Showing posts with label RBI. Show all posts
Showing posts with label RBI. Show all posts

Friday, May 19, 2023

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

 ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

ನವದೆಹಲಿ: ಚಲಾವಣೆಯಲ್ಲಿ ಇರುವ ಎಲ್ಲ 2000 ರೂಪಾಯಿ ನೋಟುಗಳನ್ನು ತತ್‌ ಕ್ಷಣ ಚಲಾವಣೆಯಿಂದ ಹಿಂಪಡೆಯುವುದಾಗಿ 2023 ಮೇ 19ರ  ಶುಕ್ರವಾರ ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ ಬಿಐ) ಘೋಷಿಸಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.

ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು ಮತ್ತು ನೋಟು ಹಿಂತೆಗೆತದ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಲ್ಲ ಬ್ಯಾಂಕುಗಳು 2023 ಸೆಪ್ಟೆಂಬರ್ 30 ರವರೆಗೆ ರೂ 2000ದ ಬ್ಯಾಂಕ್‌ ನೋಟುಗಳ ಠೇವಣಿ ಮತ್ತು ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ ಬಿಐ (RBI) ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“2000 ರೂ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 89% ರಷ್ಟನ್ನು ಮಾರ್ಚ್ 2017 ರ ಮೊದಲು ಬಿಡುಗಡೆ ಮಾಡಲಾಗಿತ್ತು. ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳು.

ಚಲಾವಣೆಯಲ್ಲಿರುವ ಈ ಬ್ಯಾಂಕ್‌ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಪ್ರಕಾರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ 37.3%) ರೂ 3.62 ಲಕ್ಷ ಕೋಟಿಗೆ ಇಳಿದಿದೆಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ. ಇವುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂಬುದನ್ನು ಸಹ ಗಮನಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ “ಕ್ಲೀನ್ ನೋಟ್ ಪಾಲಿಸಿ”ಗೆ ಅನುಗುಣವಾಗಿ ಚಲಾವಣೆಯಿಂದ ರೂ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಸೆಪ್ಟೆಂಬರ್‌ 30 ರವರೆಗೆ ಮುಂದುವರಿಯಲಿವೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

Thursday, June 6, 2019

ಮತ್ತೆ ರೆಪೋದರ ಇಳಿಸಿದ ರಿಸರ್ವ್ ಬ್ಯಾಂಕ್,ಸಾಲ ಅಗ್ಗ ಸಂಭವ

ಮತ್ತೆ ರೆಪೋದರ ಇಳಿಸಿದ ರಿಸರ್ವ್ ಬ್ಯಾಂಕ್,ಸಾಲ ಅಗ್ಗ ಸಂಭವ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಮಾನದಂಡ ರೆಪೋ ದರವನ್ನು ಮತ್ತೆ 25 ಮೂಲ ಪಾಯಿಂಟ್ ನಷ್ಟು (ಬಿಪಿಎಸ್) ಇಳಿಸಿದೆ. 2019ರಲ್ಲಿ ಕೇಂದ್ರೀಯ ಬ್ಯಾಂಕ್ ಮಾಡಿರುವ ಮೂರನೇ ದರ ಕಡಿತ ಇದಾಗಿದ್ದು ಇದರೊಂದಿಗೆ ರೆಪೋ ದರ ಶೇಕಡಾ 5.75ಕ್ಕೆ ಇಳಿದಿದೆ.
ಆರ್ಥಿಕ ತಜ್ಞರ ನಿರೀಕ್ಷೆಯಂತೆಯೇ ವಾಣಿಜ್ಯ ಬ್ಯಾಂಕುಗಳಿಗೆ ತಾನು ನೀಡುವ ಹಣದ ಮೇಲಿನ  ರೆಪೊ ದರವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡಿತಗೊಳಿಸಿದ್ದು, ಪರಿಣಾಮವಾಗಿ ಹೊಸ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ದರಗಳು ಇಳಿಯುವ ಸಂಭವ ಇದೆ.


