Monday, January 14, 2019

ಇಂದಿನ ಇತಿಹಾಸ History Today ಜನವರಿ 13

ಇಂದಿನ ಇತಿಹಾಸ History Today ಜನವರಿ 13
2019: ನವದೆಹಲಿ: ಲಡಾಖ್ ಎಂದರೆ ಜಮ್ಮು-ಕಾಶ್ಮೀರದ ಸುಂದರ ಚಿತ್ರಣ ಕಣ್ಣಮುಂದೆ ಮೂಡುತ್ತದೆ. ಅದರ ಜತೆಗೆ ಕಾಶ್ಮೀರದ ಸಂಘರ್ಷವೂ ನೆನಪಾಗುತ್ತದೆ. ಲಡಾಖ್ ಹಿರಿಮೆಗೆ ಮತ್ತೊಂದು ಗರಿ ಸೇರ್ಪಡೆಯಾಗುತ್ತಿದ್ದು, ಶೀಘ್ರದಲ್ಲೇ ಜಗತ್ತಿನ ಅತಿದೊಡ್ಡ ಸೋಲಾರ್ ಪ್ಲಾಂಟ್ ನಿರ್ಮಾಣವಾಗಲಿದೆ. ನೈಸರ್ಗಿಕ ಸೌಂದರ್ಯದ ಲಡಾಖ್ಗೆ ಪರಿಸರ ಮಾಲಿನ್ಯದಿಂದ ಪರಿಣಾಮವಾಗುತ್ತಿದ್ದು, ಅದನ್ನು ತಪ್ಪಿಸುವ ಜತೆಗೆ, ಅಲ್ಲಿನ ಅಭಿವೃದ್ಧಿಗೂ ಸೋಲಾರ್ ಪ್ಲಾಂಟ್ ನೆರವಾಗುತ್ತದೆ.  ಕಾರ್ಗಿಲ್ನಿಂದ ದಕ್ಷಿಣಕ್ಕೆ 200 ಕಿಮೀ. ದೂರದಲ್ಲಿ ಬೃಹತ್ ಸೋಲಾರ್ ಪ್ಲಾಂಟ್ ಸ್ಥಾಪನೆಯಾಗುತ್ತಿದ್ದು, ವರ್ಷದಲ್ಲಿ 12,750 ಟನ್ ಕಾರ್ಬನ್ ಮಾಲಿನ್ಯವನ್ನು ತಪ್ಪಿಸುತ್ತದೆ. ಜನರು ಡೀಸೆಲ್ ಜನರೇಟರ್ ಮೇಲೆ ಅವಲಂಬಿತವಾಗಿದ್ದು, ಲಡಾಖ್ ಸೋಲಾರ್ ಪ್ಲಾಂಟ್ 5000 ಮೆಗಾವ್ಯಾಟ್ ಸೋಲಾರ್ ಎನರ್ಜಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ. ಪ್ರಸ್ತುತ ಚೀನಾದ ಡಾಟೊಂಗ್ ಸೋಲಾರ್ ಪ್ಲಾಂಟ್ 3,000 ಮೆಗಾವ್ಯಾಟ್ ಸೋಲಾರ್ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದರೂ, 1,000 ಮೆಗಾವ್ಯಾಟ್ ಸೋಲಾರ್ ಎನರ್ಜಿ ನಿರ್ಮಿಸುತ್ತದೆ. ಸೋಲಾರ್ ಎನರ್ಜಿ ಕಾರ್ಪೋರೇಶನ್ ಆಫ್ ಇಂಡಿಯಾ ಲಡಾಖ್ನಲ್ಲಿ ಸೋಲಾರ್ ಪ್ಲ್ಯಾಂಟ್ ನಿರ್ಮಾಣ ಮಾಡುತ್ತಿದ್ದು, 45,000 ಕೋಟಿ ರೂ. ಹೂಡಿಕೆ ಮಾಡಿದ್ದು, 2023ಕ್ಕೆ ಪೂರ್ತಿಯಾಗಲಿದೆ.

2019: ಲಕ್ನೋ: ರಾಷ್ಟ್ರವ್ಯಾಪಿ ಮಹಾಘಟಬಂಧನ್ ರಚಿಸುವ ತನ್ನ ಕನಸಿಗೆ ಕೊಡಲಿಏಟು ಹಾಕಿ  ತನ್ನನ್ನು ಮೂಲೆಗೆ ತಳ್ಳಿ ಮೈತ್ರಿಕೂಟ ರಚಿಸಿಕೊಂಡ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷಕ್ಕೆ (ಬಿಎಸ್ಪಿ), ಸೆಡ್ಡು ಹೊಡೆದಿರುವ ಕಾಂಗ್ರೆಸ್ ತಾನು ಉತ್ತರ ಪ್ರದೇಶದ ಎಲ್ಲ ೮೦ ಲೋಕಸಭಾ ಸ್ಥಾನಗಳಿಗೂ ಸ್ಪರ್ಧಿಸುವುದಾಗಿ ಪ್ರಕಟಿಸಿತು ಮತ್ತು ಎಲ್ಲ ಜಾತ್ಯತೀತ ಪಕ್ಷಗಳನ್ನು ಒಟ್ಟಿಗೆ ಒಯ್ಯದೇ ಇರುವುದಕ್ಕಾಗಿ ಮೈತ್ರಿಕೂಟವನ್ನು ದೂಷಿಸಿತು.  ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಉತ್ತರ ಪ್ರದೇಶದ ಎಲ್ಲ ೮೦ ಸ್ಥಾನಗಳಿಗೂ ಸ್ಪರ್ಧಿಸುತ್ತೇವೆ. ೨೦೦೯ರಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ನಂಬರ್ ಪಕ್ಷವಾಗಿ ಹೇಗೆ ಬಂದಿತ್ತೋ ಅದೇ ರೀತಿಯಾಗಿ ಬಾರಿಯೂ ನಾವು ಸಂಪೂರ್ಣ ಸಿದ್ಧರಾಗಿದ್ದೇವೆ. ನಾವು ಸ್ವಂತ ಬಲದಿಂದಲೇ ಹೋರಾಡುತ್ತೇವೆ ಮತ್ತು ಮುಂಬರುವ ಚುನಾವಣೆಗಳಲ್ಲಿ ದುಪ್ಪಟ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು೨೦೧೪ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ ಸ್ಥಾನ ಗೆದ್ದಿದ್ದರೆ ಬಿಎಸ್ಪಿ ಶೂನ್ಯ ಸಾಧನೆ ಮಾಡಿತ್ತು.   ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ಪಿ ಅಧ್ಯಕ್ಷ ಅಖಿಲೇಶ್ ಸಿಂಗ್ ಯಾದವ್ ಅವರು ಉಭಯ ಪಕ್ಷಗಳು ತಲಾ ೩೮ ಸ್ಥಾನಗಳಿಗೆ ಸ್ಪರ್ಧಿಲಿದ್ದು, ಅಮೇಥಿ ಮತ್ತು ರಾಯ್ ಬರೇಲಿ ಸ್ಥಾನಗಳನ್ನು ಕಾಂಗೆಸ್ಸಿಗೆ ಬಿಡುವುದಾಗಿಯೂ, ಉಳಿದ ಎರಡು ಸ್ಥಾನಗಳನ್ನು ಇತರ ಮಿತ್ರ ಪಕ್ಷಗಳಿಗೆ ಬಿಟ್ಟು ಬಿಡುವುದಾಗಿ ಪ್ರಕಟಿಸಿದ್ದರು. ತಮ್ಮ ಪಕ್ಷವು ಕಾಂಗ್ರೆಸ್ ಜೊತೆಗಿನ ಮೈತ್ರಿಯಿಂದ ಏನನ್ನೂ ಗಳಿಸಿಲ್ಲ ಎಂದು ಹೇಳಿದ್ದ ಮಾಯಾವತಿ ಅವರುಹಿಂದುಳಿದ ಜಾತಿಗಳ ದುರವಸ್ಥೆಗೆ ಕಾಂಗ್ರೆಸ್ಸೇ ಕಾರಣ ಎಂದು ದೂರಿದ್ದರುಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ೨೦೧೭ರಲ್ಲಿ ಮಾಡಿಕೊಳ್ಳಲಾಗಿದ್ದ ಸಮಾಜವಾದಿ ಪಕ್ಷದ ಜೊತೆಗಿನ ಕಾಂಗ್ರೆಸ್ ಮೈತ್ರಿಯನ್ನು ಉಲ್ಲೇಖಿಸಿದ ಆಜಾದ್ ಅವರು ಮೈತ್ರಿಯನ್ನು ನಾವು ಮುರಿಯಲಿಲ್ಲ, ಜನರು ಇದನ್ನು ತಿಳಿದುಕೊಳ್ಳಬೇಕು. ಬಿಜೆಪಿಯನ್ನು ಪರಾಭವಗೊಳಿಸಲು ಬಯಸುವ ಪ್ರತಿಯೊಂದು ಪಕ್ಷದ ಜೊತೆಗೂ ನಡೆಯಲು ಪಕ್ಷವು ಸಿದ್ಧವಿದೆ ಎಂದು ನಾವು ಹಿಂದೆಯೇ ಹೇಳಿದ್ದೆವು. ಅವರು (ಎಸ್ಪಿ- ಬಿಎಸ್ಪಿ) ಅಧ್ಯಾಯಕ್ಕೆ ತೆರೆ ಎಳೆದಿದ್ದಾರೆ. ಆದ್ದರಿಂದ ನಾವು ಬಿಜೆಪಿಯನ್ನು ಪರಾಭವಗೊಳಿಸಲು ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಆಜಾದ್ ನುಡಿದರು. ಒಳಜಗಳ ಕೊನೆಗೊಳಿಸಿ, ಚುನಾವಣೆಗಳಿಗಾಗಿ ಸಜ್ಜಾಗುವಂತೆ ಆಜಾದ್ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು. ಎಸ್ಪಿ ಮತ್ತು ಬಿಎಸ್ಪಿ ಮೈತ್ರಿಕೂಟ ರಚಿಸಿದ್ದನ್ನು ಪ್ರಕಟಿಸಿದ ಕೆಲವು ಗಂಟೆಗಳ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದುಬೈಯಲ್ಲಿ ಮಾತನಾಡುತ್ತಾ ತಮ್ಮ ಪಕ್ಷವು ರಾಜ್ಯದಲ್ಲಿ ಏಕಾಂಗಿಯಾಗಿ ತನ್ನ ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಡುವುದು ಎಂದು ಹೇಳಿದ್ದರು. ಬಿಎಸ್ಪಿ ಮತ್ತು ಎಸ್ಪಿ ರಾಜಕೀಯ ತೀರ್ಮಾನ ಮಾಡಿವೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಹೇಗೆ ಬಲಪಡಿಸಬೇಕು ಎಂಬ ಬಗ್ಗೆ ಗಮನ ಹರಿಸುವುದು ಈಗ ನಮ್ಮ ಜವಾಬ್ದಾರಿ. ನಾವು ಪೂರ್ಣ ಸಾಮರ್ಥ್ಯದೊಂದಿಗೆ ಹೋರಾಟ ನಡೆಸುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
                                                                                          
2019: ನವದೆಹಲಿ: ’ಮೀನು ಮಾರಾಟದ ಮೇಲೆ ನಡೆದ ಕಿತ್ತಾಟ ಭಾರತದ ವಿಭಜನೆಗೆ ಕಾರಣವಾಯಿತೇ? ಮಾಜಿ ಕೇಂದ್ರ ಸಚಿವ ಹಾಗೂ ಏಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಶಕೀಲ್ ಅಹ್ಮದ್ ಅವರ ಹೇಳಿಕೆಯನ್ನು ನಂಬುವುದಾದರೆ ಹೌದು ಎಂದು ಹೇಳಬೇಕಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿತು. ನವದೆಹಲಿಯ ಕಾನ್ಸಿಟ್ಯೂಷನ್ ಕ್ಲಬ್ನಲ್ಲಿ ನಡೆದ ಪುಸ್ತಕವೊಂದರ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಅಹ್ಮದ್ ಅವರು ಮಹಮ್ಮದ್ ಅಲಿ ಜಿನ್ನಾ ಅವರ ಅಜ್ಜ ಪ್ರೇಮ್ ಜಿ ಭಾಯಿ ಥಕ್ಕರ್ ಅವರು ಗುಜರಾತಿನ ಕರಾವಳಿ ಪಟ್ಟಣವಾದ ವೆರಾವಲ್ನಲ್ಲಿ ಮೀನು ಮಾರಾಟ ವ್ಯವಹಾರ ಆರಂಭಿಸಲು ನಿರ್ಧರಿಸಿದ್ದು ಇದೆಲ್ಲಕ್ಕೆ ಮೂಲವಾಯಿತು ಎಂದು ಹೇಳಿದರು. ಮೀನು ಮಾರಾಟ ವ್ಯವಹಾರ ಆರಂಭಿಸಿದ್ದಕ್ಕಾಗಿ  ಮಹಮ್ಮದ್ ಅಲಿ ಜಿಲ್ಲಾ ಅವರ ಅಜ್ಜ ಪ್ರೇಮ್ ಜಿ ಭಾಯಿ ಥಕ್ಕರ್ ಅವರನ್ನು ಶುದ್ಧ ಶಾಕಾಹಾರಿ (ಸಸ್ಯಾಹಾರಿ) ಲೋಹನಾಸ್ ಸಮುದಾಯದಿಂದ ಹೊರಹಾಕಲಾಗಿತ್ತಂತೆ. ಸಮುದಾಯವು ದುಧಿ ರಜಪೂತ್ ಸಮುದಾಯದ ಉಪಜಾತಿಯಾಗಿದೆ. ಮುಂದೆ ಶ್ರೀಮಂತ ವರ್ತಕನಾಗಲು ಕರಾಚಿಗೆ ಸ್ಥಳಾಂತರಗೊಂಡಿದ್ದ ಪ್ರೇಮ್ ಜಿ ಅವರು ಕೆಲ ವರ್ಷಗಳ ಬಳಿಕ ಸಮುದಾಯಕ್ಕೆ ಪುನಃ ಸೇರ್ಪಡೆಯಾಗಲು ಯತ್ನಿಸಿದರು. ಆಗ ಮೀನು ಮಾರಾಟ ವ್ಯವಹಾರವನ್ನು ಅವರು ಬಿಟ್ಟು ಬಿಟ್ಟಿದ್ದರೂ, ಅವರಿಗೆ ಪುನಃ ಸಮುದಾಯ ಸೇರಲು ಸಮಾಜ ಅವಕಾಶ ನೀಡಲಿಲ್ಲ. ಆಗ ಪ್ರೇಮ್ ಜಿ ಮತ್ತು ಅವರ ಪುತ್ರ ಪಂಜಾಲಾಲ್ ಥಕ್ಕರ್ ಸಿಟ್ಟಿಗೆದ್ದು ಇಸ್ಲಾಮ್ ಗೆ ಮತಾಂತರಗೊಂಡರುಪಂಜಾಲಾಲ್ (೧೮೫೭-೧೯೦೨) ಅವರು ತಮ್ಮ ಮಕ್ಕಳಿಗೆ ಮುಸ್ಲಿಮ್ ಹೆಸರುಗಳನ್ನು ಇಟ್ಟರು. ಕಾಕತಾಳೀಯವಾಗಿ ಪಂಜಾಲಾಲ್ ಅವರ ಗುಜರಾತಿನಜಿನ್ನೋ (ತೊಗಲು, ಚರ್ಮ ಎಂಬ ಅರ್ಥ) ಎಂಬ ಅಡ್ಡ ಹೆಸರಿನಿಂದ ಕುಟುಂಬಕ್ಕೆಜಿನ್ನಾ ಅಡ್ಡ ಹೆಸರು ಅಂಟಿಕೊಂಡಿತು. ಕೆಲವು ವಿಧ್ವಾಂಸರ ಪ್ರಕಾರ ಜಿನ್ನಾ ಅವರ ಅಜ್ಜ ಮತ್ತು ತಂದೆ ಎರಡೆರಡು ಬಾರಿ ಅಂದರೆ ಮೊದಲುಇಸ್ಮಾಯಿಲಿ ಪಂಗಡ ಮತ್ತು ನಂತರಶಿಯಾ ಪಂಗಡಕ್ಕೆ ಮತಾಂತರಗೊಂಡಿದ್ದರು. ಪ್ರೇಮ್ ಜಿ ಮತ್ತು ಪಂಜಾಲಾಲ್ ಅವರು ಜಾತಿ ಬಹಿಷ್ಕಾರಕ್ಕೆ ಒಳಗಾಗದೇ ಇದ್ದರೆ ಅವರು ಇಸ್ಲಾಮಿಗೆ ಮತಾಂತರಗೊಳ್ಳುತ್ತಿರಲಿಲ್ಲ. ರಾಷ್ಟ್ರವೂ ವಿಭಜನೆಗೆ ಗುರಿಯಾಗಿ ಬಳಿಕ ಸಂಭವಿಸಿದ ಹಿಂಸಾಚಾರದ ದಳ್ಳುರಿಗೆ ಲಕ್ಷಾಂತರ ಜನ ಬಲಿಯಾಗುವುದು ತಪ್ಪುತ್ತಿತ್ತು ಎಂದು ಡಾ. ಶಕೀಲ್ ಅಹ್ಮದ್ ಹೇಳಿದರುಯುಎನ್ ಎಚ್ ಸಿಆರ್ ಪ್ರಕಾರ ರಾಷ್ಟ್ರ ವಿಭಜನೆ ಬಳಿಕ ಸಂಭವಿಸಿದ ಹಿಂಸಾಚಾರದ ಪರಿಣಾಮವಾಗಿ ೧೪ ದಶಲಕ್ಷ ಮಂದಿ ನಿರ್ಗತಿಕರಾದರು. ’ದೇವರು ಭೂತಕಾಲವನ್ನು ಬದಲಾಯಿಸಲಾರ, ಆದರೆ ಇತಿಹಾಸಕಾರರು ಬದಲಾಯಿಸಬಲ್ಲರು ಎಂದು ಸ್ಯಾಮ್ಯುಯೆಲ್ ಬಟ್ಲರ್ ಹೇಳಿದಂತೆ, ಅಕ್ಬರ್ ಅಹ್ಮದ್ ಅವರಂತಹ ಪಾಕಿಸ್ತಾನದ ಹಲವಾರು ಇತಿಹಾಸಕಾರರು ಜಿನ್ನಾ ಅವರ ಕುಟುಂಬದ ಹಿಂದೂ ಪೂರ್ವಜರ ಬಗ್ಗೆ ವಿವರಣೆ ನೀಡಿದ್ದಾರೆರಜಪೂತ್ ಆಗಿ ಜನಿಸಿದ್ದ ಜಿನ್ನಾ ಅವರ ತಂದೆ ಇಸ್ಮಾಯಿಲಿ ಖೋಜಾ ಕುಟುಂಬದ ಮಹಿಳೆಯನ್ನು ಮದುವೆಯಾದರು ಮತ್ತು ಇಸ್ಲಾಮಿಗೆ ಮತಾಂತರಗೊಂಡರು ಎಂದು ಅವರು ವಿವರಿಸಿದರು. ಡಾ. ಶಕೀಲ್ ಅಹ್ಮದ್ ಅವರ ಪ್ರಕಾರ ಮೀನಿನ ವ್ಯಾಪಾರ, ನಿಷ್ಠುರ ಜಾತಿ ವ್ಯವಸ್ಥೆ ಭಾರತ ಉಪಖಂಡದ ವಿಭಜನೆಗೆ ಕಾರಣವಾಯಿತು. ಯಾವುದೇ ಮುಸ್ಲಿಮ್ ಆಡಳಿತಗಾರ ಭಾರತವನ್ನು ವಿಭಜಿಸಲು ಯತ್ನಿಸಲಿಲ್ಲ. ಆದರೆ ಬ್ರಿಟಿಷರು ಜಿನ್ನಾರಲ್ಲಿ ಭಾರತವನ್ನು ವಿಭಜಿಸಲು ಬಯಸುತ್ತಿದ್ದನಟನನ್ನು ಕಂಡರು. ಸೂಕ್ಷ್ಮತೆ ಇಲ್ಲದ, ನಿಷ್ಠುರ ಜಾತಿ ವ್ಯವಸ್ಥೆ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಬಯಕೆ ಬಹುಶಃ ಜಿನ್ನಾ ಅವರ ಒಳಪ್ರಜ್ಞೆಯಲ್ಲಿ ಎಲ್ಲೋ ಇದ್ದಿರಬಹುದು ಎಂದು ಶಕೀಲ್ ಅಹ್ಮದ್ ನುಡಿದರುಖ್ಯಾತ ವಿಧ್ವಾಂಸ ಹಾಗೂ ಸಂಸತ್ ಪಟು ದಿವಂಗತ ಡಾ. ಮೊಹಮ್ಮದ್ ಹಾಸಿಮ್ ಕಿದ್ವಾಯಿ ಅವರ ಸ್ಮರಣಾರ್ಥ ಅವರ ಪುತ್ರ ಡಾ. ಸಲೀಮ್ ಕಿದ್ವಾಯಿ ಅವರು ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಡಾ. ಅಹ್ಮದ್ ಮುಖ್ಯ ಅತಿಥಿಯಾಗಿದ್ದರು. ಜಿನ್ನಾ ಅವರ ವಂಶಸ್ಥರಲ್ಲಿ ಖ್ಯಾತ ಕೈಗಾರಿಕೋದ್ಯಮಿ ನುಸ್ಲಿ ವಾಡಿಯಾ ಅವರು ಒಬ್ಬರಾಗಿದ್ದಾರೆ. ಜಿನ್ನಾ ಅವರ ಏಕೈಕ ಪುತ್ರಿ ದೀನಾ ವಾಡಿಯಾ ಅವರು ತಂದೆಯ ಆಶಯಕ್ಕೆ ವಿರುದ್ಧವಾಗಿ ಭಾರತೀಯ ಪೌರತ್ವವನ್ನು ಉಳಿಸಿಕೊಂಡು ನೆವಿಲ್ಲೆ ವಾಡಿಯಾ ಅವರನ್ನು ಮದುವೆಯಾಗಿದ್ದರು. ಪಾರ್ಸಿಯಾಗಿ ಜನಿಸಿದ್ದ ನೆವಿಲ್ಲೆ ವಾಡಿಯಾ ಅವರು ಬಳಿಕ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರುಖ್ಯಾತ ಉದ್ಯಮಿಯಾಗಿರುವ ನುಸ್ಲಿ ವಾಡಿಯಾ ಅವರು ನೆವಿಲ್ಲೆ ವಾಡಿಯಾ- ದೀನಾ ವಾಡಿಯಾ ದಂಪತಿಯ ಪುತ್ರರಾಗಿದ್ದಾರೆ.

