Saturday, January 12, 2019

ಇಂದಿನ ಇತಿಹಾಸ History Today ಜನವರಿ 12

ಇಂದಿನ ಇತಿಹಾಸ History Today ಜನವರಿ 12
2019:  ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಮಹಾಮೈತ್ರಿ ಮಾಡಿಕೊಳ್ಳಲು ವಿರೋಧ ಪಕ್ಷಗಳು ನಡೆಯುತ್ತಿರುವ ಯತ್ನಗಳನ್ನು ಇಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರುಇದೊಂದು ವಿಫಲ ಪ್ರಯೋಗ ಎಂದು ಚುಚ್ಚಿದರು. ‘ ದಿನಗಳಲ್ಲಿ ಭಾರತೀಯ ರಾಜಕಾರಣದ ಇತಿಹಾಸದಲ್ಲಿ ನಡೆದವಿಫಲ ಪ್ರಯೋಗಕ್ಕೆಮಹಾಘಟಬಂಧನ್ ಎಂಬ ಹೆಸರಿನಲ್ಲಿ ಪ್ರಚಾರ ನೀಡುವ ಚಳವಳಿಯೇ ನಡೆಯುತ್ತಿದೆ ಎಂದು ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಎರಡು ದಿನಗಳ ಪಕ್ಷ ಪ್ರಮುಖರ ರಾಷ್ಟ್ರೀಯ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನುಡಿದರು. ಹಗರಣಗಳು ಮತ್ತು ಭ್ರಷ್ಟಾಚಾರದಲ್ಲಿ ಶಾಮೀಲಾಗಬಯಸಿರುವ ವಿರೋಧ ಪಕ್ಷಗಳುಮಜಬೂತ್ ಸರ್ಕಾರ್ (ಪ್ರಬಲ ಸರ್ಕಾರ) ಬದಲಿಗೆ  ’ಮಜಬೂರ್ ಸರ್ಕಾರ್ (ಅಸಹಾಯ ಸರ್ಕಾರ) ರಚಿಸಲು ಯತ್ನಿಸುತ್ತಿವೆ ಎಂದು ಮೋದಿ ಟೀಕಿಸಿದರು೨೦೧೯ರ ಚುನಾವಣೆಗಾಗಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಉತ್ತರ ಪ್ರದೇಶದಲ್ಲಿ ಮೈತ್ರಿಕೂಟ ರಚಿಸಿ, ತಲಾ ೩೮ ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಾತುಗಳನ್ನು ಆಡಿದ ಪ್ರಧಾನಿ, ’ವಿರೋಧ ಪಕ್ಷಗಳ ಸುಸ್ಥಿರತೆಯನ್ನು ಪ್ರಶ್ನಿಸಿದರು. ವಿಪಕ್ಷಗಳ ಮೈತ್ರಿಕೂಟದ ಮೊದಲ ಪ್ರಯತ್ನ ತೆಲಂಗಾಣದಲ್ಲಿ ವಿಫಲವಾಯಿತು. ಇಲ್ಲಿ ಟಿಡಿಪಿಯ ಚಂದ್ರಬಾಬು ನಾಯ್ಡು ಅವರ ಜೊತೆ ಸೇರಿ ಮಹಾಮೈತ್ರಿ ಮಾಡಿಕೊಂಡದ್ದು ಟಿಆರ್ಎಸ್ ಎದುರು ಕಾಂಗ್ರೆಸ್ಸಿಗೆ ಗಂಡಾಂತರಕಾರಿಯಾಯಿತು. ಕರ್ನಾಟಕದಲ್ಲಿ ಜೆಡಿ-ಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು, ಇಲ್ಲಿ ಸ್ವತಃ ಮುಖ್ಯಮಂತ್ರಿಯೇ ತಮ್ಮನ್ನುಕ್ಲರ್ಕ್ ತರಹ ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿರುವುದು ದಾಖಲೆಯಲ್ಲಿದೆ ಎಂದು ಮೋದಿ ನುಡಿದರು. ಹೊಸದಾಗಿ ರಚಿಸಲಾಗಿರುವ ರಾಜಸ್ಥಾನ, ಮಧ್ಯಪ್ರದೇಸ ಮತ್ತು ಛತ್ತೀಸ್ಗಢ ಸರ್ಕಾರಗಳಲ್ಲೂ ಸಮಸ್ಯೆಗಳು ಆರಂಭವಾಗಿವೆ ಎಂದು ಪ್ರಧಾನಿ ನುಡಿದರು. ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ಝಾಡಿಸಿದ ಮೋದಿಅವರು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಅಡೆತಡೆಯಾಗಿದ್ದಾರೆ. ಅವರು ಸಂಸತ್ತಿನಲ್ಲಿ ಮಸೂದೆಗಳನ್ನು ತಡೆ ಹಿಡಿಯುತ್ತಿದ್ದಾರೆ. ಅವರಿಗೆ ರಾಷ್ಟ್ರದ ಪ್ರಗತಿ ಬೇಕಿಲ್ಲ ಎಂದು ದೂರಿದರು. ಹಿಂದೆ ಕಾಂಗ್ರೆಸ್ ಸರ್ಕಾರ ರಾಷ್ಟ್ರವನ್ನು ಕತ್ತಲಿನಲ್ಲಿ ಇಟ್ಟಿತು. ಭಾರತವು ೧೦ ಮಹತ್ವದ ವರ್ಷಗಳನ್ನು (೨೦೦೪ರಿಂದ ೨೦೧೪ರವರೆಗಿನ ಯುಪಿಎ ಅವಧಿ) ಹಗರಣಗಳು ಮತ್ತು ಭ್ರಷ್ಟಾಚಾದಲ್ಲಿ ಕಳೆದುಕೊಂಡಿತು ಎಂದು ನಾನು ಹೇಳಿದರೆ ತಪ್ಪಾಗುವುದಿಲ್ಲ ಎಂದು ಪ್ರಧಾನಿ ನುಡಿದರು. ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ರಫೇಲ್ ವಿಮಾನ ವಹಿವಾಟಿನಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಾಗಿ ಆಪಾದಿಸಿ ನಿರಂತರ ದಾಳಿ ನಡೆಸುತ್ರಿರುವುದರ ಮಧ್ಯೆ ಮೋದಿವಿಪಕ್ಷಗಳು ಭ್ರಮ ನಿರಸನಗೊಂಡಿವೆ. ಆದರೆ ನಾನು ಇಂತಹ ಬುಡರಹಿತ ಆಪಾದನೆಗಳಿಗೆ ಬಗ್ಗುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರಗಳ ರೈತ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿಇವೆಲ್ಲ ಕೇವಲ ಅಲ್ಪಾವಧಿಯ ಕ್ರಮಗಳು ಎಂದು ಹೇಳಿದರು. ’ವಿಪಕ್ಷಗಳಿಗೆ ರೈತರು ಕೇವಲ ವೋಟ್ ಬ್ಯಾಂಕ್ ಆಗಿದ್ದಾರೆ. ಬಿಜೆಪಿ ಸಕಾರ ಮಾತ್ರವೇ ಕೃಷಿ ಬಿಕ್ಕಟ್ಟನ್ನು ಬಗೆ ಹರಿಸಲು ಕಟಿಬದ್ಧವಾಗಿದೆ ಎಂದು ಪ್ರಧಾನಿ ನುಡಿದರು.  ‘ನೀವು ನಡೆಯಿರಿ, ಅಥವಾ ನಡೆಯದೇ ಇರಿ, ದೇಶ ಮುನ್ನಡೆದಿದೆ ಎಂದು ನುಡಿದ ಮೋದಿ, ಎರಡನೇ ಅವಧಿಗೆ ಬಿಜೆಪಿಯನ್ನು ಆಯ್ಕೆ ಮಾಡುವಂತೆ ಜನರನ್ನು ಆಗ್ರಹಿಸಬೇಕಾದ ಅಗತ್ಯವನ್ನು ಕಾರ್ಯಕರ್ತರಿಗೆ ಮನಗಾಣಿಸಿದರು. ’ಅಟಲ್ಜಿ ಅವರಿಗೆ ಎರಡನೇ ಅವಧಿ ನಿರಾಕರಿಸಿದ್ದರ ಪರಿಣಾಮವಾಗಿ ಯುಪಿಎ ಆಡಳಿತದ ೧೦ ವರ್ಷದಲ್ಲಿ ರಾಷ್ಟ್ರವು ನೀತಿ ಪಕ್ಷವಾತಕ್ಕೆ ತುತ್ತಾಗಬೇಕಾಯಿತು ಎಂದು ಪ್ರಧಾನಿ ವಿವರಿಸಿದರುಗಾಂಧಿ ಕುಟುಂಬಕ್ಕೆ ಮತ್ತೆ ಸವಾಲು ಹಾಕಿದ ಮೋದಿ, ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮತ್ತೆ ನೆನಪಿಸಿದರು. ೨೦೧೯ರಲ್ಲಿ ಕಾಂಗ್ರೆಸ್ಸಿನ ೬೦ ವರ್ಷಗಳ ದುರಾಡಳಿತವೇ ಮುಖ್ಯ ಅಂಶವಾಗಬೇಕು. ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೂ ಬಿಜೆಪಿ ನಾಯಕರು ವಿರೋಧ ಪಕ್ಷದ ಮೇಲಿನದಾಳಿಗೆ ಅಂಶವನ್ನು ಬಳಸಬೇಕು ಎಂದು ಮೋದಿ ಸೂಚಿಸಿದರು.  ‘ಕೆಲವರು ಆರ್ಥಿಕ ಮೀಸಲಾತಿ ವಿಚಾರದಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಆರ್ಥಿಕ ಮೀಸಲಾತಿಯಿಂದ ಜಾತಿ ಮೀಸಲಾತಿಗೆ ಯಾವುದೇ ಧಕ್ಕೆಯೂ ಆಗುವುದಿಲ್ಲ. ಶಿಕ್ಷಣ ಸಂಸ್ಥೆಗಳ ಸಾಮರ್ಥ್ಯವನ್ನು ಶೇಕಡಾ ೧೦ರಷ್ಟು ಹೆಚ್ಚಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು. ಸುಗ್ರೀವಾಜ್ಞೆ ಅಥವಾ ಬೇರಾವುದೇ ಮಾರ್ಗದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದಾಗಿ ಆರೆಸ್ಸೆಸ್ ಆಗ್ರಹಿಸಿರುವ ಬಗ್ಗೆ ಮಾತನಾಡಿದ ಪ್ರಧಾನಿ, ನ್ಯಾಯಾಂಗ ಪ್ರಕ್ರಿಯೆ ಮುಗಿಯುವವರೆಗೆ ಬಿಜೆಪಿ ಕಾಯುವುದು ಎಂದು ಸ್ಪಷ್ಟ ಪಡಿಸಿದರು.

2019: ಲಕ್ನೋ: ಭಾರತೀಯ ಜನತಾ ಪಕ್ಷದ ವಿರುದ್ಧ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೆಣಸುವ ಸಲುವಾಗಿ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಕಡೆಗೂ ಕೈಜೋಡಿಸಿದ್ದು, ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ೨೦೧೯ರ ಮಹಾಚುನಾವಣೆಯಲ್ಲಿ ಉಭಯ ಪಕ್ಷಗಳು ಸಮಾನ ಸ್ಥಾನಗಳಿಗೆ ಸ್ಪರ್ಧಿಸಲಿವೆ ಎಂದು ಇಲ್ಲಿ ಪ್ರಕಟಿಸಿದರು. ಉಭಯ ಪಕ್ಷಗಳು ಅಂತಿಮಗೊಳಿಸಿರುವ ಮೈತ್ರಿ ಒಪ್ಪಂದದ ಪ್ರಕಾರ ಉತ್ತರ ಪ್ರದೇಶದ ೮೦ ಲೋಕಸಭಾ ಸ್ಥಾನಗಳಲ್ಲಿ ಎಸ್ಪಿ ಮತ್ತು ಬಿಎಸ್ಪಿ ತಲಾ ೩೮ ಸ್ಥಾನಗಳನ್ನು ಹಂಚಿಕೊಂಡಿವೆ. ಕಾಂಗ್ರೆಸ್ ಪಕ್ಷವನ್ನು ಮೈತ್ರಿಕೂಟದಿಂದ ಹೊರಗಿಟ್ಟಿರುವ ಪಕ್ಷಗಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಲ್ಲಿ ಮೈತ್ರಿಕೂಟವು ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದವು. ಇದರ ಹೊರತಾಗಿ ಇನ್ನೆರಡು ಸ್ಥಾನಗಳನ್ನು ಮೈತ್ರಿಕೂಟವು ಸಣ್ಣ ಮಿತ್ರ ಪಕ್ಷಗಳಿಗೆ ಬಿಟ್ಟುಕೊಟ್ಟಿವೆಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೈತ್ರಿಕೂಟ ರಚನೆಯ ವಿಚಾರವನ್ನು ಪ್ರಕಟಿಸಿದ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರುಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಿದ್ದೆಗೆಡಿಸಲಿದೆ ಎಂದು ಹೇಳಿದರು. ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಮೈತ್ರಿಕೂಟ ಸ್ಪರ್ಧಿಸುವುದರಿಂದ ಓಟುಗಳು ಒಡೆದು ಬಿಜೆಪಿಗೆ ಲಾಭವಾಗುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಗೆ ಅನುಕೂಲ ಆಗದಂತೆ ನೋಡಿಕೊಳ್ಳಲು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಾಯಾವತಿ ಹೇಳಿದರು. ೧೯೯೩ರಲ್ಲಿ ಕಾನ್ಶಿರಾಮ್-ಮುಲಾಯಂ ನೇತೃತ್ವದಲ್ಲಿ ಒಟ್ಟಾಗಿ ಆಡಳಿತ ನಡೆಸುವ ಮೂಲಕ ಬದಲಾವಣೆಯ ಗಾಳಿ ಬೀಸಿತ್ತು. ಮೈತ್ರಿಯಿಂದಾಗಿ ಬಿಜೆಪಿಯಂತಹ ಜಾತಿವಾದಿ ಪಕ್ಷ ಸೋಲು ಕಂಡಿತು. ಈಗ ನಾವು ಮತ್ತೊಮ್ಮೆ ಒಟ್ಟಾಗಿದ್ದೇವೆ ಎಂದು ಅವರು ಗುಡುಗಿದರು. ಜನರ ಹಿತದೃಷ್ಟಿಯಿಂದ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ಹಳೆಯದನ್ನೆಲ್ಲ ಮರೆತು ನಾವು ಒಂದಾಗಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಜೊತೆಯಾಗಿ ಹೋರಾಟ ಮಾಡುತ್ತೇವೆ. ದೇಶದಲ್ಲಿ ಹೊಸ ಕ್ರಾಂತಿಗೆ ಇದು ಮುನ್ನುಡಿ. ದಲಿತರು, ಶೋಷಿತರು, ಅಲ್ಪಸಂಖ್ಯಾತರ ಮೈತ್ರಿ ಇದು. ದಮನಿತರನ್ನು ಪ್ರತಿನಿಧಿಸುವ ಪಕ್ಷಗಳ ಮೈತ್ರಿ ಮೂಲಕ ಕೋಮುವಾದಿಗಳ ವಿರುದ್ಧ ನಾವು ಒಂದಾಗಿದ್ದೇವೆ ಎಂದು ಅವರು ನುಡಿದರು. ನಮ್ಮ ಜಂಟಿ ಸುದ್ದಿಗೋಷ್ಠಿಯು ಗುರು-ಶಿಷ್ಯರ ನಿದ್ದೆಯನ್ನು ಕಿತ್ತುಕೊಳ್ಳಲಿದೆ ಮೈತ್ರಿಯಿಂದ ಬಿಜೆಪಿ ಚಿಂತಾಕ್ರಾಂತವಾಗಿದೆ. ಇದು ಹೊಸ ವರ್ಷದಲ್ಲಿ ಹೊಸ ರಾಜಕೀಯ ಕ್ರಾಂತಿ ಎಂದು ಅವರು ಘೋಷಿಸಿದರು. ಮೈತ್ರಿಕೂಟದಿಂದ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟಿರುವುದು ಏಕೆ ಎಂದು ವಿವರಿಸಿದ ಮಾಯಾವತಿಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಕೊಳ್ಳುವುದರಿಂದ ನಮಗೇನೂ ಲಾಭವಿಲ್ಲ. ಉತ್ತರ ಪ್ರದೇಶದ ಜನತೆ ಸಮಾಜವಾದಿ ಪಕ್ಷಗಳ ಮೇಲಿಟ್ಟಿರುವ ನಂಬಿಕೆ ದೊಡ್ಡದು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ಸಮಾಜವಾದಿ ಪಕ್ಷಗಳ ಸಾಂಪ್ರದಾಯಿಕ ಮತಗಳಿಗೆ ಹೊಡೆತ ಬೀಳುತ್ತದೆ. ಹೀಗಾಗಿ ಉತ್ತರ ಪ್ರದೇಶದ ಮಹಾಮೈತ್ರಿಯಿಂದ ಕಾಂಗ್ರೆಸ್ಸನ್ನು ಹೊರಗಿಟ್ಟಿದ್ದೇವೆ ಎಂದು ಹೇಳಿದರುದೇಶದ ಒಳಿತಿಗಾಗಿ ೧೯೯೫ರ ಲಕ್ನೋ ಗೆಸ್ಟ್ ಹೌಸ್ ಪ್ರಕರಣವನ್ನು ಮೀರಿ ಮತ್ತೆ ಒಂದಾಗಲು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ ಮಾಯಾವತಿ, ’ಕಳೆದ ವರ್ಷ ಉಪಚುನಾವಣೆಗಳನ್ನು ಬಿಎಸ್ಪಿ-ಎಸ್ಪಿ ಒಟ್ಟಾಗಿ ನಿಂತು ಗೆದ್ದಿವೆ. ಕಾಂಗ್ರೆಸ್ ಕೂಡಾ ಇದರ ಪರಿಣಾಮವಾಗಿ ಠೇವಣಿ ಕಳೆದುಕೊಂಡಿತ್ತು. ಬಿಎಸ್ಪಿ, ಎಸ್ಪಿ ಒಂದಾದರೆ ಬಿಜೆಪಿಯನ್ನು ಸೋಲಿಸಬಹುದು ಎಂಬುದು ನಮಗೆ ಆಗಲೇ ಅರಿವಾಗಿತ್ತು ಎಂದು ಹೇಳಿದರುಎಸ್ಪಿ-ಬಿಎಸ್ಪಿ ಮೈತ್ರಿಯತ್ನವನ್ನು ಟೀಕಿಸಿದ್ದ ಪ್ರಧಾನಿ ಮೋದಿ ೧೯೯೫ರ ಲಕ್ನೋ ಗೆಸ್ಟ್ ಹೌಸ್ ಪ್ರಕರಣವನ್ನು ಪ್ರಸ್ತಾಪಿಸಿದ್ದರು. ಮಾಯಾವತಿ ಅವರು ಮೈತ್ರಿಯನ್ನು ಮುರಿದುಕೊಂಡ ಬಗ್ಗೆ ಆಗ ಮುಲಾಯಂ ಸಿಂಗ್ ಯಾದವ್ ಪ್ರಕಟಿಸಿದ್ದನ್ನು ಮೋದಿ ನೆನಪಿಸಿದ್ದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರುದೇಶದಲ್ಲಿ ಧರ್ಮ ಹಾಗೂ ಜಾತಿಯ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ದೇವರನ್ನೇ ಜಾತಿಯ ಆಧಾರದಲ್ಲಿ ಬೇರೆ ಬೇರೆ ಮಾಡಲಾಗುತ್ತಿದೆ. ದೇಶದಲ್ಲಿ ಅರಾಜಕತೆ ಹೆಚ್ಚಿದೆ. ಬಿಜೆಪಿಯ ದುರಾಡಳಿತವನ್ನು ಕೊನೆಗಾಣಿಸಲು ಎಸ್ಪಿ-ಬಿಎಸ್ಪಿ ಒಂದಾಗಿವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾರ್ಯಕರ್ತರೂ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ಮಾಯಾವತಿ ಅವರಿಗೆ ಯಾವುದೇ ರೀತಿಯಲ್ಲೂ ಅವಮಾನವಾಗದಂತೆ ನೋಡಿಕೊಳ್ಳಬೇಕು ಎಂದು ಯಾದವ್ ಕಾರ್ಯಕರ್ತರಿಗೆ ಸೂಚಿಸಿದರು.  ‘ಲೆಕ್ಕ ಮಾಡುವುದು ಹೇಗೆ ಎಂದು ನಮಗೆ ಬಿಜೆಪಿ ಕಲಿಸಿಕೊಟ್ಟಿದೆ ಎಂದು ಯಾದವ್ ಶುಕ್ರವಾರ ಹೇಳಿದ್ದರು. ಅಭಿವೃದ್ಧಿಯ ಉತ್ಕೃಷ್ಟ ದಾಖಲೆ ಹೊರತಾಗಿಯೂ ತಮ್ಮ ಪಕ್ಷವು ಗಣಿತ ಲೆಕ್ಕಾಚಾರದಲ್ಲಿ ಸೋತಿತ್ತು ಎಂದು ಯಾದವ್ ಹೇಳಿದ್ದರು. ಉಭಯ ಪಕ್ಷಗಳ ಮೈತ್ರಿ ಕಾರ್ಯತಂತ್ರದ ಫಲಿತಾಂಶ ಗೋರಖ್ ಪುರ, ಫುಲ್ಪುರ ಮತ್ತು ಕೈರಾನಾದಲ್ಲಿ ಮೊತ್ತ ಮೊದಲಿಗೆ ಪ್ರಕಟಗೊಂಡಿತ್ತು. ಮೂರೂ ಉಪ ಚುನಾವಣೆಗಳಲ್ಲಿ ಮಹಾಮೈತ್ರಿಯುಅಗ್ನಿ ಪರೀಕ್ಷೆ ಗೆದ್ದು, ಬಿಜೆಪಿ ಸೋಲು ಅನುಭವಿಸಿತ್ತು. ಚುನಾವಣೆಗಳನ್ನು ಗೆಲ್ಲಲು ಬಿಜೆಪಿಯು ಹಲವಾರು ಮೈತ್ರಿಗಳನ್ನು ಹೆಣೆಯಿತಾದರೂ ಅವೆಲ್ಲವೂ ಲೆಕ್ಕಕ್ಕೇ ಬರಲಿಲ್ಲ ಎಂದು ಯಾದವ್ ಹೇಳಿದರು. ಎರಡು ವರ್ಷದ ಯತ್ನ: ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ೪೦೩ ಸ್ಥಾನಗಳ ಪೈಕಿ ೩೨೫ ಸ್ಥಾನಗಳನ್ನು ಗೆದ್ದುಕೊಂಡ ಬಳಿಕ, ಬದ್ಧ ವೈರಿಗಳಾಗಿದ್ದ ಎಸ್ಪಿ ಮತ್ತು ಬಿಎಸ್ಪಿ ಪರಸ್ಪರ ಹತ್ತಿರ ಬರಲು ಆರಂಭಿಸಿದ್ದವುಎಸ್ಪಿ -ಬಿಎಸ್ಪಿ ಮೈತ್ರಿಯ ಸಾಮರ್ಥ್ಯವನ್ನು ಬಿಜೆಪಿ ಗೌಣಗೊಳಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೈತ್ರಿಯನ್ನು ತಮ್ಮಅಸ್ತಿತ್ವ ಉಳಿಸಿಕೊಳ್ಳು ನಡೆಸಿರುವ ಭ್ರಮನಿರಸನದಾಯಕ ಯತ್ನ ಎಂದು ಬಣ್ಣಿಸಿದ್ದರು. ಸಾರ್ವಜನಿಕರಿಗೆ ಸತ್ಯ ಗೊತ್ತಿದೆ ಮತ್ತು ಅವರು ಸಮಯ ಬಂದಾಗ ಉತ್ತರ ನೀಡುತ್ತಾರೆ ಎಂದು ಯೋಗಿ ಹೇಳಿದ್ದರು. ಸಮಸ್ಯೆ ಮುಕ್ತವಲ್ಲ: ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ೧೯೯೩ರ ವಿಧಾನಸಭಾ ಚುನಾವಣೆಗೆ ಮುನ್ನ ಒಟ್ಟಾಗಿದ್ದವು. ಆದರೆ ೧೯೯೫ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ದೈಹಿಕ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಆಪಾದಿಸುವುದರೊಂದಿಗೆ ಬೇರ್ಪಟ್ಟಿದ್ದವು. ಪಕ್ಷಗಳು ಪರಸ್ಪರರ ವಿರುದ್ಧ ಎಫ್ಐಆರ್ಗಳನ್ನೂ ದಾಖಲಿಸಿದ್ದವು. ಮುಲಾಯಂ ಸಿಂಗ್ ಅವರ ಸ್ವಾರ್ಥ ರಾಜಕಾರಣದ ಪರಿಣಾಮವಾಗಿ ಪ್ರಯೋಗ ವಿಫಲಗೊಂಡಿದೆ ಎಂದು ಮಾಯಾವತಿ ದೂರಿದ್ದರು.