ಅಮೆರಿಕದ- ಚೀನಾ ವಾಣಿಜ್ಯ ಸಮರದ ನಡುವೆ ತಮ್ಮ ಆರ್ಥಿಕತೆಗಳಿಗೆ ಒತ್ತು ನೀಡುವ ಸಲುವಾಗಿ ಸಡಿಲ ಆರ್ಥಿಕ ನೀತಿಗಳನ್ನು ಅನುಸರಿಸುತ್ತಿರುವ ಏಷ್ಯಾದ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಫಿಲಿಪ್ಪೈನ್ಸ್, ಮಲೇಶ್ಯಾ ಮತ್ತು ನ್ಯೂಜಿಲೆಂಡ್ ಕಳೆದ ತಿಂಗಳು ತಮ್ಮ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸಿವೆ. ಆಸ್ಟ್ರೇಲಿಯಾ ಸುಮಾರು ಮೂರು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಾರ ತನ್ನ ಬಡ್ಡಿ ದರಗಳನ್ನು ಕಡಿತ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ  ನಡೆದ ಮೊದಲ ಸಭೆಯಲ್ಲೇ  ಭಾರತೀಯ ರಿಸರ್ವ್ ಬ್ಯಾಂಕ್  (ಆರ್ ಬಿಐ) ತನ್ನ ಪಾಲಿಸಿ ರೆಪೋ ದರದಲ್ಲಿ 25 ಮೂಲ ಪಾಯಿಂಟಿನಷ್ಟು ದರ ಕಡಿತವನ್ನು ಪ್ರಕಟಿಸಿತು.

ಐಎಲ್ ಮತ್ತು ಎಫ್ ಎಸ್ ಗಳ  ಸುಸ್ತಿ ಹಿನ್ನೆಲೆಯಲ್ಲಿ ಮಾರುಕಟ್ಟೆಗಳ ಮೇಲೆ ಬಿದ್ದಿರುವ ಒತ್ತಡ ಹಾಗೂ ಸಮಗ್ರ ಆಂತರಿಕ  ಉತ್ಪನ್ನ (ಜಿಡಿಪಿ) ಮಂದಗತಿಯ ಹಾದಿಯಲ್ಲಿ ಇರುವುದನ್ನು ಅನುಸರಿಸಿ ಆರ್ಥಿಕ ವಿಶ್ಲಷಕರು  ಪಾಲಿಸಿ ರೆಪೋ ದರಲ್ಲಿ 25 ಮೂಲ ಪಾಯಿಂಟಿನಷ್ಟು ಇಳಿಕೆಯನ್ನು ನಿರೀಕ್ಷಿಸಿದ್ದವು.
ಅಸ್ಥಿರ  ಹಣದುಬ್ಬರ  ಪ್ರವೃತ್ತಿ ಮತ್ತು ಕಚ್ಛಾ ತೈಲ ಬೆಲೆಯಲ್ಲಿ  ಭಾರೀ ಕಡಿತವನ್ನು ಅನುಸರಿಸಿ  ಹಣಕಾಸು ನೀತಿ ಸಡಿಲಿಕೆಗೆ ಬೇಡಿಕೆ ಬಂದಿತ್ತು.

ಎನ್ ಡಿಎ ಸರ್ಕಾರದ ಮೊದಲ ಅವಧಿಯಲ್ಲಿ ಕೇಂದ್ರೀಯ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಬಾಂಧವ್ಯ  ಘರ್ಷಣಾತ್ಮಕವಾಗಿದ್ದು  ಆಗಿನ  ಆರ್ ಬಿಐ ಗವರ್ನರ್  ಊರ್ಜಿತ್ ಪಟೇಲ್ ಅವರ  ರಾಜೀನಾಮೆಯಲ್ಲಿ ಪರ್ಯವಸಾನಗೊಂಡಿತ್ತು.  ಕೇಂದ್ರೀಯ ಬ್ಯಾಂಕಿನ ಹಾಲಿ ಗವರ್ನರ್ ಶಕ್ತಿಕಾಂತ ದಾಸ್ ಅವರ  ಅಧ್ಯಕ್ಷತೆಯ ಹಣಕಾಸು ನೀತಿ ಸಮಿತಿಯು (ಎಂಪಿಸಿ)  2019ರಲ್ಲಿ  ಸತತವಾಗಿ  ಎರಡು ಬಾರಿ ರೆಪೋ ದರಗಳನ್ನು ಇಳಿಸಿತ್ತು.

