಸ್ತ್ರ ಪಡೆಗಳು ಯಥಾಸ್ಥಿತಿ ಇರಬೇಕೆಂದು ಬಯಸುವುದಿಲ್ಲ. ಒಂದು ವರ್ಷದ ಹಿಂದೆ ತಾವು ಅಧಿಕಾರ ವಹಿಸಿಕೊಂಡಾಗ ಇದ್ದುದಕ್ಕಿಂತ ಸಾಕಷ್ಟು ಸುಧಾರಿಸಿರುವ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಲು ಹೊಸ ವ್ಯೂಹ ಮತ್ತು ತಂತ್ರಗಳನ್ನು ರೂಪಿಸಬೇಕು ಎಂದು ಅವರು ನುಡಿದರು. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನವು ಗಡಿಯಾಚೆಯಿಂದ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳ ಸರಣಿಯನ್ನು  ತುಂಡರಿಸುವ ಸಲುವಾಗಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದ ಸೇನಾ ಮುಖ್ಯಸ್ಥರು, ಭಯೋತ್ಪಾದನೆಯನ್ನು ತೊಡೆದುಹಾಕಲು ಸೇನೆಯು ತನ್ನ ನೀತಿಯನ್ನು ಮುಂದುವರೆಸುವುದು ಎಂದು ಸ್ಪಷ್ಟ ಪಡಿಸಿದರು. ರಾಜಕೀಯ ಉಪಕ್ರಮಗಳು ಮತ್ತು ಇತರ ಉಪಕ್ರಮಗಳನ್ನು ಜೊತೆ ಜೊತೆಯಾಗಿ ಕೈಗೊಳ್ಳುವ ಮೂಲಕ ಮತ್ತು ಇವೆಲ್ಲವನ್ನೂ  ಪರಸ್ಪರ ಸಮನ್ವಯದೊಂದಿಗೆ ಸಾಗುವಂತೆ ಮಾಡುವ ಮೂಲಕ ಕಾಶ್ಮೀರದಲ್ಲಿ ಶಾಶ್ವತ ಶಾಂತಿಯನ್ನು ಸ್ಥಾಪಿಸಲು ಸಾಧ್ಯ. ನಿಟ್ಟಿನಲ್ಲಿ ನಾವು ರಾಜಕೀಯ-ಸೇನಾ ವಿಧಾನವನ್ನು ನಾವು ಅನುಸರಿಸಬೇಕು ಎಂದು ಸೇನಾ ಮುಖ್ಯಸ್ಥ ನುಡಿದರು. ಅಕ್ಟೋಬರ್ ತಿಂಗಳಲ್ಲಿ ಸರ್ಕಾರವು ಜಾಗೃತಾದಳ ಮುಖ್ಯಸ್ಥ ದಿನೇಶ್ವರ ಶರ್ಮ ಅವರನ್ನು ಜಮ್ಮು ಮತ್ತು ಕಾಶ್ಮೀರದ ಎಲ್ಲರ ಜೊತೆಗೆ ಸುಸ್ಥಿರ ಮಾತುಕತೆಗಾಗಿ ತನ್ನ ವಿಶೇಷ ಪ್ರತಿನಿಧಿಯಾಗಿ ಕಳುಹಿಸಿತ್ತು. ಸರ್ಕಾರವು ಮಧ್ಯವರ್ತಿಯನ್ನು ನೇಮಿಸಿದ್ದು ಇದೇ ಉದ್ದೇಶಕ್ಕಾಗಿ. ಕಾಶ್ಮೀರದ ಜನರನ್ನು ಸಂಪರ್ಕಿಸಿ ಅವರ ಕುಂದುಕೊರತೆಗಳನ್ನು ಅರಿತುಕೊಂಡು ರಾಜಕೀಯ ಮಟ್ಟದಲ್ಲಿ ಇತ್ಯರ್ಥ ಪಡಿಸಲು ಯತ್ನಿಸುವುದು ಇದರ ಗುರಿಯಾಗಿತ್ತು ಎಂದು ಸೇನಾ ಮುಖ್ಯಸ್ಥರು ನುಡಿದರು. ರಾಜ್ಯಕ್ಕೆ ಭಯೋತ್ಪಾದಕರನ್ನು ರವಾನಿಸುತ್ತಿರುವ ಪಾಕಿಸ್ತಾನದ ಮೇಲೆ ಕೃತ್ಯವನ್ನು ನಿಲ್ಲಿಸುವಂತೆ ಒತ್ತಡ ತರಲು ಅವಕಾಶಗಳಿವೆಯೇ ಎಂಬ ಪ್ರಶ್ನೆಗೆ ಸೇನಾ ಮುಖ್ಯಸ್ಥರು, ’ಹೌದು, ನೀವು ಯಥಾಸ್ಥಿತಿ ವಾದಿಯಾಗಿ ಇರುವಂತಿಲ್ಲ. ನೀವು ಹೆಜ್ಜೆ ಮುಂದಿಡುತ್ತಲೇ ಸಾಗಬೇಕು. ನೀವು ನಿಮ್ಮ ನೀತಿಗಳನ್ನು ಕಾರ್ಯಾಚರಣೆಯ ವಿಧಾನಗಳನ್ನು ಬದಲಾಯಿಸುತ್ತಾ ಸಾಗಬೇಕು ಎಂದು ಹೇಳಿದರು.  ಪರಿಸ್ಥಿತಿಯನ್ನು ನಿಭಾಯಿಸಲು ಹೊಸ ತಂತ್ರಗಳನ್ನು ಸೇನೆ ರೂಪಿಸಬೇಕು. ಇದೇ ವೇಳೆಗೆ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ವ್ಯವಹರಿಸಲು ಸಮಗ್ರ ವಿಧಾನವನ್ನು ರೂಪಿಸಬೇಕು ಎಂದು ಜನರಲ್ ರಾವತ್ ನುಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನೆಯು ೨೦೧೭ರಿಂದ ಭಯೋತ್ಪಾದನೆ ನಿಗ್ರಹ ನೀತಿಯನ್ನು ಅನುಸರಿಸುತ್ತಾ ಬಂದಿದೆ. ಇದೇ ಸಮಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನಿ ಪಡೆಗಳು ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆಗಳಿಗೆ ತಕ್ಕ ಉತ್ತರವನ್ನೂ ನೀಡಿದೆ. ಕಾಶ್ಮೀರ ವಿಷಯಕ್ಕೆ ಇತ್ಯರ್ಥ ಯತ್ನದಲ್ಲಿ ಸೇನೆ ಒಂದು ಭಾಗ ಮಾತ್ರ. ರಾಜ್ಯದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿರುವ ಭಯೋತ್ಪಾದಕರನ್ನು ಮಟ್ಟ ಹಾಕುವುದು ನಮ್ಮ ಕೆಲಸ. ನಾವು ಅದನ್ನು ಮಾಡುತ್ತಿದ್ದೇವೆ.  ಕೆಲವು ಯುವಕರು ಹಿಂಸೆಯತ್ತ ಆಕರ್ಷಿತರಾಗಿ ಭಯೋತ್ಪಾದಕರ ಜೊತೆ ಸೇರುತ್ತಿದ್ದಾರೆ. ಇಂತಹ ಭಯೋತ್ಪಾದಕ ಗುಂಪುಗಳ ಮೇಲೆ ಒತ್ತಡ ತರಲು ಸೇನೆ ಯತ್ನಿಸುತ್ತಿದೆ ಎಂದು ರಾವತ್ ಹೇಳಿದರು.

2018: ಪಣಜಿ: ಗೋವಾ ನೀರಾವರಿ ಸಚಿವ ವಿನೋದ ಪಾಲೇಕರ್ ಅವರು ಕನ್ನಡಿಗರ ಬಗ್ಗೆ ಸಾಮಾಜಿಕ ತಾಣದಲ್ಲಿ ಕೀಳು ಮಟ್ಟದ ಹೇಳಿಕೆ ನೀಡಿ ಕನ್ನಡಿಗರನ್ನು ಕೆಣಕುವ ಮೂಲಕ ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಗುರಿಯಾದರು. ಖಾನಾಪುರ ತಾಲೂಕಿನ ಕಣಕುಂಬಿ ಬಿಳಿ ಇರುವ ಕಳಸಾ ನಾಲಾ ಕಾಮಗಾರಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ತೆರಳಿದ್ದ ಪಾಲೇಕರ್ ಕರ್ನಾಟಕ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಕನ್ನಡಿಗರು ಹರಾಮಿಗಳು ಎಂದು ಟ್ವೀಟ್ ಮಾಡಿದ್ದರು.  ಮಹದಾಯಿ ನಮ್ಮ ತಾಯಿ ಇದ್ದಂತೆ. ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ನ್ಯಾಯಾಲಯ ಆದೇಶ ಬರುವವರೆಗೆ ಅದನ್ನು ಬಿಟ್ಟುಕೊಡುವುದಿಲ್ಲ ಎಂದು ಅವರು ಬರೆದಿದ್ದರು. ಕಳಸಾ ನೀರು ಬಿಡುವ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಇತ್ತೀಚೆಗೆ ಕರ್ನಾಟಕದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶ ಅಲ್ಲ. ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ಅದು ನಮಗೆ ಸಂಬಂಧಿಸಿದ್ದಲ್ಲ. ಮಹದಾಯಿ ವಿವಾದ ಪ್ರಕರಣ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗುವರೆಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದು ಪಾಲೇಕರ್ ಎನ್ನುವ ಮೂಲಕ ಕನ್ನಡಿಗರನ್ನು ಕೆಣಕಿದ್ದರು. ಪಾಲೇಕರ್ ಟ್ವೀಟ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು. ಮಹದಾಯಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತತ್ ಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಒತ್ತಾಯಿಸಿ ಸಿದ್ದರಾಮಯ್ಯ ಪ್ರತಿ ಟ್ವೀಟ್ ಮಾಡಿದರು. ಈ ಮಧ್ಯೆ ರಾಜ್ಯಾದ್ಯಂತ ಕನ್ನಡಪರ ಹೋರಾಟಗಾರರು, ಮಹದಾಯಿ ಹೋರಾಟಗಾರರು ಪಾಲೇಕರ್ ವಿರುದ್ಧ ಆಕ್ರೋಶ ಹೊರ ಹಾಕಿದರು. ಕಳಸಾ ಕಾಮಗಾರಿ ವೀಕ್ಷಣೆಗೆ ಪೊಲೀಸ್ ಬಂದೋಬಸ್ತಿನಲ್ಲಿ ಹೋಗಿದ್ದು ಏಕೆ ಎಂದು ಪ್ರಶ್ನೆ ಮಾಡಿದ ಗೋವಾ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸಚಿವರು, ‘ಕರ್ನಾಟಕದವರು ಹರಾಮಿಗಳು. ಆದ್ದರಿಂದ ಪೊಲೀಸ್ ಬಂದೋಬಸ್ತಿನಲ್ಲಿ ಹೋಗಿದ್ದೆ ಎಂದಿದ್ದಾರೆ ಎಂದು ವರದಿಗಳು ಹೇಳಿದವು.
ಮಲ್ಲಿಕಾರ್ಜುನ ಖರ್ಗೆ ಆಗ್ರಹ: ಮಧ್ಯೆ. ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡದ ಜಿಡಗಾ ಮಠದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ  ಲೋಕಸಭೆಯಲ್ಲಿನ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ಮಹದಾಯಿ ವಿವಾದ ಬಗೆಹರಿಸಲು ಪ್ರಧಾನಿ ತತ್ ಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.

