ನಾನು ಮೆಚ್ಚಿದ ವಾಟ್ಸಪ್

Monday, January 21, 2019

ಇಂದಿನ ಇತಿಹಾಸ History Today ಜನವರಿ 21

ಇಂದಿನ ಇತಿಹಾಸ History Today ಜನವರಿ 21
2019: ಬೆಂಗಳೂರು/ ತುಮಕೂರು: ಶತಾಯುಷಿ (೧೧೧ ?), ತ್ರಿವಿಧ ದಾಸೋಹಿ, ಅಜಾತಶತ್ರು, ಜಾತಿಮತ ಪಂಥಗಳನ್ನು ಮೀರಿದ ಕಾಯಕ ಯೋಗಿ, ’ನಡೆದಾಡುವ ದೇವರುಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮೀಜಿ ಅವರು ಲಿಂಗೈಕ್ಯರಾದರು. ಕಳೆದ ೫೦ ದಿನಗಳಿಂದ ವಯೋಸಂಬಂಧಿ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಗಂಗಾ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೆ ಕೋಟ್ಯಂತರ ಭಕ್ತರನ್ನು ಅಗಲಿದ್ದಾರೆ. ಸಿದ್ದಗಂಗಾ ಶ್ರೀಗಳು 2019 ಜನವರಿ 21ರ ಸೋಮವಾರ ಬೆಳಗ್ಗೆ ೧೧.೪೪ ಗಂಟೆಗೆ ಲಿಂಗೈಕ್ಯ ರಾದ ವಿಚಾರವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಕಟಿಸಿದರು. ಶ್ರೀಗಳ ಗೌರವಾರ್ಥ ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಿ,  22ರ ಮಂಗಳವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಿಸಲಾಯಿತು.  ಸಿದ್ದಗಂಗಾ ಮಠದಲ್ಲೇ ಶ್ರೀಗಳ ಪಾರ್ಥಿವ ಶರೀರದ ದರ್ಶನಕ್ಕೆ ಮಂಗಳ ವಾರ ಮಧ್ಯಾಹ್ನ ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ಡಾ. ಶಿವಕುಮಾರ ಸ್ವಾಮೀಜಿ ಅವ ಆರೋಗ್ಯವನ್ನು ವಿಚಾರಿಸಲು ಕೊನೆಯ ಕ್ಷಣಗ ಳಲ್ಲಿ ಮಠಕ್ಕೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಭೇಟಿ ನೀಡಿದ್ದರು. ಅವರ ಜೊತೆಗೆ ಬಿ.ಎಸ್. ಯಡಿಯೂರಪ್ಪ, ಎಂ.ಬಿ. ಪಾಟೀಲ್, ಕೆಜೆ ಜಾರ್ಜ್, ಸದಾನಂದ ಗೌಡ ಮತ್ತಿತರರೂ ಇದ್ದರು. ಕಳೆದ ಮತ್ತು ಈಗಿನ ಶತಮಾನದಲ್ಲಿ ನಾಡಿನ ಉದ್ದಗಲಕ್ಕೂ ನಡೆದಾಡಿ ತಮ್ಮದೇ ಆದ ಹೆಗ್ಗುರುತುಗಳನ್ನು ಮೂಡಿಸಿದ್ದ ಡಾ. ಶಿವ ಕುಮಾರ ಸ್ವಾಮೀಜಿ ಇದೀಗ ಹೆಜ್ಜೆ ಮೂಡದ ಹಾದಿಗೆ ಸರಿದಿದ್ದಾರೆ. ತಮ್ಮ ಸರಳ ನಡೆ, ನುಡಿ, ಪಾಂಡಿತ್ಯ, ಆಚಾರ, ವಿಚಾರಗಳಿಂದ ಅಸಂಖ್ಯಾತ ಜನ ಸಮೂಹದಲ್ಲಿ ಅಚ್ಚಳಿಯದ ಪ್ರಭಾವ ಬೀರಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರು ಬಹುದೊಡ್ಡ ಶಿ?ಗಣ, ಭಕ್ತರನ್ನು ಅಗಲಿದ್ದಾರೆ. ತ್ರಿವಿಧ ದಾಸೋಹ ಪರಂಪರೆಗೆ ಹೊಸ ಅರ್ಥ ತುಂಬಿದ್ದ ಡಾ. ಶಿವಕುಮಾರ ಸ್ವಾಮೀಜಿ, ಶಿಕ್ಷಣ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಕೋಟ್ಯಂತರ ಬಡ ಮಕ್ಕಳಲ್ಲಿ ಜ್ಞಾನ ಜ್ಯೋತಿ ಬೆಳಗಿ, ಅವರ ಕುಟುಂಬಗಳು, ಸಮಾಜ ಹಾಗೂ ದೇಶದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ್ದರು. ಸಿದ್ಧಗಂಗಾ ಮಠದಲ್ಲಿ ಓದಿ ದೇಶ ವಿದೇಶಗಳಲ್ಲಿ ಖ್ಯಾತರಾದ ಅಸಂಖ್ಯಾತ ಗಣ್ಯರಿಗೆ ಸ್ವಾಮೀಜಿ ಅವರು ದಾರಿ ದೀಪವಾಗಿದ್ದರು. ದೇಶ ಮತ್ತು ಸಮಾಜ ಪ್ರಗತಿ ಬಗ್ಗೆ ವಿಶೇ? ಕಳಕಳಿ ಹೊಂದಿ ದ್ದರು. ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದ ಶಿವ ಕುಮಾರ ಸ್ವಾಮೀಜಿ, ಮಕ್ಕಳ ಶಿಕ್ಷಣ, ಮಕ್ಕಳ ಬೆಳವಣಿಗೆಯನ್ನೇ ಉಸಿರಾಗಿಸಿಕೊಂಡಿದ್ದರು. ಶ್ರೀಗಳ ಪೂರ್ವಾಶ್ರಮ: ಏಪ್ರಿಲ್ ೧೯೦೭ ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಗ್ರಾಮದ ಹೊನ್ನೇಗೌಡ ಮತ್ತು ಗಂಗಮ್ಮನವರ ಮಗನಾಗಿ ಜನಿಸಿದ್ದರು. ಶ್ರೀಗಳಿಗೆ ಶಿವಕುಮಾರ ಎಂದು ನಾಮಕರಣ ಮಾಡಿದ್ದು, ಮೊದಲಿಗೆ ಎಲ್ಲರ ನೆಚ್ಚಿನ ಶಿವಣ್ಣನಾಗಿದ್ದರು. ಹೊನ್ನೇಗೌಡ ದಂಪತಿಗೆ ಗಂಡು ಹಾಗೂ ಹೆಣ್ಣು ಮಕ್ಕಳು. ಎಲ್ಲರಿಗಿಂತಲೂ ಕಿರಿಯನಾದ ಶಿವಣ್ಣನೆಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ.  ವೀರಾಪುರದಲ್ಲಿಯೇ ಇದ್ದ ಕೂಲಿಮಠದ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಶಿವಣ್ಣನ ಶೈಕ್ಷಣಿಕ ಬದುಕು ಪ್ರಾರಂಭವಾಯಿತು. ಹೀಗೆ ಪ್ರಾರಂಭವಾದ ಅವರ ಅಕ್ಷರ ಜ್ಞಾನ, ಯಾರೂ ಊಹಿಸದ ರೀತಿಯಲ್ಲಿ ದೇಶದ ದಶ ದಿಕ್ಕುಗಳಿಗೂ ಪಸರಿಸಿತು. ನಂತರ ಅವರನ್ನು ಪಕ್ಕದ ಪಾಲನಹಳ್ಳಿಯಲ್ಲಿ ಪ್ರಾಥಮಿಕ ಶಾಲೆಗೆ ದಾಖಲು ಮಾಡಲಾಯಿತು. ಪ್ರಾಥಮಿಕ ಶಾಲಾ ದಿನಗಳಲ್ಲಿಯೇ ತಾಯಿಯನ್ನು ಕಳೆದುಕೊಂಡ ಶಿವಣ್ಣನಿಗೆ ಆಸರೆಯಾಗಿದ್ದು ಅಕ್ಕ. ತುಮಕೂರು ಬಳಿಯ ನಾಗವಲ್ಲಿ ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ, ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತ ಶಿವಣ್ಣ ೧೯೨೬ ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿದರು೧೯೨೭ರಲ್ಲಿ ಆಗಿನ ಸಿದ್ಧಗಂಗಾ ಮಠಾಧಿಪತಿ ಉದ್ಧಾನ ಶಿವಯೋಗಿಗಳೊಡನೆ ಶಿವಕುಮಾರರಿಗೆ ಒಡನಾಟ ಪ್ರಾರಂಭ ವಾಯಿತು. ಅದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿದರು. ಕಾಲೇಜು ದಿನಗಳಲ್ಲಿ ಬೆಂಗಳೂರಿನ ರಾವ್ ಬಹದ್ದೂರ್ ಧರ್ಮಪ್ರವರ್ತ ಗುಬ್ಬಿ ತೋಟದಪ್ಪ ಧರ್ಮ ಛತ್ರದಲ್ಲಿ ಉಳಿದುಕೊಳ್ಳುತ್ತಿದ್ದರು. ಶಿಸ್ತುಬದ್ಧ ಜೀವನ ನಡೆಸುತ್ತಿದ್ದ ಶಿವಕುಮಾರರಿಗೆ ಸಿದ್ಧಗಂಗಾ ಮಠದ ಒಡನಾ ಟವೂ ಮುಂದುವರೆಯಿತು. ಎಂತಹ ಸಂದರ್ಭ ಬಂದರೂ ಶಿವಣ್ಣ ಮಠಕ್ಕೆ ಹೋಗುವುದನ್ನು ನಿಲ್ಲಿಸಲಿಲ್ಲ. ತುಮಕೂರು ಜಿಲ್ಲೆಯಲ್ಲೊಮ್ಮೆ ಭೀಕರ ಪ್ಲೇಗ್ ತಗುಲಿದಾಗಲೂ ಶಿವಣ್ಣ ಮತ್ತು ಮಠದ ಒಡನಾಟ ಎಂದಿನಂತೆಯೇ ಇತ್ತು. ಮಠಾಧಿಪತಿಯಾದ ಶಿವಕುಮಾರ: ೧೯೩೦ರಲ್ಲಿ ಉದ್ದಾನ ಶಿವಯೋಗಿಗಳ ಕಿರಿಯ ಶ್ರೀ ಮರುಳಾರಾಧ್ಯರು ಆಕಸ್ಮಿಕ ವಾಗಿ ಶಿವೈಕ್ಯರಾಗುತ್ತಾರೆ. ಸಂದರ್ಭದಲ್ಲಿ ಶ್ರೀಗಳ ಕ್ರಿಯಾ ಸಮಾಧಿ ಕಾರ್ಯದಲ್ಲಿ ಶಿವಣ್ಣ ಭಾಗಿಯಾಗುತ್ತಾರೆ. ಸಂದರ್ಭದಲ್ಲಿ ಬಹಳ ಉತ್ಸಾಹದಿಂದ ಓಡಾಡುತ್ತಿದ್ದ ಶಿವ ಣ್ಣನ ಮೇಲೆ ಉದ್ದಾನ ಶ್ರೀಗಳ ದೃಷ್ಟಿ ಹರಿಯಿತು.  ಯಾರ ಹೇಳಿಕೆಗೂ ಕಾಯದ ಶ್ರೀಗಳು ಶಿವಣ್ಣನೇ ಸಿದ್ಧಗಂಗಾ ಮಠಧ ಉತ್ತರಾಧಿಕಾರಿ ಎಂದು ಘೋಷಿಸಿದರು. ಎಲ್ಲರಂತೆ ಕ್ರಿಯಾ ಸಮಾಧಿ ಕಾರ್ಯಕ್ಕೆ ಬಂದಿದ್ದ ಶಿವಣ್ಣ ಹಿಂತಿರುಗುವಾಗ ಕಾವಿ, ರುದ್ರಾಕ್ಷಿ ಧರಿಸಿದ ಸನ್ಯಾಸಿಯಾಗಿ ಶ್ರೀ ಶಿವಕುಮಾರ ಸ್ವಾಮೀಜಿಯಾಗಿ ಹಿಂದಿರುಗಿದರು. ಸನ್ಯಾಸತ್ವ ಸ್ವೀಕಾರದ ಬಳಿಕವೂ ಶಿವಕುಮಾರ ವಿದ್ಯಾಭ್ಯಾಸ ಮುಂದುವರೆಸಿದರು.  ಶಿಸ್ತುಬದ್ಧ ವಿದ್ಯಾರ್ಥಿಯಾಗಿ ಶಿಕ್ಷಕರ, ಸ್ನೇಹಿತರ ಮನಗೆಲ್ಲುವಲ್ಲಿ ಯಶಸ್ವಿಯಾದರು.. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಶಿವಕುಮಾರ ಸಿದ್ಧಗಂಗಾ ಮಠಕ್ಕೆ ತೆರಳಿದರು.  ಅಂದಿನಿಂದ ಪೂರ್ಣ ಸಮಯವನ್ನು ಮಠದ ಏಳಿಗೆಗಾಗಿ ಮೀಸಲಿಟ್ಟರು.. ಮುಂದೆ ಉದ್ದಾನ ಶಿವಯೋಗಿ ಶ್ರೀಗಳು ಲಿಂಗೈಕ್ಯರಾದಾಗ ಮಠದ ಸಕಲ ಆಡಳಿತ, ವಿದ್ಯಾರ್ಥಿಗಳ ಶಿಕ್ಷಣ ಸಂಸ್ಥೆಗಳ ಯೋಗಕ್ಷೇಮದ ಜವಾಬ್ದಾರಿ ಶಿವಕುಮಾರ ಶ್ರೀಗಳಿಗೆ ಹಸ್ತಾಂತರವಾಯಿತು.
ಮಠದಲ್ಲಿ ಆರಂಭದ ದಿನಗಳು: ಮಠದಲ್ಲಿ ಆರಂಭದ ದಿನ ಗಳಲ್ಲಿ ಆದಾಯ ತುಂಬಾ ಕಡಿಮೆಯಿತ್ತು. ಮಠಕ್ಕೆಂದು ಮೀಸಲಾಗಿದ್ದ ಜಮೀನಿನ ಹುಟ್ಟುವಳಿಯಿಂದ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದು ಕಷ್ಟವಾಗಿತ್ತು. ಮಠದ ಭೂಮಿ ಮಳೆ ಯಾಧಾರಿತವಾಗಿದ್ದರಿಂದ ಅತಿವೃಷ್ಟಿ, ಅನಾವೃಷ್ಟಿಗಳಂತಹ ಸಮಯದಲ್ಲಿ ಮಠದ ಏಳಿಗೆಗಾಗಿ ಶ್ರೀಗಳು ಭಕ್ತರ ಮನೆಗೆ ಭಿನ್ನಹ ಆದ್ಯತೆ ಮೇರೆಗೆ ನಡೆದುಕೊಂಡು ಹೋಗಿ ಅಲ್ಲಿಂದ ದವಸ ಧಾನ್ಯಗಳನ್ನು ತರುತ್ತಿದ್ದರು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನಷ್ಟೇ ಅಲ್ಲದೆ ಮಠದಲ್ಲಿ ದಿನನಿತ್ಯ ನಡೆಯುತ್ತಿದ್ದ ಧಾರ್ಮಿಕ ಕಾರ್ಯಗಳು, ಭಕ್ತರ ಗಣ್ಯರ ಭೇಟಿ, ಮಠದ ಆರ್ಥಿಕ ನಿರ್ವಹಣೆ ಸೇರಿದಂತೆ ಬಿಡುವಿಲ್ಲದ ಕಾರ್ಯಪಟ್ಟಿಗಳೇ ಇರುತ್ತಿದ್ದವು. ಶಿವಕುಮಾರ ಸ್ವಾಮೀಜಿಗಳಿಂದ ಎಲ್ಲದರ ಜವಾಬ್ದಾರಿ ವಹಿಸಲು ಸಾಧ್ಯವಿಲ್ಲ ಎಂದು ಆರಂಭದಲ್ಲಿ ಹಲವರು ಹೇಳುತ್ತಿದ್ದು, ಯಾವ ಮಾತಿಗೂ ಧೃತಿಗೆಡದ ಅವರು, ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾರಂಭಿ ಸಿದರು. ಅದಾಗಲೇ ದೇಶಕ್ಕೆ ಸ್ವಾತಂತ್ರ್ಯ ಬಂದ ಸಮಯ. ಭಾರತ ಶಿಕ್ಷಣದ ಮಹತ್ವವನ್ನು ದೇಶದೆಲ್ಲೆಡೆ ಪಸರಿಸಲು ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಮಹತ್ವ ತಿಳಿಸಲು ಅಂದಿನ ಸರ್ಕಾರ ಮುಂದಾಗಿತ್ತು. ಆದರೆ ಸಿದ್ಧಗಂಗೆಯಲ್ಲಿ ಅದಾಗಲೇ ಎಲ್ಲವೂ ಕಾರ್ಯರೂಪಕ್ಕೆ ಬಂದಿತ್ತು. ಹೀಗಾಗಿ ಸಿದ್ಧಗಂಗಾ ಮಠದ ಹೆಸರು ರಾ?ಮಟ್ಟದಲ್ಲಿ ಶ್ಲಾಘನೆಗೆ ಒಳಗಾಯಿತು. ಪ್ರತಿದಿನ ಬೆಳಗಿನ ಜಾವ ನಾಲ್ಕಕ್ಕೆ ಎದ್ದು ಸ್ನಾನಮಾಡಿ, ಒಂದು ತಾಸಿಗೂ ಹೆಚ್ಚು ಸಮಯ ಪೂಜಾಕೋಣೆಯಲ್ಲಿ ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ನಂತರ ?ಲಿಂಗ ಪೂಜೆ ನೆರವೇರಿಸುತ್ತಿದ್ದರು. ದೂರದೂರಿನಿಂದ ಸ್ವಾಮಿಗಳ ದರ್ಶ ಕ್ಕಾಗಿ ಬರುವ ಭಕ್ತರಿಗೆ ತ್ರಿಪುಂಡಕ ಭಸ್ಮವನ್ನು ಕೊಟ್ಟು ತಾವು ಧರಿಸಿ ಪೂಜೆಯನ್ನು ಮುಗಿಸುತ್ತಿದ್ದರು. ನಂತರವೇ ಆಹಾರ ಸೇವನೆ. ಮುಂಜಾನೆ ಆರೂವರೆ ಗಂಟೆಗೆ ಒಂದು ಅಕ್ಕಿ ಇಡ್ಲಿ, ಸ್ವಲ್ಪ ಹೆಸರುಬೇಳೆ ತೊವ್ವೆ, ಸಿಹಿ ಹಾಗೂ ಖಾರದ ಚಟ್ನಿ ಅವರ ಆಹಾರ. ಜತೆಗೆ ಎರಡು ತುಂಡು ಸೇಬು ಸೇವಿಸುತ್ತಿದ್ದರು. ಇದಾದ ಬಳಿಕ ಬೇವಿನ ಚಕ್ಕೆಯ ಕಷಾಯವನ್ನು ಕುಡಿಯುತ್ತಿದ್ದರು. ಮುಂಜಾನೆ ಮತ್ತು ಸಂಜೆ ಮಠದ ಆವರಣದಲ್ಲಿ ಮಕ್ಕಳಿಂದ ಪ್ರತಿದಿನ ನಡೆಯುವ ಸಾಮೂಹಿಕ ಪ್ರಾರ್ಥನೆಯಲ್ಲಿ ಶ್ರೀಗಳು ತಪ್ಪದೇ ಪಾಲ್ಗೊಳ್ಳುತ್ತಿದ್ದರು. ಪ್ರಾರ್ಥನೆ ಬಳಿಕ ಕಚೇರಿ ಯಲ್ಲಿ ದಿನಪತ್ರಿಕೆಗಳನ್ನು ಓದುತ್ತಿದ್ದರು. ಕಚೇರಿಗೆ ಬರುತ್ತಿದ್ದ ಭಕ್ತರಿಗೆ, ದರ್ಶನಾರ್ಥಿಗಳಿಗೆ ದರ್ಶನ ನೀಡಿ, ಮಳೆ ಬೆಳೆ, ಕುಶಲೋಪಚರಿ ವಿಚಾರಿಸಿ ಗಣ್ಯರನ್ನು ಭೇಟಿ ಮಾಡುತ್ತಿದ್ದರು. ಮಠದ ಆಡಳಿತ ಕಡತಗಳ ಪರಿಶೀಲನೆ, ಪತ್ರವ್ಯವಹಾರಗಳು ಸೇರಿದಂತೆ ಹಲವಾರು ಕಾರ್ಯದಲ್ಲಿ ನಿರತರಾಗುತ್ತಿದ್ದರು. ಇಳಿವಯಸಿನಲ್ಲಿಯೂ ಧಣಿವರಿಯದೇ ಕಾಯಕವೇ ಕೈಲಾಸ ಎಂದು ದುಡಿಯುತ್ತಿದ್ದರು. ಸಿದ್ಧಗಂಗಾ ಮಠದ ಪ್ರಸಾದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಿದ್ದ ಶ್ರೀಗಳು ಮಧ್ಯಾಹ್ನ ಗಂಟೆಯವರೆಗೂ ಭಕ್ತರ ?ಸುಖಕ್ಕೆ ಸ್ಪಂದಿಸುತ್ತಿದ್ದರು. ನಂತರ ಮಠಕ್ಕೆ ತೆರಳಿ ಸ್ನಾನ ಪೂಜೆಗಳಲ್ಲಿ ಮಗ್ನರಾಗಿ ಬಿಡುತ್ತಿದ್ದರು. ಬಳಿಕ ಮಠದಲ್ಲಿ ಎಳ್ಳಿಕಾಯಿ ಗಾತ್ರದ ಮುದ್ದೆ, ಸ್ವಲ್ಪ ಅನ್ನ ತೊಗರಿಬೇಳೆ ಸಾಂಬಾರ್ ಊಟ ಮಾಡುತ್ತಿದ್ದು, ಸಂಜೆ ಗಂಟೆಯ ನಂತರ ಪುನ: ಭಕ್ತಗಣರ ಭೇಟಿ, ಮಠದಲ್ಲಿ ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ, ದಾಸೋಹದ ಮಾಹಿತಿ ಹೀಗೆ ರಾತ್ರಿ ಗಂಟೆಯವರೆಗೆ ದಣಿವರೆಯದೇ ದುಡಿಯುತ್ತಿದ್ದರು. ಹಳೆಯ ಮಠದಲ್ಲಿ ರಾತ್ರಿ ಕಾರ್ಯಕ್ರಮಕ್ಕೆ ಸ್ವಾಮೀಜಿಗಳು ಮುಂದಾಗುತ್ತಿದ್ದರು. ಸ್ನಾನ ಪೂಜೆ ಮತ್ತು ಪ್ರಸಾದ ಹಳೆಯ ಮಠದಲ್ಲಿಯೇ ನಡೆಯುತ್ತಿತ್ತು. ರಾತ್ರಿ ಒಂದು ಚಪಾತಿ ಇಲ್ಲವೇ ಒಂದು ದೋಸೆ ಜೊತೆಗೆ ಚಟ್ನಿ ಇಲ್ಲವೇ ಪಲ್ಯ. ಇದಿಲ್ಲದಿದ್ದರೆ ಉಪ್ಪಿಟ್ಟು, ಹಣ್ಣಿನ ಸೇವನೆ ಮಾಡುತ್ತಿದ್ದರು. ನಂತರ ರಾತ್ರಿ ೧೦ ಗಂಟೆಗೆ ಸ್ವಾಮೀಜಿಗಳು ಸಭಾಂಗಣದಲ್ಲಿ ಹಾಜರಾಗಿ, ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕದ ಒಂದು ದೃಶ್ಯವನ್ನು ನೋಡಿದ ಬಳಿಕವೇ ಅಂದಿನ ಕಾಯಕಕ್ಕೆ ತೆರೆಬೀಳುತಿತ್ತು. ಪ್ರತಿನಿತ್ಯ ಮಲಗುವ ಮುನ್ನ ಕನಿ? ಅರ್ಧ ತಾಸಾದರೂ ಪುಸ್ತಕ ಓದುತ್ತಿದ್ದರು. ನಂತರ ೧೧ ಗಂಟೆಗೆ ಮಲಗುತ್ತಿದ್ದರು. ಓದಿನೊಂದಿಗೆ ಆರಂಭವಾಗುತ್ತಿದ್ದ ಶ್ರೀಗಳ ದಿನಚರಿ ಓದಿನೊಂದಿಗೆ ಅಂತ್ಯವಾಗುತ್ತಿತ್ತು. ಹಲವು ಧಾರ್ಮಿಕ ಸಮಾರಂಭಗಳಲ್ಲಿ, ಭಕ್ತರ ಮನೆಗಳಿಗೂ ಭೇಟಿ ನೀಡುತ್ತಿದ್ದರು. ದೂರದ ಊರು ಗಳಿಗೆ ಹೋದಾಗ ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಬಿಸಿ ನೀರು ಸೇವಿಸುತ್ತಿದ್ದರು. ದಶಕಗಳಿಂದ ಇದೇ ರೀತಿ ಶ್ರೀಗಳ ಬದಕು ಸಾಗಿತ್ತು. ಶ್ರೀಗಳ ಮೇಲೆ, ಮಠದ ಮೇಲೆ ಹಲವು ಸಾಕ್ಷ್ಯ ಚಿತ್ರಗಳನ್ನೂ ತಯಾರಿಸಲಾಗಿತ್ತು.
ಪ್ರಶಸ್ತಿಗಳು ಮತ್ತು ಸನ್ಮಾನಗಳು: ಸ್ವಾಮೀಜಿಯವರ ಜಾತ್ಯಾ ತೀತ, ಧರ್ಮಾತೀತ ಶಿಕ್ಷಣ ಸೇವೆಯನ್ನು ಪರಿಗಣಿಸಿ ಕರ್ನಾ ಟಕ ವಿಶ್ವವಿದ್ಯಾಲಯವು ಶ್ರೀಗಳಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಪೂಜ್ಯ ಸ್ವಾಮೀಜಿಯವರ ೧೦೦ ನೆ ? ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಶ್ರೀಗಳಿಗೆ ನೀಡಿ ಗೌರವಿಸಿತ್ತು. ೨೦೧೫ರಲ್ಲಿ ಭಾರತ ಸರ್ಕಾರ ಪದ್ಮಭೂ? ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
ಗಿನ್ನೀಸ್ ಬುಕ್ ಆಫ್ ರೆಕಾರ್ಡ್ ದಾಖಲೆ ಸಂಗ್ರಹ: ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರುವ ಉದ್ದೇಶದಿಂದ ಮಠದ ನಿವೃತ್ತ ಪ್ರಾಂಶುಪಾಲ ಚಂದ್ರಶೇಖರಯ್ಯ ಅಂಕಿಅಂಶ ಗಳನ್ನು ಸಂಗ್ರಹಿಸಿದ್ದು, ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಗೆ ಕೊಡಲು ಮುಂದಾಗಿದ್ದಾರೆ. ಮಠದಲ್ಲೇ ಹಲವು ? ಶಿಕ್ಷಕ ವೃತ್ತಿ ಮಾಡಿ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಶ್ರೀಗಳ ಬಗ್ಗೆ ಮಹತ್ವಪೂರ್ಣ ಹಾಗೂ ಆಸಕ್ತಿಕರ ಸಂಗತಿಗಳನ್ನು ಕಲೆ ಹಾಕಿದ್ದರು. ಶ್ರೀಗಳು ಮೂರು ಬಾರಿ ಶಿವಪೂಜೆ ದೀಕ್ಷೆ ಪಡೆದಿದ್ದು, ೮೮ ವರ್ಷಗಳು ಸಂದಿವೆ. ೮೮ ವರ್ಷಗಳಲ್ಲಿ ೯೬,೪೨೬ ಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿದ್ದಾರೆ. ಸಿದ್ಧಗಂಗಾ ಶ್ರೀಗಳನ್ನು ಹೊರತುಪಡಿಸಿದರೆ ಸದ್ಯದ ಪರಿಸ್ಥಿತಿಯಲ್ಲಿ ಬೇರೆ ಯಾರೂ ಸಹ ಇಷ್ಟೊಂದು ಶಿವಾರಾಧನೆ ಮಾಡಿಲ್ಲ. ಗಂಟೆ ಧ್ಯಾನ, ಪೂಜೆ ಶ್ರೀಗಳು ಪ್ರತಿದಿನ ಗಂಟೆ ಧ್ಯಾನ ಮತ್ತು ಪೂಜೆಯಲ್ಲಿ ತಪ್ಪದೆ ತಮ್ಮನ್ನು ತೊಡಗಿಕೊಳ್ಳುತ್ತಿದ್ದರು. ಸುಮಾರು .೮೯.೯೩೦ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆ ಮಾಡಿದ್ದರು. ೧೪ ಗಂಟೆ ಸಮಾಜ ಸೇವೆಯಲ್ಲಿ ತೊಡಗುವ ಶ್ರೀಗಳು ಇಲ್ಲಿಯವರೆಗೆ ,೪೯,೬೮೦ ಗಂಟೆಗಳ ಕಾಲ ಸಮಾಜ ಸೇವೆಗೈದಿದ್ದರು.