2019 ಏಪ್ರಿಲ್  ತಿಂಗಳಲ್ಲಿ  ನಡೆದ  ಹಿಂದಿನ ಎಂಪಿಸಿ  ಸಭೆಯಲ್ಲಿ ಪಾಲಿಸಿ ರೆಪೋ ದರವನ್ನು ಮೂಲಪಾಯಿಂಟ್ 25ರಷ್ಟು ಕಡಿತ ಮಾಡಿ  ಶೇಕಡಾ 6ಕ್ಕೆ ಇಳಿಸಲಾಗಿತ್ತು. ಚಿಲ್ಲರೆ ಹಣದುಬ್ಬರ  ಶೇಕಡಾ 4 ಗುರಿಯ  ಒಳಗೆ ಇದ್ದುದರಿಂದ  ತಟಸ್ಥ ನೀತಿಯನ್ನು ಮುಂದುವರೆಸಲಾಗಿತ್ತು.

2019
ಫೆಬ್ರುವರಿಯಲ್ಲಿ ನಡೆದ ಎಂಪಿಸಿ ಸಭೆಯು 4:2 ಬಹುಮತದೊಂದಿಗೆ ಮೊದಲ ಬಾರಿಗೆ ಪಾಲಿಸಿ ರೆಪೋ ದರವನ್ನು 25 ಮೂಲಪಾಯಿಂಟಿನಷ್ಟು ಇಳಿಸುವ ನಿರ್ಧಾರವನ್ನು ಕೈಗೊಂಡಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:

Saturday, April 27, 2019

ಬರಲಿದೆ 20 ರೂಪಾಯಿಯ ಹೊಸ ನೋಟು

ಬರಲಿದೆ 20 ರೂಪಾಯಿಯ ಹೊಸ ನೋಟು
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕು ಶೀಘ್ರದಲ್ಲೇ 20 ರೂಪಾಯಿ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡಲಿದೆ. ಹೊಸ ನೋಟುಗಳು ಹಸಿರು ಹಳದಿ ಬಣ್ಣವನ್ನು ಹೊಂದಿರಲಿದ್ದು ಮಹಾತ್ಮಾಗಾಂಧಿ ಸರಣಿಯ ಮುಂದುವರಿಕೆಯಾಗಿರುತ್ತದೆ.

20 ರೂಪಾಯಿಗಳ ಹೊಸ ನೋಟಿನ ಹಿಂಭಾಗದಲ್ಲಿ ಎಲ್ಲೋರಾ ಗುಹೆಗಳ ಚಿತ್ರವಿದ್ದು ರಾಷ್ಟ್ರದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ.

ನೋಟಿನ ತಳಭಾಗದಲ್ಲಿ ಹಸಿರುಮಿಶ್ರತ ಹಳದಿ ಬಣ್ಣ ಇರಲಿದ್ದು, ಒಟ್ಟಾರೆ ಬಣ್ಣಗಳಿಗೆ ಹೊಂದುವಂತಹ ವಿನ್ಯಾಸಗಳನ್ನು ಹೊಂದಿರುತ್ತದೆ.

ಇದೇ ವೇಳೆಗೆ 20 ರೂಪಾಯಿ ಮುಖಬೆಲೆಯ ಹಿಂದಿನ ನೋಟುಗಳ ಚಲಾವಣೆ ಮುಂದುವರೆಯುತ್ತದೆ ಎಂದು ಆರ್ ಬಿಐ ತಿಳಿಸಿದೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:


