Tuesday, January 8, 2019

ಇಂದಿನ ಇತಿಹಾಸ History Today ಜನವರಿ 08

ಇಂದಿನ ಇತಿಹಾಸ History Today ಜನವರಿ 08
2019: ನವದೆಹಲಿ: ಸಾಮಾನ್ಯ ವರ್ಗದಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ನೌಕರಿ/ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ೧೦ ಮೀಸಲಾತಿ ಕಲ್ಪಿಸುವ ಸಂವಿಧಾನ (೧೨೪ನೇ ತಿದ್ದುಪಡಿ) ಮಸೂದೆ ೨೦೧೯ಕ್ಕೆ ಲೋಕಸಭೆಯು ತನ್ನ ಚಾರಿತ್ರಿಕ ಅನುಮೋದನೆಯನ್ನು ನೀಡಿತು. ಚರ್ಚೆಯ ಕೊನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರೂ ಕ್ಷಣಕ್ಕೆ ಸಾಕ್ಷಿಯಾದರು. 323 ಮತಗಳು ಪರವಾಗಿ ಮತ್ತು 3 ಮತಗಳು ವಿರುದ್ಧವಾಗಿ ಬಂದವು. ಮಸೂದೆಯ ಪ್ರಕಾರ, ಲಕ್ಷ ರೂಪಾಯಿಗಳ ಒಳಗಿನ ಆದಾಯ ಹೊಂದಿರುವ ಮತ್ತು ಎಕರೆ ಒಳಗಿನ ಭೂಮಿ ಹೊಂದಿರುವ ಸಾಮಾನ್ಯ ವರ್ಗದ ಎಲ್ಲ ವ್ಯಕ್ತಿಗಳು ಮೀಸಲಾತಿ ಸವಲತ್ತಿಗೆ ಅರ್ಹರಾಗುತ್ತಾರೆ. ವಿರೋಧ ಪಕ್ಷಗಳು ಮಸೂದೆಯ ಉದ್ದೇಶವನ್ನು ಪ್ರಶ್ನಿಸಿ ಟೀಕಿಸಿದರೂ, ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿದವು. ಸದನದಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಇದೊಂದು ಐತಿಹಾಸಕ ಕ್ರಮ. ಇಂತಹ ಮೀಸಲಾತಿ ಕೋರಿ ೨೧ ಬಾರಿ ಖಾಸಗಿ ಸದಸ್ಯರ ಮಸೂದೆಗಳು ಮಂಡನೆಯಾಗಿದ್ದವು. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕೂಡಾ ಇಂತಹ ಮೀಸಲಾತಿಯ ಬಗ್ಗೆ ಒಲವು ಹೊಂದಿದ್ದರು ಎಂದು ಹೇಳಿದರು. ಸಚಿವಾಲಯವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಷ್ಯವೇತನ (ಸ್ಕಾಲರ್ ಶಿಪ್) ಇತ್ಯಾದಿ ಹಲವಾರು ಯೋಜನೆಗಳ ಮೂಲಕ ನೆರವಾಗಲು ಯತ್ನಿಸುತ್ತಿದೆ. ಆದರೆ ಅವು ಸಾಕಾಗುತ್ತಿಲ್ಲ ಎಂದು ನುಡಿದ ಅವರು ಬ್ರಾಹ್ಮಣರು, ಥಾಕೂರ್, ಬನಿಯಾ, ಪಟೇಲ್ ಮತ್ತು ಹಾಲಿ ಮೀಸಲಾತಿ ವ್ಯವಸ್ಥೆಯ ಅಡಿಯಲ್ಲಿ ಯಾರಿಗೆ ಮೀಸಲಾತಿಯ ಅನುಕೂಲ ಇಲ್ಲವೋ ಅಂತಹ ಎಲ್ಲರಿಗೂ ಇದು ಅನುಕೂಲವಾಗಲಿದೆ ಎಂದು ಸಚಿವರು ನುಡಿದರು. ಸದಸ್ಯರು ಇತರ ಜಾತಿಗಳನ್ನು ಪ್ರಸ್ತಾಪಿಸಿದಾಗ ಸಚಿವರು ಹೌದು, ಎಲ್ಲರೂ ಒಳಗೊಳ್ಳುತ್ತಾರೆ ಎಂದು ಉತ್ತರಿಸಿದರು ಮಸೂದೆಯು ನರೇಂದ್ರ ಮೋದಿ ಸರ್ಕಾರವು ೨೦೧೪ರ ಚುನಾವಣೆಗೆ ಮುನ್ನ ನೀಡಲಾಗಿದ್ದ ಭರವಸೆಯಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಗುರಿಗೆ ಬದ್ಧವಾಗಿರುವುದಕ್ಕೆ ಸಾಕ್ಷಿ ಎಂದು ಗೆಹ್ಲೋಟ್ ನುಡಿದರು. ಕೆಲವು ಸದಸ್ಯರು ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ಬಾರದ ಕಾರಣ ಮಸೂದೆ ಮಂಡಿಸುವಂತಿಲ್ಲ ಎಂದು ಕೆಲವು ಸದಸ್ಯರು ಆಕ್ಷೇಪಿಸಿದರು. ಆದರೆ ಲೋಕಸಭಾಧ್ಯಕ್ಷರು ತಾನು ಇದನ್ನು ಸೇರ್ಪಡೆ ಮಾಡಲು ಅನುಮತಿ ನೀಡಿರುವುದಾಗಿ ಸ್ಪಷ್ಟ ಪಡಿಸಿದರು. ಮಸೂದೆಯನ್ನು ಸಮರ್ಥಿಸಿ ಸದನದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಬ್ಬರು ವ್ಯಕ್ತಿಗಳು ಜನ್ಮ ಅಥವಾ ಆರ್ಥಿಕ ಕಾರಣಗಳಿಗಾಗಿ ಸಮಾನರಲ್ಲದೇ ಇದ್ದಲ್ಲಿ, ಆಗ ಅವರನ್ನು ಸಮಾನವಾಗಿ ಕಾಣಲಾಗುವುದಿಲ್ಲ. ಅಸಮಾನರನ್ನು ಸಮಾನವಾಗಿ ನೋಡಲು ಆಗುವುದಿಲ್ಲ ಎಂದು ಹೇಳಿದರು. ಸುಪ್ರೀಂಕೋರ್ಟ್ ಮೀಸಲಾತಿಯ ಮೇಲೆ ಶೇಕಡಾ ೫೦ರ ಮಿತಿ ವಿಧಿಸಿರುವುದು ಸಂವಿಧಾನದ ೧೬() ಪರಿಚ್ಛೇದಕ್ಕೆ ಸಂಬಂಧಿಸಿದಂತೆ ಮಾತ್ರ. ಅದು ಜಾತಿ ಆಧಾರಿತ ಮೀಸಲಾತಿಗೆ. ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಜೇಟ್ಲಿ ನುಡಿದರು. ಮೀಸಲಾತಿ ಮಸೂದೆ ಬಗ್ಗೆ ಕಾಂಗ್ರೆಸ್ ಪರವಾಗಿ ಮಾತನಾಡಿದ ಮೊದಲ ಸದಸ್ಯರು ವ್ಯಕ್ತ ಪಡಿಸಿದ ಕಳವಳವನ್ನು ಪ್ರಸ್ತಾಪಿಸಿದ ಜೇಟ್ಲಿ ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯತ್ತ ಬೊಟ್ಟು ಮಾಡಿ ವಿರೋಧ ಪಕ್ಷವು ತುಂಬು ಹೃದಯದಿಂದ ಉಪಕ್ರಮವನ್ನು ಬೆಂಬಲಿಸಬೇಕು, ಗೊಣಗುತ್ತಾ ಅಲ್ಲ ಎಂದು ಹೇಳಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ಒದಗಿಸುವ ಭರವಸೆ ನೀಡಿದ ಪ್ಯಾರಾ ಒಂದನ್ನು ಓದಿ ಹೇಳಿದ ಜೇಟ್ಲಿ ಬಹುತೇಕ ಪಕ್ಷಗಳ ಪ್ರಣಾಳಿಕೆಗಳು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿಯ ಭರವಸೆ ನೀಡಿವೆ. ತಮ್ಮ ಭರವಸೆಗಳಿಗೆ ಅವರ ಬದ್ಧತೆ ಎಷ್ಟು ಎಂಬುದು ಇಂದು ಪರೀಕ್ಷೆಗೆ ಒಳಗಾಗಿದೆ ಎಂದು ನುಡಿದರುಅನುದಾನಿತ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಮಸೂದೆ ಅನ್ವಯಿಸುತ್ತದೆ ಎಂದು ನುಡಿದ ಜೇಟ್ಲಿ ನಿರ್ಣಯವನ್ನು ಬೆಂಬಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.  ಕಾಂಗ್ರೆಸ್ ಪಕ್ಷದ ಪ್ರೊಫೆಸರ್ ಕೆವಿ ಥಾiಸ್ ಅವರು ವ್ಯಕ್ತಿಯ ಸಮುದಾಯಕ್ಕೆ ಬದಲಾಗಿ ಆತನ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ರಾಷ್ಟ್ರಮಟ್ಟದಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯ ಮೇಲೆ ಮೊತ್ತ ಮೊದಲಿಗರಾಗಿ ಮಾತನಾಡಿದರು. ಏನಿದ್ದರೂ ಹೆಚ್ಚಿನ ಪರಾಮರ್ಶೆಗಾಗಿ ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ಅವರು ಬಯಸಿದರು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಇಂತಹ ಉಪಕ್ರಮವನ್ನು ಎನ್ಡಿಎ ಸರ್ಕಾರ ಕೈಗೊಂಡದ್ದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಸರ್ಕಾರದ ಉದ್ದೇಶವನ್ನೂ ಅದು ಪ್ರಶ್ನೆ ಮಾಡಿತ್ತು. ಆದರೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಅದು ಹೇಳಿತ್ತು.
ಸರ್ಕಾರದಿಂದ ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋಟಾವನ್ನು ಹೇಗೆ ಜಾರಿಗೆ ತರುತ್ತೀರಿ ಎಂದು ಪ್ರೊಫೆಸರ್ ಥಾಮಸ್ ಪ್ರಶ್ನಿಸಿದರು. ಸಹಸ್ರಾರು ಮಂದಿ ಉದ್ಯೋಗ ವಂಚಿರತಾಗಿರುವ ಬಗೆಗಿನ ಸಮೀಕ್ಷೆಯನ್ನು ಉಲ್ಲೇಖಿಸುವ ಮೂಲಕ ಅವರು ಸರ್ಕಾರವನ್ನು ತಿವಿದರು. ಗ್ರಾಮೀಣ ಭಾಗಗಳಲ್ಲಿ ಶೇಕಡಾ ೮೩ಕ್ಕೂ ಹೆಚ್ಚಿನ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಹೇಳಿದರು. ಜೇಟ್ಲಿ ಅವರು ಉದ್ಯೋಗದ ಅಂಕಿಸಂಖ್ಯೆಗಳಿಗೆ ಉತ್ತರ ನೀಡಲಿಲ್ಲ, ಬಗ್ಗೆ ಬೇರೊಂದು ದಿನ ಮಾತನಾಡುವೆ ಎಂದು ಅವರು ಹೇಳಿದರು. ಆದರೆ ಆರ್ಥಿಕ ದುರ್ಬಲರಿಗೆ ಮೀಸಲಾತಿ ಒದಗಿಸುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಪ್ರಣಾಳಿಕೆಯ ಪ್ಯಾರಾವನ್ನು ಓದಿ ಹೇಳಿದರು. ಜುಮ್ಲಾ ಅವರಿಂದ (ಕಾಂಗ್ರೆಸ್) ಬಂದಿದೆ ಎಂದು ಜೇಟ್ಲಿ ಚುಚ್ಚಿದರುತೃಣಮೂಲ ಕಾಂಗ್ರೆಸ್, ಎಐಎಡಿಎಂಕೆ ಮತ್ತು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಕೂಡಾ ಮಸೂದೆ ಬಗ್ಗೆ ಕಠಿಣ ನಿಲುವು ತಾಳಲಿಲ್ಲ. ಆದರೆ ಎಐಎಡಿಎಂಕೆಯ ತಂಬಿದುರೈ ಅವರು ಸಾಮಾಜಿಕ ಸ್ಥಾನಮಾನಕ್ಕೆ ಬದಲಾಗಿ ಆರ್ಥಿಕ ಮಾನದಂಡವನ್ನು ಆಧರಿಸಿ ಮೀಸಲಾತಿ ಒದಗಿಸುವ ಕಲ್ಪನೆಯನ್ನು ಪ್ರಶ್ನಿಸಿದರು. ನ್ಯಾಯಾಲಯಗಳು ಇದನ್ನು ರದ್ದು ಪಡಿಸಬಹುದು ಎಂದು ಅವರು ಭವಿಷ್ಯ ನುಡಿದರು. ಎನ್ಡಿಎ ತ್ಯಜಿಸಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಸೇರಿದ ಬಿಹಾರಿನ ಆರ್ ಎಲ್ ಎಸ್ ಪಿಯ ಉಪೇಂದ್ರ ಕುಶವಾಹ ಅವರು ನನ್ನ ಕ್ಷೇತ್ರದ ಮೇಲ್ಜಾತಿಯ ಜನ ಯಾವಾಗಲೂ ತಮಗೆ ಎಂದೂ ಮೀಸಲಾತಿಯ ಸೌಲಭ್ಯ ಸಿಕ್ಕಿಲ್ಲ ಎಂದು ಉದ್ವಿಗ್ನರಾಗಿರುತ್ತಾರೆ. ಕ್ರಮ ಅವರಿಗೆ ನೆರವಾಗಬಲ್ಲುದು. ಸರ್ಕಾರಿ ಶಾಲಾ ಮಕ್ಕಳಿಗೆ ಆದ್ಯತೆ ಕೊಡಿ ಎಂದು ನುಡಿದ ಅವರು  ಮಸೂದೆಗೆ ನಾವು ಕೆಲವೊಂದು ತಿದ್ದುಪಡಿಗಳನ್ನು ಸಲಹೆ ಮಾಡುತ್ತೇವೆ ಎಂದು ಹೇಳಿದರು. ಜಾತಿಯನ್ನು ಆಧರಿಸದ ಮೀಸಲಾತಿ ಒಳ್ಳೆಯ ಉಪಕ್ರಮ ಎಂದು ನುಡಿದ ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವ್ಯವಸ್ಥೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಖಾಸಗಿ ರಂಗಕ್ಕೂ ಕೋಟಾ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೇಳಿದರುಸ್ವಾತಂತ್ರ್ಯಾನಂತರ ಜನರಿಗೆ ಸಮರ್ಪಕ ಮೂಲ ಸವಲತ್ತು ಒದಗಿಸದ ಪರಿಣಾಮವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗ ಸೃಷ್ಟಿಯಾಯಿತು ಎಂದು ಟಿಆರ್ ಎಸ್ ಎಪಿ ಜಿತೇಂದರ್ ರೆಡ್ಡಿ ಹೇಳಿದರು. ಬಾಳ್ ಠಾಕ್ರೆ ಅವರ ಕಲ್ಪನೆಯಾಗಿರುವುದರಿಂದ ನಾನು ಮಸೂದೆಯನ್ನು ಬೆಂಬಲಿಸುವೆ. ಇದಕ್ಕೆ ನಾಲ್ಕೂವರೆ ವರ್ಷ ಏಕೆ ಬೇಕಾಯಿತು ಎಂಬುದಷ್ಟೇ ನನ್ನ ಏಕೈಕ ಪ್ರಶ್ನೆ. ವಿಪಕ್ಷಗಳು ಚುನಾವಣೆ ಹತ್ತಿರ ಬರುತ್ತಿರುವುದು ಇದಕ್ಕೆ ಕಾರಣ ಎನ್ನುತ್ತಿವೆ ಎಂದು ಶಿವಸೇನೆಯ ಆನಂದರಾವ್ ಅಡ್ಸುಲ್ ಹೇಳಿದರು. ಏನಿದ್ದರೂ ಎಂದೂ ಆಗದೇ ಇರುವುದಕ್ಕಿಂತ ಎಂದಾದರೂ ಒಂದು ದಿನ ಆಗುವುದು ಒಳ್ಳೆಯದು ಎಂದು ಅವರು ನುಡಿದರು. ಕೋಟಾ ಮಸೂದೆಗೆ ಕೊಟ್ಟಷ್ಟೇ ಆದ್ಯತೆಯನ್ನು ಮಹಿಳಾ ಮೀಸಲಾತಿ ಮಸೂದೆಗೆ ಏಕೆ ನೀಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ಸಿನ ಸುದೀಪ್ ಬಂದೋಪಾಧ್ಯಾಯ ಪ್ರಶ್ನಿಸಿದರು. ಭರವಸೆ ಕೊಡುತ್ತೀರಿ. ಆದರೆ ಕನಸುಗಳು ನನಸಾಗುವುದಿಲ್ಲ. ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿ ಎಂದು ಅವರು ನುಡಿದರು. ಮೀಸಲಾತಿ ಪ್ರಮಾಣವನ್ನು ಶೇಕಡಾ ೭೦ಕ್ಕೆ ಏರಿಸಬೇಕು ಎಂದು ಎಐಎಡಿಎಂಕೆ ಸದಸ್ಯರು ಆಗ್ರಹಿಸಿದರು. ಮೇಲ್ಜಾತಿಯ ಬಡವರಿಗೆ ಇದು ಹೋಳಿ ಮತ್ತು ದೀಪಾವಳಿ ಹಬ್ಬ ಎಂದು ಬಿಜೆಪಿ ಸದಸ್ಯರೊಬ್ಬರು ಬಣ್ಣಿಸಿದರು. ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು ಕ್ರಮವನ್ನು ಬೆಂಬಲಿಸಿದರು. ಇತರ ಮಿತ್ರ ಪಕ್ಷಗಳೂ ಬೆಂಬಲಿಸಿದವು. ಮಸೂದೆಯು ಸಂವಿಧಾನಕ್ಕೆ ಬಗೆದ ವಂಚನೆ  ಮತ್ತು ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಸಂವಿಧಾನವು ಆರ್ಥಿಕ ಹಿಂದುಳಿದವರನ್ನು ಮಾನ್ಯ ಮಾಡಿಲ್ಲ ಎಂದು ಅಸಾದುದ್ದೀನ್ ಒವೈಸಿ ಟೀಕಿಸಿದರು. ಮೀಸಲಾತಿ ಮತ್ತು ತ್ರಿವಳಿ ತಲಾಖ್ ಮಸೂದೆಗಳ ಹೊರತಾಗಿ ರಫೇಲ್ ಯುದ್ಧ ವಿಮಾನ ವಹಿವಾಟು, ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತ ಪಡಿಸುವುದರೊಂದಿಗೆ ಲೋಕಸಭೆಯ ಚಳಿಗಾಲದ ಅಧಿವೇಶನದ ಕೊನೆಯ ದಿನ ಕೂಡಾ ಗದ್ದಲವನ್ನು ಕಂಡಿತು.