2019: ನವದೆಹಲಿ: ಕೇಂದ್ರೀಯ ತನಿಖಾ ದಳದ ಹಂಗಾಮೀ ನಿರ್ದೇಶಕರಾಗಿ ಎಂ. ನಾಗೇಶ್ವರ ರಾವ್ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ಹಿಂದೆ ಸರಿದರು. ಸಿಬಿಐಯ ನೂತನ ಮುಖ್ಯಸ್ಥನ ನೇಮಕಾತಿ ಸಮಿತಿಯ ಸದಸ್ಯನಾಗಿರುವುದರಿಂದ ತಾವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಪ್ರಕಟಿಸಿದರು. ಪ್ರಧಾನಿ ನೇತೃತ್ವದ ತ್ರಿಸದಸ್ಯ ಉನ್ನತಾಧಿಕಾರ ಸಮಿತಿಯಲ್ಲಿ ಲೋಕಸಭೆಯ ದೊಡ್ಡ ವಿರೋಧಿ ಪಕ್ಷದ ನಾಯಕ ಮತ್ತು ಸಿಜಿಐ ಅಥವಾ ಅವರ ಪ್ರತಿನಿಧಿ ಸದಸ್ಯರಾಗಿರುತ್ತಾರೆ.  ಸಿಜೆಐ ಮತ್ತು ನ್ಯಾಯಮೂರ್ತಿ ಸಂಜೀವ ಖನ್ನಾ ಅವರ ದ್ವಿಸದಸ್ಯ ಪೀಠವು ಸರ್ಕಾರೇತರ ಸಂಘಟನೆ ಕಾಮನ್ ಕಾಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿತ್ತುಸಿಬಿಐಯ ಹೆಚ್ಚುವರಿ ನಿರ್ದೇಶಕರಾಗಿದ್ದ ನಾಗೇಶ್ವರ ರಾವ್ ಅವರನ್ನು ಜನವರಿ ೧೦ರಂದು ಸಿಬಿಐಯ ಹಂಗಾಮೀ ನಿರ್ದೇಶಕರಾಗಿ ನೇಮಿಸಲಾಗಿತ್ತು. ಸಿಬಿಐ ಮುಖ್ಯಸ್ಥರಾಗಿದ್ದ ಅಲೋಕ್ ವರ್ಮ ಅವರನ್ನು ಭ್ರಷ್ಟಾಚಾರ ಮತ್ತು ಕರ್ತವ್ಯ ಚ್ಯುತಿ ಆರೋಪದಲ್ಲಿ ಅಧಿಕಾರ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಬಳಿಕ ಕ್ರಮ ಕೈಗೊಳ್ಳಲಾಗಿತ್ತು. ಜನವರಿ ೧೦ರ ಆದೇಶವನ್ನು ಅಕ್ರಮ ಎಂಬುದಾಗಿ ಬಣ್ಣಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು  ಕಾಮನ್ ಕಾಸ್ ಮತ್ತು ಸಾಮಾಜಿಕ ಕಾರ್ಯಕರ್ತೆ ಅಂಜಲಿ ಭಾರಧ್ವಾಜ್ ಅವರು ವಕೀಲ ಪ್ರಶಾಂತ ಭೂಷಣ್ ಅವರ ಮೂಲಕ ಸಲ್ಲಿಸಿದ್ದರು.

2019: ಅಮರಾವತಿ: ದಕ್ಷಿಣದ ನಾಲ್ಕು ರಾಜ್ಯಗಳ ನೀರಿನ ಸಮಸ್ಯೆಯನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರವು ಶೀಘ್ರದಲ್ಲೇ ಗೋದಾವರಿ ಮತ್ತು ಕಾವೇರಿ ನದಿಗಳ ಜೋಡಣೆ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತನ್ ಗಡ್ಕರಿ ಅವರು ಇಲ್ಲಿ ಪ್ರಕಟಿಸಿದರು ನದಿ ಜೋಡಣೆ ಯೋಜನೆಗೆ ೬೦,೦೦೦ ಕೋಟಿ ರೂಪಾಯಿಗಳ ವೆಚ್ಚವಾಗುವ ನಿರೀಕ್ಷೆಯಿದ್ದು, ಯೋಜನೆ ಮೂಲಕ ಪ್ರಸ್ತುತ ವ್ಯರ್ಥವಾಗಿ ಸಮುದ್ರಕ್ಕೆ ಹರಿದುಹೋಗುವ ೧೧೦೦ ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಗಡ್ಕರಿ ಅವರು ಇಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನುಡಿದರು. ಗೋದಾವರಿ-ಕೃಷ್ಣಾ-ಪೆನ್ನಾರ್-ಕಾವೇರಿ ನದಿಗಳ ಜೋಡಣೆಯ ವಿಸ್ತೃತ ಯೋಜನಾ ವರದಿ ಸಿದ್ಧವಾಗಿದೆ. ನಾವು ಅದನ್ನು ಶೀಘ್ರದಲ್ಲೇ ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟದ ಮುಂದೆ ಇಡಲಿದ್ದೇವೆ. ಕೇಂದ್ರ ಸಂಪುಟ ಅನುಮೋದನೆ ಬಳಿಕ ಯೋಜನೆಗಾಗಿ ವಿಶ್ವಬ್ಯಾಂಕ್ ಅಥವಾ ಏಷ್ಯ ಅಭಿವೃದ್ಧಿ ಬ್ಯಾಂಕಿನಿಂದ ಹಣಕಾಸು ನೆರವು ಪಡೆಯಲಾಗುವುದು. ಯೋಜನೆಗೆ ಅಂದಾಜು ೫೦,೦೦೦ ದಿಂದ ೬೦,೦೦೦ ಕೋಟಿ ರೂಪಾಯಿ ವೆಚ್ಚ ತಗಲುವುದು ಎಂದು ಅವರು ನುಡಿದರುಅಮೆರಿಕದಲ್ಲಿ ನೆಲೆಸಿರುವ ಆಂಧ್ರಪ್ರದೇಶದ ಎಂಜಿನಿಯರ್ ಒಬ್ಬರು ಉಕ್ಕಿನ ಪೈಪುಗಳನ್ನು ಬಳಸಿ ಗೋದಾವರಿ ಮತ್ತು ಕಾವೇರಿ ನದಿ ಜೋಡಣೆಯ ವಿಶೇಷ ತಂತ್ರಜ್ಞಾನವನ್ನು ಸಲಹೆ ಮಾಡಿದ್ದಾರೆ. ಯೋಜನೆ ಮೂಲಕ ಗೋದಾವರಿ ನೀರನ್ನು ತಮಿಳುನಾಡಿನವರೆಗೆ ಒಯ್ಯಲು ಸಾಧ್ಯವಾಗುತ್ತದೆ. ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ತೀವ್ರ ವಿವಾದ ನಡೆಯುತ್ತಿರುವಾಗ ವ್ಯರ್ಥವಾಗಿ ಸಮುದ್ರ ಸೇರುವ ೧೧೦೦ ಟಿಂಎಂಸಿ ನೀರನ್ನು ಸದುಪಯೋಗ ಮಾಡಿಕೊಳ್ಳಲು ಯೋಜನೆ ನೆರವಾಗಲಿದೆ ಎಂದು ಗಡ್ಕರಿ ವಿವರಿಸಿದರು.