Thursday, January 3, 2019

ರೂ ೨,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ


ರೂ ,೦೦೦ ನೋಟು ಮುದ್ರಣ ಸ್ಥಗಿತ, ಕರೆನ್ಸಿ ಮಾನ್ಯತೆ ಮುಂದುವರಿಕೆ

ನವದೆಹಲಿ: ಭಾರತವು 2016ರಲ್ಲಿ ನೋಟು ಅಮಾನ್ಯೀಕರಣ ಕಾಲದಲ್ಲಿ ಚಾಲ್ತಿಗೆ ತಂದ 2000 ರೂಪಾಯಿಗಳ ನೋಟಿನ ಮುದ್ರಣವನ್ನು ಸ್ಥಗಿತಗೊಳಿಸಿದೆ ಎಂದು ಉನ್ನತ ಸರ್ಕಾರಿ ಮೂಲಗಳು ತನಗೆ ತಿಳಿಸಿರುವುದಾಗಿದಿ ಪ್ರಿಂಟ್ವರದಿ ಮಾಡಿದೆ.

2000
ರೂಪಾಯಿ ಕರೆನ್ಸಿಯ ಪ್ರಸಾರವನ್ನು ಕ್ರಮೇಣ ತಗ್ಗಿಸುವ ಸಲುವಾಗಿ ಸರ್ಕಾರ ಕ್ರಮ ಕೈಗೊಂಡಿದೆ.

2000 ರೂಪಾಯಿ ನೋಟುಗಳ ಮುದ್ರಣ ಸ್ಥಗಿತದಿಂದ ಚಾಲ್ತಿಯಲ್ಲಿರುವ ನೋಟುಗಳು ಅಮಾನ್ಯವಾಗಿವೆ ಎಂದು ಅರ್ಥವಲ್ಲ. ಅವುಗಳ ಮಾನ್ಯತೆ ಮುಂದುವರೆದಿದೆ. ಆದರೆ ಕ್ರಮೇಣವಾಗಿ ನೋಟುಗಳು ಮಾರುಕಟ್ಟೆಯಿಂದ ಕಣ್ಮರೆಯಾಗುವ ಸಾಧ್ಯತೆ ಇದೆ.

ಕಾಳಧನ ಸಂಗ್ರಹ, ಹಣ ವರ್ಗಾವಣೆಗಳಿಗೆ ದೊಡ್ಡ ಪ್ರಮಾಣದಲ್ಲಿ ಉನ್ನತ ಮೌಲ್ಯದ ನೋಟುಗಳನ್ನು ಬಳಸಲಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರಕ್ಕೆ ಬಂದಿದೆ ಎಂದು ಮೂಲಗಳು ಹೇಳಿವೆ.

ನೋಟು ಮುದ್ರಣ ಸ್ಥಗಿತ ಬಗ್ಗೆ ಮಿಂಚಂಚೆ ಮೂಲಕ ಕೇಳಲಾದ ಸ್ಪಷ್ಟನೆಗೆ ಭಾರತದ ಕೇಂದ್ರೀಯ ಬ್ಯಾಂಕ್ ಹಾಗೂ ಕರೆನ್ಸಿ ವಿತರಣಾ ಸಂಸ್ಥೆಯಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಉತ್ತರ ನೀಡಿಲ್ಲ. ಅದು ಸ್ಪಂದಿಸಿದಾಗ ವರದಿಯನ್ನು ಪರಿಷ್ಕರಿಸಲಾಗುವುದು ಎಂದುದಿ ಪ್ರಿಂಟ್ವರದಿ ತಿಳಿಸಿದೆ.

ಕಾಳಸಂತೆ, ಕಪ್ಪು ಹಣ ನಿಗ್ರಹಕ್ಕಾಗಿ ಸರ್ಕಾರವು 2016ರಲ್ಲಿ 1000 ರೂಪಾಯಿ ಮತ್ತು 500 ರೂಪಾಯಿಗಳ ನೋಟುಗಳನ್ನು ಅಮಾನ್ಯೀಕರಣಗೊಳಿಸಿತ್ತು. ಬಳಿಕ ನವೆಂಬರ್ ತಿಂಗಳಲ್ಲಿ 2000 ರೂಪಾಯಿಗಳ ಹೊಸ ನೋಟನ್ನು ಬಿಡುಗಡೆ ಮಾಡಲಾಗಿತ್ತು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: