ನಾನು ಮೆಚ್ಚಿದ ವಾಟ್ಸಪ್

Friday, January 11, 2019

ಇಂದಿನ ಇತಿಹಾಸ History Today ಜನವರಿ 11

ಇಂದಿನ ಇತಿಹಾಸ History Today ಜನವರಿ 11

2019: ನವದೆಹಲಿ:  ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಅಧಿಕಾರಿಗಳ ನಡುವಿನ ಕಲಹವು ಸದ್ಯಕ್ಕೆ ತಣ್ಣಗಾಗುವಂತೆ ಕಾಣಲಿಲ್ಲ.  ಸಿಬಿಐ ಮಾಜಿ ನಿರ್ದೇಶಕ ಅಲೋಕ್ಕುಮಾರ್ವರ್ಮಾ ಪೊಲೀಸ್ಸೇವೆಗೆ ರಾಜೀನಾಮೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಯಿಂದ ಕೇಂದ್ರ ತನಿಖಾ ಸಂಸ್ಥೆಯ ನಿರ್ದೇಶಕ ಸ್ಥಾನ ದಿಂದ ವಜಾ ಬಳಿಕ ಅವರನ್ನು ಹೋಂಗಾರ್ಡ್ಸ್ಮತ್ತು ಅಗ್ನಿಶಾಮಕ ಸೇವೆಗಳ ಮಹಾ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಅದಾದ ಮಾರನೇ ದಿನವೇ ಅವರು ತಮ್ಮ ಹುದ್ದೆಗೆ ಗುಡ್ಬೈ ಹೇಳಿದರು. "ಸಹಜ ನ್ಯಾಯ ನಿರಾಕರಿಸಲಾಗಿದೆ ಮತ್ತು ಒಬ್ಬ ವ್ಯಕ್ತಿ ಮಾಡಿದ ಸುಳ್ಳು ಆರೋಪಗಳನ್ನು ನಂಬಿ ನನ್ನನ್ನು ವರ್ಗಾಯಿಸಲಾಯಿತು' ಎಂದು ಅವರು ಕೇಂದ್ರ ಸರ್ಕಾರಕ್ಕೆ ಬರೆದ ರಾಜೀನಾಮೆ ಪತ್ರದಲ್ಲಿ ದೂರಿದರು. ಸೇವೆಗೇ ವಿದಾಯ: ಎಲ್ಲರೂ ಸೇರಿಕೊಂಡು ಆತ್ಮ ವಿಮರ್ಶೆ ಮಾಡಬೇಕಾದ ಸಮಯವಿದು ಎಂದು ಅಲೋಕ್ವರ್ಮಾ ಹೇಳಿಕೊಂಡಿದ್ದು, ಆಯ್ಕೆ ಸಮಿತಿ ಕೇಂದ್ರ ಜಾಗೃತ ದಳ (ಸಿವಿಸಿ) ಸಲ್ಲಿಸಿರುವ ತನಿಖಾ ವರದಿಯನ್ನು ಪರಾಮರ್ಶೆ ನಡೆಸಿಯೇ ಇಲ್ಲ ಎಂದು ಆರೋಪಿಸಿದರು.  ಸಹಜ ನ್ಯಾಯ ನಿರಾಕರಿಸಲಾಗಿದೆೆ ಎಂದು ಹೇಳಿಕೊಂಡಿರುವ ಅವರು, ತಮ್ಮನ್ನು ತಕ್ಷಣ ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಕೋರಿದರು. ಹೋಂ ಗಾರ್ಡ್ಸ್ಮತ್ತು ಅಗ್ನಿಶಾಮಕ ಸೇವೆಗಳ ವಿಭಾಗದ ಮಹಾ ನಿರ್ದೇಶಕ ಸ್ಥಾನವನ್ನು ವಹಿಸಿಕೊಳ್ಳುವ ವಯೋಮಿತಿ ದಾಟಿರುವುದಾಗಿ ರಾಜೀನಾಮೆ ಪತ್ರದಲ್ಲಿ  ಅವರು ತಿಳಸಿದರು.  ಅರುಣಾಚಲ ಪ್ರದೇಶ, ಗೋವಾ ಮತ್ತು ಮಿಜೋರಾಂ, ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಕೇಡರ್ ಐಪಿಎಸ್ಅಧಿಕಾರಿಯಾಗಿರುವ ವರ್ಮಾ, ದಿಲ್ಲಿ  ಪೊಲೀಸ್ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದು, .31ರಂದು ಸಿಬಿಐ ನಿರ್ದೇಶಕ ಹುದ್ದೆಯಿಂದ ನಿವೃತ್ತರಾಗಲಿದ್ದರು2019: ನವದೆಹಲಿ:  ಲಂಚ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐನ ವಿಶೇಷ ನಿರ್ದೇಶಕ ರಾಕೇಶ್ಅಸ್ಥಾನಾ ವಿರುದ್ಧ ದಾಖಲಾಗಿರುವ ಎಫ್ಐಆರ್ಅನ್ನು ರದ್ದು ಮಾಡಲು ದೆಹಲಿ ಹೈಕೋರ್ಟ್ನಿರಾಕರಿಸಿತು. ಜತೆಗೆ ತನಿಖೆಯಿಂದ ಯಾವುದೇ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ನಜ್ಮಿ ವಜಿರಿ ನೇತೃತ್ವದ ನ್ಯಾಯಪೀಠ ಹೇಳಿತು. ಇದರ ಜತೆಗೆ ಸಿಬಿಐ ಡಿಎಸ್ಪಿ ದೇವೇಂದ್ರ ಕುಮಾರ್ಮತ್ತು ಮಧ್ಯವರ್ತಿ ಮನೋಜ್ಪ್ರಸಾದ್ವಿರುದ್ಧದ ಎಫ್ಐಆರ್ಕೂಡ ರದ್ದು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿತು.  ಅಸ್ಥಾನಾ ವಿರುದ್ಧದ ಪ್ರಕರಣದ ತನಿಖೆಯನ್ನು 10 ವಾರಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಿಬಿಐಗೆ ನ್ಯಾಯಪೀಠ ಆದೇಶಿಸಿತು. ಹೈದರಾಬಾದ್ಮೂಲಕದ ಉದ್ಯಮಿ ಸತೀಶ್ಬಾಬು ಸನ ಅವರ ದೂರಿನ ಆಧಾರದಲ್ಲಿ ಅಸ್ಥಾನಾ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿತ್ತು. 2018 ಡಿ.20ರಂದು ದೆಹಲಿ ಹೈಕೋರ್ಟ್ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು. ವಿಶೇಷ ನಿರ್ದೇಶಕರ ವಿರುದ್ಧ ಸನಾ ಸುಲಿಗೆ, ಭ್ರಷ್ಟಾಚಾರದ ಆರೋಪ ಮಾಡಿದ್ದರು



2019: ನವದೆಹಲಿ: ಮುಂಬರುವ ೨೦೧೯ರ ಲೋಕಸಭಾ ಚುನಾವಣೆಯನ್ನು ಮೂರನೇ ಪಾಣಿಪತ್ ಯುದ್ಧಕ್ಕೆ ಹೋಲಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಚುನಾವಣೆಯು ಎರಡು ಸಿದ್ಧಾಂತಗಳ ನಡುವಣ ಹೋರಾಟವಾಗಲಿದೆ ಎಂದು ಘೋಷಿಸಿದರು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷ ಶನಿವಾರ ಮೈತ್ರಿಯನ್ನು ಅಂತಿಮಗೊಳಿಸಿ ಘೋಷಣೆ ಮಾಡಲು ಸಿದ್ಧವಾಗಿರುವ ವೇಳೆಯಲ್ಲೇ ಬಿಜೆಪಿಮೂರನೇ ಪಾಣಿಪತ್ ಸಮರ ಪ್ರಸ್ತಾಪ ಮಾಡಿತು. ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪಕ್ಷದ ಎರಡು ದಿನಗಳ ರಾಷ್ಟ್ರೀಯ ಮಂಡಳಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ  ಬಿಜೆಪಿ ಅಧ್ಯಕ್ಷರುಬಿಜೆಪಿಯ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಬಡವರ ಏಳಿಗೆ ವಿಚಾರ ಒಂದು ಕಡೆಯಾದರೆ, ಇದಕ್ಕೆ ವಿರುದ್ಧವಾಗಿ ಕೇವಲ ಅಧಿಕಾರಕ್ಕಾಗಿ ಪ್ರತಿಸ್ಪರ್ಧಿಗಳು ಒಟ್ಟಾಗುತ್ತಿದ್ದಾರೆ ಎಂದು ಹೇಳಿದರು. ಪರಸ್ಪರ ಕಡು ವಿರೋಧಿಗಳುಮಹಾ ಮೈತ್ರಿ ರಚಿಸಿಕೊಳ್ಳಲು ಒಂದಾಗುತ್ತಿದ್ದಾರೆ. ಅವರಿಗೆ ನೀತಿಯೂ ಇಲ್ಲ, ಕಾರ್ಯಕ್ರಮವೂ ಇಲ್ಲ ಅಥವಾ ರಾಷ್ಟ್ರವ್ಯಾಪಿ ಪ್ರಭಾವವೂ ಇಲ್ಲ ಎಂದು ಅಮಿತ್ ಶಾ ನುಡಿದರು. ೨೦೧೪ರ ಮಹಾ ಚುನಾವಣೆಯಲ್ಲಿ ಅವರೆಲ್ಲರನ್ನೂ ಬಿಜೆಪಿ ಪರಾಭವಗೊಳಿಸಿತ್ತು ಎಂದು ನುಡಿದ ಅವರು ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಇನ್ನೂ ಹೆಚ್ಚಿನ ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದರು. ಲೋಕಸಭೆಗೆ ೮೦ ಸದಸ್ಯರನ್ನು ಕಳಿಸುವ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಕಳೆದ ಬಾರಿ ೭೧ ಸ್ಥಾನಗಳಲ್ಲಿ ಜಯಗಳಿಸಿತ್ತು. ಸಾಮಾನ್ಯ ವರ್ಗದ ಎಲ್ಲ ಬಡವರಿಗೆ ನೌಕರಿ ಮತ್ತು ಶಿಕ್ಷಣದಲ್ಲಿ ಶೇಕಡಾ ೧೦ ಮೀಸಲಾತಿಯನ್ನು ಕಲ್ಪಿಸುವ ಮೂಲಕ ಮೋದಿ ಸರ್ಕಾರವು ಕೋಟ್ಯಂತರ ಯುವಕರ ಕನಸುಗಳನ್ನು ನನಸು ಮಾಡಿದೆ ಎಂದು ಹೇಳಿದ ಶಾ, ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ ಮಹತ್ವದ ಮಸೂದೆಗಳನ್ನು ಒಂದು ಎಂದು ಬಣ್ಣಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಸೇರಿದಂತೆ ಪಕ್ಷದ ಉನ್ನತ ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಉತ್ತರ ಪ್ರದೇಶದಲ್ಲಿ ಕಡು ವೈರಿಗಳು ಒಂದಾಗಲು ಕಾರಣ ಒಂದೇ ಮೋದಿ ಅವರನ್ನು ಪರಾಭವಗೊಳಿಸುವುದು. ಆದರೆ ಪ್ರಧಾನಿ ಮೋದಿ ಅವರನ್ನು ಪರಾಭವಗೊಳಿಸಲು ಅವರಿಗೆ ಸಾಧ್ಯವೇ ಇಲ್ಲ ಎಂದು ಶಾ ಗುಡುಗಿದರುಒಂದಾನೊಂದು ಕಾಲದಲ್ಲಿ ಒಂದೆಡೆ ಕಾಂಗ್ರೆಸ್ ಇದ್ದರೆ ಉಳಿದ ಕಡೆ ಎಲ್ಲ ಪಕ್ಷಗಳಿದ್ದವು. ಅಂದರೆ ಕಾಂಗ್ರೆಸ್ ವರ್ಸಸ್ ಆಲ್. ಈಗ ಪರಿಸ್ಥಿತಿ ಉಲ್ಟಾ ಆಗಿದೆ. ಈಗ ಮೋದಿ ವರ್ಸಸ್ ಎವರಿಬಡಿ ಎಲ್ಸ್. ಮೋದಿ ವಿರುದ್ಧ ಪ್ರತಿಯೊಬ್ಬರೂ. ಏಕೆಂದರೆ ಪ್ರಧಾನಿ ಮೋದಿ ಅವರನ್ನು ಕಿತ್ತು ಹಾಕುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಇದು ಮೋದಿ ಅವರ ಶಕ್ತಿಯ ಅಂಗೀಕಾರ ಎಂದು ಬಿಜೆಪಿ ಅದ್ಯಕ್ಷ ನುಡಿದರು. ೨೦೧೯ರ ಚುನಾವಣೆಯ ಮಹತ್ವವನ್ನು ಒತ್ತಿ ಹೇಳಿದ ಶಾ, ಇದನ್ನು ಮೂರನೇ ಪಾಣಿಪತ್ ಯುದ್ಧಕ್ಕೆ ಹೋಲಿಸಿದರು. ಕೆಲವು ಯುದ್ಧಗಳ ಪರಿಣಾಮ ಹಲವಾರು ಶತಮಾನಗಳ ಕಾಲ ಉಳಿದುಬಿಡುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಅವರು ಬಿಜೆಪಿ ಕಾರ್ಯಕರ್ತರನ್ನು ಎಚ್ಚರಿಸಿದರು.೧೩೧ ಯುದ್ಧಗಳಲ್ಲಿ ವಿಜಯ ಸಾಧಿಸಿದ ಬಳಿಕ ಮರಾಠರು ಒಂದು ಯುದ್ಧದಲ್ಲಿ ಸೋತುಬಿಟ್ಟರು. ಆದರೆ ಅದಕ್ಕೆ ನಾವು ಭಾರೀ ಬೆಲೆ ತೆರಬೇಕಾಯಿತು. ೨೦೦ ವರ್ಷಗಳ ಕಾಲ ಸಾಮ್ರಾಜ್ಯಶಾಹಿ ಗುಲಾಮತನವನ್ನು ರಾಷ್ಟ್ರ ಅನುಭವಿಸಿತು ಎಂದು ಶಾ ನೆನಪಿಸಿದರು. ಮೂರನೇ ಪಾಣಿಪತ್ ಯುದ್ಧ ೧೭೬೧ರಲ್ಲಿ ಮರಾಠರು ಮತ್ತು ಆಫ್ಘಾನ್ ದೊರೆ ಅಹ್ಮದ್ ಶಾ ಅಬಿದಾಲಿ ಮಧ್ಯೆ ನಡೆದಿತ್ತು. ಯುದ್ಧದಲ್ಲಿ ಮರಾಠರು ಪರಾಭವಗೊಂಡಿದ್ದರು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಳ್ಳುವುದರಿಂದ ಬಿಜೆಪಿಯ ಅವಕಾಶಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಆಗುವುದಿಲ್ಲ. ಪಕ್ಷವು ೨೦೧೪ರ ೭೧ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಾರಿ ಗೆಲ್ಲುವುದು ಎಂದು ಶಾ ಶನಿವಾರ ಎಸ್ಪಿ - ಬಿಎಸ್ಪಿ ಮೈತ್ರಿ ಘೋಷಣೆಯ ಹಿನ್ನೆಲೆಯಲ್ಲಿ ನುಡಿದರು. ರಾಮ ಮಂದಿರದ ವಿಷಯವನ್ನು ಪ್ರಸ್ತಾಪಿಸಿದ ಅವರು ಬಿಜೆಪಿ ಯಾವಾಗಲೂ ಮಂದಿರ ನಿರ್ಮಾಣಕ್ಕೆ ಬದ್ಧತೆ ವ್ಯಕ್ ಪಡಿಸಿದೆ ಎಂದು ಹೇಳಿದರು. ಆದಷ್ಟೂ  ಶೀಘ್ರ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಬಿಜೆಪಿ ಬಯಸಿದೆ. ಸುಪ್ರೀಂಕೋರ್ಟಿನಲ್ಲಿ ಶೀಘ್ರ ಇತ್ಯರ್ಥ ಸಾಧಿಸಲು ನಾವು ಯತ್ನಿಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಅದಕ್ಕೆ ಅಡಚಣೆಗಳನ್ನು ತರಲು ಯತ್ನಿಸುತ್ತಿದೆ ಎಂದು ಶಾ ನುಡಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನೂ ಗುರಿಮಾಡಿ ವಾಗ್ಬಾಣ ಎಸೆದ ಬಿಜೆಪಿ ಮುಖ್ಯಸ್ಥರು, ’ರಫೇಲ್ ವ್ಯವಹಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ತಾಯಿ ಮಗ ಇಬ್ಬರೂ ಪ್ರಧಾನಿ ಮೋದಿ ವಿರುದ್ಧ ಆಪಾದನೆಗಳನ್ನು ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡದ್ದರಿಂದ ರಾಹುಲ್ ಗಾಂಧಿ ಅವರು ಭ್ರಮ ನಿರಸನಗೊಂಡಿದ್ದಾರೆ. ಹೀಗಾಗಿ ಪ್ರತಿಯೊಂದು ವೇದಿಕೆಯಲ್ಲೂ ಯಾವ ಹಗರಣವೂ ಇಲ್ಲದ ರಫೇಲ್ ವಿಷಯವನ್ನು ಎಳೆದಾಡುತ್ತಿದ್ದಾರೆ ಎಂದು ಟೀಕಿಸಿದರು. ಬಿಜೆಪಿಯ ರಾಷ್ಟ್ರೀಯ ಸಮಾವೇಶವನ್ನು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ವಿಧಾನಸಭಾ ಚುನಾವಣೆಗಳ ಸೋಲಿನ ಹಿನ್ನೆಲೆಯಲ್ಲಿ ಸಂಘಟಿಸಲಾಗಿತ್ತು.