2019: ಪಾಟ್ನಾ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್ಪಿ)ಮತ್ತು ಬಹುಜನ ಸಮಾಜ ಪಕ್ಷ ಮಹಾಚುನಾವಣೆಗಾಗಿ ಬಿಜೆಪಿ ವಿರುದ್ಧ ಮೈತ್ರಿಕೂಟವನ್ನು ಅಂತಿಮ ಗೊಳಿಸುತ್ತಿದ್ದಂತೆಯೇ ನೆರೆಯ ಬಿಹಾರದಮಹಾಘಟಬಂಧನ್ನಲ್ಲಿ ಬಿರುಕುಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಬಿಹಾರದಲ್ಲಿ, ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಯತ್ನದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಜನತಾದಳವು (ಆರ್ಜೆಡಿ) ಎಂಟು ಪಕ್ಷಗಳ ಮಧ್ಯೆ ಸ್ಥಾನ ಹೊಂದಾಣಿಕೆ ಮತ್ತು ಸಾಮಾನ್ಯ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಭಾರೀ ಸವಾಲು ಎದುರಿಸಿತು.  ಜನವರಿ ಅಂತ್ಯದ ಒಳಗಾಗಿ ರಾಜ್ಯದ ೪೦ ಲೋಕಸಭಾ ಸ್ಥಾನಗಳಿಗೆ ಸಂಬಂಧಿಸಿದಂತೆ ಸ್ಥಾನಹೊಂದಾಣಿಕೆ ಒಪ್ಪಂದ ಅಂತಿಮಗೊಳಿಸಲು ಆರ್ಜೆಡಿ ನಾಯಕ ತೇಜಸ್ವೀ ಪ್ರಸಾದ ಬಯಸಿದರೂ, ಅವರ ಪಕ್ಷದ ಯತ್ನಗಳು ಇತರ ಪಕ್ಷಗಳ ಕಡೆಯಿಂದ ಬರುತ್ತಿರುವ ಒತ್ತಡಗಳ ಪರಿಣಾಮವಾಗಿ ಕುಂಟುತ್ತಾ ಸಾಗಿತು.  ಇದಕ್ಕೆ ವ್ಯತಿರಿಕ್ತವಾಗಿ ನಿತೀಶ್ ಕುಮಾರ್ ಜನತಾದಳ (ಯುನೈಟೆಡ್) ನೇತೃತ್ವದಲ್ಲಿ ಬಿಹಾರದ ಆಡಳಿತಾರೂಢ ಎನ್ಡಿಎ ಈಗಾಗಲೇ ಲೋಕಸಭಾ ಚುನಾವಣೆಗಾಗಿ ಬಿಜೆಪಿ-ಜೆಡಿ(ಯು) ಮತ್ತು ಇತರ ಪಕ್ಷಗಳ ನಡುವಣ ಸ್ಥಾನ ಹೊಂದಾಣಿಕೆ ಸೂತ್ರವನ್ನು ಪ್ರಕಟಿಸಿತು.  ಬಿಜೆಪಿ ಮತ್ತು ಜೆಡಿ(ಯು) ತಲಾ ೧೭ ಸ್ಥಾನಗಳಿಗೆ ಸ್ಪರ್ಧಿಸಲಿದ್ದರೆ, ಸ್ಥಾನಗಳನ್ನು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿಗೆ ಬಿಟ್ಟು ಬಿಡಲಾಯಿತು. ಉಪೇಂದ್ರ ಕುಶವಾಹ ನೇತೃತ್ವದ ರಾಷ್ಟ್ರೀಯ ಲೋಕಸಮತಾ ಪಾರ್ಟಿ (ಆರ್ಎಲ್ಎಸ್ಪಿ) ಮತ್ತು ಮುಖೇಶ್ ಸಾಹನಿ ನೇತೃತ್ವದ ವಿಕಾಸ್ಸಿಲ್ ಇನ್ಸಾನ್ ಪಾರ್ಟಿಗಳ (ವಿಐಪಿ) ಪ್ರವೇಶ, ಸಿಪಿಐ ಮತ್ತು ಸಿಪಿಐ(ಎಂಎಲ್) ಮಹಾಘಟಬಂಧನ್ ಭಾಗವಾಗಿರಬೇಕು ಎಂಬ ಘೋಷಣೆ, ಪ್ರತಿಯೊಂದು ಪಕ್ಷವೂ ತಮಗೆ ಸೂಕ್ತ ಪಾಲು ಬೇಕೆಂದು ಮಾಡುತ್ತಿರುವ ಆಗ್ರಹಗಳು ಮೈತ್ರಿಕೂಟದ ಸ್ಥಾನ ಹೊಂದಾಣಿಕೆ ವಿಷಯವನ್ನು ಕ್ಲಿಷ್ಟಗೊಳಿಸಿವೆ. ಇದಲ್ಲದೆ ಲೋಕತಾಂತ್ರಿಕ ಜನತಾದ ದಳ ಶರದ್ ಯಾದವ್ ಕೂಡಾ ತಾವು ಜೆಡಿ(ಯು)ನಿಂದ ಉಚ್ಚಾಟನೆಗೊಂಡಿರುವ ತಮ್ಮ ವ್ಯಕ್ತಿಗಳ ಜೊತೆಗೂ ಸ್ಥಾನ ಹೊಂದಾಣಿಕೆಯಾಗಬೇಕು ಎಂದು ಬಯಸಿದರು. ಕಾಂಗ್ರೆಸ್ ೧೨ ಸ್ಥಾನ ಬಯಸಿದ್ದರೆ, ಸಿಪಿಐ ಮತ್ತು ಸಾಹನಿ ಅವರ ಪಕ್ಷ ತಲಾ ಮತ್ತು ಸಿಪಿಐ-ಎಂಎಲ್, ಆರ್ ಎಲ್ ಎಸ್ ಪಿ ಮತ್ತು ಜಿತನ್ ರಾಮ್ ಮಾಂಜ್ಹಿ ನೇತೃತ್ವದ ಹಿಂದುಸ್ಥಾನಿ ಆವಾಮ್ ಮೋರ್ಚಾ (ಎಚ್ಎಎಂ) ತಲಾ ಸ್ಥಾನಗಳನ್ನು ಬಯಸಿವೆ. ಹೀಗಾಗಿ ಆರ್ ಜೆಡಿಗೆ ಕೇವಲ ೧೪ ಸ್ಥಾನಗಳು ಉಳಿಯುತ್ತವೆ. ೨೦೧೪ರಲ್ಲಿ ಆರ್ ಜೆಡಿ ಮತ್ತು ಕಾಂಗ್ರೆಸ್ ಕ್ರಮವಾಗಿ ೨೭ ಮತ್ತು ೧೩ ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಆರ್ ಜೆಡಿ ಸ್ಥಾನ ಗೆದ್ದರೆ, ಕಾಂಗ್ರೆಸ್ ಕೇವಲ ಸ್ಥಾನUಳನ್ನು ಗೆದ್ದಿತ್ತು. ಆರ್ ಜೆಡಿ ಹೆಚ್ಚು ಕಡಿಮೆ ಹಿಂದಿನ ಸಲದಷ್ಟೇ ಅಥವಾ ಹೆಚ್ಚು ಸ್ಥಾನಗಳಿಗೆ ಸ್ಪರ್ಧಿಸಬಯಸಿದೆ. ಆರ್ ಜೆಡಿಯೇ ಮೈತ್ರಿಕೂಟದಲ್ಲಿ ದೊಡ್ಡ ಪಾಲುದಾರ ಪಕ್ಷವಾಗಿದ್ದು, ಕಾಂಗ್ರೆಸ್ ಮತ್ತು ಮಹಾಘಟಬಂಧನದ ಇತರ ಎಲ್ಲ ಪಕ್ಷಗಳಿಗಿಂತ ಹೆಚ್ಚಿನ ಮತಪಾಲು ಹೊಂದಿದೆ.  ಬಿಹಾರದಲ್ಲಿ ಕಾಂಗ್ರೆಸ್ ಸಣ್ಣ ಪಕ್ಷವಾಗಿದ್ದು, ಅದು ತಾನು ಬಿಜೆಪಿ ಜೊತೆಗೆ ನೇರವಾಗಿ ಸೆಣಸಬಲ್ಲ ರಾಜ್ಯಗಳಿಗಷ್ಟೇ ತನ್ನನ್ನು ಸೀಮಿತಗೊಳಿಸಿಕೊಳ್ಳಬೇಕು ಎಂದು ಹೆಸರು ಹೇಳಲು ಇಚ್ಛಿಸದ ಆರ್ ಜೆಡಿಯ ಮಾಜಿ ಸಂಸದರೊಬ್ಬರು ಹೇಳಿದರು. ಸ್ಥಾನ ಹೊಂದಾಣಿಕೆ ಮಾತುಕತೆಗಳು ಆರಂಭವಾಗುತ್ತಿದ್ದಂತೆಯೇ ಸಂಭಾವ್ಯ ಮೈತ್ರಿಯಲ್ಲಿನ ಬಿರುಕುಗಳು ಅನಾವರಣಗೊಂಡಿವೆ. ಆರ್ ಎಲ್ ಎಸ್ ಪಿಯು ಈಗಾಗಲೇ ಆರ್ ಜೆಡಿಯು ಜೆಹಾನಾಬಾದ್ ಸ್ಥಾನಕ್ಕೆ ಸ್ಪರ್ಧಿಸುವುದನ್ನು ವಿರೋಧಿಸಲು ಆರಂಭಿಸಿತು.  ಸಮಸ್ಯೆ ಜೆಹಾನಾಬಾದ್ ಕ್ಷೇತ್ರಕ್ಕಷ್ಟೇ ಸೀಮಿತವಲ್ಲ. ದರ್ಭಾಂಗ ಸಂಸದೀಯ ಕ್ಷೇತ್ರಕ್ಕಾಗಿ ಆರ್ ಜೆಡಿಯ ಅಬ್ದುಲ್ ಬರಿ ಸಿದ್ದಿಕಿ ಮತ್ತು ಅರುಣ್ ಜೇಟ್ಲಿ ಅವರ ಕಟು ಟೀಕಾಕಾರ ಮಾಜಿ ಕ್ರಿಕೆಟಿಗ ಕಾಂಗ್ರೆಸ್ಸಿನ ಕೀರ್ತಿ ಆಜಾದ್ ಮುಗಿಬಿದ್ದಿದ್ದಾರೆ. ಜೊತೆಗೆ ಸಾಹನಿ ಕೂಡಾ ಸೀಟು ತಮಗೆ ಬೇಕೆಂದು ವಾದಿಸುತ್ತಿದ್ದಾರೆ. ಇಂತಹುದೇ ಪರಿಸ್ಥಿತಿ ಸೀತಾಮಡಿಯದ್ದು ಕೂಡಾ. ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ರಾಜ್ಯದ ಕಾಂಗ್ರೆಸ್ ನಾಯಕತ್ವ ಸುರಕ್ಷಿತ ಆಟ ಆಡುತ್ತಿದೆ. ಪಕ್ಷವು ರಾಜ್ಯ ರಾಜಧಾನಿಯಲ್ಲಿ ಫೆಬ್ರುವರಿ ಮೊದಲ ವಾರ ನಡೆಯಲಿರುವ ರಾಹುಲ್ ಗಾಂಧಿ ಅವರ ಸಭೆಗೆ ಸಾರ್ವಜನಿಕರಿಂದ ವ್ಯಕ್ತವಾಗುವ ಸ್ಪಂದನೆಯನ್ನು ನೋಡಿಕೊಂಡು ತನ್ನ ಬೇಡಿಕೆ ಮುಂದಿಡಲಿದೆ ಎಂದು ಹೇಳಿತು. ಮಹಾಘಟಬಂಧನಕ್ಕೆ ಸ್ಥಾನ ಹೊಂದಾಣಿಕೆಯೊಂದೇ ಸಮಸ್ಯೆಯಲ್ಲ. ಮೈತ್ರಿಕೂಟವು ಇತರ ಕೆಲವು ಆರಂಭಿಕ ಸಮಸ್ಯೆಗಳನ್ನು ನಿಭಾಯಿಸಬೇಕಾಗಿದೆ. ಆರ್ ಜೆಡಿಯ ರಘುವಂಶ ಪ್ರಸಾದ್ ಅವರು ಎಲ್ಲ ಪಕ್ಷಗಳೂ ಒಂದು ಕನಿಷ್ಠ ಕಾರ್ಯಕ್ರಮ ಮತ್ತು ಒಂದೇ ಲಾಂಛನದ ಅಡಿಯಲ್ಲಿ ಸ್ಪರ್ಧಿಸಬೇಕು ಎಂದು ಸಲಹೆ ಮಾಡಿದಾಗ ಟೀವ್ರ ಟೀಕೆ ಎದುರಾಗಿತ್ತು. ಎಚ್ ಎಎಂ ಸಲಹೆ ಬಗ್ಗೆ ನಗಾಡಿತ್ತು. ’ನಾವು ಅವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಎಚ್ ಎಎಂ ಸ್ಥಾಪಕ ಮಾಂಜ್ಹಿ ಹೇಳಿದ್ದರು. ಮಾಂಜ್ಹಿ ಅವರು ಆರ್ ಜೆಡಿ ಸ್ಥಾಪಕ ಲಾಲು ಪ್ರಸಾದ್ ಜೊತೆಗಿನ ಸಭೆಗೆ ತಮ್ಮನ್ನು ಕರೆಯದೇ ಇದ್ದುದಕ್ಕಾಗಿ ಸಿಟ್ಟಿಗೆದ್ದಿದ್ದಾರೆ. ರಾಂಚಿಯ ರಿಮ್ಸ್ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ ಮೈತ್ರಿಕೂಟಕ್ಕೆ ಸೇರ್ಪಡೆಯಾದ ಕುಶವಾಹ ಮತ್ತು ಸಾಹನಿ ಅವರು ಪಾಲ್ಗೊಂಡಿದ್ದರುಮೇಲ್ಜಾತಿಯ ಬಡವರಿಗೆ ಶೇಕಡಾ ೧೦ ಮೀಸಲಾತಿ ಕಲ್ಪಿಸುವ ಮಸೂದೆ ಕುರಿತು ಮೈತ್ರಿಕೂಟದ ಅಂಗಪಕ್ಷಗಳಲ್ಲಿನ ವಿರುದ್ಧಾಭಿಪ್ರಾಯಗಳು ಕೂಡಾ ಇನ್ನೊಂದು ಸಮಸ್ಯೆಯಾಗುವ ಲಕ್ಷಣಗಳಿವೆ. ಕಾಂಗ್ರೆಸ್ ಅದನ್ನು ಬೆಂಬಲಿಸಿದ್ದರೆ, ಆರ್ ಜೆಡಿ ವಿರೋಧಿಸಿತು. ಎಚ್ ಎಎಂ ನಂತಹ ಸಣ್ಣ ಪಕ್ಷಗಳು ಬೆಂಬಲಿಸಿದ್ದರೆ, ಆರ್ ಎಲ್ ಎಸ್ ಪಿ ಸರ್ಕಾರಿ ಶಾಲೆಗಳ ಎಲ್ಲ ಮಕ್ಕಳಿಗೂ ಮೀಸಲಾತಿ ಬಯಸಿತು. 
2018: ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ 100 ನೇ ಉಪಗ್ರಹವನ್ನು ಇತರ 30 ಉಪಗ್ರಹಗಳೊಂದಿಗೆ ಯಶಸ್ವಿಯಾಗಿ  ಉಡಾವಣೆ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿತು. ಪೊಲಾರ್ಸ್ಯಾಟಲೈಟ್ಲಾಂಚ್ವೆಹಿಕಲ್‌ ಸಿ40 (ಪಿಎಸ್ಎಲ್ವಿಸಿ40) ಉಡಾವಣಾ ವಾಹಕದ ಮೂಲಕ ಉಡಾಯಿಸಲಾದ ಒಟ್ಟು 31 ಉಪಗ್ರಹಗಳು ಕಕ್ಷೆ ಸೇರಿಕೊಂಡಿರುವ ಬಗ್ಗೆ ವರದಿ ಬಂದಿತು. 2017, ಆಗಸ್ಟ್‌ 31ರಂದು ಪಿಎಸ್ಎಲ್ವಿ ರಾಕೆಟ್ಮೂಲಕ ನಡೆಸಲಾಗಿದ್ದ ಉಡಾವಣೆ ವಿಫಲಗೊಂಡಿತ್ತು. ಬಳಿಕ ಇದೀಗ ಮತ್ತೆ ಪಿಎಸ್ಎಲ್ವಿ ಸರಣಿ ರಾಕೆಟ್ನಲ್ಲಿಯೇ ಉಡಾವಣೆಗೆ ಮುಂದಾಗಿದ್ದರಿಂದ ಇದು ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಕಕ್ಷೆ ಸೇರಿರುವ ಉಪಗ್ರಹ ಕಾರ್ಟೊಸ್ಯಾಟ್‌ 2ಎಸ್‌: ಕಾರ್ಟೊಸ್ಯಾಟ್‌ 2ಎಸ್ಇದೀಗ ಉಡಾವಣೆಯಾದ ಉಪಗ್ರಹ. ಸರಣಿಯಲ್ಲಿ ಉಡಾವಣೆ ಆಗುತ್ತಿರುವ 7ನೇ ಉಪಗ್ರಹ ಇದಾಗಿದೆ. ಪ್ರಯೋಜನ ಏನೇನು? ಇದೀಗ ಬಾಹ್ಯಾಕಾಶ ಸೇರಿಕೊಂಡಿರುವ ಉಪಗ್ರಹಗಳು ಭಾರತದ ವಿವಿಧ ಕ್ಷೇತ್ರಗಳ ಸಂವಹನಕ್ಕೆ ಆನೆ ಬಲ ನೀಡಲಿದೆ. ಹೆಚ್ಚೆಚ್ಚು ಗುಣಮಟ್ಟದ ಫೋಟೋಗಳನ್ನು ರವಾನಿಸಲು, ಶರವೇಗದ ಮಾಹಿತಿಗಳ ವಿನಿಮಯಕ್ಕೆ ಸಹಕಾರಿಯಾಗಲಿದೆ. ಕಾಟೋìಗ್ರಾಫಿಕ್ಸ್ಅಪ್ಲಿಕೇಷನ್ಸ್‌, ಅರ್ಬನ್ಮತ್ತು ರೂರಲ್ಅಪ್ಲಿಕೇಷನ್ಸ್‌, ಕರಾವಳಿ ಭೂ ಬಳಕೆ ಹಾಗೂ ನಿಯಂತ್ರಣ, ರಸ್ತೆ ಸಂಪರ್ಕ ನಿಯಂತ್ರಣ, ನೀರು ಬಳಕೆ ಸೇರಿದಂತೆ ಇವುಗಳ ಕುರಿತಾದ ಅಧ್ಯಯನಕ್ಕೆ ಸಹಕಾರಿಯಾಗುವಂತೆ ಇವು ಕಾರ್ಯನಿರ್ವಹಿಸಲಿವೆ. ಕಾರ್ಟೊಸ್ಯಾಟ್‌2, 2 ಮತ್ತು 2ಬಿ ರೀತಿಯಲ್ಲಿ ಕಾರ್ಯನಿರ್ವಹಿಸಲಿವೆ.