2019: ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಖ್ಯಸ್ಥ ಹುದ್ದೆಯಿಂದ ಬಿಡುಗಡೆ ಮಾಡಿ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸುವ ಮೂಲಕ ಅಲೋಕ್ ವರ್ಮ ಅವರನ್ನು ಸುಪ್ರೀಂಕೋರ್ಟ್ ಸಿಬಿಐ ಮುಖ್ಯಸ್ಥರಾಗಿ ಪುನಃಸ್ಥಾಪನೆ ಮಾಡಿತು. ಆದರೆ ಅವರ ವಿರುದ್ಧದ ತನಿಖಾ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಪರಿಶೀಲಿಸಿ ಹುದ್ದೆಯಲ್ಲಿ ಮುಂದುವರೆಸುವ ಬಗ್ಗೆ ನಿರ್ಧರಿಸುವವರೆಗೆ ಯಾವುದೇ ಪ್ರಮುಖ ನೀತಿ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಅಂಕುಶ ಹಾಕಿತು. ವರ್ಮ ಅವರನ್ನು ಸಿಬಿಐ ಮುಖ್ಯಸ್ಥ ಸ್ಥಾನದಿಂದ ಕಿತ್ತು ಹಾಕುವ ಅಗತ್ಯ ಇದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಚರ್ಚಿಸಿ ನಿರ್ಧರಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯ ಅತಿದೊಡ್ಡ ವಿರೋಧ ಪಕ್ಷದ ನಾಯಕನೂ ಸದಸ್ಯರಾಗಿರುವ ತ್ರಿಸದಸ್ಯ ಆಯ್ಕೆ ಸಮಿತಿಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠವು ಒಂದು ವಾರದ ಗಡುವು ನೀಡಿತುಪೀಠದ ತೀರ್ಪನ್ನು ನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್ ಅವರು ಓದಿ ಹೇಳಿದರು. ಕೇಂದ್ರೀಯ ತನಿಖಾ ದಳದ ಸ್ವಾತಂತ್ರ್ಯವನ್ನು ಕಾಪಾಡಲು ಪೀಠ ಬಯಸಿರುವುದಾಗಿ ಅವರು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಗೊಗೋಯಿ ನೇತೃತ್ವದ ಪೀಠವು ಡಿಸೆಂಬರ್ ೬ರಂದು, ವರ್ಮ, ಕೇಂದ್ರ ಹಾಗೂ ಕೇಂದ್ರೀಯ ಜಾಗೃತಾ ಆಯೋಗ (ಸಿವಿಸಿ) ಪರ ವಾದಗಳನ್ನು ಆಲಿಸಿದ ಬಳಿಕ ತನ್ನ ತೀರ್ಪನ್ನು ಕಾಯ್ದರಿಸಿತ್ತು. ಅದೇ ಪೀಠವು ಈದಿನ ತನ್ನ ತೀರ್ಪನ್ನು ಪ್ರಕಟಿಸಿತು. ಶಾಸನ ಅಸ್ತಿತ್ವದಲ್ಲಿದೆ ಮತ್ತು ಅದು ಸಿಬಿಐ ನಿರ್ದೇಶಕರ ಕಚೇರಿಯನ್ನು ರಕ್ಷಿಸಲು ಬಯಸುತ್ತದೆ ಎಂದು ಪೀಠ ಹೇಳಿತುಆಯ್ಕೆ ಸಮಿತಿಯ ಒಪ್ಪಿಗೆ ಇಲ್ಲದೆ ನಿರ್ದೇಶಕನ ವರ್ಗಾವಣೆಯು ಸಿಬಿಐಯ ಸ್ವಾತಂತ್ರ್ಯವನ್ನು ಖಚಿತ ಪಡಿಸುವ ಶಾಸನದ ಉದ್ದೇಶವನ್ನು ನಿರಾಕರಿಸುತ್ತದೆ ಎಂದು ನ್ಯಾಯಾಲಯ ಹೇಳಿತುಒಂದು ವಾರದ ಒಳಗಾಗಿ ವರ್ಮ ಅವರನ್ನು ಕಿತ್ತು ಹಾಕುವ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದಾಗಿ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರಿ ಪರಿಶೀಲಿಸಬೇಕು ಎಂದು ಪೀಠ ನಿರ್ದೇಶಿಸಿತು. ಇದೇ ವೇಳೆಗೆ ಅಲೋಕ್ ವರ್ಮ ಅವರ ಮೇಲೆ ಕೆಲವು ನಿರ್ಬಂಧಗಳನ್ನೂ ನ್ಯಾಯಾಲಯ ವಿಧಿಸಿತು. ಆಯ್ಕೆ ಸಮಿತಿಯ ತನ್ನ ನಿರ್ಧಾರವನ್ನು ಕೈಗೊಳ್ಳುವವರೆಗೆ, ಅಲೋಕ್ ವರ್ಮ ಅವರು ಯಾವುದೇ ಪ್ರಮುಖ ನೀತಿ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ ಎಂದು ನ್ಯಾಯಾಲಯ ಹೇಳಿತುದೈನಂದಿನ ಕೆಲಸಗಳ ಕುರಿತ ಆಡಳಿತಾತ್ಮಕ ನಿರ್ಧಾರಗಳನ್ನು ಮಾತ್ರವೇ ಅವರು ಕೈಗೊಳ್ಳಬಹುದು ಎಂದು ಪೀಠ ಸ್ಪಷ್ಟ ಪಡಿಸಿತುಒಂದು ವಾರದ ಒಳಗಾಗಿ ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಸಭೆ ಸೇರಿ ವರ್ಮ ಅವರನ್ನು ಕಿತ್ತು ಹಾಕುವ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಅಂಶದ ಬಗ್ಗೆ ಪರಿಶೀಲಿಸಲಿದೆ ಎಂದು ಕೋರ್ಟ್ ಹೇಳಿತು. ಅಕ್ಟೋಬರ್ ೨೩ರಂದು ಹೊರಡಿಸಲಾದ ಮಧ್ಯರಾತ್ರಿಯ ಆದೇಶದಲ್ಲಿ ವರ್ಮ ಅವರಿಗೆ ರಜೆಯ ಮೇಲೆ ತೆರಳಲು ಆದೇಶಿಸಲಾಗಿತ್ತು. ವರ್ಮ ಅವರು ಆಡಳಿತಾತ್ಮಕ ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೊರೆಹೊಕ್ಕಿದ್ದರು. ಸಿಬಿಐ ನಿರ್ದೇಶಕರಾಗಿ ವರ್ಮ ಅವರ ಅವಧಿಯು ಜನವರಿ ೩೧ರಂದು ಮುಕ್ತಾಯಗೊಳ್ಳುತ್ತದೆ. ವರ್ಮ ಮತ್ತು ಅವರ ಕೈಕೆಗಿನ ಅಧಿಕಾರಿ ರಾಕೇಶ್ ಆಸ್ತಾನ ಅವರ ಮಧ್ಯೆ ಉಂಟಾದ ಘರ್ಷಣೆಯ ಪರಿಣಾಮವಾಗಿ ಸಿಬಿಐಯ ವರ್ಚಸ್ಸಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಲು ತಾನು ಮಧ್ಯಪ್ರವೇಶ ಮಾಡಬೇಕಾಯಿತು ಎಂದು ಕೇಂದ್ರವು ಸುಪ್ರೀಂಕೋರ್ಟಿಗೆ ತಿಳಿಸಿತ್ತು. ವರ್ಮ ಮತ್ತು ಆಸ್ತಾನ ಪರಸ್ಪರ ಭ್ರಷ್ಟಾಚಾರದ ಆರೋಪ ಮಾಡಿಕೊಂಡಿದ್ದರು. ಸಿಬಿಐ ತಂಡವೊಂದು ಆಸ್ತಾನ ವಿರುದ್ಧ ಕ್ರಿಮಿನಲ್ ತನಿಖೆ ಆರಂಭಿಸಿತ್ತು. ಇಬ್ಬರು ಹಿರಿಯ ಅಧಿಕಾರಿಗಳ ನಡುವಣ ಘರ್ಷಣೆ ಬಹಿರಂಗಕ್ಕೆ ಬಂದಾಗ ಸರ್ಕಾರವು ಅಧಿಕಾರಿಗಳಿಬ್ಬರನ್ನೂ ರಜೆಯಲ್ಲಿ ಕಳುಹಿಸಿ, ಒಡಿಶಾದ ೧೯೮೬ರ ತಂಡದ ಐಪಿಎಸ್ ಅಧಿಕಾರಿ, ಸಿಬಿಐ ಜಂಟಿ ನಿರ್ದೇಶಕ ಎಂ. ನಾಗೇಶ್ವರ ರಾವ್ ಅವರನ್ನು ಸಂಸ್ಥೆಯ ತಾತ್ಕಾಲಿಕ ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತುರಾವ್ ಅವರ ಅನುಮೋದನೆಯೊಂದಿಗೆ ಅಸ್ತಾನ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿಯೂ ಸೇರಿದಂತೆ ೧೩ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅವರಿಗೆ ಮರುನಿಯುಕ್ತಿ ಆದೇಶಗಳನ್ನು ನೀಡಲಾಗಿತ್ತು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವರ್ಮ ಅವರು ಕೇಂದ್ರೀಯ ಜಾಗೃತಾ ದಳ (ಸಿವಿಸಿ) ಹೊರಡಿಸಿದ ಒಂದು ಆದೇಶ ಮತ್ತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಎರಡು ಆದೇಶಗಳು ಸೇರಿದಂತೆ ೨೦೧೮ರ ಅಕ್ಟೋಬರ್ ೨೩ರ ಮೂರು ಆದೇಶಗಳನ್ನು ರದ್ದು ಪಡಿಸುವಂತೆ ಮನವಿ ಮಾಡಿದ್ದರುತಮ್ಮನ್ನು ರಜೆಯಲ್ಲಿ ತೆರಳುವಂತೆ ನೀಡಲಾದ ಆದೇಶವು ತಮ್ಮನ್ನು ಕಿತ್ತು ಹಾಕಿದ್ದಕ್ಕೆ ಸಮವಾಗುತ್ತದೆ. ಸಿಬಿಐ ನಿರ್ದೇಶಕರ ನೇಮಕಾತಿಯನ್ನು ಅನುಮೋದಿಸುವ ಉನ್ನತಾಧಿಕಾರ ಸಮಿತಿಯ ಒಪ್ಪಿಗೆ ಇಲ್ಲದೆ ಹೀಗೆ ಮಾಡುವಂತಿಲ್ಲ ಎಂದು ವರ್ಮ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು. ಅಸ್ತಾನ ಸೇರಿದಂತೆ ಸಿಬಿಐಯ ವಿವಿಧ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಬಗ್ಗೆ ನ್ಯಾಯಾಲಯದ ನಿಗಾದಲ್ಲಿ ವಿಶೇಷ ತನಿಖಾ ತಂಡದಿಂದ (ಎಸ್ಐಟಿ) ತನಿಖೆ ನಡೆಯಬೇಕು ಎಂಬುದಾಗಿ ಸರ್ಕಾರೇತರ ಸಂಘಟನೆ ಕಾಮನ್ ಕಾಸ್ ಸಲ್ಲಿಸಿದ್ದ ಅರ್ಜಿಯನ್ನು ಕೂಡಾ ನ್ಯಾಯಾಲಯ ಇದೇ ಸಂದರ್ಭದಲ್ಲಿ ಆಲಿಸಿತ್ತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ತಾವು ತ್ರಿಸದಸ್ಯ ಆಯ್ಕೆ ಸಮಿತಿ ಸದಸ್ಯರಲ್ಲಿ ಒಬ್ಬರಾದ ಹಿನ್ನೆಲೆಯಲ್ಲಿ ತಮ್ಮ ವಾದವನ್ನೂ ಆಲಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಧ್ಯೆ ಅಸ್ತಾನ ಅವರು ತಮ್ಮ ವಿರುದ್ಧ ಸಿಬಿಐ ದಾಖಲಿಸಿದ್ದ ಎಫ್ ಆರ್ ನ್ನು ರದ್ದು ಪಡಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮೊಯಿನ್ ಖುರೇಶಿ ಪ್ರಕರಣದಲ್ಲಿ ಲಂಚ ಪಡೆದ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ಎಫ್ ಆರ್ ನ್ನು ದಾಖಲಿಸಿತ್ತು. ದೆಹಲಿ ಹೈಕೋರ್ಟ್ ಪ್ರಕರಣದ ಬಗೆಗಿನ ತೀರ್ಪನ್ನು ಕಾಯ್ದಿರಿಸಿತ್ತು. ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿದ ವರ್ಮ ಅವರ ವಕೀಲ ಹಾಗೂ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ವಾದ ಮಂಡಿಸಿದ್ದರು. ಸಿಬಿಐ ನಿರ್ದೇಶಕರನ್ನು ೨೦೧೭ರ ಫೆಬ್ರುವರಿ ೧ರಂದು ನೇಮಕಮಾಡಲಾಗಿತ್ತು. ಕಾನೂನು ಪ್ರಕಾರ ಅವರ ಅವಧಿ ಎರಡು ವರ್ಷ. ಈಗ ಅದಕ್ಕೂ ಮುನ್ನ ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಮ ಅವರನ್ನು ರಜೆಯಲ್ಲಿ ಕಳುಹಿಸುವಂತೆ ಶಿಫಾರಸು ಮಾಡಿ ಆದೇಶ ನೀಡುವುದಕ್ಕೆ ಸಿವಿಸಿ ಅವರಿಗೆ ಯಾವುದೇ ಆಧಾರ ಇಲ್ಲ ಎಂದು ಅವರು ವಾದಿಸಿದ್ದರು. ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಕೇಂದ್ರದ ಹಸ್ತಕ್ಷೇಪವನ್ನು ಸಮರ್ಥಿಸಿದ್ದರು. ಉಭಯ ಅಧಿಕಾರಿಗಳನ್ನೂ ರಜೆಯಲ್ಲಿ ಕಳುಹಿಸುವುದು ಅದರ ಹಕ್ಕಿನ ವ್ಯಾಪ್ತಿಯಲ್ಲಿಯೇ ಇದೆ ಎಂದು ಅವರು ವಾದಿಸಿದ್ದರು. ಸಿಬಿಐ ಮೇಲಿನ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸ ಪುನಃಸ್ಥಾಪನೆಗಾಗಿ ಸರ್ಕಾರವು ಕ್ರಮ ಕೈಗೊಳ್ಳದೇ ಇದ್ದಿದ್ದರೆ, ಉನ್ನತ ಅಧಿಕಾರಿಗಳಿಬ್ಬರ ಕದನ ಎಲ್ಲಿಗೆ ಮುಟ್ಟಿ ಹೇಗೆ ಕೊನೆಗೊಳ್ಳುತ್ತಿತ್ತು ಎಂಬುದು ಭಗವಂತನಿಗಷ್ಟೇ ಗೊತ್ತು ಎಂದು ಅವರು ನುಡಿದರು.