2018: ನವದೆಹಲಿ: ದಿವಂಗತ ವಿಶೇಷ ಸಿಬಿಐ ನ್ಯಾಯಮೂರ್ತಿ ಬಿಎಚ್. ಲೋಯ ಅವರ ಪುತ್ರ ಅನುಜ್ ಲೋಯ ಅವರು ತಮ್ಮ ತಂದೆಯ ಸಾವಿನ ಬಗ್ಗೆ ತಮಗೆ ಯಾವುದೇ ಅನುಮಾನಗಳು ಇಲ್ಲ ಎಂದು ಸ್ಪಷ್ಟಪಡಿಸಿ, ಕುಟುಂಬಕ್ಕೆ ಕಾಟ ಕೊಡಬೇಡಿ ಎಂದು ಮಾಧ್ಯಮ ಮತ್ತು ಸರ್ಕಾರೇತರ ಸಂಘಟನೆಗಳನ್ನು (ಎನ್ ಜಿ ) ಆಗ್ರಹಿಸಿದರು. ‘ಕಳೆದ ಕೆಲವು ದಿನಗಳಿಂದ ಘಟಿಸುತ್ತಿರುವ ಸರಣಿ ಘಟನೆಗಳಿಂದ ಕುಟುಂಬಕ್ಕೆ ತುಂಬ ನೋವಾಗಿದೆ ಎಂದು ಅವರು ಹೇಳಿದರು. ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್ ಕೌಂಟರ್ ಪ್ರಕರಣದ ತನಿಖೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ಎಚ್. ಲೋಯ ಅವರು ೨೦೧೪ರ ಡಿಸೆಂಬರಿನಲ್ಲಿ ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆರೋಪಿಗಳಲ್ಲಿ ಒಬ್ಬರಾಗಿದ್ದರು. ಬಳಿಕ ಶಾ ಅವರನ್ನು ನ್ಯಾಯಾಲಯ ದೋಷಮುಕ್ತಿಗೊಳಿಸಿತ್ತು. ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರ ಗುಂಪೊಂದು ನ್ಯಾಯಮೂರ್ತಿ ಲೋಯ ಅವರ ಸಾವು ಸಂಭವಿಸಿದ ನಿಗೂಢ ಸಂದರ್ಭಗಳ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಆಗ್ರಹಿಸಿತ್ತು. ವಿಷಯವು ಅತ್ಯಂತ ಗಂಭೀರವಾದದು ಎಂದು ಇತ್ತೀಚೆಗೆ ಬಣ್ಣಿಸಿದ್ದ ಸುಪ್ರೀಂಕೋರ್ಟ್ ಪೀಠ ಜನವರಿ 15ರಂದು ಸೋಮವಾರ ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳುವ ವೇಳೆಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಹಾಜರುಪಡಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಆಜ್ಞಾಪಿಸಿತ್ತು. ಮುಂಬೈ ವಕೀಲರ ಸಂಘದ ಪರವಾಗಿ ಹಾಜರಾಗಿದ್ದ ಖ್ಯಾತ ವಕೀಲ ದುಷ್ಯಂತ ದವೆ ಅವರುಪ್ರಕರಣವು ಈಗಾಗಲೇ ಬಾಂಬೆ ಹೈಕೋರ್ಟಿನ ಮುಂದೆ ಇರುವುದರಿಂದ ಪ್ರಕರಣದ ವಿಚಾರಣೆಯನ್ನು ಕೈಗತ್ತಿಕೊಳ್ಳದಂತೆ ಸುಪ್ರೀಂಕೋರ್ಟ್ ಪೀಠವನ್ನು ಒತ್ತಾಯಿಸಿದ್ದರು. ಇತ್ತೀಚೆಗೆ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಪ್ರಕರಣಗಳನ್ನು ನಿಯೋಜಿಸುತ್ತಿರುವ ವೈಖರಿಯನ್ನು ಪ್ರಶ್ನಿಸಿ ಬಿಡುಗಡೆ ಮಾಡಿದ ಪತ್ರದಲ್ಲಿ ಪ್ರಕರಣವನ್ನೂ ಉಲ್ಲೇಖಿಸಿದ್ದರು.