2017: ನವದೆಹಲಿ: ರಾಷ್ಟ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮುಖ್ಯ ನ್ಯಾಯಮೂರ್ತಿಯವರ ಆಡಳಿತ ವೈಖರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ಇಲ್ಲಿ ಘಟಿಸಿತು. ನ್ಯಾಯಮೂರ್ತಿಗಳಾದ ರಂಜನ್ ಗೊಗೋಯಿ, ಮದನ್ ಬಿ ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ನ್ಯಾಯಮೂರ್ತಿ ಜೆ.ಚೆಲಮೇಶ್ವರ ಅವರುಸುಪ್ರೀಂಕೋರ್ಟ್ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲಎಂದು ಹೇಳಿದರು. ಸರ್ವೋಚ್ಚ ನ್ಯಾಯಾಲಯದ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಚೆಲಮೇಶ್ವರ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಪತ್ರದ ಮುಖ್ಯಾಂಶಗಳು ಹೀಗಿವೆ: )            ಇದು ರಾಷ್ಟ್ರದ ಇತಿಹಾಸದಲ್ಲೇ ಅಭೂತಪೂರ್ವ. ಇದು ಸಂವಿಧಾನದ ಇತಿಹಾಸದಲ್ಲೇ ಅಸಾಧಾರಣ ಘಟನೆ. )            ಉತ್ತಮ ಪ್ರಜಾಪ್ರಭುತ್ವದ ಚೊಕ್ಕಮುದ್ರೆ (ಹಾಲ್ ಮಾರ್ಕ್) ಸ್ವತಂತ್ರ ನ್ಯಾಯಾಂಗ. ಅದಿಲ್ಲದೆ ಇದ್ದಲ್ಲಿ ಪ್ರಜಾಪ್ರಭುತ್ವ ಬದುಕಿ ಉಳಿಯದು. ) ಸುಪ್ರೀಂಕೋರ್ಟಿನ ಆಡಳಿತ ವ್ಯವಸ್ಥಿತವಾಗಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಅನಪೇಕ್ಷಣೀಯ ಘಟನೆಗಳು ಘಟಿಸಿವೆ. ) ರಾಷ್ಟ್ರವನ್ನು ನೇರವಾಗಿ ಸಂಪರ್ಕಿಸುವುದರ ಹೊರತಾಗಿ ನಮಗೆ ಬೇರೆ ದಾರಿ ಉಳಿದಿಲ್ಲ. ) ಸುಪ್ರೀಂಕೋರ್ಟಿನಲ್ಲಿ ಅಪೇಕ್ಷೆಯ ಮಟ್ಟಕ್ಕಿಂತ ಕೆಳಗಿನ ಘಟನೆಗಳು ಘಟಿಸಿವೆ. ನಾವು ಭಾರತದ ಮುಖ್ಯ ನ್ಯಾಯಮೂರ್ತಿಯವರ (ಸಿಜೆಐ) ಮನ ಒಲಿಸಿ ಅವರು ಪರಿಹಾರಾತ್ಮಕ ಕ್ರಮಕೈಗೊಳ್ಳುವಂತೆ ಮಾಡಲು ಸಾಮೂಹಿಕವಾಗಿ ಯತ್ನಿಸಿದೆವು. ಆದರೆ ನಮ್ಮ ಪ್ರಯತ್ನಗಳು ವಿಫಲವಾದವು. ನಾವು ನಾಲ್ವರು ಪ್ರಜಾಪ್ರಭುತ್ವದ ಉಳಿವಿಗಾಗಿ ನಿಷ್ಪಕ್ಷಪಾತ ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ಅತ್ಯಗತ್ಯ ಎಂಬುದಾಗಿ ಭಾವಿಸಿದ್ದೇವೆ.  ) ನಾವು ಸಿಜೆಐ ಅವರನ್ನು ಈದಿನ ಬೆಳಗ್ಗೆ ಕೂಡಾ ಭೇಟಿ ಮಾಡಿದ್ದೆವು, ಆದರೆ ಅವರ ಮನ ಒಲಿಸುವಲ್ಲಿ ವಿಫಲರಾದೆವು.  )            ನಾವು ಬಹಳಷ್ಟು ಬುದ್ಧಿವಂತರನ್ನು ನೋಡಿದ್ದೇವೆ, ಆದರೆ ಬುದ್ಧಿವಂತ ವ್ಯಕ್ತಿಗಳು ೨೦ ವರ್ಷಗಳ ಬಳಿಕ  ನಮ್ಮ ಆತ್ಮಗಳನ್ನು ಮಾರಾಟ ಮಾಡಿದ್ದೇವೆ ಎಂದು ಹೇಳುವುದನ್ನು ನಾವು ನಾಲ್ವರು ನ್ಯಾಯಮೂರ್ತಿಗಳೂ ಬಯಸುವುದಿಲ್ಲ. ಇದು ರಾಷ್ಟ್ರಕ್ಕೆ ನಮ್ಮ ಜವಾಬ್ದಾರಿ ಎಂದು ನಾವು ಭಾವಿಸಿದ್ದೇವೆ ಮತ್ತು ನಾವು ಅದನ್ನು ಮಾಡಿದ್ದೇವೆ. ಸಿಜೆಐ ದೀಪಕ್ ಮಿಶ್ರ ಆವರನ್ನು ದೋಷಾರೋಪಕ್ಕೆ ಗುರಿಮಾಡಬೇಕೇ ಎಂಬ ಪ್ರಶ್ನೆಗೆದೋಷಾರೋಪ ಹೊರಿಸಲು ನಾವು ಏನೂ ಅಲ್ಲಎಂದು ಅವರು ಉತ್ತರಿಸಿದರು. ಮಾಸ್ಟರ್ ಆಫ್ ರೋಸ್ಟರ್: ನಾಲ್ವರು ನ್ಯಾಯಮೂರ್ತಿಗಳು ಬಿಡುಗಡೆ ಮಾಡಿದ ಪತ್ರದಲ್ಲಿ ಮುಖ್ಯ ನ್ಯಾಯಮೂರ್ತಿ ಕುರಿತಮಾಸ್ಟರ್ ಆಫ್ ರೋಸ್ಟರ್ವಿಷಯವನ್ನು ಪ್ರಸ್ತಾಪಿಸಲಾಗಿದೆ. ರೋಸ್ಟರ್ ರೂಪಿಸಲು ಮತ್ತು ನ್ಯಾಯಾಲಯದ ಪ್ರಕರಣಗಳನ್ನು ವಿವಿಧ ಸದಸ್ಯರು / ಪೀಠಗಳಿಗೆ ಹಂಚುವ ವಿಶೇಷ ಹಕ್ಕು ಮುಖ್ಯ ನ್ಯಾಯಮೂರ್ತಿಯರದ್ದು ಎಂಬುದಾಗಿ ಮಾನ್ಯ ಮಾಡಿರುವ ಒಡಂಬಡಿಕೆಯು ನ್ಯಾಯಾಲಯದ ಕಲಾಪಗಳನ್ನು ಶಿಸ್ತುಬದ್ಧ ಹಾಗೂ ದಕ್ಷ ರೀತಿಯಲ್ಲಿ ನಿರ್ವಹಿಸಲು ಮಾಡಿರುವ ವ್ಯವಸ್ಥೆಯಾಗಿದೆ, ಆದರೆ ಇದು ಮುಖ್ಯ ನ್ಯಾಯಮೂರ್ತಿಯವರಿಗೆ ತಮ್ಮ ಸಹೋದ್ಯೋಗಿಗಳ ಮೇಲೆ ಶಾಸನಬದ್ಧವಾಗಿ ಅಥವಾ ವಾಸ್ತವಿಕವಾಗಿ ಇರುವ ಯಾವುದೇ ಉನ್ನತ ಅಧಿಕಾರದ ಮಾನ್ಯತೆ ಅಲ್ಲಎಂದು ಪತ್ರ ವಿವರಿಸಿದೆ. ಮುಖ್ಯ ನ್ಯಾಯಮೂರ್ತಿಯವರು ಸಮಾನರಲ್ಲಿ ಮೊದಲಿಗ, ಆದರೆ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎಂಬುದು ನಿರ್ಧಾರವಾಗಿರುವ ವಿಷಯ ಎಂದು ಪತ್ರ ಹೇಳಿದೆ. ಸುಪ್ರೀಂಕೋರ್ಟ್ ನ್ಯಾಯಾಧೀಶರ ಭ್ರಷ್ಟಾಚಾರ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿವರಿಗೆ ಲಂಚ ನೀಡಲು ಯತ್ನಿಸಿದ ಪ್ರಕರಣವೊಂದನ್ನು ಆಲಿಸುತ್ತಿದ್ದಾಗ ಮಾಸ್ಟರ್ ಆಫ್ ರೋಸ್ಟರ್ ವಿಷಯ ಬಂದಿತ್ತು. ಸಿಜೆಐ ಅವರು ಕಾರಣವಿಲ್ಲದೆಯೇ ಆಯ್ದ ಪೀಠಗಳಿಗೆ ಆಯ್ದೆ ಪ್ರಕರಣಗಳನ್ನು ಹಂಚುತ್ತಾರೆ ಎಂದು ಪತ್ರ ಹೇಳಿದೆ. ಪತ್ರವು ನ್ಯಾಯಾಂಗ ಅಶಿಸ್ತಿನ ಪ್ರಕರಣವಾಗಿ ಎಂಒಪಿಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿಗಳಾದ .ಕೆ. ಗೋಯೆಲ್ ಮತ್ತು ಯು.ಯು. ಲಲಿತ್ ಅವರ ತೀರ್ಪು ಹಸ್ತಕ್ಷೇಪ ಮಾಡಿದ್ದನ್ನೂ ಉಲ್ಲೇಖಿಸಿತು. ನಾವು ನಾಲ್ವರು ಸಿಜೆಐ ದೀಪಕ್ ಮಿಶ್ರ ಅವರ ಬಳಿ ಸಂಸ್ಥೆಯ ಹಿತಾಸಕ್ತಿ ಸಲುವಾಗಿ ತಮ್ಮ ಕಾರ್ಯವಿಧಾನವನ್ನು ಸರಿಪಡಿಸಿಕೊಳ್ಳುವಂತೆ ಹೇಳುತ್ತಾ ಬಂದಿದ್ದೇವೆ. ಕಳೆದ ಕೆಲವು ತಿಂಗಳುಗಳಿಂದ ನಾವು ಯತ್ನವನ್ನು ಮಾಡುತ್ತಿದ್ದೇವೆ. ಆದರೆ ಪ್ರಯೋಜನವಾಗಿಲ್ಲ. ಇಲ್ಲಿಂದಾಚೆಗೆ ೨೦ ವರ್ಷಗಳ ಬಳಿಕ ರಾಷ್ಟ್ರವು ನಾವು ನಮ್ಮ ಆತ್ಮಗಳನ್ನು ಮಾರಿಕೊಂಡಿದ್ದೆವು ಎಂದು ಹೇಳಬಾರದು. ಸುಪ್ರೀಂಕೋರ್ಟಿನ ಆಡಳಿತದಲ್ಲಿ ಕೆಲವು ವಿಚಾರಗಳು ಸರಿ ಇಲ್ಲ ಎಂದು ಸಿಜೆಐ ಅವರಿಗೆ ಸಾಮೂಹಿಕವಾಗಿ ಹೇಳಲು ನಾವು ಯತ್ನಿಸಿದೆವು. ದುರದೃಷ್ಟಕರವಾಗಿ ನಮ್ಮ ಪ್ರಯತ್ನಗಳು ವಿಫಲಗೊಂಡಿವೆ. ಆದ್ದರಿಂದ ನಾವು ಇದನ್ನು ರಾಷ್ಟ್ರದ ಮುಂದೆ ಹೇಳುತ್ತಿದ್ದೇವೆನಾಲ್ವರು ನ್ಯಾಯಮೂರ್ತಿಗಳ ಪತ್ರ ಹೇಳಿದೆ. ನ್ಯಾಯಮೂರ್ತಿ ಲೋಯಾ ಅವರ ಪ್ರಕರಣವನ್ನು ವಹಿಸಿಕೊಟ್ಟ ವಿಚಾರದಲ್ಲಿ  ಭಿನ್ನಾಭಿಪ್ರಾಯವಿದೆಯೇ ಎಂಬ ಪ್ರಶ್ನೆಗೆ ಚೆಲಮೇಶ್ವರ ಅವರು ಸಕಾರಾತ್ಮಕ ಉತ್ತರ ನೀಡಿದರು. ಕೆಲವು ತಿಂಗಳುಗಳ ಹಿಂದೆ, ನಾವು ನಾಲ್ವರು ಸಹಿ ಮಾಡಿದ ಪತ್ರವನ್ನು ಮುಖ್ಯ ನ್ಯಾಯಮೂರ್ತಿ ಅವರಿಗೆ ನೀಡಿದ್ದೆವು. ನಿರ್ದಿಷ್ಟ ವಿಷಯವು ನಿರ್ದಿಷ್ಟ ರೀತಿಯಲ್ಲಿ ನಡೆಯಬೇಕು ಎಂದು ನಾವು ಬಯಸಿದ್ದೆವು. ಆದರೆ ಅದು ನಡೆದ ರೀತಿ ಸಂಸ್ಥೆಯ ಪ್ರಾಮಾಣಿಕತೆ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿತು ಎಂದು ಚೆಲಮೇಶ್ವರ್ ನುಡಿದರು. ’ಅತ್ಯಂತ ಕಡಿಮೆ ಅವಧಿಯಲ್ಲಿ ಕರೆದ ಪತ್ರಿಕಾಗೋಷ್ಠಿಗೆ ಬಂದದ್ದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇವೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅಸಾಧಾರಣ ಘಟನೆ. ಸುಪ್ರಿಂಕೋರ್ಟಿನ ಆಡಳಿತದಲ್ಲಿ ಎಲ್ಲವೂ ಸರಿ ಇಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಅಪೇಕ್ಷೆಗಿಂತ ಕಳತೆಯಾಗಿ ಕೆಲವು ಘಟನನೆಗಳು ಘಟಿಸಿವೆ ಎಂದು ಅವರು ಹೇಳಿದರು.