2019: ನವದೆಹಲಿ: ಭಾರತ ಮತ್ತು ಚೀನಾ ನಡುವಣ ಗಡಿಯುದ್ದಕ್ಕೂ ೪೪ ಯುದ್ಧಾನುಕೂಲಿ ಆಯಕಟ್ಟಿನ ರಸ್ತೆಗಳು ಮತ್ತು ಪಂಜಾಬ್ ಮತ್ತು ರಾಜಸ್ಥಾನ ಗಡಿಯಲ್ಲಿ ೨೧೦೦ ಕಿಮೀ ಉದ್ದದ ಅಕ್ಷೀಯ ಮತ್ತು ಪಾರ್ಶ್ವ ರಸ್ತೆಗಳನ್ನು ನಿರ್ಮಿಸಲು ಭಾರತ ಸರ್ಕಾರ ಮುಂದಾಯಿತು.  ಕೇಂದ್ರೀಯ ಲೋಕೋಪಯೋಗಿ ಇಲಾಖೆಯ (ಸಿಪಿಡಬ್ಲ್ಯೂಡಿ) ವಾರ್ಷಿಕ ವರದಿಯಲ್ಲಿ (೨೦೧೮-೧೯) ವಿಚಾರವನ್ನು ವಿವರಿಸಲಾಯಿತು.  ವರದಿಯ ಪ್ರಕಾರ ಕೇಂದ್ರೀಯ ಲೋಕೋಪಯೋಗಿ ಇಲಾಖೆಗೆಆಯಕಟ್ಟಿನ ದೃಷ್ಟಿಯಿಂದ ಮಹತ್ವವಾಗಿರುವ ೪೪ ರಸ್ತೆಗಳನ್ನು ಭಾರತ- ಚೀನಾ ಗಡಿಯಲ್ಲಿ ನಿರ್ಮಿಸುವಂತೆ ಸೂಚನೆ ನೀಡಲಾಯಿತು.  ಯುದ್ಧ ಸಂಭವಿಸಿದರೆ ಸುಲಲಿತವಾಗಿ ಸೇನೆ ಸಾಗಣೆಯನ್ನು ಖಚಿತ ಪಡಿಸುವ ಸಲುವಾಗಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ ಎಂದು ವರದಿ ತಿಳಿಸಿತು.  ಭಾರತ ಮತ್ತು ಚೀನಾ ನಡುವಣ ೪೦೦೦ ಕಿಮೀ ಉದ್ದದ ನೈಜ ನಿಯಂತ್ರಣ ರೇಖೆಯು ಜಮ್ಮು ಮತ್ತು ಕಾಶ್ಮೀರದಿಂದ ಅರುಣಾಚಲ ಪ್ರದೇಶದವರೆಗೆ ವ್ಯಾಪಿಸಿದೆ. ಭಾರತ ಜೊತೆಗಿನ ತನ್ನ ಗಡಿಯಲ್ಲಿ ಚೀನಾವು ವಿವಿಧ ಯೋಜನೆಗಳಿಗೆ ಆದ್ಯತೆ ನೀಡುತ್ತಿರುವ ಸಮಯದಲ್ಲೇ ವರದಿ ಬೆಳಕು ಕಂಡಿರುವುದು ಮಹತ್ವವಾಗಿದೆಕಳೆದ ವರ್ಷ, ಡೊಕ್ಲಾಮ್ ಟ್ರೈ ಜಂಕ್ಷನ್ (ಮೂರು ರಾಷ್ಟ್ರಗಳ ಗಡಿಗಳು ಕೂಡುವ ಜಾಗ) ಪ್ರದೇಶದಲ್ಲಿ ಚೀನಾವು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದಾಗ ಭಾರತ ಮತ್ತು ಚೀನೀ ಪಡೆಗಳು ಪರಸ್ಪರ ಮುಖಾಮುಖಿಯಾಗಿ ಉದ್ವಿಗ್ನತೆ ಉಂಟಾಗಿತ್ತು ಪರಿಸ್ಥಿತಿ ಆಗಸ್ಟ್ ೨೮ರಂದು ಉಭಯ ರಾಷ್ಟ್ರಗಳು ಪರಸ್ಪರರಿಗೆ ಒಪ್ಪಿಗೆಯಾಗುವಂತಹ ಒಪ್ಪಂದಕ್ಕೆ ಸಹಿ ಹಾಕುವವರೆಗೂ ಮುಂದುವರೆದಿತ್ತು. ಒಪ್ಪಂದದ ಬಳಿಕ ಚೀನಾವು ರಸ್ತೆ ನಿರ್ಮಾಣ ಕಾರ್ಯವನ್ನು ನಿಲ್ಲಿಸಿತ್ತು. ಭಾರತವೂ ತನ್ನ ಸೇನೆಯನ್ನು ಹಿಂತೆಗೆದುಕೊಂಡಿತ್ತು.  ಭಾರತ ಮತ್ತು ಚೀನಾ ಗಡಿಯಲ್ಲಿ ೪೪ ಆಯಕಟ್ಟಿನ ರಸ್ತೆಗಳನ್ನು ಅಂದಾಜು ೨೧,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ವರದಿ ಹೇಳಿತು.  ‘ಸಿಪಿಡಬ್ಲ್ಯೂಡಿಗೆ ಭಾರತ- ಚೀನಾ ಗಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಮ್ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳನ್ನು ಸಂಪರ್ಕಿಸುವ ಪ್ರದೇಶಗಳಲ್ಲಿ ಆಯಕಟ್ಟಿನ ದೃಷ್ಟಿಯಿಂದ ಮಹತ್ವದ್ದಾಗಿರುವ ೪೪ ರಸ್ತೆಗಳ ನಿರ್ಮಾಣ ಕಾರ್ಯವನ್ನು ವಹಿಸಲಾಗಿದೆ.’ ಎಂದು ವರದಿ ತಿಳಿಸಿತು. ಕಾಮಗಾರಿಯ ಒಟ್ಟು ವೆಚ್ಚ ಡಿಪಿಆರ್ಗಳ (ವಿಸ್ತೃತ ಯೋಜನಾ ವರದಿಗಳು) ಪ್ರಕಾರ ೨೧,೦೪೦ ಕೋಟಿ ರೂಪಾಯಿಗಳು (ಅಂದಾಜು)’ ಎಂದು ವರದಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯಿಂದ (ಸಿಸಿಎಸ್) ವಿಸ್ತೃತ ಯೋಜನಾ ವರದಿಗೆ ಅನುಮೋದನೆ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ವರದಿ ತಿಳಿಸಿತು.  ಇದಲ್ಲದೆ, ಅಂದಾಜು ೫೪೦೦ ಕೋಟಿ ರೂಪಾಯಿ ವೆಚ್ಚದಲ್ಲಿ ೨೧೦೦ ಕಿಮೀ ಉದ್ದದ ಅಕ್ಷೀಯ ಮತ್ತು ಪಾರ್ಶ್ವ ರಸ್ತೆಗಳನ್ನು ರಾಜಸ್ಥಾನ ಮತ್ತು ಪಂಜಾಬಿನಲ್ಲಿನ  ಭಾರತ-ಪಾಕ್ ಗಡಿಯಲ್ಲಿ ನಿರ್ಮಿಸಲಾಗುವುದು ಎಂದೂ ಸಿಪಿಡಬ್ಲ್ಯೂಡಿ ವರದಿ ಹೇಳಿದೆ. ಇದಕ್ಕೆ ಸಂಬಂಧಿಸಿದ ವಿಸ್ತೃತ ಯೋಜನಾ ವರದಿಯನ್ನು ಸಿಪಿಡಬ್ಲ್ಯೂಡಿ ಸಿದ್ಧ ಪಡಿಸುತ್ತಿದೆಒಟ್ಟು ೯೪೫ ಕಿಮೀ ಉದ್ದದ ಪಾರ್ಶ್ವ ರಸ್ತೆಗಳು ಮತ್ತು ೫೩೩ ಕಿಮೀ ಉದ್ದದ ಅಕ್ಷೀಯ ರಸ್ತೆಗಳು ರಾಜಸ್ಥಾನದಲ್ಲಿ ಬರುತ್ತಿದ್ದು (ಅಂದಾಜು ೩೭೦೦ ಕೋಟಿ ರೂಪಾಯಿಗಳು), ೪೮೨ ಕಿಮೀ ಉದ್ದದ ಪಾರ್ಶ್ವ ರಸ್ತೆಗಳು ಮತ್ತು ೨೧೯ ಕಿಮೀ ಉದ್ದದ ಅಕ್ಷೀಯ ರಸ್ತೆಗಳು ಪಂಜಾಬಿನಲ್ಲಿ (ಅಂದಾಜು ವೆಚ್ಚ ,೭೫೦ ಕೋಟಿ ರೂಪಾಯಿಗಳು) ಬರುತ್ತವೆ ಎಂದು ವರದಿ ಹೇಳಿತು. ರಸ್ತೆ ಯೋಜನೆಗಳು ರಾಜಸ್ಥಾನ ಮತ್ತು ಪಂಜಾಬಿನ ವಿಸ್ತಾರವಾದ ಮತ್ತು ದೂರದ ಗಡಿ ಪ್ರದೇಶಗಳಿಗೆ ಭದ್ರತೆ ಒದಗಿಸುವುದು ಎಂದು ವರದಿ ತಿಳಿಸಿತು. ಪಾಕಿಸ್ತಾನ ಜೊತೆಗಿನ ಭಾರತದ ಗಡಿಯು ಜಮ್ಮು ಮತ್ತು ಕಾಶ್ಮೀರ, (೧೨೨೫ ಕಿಮೀ ಇದರಲ್ಲಿ ೭೪೦ ಕಿಮೀ ನಿಯಂತ್ರಣ ರೇಖೆ ಸೇರಿದೆ), ರಾಜಸ್ಥಾನ (,೦೩೭ ಕಿ.ಮೀಮತ್ತು ಪಂಜಾಬ್ (೫೩೩ ಕಿಮೀ) ಹಾಗೂ ಗುಜರಾತ್ (೫೦೮ ಕಿಮೀ) ರಾಜ್ಯಗಳಲ್ಲಿ ವ್ಯಾಪಿಸಿದೆ.
.
2019: ಚೆನ್ನೈಬಿಜೆಪಿ ವಿರುದ್ಧಮಹಾಘಟಬಂಧನ್ ಕಟ್ಟಲು ಹೊರಟಿರುವ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಕ್ ಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರುಬಿಜೆಪಿಯು ರಾಷ್ಟ್ರಸೇವೆಗಾಗಿ ಟೊಂಕ ಕಟ್ಟಿ ನಿಂತಿದೆ, ಆದರೆ ಇನ್ನೊಂದೆಯಲ್ಲಿ ವಂಶಾಡಳಿತದ ಪಕ್ಷಗಳುಅವಕಾಶವಾದಿ ಮೈತ್ರಿಕೂಟಗಳನ್ನು ರಚಿಸಿಕೊಂಡಿವೆ ಎಂದು ಹೇಳಿದರು.  ಬಿಜೆಪಿ ವಿರುದ್ಧದ ಮೈತ್ರಿಕೂಟಅಲ್ಪಾವಧಿಯದ್ದು, ಸಂಬಂಧಪಟ್ಟ ಪಕ್ಷಗಳಿಗೆ ಲಾಭಗಳನ್ನು ಮಾಡಿಕೊಳ್ಳುವ ಉದ್ದೇಶಕ್ಕಾಗಿ ಮೈತ್ರಿಕೂಟ ರಚಿಸಿ ಕೊಳ್ಳಲಾಗುತ್ತಿದೆ.  ’ಅವರು ತಮ್ಮ ಸ್ವಂತ ಸಾಮ್ರಾಜ್ಯ  ಸ್ಥಾಪಿಸಿಕೊಳ್ಳಲು ಬಯಸಿದ್ದಾರೆ ಆದರೆ ನಾವು ಜನರನ್ನು ಸಬಲರನ್ನಾಗಿಸಲು ಬಯಸಿದ್ದೇವೆ ಎಂದು ಪ್ರಧಾನಿ ನುಡಿದರು. ಇತರ ಪಕ್ಷಗಳಂತೆ ನಾವು ಒಡೆದು ಆಳುವ ರಾಜಕೀಯವನ್ನು ಮಾಡುತ್ತಿಲ್ಲ ಮತ್ತು ವೋಟ್ ಬ್ಯಾಂಕ್ ಕಟ್ಟಿಕೊಳ್ಳುವುದಿಲ್ಲ. ನಾವು ಪ್ರತಿಯೊಂದು ಮಾರ್ಗದ ಮೂಲಕವೂ ರಾಷ್ಟ್ರದ ಸೇವೆ ಮಾಡುವ ಸಲುವಾಗಿ ಇಲ್ಲಿದ್ದೇವೆ ಎಂದು ತಮಿಳುನಾಡಿನ ಐದು ಸಂಸದೀಯ ಕ್ಷೇತ್ರಗಳ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರ ಜೊತೆ ನಡೆಸಿದ ಸಂವಹನದಲ್ಲಿ ಮೋದಿ ನುಡಿದರುಮುಂಬರುವ ಚುನಾವಣೆಯು ಬಿಜೆಪಿಗೆ ಮತ್ತು ರಾಷ್ಟ್ರಕ್ಕೆ ನಮ್ಮ ಅಭಿವೃದ್ಧಿ ಕಾರ್ಯಸೂಚಿ ವಿಸ್ತರಣೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಒಂದೆಡೆಯಲ್ಲಿ ನಾವು ಅಭಿವೃದ್ಧಿ ಕಾರ್ಯಸೂಚಿಯನ್ನು ಇಟ್ಟುಕೊಂಡಿದ್ದೇವೆ. ಇನ್ನೊಂದೆಡೆಯಲ್ಲಿ ವಂಶಾಡಳಿತದ ಪಕ್ಷಗಳು ಅವಕಾಶವಾದಿ ಮೈತ್ರಿಕೂಟಗಳನ್ನು ರಚಿಸಿಕೊಂಡಿವೆ ಎಂದು ಯಾರ ಹೆಸರನ್ನೂ ಉಲ್ಲೇಖಿಸದೆಯೇ ಮೋದಿ ಟೀಕಿಸಿದರು. ಮೋದಿ ಕೆಟ್ಟವನಾಗಿದ್ದರೆ ಮತ್ತು ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದಾದರೆ ಮೈತ್ರಿಕೂಟ ರಚಿಸಿಕೊಳ್ಳುವ ಅಗತ್ಯ ಏನಿದೆ? ನಿಮಗೆ ನಿಮ್ಮ ಬಗ್ಗೆ ಆತ್ಮವಿಶ್ವಾಸ ಇಲ್ಲವೇ? ಅವರಿಗೆ ಇದು ಕೆಲಸ ಮಾಡುವ ಸರ್ಕಾರ ಎಂಬುದು ಗೊತ್ತಿದೆ ಎಂದು ಪ್ರಧಾನಿ ವಿಪಕ್ಷಗಳ ಕಡೆಗೆ ಬಲವಾಗಿ ಚಾಟಿ ಬೀಸಿದರುಯುವಕರು, ರೈತರು ಮತ್ತು ಮಹಿಳೆಯರು ಸೇರಿದಂತೆ ಸಮಾಜದ ಹಲವಾರು ವರ್ಗಗಳು ಬಿಜೆಪಿ ಸರ್ಕಾರದ  ಜೊತೆಗೆ ಬಲವಾದ ಬಾಂಧವ್ಯ ಹೊಂದಿವೆ ಎಂದು ಅವರು ನುಡಿದರುಕೇಸರಿ ಪಕ್ಷಕ್ಕೆ ವಿರುದ್ಧವಾಗಿ ಉತ್ತರಪ್ರದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಾಗಿ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮೈತ್ರಿಕೂಟ ರಚಿಸಿಕೊಂಡಿರುವುದನ್ನು ಪ್ರಕಟಿಸಿದ ಒಂದು ದಿನದ ಬಳಿಕ ಮೋದಿ ಅವರಿಂದ ಟೀಕೆಗಳು ಬಂದವು.