2018: ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜಾಗತಿಕ ನಾಯಕರ ಜೊತೆಗಿನಆಲಿಂಗನ ರಾಜತಾಂತ್ರಿಕತೆಯನ್ನು ಲೇವಡಿ ಮಾಡಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಡಿಯೋ ಒಂದು ಬಿಜೆಪಿ-ಕಾಂಗ್ರೆಸ್ ಮಧ್ಯೆ ವಾಕ್ ಸಮರವನ್ನು ಹುಟ್ಟು ಹಾಕಿತು. ಕಾಂಗ್ರೆಸ್ ಪಕ್ಷವು  ತನ್ನ ಟ್ವಿಟ್ಟರ್ ನಲ್ಲಿ ವಿಡಿಯೋವನ್ನು ನೆತನ್ಯಾಹು ಅವರು ಭಾರತಕ್ಕೆ ದಿನಗಳ ಭೇಟಿಗಾಗಿ ಬಂದಿಳಿಯುವ ಹೊತ್ತಿಗೆ ಸರಿಯಾಗಿ ಪ್ರಕಟಿಸಿ, ಅದರಲ್ಲಿ ಮೋದಿಯವರು ಜಾಗತಿಕ ನಾಯಕರನ್ನು ಭೇಟಿ ಮಾಡುವ ಸಂದರ್ಭಗಳಲ್ಲಿ ಅವರು ವಿಶ್ವ ನಾಯಕರನ್ನು ಆಲಿಂಗಿಸುವುದನ್ನು ಮತ್ತು ಕೊಡುಗೆಗಳನ್ನು ನೀಡುವುದನ್ನು ತೋರಿಸಿ ವ್ಯಂಗ್ಯವಾಗಿ ಅದನ್ನು ಟೀಕಿಸಿತ್ತು. ಇತರ ದೇಶಗಳ ಮುಖ್ಯಸ್ಥರ ಜೊತೆಗಿನ ಮೋದಿ ಅವರ ಸಂವಹನಗಳನ್ನುನಯರಹಿತ (ಆಕ್ವರ್ಡ್) ಎಂಬುದಾಗಿ ಬಣ್ಣಿಸುವುದರೊಂದಿಗೆ ಆರಂಭವಾಗುವ ವಿಡಿಯೋ ಮೋದಿ ಅವರು ಜರ್ಮನ್ ಚಾನ್ಸಲರ್ ಅಂಗೇಲಾ ಮರ್ಕೆಲ್ ಮತ್ತು ಜಪಾನ್ ಪ್ರಧಾನಿ ಶಿಂಝೋ ಅಬೆ ಅವರ ಜೊತೆಗೆ ನಡೆಸಿದ ಸಭೆಗಳ ವಿಡಿಯೋಗಳನ್ನು ಇದರಲ್ಲಿ ಬಳಸಿತ್ತು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫ್ರೆಂಚ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಮತ್ತು ಟರ್ಕಿಯ ರೀಸಿಪ್ ಎರ್ಡೊಗನ್ ಅವರ ಜೊತೆಗಿನ ಭೇಟಿಗಳನ್ನೂ ವಿಡಿಯೋದಲ್ಲಿ ಸೇರಿಸಲಾಗಿದ್ದು, ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿ ಹೊಲ್ಲಾಂಡೆ ಮತ್ತು ನೆತನ್ಯಾಹು ಅವರ ಜೊತೆಗಿನ ಆಲಿಂಗನ ಬಗ್ಗೆ ವಿಶೇಷ ಒತ್ತು ನೀಡಿತ್ತು. ‘ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭಾರತ ಭೇಟಿಯೊಂದಿಗೆ ಪ್ರಧಾನಿ ಮೋದಿ ಅವರಿಂದ ಇನ್ನಷ್ಟು ಆಲಿಂಗನಗಳಿಗಾಗಿ ನಾವು ಕಾಯಬಹುದು ಎಂದು ವಿಡಿಯೋ ಚುಚ್ಚಿತ್ತು. ವಿಡಿಯೋದಲ್ಲಿ ಯಾವುದೇ ತಪ್ಪೂ ಇಲ್ಲ. ಇದು ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯವನ್ನು ಪ್ರಾಮಾಣಿಕವಾಗಿ ಪ್ರತಿನಿಧಿಸಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿಕೊಂಡದ್ದು ಬಿಜೆಪಿಯನ್ನು ಸಿಟ್ಟಿನಿಂದ ಕುದಿಯುವಂತೆ ಮಾಡಿತು. ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಅವರು ನೆತನ್ಯಾಹು ಭೇಟಿ ಸಂದರ್ಭದಲ್ಲಿ ವಿಡಿಯೋ ಬಿಡುಗಡೆ ಮಾಡಿರುವುದನ್ನು ಕಾಂಗ್ರೆಸ್ಸಿನನೀಚ ಕ್ಷಣ ಎಂದು ಕರೆದರು. ಇತ್ತೀಚಿನ ಸಮೀಕ್ಷೆಗಳು ಮೋದಿ ಅವರನ್ನು ಜಾಗತಿಕ ನಾಯಕ ಎಂಬುದಾಗಿ ಬಿಂಬಿಸಿರುವ ಹೊತ್ತಿನಲ್ಲಿ ಅವರು ಮೋದಿ ಅವರ ವಿದೇಶಾಂಗ ನೀತಿಯನ್ನು ಟೀಕಿಸುತ್ತಿದ್ದಾರೆ. ವಿಡಿಯೋದಲ್ಲಿ ಯಾವುದೇ ಹಾಸ್ಯವಿಲ್ಲ. ಅದನ್ನು ಬಿಡುಗಡೆ ಮಾಡಿದ ಸಮಯವನ್ನು ನೋಡಿ. ಇಸ್ರೇಲ್ ಪ್ರಧಾನಿಯ ನಿರ್ಣಾಯಕ ಭೇಟಿ ಕಾಲದಲ್ಲಿ ಅದನ್ನು ಬಿಡುಗಡೆ ಮಾಡಿದ್ದಾರೆ. ಇದು ಅವರ ನಾಯಕನೀಚ ಹೇಳಿಕೆ ನೀಡಿದ್ದು ಹೇಗೆ ಎಂಬುದನ್ನು ತೋರಿಸಿದೆ. ನೀವು ಮೋದಿ ಅವರನ್ನು ವ್ಯಕ್ತಿಯಾಗಿ ಇಚ್ಛಿಸದೇ ಇರಬಹುದು. ಆದರೆ ಕನಿಷ್ಠ ಪ್ರಧಾನಿಯ ಸಂವಿಧಾನಾತ್ಮಕ ಹುದ್ದೆಯನ್ನು ಗೌರವಿಸಬೇಕು ಎಂದು ಸುಪ್ರಿಯೊ ಹೇಳಿದರು. ಕಾಂಗ್ರೆಸ್ ನಾಯಕ ಸಂಜಯ್ ಝಾ ಅವರು ವಿಡಿಯೋವನ್ನು ಸಮರ್ಥಿಸಿದರು.  ‘ಬಿಜೆಪಿಯ ರಾಜಕೀಯ ಬೂಟಾಟಿಕೆಯನ್ನು ಇದು ತೋರಿಸುತ್ತದೆ. ವಿಡಿಯೋ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯವನ್ನು ತೋರಿಸುತ್ತದೆ ಅಷ್ಟೆ ಎಂದು ಅವರು ಪ್ರತಿಪಾದಿಸಿದರು. ಕಾಂಗೆಸ್ ಪಕ್ಷವು ಮೋದಿ ಅವರ ಆಲಿಂಗನ ರಾಜತಾಂತ್ರಿಕತೆಯನ್ನು ಟೀಕಿಸಿದ್ದು ಇದೇ ಮೊದಲೇನಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ರಂಪ್ ಜೊತೆಗಿನ ಮೋದಿ ಬಾಂಧವ್ಯವನ್ನು  ಫೈಯಿಲ್ಡ್ ಹಗ್ ಪ್ಲೊಮೆಸಿ (ವಿಫಲ ಆಲಿಂಗನ ರಾಜತಾಂತ್ರಿಕತೆ) ಎಂದು ಕರೆದಿದ್ದರು. ಅಮೆರಿಕ ಅಧ್ಯಕ್ಷರು ಕಳೆದ ವರ್ಷ ಅಕ್ಟೋಬರ್ ನಲ್ಲಿ ಪಾಕಿಸ್ತಾನದ ಜೊತೆಗಿನ ಬಾಂಧವ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವುದಾಗಿ ಹೇಳಿದ ಸಂದರ್ಭದಲ್ಲಿ ರಾಹುಲ್ ಗಾಂಧಿ ಟೀಕೆ ಮಾಡಿದ್ದರು. ಪಾಕಿಸ್ತಾನವು ಜಮಾತ್ ಉದ್-ದವಾ ಮುಖ್ಯಸ್ಥ ೨೬/೧೧ರ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದನನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದಾಗಲೂ ರಾಹುಲ್ ಇದೇ ಶಬ್ದ ಪ್ರಯೋಗಿಸಿದ್ದರು.