2018: ನವದೆಹಲಿ: ಕೆನಡಾ ಸಂಸ್ಥೆಗೆ ನೀಡಿದ ಗುತ್ತಿಗೆಯಲ್ಲಿ ಮತ್ತು ಇಡುಕ್ಕಿ ಜಿಲ್ಲೆಯ ಇಡುಕ್ಕಿ ವಿದ್ಯುತ್ ಯೋಜನೆಗಳ ಆಧುನೀಕರಣದಲಿ ೮೬.೨೫ ಕೋಟಿ ರೂಪಾಯಿ ನಷ್ಟ ಉಂಟುಮಾಡಿದ್ದಕ್ಕೆ ಸಂಬಂಧಿಸಿದ ಎಸೆಎನ್ ಸಿ ಲಾವಲಿನ್ ಪ್ರಕರಣದ ವಿಚಾರಣೆಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿದು ಆದೇಶ ನೀಡಿದ ಸುಪ್ರೀಂಕೋರ್ಟ್ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಇತರ ಇಬ್ಬರನ್ನು ಎಲ್ಲ ಕ್ರಿಮಿನಲ್ ಹಾಗೂ ಭ್ರಷ್ಟಾಚಾರ ಆರೋಪಗಳಿಂದ ಹೈಕೋರ್ಟ್ ಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮೇಲ್ಮನವಿಯನ್ನು ಅಂಗೀಕರಿಸಿತು.ಇದರೊಂದಿಗೆ ಮುಖ್ಯಮಂತ್ರಿ ಪಿಣರಾಯಿ ಅವರಿಗೆ ಮತ್ತೆ ಸಂಕಟ ಎದುರಾಯಿತು. ನ್ಯಾಯಮೂರ್ತಿಗಳಾದ ಎನ್.ವಿ. ರಾಮಣ್ಣ ಮತ್ತು ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಸಿಬಿಐ ಮೇಲ್ಮನವಿ ಸಂಬಂಧ ನೋಟಿಸ್‌ಗಳನ್ನು ಜಾರಿ ಮಾಡಿತು. ಮುಖ್ಯಮಂತ್ರಿ ವಿಜಯನ್, ವಿದ್ಯುತ್ ಇಲಾಖೆಯ ಮಾಜಿ ಮುಖ್ಯ ಕಾರ್‍ಯದರ್ಶಿ ಕೆ. ಕೆ. ಮೋಹನಚಂದ್ರನ್ ಮತ್ತು ಅದೇ ಇಲಾಖೆಯ ಆಗಿನ ಜಂಟಿ ಕಾರ್‍ಯದರ್ಶಿ ಎ. ಫ್ರಾನ್ಸಿಸ್ ಅವರನ್ನು ಕೇರಳ ಹೈಕೋರ್ಟ್ ಆಗಸ್ಟ್ ೨೩ರಂದು ಎಲ್ಲ ಆರೋಪಗಳಿಂದ ಮುಕ್ತರನ್ನಾಗಿ ಮಾಡಿ ತೀರ್ಪು ನೀಡಿತ್ತು. ಏನಿದ್ದರೂ ಕೇರಳ ವಿದ್ಯುಚ್ಛಕ್ತಿ ಮಂಡಳಿಯ (ಕೆಎಸ್ ಇಬಿ) ಆಗಿನ ಸದಸ್ಯ (ಅಕೌಂಟ್ಸ್) ಕೆ.ಜಿ. ರಾಜಶೇಖರನ್ ನಾಯರ್ ಮತ್ತು ಮಂಡಳಿಯ ಮುಖ್ಯ ಎಂಜಿನಿಯರ್ (ಉತ್ಪಾದನೆ) ಆಗಿದ್ದ ಕಸ್ತೂರಿ ರಂಗ ಅಯ್ಯರ್ ಅವರು ದೋಷಮುಕ್ತಿ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್ ವಜಾಗೊಳಿಸಿತು. ನಮ್ಮನ್ನು ಕೂಡಾ ಪ್ರಕರಣದಲ್ಲಿ ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಲಾಗಿರುವ ವಿಜಯನ್ ಮತ್ತು ಇತರ ಇಬ್ಬರು ಸಹ ಆರೋಪಿಗಳಿಗೆ ಸಮಾನವಾಗಿ ಏಕೆ ನಡೆಸಿಕೊಂಡಿಲ್ಲ ಎಂಬುದಾಗಿ ಅಯ್ಯರ್, ನಾಯರ್ ಮತ್ತು ಸಿವದಾಸನ್ ಅವರು ಮಾಡಿದ ಮನವಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯ ತನಿಖಾ ಸಂಸ್ಥೆ ಸಿಬಿಐಗೆ ಸೂಚಿಸಿತು. ಕೆಲವು ಆರೋಪಿಗಳನ್ನು ಮಾತ್ರವೇ ಬಿಡುಗಡೆ ಮಾಡಿರುವ ಬಗ್ಗೆ ನಮ್ಮ ತಕರಾರು ಇದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರೆ,  ’ಈ ಒಂದು ವಿಚಾರವನ್ನು ನಾವಿಬ್ಬರೂ (ಸಿಬಿಐ ಮತ್ತು ಆರೋಪಿಗಳು) ಒಪ್ಪುತ್ತೇವೆ ಎಂದು ಆರೋಪಿಗಳ ಪರ ಹಾಜರಾದ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ಆರ್.  ಬಸಂತ್ ಸಿಬಿಐ ವಾದಕ್ಕೆ ದನಿಗೂಡಿಸಿ ಹೇಳಿದರು.  ಹೈಕೋರ್ಟ್ ಸಂವಿಧಾನದ ೨೨೭ನೇ ವಿಧಿಯ ಅಡಿಯಲ್ಲಿನ ತನ್ನ ವ್ಯಾಪ್ತಿಯ ಮಿತಿಗಳನ್ನು ಮೀರಿದೆ. ಪ್ರಕರಣವನ್ನು ಮತ್ತೆ ಆಲಿಸಬೇಕಾದ ಅಗತ್ಯ ಇದೆ ಎಂದು ಮೆಹ್ತಾ ಹೇಳಿದರು. ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿಗಳು ಬಾಕಿ ಇರುವಾಗ ವಿಚಾರಣಾ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡುವ ಅಗತ್ಯ ಇದೆ ಎಂದು  ರೋಹ್ಟಗಿ ಮತ್ತು ಬಸಂತ್ ಯಶಸ್ವಿಯಾಗಿ ಪೀಠವನ್ನು ಒತ್ತಾಯಿಸಿದರು. ’ನಮ್ಮನ್ನು ದೋಷಮುಕ್ತರನ್ನಾಗಿ ಮಾಡಿಲ್ಲ. ಈಗ ವಿಚಾರಣೆಯ ಮುಂದುವರಿಕೆಯಿಂದ ನಮಗೆ ಹಾನಿಯಾಗಬಲ್ಲುದು ಎಂದು ರೋಹ್ಟಗಿ ನುಡಿದರು. ಲಾವಲಿನ್ ವ್ಯವಹಾರದಲ್ಲಿ ವಿಜಯನ್ ಅವರು ಶಾಮೀಲಾಗಿರುವುದನ್ನು ತೋರಿಸುವ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಸಿಬಿಐ ತನ್ನ ಮೇಲ್ಮನವಿಯಲ್ಲಿ ತಿಳಿಸಿತು. ಕೆಲವು ವ್ಯಕ್ತಿಗಳನ್ನು ಆರೋಪಿಗಳು ಎಂಬುದಾಗಿ ಹೆಸರಿಸುವಲ್ಲಿ ’ಹುಡುಕಿ ಆಯ್ದುಕೊಳ್ಳುವ ನೀತಿಯನ್ನು ಅಂಗೀಕರಿಸಲಾಗಿದೆ ಎಂದು ಹೈಕೋರ್ಟ್ ಆಪಾದಿಸಿದೆ. ಆದರೆ ವಾಸ್ತವವಾಗಿ, ಕೆಲವು ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡುವಲ್ಲಿ ಹೈಕೋರ್ಟ್ ಈ ನೀತಿಯನ್ನು ಅನುಸರಿಸಿದ್ದು, ದೋಷಾರೋಪ ಪಟ್ಟಿಯ ಇತರ ಆರೋಪಿಗಳು ವಿಚಾರಣೆ ಎದುರಿಸುವಂತೆ ಮಾಡಿದೆ ಎಂದು ಸಿಬಿಐ  ವಿವರಿಸಿತು. ಲಾವಲಿನ್ ಪ್ರಕರಣದಲ್ಲಿನ ಎಲ್ಲ ನಿರ್ಧಾರಗಳನ್ನು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾದ ಎಲ್ಲ ಆರೋಪಿಗಳ ಅರಿವಿನಲ್ಲಿ ಇದ್ದೇ ತೆಗೆದು ಕೊಳ್ಳಲಾಗಿದೆ. ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡುವುದರಿಂದ ವಿಚಾರಣೆ ವಿಳಂಬಗೊಳ್ಳುವುದರ ಜೊತೆಗೆ ನ್ಯಾಯಪಾಲನೆಗೆ ಅಡ್ಡಿಯಾಗುತ್ತದೆ ಎಂದು ಸಿಬಿಐ ಅರ್ಜಿ  ಪ್ರತಿಪಾದಿಸಿತು. ವಿಷಯಕ್ಕೆ ಸಂಬಂಧಿಸಿದಂತೆ ಸಂಚು ನಡೆದಿರುವುದನ್ನು ತೋರಿಸುವ ಮೇಲ್ನೋಟದ ಸಾಕ್ಷ್ಯಾಧಾರಗಳು ಬೇಕಾದಷ್ಟಿವೆ, ವಿಚಾರಣೆ ಕಾಲದಲ್ಲಷ್ಟೇ ಅವುಗಳನ್ನು ಮುಂದಿಡಲು ಸಾಧ್ಯ ಎಂದು ಸಿಬಿಐ ಹೇಳಿತು.



2018: ವಾಷಿಂಗ್ಟನ್: ಅಮೆರಿಕದಲ್ಲಿನ ಅರ್ಹ ವಲಸಿಗರಿಗೆ ನೀಡಲಾಗುವ ಹಸಿರು ಕಾರ್ಡುಗಳನ್ನು (ಗ್ರೀನ್ ಕಾರ್ಡ್) ಪ್ರತಿವರ್ಷ ಶೇಕಡಾ ೪೫ ರಷ್ಟು ಹೆಚ್ಚಿಸುವ ಉದ್ದೇಶದ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಬೆಂಬಲವಿರುವ ಮಸೂದೆಯನ್ನು ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಮಂಡಿಸಲಾಯಿತು. ಈ ಮಸೂದೆಯು ಶಾಸನವಾಗಿ ರೂಪುಗೊಂಡಲ್ಲಿ ಭಾರತೀಯ ಟೆಕ್ಕಿಗಳಿಗೆ ಲಾಭದಾಯಕವಾಗಲಿದೆ. ‘ಅಮೆರಿಕದ ಭವಿಷ್ಯ ನಿರ್ಮಾಣ ಕಾಯ್ದೆಯು (ಸೆಕ್ಯೂರಿಂಗ್ ಅಮೆರಿಕಾಸ್ ಫ್ಯೂಚರ್ ಆಕ್ಟ್) ಕಾಂಗ್ರೆಸ್‌ನಲ್ಲಿ ಅಂಗೀಕಾರ ಪಡೆದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಹಿಯನ್ನು ಪಡೆದುಕೊಂಡರೆ, ವೈವಿಧ್ಯಮಯ ವೀಸಾ ಕಾರ್ಯಕ್ರಮಗಳು ಕೊನೆಗೊಳ್ಳಲಿದ್ದು ಒಟ್ಟಾರೆ ವಲಸೆ ದರ್ಜೆಗಳನ್ನು ಈಗಿರುವ ವಾರ್ಷಿಕ ೧೦,೫೦,೦೦೦ ದಿಂದ ೨,೬೦,೦೦೦ ಕ್ಕೆ ಇಳಿಸಲಿದೆ. ಮಸೂದೆಯು ಹಸಿರು ಕಾರ್ಡುಗಳನ್ನು ಪ್ರತಿವರ್ಷ ಶೇಕಡಾ ೪೫ರಷ್ಟು ಅಂದರೆ ಈಗಿನ ೧,೨೦,೦೦೦ದಿಂದ ೧,೭೫,೦೦೦ ದಷ್ಟು ಹೆಚ್ಚಿಸಲು ಕೋರಿದೆ. ಮುಖ್ಯವಾಗಿ ಎಚ್-೧ಬಿ ವೀಸಾದಲ್ಲಿ ಅಮೆರಿಕಕ್ಕೆ ಬಂದ, ಹಸಿರು ಕಾರ್ಡ್ ಪಡೆಯಲು ಅಥವಾ ಶಾಸನಬದ್ಧ ಕಾಯಂ ವಸತಿ ಸ್ಥಾನಮಾನ ಪಡೆಯಲು ಬಯಸಿರುವ ಭಾರತೀಯ ಮೂಲದ ಅಮೆರಿಕನ್ ತಂತ್ರಜ್ಞಾನ ವೃತ್ತಿ ನಿರತರು ಈ ಕಾಯ್ದೆಯ ಪ್ರಮುಖ ಫಲಾನುಭವಿಗಳಾಗಲಿದ್ದಾರೆ ಎಂದು ನಿರೀಕ್ಷಿಸಲಾಯಿತು. ಅನಧಿಕೃತ ಅಂದಾಜುಗಳ ಪ್ರಕಾರ ಸುಮಾರು ೫ ಲಕ್ಷ ಭಾರತೀಯರು ಹಸಿರು ಕಾರ್ಡುಗಳಿಗಾಗಿ ಸರದಿಯಲ್ಲಿ ಕಾದಿದ್ದು, ಎಚ್-೧ಬಿ ವೀಸಾಗಳನ್ನು ವಿಸ್ತರಿಸಲು ಪ್ರತಿವರ್ಷ ಕೋರಿಕೆ ಸಲ್ಲಿಸಬೇಕಾಗಿದೆ. ಹಲವರು ದಶಕಗಳಿಂದಲೇ ತಮ್ಮ ಹಸಿರು ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ. ಎಚ್-೧ಬಿ ಕಾರ್ಯಕ್ರಮವು ಅಮೆರಿಕದ ತಾತ್ಕಾಲಿಕ ವೀಸಾವನ್ನು ನೀಡುತ್ತದೆ ಮತ್ತು ಕಂಪೆನಿಗಳಿಗೆ ಅಮೆರಿಕದ ಅರ್ಹ ನೌಕರರ ಕೊರತೆ ಇರುವ ಕ್ಷೇತ್ರಗಳಲ್ಲಿ ಉನ್ನತ ಕೌಶಲ ಹೊಂದಿರುವ ವಿದೇಶೀ ವೃತ್ತಿ ನಿರತರನ್ನು ಕರೆಸಿಕೊಂಡು ನೇಮಿಸಲು ಅವಕಾಶ ನೀಡುತ್ತದೆ.  ಪ್ರತಿವರ್ಷ ಹಸಿರು ಕಾರ್ಡುಗಳ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಕಾಯುವ ಅವಧಿಯನ್ನು ಗಣನೀಯವಾಗಿ ತಗ್ಗಿಸುವ ಸಾಧ್ಯತೆ ಇದೆ. ಕಾಯಂ ನಿವಾಸಿ ಕಾರ್ಡ್ ಎಂಬುದಾಗಿಯೇ ಪರಿಚಿತವಾಗಿರುವ ಹಸಿರು ಕಾರ್ಡು, ವ್ಯಕ್ತಿಗೆ ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ಒದಗಿಸುತ್ತದೆ. ಏನಿದ್ದರೂ ಸರಣಿ ವಲಸೆ ನಿವಾರಿಸುವ ಕ್ರಮವು ಭಾರತೀಯ ಮೂಲದ ಅಮೆರಿಕನ್ನರಿಗೆ ತಮ್ಮ ಕುಟುಂಬದ ಇತರ ಸದಸ್ಯರನ್ನು ಅಮೆರಿಕಕ್ಕೆ ಕರೆಸಿಕೊಳ್ಳುವ ಯತ್ನಕ್ಕೆ ಬಾಧಕವಾಗುವ ಸಾಧ್ಯತೆ ಇದೆ. ಅಮೆರಿಕದ ಭವಿಷ್ಯ ನಿರ್ಮಾಣ ಕಾಯ್ದೆಯು ಸಂಗಾತಿಗಳು ಮತ್ತು ಅಪ್ರಾಪ್ತ ಮಕ್ಕಳ ಹೊರತಾಗಿ ಇತರ ಬಂಧುಗಳನ್ನು ನಿವಾರಿಸುತ್ತದೆ. ಅರ್ಹತೆ ಆಧಾರಿತ ವಲಸೆ ವ್ಯವಸ್ಥೆಯು ವಿಶ್ವದಲ್ಲೇ ಅತ್ಯಂತ ಉತ್ತಮವಾದುದು ಹಾಗೂ ಉಜ್ವಲವಾದುದಾಗಿದ್ದು ಜನರಿಗೆ ಅಕ್ರಮವಾಗಿ ರಾಷ್ಟ್ರಕ್ಕೆ ಬರುವುದನ್ನು ಕಠಿಣಗೊಳಿಸಲಿದೆ ಎಂದು ಟ್ರಂಪ್ ಆಡಳಿತ ಭಾವಿಸಿದೆ.  ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಂದ ತಾಂತ್ರಿಕವಾಗಿ ಅರ್ಹರಾದ ವ್ಯಕ್ತಿಗಳಿಗೆ ಈ  ವ್ಯವಸ್ಥೆಯು ಅನುಕೂಲಕರವಾಗಲಿದೆ ಎಂದು ವೀಕ್ಷಕರು  ಅಭಿಪ್ರಾಯ ಪಟ್ಟಿದ್ದಾರೆ.

2018: ನವದೆಹಲಿ:  ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಮತ್ತು ಸುಪ್ರೀಂಕೋರ್ಟಿನ ಹಿರಿಯ ವಕೀಲರಾದ ಇಂದು ಮಲ್ಹೋತ್ರ ಅವರನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿದವು. ವಕೀಲಗಿರಿಯಿಂದ ನೇರವಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುತ್ತಿರುವ ಮೊತ್ತ ಮೊದಲ ಮಹಿಳಾ ವಕೀಲರು ಎಂಬ ಎಂಬ ಹೆಗ್ಗಳಿಕೆಗೆ ಇಂದು ಮಲ್ಹೋತ್ರ ಅವರು ಪಾತ್ರರಾಗಲಿದ್ದಾರೆ. ಕೊಲಿಜಿಯಂ ಈ ನೇಮಕಾತಿಗೆ ಸರ್ವಾನುಮತದ ಶಿಫಾರಸು ಮಾಡಿದೆ. ಅದು ಐದು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ನೇಮಕವನ್ನು ಕೂಡಾ ಕಾಯಂಗೊಳಿಸಿದೆ.

2018: ನವದೆಹಲಿ: ಬಡವರಿಗೆ ಕಲ್ಯಾಣ ಕಾರ್ಯಕ್ರಮಗಳ ಸೌಕರ್ಯವನ್ನು ತಲುಪಿಸಲು ಅನುಕೂಲರವಾದ ಕಾರ್ಡ್ ವಿಶಿಷ್ಟ ಗುರುತಿನ ಆಧಾರ್ ಕಾರ್ಡ್ ಎಂಬುದಾಗಿ ಸರ್ಕಾರ ಮಾಡುತ್ತಿರುವ ಪ್ರತಿಪಾದನೆಯನ್ನು ಪ್ರಶ್ನಿಸಿರುವ ಸುಪ್ರೀಂಕೋರ್ಟ್ ರಾಷ್ಟ್ರದಲ್ಲಿ ಇರುವ ಲಕ್ಷಾಂತರ ಮಂದಿ ಬಡವರು, ಕಾಯಂ ವಿಳಾಸ ಇಲ್ಲದಿರುವಾಗ ಹೇಗೆ ಆಧಾರ್ ಕಾರ್ಡ್ ಪಡೆಯುತ್ತಾರೆ ಎಂದು ಕೇಳಿತು. ೨೦೧೧ರ ಜನಗಣತಿ ಪ್ರಕಾರ ರಾಷ್ಟ್ರದಲ್ಲಿ ೧೭೭ ಲಕ್ಷ ವಸತಿ ರಹಿತ ಜನರಿದ್ದಾರೆ. ಅವರ ಪ್ರಮಾಣ ಒಟ್ಟು ಜನಸಂಖ್ಯೆಯ ಶೇಕಡಾ ೦.೧೫ರಷ್ಟು ಆಗುತ್ತದೆ. ಸರ್ಕಾರದ ಪಾಲಿಗೆ ಅವರು (ವಸತಿ ರಹಿತರು) ಅಸ್ತಿತ್ವ ಇಲ್ಲದವರು ಎಂದು ಇದರ ಅರ್ಥವೇ? ಎಂದು ಸಾಮಾಜಿಕ ನ್ಯಾಯಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಮದನ್ ಬಿ. ಲೋಕುರ್ ಅವರು ಕೇಳಿದರು. ವಸತಿ ರಹಿತರ ರಾತ್ರಿ ಶೆಲ್ಟರುಗಳ ಅಭಾವಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಕಾಲದಲ್ಲಿ ಈ ವಿಷಯ ಪ್ರಸ್ತಾಪಕ್ಕೆ ಬಂತು. ನ್ಯಾಯಾಲಯವು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿ ಅವರಿಗೆ ಸಮನ್ಸ್ ಕಳುಹಿಸಿ ವಿಶೇಷವಾಗಿ ಚಳಿಗಾಳಿಗೆ ಗಡ ಗಡ ನಡುಗುತ್ತಿರುವ ಉತ್ತರ ಭಾರತದ ವಸತಿ ರಹಿತರಿಗೆ ರಾತ್ರಿ ಶೆಲ್ಟರುಗಳ ಅಭಾವಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಆಜ್ಞಾಪಿಸಿತು. ಆಧಾರ್ ದಾಖಲಾತಿ ಮಾಡಿಕೊಳ್ಳಲು ಮತ್ತು ಕಲ್ಯಾಣ ಕಾರ್‍ಯಕ್ರಮಗಳ ಲಾಭ ಪಡೆಯಲು ಕಾಯಂ ವಿಳಾಸ ಕಡ್ಡಾಯವೇ ಎಂದು ಪೀಠವು ಕೇಳಿದ ಪ್ರಶ್ನೆಗೆ ಉತ್ತರ ಪ್ರದೇಶ ಸರ್ಕಾರ ಹೌದು ಎಂದು ಉತ್ತರಿಸಿತು. ’ಹಾಗಿದ್ದರೆ, ವಸತಿ ರಹಿತ ವ್ಯಕ್ತಿಗಳು ಸ್ವಂತ ಮನೆ ಅಥವಾ ಕಾಯಂ ವಿಳಾಸ ಇಲ್ಲದೇ ಇದ್ದಲ್ಲಿ ಹೇಗೆ ಆಧಾರ್ ಪಡೆಯಲು ಸಾಧ್ಯ?’ ಎಂದು ನ್ಯಾಯಮೂರ್ತಿ ಲೋಕುರ್ ಪ್ರಶ್ನಿಸಿದರು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಪ್ರತಿನಿಧಿಸಿದ ಅಡಿಷನಲ್ ಸಾಲಿಸಿಟರ್ -ಜನರಲ್ ತುಷಾರ್ ಮೆಹ್ತ ಅವರು ’ವಸತಿ ರಹಿತ ವ್ಯಕ್ತಿಗಳು ಕೇಂದ್ರದ ಪಾಲಿಗೆ ’ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಹೇಳಿದರು. ಸುಪ್ರೀಂ ಕೋರ್ಟಿನಲ್ಲಿ ತಾವು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಪರವಾಗಿಯೂ ಹಾಜರಾಗಿರುವುದಾಗಿ ಅವರು ನುಡಿದರು. ನಗರ ಪ್ರದೇಶಗಳ ವಸತಿ ರಹಿತರು ಬಹುತೇಕ ರಾಷ್ಟ್ರದ ಗ್ರಾಮೀಣ ಭಾಗಗಳಿಂದ ವಲಸೆ ಬಂದವರು. ಅವರು ತಮ್ಮ ಸ್ವಂತ ಗ್ರಾಮಗಳಲ್ಲಿ ಕಾಯಂ ವಿಳಾಸವನ್ನು ಹೊಂದಿರುತ್ತಾರೆ ಮತ್ತು ಆಧಾರ್ ಗಾಗಿ ಅಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಮೆಹ್ತ ಹೇಳಿದರು. ಈ ಬಗ್ಗೆ ಪ್ರಾಧಿಕಾರದಿಂದ ಹೆಚ್ಚಿನ ಸೂಚನೆಗಳನ್ನು ಪಡೆಯುವುದಾಗಿ ಅವರು ನ್ಯಾಯಾಲಯಕ್ಕೆ ತಿಳಿಸಿದರು. ದೀನದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಎನ್‌ಯು ಎಲ್ ಎಂ) ಯೋಜನೆಯ ಕಳಪೆ ಅನುಷ್ಠಾನಕ್ಕಾಗಿ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರವನ್ನು ಟೀಕಿಸಿತು. ಈ ಯೋಜನೆ ೨೦೧೪ರಿಂದಲೇ ಜಾರಿಯಲ್ಲಿದೆ. ‘ನಾವು ವಾಸಿಸಲು ಯಾವುದೇ ಜಾಗ ಇಲ್ಲದ ಮನುಷ್ಯರ ಬಗ್ಗೆ ಮಾತನಾಡುತ್ತಿದ್ದೇವೆ. ವಾಸಿಸಲು ಯಾವುದೇ ಜಾಗ ಇಲ್ಲದವರಿಗೆ ಬದುಕಲು ಜಾಗ ಒದಗಿಸಬೇಕು ಎಂದು ನ್ಯಾಯಮೂರ್ತಿ ಲೋಕುರ್ ಹೇಳಿದರು.

2018: ನವದೆಹಲಿ: ೧೯೮೪ರ ಸಿಖ್ ವಿರೋಧಿ ದಂಗೆ ಕಾಲದ ೧೮೬ ಪ್ರಕರಣಗಳ ಹೆಚ್ಚಿನ ತನಿಖೆಗೆ ದೆಹಲಿ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್. ಧೀಂಗ್ರ ತಂಡದ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ಸುಪ್ರೀಂಕೋರ್ಟ್ ರಚಿಸಿತು. ಧೀಂಗ್ರ ಹೊರತಾಗಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಅಧಿಕಾರಿ ಅಭಿಷೇಕ್ ದುಲರ್, ಐಜಿ ಶ್ರೇಣಿಯ ನಿವೃತ್ತ ಅಧಿಕಾರಿ ರಾಜದೀಪ್ ಸಿಂಗ್ ಅವರು ಸಮಿತಿಯ ಇತರ ಇಬ್ಬರು ಸದಸ್ಯರಾಗಿ ನೇಮಕಗೊಂಡರು. ಎರಡು ತಿಂಗಳ ಒಳಗಾಗಿ ವಸ್ತುಸ್ಥಿತಿ ವರದಿಯನ್ನು ಸಲ್ಲಿಸುವಂತೆ ತಂಡಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಸೂಚಿಸಿತು. ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್ ೧೯ರಂದು ನಡೆಸಲಿದೆ. ಹಿಂದಿನ ವಿಶೇಷ ತನಿಖಾ ತಂಡವು ೧೮೬ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಸಮಾಪ್ತಿ ವರದಿಯನ್ನು ಸಲ್ಲಿಸಿದ್ದು, ಹೆಚ್ಚಿನ ತನಿಖೆಯನ್ನು ನಡೆಸಿಲ್ಲ ಎಂದು ಹೇಳಿದ್ದ ಪೀಠ, ಈ ಪ್ರಕರಣಗಳ ತನಿಖೆಗಾಗಿ ತಾನೇ ಸ್ವತಃ ವಿಶೇಷ ತನಿಖಾ ತಂಡ ರಚಿಸುವುದಾಗಿ ಪ್ರಕಟಿಸಿತ್ತು. ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರು ಸುಪ್ರೀಂಕೋರ್ಟ್ ಪೀಠದ ಇತರ ಇಬ್ಬರು ಸದಸ್ಯರಾಗಿದ್ದರು.
೧೯೮೪ರ ಅಕ್ಟೋಬರ್ ೩೧ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ ಅಂಗರಕ್ಷರು ಗುಂಡು ಹೊಡೆದು ಕೊಂದ ಬಳಿಕ ಸಿಕ್ಖರ ವಿರುದ್ದ ವ್ಯಾಪಕ ಹಿಂಸಾಚಾರಗಳು ನಡೆದಿದ್ದವು. ಈ ಹಿಂಸಾಚಾರಗಳಿಗೆ ೩೦೦೦ಕ್ಕೂ ಹೆಚು ಮಂದಿ ಬಲಿಯಾಗಿದ್ದು, ಅವರ ಪೈಕಿ ೨೭೩೩ ಮಂದಿ ದೆಹಲಿ ನಗರ ಒಂದರಲ್ಲೇ ಅಸು ನೀಗಿದ್ದರು.

2018: ನವದೆಹಲಿ: ಪ್ರಾನ್ಸಿನ ಐಷಾರಾಮಿ ಬಹುರಾಷ್ಟ್ರೀಯ ಕಂಪೆನಿ ಲೂಯಿಸ್ ವುಯಿಟ್ಟನ್ ಬಾಬಾ ರಾಮದೇವ್ ಅವರ ’ಪತಂಜಲಿಯಲ್ಲಿ ೫೦೦ ದಶಲಕ್ಷ ಡಾಲರ್ ಅಂದರೆ ತನ್ನ ಏಷ್ಯಾ ನಿಧಿಯ ಅರ್ಧದಷ್ಟು ಹಣ ಹೂಡಲು ಇಚ್ಛಿಸಿತು. ‘ನಾವು ಅವರ ಜೊತೆಗೆ ಕೆಲಸ ಮಾಡಲು ಖುಷಿ ಪಡುತ್ತೇವೆ ಎಂದು ಕಂಪೆನಿಯ ಆಡಳಿತ ಪಾಲುದಾರ ರವಿ ಥಕ್ರನ್ ಹೇಳಿದರು. ಭಾರತೀಯರ ಮನೋಭಾವವನ್ನು ಬದಲಿಸುವಲ್ಲಿ ಮತ್ತು ’ಭಾರತೀಯತೆಯನ್ನು ಸಂಭ್ರಮಿಸುವಂತೆ ಮಾಡುವಲ್ಲಿ ಪತಂಜಲಿ ಯಶಸ್ವಿಯಾಗಿದೆ. ಅದು ತನ್ನ ಉತ್ಪನ್ನಗಳನ್ನು ಅಮೆರಿಕ, ಜಪಾನ್, ಚೀನಾ, ದಕ್ಷಿಣ ಕೊರಿಯಾ ಮತ್ತು ಯುರೋಪಿನಂತಹ ಸ್ಥಳಗಳ ಮಾರುಕಟ್ಟೆಗಳಲ್ಲಿ ಮಾರಬಹುದು. ಈ ನಿಟ್ಟಿನಲ್ಲಿ ರಾಮದೇವ್ ಅವರಿಗೆ ನೆರವಾಗಲು ನಾವು ಬಯಸುತ್ತೇವೆ ಎಂದು ಥಕ್ರನ್ ನುಡಿದರು. ‘ಸ್ವದೇಶೀ ಬ್ರಾಂಡ್ ಬಗ್ಗೆ ಲೂಯಿಸ್ ವುಯಿಟ್ಟನ್ ಪ್ರೇಮ ವ್ಯಕ್ತ ಪಡಿಸಿದರೂ, ಅದಕ್ಕೆ ರಾಮದೇವ್ ಕಡೆಯಿಂದ ಸ್ಪಂದನೆ ಸಿಗದಿರಲೂ ಬಹುದು. ಏಕೆಂದರೆ ಅದು ರಾಮದೇವ್ ಅವರಿಗೆ ಇಕ್ಕಟ್ಟಿನ ಸ್ಥಿತಿಯನ್ನು ತಂದೊಡ್ಡಬಹುದು. ಪತಂಜಲಿ ನಿಧಿಗಾಗಿ ಎದುರು ನೋಡುತ್ತಿದ್ದರೂ, ತಾನು ಬಹುರಾಷ್ಟ್ರೀಯ ಕಂಪೆನಿ ಅಲ್ಲ ಎಂದು ಈಗಾಗಲೇ ಸ್ಪಷ್ಟ ಪಡಿಸಿದೆ. ಹೀಗಾಗಿ ಎಲ್‌ವಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡರೆ ಅದರ ವರ್ಚಸ್ಸಿಗೆ ಹಾನಿಯಾಗುವ ಸಾಧ್ಯತೆ ಇದೆ ಎನ್ನಲಾಯಿತು.