2019: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣದ ಆರೋಪಿ ವಜ್ರಾಭರಣ ವ್ಯಾಪಾರಿ ಮೆಹುಲ್ ಚೊಕ್ಸಿ  ತಮ್ಮ ಭಾರತೀಯ ಪೌರತ್ವವನ್ನು  ತ್ಯಜಿಸಿ ತಮ್ಮ ಭಾರತೀಯ ಪಾಸ್ಪೋರ್ಟನ್ನು ಒಪ್ಪಿಸಿರುವುದಾಗಿ ಸುದ್ದಿಮೂಲಗಳು ದೃಢ ಪಡಿಸಿದವು. ದೇಶದಿಂದ ಪರಾರಿಯಾಗಿದ್ದ ಚೊಕ್ಸಿ ಮತ್ತು ಸೋದರಳಿಯ ನೀರವ್ ಮೋದಿ ಅವರ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಹಗರಣ ಬೆಳಕಿಗೆ ಬಂದ ಒಂದು ವರ್ಷದ ಬಳಿಕ ಚೊಕ್ಸಿ ಭಾರತೀಯ ಪೌರತ್ಯ ತ್ಯಜಿಸಿದ ವರ್ತಮಾನ ಬಂದಿತು. ದೇಶದಿಂದ ಪರಾರಿಯಾದ ಬಳಿಕ ಚೊಕ್ಸಿ ಕೆರಿಬಿಯನ್ ದ್ವೀಪವಾದ ಆಂಟಿಗುವಾದಲ್ಲಿ ಇರುವುದು ಬೆಳಕಿಗೆ ಬಂದಿತ್ತು. ಮೆಹುಲ್ ಚೊಕ್ಸಿ ತನ್ನ ಭಾರತೀಯ ಪಾಸ್ ಪೋರ್ಟನ್ನು ಗಯಾನಾದಲ್ಲಿನ ಭಾರತೀಯ ಹೈಕಮೀಷನ್ ಕಚೇರಿಗೆ ಒಪ್ಪಿಸಿದ್ದು, ಭಾರತೀಯ ನಾಗರಿಕರು ವಿದೇಶೀ ಪೌರತ್ವ ಅಂಗೀಕರಿಸಿದರೆ ಭಾರತೀಯ ಪಾಸ್ ಪೋರ್ಟ್ ಒಪ್ಪಿಸಬೇಕಾಗುತ್ತದೆ ಎಂಬ ನಿಯಮದ ಹಿನ್ನೆಲೆಯಲ್ಲಿ ಹೀಗೆ ಮಾಡಲಾಗಿದೆ ಎಂದು ಮೂಲಗಳು ಹೇಳಿದವು. ಭಾರತದಿಂದ ಪರಾರಿಯಾಗುವ ಮುನ್ನವೇ ಕಳೆದ ವರ್ಷ ಚೊಕ್ಸಿ ಆಂಟಿಗುವಾದ ಪೌರತ್ವ ಪಡೆದಿದ್ದುದಾಗಿ ಹೇಳಲಾಗಿತ್ತು.

2019: ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ  ದೇವರ ರಥೋತ್ಸವವು ಈದಿನ ರಾತ್ರಿ ವಿಜೃಂಭಣೆಯಿಂದ ಜರುಗಿತು. 
2018: ನವದೆಹಲಿ: ಚುನಾವಣಾ ಕಮೀಷನರ್ ಓಂ ಪ್ರಕಾಶ್ ರಾವತ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ನೇಮಕ ಮಾಡಲಾಯಿತು. ಅವರು ಜನವರಿ 22 ಸೋಮವಾರ ಹುದ್ದೆಯಿಂದ ಕೆಳಗಿಳಿಯಲಿರುವ ಅಚಲ್ ಕುಮಾರ ಜೋತಿ ಅವರ ಉತ್ತರಾಧಿಕಾರಿಯಾಗಿ ನೇಮಕಗೊಂಡರು. ೧೯೭೭ ಮಧ್ಯಪ್ರದೇಶ ತಂಡದ ಐಎಎಸ್ ಅಧಿಕಾರಿಯಾಗಿರುವ ರಾವತ್ ಅವರು ಜನವರಿ 23 ಮಂಗಳವಾರ ನೂತನ ಸಿಇಸಿ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ೨೦೧೫ರ ಆಗಸ್ಟ್ ತಿಂಗಳಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ೬೪ರ ಹರೆಯದ ರಾವತ್ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಮಟ್ಟದ ಸೇವೆಗಳನ್ನು ನಿಭಾಯಿಸಿದ್ದರು. ಚುನಾವಣಾ ಆಯುಕ್ತರಾಗಿ ನೇಮಕಗೊಳ್ಳುವ ಮುನ್ನ ರಾವತ್ ಅವರು ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ಅದಕ್ಕೆ ಮುನ್ನ ೧೯೯೩ರಲ್ಲಿ ಅವರು ರಕ್ಷಣಾ ಸಚಿವಾಲಯದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವಧಿಯಲ್ಲಿ ೧೯೯೪ರ ಮೇ ತಿಂಗಳಲ್ಲಿ ಅವರನ್ನು ದಕ್ಷಿಣ ಆಫ್ರಿಕಕ್ಕೆ ವಿಶ್ವಸಂಸ್ಥೆ ಚುನಾವಣಾ ವೀಕ್ಷಕರಾಗಿ ರಾಷ್ಟ್ರದಲ್ಲಿ ವರ್ಣಭೇದ ಆಡಳಿತ ಬಳಿಕ ನಡೆದ ಮೊದಲ ಚುನಾವಣೆ ಸಂದರ್ಭದಲ್ಲಿ ನಿಯೋಜಿಸಲಾಗಿತ್ತು. ೨೦೦೪ ಮತ್ತು ೨೦೦೬ರ ನಡುವಣ ಅವಧಿಯಲ್ಲಿ ಅವರು ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ಬಾಬುಲಾಲ್ ಗೌರ್ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಸೇವೆ ಸಲ್ಲಿಸಿದ್ದರು. ’ಅರಣ್ಯ ಹಕ್ಕುಗಳ ಗುರುತಿಸುವಿಕೆಗಾಗಿಅವರು ಕೈಗೊಂಡ ಉಪಕ್ರಮಕ್ಕಾಗಿ ೨೦೧೦ರಲ್ಲಿ ಅವರಿಗೆ ಸಾರ್ವಜನಿಕ ಆಡಳಿತದ ಸಾಧನೆಗೆ ನೀಡಲಾಗುವ ಪ್ರಧಾನ ಮಂತ್ರಿಯವರ ಪ್ರಶಸ್ತಿ ಲಭಿಸಿತ್ತು. ಅಶೋಕ ಲವಾಸಾ ಕಮೀಷನರ್: ಮಾಜಿ ಹಣಕಾಸು ಕಾರ್ಯದರ್ಶಿ ಅಶೋಕ ಲವಾಸಾ ಅವರನ್ನು ಚುನಾವಣಾ ಆಯೋಗದ ನೂತನ ಕಮೀಷನರ್ ಆಗಿ ನೇಮಕ ಮಾಡಲಾಯಿತು. ಇದರೊಂದಿಗೆ ತ್ರಿಸದಸ್ಯ ಚುನಾವಣಾ ಆಯೋಗದಲ್ಲಿ ಖಾಲಿ ಬಿದ್ದಿದ್ದ ಹುದ್ದೆ ಭರ್ತಿಯಾದಂತಾಯಿತು. ಚುನಾವಣಾ ಕಮೀಷನರ್ ಮತ್ತು ಇಸಿಸಿ ಅವರು ವರ್ಷ ಕಾಲ ಅಥವಾ ೬೫ ವರ್ಷ ಆಗುವವರೆಗೆ (ಯಾವುದು ಮೊದಲೋ ಅದು) ಅಧಿಕಾರಾವಧಿ ಹೊಂದಿರುತ್ತಾರೆ.


 2018: ಕಾಬೂಲ್: ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ಇಂಟರ್ಕಾಂಟಿನೆಂಟಲ್ ಹೋಟೆಲ್ನಲ್ಲಿ ನಡೆದ ಬಂದೂಕುದಾರಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ  ಭದ್ರತಾ ಪಡೆಗಳು ನಾಲ್ವರು ಬಂದೂಕುದಾರಿಗಳ ಹತ್ಯೆ ಮಾಡಿದ್ದು, ೧೫೩ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು. ಶಸ್ತ್ರಧಾರಿಗಳ ದಾಳಿಯಲ್ಲಿ ಒಬ್ಬ ವಿದೇಶೀ ಪ್ರಜೆ ಸೇರಿ ಕನಿಷ್ಠ ಮಂದಿ ಸಾವನ್ನಪ್ಪಿದರು. ಭದ್ರತಾ ಪಡೆಗಳು ಐಷಾರಾಮಿ ಹೋಟೆಲನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ವರದಿಗಳು ಹೇಳಿದವು. ಶಸ್ತ್ರಧಾರಿಗಳು 20 ಜನವರಿ 2018 ಶನಿವಾರ ಹೊಟೇಲ್ ಮೇಲೆ ದಾಳಿ ನಡೆಸಿದ್ದರು. ಹೋಟೆಲ್ ಅಡುಗೆ ಮನೆಯಿಂದ ಕಟ್ಟಡದ ಮುಖ್ಯಭಾಗ ತಲುಪಿದ್ದ ದಾಳಿಕೋರರು ಯದ್ವಾತದ್ವ ಗುಂಡಿನ ದಾಳಿ ಹಾಗೂ ಗ್ರೆನೇಡ್ ದಾಳಿ ನಡೆಸಿದ್ದರು. ಭದ್ರತಾ ಪಡೆಯು ದಾಳಿಕೋರರ ವಿರುದ್ಧ ಪ್ರತಿ ದಾಳಿ ನಡೆಸಿದ್ದು, ಹೋಟೆಲ್ ಸಿಬ್ಬಂದಿ ಹಾಗೂ ಅಲ್ಲಿ ತಂಗಿದ್ದವರು ಗಾಬರಿಗೊಂಡು ಹೊರ ಬರುವ ಪ್ರಯತ್ನ ನಡೆಸಿದರು. ಶಸ್ತ್ರಧಾರಿಗಳ ದಾಳಿಯಲಿ ಕನಿಷ್ಠ ನಾಗರಿಕರು ಸಾವನ್ನಪ್ಪಿದ್ದು, ೧೫೩ ಜನರನ್ನು ಅವರು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದರು. ಮೃತರ ಪೈಕಿ ಒಬ್ಬ ವ್ಯಕ್ತಿ ವಿದೇಶೀ ಪ್ರಜೆಯಾಗಿದ್ದು ಭದ್ರತಾ ಪಡೆಗಳಿಂದ ರಕ್ಷಿತರಾದವರಲ್ಲಿ ೪೧ ಮಂದಿ ವಿದೇಶೀಯರು ಎಂದು ವರದಿ ತಿಳಿಸಿದವು. ಆಫ್ಘಾನಿಸ್ಥಾನದ ಸೇನೆ ಕಾರ್ಯಾಚರಣೆ ನಡೆಸಿ ನಾಲ್ವರು ಬಂದೂಕುದಾರಿಗಳನ್ನು ಕೊಲೆಗೈದು ೧೫೩ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಒಳಾಡಳಿತ ಸಚಿವಾಲಯ ಹೇಳಿತು.  ಹೋಟೆಲ್ನಲ್ಲಿ ತಂಗಿರುವ ಅನೇಕರು ಜೀವ ಉಳಿಸಿಕೊಳ್ಳಲು ಕೊಠಡಿಗಳಲ್ಲಿ ಅವಿತು ಕೊಂಡಿದ್ದರು ಎಂದು ಆಫ್ಘಾನ್ ಸರ್ಕಾರ ತಿಳಿಸಿರುವುದಾಗಿ ವರದಿಗಳು ಹೇಳಿದವು. ಉಗ್ರರ ತಂಡ ಕಾಬೂಲಿನ ಹೋಟೆಲ್ಗಳ ಮೇಲೆ ದಾಳಿ ನಡೆಸುವ ಸಂಭವ ಇರುವುದಾಗಿ ಅಲ್ಲಿನ ಅಮೆರಿಕ ರಾಯಭಾರ ಕಚೇರಿ ಅಮೆರಿಕ ಪ್ರಜೆಗಳಿಗೆ ಕಳೆದ ಜನವರಿ 18 ಗುರುವಾರವಷ್ಟೇ ಎಚ್ಚರಿಕೆ ಸಂದೇಶ ರವಾನಿಸಿತ್ತು. ದಾಳಿಕೋರರ ಸಂಖ್ಯೆ ಎಂದು ಒಳಾಡಳಿತ ಸಚಿವಾಲಯ ಮೊದಲಿಗೆ ತಿಳಿಸಿತ್ತು. ಆದರೆ ಬಳಿಕ ದಾಳಿಕೋರರ ಸಂಖ್ಯೆ ಮಾತ್ರ ಎಂದು ಸ್ಪಷ್ಟ ಪಡಿಸಿತು. ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ೨೦೧೧ರ ಜೂನ್ನಲ್ಲಿ ಇಂಟರ್ಕಾಂಟಿನೆಂಟಲ್ ಮೇಲೆ ತಾಲಿಬಾನ್ ನಡೆಸಿದ ಆತ್ಮಾಹುತಿ ದಾಳಿಗೆ ೨೧ ಮಂದಿ ಬಲಿಯಾಗಿದ್ದರು.