2017: ನವದೆಹಲಿ: ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಕಾಲೊರಸು (ಡೋರ್ಮ್ಯಾಟ್‌) ಮಾರಾಟಕ್ಕಿಟ್ಟು  ಕಾಮರ್ಸ್ಸಂಸ್ಥೆ  ‘ಅಮೆಜಾನ್ ಕೆನಡಾ' ವಿವಾದಕ್ಕೊಳಗಾಗಿತ್ತು. ಇದೀಗ ಅಮೆಜಾನ್ ಡಾಟ್ ಕಾಂನಲ್ಲಿ ಮಹಾತ್ಮ ಗಾಂಧೀಜಿಯವರ ಚಿತ್ರವಿರುವ ಚಪ್ಪಲಿ ಮಾರಾಟಕ್ಕೆ ಇಟ್ಟದ್ದು ಬೆಳಕಿಗೆ ಬಂದಿತು. ಅಮೆಜಾನ್ ಡಾಟ್ ಕಾಂ ಶಾಪಿಂಗ್ ಪೋರ್ಟಲ್ನಲ್ಲಿ  Gandhi Flip Flops - ಗಾಂಧಿ ಚಿತ್ರವಿರುವ ಚಪ್ಪಲಿ ಮಾರಾಟಕ್ಕಿಟ್ಟಿದ್ದು ಇದರ ಬೆಲೆ 16.99 ಡಾಲರ್ (₹1157.44) ಎಂದು ನಿಗದಿ ಪಡಿಸಿದೆ. ಅಮೆಜಾನ್ ಕೆನಡಾದಲ್ಲಿ ತ್ರಿವರ್ಣ ಧ್ವಜದ ಮಾದರಿಯ ಕಾಲೊರಸು ಮಾರಾಟಕ್ಕಿಟ್ಟಿದ್ದಕ್ಕೆ ಭಾರತೀಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ವಿಷಯ ತಿಳಿಯುತ್ತಿದ್ದಂತೆ  ‘ಅಮೆಜಾನ್ ಕೆನಡಾಸಂಸ್ಥೆ  ಕ್ಷಮೆ ಯಾಚಿಸಬೇಕು, ಇಲ್ಲವಾದಲ್ಲಿ ಸಂಸ್ಥೆಯ ಅಧಿಕಾರಿಗಳ ವೀಸಾ ರದ್ದು ಮಾಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ಎಚ್ಚರಿಸಿದ್ದರು. ಎಚ್ಚರಿಕೆಗೆ ಮಣಿದ ಅಮೆಜಾನ್ ಇಂಡಿಯಾದ ಉಪಾಧ್ಯಕ್ಷ ಅಮಿತ್ ಅಗರ್ವಾಲ್ ಅವರು, ಭಾರತೀಯರ ಭಾವನೆಗಳನ್ನು ಘಾಸಿಗೊಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಧ್ವಜ ಚಿತ್ರಣವಿರುವ ಕಾಲೊರೆಸು ವಿನ್ಯಾಸಗೊಳಿಸಿದ್ದು ಕೆನಡಾದ ವ್ಯಕ್ತಿಯೇ ಹೊರತು ಅಮೆಜಾನ್ ಅಲ್ಲ ಎಂದು ಸ್ಪಷ್ಟ ಪಡಿಸಿ ವೆಬ್ಸೈಟ್ನಿಂದ ಉತ್ಪನ್ನವನ್ನು ತೆಗೆದುಹಾಕಿದ್ದರು.
2017: ಪಟನಾ: ಗಂಗಾ ನದಿಯಲ್ಲಿ ನಲವತ್ತು ಜನರನ್ನು ಹೊತ್ತು ಸಾಗುತ್ತಿದ್ದ ದೋಣಿ ಮಗುಚಿ 23 ಮಂದಿ ಸಾವಿಗೀಡಾಗಿದ್ದು, 6 ಮಂದಿ ಗಾಯಗೊಂಡರು. ಪಟನಾದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ(ಎನ್ಐಟಿ) ಸಮೀಪ 40 ಜನರನ್ನು ಹೊತ್ತಿದ್ದ ದೋಣಿಯು ತೂಕ ಹೆಚ್ಚಾದ ಕಾರಣ ನದಿಯಲ್ಲಿ ಮಗುಚಿಕೊಂಡಿತು. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಆಯೋಜಿಸಲಾದ ಮೂರು ದಿನಗಳಗಾಳಿಪಟಉತ್ಸವಕ್ಕಾಗಿ ಗಂಗಾ ನದಿ ತೀರದಲ್ಲಿ ಜನರು ಸೇರಿದ್ದರು. ರಕ್ಷಣಾ ಕಾರ್ಯಾಚರಣೆ ಮುಂದುವರಿದ್ದು, ಮುಖ್ಯಮಂತ್ರಿ ನಿತೀಶ್ಕುಮಾರ್ಉನ್ನತ ಮಟ್ಟದ ತನಿಖೆಗೆ ಆದೇಶಿಸಿದರು.
2017: ಚಂಡೀಗಢ: ಪಂಜಾಬಿನ ಮಾಜಿ ಮುಖ್ಯಮಂತ್ರಿ ಸುರ್ಜಿತ್  ಸಿಂಗ್ ಬರ್ನಾಲ ಅವರು ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ಚಂಡೀಗಢದ ಪಿಜಿಐ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು. 1925 ಅಕ್ಟೋಬರ್ 21ರಂದು ಹರಿಯಾಣದ ಅಟೇಲಿಯಲ್ಲಿ ಜನಿಸಿದ್ದ ಬರ್ನಾಲ 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು. 1985ರಿಂದ 1987ರವರೆಗೆ ಪಂಜಾಬಿನ ಮುಖ್ಯಮಂತ್ರಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ಜಸ್ಟೀಸ್ ಗುರ್ನಾಮ್ ಸಿಂಗ್ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು. 1977ರಲ್ಲಿ ಸಂಸತ್ತಿಗೆ ಆಯ್ಕೆಯಾಗಿದ್ದ ಬರ್ನಾಲ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ಕೃಷಿ, ನೀರಾವರಿ, ಜಲಸಂಪನ್ಮೂಲ, ಅರಣ್ಯ, ಪರಿಸರ ಸಹಿತ ಹಲವಾರು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1978ರಲ್ಲಿ ಬಾಂಗ್ಲಾದೇಶದ ಜೊತೆಗೆ ಐತಿಹಾಸಿಕ ಗಂಗಾಜಲ ಒಪ್ಪಂದಕ್ಕೆ (ಫರಕ್ಕಾ ಒಪ್ಪಂದ) ಸಹಿ ಹಾಕಿದ್ದರು. 1979ರಲ್ಲಿ ರಾಜಕೀಯ ಏಳುಬೀಳುಗಳ ಪರಿಣಾಮವಾಗಿ ಮೊರಾರ್ಜಿ ದೇಸಾಯಿ ಅವರು ರಾಜೀನಾಮೆ ನೀಡಿದಾಗ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಅವರು ಬರ್ನಾಲ ಅವರನ್ನು ಪ್ರಧಾನಿಯಾಗಿ ನೇಮಿಸಿ ಮಧ್ಯಂತರ ಸರ್ಕಾರ ರಚಿಸಲು ಯೋಚಿಸಿದ್ದರು. ಆದರೆ ಪಕ್ಷಾಂತರಗಳ ಪರಿಣಾಮವಾಗಿ ಅದು ಜಾರಿಯಾಗಲಿಲ್ಲ. ಬಳಿಕ ಚೌಧರಿ ಚರಣ್ ಸಿಂಗ್ ಪ್ರಧಾನಿಯಾಗಿದ್ದರು. ಬಳಿಕ 1985 ಸೆಪ್ಟೆಂಬರ್ 29ರಿಂದ 1987 ಮೇ 11ರವರೆಗೆ ಪಂಜಾಬಿನ ಮುಖ್ಯಮಂತ್ರಿಯಾದ ಬರ್ನಾಲ ನಂತರದ ವರ್ಷಗಳಲ್ಲಿ ತಮಿಳುನಾಡು, ಉತ್ತರಾಖಂಡ, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜ್ಯಪಾಲರಾಗಿಯೂ, ಸ್ವಲ್ಪ ಕಾಲ ಕೇಂದ್ರದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
2017: ಇಂದೋರ್: ನಾಯಕ ಪಾರ್ಥಿವ್ ಪಟೇಲ್ (154) ಗಳಿಸಿದ ಅಮೋಘ ಶತಕದ ಬಲದಿಂದ ರಣಜಿ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡ ಪ್ರಬಲ ಮುಂಬೈ ತಂಡವನ್ನು 5 ವಿಕೆಟ್ಗಳ ಅಂತರದಿಂದ ಸೋಲಿಸಿ ಚೊಚ್ಚಲ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು. ಇಂದೋರಿನ ಹೋಲ್ಕರ್ ಮೈದಾನದಲ್ಲಿ ನಡೆದ ಕೊನೆಯ ದಿನದ ಆಟದಲ್ಲಿ ಮುಂಬೈ ಮೇಲೆ ಸಂಪೂರ್ಣ ಪ್ರಭುತ್ವ ಸಾಧಿಸಿದ ಗುಜರಾತ್ ತಂಡ 312 ರನ್ ಗುರಿಯನ್ನು 5 ವಿಕೆಟ್ ಕಳೆದುಕೊಂಡು ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿತು. ಸೋಲಿನೊಂದಿಗೆ ಮುಂಬೈ ತಂಡ ದಾಖಲೆಯ 42ನೇ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಯಿತು. ವಿಕೆಟ್ ನಷ್ಟವಿಲ್ಲದೆ 47 ರನ್ಗಳಿಂದ ಕೊನೆಯ ದಿನದಾಟ ಪ್ರಾರಂಭಿಸಿದ ಗುಜರಾತ್ ತಂಡಕ್ಕೆ ದಿನದಾಟದ ಆರಂಭದಲ್ಲೇ ಆಘಾತ ಎದುರಾಯಿತು. ಪಾಂಚಾಲ್ (54) ಮತ್ತು ಮಿರಾಯ್ (2) ಬೇಗ ನಿರ್ಗಮಿಸಿದರು. ಹಂತದಲ್ಲಿ ಕ್ರೀಸ್ಗೆ ಬಂದ ನಾಯಕ ಪಾರ್ಥಿವ್ ಪಟೇಲ್ ತಂಡಕ್ಕೆ ಆಸರೆಯಾದರು. ಪಾರ್ಥಿವ್ಗೆ ಜುನೇಜಾ (54) ಉತ್ತಮ ಸಾಥ್ ನೀಡಿದರು. ಗುಜರಾತ್ ತಂಡ ಗೆಲುವಿನೊಂದಿಗೆ ದೇಶೀಯ ಕ್ರಿಕೆಟ್ ಮೂರು ಪ್ರಮುಖ ಟ್ರೋಫಿಗಳನ್ನು ಗೆದ್ದ ಮೊದಲ ತಂಡ ಎಂಬ ಗೌರವಕ್ಕೂ ಸಹ ಪಾತ್ರವಾಯಿತು. ಗುಜರಾತ್ ವಿಜಯ್ ಹಜಾರೆ ಟ್ರೋಫಿ ಮತ್ತು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದುಕೊಂಡಿತು.
2017: ನವದೆಹಲಿ: ಮಹಾತ್ಮಾ ಗಾಂಧೀಜಿಯವರಿಗೆ ಸಂಬಂಧಿಸಿದಂತೆ ಹಗುರವಾಗಿ ಮಾತನಾಡುವ ಮೂಲಕ ಹರಿಯಾಣದ ಸಚಿವ ಅನಿಲ್ ವಿಜ್ ಅವರು ವಿವಾದವನ್ನು ಮೇಮೇಲೆ ಎಳೆದುಕೊಂಡರು. ತತ್ ಕ್ಷಣವೇ ಎಚ್ಚೆತ್ತ ಬಿಜೆಪಿ ಅನಿಲ್ ವಿಜ್ ಅವರ ಹೇಳಿಕೆ ಬಿಜೆಪಿಯ ನಿಲುವಲ್ಲ, ಅದು ಅವರ ವೈಯಕ್ತಿಕ ಹೇಳಿಕೆ ಎಂಬುದಾಗಿ ಸ್ಪಷ್ಟ ಪಡಿಸಿತು.  ಖಾದಿ ಕ್ಯಾಲೆಂಡರ್ನಲ್ಲಿ ಮಹಾತ್ಮಾ ಗಾಂಧಿಜಿ ಬದಲಿಗೆ ಮೋದಿ ಅವರ ಚಿತ್ರ ಹಾಕಿದ್ದು ಒಳ್ಳೆಯದೇ ಆಯಿತು. ಕ್ರಮೇಣ ಕರೆನ್ಸಿ ನೋಟುಗಳಿಂದಲೂ ಗಾಂಧಿ ಅವರನ್ನು ಕಿತ್ತು ಹಾಕಲಾಗುವುದುಎಂದು ಅನಿಲ್ ವಿಜ್ ಅವರು ಹೇಳಿದ್ದು ವಿಡಿಯೋ ಒಂದರಲ್ಲಿ ದಾಖಲಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಅಚ್ಛಾ ಹುವಾ ಕಿ ಗಾಂಧಿ ಕೆ ಜಗಹ್ ಮೋದಿ ಕಿ ಫೊಟೋ ಲಗಾಯಿ ಹೈ ಕ್ಯಾಲೆಂಡರ್ ಮೆ, ಮೋದಿ ಜ್ಯಾದಾ ಬಡಾ ಬ್ರ್ಯಾಂಡ್ ನೇಮ್ ಹೈ. ಜಬ್ ಸೆ ಖಾದಿ ಕೆ ಸಾಥ್ ಗಾಂಧಿ ಕಾ ನಾಮ್ ಜುಡಾ ಹೈ, ಖಾದಿ ಉಠ್ ಹಿ ನಹೀ ಸಕಿ, ಖಾದಿ ಡೂಬ್ ಗಯೀ’ (ಕ್ಯಾಲೆಂಡರಿನಲ್ಲಿ ಗಾಂಧಿ ಜಾಗದಲ್ಲಿ ಮೋದಿ ಅವರ ಫೊಟೋ ಹಾಕಿದ್ದು ಒಳ್ಳೆಯದಾಯಿತು. ಮೋದಿ ಹೆಚ್ಚು ದೊಡ್ಡ ಬ್ರ್ಯಾಂಡ್ನೇಮ್ ಆಗಿದ್ದಾರೆ. ಖಾದಿ ಜೊತೆಗೆ ಗಾಂಧಿ ಅವರ ಹೆಸರು ಸೇರ್ಪಡೆಯಾದಂದಿನಿಂದ ಖಾದಿಗೆ ಎದ್ದು ನಿಂತುಕೊಳ್ಳಲು ಆಗಲೇ ಇಲ್ಲ. ಖಾದಿ ಮುಳುಗಿಹೋಯಿತು) ಎಂದು ಅನಿಲ್ ವಿಜ್ ಹೇಳಿದ್ದರು. ಮುಂದುವರೆದ ಅವರುಗಾಂಧಿಯವರಿಗೆ ಎಂತಹ ಹೆಸರು ಇದೆ ಅಂದರೆ ಯಾವ ದಿನದಿಂದ ನೋಟಿನಲ್ಲಿ ಅವರ ಚಿತ್ರ ಮುದ್ರಿಸಲು ಶುರುವಾಯಿತೋ ಅಂದಿನಿಂದ ನೋಟಿನ ಅಮೌಲ್ವೀಕರಣವಾಯಿತುಎಂದೂ ಹೇಳಿದ್ದರು. ಕಾಂಗ್ರೆಸ್ ನಾಯಕ ಆರ್.ಎಸ್. ಸುರ್ಜಿವಾಲಾ, ಮಹಾತ್ಮಾ ಗಾಂಧಿಯವರ ಮೊಮ್ಮಗನ ಮಗ ತುಷಾರ್ ಗಾಂಧಿ ವಿಜ್ ಹೇಳಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಬೆನ್ನಲ್ಲೇ ಅನಿಲ್ ವಿಜ್ ಹೇಳಿಕೆಯನ್ನು ಪ್ರಬಲವಾಗಿ ಖಂಡಿಸುವುದಾಗಿ ಹೇಳಿದ ಬಿಜೆಪಿ ನಾಯಕ ಶ್ರೀಕಾಂತ ಶರ್ಮ ಅವರುಅನಿಲ್ ವಿಜ್ ಹೇಳಿಕೆ ಅವರ ವೈಯಕ್ತಿಕ ಹೇಳಿಕೆ, ಅದು ಪಕ್ಷದ ನಿಲುವಲ್ಲ. ಮಹಾತ್ಮಾ ಗಾಂಧಿ ನಮ್ಮ ಐಕಾನ್ಎಂದು ಹೇಳಿದರು. ಅದು ವಿಜ್ ಅವರ ವೈಯಕ್ತಿಕ ಅಭಿಪ್ರಾಯ ಪಕ್ಷಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಪ್ರತಿಕ್ರಿಯಿಸಿದರು. ತೀವ್ರ ಟೀಕೆಗಳ ನಂತರ ಸಚಿವ ಅನಿಲ್ ವಿಜ್ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು ಎಂದು ಬಳಿಕ ಬಂದ ವರದಿಗಳು ಹೇಳಿದವು
2017: ಲಖನೌ: ತೀವ್ರ ಚಳಿಗಾಳಿಯ ಪರಿಣಾಮವಾಗಿ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ 9 ಮಂದಿ ಸಾವನ್ನಪ್ಪಿದ್ದು, ಹಿಮಾಚಲ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣ ಹಿಮಾವೃತಗೊಂಡು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಮುಂದಿನ ಕೆಲವು ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗುವುದು. ಚಳಿ ಇನ್ನಷ್ಟು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತು. ಜನವರಿ 19ರವರೆಗೂ ತಾಪಮಾನ ಇನ್ನಷ್ಟು ಕುಗ್ಗಲಿದ್ದು ಬಳಿಕ ಹವಾಮಾನ ಪರಿಸ್ಥಿತಿ ಸುಧಾರಿಸಬಹುದು ಎಂದು ಹವಾಮಾನ ಕಚೇರಿ ಹೇಳಿತು. ಲಖನೌದಲ್ಲಿ ತಾಪಮಾನ 7 ಡಿಗ್ರಿಗಿಂತಲೂ ಕೆಳಗಿಳಿದಿದ್ದು, ಕೆಲವೆಡೆಗಳಲ್ಲಿ ಶೂನ್ಯಕ್ಕಿಂತಕ್ಕಿಂತಲೂ ಕೆಳಕ್ಕೆ ಹೋಯಿತು. ಇಂತಹ ಪರಿಸ್ಥಿತಿ ಅಭೂತಪೂರ್ವ ಎಂದು ಪ್ರಾದೇಶಿಕ ಹವಾಮಾನ ಕಚೇರಿ ತಿಳಿಸಿತು. ಹಿಮಾಚಲ ಪ್ರದೇಶದಲ್ಲಿ ರಸ್ತೆಗಳಲ್ಲಿ ಹಿಮದ ರಾಶಿ ಬಿದ್ದಿದ್ದು, ಸುಗಮ ವಾಹನ ಸಂಚಾರಕ್ಕಾಗಿ ಹಿಮವನ್ನು ತೆಗೆದು ರಸ್ತೆ ಬದಿಗಳಿಗೆ ಸರಿಸಲಾದ ಚಿತ್ರ ವರದಿಗಳು ಬಂದವು..
 2009: ರಾಜ್ಯದಲ್ಲಿ ಗೋವುಗಳ ಸಾಗಣೆ ಹಾಗೂ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೆ ತರಲಾಗುತ್ತಿದೆ ಎಂದು ಗೃಹ ಸಚಿವ ವಿ.ಎಸ್.ಆಚಾರ್ಯ ಮೈಸೂರಿನಲ್ಲಿ ಹೇಳಿದರು. ಮೈಸೂರು ಪಿಂಜರಾಪೋಲ್ ಸೊಸೈಟಿ ಮಕರ ಸಂಕ್ರಾಂತಿ ಅಂಗವಾಗಿ ಏರ್ಪಡಿಸಿದ ಗೋ ಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗೋವುಗಳ ಹತ್ಯೆ ಮಾಡುವುದನ್ನು ನಿಷೇಧಿಸುವ ಕಾನೂನು ತಿದ್ದುಪಡಿಗೆ ಅಂತಿಮ ರೂಪ ನೀಡಿ ನಿಯಮಾವಳಿ ರೂಪಿಸಲಾಗಿದೆ. ಗೋವುಗಳ ಸಾಗಣೆ, ವಧೆ ನಿಷೇಧದ ಜತೆಗೆ ಗೋ ಸಾಗಿಸುವ ವಾಹನಗಳನ್ನು ಸಂಪೂರ್ಣವಾಗಿ ಸರ್ಕಾರವೇ ಮುಟ್ಟುಗೋಲು ಹಾಕಿಕೊಳ್ಳುವುದು. ಶ್ರೀಗಂಧ, ಅರಣ್ಯ ಸಂಪತ್ತು ಮತ್ತಿತರ ವಸ್ತುಗಳನ್ನು ಸಾಗಿಸುವ ಸಮಯದಲ್ಲಿ ಸಿಕ್ಕಿ ಬೀಳುವ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುವ ಮಾದರಿಯಲ್ಲಿ ಗೋ ಸಾಗಣೆ ವಾಹನಗಳನ್ನು ವಶಪಡಿಸಿಕೊಳ್ಳಲು ಕಾನೂನು ತಿದ್ದುಪಡಿ ತರಲಾಗುತ್ತಿದೆ ಎಂದು ಅವರು ನುಡಿದರು. ಸಂವಿಧಾನದ 48ನೇ ವಿಧಿಯಲ್ಲಿ ಗೋವು, ಗೋವಿನ ಅಂಶಗಳ ರಕ್ಷಣೆ ಆಗಬೇಕು ಎಂದು ಹೇಳಿದೆ. ಈಗಿರುವ ಸಂವಿಧಾನದ ನಿಯಮ ಪ್ರಕಾರವೇ ಗೋವುಗಳ ಸಂರಕ್ಷಣೆಗೆ ಅವಕಾಶ ಇದೆ. ರಾಜ್ಯದಲ್ಲೂ 1964ರಲ್ಲಿ ಗೋ ಸಂರಕ್ಷಣೆ ಕಾಯಿದೆಯನ್ನು ಜಾರಿಗೆ ತರಲಾಗಿದೆ. ಈ ನಿಯಮ ಇದ್ದರೂ ಸಮರ್ಪಕವಾಗಿ ಗೋವುಗಳ ರಕ್ಷಣೆ ಸಾಧ್ಯವಾಗಿಲ್ಲ. ಪ್ರಸ್ತುತ ಇರುವ ನಿಯಮಗಳಲ್ಲಿ ಕೆಲವು ಗೊಂದಲಗಳಿಂದಾಗಿ ಪೊಲೀಸರೂ ಸರಿಯಾದ ರೀತಿಯಲ್ಲಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಇದರಿಂದಾಗಿ ಗೋವುಗಳ ಸಾಗಣೆ, ವಧೆ ಮುಂದುವರಿದಿದ್ದು ತಡೆಯಲಾಗುತ್ತಿಲ್ಲ ಎಂದು ಅವರು ವಿವರಿಸಿದರು. ಈ ಎಲ್ಲಾ ಗೊಂದಲ, ಯಾವುದೇ ಸಂದಿಗ್ಧತೆ, ಘರ್ಷಣೆಗೆ ಅವಕಾಶ ಆಗದಂತೆ ಸ್ಪಷ್ಟವಾಗಿ ಗೋವುಗಳ ವಧೆ ನಿಷೇಧಿಸುವ ಕಾನೂನು ಜಾರಿಗೆ ತರಲಾಗುತ್ತಿದೆ. ಹೊಸ ಕಾನೂನು ಜಾರಿಗೆ ಬರುವವರೆಗೂ ಈಗಿರುವ ನಿಯಮದ ವ್ಯಾಪ್ತಿಯಲ್ಲೇ ಗೋ ವಧೆ ತಡೆಯಲು ಪೊಲೀಸರಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಆಯುಕ್ತರು ಆದೇಶ ಜಾರಿ ಮಾಡಿದ್ದಾರೆ. ಈ ಆದೇಶ ಮೇಲಿನಿಂದ ಕೆಳಹಂತದ ಪೊಲೀಸ್ ಠಾಣೆಗಳವರೆಗೂ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಾ.ಆಚಾರ್ಯ ತಿಳಿಸಿದರು.
2009: ಹಿರಿಯ ವಿದ್ವಾಂಸ ಡಾ.ಎಲ್.ಬಸವರಾಜು ಅವರಿಗೆ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ.ಮುರಿಗೆಪ್ಪ'ನಾಡೋಜ' ಗೌರವವನ್ನು ಮೈಸೂರಿನಲ್ಲಿ ಪ್ರದಾನ ಮಾಡಿದರು. ಡಾ.ಎಲ್.ಬಸವರಾಜು ಅವರ ಮೈಸೂರು ನಗರದ ಜಯಲಕ್ಷ್ಮಿಪುರಂನ ಮನೆಗೆ ಬೆಳಿಗ್ಗೆ 10 ಗಂಟೆಗೆ ಕುಲಸಚಿವ ಪೂಜಾರ ಅವರೊಡನೆ ಮುರಿಗೆಪ್ಪ ಬಂದಾಗ ಸಂಭ್ರಮ ಗರಿಗೆದರಿತ್ತು. ಎಲ್‌ಬಿ ಅವರ ಮನೆಯವರು, ವಿಶ್ವವಿದ್ಯಾಲಯದ ಪಾಂಡುರಂಗಬಾಯಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರೊ.ಸಿ.ಪಿ.ಸಿದ್ದಾಶ್ರಮ ಮತ್ತು ಡಾ.ಕೆ.ಅನಂತರಾಮು ಅವರ ಉಪಸ್ಥಿತಿಯಲ್ಲಿ ಗೌರವ ಪ್ರದಾನ ಮಾಡಲಾಯಿತು.