2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯವೈಖರಿ ವಿರುದ್ಧ ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳುಬಂಡಾಯ ಎದ್ದ ಶುಕ್ರವಾರದ ಘಟನೆಯ ಹಿನ್ನೆಲೆಯಲ್ಲಿಮಾಸ್ಟರ್ ಆಫ್ ರೋಸ್ಟರ್ ಸಿದ್ಧಾಂತ ಎದ್ದು ಕಾಣುತ್ತದೆ. ಏನಿದು ಮಾಸ್ಟರ್ ಆಫ್ ರೋಸ್ಟರ್ ಸಿದ್ಧಾಂತ?
೨೦೧೭ರ ನವೆಂಬರ್ ತಿಂಗಳಲ್ಲಿ ಕೋರ್ಟ್ ಕೊಠಡಿಯಲ್ಲಿ ನಡೆದ ತೀವ್ರ ವಾಗ್ಯುದ್ಧದ ಬಳಿಕ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸಂವಿಧಾನ ಪೀಠವು ಸಿಜೆಐ ಅವರು ರೋಸ್ಟರ್ ವ್ಯವಸ್ಥೆಯ ಮಾಸ್ಟರ್ ಎಂದು ತೀರ್ಪು ನೀಡಿ, ರೋಸ್ಟರ್ ವಿಚಾರದಲ್ಲಿ ಸಿಜೆಐ ಪಾತ್ರವೇ ಮುಖ್ಯ ಎಂದು ಸ್ಪಷ್ಟ ಪಡಿಸಿತ್ತು. ಅಂದರೆ, ಯಾವ ಪ್ರಕರಣವನ್ನು ಯಾವ ನ್ಯಾಯಮೂರ್ತಿ/ ನ್ಯಾಯಮೂರ್ತಿಗಳ ಪೀಠ ಆಲಿಸಬೇಕು ಎಂಬುದಾಗಿ ನಿರ್ಧರಿಸುವುದು ಭಾರತದ ಮುಖ್ಯ ನ್ಯಾಯಮೂರ್ತಿಯ ವಿಶೇಷ ಅಧಿಕಾರ ಎಂಬುದಾಗಿ ಪಂಚ ಸದಸ್ಯ ಸಂವಿಧಾನ ಪೀಠ ಘೋಷಿಸಿತ್ತು. ಒಂದು ದಿನದ ಹಿಂದಷ್ಟೇ ನ್ಯಾಯಮೂರ್ತಿ ಜೆ. ಚೆಲಮೇಶ್ವರ ನೇತೃತ್ವದ ಇಬ್ಬರು ಸದಸ್ಯರ ಪೀಠವು ೨೦೧೭ರ ನವೆಂಬರ್ ೧೩ರಂದು ಭ್ರಷ್ಟಾಚಾರ ಪ್ರಕರಣವೊಂದರ ವಿಚಾರಣೆಯನ್ನು ಅತ್ಯಂತ ಹಿರಿಯ ನ್ಯಾಯಮೂರ್ತಿಗಳ ಪಂಚ ಸದಸ್ಯ ಪೀಠವು ನಡೆಸಬೇಕು ಎಂಬುದಾಗಿ ನೀಡಿದ್ದ ತೀರ್ಪನ್ನು ರದ್ದು ಪಡಿಸಿ ಸಿಜೆಐ ನೇತೃತ್ವದ ಸಂವಿಧಾನಪೀಠ ರೋಸ್ಟರ್ ವಿಚಾರದಲ್ಲಿ ಸಿಜೆಐ ಮಾಸ್ಟರ್ ಎಂದು ಹೇಳಿತ್ತು. ಯಾವುದೇ ಪೀಠವನ್ನು ರಚಿಸುವಂತೆ ಯಾರೂ ತಮಗೆ ಸೂಚಿಸುವಂತಿಲ್ಲ ಎಂದು ಸಿಜೆಐ ತೀರ್ಪು ನೀಡುತ್ತಾ ಹೇಳಿದ್ದರು. ವಿವಾದಕ್ಕೆ ಮೂಲವಾಗಿದ್ದ ಪ್ರಕರಣ ವೈದ್ಯಕೀಯ ಕಾಲೇಜು ಹಗರಣ ಒಂದರ ಪ್ರಕರಣ. ಸಿಬಿಐ ತನಿಖೆ ನಡೆಸಿದ್ದ ಭ್ರಷ್ಟಾಚಾರ ಪ್ರಕರಣದ ಎಫ್ ಐಆರ್ ಪ್ರಕಾರ ಒಡಿಶಾ ಹೈಕೋರ್ಟಿನ ಮಾಜಿ ನ್ಯಾಯಾಧೀಶರೊಬ್ಬರು ಸೇರಿದಂತೆ ಕೆಲವು ವ್ಯಕ್ತಿಗಳು ಮತ್ತು ಹವಾಲಾ ನಾಯಕನೊಬ್ಬ ಡಿಬಾರ್ ಮಾಡಲಾಗಿದ್ದ ಖಾಸಗಿ ವೈದ್ಯಕೀಯ ಕಾಲೇಜಿನ ಪ್ರಕರಣದ ವಿಚಾರಣೆ ನಡೆಸುವ ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳಿಗೆ ಲಂಚಕೊಡಲು ಸಂಚು ಹೆಣೆದಿದ್ದಾರೆ ಎಂದು ಆಪಾದಿಸಲಾಗಿತು. ನ್ಯಾಯಾಂಗದಲ್ಲಿ ಸಿಜೆಐ ನಿಶ್ಚಿತವಾಗಿ ಸಮಾನರಲ್ಲಿ ಮೊದಲಿಗರು, ಆದರೆ ಆಡಳಿತದಲ್ಲಿ ರೋಸ್ಟರ್ ವಿಚಾರದಲ್ಲಿ ಅವರೇ ಮಾಸ್ಟರ್ ಎಂದು ಸಂವಿಧಾನ ಪೀಠ ತನ್ನ ತೀರ್ಪಿನಲ್ಲಿ ಹೇಳಿತ್ತು. ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ಪ್ರಕರಣವು ಸುಪ್ರೀಂಕೋರ್ಟ್ ವಕೀಲ ಕಾಮಿನಿ ಜೈಸ್ವಾಲ್ ಮತ್ತು ನ್ಯಾಯಾಂಗ ಸುಧಾರಣೆಗೆ ಸಂಬಂಧಿಸಿದ ಪ್ರಚಾರ ಅಭಿಯಾನದ ಎನ್ ಜಿಒ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳಿಗೆ ಸಂಬಂಧಿಸಿದ್ದಾಗಿತ್ತು. ಎರಡು ಅರ್ಜಿಗಳೂ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಎಸ್ ಐಟಿ ತನಿಖೆಯಾಗಬೇಕು ಎಂದು ಕೋರಿದ್ದವು. ಪ್ರಕರಣವು ನ್ಯಾಯಾಂಗ ಮತ್ತು ಆಡಳಿತಾತ್ಮಕ ಸ್ವರೂಪದ್ದಾದ ಕಾರಣ ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ಕಲಾಪಗಳ ಭಾಗವಾಗಿರಬಾರದು ಎಂದು ಉಭಯ ಅರ್ಜಿಗಳೂ ಕೋರಿದ್ದವು. ನ್ಯಾಯಮೂರ್ತಿ ಚೆಲಮೇಶ್ವರ ಅವರ ಪೀಠವು ಜೈಸ್ವಾಲ್ ಅರ್ಜಿಯ ವಿಚಾರಣೆ ನಡೆಸಿ, ಎಫ್ ಐಆರ್ ಆಪಾದನೆಗಳುಆತಂಕಕಾರಿ ಎಂದು ಹೇಳಿ ಪಂಚಸದಸ್ಯ ಸಂವಿಧಾನ ಪೀಠವು ನವೆಂಬರ್ ೧೩ರಂದು ಪ್ರಕರಣಗಳ ತನಿಖೆ ನಡೆಸಬೇಕು ಎಂದು ತೀರ್ಪು ನೀಡಿತ್ತು. ಆದರೆ ಬೆನ್ನಲ್ಲೇ ಸಿಜೆಐ ಮಿಶ್ರ ಅವರು ಪ್ರತ್ಯೇಕ ಪೀಠವನ್ನು ರಚಿಸಿ, ರೋಸ್ಟರ್ ಸಿದ್ಧಾಂತದ ತೀರ್ಪನ್ನು ನೀಡಿದ್ದರು. ಪ್ರಕರಣವನ್ನು ಬಳಿಕ ಸಿಜೆಐ ನೇತೃತ್ವದ ಪೀಠ ವಜಾಗೊಳಿಸಿ, ಅರ್ಜಿದಾರರಿಗೆ ೨೫ ಲಕ್ಷ ರೂಪಾಯಿಗಳ ದಂಡ ವಿಧಿಸಿತ್ತು. ಇತ್ತೀಚೆಗೆ ನ್ಯಾಯಮೂರ್ತಿ ಲೋಯಾ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕೋರಿದ್ದ ಪ್ರಕರಣದ ವಿಚಾರಣೆಗಾಗಿ ರಚಿಸಲಾಗಿದ್ದ ಪೀಠದ ವಿಚಾರವೂ ನ್ಯಾಯಮೂರ್ತಿಗಳ ಮಧ್ಯೆ ವಿವಾದಕ್ಕೆ ಕಾರಣವಾಗಿತ್ತು.
ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಲೋಯಾ ಅವರ ನಿಗೂಢ ಸಾವಿನ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಪತ್ರಕರ್ತ ಬಿ.ಆರ್. ಲೋನ್ ಅರ್ಜಿ ಸಲ್ಲಿಸಿದ್ದರು. ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಹಲವಾರು ಪೊಲೀಸ್ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಅರ್ಜಿಯ ವಿಚಾರಣೆಗೆ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರ ನೇತೃತ್ವದ ಪೀಠವನ್ನು ಸಿಜೆಐ ರಚಿಸಿದ್ದರು.  ನ್ಯಾಯಮೂರ್ತಿ ಮಿಶ್ರ ನೇತೃತ್ವದಲ್ಲಿ ಪೀಠ ರಚಿಸಿದ ಬಗೆಗೂ ನ್ಯಾಯಮೂರ್ತಿಗಳಲ್ಲಿ ಅಸಮಾಧಾನವಿತ್ತು. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ನಿಯಮಾವಳಿಗಳ ವಿಚಾರದಲ್ಲೂ ಕೊಲಿಜಿಯಂ ನ್ಯಾಯಮೂರ್ತಿಗಳಲ್ಲಿ ಅಸಮಾಧಾನವಿತ್ತು ಎಂದು ವರದಿಗಳು ಹೇಳಿದವು.

2018: ನವದೆಹಲಿ: ಸುಪ್ರೀಂಕೋರ್ಟಿನಲ್ಲಿ ಬಿಕ್ಕಟ್ಟು ಬೆಳೆಯುತ್ತಿರುವ ಬಗ್ಗೆ ಸರ್ಕಾರಕ್ಕೆ ಶಂಕೆ ಮೂಡಿತ್ತು, ಆದರೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ವಿರುದ್ಧ ಜಂಟಿ ಪತ್ರಿಕಾಗೋಷ್ಠಿ ಕರೆಯುವಷ್ಟರ ಮಟ್ಟಿಗೆ ಇದು ಹೋಗಬಹುದು ಎಂದು ಯಾರೂ ಭಾವಿಸಿರಲಿಲ್ಲ. ಬಿಕ್ಕಟ್ಟನ್ನು ನ್ಯಾಯಮೂರ್ತಿಗಳೇ ಇತ್ಯರ್ಥ ಪಡಿಸಿಕೊಲು ಸಾಧ್ಯ ಎಂಬ ಆಶಯದಿಂದ ಸರ್ಕಾರ ಬಿಕ್ಕಟ್ಟಿನಿಂದ ದೂರವೇ ಉಳಿಯುವ ಸಾಧ್ಯತೆಗಳಿವೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು. ‘ಇದು ನ್ಯಾಯಾಂಗದ ಆಂತರಿಕ ವಿಚಾರ. ತಮಗೆ ತಾವೇ ಇತ್ಯರ್ಥ ಪಡಿಸಿಕೊಳ್ಳುವುದು ಅತ್ಯುತ್ತಮ ಎಂದು ಸರ್ಕಾರದ ಉನ್ನತ ಮೂಲವೊಂದು ಸುಪ್ರೀಂಕೋರ್ಟ್ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯಿಸಿತು. ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರಿಗೆ ಭಿನ್ನಮತ ಹೊಂದಿರುವ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ, ರಂಜನ್ ಗೊಗೊಯಿ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ಬಿಡುಗಡೆ ಮಾಡಿರುವ ಜಂಟಿ ಪತ್ರದ ಪ್ರತಿ ಲಭಿಸಿದೆ ಎಂದು ಮೂಲಗಳು ಹೇಳಿದವು. ಕಾಂಗ್ರೆಸ್ ಆತಂಕ: : ಸುಪ್ರೀಂಕೋರ್ಟ್ ಕಾರ್ಯ ನಿರ್ವಹಣೆ ಬಗ್ಗೆ ನ್ಯಾಯಾಲಯದ ನಾಲ್ವರು ನ್ಯಾಯಮೂರ್ತಿಗಳು ಕಳವಳ ವ್ಯಕ್ತ ಪಡಿಸಿರುವ ಬಗ್ಗೆ ನಾವು ತುಂಬ ಆತಂಕಿತರಾಗಿದ್ದೇವೆ ಎಂದು ಕಾಂಗ್ರೆಸ್ ಪಕ್ಷವು ತನ್ನ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿತು. ಸರ್ಕಾರದ ಮಧ್ಯಪ್ರವೇಶಕ್ಕೆ ಸ್ವಾಮಿ ಆಗ್ರಹ:  ಮಧ್ಯೆ ಸುಪ್ರೀಂಕೋರ್ಟಿನ ಬಿಕ್ಕಟ್ಟು ಪರಿಹರಿಸಿ ಸುಪ್ರೀಂಕೋರ್ಟಿನ ಎಲ್ಲ ನ್ಯಾಯಮೂರ್ತಿಗಳೂ ಒಟ್ಟಾಗಿ ಸಾಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಧಾನಿಯವರು ಮಧ್ಯ ಪ್ರವೇಶ ಮಾಡಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದರು. ಮಾಜಿ ನ್ಯಾಯಮೂರ್ತಿಗಳು, ಕಾನೂನು ತಜ್ಞರ ಕಳವಳ: ಘಟನೆ ಬಗ್ಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಕಾನೂನು ತಜ್ಞರು ತೀವ್ರ ಕಳವಳ ಹಾಗೂ ಭ್ರಮನಿರಸನ ವ್ಯಕ್ತ ಪಡಿಸಿದರು. ನಾಲ್ವರು ನ್ಯಾಯಮೂರ್ತಿಗಳ ಜಂಟಿ ಪತ್ರಿಕಾಗೋಷ್ಠಿ ಬಳಿಕ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನು ಭೇಟಿ ಮಾಡಿದರು. ಇದೇ ವೇಳೆಗೆ ಸರ್ಕಾರ ತತ್ ಕ್ಷಣದಲ್ಲೇ ಮಧ್ಯಪ್ರವೇಶ ಮಾಡುವ ಸಾಧ್ಯತೆಗಳು ಇಲ್ಲ ಎಂದು ಮೂಲಗಳು ಹೇಳಿದವು. ಮಮತಾ ಬ್ಯಾನರ್ಜಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟ್ವಿಟರ್ ಮೂಲಕ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿ, ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನೀಡಿರುವ ಹೇಳಿಕೆಯು ನಾಗರಿಕರನ್ನು ದುಃಖಿತರನ್ನಾಗಿ ಮಾಡಿದೆ. ನ್ಯಾಯಾಂಗ ಮತ್ತು ಮಾಧ್ಯಮ ಪ್ರಜಾಪ್ರಭುತ್ವದ ಸ್ತಂಭಗಳು. ನ್ಯಾಯಾಂಗ ವಿಷಯಗಳಲ್ಲಿ ಕೇಂದ್ರ ಸರ್ಕಾರದ ಅತಿಯಾದ ಹಸ್ತಕ್ಷೇಪ ಪ್ರಜಾಪ್ರಭುತ್ವಕ್ಕೆ ಗಂಡಾಂತರಕಾರಿ ಎಂದು ಹೇಳಿದರು. ಎಚ್.ಆರ್. ಭಾರದ್ವಾಜ್: ಘಟನೆ ದುರದೃಷ್ಟಕರ ಎಂದು ಪ್ರತಿಕ್ರಿಯಿಸಿದ ಮಾಜಿ ಕಾನೂನು ಸಚಿವ ಎಚ್.ಆರ್. ಭಾರದ್ವಾಜ್ ಅವರು ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ನ್ಯಾಯಾಂಗವು ಸಮರ್ಪಕವಾಗಿ ಜವಾಬ್ದಾರಿ ನಿರ್ವಹಿಸುವಂತೆ ಮಾಡುವ ಹೊಣೆಗಾರಿಕೆ ಕಾನೂನು ಸಚಿವಾಲಯದ್ದು ಎಂದು ಹೇಳಿದರು. ಕಮ್ಯೂನಿಸ್ಟ್ ಪಕ್ಷದ ನಾಯಕ ಡಿ. ರಾಜಾ ಅವರು ನ್ಯಾಯಮೂರ್ತಿ ಚಲಮೇಶ್ವರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಒಳಗಿನಿಂದಲೇ ಅಪಾಯ: ನ್ಯಾಯಾಂಗಕ್ಕೆ ಅಪಾಯ ಬಂದಿರುವುದು ಹೊರಗಿನಿಂದಲ್ಲ ಒಳಗಿನಿಂದಲೇ. ಈಗ ಜನರು ಪ್ರಶ್ನಿಸುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಶೋಕ ಕುಮಾರ್ ಗಂಗೂಲಿಸುಪ್ರೀಂಕೋರ್ಟಿನ ಮೇಲಿನ ವಿಶ್ವಾಸದ ಮರುಸ್ಥಾಪನೆಯಾಗಬೇಕು. ಸರ್ಕಾರ ಮಾತ್ರವೇ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ನ್ಯಾಯಮೂರ್ತಿಗಳಿಂದಲೇ ಅದರ ನಿವಾರಣೆ ಆಗಬೇಕು. ಎಲ್ಲ ನ್ಯಾಯಮೂರ್ತಿಗಳೂ ಒಟ್ಟಾಗಿ ಕುಳಿತು ಪರಿಹಾರ ಕಂಡು ಹಿಡಿಯಬೇಕು ಎಂದು ಹೇಳಿದರು. ಸಲ್ಮಾನ್ ಖುರ್ಷಿದ್: ನ್ಯಾಯಾಂಗ ಎಲ್ಲೆಡೆಗಳಲ್ಲೂ  ಇಬ್ಭಾಗವಾಗಿದೆ, ಆದರೆ ಇದು ಕಾಯಂ ಆಗಿರಬೇಕಾಗಿಲ್ಲ. ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಮತ್ತು ನ್ಯಾಯಾಂಗವೇ ಇದನ್ನು ಇತ್ಯರ್ಥ ಪಡಿಸಿಕೊಳ್ಳುತ್ತದೆ ಎಂದು ನಾನು ಹಾರೈಸುವೆ ಎಂದು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ಹೇಳಿದರು. ಇಎಸ್ ವರ್ಚಸ್ಸಿಗೆ ಹಾನಿ: ಘಟನೆಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ ವರ್ಚಸ್ಸಿಗೆ ಹಾನಿಯಾಗಿದೆ ಎಂದು ಮಹಾರಾಷ್ಟ್ರದ ಮಾಕಿ ಅಡ್ವೋಕೇಟ್ ಜನರಲ್ ಶ್ರೀಹರಿ ಅನೆ ಅಭಿಪ್ರಾಯಪಟ್ಟರು.