2019: ನವದೆಹಲಿ: ಗ್ರಾಹಕ ಮಿತ್ರ ಕ್ರಮ ಒಂದರಲ್ಲಿ ಗ್ರಾಹಕರಿಗೆ ತಾವು ಯಾವುದೇ ತೆರಿಗೆ ವಿಧಿಸುತ್ತಿಲ್ಲ ಎಂಬುದಾಗಿ ವ್ಯಾಪಾರಿಗಳು ಖಚಿತ ಪಡಿಸುವ ಸಲುವಾಗಿ, ಸಂಯೋಜನೆ ವ್ಯಾಪಾರಿಗಳು ಮತ್ತು ಸೇವಾದಾರರಿಗೆ (ಕಂಪೋಸಿಷನ್ ಡೀಲರ್ಸ್) ತಮ್ಮ ಇನ್ವಾಯ್ಸ್ ಗಳಲ್ಲಿ ತಮ್ಮ ಜಿಎಸ್ಟಿ ನೋಂದಣಿ ಘೋಷಣೆ ಮಾಡುವುದನ್ನು ಕಡ್ಡಾಯಗೊಳಿಸಲು ಕಂದಾಯ ಇಲಾಖೆಯು ಯೋಜಿಸಿತು. ಈ ಕ್ರಮ ಜಾರಿಯಾದಲ್ಲಿ, ಸಂಯೋಜನೆ ವ್ಯಾಪಾರಿಗಳು ಖರೀದಿದಾರರ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿ ಅದನ್ನು ಬೊಕ್ಕಸಕ್ಕೆ ಪಾವತಿ ಮಾಡದೇ ಇರುವ ವ್ಯಾಪಕ ಹವ್ಯಾಸಕ್ಕೆ ಕಡಿತ ಬೀಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಸಂಯೋಜನೆ ಸ್ಕೀಮ್ನ್ನು ಆಯ್ಕೆ ಮಾಡಿಕೊಂಡಿರುವ ವ್ಯಾಪಾರಿಗಳು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಗ್ರಾಹಕರ ಮೇಲೆ ವಿಧಿಸುವ ಅಗತ್ಯವಿಲ್ಲ ಎಂಬ ವಿಚಾರದ ಬಗ್ಗೆ ಗ್ರಾಹಕರಗೆ ಶಿಕ್ಷಣ ನೀಡುವ ಪ್ರಚಾರ ಅಭಿಯಾನವನ್ನು ನಡೆಸಲೂ ಕಂದಾಯ ಇಲಾಖೆಯು ಯೋಜನೆ ರೂಪಿಸುತ್ತಿದೆ. ಜಿಎಸ್ಟಿ ಸಂಯೋಜನೆ ಸ್ಕೀಮ್ ಅಡಿಯಲ್ಲಿ ವರ್ತಕರು ಮತ್ತು ತಯಾರಕರು ಶೇಕಡಾ ೧ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು ಪಾವತಿ ಮಾಡಿದರೆ ಸಾಕು. ಇಲ್ಲದೇ ಇದ್ದಲ್ಲಿ ಅವರು ಶೇಕಡಾ ಅಥವಾ ೧೨ ಅಥವಾ ೧೮ರಷ್ಟು ಜಿಎಸ್ ಟಿ ಪಾವತಿ ಮಾಡಬೇಕು. ಇಂತಹ ವ್ಯಾಪಾರಿಗಳು ಗ್ರಾಹಕರ ಮೇಲೆ ಜಿಎಸ್ಟಿ ವಿಧಿಸಲು ಅವಕಾಶವಿಲ್ಲ. ಜಿಎಸ್ಟಿ ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವ .೧೭ ಕೋಟಿ ವ್ಯವಹಾರಗಳಲ್ಲಿ ಸುಮಾರು ೨೦ ಲಕ್ಷ ವ್ಯವಹಾರಗಳು ಸಂಯೋಜನೆ ಸ್ಕೀಮ್ನ್ನು ಆಯ್ಕೆ ಮಾಡಿಕೊಂಡಿವೆ. ಯೋಜನೆಯನ್ನು ಆಯ್ಕೆ ಮಾಡಿಕೊಂಡ ಭಾರೀ ಸಂಖ್ಯೆಯ ವ್ಯಾಪಾರಿಗಳು ಗ್ರಾಹಕರ ಮೇಲೆ ಉನ್ನತ ದರದ ಜಿಎಸ್ ಟಿ ವಿಧಿಸಿ ಅದನ್ನು ಸರ್ಕಾರಕ್ಕೆ ಪಾವತಿ ಮಾಡದೇ ಇರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ ಎಂದು  ಅಧಿಕಾರಿ ನುಡಿದರು. ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಸುಂಕಗಳ ಮಂಡಳಿಯು (ಸಿಬಿಐಸಿ) ಸದರಿ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದು, ಉದ್ಯಮಗಳು ಕಡ್ಡಾಯವಾಗಿ ತಮ್ಮ ಇನ್ವಾಯ್ಸ್ಗಳಲ್ಲಿ ತಾವು ಸಂಯೋಜನೆ ವ್ಯಾಪಾರಿಗಳು ಎಂಬುದಾಗಿ ಘೋಷಿಸಬೇಕಾಗುತ್ತದೆ. ಹೀಗಾಗಿ ಅವರು ಗ್ರಾಹಕರ ಮೇಲೆ ಜಿಎಸ್ ಟಿ ವಿಧಿಸುವ ಅಗತ್ಯ ಬೀಳುವುದಿಲ್ಲ. ಇದೇ ವೇಳೆಗೆ, ನಾವು ಗ್ರಾಹಕರಿಗೂ ಸಂಯೋಜನೆ ವ್ಯಾಪಾರಿಗಳಿಂದ ವಸ್ತು/ ಸೇವೆ ಖರೀದಿಸಿದಾಗ ತಾವು ಜಿಎಸ್ ಟಿ ಪಾವತಿ ಮಾಡಬೇಕಾದ ಅಗತ್ಯ ಇಲ್ಲ ಎಂಬ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಕ್ರಮವನ್ನೂ ನಾವು ಹಮ್ಮಿಕೊಳ್ಳುತ್ತೇವೆ ಎಂದು ಅಧಿಕಾರಿ ನುಡಿದರು. ಸಣ್ಣ ವ್ಯವಹಾರಿಗಳ ಮೇಲಿನ ಹೊರೆಯನ್ನು ತಗ್ಗಿಸುವ ಸಲುವಾಗಿ ಜಿಎಸ್ ಟಿ ಕಾನೂನು ಸಂಯೋಜನೆ ಸ್ಕೇಮ್ ಅಳವಡಿಸಿದೆ. ಇದರ ಅಡಿಯಲ್ಲಿ ವಾರ್ಷಿಕ ಕೋಟಿ ರೂಪಾಯಿವರೆಗಿನ ವಹಿವಾಟು (ಟರ್ನ್ ಓವರ್) ಇರುವ ವ್ಯಾಪಾರಿಗಳು ಮತ್ತು ಉತ್ಪಾದಕರು ಶೇಕಡಾ ೧ರಷ್ಟು ಜಿಎಸ್ ಟಿ ಪಾವತಿ ಮಾಡಿದರೆ ಸಾಕು. ಏಪ್ರಿಲ್ ಒಂದರಿಂದ ಮಿತಿಯನ್ನು ಒಂದೂವರೆ ಕೋಟಿ ರೂಪಾಯಿಗಳಿಗೆ ಏರಿಸಲಾಗುತ್ತದೆ. ವಸ್ತುಗಳು ಮತ್ತು ಸೇವೆಗಳನ್ನು ನೀಡುವ ಸೇವಾದಾರರಿಗೆ ಕೂಡಾ ಅವರ ವಾರ್ಷಿಕ ವಹಿವಾಟು ೫೦ ಲಕ್ಷ ರೂಪಾಯಿ ಒಳಗೆ ಇದ್ದಲ್ಲಿ ಸಂಯೋಜನೆ ಸ್ಕೀಮ್ ಆಯ್ಕೆ ಮಾಡಿಕೊಳ್ಳಲು ಅರುಣ್ ಜೇಟ್ಲಿ ನೇತೃತ್ವದ  ರಾಜ್ಯ ಸಚಿವರನ್ನು ಒಳಗೊಂಡಿರುವ ಜಿಎಸ್ಟಿ ಮಂಡಳಿಯು ಜನವರಿ ೧೦ರ ಸಭೆಯಲ್ಲಿ ಅನುಮತಿ ನೀಡಿತು.


2019: ಲಕ್ನೋ: ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮೈತ್ರಿಯನ್ನುಥಗ್ ಬಂಧನ್ (ಕೇಡಿಗಳ/ ಕೊಲೆಗಾರರ ಮೈತ್ರಿ) ಎಂಬುದಾಗಿ  ಇಲ್ಲಿ ಬಣ್ಣಿಸಿದ ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ಅಧ್ಯಕ್ಷ, ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ತಮ್ಮ ಪಕ್ಷವು ಕಾಂಗ್ರೆಸ್ ಜೊತೆ ಹೊಂದಾಣಿಕೆಗೆ ಸಿದ್ಧ ಎಂದು ಹೇಳಿದರು. ಶಿವಪಾಲ್ ಯಾದವ್ ಪಕ್ಷವನ್ನು ಬೆಂಬಲಿಸಿ ಮತಗಳನ್ನು ವ್ಯರ್ಥಮಾಡಿಕೊಳ್ಳಬೇಡಿ ಎಂಬುದಾಗಿ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಲೋಕಸಭಾ ಚುನಾವಣೆಗಾಗಿ ಎಸ್ಪಿ ಜೊತೆಗೆ ಮೈತ್ರಿ ಕುದುರಿಸಿದ ಹೊತ್ತಿನಲ್ಲಿ ನೀಡಿದ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಶಿವಪಾಲ್ ಯಾದವ್  ’ಎಸ್ಪಿ-ಬಿಎಸ್ಪಿ ಮೈತ್ರಿಯು ಕೇಡಿಗಳ/ ಕೊಲೆಗಾರರ ಮೈತ್ರಿ (ಥಗ್ ಬಂಧನ್) . ಇವರು ಮೈತ್ರಿ ರಚನೆಗೆ ಮುನ್ನ ಹಣ ಪಡೆದಿರಬಹುದು ಎಂದು ಎದಿರೇಟು ನೀಡಿದರು.  ಪ್ರಗತಿಶೀಲ ಸಮಾಜವಾದಿ ಪಕ್ಷ -ಲೋಹಿಯಾ (ಪಿಎಸ್ಪಿಎಲ್) ಉತ್ತರ ಪ್ರದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಅವರು ನುಡಿದರು. ಈವರೆಗೆ ಯಾವುದೇ ಮಾತುಕತೆಗಳು ನಡೆದಿಲ್ಲ. ಕಾಂಗ್ರೆಸ್ ಕೂಡಾ ಸೆಕ್ಯೂಲರ್ ಪಕ್ಷ. ಬಿಜೆಪಿಯನ್ನು ಪರಾಭವಗೊಳಿಸಲು ನಮ್ಮ ನೆರವು ಕೋರಿದರೆ ನಾವು ಬೆಂಬಲ ಕೊಡುತ್ತೇವೆ ಎಂದು ಶಿವಪಾಲ್ ನುಡಿದರು. ಸಮಾಜವಾದಿ ಪಕ್ಷದ ಮಾಜಿ ಮುಖ್ಯಸ್ಥ ಮುಲಾಯಂ ಸಿಂಗ್ ಅವರ ಕಿರಿಯ ಸಹೋದರ ಶಿವಪಾಲ್ ಯಾದವ್ ಅವರು ೨೦೧೮ರಲ್ಲಿ ಎಸ್ಪಿಯಿಂದ ಪ್ರತ್ಯೇಕಗೊಂಡು ತಮ್ಮದೇ ಪಕ್ಷ ರಚಿಸಿದ್ದರು. ಇದಕ್ಕೆ ಮುನ್ನ ಮಾಯಾವತಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶಿವಪಾಲ್, ’ಸರ್ಕಾರ ರಚಿಸಲು ಬಿಜೆಪಿ ಜೊತೆಗೆ ಕೈಜೋಡಿದ್ದ ನಾಯಕಿಯೇ ತಮ್ಮ ವಿರುದ್ಧ ಕೇಸರಿ ಪಕ್ಷವನ್ನು ಬೆಂಬಲಿಸುತ್ತಿರುವುದಾಗಿ ಆರೋಪ ಮಾಡಿರುವುದು ವ್ಯಂಗ್ಯ ಎಂದು ಹೇಳಿದ್ದರು. ಪಿಎಸ್ ಪಿಎಲ್ನ್ನು ಹೊರಗಿಟ್ಟು ರಚಿಸಿರುವ ನಿಮ್ಮ ಮೈತ್ರಿಕೂಟವು ಅಪೂರ್ಣ ಎಂಬುದಾಗಿ ಇದಕ್ಕೆ ಮುನ್ನ ತಮ್ಮ ಸಹೋದರನ ಮಗ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಮಾಯಾವತಿಗೆ ಎಚ್ಚರಿಕೆ ನೀಡಿದ್ದ ಶಿವಪಾಲ್ಜಾತ್ಯತೀತ ರಂಗ ಮಾತ್ರವೇ ಬಿಜೆಪಿಯನ್ನು ಪರಾಭವಗೊಳಿಸಬಲ್ಲುದು ಎಂದು ಹೇಳಿದ್ದರು. ಶಿವಪಾಲ್ ಅವರನ್ನು ಬೆಳೆಸಲು ಬಿಜೆಪಿಯು ವೆಚ್ಚ ಮಾಡುತ್ತಿರುವ ಹಣ ವ್ಯರ್ಥವಾಗಲಿದೆ ಎಂದು ಮಾಯಾವತಿ ಟೀಕಿಸಿದ್ದರು. ದಲಿತರು, ಹಿಂದುಳಿದವರು, ಮುಸ್ಲಿಮರ ಮತಗಳಿಂದ ಗೆದ್ದ ಮಾಯಾವತಿ ಬಿಜೆಪಿ ಜೊತೆ ಕೈಜೋಡಿಸಿದ್ದರು, ಈಗ ನನ್ನ ವಿರುದ್ಧ (ಬಿಜೆಪಿಗೆ ನಿಕಟವಾಗಿದ್ದಾರೆ ಎಂಬ) ಆರೋಪ ಮಾಡುತ್ತಿದ್ದಾರೆ. ಜನರಿಗೆ ಬಿಜೆಪಿ ಜೊತೆಗೆ ಯಾರು ಸರ್ಕಾರ ರಚಿಸಿದ್ದರು ಎಷ್ಟು ಬಾರಿ ರಚಿಸಿದ್ದರು ಎಂಬುದು ಗೊತ್ತಿದೆ. ಕೋಮುಶಕ್ತಿಗಳ ವಿರುದ್ಧದ ನನ್ನ ವೈಯಕ್ತಿಕ ದಾಖಲೆ ಶುದ್ಧವಾಗಿದೆ. ಚುನಾವಣಾ ಟಿಕೆಟ್ ಮಾರಾಟ ಮಾಡುವವರು ನಾನು ಬಿಜೆಪಿಯಿಂದ ಹಣ ಪಡೆಯುತ್ತಿದ್ದೇನೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಶಿವಪಾಲ್ ಮಾಯಾವತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಕೆ ಪುನಃ ಬಿಜೆಪಿ ಜೊತೆ ಕೈಜೋಡಿಸಬಹುದು ಎಂಬ ಅರಿವು ಎಸ್ಪಿ ನಾಯಕತ್ವಕ್ಕೆ ಇರುವುದು ಒಳ್ಳೆಯದು. ಇತಿಹಾಸ ತಾನೇ ತಾನಾಗಿ ಪುನರಾವರ್ತನೆ ಗೊಳ್ಳುತ್ತದೆ ಎಂದು ಅವರು ನುಡಿದರು. ಬಿಎಸ್ಪಿ ಆಡಳಿತಾವಧಿಯಲ್ಲಿ ಎಸ್ಪಿ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಮುಲಾಯಂ ಸಿಂಗ್ ಯಾದವ್ ಮತ್ತು ಜ್ಞಾನೇಶ್ವರ ಮಿಶ್ರ ಅವರನ್ನು ಅವಮಾನಿಸಿದ ಪಕ್ಷದ ಜೊತೆಗೆ ಎಸ್ಪಿ ಮೈತ್ರಿ ಮಾಡಿಕೊಂಡಿದೆ. ಇದು ಅವಕಾಶವಾದಿಗಳ ಮೈತ್ರಿ. ಯಾರೇಸಮಾಜವಾದಿ ಇದನ್ನು ಅಂಗೀಕರಿಸುವುದಿಲ್ಲ ಎಂದು ಅವರು ಹೇಳಿದ್ದರು
 2018: ನವದೆಹಲಿ: ಸುಪ್ರೀಂಕೋರ್ಟಿನ ನಾಲ್ವರು  ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಹಿಂದಿನ ದಿನದ ತಮ್ಮ ಅಭೂತಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಮುಚ್ಚಿಟ್ಟಿದ್ದಾರೆ ಎಂದು ಹೇಳುವ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ವಿರುದ್ಧ ದೋಷಾರೋಪ ಹೊರಿಸುವ ಸಾಧ್ಯತೆಗಳನ್ನು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ತಳ್ಳಿಹಾಕಿತು. ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂಕೋರ್ಟಿನ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲ, ಕಳೆದ ಕೆಲುವ ತಿಂಗಳುಗಳಲ್ಲಿ ಅಪೇಕ್ಷಿತವಲ್ಲದ ಘಟನೆಗಳು ಘಟಿಸಿವೆ ಎಂದು ಹೇಳಿದ್ದರು. ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಪತ್ರಿಕಾಗೋಷ್ಠಿಯು ಕೇವಲ ಊಹಾಪೋಹಗಳಿಗೆ ಕಾರಣವಾಗಿದೆ. ಪತ್ರವು (ಸಿಜೆಐ ಅವರಿಗೆ ನ್ಯಾಯಾಧೀಶರು ಬರೆದ ಪತ್ರ) ಏನನ್ನೂ ಬಹಿರಂಗಗೊಳಿಸಿಲ್ಲ ಎಂದು ಹೇಳಿದರು. ಪ್ರಕರಣದಲ್ಲಿ ದೋಷಾರೋಪ ಹೊರಿಸುವ ಪ್ರಶ್ನೆ ಇಲ್ಲ. ಇದನ್ನು ವ್ಯವಸ್ಥೆಯ ಒಳಗೇ ಇತ್ಯರ್ಥ ಪಡಿಸಬೇಕೇ ಹೊರತು ರೀತಿ ಪತ್ರಿಕೆಗಳಿಗೆ ಹೋಗುವ ಮೂಲಕ ಅಲ್ಲ. ನೀವು ಬಹಿರಂಗ ಪಡಿಸಲೆಂದು ಪತ್ರಿಕಾಗೋಷ್ಠಿ ಕರೆದಿರಿ ಆದರೆ ಪತ್ರಿಕಾಗೋಷ್ಠಿಯ ಉದ್ದೇಶ ಮುಚ್ಚಿಡುವುದಾಗಿತ್ತು ಎಂದು ಸಿಂಗ್ ನುಡಿದರು. ಇದು ದೇಶಾದ್ಯಂತ ವ್ಯಾಪಕ ಊಹಾಪೋಹಗಳನ್ನು ಹುಟ್ಟು ಹಾಕಿದೆ. ಸಂಸ್ಥೆಯು ಇಷ್ಟೊಂದು ವರ್ಷಗಳಲ್ಲಿ ವಿಶ್ವಾಸಾರ್ಹತೆಯನ್ನು ಸಂಪಾದಿಸಿಕೊಂಡಿದೆ. ವಿಶ್ವಾಸಾರ್ಹತೆ ಹೋದರೆ, ಯಾರು ಸಂಸ್ಥೆಯನ್ನು ಗೌರವಿಸುತ್ತಾರೆ? ಪತ್ರಿಕಾಗೋಷ್ಠಿಯು ಊಹಾಪೋಹಗಳನ್ನಷ್ಟೇ ಹುಟ್ಟು ಹಾಕಿದೆ ಎಂದು ಅವರು ಹೇಳಿದರು. ನ್ಯಾಯಮೂರ್ತಿಗಳಾದ ಚೆಲಮೇಶ್ವರ್, ಗೊಗೋಯಿ, ಜೋಸೆಫ್ ಮತ್ತು ಲೋಕುರ್ ಅವರು ತಳೆದ ನಿಲುವನ್ನು ಟೀಕಿಸಿದ ಬಾರ್ ಅಧ್ಯಕ್ಷ, ನಿಯಮಾವಳಿ ದಾಖಲೆಯನ್ನು (ಮೆಮರಾಂಡಮ್ ಆಫ್ ಪ್ರೊಸೀಜರ್ -ಎಂಒಪಿ) ಅಂತಿಮಗೊಳಿಸುವಲ್ಲಿ ವಿಳಂಬವಾಗುತ್ತಿದೆ ಎಂಬುದನ್ನು ಎತ್ತಿ ತೋರಿಸಲು ಪತ್ರದಲ್ಲಿ ಉಲ್ಲೇಖಿಸಿದ ತೀರ್ಪನ್ನು ಸಿಜೆಐ ಅವರು ಈಗಾಗಲೇ ಹಿಂತೆದುಕೊಂಡಿದ್ದಾರೆ ಎಂದು ಹೇಳಿದರು. ಪತ್ರದಲ್ಲಿ ಏನೂ ಇಲ್ಲ. ಪತ್ರವು ನ್ಯಾಯಮೂರ್ತಿ ಗೋಯೆಲ್ ಮತ್ತು ನ್ಯಾಯಮೂರ್ತಿ ಯುಯು ಲಲಿತ್ ಅವರ ಪೀಠ ನೋಡುತ್ತಿದ್ದ ಆರ್ ಪಿ ಲೂತ್ರ ವಿಷಯದ ಬಗ್ಗೆ ಮಾತನಾಡುತ್ತಿದೆ. ನಿಯಮಾವಳಿ  ದಾಖಲೆಯನ್ನು ಅಂಗೀಕರಿಸಲಾಗಿದ್ದರೆ ಅದನ್ನು ಏಕೆ ನಿರ್ಧರಿಸಲಾಗುತ್ತಿಲ್ಲ ಎಂದಷ್ಟೇ ಆದೇಶ ಹೇಳಿದೆ. ಎಂಒಪಿ ಅಂತಿಮಗೊಳಿಸುವಲ್ಲಿನ ವಿಳಂಬ ನ್ಯಾಯಾಂಗಕ್ಕೆ ಹಾನಿ ಉಂಟು ಮಾಡುತ್ತಿದೆ ಆದೇಶ ಹೇಳಿದೆ. ಅದು ತಪ್ಪೆಂದು ನನಗೆ ಅನಿಸುತ್ತಿಲ್ಲ ಎಂದು ಸಿಂಗ್ ನುಡಿದರು. ಆದರೆ ಆದೇಶವನ್ನು ಕೂಡಾ ಸಿಜೆಐ ಅವರು ನ್ಯಾಯಮೂರ್ತಿ .ಕೆ. ಸಿಕ್ರಿ ಮತ್ತು ನ್ಯಾಯಮೂರ್ತಿ ಅಮಿತವ್ ರಾಯ್ ಜೊತೆಗಿನ ತೀರ್ಪಿನಲ್ಲಿ ಹಿಂತೆಗೆದುಕೊಂಡಿದ್ದಾರೆ. ಲೂತ್ರ ತೀರ್ಪನ್ನು ಪತ್ರದಲ್ಲಿ ಉಲ್ಲೇಖಿಸಿದ್ದು ಏಕೆಂದು ಗ್ರಹಿಸಲಾಗುತ್ತಿಲ್ಲ. ಇಂತಹ ಹಿರಿಯ ನ್ಯಾಯಾಧೀಶರು ವಾಸ್ತವಾಂಶಗಳನ್ನು ನೋಡಿಕೊಳ್ಳದೆ ಇಂತಹ ತಪ್ಪನ್ನು ಹೇಗೆ ಮಾಡಿದರು ನನಗೆ ಅರ್ಥವಾಗುತ್ತಿಲ್ಲ. ಆದೇಶವನ್ನು ಸಿಜೆಐ ಹಿಂತೆಗೆದುಕೊಂಡಿದ್ದಾರೆ ಎಂದು ಸಿಂಗ್ ವಿವರಿಸಿದರು. ಮಾಸ್ಟರ್  ಆಫ್ ರೋಸ್ಟರ್ ಸಿದ್ಧಾಂತವನ್ನು ತಪ್ಪಾಗಿ ಅರ್ಥ ಮಾಡಿಕೊಂಡದ್ದಕ್ಕಾಗಿ ಸಿಜೆಐ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳು ದೇಶದ ಬಗ್ಗೆ ಇರುವ ಹೊಣೆಗಾರಿಕೆಯನ್ನು ನಿರ್ವಹಿಸುವ ಸಲುವಾಗಿ ಪತ್ರಿಕಾಗೋಷ್ಠಿ ಕರೆಯುವುದು ಅನಿವಾರ್ಯವಾಯಿತು ಎಂದು ಹೇಳಿದ್ದರು. ೨೦ ವರ್ಷಗಳ ಬಳಿಕ ದೇಶದ ಜನರು ನಾಲ್ವರು ನ್ಯಾಯಮೂರ್ತಿಗಳು ತಮ್ಮ ಆತ್ಮಗಳನ್ನು ಮಾರಿಕೊಂಡಿದ್ದರು ಎಂದು ಹೇಳಬಾರದು ಎಂದು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಪೀಠಗಳನ್ನು ರಚಿಸುವಲ್ಲಿ ಸಿಜೆಐ ಅವರು ತಪ್ಪೆಸಗಿದ್ದರೂ, ಅವರ ನಿರ್ಧಾರವನ್ನು ಅಂಗೀಕರಿಸಬೇಕಾಗುತ್ತದೆ. ಏಕೆಂದರೆ ಅವರಿಗೆ ನೀಡಲಾದ ಅಗ್ರ ಪ್ರಾಶಸ್ತ್ಯವನ್ನು ಮನ್ನಿಸಲೇಬೇಕಾಗುತ್ತದೆ ಎಂದು ಸಿಂಗ್ ನುಡಿದರು. ಮಾಸ್ಟರ್ ಆಫ್ ರೋಸ್ಟರ್ ಸಿದ್ಧಾಂತವನ್ನು ನಾಲ್ವರು ನ್ಯಾಯಮೂರ್ತಿಗಲೂ ಅಂಗೀಕರಿಸಿದ್ದಾರೆ. ಇದರಲ್ಲಿ ಸಿಜೆಐ ಮಿಶ್ರ ಅವರು ಹೊಸದೇನನ್ನೂ ಮಾಡಿಲ್ಲ. ಸಿಜೆಐ ಹೇಗೆ ಪೀಠಗಳನ್ನು ರಚಿಸುತ್ತಿದ್ದಾರೆ ಎಂಬುದನ್ನು ನೋಡಬೇಕು. ಆದರೆ ಅದು ನಾಲ್ವರು ನ್ಯಾಯಮೂರ್ತಿಗಳು ಮಾಡಿದ್ದನ್ನು ಸಮರ್ಥಿಸುವುದಿಲ್ಲ. ಸಿಜೆಐ ಅವರು ತಪ್ಪನ್ನೇ ಮಾಡುತ್ತಿದ್ದರೂ, ಅವರು ಮಾಸ್ಟರ್ ಆಫ್ ರೋಸ್ಟರ್ ಆಗಿಯೇ ಇರುತ್ತಾರೆ. ಆಗಲೂ ನೀವು ಅವರಿಗೆ ನೀಡಬೇಕಾದ ಅಗ್ರ ಪ್ರಾಶಸ್ತ್ಯವನ್ನು ನೀಡಲೇಬೇಕಾಗುತ್ತದೆ ಎಂದು ಸಿಂಗ್ ಹೇಳಿದರು.