2009: ಮೂಡಿಗೆರೆ ತಾಲ್ಲೂಕಿನ ವಿವಿಧ ಪ್ರದೇಶಗಳ ರೈತರು ತಮ್ಮ ಬಳಿ ಇದ್ದ ಸಾಕಲು ಆಗದ ಪಶುಗಳನ್ನು ದಾರದಹಳ್ಳಿ ಪಶುಪಾಲನಾ ಇಲಾಖೆ ಹಿರಿಯ ಪಶುಪರೀಕ್ಷಕ ಕ.ದಾ.ಕೃಷ್ಣರಾಜು ಮನವಿಗೆ ಸ್ಪಂದಿಸಿ ಶ್ರೀರಾಘವೇಶ್ವರ ಭಾರತಿ ಸ್ವಾಮಿಗಳ ರಾಮಚಂದ್ರಾಪುರ ಮಠಕ್ಕೆ ದಾನವಾಗಿ ನೀಡಿದರು. ದನಗಳ 50ನೇ ಲೋಡು ಸಂಕ್ರಾಂತಿಯಂದು ಹೊರಡುವ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಸಂಘಟನೆಗಳ ಸದಸ್ಯರು ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಬಳಿ ನಡೆದ ಸರಳ ಸಮಾರಂಭದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಅಲಂಗಾರು ನಾರಾಯಣ ಭಟ್ ಮಾಹಿತಿ ನೀಡಿ ಈದಿನ ಶ್ರೀ ಮಠಕ್ಕೆ 50ನೇ ಲೋಡು ಅಂದರೆ 1000 ದನಗಳನ್ನು ದಾನವಾಗಿ ನೀಡಲಾಗಿದೆ. ಮಠಕ್ಕೆ ಸಾಗಿಸಲು ಎಲ್ಲಾ ರೀತಿಯ ಖರ್ಚುಗಳನ್ನು ಕೃಷ್ಣರಾಜು ಭರಿಸಿದ್ದಾರೆ ಎಂದು ಹೇಳಿದರು. ಪ್ರತಿ ತಿಂಗಳಿಗೆ ಒಂದು ಲೋಡು ದನಗಳನ್ನು ಕೃಷ್ಣರಾಜು ತಾಲ್ಲೂಕಿನ ವಿವಿಧ ಸಂಘಟನೆಗಳ ಸಹಾಯದಲ್ಲಿ ಕಳುಹಿಸಿದ್ದು ಈ ಎಲ್ಲಾ ಪಶುಗಳನ್ನು ಮಠ ಸಾಕುತ್ತಿದೆ. ಅಲ್ಲದೆ ಸಾಕುವವರಿಗೆ ನೀಡುತ್ತಿದೆ. ಸಾಕಲಾಗದವರು ಮತ್ತೆ ಶ್ರೀ ಮಠದ ಗೋಶಾಲೆಗೆ ತಂದು ಬಿಡಬಹುದು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಕಸಾಯಿಖಾನೆಗೆ ಪಶುಗಳನ್ನು ನೀಡದೆ ಮಠಕ್ಕೆ ನೀಡಿ ಎಂದು ಅವರು ಮನವಿ ಮಾಡಿದರು.