2018: ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಮೂರನೇ ಅತ್ಯಂತ ಜನಪ್ರಿಯ ನಾಯಕ ಎಂಬುದಾಗಿ ಗ್ಯಾಲಪ್ ಇಂಟರ್ನ್ಯಾಶನಲ್ ನಡೆಸಿರುವ "ಒಪೀನಿಯನ್ ಆಫ್ ವರ್ಲ್ಡ್ ಲೀಡರ್ ಎಂಬ ವಾರ್ಷಿಕ ಸಮೀಕ್ಷೆಯಲ್ಲಿ ಕಂಡು ಬಂದಿತು. ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಮತ್ತು ಫ್ರಾನ್ಸಿನ ಹೊಸ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್ ಅವರು ಸಮೀಕ್ಷೆಯಲ್ಲಿ ಮೊದಲೆರಡು ಸ್ಥಾನಗಳನ್ನು ಪಡೆದರು. ವಿಶ್ವದ ಮೂರನೇ ಅತ್ಯಂತ ಜನಪ್ರಿಯ ನಾಯಕನೆಂದು ಪರಿಗಣಿತರಾಗುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘಟಾನುಘಟಿ ನಾಯಕರಾದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹಿಂದೆ ತಳ್ಳಿದರು. ತೃತೀಯ ಸ್ಥಾನದಲ್ಲಿರುವ ಮೋದಿ ಅವರ ಬಳಿಕದ ಸ್ಥಾನಗಳಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ (೪ನೇ ಸ್ಥಾನ), ಜಿನ್ ಪಿಂಗ್ (೫ನೇ ಸ್ಥಾನ), ರಶ್ಯ ಅಧ್ಯಕ್ಷ ಪುಟಿನ್ (೬ನೇ ಸ್ಥಾನ), ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸಾಉ (೭ನೇ ಸ್ಥಾನ) ಪಡೆದರು. ಪ್ರಧಾನಿ ಮೋದಿ ಅವರು ವಿಶ್ವದ ೩ನೇ ಅತ್ಯಂತ ಜನಪ್ರಿಯನಾಗಿ ಮೂಡಿ ಬಂದಿರುವುದು ೨೦೧೮ರಲ್ಲಿನ ಎಂಟು ರಾಜ್ಯಗಳ ವಿಧಾನಸಭಾ ಚುನಾವಣೆ ಮತ್ತು ೨೦೧೯ರಲ್ಲಿನ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷವಾದ ಬಿಜೆಪಿಗೆ ಭಾರೀ ಲಾ ತಂದುಕೊಡಲಿದೆ ಎಂದು ಭಾವಿಸಲಾಯಿತು.

2018: ಚೆನ್ನೈ: ಗುಟ್ಕಾ ಹಗರಣದಲ್ಲಿ ತಮಿಳುನಾಡಿನ ಆರೋಗ್ಯ ಸಚಿವರು, ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಇತರರು ಶಾಮೀಲಾಗಿರುವ ಬಗ್ಗೆ ಮಾಜಿ ಪೊಲೀಸ್ ಮಹಾನಿರ್ದೇಶಕ ಅಶೋಕ ಕುಮಾರ್ ಅವರಿಗೆ ಸಲ್ಲಿಸಿದ್ದ ತನ್ನ ವರದಿ ತಮಿಳುನಾಡಿದ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಚೆನ್ನೈಯಲ್ಲಿನವೇದ ನಿಲಯಂ ನಿವಾಸದಲ್ಲಿ ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ಮದ್ರಾಸ್ ಹೈಕೋರ್ಟಿಗೆ ತಿಳಿಸಿತು. ‘ವೇದ ನಿಲಯಂನಿಂದ ನಿರ್ಣಾಯಕ ಸಾಕ್ಷ್ಯಾಧಾರವನ್ನು ನಿವಾರಿಸಲು ಕೆಲವು ವ್ಯಕ್ತಿಗಳು ಸಂಚು ನಡೆಸಿದ್ದಾರೆ ಎಂಬ ನಿರ್ದಿಷ್ಟ ವರ್ತಮಾನವನ್ನು ಅನುಸರಿಸಿ ಆದಾಯ ತೆರಿಗೆ ಅಧಿಕಾರಿಗಳು ೨೦೧೭ರ ನವೆಂಬರ್ ೧೭ರಂದು ನಿವಾಸದ ಆವರಣದಲ್ಲಿ ಶೋಧ ನಡೆಸಿದ್ದರು. ಜಯಲಲಿತಾ ಅವರ ನಿಕಟವರ್ತಿ ವಿ.ಕೆ. ಶಶಿಕಲಾ ಅವರು ಇದ್ದ ಕೊಠಡಿಯ ಶೋಧ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ಮಾಜಿ ಡಿಜಿಪಿಯವರು ಸೆಪ್ಟೆಂಬರ್ , ೨೦೧೬ರಂದು ಸಹಿ ಮಾಡಿದ್ದ, ಆಗಿನ ಮುಖ್ಯಮಂತ್ರಿಯವರನ್ನು ಉದ್ದೇಶಿಸಿ ಬರೆಯಲಾಗಿದ್ದ ಆಗಸ್ಟ್ ೧೧, ೨೦೧೬ರ ದಿನಾಂಕದ ಪ್ರಿನ್ಸಿಪಲ್ ಡೈರೆಕ್ಟರ್ ಟ್ಯಾಕ್ಸ್ (ತನಿಖೆ) ಅವರ ರಹಸ್ಯ ಪತ್ರ ಲಭಿಸಿತು ಎಂದು ಆದಾಯ ತೆರಿಗೆ ಇಲಾಖೆ ನ್ಯಾಯಾಲಯಕ್ಕೆ ತಿಳಿಸಿತು. ಆದಾಯ ತೆರಿಗೆ (ತನಿಖೆ) ಮುಖ್ಯ ನಿರ್ದೇಶಕ ಸುಸೀ ಬಾಬು ವರ್ಗೀಸ್ ಅವರು ಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಮಾಹಿತಿಯ ವಿವರ ನೀಡಲಾಯಿತು.   ಗುಟ್ಕಾ ತಯಾರಕನ ಹೇಳಿಕೆ: ಎಂಡಿಎಂ ಬ್ರಾಂಡ್ ಗುಟ್ಕಾದ ತಯಾರಕ ಮಾಧವ ರಾವ್ ಅವರು ಅಧಿಕಾರಿಗಳ ಮುಂದೆ ನೀಡಿದ ಪ್ರಮಾಣಪತ್ರದಲ್ಲಿ ತಾನು ೦೧-೦೪-೨೦೧೬ರಿಂದ ೧೫-೦೬-೨೦೧೬ರ ಅವಧಿಯಲ್ಲಿ ತಮಿಳುನಾಡು ಸರ್ಕಾರದ ಆರೋಗ್ಯ ಸಚಿವರಿಗೆ ೫೬ ಲಕ್ಷ ರೂಪಾಯಿಗಳನ್ನು ಪಾವತಿ ಮಾಡಿರುವುದಾಗಿ ತಿಳಿಸಿದ್ದಾನೆ. ವಿವಿಧ ಅಧಿಕಾರಿಗಳಿಗೆ ಹಣ ಪಾವತಿಗಳನ್ನು ಮಾಡಲಾಗಿದ್ದು, ತಮಿಳುನಾಡಿನ ಆರೋಗ್ಯ ಸಚಿವರನ್ನು ಎಚ್ ಎಂ ಎಂಬುದಾಗಿಯೂ, ಪೊಲೀಸ್ ಕಮೀಷನರ್ ಅವರನ್ನು ಸಿಪಿ ಎಂಬುದಾಗಿಯೂ ಸಂಕೇತ ನಾಮಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಧವ ರಾವ್ ತಿಳಿಸಿರುವುದಾಗಿ ಆದಾಯ ತೆರಿಗೆ ಇಲಾಖೆಯ ಪ್ರಮಾಣಪತ್ರ ತಿಳಿಸಿತು. ಗುಟ್ಕಾ ಹಗರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ವರದಿ ದಾಖಲೆಯಲ್ಲೇ ಇಲ್ಲ ಎಂಬುದಾಗಿ ಸರ್ಕಾರ ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯನ್ನು  ಇದೀಗ ಪ್ರಮಾಣಪತ್ರ ತೊಡೆದು ಹಾಕಿತು. ಆದಾಯ ತೆರಿಗೆ ಇಲಾಖೆಯು ವಾಸ್ತವವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು ಮತ್ತು ತಾನು ಅದನ್ನು ಜಯಲಲಿತಾ ಅವರಿಗೆ ಹಸ್ತಾಂತರಿಸಿದ್ದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಯಲಲಿತಾ ಅವರು ಬಯಸಿದ್ದರು ಎಂದು ಮಾಜಿ ಮುಖ್ಯ ಕಾರ್ಯದರ್ಶಿ ಪಿ. ರಾಮಮೋಹನ ರಾವ್ ಪತ್ರಿಕೆಯೊಂದಕ್ಕೆ ದೃಢ ಪಡಿಸಿದರು.

2018: ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕದ ಕಡೆ ತಿರುಗಿಸಲಾಗಿದೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಗೋವಾ ಸರ್ಕಾರವು ನದಿ ತಿರುವು ಖಚಿತಪಡಿಸಿ ಕೊಳ್ಳುವುದಕ್ಕಾಗಿ ಅಧಿಕಾರಗಳ ತಂಡ ಒಂದನ್ನು  ಕರ್ನಾಟಕ ಗಡಿ ಭಾಗದ ಗ್ರಾಮಗಳಿಗೆ ಕಳುಹಿಸಿತು. ಮಹದಾಯಿ ನದಿ ನೀರು ತಡೆಯುವುದಕ್ಕಾಗಿ ಕರ್ನಾಟಕ ಕಣಕುಂಬಿ ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸುವ ಕೆಲಸ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗೋವಾ ಜಲ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಸುದ್ದಿಗಾರರಿಗೆ ತಿಳಿಸಿದರು. ‘ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ಉಲ್ಲಂಘಿಸಿ ಕರ್ನಾಟಕವು ಕಣಕುಂಬಿ ಗ್ರಾಮದಲ್ಲಿ ಕಾಮಗಾರಿ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿಗಳ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ನಾನು ಮುಖ್ಯ ಅಭಿಯಂತರರಿಗೆ ಸೂಚಿಸಿದ್ದೇನೆ ಎಂದು ಪಾಲೇಕರ್ ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು. ಮಹದಾಯಿ ನದಿ ಕರ್ನಾಟಕ, ಗೋವಾ ಮತ್ತು ಮಹರಾಷ್ಟ್ರ ಗಡಿಯನ್ನು ಹಂಚಿಕೊಂಡಿದ್ದು, ಗೋವಾ ಮತ್ತು ಕರ್ನಾಟಕ ನಡುವೆ ನೀರಿನ ಸಮಾನ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹದಾಯಿ ನ್ಯಾಯಾಧಿಕರಣವನ್ನು ಸ್ಥಾಪಿಸಿತ್ತು.

2018: ಬೆಳಗಾವಿ: ದೇಶದ ಯುವಶಕ್ತಿ ಜಾತಿವಾದ, ಮೂಢನಂಬಿಕೆಗಳ ವಿರುದ್ಧ ಹೋರಾಟ ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದ ಜಿಡಗಾ ಮಠದಲ್ಲಿ ನಡೆದ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡಿದರು. ಸಮಾಜ ವಿರೋಧಿ ಶಕ್ತಿಗಳು ಜಾತಿ ನೆಲೆಯಲ್ಲಿ ದೇಶ ಒಡೆಯುತ್ತಿವೆ. ಇಂಥ ದುಷ್ಟಶಕ್ತಿಗಳಿಗೆ ಯುವ ಶಕ್ತಿ ಉತ್ತರ ನೀಡಬೇಕು ಎಂದು ಮೋದಿ ನುಡಿದರು. ಮುಗಳಖೋಡ ಮಠ ವಿವೇಕಾನಂದಮಯವಾಗಿದೆ. ಸಹಸ್ರ ಸಹಸ್ರ ವಿವೇಕ ಆವಾಹನ ವಿಶ್ವ ದಾಖಲೆ ಸೇರುತ್ತಿದೆ. ಮುಗಳಖೋಡ ಸ್ವಾಮೀಜಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಾದ ಸ್ಫೂರ್ತಿಯಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. ಎಲ್ಲ ಭಾರತೀಯರನ್ನು ಸ್ವಾಮೀ ವಿವೇಕಾನಂದರು ಅಣ್ಣ ತಮ್ಮ ಎಂದು ತಿಳಿದಿದ್ದರು. ಭಾರತದ ಮಣ್ಣನ್ನು ತಮ್ಮ ಜೀವ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಅವರ ತತ್ವ ಸಿದ್ಧಾಂತಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮೋದಿ ನುಡಿದರು.