2018: ನವದೆಹಲಿ: ಸುಮಾರು ೪೦ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ದೋಣಿಯೊಂದು ಮಹಾರಾಷ್ಟ್ರ ಕರಾವಳಿಯಾಚೆ ಸಮುದ್ರದಲ್ಲಿ ಮುಳುಗಿದ ಪರಿಣಾಮವಾಗಿ ಕನಿಷ್ಠ ಇಬ್ಬರು ಮಕ್ಕಳು ಅಸು ನೀಗಿದರು. ೩೨ ಮಕ್ಕಳನ್ನು ರಕ್ಷಿಸಲಾಯಿತು. ಜನ ಕಣ್ಮರೆಯಾದರು. ಮುಂಬೈ ಸಮೀಪದ ದಹನು ಕರಾವಳಿಯಾಚೆ ಅರಬ್ಬಿ ಸಮುದ್ರದಲ್ಲಿ ದೋಣಿ ದುರಂತದಲ್ಲಿ ಸಿಕ್ಕಿಹಾಕಿಕೊಂಡ ೩೨ ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದ್ದು, ಇಬ್ಬರ ಶವಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪಾಲ್ಘಾರ್ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಸಿಂಗೆ ಹೇಳಿದರು. ಕಣ್ಮರೆಯಾಗಿರುವ ಮಕ್ಕಳ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆಯಿತು. ಮಕ್ಕಳೆಲ್ಲರೂ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯವರು. ದೋಣಿಯಲ್ಲಿ ಸುಮಾರು ೪೦ ಮಕ್ಕಳಿದ್ದರು ಎಂದು ಸ್ಥಳೀಯ ಬಿಜೆಪಿ ಶಾಸಕಿ ಮನಿಷಾ ಚೌಧರಿ ಹೇಳಿದರು. ಅವರು ಪಾಲ್ಘಾರ್ ಜಿಲ್ಲೆಯ ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು. ಕಿಕ್ಕಿರಿದಿದ್ದ ದೋಣಿಯಲ್ಲಿ ಯಾವುದೇ ಸುರಕ್ಷತಾ ಸಾಧನಗಳನ್ನೂ ಇಟ್ಟಿರಲಿಲ್ಲ ಎಂದು ಮೂಲಗಳು ಹೇಳಿದವು. ದಹನು ಕರಾವಳಿಯಾಚೆ ಅರಬ್ಬಿ ಸಮುದ್ರದಲ್ಲಿ ಬೆಳಗ್ಗೆ ೧೧.೩೦ರ ವೇಳೆಗೆ ದುರಂತ ಘಟಿಸಿತು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ನರ್ನವಾಲೆ ಹೇಳಿದರು.  ವ್ಯಾಪಕ ರಕ್ಷಣಾ ಕಾರ್‍ಯಾಚರಣೆ ಕೈಗೊಳ್ಳಲಾಗಿದೆ. ಜಿಲ್ಪಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್‍ಯಾಚರಣೆಯ ಉಸ್ತುವಾರಿ ನೋಡಿಕೊಂಡಿದ್ದಾರೆ ಎಂದು ನರ್ನವಾಲೆ ಹೇಳಿದರು.

2018: ಮುಂಬೈ: ಐವರು ಒಎನ್ ಜಿಸಿ ಅಧಿಕಾರಿಗಳು ಮತ್ತು ಇಬ್ಬರು ಪೈಲಟ್ ಗಳು ಸೇರಿದಂತೆ ಮಂದಿಯನ್ನು ಒಯ್ಯುತ್ತಿದ್ದ ಪವನಹಂಸ ಹೆಲಿಕಾಪ್ಟರ್ ಒಂದು ಮುಂಬೈ ಕರಾವಳಿಯಲ್ಲಿ ಪತನಗೊಂಡಿದ್ದು. ಒಬ್ಬ ಅಧಿಕಾರಿ ಸಹಿತ ಕನಿಷ್ಠ ಮಂದಿ ಸಾವನ್ನಪ್ಪಿದರು. ಮೃತರ ಪೈಕಿ ಒಬ್ಬರನ್ನು ಒಎನ್‌ಜಿಸಿ ಡಿಜಿಎಂ ಪಂಕಜ್ ಗರ್ಗ್ ಎಂಬುದಾಗಿ ಗುರುತಿಸಲಾಯಿತು. ಡಾಲ್ಫಿನ್ ಹೆಲಿಕಾಪ್ಟರ್ ವಿಟಿ ಪಿಡಬ್ಲೂಎ ಬೆಳಗ್ಗೆ ೧೦.೨೦ಕ್ಕೆ ಗಗನಕ್ಕೆ ಏರಿತ್ತು. ಕೇವಲ ೧೫ ನಿಮಿಷಗಳಲ್ಲಿ ಅದು ದಿಢೀರನೆ ಮುಂಬೈ ಎಟಿಸಿ ಮತ್ತು ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ ಜಿಸಿ) ಟರ್ಮಿನಲ್ ಸಂಪರ್ಕ ಕಳೆದುಕೊಂಡಿತು. ವೇಳೆಗೆ ಹೆಲಿಕಾಪ್ಟರ್ ಮುಂಬೈ ತೀರದಲ್ಲಿ ೫೫ ಕಿಮಿ ಎತ್ತರದಲ್ಲಿ, ಮುಂಬೈಯಿಂದ ೧೭೫ ಕಿಮೀ ವಾಯವ್ಯದಲ್ಲಿರುವ ಒಎನ್ ಜಿಸಿಯ ಬಾಂಬೆ ಹೈ ಆಯಿಲ್ ಫೀಲ್ಡ್ಸ್ ಕಡೆಗೆ ಹಾರುತ್ತಿತ್ತು ಎಂದು ನಂಬಲಾಯಿತು. ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡ ಸುದ್ದಿ ಬರುತ್ತಿದ್ದಂತೆಯೇ ಭಾರತೀಯ ಕರಾವಳಿ ಕಾವಲು ಪಡೆಯು ಒಂದು ಹಡಗು ಮತ್ತು ವಿಮಾನವನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಸಲುವಾಗಿ ಅತ್ತ ಕಡೆಗೆ ಕಳುಹಿಸಿತು. ಹೆಲಿಕಾಪ್ಟರಿನಲ್ಲಿ ಇಬ್ಬರು ಪೈಲಟ್ ಗಳು ಮತ್ತು ಐವರು ಒಎನ್‌ಜಿಸಿ ನೌಕರರು ಇದ್ದರು ಎಂದು ಇದಕ್ಕೆ ಸ್ವಲ್ಪ ಮುನ್ನ ಪವನ ಹಂಸ ಅಧ್ಯಕ್ಷ ಬಿ.ಪಿ. ಶರ್ಮ ದೃಢ ಪಡಿಸಿದ್ದರು. ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಾವು ಮುಂಬೈ ಕಡೆಗೆ ಹೊರಟಿದ್ದು, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತನಾಡಿರುವುದಾಗಿ ತಿಳಿಸಿದರು. ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆ ತಮ್ಮ ಕರ್ತವ್ಯ ನಿರ್ವಹಿಸುತ್ತಿವೆ. ಶೋಧ ಕಾರ್ಯಾಚರಣೆಯ ಸಮನ್ವಯ ಸಲುವಾಗಿ ನಾನು ಕೂಡಾ ಮುಂಬೈಗೆ ಹೋಗುತ್ತಿದ್ದೇನೆ. ನಾನು ರಕ್ಷಣಾ ಸಚಿವೆ ಜೊತೆ ಮಾತನಾಡಿದ್ದೇನೆ. ಅವರು ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಗೆ ಸಮಗ್ರ ಸಹಕಾರ ನೀಡುವಂತೆ ಸೂಚಿಸಿದ್ದಾರೆ ಎಂದು ಪ್ರಧಾನ್ ನುಡಿದರು.

2017: ನವದೆಹಲಿ: ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸಲು ಮತ್ತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲು ಸುಪ್ರೀಂಕೋರ್ಟಿನ ನಾಲ್ವರು ಅತಿ ಹಿರಿಯ ನ್ಯಾಯಮೂರ್ತಿಗಳು ನಿರ್ಧರಿಸಿದಾಗ, ಸುಪ್ರೀಂಕೋರ್ಟಿನ ಬೇರೆ ಯಾವುದೇ ನ್ಯಾಯಮೂರ್ತಿಗಳು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರಿಗೂ ಏನಾಗುತ್ತಿದೆ ಎಂಬ ಸುಳಿವು ಇರಲಿಲ್ಲ!  ಹಿಂದೆಂದೂ ಘಟಿಸದ ಕಾರ್ಯಕ್ಕೆ ಕೈಹಾಕಲು ಮುಂದಿನ ಸಿಜೆಐ ಆಗಲು ಸರದಿಯಲ್ಲಿ ನಿಂತಿರುವ ನ್ಯಾಯಮೂರ್ತಿ ರಂಜನ್ ಗೊಗೋಯಿ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳು ನಿರ್ದಿಷ್ಟ ಕ್ಷಣದಲ್ಲಿ ನಿರ್ಧರಿಸಿದ್ದರು. ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ನ್ಯಾಯಮೂರ್ತಿ ಗೊಗೋಯಿ ಅವರ ಜೊತೆಗೆ ಮಾತುಕತೆ ನಡೆಸಿದರು. ದುರದೃಷ್ಟಕರ ಘಟನೆಗಳ ವಿರುದ್ಧ ಬಹಿರಂಗವಾಗಿ ಮಾತನಾಡಲು ಬರುವ ಬಗ್ಗೆ ನ್ಯಾಯಮೂರ್ತಿ ಗೊಗೋಯಿ ಅವರಿಗೆ ಮೊದಲು ಇಷ್ಟವಿರಲಿಲ್ಲವಾದರೂ ಕೊನೆಗೆ ನ್ಯಾಯಾಂಗದ ಸ್ವಾತಂತ್ರ್ಯ ಮೇಲೆ ಪ್ರಭಾವ ಬೀರುವ ವಿಷಯದಲ್ಲಿ ಅವರ ಜೊತೆಗೂಡಲು ನಿರ್ಧರಿಸಿದರು ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಗೊಗೋಯಿ ಅವರ ಹೆಸರನ್ನು ಸಿಜೆಐ ಅವರು ರಾಷ್ಟ್ರಪತಿ ಅವರಿಗೆ ಶಿಫಾರಸು ಮಾಡ ಬೇಕಾಗಿರುವುದರಿಂದ ಬಹುಶಃ ಗೊಗೋಯಿ ಅವರಿಗೆ ಸಂಬಂಧ ನಿರ್ಧಾರ ಕೈಗೊಳ್ಳುವುದು ಕಠಿಣವಾಗಿದ್ದಿರಬಹುದು. ಆದರೆ ಸಿಜೆಐ ಅವರ ಕಾರ್ಯ ನಿರ್ವಹಣೆ ಬಗ್ಗೆ ನಾಲ್ವರೂ ನ್ಯಾಯಮೂರ್ತಿಗಳು ಒಂದೇ ಅಭಿಪ್ರಾಯ ಹೊಂದಿದ್ದುರಿಂದ ಪತ್ರಿಕಾಗೋಷ್ಠಿಯಲ್ಲಿ ಇತರ ಮೂವರೊಂದಿಗೆ ಹಾಜರಾಗಲು ಗೊಗೋಯಿ ಅವರೂ ಒಪ್ಪಿದರು. ಕ್ಷಣದಲ್ಲಿ ಇನ್ನಷ್ಟು ವಿಳಂಬಿಸದೆ ಆದಿನವೇ ಮಾಧ್ಯಮವನ್ನು ಭೇಟಿ ಮಾಡಬೇಕು ಎಂದು ನಾಲ್ವರು ನ್ಯಾಯಮೂರ್ತಿಗಳೂ ಸರ್ವಾನುಮತದ ನಿರ್ಧಾರ ಕೈಗೊಂಡರು. ತಮ್ಮ ನಿರ್ಧಾರದ ಬಗ್ಗೆ ಇತರ ನ್ಯಾಯಮೂರ್ತಿಗಳಿಗೆ ತಿಳಿಸಲು ಅವರಿಗೆ ಸಮಯ ಇರಲಿಲ್ಲ. ಸಂಬಂಧಿತ ಕುಂದುಕೊರತೆಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ಇತರ ನ್ಯಾಯಮೂರ್ತಿಗಳ ಜೊತೆ ಸಮಾಲೋಚಿಸಲು ಭಿನ್ನಮತೀಯ ನ್ಯಾಯಮೂರ್ತಿಗಳು ಬಯಸಿದ್ದರಾದರೂ, ಬೆಳಗ್ಗೆ ೧೦.೩೦ಕ್ಕೆ ನ್ಯಾಯಾಲಯ ಕಲಾಪ ಆರಂಭಿಸಬೇಕಾಗಿದ್ದುದರಿಂದ ಮತ್ತು ಎಲ್ಲ ನ್ಯಾಯಮೂರ್ತಿಗಳು ತಮ್ಮ ತಮ್ಮ ಕೊಠಡಿಗಳಲ್ಲಿ ಹಾಜರಾಗಬೇಕಾಗಿದ್ದುದರಿಂದ ಅವರಿಗೆ ವಿಷಯ ತಿಳಿಸಲು ಕಾಲಾವಕಾಶ ಇರಲಿಲ್ಲ.  ಅಲ್ಲದೆ ನಾಲ್ವರು ನ್ಯಾಯಮೂರ್ತಿಗಳೂ ತಮ್ಮ ಕೋರ್ಟ್ ಕಲಾಪಕ್ಕೆ ಹಾಜರಾಗಬೇಕಿತ್ತು. ಮೂಲಗಳ ಪ್ರಕಾರ ನ್ಯಾಯಮೂರ್ತಿ ಚೆಲಮೇಶ್ವರ್ ಅವರು ತಮ್ಮ ಕಚೇರಿಯಲ್ಲಿಯೇ ಏಳು ಪುಟಗಳ ಪತ್ರದ ಕರಡನ್ನು ಸಿದ್ಧ ಪಡಿಸಿದರು. ಬಳಿಕ ಇತರ ಮೂವರು ನ್ಯಾಯಮೂರ್ತಿಗಳು ಅದನ್ನು ಅನುಮೋದಿಸಿದರು. ಹೀಗೆ ಶುಕ್ರವಾರದ ಬಂಡಾಯ ಇಡೀ ರಾಷ್ಟ್ರವನ್ನಷ್ಟೇ ಕಸಿವಿಸಿಗೆ ತಳ್ಳಿದ್ದಷ್ಟೇ ಅಲ್ಲ, ಸುಪ್ರೀಂಕೋರ್ಟಿನ ಸಹೋದ್ಯೋಗಿಗಳನ್ನೂ ಆತಂತಕ್ಕೆ ತಳ್ಳಿತು. ನಾಲ್ವರು ನ್ಯಾಯಮೂರ್ತಿಗಳ ಅಭೂತಪೂರ್ವ ಕೃತ್ಯಕ್ಕೆ ಅವರು ಇತರರಷ್ಟೇ ಅಚ್ಚರಿಪಟ್ಟರು.