2017: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಲಂಚ ಸ್ವೀಕರಿಸಿದ್ದಾರೆ ಎಂಬುದಾಗಿ ಆಪಾದಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ನೆಚ್ಚಿಕೊಂಡಿದ್ದ ಸಹಾರಾ- ಬಿರ್ಲಾ ದಿನಚರಿಗಳ ತನಿಖೆಗೆ ಸುಪ್ರೀಂಕೋರ್ಟ್ ನಿರಾಕರಿಸಿತು. ಇದರೊಂದಿಗೆ ರಾಹುಲ್ ಗಾಂಧಿ ಅವರು ನಂಬಿಕೊಂಡಿದ್ದ ಪ್ರಧಾನಿ ವಿರುದ್ಧದ ಪ್ರಬಲ ಅಸ್ತ್ರ ಟುಸ್ ಆಯಿತು.  ಕೆಲವು ರಾಜಕಾರಣಿಗಳ ಹೆಸರು ನಮೂದಾಗಿರುವ ಸಹಾರಾ ಮತ್ತು ಬಿರ್ಲಾ ಕಂಪನಿಗಳ ದಿನಚರಿಗಳನ್ನು (ಡೈರಿ) ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಐಟಿ ದಾಳಿ ಕಾಲದಲ್ಲಿ ವಶಪಡಿಸಿಕೊಂಡಿದ್ದರು. ದಿನಚರಿಗಳ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸರ್ಕಾರೇತರ ಸಂಘಟನೆಯೊಂದು (ಎನ್ಜಿಒ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ತನಿಖೆಗೆ ಆದೇಶಿಸಲು ನಿರ್ಣಾಯಕ ಸಾಕ್ಷ್ಯಾಧಾರಗಳು ಇಲ್ಲ ಎಂದು ಅರ್ಜಿಯನ್ನು ವಜಾ ಮಾಡುತ್ತಾ ಸುಪ್ರೀಂಕೋರ್ಟ್ ಹೇಳಿತು. ಸೆಟ್ಲ್ ಮೆಂಟ್ ಕಮೀಷನರ್ ಆದೇಶದ ಪ್ರಾಮಾಣಿಕತೆ ಬಗ್ಗೆ ತಾನು ಸಂಶಯ ಪಡುತ್ತಿಲ್ಲ. ಆದರೆ ಇಂತಹ ದಿನಚರಿಗಳ ಸಮಗ್ರತೆ ಬಗ್ಗೆ ಪರಿಶೀಲಿಸುತ್ತಿದ್ದೇನೆ ಎಂದು ತೀರ್ಪು ನೀಡುವುದಕ್ಕೂ ಮುನ್ನ ಅರ್ಜಿಯ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಹೇಳಿತು. ಸುಪ್ರೀಂಕೋರ್ಟಿನಲ್ಲಿ ಕೇಂದ್ರ ಸರ್ಕಾರದ ಪರ ವಾದಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಇಂತಹ ದಾಖಲೆಗಳನ್ನು ಶಾಸನಬದ್ಧ ಸಾಕ್ಷ್ಯಾಧಾರ ಎಂಬುದಾಗಿ ಅಂಗೀಕರಿಸಿದರೆ ರಾಷ್ಟ್ರದಲ್ಲಿ ಯಾರೊಬ್ಬರೂ ಸುರಕ್ಷಿತವಾಗಿ ಇರುವಂತಿಲ್ಲ. ಕಾರ್ಪೋರೇಟ್ ಕಂಪನಿಗಳು ಗುಜರಾತ್ ಮುಖ್ಯಮಂತ್ರಿಗೆ ಲಂಚ ನೀಡಿವೆ ಎಂಬುದನ್ನು ಸಾಬೀತು ಪಡಿಸುವಂತಹ ಯಾವುದೇ ಸಾಕ್ಷ್ಯಾಧಾರವೂ ಇಲ್ಲ ಎಂದು ವಾದಿಸಿದರು.
2017: ನವದೆಹಲಿ: ಭಾರತದ ರಾಷ್ಟ್ರಧ್ವಜದ ಮಾದರಿಯ ಡೋರ್ ಮ್ಯಾಟ್ನ್ನು ಅಮೆಜಾನ್ ಸಂಸ್ಥೆ
ಆನ್ಲೈನ್ನಲ್ಲಿ ಮಾರಾಟಕ್ಕಿಟ್ಟದ್ದು ಬೆಳಕಿಗೆ ಬಂತು. ಕೆನಡಾದ ಅಮೆಜಾನ್ ಶಾಪಿಂಗ್ ಪೋರ್ಟಲ್ನಲ್ಲಿ ಭಾರತದ ರಾಷ್ಟ್ರಧ್ವಜದ ಮಾದರಿಯ ಡೋರ್ ಮ್ಯಾಟ್‍ (ಕಾಲೊರಸು) ಜಾಹೀರಾತು ಪ್ರಕಟವಾದುದು ಬೆಳಕಿಗೆ ಬಂತು. ಈ ರೀತಿ ರಾಷ್ಟ್ರಧ್ವಜವನ್ನು ಅವಮಾನಿಸಿದ ಅಮೆಜಾನ್ ಕೂಡಲೇ ಉತ್ಪನ್ನವನ್ನು ವೆಬ್ಸೈಟ್ನಿಂದ ತೆಗೆದು ಹಾಕಬೇಕು ಎಂದು Change.org ಅಭಿಯಾನ ಆರಂಭಿಸಿದೆ. ಅಮೆಜಾನ್ ವಿರುದ್ಧ ಭಾರತೀಯರು ಆನ್ಲೈನ್ ಪ್ರತಿಭಟನೆಗಳನ್ನೂ ಆರಂಭಿಸಿದರು. ಅಮೆಜಾನ್ ವೆಬ್‍‌ಸೈಟಿನಲ್ಲಿಯೂ ಭಾರತೀಯರು ಕಾಮೆಂಟ್ ಮಾಡಿ, ಉತ್ಪನ್ನದ ಜಾಹೀರಾತು ತೆಗೆದು ಹಾಕುವಂತೆ ಒತ್ತಾಯಿಸಿದರು. ಭಾರತದ ರಾಷ್ಟ್ರಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜವನ್ನು ಬೇರೆ ಯಾವುದೇ ರೀತಿಯ ಉತ್ಪನ್ನಗಳಿಗಾಗಿ ಬಳಸುವಂತಿಲ್ಲಆದರೆ ಕೆನಡಾ ಮತ್ತು ಅಮೆರಿಕದಲ್ಲಿ ಆಯಾ ದೇಶಗಳ ರಾಷ್ಟ್ರಧ್ವಜವನ್ನು ಯಾವುದೇ ಉತ್ಪನ್ನಗಳಲ್ಲಿ ಬಳಸಬಹುದಾಗಿದೆ. ಅಮೆರಿಕನ್ನರು ಮತ್ತು ಕೆನಡಾದ ಜನರು ತಮ್ಮ ರಾಷ್ಟ್ರಧ್ವಜದ ಮಾದರಿಯನ್ನು ತಮ್ಮ ವಸ್ತ್ರಗಳಲ್ಲಿ, ಒಳ ಉಡುಪುಗಳಲ್ಲಿ ಹಾಗೂ ಕಾಲೊರಸುಗಳಲ್ಲಿ ಬಳಸುತ್ತಿದ್ದು, ಇಂಥಾ ಉತ್ಪನ್ನಗಳು ಅಮೆಜಾನ್ಪೋರ್ಟಲ್‍‍ನಲ್ಲಿ ಮಾರಾಟಕ್ಕಿವೆ. ಪ್ರತಿಭಟನೆಯ ಬಿಸಿ ತಟ್ಟುತ್ತಿದ್ದಂತೆ ಪ್ರಸ್ತುತ ಉತ್ಪಾದನಾ ಜಾಹೀರಾತನ್ನು ತೆಗೆಯಲಾಯಿತು.
2017: ಬೆಂಗಳೂರು: 2016ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಂಶೋಧಕ ಡಾ. ಹಂ..
ನಾಗರಾಜಯ್ಯ ಮತ್ತು ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಸಾಹಿತಿ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಯಿತು. ಇತರೆ ಪ್ರಶಸ್ತಿಗಳಿಗೆ ಆಯ್ಕೆಯಾದವರ ವಿವರ: ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ:  ಹಸನ್ನಯೀಂ ಸುರಕೋಡ,  ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ಡಾ. ಚೆನ್ನಣ್ಣ ವಾಲೀಕಾರ,  ಸಂತ ಶಿಶುನಾಳ ಷರೀಫ ಪ್ರಶಸ್ತಿ : ವೈ.ಕೆ. ಮುದ್ದುಕೃಷ್ಣ,  ನಿಜಗುಣ ಪುರಂದರ ಪ್ರಶಸ್ತಿ : ಗಣಪತಿ ಭಟ್ಹಾಸಣಗಿ,  ಕುಮಾರವ್ಯಾಸ ಪ್ರಶಸ್ತಿ : ಎನ್‌.ಆರ್‌. ಜ್ಞಾನಮೂರ್ತಿ. ಎಲ್ಲಾ ಪ್ರಶಸ್ತಿಗಳು ತಲಾ ₹ 3 ಲಕ್ಷ ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತವೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದರು.
2017: ಬೆಳ್ತಂಗಡಿದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ನಡ ಗ್ರಾಮದ ಅಂತ್ರಾಯಿಪಲ್ಕೆ
ಹೊಳೆಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಮೃತರಾದ  ಘಟನೆ ಘಟಿಸಿತು. ಉಡುಪಿ ಜಿಲ್ಲೆಯ ಕಾಪು ಫಕೀರನಕಟ್ಟೆ ನಿವಾಸಿಗಳಾದ ರಹೀಮ್ (30), ಪತ್ನಿ ರುಬೀನಾ(25), ಯಾಸ್ಮಿನ್(23), ಸುಬಾನ್(15) ಮೃತರಾದವರು.  ಮೈಮೂನಾ ಎಂಬಾಕೆಯನ್ನು ಸ್ಥಳೀಯರು ರಕ್ಷಿಸಿದ್ದು, ಗಂಭೀರ ಸ್ಥಿತಿಯಲ್ಲಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಈದಿನ ಬೆಳಗ್ಗೆ ಇಲ್ಲಿನ ಪ್ರಸಿದ್ಧ ಕಾಜೂರು ದರ್ಗಾಕ್ಕೆ ಭೇಟಿ ನೀಡಿದ್ದ ಕುಟುಂಬ ವಾಪಸ್ ಬರುವಾಗ ಹೊಳೆಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
2017: ಚಂಡೀಗಢ: ಮುಕ್ತಸರ್ ಜಿಲ್ಲೆಯ ತಮ್ಮ ಕ್ಷೇತ್ರವಾದ ಲಂಬಿಯ ರಟ್ಟ ಖೇರಾ ಗ್ರಾಮದಲ್ಲಿ
ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾಗ ನಡೆದ ಶೂ ಎಸೆತದ ಘಟನೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ ಸಿಂಗ್ ಬಾದಲ್ (89) ಅವರು ಗಾಯಗೊಂಡರು. ಈದಿನ ಮಧ್ಯಾಹ್ನ ಘಟಿಸಿದ ಘಟನೆಯಲ್ಲಿ ಕನ್ನಡಕದ ಗಾಜುಗಳು ತಾಗಿ ಬಾದಲ್ ಅವರ ಕಣ್ಣಿಗೆ ಗಾಯವಾಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ಅವರನ್ನು ತತ್ ಕ್ಷಣ ಸಭಾ ಸ್ಥಾನದಿಂದ ಹೊರಕ್ಕೆ ಕರೆದೊಯ್ಯಲಾಯಿತು. ಶೂ ಎಸೆದ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತನನ್ನು ಉಗ್ರವಾದಿ ಸಿಖ್ ನಾಯಕ ಅಮ್ರಿಕ್ ಸಿಂಗ್ ಅಂಜಾಲಾನ ಸಂಬಂಧಿ ಗುರುಬಚನ್ ಸಿಂಗ್ ಎಂಬುದಾಗಿ ಗುರುತಿಸಲಾಯಿತು.
2017: ಪಟನಾ: ‘ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಗೆ ಹೇಳುವೆ.. ರಕ್ತ ಎಲ್ಲಿಂದ ಬರುತ್ತಿತ್ತು?’ ಎಂದು ಬಿಹಾರದ ಶಾಸಕ ಲಾಲನ್ ಪಾಸ್ವಾನ್ ಕೊಲೆಯಾದ ವಿದ್ಯಾರ್ಥಿನಿಯೊಬ್ಬಳ ಗೆಳತಿಯನ್ನು ನಿರ್ಲಜ್ಜವಾಗಿ ಪ್ರಶ್ನಿಸಿದ್ದು ವಿಡಿಯೋದಲ್ಲಿ ದಾಖಲಾಯಿತು.. ಇಷ್ಟಕ್ಕೂ ಬಿಡದ ಲಾಲನ್ಹಂತಕ ಕೆಲವು ಬಾಲಕಿಯರಿಗಾದರೂ ಗೊತ್ತಿರಬಹುದುಎಂದು ತಮ್ಮವಿಚಾರಣೆಯಲ್ಲಿ ಹೇಳಿದ್ದ್ದೂ ವಿಡಿಯೋದಲ್ಲಿ ದಾಖಲಾಯಿತು. ಬಿಜೆಪಿ ಮೈತ್ರಿಕೂಟದ ಅಂಗ ಪಕ್ಷವಾಗಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಶಾಸಕರಾಗಿರುವ ಪಾಸ್ವಾನ್ ಅವರು ಸರ್ಕಾರಿ ಸ್ವಾಮ್ಯದ ವೈಶಾಲಿಯಲ್ಲಿನ ವಿದ್ಯಾರ್ಥಿನಿಯರ ವಸತಿಗೃಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಘಟನೆ ಘಟಿಸಿತು. ರಾಷ್ಟ್ರೀಯ ಲೋಕ ಸಮತಾ ಪಕ್ಷವನ್ನು ಕೇಂದ್ರ ಸಚಿವ ಉಪೇಂದರ ಕುಶವಾಹ ಸ್ಥಾಪಿಸಿದ್ದಾರೆ. 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಭಾನುವಾರ ಸತ್ತು ಬಿದ್ದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪಾಸ್ವಾನ್ ವಸತಿ ಗೃಹಕ್ಕೆ ಭೇಟಿ ನೀಡಿದ್ದರು. ಮೃತ ವಿದ್ಯಾಥಿನಿಯ ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಕೊಲೆಯ ಜೊತೆಗೆ ಅತ್ಯಾಚಾರವೂ ಸಂಭವಿಸಿದೆಯೇ ಎಂಬುದಾಗಿ ಸ್ವತಃ ತನಿಖೆ ನಡೆಸುವುದಾಗಿ ಅವರು ನುಡಿದರು. ‘ನೀವು ವಿದ್ಯಾವಂತರು. ಸ್ಪಷ್ಟವಾಗಿ ಉತ್ತರಿಸಬೇಕು. ನೀನು ಸ್ಪಷ್ಟವಾಗಿ ಹೇಳದೇ ಇದ್ದರೆ ಹೇಗೆ? ನಾಳೆ ಅದು (ಅತ್ಯಾಚಾರ) ನಿನಗೇ ಆದರೆ ಏನು ಮಾಡುತ್ತಿ? ಅತ್ಯಾಚಾರಿ ನಿನ್ನ ಕೊಠಡಿಗೇ ಬಂದರೆ ಆಗ ಏನಾಗುತ್ತದೆ? ಎಂದು ಬಾಲಕಿಗೆ ಮುಜುಗರವಾಗುತ್ತಿದ್ದುದನ್ನೂ ಲೆಕ್ಕಿಸದೆ ಶಾಸಕನಿಂದ ಪುಂಖಾನುಪುಂಖವಾಗಿ ಪ್ರಶ್ನೆಗಳ ಸುರಿಮಳೆಯಾಯಿತು. ವಸತಿಗೃಹದ ಕೆಲವು ಹುಡುಗಿಯರೂ ಹುಡುಗರ ಜೊತೆಗೆ ಶಾಮೀಲಾಗಿರಬಹುದು. ಅವಕಾಶ ಇದ್ದರೆ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ನಾನೇ ಸತ್ಯ ಹೊರಗೆಳೆಯುತ್ತಿದ್ದೆ ಎಂದು ನುಡಿದ ಶಾಸಕ, ಶಿಕ್ಷಕರತ್ತ ತಿರುಗಿ, ನಿಮ್ಮಲ್ಲೇ ಯಾರಾದರೂ ಒಬ್ಬರು ನೆರವಾಗಿರಲೂ ಬಹುದು ಎಂದು ಹೇಳಿದ್ದೂ ವಿಡಿಯೋದಲ್ಲಿ ದಾಖಲಾಗಿದೆ ಎಂದು ವರದಿಗಳು ಹೇಳಿದವು.
2017: ನವದೆಹಲಿ: ಅಚ್ಛೇ ದಿನ್ ಯಾವಾಗ ಬರಲಿದೆ ಎಂದು ಜನ ಅಚ್ಚರಿ ಪಡುತ್ತಿದ್ದಾರೆ. ಕಾಂಗ್ರೆಸ್
ಮತ್ತೆ ಅಧಿಕಾರಕ್ಕೆ ಬಂದಾಗ ಅದು ಬರಲಿದೆಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿ ಹೇಳಿದರು. ದೆಹಲಿಯ ತಲ್ಕಟೋರ ಸ್ಟೇಡಿಯಂನಲ್ಲಿ ಜನ ವೇದನಾ ಸಮ್ಮೇಳನ ಹೆಸರಿನಲ್ಲಿ ಸಂಘಟಿಸಲಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ ಅವರು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ಎಂಎನ್ಆರ್ಇಜಿಎ) ದಿಢೀರನೆ ಬೇಡಿಕೆ ಹೆಚ್ಚುತ್ತಿರುವುದು ಏಕೆ? ಜನ ಯಾಕೆ ನಗರಗಳಿಗೆ ಬದಲಾಗಿ ಹಳ್ಳಿಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಕೇಳಬೇಕು ಎಂದು ಹೇಳಿದರು. ನೋಟು ರದ್ದತಿಯ ಬಳಿಕ ಆಟೋಮೊಬೈಲ್ ಮಾರಾಟ ಶೇಕಡಾ 60ರಷ್ಟು ಕುಸಿದಿದೆ. ನಾವು 16 ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದೇವೆ. ಇದೇ ಮೊದಲ ಬಾರಿಗೆ ವಿಶ್ವಾದ್ಯಂತ ನೋಟು ರದ್ದತಿಗಾಗಿ ಭಾರತದ ಪ್ರಧಾನಿಯನ್ನು ದೂಷಿಸಲಾಗುತ್ತಿದೆ. ಬಿಜೆಪಿ, ಆರ್ಎಸ್ಎಸ್ ಮತ್ತು ನರೇಂದ್ರ ಮೋದಿ ಅವರು ಆರ್ಬಿಐಯಂತಹ ಸಂಸ್ಥೆಗಳನ್ನು ದುರ್ಬಲಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಟೀಕಿಸಿದರು. ಬಿಜೆಪಿ ಮತ್ತು ನಮ್ಮ ಪ್ರಧಾನಿಗೆ ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಪ್ರಶ್ನಿಸುವ ಚಟ ಇದೆ. ಜನರಿಗೆ ಅದು ಗೊತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ತಮ್ಮ ಬೆವರು ಮತ್ತು ರಕ್ತ ಹರಿಸಿ ದುಡಿದ ರಾಜ್ಯಗಳ ಹೆಸರುಗಳನ್ನು ನಾನು ಹೇಳಬಲ್ಲೆ ಎಂದು ರಾಹುಲ್ ನುಡಿದರು. ಮೋದಿಯವರು ಬಹಳಷ್ಟು ಯೋಗ ಮಾಡಿದ್ದಾರೆ. ನನಗೆ ಯೋಗ ಗುರು ಹೇಳಿದ್ದಾರೆ. ಯೋಗ ಮಾಡುವವರು ಪದ್ಮಾಸನ ಹಾಕಬಲ್ಲರು ಅಂತ. ಆದರೆ ಮೋದಿಯವರು ಎಂದೂ ಪದ್ಮಾಸನ ಹಾಕಿಲ್ಲ. ಸ್ವಚ್ಛಭಾರತ, ಸ್ಕಿಲ್ ಇಂಡಿಯಾ ಇತ್ಯಾದಿ ಘೊಷಣೆಗಳೆಲ್ಲ ಈಗ ಮೂಲೆಪಾಲಾಗಿವೆ. ನೋಟು ರದ್ದತಿ ಮೂಲಕ ಅವರ ಭಾರತದ ಆರ್ಥಿಕತೆಯ ಬೆನ್ನುಮೂಳೆಯನ್ನೇ ಮುರಿದಿದ್ದಾರೆ ಎಂದು ರಾಹುಲ್ ನುಡಿದರು. ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರು ವೈದ್ಯಕೀಯ ಕಾರಣದಿಂದ ಸಮ್ಮೇಳನಕ್ಕೆ ಗೈರು ಹಾಜರಾಗಿದ್ದರು.
2017: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರೂಪಾಯಿ
ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕೆಲವೇ ದಿನಗಳ ಒಳಗಾಗಿ ಸರ್ಕಾರಿ ಮುದ್ರಣಾಲಯಗಳಿಂದ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಹೊಸ ಕರೆನ್ಸಿ ನೋಟುಗಳನ್ನು ನೇರವಾಗಿ ಜನರಿಗೆ ಮನೆಗಳಿಗೇ ವಿತರಣೆ (ಹೋಮ್ ಡೆಲಿವರಿ)ಮಾಡುವ ಕೆಲಸವನ್ನು ವ್ಯವಸ್ಥಿತ ಜಾಲ ಮಾಡಿತ್ತೆ ಎಂಬ ಬಗ್ಗೆ ಗುಮಾನಿ ಎದ್ದಿದ್ದು, ಬಗ್ಗೆ ಆದಾಯ ತೆರಿಗೆ ಮತ್ತು ಗುಪ್ತಚರ ಅಧಿಕಾರಿಗಳು ತನಿಖೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.  ದಕ್ಷಿಣ ದೆಹಲಿಯ ಮಾರುಕಟ್ಟೆಯಲ್ಲಿ 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳ 20 ಲಕ್ಷ ರೂಪಾಯಿಗಳು ಸರ್ಕಾರಿ ಕರೆನ್ಸಿ ಮುದ್ರಣಾಲಯಗಳ ಮೊಹರು ಸಹಿತವಾಗಿ ಪ್ಯಾಕ್ ಮಾಡಿದ್ದ
ಸ್ಥಿತಿಯಲ್ಲೇ ಪತ್ತೆಯಾದ ಬಳಿಕ ಬಗ್ಗೆ ತನಿಖೆಗೆ ಆದೇಶ ನೀಡಲಾಗಿತ್ತು.  ಆದಾಯ ತೆರಿಗೆ ಅಧಿಕಾರಿಗಳು ದಕ್ಷಿಣ ದೆಹಲಿ ಮಾರುಕಟ್ಟೆಯಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದಾಗ ಆತನ ಬಳಿ ನೋಟುಗಳ ಕಂತೆಗಳು ಲಭಿಸಿದ್ದವು. ನೋಟಿನ ಪ್ಯಾಕ್ಗಳಲ್ಲಿ ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಸರ್ಕಾರಿ ಮುದ್ರಣಾಲಯಗಳ ಮೊಹರುಗಳಿದ್ದವು. ಕೃಷ್ಣ ಕುಮಾರ್ ಎಂಬುದಾಗಿ ಬಂಧಿತ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಈತ ನೋಟು ಸಾಗಣೆ ಕೆಲಸ ಮಾಡುತ್ತಿದ್ದ
ಎನ್ನಲಾಯಿತು.. ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್-1 ಎಂ ಬ್ಲಾಕ್ ಮಾರುಕಟ್ಟೆಯಲ್ಲಿ ಡಿಸೆಂಬರ್ 15ರಂದು ಈತ ಕಾಯುತ್ತಾ ನಿಂತಿದ್ದಾಗ ತೆರಿಗೆ ಅಧಿಕಾರಿಗಳು ಅಲ್ಲಿಗೆ ಬಂದಿದ್ದರು. ಗುಪ್ತಚರ ಅಧಿಕಾರಿಗಳು ತೆರಿಗೆ ಅಧಿಕಾರಿಗಳಿಗೆ ಹೊಸ ಕರೆನ್ಸಿ ಸಾಗಣೆ ಸಂಬಂಧ ಸುಳಿವು ನೀಡಿದ್ದರು ಎಂದು ಸರ್ಕಾರಿ ಮೂಲಗಳು ಹೇಳಿದವು. ಸರ್ಕಾರಿ ಮುದ್ರಣಾಲಯಗಳ ಮೊಹರುಗಳಿದ್ದ ಹೊಸ ಕರೆನ್ಸಿ ನೋಟುಗಳ ಕಂತೆ ನೇರವಾಗಿ ಸಾರ್ವಜನಿಕರನ್ನು ತಲುಪಿದ್ದು ಬೆಳಕಿಗೆ ಬಂದ ಮೊತ್ತ ಮೊದಲ ಪ್ರಕರಣ ಇದು ಎಂದು ಆದಾಯ ತೆರಿಗೆ ಮತ್ತು ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಹೊಸ ನೋಟುಗಳ ಸೋರಿಕೆ ಎಲ್ಲಿ ಆಯಿತು ಮುದ್ರಣಾಲಯದಿಂದಲೇ ಅಥವಾ ಆರ್ಬಿಐ ಚೆಸ್ಟ್ನಿಂದಲೇ ಎಂಬುದನ್ನು ನಾವು ಪತ್ತೆ ಮಾಡಬೇಕಾಗಿದೆ. ನಿಟ್ಟಿನಲ್ಲಿ ಆರ್ಬಿಐ ಮಾಹಿತಿಗಾಗಿ ನಾವು ಕಾದಿದ್ದೇವೆ ಎಂದು ಅಧಿಕಾರಿಗಳು ಹೇಳಿದರು.  ಆರ್ಬಿಐಯಿಂದ ಈವರೆಗೆ ಪ್ರತಿಕ್ರಿಯೆ ಬಂದಿಲ್ಲವಾದರೂ, ಕರೆನ್ಸಿ ನೋಟುಗಳ ಮಿನಿ ಪ್ಯಾಕ್ಗಳು ಸಾಲ್ಬೊನಿ ಮತ್ತು ನಾಸಿಕ್ ಮುದ್ರಣಾಲಯಗಳಲ್ಲಿ ಮುದ್ರಣಗೊಂಡಿದ್ದವು ಎಂದು ಆರ್ಬಿಐ ಗುಪ್ತಚರ ದಳಕ್ಕೆ ತಿಳಿಸಿದೆ ಎಂದು ಮೂಲಗಳು ಹೇಳಿದವು. ಸರ್ಕಾರ ಬಿಡುಗಡೆ ಮಾಡುವ ಕರೆನ್ಸಿ ನೋಟುಗಳು ನೇರವಾಗಿ ಜನರ ಕೈಸೇರುವಂತಿಲ್ಲ. ನಿರ್ದಿಷ್ಟ ಹಾದಿಯ ಮೂಲಕವೇ ನೋಟುಗಳು ಪಯಣಿಸಬೇಕು. ಹಾದಿ ಕೆಳಗಿನಂತಿದೆ