2019: ಪಾಟ್ನಾ: ಬಿಡುಗಡೆಗೆ ಸಜ್ಜಾಗುತ್ತಿರುವ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಲನಚಿತ್ರದ ಹಿನ್ನೆಲೆಯಲ್ಲಿ ಚಿತ್ರನಟ ಅನುಪಮ್ ಖೇರ್ ಅವರಿಗೆ ಎದುರಾಗುತ್ತಿರುವ ಕಾನೂನು ಸಂಕಷ್ಟಗಳು ಕೊನೆಗೊಳ್ಳುವ ಲಕ್ಷಣಗಳು ಕಾಣಲಿಲ್ಲ. ಚಿತ್ರದ ಟ್ರೈಲರ್ ಬಿಡುಗಡೆಯಾದಂದಿನಿಂದಲೂ ಚಿತ್ರವು ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುತ್ತಲೇ ಇದ್ದು, ಈದಿನ ಬಿಹಾರದ ಸ್ಥಳೀಯ ನ್ಯಾಯಾಲಯವೊಂದು ಅನುಪಮ್ ಖೇರ್ ಮತ್ತು ಇತರ ೧೩ ಮಂದಿ ವಿರುದ್ಧ ವಕೀಲ ಸುಧೀರ್ ಓಜಾ ಅವರು ಚಿತ್ರದ ವಿರುದ್ಧ ಸಲ್ಲಿಸಿದ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲು ಆದೇಶ ನೀಡಿತು. ಜನವರಿ ೧೧ರಂದು ಬಿಡುಗಡೆಗೆ ಸಜ್ಜಾಗುತ್ತಿರುವ ಚಿತ್ರದ ಪ್ರೊಮೋಗಳನ್ನು ಟಿವಿ ಚಾನೆಲ್ಗಳು ಮತ್ತು ಯು ಟ್ಯೂಬಿನಲ್ಲಿ ನೋಡಿ ತಮಗೆ ಅತ್ಯಂತ ನೋವಾಗಿದೆ ಎಂದು ಓಜಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪಾತ್ರ ವಹಿಸಿರುವ ಅನುಪಮ್ ಖೇರ್ ಅವರಲ್ಲದೆ, ಖ್ಯಾತ ಪತ್ರಕರ್ತ ಸಂಜಯ್ ಬರು ಪಾತ್ರ ಮಾಡಿರುವ ಅಕ್ಷಯ್ ಖನ್ನಾ ಮತ್ತಿತರ ನಟರನ್ನು ದೂರಿನಲ್ಲಿ ಹೆಸರಿಸಲಾಯಿತು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಆಗಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಹಾಲಿ ಕಾಂಗ್ರೆಸ್ ಅಧ್ಯಕ್ಷರಾಗಿರುವ  ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರ ಪಾತ್ರಗಳನ್ನು ಮಾಡಿರುವ ನಟ ನಟಿಯರನ್ನೂ, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ಸಹಿತವಾಗಿ ದೂರಿನಲ್ಲಿ ಹೆಸರಿಸಲಾಗಿತ್ತು. ಚಿತ್ರವು ರಾಷ್ಟ್ರವನ್ನು ಮತ್ತು ಅದರ ರಾಜಕೀಯ ನಾಯಕರನ್ನು ಅತ್ಯಂತ ಕೆಟ್ಟದಾಗಿ ಚಿತ್ರಿಸಿದೆ ಎಂದು ಓಜಾ ಆಪಾದಿಸಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೨೯೫, ೧೫೩, ೧೫೩ಎ, ೨೯೩, ೫೦೪ ಮತ್ತು ೧೨೦ ಬಿ ಅಡಿಯಲ್ಲಿ ವಿವಿಧ ಗುಂಪುಗಳ ಮಧ್ಯೆ ವೈರತ್ವ ಹರಡುವುದು, ಅಶ್ಲೀಲ ವಸ್ತುಗಳ ಮಾರಾಟ, ಶಾಂತಿ ಕದಡುವ ಸಲುವಾಗಿ ಅಪಮಾನ ಮಾಡುವುದು ಮತ್ತು ಕ್ರಿಮಿನಲ್ ಸಂಪು ಆಪಾದನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಲು ಅರ್ಜಿ ಕೋರಿತ್ತು. ದೆಹಲಿ ಹೈಕೋರ್ಟ್ ಚಿತ್ರದ ಟ್ರೈಲರ್ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಹಿಂದಿನ ದಿನ ಇತ್ಯರ್ಥ ಪಡಿಸಿತ್ತುದೆಹಲಿ ಮೂಲದ ಫ್ಯಾಷನ್ ಡಿಸೈನರ್ ಆಗಿರುವ ಅರ್ಜಿದಾರ್ತಿ ಪೂಜಾ ಮಹಾಜನ್ ಅವರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂಬುದಾಗಿ ನ್ಯಾಯಮೂರ್ತಿ ವಿಭು ಬಖ್ರು ಅಭಿಪ್ರಾಯ ಪಟ್ಟಿದ್ದರು. ಜೀವಂತ ವ್ಯಕ್ತಿತ್ವ ಅಥವಾ ಜೀವಿಸಿರುವ ವ್ಯಕ್ತಿಗಳ ಚಾರಿತ್ರ್ಯ ಹನನವಾಗುವಂತೆ ಛದ್ಮವೇಷ ಧರಿಸಲು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೪೧೬ ಅವಕಾಶ ನೀಡುವುದಿಲ್ಲ ಎಂದು ತಮ್ಮ ವಕೀಲರಾದ ಅರುಣ್ ಮೈತ್ರಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಮಹಾಜನ್ ವಾದಿಸಿದ್ದರು. ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರವು ಸಂಜಯ್ ಬರುವ ಅವರ ಇದೇ ಹೆಸರಿನ ಪುಸ್ತಕವನ್ನು ಆಧರಿಸಿದ ಚಿತ್ರವಾಗಿದ್ದು, ಬರು ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರಾಗಿದ್ದರು.