2018: ನವದೆಹಲಿ: ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಸಿಜೆಐ ದೀಪಕ್ ಮಿಶ್ರ ಅವರ ಕಾರ್ಯ ವೈಖರಿ ವಿರುದ್ಧ ಬಂಡಾಯ ಎದ್ದ ಒಂದು ದಿನದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ನೃಪೇಂದ್ರ ಮಿಶ್ರ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ಮನೆಯ ಸಮೀಪಕ್ಕೆ ಬಂದ ವಿಡಿಯೋ ದೃಶ್ಯಗಳನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡಿದವು. ಮುಖ್ಯ ನ್ಯಾಯಮೂರ್ತಿಯವರು ಆಯ್ದ ಪೀಠಗಳಿಗೆ ಪ್ರಕರಣಗಳನ್ನು ನಿಯೋಜಿಸುತ್ತಿರುವುದನ್ನು ಪ್ರಶ್ನಿಸಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸುವ ಅಸಾಧಾರಣ ಕ್ರಮ ಕೈಗೊಂಡಿದ್ದರು. ನೃಪೇಂದ್ರ ಮಿಶ್ರ ಅವರು ಸಿಜೆಐ ಅವರ ಅಧಿಕೃತ ನಿವಾಸಕ್ಕೆ ವಾಹನದಲ್ಲಿ ಬಂದುದನ್ನು ವಿಡಿಯೋಗಳನ್ನು ಟಿವಿಗಳು ಪ್ರಸಾರ ಮಾಡಿದವು. ಏನಿದ್ದರೂ, ದ್ವಾರಗಳು ತೆರೆಯದೇ ಇದ್ದುದರಿಂದ ಸ್ವಲ್ಪ ಕಾಲ ಕಾದು ನೃಪೇಂದ್ರ ಮಿಶ್ರ ಅವರು ವಾಪಸಾದರು. ಇದನ್ನೂ ವಿಡಿಯೋದಲ್ಲಿ ಸೆರೆ ಹಿಡಿಯಲಾಗಿತ್ತು. ಟಿವಿಗಳಲ್ಲಿ ದೃಶ್ಯಗಳು ಪ್ರಸಾರಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ವಿಶೇಷ ಸಂದೇಶವಾಹಕನನ್ನು ಸಿಜೆಐ ಅವರ ಬಳಿಗೆ ಕಳುಹಿಸಿದ್ದು ಏಕೆ ಎಂಬ ಪ್ರಶ್ನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿತು. ‘ಪ್ರಧಾನಿಯವರ ಪ್ರಿನ್ಸಿಪಲ್ ಸೆಕ್ರೆಟರಿ ನೃಪೇಂದ್ರ ಮಿಶ್ರ ಅವರು ಕೃಷ್ಣ ಮೆನನ್ ಮಾರ್ಗದ ನಂಬರ್ ೫ರಲ್ಲಿರುವ ಸಿಜೆಐ ನಿವಾಸಕ್ಕೆ ಭೇಟಿ  ನೀಡಿರುವುದರಿಂದ, ಪ್ರಧಾನಿಯವರು ವಿಶೇಷ ಸಂದೇಶವಾಹಕನನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಳಿಗೆ ಕಳುಹಿಸಿದ್ದು ಏಕೆ ಎಂಬ ಕಾರಣವನ್ನು ಪ್ರಧಾನಿ ನೀಡಬೇಕು ಎಂದು ಪಕ್ಷದ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲ ಟ್ವೀಟ್ ಮಾಡಿದರು. ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಬಿ.ಎಚ್.ಲೋಯಾ ಅವರ ನಿಗೂಢ ಸಾವಿಗೆ ಸಂಬಂಧಿಸಿದ ಪ್ರಕರಣ ಸೇರಿದಂತೆ ಪ್ರಮುಖ ಪ್ರಕರಣಗಳ ವಿಚಾರಣೆಯನ್ನು ನಿಯೋಜಿಸುವಲ್ಲಿ ನಿರಂಕುಶ ರೀತಿಯಲ್ಲಿ ಸಿಜೆಐ ವರ್ತಿಸುತ್ತಿದ್ದಾರೆ ಎಂದು ನಾಲ್ವರು ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ಬಹಿರಂಗ ದಾಳಿ ನಡೆಸಿದ್ದರು.

2018: ಪಣಜಿ: ಮಹದಾಯಿ ನೀರನ್ನು ಕರ್ನಾಟಕಕ್ಕೆ ಬಿಡುವುದನ್ನು ವಿರೋಧಿಸುತ್ತಿರುವ ಗೋವಾ ರಾಜ್ಯದ ಜಲಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಅವರು ಪೊಲೀಸ್ ಭದ್ರತೆಯಲ್ಲಿ ಕಳಸಾ-ಬಂಡೂರಿ ನಾಲೆ ನಿರ್ಮಾಣದ ಕಣಕುಂಬಿ ಪ್ರದೇಶಕ್ಕೆ ಈದಿನ ಭೇಟಿ ನೀಡಿ ಪರಿಶೀಲಿಸಿದರು ಎಂದು ವರದಿಗಳು ತಿಳಿಸಿದವು. ಕರ್ನಾಟಕವು ನ್ಯಾಯಾಲಯದ ಆದೇಶ ಉಲ್ಲಂಘಿಸುತ್ತಿದೆ. ಕುರಿತು ನ್ಯಾಯಾಧಿಕರಣದಲ್ಲಿ ದೂರು ಸಲ್ಲಿಸಲಾಗುವುದು. ಮಹದಾಯಿ ನಮ್ಮ ತಾಯಿ. ಅದನ್ನು ರಕ್ಷಿಸಲು ನಾವು ಬದ್ಧ. ಆದರೆ, ವಿಷಯದಲ್ಲಿ ಕರ್ನಾಟಕ ರಾಜಕೀಯ ಆಟವಾಡುತ್ತಿದೆ ಎಂದು ಪಾಲ್ಯೇಕರ್ ದೂರಿದರು. ನ್ಯಾಯಾಧಿಕರಣಕ್ಕ್ಕೆ ದೂರು: ನ್ಯಾಯಾಧಿಕರಣದ ಸ್ಪಷ್ಟ ನಿರ್ದೇಶನ ಇದ್ದರೂ ಅದನ್ನು ಉಲ್ಲಂಘಿಸಿ ಕರ್ನಾಟಕ, ಕಳಸಾ-ಬಂಡೂರಿ ನಾಲಾ ನಿರ್ವಿಸುತ್ತಿದೆ. ಕುರಿತು ಫೆಬ್ರವರಿ ೬ರಿಂದ ಆರಂಭವಾಗುವ ನ್ಯಾಯಾಧಿಕರಣದಲ್ಲಿ ದೂರು ಸಲ್ಲಿಸಲಾಗುವುದು ಎಂದು ಗೋವಾ ಸಾಲಿಸಿಟರ್ ಜನರಲ್ ಆತ್ಮಾರಾಮ ನಾಡಕರ್ಣಿ ತಿಳಿಸಿದರು. ಕರ್ನಾಟಕವು ಕಳಸಾ ನಾಲೆಗೆ ಅಣೆಕಟ್ಟು ನಿರ್ವಿಸಿದರೆ, ಗೋವಾಕ್ಕೆ ಮಹದಾಯಿ ನದಿಯ ಒಂದು ಹನಿ ನೀರು ಬರುವುದಿಲ್ಲ. ಕರ್ನಾಟಕವು ಭಾಗದ ನೀರನ್ನು ಮಲಪ್ರಭೆಗೆ ಬಿಡಲು ಯೋಚಿಸಿದೆ. ಅದರ ವಿರುದ್ಧ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ನಾಡಕರ್ಣಿ ಹೇಳಿದರು.  ಅಧಿಕಾರಿಗಳ ತಂಡ: ಮಹದಾಯಿ ನದಿ ನೀರನ್ನು ಕರ್ನಾಟಕದ ಕಡೆ ತಿರುಗಿಸಲಾಗಿದೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ನದಿ ತಿರುವು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಧಿಕಾರಗಳ ತಂಡ ಒಂದನ್ನು  ಕರ್ನಾಟಕ ಗಡಿ ಭಾಗದ ಗ್ರಾಮಗಳಿಗೆ ಹಿಂದಿನ ದಿನವಷ್ಟೇ ಕಳುಹಿಸಿತ್ತು. ಮಹದಾಯಿ ನದಿ ನೀರು ತಡೆಯುವುದಕ್ಕಾಗಿ ಕರ್ನಾಟಕ ಕಣಕುಂಬಿ ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸುವ ಕೆಲಸ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲ್ಯೇಕರ್ ಸುದ್ದಿಗಾರರಿಗೆ ತಿಳಿಸಿದ್ದರು. ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕವು ಕಣಕುಂಬಿ ಗ್ರಾಮದಲ್ಲಿ ಕಾಮಗಾರಿ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ನಾನು ಮುಖ್ಯ ಅಭಿಯಂತರರಿಗೆ ಸೂಚಿಸಿದ್ದೇನೆ ಎಂದು ಪಾಲೇಕರ್ ಅವರು ಸುದ್ದಿ ಸಂಸ್ಥೆಗೆ ಹೇಳಿದ್ದರು.

2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ಅವರ ವಿರುದ್ಧ ಸುಪ್ರಿಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಬಂಡಾಯ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡದೇ ಇರಲು ಕೇಂದ್ರ ಸರ್ಕಾರ ತಳೆದ ನಿಲುವನ್ನು ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ (ಎಸ್ ಸಿಬಿಎ) ಸ್ವಾಗತಿಸಿತು. ಸಿಜೆಐ ಮತ್ತು ಇತರ ನ್ಯಾಯಮೂರ್ತಿಗಳ ನಡುವಣ ಭಿನ್ನಮತ ನಿವಾರಣೆಗೆ ಯತ್ನಿಸಿರುವ ಎಸ್ ಸಿಬಿಎ ಎಲ್ಲ ನ್ಯಾಯಮೂರ್ತಿಗಳನ್ನೂ ಭೇಟಿ ಮಾಡಲು ನಿಯೋಗವೊಂದನ್ನು ರಚಿಸಿತು. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸಲು ಆಸ್ಪದ ನೀಡಬಾರದು ಎಂದು ಹೇಳಿದ ಎಸ್ ಸಿಬಿಎ ಅಧ್ಯಕ್ಷ ಮನನ್ ಮಿಶ್ರ ಅವರು ಒಂದೆರಡು ದಿನಗಳಲ್ಲಿ ಬಿಕ್ಕಟ್ಟು ಶಮನಗೊಳ್ಳಲಿದೆ ಎಂದು ಹಾರೈಸಿದರು. ಜನವರಿ 15ರ ಸೋಮವಾರ ಸುಪ್ರೀಂಕೋರ್ಟಿನ ಮುಂದೆ ಬರಬೇಕಾಗಿರುವ ಎಲ್ಲ ಪ್ರಕರಣಗಳನ್ನು ಸಿಜೆಐ ಮತ್ತು ನಾಲ್ವರು ಭಿನ್ನಮತೀಯ ನ್ಯಾಯಮೂರ್ತಿಗಳನ್ನು ಒಳಗೊಂಡ ಐವರು ಉನ್ನತ ನ್ಯಾಯಮೂರ್ತಿಗಳ ಪೀಠಗಳಿಗೆ ವರ್ಗಾಯಿಸಬೇಕು  ಎಂದು ಎಸ್ ಬಿಸಿಎ ಮನವಿ ಮಾಡಿತು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೊರತಾಗಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಕೂಡಾ ಸಭೆ ನಡೆಸಿ, ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳ ನಡುವಣ ಬಿಕ್ಕಟ್ಟು ಗಂಭೀರವಾಗಿದ್ದು, ತತ್ ಕ್ಷಣವೇ ಇತ್ಯರ್ಥವಾಗಬೇಕು ಎಂದು ಹೇಳಿತು. ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೂ ಕೊಲಿಜಿಯಂ ನ್ಯಾಯಮೂರ್ತಿಗಳನ್ನು ನೇಮಕ ಮಾಡುತ್ತಿದೆ. ನಾವೂ ಇದನ್ನು ಒಂದು  ವಿಷಯ ಎಂಬುದಾಗಿ ಪರಿಗಣಿಸುತ್ತೇವೆ. ವಿಚಾರವನ್ನು ನಾವು ಸರ್ಕಾರದ ಬಳಿಗೆ ಒಯ್ಯುತ್ತೇವೆ. ಆದರೆ ಇದು ರೀತಿಯಾಗಿ ಸಾರ್ವಜನಿಕರ ಮುಂದಕ್ಕೆ ಹೋಗುವಷ್ಟು ದೊಡ್ಡ ವಿಷಯವಲ್ಲ. ಇಂತಹ ವಿಷಯಗಳ ಬಗ್ಗೆ ಕಿರುಕುಳ ಸೃಷ್ಟಿಸುವ ಮೂಲಕ ನ್ಯಾಯಾಂಗದ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಬಾರದು ಎಂದು ಮಿಶ್ರ ನುಡಿದರು. ನಾವು ರಾಹುಲ್ ಗಾಂಧಿ ಮತ್ತು ರಾಜಕೀಯ ಪಕ್ಷಗಳಿಗೆ ನಮ್ಮ ನ್ಯಾಯಾಂಗದ ಬಗ್ಗೆ ಮಾತನಾಡಲು ಅವಕಾಶ ಕೊಟ್ಟಿದ್ದೇವೆ. ಇದು ದುರದೃಷ್ಟಕರ. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಪರವಾಗಿ ನಾನು ರಾಹುಲ್ ಗಾಂಧಿ ಮತ್ತು ಇತರ ರಾಜಕೀಯ ಪಕ್ಷಗಳಿಗೆ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಮನವಿ ಮಾಡುವೆ ಎಂದು ಮಿಶ್ರ ಹೇಳಿದರು. ಸುಪ್ರೀಂಕೋರ್ಟಿನ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡದೇ ಇರಲು ನಿರ್ಧರಿಸಿದ ಸರ್ಕಾರದ ನಿರ್ಧಾರವನ್ನು ನಾವು ಮೆಚ್ಚುತ್ತೇವೆ.  ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪ್ರಧಾನಿ ಮತ್ತು ಕಾನೂನು ಸಚಿವರು ಈಗಾಗಲೇ ಹೇಳಿದ್ದಾರೆ. ಬಾರ್ ನಿರ್ಧಾರವನ್ನು ಸ್ವಾಗತಿಸುತ್ತದೆ ಎಂದು ಅವರು ನುಡಿದರು. ಹೇಗಾದರೂ ಮಾಡಿ ನಾವು ಬಿಕ್ಕಟ್ಟುನ್ನು ಬಗೆಹರಿಸಬೇಕು. ಇದು ಇನ್ನೊಮ್ಮೆ ಮಾಧ್ಯಮದ ಮುಂದೆ ಹೋಗಬಾರದು. ವಿಷಯವನ್ನು ರಾಜಕೀಯಗೊಳಿಸಲಾಗಿದೆ. ಇನ್ನೊಮ್ಮೆ ಇಂತಹುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ನಾವು ನ್ಯಾಯಮೂರ್ತಿಗಳಿಗೆ ಮನವಿ ಮಾಡುತ್ತೇವೆ. ಈಗ ನಮ್ಮ ಮೊದಲ ಕ್ರಮ ಸಿಜೆಐ ಮತ್ತು ಅವರಿಗೆ ಪತ್ರ ಬರೆದ ನಾಲ್ವರು ನ್ಯಾಯಮೂರ್ತಿಗಳನ್ನು ಹೊರತು ಪಡಿಸಿ ಉಳಿದ ಎಲ್ಲ ನ್ಯಾಯಮೂರ್ತಿಗಳನ್ನು ಭೇಟಿ ಮಾಡುವುದು ಎಂದು ಮಿಶ್ರ ಹೇಳಿದರು.