2018: ನವದೆಹಲಿ: ಮಹಿಳೆಯನ್ನು ಆಕೆಯ ಒಪ್ಪಿಗೆ ಇಲ್ಲದೆ ಯಾರೂ ಮುಟ್ಟುವಂತಿಲ್ಲ ಎಂದು ಹೇಳಿರುವ ದೆಹಲಿಯ ನ್ಯಾಯಾಲಯ,  ಒಂದು, ವಿಷಯ ಲಂಪಟ ಮತ್ತು ವಿಕೃತ ಕಾಮಿಗಳು ಮಹಿಳೆಯರನ್ನು ಬಲಿಪಶುಗಳನ್ನಾಗಿ ಮಾಡುವ ಕೃತ್ಯ ಮುಂದುವರೆಸಿರುವುದು ದುರದೃಷ್ಟಕರ ಎಂದು ಹೇಳಿತು. ವರ್ಷದ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಕ್ಕಾಗಿ ಆರೋಪಿ ಛವಿರಾಮ್ ಗೆ ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸುವ ವೇಳೆಯಲ್ಲಿ ನ್ಯಾಯಾಲಯ ವಿಶ್ಲೇಷಣೆ ಮಾಡಿತು. ೨೦೧೪ರಲ್ಲಿ ಉತ್ತರ ದೆಹಲಿಯ ಮುಖರ್ಜಿ ನಗರದ ಜನಸಂದಣಿಯ ಮಾರುಕಟ್ಟೆಯಲ್ಲಿ ಅಸಹಜ ರೀತಿಯಲ್ಲಿ ಅಪ್ರಾಪ್ತ ಬಾಲಕಿಯನ್ನು ಸ್ಪರ್ಶಿಸಿದ್ದ ಉತ್ತರ ಪ್ರದೇಶದ ನಿವಾಸಿ ಛವಿ ರಾಮ್ಗೆ ಅಡಿಷನಲ್ ನ್ಯಾಯಾಧೀಶರಾದ ಸೀಮಾ ಮೈನಿ ಕಠಿಣ ಸಜೆ ವಿಧಿಸಿದರು. ಮಹಿಳೆಯ ದೇಹ ಆಕೆಯ ಸ್ವಂತದ್ದು. ಆಕೆಗೆ ಮಾತ್ರವೇ ಅದರ ಮೇಲೆ ವಿಶೇಷ ಹಕ್ಕಿದೆ. ಯಾವುದೇ ಉದ್ದೇಶಕ್ಕಾದರೂ ಆಕೆಯ ಒಪ್ಪಿಗೆ ಇಲ್ಲದೆ ಸ್ಪರ್ಶಿಸದಂತೆ ಇತರ ಎಲ್ಲರ ಮೇಲೂ ನಿಷೇಧ ಇದೆ ಎಂದು ಕೋರ್ಟ್ ಹೇಳಿತು. ಮಹಿಳೆಯ ಖಾಸಗಿತನದ ಹಕ್ಕನ್ನು ಪುರುಷರು ಮಾನ್ಯ ಮಾಡಿದಂತೆ ಕಾಣುವುದಿಲ್ಲ. ಅಸಹಾಯಕ ಹುಡುಗಿಯರ ಮೇಲೆ ಲೈಂಗಿಕ ತೃಷೆ ಈಡೇರಿಸಿಕೊಳ್ಳಲು ಮುಂದುವರೆಯುವ ಪುರುಷರು ತಮ್ಮ ಕೃತ್ಯಕ್ಕೆ ಇಳಿಯುವ ಮುನ್ನ ಎರಡು ಬಾರಿ ಯೋಚಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಇಂತಹ ವಿಕೃತ ಕಾಮಿಗಳು, ಬಾಲಕಿಯೂ ಸೇರಿದಂತೆ ಮಹಿಳೆಯರಿಗೆ ಇರುವ ಖಾಸಗಿತನದ ಹಕ್ಕನ್ನು ಮರೆತು ಅವರ ಮೇಲೆ ಎರಗಿ ತಮ್ಮ ಲೈಂಗಿಕ ತೃಷೆ ಈಡೇರಿಸಿಕೊಳ್ಳುತ್ತಾರೆ ಎಂದು ಕೋರ್ಟ್ ಹೇಳಿತು. ಲೈಂಗಿಕ ವಿಕೃತ ಕಾಮಿಯಾದ ಛವಿ ರಾಮ್ ಯಾವುದೇ ದಯೆಗೂ ಅರ್ಹನಲ್ಲ ಎಂದು ಹೇಳಿದ ನ್ಯಾಯಾಲಯ ಸೆರೆವಾಸದ ಜೊತೆಗೆ ೧೦,೦೦೦ ರೂಪಾಯಿಗಳ ದಂಡವನ್ನೂ ಆತನಿಗೆ ವಿಧಿಸಿತ್ತು. ದಂಡದಲ್ಲಿ ೫೦೦೦ ರೂಪಾಯಿಗಳನ್ನು ಬಾಲಕಿಗೆ ನೀಡಬೇಕು ಎಂದೂ ಆಜ್ಞಾಪಿಸಿತು. ಇದರ ಹೊರತಾಗಿ ಮಗುವಿಗೆ ೫೦,೦೦೦ ರೂಪಾಯಿ ಪಾವತಿ ಮಾಡುವಂತೆ ದೆಹಲಿ ಕಾನೂನು ಸೇವಾ ಪ್ರಾಧಿಕಾರಕ್ಕೂ ಕೋರ್ಟ್ ನಿರ್ದೇಶಿಸಿತು. ‘ಮುಕ್ತವಾದ, ತ್ವರಿತವಾಗಿ ಪ್ರಗತಿ ಹೊಂದುತ್ತಿರುವ, ತಾಂತ್ರಿಕವಾಗಿ ಪ್ರಬಲವಾಗಿರುವ ಭಾರತದಂತಹ ರಾಷ್ಟ್ರದಲ್ಲಿ ವಯಸ್ಕ ಅಥವಾ ಅಪ್ರಾಪ್ತ ವಯಸ್ಕ ಮಹಿಳಾ ನಾಗರಿಕರು ನಿರಂತರವಾಗಿ ವಿಷಯ ಲಂಪಟ, ವಿಕೃತ ಕಾಮಿಗಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಜನನಿಬಿಡ ಮಾರುಕಟ್ಟೆ, ಬಸ್ಸು, ಮೆಟ್ರೋದಂತಹ ಸಾರ್ವಜನಿಕ ಸಾರಿಗೆ ವಾಹನಗಳು, ಚಿತ್ರ ಮಂದಿರ, ಥಿಯೋಟರ್ ಗಳಂತಹ ಮನರಂಜನಾ ತಾಣಗಳಲ್ಲಿ ಬಲಿಯಾಗುತ್ತಿರುವುದು ದುರದೃಷ್ಟಕರಎಂದು ನ್ಯಾಯಾಲಯ ಹೇಳಿತು. ಪ್ರಕರಣಕ್ಕೆ ಸಂಬಂಧಿಸಿದ ದೂರಿನ ಪ್ರಕಾರ, ೨೦೧೪ರ ಸೆಪ್ಟೆಂಬರ್ ೨೫ರಂದು ಬಾಲಕಿಯು ಮುಖರ್ಜಿ ನಗರದ ಮಾರುಕಟ್ಟೆಯ ಬಳಿ ತನ್ನ ತಾಯಿಯ ಜೊತೆಗೆ ಇದ್ದಾಗ ಛವಿ ರಾಮ್ ಆಕೆಯನ್ನು ಅಸಹಜ ರೀತಿಯಲ್ಲಿ ಸ್ಪರ್ಶಿಸಿ ಮಾನಭಂಗಕ್ಕೆ ಯತ್ನಿಸಿದ್ದ. ಆಕೆ ತತ್ ಕ್ಷಣವೇ ತನ್ನ ತಾಯಿಯ ಗಮನ ಸೆಳೆದು ಛವಿರಾಮನನ್ನು ತೋರಿಸಿ ಆತ ನಡೆಸಿದ ಕೃತ್ಯವನ್ನು ಹೇಳಿದಳು. ಇದನ್ನು ಕಂಡು ಛವಿರಾಮ್ ಓಡಲು ತೊಡಗಿದ. ಆದರೆ ಬಾಲಕಿಯ ತಾಯಿ ಅಸುಪಾಸಿನವರ ನೆರವಿನೊಂದಿಗೆ ಆತನನ್ನು ಹಿಡಿದಳು. ಜನ ಸಂದಣಿಯ ಮಾರುಕಟ್ಟೆಯಲ್ಲಿ ತನ್ನನ್ನು ತಪ್ಪಾಗಿ ಹಿಡಿಯಲಾಗಿದೆ. ತಪ್ಪಿತಸ್ಥನಾಗಿದ್ದರೆ ಅಪರಾಧ ಎಸಗಿದ ಬಳಿಕ ಓಡುತ್ತಿರಲಿಲ್ಲವೇ? ಎಂದು ಆರೋಪಿ ಪ್ರತಿಪಾದಿಸಿದ. ಏನಿದ್ದರೂ ನ್ಯಾಯಾಲಯ ಆತನ ಪ್ರತಿಪಾದನೆಯನ್ನು ತಿರಸ್ಕರಿಸಿತು. ಆತ ಜನಸಂದಣಿಯ ಲಾಭ ಪಡೆದು ಉದ್ದೇಶಪೂರ್ವಕವಾಗಿಯೇ ಕಾಮತೃಷೆಯಿಂದ ಆಕೆಯನ್ನು ಅಸಹಜ ರೀತಿಯಲ್ಲಿ ಮುಟ್ಟಿದ ಮತ್ತು ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ನ್ಯಾಯಾಲಯ ಹೇಳಿತು.
 2018: ನವದೆಹಲಿ: ಲಾಭದಾಯಕ ಹುದ್ದೆಗಳನ್ನು ಹೊಂದಿರುವುದಕ್ಕಾಗಿ ಅನರ್ಹಗೊಳಿಸುವಂತೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಆಪ್) ೨೦ ಮಂದಿ ಶಾಸಕರನ್ನು ಚುನಾವಣಾ ಆಯೋಗ ಮಾಡಿದ ಶಿಫಾರಸನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅಂಗೀಕರಿಸಿದರು. ಚುನಾವಣಾ ಅಯೋಗದ ಅಭಿಪ್ರಾಯಕ್ಕೆ ಅನುಗುಣವಾಗಿ ದೆಹಲಿ ವಿಧಾನಸಭೆಯ ೨೦ ಸದಸ್ಯರನ್ನು ಅನರ್ಹಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಹೇಳಿದ್ದನ್ನು ಕಾನೂನು ಸಚಿವಾಲಯದ ಪ್ರಕಟಣೆ ಉಲ್ಲೇಖಿಸಿತು. ಆಪ್ ಶಾಸಕರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿತ್ತು. ನೇಮಕಾತಿ ಮೂಲಕ ಅವರು ಲಾಭದಾಯಕ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಅರ್ಜಿದಾರರು ಆಪಾದಿಸಿದ್ದರು. ದೂರನ್ನು ಅನುಸರಿಸಿ ಆಮ್ ಆದ್ಮಿ ಪಕ್ಷಕ್ಕೆ ಜನವರಿ 19 ಶುಕ್ರವಾರ ಮರ್ಮಾಘಾತ ನೀಡಿದ ಚುನಾವಣಾ ಆಯೋಗ ೨೦ ಶಾಸಕರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಿತ್ತು. ‘ವಿಷಯವನ್ನು ಚುನಾವಣಾ ಆಯೋಗ ನೀಡಿದ ಅಭಿಪ್ರಾಯದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿದ್ದು, ನಾನು, ರಾಮನಾಥ ಕೋವಿಂದ, ಭಾರತದ ರಾಷ್ಟ್ರಪತಿ ನನ್ನ ಅಧಿಕಾರ ಚಲಾಯಿಸಿ ದೆಹಲಿ ವಿಧಾನಸಭೆಯ ಸೂಚಿತ ೨೦ ಸದಸ್ಯರನ್ನು ವಿಧಾನಸಭೆಯ ಶಾಸಕರಾಗಿ ಮುಂದುವರೆಯದಂತೆ ಅನರ್ಹಗೊಳಿಸಿದ್ದೇನೆಎಂಬುದಾಗಿ ರಾಷ್ಟ್ರಪತಿ ತಿಳಿಸಿದ್ದಾರೆ ಎಂದು ಪ್ರಕಟಣೆ ಹೇಳಿತು. ಎಲ್ಲ ೨೦ ಮಂದಿ ಆಪ್ ಶಾಸಕರು ತಮ್ನನ್ನು ಅನರ್ಹಗೊಳಿಸಲು ಚುನಾವಣಾ ಆಯೋಗ ಶಿಫಾರಸು ಮಾಡಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟಿನ ಕದ ತಟ್ಟಿದ್ದರು. ಆದರೆ ನ್ಯಾಯಮೂರ್ತಿ ರೇಖಾ ಪಳ್ಳಿ  ಅವರು ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ್ದರು.
2018: ನವದೆಹಲಿ: ೨೦೧೯ರ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ಮೈತ್ರಿಕೂಟ ರಚಿಸಿಕೊಳ್ಳದೇ ಇರಲು ಸಿಪಿಐ (ಎಂ) ತೀರ್ಮಾನಿಸಿದೆ. ಕೋಲ್ಕತದಲ್ಲಿ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಕುರಿತು ನಿರ್ಣಯ ಅಂಗೀಕರಿಸಲಾಗಿದೆ. ಸಿಪಿಐ(ಎಂ) ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಟ್ ಅವರು ಕಾಂಗ್ರೆಸ್ ಜೊತೆ ಯಾವುದೇ ರೀತಿಯ ಹೊಂದಾಣಿಕೆಗೆ ವಿರೋಧವಾಗಿದ್ದರು. ಕೋಲ್ಕತದಲ್ಲಿ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಅವರ ಅಭಿಪ್ರಾಯಕ್ಕೆ ಗೆಲುವು ಸಿಕ್ಕಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನೇತೃತ್ವದ ಇನ್ನೊಂದು ಬಣವು ಬಿಜೆಪಿಯನ್ನು ಮಣಿಸುವ ತಂತ್ರವಾಗಿ ಕಾಂಗ್ರೆಸ್ಸಿನತ್ತ ಮೃದುಧೋರಣೆ ತಳೆಯಲು ಸಲಹೆ ಮಾಡಿತ್ತು. ಉಭಯ ಬಣಗಳಲ್ಲಿ ವ್ಯಕ್ತವಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಎರಡು ಪ್ರತ್ಯೇಕ ರಾಜಕೀಯ ನಿರ್ಣಯಗಳ ಕರಡನ್ನು ಕೇಂದ್ರೀಯ ಸಮಿತಿಯ ಮುಂದಿಡಲಾಯಿತು. ಪ್ರಕಾಶ ಕಾರಟ್ ಬಣ ಮುಂದಿಟ್ಟ ನಿರ್ಣಯ ೫೫-೩೧ ಮತಗಳ ಅಂತರದಲ್ಲಿ ಅಂಗೀಕಾರಗೊಂಡಿತು. ಪಕ್ಷದ ರಾಜಕೀಯ ತಂತ್ರಗಾರಿಕೆಯ ನಿರ್ಣಯ ಇದಾಗಿದ್ದು ಏಪ್ರಿಲ್ ತಿಂಗಳಲ್ಲಿ ಹೈದರಾಬಾದಿನಲ್ಲಿ ನಡೆಯಲಿರುವ ಸಿಪಿಎಂ ಪಕ್ಷದ ಸಮಾವೇಶದಲ್ಲಿ ಔಪಚಾರಿಕ ಅನುಮೋದನೆಗಾಗಿ ಅದನ್ನು ಇರಿಸಲಾಗುತ್ತದೆ. ಮೂರು ದಿನಗಳ ಕೇಂದ್ರೀಯ ಸಮಿತಿ ಸಭೆಯು ಪಕ್ಷದ ಇಬ್ಬರು ನಾಯಕರಾದ ಕಾರಟ್ ಮತ್ತು ಯೆಚೂರಿ ಅವರ ನಡುವಣ ಭಿನ್ನಮತವನ್ನು ಬಹಿರಂಗ ಪಡಿಸಿತು. ೨೦೧೪ರಲ್ಲಿ ಸಿಪಿಐ(ಎಂ) ತನ್ನ ಉನ್ನತಾಧಿಕಾರ ಪಾಲಿಟ್ ಬ್ಯೂರೋ ಮತ್ತು ಕೇಂದ್ರೀಯ ಸಮಿತಿಗಳ ಹಲವಾರು ಸಭೆಗಳನ್ನು ನಡೆಸಿ ವಿವಾದವನ್ನು ಇತ್ಯರ್ಥ ಪಡಿಸಿಕೊಳ್ಳಲು ಯತ್ನಿಸಿತ್ತು. ಆದರೆ ಪಕ್ಷದ ಆದರ್ಶವಾದಿಗಳು ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳು ಮುಂದಿಟ್ಟ ನವ ಉದಾರ ಆರ್ಥಿಕ ನೀತಿಗಳನ್ನು ವಿರೋಧಿಸುವ ಪಕ್ಷದ ಯತ್ನಕ್ಕೆ ತಣ್ಣಿರು ಎರಚಿದ್ದರು. ಯೆಚೂರಿ ಅವರ ಕರಡು ನಿರ್ಣಯವು ಎಡ ಪ್ರಜಾತಾಂತ್ರಿಕ ರಂಗವನ್ನು ರಚಿಸಿ ಎಲ್ಲ ಜಾತ್ಯತೀತ ಶಕ್ತಿಗಳನ್ನು ಒಂದೇ ಛತ್ರಿಯ ಅಡಿಯಲ್ಲಿ ತರಲು ಅದನ್ನು ರಾಜಕೀಯ ಪರ್ಯಾಯವನ್ನಾಗಿ ಮಾಡಲು ಕರೆ ನೀಡಿತ್ತು. ಭಿನ್ನಮತೀಯರನ್ನು ಒಲಿಸಿಕೊಳ್ಳುವ ಸಲುವಾಗಿ ಆಳುವ ವರ್ಗದ ಪಕ್ಷಗಳನ್ನು ಮೈತ್ರಿಕೂಟದಿಂದ ಚುನಾವಣೆ ಕಾಲದಲ್ಲಿ ಹೊರಗಿಸಲು ಯೆಚೂರಿ ಒಪ್ಪಿದ್ದರು. ಆದರೂ ಕಾಂಗ್ರೆಸ್ ನೀತಿಯ ಜೊತೆಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದು ಕಾರಟ್ ಬಣ ಪಟ್ಟು ಹಿಡಿಯಿತು. ಈ ಹಿಂದೆ ೧೯೬೪ರಲ್ಲಿ ಕಮ್ಯೂನಿಸ್ಟ್ ಪಕ್ಷ ಇದೇ ರೀತಿ ಎರಡು ಪ್ರತ್ಯೇಕ ನಿರ್ಣಯದ ಕರಡುಗಳನ್ನು ಎದುರಿಸಬೇಕಾಗಿ ಬಂದಿತ್ತು. ಪರಿಣಾಮವಾಗಿ ಅವಿಭಜಿತ ಕಮೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಒಡೆದು  ಸಿಪಿಎಂ ಮತ್ತು ಸಿಪಿಐ ಪಕ್ಷಗಳು ಜನ್ಮ ತಳೆದಿದ್ದವು.
 2018: ನವದೆಹಲಿ: ಸೂಕ್ಷ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯ ನಿಯೋಜನೆಯಲ್ಲಿ ಪಾರದರ್ಶಕತೆ ತರುವ ಸಲುವಾಗಿ ಎಲ್ಲ ಕಡೆಗಳಿಂದ ಬಂದಿರುವ ಸಲಹೆಗಳನ್ನು ಭಾರತದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಪರಿಶೀಲಿಸುತ್ತಿದ್ದು, ಸಾರ್ವಜನಿಕ ಬಹಿರಂಗ ವ್ಯವಸ್ಥೆಯನ್ನು ಅಂಗೀಕರಿಸುವ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಅವರ ನಿಕಟವರ್ತಿ ಮೂಲಗಳು ತಿಳಿಸಿದವು. ವಿಶೇಷ ನ್ಯಾಯಮೂರ್ತಿ ಬಿ.ಎಚ್. ಲೋಯ ಸಾವಿನ ಬಗ್ಗೆ ಸ್ವತಂತ್ರ ತನಿಖೆಗೆ ಆಗ್ರಹಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆಐ ನೇತೃತ್ವದ ಪೀಠದ ಮುಂದೆ ನಿಯೋಜಿಸಿರುವುದು, ನಾಲ್ವರು ಹಿರಿಯ ನ್ಯಾಯಮೂರ್ತಿಗಳು ತಮ್ಮ ಜನವರಿ ೧೨ರ ವಿವಾದಾಸ್ಪದ ಪತ್ರಿಕಾಗೋಷ್ಠಿಯಲ್ಲಿ ಎತ್ತಿದ ವಿಚಾರಗಳೆಲ್ಲವನ್ನೂ ಪರಿಣಿಸಲಾಗುತ್ತಿದೆ ಎಂಬುದರ ಸೂಚನೆಯಾಗಿದೆ ಎಂದು ಮೂಲಗಳು ಹೇಳಿವೆ. ನ್ಯಾಯಮೂರ್ತಿ ಲೋಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಜನವರಿ 22 ಸೋಮವಾರ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ನಾಲ್ವರು ಸಹೋದ್ಯೋಗಿ ಹಿರಿಯ ನ್ಯಾಯಮೂರ್ತಿಗಳ ಜೊತೆಗೆ ಕುಳಿತು ಚರ್ಚಿಸಿರುವುದಲ್ಲದೆ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ (ಎಸ್ ಬಿಸಿಎ) ಮುಂದಿಟ್ಟ ಸಲಹೆಗಳನ್ನು ಪರಿಶೀಲಿಸುತ್ತಿದ್ದಾರೆ. ಎಲ್ಲ ಪ್ರಕರಣಗಳ ನಿಯೋಜನೆಗೆ ಸಂಬಂಧಿಸಿದಂತೆ ಸುಸ್ಪಷ್ಟವಾದ ರೋಸ್ಟರ್ ವ್ಯವಸ್ಥೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದವು. ಸುಪ್ರೀಂಕೋರ್ಟ್ ರಿಜಿಸ್ಟ್ರಿಯು ವಿಷಯಗಳ ನಿಯೋಜನೆಗೆ ಸಂಬಂಧಿಸಿದಂತೆ ಸಿಜೆಐ ಅವರ ನಿರ್ಧಾರವನ್ನು ತನ್ನ ವೆಬ್ ಸೈಟಿಗೆ ಅಪ್ ಲೋಡ್ ಮಾಡುವ ಸಾಧ್ಯತೆಗಳಿವೆ. ಯಾರು ಯಾವ ವರ್ಗದ ಪ್ರಕರಣಗಳನ್ನು ಆಲಿಸಲಿದ್ದಾರೆ ಎಂಬ ವಿವರವನ್ನು ವೆಬ್ ಸೈಟಿನಲ್ಲಿ ಬಹಿರಂಗ ಪಡಿಸುವ ವ್ಯವಸ್ಥೆಯನ್ನು ತರಲಾಗುವುದು ಎಂದು ಉನ್ನತ ಮೂಲವೊಂದು ತಿಳಿಸಿತು. ಪ್ರಸ್ತುತ ದೆಹಲಿ ಹೈಕೋರ್ಟಿನಲ್ಲಿ ಅನುಸರಿಸಲಾಗುತ್ತಿರುವ ಪ್ರಕರಣಗಳ ನಿಯೋಜನೆ ರೋಸ್ಟರ್ ವ್ಯವಸ್ಥೆಯನ್ನು ಅನುಸರಿಸುವಂತೆ ಸುಪ್ರೀಂಕೋರ್ಟ್ ಬಾರ್ ಒತ್ತಾಯಿಸಿದೆ ಎಂದು ಎಸ್ ಬಿ ಸಿಎ ಅಧ್ಯಕ್ಷ ವಿಕಾಸ್ ಸಿಂಗ್ ಹೇಳಿದರು.  ಸಿಜೆಐ ಅವರು ನಮ್ಮ ಸಲಹೆಗಳನ್ನು ಅಂಗೀಕರಿಸುವರೆಂಬ ಆಶಯ ನಮ್ಮದು. ಜೊತೆಗೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳ ಪತ್ರಿಕಾಗೋಷ್ಠಿ ಬಳಿಕ ಭುಗಿಲೆದ್ದ ಎಲ್ಲ ತಪ್ಪು ಕಲ್ಪನೆಗಳೂ ಇತ್ಯಥಗೊಳ್ಳಲಿವೆ ಎಂದು ಹಾರೈಸುತ್ತೇವೆಎಂದು ಸಿಂಗ್ ನುಡಿದರು. ಪ್ರಕರಣಗಳ ನಿಯೋಜನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಹೊಂದಿರುವಂತಹುದೇ ವ್ಯವಸ್ಥೆಯನ್ನು ಬಾಂಬೆ ಹೈಕೋರ್ಟಿನಲ್ಲೂ ಅನುಸರಿಸಲಾಗುತ್ತಿದೆ ಎಂದು ಅವರು ಹೇಳಿದರು. ಜನವರಿ ೧೨ರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜಸ್ಟಿ ಚೆಲಮೇಶ್ವರ್, ರಂಜನ್ ಗೊಗೋಯಿ, ಎಂ.ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ಮಹತ್ವದ ಮತ್ತು ಸೂಕ್ಷ ಸ್ವರೂಪದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳೂ ಸೇರಿದಂತೆ ವಿವಿಧ ಮಹತ್ವದ ಪ್ರಕರಣಗಳ ನಿಯೋಜನೆ ಸೇರಿದಂತೆ ವಿವಿಧ ವಿಷಯಗಳನ್ನು  ಪ್ರಸ್ತಾಪಿಸಿ, ಆಯ್ದ ಪೀಠಕ್ಕೆ ಸಿಜೆಐ ಅವರು ಪ್ರಕರಣಗಳನ್ನು ನಿಯೋಜನೆ ಮಾಡುತ್ತಿರುವ ವೈಖರಿಯನ್ನು ಪ್ರಶ್ನಿಸಿದ್ದರು.
ನ್ಯಾಯಮೂರ್ತಿ ಲೋಯ ಸಾವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅವುಗಳಲ್ಲಿ ಒಂದಾಗಿದ್ದು, ಅದನ್ನು ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಪೀಠಕ್ಕೆ ಅದನ್ನು ನಿಯೋಜಿಸಲಾಗಿತ್ತು. ಪತ್ರಿಕಾಗೋಷ್ಠಿಯ ಬಳಿಕ ಮಿಶ್ರ ನೇತೃತ್ವದ ಪೀಠ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿತ್ತು. ಜನವರಿ ೧೯ರಂದು ವೆಬ್ ಸೈಟಿನಲ್ಲಿ ಪ್ರಕಟಿಸಲಾದ ಜನವರಿ ೨೨ರ ಸುಪ್ರೀಂಕೋರ್ಟ್ ಕಾರ್ಯ ಕಲಾಪ ಪಟ್ಟಿಯಲ್ಲಿ ನ್ಯಾಯಮೂರ್ತಿ ಲೋಯ ಸಾವಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆಐ ನೇತೃತ್ವದ ಪೀಠಕ್ಕೆ ನಿಯೋಜಿಸಲಾಗಿತ್ತು. ಜನವರಿ ೧೨ರ ಪತ್ರಿಕಾಗೋಷ್ಠಿ ಬಳಿಕ ಸುಪ್ರೀಂಕೋರ್ಟಿನಲ್ಲಿ ಉದ್ಭವಿಸಿದ ಬಿಕ್ಕಟ್ಟು ಬಗೆಹರಿಸುವ ನಿಟ್ಟಿನಲ್ಲಿ ಭವಿಷ್ಯದಲ್ಲಿ ಸಿಜೆಐಗಳಾಗಲಿರುವ ನ್ಯಾಯಮೂರ್ತಿ ಎಸ್ ಬೊಬ್ಡೆ, ಎನ್ ವಿ ರಮಣ, ಯು ಯು ಲಲಿತ್ ಮತ್ತು ಡಿ ವೈ ಚಂದ್ರಚೂಡ್ ಸೇರಿದಂತೆ ಕೆಲವು ನ್ಯಾಯಮೂರ್ತಿಗಳ ಜೊತೆಗೆ ಸಿಜೆಐ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿದವು. ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅನುಸರಿಸಿದ ವಿಧಾನದ ಬಗ್ಗೆ ಸಿಜೆಐ ಅವರು ಸಮಾಲೋಚಿಸುತ್ತಿರುವ ನ್ಯಾಯಮೂರ್ತಿಗಳಿಗೂ ಸಮಾಧಾನ ಇಲ್ಲ ಎಂದು ಮೂಲಗಳು ಹೇಳಿದವು. ನ್ಯಾಯಮೂರ್ತಿ ಚೆಲಮೇಶ್ವರ್ ಅವರು ಚೆನ್ನೈ ಮತ್ತು ಬೆಂಗಳೂರಿಗೆ ಪ್ರವಾಸ ತೆರಳಿದ್ದ ಕಾರಣ ಜನವರಿ ೧೮ರ ಬಳಿಕ ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳ ಮಧ್ಯೆ ಯಾವುದೇ ಸಭೆ ನಡೆದಿಲ್ಲ. ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳು ಸೋಮವಾರ ನ್ಯಾಯಾಲಯ ಕಲಾಪಗಳು ಆರಂಭವಾಗುವ ಮುನ್ನ ಸಭೆ ಸೇರುವ ಸಾಧ್ಯತೆಗಳಿವೆ ಎಂದೂ ಮೂಲಗಳು ತಿಳಿಸಿದವು.