2019: ನವದೆಹಲಿ: ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರನ್ನು ರಾಷ್ಟ್ರದಲ್ಲಿನ ಪಾವತಿಗಳ ಡಿಜಿಟಲೀಕರಣದ ಅಂದಾಜು ಮಾಡುವ ವಿಶೇಷ ಸಮಿತಿಯ ಅಧ್ಯಕ್ಷರನ್ನಾಗಿ ಭಾರತೀಯ ರಿಸರ್ವ್ ಬ್ಯಾಂಕ್  (ಆರ್ಬಿಐ) ನೇಮಕ ಮಾಡಿತು. ನೀಲೇಕಣಿ ಅವರು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಪಂಚ ಸದಸ್ಯ ವಿಶೇಷ ಉನ್ನತಾಧಿಕಾರ ಸಮಿತಿಯ ನೇತೃತ್ವ ವಹಿಸುವರು. ನೀಲೇಕಣಿ ಹೊರತಾಗಿ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಡೆಪ್ಯುಟಿ ಗವರ್ನರ್ ಎಚ್.ಆರ್. ಖಾನ್, ವಿಜಯಾ ಬ್ಯಾಂಕಿನ ಮಾಜಿ ಆಡಳಿತ ನಿರ್ದೇಶಕ ಮತ್ತು ಸಿಇಒ ಕಿಶೋರ್ ಸಾನ್ಸಿ, ಮಾಹಿತಿ ತಂತ್ರಜ್ಞಾನ ಮತ್ತು ಉಕ್ಕು ಸಚಿವಾಲಯದ ಮಾಜಿ ಕಾರ್ಯದರ್ಶಿ ಅರುಣಾ ಶರ್ಮ, ಅಹ್ಮದಾಬಾದಿನ ಐಐಎಂನ ಅವಿಷ್ಕಾರ, ಕಾಪಿಡುವಿಕೆ ಮತ್ತು ಉದ್ಯಮಶೀಲತಾ ಕೇಂದ್ರದ ಮುಖ್ಯ ಅವಿಷ್ಕಾರ ಅಧಿಕಾರಿ ಸಂಜಯ್ ಜೈನ್ ಸಮಿತಿಯ ಇತರ ಸದಸ್ಯರು. ರಾಷ್ಟ್ರದಲ್ಲಿನ ಪ್ರಸ್ತುತ ಡಿಜಿಟಲ್ ಪಾವತಿಯ ಸ್ಥಿತಿಗತಿ ಪರಿಶೀಲನೆ, ಹಾಲಿ ಪರಿಸ್ಥಿತಿಯಲ್ಲಿನ ಅಂತರದ ಸಮಸ್ಯೆ ಗುರುತಿಸುವುದು ಮತ್ತು ಅವುಗಳನ್ನು ಸರಿಪಡಿಸಲು ಮಾರ್ಗಗಳನ್ನು ಸೂಚಿಸುವುದು - ಕಾರ್ಯಗಳನ್ನು ವಿಶೇಷ ಸಮಿತಿಗೆ ವಹಿಸಲಾಗಿದೆ. ಹಣಕಾಸು ಸೇರ್ಪಡೆಯಲ್ಲಿ ಡಿಜಿಟಲ್ ಪಾವತಿಗಳ ಹಾಲಿ ಮಟ್ಟವನ್ನು ಅಂದಾಜು ಮಾಡುವ ಕೆಲಸವನ್ನೂ ಸಮಿತಿ ಮಾಡಲಿದೆಪಂಚ ಸದಸ್ಯ ವಿಶೇಷ ಸಮಿತಿಯು ರಾಷ್ಟ್ರದ ಆರ್ಥಿಕ ವ್ಯವಸ್ಥೆಯಲ್ಲಿ ಡಿಜಿಟಲೀಕರಣವನ್ನು ಹೆಚ್ಚಿಸಲು ಅನುಸರಿಸಬಹುದಾದ ಅತ್ಯುತ್ತಮ ಅಭ್ಯಾಸಗಳನ್ನು ಗುರುತಿಸಲು ರಾಷ್ಟ್ರಮಟ್ಟದ ವಿಶ್ಲೇಷಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಮತ್ತು ಹೆಚ್ಚಿನ ಡಿಜಿಟಲ್ ಪಾವತಿಗಳ ಮೂಲಕ ಅವುಗಳನ್ನು ಹಣಕಾಸು ವ್ಯವಸ್ಥೆಗೆ ಸೇರ್ಪಡೆ ಮಾಡುವ ಮಾರ್ಗಗಳ ಬಗ್ಗೆ ವರದಿ ನೀಡಲಿದೆ. ಡಿಜಿಟಲ್ ಪಾವತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಬಲಪಡಿಸುವ ಕ್ರಮಗಳನ್ನು, ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಬಲ ಪಡಿಸಲು ಸೂಕ್ತವಾದ ಕಾರ್ಯತಂತ್ರದ ಬಗೆಗೂ ಸಮಿತಿ ಸಲಹೆ ನೀಡಲಿದೆ. ಸಮಿತಿಯು ಮೊದಲ ಸಭೆಯ ದಿನಾಂಕದಿಂದ ೯೦ ದಿನಗಳ ಒಳಗಾಗಿ ತನ್ನ ವರದಿಯನ್ನು ಸಲ್ಲಿಸಲಿದೆ. ನಂದನ್ ನೀಲೇಕಣಿಯವರು ಹಿಂದೆ ಭಾರತದ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಯುಪಿಎ ಆಡಳಿತಾವಧಿಯಲ್ಲಿ ಆಧಾರ್ ಕಾರ್ಡ್ ಅನುಷ್ಠಾನದ ಉಸ್ತುವಾರಿ ವಹಿಸಿದ್ದರು.

2019: ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಗಾಗಿ ಸುಪ್ರೀಂಕೋರ್ಟ್ ಈದಿನ ಪಂಚ ಸದಸ್ಯ ಸಂವಿಧಾನ ಪೀಠವನ್ನು ರಚಿಸಿದ್ದು, ಜನವರಿ ೧೦ರಿಂದ ವಿಚಾರಣೆ ಆರಂಭವಾಗಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.. ಬೊಬ್ಡೆ, ಎನ್ವಿ ರಮಣ, ಯುಯು ಲಲಿತ್ ಮತ್ತು ಡಿವೈ ಚಂದ್ರಚೂಡ್ ಅವರು ಇರುತ್ತಾರೆ. ಹಿಂದಿನ ವಿಚಾರಣೆ ವೇಳೆಯಲ್ಲಿ ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿರುವ ವಿಷಯದ ಇತ್ಯರ್ಥಕ್ಕಾಗಿ ತ್ರಿಸದಸ್ಯ ಪೀಠವನ್ನು ರಚಿಸಲಾಗುವುದು ಎಂದು ಸಿಜೆಐ ಗೊಗೋಯಿ ಹೇಳಿದ್ದರು. ಆದರೆ ಪೀಠಕ್ಕೆ ಸಂವಿಧಾನಪೀಠದ ಮಹತ್ವವನ್ನು ತಂದುಕೊಡುವ ಹಿನ್ನೆಲೆಯಲ್ಲಿ ಐವರು ನ್ಯಾಯಮೂರ್ತಿಗಳ ವಿಶಾಲ ಪೀಠ ರಚಿಸಲು ತೀರ್ಮಾನಿಸಲಾಯಿತು ಎಂದು ಸಿಜೆಐ ಹೇಳಿದರು. ಅಯೋಧ್ಯಾ ಭೂವಿವಾದ ಪ್ರಕರಣದ ಎಳೆಯನ್ನು ಪಂಚ ಸದಸ್ಯ ಸಂವಿಧಾನ ಪೀಠವು ಜನವರಿ ೧೦ರಿಂದ ಮುಂದಕ್ಕೆ ಒಯ್ಯಲಿದೆ. ವಿವಾದದಲ್ಲಿ ಇರುವ ಅಯೋಧ್ಯೆಯ .೭೭ ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ ಮಧ್ಯೆ ಸಮಾನವಾಗಿ ಹಂಚಿಕೆ ಮಾಡಬೇಕು ಎಂಬುದಾಗಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ೨೦೧೦ರ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ೧೪ ಮೇಲ್ಮನವಿಗಳನ್ನು ಪೀಠವು ವಿಚಾರಣೆಗೆ ಎತ್ತಿಕೊಳ್ಳಲಿದೆ. ದೊರೆ ದಶರಥನ ಪುತ್ರನಾದ ಭಗವಾನ್ ಶ್ರೀರಾಮಚಂದ್ರ ,೦೦,೦೦೦ ( ಲಕ್ಷ) ವರ್ಷಗಳ ಹಿಂದೆ ತ್ರೇತಾಯುಗದಲ್ಲಿ ಈಗಿನ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿಯ ಆವರಣದ ೧೪೮೨. ಚದರ ಯಾರ್ಡ್ಗಳ ಒಳಗಿನ ಪ್ರದೇಶದಲ್ಲಿ ಜನಿಸಿದ್ದ ಎಂಬ ತೀರ್ಮಾನಕ್ಕೆ ಅಲಬಾಬಾದ್ ಹೈಕೋರ್ಟ್ ಬಂದಿತ್ತು. ಸುಪ್ರೀಂಕೋರ್ಟ್ ಅಕ್ಟೋಬರ್ ೨೯ರಂದು ನಡೆದ ಕಲಾಪದ ಸಂದರ್ಭದಲ್ಲಿ ೨೦೧೯ರ ಜನವರಿ ಮೊದಲ ವಾರದಲ್ಲಿ ಸೂಕ್ತ ಪೀಠವು ಪ್ರಕರಣದ ವಿಚಾರಣೆ ನಡೆಸುವುದಾಗಿ ಹೇಳಿತ್ತು. ಬಳಿಕ ದಿನಾಂಕವನ್ನು ಹಿಂದೂಡಿ ತುರ್ತಾಗಿ ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ವಿಷಯದ ವಿಚಾರಣೆಗೆ ಸಂಬಂಧಿಸಿದಂತೆ ಪೀಠವು ಈಗಾಗಲೇ ಅಕ್ಟೋಬರ್ ೨೯ರಂದು ಆದೇಶ ನೀಡಿದೆ ಎಂದು ಹೇಳಿತ್ತು.
ಪ್ರಕರಣವನ್ನು ಬೇಗನೇ ಕೈಗೆತ್ತಿಕೊಳ್ಳಬೇಕು ಎಂಬ ಅರ್ಜಿಯನ್ನು ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ ಎಂ) ಸಲ್ಲಿಸಿತ್ತುಪ್ರಕರಣದ ಮೂಲ ಕಕ್ಷಿದಾರರಲಿ ಒಬ್ಬರಾದ ಎಂ. ಸಿದ್ದಿಖ್ ಅವರ ಕಾನೂನುಬದ್ಧ ವಾರಸುದಾರರು ಸಲ್ಲಿಸಿದ್ದ ಮೇಲ್ಮನವಿಯಲ್ಲಿನ ಪ್ರತಿವಾದಿಗಳ ಪೈಕಿ ಅಖಿಲ ಭಾರತ್ ಹಿಂದು ಮಹಾಸಭಾ ಒಂದಾಗಿತ್ತು. ಮಸೀದಿಯು ಇಸ್ಲಾಮ್ ಆಚರಣೆಯ ಅವಿಭಾಜ್ಯ ಅಂಗವಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ೧೯೯೪ರ ತೀರ್ಪಿನಲ್ಲಿ ನೀಡಿದ್ದ ಅಭಿಪ್ರಾಯವನ್ನು  ಮರುಪರಿಶೀಲನೆಗಾಗಿ ಪಂಚ ಸದಸ್ಯ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕು ಎಂಬ ಮನವಿಯನ್ನು ಕಳೆದ ವರ್ಷ ಸೆಪ್ಟೆಂಬರ್ ೨೭ರಂದು ಸುಪ್ರೀಂಕೋರ್ಟಿನ ತ್ರಿಸದಸ್ಯ ನ್ಯಾಯಪೀಠವು, : ಬಹುಮತದ ತೀರ್ಪಿನಲ್ಲಿ ತಳ್ಳಿ ಹಾಕಿತ್ತು. ಅಯೋಧ್ಯಾ ಭೂ ವಿವಾದದ ವಿಚಾರಣೆ ಕಾಲದಲ್ಲಿ ವಿಚಾರ ಪ್ರಸ್ತಾಪಗೊಂಡಿತ್ತು. ವಿವಿಧ ಹಿಂದುತ್ವ ಸಂಘಟನೆಗಳು ವಿವಾದಿತ ಪ್ರದೇಶದಲ್ಲಿ ಶೀಘ್ರವಾಗಿ ರಾಮಮಂದಿರ ನಿರ್ಮಾಣಕ್ಕೆ ಅನುವು ಮಾಡಿಕೊಡಲು ಸುಗ್ರೀವಾಜ್ಞೆ ಹೊರಡಿಸುವಂತೆ ಒತ್ತಾಯಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸುವ ಬಗೆಗಿನ ಯಾವುದೇ ನಿರ್ಣಯವನ್ನು ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ಮಾಡಲಾಗುವುದು ಎಂದು ಸ್ಪಷ್ಟ ಪಡಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸೇರಿದಂತೆ ಹಿಂದುತ್ವ ಸಂಘಟನೆಗಳು ರಾಮಮಂದಿರದ ತ್ವರಿತ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ತೀವ್ರ ಆಗ್ರಹ ಮಾಡತೊಡಗಿದ್ದರ ಮಧ್ಯೆ ಪ್ರಧಾನಿ ಮೋದಿ ಅವರಿಂದ ಸ್ಪಷ್ಟನೆ ಬಂದಿತ್ತು. ನ್ಯಾಯಾಂಗ ಪ್ರಕ್ರಿಯೆ ಅದರ ಹಾದಿ ಹಿಡಿಯಲಿ. ಅದನ್ನು ರಾಜಕೀಯ ಪರಿಭಾಷೆಯಲ್ಲಿ ತೂಗಬೇಡಿ. ನ್ಯಾಯಾಂಗ ಪ್ರಕ್ರಿಯೆ ಮುಗಿಯಲಿ. ನ್ಯಾಯಾಂಗ ಪಕ್ರಿಯೆ ಮುಗಿದ ಬಳಿಕ, ಸರ್ಕಾರವಾಗಿ ನಾವು ಏನು ಹೊಣೆಗಾರಿಕೆ ನಿಭಾಯಿಸಬೇಕೋ ಅದನ್ನು ನಾವು ನಿಭಾಯಿಸುತ್ತೇವೆ. ಎಲ್ಲ ಪ್ರಯತ್ನಗಳನ್ನೂ ಮಾಡಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಿ ಸಂದರ್ಶನ ಒಂದರಲ್ಲಿ ಹೇಳಿದ್ದರು. ಸಂದರ್ಶನ ಹಲವಾರು ಟಿವಿ ವಾಹಿನಿಗಳಲ್ಲಿ ಪ್ರಸಾರಗೊಂಡಿತ್ತು.