2017: ಚಿಕಾಗೊ: ದೇಶದ ಪ್ರತಿಯೊಬ್ಬ ಪ್ರಜೆ ಪರಸ್ಪರ ಪಾಲ್ಗೊಳ್ಳುವ ವಿಶಾಲ ಮನೋಭಾವ
ಬೆಳೆಸಿಕೊಂಡಾಗ ನಿರೀಕ್ಷಿತ ಬದಲಾವಣೆ ಸಾಧ್ಯ. ಅಮೆರಿಕ ಇಂದು ಉತ್ತಮ ಸ್ಥಿತಿಯಲ್ಲಿದೆ. ಅತ್ಯುತ್ತಮ ದೇಶ ಎನಿಸಿಕೊಳ್ಳಲು ಇನ್ನಷ್ಟು ಬದಲಾವಣೆಗಳ ಅಗತ್ಯತೆ ಇದ್ದೇ ಇದೆ ಎಂದು ಅಧ್ಯಕ್ಷ ಬರಾಕ್ ಒಬಾಮ ಹೇಳಿದರು. ಅಧ್ಯಕ್ಷರಾಗಿ ತಮ್ಮ ಕಟ್ಟಕಡೆಯ ಭಾಷಣದಲ್ಲಿ ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಮತ್ತು ಭಯೋತ್ಪಾದನೆಯ ಕುರಿತು ಮಾತನಾಡಿದರು. ದೇಶವನ್ನು ಭಯೋತ್ಪಾದನೆಯ ಸುಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇಡಬೇಕಿದೆ. ಭಯೋತ್ಪಾದನೆಯಿಂದ ದೇಶದ ಅಭಿವೃದ್ಧಿಯೂ ಕುಂಠಿತಗೊಳ್ಳಲಿದೆ ಎಂದರು. ಇದೇ ವೇಳೆ ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಸಹಕರಿಸಿದವರಿಗೆ ಧನ್ಯವಾದ ಹೇಳಿ ಭಾವುಕರಾದರು. ನಾನು ನಿಮ್ಮಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಸಾಕಷ್ಟು ಅನುಭವಗಳನ್ನು ಮಾಡಿಕೊಂಡಿದ್ದೇನೆ. ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಒಬ್ಬ ಒಳ್ಳೆಯ ವ್ಯಕ್ತಿಯನ್ನಾಗಿ ರೂಪಿಸಿದ್ದೀರಿ ಎಂದರು. ಅಮೆರಿಕ ಈಗ ಸಾಕಷ್ಟು ಬಲಾಢ್ಯವಾಗಿ ಬೆಳೆದುನಿಂತಿದೆ. ದೇಶಕ್ಕೆ ಹಿರಿಯರು ದೊರಕಿಸಿಕೊಟ್ಟಿರುವ ಪ್ರಜಾಪ್ರಭುತ್ವ ಒಂದು ಅಸ್ತ್ರವಾಗಿದೆ. ಸ್ವಾತಂತ್ರ್ಯ ಮೂಲಕ ನಾವೆಲ್ಲರೂ ಇಂದು ನಮ್ಮ ನಮ್ಮ ಕನಸುಗಳನ್ನು ಈಡೇರಿಸಿಕೊಳ್ಳುವ ಹಾದಿಯಲ್ಲಿ ಸಾಗುತ್ತಿದ್ದೇವೆ. ದೇಶದಲ್ಲಿ ಬದಲಾವಣೆ ಆಗಬೇಕೆಂದರೆ ಪ್ರಜೆಗಳು ಪರಸ್ಪರ ಪಾಲ್ಗೊಳ್ಳುವ ಮನಸ್ಸು ಹೊಂದಿರಬೇಕು. ಆಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಪ್ರಜಾಪ್ರಭುತ್ವ ವಿಚಾರವಾಗಿ ಮಾತನಾಡುವ ವೇಳೆ ಪಕ್ಷಪಾತ ಧೋರಣೆ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಹೇಳಿದ ಬರಾಕ್ ಒಬಾಮ, ಮಾತಿನುದ್ದಕ್ಕೂ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು. ಅಲ್ಲದೆ, ಟ್ರಂಪ್ ದೇಶದ ಅಭಿವೃದ್ಧಿಗಾಗಿ ನಾವು ತಂದ ಯೋಜನೆಗಳನ್ನು ಮುಂದುವರಿಸುವ ಭರವಸೆ ಇದೆ ಎಂದೂ ಹೇಳಿದರು.
2009: ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಹುಬ್ಬಳ್ಳಿ ನ್ಯಾಯಾಲಯದಲ್ಲಿನ ಬಾಂಬ್ ಸ್ಛೋಟ, ಧಾರವಾಡ ಸಮೀಪದ ವೆಂಕಟಾಪೂರ ಗ್ರಾಮದ ಬಳಿ ಸೇತುವೆ ಕೆಳಗೆ ಶಕ್ತಿಶಾಲಿ ಬಾಂಬ್‌ಗಳನ್ನು ಹುದುಗಿಸಿಟ್ಟಿದ್ದ ಪ್ರಕರಣ, ಹಲವಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದರು. ದೀಪಾವಳಿ ದಿನ (ಅ.29) ನಡೆದ ವ್ಯಾಪಾರಿ ಕಿರಣ ಕುಮಟಗಿ ಎಂಬವರ ಹತ್ಯೆ ಪ್ರಕರಣದ ತನಿಖೆ ಆರಂಭಿಸಿದ ನಗರದ ಪೊಲೀಸರು, ಹುಬ್ಬಳ್ಳಿ ಬಾಂಬ್ ಸ್ಛೋಟ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉದ್ದೇಶಿಸಿದ್ದ ದುಷ್ಕರ್ಮಿಗಳ ಜಾಲವನ್ನು ಭೇದಿಸಿದರು.

