ನಾನು ಮೆಚ್ಚಿದ ವಾಟ್ಸಪ್

Tuesday, January 1, 2019

ಬಾಲಿವುಡ್ ಹಿರಿಯ ನಟ ಖಾದಿರ್ ಖಾನ್ ಇನ್ನಿಲ್ಲ

ಬಾಲಿವುಡ್ ಹಿರಿಯ ನಟ ಖಾದಿರ್ ಖಾನ್ ಇನ್ನಿಲ್ಲ
ಕಣ್ಮರೆಯಾಗಿರುವ ಗಣ್ಯರನು ಮತ್ತೊಮ್ಮೆ ನೆನೆಯೋಣ
ಮುಂಬೈ: ಬಾಲಿವುಡ್ಡಿನ ಹಿರಿಯ ನಟ ಖಾದಿರ್ ಖಾನ್ ಅವರು 2018 ಡಿಸೆಂಬರ್ 31 ಸಂಜೆ ನಿಧರಾಗಿದ್ದಾರೆ ಎಂಬುದನ್ನು ಅವರ ಸರ್ಫಾರಜ್ ಅವರು 2019 ಜನವರಿ 1ರಂದು ಬೆಳಗ್ಗೆ ದೃಢ ಪಡಿಸಿದ್ದಾರೆ.

ಡಿಸೆಂಬರ್ 31ರಂದು ಅವರು ತಮ್ಮ ತಂದೆಯ ನಿಧನದ ವರದಿಗಳನ್ನು ಅಲ್ಲಗಳೆದಿದ್ದರು.

ಖಾದಿರ್ ಖಾನ್ ಅವರು ಮುಜ್ಸೆ ಶಾದಿ ಕರೋಗಿ, ಅಖಿಯೋಂಸೆ ಗೋಲಿ ಮಾರೇ, ಜೋರು ಕಾ ಗುಲಾಂ, ಹಸೀನಾ ಮಾನ ಜಾಯೇಗಿ, ಆಂಟಿ ನಂ.1 ಮತ್ತು ಜುದ್ವಾ ಇತ್ಯಾದಿ ಜನಪ್ರಿಯ ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು.

1937 ಅಕ್ಟೋಬರ್ 22ರಂದು ಜನಿಸಿದ್ದ ಖಾದಿರ್ ಖಾನ್ 1973ರಲ್ಲಿ ರಾಜೇಶ್ ಖನ್ನಾ ಅವರ ಜೊತೆಗೆದಾಗ್ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.   ಬಳಿಕ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. 250ಕ್ಕೂ ಹೆಚ್ಚು ಚಿತ್ರಗಳಿಗೆ ಅವರು ಸಂಭಾಷಣೆಯನ್ನೂ ಬರೆದಿದ್ದರು. ಚಿತ್ರಕಥೆಗಾರನಾಗಿ ಅವರು ಮನಮೋಹನ ದೇಸಾಯಿ ಮತ್ತು ಪ್ರಕಾಶ್ ಮೆಹ್ರಾ ಅವರ ಜೊತೆಗೆ ನಿರಂತರ ಸಹಯೋಗ ನೀಡಿದ್ದರು.

ಹಿಮ್ಮತ್ ವಾಲಾ, ಆಜ್ ಕಾ ದೌರ್, ಜುದಾಯಿ ಚಿತ್ರಗಳ ಪಾತ್ರಗಳಿಂದಾಗಿ ಖಾದಿರ್ ಖಾನ್ ಜನಪ್ರಿಯತೆ ಉತ್ತುಂಗಕ್ಕೆ ಏರಿತ್ತು.
81 ಹರೆಯದ ಖಾದಿರ್ ಖಾನ್ ಅವರು ಕೆನಡಾದಲ್ಲಿ ಸರ್ಫಾರಜ್ ಮತ್ತು ಅವರ ಸೊಸೆ ಶಹಿಷ್ಟಾ ಜೊತೆಗೆ ವಾಸವಾಗಿದ್ದರು.

ನಮ್ಮ ತಂದೆಯವರು ನಮ್ಮನ್ನು ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ (ಕೆನಡಾ ಕಾಲಮಾನ) ದೀರ್ಘ ಕಾಲದ ಅಸ್ವಸ್ಥತೆ ಬಳಿಕ ನಮ್ಮನ್ನು ಅಗಲಿದ್ದಾರೆ. ಅವರು ಮಧ್ಯಾಹ್ನ ಕೋಮಾಕ್ಕೆ ಜಾರಿದ್ದರು. ಕಳೆದ 16-17 ವಾರಗಳಿಂದ ಅವರು ಆಸ್ಪತ್ರೆಯಲ್ಲಿದ್ದರು ಎಂದು ಸರ್ಫಾರಜ್ ಹೇಳಿದ್ದಾರೆ.

ಕೆನಡಾದಲ್ಲಿಯೇ ಅಂತ್ಯವಿಧಿಗಳನ್ನು ನೆರವೇರಿಸಲಾಗುವುದು. ನಮ್ಮ ಪೂರ್ತಿ ಕುಟುಂಬ ಇಲ್ಲಿಯೇ ಇದೆ. ಆದ್ದರಿಂದ ಅಂತ್ಯವಿಧಿಗಳನ್ನು ಇಲ್ಲೇ ನೆರವೇರಿಸಲಾಗುವುದು, ಶುಭ ಹಾರೈಸಿದ ಮತ್ತು ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ ಎಂದೂ ಸರ್ಫಾರಜ್ ಹೇಳಿದ್ದಾರೆ.
2018ರಲ್ಲಿ ಕಣ್ಮರೆಯಾಗಿರುವ ಗಣ್ಯರಲ್ಲಿ ಬಹುಶ ಖಾದಿರ್ ಖಾನ್ ಕೊನೆಯವರು. ವರ್ಷ ನಮ್ಮನ್ನು ಅಗಲಿದೆ ಗಣ್ಯರೆಲ್ಲರನ್ನೂ ಇಲ್ಲಿ ಒಮೆ ನೆನೆದು ಅವರಿಗೆ ಗೌರವ ಅರ್ಪಿಸೋಣ: ಎಲ್ಲರನ್ನು ನೆನೆಯಲು ಕೆಳಗೊಮ್ಮೆ ಕ್ಲಿಕ್ ಮಾಡಿ.


No comments:

Post a Comment