 2018: ನವದೆಹಲಿ: ನಿಮಗೆ ಬಾಯಾರಿಕೆಯಾಗಿ ಬಾಟಲಿ ನೀರು ಕುಡಿಯಬೇಕು ಎಂದೆನಿಸುವಾಗ ನೀರು ಮಾರುವ ಹಲವಾರು ಜನಪ್ರಿಯ ಬ್ರಾಂಡ್ಗಳು ನೆನಪಾಗಬಹುದು. ಈಗ ಬ್ರಾಂಡ್ಗಳ ಸಾಲಿನಲ್ಲಿಸೇನಾ ಜಲ್ಎಂಬ ಹೊಸ ಬ್ರಾಂಡಿನ ಬಾಟಲಿ ನೀರು ಸೇರಿದೆ. ಹೌದು, ಇದು ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘವು (ಎಡಬ್ಲ್ಯೂಡಬ್ಲ್ಯೂಎ) ಮಾರುಕಟ್ಟೆಗೆ ಪರಿಚಯಿಸಿರುವ ಬಾಟಲಿ ನೀರಿನ ಹೊಸ ಬ್ರಾಂಡ್. ಇದರ ಬೆಲೆ ಕೇವಲ ರೂ. . ಮತ್ತು ರೂ. ೧೦. ಸಂಘವು ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕುಡಿಯುವ ನೀರಿನ ಬಾಟಲಿಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಅವು ಹೆಚ್ಚು ಜನರಿಗೆ ತಲುಪಿರಲಿಲ್ಲ. ತನ್ನ ಸೇವೆಯಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಿಕೊಂಡು ಅದೀಗ ಮತ್ತೊಮ್ಮೆ ಮಾರುಕಟ್ಟೆಗೆ ಬಂದಿತು. ಭಾರತೀಯ ಸೇನೆಯಲ್ಲಿ ಇರುವವರ ಕುಟುಂಬದ ಸದಸ್ಯರೇ ಸೇನಾ ಜಲ್ ಸಂಸ್ಕರಿಸಿ, ಬಾಟಲಿಗಳಲ್ಲಿ ತುಂಬುತ್ತಾರೆ.  ನೀರಿನ ಬಾಟಲಿಗಳ ಮಾರಾಟದಿಂದ ಬರುವ ಲಾಭಾಂಶವನ್ನು ಸೇವೆಯಲ್ಲಿರುವಾಗ ಹುತಾತ್ಮರಾದ ಸೈನಿಕರ ಪತ್ನಿಯರು ಮತ್ತು ಸೇವಾನಿರತ ಸೈನಿಕರ ಕ್ಷೇಮಾಭಿವೃದ್ಧಿಗೆ ಬಳಸುವುದಾಗಿ ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘ ತಿಳಿಸಿತು. ಸೈನಿಕರ ಪತ್ನಿಯರ ಕ್ಷೇಮಾಭಿವೃದ್ಧಿ ಸಂಘವು ಭಾರತೀಯ ಸೇನೆಯ ಅಂಗಸಂಸ್ಥೆಯಾಗಿದ್ದು, ಇದನ್ನು ಭೂಸೇನೆಯ ಮುಖ್ಯಸ್ಥರಾಗಿರುವ ಜನರಲ್ ಬಿಪಿನ್ ರಾವತ್ ಅವರ ಪತ್ನಿ ಮಧುಲಿಕಾ ರಾವತ್ ಮುನ್ನಡೆಸುತ್ತಿದ್ದಾರೆ. ಸಂಘವು ಸೈನಿಕರನ್ನು ಅವಲಂಬಿಸಿರುವ ಕುಟುಂಬ ಸದಸ್ಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ನೀರಡಿಕೆಯಾದಾಗಸೇನಾ ಜಲ್ಕುಡಿಯುವ ಮೂಲಕವೂ ನೀವೀಗ ದೇಶಕ್ಕಾಗಿ ಪ್ರಾಣ ಅರ್ಪಿಸುವ ಸೈನಿಕರ ಕುಟುಂಬಗಳಿಗೆ ನೆರವಾಗಬಹುದು.