2009: 24 ತಾಸುಗಳ ಅವಧಿಯಲ್ಲಿ ಇಸ್ರೇಲ್ ಪಡೆಗಳು ಗಾಜಾಪಟ್ಟಿಯಲ್ಲಿ ಸುಮಾರು 160 ವಾಯು ದಾಳಿಗಳನ್ನು ನಡೆಸಿ, ಪ್ಯಾಲೆಸ್ಟೈನಿನ ಹಮಾಸ್ ಬಂಡುಕೋರರ 60 ನೆಲೆಗಳನ್ನು ಧ್ವಂಸ ಮಾಡಿದವು. ಇದರೊಂದಿಗೆ ಈ ಪ್ರದೇಶದಲ್ಲಿ ಇಸ್ರೇಲಿನ ಪ್ರಾಬಲ್ಯ ಹೆಚ್ಚಿತು. ಡಿಸೆಂಬರ್ 27ರಿಂದ ಗಾಜಾ ಪ್ರದೇಶದ ಸ್ವಾಧೀನಕ್ಕಾಗಿ ಇಸ್ರೇಲ್ ಪಡೆಗಳು ಹಮಾಸ್ ಬಂಡುಕೋರರ ನೆಲೆಗಳ ಮೇಲೆ ಭೂ ಹಾಗೂ ವಾಯು ದಾಳಿ ನಡೆಸುತ್ತಿವೆ. ಈವರೆಗೆ 947 ಪ್ಯಾಲೆಸ್ತೀನಿಯನ್ನರು ಹತರಾದರು.

2008: 1996ರಿಂದ 2006ರವರೆಗೆ ಕೈಗೊಂಡ ಉಪಗ್ರಹಗಳ ಸಮೀಕ್ಷೆಯಿಂದ ದಕ್ಷಿಣ ಧ್ರುವದಲ್ಲಿ (ಅಂಟಾರ್ಕ್ಟಿಕ) ಮಂಜು ಕರಗುವ ಪ್ರಮಾಣ ಶೇ 75ರಷ್ಟು ಹೆಚ್ಚಿರುವುದು ಬೆಳಕಿಗೆ ಬಂದಿತು. ನೀರ್ಗಲ್ಲುಗಳು ಸಮುದ್ರದತ್ತ ಸರಿಯುವ ಪ್ರಮಾಣವೂ ಹೆಚ್ಚಿದೆ ಅಧ್ಯಯನ ಹೇಳಿತು. ಕಳೆದ ಒಂದು ದಶಕದಲ್ಲಿ ಸಮುದ್ರದ ಮಟ್ಟವೂ ಏರಿದೆ. 20ನೇ ಶತಮಾನದಲ್ಲಿ ಸಮುದ್ರ ಮಟ್ಟ ಏರಿಕೆ ಪ್ರಮಾಣ ಪ್ರತಿವರ್ಷ 1.8 ಮಿ.ಮೀ. ಇದ್ದರೆ, ಈ ದಶಕದಲ್ಲಿ ಈ ಏರಿಕೆ ಪ್ರಮಾಣ ವರ್ಷವೊಂದಕ್ಕೆ 3.4 ಮಿ.ಮೀ.ನಷ್ಟು ಆಗಿದೆ. ಮಂಜುಗಡ್ಡೆ ಕರಗುವ ವೇಗ ಮುಂದಿನ ದಶಕದಲ್ಲಿ ಇನ್ನಷ್ಟು ಹೆಚ್ಚಬಹುದು ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಎರಿಕ್ ರಿಗ್ ನಾಟ್ ತಿಳಿಸಿದರು.

2008: ಪುತ್ತಿಗೆ ಪರ್ಯಾಯ ವಿರುದ್ಧ ಉಡುಪಿಯ ಹೆಚ್ಚವರಿ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ದಾವೆಯನ್ನು ನ್ಯಾಯಾಧೀಶ ಚಲುವಮೂರ್ತಿ ಅವರು ತಳ್ಳಿ ಹಾಕಿದರು. ಇದರಿಂದ `ಸುಗಮ' ಪರ್ಯಾಯಕ್ಕೆ ಎದುರಾಗಿದ್ದ ಕಾನೂನಿನ ತೊಡಕು ತತ್ಕಾಲಕ್ಕೆ ದೂರವಾಯಿತು. ಪೇಜಾವರ ಹಾಗೂ ಪುತ್ತಿಗೆ ಶ್ರೀಗಳು ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದರು.