2019: ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ಬರುವ ಮುಸ್ಲಿಮೇತರ ವಲಸೆಗಾರರಿಗೆ ಭಾರತೀಯ ಪೌರತ್ವವನ್ನು ನೀಡುವ ವಿವಾದಾತ್ಮಕ ಪೌರತ್ವ ಮಸೂದೆಗೆ ವಿರೋಧ ಪಕ್ಷಗಳ ಭಾರೀ ಪ್ರತಿಭಟನೆಯ ಮಧ್ಯೆ ಲೋಕಸಭೆ ತನ್ನ ಅನುಮೋದನೆ ನೀಡಿತು. ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪೌರತ್ವ ಮಸೂದೆಯನ್ನು ಸದನದಲ್ಲಿ ಮಂಡಿಸಿ, ಮಸೂದೆಯು ಕೇವಲ ಅಸ್ಸಾಂಗಾಗಿ ಇರುವ ಮಸೂದೆಯಲ್ಲ ಅಥವಾ ನಿರ್ದಿಷ್ಟ ರಾಷ್ಟ್ರದ ವಲಸೆಗಾರರಿಗಾಗಿ ಇರುವಂತಹುದಲ್ಲ ಎಂದು ಸ್ಪಷ್ಟ ಪಡಿಸಿದರು. ಮಸೂದೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳನ್ನು ವ್ಯಕ್ತ ಪಡಿಸಿದ ಅಸ್ಸಾಂ ಗಣ ಪರಿಷದ್ (ಎಜಿಪಿ) ಅಸ್ಸಾಮಿನ ಆಡಳಿತಾರೂಢ ಬಿಜೆಪಿಗೆ ನೀಡಿದ ಬೆಂಬಲವನ್ನು ಸೋಮವಾರ ಹಿಂತೆಗೆದುಕೊಂಡಿತ್ತು. ಪೌರತ್ವ ತಿದ್ದುಪಡಿ ಮಸೂದೆಯು ಕೇವಲ ಅಸ್ಸಾಂಗಾಗಿ ಇರುವಂತಹುದಲ್ಲ. ಮಸೂದೆಯು ಪಶ್ಚಿಮ ಗಡಿಯಿಂದ ಬರುವ ವಲಸೆಗಾರರಿಗೂ ಅನ್ವಯಿಸುತ್ತದೆ ಎಂಬುದಾಗಿ ನಾನು ಸ್ಪಷ್ಟ ಪಡಿಸುತ್ತೇನೆ. ಅಸ್ಸಾಂ ದೀರ್ಘ ಕಾಲದಿಂದ ಅಕ್ರಮ ವಲಸೆ ಸಮಸ್ಯೆಯನ್ನು ಎದುರಿಸುತ್ತಿದ್ದು ಇದು ಭಾರತಕ್ಕೆ ಹೊರೆಯಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು. ವಿರೋಧಿ ಸದಸ್ಯರು ಲೋಕಸಭೆಯಲ್ಲಿ ಗೃಹ ಸಚಿವರ ಭಾಷಣದ ವೇಳೆಯಲ್ಲಿ ಘೋಷಣೆಗಳನ್ನು ಕೂಗಿದರು. ಈಶಾನ್ಯ ಭಾಗದ ಕೆಲವು ಬಿಜೆಪಿ ಮಿತ್ರ ಪಕ್ಷಗಳೂ ಪ್ರತಿಭಟನಕಾರರ ಜೊತೆ ಸೇರಿದರು. ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರೆ, ಮಸೂದೆಯಿಂದಾಗಿ ಈಶಾನ್ಯ ಭಾಗದಲ್ಲಿ ಬೆಂಕಿ ಹೊತ್ತಿಕೊಳ್ಳಲಿದೆ ಎಂದು ತೃಣಮೂಲ ಕಾಂಗ್ರೆಸ್ ಎಚ್ಚರಿಕೆ ನೀಡಿತು. ಪೌರತ್ವ ತಿದ್ದುಪಡಿ ಮಸೂದೆಯು ಅಸ್ಸಾಮಿನಲ್ಲಿ ಮತ್ತು ಈಶಾನ್ಯ ಭಾಗದಲ್ಲಿ ಬೆಂಕಿಯ ಜ್ವಾಲೆಗಳನ್ನು ಎಬ್ಬಿಸಲಿದೆ. ಆಫ್ಘಾನಿಸ್ಥಾನ ಮತ್ತು ಪಾಕಿಸ್ತಾನದಿಂದ ಬರುವ ವಲಸಿಗರ ಬಗ್ಗೆ ನಮ್ಮ ಆಕ್ಷೇಪವಿಲ್ಲ. ಆದರೆ ಇದನ್ನು ಜಾತ್ಯತೀತ ಮಸೂದೆಯನ್ನಾಗಿ ಮಾಡಿ. ಕೇವಲ ಧರ್ಮಗಳನ್ನು ಏಕೆ ಉಲ್ಲೇಖಿಸಿದ್ದೀರಿ? ಕೇವಲ ಮೂರು ರಾಷ್ಟ್ರಗಳನ್ನು ಪ್ರಸ್ತಾಪಿಸಬೇಡಿ ಎಂದು ತೃಣಮೂಲ ಸಂಸತ್ ಸದಸ್ಯ ಸೌಗತ ರೇ ಹೇಳಿದರು. ಎನ್ ಡಿಎ ಸರ್ಕಾರವು ಪೌರತ್ವ ಕಾಯ್ದೆಯಲ್ಲಿನ ಬದಲಾವಣೆಗಳಿಗೆ ಹಿಂದಿನ ದಿನ ಒಪ್ಪಿಗೆ ನೀಡಿದ ಬೆನ್ನಲ್ಲೇ ಅಸ್ಸಾಮಿನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಪ್ರದರ್ಶನಕಾರರು ಶಾಸನದ ಪ್ರತಿಗಳನ್ನು ಸುಟ್ಟು ಹಾಕಿದರು ಮತ್ತು ಪ್ರತಿಭಟನಾ ಪ್ರದರ್ಶನಗಳನ್ನು ನಡೆಸಿದರು.
ಮಸೂದೆಯು ಅಸ್ಸಾಮಿನಲ್ಲಿ ಮಾತ್ರವೇ ಅಲ್ಲ, ಸಂಪೂರ್ಣ ಈಶಾನ್ಯ ಭಾಗದಲ್ಲಿ ಜನಾಂಗೀಯ ಬಿರುಕುಗಳನ್ನು ಮೂಡಿಸಲಿದೆ ಮತ್ತು ಉಗ್ರಗಾಮಿ ಗುಂಪುಗಳ ಮರುಹುಟ್ಟಿಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿತು. ಬಿಜೆಪಿಯ ಮಿತ್ರ ಪಕ್ಷಗಳಾದ ಮೇಘಾಲಯ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಮತ್ತು ಮಿಜೋರಂನ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) ಕೂಡಾ ಉದ್ದೇಶಿತ ಕಾನೂನನ್ನು ವಿರೋಧಿಸಿದವು. ನಾವು ಬಂದ್ ಗೆ ಬೆಂಬಲ ನೀಡಲಿದ್ದೇವೆ. ಮಿಜೋರಂ ಸಂಪೂರ್ಣ ಹರತಾಳ ಆಚರಿಸಲಿದೆ. ಜನರಿಗೆ ಇಷ್ಟೊಂದು ಸುಲಭವಾಗಿ ಪೌರತ್ವ ಲಭಿಸಿದರೆ ನಮ್ಮ ಸ್ಥಿತಿ ಹೀನಾಯವಾಗುತ್ತದೆ. ಮಿಜೋರಂನಲ್ಲಿ ಬಾಂಗ್ಲಾದೇಶ ಮತ್ತು ಬರ್ಮಾ (ಮ್ಯಾನ್ಮಾರ್) ದಿಂದ ಬಂದ ವಲಸೆಗಾರರಿದ್ದಾರೆ ಎಂದು ಮಿಜೋರಂ ಮುಖ್ಯಮಂತ್ರಿ ಮತ್ತು ಎಂಎನ್ ಎಫ್ ಅಧ್ಯಕ್ಷ ಝೊರಾಮ್ತಂಗ ಹೇಳಿದರು. ಉದ್ದೇಶಿತ ತಿದ್ದುಪಡಿಯು ಅಕ್ರಮ ವಲಸೆಗೆ ಪ್ರೋತ್ಸಾಹ ನೀಡುವುದು ಎಂದೂ ಅವರು ನುಡಿದರು.