2017: ರಾಜ್ಕೋಟ್: ಗುಜರಾತಿನ ರಾಜಕೋಟ್ ಜಿಲ್ಲೆಯ ಕಾಗವಾಡ ಎಂಬಲ್ಲಿ 3.5 ಲಕ್ಷಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ರಾಷ್ಟ್ರಗೀತೆ ಹಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದರು. ಇಲ್ಲಿನ ಖೊಡಾಲ್ ಧಾಮ್ ದೇವಸ್ಥಾನದಲ್ಲಿ ಖೋಡಿಯಾರ್ ದೇವರ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ  3.5 ಲಕ್ಷಕ್ಕಿಂತ ಹೆಚ್ಚು ಮಂದಿ ರಾಷ್ಟ್ರಗೀತೆಯನ್ನು ಹಾಡಿ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು ಎಂದು ಖೊಡಾಲ್ ಧಾಮ್ ದೇವಾಲಯ ಟ್ರಸ್ಟ್ ಸದಸ್ಯ ಹಂಸರಾಜ್ ಗಜೇರಾ ಹೇಳಿದರು. 2014ರಲ್ಲಿ ಬಾಂಗ್ಲಾದೇಶದಲ್ಲಿ  2,54,537 ಮಂದಿ ಏಕಕಂಠದಿಂದ ರಾಷ್ಟ್ರಗೀತೆ ಹಾಡಿ ದಾಖಲೆ ಬರೆದಿದ್ದರು. ದಾಖಲೆಯನ್ನು ನಾವು ಮುರಿದಿದ್ದೇವೆ ಎಂದು ಗಜೇರಾ ಹೇಳಿದರು. ಗಿನ್ನೆಸ್ ವಿಶ್ವ ದಾಖಲೆಯ ಅಧಿಕಾರಿಗಳ ಮುಂದೆ ಈ ಕಾರ್ಯಕ್ರಮ ನಡೆದಿದ್ದು ಅವರಿಂದ ನಮಗೆ ಪ್ರಮಾಣಪತ್ರ ಲಭಿಸಿದೆ ಎಂದು ಗಜೇರಾ ಹೇಳಿದರು.  ಈ ಹಿಂದೆ 1008 ಕುಂಡಗಳ ಮಹಾಯಜ್ಞ ಮತ್ತು 40ಕಿಮೀಗಳ ಶೋಭಯಾತ್ರೆ ಆಯೋಜಿಸಿ ಇದೇ ಟ್ರಸ್ಟ್ ಲಿಮ್ಕಾ ದಾಖಲೆ ಬರೆದಿತ್ತು.
2017: ಚೆನ್ನೈ: ಮೂರು ವರ್ಷಗಳ ಸುದೀರ್ಘ ನಿಷೇಧದ ಬಳಿಕ ಕಡೆಗೂ ತಮಿಳುನಾಡಿಗೆ ಜಲ್ಲಿಕಟ್ಟು (ಗೂಳಿ ಪಳಗಿಸುವ ಆಟ) ಬರಲಿದೆ. ತಮಿಳುನಾಡು ರಾಜ್ಯಪಾಲ ಸಿಎಚ್ ವಿದ್ಯಾ ಸಾಗರ ರಾವ್ ಅವರು ಜಲ್ಲಿಕಟ್ಟು ನಡೆಸಲು ಅವಕಾಶ ಒದಗಿಸುವ ತುರ್ತು ಸುಗ್ರೀವಾಜ್ಞೆಗೆ ಈದಿನ ಒಪ್ಪಿಗೆ ನೀಡಿದ್ದು, 22ರಂದು  ಮಧುರೈಯ ಅಳಂಗನಲ್ಲೂರಿನಲ್ಲಿ ಅಧಿಕೃತವಾಗಿ ಜಲ್ಲಿಕಟ್ಟು ಸ್ಪರ್ಧೆ ನಡೆಯಲಿದೆ. ಮುಖ್ಯಮಂತ್ರಿ . ಪನ್ನೀರಸೆಲ್ವಂ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಜಲ್ಲಿಕಟ್ಟು ನಿರಾತಂಕವಾಗಿ ನಡೆಯುವಂತೆ ಸಹಕರಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಜಲ್ಲಿಕಟ್ಟು ನಡೆಸಲು ಅವಕಾಶ ನೀಡುವ ತುರ್ತು ಸುಗ್ರೀವಾಜ್ಞೆಗೆ ತಮಿಳುನಾಡು ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ ಎಐಎಡಿಎಂಕೆ, ಸ್ವಲ್ಪವೇ ಹೊತ್ತಿನಲ್ಲಿ ಟ್ವೀಟ್ನ್ನು ತನ್ನ ಟ್ವಿಟ್ಟರ್ ಅಕೌಂಟ್ನಿಂದ ಕಿತ್ತು ಹಾಕಿತು.ಇದೇನಿದ್ದರೂ ಮುಖ್ಯಮಂತ್ರಿ . ಪನ್ನೀರಸೆಲ್ವಂ ಅವರು ನಾಳೆ (ಭಾನುವಾರ) ಬೆಳಗ್ಗೆ 10 ಗಂಟೆಗೆ ಅಳಂಗನಲ್ಲೂರಿನಲ್ಲಿ ಜಲ್ಲಿಕಟ್ಟು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಎಲ್ಲ ಸಚಿವರೂ ಅವರವರ ಜಿಲ್ಲೆಗಳಲ್ಲಿ ಜಲ್ಲಿಕಟ್ಟು ಉದ್ಘಾಟನೆ ಮಾಡಲಿದ್ದಾರೆ. ಜನವರಿ 23ರಂದು ವಿಧಾನಸಭೆಯ ಮೊದಲ ಅಧಿವೇಶನ ಆರಂಭವಾದಾಗ ಜಲ್ಲಿಕಟ್ಟು ಸುಗ್ರೀವಾಜ್ಞೆಯ ಬದಲಿಗೆ ಮಸೂದೆಯೊಂದನ್ನು ಸದನದಲ್ಲಿ ಮಂಡಿಸಲಾಗುವುದು. ಮಧ್ಯೆ ಜಲ್ಲಿಕಟ್ಟು ಆಟವನ್ನು ಬೆಂಬಲಿಸಿ ತಮಿಳುನಾಡಿನಾದ್ಯಂತ ಇನ್ನೂ ಪ್ರದರ್ಶನಗಳು ಮುಂದುವರೆದಿದ್ದು, ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಮ್ಮತಿ ನೀಡಿದ ಸುದ್ದಿ ಪ್ರಸಾರದ ಬೆನ್ನಲ್ಲೇ ಹಲವಡೆಗಳಲ್ಲಿ ಜನರು ನರ್ತಿಸುತ್ತಾ ಸಂಭ್ರಮ ಆಚರಿಸಿದರು. ಚೆನ್ನೈಯ ಮರೀನಾ ಬೀಚ್ಗೆ ಜಲ್ಲಿಕಟ್ಟು ಬೆಂಬಲಿಸಿ ಇನ್ನಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಆಗಮಿಸಿದರು. ಜಲ್ಲಿಕಟ್ಟು ಮೇಲಿನ ನಿಷೇಧವನ್ನು ತೆರವುಗೊಳಿಸಲು ನಿರಾಕರಿಸಿದ್ದ ಸುಪ್ರೀಂಕೋರ್ಟ್ ಕುರಿತ ತನ್ನ ಅಂತಿಮ ತೀರ್ಪನ್ನು ಒಂದು ವಾರ ಮುಂದೂಡಿತ್ತು. ಬಳಿಕ ಪನ್ನೀರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದರು. ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿದ್ದ ಕರಡು ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದ ಕೇಂದ್ರ ಸಂಪುಟವು ಅದನ್ನು ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿಕೊಟ್ಟಿತ್ತು.
2017: ನವದೆಹಲಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದ್ದ ಸಮಾಜವಾದಿ ಪಕ್ಷ (ಎಸ್ ಪಿ)ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ವಿಫಲಗೊಂಡಿತು. ಸಮಾಜವಾದಿ ಪಕ್ಷ 99 ಸೀಟುಗಳ ಕೊಡುಗೆ ಮುಂದಿಟ್ಟರೆ, ಕಾಂಗ್ರೆಸ್ ಕನಿಷ್ಠ 115 ಸೀಟುಗಳಿಗೆ ಪಟ್ಟು ಹಿಡಿಯಿತು. ಹೀಗಾಗಿ ಮೈತ್ರಿ ಮಾತುಕತೆ ವಿಫಲಗೊಂಡಿತು ಎಂದು ಹೇಳಲಾಯಿತು. ಸಮಾಜವಾದಿ ಪಕ್ಷದ ಕೊಡುಗೆಯನ್ನು ತಿರಸ್ಕರಿಸಿದ ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿಯು ಈದಿನ ತನ್ನ ಸಭೆಯಲ್ಲಿ ಮೊದಲ ಮತ್ತು 2ನೇ ಹಂತದ ಚುನಾವಣೆಗಳಿಗಾಗಿ 140 ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿತು. ಮೈತ್ರಿ ಹೆಚ್ಚು ಕಡಿಮೆ ತುಂಡಾಗಿದೆ, ಉತ್ತರ ಪ್ರದೇಶದ ಮುಖ್ಯಮಂತ್ರಿ 100 ಸ್ಥಾನ ಕೊಡಲು ಮುಂದಾದರು. ಆದರೆ ಕಾಂಗ್ರೆಸ್ 120 ಸ್ಥಾನಕ್ಕಿಂತ ಕೆಳಕ್ಕೆ ಬರಲೊಪ್ಪಲಿಲ್ಲ ಎಂದು ಸಮಾಜವಾದಿ ಪಕ್ಷದ ನರೇಶ ಅಗರ್ವಾಲ್ ಹೇಳಿದರು. ನಾವು 300 ಸ್ಥಾನಗಳಿಗಿಂತ ಕಡಿಮೆ ಸ್ಥಾನಗಳಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ನಾವು ಅವರಿಗೆ ಹೇಳಿದೆವು. ಆದರೆ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ತಾನು ಭಾರಿ ಬಲಾಢ್ಯ ಪಕ್ಷ ಎಂಬಂತೆ ಮೊಂಡು ಹಠ ಹಿಡಿಯಿತು ಎಂದು ಅವರು ನುಡಿದರು. ಏನಿದ್ದರೂ ಮಾತುಕತೆ ಸ್ಥಗಿತಗೊಂಡಿಲ್ಲ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಅಧ್ಯಕ್ಷ ರಾಜ್ ಬಬ್ಬರ್ ಹೇಳಿದರೆ, ಚುನಾವಣಾ ಮೈತ್ರಿ ವಿಚಾರ ನಾಳೆ ಬೆಳಗಿನ ಹೊತ್ತಿಗೆ ಗೊತ್ತಾಗಲಿದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಪ್ರತಿಕ್ರಿಯಿಸಿದರು.
2017: ಕೋಲ್ಕತ: ಭಾರತದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಲಷ್ಕರ್ ತೋಯಿಬಾ ಉಗ್ರರಿಗೆ ಪಶ್ಚಿಮ ಬಂಗಾಳದ ಬೋನ್ಗಾವ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತು ಕರಾಚಿ ಮೂಲದ ಮೊಹಮ್ಮದ್ ಯೂನುಸ್, ಮೊಹಮ್ಮದ್ ಅಬ್ದುಲ್ಲಾ ಮತ್ತು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮೊಹಮ್ಮದ್ ಮುಜಫ್ಪರ್ ಅಹಮದ್ಗೆ . ಕೋರ್ಟ್  ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು.  ಈ ಮೂವರು ಉಗ್ರರು ಮಹಾರಾಷ್ಟ್ರ ಮೂಲಕ ಶೇಖ್ ಸಮೀರ್ ಎಂಬ ಉಗ್ರನ ಜತೆಯಲ್ಲಿ ಉತ್ತರ 24 ಪರಗಣ ಜಿಲ್ಲೆಯಲ್ಲಿ 2007 ಏಪ್ರಿಲ್ 4 ರಂದು ಬಾಂಗ್ಲಾದೇಶದಿಂದ ಭಾರತದೊಳಗೆ ಅಕ್ರಮವಾಗಿ ನುಸುಳಲು ಪ್ರಯತ್ನಿಸಿದ್ದರು. ನಾಲ್ವರು ಉಗ್ರರನ್ನು ಬಿಎಸ್ಎಫ್ ಪಡೆ ಬಂಧಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಿತ್ತು. ಮತ್ತು ಇವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ ಯೂನುಸ್ ಆತ್ಮಾಹುತಿ ದಳದ ಸದಸ್ಯನಾಗಿದ್ದು, ಢಾಕಾ ಮೂಲಕ ಭಾರತದೊಳಗೆ ಪ್ರವೇಶಿಸಿಲು ಸಂಚು ರೂಪಿಸಿದ್ದ ಎಂಬುದು ತಿಳಿದು ಬಂದಿತ್ತು. ಉಗ್ರರು ಭಾರತದೊಳಗೆ ದೊಡ್ಡ ಪ್ರಮಾಣದ ದಾಳಿ ನಡೆಸಲು ಯೋಜನೆ ರೂಪಿಸಿದ್ದರು. ಪ್ರಕರಣವೊಂದರ ವಿಚಾರಣೆಗಾಗಿ ಶೇಖ್ ಸಮೀರ್ನನ್ನು ಮಹಾರಾಷ್ಟ್ರಕ್ಕೆ ಕರೆದೊಯ್ಯುವಾಗ ಆತ ಛತ್ತೀಸ್ಗಢದಲ್ಲಿ ಪೊಲೀಸರಿಗೆ ಚಳ್ಳಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ.
2017: ಮುಂಬೈ: 2016ರಲ್ಲಿ ದಾರಿ ತಪ್ಪಿ ಭಾರತ- ಪಾಕ್ ಗಡಿಯನ್ನು ದಾಟಿದ್ದ ಭಾರತೀಯ ಯೋಧ ಚಂದು ಬಾಬುಲಾಲ್ ಚವಾಣ್ (ಚೋಹನ್) ಅವರನ್ನು ಪಾಕಿಸ್ತಾನವು ಬಿಡುಗಡೆ ಮಾಡಿ ಪಂಜಾಬಿನ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಮಧ್ಯಾಹ್ನ 2.30 ವೇಳೆಗೆ ಒಪ್ಪಿಸಿತು. ಕಾಶ್ಮೀರದಲ್ಲಿದ್ದ ರಾಷ್ಟ್ರೀಯ ರೈಫಲ್ಸ್ ಕಾಶ್ಮೀರದ ಯೋಧ ಚಂದು ಅವರು 2016 ಸೆಪ್ಟೆಂಬರ್ 29ರಂದು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನವನ್ನು ಪ್ರವೇಶಿಸಿದ್ದರು. ಅಂದಿನಿಂದ ತಮ್ಮ ಸಹೋದರನನ್ನು ಭಾರತಕ್ಕೆ ಮರಳಿ ಕರೆತರುವಂತೆ ಮಾಡಲು ಸಹೋದ ಭೂಷಣ್ ಚವಾಣ್ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದರು. ನವೆಂಬರ್ 28ರಂದು ಭೂಷಣ್ ಅವರಿಗೆ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ ಅವರಿಂದ ಒಂದು ಟ್ವೀಟ್ ಬಂದಿತ್ತು. ಪತ್ರದ ಚಿತ್ರ ಸಹಿತವಾಗಿ ಲೋಧಿ ಅವರಿಗೆ ಟ್ವೀಟ್ ಮೂಲಕ ಮನವಿಯನ್ನು ಕಳುಹಿಸಿ ತಮ್ಮ ಸಹೋದರನನ್ನು ಮರಳಿ ಸ್ವದೇಶಕ್ಕೆ ಕಳಹಿಸಿಕೊಡುವಂತೆ ಭೂಷಣ್ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಲೋಧಿ, ಇದು ಮಾನವೀಯ ವಿಷಯ. ನನ್ನಿಂದ ಏನು ಮಾಡಲು ಸಾಧ್ಯವೋ ನೋಡೋಣ ಎಂದು ಉತ್ತರಿಸಿದ್ದರು.
2017: ಪಟನಾ: ಮದ್ಯ ನಿಷೇಧಕ್ಕೆ ಬೆಂಬಲ ಸೂಚಿಸಿ ಬಿಹಾರದ ಗಾಂಧಿ ಮೈದಾನದಲ್ಲಿ ನಡೆದ ನಶಾ ಮುಕ್ತ ಮಾನವ ಸರಪಳಿ ಅಭಿಯಾನ ವಿಶ್ವ ದಾಖಲೆ ನಿರ್ವಿುಸಿತು. ಬರೋಬ್ಬರಿ 11,292 ಕಿ.ಮೀ. ವ್ಯಾಪಿಸುವ ಮೂಲಕ ವಿಶ್ವದ ಅತ್ಯಂತ ಉದ್ದದ ಮಾನವ ಸರಪಳಿ ಎಂಬ ಖ್ಯಾತಿಗೆ ಇದು ಪಾತ್ರವಾಯಿತು. ಮಾನವ ಸರಪಳಿಯಲ್ಲಿ ಸಿಎಂ ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸೇರಿದಂತೆ 2 ಕೋಟಿ ಜನತೆ ಕೈ ಜೋಡಿಸಿದರು.  ರಾಜ್ಯದ ಪ್ರಮುಖ ರಸ್ತೆಗಳ ಎಡಬದಿಯಲ್ಲಿ ಸಾಗಿದ ಮಾನವ ಸರಪಳಿಯಲ್ಲಿ ವಿವಿಧ ಶಾಲಾಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ಒತ್ತಾಯಪೂರ್ವಕವಾಗಿ ಭಾಗವಹಿಸುವಂತೆ ಮಾಡಬಾರದು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು.
2017: ಇಸ್ಲಾಮಾಬಾದ್‌: ಭಾರತವು ಜಮ್ಮುಕಾಶ್ಮೀರದಲ್ಲಿನ ಜಲವಿದ್ಯುತ್ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಪಾಕಿಸ್ತಾನದ ಸಂಸದೀಯ ಸಮಿತಿ ಆಗ್ರಹಿಸಿತು. ಯೋಜನೆಗಳ ಕುರಿತು ಭಾರತ ಮತ್ತು ವಿಶ್ವಬ್ಯಾಂಕ್ಪಾಕ್ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದು ಅದು ಸೂಚಿಸಿತು. ವಿದೇಶಾಂಗ ವ್ಯವಹಾರ ಹಾಗೂ ಜಲ ಮತ್ತು ವಿದ್ಯುತ್ಸಚಿವರ ಸಭೆಯಲ್ಲಿ ಕುರಿತು ನಿರ್ಣಯಕೈಗೊಳ್ಳಲಾಯಿತು. ಭಾರತ ವಿದ್ಯುತ್ಯೋಜನೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸಭೆಯಲ್ಲಿ ಒಮ್ಮತದ ಮೂಲಕ ಜಂಟಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿತು. ಜಮ್ಮು ಕಾಶ್ಮೀರದಲ್ಲಿನ ಕಿಶನ್ಗಂಗಾ ಮತ್ತು ರಾಟ್ಲೆ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿದ ಪಾಕಿಸ್ತಾನ, ಯೋಜನೆಗಳ ಕುರಿತು ವಿಶ್ವಸಂಸ್ಥೆ ಹಾಗೂ ಭಾರತ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಅಂತರರಾಷ್ಟ್ರೀಯ ಜಲ ಸಮಸ್ಯೆ ಇತ್ಯರ್ಥಕ್ಕೆ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಹೇಳಿತು. ಸಿಂಧು ನದಿ ಜಲ ಒಪ್ಪಂದ (ಐಡಬ್ಲ್ಯುಟಿ) ಜಾರಿಗೆ ತರುವ ಜವಾಬ್ದಾರಿ ವಿಶ್ವಬ್ಯಾಂಕ್ಮೇಲಿದೆ. ವಿಚಾರವಾಗಿ ವಿಶ್ವಬ್ಯಾಂಕ್ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಪಾಕಿಸ್ತಾನ ಒತ್ತಾಯಿಸಿತು.
2017: ಸರವಕ್(ಮಲೇಷ್ಯಾ): ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಹಾಂಗ್ ಕಾಂಗ್ ಯಿಪ್ ಪುಯಿ ಯಿನ್ ಅವರನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದರು. ಈದಿನ ನಡೆದ ಪಂದ್ಯದಲ್ಲಿ ಸೈನಾ ನೆಹ್ವಾಲ್ ಹಾಂಗ್ ಕಾಂಗ್ ಆಟಗಾರ್ತಿಯನ್ನು 21-13, 21-10 ನೇರ ಗೇಮ್ ಗಳಿಂದ ಸುಲಭವಾಗಿ ಮಣಿಸಿದರು. ಸೈನಾ ಕೇವಲ 32 ನಿಮಿಷಗಳಲ್ಲಿ ಎದುರಾಳಿಯನ್ನು ಸೋಲಿಸಿ ಪೂರ್ಣ ಆತ್ಮವಿಶ್ವಾಸದೊಂದಿಗೆ ಫೈನಲ್ಗೆ ಲಗ್ಗೆ ಇಟ್ಟರು. ಸೈನಾ ಫೈನಲ್ಸ್ನಲ್ಲಿ ಥಾಯ್ಲೆಂಡಿನ ಪೋರ್ನ್ಪವೆ ಚೋಚುವಾಂಗ್ ಅವರನ್ನು ಎದುರಿಸಲಿದ್ದಾರೆ.