2008: ತನ್ನ ಚಂದಾದಾರರನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲು ಭಾರತೀಯ ಸಂಪರ್ಕ ನಿಗಮ ಲಿಮಿಟೆಡ್ (ಬಿಎಸ್ಸೆನ್ನೆಲ್) ನಿರ್ಧರಿಸಿತು. `ಇದರಿಂದ ದೇಶಾದ್ಯಂತ ಇರುವ 3.40 ಕೋಟಿ ಬಿಎಸ್ಸೆನ್ನೆಲ್ ಚಂದಾದಾರರಿಗೆ (ದೂರವಾಣಿ ಹೊಂದಿರುವವರಿಗೆ) ಲಾಭವಾಗಲಿದೆ' ಎಂದು ಕಂಪೆನಿಯ ಅಧ್ಯಕ್ಷ ಕುಲದೀಪ್ ಗೋಯಲ್ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲಿ ಪ್ರಕಟಿಸಿದರು. ಯೋಜನೆಯ ಫಲವಾಗಿ `ಬಿಎಸ್ಸೆನ್ನೆಲ್ ಚಂದಾದಾರರು ಅಪಘಾತದಲ್ಲಿ ಶಾಶ್ವತ ಅಂಗವೈಕಲ್ಯಕ್ಕೆ ಈಡಾದರೆ ಅಥವಾ ಮೃತಪಟ್ಟರೆ ಅವರಿಗೆ ರೂ.50,000ವರೆಗೆ ವಿಮಾ ಪರಿಹಾರ ದೊರೆಯುವುದು. ವಿಮೆ ಸೇವೆ ಒದಗಿಸುವ ಬಜಾಜ್-ಅಲಯನ್ಸ್ ಗೆ ಸ್ವತಃ ಬಿಎಸ್ಸೆನ್ನೆಲ್ ಪ್ರೀಮಿಯಮ್ ನೀಡಲಿದ್ದು, ಬಿಎಸ್ಸೆನ್ನೆಲ್ ಸ್ಥಿರ, ಮೊಬೈಲ್ (ಪ್ರೀ ಪೇಡ್ ಹಾಗೂ ಪೋಸ್ಟ್ ಪೇಡ್) ಹಾಗೂ ನಿಸ್ತಂತು (ಡಬ್ಲೂ ಎಲ್ ಎಲ್) ಬಳಕೆದಾರರು ವಿಮಾ ವ್ಯಾಪ್ತಿಗೆ ಒಳಪಡುತ್ತಾರೆ.

2008: ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಬ್ರಾಡ್ ಹಾಗ್ ಅವರು ತಮ್ಮ ಆಟಗಾರರ ವಿರುದ್ಧ ನಿಂದನೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ನೀಡಿದ್ದ ದೂರನ್ನು `ಟೀಮ್ ಇಂಡಿಯಾ' ಆಡಳಿತ ಹಿಂದಕ್ಕೆ ಪಡೆಯಿತು. ಸರಣಿಯ ಮುಂಬರುವ ಪಂದ್ಯಗಳು ಸುಗಮವಾಗಿ ನಡೆಯಲಿ ಎಂಬ ಕಾರಣಕ್ಕಾಗಿ ಹಾಗ್ ವಿರುದ್ಧದ ದೂರನ್ನು ಹಿಂದೆ ಪಡೆಯಲಾಗಿದೆ ಎಂದು ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಪ್ರಕಟಿಸಿದರು.

2008: ಕೀನ್ಯಾದ ಅಧ್ಯಕ್ಷರಾಗಿ ಎಂ. ಕಿಬಾಕಿ ಅವರು ಪುನರಾಯ್ಕೆಗೊಂಡ ರೀತಿಯನ್ನು ವಿರೋಧಿಸಿ ವಿವಿಧ ಪಕ್ಷಗಳು ಎರಡು ವಾರಗಳಿಂದ ನಡೆಸಿದ ಚಳವಳಿಯಲ್ಲಿ ಸತ್ತವರ ಸಂಖ್ಯೆ 600ಕ್ಕೆ ಏರಿತು.

2007: ವಿಶ್ವದ ಬೃಹತ್ ಪರಿಹಾರ ಸಂಸ್ಥೆಗಳಾದ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ತಮ್ಮ ಹಳೆಯ ಲಾಂಛನಗಳ ಜೊತೆಗೆ ಇನ್ನೊಂದು ನೂತನ ಲಾಂಛನ ಬಳಕೆ ಆರಂಭಿಸಿದವು. ಹಿಂದೆ ರೆಡ್ ಕ್ರಾಸ್ ಬಳಸುತ್ತಿದ್ದ ಕೆಂಪು ಬಣ್ಣದ ಕ್ರಾಸ್ ಮತ್ತು ರೆಡ್ ಕ್ರೆಸೆಂಟಿನ ಅರ್ಧ ಚಂದ್ರ ಲಾಂಛನಗಳ ಜೊತೆಗೆ ಬಿಳಿಯ ಬಣ್ಣದ ಹಿನ್ನೆಲೆಯಲ್ಲಿ ಕೆಂಪು ಹರಳಿನ (ಕ್ರಿಸ್ಟಲ್) ಚಿತ್ರವಿರುವ ನೂತನ ಲಾಂಛನ ಬಳಕೆಗೆ ಬಂತು.

2007: ಹಿಂದಿ ಚಿತ್ರೋದ್ಯಮದಲ್ಲಿ ಬಹಳ ದಿನಗಳಿಂದ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ಡಿನ ಖ್ಯಾತ ತಾರೆಯರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ಅವರ ಮದುವೆ ನಿಶ್ಚಿತಾರ್ಥವು ಮುಂಬೈಯಲ್ಲಿ ಸರಳ ಸಮಾರಂಭದಲ್ಲಿ ನೆರವೇರಿತು.

2007: ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಯನ್ನು ಕಡ್ಡಾಯಗೊಳಿಸಬೇಕು ಎಂದು ಸ್ಯಾಮ್ ಪಿತ್ರೋಡಾ ಅಧ್ಯಕ್ಷತೆಯ ಜ್ಞಾನ ಆಯೋಗವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಒಂದನೇ ತರಗತಿಯಿಂದ ಇಂಗ್ಲಿಷ್ ಕಡ್ಡಾಯಗೊಳಿಸುವ ಕ್ರಿಯಾಯೋಜನೆಯನ್ನು ರಾಜ್ಯ ಸರ್ಕಾರ ಸಿದ್ಧ ಪಡಿಸಿತು.

2007: ಭಾರತದ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಕೋನಕುಪ್ಪಕಟ್ಟಿಲ್ ಗೋಪಿನಾಥನ್ ಬಾಲಕೃಷ್ಣನ್ ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಅಶೋಕ ಹಾಲಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಾಲಕೃಷ್ಣನ್ ಅವರಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಪ್ರಮಾಣ ವಚನ ಬೋಧಿಸಿದರು.

2007: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಮೊಮ್ಮಗ ಪ್ರಫುಲ್ ಮಾಧವ ಚಿಪ್ಲುಂಕರ್ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ ರಸ್ತೆಗಳಲ್ಲಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದುದನ್ನು ಮಹಾರಾಷ್ಟ್ರ ನವನಿರ್ಮಾಣ ಸೇನೆ ಪತ್ತೆ ಹಚ್ಚಿತು. ಮುಂಬೈಯ ಸರಸ್ ಬಾಗ್ ಉದ್ಯಾನದ ಬಳಿ ಪ್ರಫುಲ್ ಅವರನ್ನು ಪತ್ತೆ ಹಚ್ಚಿದ ಸೇನೆ ಗುರುತು ಖಾತರಿ ಪಡಿಸಿಕೊಂಡು ಪುನರ್ವಸತಿಗೆ ವ್ಯವಸ್ಥೆ ಮಾಡಿತು. ಇವರು ಸಾವರ್ಕರ್ ಪುತ್ರಿಯ ಮಗ.

2007: ಅರ್ಜುನ ಪ್ರಶಸ್ತಿ ವಿಜೇತ ಅಂಗವಿಕಲ ಅಥ್ಲೀಟ್ ಯಧುವೇಂದ್ರ ವಸಿಷ್ಠ (39) ಉತ್ತರ ಪ್ರದೇಶದ ಘಾಜಿಯಾಬಾದಿನಲ್ಲಿ ಹೃದಯಾಘಾತದಿಂದ ನಿಧನರಾದರು. 1998ರ ಬ್ಯಾಂಕಾಂಕ್ ಮತ್ತು 2002ರ ಬುಸಾನ ಏಷ್ಯನ್ ಕ್ರೀಡಾಕೂಟಗಳಲ್ಲಿ ಎಫ್ -44 ವಿಭಾಗದ ಶಾಟ್ ಪುಟ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ವಸಿಷ್ಠ 2000ದಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದರು.

2007: ಮೂಲ್ಕಿ ಪಟ್ಟಣದ ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಮದ್ ರಫೀಕ್ ಯಾನೆ ಮೂಲ್ಕಿ ರಫೀಕ್ ಉಡುಪಿ ರೈಲು ನಿಲ್ದಾಣದ ಬಳಿ ನಡೆದ ಪೊಲೀಸರ ಜೊತೆಗಿನ ಗುಂಡಿನ ಘರ್ಷಣೆಯಲ್ಲಿ ಹತನಾದ.