2018: ಮುಗಳಖೋಡ: ಬೆಳಗಾವಿಯ ಮುಗಳಖೋಡದ ಸಿದ್ಧರಾಮೇಶ್ವರ ಸಂಕಲ್ಪ ಯಾತ್ರೆಯಲ್ಲಿ ಖಾವಿ ಬಟ್ಟೆತೊಟ್ಟ ವಿದ್ಯಾರ್ಥಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಒಂದೇ ಕಡೆ ಸೇರಿ ಸ್ವಾಮಿ ವಿವೇಕಾನಂದರ ಸಂದೇಶ ಸಾರುವುದರ ಜೊತೆಗೆ ಮೂರು ವಿಶ್ವಮಟ್ಟದ ಮೂರು ದಾಖಲೆಗಳನ್ನು ನಿರ್ಮಿಸಿದರು. ರಾಯಪುರದಲ್ಲಿ ಎಂಟು ವರ್ಷಗಳ ಹಿಂದೆ ನಡೆದ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ,೫೧೬  ವಿದ್ಯಾರ್ಥಿಗಳು ವಿವೇಕಾನಂದರ ವೇಷಧಾರಿಯಲ್ಲಿ ಕಾಣಿಸಿಕೊಂಡು ದಾಖಲೆ ನಿರ್ಮಿಸಿದ್ದರು. ಆದರೆ, ಇಂದು ಮುಗಳಖೋಡದಲ್ಲಿ ನಡೆದಸಹಸ್ರ ಸಹಸ್ರ ವಿವೇಕ್ ಅವಾಹನಾ ಸಮಾರಂಭದಲ್ಲಿ  ಏಕಕಾಲಕ್ಕೆ ೧೦,೦೫೪  ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ವೇಷಧಾರಿಯಲ್ಲಿ ಪಾಲ್ಗೊಂಡು ನೂತನ ದಾಖಲೆ ನಿರ್ಮಿಸಿದರು.  ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಗೋಲ್ಡನ್ ಬುಕ್ ರೆಕಾರ್ಡುಗಳಲ್ಲಿ ಇಲ್ಲಿನ ವಿವೇಕಾನಂದರ ವೇಷಧಾರಿಗಳ ದಾಖಲೆ ಸೇರ್ಪಡೆಯಾಯಿತು. ಜಿಡಗಾ ಮಠದ ಡಾ. ಮುರುಘರಾಜೇಂದ್ರ ಸ್ವಾಮೀಜಿಯವರು ಗುಜರಾತ್ ರಾಜ್ಯದಿಂದ ಇಷ್ಟೊಂದು ವಿದ್ಯಾರ್ಥಿಗಳಿಗೆ ಖಾವಿ ಬಟ್ಟೆ ತರಿಸಿ ಧರಿಸಲು ನೀಡಿದ್ದರು. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ೧೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ತಲೆಗೆ ಕೇಸರಿ ಪೇಟ ತೊಟ್ಟು, ಮೈತುಂಬ ಖಾವಿ ಬಟ್ಟೆ ಧರಿಸಿ ಕಣ್ಮನ ಸೆಳೆದರು. ಕೇವಲ ಬಟ್ಟೆ ಧರಿಸಿದೇ ಸ್ವಾಮಿ ವಿವೇಕಾನಂದರ ಹಾವಭಾವದಲ್ಲಿ ಅವರು ಗಮನಸೆಳೆದರು. ನಿಪ್ಪಾಣಿಯ ಸುನಿಲ ದಳವಿಯವರ ೭೦ ಸದಸ್ಯರ ತಂಡವು ವಿದ್ಯಾರ್ಥಿಗಳಿಗೆ ಆಕರ್ಷಕವಾಗಿ ಪೇಟ ತೊಡಿಸಿದ್ದು ಇನ್ನೊಂದು ವಿಶೇಷವಾಗಿತ್ತು.


2017: ಮುಂಬೈ: ಸ್ಕಾರ್ಪೀನ್ಸರಣಿಯ ಎರಡನೆಯ ಜಲಾಂತರ್ಗಾಮಿ ನೌಕೆಖಂಡೇರಿಯನ್ನು ರಕ್ಷಣಾ ಖಾತೆಯ ರಾಜ್ಯ ಸಚಿವ ಡಾ. ಸುಭಾಷ್ ಭಾಮ್ರೆ ಲೋಕಾರ್ಪಣೆ ಮಾಡಿದರು. ಜಲಾಂತರ್ಗಾಮಿ ನೌಕೆಗಳನ್ನು ದೇಶೀಯವಾಗಿ ನಿರ್ಮಿಸುವ ಭಾರತದ ಪ್ರಯತ್ನದಲ್ಲಿನ ಮಹತ್ವದ ಹೆಜ್ಜೆ ಇದಾಗಿದ್ದು ಖಂಡೇರಿಯು ಪರೀಕ್ಷೆಗೆ ಮುಕ್ತವಾಗಿದೆ. ಛತ್ರಪತಿ ಶಿವಾಜಿ ನಿಯಂತ್ರಣದಲ್ಲಿದ್ದಖಂಡೇರಿಕೋಟೆಯ ಹೆಸರನ್ನೇ ಜಲಾಂತರ್ಗಾಮಿಗೆ ಇಡಲಾಗಿದೆ. ಸಮುದ್ರದ ನಡುವೆ ಇದ್ದ ಕೋಟೆಯ ಕಾರಣದಿಂದಾಗಿ ಶಿವಾಜಿಯ ನೌಕಾದಳ 17ನೇ ಶತಮಾನದಲ್ಲಿ ಪಾರಮ್ಯ ಸಾಧಿಸಿತ್ತುಫ್ರಾನ್ಸ್ಸಹಕಾರದಲ್ಲಿ ನಿರ್ಮಿತವಾದ ಜಲಾಂತರ್ಗಾಮಿ ನೌಕೆಖಂಡೇರಿಯನ್ನು ಇಲ್ಲಿನ ಮಜಗಾಂವ್ಹಡಗುಕಟ್ಟೆಯಲ್ಲಿ  ಲೋಕಾರ್ಪಣೆ ಮಾಡಲಾಯಿತು. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದುಫ್ರಾನ್ಸ್ ಡಿಸಿಎನ್ಎಸ್ಕಂಪೆನಿಯ ಸಹಭಾಗಿತ್ವದಲ್ಲಿ ಮಜಗಾಂವ್ ಹಡಗುಕಟ್ಟೆಯಲ್ಲಿ ಸ್ಕಾರ್ಪೀನ್ ಸರಣಿಯ ಒಟ್ಟು ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ. ಜಲಾಂತರ್ಗಾಮಿಯನ್ನು ಡಿಸೆಂಬರ್ವರೆಗೆ ಬಂದರಿನಲ್ಲಿ ಹಾಗೂ ಸಮುದ್ರದಲ್ಲಿ ಕಠಿಣ ಪರೀಕ್ಷೆಗಳಿಗೆ ಒಡ್ಡಲಾಗುತ್ತದೆ. ಜಲಾಂತರ್ಗಾಮಿಯ ಪ್ರತಿ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಆಗಿದೆ ಎಂಬುದನ್ನು ಅಳೆಯಲಾಗುತ್ತದೆ. ಪರೀಕ್ಷೆಗಳು ಪೂರ್ಣಗೊಂಡ ನಂತರ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಲಾಗುತ್ತದೆ. ಸ್ಕಾರ್ಪೀನ್ಜಲಾಂತರ್ಗಾಮಿಗಳು ಡೀಸೆಲ್ಮತ್ತು ವಿದ್ಯುತ್ಚಾಲಿತ ಎಂಜಿನ್ ಹೊಂದಿವೆ. ಜಲಾಂತರ್ಗಾಮಿಯ ವೈಶಿಷ್ಟ್ಯಗಳು: ರಹಸ್ಯವಾಗಿ ಕಾರ್ಯಾಚರಣೆ  ನಡೆಸುವ ಸಾಮರ್ಥ್ಯ. *  ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರ ಬಳಸಿ ವೈರಿಗೆ ಭಾರಿ ಹಾನಿ ಉಂಟು ಮಾಡುವುದು. *  ನೌಕೆಗಳನ್ನು ಧ್ವಂಸಗೊಳಿಸುವ ಕ್ಷಿಪಣಿ, ಸ್ಫೋಟಕ ಬಳಸುವ ಸಾಮರ್ಥ್ಯ. *  ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆ ಮಾಡುವುದು ತೀರಾ ಕಷ್ಟ. *  ಶತ್ರು ದೇಶದ ಕಡೆಯಿಂದ ನುಗ್ಗುವ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸಲು ಸಹ ಜಲಾಂತರ್ಗಾಮಿಗಳನ್ನು ಬಳಸಿಕೊಳ್ಳಬಹುದು. *  ಗುಪ್ತವಾಗಿ ಮಾಹಿತಿ ಕಲೆಹಾಕುವ ಕೆಲಸಕ್ಕೆ ನೌಕೆ ಹೇಳಿ ಮಾಡಿಸಿದಂತಿದೆ. ಅರ್ಧ ಶತಮಾನದ ಸಂಭ್ರಮ: ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967 ಡಿಸೆಂಬರ್‌ 8ರಂದು ನೌಕಾಪಡೆಗೆ ಐಎನ್ಎಸ್ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ. ಭಾರತದ ನೌಕಾಪಡೆಯ ಶಕ್ತಿ –15. ಭಾರತೀಯ ನೌಕಾದಳದ ಬಳಿ ಈಗ ಇರುವ ಜಲಾಂತರ್ಗಾಮಿಗಳು. 7 ಜಲಾಂತರ್ಗಾಮಿಗಳು ನಿರ್ಮಾಣ, ಪರೀಕ್ಷಾ ಹಂತದಲ್ಲಿವೆ.
2017: ನವದೆಹಲಿ: ಟಾಟಾ ಸನ್ಸ್ ಸಮೂಹದ ನೂತನ ಅಧ್ಯಕ್ಷರಾಗಿ ಟಿಸಿಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌) ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರನ್ನು ಟಾಟಾ ಸನ್ಸ್ ನೇಮಕ ಮಾಡಿತು. ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಸ್ಟೀಲ್ ಮಿಲ್ಲುಗಳಿಂದ ಹಿಡಿದ ವಿಮಾನಯಾನ ಮತ್ತು ಸಾಲ್ಟ್ ಪ್ಯಾನ್ಗಳವರೆಗಿನ ವಿಸõ ಉದ್ಯಮ ಸಾಮ್ರಾಜ್ಯವನ್ನು ಹೊಂದಿರುವ ಟಾಟಾ ಸಮೂಹದ ಕಂಪನಿಗಳನ್ನು ಟಾಟಾ ಸನ್ಸ್ ಹೊಂದಿದ್ದು, ಕಳೆದ ಅಕ್ಟೋಬರ್ನಲ್ಲಿ ತನ್ನ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತ್ತು. ಬೆಳವಣಿಗೆ ಉಭಯರ ಮಧ್ಯೆ ಕಟು ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿತ್ತು. ಭಾರತದ ಪ್ರಭಾವಶಾಲಿ ಕುಟುಂಬಗಳ ಮುಖ್ಯಸ್ಥರಲ್ಲಿ ಒಬ್ಬರಾದ ರತನ್ ಟಾಟಾ ಅವರು ಆಡಳಿತ ಮಂಡಳಿಯು ಮಿಸ್ತ್ರಿ ಅವರನ್ನು ಕಿತ್ತು ಹಾಕಿದ ಬಳಿಕ ಟಾಟಾ ಸನ್ಸ್ ತಾತ್ಕಾಲಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಕ್ಟೋಬರ್ ತಿಂಗಳಲ್ಲಿ ಟಾಟಾ ಸನ್ಸ್ ಆಡಳಿತ ಮಂಡಳಿಯು ಮುಂದಿನ ನಾಲ್ಕು ತಿಂಗಳುಗಳ ಒಳಗಾಗಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಲುವಾಗಿ ರತನ್ ಟಾಟಾ ಅವರನ್ನೂ ಒಳಗೊಂಡ ಪಂಚ ಸದಸ್ಯ ಆಯ್ಕೆ ಸಮಿತಿಯನ್ನು ರಚಿಸಿತ್ತು.
 2017: ನವದೆಹಲಿ: ತಮಿಳುನಾಡಿನ ಸಾಂಪ್ರದಾಯಿಕ ಜಲ್ಲಿಕಟ್ಟು ಸ್ಪರ್ಧೆ ಮೇಲಿನ ನಿಷೇಧ ತೆರವುಗೊಳಿಸಲು ಸುಪ್ರೀಂ ಕೋರ್ಟ್ಈದಿನ ನಿರಾಕರಿಸಿತು. ಇದರೊಂದಿಗೆ ತಮಿಳುನಾಡು ಸರ್ಕಾರಕ್ಕೆ ಹಿನ್ನಡೆಯಾಯಿತು. ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ  ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ  ಜಲ್ಲಿಕಟ್ಟು ಸಂಬಂಧ ನಿಷೇಧವನ್ನು ತೆರವುಗೊಳಿಸಿ ಎಂದು ಕೋರಿರುವುದು ಸರಿಯಲ್ಲ, ಇದು ಸಮಂಜಸವೂ ಅಲ್ಲ ಎಂದು ಅಭಿಪ್ರಾಯಪಟ್ಟಿತು. ಸುಪ್ರೀಂ ಕೋರ್ಟಿನ ಈ ಆದೇಶದಿಂದ ಕೇಂದ್ರ ಸರ್ಕಾರ ಹಾಗೂ ತಮಿಳುನಾಡು ಸರ್ಕಾರಗಳ ಮುಂದಿನ ನಡೆ ಕುತೂಹಲಕಾರಿಯಾಗಿದೆ.
2017: ಆಗ್ರಾ/ ಮಥುರಾ ಬಿಎಸ್ಎಫ್ಯೋಧ ತೇಜ್ಬಹದ್ದೂರ್ ಯಾದವ್‌  ಅವರು  ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಫೇಸ್ಬುಕ್ನಲ್ಲಿ ವಿಡಿಯೊ ಹಾಕಿದ ಬೆನ್ನಲ್ಲೇ ಕೇಂದ್ರ ಮೀಸಲು ಪೊಲೀಸ್ಪಡೆ (ಸಿಆರ್ಪಿಎಫ್‌) ಮತ್ತೊಬ್ಬ ಯೋಧ ಸೌಕರ್ಯಗಳು ಸರಿ ಇಲ್ಲ  ವಿಡಿಯೊ ಅಪ್ಲೋಡ್ಮಾಡಿದರು. ಕೇಂದ್ರ ಸರ್ಕಾರದ ಅರೆಸೇನಾ ಪಡೆ ಸಿಆರ್ಪಿಎಫ್ಬೆಟಾಲಿಯನ್ ಯೋಧ ಜೀತ್ಸಿಂಗ್ಫೇಸ್ಬುಕ್ನಲ್ಲಿ ವಿಡಿಯೊ ಅಪ್ಲೋಡ್ಮಾಡಿದ್ದಾರೆ. ವಿಡಿಯೊದಲ್ಲಿ ಏನಿದೆ? ಯೋಧ ಜೀತ್ಸಿಂಗ್ಅರೆ ಸೇನಾಪಡೆಯಲ್ಲಿ ನೀಡುತ್ತಿರುವ ಸೌಕರ್ಯಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ, ಉತ್ತಮ ಸೌಲಭ್ಯಗಳನ್ನು ಕಲ್ಪಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದರು. ನಾವು ಗ್ರಾಮಪಂಚಾಯಿತಿ ಹಾಗೂ   ಎಲ್ಲ ಹಂತದ ಚುನಾವಣೆಗಳಲ್ಲಿ ಕೆಲಸ ಮಾಡುತ್ತವೆ, ಸಂಸತ್, ವಿಮಾನ ನಿಲ್ದಾಣ, ಮಸೀದಿ ಸೇರಿದಂತೆ ವಿಐಪಿಗಳಿಗೆ ಭದ್ರತೆ ನೀಡಿದರೂ ನಮಗೆ ಸೇನಾ ಯೋಧರಿಗೆ ಸಿಗುವಂತಹ  ಸೌಲಭ್ಯಗಳು ಸಿಗುತ್ತಿಲ್ಲಎಂದು ಜೀತ್ಸಿಂಗ್ ಬೇಸರ ವ್ಯಕ್ತಪಡಿಸಿದರು. ಸರ್ಕಾರ, ಶಿಕ್ಷಕರಿಗೆ 50 ರಿಂದ 60 ಸಾವಿರ ರೂಪಾಯಿ ಸಂಬಳ ಹಾಗೂ ಸಾಕಷ್ಟು ರಜೆಗಳನ್ನು ಕೊಡುತ್ತದೆ. ಆದರೆ ಕಾಡು ಮೇಡು, ಬೆಟ್ಟ ಗುಡ್ಡ, ನಕ್ಸಲ್ಪೀಡಿತ ಸ್ಥಳಗಳಲ್ಲಿ ಕೆಲಸ ಮಾಡುವ ನಮಗೆ ಕಡಿಮೆ ವೇತನ ನೀಡಲಾಗುತ್ತಿದೆನಾವು ನಿವೃತ್ತರಾದರೆ ಮಾಜಿ ಸೈನಿಕರಿಗೆ ಸಿಗುವ ಪಿಂಚಣಿ, ವೈದ್ಯಕೀಯ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ  ಎಂದು ಜೀತ್ಸಿಂಗ್ ವಿಡಿಯೊದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
2017: ನವದೆಹಲಿ: ನೈಜ ನಿಯಂತ್ರಣ ರೇಖೆಯಲ್ಲಿ ಗಡಿ ಕಾಯುತ್ತಿರುವ ಯೋಧರಿಗೆ ಕಳಪೆ ಆಹಾರ ಒದಗಿಸಲಾಗುತ್ತಿದೆ ಎಂದು ಆಪಾದಿಸಿ ಫೇಸ್ ಬುಕ್ನಲ್ಲಿ ಬಿಎಸ್ಎಫ್ ಯೋಧ ಅಪ್ಲೋಡ್ ಮಾಡಿರುವ ವಿಡಿಯೋ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಚೇರಿಯ ಗಮನ ಸೆಳೆದಿದ್ದು, ಪ್ರಧಾನಿ ಕಚೇರಿಯು ಗೃಹ ಸಚಿವಾಲಯದಿಂದ ಮಾಹಿತಿ ಕೇಳಿತು. ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧ ತೇಜ್ ಬಹಾದ್ದೂರ್ ಯಾದವ್ ಅವರು ಫೇಸ್ ಬುಕ್ನಲ್ಲಿ ಅಪ್ಲೋಡ್ ಮಾಡಿರುವ 4 ವಿಡಿಯೋಗಳು ಯೋಧರಿಗೆ ನೀರು ಸಾರು, ಕಳಪೆ ಬೇಳೆ, ಸುಟ್ಟ ಪರೋಟ ಸೇರಿದಂತೆ ಕಳಪೆ ಆಹಾರ ಒದಗಿಸಲಾಗುತ್ತಿದೆ ಎಂದು ಆಪಾದಿಸಿದ್ದವು. ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ 30 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಗೊಂಡಿದ್ದವು.  ಪ್ರಧಾನಿ ಕಚೇರಿಯು ವಿಡಿಯೋ-ಆಪಾದನೆ ಸಂಬಂಧ ಮಾಹಿತಿ ನೀಡುವಂತೆ ಪ್ರಸ್ತುತ ವಿಡಿಯೋಗಳನ್ನು ಪರಿಶೀಲಿಸುತ್ತಿರುವ ಗೃಹ ಸಚಿವಾಲಯಕ್ಕೆ ಸೂಚನೆ ನೀಡಿತು. ಈಮಧ್ಯೆ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟದ್ದಕ್ಕಾಗಿ ಯೋಧನನ್ನು ಗುರಿ ಮಾಡಿಕೊಳ್ಳಲಾಗಿದೆ ಎಂದು ತೇಜ್ ಬಹಾದ್ದೂರ್ ಕುಟುಂಬ ಆಪಾದಿಸಿತು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆದ ಒಂದು ದಿನದ ಬಳಿಕ ಯೋಧನನ್ನು ಪೂಂಚ್ ಗಡಿ ನಿಯಂತ್ರಣ ರೇಖೆಯಿಂದ ರಾಜೌರಿ ಬೆಟಾಲಿಯನ್ಗೆ ಸ್ಥಳಾಂತರಿಸಲಾಯಿತು. ನನ್ನ ಪತಿ ಸರಿಯಾದುದನ್ನೇ ಮಾಡಿದ್ದಾರೆ ಎಂದು ನಾನು ಹೇಳಬಯಸುತ್ತೇನೆ. ಅವರು ಸೈನಿಕರ ಸಲುವಾಗಿ ಮಾತನಾಡಿದ್ದಾರೆ. ಶುದ್ಧ ಆಹಾರ ಕೊಡಿ ಎಂದು ಕೇಳುವುದು ಅಪರಾಧವಲ್ಲ. ಅವರು ವಾಸ್ತವವನ್ನು ಬೆಳಕಿಗೆ ತಂದಿದ್ದಾರೆ ಎಂದು ತೇಜ್ ಬಹಾದ್ದೂರ್ ಪತ್ನಿ ಶರ್ಮಿಳಾ ಪ್ರತಿಕ್ರಿಯಿಸಿದರು.
2017: ಔರಂಗಾಬಾದ್ (ಬಿಹಾರ): ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಯೋಧನೊಬ್ಬ ಬಿಹಾರಿನ ಔರಂಗಾಬಾದ್ ಜಿಲ್ಲೆಯಲ್ಲಿ ಸಹೋದ್ಯೋಗಿಗಳ ಮೇಲೆ ನಡೆಸಿದ ಯದ್ವಾತದ್ವ ಗುಂಡು ಹಾರಾಟದಲ್ಲಿ 4 ಯೋಧರು ಸಾವನ್ನಪ್ಪಿದರು. ಘಟನಾ ಸ್ಥಳದಲ್ಲಿ ಇಬ್ಬರು ಸಾವನ್ನಪ್ಪಿದರೆ, ಗಾಯಗೊಂಡ ಇಬ್ಬರು ಬಳಿಕ ಅಸು ನೀಗಿದರು. ಯೋಧ ತನ್ನ ಸೇವಾ ಶಸ್ತ್ರವನ್ನು ಬಳಸಿ ಗುಂಡು ಹಾರಾಟ ನಡೆಸಿದ್ದು, ಇಬ್ಬರು ಗುಂಡೇಟಿಗೆ ಬಲಿಯಾದರೆ, ಇಬ್ಬರು ತೀವ್ರ ಗುಂಡೇಟಿನ ಗಾಯಗಳಿಗೆ ಒಳಗಾಗಿ ಬಳಿಕ ಅಸುನೀಗಿದರು ಎಂದು ವರದಿಗಳು ಹೇಳಿದವು. ರಜೆ ಸಿಕ್ಕಿಲ್ಲ ಎಂಬ ಆಕ್ರೋಶದಿಂದ ಯೋಧ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಯಿತು. ಸಿಟ್ಟಿಗೆದ್ದಿದ್ದ ಯೋಧ ಮಧ್ಯಾಹ್ನ 12 ಗಂಟೆ ಸುಮಾರಿಗೆ ತನ್ನ ಶಸ್ತ್ರವನ್ನು ಹಿಡಿದುಕೊಂಡು ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸತೊಡಗಿದ. ಇಬ್ಬರು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇಬ್ಬರು ಯೋಧರು ತೀವ್ರವಾಗಿ ಗಾಯಗೊಂಡರು. ಗಾಯಾಳು ಯೋಧರನ್ನು ನವೀನಗರ ಆಸ್ಪತ್ರೆಗೆ ಒಯ್ದರೂ ಪ್ರಯೋಜನವಾಗಲಿಲ್ಲ ಎಂದು ವರದಿಗಳು ತಿಳಿಸಿದವು. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತ್ಯ ಪ್ರಕಾಶ್ ತಿಳಿಸಿದರು. ಸುದ್ದಿ ತಿಳಿಯುತ್ತಿದ್ದಂತೆಯೇ ಸಿಐಎಸ್ಎಫ್ ಡಿಜಿ ಮತ್ತು ಐಜಿ ಔರಂಗಾಬಾದಿಗೆ ಧಾವಿಸಿದರು.
 2017: ನವದೆಹಲಿ: ವೀಸಾ ಹಿಂತೆಗೆದುಕೊಳ್ಳುವುದಾಗಿ ವಿದೇಶಾಂಗ ವ್ಯವಹಾರ ಸಚಿವೆ  ಸುಷ್ಮಾ ಸ್ವರಾಜ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆಮೆಜಾನ್.ಕಾಮ್ ಭಾರತದ ರಾಷ್ಟ್ರಧ್ವಜವನ್ನು ಹೋಲುವ ಡೋರ್ ಮ್ಯಾಟ್ಗಳನ್ನು ಹಿಂತೆಗೆದುಕೊಂಡಿತು. ಆದರೆ ಆಮೆಜಾನ್.ಕಾಮ್ ನಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹೋಲುವ ಶೂ ಮತ್ತು ಡಾಗ್ ಕೋಟ್ಗಳು ಕಂಡು ಬಂದಿದ್ದು, ಆನ್ಲೈನ್ ದೈತ್ಯನಿಂದ ರಾಷ್ಟ್ರಧ್ವಜಕ್ಕೆ ಅಗೌರವ ಇನ್ನೂ ಮುಂದುವರೆಯಿತು. ಆಮೆಜಾನ್ ಅಮೆರಿಕದ ಮಾರಾಟ ವಿಭಾಗವು ಭಾರತದ ತ್ರಿವರ್ಣ ರಂಜಿತ ಧ್ವಜವನ್ನು ಹೋಲುವ ಶೂಗಳು, ಶೂ ಲೇಸ್ ಮೆಟಲ್ ಹೋಪ್ಗಳ ಮಾರಾಟವನ್ನು ಮುಂದುವರೆಸಿದವು. ಚುಕ್ಕಾ ಕ್ಯಾನ್ವಾಸ್ ಶೂ ಎಂಬುದಾಗಿ ಕರೆಯಲಾಗುವ ಶೂಗಳಿಗೆ 43.99 ಡಾಲರ್ (ಅಂದಾಜು 3000 ರೂಪಾಯಿ) ದರ ನಿಗದಿ ಪಡಿಸಲಾಗಿದೆ. ಶೋ ಲೇಸ್ ಪರಿಕರಗಳಿಗೆ 4.49 ಡಾಲರ್ (ಅಂದಾಜು 300 ರೂ.) ದರ ಇದ್ದು, ಇವು ಲಾಸ್ ಏಂಜೆಲ್ಸ್ ಮೂಲಕ ಎನ್ಐಎಲ್ ಕಂಪೆನಿಯಾದ ಅಮೆಜಾನ್ನಲ್ಲಿ ಲಭ್ಯವಿವೆ. ಸುದ್ದಿ ಬರೆಯುವ ಹೊತ್ತಿನಲ್ಲೂ ಉತ್ಪನ್ನಗಳು ಅಮೆಜಾನ್.ಕಾಮ್ ನಲ್ಲಿ ಇದ್ದವು. ಭಾರತದ ರಾಷ್ಟ್ರಧ್ವಜವನ್ನು ಹೋಲುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಉತ್ಪನ್ನಗಳನ್ನು ಸಂಸ್ಥೆಯು ತತ್ ಕ್ಷಣ ಹಿಂತೆಗೆದುಕೊಳ್ಳದೇ ಇದ್ದಲ್ಲಿ ಸಂಸ್ಥೆಯ ನೌಕರರಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಲಾಗುವುದು ಮತ್ತು ಈಗಾಗಲೇ ನೀಡಲಾದ ವೀಸಾಗಳನ್ನು ರದ್ದು ಪಡಿಸಲಾಗುವುದು ಎಂದು ಸಚಿವೆ ಸುಷ್ಮಾ ಸ್ವರಾಜ್ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು. ಅಮೆಜಾನ್ ಸಂಸ್ಥೆಯು ಭೇಷರತ್ ಕ್ಷಮೆ ಯಾಚಿಸಬೇಕು ಮತ್ತು ನಮ್ಮ ರಾಷ್ಟ್ರಧ್ವಜವನ್ನು ಅವಮಾನಿಸುವಂತಹ ಎಲ್ಲ ಉತ್ಪನ್ನಗಳನ್ನೂ ತತ್ ಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಸುಷ್ಮಾ ಅವರು ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದರು. ರಾಷ್ಟ್ರಧ್ವಜಕ್ಕೆ ಅಗೌರವ ತೋರುವುದು ಭಾರತದಲ್ಲಿ ದಂಡನಾರ್ಹ ಅಪರಾಧವಾಗಿದ್ದು ಮೂರು ವರ್ಷದವರೆಗೆ ಜೈಲು ಮತ್ತು ದಂಡ ಎರಡನ್ನೂ ವಿಧಿಸಬಹುದು. ಇಂತಹ ವರ್ತನೆ ರಾಷ್ಟ್ರೀಯ ಗೌರವ ಕಾಯ್ದೆಯೆ (1971) ಉಲ್ಲಂಘನೆಯಾಗುತ್ತದೆ.
2008: ಮಧ್ವಮಠಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಉಡುಪಿ ಕೃಷ್ಣಮಠದಲ್ಲಿ ಎರಡು ದಿನಗಳ ಕಾಲ ಜರುಗಿದ ಆಸ್ಥಾನ ವಿದ್ವಾಂಸರ ಸಭೆಯು `ಪರ್ಯಾಯ ಪೂಜೆ ಅಧಿಕಾರ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರಿಗೆ ಇಲ್ಲ' ಎಂಬ ಸರ್ವಾನುಮತದ ನಿರ್ಣಯ ಅಂಗೀಕರಿಸಿತು.