2018: ನವದೆಹಲಿ: ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಯು ದುಬೈನ ಬುರ್ಜ್ಖಲೀಫಾದಿಂದ ಮಾಸಿ ಹೋಗಲಿದೆಯೇ? ಇನ್ನು ಕೆಲವೇ ತಿಂಗಳಲ್ಲಿ "ದುಬೈ ಕ್ರೀಕ್ಟವರ್‌' ಎಂಬ ಕಟ್ಟಡವು ತಲೆಎತ್ತಲಿದ್ದು, ಅದು ಬುರ್ಜ್ಖಲೀಫಾಗಿಂತ ಎತ್ತರದ ಕಟ್ಟಡವಾಗಲಿದೆ ಎಂದು ವರದಿಗಳು ತಿಳಿಸಿದವು. ನೆದರ್ಲೆಂಡ್ಕಂಪೆನಿ ಗ್ರೋ (Fugro) ಕಟ್ಟಡದ ವಿನ್ಯಾಸ ರೂಪಿಸಿದೆ. ಮಾತ್ರವಲ್ಲದೆ 928 ಮೀಟರ್‌ (3,028 ಅಡಿ) ಎತ್ತರದ ಕಟ್ಟಡ ನಿರ್ಮಾಣಕ್ಕೆ ಮಣ್ಣಿನ ಪರೀಕ್ಷೆಯನ್ನೂ ನಡೆಸಿದೆ. ದುಬೈನ ಎಮ್ಮಾರ್ಪ್ರಾಪರ್ಟೀಸ್ಅದರ ನಿರ್ಮಾಣ ಕಾರ್ಯವನ್ನು ವಹಿಸಿಕೊಳ್ಳಲಿದೆವಿಶ್ವದ ಅತ್ಯಂತ ದೊಡ್ಡ ಫ್ರೇಮ್ದುಬೈಯಲ್ಲಿ: ಪ್ರಮುಖ ನಗರಗಳಿಗೆ ಹೆಬ್ಟಾಗಿಲು ಇರುವಂತೆ ದುಬೈಗೂ ದೊಡ್ಡ ಹೆಬ್ಟಾಗಿಲು ನಿರ್ಮಾಣವಾಗಿದೆ. 2008ರಿಂದ ಅದರ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಸದ್ದಿಲ್ಲದೆ ನಾಲ್ಕು ದಿನಗಳ ಹಿಂದೆ ಅದು ಉದ್ಘಾಟನೆಯಾಯಿತು. ಅದು 492 ಅಡಿ ಎತ್ತರವಿದೆ. ಮಹಾನಗರದ ಆಶೋತ್ತರ ಮತ್ತು ಸಾಧನೆಯ ಹೆಗ್ಗುರುತು ಅದಾಗಬೇಕು ಎನ್ನುವುದು ಪ್ರವರ್ತಕರ ಅಭಿಲಾಶೆ. ಚಿನ್ನದ ಬಣ್ಣದ ಕನ್ನಡಿಗಳಿಂದ ಅದು ಒಡಗೂಡಿದ್ದು, 2020ರಲ್ಲಿ ನಡೆಯಲಿರುವ ವಸ್ತುಪ್ರದರ್ಶನದ ವಿವರಗಳನ್ನು ಒಳಗೊಂಡಿದೆ. ಹೆಬ್ಟಾಗಿಲಿನ ಮೇಲ್ಭಾಗಕ್ಕೆ ಹೋದಾಗ ಬುರ್ಜ್ಖಲೀಫಾ ಸಹಿತ ಇತರ ಗಗನಚುಂಬಿ ಕಟ್ಟಡಗಳ ದೃಶ್ಯ ಕಾಣುತ್ತದೆ


2018: ನವದೆಹಲಿ: ಆಗಸ್ಟಾ ವೆಸ್ಟ್ಲ್ಯಾಂಡ್ಹೆಲಿಕಾಪ್ಟರ್ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಟೆಲಿಯ ಕೋರ್ಟ್ಇಬ್ಬರನ್ನು ದೋಷಮುಕ್ತಗೊಳಿಸಿತು. ಫಿನ್ಮೆಕಾನಿಕಾ ಕಂಪೆನಿಯ ಮಾಜಿ ಸಿಇಒ ಗಿಸೆಪ್ಪೆ ಓರ್ಸಿ ಮತ್ತು ಫಿನ್ಮೆಕಾನಿಕಾ ಕಂಪೆನಿಯ ಹೆಲಿಕಾಪ್ಟರ್ವಿಭಾಗ ಮುಖ್ಯಸ್ಥ ಬರ್ನೋ ಸ್ಪಾಂಗೋಲಿನಿ ಅವರನ್ನು ಖುಲಾಸೆಗೊಳಿಸಿ ಇಟೆಲಿಯ ಮಿಲಾನ್ನಲ್ಲಿರುವ ಕೋರ್ಟ್ತೀರ್ಪು ನೀಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು 2014ರಲ್ಲಿ ಬಂಧಿಸಲಾಗಿತ್ತು. ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿತು. ಮಿಲಾನ್ಲ್ಲಿರುವ ಸಿಬಿಐ ಅಧಿಕಾರಿಗಳು ಬಗ್ಗೆ ಸ್ಪಷ್ಟನೆ ನೀಡಿ, ಕೋರ್ಟ್ ಆದೇಶವನ್ನು ವಿವರವಾಗಿ ಪರಿಶೀಲಿಸಿದ ಬಳಿಕ ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಹೇಳಿದರು. ಇಟೆಲಿ ಅಧಿಕಾರಿಗಳು ಅದರ ಬಗ್ಗೆ ಮೇಲ್ಮನವಿ ಸಲ್ಲಿಸುತ್ತಾರೆಯೋ ಎಂಬ ಬಗ್ಗೆ ಕಾದುನೋಡಲಾಗುತ್ತದೆ ಎಂದು ಅವರು ಹೇಳಿದರು.
2018: ನವದೆಹಲಿ:  ಭಾರತದಲ್ಲಿ ಸಲಿಂಗ ಕಾಮ ಅಪರಾಧ ಹೌದೋ ಅಲ್ಲವೋ ಎಂಬ ಬಗ್ಗೆ ಮರುಪರಿಶೀಲನೆ ನಡೆಸುವಂಥ ಮಹತ್ವದ ನಿರ್ಧಾರವನ್ನು ಸುಪ್ರೀಂ ಕೋರ್ಟ್ಕೈಗೊಂಡಿತು. ಮೂಲಕ ದೇಶಾದ್ಯಂತ ಮತ್ತೊಮ್ಮೆ ಸೆಕ್ಷನ್‌ 377 ಚರ್ಚೆಗೆ ನಾಂದಿ ಹಾಡಿತು. ಇಬ್ಬರು ವಯಸ್ಕರು ಸಮ್ಮತಿಯಿಂದ ನಡೆಸುವ ಲೈಂಗಿಕ ಕ್ರಿಯೆಯನ್ನು ಅಪರಾಧವಲ್ಲ ಎಂದು ಘೋಷಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ಮುಖ್ಯ ನ್ಯಾ| ದೀಪಕ್ಮಿಶ್ರಾ ನೇತೃತ್ವದ ಪೀಠ, ವಿಸ್ತೃತ ಪೀಠದ ಮೂಲಕ ಕುರಿತು ಪುನರ್ಪರಿಶೀಲನೆ ನಡೆಸುವುದಾಗಿ ಘೋಷಿಸಿತು. ಹಿಂದೆ ಅಂದರೆ 2009ರಲ್ಲಿ ದೆಹಲಿ ಹೈಕೋರ್ಟ್ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸರ್ವೋಚ್ಚ ನ್ಯಾಯಾಲಯ ದಿಲ್ಲಿ ಹೈಕೋರ್ಟ್ತೀರ್ಪನ್ನು ವಜಾ ಮಾಡಿ, ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿತ್ತು. ಅನಂತರ, ತೀರ್ಪನ್ನು ಮರುಪರಿಶೀಲಿಸು ವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಐವರು ಅರ್ಜಿ ಸಲ್ಲಿಸಿದ್ದರುಈದಿನ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ಅರವಿಂದ್ದಾತರ್‌, ಇತ್ತೀಚೆಗೆ ಸುಪ್ರೀಂ ಕೋರ್ಟ್  9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಖಾಸಗಿತನದ ಹಕ್ಕು ಸಂಬಂಧ ನೀಡಿದ ತೀರ್ಪನ್ನು ಪ್ರಸ್ತಾವಿಸಿ, "ಲೈಂಗಿಕ ಸಂಗಾತಿ ಯನ್ನು ಆಯ್ಕೆ ಮಾಡಿಕೊಳ್ಳುವುದು ವ್ಯಕ್ತಿಯ ಮೂಲಭೂತ ಹಕ್ಕುಗಳಲ್ಲೊಂದು' ಎಂಬುದನ್ನು ಕೋರ್ಟ್ಗಮನಕ್ಕೆ ತಂದರು. ಜತೆಗೆ, ಸಮ್ಮತಿಯಲ್ಲೇ ನೈಸರ್ಗಿಕವಲ್ಲದ ಲೈಂಗಿಕತೆಯಲ್ಲಿ ತೊಡಗಿದ್ದಾರೆಂಬ ಕಾರಣಕ್ಕೆ ಇಬ್ಬರು ವಯಸ್ಕರನ್ನು ಜೈಲಿಗೆ ಹಾಕುವುದು ಸರಿಯಲ್ಲ ಎಂದೂ ವಾದಿಸಿದರುಐಪಿಸಿ ಸೆಕ್ಷನ್‌ 377 ಹೇಳುವುದೇನುಯಾರೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಯಾರಾದರೂ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ, ಅದು ಅಪರಾಧವಾಗಿದ್ದು, ಅಂಥ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳ ಜೈಲು ಹಾಗೂ ದಂಡ ವಿಧಿಸ ಬಹುದು ಎಂದು ಸೆಕ್ಷನ್ಹೇಳುತ್ತದೆ. ನ್ಯಾಯಪೀಠ ಹೇಳಿದ್ದೇನು? * ಯಾರೂ ತಮ್ಮ ಲೈಂಗಿಕತೆ ಯಿಂದಾಗಿಯೇ ಭಯದಿಂದ ಬದುಕುವಂಥ ಸ್ಥಿತಿ ಇರಬಾರದು. * ಒಬ್ಬರಿಗೆ ನೈಸರ್ಗಿಕ ಎನಿಸಿದ್ದು, ಮತ್ತೂಬ್ಬರಿಗೆ ನೈಸರ್ಗಿಕ ಅಲ್ಲದೇ ಇರಬಹುದು. * ಕಾಲ ಕಳೆದಂತೆ ಸಾಮಾಜಿಕ ನೈತಿಕತೆಯೂ ಬದಲಾಗುತ್ತಾ ಹೋಗು ತ್ತದೆ. ಬದುಕನ್ನು ಕಾನೂನು ತೂಗಿಸಿ ಕೊಂಡು ಹೋಗುತ್ತದೆ. ಅಂತೆಯೇ ಬದುಕಲ್ಲಿ ಬದಲಾವಣೆಗಳೂ ಆಗುತ್ತವೆ. *  ತಮ್ಮ ಆಯ್ಕೆಯೊಂದಿಗೆ ಬದುಕುವ ವರ್ಗದಲ್ಲಿ ಭೀತಿಯ ವಾತಾವರಣ ಮೂಡಬಾರದು. ಹಾಗಂತ, ಆಯ್ಕೆಯು ಕಾನೂನಿನ ಗಡಿಯನ್ನು ದಾಟಲೂಬಾರದು. *  ಹೀಗಾಗಿ, ವಿಸ್ತೃತ ನ್ಯಾಯಪೀಠವು ವಿಚಾರದ ಕುರಿತು ಪರಿಶೀಲನೆ ನಡೆಸಲಿದೆ.

2009: ಜಪಾನ್‌ನ ತಾಕಯಾಮ ನಗರದಲ್ಲಿ 1993ರಲ್ಲಿ ಮೃತಪಟ್ಟ ಹೋರಿಯೊಂದರ ತದ್ರೂಪಿಗಳನ್ನು ವಿಜ್ಞಾನಿಗಳು 15 ವರ್ಷಗಳ ಬಳಿಕ ಸೃಷ್ಟಿಸಿದ್ದು, ಅವುಗಳನ್ನು ಈದಿನ ಪ್ರದರ್ಶಿಸಿದರು.

2009: ಸರ್ಕಾರದ ಪ್ರಮುಖ 28 ಇಲಾಖೆಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸುವಲ್ಲಿ ಬೆಂಗಳೂರು ನಗರ ಈಶಾನ್ಯ ವಿಭಾಗದ ಪೊಲೀಸರು ಯಶಸ್ವಿಯಾದರು. ಪ್ರಕರಣದ ಸಂಬಂಧ ಏಳು ಜನರನ್ನು ಬಂಧಿಸಿದ ಅವರು ಭಾರಿ ಪ್ರಮಾಣದ ನಕಲಿ ದಾಖಲೆ ಪತ್ರಗಳು, ಸೀಲುಗಳನ್ನು ವಶಪಡಿಸಿಕೊಂಡರು. ನಕಲಿ ದಾಖಲೆಗಳಿಂದಾದ ನಷ್ಟದ ಅಂದಾಜು ಮಾಡಲು ಸಾಧ್ಯವಾಗಿಲ್ಲ, ಆದರೆ ನೂರಾರು ಕೋಟಿ ರೂಪಾಯಿ ವಂಚನೆ ನಡೆದಿರಬಹುದು ಎಂದು ಊಹಿಸಲಾಯಿತು. ಈ ಜಾಲದ ರೂವಾರಿ ಬಿಸ್ಮಿಲ್ಲಾನಗರದ ನಿವಾಸಿ ಅಬ್ದುಲ್ ಖಾದರ್ (65), ಲಕ್ಷ್ಮಿಲೇಔಟ್‌ನ ಅರಕೆರೆಯ ರೆಹಮತ್ ಉಲ್ಲಾ (33) ಭೂಪಸಂದ್ರದ ಆರ್‌ಎಂವಿ ಎರಡನೇ ಹಂತದ ಲಕ್ಷ್ಮೀಪತಿ (39), ಚುಂಚಘಟ್ಟ ಮುಖ್ಯರಸ್ತೆಯ ರಾಮಚಂದ್ರ (39), ಜಯನಗರದ ಸೈಯದ್ ಆರೀಫ್ (42), ನಿಜಾಮ್ದುದೀನ್ ಸ್ಟ್ರೀಟ್ ಬಾಬಾಲೇನ್‌ನ ಅಶ್ಫಕ್ (41) ಮತ್ತು ಕಾಮಾಕ್ಷಿಪಾಳ್ಯ ಕರಿಕಲ್ಲು ನಿವಾಸಿ ಲಕ್ಷ್ಮಣ (44) ಅವರನ್ನು ಬಂಧಿಸಲಾಯಿತು. ಒಟ್ಟು 14 ಮಂದಿಯ ಗುಂಪು ಈ ಅಕ್ರಮದಲ್ಲಿ ತೊಡಗಿದ್ದುದು ಬೆಳಕಿಗೆ ಬಂತು. ಇನ್ನೂ ಏಳು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

2009: ಜಾರ್ಖಂಡ್‌ನ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ತಮಾರ್ ಕ್ಷೇತ್ರದ ಉಪಚನಾವಣೆಯಲ್ಲಿ ಗೆಲ್ಲಲೇಬೇಕಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ನಾಯಕ ಶಿಬು ಸೊರೇನ್‌ಗೆ ಮತ್ತೆ ಅದೃಷ್ಟ ಕೈಕೊಟ್ಟಿತು. ಜಾರ್ಖಂಡ್ ಪಕ್ಷದ ರಾಜಾ ಪೀಟರ್ ಕೈಯಲ್ಲಿ ಅವರು 9 ಸಾವಿರ ಮತಗಳಿಂದ ಸೋತು ತೀವ್ರ ಮುಖಭಂಗಕ್ಕೆ ಗುರಿಯಾದರು.. ಕಳೆದ ವರ್ಷದ ಆಗಸ್ಟ್ 27ರಂದು ಮುಖ್ಯಮಂತ್ರಿ ಗಾದಿಗೇರಿದ್ದ ಸೊರೇನ್ ಅವರು ಫೆ.27ರೊಳಗೆ ರಾಜ್ಯ ವಿಧಾನಸಭೆಗೆ ಆರಿಸಿ ಬರಬೇಕಿತ್ತು. ಆದರೆ ಈ ಅಗ್ನಿಪರೀಕ್ಷೆಯಲ್ಲಿ ಅವರು ವಿಫಲರಾದರು.