2008: 2007- 08ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿತು. ಜೀವಮಾನದ ಸಾಧನೆ ಪ್ರಶಸ್ತಿಗಾಗಿ ಹಿರಿಯ ನಿರ್ದೇಶಕ ರೇಣುಕಾ ಶರ್ಮ ಅವರನ್ನು (ಪುಟ್ಟಣ್ಣ ಕಣಗಾಲ್ ಪ್ರಶಸ್ತಿ), ಡಾ. ವಿಷ್ಣುವರ್ಧನ್ (ಡಾ. ರಾಜ್‌ಕುಮಾರ್ ಪ್ರಶಸ್ತಿ) ಮತ್ತು ಪಾರ್ವತಮ್ಮ ರಾಜ್‌ಕುಮಾರ್ (ನಿರ್ಮಾಪಕಿ) ಅವರನ್ನು ಆಯ್ಕೆ ಮಾಡಲಾಯಿತು. ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಗುಲಾಬಿ ಟಾಕೀಸ್' ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಪಿ.ಆರ್. ರಾಮದಾಸ ನಾಯ್ಡು ನಿರ್ದೇಶನದ 'ಮೊಗ್ಗಿನ ಜಡೆ' ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ 'ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರಗಳು ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. 'ಮಿಲನ' ಚಿತ್ರದಲ್ಲಿನ ಅಭಿನಯಕ್ಕಾಗಿ ಪುನೀತ್ ರಾಜ್‌ಕುಮಾರ್ ಅವರು ಸುಬ್ಬಯ್ಯ ನಾಯ್ಡು (ಅತ್ಯುತ್ತಮ ನಟ) ಪ್ರಶಸ್ತಿ ಪಡೆದರು. ಗುಲಾಬಿ ಟಾಕೀಸ್ ಚಿತ್ರದಲ್ಲಿನ ನಟನೆಗಾಗಿ ಉಮಾಶ್ರೀ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ನೀಡಲಾಯಿತು. ಉಮಾಶಂಕರ ಸ್ವಾಮಿ ನಿರ್ದೇಶನದ 'ಬನದ ನೆರಳು' ಚಿತ್ರವನ್ನು ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಏಕಲವ್ಯ' ಚಿತ್ರಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ದೊರಕಿತು. ತುಳು ಚಿತ್ರ 'ಬಿರ್ಸೆ' ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಪ್ರಶಸ್ತಿ ಗಳಿಸಿತು. ಇತರೆ ಪ್ರಶಸ್ತಿ ಪುರಸ್ಕೃತರು: ಅತ್ಯುತ್ತಮ ಪೋಷಕ ನಟ ಪ್ರಶಸ್ತಿ- ರಾಜೇಶ್ (ಮೊಗ್ಗಿನ ಜಡೆ), ಅತ್ಯುತ್ತಮ ಪೋಷಕ ನಟಿ- ಸ್ಮಿತಾ (ಅವ್ವ). ಅತ್ಯುತ್ತಮ ಕಂಠದಾನ ಕಲಾವಿದ- ಸುದರ್ಶನ್ (ಆ ದಿನಗಳು), ಅತ್ಯುತ್ತಮ ಕಂಠದಾನ ಕಲಾವಿದೆ- ಚಂಪಾಶೆಟ್ಟಿ (ಕುರುನಾಡು), ಅತ್ಯುತ್ತಮ ಕಥೆ ಬರಹಗಾರ- ಪಿ. ಲಂಕೇಶ್ (ಅವ್ವ), ಅತ್ಯುತ್ತಮ ಚಿತ್ರಕಥೆ ಬರಹಗಾರ- ಗಿರೀಶ್ ಕಾಸರವಳ್ಳಿ (ಗುಲಾಬಿ ಟಾಕೀಸ್), ಅತ್ಯುತ್ತಮ ಸಂಭಾಷಣೆಕಾರ- ಅಗ್ನಿ ಶ್ರೀಧರ್ (ಆ ದಿನಗಳು), ಅತ್ಯುತ್ತಮ ಛಾಯಾಗ್ರಾಹಕ- ಎಚ್.ಸಿ. ವೇಣು (ಆ ದಿನಗಳು), ಅತ್ಯುತ್ತಮ ಸಂಗೀತ ನಿರ್ದೇಶಕ- ಸಾಧು ಕೋಕಿಲ ( ಇಂತಿ ನಿನ್ನ ಪ್ರೀತಿಯ). ಅತ್ಯುತ್ತಮ ಧ್ವನಿ ಗ್ರಾಹಕ- ಎನ್. ಕುಮಾರ್ (ಆಕ್ಸಿಡೆಂಟ್), ಅತ್ಯುತ್ತಮ ಸಂಕಲನಕಾರ- ಸುರೇಶ್ ಅರಸ್ (ಸವಿಸವಿ ನೆನಪು), ಅತ್ಯುತ್ತಮ ಬಾಲನಟ- ಮಾಸ್ಟರ್ ಲಿಖಿತ್ (ನಾನು ಗಾಂಧಿ), ಅತ್ಯುತ್ತಮ ಬಾಲನಟಿ- ಬೇಬಿ ಪ್ರಕೃತಿ (ಗುಬ್ಬಚ್ಚಿಗಳು), ಅತ್ಯುತ್ತಮ ಕಲಾ ನಿರ್ದೇಶಕ- ಜಿ. ಮೂರ್ತಿ, ಅತ್ಯುತ್ತಮ ಗೀತ ರಚನೆಕಾರ- ಗೊಲ್ಲಹಳ್ಳಿ ಶಿವಪ್ರಸಾದ್ (ಮಾತಾಡ್ ಮಾತಾಡ್ ಮಲ್ಲಿಗೆ- ಝಣ ಝಣ ಕಾಂಚಾಣದಲ್ಲಿ...), ಅತ್ಯುತ್ತಮ ಹಿನ್ನೆಲೆ ಗಾಯಕ- ಎಸ್.ಪಿ. ಬಾಲಸ್ಗ್ರುಹ್ಮಣ್ಯಂ (ಸವಿಸವಿ ನೆನಪು- ನೆನಪು ನೆನಪು ಅವಳ ನೆನಪು...), ಅತ್ಯುತ್ತಮ ಹಿನ್ನೆಲೆ ಗಾಯಕಿ- ವಾಣಿ (ಇಂತಿ ನಿನ್ನ ಪ್ರೀತಿಯ- ಮಧ್ಗುನ ಕರೆದರೇ...).

2009: ಶಿರ್ಡಿಯ ಶಿರ್ಡಿ ಸಾಯಿಬಾಬಾ ಮಂದಿರದ ಗೋಡೆಗಳನ್ನು ಬಂಗಾರದ ಹೊದಿಕೆಯಿಂದ ಅಲಂಕರಿಸಲಾಯಿತು. 50 ಕೆ.ಜಿ.ಬಂಗಾರ, 50ಕೆ.ಜಿ. ಕಂಚು ಹಾಗೂ 250 ಕೆ.ಜಿ.ತಾಮ್ರದಿಂದ ತಯಾರಿಸಲಾದ ಈ ಹೊದಿಕೆಯನ್ನು ಹೈದರಾಬಾದ್ ಮೂಲದ ಉದ್ಯಮಿ ಆದಿನಾರಾಯಣ ರೆಡ್ಡಿ ಅವರು ಸಾಯಿಬಾಬಾ ಮಂದಿರಕ್ಕೆ ಸಮರ್ಪಿಸಿದರು.

2009: ಕೇಂದ್ರ ಸರ್ಕಾರ ಐಟಿ ಕ್ಷೇತ್ರ ಪರಿಣತ, ನಾಸ್ಕಾಂನ ಮಾಜಿ ಅಧ್ಯಕ್ಷ ಕಿರಣ್ ಕಾರ್ನಿಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪಾರೇಕ್ ಮತ್ತು ಕೇಂದ್ರ ಸರ್ಕಾರದ ಕಾನೂನು ಸಲಹೆಗಾರ ಅಚ್ಯುತನ್ ಅವರನ್ನು ಸತ್ಯಂ ಕಂಪ್ಯೂಟರ್‌ನ ಹೊಸ ನಿರ್ದೇಶಕರಾಗಿ ಭಾನುವಾರ ನೇಮಿಸಿತು.

2008: ಜಗತ್ತಿನ ಅತ್ಯುನ್ನತ `ಮೌಂಟ್ ಎವರೆಸ್ಟ್' ಶಿಖರವನ್ನೇರಿದ ಮೊದಲಿಗರಲ್ಲಿ ಒಬ್ಬರಾದ ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲೆರಿ (88) ವೆಲಿಂಗ್ಟನ್ನಿನಲ್ಲಿ ಈದಿನ ನಿಧನರಾದರು. ಹಿಲೆರಿಯವರು 1953ರಲ್ಲಿ ನೇಪಾಳದ ತೇನಸಿಂಗ್ ನೊರ್ಗೇ ಶೆರ್ಪಾ ಅವರೊಂದಿಗೆ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಹತ್ತುವ ಮೂಲಕ ಸಾಧನೆಯ ಕೀರ್ತಿ ಪತಾಕೆ ಹಾರಿಸಿದ್ದರು. ನೇಪಾಳದಲ್ಲಿ ಹಿಲೆರಿಯವರ ನಿಧನದ ಸುದ್ದಿ ಅರಿತ ಶೆರ್ಪಾ ಸ್ನೇಹಿತರು ಬೌದ್ಧ ಧರ್ಮಸ್ಥಾನಗಳಲ್ಲಿ ಮೇಣದ ಬತ್ತಿಗಳನ್ನು ಹಚ್ಚಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮೌಂಟ್ ಎವರೆಸ್ಟ್ ಶಿಖರವಿರುವ ಸೋಲುಕುಂಭು ಪ್ರದೇಶ ಮತ್ತು ಅಲ್ಲಿನ ಜನರಿಗೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಹಿಲೆರಿಯವರಿಗೆ 2003ರಲ್ಲಿ `ನೇಪಾಳಿ ನಾಗರಿಕ ಪ್ರಶಸ್ತಿ' ನೀಡಿ ಗೌರವಿಸಲಾಗಿತ್ತು. ಇಲ್ಲಿನ ಶೆರ್ಪಾ ಸಮುದಾಯದವರಿಗಾಗಿ ಶಾಲೆ ಮತ್ತು ಆಸ್ಪತ್ರೆಯನ್ನು ಸಹಾ ಹಿಲೆರಿ ಸ್ಥಾಪಿಸಿದ್ದರು. 1919ರ ಜುಲೈ 20ರಂದು ಆಕ್ಲ್ಯಾಂಡಿನಲ್ಲಿ ಜನಿಸಿದ ಹಿಲೆರಿ, ತಮ್ಮ 33ನೇ ವಯಸ್ಸಿನಲ್ಲಿ ಮೌಂಟ್ ಎವರೆಸ್ಟ್ ಏರಿದರು. ಆಕ್ಲ್ಯಾಂಡಿನಲ್ಲಿ ಜೇನು ಸಾಕಣಿಕೆದಾರರಾಗಿದ್ದ ಅವರು ತಮ್ಮ ಸಾಹಸಮಯ ಶ್ರಮ ಪೂರ್ಣವಾಗುವ ತನಕವೂ ಗುರಿ ಬಿಡದೆ ಸಾಧನೆ ಮಾಡಿದರು. ಆರು ಅಡಿ ಎತ್ತರ ಮತ್ತು ಬಲಶಾಲಿ ಶರೀರ ಹೊಂದಿದ್ದ ಹಿಲೆರಿ ಹಿಮಾಲಯ ಪರ್ವತದಲ್ಲಿ ಹೊಂದಿದ್ದ ಅನುಭವವನ್ನು ಗುರುತಿಸಿದ ಬ್ರಿಟಿಷ್ ಸಾಹಸ ತಂಡದ ನಾಯಕ ಜಾನ್ ಹಂಟ್ ಅವರು ಎವರೆಸ್ಟ್ ಶಿಖರ ಏರುವ ಅಂತಿಮ ಸ್ಪರ್ಧಿಯಾಗಿ ಆಯ್ಕೆ ಮಾಡಿದರು. ಇವರೊಂದಿಗೆ ಶೆರ್ಪಾ ತೇನಸಿಂಗ್ ಪರ್ವತಾರೋಹಣದ ಜೊತೆಗಾರನಾಗಿ ಆಯ್ಕೆಯಾಗಿದ್ದರು. ಇಬ್ಬರೂ ತಮ್ಮ ಅಪೂರ್ವ ಸಾಹಸ, ನಿಷ್ಠೆ- ಬದ್ಧತೆಯಿಂದ ನಿದ್ರೆಯಿಲ್ಲದ ರಾತ್ರಿ ಕಳೆದು ಅಭೂತಪೂರ್ವ ಸಾಧನೆ ಮಾಡಿದ್ದರು. ತೇನ್ ಸಿಂಗ್ ಅವರು 1986ರಲ್ಲಿ ಮೃತರಾಗಿದ್ದಾರೆ.

2008: ದೇಶದ ಅತಿದೊಡ್ಡ ಚಿನ್ನಾಭರಣ ಮಾರುಕಟ್ಟೆ ಆಗಿರುವ ಮುಂಬೈ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಈ ಮೊದಲಿನ ಎಲ್ಲ ದಾಖಲೆಗಳನ್ನು ಹಿಂದಿಕ್ಕಿ ಪ್ರತಿ 10 ಗ್ರಾಂಗಳಿಗೆ ರೂ 215ರಷ್ಟು ಹೆಚ್ಚಳಗೊಂಡಿತು. ಬೆಳ್ಳಿಯೂ ಪ್ರತಿ ಕೆಜಿಗೆ ರೂ 390ರಷ್ಟು ಹೆಚ್ಚಳಗೊಂಡು ರೂ 20,625ರಷ್ಟಕ್ಕೆ ತಲುಪಿತು. ಇದು ಕಳೆದ 9 ವಾರಗಳಲ್ಲಿಯೇ ಗರಿಷ್ಠ ದರ. ಆಭರಣ ಚಿನ್ನ ಪ್ರತಿ 10 ಗ್ರಾಂಗೆ ರೂ 11,355 ಮತ್ತು ಅಪರಂಜಿ ಚಿನ್ನ ರೂ 11,405ರಷ್ಟಕ್ಕೆ ಏರಿಕೆ ದಾಖಲಿಸಿದವು.

2008: ಮಲೇಷ್ಯಾದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಪ್ರಮುಖ ಅಂಗ ಪಕ್ಷವಾದ ಎಂಐಸಿ ಶಾಸಕ, ಭಾರತೀಯ ಮೂಲದ ಎಸ್. ಕೃಷ್ಣಸ್ವಾಮಿ (58) ಅವರನ್ನು ಅವರ ಪಕ್ಷದ ಕಚೇರಿಯಲ್ಲಿದ್ದಾಗಲೇ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ದಕ್ಷಿಣ ಭಾಗದ ಜೊಹೋರ್ ಬಾರು ನಗರದಲ್ಲಿ ಘಟಿಸಿತು.