2017: ಬಾರ್ಮರ್: ಭಾರತೀಯ ವಾಯುಪಡೆ ಮುಖ್ಯಸ್ಥ ಬಿ.ಎಸ್. ಧನೋವ್ ಹಿಂದಿನ ದಿನ ಸಹ ಪೈಲಟ್ ಸಹಾಯವಿಲ್ಲದೇ ಏಕಾಂಗಿಯಾಗಿ ಯುದ್ಧ ವಿಮಾನ ಮಿಗ್-21 ಹಾರಾಟ ನಡೆಸಿದರು. ರಾಜಸ್ಥಾನದ ಉತ್ತರ್ಲೈ ವಾಯುನೆಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಧನೋವ್ ಏಕಾಂಗಿಯಾಗಿ ಮಿಗ್ 21 ಹಾರಾಟ ನಡೆಸಿರುವ ಬಗ್ಗೆ ಭಾರತೀಯ ವಾಯು ಪಡೆ ಮಾಹಿತಿ ನೀಡಿದ್ದು, ಇದೊಂದು ಅಪರೂಪದ ಸಾಧನೆಯಾಗಿದೆ ಎಂದು ತಿಳಿಸಿತು.. ಸೇನಾ ಮುಖ್ಯಸ್ಥರು ಏಕಾಂಗಿಯಾಗಿ ಯುದ್ಧವಿಮಾನವನ್ನು ಹಾರಾಟ ನಡೆಸಿರುವುದು ಇದೇ ಮೊದಲು ಎಂದು ಅದು ಹೇಳಿತು. ಧನೋವ್ ಸೇನಾ ಪಡೆ ಮುಖ್ಯಸ್ಥರಾದ ಬಳಿಕ ಇದೇ ಮೊದಲ ಬಾರಿಗೆ ಉತ್ತರ್ಲೈ ವಾಯುನೆಲೆಗೆ ಭೇಟಿ ನೀಡಿದ್ದು, ವಾಯುನೆಲೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ವಿಮಾನ ಸುರಕ್ಷತೆಯ ವಿಚಾರವಾಗಿ ಸಾಕಷ್ಟು ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಧನೋವ್ ಏಕಾಂಗಿಯಾಗಿ ಹಾರಾಟ ನಡೆಸಿ ಸೈನಿಕರಲ್ಲಿ ಹೊಸ ಹುರುಪು ತುಂಬುವ ಪ್ರಯತ್ನ ಮಾಡಿದರು. ಧನೋವ್ ಕಾರ್ಗಿಲ್ ಯುದ್ಧದ ವೇಳೆಯಲ್ಲಿಯೂ ಯುದ್ಧ ವಿಮಾನದಲ್ಲಿ ಕುಳಿತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




2017:ನವದೆಹಲಿಕರ್ನಾಟಕದ ಅಕ್ರಮ ಸಕ್ರಮ ಯೋಜನೆ ಜಾರಿಗೊಳಿಸದಂತೆ
ಮುಖ್ಯನ್ಯಾಯಮೂರ್ತಿ ಜೆ.ಎಸ್ಖೇಹರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು
ತಡೆಯಾಜ್ಞೆ ನೀಡಿತುಅಕ್ರಮ ಸಕ್ರಮ ಯೋಜನೆಯ ಎಲ್ಲ ಪ್ರಕ್ರಿಯೆಗಳನ್ನೂ
ತತ್ ಕ್ಷಣದಿಂದಲೇ ಸ್ಥಗಿತಗೊಳಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ
 ಆಜ್ಞಾಪಿಸಿತುಅಕ್ರಮ ಸಕ್ರಮ ಯೋಜನೆಗೆ ಹಸಿರು ನಿಶಾನೆ ತೋರಿಸಿ ಕರ್ನಾಟಕ
 ಹೈಕೋರ್ಟ್ 2016 ಡಿಸೆಂಬರ್ ತಿಂಗಳಲ್ಲಿ ನೀಡಿದ್ದ ಆದೇಶವನ್ನುಸುಪ್ರೀಂ ಕೋರ್ಟ್  ರದ್ದು ಪಡಿಸಿತು.. ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ
ನಮ್ಮಬೆಂಗಳೂರು
 ಫೌಂಡೇಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ
ನಡೆಸಿದ ಸುಪ್ರೀಂಕೋರ್ಟ್  ಆದೇಶ ನೀಡಿತುಯೋಜನೆಯ ವಿರುದ್ಧ
 ಫೌಂಡೇಶನ್ ಮಂಡಿಸಿದ ವಾದದಲ್ಲಿ ಹುರುಳಿದೆ ಎಂದು ಹೇಳಿದ ಸುಪ್ರೀಂ
ಕೋರ್ಟ್
ಫೌಂಡೇಶನ್ ಅರ್ಜಿಯನ್ನು ಪರಿಶೀಲಿಸಲು ಒಪ್ಪಿಗೆ ನೀಡಿತು.
 
ನ್ಯಾಯಾಲಯವು ಮುಂದೆ ಅರ್ಜಿಯ ಬಗ್ಗೆ ವಿವರವಾಗಿ ವಿಚಾರಣೆ ನಡೆಸಲಿದೆ.
 ವಿಚಾರವಾಗಿ ವಿಸ್ತ್ರತ ಚರ್ಚೆ ನಡೆಯಬೇಕಾಗಿದೆ ಎಂದೂ ಪೀಠವು ಅಭಿಪ್ರಾಯ
 ಪಟ್ಟಿತುಮಂಗಳೂರು ಅಭಿವೃದ್ಧಿ ನಾಗರಿಕರ ವೇದಿಕೆ ಮತ್ತು ನಮ್ಮ ಬೆಂಗಳೂರು ಫೌಂಡೇಶನ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು
 ಕಳೆದ ಡಿಸೆಂಬರ್ ತಿಂಗಳಲ್ಲಿ ವಜಾಗೊಳಿಸಿದ್ದ ಕರ್ನಾಟಕ ಹೈಕೋರ್ಟ್ ಎಲ್ಲ
ಅಕ್ರಮ
 ರಚನೆಗಳುಕಟ್ಟಡಗಳುಭೂಮಿ ಇತ್ಯಾದಿಯನ್ನು ಸಕ್ರಮಗೊಳಿಸುವ
ಸರ್ಕಾರದ ಅಕ್ರಮ ಸಕ್ರಮ ಯೋಜನೆ ಜಾರಿಗೆ ಹಸಿರು ನಿಶಾನೆ ತೋರಿಸಿತ್ತು. 2014 ಮೇ 28ರಂದು ಅಕ್ರಮ ರಚನೆಗಳುಭೂಮಿಕಟ್ಟಡ ಇತ್ಯಾದಿಗಳನ್ನು ಸಕ್ರಮಗೊಳಿಸಲು ಅವಕಾಶ ಕಲ್ಪಿಸಿ ಹೊರಡಿಸಲಾಗಿದ್ದ ರಾಜ್ಯ ಸರ್ಕಾರದ ಪ್ರಕಟಣೆಯನ್ನು ರದ್ದು ಪಡಿಸುವಂತೆ 
ಸಾರ್ವಜನಿಕ
 ಹಿತಾಸಕ್ತಿ ಅರ್ಜಿಗಳಲ್ಲಿ ಕೋರಲಾಗಿತ್ತು.

2017: ನವದೆಹಲಿ: ಜಮ್ಮು ಕಾಶ್ಮೀರದ ಅಖ್ನೂರ್ನಲ್ಲಿ ಸೋಮವಾರ ಜ.9ರಂದು ನಡೆದ ಉಗ್ರ ದಾಳಿಯಲ್ಲಿ ನಾವು 30 ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದೇವೆ ಎಂದು  ಜಮಾತ್-ಉದ್-ದವಾ (ಜೆಯುಡಿ) ಮುಖ್ಯಸ್ಥ ಹಫೀಜ್ ಸಯೀದ್ ಪ್ರತಿಪಾದಿಸಿದ್ದು, ಭಾರತೀಯ ಸೇನೆ ಇದನ್ನು ನಿರಾಕರಿಸಿತು. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‍‍ಬಾದ್ನಲ್ಲಿ ತನ್ನ ಸಂಘಟನೆಯ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಯೀದ್, ಭಾರತೀಯ ಯೋಧರನ್ನು ತಮ್ಮ ಸಂಘಟನೆ ಹತ್ಯೆಗೈದಿರುವುದಾಗಿ ವಾದಿಸಿದ. ತನ್ನಸಂಘಟನೆ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದೆ ಎಂದು ಹಫೀಜ್ ಹೇಳಿದ. ಆದರೆ ಅಖ್ನೂರ್ನಲ್ಲಿ ಉಗ್ರರು ಜನರಲ್ ರಿಸರ್ವ್ ಇಂಜಿನಿಯರ್ ಫೋರ್ಸ್ (ಜಿಆರ್ಇಎಫ್) ಶಿಬಿರದ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಅಲ್ಲಿನ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಗುಂಡಿಗೆ ಬಲಿಯಾಗಿದ್ದರು. ಸೆಪ್ಟೆಂಬರ್‍‍ನಲ್ಲಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಉಗ್ರ ದಾಳಿ ನಡೆಸಿದೆ ಎಂದು ಹೇಳಿದ್ದು ಸುಳ್ಳು. ಭಾರತ ರೀತಿ ಹೇಳಿಕೆ ನೀಡಿ ಜಗತ್ತನ್ನು ಮೋಸ ಮಾಡುತ್ತಿದೆ ಎಂದೂ ಸಯೀದ್ ಹೇಳಿದ. ನಿರ್ದಿಷ್ಟ ದಾಳಿ ಏನು ಎಂಬುದನ್ನು ತೋರಿಸಲು ನೀವು ಮುಜಾಹಿದ್ದೀನ್ ಸಂಘಟನೆಗೆ ಅವಕಾಶ ನೀಡಿದ್ದೀರಿ. ಜಮ್ಮುವಿನಲ್ಲಿ ಯಾರೊಬ್ಬರಿಗೂ ಪ್ರವೇಶಿಸಲು ಸಾಧ್ಯವಾಗದೇ ಇರುವ ಪ್ರದೇಶಕ್ಕೆ ನಮ್ಮ ಯುವಕರು ನುಗ್ಗಿದ್ದಾರೆ. ಶಿಬಿರದೊಳಗಿರುವ 10 ಕೋಣೆಗಳಿಗೆ ನುಗ್ಗಿದ ಯುವಕರು 30 ಯೋಧರನ್ನು ಹತ್ಯೆ ಮಾಡಿದ್ದಾರೆ. ನಮ್ಮ ಯುವಕರು ಶಿಬಿರಗಳನ್ನು ಧ್ವಂಸ ಮಾಡಿ ಸುರಕ್ಷಿತವಾಗಿ ಹಿಂತಿರುಗಿದ್ದಾರೆ ಎಂದು ಸಯೀದ್ ಹೇಳಿದ.  ಆದರೆ ಸಯೀದ್ ಅವರ ವಾದದಲ್ಲಿ ಹುರುಳಿಲ್ಲ ಎಂದು  ಭಾರತೀಯ ಸೇನೆ  ಪ್ರತಿಕ್ರಿಯೆ ನೀಡಿತು.
2017: ನವದೆಹಲಿ: ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿರುವ ಕಾಲೊರಸು (ಡೋರ್ಮ್ಯಾಟ್‌)
ಮಾರಾಟಕ್ಕಿಟ್ಟು  ಕಾಮರ್ಸ್ಸಂಸ್ಥೆ  ‘ಅಮೆಜಾನ್ ಕೆನಡಾ' ವಿವಾದಕ್ಕೊಳಗಾಗಿತ್ತು. ಆದರೆ ಅಮೆಜಾನ್ ಕೆನಡಾ ಮಾತ್ರವಲ್ಲ ಅಮೆಜಾನ್ ಅಮೆರಿಕ ಭಾರತದ ತ್ರಿವರ್ಣ ಧ್ವಜವಿರುವ ಶೂ, ಶೂಲೇಸ್ಗಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತು. ಲಾಸ್ ಏಂಜಲೀಸ್ ಮೂಲದ ಎನ್‍.ವೈ.ಎಲ್. ಕಂಪನಿ ಚುಕ್ಕಾ ಕಾನ್ವಾಸ್ ಶೂ  ಅಮೆಜಾನ್ನಲ್ಲಿ ಮಾರಾಟಕ್ಕಿಟ್ಟಿದೆ. ಶೂ ಬೆಲೆ 43.99 ಡಾಲರ್ (ಅಂದಾಜು ₹3,000) ಆಗಿದೆಶೂ ಲೇಸ್ಓವಲ್ ಚಾರ್ಮ್ ಡೆಕೊರೇಷನ್ಎಂಬ ಉತ್ಪನ್ನದಲ್ಲಿಯೂ ಭಾರತದ ಧ್ವಜದ ಚಿತ್ರಿವಿದೆ. ಅಮೆಜಾನ್ ಅಮೆರಿಕ ವೆಬ್ಸೈಟ್ನಲ್ಲೀಗ ತ್ರಿವರ್ಣ ಧ್ವಜದ ಚುಕ್ಕಾ ಕಾನ್ವಾಸ್ ಶೂ ಜಾಹೀರಾತು ಲಭ್ಯವಿಲ್ಲ. ಆದರೆ ತ್ರಿವರ್ಣ ಧ್ವಜದ  ಶೂ ಲೇಸ್ ಡೆಕೊರೇಷನ್ಉತ್ಪನ್ನ ಲಭ್ಯವಿದೆ. ಅಮೆಜಾನ್ ಸಂಸ್ಥೆ ಮಾತ್ರವಲ್ಲ ಅಮೆರಿಕದ ಆನ್ಲೈನ್ ಮಾರಾಟ ಸಂಸ್ಥೆಯಾದ ಕೆಫೆ ಫ್ರೆಸ್ನಲ್ಲಿ ನಾಯಿಮರಿಗಳಿಗೆ ಹಾಕುವ ಟೀಶರ್ಟ್ ನಲ್ಲಿ ಭಾರತದ  ರಾಷ್ಟ್ರೀಯ ಲಾಂಛನ ಪ್ರಿಂಟ್ ಮಾಡಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ರಾಷ್ಟ್ರೀಯ ಲಾಂಛನವನ್ನು ರೀತಿ ಉತ್ಪನ್ನಗಳಲ್ಲಿ ಬಳಸುವುದು ಅಪರಾಧವಾಗಿದೆ. ಕೆಫೆ ಪ್ರೆಸ್ ವೆಬ್ಸೈಟ್ಲ್ಲಿ Indian Flag ಎಂಬ ಕೀ ವರ್ಡ್ ಸರ್ಚ್ ಮಾಡಿದರೆ ಭಾರತದ ರಾಷ್ಟ್ರಧ್ವಜ, ರಾಷ್ಟ್ರೀಯ ಲಾಂಛನವಿರುವ ಟೀ ಶರ್ಟ್, ಸ್ಟಿಕ್ಕರ್  ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ.
2017: ನವದೆಹಲಿ: ಸಮಾಜವಾದಿ ಪಕ್ಷದಸೈಕಲ್ಲಾಂಛನ ವಿವಾದಕ್ಕೆ ಸಂಬಂಧಿಸಿದಂತೆ ಪಕ್ಷದ ಉಭಯ ಬಣಗಳ ಅಹವಾಲು ಆಲಿಸಿದ ಬಳಿಕ ಚುನಾವಣಾ ಆಯೋಗವು ತನ್ನ ತೀರ್ಪನ್ನು ಕಾಯ್ದಿರಿಸಿತು. ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಅವರ ಪುತ್ರ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸೈಕಲ್ ಚಿಹ್ನೆ ತಮಗೇ ಸೇರಬೇಕು ಎಂದು ಚುನಾವಣಾ ಆಯೋಗದ ಮುಂದೆ ವಾದಿಸಿದರು. ವಾದ ಆಲಿಸುವ ಸಲುವಾಗಿ ಚುನಾವಣಾ ಆಯೋಗವು ಉಭಯ ಬಣಗಳನ್ನೂ ಕರೆಸಿಕೊಂಡಿತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಚುನಾವಣಾ ಆಯೋಗದ ಮುಂದೆ ಅಖಿಲೇಶ್ ಯಾದವ್ ಪರ ವಾದಿಸಲು ಆಗಮಿಸಿದ್ದರು. ಸುಮಾರು 4 ಗಂಟೆಗಳಿಗೂ ಹೆಚ್ಚಿನ ವಿಚಾರಣೆ ಸಂದರ್ಭದಲ್ಲಿ ಸಿಬಲ್ ಅವರು ಬಹುತೇಕ ಸಂಸತ್ ಸದಸ್ಯರು, ಶಾಸಕರು ಮತ್ತು ಎಸ್ಪಿ ಪ್ರತಿನಿಧಿಗಳು ಅಖಿಲೇಶ್ ಯಾದವ್ ಜೊತೆಗಿದ್ದಾರೆ ಎಂದು ವಾದಿಸಿದರು. ಪ್ರತಿವಾದ ಮಂಡಿಸಿದ ಮುಲಾಯಂ ಸಿಂಗ್ ಬಣವು ಅಖಿಲೇಶ್ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಸಮಾವೇಶವೇ ಎಸ್ಪಿ ಸಂವಿಧಾನಕ್ಕೆ ವಿರುದ್ಧ ಎಂದು ವಿವರಿಸಿತು.
2017: ನವದೆಹಲಿ: ಆಂಧ್ರ ಪ್ರದೇಶದಲ್ಲಿ ಕೋಳಿ ಅಂಕ ನಿಷೇಧ ಜಾರಿ ನಿಟ್ಟಿನಲ್ಲಿ ಹೊಸದಾಗಿ ಯಾವುದೇ ಆದೇಶ ಹೊರಡಿಸಲು ಸುಪ್ರೀಂಕೋರ್ಟ್  ನಿರಾಕರಿಸಿತು. ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಪಾಲಿಸಲಾಗುತ್ತಿಲ್ಲ ಎಂಬುದಾಗಿ ತಿಳಿಸಿದಾಗ ಕೋರ್ಟ್ ತೀರ್ಪು ಪಾಲನೆ ಸಲುವಾಗಿ ಹೊಸ ಆದೇಶ ಹೊರಡಿಸಲು ನಿರಾಕರಿಸಿತು. ಸಾಮಾಜಿಕ ಕಾರ್ಯಕರ್ತೆ ಗೌರಿ ಮೌಲ್ಲೇಖಿ ಅವರು ಸಲ್ಲಿಸಿದ್ದ ಹೊಸ ಅರ್ಜಿಯನ್ನು ಪ್ರಸ್ತಾಪಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೈಟ್ಸ್ ಅವರು ಕೋಳಿ ಅಂಕಗಳನ್ನು ನಿಷೇಧಿಸಿ ಹೈಕೋರ್ಟ್ ನೀಡಿದ ಆದೇಶವನ್ನು ರಾಜ್ಯ ಆಡಳಿತವು ಪಾಲಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟಿಗೆ ವಿವರಿಸಿದರು. ಆಗ ಪೀಠವು ಮನವಿಯನ್ನು ನಿರಾಕರಿಸಲಾಗಿದೆ ಎಂದು ಹೇಳಿತು. ಆಂಧ್ರ ಪ್ರದೇಶದಲ್ಲಿ ಸಂಕ್ರಾಂತಿ ಉತ್ಸವ ಕಾಲದಲ್ಲಿ ಕೋಳಿ ಅಂಕಗಳು ಅತ್ಯಂತ ಜನಪ್ರಿಯವಾಗಿವೆ. ಪರಂಪರಾಗತ ಕ್ರೀಡೆ ನಡೆದಾಗ ಕೋಟಿ ಗಟ್ಟಲೆ ರೂಪಾಯಿ ಮೌಲ್ಯದ ಬೆಟ್ಗಳನ್ನೂ ಕಟ್ಟಲಾಗುತ್ತದೆ.
2017: ನವದೆಹಲಿ: ಖಾದಿ ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) 2017 ಕ್ಯಾಲೆಂಡರ್ ಮುಖಪುಟದಲ್ಲಿ ಚರಕದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇರುವ ಭಾವಚಿತ್ರ ಪ್ರಕಟಿಸಿರುವ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರದ ಮೂಲಗಳು ಕ್ಯಾಲೆಂಡರ್ನಲ್ಲಿ ಮಹಾತ್ಮಾ ಗಾಂಧಿ ಅವರ ಚಿತ್ರವೇ ಇರಬೇಕು ಎಂದು ಯಾವುದೇ ನಿಯಮ ಇಲ್ಲ ಎಂದು ತಿಳಿಸಿವೆ. ಈ ಹಿಂದೆಯೂ ಹಲವು ಸಲ ಕೆವಿಐಸಿ ಮುದ್ರಿಸಿರುವ ಕ್ಯಾಲೆಂಡರ್ ಮತ್ತು ಡೈರಿಯಲ್ಲಿ ಗಾಂಧಿ ಚಿತ್ರ ಇರಲಿಲ್ಲ. 1996, 2002, 2005, 2011, 2013 ಮತ್ತು 2016ರಲ್ಲಿ ಗಾಂಧಿ ಚಿತ್ರದ ಬದಲಾಗಿ ಬೇರೆ ಚಿತ್ರಗಳನ್ನು ಬಳಸಿಕೊಳ್ಳಲಾಗಿತ್ತು. ವರ್ಷ ಮೋದಿ ಅವರ ಚಿತ್ರ ಬಳಸಿಕೊಂಡಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ. ಆದರೆ ಮೋದಿ ಅವರು ಯುವಜನರ ಐಕಾನ್ ಆಗಿ ಗುರುತಿಸಿಕೊಂಡಿದ್ದಾರೆ. ಅವರ ಪ್ರಚಾರದಿಂದಾಗಿ ಖಾದಿ ಉತ್ಪನ್ನಗಳಿಗೆ ಯುವಜನರು ಮಾರು ಹೋಗಿದ್ದಾರೆ. ಕಳೆದ 50 ವರ್ಷಗಳಲ್ಲಿ ಮಾರಾಟ ಪ್ರಮಾಣ ಕೇವಲ 2-7ಶೇ ಇತ್ತು. ಆದರೆ ಕಳೆದ 2 ವರ್ಷಗಳಲ್ಲಿ ಮಾರಾಟ ಪ್ರಮಾಣ ಶೇ. 34 ಕ್ಕೆ ಏರಿಕೆಯಾಗಿದೆ. ಹಾಗಾಗಿ ಮೋದಿ ಅವರ ಭಾವಚಿತ್ರ ಬಳಸಲಾಗಿದೆ ಎಂದು ಮೂಲಗಳು ತಿಳಿಸಿದವು.  ವಿರೋಧ ಪಕ್ಷಗಳು ಕ್ಯಾಲೆಂಡರ್ ವಿಚಾರವಾಗಿ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವಿಟರ್ನಲ್ಲಿ ಮೋದಿ ವಿರುದ್ಧ ಕಿಡಿ ಕಾರಿದ್ದರು.
2017: ನವದೆಹಲಿ: ಯೋಧರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ತಮ್ಮ ದೂರುಗಳನ್ನು ಆಂತರಿಕವಾಗಿ ನೀಡಬೇಕು. ‘ದೂರು ಪೆಟ್ಟಿಗೆಯನ್ನ ಬಳಸಬಹುದು, ಅಥವಾ ನನಗೇ ನೇರವಾಗಿ ಯಾವುದೇ ದೂರು ನೀಡಬಹುದು ಎಂದು ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರು ಇಲ್ಲಿ ಹೇಳಿದರು. ಸೇನಾ ಮುಖ್ಯಸ್ಥರಾದ ಬಳಿಕ ನಡೆಸಿದ ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ಕಳಪೆ ಆಹಾರ ಹಾಗೂ ಉಪವಾಸ ಇರಬೇಕಾದ ಸ್ಥಿತಿ ಬಗ್ಗೆ ಗಡಿ ಭದ್ರತಾ ಪಡೆ ಅಥವಾ ಬಿಎಸ್ಎಫ್ ಯೋಧನೊಬ್ಬ ಇತ್ತೀಚೆಗೆ ವಿಡಿಯೋ ಮೂಲಕ ಬಹಿರಂಗಗೊಳಿಸಿದ್ದನ್ನು ಉಲ್ಲೇಖಿಸಿ ಮಾತುಗಳನ್ನು ಅವರು ಹೇಳಿದರು. ಬಿಎಸ್ಎಫ್ ಯೋಧನ ವಿಡಿಯೋ ಫೇಸ್ ಬುಕ್ನಲ್ಲಿ ಪ್ರಕಟಗೊಂಡ ಬಳಿಕ ವೇತನ ಮತ್ತಿತರ ಸಮಸ್ಯೆಗಳ ಬಗ್ಗೆ ದೂರಿದ ಇನ್ನಷ್ಟು ವಿಡಿಯೋಗಳು ಪ್ರಕಟಗೊಂಡಿದ್ದವು. ‘ನನಗೆ ನೇರವಾಗಿ ದೂರು ನೀಡಬಹುದು. ಅಥವಾ ಸೇನಾ ಕೇಂದ್ರ ಕಚೇರಿಗಳು ಮತ್ತು ಕಮಾಂಡ್ಗಳಲ್ಲಿ ಇಡಲಾಗಿರುವ ದೂರು ಪೆಟ್ಟಿಗೆಗಳಿಗೆ ತಮ್ಮ ದೂರು, ಸಲಹೆಗಳನ್ನು ಹಾಕಬಹುದು ಎಂದು ನುಡಿದ ರಾವತ್, ಇಂದು ಸೇನಾ ದಿನವಾಗಿರುವುದರಿಂದ ದಿನ ಅತ್ಯಂತ ಮಹತ್ವದ ದಿನ. ನಿಮ್ಮ (ಮಾಧ್ಯಮ) ಮೂಲಕ ಪ್ರತಿಯೊಬ್ಬ ಯೋಧನನ್ನೂ ತಲುಪಲು ನಾನು ಬಯಸಿದ್ದೇನೆ. ನಮ್ಮದು ಒಂದೇ ತಂಡ. ನಾವು ಒಂದೇ ಶಕ್ತಿಯಾಗಿ ಕೆಲಸ ಮಾಡಬೇಕು ಮತ್ತು ಭಾರತವು ಸುಭದ್ರ ಹಾಗೂ ಶಾಂತಿಯುತವಾಗಿರುವುದೆಂಬ ಖಾತರಿಯನ್ನು ನೀಡಬೇಕು ಎಂದು ಹೇಳಿದರು. ಭಾರತದ ಜಾತ್ಯತೀತ ವ್ಯವಸ್ಥೆಯನ್ನು ಹಾಳುಗೆಡವಲು ಯತ್ನಿಸುವ ವೈರಿಯನ್ನು ನಾವು ಸದೆಬಡಿಯುವ ಅಗತ್ಯವಿದೆ ಎಂದೂ ಜನರಲ್ ರಾವತ್ ಒತ್ತಿ ಹೇಳಿದರು.
2017: ನವದೆಹಲಿ: ಆನ್ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿಕೊಂಡಿರುವ ಕೆನಡದ ಅಮೆಜಾನ್ ಕಂಪನಿ ಮ್ಯಾಟ್, ಶೂಗಳ ಮೇಲೆ ತ್ರಿವರ್ಣ ಧ್ವಜ ಮುದ್ರಿಸಿ ಮಾರಾಟಕ್ಕೆ ಮುಂದಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಂಪನಿ ಈಗ ಬೇಷರತ್ ಕ್ಷಮೆಯಾಚಿಸಿತು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಮೆಜಾನ್ಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆಜಾನ್ ಇಂಡಿಯಾ ಸಂಸ್ಥೆಯ ಉಪಾಧ್ಯ ಕ್ಷ ಅಮಿತ್ ಅಗರ್ವಾಲ್ ಅವರು ಸಚಿವರಿಗೆ ಪತ್ರ ಬರೆದು ಕ್ಷಮೆಯಾಚಿಸಿದರು.. ಕಂಪನಿ ಭಾರತೀಯ ಕಾನೂನನ್ನು ಗೌರವಿಸುತ್ತದೆ. ಅಲ್ಲದೆ, ಭಾರತೀಯರ ಭಾವನೆಗಳನ್ನು ಗೌರವಿಸುತ್ತದೆ. ತ್ರಿವರ್ಣ ಧ್ವಜ ಮುದ್ರಿಸಿ, ಮಾರಾಟ ಮಾಡಿ ಅವಮಾನಿಸುವ ಉದ್ದೇಶ ಸಂಸ್ಥೆಯದ್ದಾಗಿರಲಿಲ್ಲ. ತ್ರಿವರ್ಣ ಧ್ವಜವಿರುವ ಡೋರ್ ಮ್ಯಾಟ್ಗಳು ಅಮೆಜಾನ್ ಸಂಸ್ಥೆಯದ್ದಲ್ಲ. ಅಮೆಜಾನ್ ಜತೆ ಒಪ್ಪಂದ ಮಾಡಿಕೊಂಡಿರುವ ಬೇರೊಂದು ಕಂಪನಿಗೆ ಸೇರಿದ್ದಾಗಿದೆ. ಕಣ್ತಪ್ಪಿನಿಂದ ಅಮೆಜಾನ್ ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿದೆ. ವಿಚಾರವಾಗಿ ಅಮೆಜಾನ್ ಭಾರತೀಯ ಕ್ಷಮೆಯಾಚಿಸುತ್ತದೆ. ಸಂಸ್ಥೆ ಈಗಾಗಲೇ ಪ್ರಾಡಕ್ಟ್ಗಳನ್ನು ವೆಬ್ಸೈಟ್ನಿಂದ ತೆಗೆದಿದೆ. ಅಲ್ಲದೆ ಡೋರ್ವ್ಯಾಟ್ಗಳನ್ನು ಮಾರುಕಟ್ಟೆಯಲ್ಲಿಯೂ ಮಾರಾಟ ಮಾಡಲು ನೀಡದಂತೆ ಕಂಪನಿಗೆ ತಿಳಿಸಿದ್ದೇವೆ ಎಂದು ವಿವರಿಸಿದರು.
2009: ಕರ್ನಾಟಕದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 2009-10ನೇ ಸಾಲಿನ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಮಸ್ಯೆ ಬಗೆಹರಿಯಿತು. ಎಂಜಿನಿಯರಿಂಗಿನಲ್ಲಿ ಸರ್ಕಾರಿ ಕೋಟಾದ ಶೇ 25ರಷ್ಟು ಸೀಟುಗಳಿಗೆ ಶುಲ್ಕದಲ್ಲಿ 10 ಸಾವಿರ ರೂಪಾಯಿ ಇಳಿಸಲಾಯಿತು. ಎಂಜಿನಿಯರಿಂಗಿನಲ್ಲಿ ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ತಲಾ ಶೇ 50: 50 ಪ್ರಮಾಣದಲ್ಲಿ ಸೀಟು ಹಂಚಿಕೆ ಮಾಡಲಾಗಿದ್ದು, ಸರ್ಕಾರಿ ಕೋಟಾದ ಶೇ 25ರಷ್ಟು ಸೀಟುಗಳಿಗೆ 25 ಸಾವಿರಕ್ಕೆ ಬದಲಾಗಿ ಈ ಬಾರಿ 15 ಸಾವಿರ ರೂಪಾಯಿ ಶುಲ್ಕವನ್ನು ನಿಗದಿ ಮಾಡಲಾಯಿತು. ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳ ಮಧ್ಯೆ ನಡೆದ ಮಾತುಕತೆ ಸಂದರ್ಭದಲ್ಲಿ ಒತ್ತಡಕ್ಕೆ ಮಣಿದ ಸರ್ಕಾರ, ಎಂಜಿನಿಯರಿಂಗಿನಲ್ಲಿ ಕಳೆದ ಬಾರಿಗಿಂತ ಶೇ 5ರಷ್ಟು ಹೆಚ್ಚಿನ ಸೀಟುಗಳನ್ನು ಖಾಸಗಿ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿತು. ಕಳೆದ ಬಾರಿ ಸರ್ಕಾರಿ ಕೋಟಾ ಶೇ 55 ಹಾಗೂ ಆಡಳಿತ ಮಂಡಳಿ ಕೋಟಾ ಶೇ 45ರಷ್ಟು ಇತ್ತು.