2009: ನ್ಯೂಯಾರ್ಕ್ ಅಸೆಂಬ್ಲಿ ಅಧಿವೇಶನನ ಮೊದಲ ದಿನ ಮುಂಬೈಯಲ್ಲಿ ಉಗ್ರರ ದಾಳಿಗೆ ಬಲಿಯಾದವರ ಗೌರವಾರ್ಥ ಒಂದು ನಿಮಿಷ ಮೌನ ಆಚರಿಸಲಾಯಿತು. ಉಗ್ರರ ವಿರುದ್ಧ ಹೋರಾಡಲು ಭಾರತೀಯರಿಗೆ ಬೆಂಬಲ ಸೂಚಿಸಿ ಅಸೆಂಬ್ಲಿ ಈ ಕ್ರಮ ಕೈಗೊಂಡಿತು. ಈ ಹಿಂದೆ ಯಾವ ಘಟನೆಗೂ ಅಸೆಂಬ್ಲಿ ಇಂಥ ಪ್ರತಿಕ್ರಿಯೆ ವ್ಯಕ್ತಪಡಿಸಿರಲಿಲ್ಲ.

2008: ಮುಂಜಾನೆಯ ಸೂರ್ಯಕಿರಣದ (ಸೂರ್ಯರಶ್ಮಿ) ಜೊತೆಗೆ ನಿಮ್ಮ ದೇಹ ಸೇರುವ ವಿಟಮಿನ್ ಡಿ, ನಿಮ್ಮ ಹೃದಯವನ್ನು ರೋಗಗಳಿಂದ ಕಾಪಾಡುತ್ತದೆ ಮಾತ್ರವಲ್ಲ, ಮೂಳೆರೋಗ, ಮಧುಮೇಹ ಹಾಗೂ ಖನಿಜಾಂಶಗಳ ಕೊರತೆಯಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗಿ ಅವು ಸಡಿಲವಾಗುವ ಸಾಧ್ಯತೆಗಳನ್ನೂ ತಪ್ಪಿಸುತ್ತವೆ ಎಂದು ಅಮೆರಿಕದ ಅಧ್ಯಯನವೊಂದು ತಿಳಿಸಿತು. ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರವವರು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚು. ಅದರಲ್ಲೂ ಹೆಚ್ಚಿನ ರಕ್ತದೊತ್ತಡವುಳ್ಳವರು ಹೃದಯ ರೋಗಗಳಿಗೆ ಬಲಿಯಾಗುವ ಸಾಧ್ಯತೆಗಳು ಇತರರಿಗಿಂತ ದುಪ್ಪಟ್ಟು ಎಂದು ಹಾರ್ವರ್ಡ್ ವೈದ್ಯ ಕಾಲೇಜಿನ ಪ್ರೊಫೆಸರ್ ಥಾಮಸ್ ವಾಂಗ್ ಹೇಳಿದರು. ಸೂರ್ಯರಶ್ಮಿ ಹೊರತಾಗಿ ವಿಟಮಿನ್ ಡಿ ಅಂಶ ಮೀನು, ಮೊಟ್ಟೆ, ಹಾಲು ಮತ್ತು ದ್ವಿದಳ ಧಾನ್ಯದಿಂದಲೂ ದೊರಕುತ್ತದೆ. ವಿಟಮಿನ್ ಡಿ ಅಂಶವು ಸರಿಯಾದ ಪ್ರಮಾಣದಲ್ಲಿದ್ದರೆ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ತಡೆಯೊಡ್ಡುತ್ತವೆ. ರಕ್ತ ಪರಿಚಲನೆ ಸಮರ್ಪಕವಾಗುವುದಲ್ಲದೆ ರಕ್ತ ನಾಳಗಳು ಪ್ರತಿರೋಧಕ ಶಕ್ತಿಯನ್ನೂ ಉತ್ತಮಪಡಿಸಿಕೊಳ್ಳುತ್ತವೆ. ಸರಾಸರಿ 59 ವರ್ಷದ 1700 ಜನರನ್ನು ಐದು ವರ್ಷಗಳ ಕಾಲ ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ಬೆಳಕಿಗೆ ಬಂತು. ಭಾರತೀಯರು ಮುಂಜಾನೆ ಎದ್ದು ಸೂರ್ಯನಿಗೆ ಅಭಿಮುಖವಾಗಿ ನಿಂತು ಅರ್ಘ್ಯ ಬಿಡುವುದು, ಸೂರ್ಯ ನಮಸ್ಕಾರ ಮಾಡುವುದರ ಹಿಂದಿನ ವೈಜ್ಞಾನಿಕತೆ ಏನೆಂದು ಅರ್ಥವಾಯಿತಲ್ಲ?

2008: ಪ್ರತಿನಿತ್ಯ ಐದು ಬಗೆಯ ಹಣ್ಣು ಮತ್ತು ತರಕಾರಿ ಬಳಕೆ, ನಿಯಮಿತ ವ್ಯಾಯಾಮ, ಧೂಮಪಾನ ರಹಿತ ಬದುಕು ಹಾಗೂ ಮಿತವಾದ ಮದ್ಯ ಸೇವನೆ - ಇವಿಷ್ಟನ್ನೂ ನೀವು ನಿರಂತರ ಪಾಲಿಸಿದ್ದೇ ಆದರೆ ಸರಾಸರಿ ಮನುಷ್ಯರ ಆಯುಷ್ಯಕ್ಕಿಂತ 14 ವರ್ಷ ಹೆಚ್ಚು ಕಾಲ ಬದುಕಬಲ್ಲಿರಿ ಎಂದು ಮೆಲ್ಬೊರ್ನಿನ ವೈದ್ಯಕೀಯ ವಿಜ್ಞಾನ ಪತ್ರಿಕೆಯ ವರದಿಯೊಂದು ತಿಳಿಸಿತು. 1993 ಹಾಗೂ 1997ರ ನಡುವಿನ ಅವಧಿಯಲ್ಲಿ 20 ಸಾವಿರ ಆರೋಗ್ಯವಂತ ಬ್ರಿಟಿಷ್ ಪುರುಷರು ಮತ್ತು ಮಹಿಳೆಯರ ಜೀವನಶೈಲಿಯನ್ನು ಅಭ್ಯಸಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಮುಖ್ಯವಾಗಿ ಧೂಮಪಾನ ತೊರೆಯುವುದರಿಂದ ಆರೋಗ್ಯದಲ್ಲಿ ಪರಿಣಾಮಕಾರಿ ಬದಲಾವಣೆ ಕಂಡುಬರುತ್ತದೆ. ಜೊತೆಗೆ ಹಣ್ಣು ಮತ್ತು ತರಕಾರಿ ಸೇವನೆಯಿಂದ ಆರೋಗ್ಯ ವೃದ್ಧಿಯಲ್ಲಿ ಶೇಕಡ 80ರಷ್ಟು ಗಮನಾರ್ಹ ಬದಲಾವಣೆ ಉಂಟಾಗುತ್ತದೆ ಎಂದೂ ವರದಿ ಹೇಳಿತು.

2008: ಶ್ರೀಲಂಕಾದ ಸಚಿವ ಡಿ.ಎಂ. ಡಿಸ್ಸನಾಯಕೆ ಅವರನ್ನು ಶಂಕಿತ ಎಲ್ ಟಿ ಟಿ ಇ ಉಗ್ರಗಾಮಿಗಳು ಕೊಲಂಬೋದಲ್ಲಿ ನೆಲಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದರು. ಎರಡು ದಿನಗಳ ಹಿಂದೆ ಎಲ್ ಟಿ ಟಿ ಇ ಗುಪ್ತದಳದ ಮುಖ್ಯಸ್ಥ ಕರ್ನಲ್ ಚಾರ್ಲ್ಸ್ ಅವರನ್ನು ಭದ್ರತಾಪಡೆಗಳು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಸಚಿವರ ಬೆಂಗಾವಲು ಪಡೆ ಮೇಲೆ ಉಗ್ರರು ದಾಳಿ ನಡೆಸಿದರು. ಬೆಂಗಾವಲು ಪಡೆಯೊಂದಿಗೆ ವಾಹನದಲ್ಲಿ ಸಚಿವ ಡಿಸ್ಸನಾಯಕೆ ಹೋಗುತ್ತಿದ್ದಾಗ ನೆಲಬಾಂಬ್ ಸ್ಫೋಟಗೊಂಡಿತು. ತೀವ್ರ ಗಾಯಗಳಿಂದಾಗಿ ಸಚಿವರು ಹಾಗೂ ಅವರ ಜೊತೆಗಿದ್ದ ಒಬ್ಬ ಭದ್ರತಾ ಸಿಬ್ಬಂದಿ ಮೃತರಾದರು.

2008: ನವದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಈ ಮೊದಲಿನ ಎಲ್ಲ ದಾಖಲೆಗಳನ್ನು ಮುರಿಯಿತು. ಜಾಗತಿಕ ಮಾರುಕಟ್ಟೆ ಸಲಹೆ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಖರೀದಿ ಭರಾಟೆ ನಡೆದದ್ದರಿಂದ 10 ಗ್ರಾಂ ಚಿನ್ನದ ಬೆಲೆಯು ರೂ 11,150ಕ್ಕೆ ಏರಿತು. ಪ್ರತಿ 10 ಗ್ರಾಂಗಳಿಗೆ ರೂ 175ರಷ್ಟು ಏರಿಕೆ ಕಂಡು, ಈ ತಿಂಗಳ 4ರ ದಾಖಲೆ ಬೆಲೆಯಾದ 11,025 ರೂಪಾಯಿಗಳ ದಾಖಲೆಯನ್ನೂ ಮುರಿಯಿತು.

2008: ವಿವಾದಾತ್ಮಕ ಅಂಪೈರ್, ವೆಸ್ಟ್ ಇಂಡೀಸಿನ ಸ್ಟೀವ್ ಬಕ್ನರ್ ಅವರನ್ನು ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಮುಂದಿನ ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೈ ಬಿಟ್ಟಿತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒತ್ತಡಕ್ಕೆ ಮಣಿದ ಐಸಿಸಿ ಈ ಮಹತ್ವದ ನಿರ್ಣಯ ಕೈಗೊಂಡಿತು. ಮೂರನೇ ಟೆಸ್ಟಿನಲ್ಲಿ ಬಕ್ನರ್ ಬದಲು ನ್ಯೂಜಿಲೆಂಡಿನ ಬಿಲಿ ಬೌಡೆನ್ ಅಂಪೈರ್ ಆಗಿ ಕಾರ್ಯ ನಿರ್ವಹಿಸುವರು ಎಂದು ಐಸಿಸಿ ಪ್ರಕಟಿಸಿತು. ಜನಾಂಗೀಯ ನಿಂದನೆ ಪ್ರಕರಣದಲ್ಲಿ ಮೂರು ಟೆಸ್ಟ್ ಪಂದ್ಯಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದ ಹರಭಜನ್ ಸಿಂಗ್ ಅವರಿಗೆ ಪರ್ತ್ ಟೆಸ್ಟಿನಲ್ಲಿ ಆಡಲು ಐಸಿಸಿ ಅನುಮತಿ ನೀಡಿತು. ಹರಭಜನ್ ಸಿಂಗ್ ಸಲ್ಲಿಸಿದ ಮೇಲ್ಮನವಿಯ ಬಗ್ಗೆ ನಿರ್ಣಯ ಕೈಗೊಳ್ಳುವವರೆಗೆ ನಿಷೇಧ ಶಿಕ್ಷೆಯನ್ನು ತಡೆಹಿಡಿಯಲಾಯಿತು.