2008: ಬಾಲಿವುಡ್ ನಟ ಶಾರುಕ್ ಖಾನ್ ಹಾಗೂ ನಟಿ ಕರೀನಾ ಕಪೂರ್ ಅವರು 2007ನೇ ಸಾಲಿನ `ಸ್ಕ್ರೀನ್ ಪ್ರಶಸ್ತಿ'ಯನ್ನು ಈದಿನ ಮುಂಬೈಯಲ್ಲಿ ಸ್ವೀಕರಿಸಿದರು. ಶಾರುಕ್ ಪ್ರಶಸ್ತಿಯನ್ನು ತಾವೇ ಸ್ವೀಕರಿಸಿದರೆ, ಕರೀನಾ ಅನುಪಸ್ಥಿತಿಯಲ್ಲಿ ಅವರ ಅಕ್ಕ ಕರೀಷ್ಮಾ ಕಪೂರ್ ಪ್ರಶಸ್ತಿಯನ್ನು ಸ್ವೀಕರಿಸಿದರು. `ಚಕ್ ದೇ ಇಂಡಿಯಾ' ಸಿನಿಮಾದಲ್ಲಿ ಮಹಿಳಾ ಹಾಕಿ ತಂಡದ ತರಬೇತುದಾರನಾಗಿ ಶಾರುಖ್ ನೀಡಿದ ಉತ್ತಮ ನಟನೆ ಹಾಗೂ `ಜಬ್ ವಿ ಮೆಟ್' ಚಿತ್ರದ ನಟನೆಗಾಗಿ ಕರೀನಾ ಕಪೂರ್ ಪ್ರಶಸ್ತಿ ಪಡೆದರು. 2007ನೇ ಸಾಲಿನ ಉತ್ತಮ ಸಿನಿಮಾ ಎಂದು `ಚಕ್ ದೇ ಇಂಡಿಯಾ' ಆಯ್ಕೆಯಾದರೆ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು `ತಾರೆ ಜಮೀನ್ ಪರ್' ಚಿತ್ರದ ನಿರ್ದೇಶನಕ್ಕೆ ಅಮೀರ್ ಖಾನ್ ಪಡೆದರು.

2008: ತಮಿಳುನಾಡಿನಲ್ಲಿ ಪೊಂಗಲ್ ಸಂದರ್ಭದಲ್ಲಿ ನಡೆಯುವ ಗೂಳಿ ಕಾಳಗ ನಡೆಸದಂತೆ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸಲು ಸುಪ್ರೀಂಕೋರ್ಟಿನ ಪೀಠವೊಂದು ನಿರಾಕರಿಸಿತು. ಗೂಳಿ ಕಾಳಗಕ್ಕೆ ಮುನ್ನ ಮೆಣಸಿನಪುಡಿಯನ್ನು ಅವುಗಳ ಕಣ್ಣಿಗೆ ಎರಚುವುದಲ್ಲದೆ ರೋಷ ಉಕ್ಕಿಸಲು ಮದ್ಯವನ್ನೂ ಅವುಗಳಿಗೆ ನೀಡಲಾಗುತ್ತದೆ. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ಆರ್.ವಿ. ರವೀಂದ್ರನ್ ಮತ್ತು ಜೆ.ಎಂ. ಪಾಂಚಾಲ್ ಅವರನ್ನೊಳಗೊಂಡ ಪೀಠವು `ಇದು ಕ್ರೂರ ಮತ್ತು ಅಮಾನುಷ ಕೃತ್ಯ' ಎಂದು ಅಭಿಪ್ರಾಯಪಟ್ಟಿತು. ಪ್ರಾಣಿ ಹಿಂಸೆಗೆ ಪ್ರಚೋದನೆ ನೀಡುವ ಈ ಕ್ರೀಡೆ ನಡೆಸದಂತೆ ತಡೆಯಾಜ್ಞೆ ನೀಡಬೇಕು ಎಂದು ಪ್ರಾಣಿ ಕಲ್ಯಾಣ ಮಂಡಳಿ ಕಳೆದ ವರ್ಷ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ಮಾನ್ಯ ಮಾಡಿತ್ತು. ಆದರೆ ಸಾಂಸ್ಕೃತಿಕ ಇತಿಹಾಸ ಹೊಂದಿದ ಈ ಕ್ರೀಡೆ ನಡೆಸಲು ಅವಕಾಶ ನೀಡಬೇಕೆಂದು ತಮಿಳುನಾಡು ಸರ್ಕಾರ ಅರ್ಜಿ ಸಲ್ಲಿಸಿತ್ತು. ಪೀಠವು ಈ ಅರ್ಜಿಯನ್ನು ತಳ್ಳಿಹಾಕಿತು.

2008: ಹರಿಯಾಣ ಸರ್ಕಾರ ಕೂಡಾ ಪರಿಶಿಷ್ಟ ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯಪುಸ್ತಕ ಹಾಗೂ ಸೈಕಲ್ ನೀಡುವ ಯೋಜನೆ ಪ್ರಕಟಿಸಿತು. ರಾಜ್ಯದ ಸುಮಾರು 8,909 ವಿದ್ಯಾರ್ಥಿನಿಯರಿಗೆ ಇದರ ಪ್ರಯೋಜನ ಲಭಿಸಲಿದೆ. ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿನಿಯರು ಇದರ ಫಲಾನುಭವಿಗಳಾಗಿದ್ದು, ಪಠ್ಯಪುಸ್ತಕ ಹಾಗೂ ಸೈಕಲ್ ಒದಗಿಸಲು ಸರ್ಕಾರ ರೂ 4.75 ಕೋಟಿ ವೆಚ್ಚದಲ್ಲಿ ಈ ಈ ಯೋಜನೆ ರೂಪಿಸಿದೆ.

2008: ನಂದಿಗ್ರಾಮ ವಿಶೇಷ ಆರ್ಥಿಕ ವಲಯ ಸ್ಥಾಪನೆ ವಿರೋಧಿಸಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ 14 ಜನರು ಪೊಲೀಸ್ ಗೋಲಿಬಾರಿಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಮತ್ತು ನಂದಿ ಗ್ರಾಮದ ನಿವಾಸಿಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿತು. ವಿಶೇಷ ಆರ್ಥಿಕ ವಲಯ ಸ್ಥಾಪನೆ ವಿರೋಧಿಸಿ ನಡೆದ ಹೋರಾಟ, ಸಿಪಿಐ (ಎಂ) ಕಾರ್ಯಕರ್ತರು ನಡೆದುಕೊಂಡ ರೀತಿ, ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ವೈಫಲ್ಯ ಉಲ್ಲೇಖಿಸಿ ಕೋಲ್ಕತಾ ಹೈಕೋರ್ಟ್ ವಕೀಲರ ಸಂಘ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿತ್ತು. ಜೊತೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಸ್ವಯಂ ಪ್ರೇರಿತರಾಗಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.

2008: `ಅನ್ನ ಕೊಡುವ ರೈತನ ಆತ್ಮಹತ್ಯೆ ತಡೆಯಲು ಸಾವಯವ ಕೃಷಿಯೊಂದೇ ಸೂಕ್ತ ಪರಿಹಾರ' ಎಂದು ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ವಂದನಾ ಶಿವ ಬೆಂಗಳೂರಿನಲ್ಲಿ ಪ್ರತಿಪಾದಿಸಿದರು. `ಬಹುರಾಷ್ಟ್ರೀಯ ಕಂಪೆನಿಗಳ ಹುನ್ನಾರದಿಂದ ದೇಶಿ ತಳಿಗಳು ಹಾಗೂ ಕೃಷಿ ಬೀಜ ಪೇಟೆಂಟಿಗೆ ಒಳಗಾಗಿವೆ. ಕೇವಲ ಲಾಭ ಮಾಡುವ ಉದ್ದೇಶದಿಂದ ನಡೆಯುವ ಇಂತಹ ಕೃತ್ಯಗಳ ಬಗ್ಗೆ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ಉಣ್ಣುವ ಅನ್ನವೇ ವಿಷವಾಗುವ ಸಾಧ್ಯತೆ ಇದೆ' ಎಂದು ಅವರು ಎಚ್ಚರಿಸಿದರು. ಫ್ರೆಂಡ್ಸ್ ಆಫ್ ಆರ್ಗ್ಯಾನಿಕ್ ಸಂಸ್ಥೆ ಆಯೋಜಿಸಿದ್ದ `ರಾಷ್ಟ್ರೀಯ ಕೃಷಿ ನೀತಿ ಒಂದು ಸಂವಾದ' ಹಾಗೂ ಸಾವಯವ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. `1986ರಲ್ಲಿ ದೇಶಕ್ಕೆ ಗೋಧಿ ಆಮದು ಮಾಡಿಕೊಂಡಾಗ ಅದರೊಂದಿಗೆ ಬಂದ ಕೇವಲ ಒಂದು ಕಳೆ `ಲಂಟಾನ' ಇಂದು ದೇಶದ ಎಲ್ಲ ಭಾಗಗಳಿಗೆ ಹರಡಿ ವಿಷವಾಗತೊಡಗಿದೆ. ಇದೇ ರೀತಿ ದೇಶದೊಳಗೆ ತಲೆ ಎತ್ತುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ರೈತರ ಪ್ರಾಣ ಹಿಂಡುತ್ತಿವೆ' ಎಂದು ಅವರು ನುಡಿದರು. `ಕೇಂದ್ರದ `ರಾಷ್ಟ್ರೀಯ ರೈತರ ನೀತಿ-2007' ಕೂಡ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಅದರಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ. ಅದು ಆಹಾರ ಭದ್ರತೆ ನೀಡುವ ಬದಲು ಲಾಭದ ಬಗ್ಗೆ ಮಾತನಾಡುವಂತೆ ಮಾಡಿದೆ. `ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶದ ರೈತರ ಮೇಲೆ ನಾನಾ ವಿಧಗಳ ಮೂಲಕ ಹಿಡಿತ ಸಾಧಿಸುತ್ತಿವೆ. ಕುಲಾಂತರಿ ತಳಿಗಳನ್ನು ಸಂಪೂರ್ಣವಾಗಿ ನಿಷೇಧಿಸಿ, ಸಾವಯವ ಕೃಷಿಯನ್ನು ಒಂದು ಚಳವಳಿಯಾಗಿ ಕೈಗೊಳ್ಳಬೇಕಾಗಿದೆ. ಇದಕ್ಕೆ ಎಲ್ಲ ವರ್ಗದವರ ಪ್ರೋತ್ಸಾಹ ಬೇಕು' ಎಂದು ವಂದನಾ ನುಡಿದರು. ಜಮೀನಿನಲ್ಲಿ ಬೆವರು ಸುರಿಸಿ ದುಡಿಯುವ ರೈತರಿಗಿಂತ ಐಷಾರಾಮಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ದೇಶದ ಕೃಷಿ ಚಟುವಟಿಕೆಯನ್ನು ನಿಯಂತ್ರಿಸುವ ಜನರಿಗೆ ಇಂದು ಹೆಚ್ಚು ಬೆಲೆ ಬಂದಿದೆ. ಆದರೆ ಇಂತಹ ಪರಿಸ್ಥಿತಿ ಬದಲಾಗಬೇಕು, ರೈತ, ಅನ್ನದಾತ ಎಂಬುದನ್ನು ಮರೆಯಬಾರದು' ಎಂದು ಅವರು ಹೇಳಿದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗೇಶ ಹೆಗಡೆ, ಸಾವಯವ ಕೃಷಿಕ ಭರಮಗೌಡ, ಪರಿಸರವಾದಿ ಡಾ.ಎಲ್.ನಾರಾಯಣರೆಡ್ಡಿ ಅವರನ್ನು ಸನ್ಮಾನಿಸಲಾಯಿತು.

2008: ಸಾರ್ವಜನಿಕ ಹಿತದೃಷ್ಟಿಯಿಂದ ಬೆಂಗಳೂರು ನಗರದಲ್ಲಿ ಇನ್ನೂ ಒಂಬತ್ತು ಹೊಸ ಉಪ ನೋಂದಣಿ ಕಚೇರಿಗಳನ್ನು ಪ್ರಾರಂಭಿಸಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ರಾಜಾಜಿನಗರ, ಜಯನಗರ, ಬಸವನಗುಡಿ, ಗಾಂಧಿನಗರ, ಶ್ರೀರಾಮಪುರ ಮತ್ತು ಶಿವಾಜಿನಗರ - ಈ ಆರು ಉಪ ನೋಂದಣಿ ಕಚೇರಿಗಳನ್ನು ವಿಭಜಿಸಿ, ಒಂಬತ್ತು ಕಚೇರಿಗಳನ್ನಾಗಿ ಮಾಡಲಾಗಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಎಚ್. ಶಶಿಧರ್ ಪ್ರಕಟಿಸಿದರು. ಇಂದಿರಾನಗರ, ಹಲಸೂರು, ಚಾಮರಾಜಪೇಟೆ, ವಿಜಯನಗರ; ಯಶವಂತಪುರ; ಶಾಂತಿನಗರ, ಬಿಟಿಎಂ ಲೇಔಟ್, ಮಲ್ಲೇಶ್ವರ ಮತ್ತು ಗಂಗಾನಗರದಲ್ಲಿ ಹೊಸ ಉಪ ನೋಂದಣಿ ಕಚೇರಿಗಳನ್ನು ಸ್ಥಾಪಿಸಿ, ಅವುಗಳ ಗಡಿಯನ್ನೂ ಗುರುತಿಸಲಾಗಿದೆ ಎಂದು ಶಶಿಧರ್ ನುಡಿದರು.