2009: ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಘಟಕವನ್ನೇ ನೀಡಬೇಕೆಂಬ ರಾಜ್ಯ ಸರ್ಕಾರದ ಬೇಡಿಕೆಗೆ ಕಿವಿಗೊಡದ ಕೇಂದ್ರ ಸರ್ಕಾರ, ಬೆಂಗಳೂರಿನಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ಸ್ಥಾಪನೆಗೆ ಚಾಲನೆ ನೀಡಿತು. ಮುಂಬೈ, ಕೊಲ್ಕತ್ತಾ, ಚೆನ್ನೈ ಮತ್ತು ಹೈದರಾಬಾದುಗಳಲ್ಲಿ ಎನ್‌ಎಸ್‌ಜಿ ಸ್ಥಾಪನೆಯ ಜತೆಯಲ್ಲಿ ಬೆಂಗಳೂರಿನಲ್ಲಿ ಭಯೋತ್ಪಾದನೆ ನಿಗ್ರಹ ಪಡೆ ಸ್ಥಾಪನೆ ಬಗ್ಗೆಯೂ ಕೇಂದ್ರ ಗೃಹಸಚಿವ ಪಿ.ಚಿದಂಬರಮ್ ಸೇನೆ ಮತ್ತು ಎನ್‌ಎಸ್‌ಜಿ ಮುಖ್ಯಸ್ಥರ ಜತೆ ಸಮಾಲೋಚನೆ ನಡೆಸಿದರು. ಉಳಿದ ನಾಲ್ಕು ಮೆಟ್ರೋಗಳ ಜತೆ ಬೆಂಗಳೂರಿಗೂ ಎನ್‌ಎಸ್‌ಜಿ ಘಟಕ ನೀಡಬೇಕೆಂದು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಧಾನಿ ಮನಮೋಹನ್‌ಸಿಂಗ್ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದರು. ಎನ್‌ಎಸ್‌ಜಿ ನೀಡದೆ ಹೋದರೆ ಹೋರಾಟದ ಹಾದಿ ತುಳಿಯಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದರು.

2009: ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್ 31ಕ್ಕೆ ಅಂತ್ಯವಾದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಇನ್ಫೊಸಿಸ್ ಟೆಕ್ನಾಲಜಿಸ್ ಕಂಪೆನಿ, ಒಟ್ಟು 1641 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತು. ಇದರ ಹಿಂದಿನ ವರ್ಷ ಇದೇ ಅವಧಿಯಲ್ಲಾದ ನಿವ್ವಳ ಲಾಭಕ್ಕಿಂತ ಶೇ 33.3 ಏರಿಕೆ ಸಾಧಿಸಿತು. ದೇಶದಲ್ಲಿ ಗರಿಷ್ಠ ಪ್ರಮಾಣದ ಸಾಫ್ಟ್‌ವೇರ್ ರಫ್ತು ವಹಿವಾಟು ಹೊಂದಿರುವ ಇನ್ಫೊಸಿಸ್, ತ್ರೈಮಾಸಿಕ ಅವಧಿಯಲ್ಲಿ ಒಟ್ಟು 5786 ಕೋಟಿ ರೂ. ರಫ್ತು ಆದಾಯ ಮಾಡಿ ಶೇ. 35.5 ಹೆಚ್ಚಳ ದಾಖಲಿಸಿತು.

2009: ಸತ್ಯಂ ಕಂಪ್ಯೂಟರ್‌ಗೆ ವಹಿಸಲಾಗಿದ್ದ ಬಹುತೇಕ ಪ್ರಾಜೆಕ್ಟ್ ಕಾರ್ಯಗಳನ್ನು ವಿಶ್ವಬ್ಯಾಂಕ್, ಭಾರತದ ನಂ.1 ಸ್ಥಾನದಲ್ಲಿರುವ ಐಟಿ ಕಂಪೆನಿ ಟಾಟಾ ಕನ್ಸ್‌ಲ್ಟೆನ್ಸಿ ಸರ್ವಿಸ್ (ಟಿಸಿಎಸ್)ಗೆ ವಹಿಸಿತು. ವಿಶ್ವಬ್ಯಾಂಕ್ ಕಳೆದ ಸೆಪ್ಟೆಂಬರ್ ತಿಂಗಳಿಂದ 8 ವರ್ಷ ಸತ್ಯಂ ಕಂಪ್ಯೂಟರ್ಸ್‌ನೊಂದಿಗೆ ವ್ಯವಹಾರ ನಡೆಸುವುದಕ್ಕೆ ನಿಷೇಧ ಹೇರಿತ್ತು. ಇದಾದ ನಂತರವಷ್ಟೇ ಕಂಪೆನಿಯ ಹಣದ ಮೋಸದ ಪ್ರಕರಣ ಬಯಲಿಗೆ ಬಂದಿತ್ತು. ಯೋಜನೆಗಳನ್ನು ಮತ್ತೆ ಭಾರತದ ಐಟಿ ಕಂಪೆನಿಗೆ ವಹಿಸಿದ್ದರಿಂದ ವಿಶ್ವಬ್ಯಾಂಕ್ ಭಾರತದ ಐಟಿ ಕಂಪೆನಿಗಳನ್ನು ಗುರಿಯಾಗಿಟ್ಟುಕೊಂಡು ನಿಷೇಧ ಹೇರಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು.

2009: ಎಲ್ಲದಕ್ಕೂ ಕೊನೆ ಎನ್ನುವುದಿದೆ. ಯಶಸ್ಸಿನ ಎತ್ತರ ಕಂಡವರ ಉತ್ಸಾಹದ ಹರಿವು ಕೂಡ ಅಂತ್ಯ ಕಾಣುತ್ತದೆ. ಆಸ್ಟ್ರೇಲಿಯಾದ ಬ್ಯಾಟಿಂಗ್ ಭುಜಬಲ ಪರಾಕ್ರಮಿ ಮ್ಯಾಥ್ಯು ಹೇಡನ್ ಕೂಡ ಅಂತಹ ಸಿಹಿ ಹಾಗೂ ಕಹಿ ನೆನಪುಗಳ ಬುತ್ತಿ ಕಟ್ಟಿಕೊಂಡು ಕ್ರಿಕೆಟಿಗೆ ಬ್ರಿಸ್ಬೇನಿನಲ್ಲಿ ವಿದಾಯ ಹೇಳಿದರು. ಮೆಲ್ಬರ್ನ್‌ನಲ್ಲಿ ಇನ್ನೊಂದು ಕ್ರಿಸ್‌ಮಸ್ ಸಂಭ್ರಮವನ್ನು ಅನುಭವಿಸಬೇಕೆಂದು ಮಗಳು ಗ್ರೇಸ್ ಕೇಳಿದರೂ ಒಪ್ಪಲಿಲ್ಲ. ಮತ್ತೊಂದು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಆಡುವವರೆಗೆ ಕಾಯುವ ಯೋಚನೆ ಮಾಡಲಿಲ್ಲ. 'ಸಾಕಮ್ಮ ಇನ್ನು' ಎಂದು ಹೇಳಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿಯೇ ಬಿಟ್ಟರು. ಅಲ್ಲಿಗೆ 'ಬ್ಯಾಟಿಂಗ್ ದೈತ್ಯ'ನ ಯುಗವೊಂದು ಕೊನೆಯಾಯಿತು. ಆಜಾನುಬಾಹು ಮ್ಯಾಥ್ಯು ಅವರು ಸುದ್ದಿಗಾರರ ಮುಂದೆ ಪ್ರತ್ಯಕ್ಷವಾಗಿ 'ಇದು ನನ್ನ ನಿವೃತ್ತಿಯ ದಿನ'ವೆಂದು ಪ್ರಕಟಿಸಿದಾಗ ಮುಗ್ಧ ಮಗುವಿನಂತೆ ಕಂಡರು. ಮೊದಲೇ ಸಿದ್ಧಪಡಿಸಿಕೊಂಡಿದ್ದ ನಿವೃತ್ತಿ ಪ್ರಕಟಣೆಯನ್ನು ಓದುವಾಗ ಕಣ್ಣೀರು ಕಟ್ಟೆ ಒಡೆಯಬಾರದೆಂದು ಎಷ್ಟೆಲ್ಲ ಪ್ರಯತ್ನ ಮಾಡಿದರೂ ತಡೆಯಲು ಸಾಧ್ಯವಾಗಲಿಲ್ಲ. ಕ್ರಿಕೆಟಿನಿಂದಾಗಿ ಜನರಿಂದ ದೊರೆತ ಪ್ರೀತಿಯು ಅವರ ಎದೆಯಲ್ಲಿ ಹೆಪ್ಪುಗಟ್ಟಿದ ಮಂಜನ್ನು ಕರಗಿಸಿ ಕಣ್ಣೀರ ಹನಿಯಾಗಿಸಿತು.