2009: ಭಾರತದ ಐಟಿ ಉದ್ಯಮಕ್ಕೆ ಮತ್ತೊಂದು ದೊಡ್ಡ ಆಘಾತ. ದೇಶದ ಮೂರನೇ ಅತಿದೊಡ್ಡ ಐಟಿ ಕಂಪೆನಿ, ಬೆಂಗಳೂರು ಮೂಲದ 'ವಿಪ್ರೊ ಟೆಕ್ನಾಲಜೀಸ್'' ವಿಶ್ವಬ್ಯಾಂಕಿನ ಕಪ್ಪುಪಟ್ಟಿಗೆ ಸೇರಿತು. ಜೊತೆಗೆ, ಮತ್ತೊಂದು ಐಟಿ ಕಂಪೆನಿ ಮೆಗಾಸಾಫ್ಟ್ ಸೇರಿದಂತೆ ದೇಶದ ಒಟ್ಟು ನಾಲ್ಕು ಕಂಪೆನಿಗಳು ವಿಶ್ವಬ್ಯಾಂಕಿನಿಂದ ನಿರ್ಬಂಧಕ್ಕೆ ಒಳಗಾದವು.ತನ್ನ ಸಿಬ್ಬಂದಿಗೆ ವಿಪ್ರೊ ರುಷುವತ್ತು (ಅಸಹಜ ಲಾಭದ) ಆಮಿಷವೊಡ್ಡಿದೆ ಎಂದು ಕಿಡಿಕಾರಿದ ವಿಶ್ವಬ್ಯಾಂಕ್, ತನ್ನೊಂದಿಗಿನ ವಹಿವಾಟಿಗೆ ನಾಲ್ಕು ವರ್ಷಗಳ ಕಾಲದ ನಿರ್ಬಂಧ ವಿಧಿಸಿತು. 2007ರ ಜೂನ್‌ನಿಂದ ಪೂರ್ವಾನ್ವಯವಾಗುವಂತೆ ಈ ನಿರ್ಬಂಧ ಜಾರಿಗೊಳ್ಳಲಿದೆ ಎಂದು ವಿಶ್ವಬ್ಯಾಂಕ್ ಪ್ರಕಟಿಸಿತು.

2009: ಎಂಟು ದಿನಗಳ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಅಂತ್ಯಗೊಂಡಿತು. ಸರ್ಕಾರ ಮತ್ತು ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ (ಎಐಎಂಟಿಸಿ) ಪ್ರತಿನಿಧಿಗಳ ನಡುವೆ ನಡೆದ ಮೊದಲ ಸುತ್ತಿನ ಮಾತುಕತೆ ಮುರಿದುಬಿದ್ದರೂ, ಎರಡನೇ ಸುತ್ತಿನ ಚರ್ಚೆ ಫಲಪ್ರದವಾಯಿತು. ತಮ್ಮ ಬೇಡಿಕೆಗಳ ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಸರ್ಕಾರದಿಂದ ಭರವಸೆ ದೊರೆತ ಬಳಿಕ ಪ್ರತಿನಿಧಿಗಳು ಶರತ್ತುರಹಿತ ಮುಷ್ಕರ ವಾಪಸಿಗೆ ನಿರ್ಧರಿಸಿದರು.

2009: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್‌ಟಿಪಿಸಿ) ನಾಲ್ಕು ಸಾವಿರ ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಸ್ಥಾಪನೆ ಸೇರಿದಂತೆ ಜಂಟಿ ಸಹಭಾಗಿತ್ವದಲ್ಲಿ 6900 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಐತಿಹಾಸಿಕ ಒಪ್ಪಂದಕ್ಕೆ ಬೆಂಗಳೂರಿನಲ್ಲಿ ಸಹಿ ಹಾಕಲಾಯಿತು. ವಿಜಾಪುರ ಜಿಲ್ಲೆ ಕೂಡಗಿಯಲ್ಲಿ ನಾಲ್ಕು ಸಾವಿರ ಮೆಗಾವಾಟ್, ರಾಯಚೂರು ಜಿಲ್ಲೆಯ ಯರಮರಸ್, ಯದ್ಲಾಪುರದಲ್ಲಿ 2400 ಮೆಗಾವಾಟ್ ಸಾಮರ್ಥ್ಯದ ಶಾಖೋತ್ಪನ್ನ ವಿದ್ಯುತ್ ಘಟಕ ಹಾಗೂ ಉತ್ತರ ಕರ್ನಾಟಕದ ಆರು ಕಡೆ ಒಟ್ಟು 500 ಮೆಗಾವಾಟ್ ಸಾಮರ್ಥ್ಯದ ಪವನ ವಿದ್ಯುತ್ ಘಟಕಗಳ ಸ್ಥಾಪನೆ ಸಂಬಂಧ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಯಿತು. ಇದೇ ಮೊದಲ ಬಾರಿಗೆ ಎನ್‌ಟಿಪಿಸಿ ಕರ್ನಾಟಕದ ಕೂಡಗಿಯಲ್ಲಿ ತನ್ನ ಘಟಕವನ್ನು ಆರಂಭಿಸುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಎನ್‌ಟಿಪಿಸಿಯ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಶರ್ಮಾ ಮತ್ತು ರಾಜ್ಯ ಸರ್ಕಾರದ ಪವರ್ ಕಂಪೆನಿ ಆಫ್ ಕರ್ನಾಟಕ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕ ವಿಜಯನರಸಿಂಹ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು.

2009: ಮುಂಬೈ ಮೇಲೆ ನಡೆದ ಡಿಸೆಂಬರ್ 26ರ ದಾಳಿಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಪರವಾಗಿ ಪ್ರಥಮ ಬಾರಿಗೆ ವಕೀಲರೊಬ್ಬರು ನ್ಯಾಯಾಲಯಕ್ಕೆ ಹಾಜರಾದರು. ಆರೋಪಿ ಫಾಹೀಮ್ ಅನ್ಸಾರಿ ಹಾಗೂ ಸಬಾಹುದ್ದೀನ್ ಅಹಮದ್ ಅವರನ್ನು ಮುಂಬೈ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ಆರೋಪಿಗಳ ಪರವಾಗಿ ಕೇಸು ನಡೆಸಲು ವಕೀಲ ಎಜಾಜ್ ನಖ್ವಿ ನ್ಯಾಯಾಲಯಕ್ಕೆ ತಮ್ಮ ವಕಾಲತ್ತು ಸಲ್ಲಿಸಿದರು.

2009: ತಮಾರ್ ವಿಧಾನಸಭಾ ಉಪಚುನಾವಣೆಯಲ್ಲಿನ ಸೋಲಿನ ಹಿನ್ನೆಲೆಯಲ್ಲಿ ಮಿತ್ರ ಪಕ್ಷಗಳ ಒತ್ತಡಕ್ಕೆ ಕಡೆಗೂ ಮಣಿದ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಉಪ ಮುಖ್ಯಮಂತ್ರಿ ಸ್ಟೆಫನ್ ಮರಾಂಡಿ ಅವರು ರಾಜೀನಾಮೆ ಸಲ್ಲಿಸಿದ ಸ್ವಲ್ಪ ಹೊತ್ತಿನಲ್ಲೇ ಶಿಬು ಸೊರೇನ್ ಕೂಡಾ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.

2008: ನ್ಯೂಯಾರ್ಕಿನ ಅವಳಿ ಕಟ್ಟಡ ಧ್ವಂಸಗೊಳಿಸಿದ ರೀತಿಯಲ್ಲಿಯೇ ಪ್ಯಾರಿಸ್ಸಿನ ವಿಶ್ವವಿಖ್ಯಾತ ಐಫೆಲ್ ಗೋಪುರವನ್ನು ಉರುಳಿಸಲು ಮುಸ್ಲಿಮ್ ಉಗ್ರರು ನಡೆಸುತ್ತಿದ್ದ ಸಂಚೊಂದನ್ನು ಪತ್ತೆಹಚ್ಚಲಾಯಿತು. ರೇಡಿಯೊ ಸಂಭಾಷಣೆಯಲ್ಲಿ ಉಗ್ರರು ಗೋಪುರ ಉರುಳಿಸಲು ನಡೆಸುತ್ತಿದ್ದ ಮಾತುಕತೆಯನ್ನು ಪತ್ತೆ ಹಚ್ಚಿದ ಲಿಸ್ಬನ್ನಿನ ವಾಯುಯಾನ ನಿಯಂತ್ರಣ ವಿಭಾಗದ ಪೊಲೀಸರು ಕೂಡಲೇ ಈ ವಿಷಯವನ್ನು ಫ್ರೆಂಚ್ ಬೇಹುಗಾರಿಕೆ ಗಮನಕ್ಕೆ ತಂದರು ಎಂದು `ಡೈಲಿ ಮೇಲ್' ವರದಿ ಮಾಡಿತು.