2006: ಬೆಂಗಳೂರಿನ ಸುರಭಾರತಿ ಸಂಸ್ಕತಿ ಮತ್ತು ಸಾಂಸ್ಕತಿಕ ಪ್ರತಿಷ್ಠಾನವು ಖ್ಯಾತ ಗಾಯಕ ಡಾ. ಎಂ. ಬಾಲಮುರಳಿಕೃಷ್ಣ ಅವರಿಗೆ ಸಂಗೀತ ರತ್ನಾಕರ ಹಾಗೂ ಕೆ. ನಾರಾಯಣ ಭಟ್ ಶಾಸ್ತ್ರ ರತ್ನಾಕರ ಪ್ರಶಸ್ತಿಯನ್ನು ನೀಡಿ ಗೌರವಿಸಿತು.

2006: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಈದಿನ ರಾತ್ರಿ ಸಹಸ್ರ ಚಂದ್ರದರ್ಶನ ಪೂರೈಸಿದರು. ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸಹಿತ ಹಲವಾರು ಗಣ್ಯರು ಹಾಜರಿದ್ದರು.

1991: ಸಂಗೀತ ನಿರ್ದೇಶಕ ಚಿತ್ರಗುಪ್ತ ನಿಧನರಾದರು.

1977: ರೇಸಿಂಗ್ ಪಟು ನಾರಾಯಣ್ ಕಾರ್ತಿಕೇಯನ್ ಹುಟ್ಟಿದ ದಿನ. ಫಾರ್ಮ್ಯುಲಾ ಥ್ರೀ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಂಡ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆ ಇವರದು.

1969: ಮದ್ರಾಸ್ ರಾಜ್ಯಕ್ಕೆ ಅಧಿಕೃತವಾಗಿ ತಮಿಳುನಾಡು ಎಂಬುದಾಗಿ ಮರುನಾಮಕರಣ ಮಾಡಲಾಯಿತು.

1954: ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಚಾಂಪಿಯನ್ ಬೇಸ್ ಬಾಲ್ ಆಟಗಾರ ಜೊ ಡೆಮಾಗ್ಗಿಯೊ ಅವರನ್ನು ಮದುವೆಯಾದರು.

1953: ವೈ.ಸಿ. ಭಾನುಮತಿ ಜನನ.

1950: ಕಲಾವಿದೆ ಪದ್ಮಜಾ ಪ್ರಕಾಶ್ ಜನನ.

1946: ಕಲಾವಿದ ರಾಮಕೃಷ್ಣಾಚಾರ್ ಜನನ.

1944: ಕಾಡಣ್ಣ ಹೊಸಟ್ಟಿ ಜನನ.

1942: ಕಲಾವಿದ ನಾಗಮಂಗಲಯ್ಯ ಜನನ.

1935: ಕಲಾವಿದೆ ಸುಶೀಲಮ್ಮ ಜನನ.

1930: ಕುಂದಾನಿ ಸತ್ಯನ್ ಜನನ.

1921: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ (ಪಾಪು) ಅವರು ಹಾವೇರಿ ತಾಲ್ಲೂಕಿನ ಕುರುಬಗೊಂಡಹಳ್ಳಿಯಲ್ಲಿ ಸಿದ್ದಲಿಂಗಪ್ಪ-ಮಲ್ಲಮ್ಮ ದಂಪತಿಯ ಪುತ್ರನಾಗಿ ಜನಿಸಿದರು. ಕಾನೂನು ಪದವಿ ಪಡೆದು ವಿಜಾಪುರದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಕಕ್ಷಿಗಾರರು ಸಿಗದೇ ಹೋದಾಗ ಮುಂಬೈಗೆ ಪಯಣ. ಅಲ್ಲಿ ಪತ್ರಿಕೋದ್ಯಮದ ಹುಚ್ಚು. ಕ್ಯಾಲಿಫೋರ್ನಿಯಾಕ್ಕೆ ತೆರಳಿ ಪತ್ರಿಕೋದ್ಯಮದ ಎಂಎಸ್ಸಿ ಮುಗಿಸಿ ಬಂದು ಪತ್ರಿಕಾರಂಗಕ್ಕೆ ಪ್ರವೇಶ. 1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರೀ ಮಾಸಿಕ ಇತ್ಯಾದಿ ಪತ್ರಿಕೆಗಳ ಸಂಪಾದಕತ್ವ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷಸ್ಥಾನ. ಹಲವಾರು ಸಾಹಿತ್ಯ ಕೃತಿಗಳನ್ನೂ ಪಾಪು ರಚಿಸಿದ್ದು ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿದಳು- ಕಥಾಸಂಕಲನಗಳು, ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು - ಜೀವನ ಚರಿತ್ರೆ, ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು- ಪ್ರಬಂಧ ಸಂಕಲನ ಅವರ ಪ್ರಮುಖ ಕೃತಿಗಳು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ರಾಜ್ಯಸಭೆ ಸದಸ್ಯತ್ವ, 2003ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಸವಶ್ರೀ ಪ್ರಶಸ್ತಿ, ಟಿ ಎಸ್ ಆರ್ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಇತ್ಯಾದಿ ಗೌರವ-ಪ್ರಶಸ್ತಿಗಳು ಅವರಿಗೆ ಲಭಿಸಿವೆ.

1920: ಕರ್ನಾಟಕ ಸಂಗೀತ ಕ್ಷೇತ್ರದ ಖ್ಯಾತ ಗಾಯಕ ಆರ್. ಕೆ. ಶ್ರೀಕಂಠನ್ ಅವರು ಕೃಷ್ಣ ಶಾಸ್ತ್ರಿಗಳು- ಸಣ್ಣಕ್ಕ ದಂಪತಿಯ ಮಗನಾಗಿ ರುದ್ರಪಟ್ಟಣದಲ್ಲಿ ಸಂಕ್ರಾಂತಿಯ ಈ ದಿನ ಜನಿಸಿದರು.

1918: ಕಲಾವಿದ ಮಲ್ಲಯ್ಯ ಸ್ವಾಮಿ ಜನನ.

1892: ಪ್ರೊಫೆಸರ್ ದಿನಕರ್ ಬಲವಂತ್ ದೇವಧರ್ (1892-1993) ಹುಟ್ಟಿದ ದಿನ. ಭಾರತೀಯ ಕ್ರಿಕೆಟಿನ `ಹಿರಿಯಜ್ಜ' (ಗ್ರ್ಯಾಂಡ್ ಓಲ್ಡ್ ಮ್ಯಾನ್) ಎಂದೇ ಇವರು ಖ್ಯಾತರಾಗಿದ್ದಾರೆ.

1882: ಕುಟುಂಬ ಯೋಜನೆ, ಲೈಂಗಿಕ ಶಿಕ್ಷಣದ ಪಿತಾಮಹ ಆರ್.ಡಿ. ಕರ್ವೆ ಜನಿಸಿದರು.

1863: `ದಿ ಬೋಸ್ಟನ್ ವೀಕ್ಲಿ ಜರ್ನಲ್' ಮರದ ಪಲ್ಪಿನಿಂದ (ವುಡ್ ಪಲ್ಪ್) ತಯಾರಿಸಲಾದ ಕಾಗದದಲ್ಲಿ ಮುದ್ರಣಗೊಂಡಿತು. ಅಮೆರಿಕದ ಸುದ್ದಿ ಪತ್ರಿಕೆ ಈ ವಸ್ತುವಿನಲ್ಲಿ ಮುದ್ರಣಗೊಂಡದ್ದು ದಾಖಲಾದ ಮೊತ್ತ ಮೊದಲ ಘಟನೆ ಇದು.

1761: ಮರಾಠಾ ಸೇನೆಯು ಪಾಣಿಪತ್ತಿನಲ್ಲಿ ಆಕ್ರಮಣ ಎಸಗಿದ ಅಹಮದ್ ಶಹಾ ದುರ್ರಾನಿಯ ಸೇನೆಯನ್ನು ಎದುರಿಸಿತು. ಮೂರನೇ `ಪಾಣಿಪತ್ ಯುದ್ಧ' ಎಂದೇ ಖ್ಯಾತಿ ಪಡೆದ ಈ ಭೀಕರ ಸಮರದಲ್ಲಿ ಮರಾಠಾ ಸೇನೆ ಭಾರೀ ಸೋಲು ಅನುಭವಿಸಿತು. ಇದರಿಂದ ಉಂಟಾದ ಅರಾಜಕತೆ ಭವಿಷ್ಯದಲ್ಲಿ ಬ್ರಿಟಿಷರ ಆಡಳಿತಕ್ಕೆ ದಾರಿ ಮಾಡಿಕೊಟ್ಟಿತು.

1742: ಎಡ್ಮಂಡ್ ಹ್ಯಾಲಿ (1656-1742) ಹುಟ್ಟಿದ ದಿನ. ಖಗೋಳ ತಜ್ಞ ಹಾಗೂ ಗಣಿತ ತಜ್ಞನಾದ ಈತ ಕಂಡು ಹಿಡಿದ ಧೂಮಕೇತುವಿಗೆ ಈತನ ಹೆಸರನ್ನೇ ಇಡಲಾಗಿದೆ.

1551: ಚರಿತ್ರಕಾರ ಅಬುಲ್ ಫಝಲ್ (1551-1602) ಹುಟ್ಟಿದ. `ಐನ್-ಎ-ಅಕ್ಬರಿ' ಗ್ರಂಥದ ಕರ್ತೃವಾದ ಈತ ಮೊಘಲ್ ಚಕ್ರವರ್ತಿ ಅಕ್ಬರನ ನಿಕಟವರ್ತಿ. ರಾಜಕುಮಾರ ಸಲೀಂ (ಜಹಾಂಗೀರ್) ಈತನನ್ನು ಕೊಲ್ಲಿಸಿದ.

No comments:

Post a Comment