2007: ಸಂವಿಧಾನದ 9ನೇ ಪರಿಚ್ಛೇದದಲ್ಲಿ (ಶೆಡ್ಯೂಲ್) 1973ರ ಏಪ್ರಿಲ್ 24ರ ನಂತರ ಸೇರಿಸಲಾದ ಕಾಯ್ದೆಗಳು ನ್ಯಾಯಾಂಗದ ಪರಾಮರ್ಶೆ ವ್ಯಾಪ್ತಿಗೆ ಒಳಪಡುತ್ತವೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. 9ನೇ ಪರಿಚ್ಛೇದದಲ್ಲಿ ಸೇರಿಸಲಾದ ಕಾಯ್ದೆಗಳು ಸಂವಿಧಾನದ ಮೂಲ ಸ್ವರೂಪ ಉಲ್ಲಂಘಿಸುವಂತಿದ್ದರೆ ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ನೇತೃತ್ವದ 9 ಮಂದಿ ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂಕೋರ್ಟಿನ ಸಂವಿಧಾನ ಪೀಠ ಸರ್ವಾನುಮತದ ತೀರ್ಪಿನಲ್ಲಿ ತಿಳಿಸಿತು. ಯಾವುದೇ ಕಾಯ್ದೆ ಸಂವಿಧಾನದ 14,19,20 ಮತ್ತು 21ನೇ ವಿಧಿಯಡಿ ನೀಡಲಾದ ಮೂಲಭೂತ ಹಕ್ಕುಗಳಿಗೆ ಧಕ್ಕೆ ತರುವಂತಿದ್ದರೆ ಅದು ಸಂವಿಧಾನದ ಮೂಲ ಸ್ವರೂಪದ ಉಲ್ಲಂಘನೆ ಎಂದು ಕೋರ್ಟ್ ಈ ಹಿಂದೆ ಅನೇಕ ಸಲ ಸ್ಪಷ್ಟಪಡಿಸಿತ್ತು. 9ನೇ ಪರಿಚ್ಛೇದದಲ್ಲಿ ಒಟ್ಟೂ 284 ಕಾಯ್ದೆಗಳಿವೆ. ಈ ಪೈಕಿ 1973ಕ್ಕೆ ಮೊದಲು ಸೇರ್ಪಡೆಯಾದ 13 ಕಾಯ್ದೆ ಬಿಟ್ಟು ಉಳಿದೆಲ್ಲವನ್ನು ಈ ತೀರ್ಪಿನ ಪರಿಣಾಮವಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶ ದೊರೆಯಲಿದೆ. 1973ರ ಏಪ್ರಿಲ್ 24ರಂದು ಕೇಶವಾನಂದ ಭಾರತಿ ಪ್ರಕರಣದಲ್ಲಿ 13 ನ್ಯಾಯಮೂರ್ತಿಗಳಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ನೀಡಿ, `ಸಂವಿಧಾನದ ಮೂಲ ಸ್ವರೂಪ ಬದಲಿಸಲು ಸಂಸತ್ತಿಗೂ ಅಧಿಕಾರವಿಲ್ಲ' ಎಂದು ಹೇಳಿತ್ತು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೀಸಲಾತಿ ನೀತಿ ಸೇರಿದಂತೆ, ಈ ತೀರ್ಪು ಸರ್ಕಾರದ ಹಲವಾರು ನೀತಿ, ನಿಯಮಾವಳಿಗಳ ಮೇಲೆ ಗಂಭೀರ ಪರಿಣಾಮ ಬೀರುವ ನಿರೀಕ್ಷೆ ಮೂಡಿಸಿತು. ಸರ್ಕಾರವು, ನ್ಯಾಯಾಲಯಗಳ ಪರಿಶೀಲನಾ ವ್ಯಾಪ್ತಿ ಮೀರಿದ ಕಾಯ್ದೆಗಳನ್ನು ರೂಪಿಸುವುದನ್ನು ಪ್ರಶ್ನಿಸಿ `ಕಾಮನ್ ಕಾಸ್' ಎಂಬ ಸರ್ಕಾರೇತರೇತರ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಮತ ವ್ಯಕ್ತಪಡಿಸಿತು. ಯಾವುದೇ ಕಾಯ್ದೆಯನ್ನು 9ನೇ ಪರಿಚ್ಛೇದದಡಿ ಸೇರಿಸಬೇಕಾದರೆ, ಸರ್ಕಾರ ಮೂಲಭೂತ ಹಕ್ಕುಗಳು ಹಾಗೂ ನಿರ್ದೇಶಕ ತತ್ವಗಳ ((directive principles)  ನಡುವೆ ಸಮತೋಲನ ಕಾಯ್ದುಕೊಳ್ಳಲು ಮಧ್ಯಮ ಮಾರ್ಗ ಅನುಸರಿಸಬೇಕು. ಆ ಕಾಯ್ದೆ ನಾಗರಿಕರ ಪರ ಸ್ವಲ್ಪ ವಾಲಿರಬೇಕು ಎಂದು ಪೀಠ ಹೇಳಿತು. ಯಾವುದೇ ಸಂದರ್ಭದಲ್ಲೂ ಮೀಸಲಾತಿ ಶೇ 50ರಷ್ಟನ್ನು ಮೀರಬಾರದು ಎಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ನಿರರ್ಥಕಗೊಳಿಸಲು ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ ಶೇ 69ರಷ್ಟು ಮೀಸಲಾತಿ ನೀಡಿ ಅದನ್ನು 9ನೇ ಪರಿಚ್ಛೇದದಡಿ ಸೇರಿಸಿತ್ತು. ಅದೇ ರೀತಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಭೂ ಸುಧಾರಣೆ ಕಾಯ್ದೆ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದ ಕಾಯ್ದೆಗಳೂ 9ನೇ ಪರಿಚ್ಛೇದದಡಿ ಸೇರಿದ್ದವು.. ಈಗ ಆ ಕಾಯ್ದೆಗಳೆಲ್ಲ ನ್ಯಾಯಾಂಗ ಪರಿಶೀಲನೆಗೆ ಅರ್ಹವಾಗುವುವು. ಇದಲ್ಲದೇ ಕೇಂದ್ರ ಕಲ್ಲಿದ್ದಲು ಗಣಿ ಕಾಯ್ದೆ 1974, ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ (ಕಾಫಿ ಪೋಸಾ) ಕಾಯ್ದೆ 1974, ರೋಗಗ್ರಸ್ತ ಜವಳಿ ಉದ್ಯಮ ಸ್ವಾಧೀನ ಕಾಯ್ದೆ 1974, ಒರಿಸ್ಸಾ ಹಾಗೂ ಉತ್ತರ ಪ್ರದೇಶದ ಭೂ ಸುಧಾರಣೆ ಕಾಯ್ದೆ ಹಾಗೂ ಅಗತ್ಯ ಸೇವಾ ಕಾಯ್ದೆಗಳು (ಎಸ್ಮಾ) ಕೋರ್ಟಿನ ಪರಾಮರ್ಶೆಗೆ ಅರ್ಹವಾಗಲಿವೆ.

2007: ಅವಾಮೀ ಲೀಗ್ ನೇತೃತ್ವದ ಪ್ರಮುಖ ವಿರೋಧಿ ಮೈತ್ರಿಕೂಟದ ಒತ್ತಡಕ್ಕೆ ಮಣಿದು ಬಾಂಗ್ಲಾದೇಶದ ಅಧ್ಯಕ್ಷ ಇಯಾಜ್ದುದೀನ್ ಅಹಮದ್ ಅವರು ಈದಿನ ರಾತ್ರಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ನೀಡಿದರು. ಜನವರಿ 22ರ ವಿವಾದಾತ್ಮಕ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿಯೇ ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿದ ಬಳಿಕ ರಾತ್ರಿ ಅಹಮದ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥನ ಹುದ್ದೆಗೆ ರಾಜೀನಾಮೆ ಪ್ರಕಟಿಸಿದರು. 10 ಸದಸ್ಯರ ಮಧ್ಯಂತರ ಸರ್ಕಾರದ ಎಲ್ಲ 9 ಮಂದಿ ಸಲಹೆಗಾರರು ಕೂಡಾ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು. ಸಲಹಾ ಮಂಡಳಿಯ ಅತ್ಯಂತ ಹಿರಿಯ ಸಲಹೆಗಾರ ನ್ಯಾಯಮೂರ್ತಿ ಮೊಹಮ್ಮದ್ ಫಜ್ಲುಲ್ ಹಕ್ ಅವರು ತಾತ್ಕಾಲಿಕ ಮುಖ್ಯ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡರು.

2007: ರಸ್ತೆಯಲ್ಲಿ ನಡೆದ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಕರಣದ ಆರೋಪಿ ಮಾಜಿ ಕ್ರಿಕೆಟ್ ಆಟಗಾರ ಮತ್ತು ಬಿಜೆಪಿ ಮುಖಂಡ ನವಜೋತ್ ಸಿಂಗ್ ಸಿಧು ಚಂಡೀಗಢದ ನ್ಯಾಯಾಲಯದಲ್ಲಿ ಶರಣಾಗತರಾದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.

2007: ಹತ್ತು ದಿನಗಳ ಹಿಂದೆ 102 ಜನರ ಸಹಿತವಾಗಿ ಕಣ್ಮರೆಯಾದ ಇಂಡೋನೇಷ್ಯ ವಿಮಾನದ ಅವಶೇಷಗಳು ಸುಲವೇಸಿ ದ್ವೀಪದಲ್ಲಿ ಪತ್ತೆಯಾದವು. ಒಬ್ಬ ಮಹಿಳೆಯ ಪಾರ್ಥಿವ ಶರೀರವೂ ಪತ್ತೆಯಾಯಿತು.

2007: ನರಮೇಧ - ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಥಿಯೋಪಿಯಾದ ಪದಚ್ಯುತ ಸರ್ವಾಧಿಕಾರಿ ಮೆಂಜಿಸ್ತು ಹೈಲೆ ಮಾರಿಯಮ್ (70) ಅವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇಥಿಯೋಪಿಯೋಪಿಯಾದ ಅಡಿಸ್ ಅಬಾಬಾದ ಸ್ಥಳೀಯ ನ್ಯಾಯಾಲಯ ಜೀವಾವಧಿ ಸಜೆಗೆ ಇಳಿಸಿತು.

2006: ಸಿಜಿಕೆ ಎಂದೇ ಖ್ಯಾತರಾಗಿದ್ದ ಹೆಸರಾಂತ ರಂಗ ನಿರ್ದೇಶಕ, ಸಂಘಟಕ, ಸಿ.ಜಿ. ಕೃಷ್ಣಸ್ವಾಮಿ (56) ದಾವಣಗೆರೆಯಲ್ಲಿ ನಿಧನರಾದರು. 1950ರ ಜೂನ್ 27ರಂದು ಮಂಡ್ಯದಲ್ಲಿ ಜನಿಸಿದ ಸಿಜಿಕೆ ಸುಮಾರು 12 ನಾಟಕಗಳನ್ನು ರಚಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪ್ರಥಮ ಅಂಬೇಡ್ಕರ್ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಒಡಲಾಳ, ಯಯಾತಿ, ಮಹಾಚೈತ್ರ, ಸುಲ್ತಾನ್ ಟಿಪ್ಪು, ಶೇಕ್ಸ್ ಪಿಯರ್ ಸ್ವಪ್ನ ನೌಕೆ, ಜೂಲಿಯಸ್ ಸೀಸರ್, ತುಘಲಕ್, ಕುಸುಮಬಾಲೆ, ವೈಶಂಪಾಯನ ತೀರ, ಅಂಬೇಡ್ಕರ್, ರುಡಾಲಿ, ಚಕೋರಿ, ಒಥೆಲೊ, ಶೋಕಚಕ್ರ, ದಂಡೆ ಇವು ಸಿಜಿಕೆ ಅವರು ನಿರ್ದೇಶಿಸಿದ ಕೆಲವು ಪ್ರಮುಖ ನಾಟಕಗಳು. ಚಿತ್ರರಂಗದಲ್ಲೂ ಸೇವೆ ಸಲ್ಲಿಸಿದ ಸಿಜಿಕೆ ಭುಜಂಗಯ್ಯನ ದಶಾವತಾರಗಳು ಚಿತ್ರದ ಸಹನಿರ್ದೇಶಕ ಹಾಗೂ ಸಂಭಾಷಣೆಕಾರರಾಗಿದ್ದರು. ವೀರಪ್ಪನ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ರಚಿಸಿದ್ದರು. ಸಾಂಗ್ಲಿಯಾನ ಚಿತ್ರಕ್ಕೆ ಸಂಭಾಷಣೆ ರಚಿಸಿದ್ದರು.

1998: ಭಾರತದಾದ್ಯಂತದ `ನಗೆ ಕೂಟಗಳು' (ಲಾಫ್ಟರ್ ಕ್ಲಬ್ಸ್) ಮುಂಬೈಯಲ್ಲಿ ಮೊತ್ತ ಮೊದಲ `ಜಾಗತಿಕ ನಗೆ ದಿನ' ಆಚರಿಸಿದವು. ಭಾರತದಾದ್ಯಂತದ ನಗೆ ಕೂಟಗಳ ಸುಮಾರು 10,000 ಮಂದಿ ಸದಸ್ಯರು ರೇಸ್ ಕೋರ್ಸ್ ಮೈದಾನದಲ್ಲಿ ಸಮಾವೇಶಗೊಂಡು ಒಟ್ಟಿಗೆ ನಕ್ಕರು ಮತ್ತು `ನಗು ಗಂಭೀರ' ವಿಷಯ ಎಂಬುದನ್ನು ಜಗತ್ತಿಗೆ ವಿವರಿಸಿದರು. ಆ ಬಳಿಕ ಪ್ರತಿವರ್ಷದ ಜನವರಿ ತಿಂಗಳ ಎರಡನೇ ಭಾನುವಾರ `ಜಾಗತಿಕ ನಗೆ ದಿನ' ಆಚರಿಸಲಾಗುತ್ತಿದೆ.

1986: ಲಡಾಕನ್ನು ಪರಿಶಿಷ್ಟ ಜಾತಿ ಪ್ರದೇಶವಾಗಿ ಕೇಂದ್ರ ಸರ್ಕಾರ ಘೋಷಿಸಿತು.

1977: ಮೆಹೆರ್ ಹೆರಾಯ್ಸ್ ಮೂಸ್ ಅವರು ದಕ್ಷಿಣ ಧ್ರುವ (ಅಂಟಾರ್ಕ್ಟಿಕಾ) ತಲುಪಿದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಮೆರಿಕನ್ ಪ್ರವಾಸಿಗಳ ತಂಡವೊಂದರ ಸದಸ್ಯರಾಗಿ ಅಂಟಾರ್ಕ್ಟಿಕಾ ಖಂಡದ ಒಂದು ಭಾಗಕ್ಕೆ ಅವರು ಭೇಟಿ ನೀಡಿದರು. ಡಾ. ಕನ್ವಾಲ್ ವಿಲ್ಕು ಅವರು ಹಿಮಖಂಡದಲ್ಲಿನ ಭಾರತೀಯ ನಿಲ್ದಾಣ `ಮೈತ್ರಿ'ಯಲ್ಲಿ 1999ರ ಡಿಸೆಂಬರಿನಿಂದ 2001ರ ಮಾರ್ಚ್ ವರೆಗೆ ವೈದ್ಯರಾಗಿ ಸೇವೆ ಸಲ್ಲಿಸುವ ಮೂಲಕ ಮೂಲಕ ಹಿಮಖಂಡದಲ್ಲಿ ದೀರ್ಘಕಾಲ ವಾಸಿಸಿದ ಭಾರತದ ಮೊತ್ತ ಮೊದಲ ಮಹಿಳೆ ಎನಿಸಿದರು.

1973: ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಅವರು ಮಧ್ಯಪ್ರದೇಶದ ಇಂದೋರಿನಲ್ಲಿ ಜನಿಸಿದರು. 1996ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ದ್ರಾವಿಡ್ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ವಿಶ್ವಾಸದ ಆಟಗಾರ.

1966: ಗುಲ್ಜಾರಿಲಾಲ್ ನಂದಾ ಅವರು ಭಾರತದ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡರು.

1966: ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ತಾಷ್ಕೆಂಟಿನಲ್ಲಿ ಹೃದಯಾಘಾತದಿಂದ ನಿಧನರಾದರು. ಹಿಂದಿನ ದಿನವಷ್ಟೇ ಅವರು ಪಾಕಿಸ್ಥಾನದ ಅಯೂಬ್ ಖಾನ್ ಜೊತೆಗೆ `ತಾಷ್ಕೆಂಟ್ ಒಪ್ಪಂದ'ಕ್ಕೆ ಸಹಿ ಮಾಡಿದ್ದರು.

1963: `ವಿಸ್ಕಿ -ಎ-ಗೊ-ಗೊ' ಹೆಸರಿನ ಮೊತ್ತ ಮೊದಲ `ಡಿಸ್ಕೊ' ಲಾಸ್ ಏಂಜೆಲ್ಸಿನಲ್ಲಿ ಉದ್ಘಾಟನೆಗೊಂಡಿತು.

1922: 14 ವರ್ಷದ ಕೆನಡಾದ `ಬಾಲ ಮಧುಮೇಹಿ' ಬಾಲಕ ಲಿಯೋನಾರ್ಡ್ ಥಾಂಪ್ಸನ್ ಗೆ ಟೊರೊಂಟೋ ಜನರಲ್ ಆಸ್ಪತ್ರೆಯಲ್ಲಿ ಇನ್ಸುಲಿನ್ ನೀಡಲಾಯಿತು. ಈ ಬಳಿಕ ಬಾಲಕ ಮಧುಮೇಹದಿಂದ ಮುಕ್ತನಾಗಿ ಎಲ್ಲರಂತೆ ಬದುಕಿದ. ಒಂದು ವರ್ಷಕ್ಕೆ ಮೊದಲು ಟೊರೊಂಟೋದ ಪ್ರಯೋಗಾಲಯದಲ್ಲಿ ಕೆನಡಾದ ವಿಜ್ಞಾನಿಗಳಾದ ಫ್ರೆಡರಿಕ್ ಗ್ರ್ಯಾಂಟ್ ಬಂಟಿಂಗ್ ಮತ್ತು ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ ಅವರು ಈ ಹಾರ್ಮೋನನ್ನು ಸಂಶೋಧಿಸಿ ಪ್ರತ್ಯೇಕಿಸಿದ್ದರು. ಬಂಟಿಂಗ್ ಮತ್ತು ಮೆಕ್ಲಿಯೊಡ್ ಅವರು ಈ ಸಾಧನೆಗಾಗಿ 1923ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದರು. ಆದರೆ ಬೆಸ್ಟ್ ಅವರನ್ನು ಈ ಪ್ರಶಸ್ತಿ ನೀಡುವಾಗ ನಿರ್ಲಕ್ಷಿಸಲಾಯಿತು. ಬಹಳಷ್ಟು ಮನ ಒಲಿಸಿದ ಬಳಿಕ ಬಂಟಿಂಗ್ ಪ್ರಶಸ್ತಿ ಸ್ವೀಕರಿಸಿದರಾದರೂ ಅರ್ಧಭಾಗ ಹಣವನ್ನು ಬೆಸ್ಟ್ ಅವರಿಗೆ ನೀಡಿದರು.

1896: ಕನ್ನಡದ ಷೇಕ್ಸ್ ಪಿಯರ್ ಎಂದೇ ಹೆಸರಾಗಿದ್ದ ನಾಟಕಕಾರ ಕಂದಗಲ್ಲ ಹನುಮಂತರಾಯ (11-1-1896ರಿಂದ 13-5-1966) ಅವರು ಭೀಮರಾಯರು- ಗಂಗೂಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬೀಳಗಿ ತಾಲ್ಲೂಕಿನ ಕಂದಗಲ್ಲದಲ್ಲಿ ಜನಿಸಿದರು.

No comments:

Post a Comment