2017: ನವದೆಹಲಿ: ಅಫಘಾನಿಸ್ತಾನದ ಇಬ್ಬರು ವ್ಯಕ್ತಿಗಳು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ ಯು) 21 ಹರೆಯದ ವಿದ್ಯಾರ್ಥಿನಿ ಒಬ್ಬಳಿಗೆ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ತಮ್ಮ ಫ್ಲ್ಯಾಟ್ನಲ್ಲಿ ಅಮಲು ಪದಾರ್ಥ ನೀಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕಳೆದ ವಾರ ಘಟಿಸಿತು.  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಅವರನ್ನು ತ್ವಾಬ್ ಅಹ್ಮದ್ (27) ಮತ್ತು ಸುಲೈಮಾನ್ ಅಹ್ಮದಿ (31) ಎಂಬುದಾಗಿ ಗುರುತಿಲಾಯಿತು.. ದೆಹಲಿ ನ್ಯಾಯಾಲಯದಲ್ಲಿ ಅವರನ್ನು ಹಾಜರು ಪಡಿಸಲಾಗಿದ್ದು, ತಿಹಾರ್ ಸೆರೆಮನೆಗೆ ಕಳುಹಿಸಲಾಯಿತು. ಬಂಧಿತ ವ್ಯಕ್ತಿಗಳು ನಿರಾಶ್ರಿತರಿಗಾಗಿ ನೀಡಲಾದ ವಿಶ್ವಸಂಸ್ಥೆ ನಿರಾಶ್ರಿತರ ಹೈಕಮೀಷನರ್ (ಯುಎನ್ ಎಚ್ ಸಿಆರ್) ಕಾರ್ಡ್ಗಳನ್ನು ಹೊಂದಿದ್ದು ದೆಹಲಿಯಲ್ಲಿ ವಾಸವಿದ್ದರು. ತ್ವಾಬ್ ಇವೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹೆಚ್ಚುವರಿ ಡಿಸಿಪಿ (ದಕ್ಷಿಣ) ಚಿನ್ಮಯ್ ಬಿಸ್ವಾಲ್ ಹೇಳಿದರು. ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ಬಿಎ (ಆನರ್ಸ್) ದ್ವಿತೀಯ ವರ್ಷದ ವಿದ್ಯಾರ್ಥಿನಿ ಕಳೆದ ವಾರ ಹೌಜ್ ಖಾಸ್ ಗ್ರಾಮಕ್ಕೆ ತನ್ನ ಗೆಳೆಯನ ಜೊತೆಗೆ ಪಬ್ಗೆ ಹೋಗಿದ್ದಳು. ಅಲ್ಲಿ ತ್ವಾಬ್ ಭೇಟಿಯಾಗಿದ್ದ. ತ್ವಾಬ್ ಆಕೆ ಸಹಿತ ಕೆಲವು ಮಹಿಳೆಯರನ್ನು ಗೆಳತಿಯರನ್ನಾಗಿ ಮಾಡಿಕೊಂಡಿದ್ದು, ಮೊಬೈಲ್ ನಂಬರ್ಗಳನ್ನು ವಿನಿಮಯ ಮಾಡಿಕೊಂಡಿದ್ದರು. ಬಳಿಕ ಅಲ್ಲಿದ್ದ ಮಹಿಳೆಯರ ಪೈಕಿ ಇಬ್ಬರನ್ನು ಗ್ರೀನ್ ಪಾರ್ಕ್ನಲ್ಲಿದ್ದ ತನ್ನ ಮನೆಗೆ ಪಾರ್ಟಿಗೆ ಬರುವಂತೆ ತ್ವಾಬ್ ಆಹ್ವಾನಿಸಿದ್ದ. ತ್ವಾಬ್, ಆತನ ಗೆಳೆಯ ಸುಲೈಮಾನ್, ಸಿದ್ಧಾಂತ ಮತ್ತು ಪ್ರತ್ಯೂಷಾ ಅಲ್ಲಿದ್ದರು. ಗೆಳತಿಯನ್ನು ಜೆಎನ್ ಯುನಲ್ಲಿ ಬಿಟ್ಟು ಮರಳಿ ತ್ವಾಬ್ ಮನೆಗೆ ಬಂದು ಅವರು ಕುಡಿಯುವುದನ್ನು ಮುಂದುವರೆಸಿದ್ದರು. ಬೆಳಗ್ಗೆ ಎಚ್ಚರವಾದಾಗ ತನ್ನ ಮೇಲೆ ತ್ವಾಬ್ ಮತ್ತು ಸುಲೈಮಾನ ಅತ್ಯಾಚಾರ ಎಸಗಿದ್ದು ಆಕೆಯ ಗಮನಕ್ಕೆ ಬಂತು. ವಸತಿಗೃಹಕ್ಕೆ ಹಿಂತಿರುಗಿದ ಬಳಿಕ ಆಕೆ ಇಬ್ಬರು ಗೆಳೆಯರ ನೆರವಿನೊಂದಿಗೆ ಸಫ್ದರ್ ಜಂಗ್ ಎನ್ ಕ್ಲೇವ್ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ಹೇಳಿದರು.
2009: ಒಬಾಮ ನೇತೃತ್ವದ ಅಮೆರಿಕದ ಹೊಸ ಸರ್ಕಾರವು ಪಾಕಿಸ್ಥಾನಕ್ಕೆ ಹೆಚ್ಚಿನ ನಾಗರಿಕ ಮೂಲ ಸೌಲಭ್ಯ ನೆರವು ನೀಡಲು ಉದ್ದೇಶಿಸಿದ್ದರೂ, ಅದರ ಪ್ರಮಾಣ ಆ ರಾಷ್ಟ್ರವು ಆಘ್ಘಾನಿಸ್ಥಾನದ ಗಡಿಯಲ್ಲಿ ಭಯೋತ್ಪಾದನೆ ತಗ್ಗಿಸಲು ಎಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಆಧರಿಸಿರುತ್ತದೆ ಎಂದು ಸ್ಪಷ್ಟಪಡಿಸಲಾಯಿತು. ಒಬಾಮ ಅವರು ಅಧಿಕಾರ ಸ್ವೀಕರಿಸಿದ ನಂತರ ಶ್ವೇತಭವನವು ಪ್ರಕಟಿಸಿದ ತನ್ನ ವಿದೇಶಾಂಗ ನೀತಿ ಕಾರ್ಯಸೂಚಿಯಲ್ಲಿ ಈ ಅಂಶ ಬಹಿರಂಗಪಡಿಸಲಾಯಿತು. ಪಾಕಿಸ್ಥಾನಕ್ಕೆ ಸೇನಾ ನೆರವಿನಿಂದ ಹೊರತಾದ ಷರತ್ತು ಬದ್ಧ ನಾಗರಿಕ ಸಹಾಯ ಪ್ರಮಾಣ ಹೆಚ್ಚಿಸುವುದು ಅಮೆರಿಕದ ಉದ್ಧೇಶ. ಅದೇ ಸಮಯಕ್ಕೆ ಆಘ್ಘಾನಿಸ್ಥಾನದ ಗಡಿಯಲ್ಲಿನ ಸುರಕ್ಷತೆಗೆ ಆ ರಾಷ್ಟ್ರವನ್ನೇ ಹೊಣೆ ಮಾಡಲಾಗುವುದು ಎಂದು ಕಾರ್ಯಸೂಚಿ ವಿವರಿಸಿತು.

2009: ಅಮೆರಿಕದ ನೂತನ ಅಧ್ಯಕ್ಷರಾಗಿ 2009ರ ಜನವರಿ 20 ರಂದು ತಾವು ಅಧಿಕಾರ ಸ್ವೀಕರಿಸಿದ ದಿನವನ್ನು 'ರಾಷ್ಟ್ರೀಯ ಪುನರುಜ್ಜೀವನ ಹಾಗೂ ಸಾಮರಸ್ಯ ದಿವಸ' ಎಂದು ಬರಾಕ್ ಒಬಾಮ ಘೋಷಿಸಿದರು. ಅಧ್ಯಕ್ಷ ಪಟ್ಟಕ್ಕೆ ಏರಿದ ಮೊದಲ ಆಫ್ರಿಕಾ ಅಮೆರಿಕ ಸಂಜಾತ ಎಂಬ ಹೆಗ್ಗಳಿಕೆಗೆ ಪಾತ್ರರಾದ ಒಬಾಮ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾಡಿದ ಮೊಟ್ಟ ಮೊದಲ ಈ ಘೋಷಣೆ ದೇಶದ ಎಲ್ಲ ಟಿವಿ ವಾಹಿನಿಗಳಲ್ಲಿ ಪ್ರಸಾರವಾಯಿತು. ಇನ್ನೊಂದು ವಿಶೇಷವೆಂದರೆ ತಮ್ಮ ಅಧ್ಯಕ್ಷರು ಎಡಗೈಯಲ್ಲಿ ಈ ಘೋಷಣೆಗೆ ಸಹಿ ಮಾಡ್ದಿದನ್ನು ಜನರು ಕಣ್ಣಾರೆ ಕಂಡರು. ಈ ದೇಶ ಕಟ್ಟುವುದು ಎಲ್ಲರ ಗುರಿಯಾಗಬೇಕು. ನಾವು ಈಗ ಪರೀಕ್ಷೆಯ ಕಾಲದಲ್ಲಿ ಇದ್ದೇವೆ ಎಂದು ಒಬಾಮ ಹೇಳಿದರು.

2009: ಗಾಜಾ ಪಟ್ಟಿಯಿಂದ ಈದಿನ ಬೆಳಿಗ್ಗೆ ಇಸ್ರೇಲ್ ತನ್ನ ಕಟ್ಟ ಕಡೆಯ ಸೇನಾ ಪಡೆ ಹಿಂತೆಗೆದುಕೊಂಡಿತು. ಹಮಾಸ್ ಉಗ್ರರನ್ನು ದಮನ ಮಾಡುವ ಕಾರ್ಯಾಚರಣೆಯ ಅಂಗವಾಗಿ ಎರಡು ವಾರಗಳ ಹಿಂದೆ ಈ ಪಡೆ ಕಳುಹಿಸಲಾಗಿತ್ತು. ಏಕಪಕ್ಷೀಯ ಯುದ್ಧ ವಿರಾಮ ಘೋಷಿಸಿದ ಕೆಲ ಗಂಟೆಗಳ ಅಂತರದಲ್ಲಿ ಇಸ್ರೇಲ್ ತನ್ನ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳಲು ಆರಂಭಿಸಿತು.

2009: ಪ್ರಮುಖ ವೆಬ್‌ಸೈಟ್ 'ಆಸ್ಕ್ ಮೆನ್.ಕಾಮ್'' ಪ್ರಕಟಿಸಿದ ಸಮೀಕ್ಷೆಯೊಂದರಲ್ಲಿ 'ಪುರುಷರು ಇಷ್ಟಪಡುವ ವಿಶ್ವದ 50 ಮಹಿಳೆಯರು' ಪಟ್ಟಿಯಲ್ಲಿ ಮಾಜಿ ವಿಶ್ವ ಸುಂದರಿ ಭಾರತದ ಐಶ್ವರ್ಯ ರೈ ಸ್ಥಾನ ಪಡೆದರು. ಅಷ್ಟೇ ಅಲ್ಲ; ಈ ಪಟ್ಟಿಯಲ್ಲಿ 48ನೇ ಸ್ಥಾನ ಪಡೆಯುವ ಮೂಲಕ 50ನೇ ಸ್ಥಾನ ಪಡೆದಿರುವ ಅಮೆರಿಕದ ಗಾಯಕಿ ಬೆಯಾನ್ಸ್ ಅವರನ್ನೂ ಐಶ್ವರ್ಯ ಹಿಂದಿಕ್ಕಿದರು ಎಂದು ಆಸ್ಕ್ ಮೆನ್ ಡಾಟ್ ಕಾಮ್ ( www.askmen.com) ಪ್ರಕಟಿಸಿತು. ಬುದ್ಧಿವಂತಿಕೆ, ವರ್ಚಸ್ಸು ಮತ್ತು ಮಹತ್ವಾಕಾಂಕ್ಷೆ ಆಧರಿಸಿ ತಮ್ಮ ಆದರ್ಶ ಸಂಗಾತಿ ಆಯ್ಕೆ ಮಾಡಿಕೊಳ್ಳಬೇಕೆಂದು ಸಮೀಕ್ಷೆಯ ಮಾರ್ಗದರ್ಶಿಯಲ್ಲಿ ಸೂಚಿಸಲಾಗಿತ್ತು. ಆ ಪ್ರಕಾರ ಸಿದ್ಧಪಡಿಸಿದ ಪಟ್ಟಿಯಲ್ಲಿ ಅಮೆರಿಕದ ನಟಿ ಇವಾ ಮೆಂಡೆಸ್ ಮೊತ್ತಮೊದಲ ರಾಂಕ್ (Rank) ಪಡೆದರು. ಹ್ಯಾಥ್‌ವೇ, ಸ್ಕಾರ್ಲೆಟ್ ಜೊಹಾನ್ಸನ್, ರಿಹನ್ನಾ, ಆಂಜಲೀನಾ ಜೋಲಿ, ಹೀದಿ ಕಮ್ಲ್, ಜೆಸ್ಸಿಕಾ ಅಲ್ಬಾ ಈ ಪಟ್ಟಿ ಸೇರಿದ ಇತರರು.

2009: ಶುಕ್ರದೆಸೆ ಇದ್ದರೆ ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಪಂಜಾಬ್ ಸಾಕ್ಷಿಯಾಯಿತು. ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಸರ್ಕಾರದಲ್ಲಿ ಅಪ್ಪನಿಗೆ ಸಾಥ್ ನೀಡಿದರು. ಪಂಜಾಬ್ ಉಪ ಮುಖ್ಯಮಂತ್ರಿಯಾಗಿ ಅಮೃತಸರದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸುಖ್‌ಬೀರ್ ಸಿಂಗ್ ಬಾದಲ್ ತತ್ ಕ್ಷಣವೇ ತಮ್ಮ ತಂದೆಯವರಾದ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಂದ ಆಶೀರ್ವಾದ ಪಡೆದರು.

2008: ವಿಶ್ವದಲ್ಲಿನ ಸಮಸ್ತ ಗ್ರಹಗಳು, ನಕ್ಷತ್ರಗಳೆಲ್ಲ ಅಗೋಚರ ಮತ್ತು ಅನಂತ ದಾರವೊಂದರಿಂದ ಬಂಧಿಸಲ್ಪಟ್ಟಿವೆ ಹಾಗೂ ಆ ದಾರ ಬಿಡುಗಡೆ ಮಾಡುವ ಶಕ್ತಿಯನ್ನೇ ಬಳಸಿಕೊಳ್ಳುತ್ತಿವೆ ಎಂಬುದಾಗಿ ನ್ಯೂಯಾರ್ಕಿನ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧನಾ ನಿರತ ವಿಜ್ಞಾನಿಗಳು ಪ್ರತಿಪಾದಿಸಿದರು. ಬ್ರಹ್ಮಾಂಡದಲ್ಲಿನ ಅಗೋಚರ ಶಕ್ತಿಯ ಬಲವನ್ನು ಸದ್ಯ ಅಳೆಯುತ್ತಿರುವ `ನಾಸಾ'ದ `ವಿಲ್ಕಿನ್ ಸನ್ ಮೈಕ್ರೊವೇವ್ ಅನಿಸೊಟ್ರೊಫಿ ಪ್ರೋಬ್' ಕಲೆಹಾಕಿದ ಮಾಹಿತಿ ಆಧಾರದಲ್ಲಿ ಈ ನಿರ್ಣಯಕ್ಕೆ ಬರಲಾಯಿತು. `ಈ ದಾರವನ್ನು ನಾವು ನೋಡಲು ಸಾಧ್ಯವಿಲ್ಲ, ಅದು ಎಷ್ಟೋ ಶತಕೋಟಿ ಜ್ಯೋತಿರ್ವರ್ಷಗಳಾಚೆ ಇದೆ. ಈ ವರ್ಷ ಹಾರಿಬಿಡಲಾಗುವ ಐರೋಪ್ಯ ಬಾಹ್ಯಾಕಾಶ ಏಜೆನ್ಸಿಯ ಪ್ಲಾಂಕ್ ಉಪಗ್ರಹ ಯಾನದ ಬಳಿಕ ಇದು ದೃಢಪಡಲಿದೆ' ಎಂದು ತಂಡದ ಮುಖ್ಯಸ್ಥ ಡಾ. ಮಾರ್ಕ್ ಹಿಂಡ್ ಮಾರ್ಷ್ ಹೇಳಿದ್ದನ್ನು `ಸೈನ್ಸ್ ಡೈಲಿ' ವರದಿ ಮಾಡಿತು.

2008: ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೇಲಿನ `ಬೇಹುಗಾರಿಕೆ' ಉಪಗ್ರಹವೊಂದನ್ನು ಧ್ರುವಗಾಮಿ ಕಕ್ಷೆಗೆ ಹಾರಿಬಿಡಲಾಯಿತು. ಇದರೊಂದಿಗೆ ವಾಣಿಜ್ಯ ಉದ್ದೇಶದ ಉಪಗ್ರಹ ಉಡಾವಣೆಯಲ್ಲಿ ಭಾರತ ಇನ್ನೊಂದು ಹೆಜ್ಜೆ ಕ್ರಮಿಸಿತು. ಇದರಿಂದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಮತ್ತೊಂದು ಹಿರಿಮೆಯನ್ನು ತನ್ನದಾಗಿಸಿಕೊಂಡಿತು. ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಈ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ- ಸಿ10) 300 ಕೆ.ಜಿ. ತೂಕದ ಇಸ್ರೇಲಿನ ಟೆಕ್ಸಾರ್ (ಪೋಲಾರಿಸ್) ಉಪಗ್ರಹವನ್ನು ಉಡಾವಣೆಯಾದ 1185 ಸೆಕೆಂಡುಗಳ ನಂತರ (19.75 ನಿಮಿಷ) ನಿರ್ದಿಷ್ಟ ಕಕ್ಷೆಯಲ್ಲಿ ಕೂರಿಸಿತು. ಮೋಡ ಹಾಗೂ ಮಂಜು ಮುಸುಕಿದ ವಾತಾವರಣದ ಮಧ್ಯೆಯೂ ಭೂಮಿಯ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ `ಟೆಕ್ಸಾರ್' ಉಪಗ್ರಹಕ್ಕೆ ಇದ್ದು, ಹಗಲು, ರಾತ್ರಿ ಚಿತ್ರಗಳನ್ನು ಸೆರೆಹಿಡಿಯುವುದು.

2008: ಬ್ರಿಟನ್ ಪ್ರಧಾನಿ ಗಾರ್ಡನ್ ಬ್ರೌನ್ ಅವರು ಶೈಕ್ಷಣಿಕ ರಂಗಕ್ಕೆ ನೀಡಿರುವ ಕೊಡುಗೆ ಮತ್ತು ಸಾರ್ವಜನಿಕ ಸೇವೆಯನ್ನು ಪರಿಗಣಿಸಿ ಅವರಿಗೆ ದೆಹಲಿ ವಿಶ್ವವಿದ್ಯಾ ನಿಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈದಿನ ನಡೆದ ವಿಶೇಷ ಘಟಿಕೋತ್ಸವದಲ್ಲಿ ವಿವಿಯ ಕುಲಪತಿಗಳೂ ಆದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರು ಗಾರ್ಡನ್ ಅವರಿಗೆ ಈ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

2008: ಅಂತಾರಾಷ್ಟ್ರೀಯ ಟೆನಿಸ್ ಕ್ಷೇತ್ರಕ್ಕೆ ಕಾಲಿಟ್ಟ ಹೊಸದರಲ್ಲಿ ಮೋಸದಾಟ ಆಡಲು ಆಮಿಷ ಒಡ್ಡಲಾಗಿತ್ತು ಎಂಬುದನ್ನು ಭಾರತದ ಖ್ಯಾತ ಡಬಲ್ಸ್ ಆಟಗಾರ ಮಹೇಶ್ ಭೂಪತಿ ಮೆಲ್ಬೋರ್ನಿನಲ್ಲಿ ಬಹಿರಂಗಪಡಿಸಿದರು.

2008: ದೇಶದ ಬಂಡವಾಳ ಪೇಟೆಯಲ್ಲಿ ಹಣ ತೊಡಗಿಸಿರುವ ಹೂಡಿಕೆದಾರರ ಪಾಲಿಗೆ ಸೋಮವಾರದ ಈದಿನವು ವಾರದ ವಹಿವಾಟಿಗೆ ಶುಭಾರಂಭದ ಶ್ರೀಕಾರ ಹಾಕದೇ ಭಯಾನಕ ದುಃಸ್ವಪ್ನವಾಗಿ ಕಾಡಿತು. ಒಂದು ಹಂತದಲ್ಲಿ ಬಿ ಎಸ್ ಇ ಸೂಚ್ಯಂಕವು 16,951.50 ಅಂಶಗಳಿಗೆ (17,000 ಅಡಿಗಿಂತ ಕೆಳಗೆ) ಕುಸಿದರೆ, ಎನ್ ಎಸ್ ಇ 5 ಸಾವಿರ ಅಂಶಗಳಿಗಿಂತ (4977) ಕೆಳಗೆ ಇಳಿದಿತ್ತು. ಈ ಕರಾಳ ಸೋಮವಾರ ಅನಿರೀಕ್ಷಿತವಾಗಿ ಆರು ಲಕ್ಷ ಕೋಟಿಗಳಷ್ಟು ಸಂಪತ್ತನ್ನು ಕರಗಿಸಿತು.