2008: ಮಲೇಷ್ಯಾ ಸರ್ಕಾರ ತಮ್ನನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಅಲ್ಲಿನ ಹಿಂದೂಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅಲ್ಲಿನ ಆಡಳಿತವು ಭಾರತೀಯ ನೌಕರರ ನೇಮಕಾತಿಯನ್ನು ಸ್ಥಗಿತಗೊಳಿಸಿತು. ಈ ಸಂಬಂಧ ಅಧಿಕೃತ ಆದೇಶವನ್ನು ಹೊರಡಿಸಿದ ಸರ್ಕಾರವು ದೇವಾಲಯದ ಅರ್ಚಕರು, ಶಿಲ್ಪಿಗಳು, ಸಂಗೀತಗಾರರು ಹಾಗೂ ಇನ್ನಿತರ ನೌಕರರ ನೇಮಕಾತಿಯನ್ನು ಸ್ಥಗಿತಗೊಳಿಸಿತು.

2007: ನಾಪತ್ತೆಯಾದ ವಾಣಿಜ್ಯ ವಿಮಾನಕ್ಕಾಗಿ ಶೋಧ ನಡೆಸುತ್ತಿರುವ ಇಂಡೋನೇಷ್ಯದ ನೌಕಾಪಡೆಯ ಹಡಗೊಂದು ಸುಲಾವೆಸ್ಟ್ ಕರಾವಳಿಯ ಬಳಿ ಸಮುದ್ರದ ಒಳಗೆ ಬೃಹತ್ ಗಾತ್ರದ ವಸ್ತುವೊಂದನ್ನು ಪತ್ತೆಹಚ್ಚಿತು. ಆದರೆ ಆ ವಸ್ತು ವಿಮಾನವೇ ಎಂಬುದು ದೃಢಪಟ್ಟಿಲ್ಲ.

2007: ಕನ್ನಡ ಜಾಗೃತಿ ಕುರಿತ ಪುಸ್ತಕಕ್ಕೆ ನೀಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಶಸ್ತಿಗೆ ಪತ್ರಕರ್ತ ಈಶ್ವರ ದೈತೋಟ ಅವರ `ಕನ್ನಡ ಕಷಾಯ' ಕೃತಿ ಆಯ್ಕೆಯಾಯಿತು.

2006: ಖ್ಯಾತ ಮರಾಠಿ ಸಾಹಿತಿ ವಿಂದಾ ಕರಂಡೀಕರ್ ಅವರು 2003ನೇ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಹೆಚ್ಚು ಪ್ರಾಯೋಗಿಕ ಹಾಗೂ ಸಮಗ್ರವಾಗಿ ಸಾಹಿತ್ಯ ಕೃಷಿ ಮಾಡಿದ ಮರಾಠಿ ಸಾಹಿತಿಗಳಲ್ಲಿ ಕರಂಡೀಕರ್ ಮೊದಲಿಗರು.

2006: ಕರ್ನಾಟಕದ ಶಿವಮೊಗ್ಗ ಜಿಲ್ಲೆ ಹೊಸನಗರದ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಗೋಹತ್ಯೆ ನಿಲ್ಲುವವರೆಗೆ ಹಾಗೂ ತಳಿ ಸಂಕರದಂತಹ ಪದ್ಧತಿ ಕೊನೆಗೊಳ್ಳುವವರೆಗೂ ಭಾರತೀಯ ಗೋ ಯಾತ್ರೆ ನಿಲ್ಲದು ಎಂದು ಘೋಷಿಸಿದರು. 68 ದಿನಗಳ ಕಾಲ 6800 ಕಿಲೋಮೀಟರುಗಳಿಗೂ ಹೆಚ್ಚು ದೂರ ಕ್ರಮಿಸಿದ ಗೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಗೋವಿಗೆ ಉತ್ತಮ ಬದುಕು ಮತ್ತು ನಿರಾತಂಕ ಸಾಯುವ ಹಕ್ಕು ದೊರೆಯುವವರೆಗೂ ಈ ಯಾತ್ರೆ ನಿಲ್ಲದು ಎಂದು ಘೋಷಿಸಿದರು. ಇದೇ ದಿನ ಶ್ರೀಮಠದ ಉದ್ಧೇಶಿತ ಗೋ ಬ್ಯಾಂಕ್ ಆರಂಭಗೊಂಡಿದ್ದು, ಈ ಕ್ಷಣದಿಂದಲೇ ಮಠದ ಎಲ್ಲ ಶಾಖೆಗಳೂ ಬ್ಯಾಂಕ್ ಶಾಖೆಗಳಾಗಿ ಪರಿವರ್ತನೆ ಹೊಂದಿವೆ ಎಂದು ಪ್ರಕಟಿಸಿದರು.

2006: ಇಸ್ರೊ ಅಧ್ಯಕ್ಷ ಮಾಧವನ್ ನಾಯರ್, ಮಾಜಿ ಸಚಿವ ಎಂ.ವೈ. ಘೋರ್ಪಡೆ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರ ಪತ್ನಿ ಲಕ್ಷ್ಮೀದೇವಿ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮೈಸೂರು ವಿಶ್ವವಿದ್ಯಾಲಯ ನಿರ್ಧರಿಸಿತು.

2006: ಬಾಲಿವುಡ್ ಸುಂದರಿ ಐಶ್ವರ್ಯ ರೈ ಅವರು ಮಾದಕ ದೇಹಸಿರಿಯುಳ್ಳ (ಅತ್ಯಂತ ಸೆಕ್ಸಿ) ವಿಶ್ವದ 10 ಮಂದಿಯಲ್ಲಿ ಒಬ್ಬರಾಗಿದ್ದಾರೆ ಎಂದು ಅಮೆರಿಕದ ಟಿವಿ ಚಾನೆಲ್ ಒಂದು ಪ್ರಕಟಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಸೆಕ್ಸಿ ದೇಹಸಿರಿ ಹೊಂದಿರುವ ಹಾಲ್ಲೆ ಬೆರ್ರಿ, ಜೆಸ್ಸಿಯಾ ಸಿಂಪ್ಸನ್, ಬ್ರಿಟ್ನಿ ಸ್ಟಿಯರ್ಸ್ ಮತ್ತು ಮಡೋನ್ನಾ ಅವರನ್ನು ಐಶ್ವರ್ಯ ಹಿಂದೆ ಹಾಕಿದ್ದಾರೆ ಎಂದು ಟಿವಿ ಚಾನೆಲ್ ಹೇಳಿತು.

2006: ದೆಹಲಿಯಲ್ಲಿ 70 ವರ್ಷಗಳ ಅವಧಿಯಲ್ಲೇ ಅತ್ಯಂತ ಹೆಚ್ಚು ಚಳಿ ದಾಖಲಾಯಿತು. ಉಷ್ಣಾಂಶ 0.2 ಡಿಗ್ರಿ ಸೆಲ್ಸಿಯಸ್ಗೆ ಇಳಿದಾಗ ಈ ದಾಖಲೆ ನಿರ್ಮಾಣವಾಯಿತು.

1998: `ಜಾಗತಿಕ ನಗೆ ದಿನ'. 1998ರಲ್ಲಿ ಈದಿನ ಭಾರತದಾದ್ಯಂತದ `ನಗೆ ಕೂಟಗಳು' (ಲಾಫ್ಟರ್ ಕ್ಲಬ್ಸ್) ಮುಂಬೈಯಲ್ಲಿ ಮೊತ್ತ ಮೊದಲ `ಜಾಗತಿಕ ನಗೆ ದಿನ' ಆಚರಿಸಿದವು. ಭಾರತದಾದ್ಯಂತದ ನಗೆ ಕೂಟಗಳ ಸುಮಾರು 10,000 ಮಂದಿ ಸದಸ್ಯರು ರೇಸ್ಕೋರ್ಸ್ ಮೈದಾನದಲ್ಲಿ ಸಮಾವೇಶಗೊಂಡು ಒಟ್ಟಿಗೆ ನಕ್ಕರು ಮತ್ತು `ನಗು ಗಂಭೀರ' ವಿಷಯ ಎಂಬುದನ್ನು ಜಗತ್ತಿಗೆ ವಿವರಿಸಿದರು. ಆ ಬಳಿಕ ಪ್ರತಿವರ್ಷದ ಜನವರಿ ತಿಂಗಳ ಎರಡನೇ ಭಾನುವಾರ `ಜಾಗತಿಕ ನಗೆ ದಿನ' ಆಚರಿಸಲಾಗುತ್ತಿದೆ.

1998: ಅಮೆರಿಕನ್ ವರ್ತಕ ವಾಲ್ಟೇರ್ ಇ. ಡೀಮರ್ (1904-1998) ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು. ಇವರು 1928ರಲ್ಲಿ ಫ್ಲೀರ್ ಚ್ಯುಯಿಂಗ್ ಗಮ್ ಕಂಪೆನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾಗ ಅಕಸ್ಮಾತ್ ಆಗಿ ಬಬಲ್ ಗಮ್ ನ್ನು ಕಂಡು ಹಿಡಿದರು.

1996: ಫ್ರಾನ್ಸಿನ ಮಾಜಿ ಅಧ್ಯಕ್ಷ ಫ್ರಾಂಕೋಯಿ ಮಿತೆರಾ ಅವರು ಪ್ಯಾರಿಸ್ಸಿನಲ್ಲಿ ತಮ್ಮ 79ನೇ ವಯಸ್ಸಿನಲ್ಲಿ ಮೃತರಾದರು.

1965: ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದ ಅಶೋಕ ಕುಮಾರ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಒಂಬತ್ತು ಮಂದಿ ಅಂಧ ಕಲಾವಿದರಿಗೆ ನೃತ್ಯ ಶಿಕ್ಷಣ ನೀಡಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂಧರಿಂದ ನೃತ್ಯ ನಡೆಸಿಕೊಟ್ಟ ಅಪೂರ್ವ ಕಲಾವಿದರು ಇವರು. 30 ಮಂದಿ ಅಂಧರ ತಂಡವನ್ನು ಕೂಡಾ ರಚಿಸಿದ ಅಪರೂಪದ ಕಲಾವಿದ.

1953: ಕಲಾವಿದ ಬಿ.ವಿ. ರಾಜರಾಂ ಜನನ.

1945: ಮಾಲತಿ ವೀರಪ್ಪ ಮೊಯಿಲಿ ಹಟ್ಟಿದ ದಿನ.

1944: ಏಜಾಸುದ್ದೀನ್ ಹುಟ್ಟಿದ ದಿನ.

1936: ಸಾಹಿತಿ ಸಿ.ಎನ್. ರಾಮಚಂದ್ರ ಹುಟ್ಟಿದ ದಿನ.

1933: ಸಾಹಿತಿ ಶ್ರೀನಿವಾಸ ಉಡುಪ ಹುಟ್ಟಿದ ದಿನ.

1909: ಭಾರತೀಯ ಸಾಹಿತಿ ಆಶಾಪೂರ್ಣ ದೇವಿ (1909-1995) ಹುಟ್ಟಿದರು. 1976ರಲ್ಲಿ `ಜ್ಞಾನಪೀಠ' ಪ್ರಶಸ್ತಿ ಪಡೆದ ಇವರು ಈ ಪ್ರಶಸ್ತಿಗೆ ಪಾತ್ರರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

1903: ಖ್ಯಾತ ಸಾಹಿತಿ ಎಲ್. ಗುಂಡಪ್ಪ ಹುಟ್ಟಿದ ದಿನ.

1899: ಶ್ರೀಲಂಕೆಯ ಅಧ್ಯಕ್ಷರಾಗಿದ್ದ ಸೊಲೋಮನ್ ಭಂಡಾರನಾಯಿಕೆ (1899-1959) ಹುಟ್ಟಿದರು. 1959ರಲ್ಲಿ ಇವರನ್ನು ಕೊಲೆಗೈಯಲಾಯಿತು. ಇವರ ಪತ್ನಿ ಸಿರಿಮಾವೋ ಭಂಡಾರನಾಯಿಕೆ ಉತ್ತರಾಧಿಕಾರಿಯಾದರು.

1898: ಸಾಹಿತಿ ಕೆ.ವಿ. ಅಯ್ಯರ್ ಹುಟ್ಟಿದ ದಿನ.

1642: ಇಟಲಿಯ ಖಗೋಳ ತಜ್ಞ ಹಾಗೂ ಭೌತ ತಜ್ಞ ಗೆಲಿಲಿಯೋ ಗೆಲೀಲಿ (1564-1642) ತನ್ನ 77ನೇ ವಯಸ್ಸಿನಲ್ಲಿ ಮೃತನಾದ.

No comments:

Post a Comment