2008: ಸುಗುಣೇಂದ್ರ ತೀರ್ಥರು ದ್ವಂದ್ವಮಠ ಕೃಷ್ಣಾಪುರ ಮಠಾಧೀಶರಿಂದ ಶಿಷ್ಯರನ್ನು ಸ್ವೀಕರಿಸಿ ಅವರ ಮೂಲಕ ಪರ್ಯಾಯ ಪೀಠಾರೋಹಣ ಹಾಗೂ ಕೃಷ್ಣಪೂಜೆ ಮಾಡಿಸಬೇಕು ಎಂದು ಉಡುಪಿಯಲ್ಲಿ ನಡೆದ ಮಧ್ವಮಠಾಧೀಶರ ಮಹತ್ವದ ಸಭೆ ಒಕ್ಕೊರಲ ನಿರ್ಧಾರ ತೆಗೆದುಕೊಂಡಿತು. ಒಂದು ವೇಳೆ ಈ ಸಭೆಯ ನಿರ್ಣಯವನ್ನು ಪುತ್ತಿಗೆ ಶ್ರೀಗಳು ಒಪ್ಪದೇ ಇದ್ದಲ್ಲಿ ಜನವರಿ 15ರ ಮಧ್ಯಾಹ್ನದಿಂದ ಪೇಜಾವರ ಮಠದಲ್ಲಿ ಅಷ್ಟಮಠಗಳ ಆರು ಯತಿಗಳು ಕಠಿಣ ಉಪವಾಸ ಕೈಗೊಳ್ಳಬೇಕು ಎಂದು ಸಭೆ ತೀರ್ಮಾನಿಸಿತು.

2008: ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ತಾಂತ್ರಿಕ ದೋಷದ ಕಾರಣ ಸರಕು ಸಾಗಣೆ ಲಿಫ್ಟ್ ಕುಸಿದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಯೆಲ್ಲದಕೆರೆಯ ಸೋಮಶೇಖರ್ (30) ಹಾಗೂ ಬೋರನಕುಂಟೆ ಗ್ರಾಮದ ಆರ್.ರಾಜಣ್ಣ (30) ಎಂಬ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತರಾದರು. ಇವರಿಬ್ಬರೂ ಚಿಕ್ಕಮಗಳೂರು ಮೂಲದ ಈ ಕಂಪೆನಿಯ ಕೋಳಿ ಮಾಂಸ ಸಂಸ್ಕರಣಾ ಕಾರ್ಖಾನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

2008: ವಿಶ್ವದ ವಿಶಿಷ್ಟ 25 ರೈಲುಗಳ ಪಟ್ಟಿಯಲ್ಲಿ ಭಾರತದ `ಡೆಕ್ಕನ್ ಒಡಿಸ್ಸಿ ಎಕ್ಸ್ ಪ್ರೆಸ್' ರೈಲು ಸೇರಿದಂತೆ ಒಟ್ಟು ಮೂರು ರೈಲುಗಳು ಸೇರಿದವು. 100 ವರ್ಷದ ಹಿಂದೆ ಸಂಚರಿಸುತ್ತಿದ್ದ ಉಗಿಯಂತ್ರದ ರೈಲು ಹಾಗೂ `ಗಾಲಿಗಳ ಮೇಲೆ ಅರಮನೆ ` ರೈಲು ಕೂಡ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು. ಈ ಪಟ್ಟಿಯನ್ನು ಅಂತಾರಾಷ್ಟ್ರೀಯ ರೈಲು ಪ್ರಯಾಣಿಕರ ಸಂಘ ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಹ್ಯೂಸ್ಟನ್ನಿನಲ್ಲಿ ತಯಾರಿಸಿತು. ಅದರಲ್ಲಿ ಅತ್ಯಂತ ಐಷಾರಾಮಿ ಸೌಲಭ್ಯ ಹೊಂದಿರುವ `ಗೋಲ್ಡನ್ ಈಗಲ್ ಟ್ರಾನ್ಸಿಬ್ರೈನ್ ಎಕ್ಸ್ ಪ್ರೆಸ್' ರೈಲು ಮೊದಲನೆ ಸ್ಥಾನ ಪಡೆಯಿತು.

2008: ಬಿಹಾರದ ಗಯಾ ಜಿಲ್ಲೆಯಲ್ಲಿ ಪೊಲೀಸರ ಗುಂಡೇಟಿಗೆ ಆರು ಮಂದಿ ನಕ್ಸಲೀಯರು ಹತರಾದರು. ಬೆಟ್ಟ ಪ್ರದೇಶದಲ್ಲಿ ನಕ್ಸಲೀಯರು ಅಡಗಿದ್ದಾರೆಂಬ ಖಚಿತ ಸುಳಿವಿನ ಮೇಲೆ ನಡೆದ ಈ ಕಾರ್ಯಾಚರಣೆಯಲ್ಲಿ ಆರು ನಕ್ಸಲೀಯರು ಬಲಿಯಾದರು ಎಂದು ಡಿ ವೈ ಎಸ್ ಪಿ ಬಲರಾಮ್ ಕುಮಾರ್ ಚೌಧರಿ ತಿಳಿಸಿದರು.

2008: ಪಶ್ಚಿಮ ಆಫ್ಘಾನಿಸ್ಥಾನದ ಕಾಬೂಲನ್ನು ತತ್ತರಿಸುವಂತೆ ಮಾಡಿದ ನಿರಂತರ ಹಿಮಪಾತ ಮತ್ತು ಚಳಿಗೆ ಕನಿಷ್ಠ 52 ಮಂದಿ ಮೃತರಾದರು. ಇತ್ತೀಚಿನ ವರ್ಷಗಳಲ್ಲಿ ಚಳಿ ಮತ್ತು ಹಿಮಕ್ಕೆ ಈ ಪ್ರಮಾಣದ ಸಾವು ನೋವು ಸಂಭವಿಸಿರುವುದು ಇದೇ ಮೊದಲು.

2008: ಜಾಫ್ನಾ ಹಾಗೂ ಶ್ರೀಲಂಕಾದ ವಾಯವ್ಯ ಭಾಗದಲ್ಲಿ ಶ್ರೀಲಂಕಾ ಯೋಧರು ಹಾಗೂ ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 85 ಮಂದಿ ಯೋಧರು ಸೇರಿದಂತೆ 151 ಮಂದಿ ಮೃತರಾದರು.

2008: ಆಫ್ಘಾನಿಸ್ಥಾನ ಗಡಿಗೆ ಹೊಂದಿಕೊಂಡಿರುವ ದಕ್ಷಿಣ ವಾಜಿರಿಸ್ಥಾನ್ ಪ್ರದೇಶದಲ್ಲಿ ಅಡಗಿದ್ದ ತಾಲಿಬಾನ್ ಕಮಾಂಡರ್ ಬೈತುಲ್ಲಾ ಮೆಹಸೂದ್ ಅವರ ಬೆಂಬಲಿಗರ ಮೇಲೆ ಪಾಕಿಸ್ಥಾನದ ಸೈನ್ಯ ಭಾರಿ ಪ್ರಮಾಣದಲ್ಲಿ ದಾಳಿ ಮಾಡಿ, ಸುಮಾರು 40ರಿಂದ 50 ಉಗ್ರರನ್ನು ಹತ್ಯೆ ಮಾಡಿತು. ಈಚೆಗೆ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಸೇನೆಯು ಈ ಕಾರ್ಯಾಚರಣೆ ನಡೆಸಿತು.

2007: ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿ ಬ್ರೌನ್ ಗಂಡು ಮಗುವಿಗೆ ಜನ್ಮ ನೀಡಿದರು. ವೆಸ್ಲೆ ಮುಲಿಂದರ್ ಪತ್ನಿಯಾಗಿರುವ 28 ರ ಹರೆಯದ ಲೂಯಿ ಬ್ರೌನ್ ಸ್ವಾಭಾವಿಕವಾಗಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದರು.

2007: ಖ್ಯಾತ ಚಿತ್ರನಟಿ ಶಬಾನಾ ಅಜ್ಮಿ ಅವರಿಗೆ ಚಿತ್ರರಂಗಕ್ಕೆ ಸಲ್ಲಿಸಿದ ಸೇವೆಗಾಗಿ ಹೈದರಾಬಾದಿನಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

2007: ಟಾಟಾ ಸಮೂಹದ ತಾಜ್ ಹೋಟೆಲ್ಸ್ ರಿಸಾರ್ಟ್ಸ್ ಅಂಡ್ ಪ್ಯಾಲೇಸಸ್ ಸಂಸ್ಥೆಯು ಅಮೆರಿಕದ ಬೋಸ್ಟನ್ನಿನ 80 ವರ್ಷ ಇತಿಹಾಸ ಹೊಂದಿರುವ ರಿಜ್ ಹೋಟೆಲನ್ನು 7650 ಕೋಟಿ ರೂಪಾಯಿಗಳಿಗೆ ಖರೀದಿಸಿತು.

2006: ಡಾ. ಜಿ.ಎಸ್. ಶಿವರುದ್ರಪ್ಪ ವಿಶ್ವಸ್ತ ಮಂಡಲಿಯು 2005ನೇ ಸಾಲಿನ ಡಾ. ಜಿಎಸ್ಸೆಸ್ ಪ್ರಶಸ್ತಿಗೆ ವಿಮರ್ಶಕ ಡಾ. ಎಚ್. ಎಸ್. ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಿತು.

2004: ಹದಿನೈದು ಮಂದಿ ರೋಗಿಗಳನ್ನು ಕೊಂದುದಕ್ಕಾಗಿ ಶಿಕ್ಷೆಗೆ ಗುರಿಯಾಗಿದ್ದ ಬ್ರಿಟನ್ನಿನ ಸರಣಿ ಕೊಲೆಗಾರ ಹೆರಾಲ್ಡ್ ಶಿಪ್ ಮನ್ ಸೆರೆಮನೆಯ ಸೆಲ್ಲಿನಲ್ಲಿ ನೇಣು ಹಾಕಿಕೊಂಡಿದ್ದುದು ಪತ್ತೆಯಾಯಿತು.

2000: ಮೈಕ್ರೋಸಾಫ್ಟ್ ಚೇರ್ಮನ್ ಬಿಲ್ ಗೇಟ್ಸ್ ಮುಖ್ಯ ಎಕ್ಸಿಕ್ಯೂಟಿವ್ ಸ್ಥಾನದಿಂದ ಕೆಳಗಿಳಿದು ಕಂಪೆನಿ ಅಧ್ಯಕ್ಷ ಸ್ಟೀವ್ ಬಾಮರ್ (Steve Ballmer) ಅವರಿಗೆ ಈ ಸ್ಥಾನಕ್ಕೆ ಬಡ್ತಿ ನೀಡಿದರು.

1999: ಮೈಕೆಲ್ ಜೋರ್ಡಾನ್ ಅವರು ಷಿಕಾಗೋ ಬುಲ್ಸ್ ನಿಂದ ತಮ್ಮ ನಿವೃತ್ತಿಯನ್ನು ಘೋಷಿಸಿದರು. (2001ರ ಸೆಪ್ಟೆಂಬರಿನಲ್ಲಿ ವಾಷಿಂಗ್ಟನ್ ವಿಜಾರ್ಡ್ಸ್ ಪರ ಆಡುವ ಸಲುವಾಗಿ ತಾವು ಮತ್ತೆ ಕಣಕ್ಕೆ ಇಳಿಯುವುದಾಗಿ ಅವರು ಘೋಷಿಸಿದರು).

1982: ಮದ್ದೂರಿನಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ವೇದಿಕೆ ಕುಸಿದು ಬಿಜೆಪಿ ಅಧ್ಯಕ್ಷ ಅಟಲ್ ಬಿಹಾರಿ ವಾಜಪೇಯಿ ಗಾಯಗೊಂಡರು.

1960: ಕಲಾವಿದೆ ಸರ್ವಮಂಗಳಾ ಗುರ್ಲ ಹೊಸೂರು ಜನನ.

1957: ಖ್ಯಾತ ರಂಗಭೂಮಿ ನಿರ್ದೇಶಕ ಜಿ. ಅಶೋಕ ಬಾಬು ಅವರು ಎಸ್. ಗೋವಿಂದರಾಜು- ಸರಸ್ವತಿಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1949: ಭಾರತದ ಪ್ರಪ್ರಥಮ ಗಗನಯಾತ್ರಿ ರಾಕೇಶ ಶರ್ಮಾ ಈದಿನ ಪಂಜಾಬಿನ ಪಟಿಯಾಲದಲ್ಲಿ ಜನಿಸಿದರು. ಭಾರತೀಯ ವಾಯುಪಡೆಗೆ ಸ್ವಾಡ್ರನ್ ಲೀಡರ್ ಆಗಿ ಸೇರ್ಪಡೆಯಾದ ಶರ್ಮಾ, ತಮ್ಮ 35ನೇ ವಯಸ್ಸಿನಲ್ಲಿ 138ನೇ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1938: ಭಾರತೀಯ ಸಂತೂರ್ ವಾದಕ ಪಂಡಿತ್ ಶಿವಕುಮಾರ ಶರ್ಮಾ ಹುಟ್ಟಿದ ದಿನ.

1915: ಕೇಂದ್ರ ಇಟಲಿಯ ಅವೆಝಾನೊ ಪಟ್ಟಣದಲ್ಲಿ ಸಂಭವಿಸಿದ ಭಾರಿ ಭೂಕಂಪಕ್ಕೆ 30,000 ಜನ ಬಲಿಯಾದರು.

1898: ಸಂಸ ಎಂದೇ ಖ್ಯಾತರಾದ ಖ್ಯಾತ ನಾಟಕಕಾರ, ಸಾಹಿತಿ ಎ.ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಈದಿನ ನರಸಿಂಹ ಪಂಡಿತ-ಗೌರಮ್ಮ ದಂಪತಿಯ ಪುತ್ರನಾಗಿ ಜನಿಸಿದರು. 17ರ ಪ್ರಾಯದಲ್ಲೇ ಸಾಹಿತ್ಯದ ಹುಚ್ಚು ಅಂಟಿಸಿಕೊಂಡ ಅಯ್ಯರ್ ಅವರ ಮೊದಲ ಕಾದಂಬರಿ ಕೌಶಲ. 1919ರಿಂದ 1935ರವರೆಗೆ ಉದ್ಯೋಗಾರ್ಥ ದೇಶ ಪರ್ಯಟನೆ. ಫಿಜಿ ದ್ವೀಪ, ಟಿಬೆಟ್, ಆಫ್ಘಾನಿಸ್ಥಾನ, ಬಲೂಚಿಸ್ಥಾನ, ಬರ್ಮಾ, ದಕ್ಷಿಣ ಆಫ್ರಿಕಾಕ್ಕೂ ಭೇಟಿ. ಮೈಸೂರಿನ ಅರಸರ ಚರಿತ್ರೆಗೆ ಸಂಬಂಧಿಸಿದಂತೆ ಅವರು ರಚಿಸಿದ 23 ನಾಟಕಗಳ ಪೈಕಿ ಉಳಿದಿರುವುದು ಸುಗುಣ ಗಂಭೀರ, ವಿಗಡ ವಿಕ್ರಮರಾಯ, ವಿಜಯನಾರಸಿಂಹ, ಬಿರುದಂತೆಂಬರ ಗಂಡ, ಬೆಟ್ಟದ ಅರಸು ಮತ್ತು ಮಂತ್ರಶಕ್ತಿ. ಕೌಶಲ ಮತ್ತು ಶೆರ್ಲಾಕ್ ಹೋಮ್ಸ್ ಇನ್ ಜೈಲ್ ಎರಡು ಕಾದಂಬರಿಗಳು, ಶ್ರೀಮಂತೋ ಧ್ಯಾನ ವರ್ಣನಂ, ಸಂಸಪದಂ, ಈಶ ಪ್ರಕೋಪನ, ನರಕ ದುರ್ಯೋಧನೀಯಂ, ಅಚ್ಚುಂಬ ಪದ್ಯಕಾವ್ಯ ಅವರ ಕೃತಿಗಳು. ಚಿಕ್ಕ ವಯಸ್ಸಿನಲ್ಲೇ ತಂದೆಯ ಸಾವಿನಿಂದ ಅನಾಥಭಾವ, ತನ್ನನ್ನು ಕಂಡರೆ ಲೋಕಕ್ಕೆ ಸಹನೆ ಇಲ್ಲ, ಇತರರು ತನ್ನ ಬಾಳನ್ನು ಕೆಡಿಸುತ್ತಿದ್ದಾರೆ ಎಂಬ ಭ್ರಮೆಗೆ ಈಡಾಗಿ ಪರ್ಸೆಕ್ಯೂಷನ್ ಕಾಂಪ್ಲೆಕ್ಸಿಗೆ ಒಳಗಾದ ಅವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಕೊಠಡಿಯೊಂದರಲ್ಲಿ 1939ರ ಫೆಬ್ರವರಿ 14ರಂದು ಆತ್ಮಹತ್ಯೆ ಮಾಡಿಕೊಂಡರು.

1888: `ಭೌಗೋಳಿಕ ಜ್ಞಾನ' ಹೆಚ್ಚಿಸುವ ಸಲುವಾಗಿ ಸೊಸೈಟಿ ಒಂದನ್ನು ಸ್ಥಾಪಿಸಲು ವಾಷಿಂಗ್ಟನ್ನಿನ ಕಾಸ್ಮೋಸ್ ಕ್ಲಬ್ಬಿನಲ್ಲಿ 33 ಜನ ಸಭೆ ಸೇರಿದರು. ಇದು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭಕ್ಕೆ ಮೂಲವಾಯಿತು. ಗಾರ್ಡಿನರ್ ಹಬ್ಬರ್ಡ್ 1888ರ ಫೆಬ್ರುವರಿ 17ರಂದು ಇದರ ಪ್ರಥಮ ಅಧ್ಯಕ್ಷರಾದರು. ಮೊತ್ತ ಮೊದಲ `ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್' ಅದೇ ವರ್ಷ ಪ್ರಕಟಗೊಂಡಿತು.

1849: ಸರ್ ಹಗ್ ಗೌಗ್ ಲಾಹೋರ್ ಪ್ರಾಂತದ ಚಿಲಿಯನ್ ವಾಲಾದಲ್ಲಿ ಸಿಕ್ಖರ ಜೊತೆಗೆ ಭೀಕರ ಕದನ ನಡೆಸಿದ. ಎರಡನೇ ಸಿಖ್ ಸಮರ ಕಾಲದಲ್ಲಿ ನಡೆದ ಈ ಕದನದಲ್ಲಿ ಗೌಗ್ ಜಯ ಗಳಿಸಿದೆನೆಂದು ಹೇಳಿಕೊಂಡರೂ, ಬ್ರಿಟಿಷ್ ಕಡೆಯಲ್ಲಿ ಉಂಟಾದ ಭಾರೀ ಸಾವು ನೋವಿಗಾಗಿ ತೀವ್ರ ಟೀಕೆಗೆ ಗುರಿಯಾದ. ಫೆಬ್ರುವರಿಯಲ್ಲಿ ನಡೆದ ಗುಜರಾತ್ ಸಮರದ ಬಳಿಕ ಮಾತ್ರವೇ 1849ರ ಮಾರ್ಚಿನಲ್ಲಿ ಸಿಕ್ಖರು ಅಂತಿಮವಾಗಿ ಸೋತರು ಮತ್ತು ಸಿಖ್ ರಾಜ್ಯ ಅಸ್ತಿತ್ವ ಕಳೆದುಕೊಂಡಿತು.

No comments:

Post a Comment