2008: ಕಾರ್ಗಿಲ್ ಕದನ ಸಮಯದಲ್ಲಿ ಪ್ರಚಾರ ಪಡೆದಿದ್ದ ಕಾಶ್ಮೀರದ ದ್ರಾಸ್ ಪ್ರದೇಶ ಸೈಬೀರಿಯಾ ಪ್ರಾಂತ್ಯದ ನಂತರದ ಅತ್ಯಂತ ಚಳಿಯುಕ್ತ ಪ್ರದೇಶ ಎಂದು ಹೆಸರಾಯಿತು. ದ್ರಾಸ್ ಪ್ರದೇಶ ಶೂನ್ಯಕ್ಕಿಂತ 27 ಡಿ.ಸೆ. ಕಡಿಮೆ ಉಷ್ಣಾಂಶ ಹೊಂದುವ ಮೂಲಕ ಈ ವರ್ಷದ ಅತ್ಯಂತ ಕಡಿಮೆ ಉಷ್ಣಾಂಶ ಹೊಂದಿದ ದಾಖಲೆಗೆ ಪಾತ್ರವಾಯಿತು. ಈದಿನ ಇಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ -13.5 ಡಿ.ಸೆ.!

2008: ಪಾಕಿಸ್ಥಾನದ `ನ್ಯೂಸ್ ಲೈನ್' ನಿಯತಕಾಲಿಕ ನೀಡುವ 2007ನೇ ಸಾಲಿನ ಕುಖ್ಯಾತರ ಪ್ರಶಸ್ತಿ `ಹಾಲ್ ಆಫ್ ಶೇಮ್' ಪಡೆದವರ ಪಟ್ಟಿಯಲ್ಲಿ ದೇಶದ ಅಧ್ಯಕ್ಷ ಪರ್ವೇಜ್ ಮುಷರಫ್ ಮತ್ತು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರ ಹೆಸರುಗಳೂ ಸೇರಿದವು.

2008: ಮ್ಯಾನ್ಮಾರಿನ ದಕ್ಷಿಣ ಭಾಗದಲ್ಲಿ ಭಾನುವಾರ ಬಸ್ಸೊಂದು ಹೆದ್ದಾರಿಯಿಂದ 10 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದುದರಿಂದ 27 ಪ್ರಯಾಣಿಕರು ಸತ್ತು ಇತರ 10 ಮಂದಿ ಗಾಯಗೊಂಡರು.

2008: ಪಾಕಿಸ್ಥಾನ ತಂಡದವರು ಕರಾಚಿಯಲ್ಲಿ ನಡೆದ ಜಿಂಬಾಬ್ವೆ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 104 ರನ್ನುಗಳ ಗೆಲುವು ಸಾಧಿಸಿದರು. ಜೊತೆಗೆ ಐದು ಮಂದಿ ಬ್ಯಾಟ್ಸ್ ಮನ್ನರು ಅರ್ಧ ಶತಕ ದಾಖಲಿಸಿದ್ದು ಇದೊಂದು ವಿಶ್ವದಾಖಲೆಯಾಯಿತು.

2008: ಗುಜರಾತಿನಲ್ಲಿ 2002ರಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಹಾಗು ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯವು 11ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಈ 12 ಮಂದಿ ಆರೋಪಿಗಳ ಹೆಸರನ್ನು ಜನವರಿ 18ರಂದು ನ್ಯಾಯಾಲಯವು ಪ್ರಕಟಿಸಿತ್ತು. ಇತರ 7 ಮಂದಿಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆರೋಪಮುಕ್ತರನ್ನಾಗಿಸಿ ತೀರ್ಪು ನೀಡಲಾಯಿತು. ಹನ್ನೆರಡನೇ ಆರೋಪಿಯೂ ಆಗಿರುವ ಪೊಲೀಸ್ ಸಿಬ್ಬಂದಿ ಸೋಮಾಬಾಯ್ ಗೋರಿಗೆ ಮೂರು ವರ್ಷಗಳ ಕಠಿಣ ಸಜೆಯ ಶಿಕ್ಷೆ ನೀಡಲಾಯಿತು. ಆರೋಪಿಗಳನ್ನು ರಕ್ಷಿಸಲು ಯತ್ನಿಸಿದನೆಂಬ ಆರೋಪ ಸೋಮಾಬಾಯ್ ಮೇಲಿತ್ತು. ವಿಚಾರಣೆಯನ್ನು ಎದುರಿಸುತ್ತಿದ್ದವರಲ್ಲಿ ನರೇಶ್ ಮೊರ್ಧಿಯ ವಿಚಾರಣೆಯ ಸಂದರ್ಭದಲ್ಲಿಯೇ ಸಾವನ್ನಪ್ಪಿದ್ದರು. ಜಸ್ವಂತಿಬಾಯ್ ನೈ, ಗೋವಿಂದಬಾಯ್ ನೈ, ಶೈಲೇಶ್ ಭಟ್, ರಾಧೇ ಶ್ಯಾಮ್ ಶಹಾ, ಬಿಪಿನ್ ಜೋಷಿ, ಕೇಸರ್ ಬಾಯ್ ವೊಹಾನಿಯ, ಪ್ರದೀಪ್ ಮೊರ್ಧಿಯ, ಬಾಕಾಬಾಯ್ ವೊಹಾನಿಯ, ರಾಜನ್ ಬಾಯ್ ಸೋನಿ, ನಿತೇಶ್ ಭಟ್, ರಮೇಶ್ ಚಂದನ ಅವರು ಜೀವಾವಧಿ ಶಿಕ್ಷೆಗೆ ಒಳಗಾದರು. 2002ರ ಮಾರ್ಚಿ 3ರಂದು ಚಪರ್ ವಾಡಾದಿಂದ ಪನಿವೇಲಾದತ್ತ 17ಜನರ ಗುಂಪು ಪ್ರಯಾಣಿಸುತಿತ್ತು. ಇದರಲ್ಲಿ ಬಿಲ್ಕಿಸ್ ಬಾನು ಕೂಡ ಇದ್ದರು. ಈ ಗುಂಪಿನ ಮೇಲೆ ನಡೆದ ಆಕ್ರಮಣದ ಸಂದರ್ಭದಲ್ಲಿ 8 ಮಂದಿ ಸತ್ತು, 6ಮಂದಿ ಕಾಣೆಯಾಗಿದ್ದರು. ಆಗ ಆರು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆ ಘಟನೆಯಲ್ಲಿ ಬಿಲ್ಕಿಸ್ ಮತ್ತು ಇಬ್ಬರು ಮಕ್ಕಳು ಮಾತ್ರ ಬದುಕುಳಿದಿದ್ದರು.

2007: ಮಲೇಷ್ಯಾದ ಕ್ವಾಲಾಲಂಪುರಕ್ಕೆ ಸಮೀಪದ ಕ್ಲಾಂಗಿನಲ್ಲಿರುವ ಶ್ರೀ ಸುಂದರರಾಜ ಪೆರುಮಾಳ್ ದೇವಾಲಯವು ತನ್ನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯ ಸಾಧನೆಗಾಗಿ ವಿಶ್ವದಲ್ಲೇ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಗುಣಮಟ್ಟ ಸೇವಾ `ಐಎಸ್ ಓ 9001:2000' ಪ್ರಮಾಣಪತ್ರವನ್ನು ಪಡೆದುಕೊಂಡಿತು. 100 ವರ್ಷಗಳ ಹಿಂದೆ ನಿರ್ಮಿಸಲಾದ ಈ ವೈಷ್ಣವ ದೇವಾಲಯ `ಆಗ್ನೇಯ ಏಷ್ಯಾದ ತಿರುಪತಿ' ಎಂದೇ ಖ್ಯಾತಿ ಗಳಿಸಿದೆ. ಶಾಲೆಗಳು, ಅನಾಥಾಲಯಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಮಾನವೀಯ ಅಭಿವೃದ್ಧಿ ಕಾರ್ಯಗಳಿಗೆ ಈ ದೇವಾಲಯವು ನೆರವು ನೀಡುತ್ತಿದೆ.

2007: `ಪೈಲೆಟ್ ಬಾಬಾ' ಅವರ ಶಿಷ್ಯೆ ಜಪಾನಿನ ಕಿಕೊ ಅಜ- ಕಾವಾ (40) ಅವರು ಅಲಹಾಬಾದಿನ ಅರ್ಧ ಕುಂಭ ನಗರದಲ್ಲಿ ವಿಶ್ವಶಾಂತಿ ಹಾಗೂ ಜ್ಞಾನೋದಯಕ್ಕಾಗಿ ಕೈಗೊಂಡಿದ್ದ 72 ಗಂಟೆಗಳ ಸುದೀರ್ಘ ಸಮಾಧಿಯನ್ನು ಪೂರ್ಣಗೊಳಿಸಿ ಹೊರಬಂದರು. 9 ಅಡಿ ಆಳದ ಗುಂಡಿಯಲ್ಲಿ 3 ದಿನಗಳ ಕಾಲ ಧ್ಯಾನ ಕೈಗೊಂಡಿದ್ದ ಅವರನ್ನು ಮರಳಿನಿಂದ ಮುಚ್ಚಲಾಗಿದ್ದ ಗುಂಡಿಯ ಒಳಗಿಡಲಾದ ಪೆಟ್ಟಿಗೆಯಿಂದ ಹೊರತೆಗೆಯಲಾಯಿತು.

2007: ಇಂಡೋನೇಷ್ಯಾದ ಮೊಲುಕ್ಕಾ ಸಮುದ್ರದ ಅಡಿಯಲ್ಲಿ ಭಾರೀ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.3ರಷ್ಟಿತ್ತು.

2006: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕುತ್ತೂರಿನಲ್ಲಿ ಸಂಭವಿಸಿದ ಕಾರು ಮತ್ತು ಟೆಂಪೋ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ತಾಯಿ ರತ್ನಮ್ಮ ಹೆಗ್ಗಡೆ (78) ಮತ್ತು ಕಾರಿನ ಚಾಲಕ ಸಂಸೆ ನಿರಂಜನಕುಮಾರ್ ನಿಧನರಾದರು. ಕಾರು ಧರ್ಮಸ್ಥಳದಿಂದ ಕಾರ್ಕಳಕ್ಕೆ ಹೊರಟಿತ್ತು.

2006: ಸರ್ಬಿಯಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸುಮಾರು 2 ದಶಕಗಳ ಕಾಲ ಹೋರಾಟ ನಡೆಸಿ ಯಶಸ್ಸು ಪಡೆದ ಗಾಂಧಿವಾದಿ, ಕೊಸಾವೊ ಅಧ್ಯಕ್ಷ ಇಬ್ರಾಹಿಂ ರುಗ್ವೊ (61) ಸರ್ಬಿಯಾದ ಪ್ರಿಸ್ಟಿನಾದಲ್ಲಿ ನಿಧನರಾದರು.

2006: ಭಾರತೀಯ ವಿಜ್ಞಾನ ಮಂದಿರದ (ಐಐಎಸ್ಸಿ) ಮೇಲಿನ ದಾಳಿ ಪ್ರಕರಣದ ಸಂಬಂಧ ಬೆಂಗಳೂರಿನ ವಿಶೇಷ ಪೊಲೀಸ್ ತಂಡವು ಚಿಂತಾಮಣಿ ಸಮೀಪದ ನಿಗೂಢ ಸ್ಥಳದಲ್ಲಿ ಬಂಧಿತ ಉಗ್ರರು ಅಡಗಿಸಿ ಇಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ ಪಡಿಸಿಕೊಂಡಿತು. ಆರೋಪಿಗಳಾದ ಚಿಂತಾಮಣಿ ಮೂಲದ ಅಪ್ಸರ್ ಪಾಶ ಮತ್ತು ಉತ್ತರಪ್ರದೇಶ ಮೂಲದ ಮೌಲ್ವಿ ಮೊಹಮ್ಮದ್ ಇರ್ಫಾನ್ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು.

1972: ಮಣಿಪುರ, ಮಿಜೋರಂ ಮತ್ತು ತ್ರಿಪುರಾ ಪೂರ್ಣ ಪ್ರಮಾಣದ ರಾಜ್ಯಗಳಾದವು.

1954: ಅಮೆರಿಕಾದ ಮೊತ್ತ ಮೊದಲ ಪರಮಾಣು ಚಾಲಿತ ಜಲಾಂತರ್ಗಾಮಿ 'ನಾಟಿಲಸ್' ಕನೆಕ್ಟಿಕಟ್ಟಿನ ನಾಟಿಲಸ್ನಲ್ಲಿ ಚಾಲನೆಗೊಂಡಿತು.

1952: ಬಾಂಬೆಯ ಮುಖ್ಯಮಂತ್ರಿ ಬಿ.ಜಿ .ಖೇರ್ ಅವರು ಜಹಾಂಗೀರ್ ಆರ್ಟ್ ಗ್ಯಾಲರಿಯನ್ನು ಬಾಂಬೆಯಲ್ಲಿ ಈಗಿನ ಮುಂಬೈಯಲ್ಲಿ ಉದ್ಘಾಟಿಸಿದರು. ಸರ್ ಗೋಸ್ವಾಜೀ ಜಹಾಂಗೀರ್ ಅವರು 7,04,112 ರೂಪಾಯಿಗಳನ್ನು ದೇಣಿಗೆ ನೀಡಿದ ಕಾರಣ ಈ ಆರ್ಟ್ ಗ್ಯಾಲರಿಗೆ ಅವರ ಹೆಸರನ್ನೇ ಇಡಲಾಯಿತು. ತಮ್ಮ ಮೃತಪುತ್ರ ಜಹಾಂಗೀರ್ ನೆನಪಿಗಾಗಿ ಈ ದೇಣಿಗೆಯನ್ನು ಗೋಸ್ವಾಜೀ ನೀಡಿದರು.

1951: ಕಲಾವಿದೆ ಲಕ್ಷ್ಮಿ ಎಂ. ಜನನ.

1950: ಬ್ರಿಟಿಷ್ ಬರಹಗಾರ ಜಾರ್ಜ್ ಆರ್ವೆಲ್ ಕ್ಷಯರೋಗದ ಪರಿಣಾಮವಾಗಿ ಲಂಡನ್ನಿನಲ್ಲಿ ತಮ್ಮ 47ನೇ ವಯಸ್ಸಿನಲ್ಲಿ ಮೃತರಾದರು.

1945: ಭಾರತದ ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಟೋಕಿಯೋದಲ್ಲಿ ಮೃತರಾದರು.

1942: ಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ನರಸಿಂಹಲು ವಡವಾಟಿ ಅವರು ತಬಲಾವಾದಕ ಬುಡ್ಲಪ್ಪ- ಭಕ್ತಿಗೀತೆಗೆ ಗಾಯಕಿ ರಂಗಮ್ಮ ದಂಪತಿಯ ಮಗನಾಗಿ ರಾಯಚೂರು ಜಿಲ್ಲೆಯ ವಡವಾಟಿಯಲ್ಲಿ ಜನಿಸಿದರು.

1924: ಸೋವಿಯತ್ ಯೂನಿಯನ್ ಶಿಲ್ಪಿ, ನಿರ್ಮಾಪಕ ಹಾಗೂ ಮೊದಲ ಮುಖ್ಯಸ್ಥ ವ್ಲಾಡಿಮೀರ್ ಇಲಿಚ್ ಲೆನಿನ್ ತಮ್ಮ 53ನೇ ವಯಸ್ಸಿನಲ್ಲಿ ಮಾಸ್ಕೋ ಸಮೀಪದ ಗೋರ್ಕಿಯಲ್ಲಿ (ಈಗ ಗೋರ್ಕಿ ಲೆನಿನ್ ಸ್ಕೀ) ಪಾರ್ಶ್ವವಾಯುವಿಗೆ ತುತ್ತಾಗಿ ಅಸು ನೀಗಿದರು. ಮಹಾನ್ ಕ್ರಾಂತಿಕಾರಿ ಮುತ್ಸದ್ಧಿ ಎಂದು ಇವರು ಇತಿಹಾಸದಲ್ಲಿ ಪರಿಗಣಿತರಾಗಿದ್ದಾರೆ.

1924: ಹಿರಿಯ ರಾಜಕಾರಣಿ ಮಧು ದಂಡವತೆ ಈ ದಿನ ಜನಿಸಿದರು. ಲೋಕಸಭೆಗೆ ಐದು ಬಾರಿ ಆರಿಸಿ ಬಂದಿದ್ದ ದಂಡವತೆ ಇಂದಿರಾಗಾಂಧಿ ಮತ್ತು ರಾಜೀವಗಾಂಧಿ ಪ್ರಧಾನಿಯಾಗಿದ್ದಾಗ ವಿರೋಧ ಪಕ್ಷದ ಮುಖಂಡರಾಗಿದ್ದರು. ಮೊರಾರ್ಜಿ ದೇಸಾಯಿ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಇವರು ಭಾರತೀಯ ರೈಲೆಯಲ್ಲಿ ಕಂಪ್ಯೂಟರ್ ಪ್ರಕ್ರಿಯೆಗೆ ಮೂಲ ಕಾರಣರಾದ ವ್ಯಕ್ತಿ. ವಿ.ಪಿ. ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವ, 1990ರಲ್ಲಿ ಹಾಗೂ 1996ರಿಂದ 1998ರವರೆಗೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು. 2005ರ ನವೆಂಬರ್ 12ರಂದು ನಿಧನರಾದರು.

1793: ಹದಿನಾರನೇ ಲೂಯಿಯನ್ನು ಪ್ಯಾರಿಸ್ಸಿನಲ್ಲಿ ಗಿಲೊಟಿನ್ ಯಂತ್ರದ ಮೂಲಕ ಮರಣದಂಡನೆಗೆ ಗುರಿಪಡಿಸಲಾಯಿತು.

No comments:

Post a Comment