2008: ಕೋಲ್ಕತದಲ್ಲಿ ಈದಿನ ಮುಂಜಾನೆ 2 ಗಂಟೆ ಸುಮಾರಿಗೆ ಅಂಗಡಿಯೊಂದರಲ್ಲಿ ಭಾರಿ ಬೆಂಕಿ ದುರಂತ ಸಂಭವಿಸಿತು. ಬೆಂಕಿಯು ಬಹುಬೇಗ ಇತರ ಅಂಗಡಿಗಳಿಗೆ ವ್ಯಾಪಿಸಿತು. ದೊಡ್ಡ ದುರಂತಗಳಲ್ಲಿ ಮಾತ್ರ ಬಳಸುವ ಜಗತ್ತಿನ 2ನೇ ಅತಿದೊಡ್ಡ ಅಂದರೆ 52 ಮೀಟರ್ ಎತ್ತರದ ಅಗ್ನಿಶಾಮಕ ಏಣಿಯನ್ನು ಬೆಂಕಿ ನಿಯಂತ್ರಿಸಲು ಬಳಸಬೇಕಾಯಿತು.

2008: ಹತ್ತು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ನಡೆಸಿ ಬಳಿಕ ಕೊಲೆ ಮಾಡಿದ ಹರೀಶ್ ರಜಪೂತ್ ಎಂಬಾತನಿಗೆ ಮುಂಬೈ ಹೈಕೋರ್ಟ್ ಮರಣ ದಂಡನೆ ವಿಧಿಸಿತು. ತನ್ನ ಪಕ್ಕದ ಮನೆಯ ಹುಡುಗಿಯನ್ನು ತನ್ನ ಮನೆಗೆ ಕರೆತಂದಿದ್ದ ಆರೋಪಿ ಈ ಕೃತ್ಯ ಎಸಗಿದ್ದ. ವಿಚಾರಣಾ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ ಇದೊಂದು `ಗಂಭೀರ ಅಪರಾಧ' ಎಂದು ಪರಿಗಣಿಸಿದ ಹೈಕೋರ್ಟ್ ಮರಣ ದಂಡನೆ ವಿಧಿಸಿತು.

2008: ಪಾಕಿಸ್ಥಾನಿ ಪಾಪ್ ಗಾಯಕ ಆಲಿ ಜಾಫರ್ ಹಾಗೂ ಅವರ ಪ್ರೇಯಸಿಯನ್ನು ದುಷ್ಕರ್ಮಿಗಳು ಅಪಹರಿಸಿ ಭಾರಿಮೊತ್ತದ ಒತ್ತೆಹಣ ಪಡೆದ ಬಳಿಕ ಬಿಡುಗಡೆ ಮಾಡಿದರು. ದೇಶದ ಪಾಪ್ ಸಂಗೀತ ವಲಯದ ಸಾಮ್ರಾಟ ಎಂದೇ ಗುರುತಿಸಲ್ಪಡುವ ಆಲಿ ಜಾಫರ್ ಅವರನ್ನು ಲಾಹೋರಿನ ವ್ಯಾಪಾರ ಸಂಕೀರ್ಣವೊಂದರ ಬಳಿ ಅಪಹರಿಸಲಾಗಿತ್ತು. ಚಾನೊ, ರಂಗೀನ್, ಚಲ್ ದಿಲ್ ಮೇರೆ, ದೇಕಾ, ಮಸ್ತಿ, ಸಜಾನಿಯಾ ಮುಂತಾದವುಗಳು ಆಲಿ ಅವರ ಜನಪ್ರಿಯ ಆಲ್ಬಂಗಳು.

2008: ಖಜಕಿಸ್ಥಾನದ ಅಲ್ಮಟಿ ಸಮೀಪದ ಕಲ್ಲಿದ್ದಲು ಗಣಿಯಲ್ಲಿ ಜನವರಿ 11ರಂದು ಸಂಭವಿಸಿದ ಭಾರೀ ಸ್ಫೋಟದಲ್ಲಿ ಸತ್ತವರ ಸಂಖ್ಯೆ 30ಕ್ಕೆ ಏರಿತು.

2007: ಸಂಸತ್ತಿನ ಮೇಲೆ ದಾಳಿ ಮಾಡಿದ ಸಂಚಿಗಾಗಿ ಮರಣದಂಡನೆಗೆ ಗುರಿಯಾದ ಮೊಹಮ್ಮದ್ ಅಫ್ಜಲ್ ಗುರುವಿನ ಕ್ಷಮಾದಾನ ಕೋರಿಕೆ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಮಾಡಿ, ಹೈಕೋರ್ಟ್ ನೀಡಿರುವ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿಯಿತು. ನ್ಯಾಯಮೂರ್ತಿ ವೈ.ಕೆ ಸಭರ್ ವಾಲ್, ಕೆ.ಜಿ ಬಾಲಕೃಷ್ಣನ್, ಬಿ.ಎನ್. ಅಗರ್ ವಾಲ್ ಮತ್ತು ಪಿಪಿ ನಾವಲೆಕರ್ ಅವರನ್ನು ಒಳಗೊಂಡ ನಾಲ್ಕು ಸದಸ್ಯ ನ್ಯಾಯಪೀಠವು ಈ ತೀರ್ಪು ನೀಡಿತು. ಇದರಿಂದಾಗಿ ಅಫ್ಜಲನಿಗೆ ನೀಡಿರುವ ಮರಣದಂಡನೆ ಶಿಕ್ಷೆ ಕಾಯಂ ಆದಂತಾಯಿತು.

2007: ಎನ್ ಡಿ ಎ ಅಧಿಕಾರಾವಧಿಯಲ್ಲಿ ಅಧಿಕಾರಸ್ಥರ ಸಂಬಂಧಿಗಳಿಗೆ ಹಾಗೂ ಸ್ನೇಹಿತರಿಗೆ ಮನಬಂದಂತೆ ಮಂಜೂರು ಮಾಡಲಾಗಿದ್ದ 297 ಪೆಟ್ರೋಲ್ ಪಂಪ್, ಎಲ್ ಪಿ ಜಿ ಅನಿಲ ಹಾಗೂ ಸೀಮೆ ಎಣ್ಣೆ ಮಳಿಗೆಗಳನ್ನು ರದ್ದುಪಡಿಸಲು ಸುಪ್ರೀಂಕೋರ್ಟ್ ಆದೇಶ ನೀಡಿತು.

2007: ಕುತ್ತಿಗೆಯ ಕ್ಯಾನ್ಸರನ್ನು ಸುಲಭ ಹಾಗೂ ಸರಳವಾಗಿ ಪತ್ತೆ ಹಚ್ಚಬಲ್ಲ `ಮ್ಯಾಗ್ನಿ ವಿಷುಯಲೈಸರ್' ಎಂಬ ಅಗ್ಗದ ಸಾಧನವೊಂದನ್ನು ಭಾರತೀಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವುದಾಗಿ ನೋಯ್ಡಾದ ಇನ್ ಸ್ಟಿಟ್ಯೂಟ್ ಆಫ್ ಸೈಟಾಲಜಿ ಅಂಡ್ ಪ್ರಿವೆಂಟಿವ್ ಅಂಕಾಲಜಿ ಸಂಸ್ಥೆಯ ನಿರ್ದೇಶಕರು ಪ್ರಕಟಿಸಿದರು. ಈ ಅಗ್ಗದ ಸಾಧನ ವಿದ್ಯುತ್ ಇಲ್ಲದೆಯೂ ಕೆಲಸ ಮಾಡಬಲ್ಲುದಾಗಿದ್ದು ಕ್ಯಾನ್ಸರ್ ಹುಣ್ಣನ್ನು ಪತ್ತೆ ಹಚ್ಚುತ್ತದೆ. ಕತ್ತು, ಗರ್ಭಾಶಯದ ಕ್ಯಾನ್ಸರ್ ಪತ್ತೆಯ ಸುಲಭ ವಿಧಾನವನ್ನೂ ಕಂಡು ಹಿಡಿಯಲಾಗಿದೆ ಎಂದು ಅವರು ಹೇಳಿದರು.

2006: ಜೆಡ್ಡಾದಲ್ಲಿ ಹಜ್ ಯಾತ್ರೆ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 31 ಭಾರತೀಯರು ಸೇರಿ 364ಕ್ಕೂ ಹೆಚ್ಚು ಯಾತ್ರಿಕರು ಅಸು ನೀಗಿದರು. ಕಳೆದ ಐದು ವರ್ಷಗಳಲ್ಲಿ ಮೆಕ್ಕಾದಲ್ಲಿ ಸಂಭವಿಸಿದ ಭೀಕರ ದುರಂತ ಇದು. 2004ರಲ್ಲಿ ಕಾಲ್ತುಳಿತದಲ್ಲಿ 250ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು. ಸೈತಾನನಿಗೆ ಕಲ್ಲು ಹೊಡೆಯುವ ಸಂಪ್ರದಾಯ ಆಚರಣೆ ಕಾಲದಲ್ಲಿ ಬಸ್ಸಿನಿಂದ ಬಿದ್ದಿದ್ದ ಲಗೇಜ್ ಮೇಲೆ ಕೆಲವರು ಕಾಲಿಟ್ಟು ಮುಗ್ಗರಿಸಿದಾಗ ಈ ನೂಕುನುಗ್ಗಲು ಸಂಭವಿಸಿತು.

2006: ಬೆಂಗಳೂರು ಮೆಟ್ರೋ ಯೋಜನೆಗಾಗಿ ಖಾಸಗಿ ಭೂಸ್ವಾಧೀನ ಆರಂಭಕ್ಕೆ 6 ತಿಂಗಳುಗಳ ವಿಳಂಬದ ಬಳಿಕ ಸರ್ಕಾರ ಅಂತಿಮವಾಗಿ ಒಪ್ಪಿಗೆ ನೀಡಿತು. ಕಳೆದ ವರ್ಷ ಜುಲೈ ತಿಂಗಳಲ್ಲಿ ಈ ಸಂಬಂಧ ಸಲ್ಲಿಸಲಾಗಿದ್ದ ಕಡತಕ್ಕೆ ಹಣಕಾಸು ಸಚಿವ ಪಿ.ಜಿ.ಆರ್. ಸಿಂಧ್ಯ ಸಹಿ ಹಾಕಿದರು.

2006: ನಿರ್ಗತಿಕರು ಹಾಗೂ ಅಸಹಾಯಕರಿಗೂ ಆಹಾರ ಭದ್ರತೆಯನ್ನು ಮಾನವ ಹಕ್ಕು ಎಂಬುದಾಗಿ ಕಾನೂನುಬದ್ಧಗೊಳಿಸುವ ಕರ್ನಾಟಕ ಆಹಾರ ಭದ್ರತೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಕಾನೂನು ಸಚಿವ ಎಚ್. ಕೆ. ಪಾಟೀಲ ಪ್ರಕಟಿಸಿದರು.

1992: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಕುಮಾರ ಗಂಧರ್ವ (1924-1992) ನಿಧನರಾದರು.

1982: ಮಾರ್ಕ್ಸವಾದಿ ಕಮ್ಯೂನಿಸ್ಟ್ ಪಕ್ಷದ ನಾಯಕ ಜ್ಯೋತಿರ್ಮಯಿ ಬಸು ಅವರು ತೀವ್ರ ಹೃದಯಾಘಾತದಿಂದ ಜೈಪುರದಲ್ಲಿ ನಿಧನರಾದರು. ಸಂಸತ್ ಸದಸ್ಯರಾಗಿದ್ದ ಅವರಿಗೆ 48 ವರ್ಷ ವಯಸ್ಸಾಗಿತ್ತು.

1976: ಇಂಗ್ಲಿಷ್ ಪತ್ತೇದಾರಿ ಕಾದಂಬರಿಗಾರ್ತಿ ಅಗಾಥಾ ಕ್ರಿಸ್ಟೀ ತಮ್ಮ 85ನೇ ವಯಸ್ಸಿನಲ್ಲಿ ಆಕ್ಸ್ ಫೋರ್ಡ್ ಷೈರಿನಲ್ಲಿ ನಿಧನರಾದರು.

1971: ಚಿತ್ರ ಕಲಾವಿದ ಮಾನ್ ಸಿಂಗ್ ಆರ್. ರಜಪೂತ್ ಅವರು ರೂಪಸಿಂಗ್- ಕಸ್ತೂರಬಾಯಿ ದಂಪತಿಯ ಮಗನಾಗಿ ಗುಲ್ಬರ್ಗ ಜಿಲ್ಲೆಯ ಅಳಂದ ತಾಲ್ಲೂಕಿನ ಕೋತನ ಹಿಪ್ಪರಗಾದಲ್ಲಿ ಜನಿಸಿದರು.

1949: ಕಲಾವಿದ ಜಗದೀಶ್ ಜಿ.ಕೆ. ಜನನ.

1945: ಸಾಹಿತಿ ಅಂಶುಮಾಲಿ ಜನನ.

1945: ಸಾಹಿತಿ ವೈದೇಹಿ ಜನನ.

1940: ಸಾಹಿತಿ ಕೃಷ್ಣ ಕೊಲ್ಹಾರ ಕುಲಕರ್ಣಿ ಜನನ.

1940: ಸಾಹಿತಿ ಮರುಳಸಿದ್ಧಪ್ಪ ಜನನ.

1934: ಚಿಟ್ಟಗಾಂಗ್ ಶಸ್ತ್ರಾಗಾರ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೂರ್ಯಸೇನ್ (1894-1934) ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.

1933: ಖ್ಯಾತ ಸಾಹಿತಿ ಚನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕಣವಿ ಈದಿನ ವಿಜಾಪುರದಲ್ಲಿ ಸಿದ್ದಪ್ಪ-ಭಾಗೀರಥಿ ದೇವಿ ದಂಪತಿಯ ಪುತ್ರಿಯಾಗಿ ಜನಿಸಿದರು. ಚಿಕ್ಕವಳಾಗಿದ್ದಾಗಲೇ ಸಾಹಿತ್ಯದಲ್ಲಿ ಒಲವು ಇದ್ದ ಶಾಂತಾದೇವಿ ಸಾಹಿತ್ಯ ಕೃಷಿ ಆರಂಭಿಸಿದ್ದು ಚನ್ನವೀರ ಕಣವಿ ಅವರ ಜೊತೆ ಮದುವೆ ಆದ ಬಳಿಕ. ಸಂಜೆ ಮಲ್ಲಿಗೆ, ಬಯಲು ಆಲಯ, ಮರುವಿಚಾರ, ಜಾತ್ರೆ ಮುಗಿದಿತ್ತು, ಕಳಚಿಬಿದ್ದ ಪೈಜಣ, ನೀಲಿಮಾ ತೀರ ಕಥಾ ಸಂಕಲನಗಳು, ಅಜಗಜಾಂತರ ಹರಟೆಗಳ ಸಂಗ್ರಹ, ನಿಜಗುಣ ಶಿವಯೋಗಿ ಮಕ್ಕಳ ಪುಸ್ತಕ, ಬಯಲು ಆಲಯ ಕಥಾ ಸಂಕಲನಗಳು ಅವರ ಪ್ರಮುಖ ಕೃತಿಗಳು. ಬಯಲು ಆಲಯ ಕಥಾ ಸಂಕಲನಕ್ಕೆ 1974ರ ಸಾಹಿತ್ಯ ಅಕಾಡೆಮಿ ಬಹುಮಾನ, 1987ರಲ್ಲಿ ಅಕಾಡೆಮಿ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಬಂದಿವೆ. ಹಲವಾರು ಕಥೆಗಳು ಹಿಂದಿ, ಇಂಗ್ಲಿಷ್, ಮಲಯಾಳಂಗೂ ಭಾಷಾಂತರಗೊಂಡಿವೆ.

1929: ಶ್ರೀನಿವಾಸ ಹಾವನೂರ ಜನನ.

1916: ದಕ್ಷಿಣ ಆಫ್ರಿಕಾದ ಮುತ್ಸದ್ದಿ ಪೀಟರ್ ವಿಲ್ಹೆಮ್ ಬೋಥಾ ಹುಟ್ಟಿದ ದಿನ. 1978-1984ರ ಅವದಿಯಲ್ಲಿ ದಕ್ಷಿಣ ಆಫ್ರಿಕಾದ ಪ್ರಧಾನಿಯಾದ ಇವರು 1984-1989ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಮೊತ್ತ ಮೊದಲ ಅಧ್ಯಕ್ಷರಾದರು.

1869: ಈದಿನ ಜನಿಸಿದ ಭಗವಾನ್ ದಾಸ್ (1869-1958) ಅವರು ಖ್ಯಾತ ವಿದ್ವಾಂಸ, ತತ್ವಜ್ಞಾನಿ, ಸ್ವಾತಂತ್ರ್ಯ ಯೋಧರಾಗಿದ್ದು `ಭಾರತರತ್ನ' ಪ್ರಶಸ್ತಿ ಪುರಸ್ಕೃತರಾದರು.

1863: ಇಂದು `ರಾಷ್ಟ್ರೀಯ ಯುವ ದಿನ'.  1863ರಲ್ಲಿ ಈದಿನ ಸ್ವಾಮಿ ವಿವೇಕಾನಂದರು (1863-1902) ಹುಟ್ಟಿದರುಜನನ ಕಾಲದಲ್ಲಿ ನರೇಂದ್ರನಾಥ ದತ್ತ ಎಂಬುದಾಗಿ ಹೆಸರು ಪಡೆದಿದ್ದ ವಿವೇಕಾನಂದರು ಹಿಂದೂ ಆಧ್ಯಾತ್ಮಿಕ ಧುರೀಣರೂಸುಧಾರಣೆಗಾರರೂ ರಾಮಕೃಷ್ಣ ಮಿಷನ್ ಸ್ಥಾಪಕರಾಗಿಯೂ ಖ್ಯಾತಿ ಪಡೆದಿದ್ದಾರೆವಿವೇಕಾನಂದರ ಗೌರವಾರ್ಥ ಅವರ ಜನ್ಮದಿನವನ್ನು ಭಾರತದಲ್ಲಿ `ರಾಷ್ಟ್ರೀಯ ಯುವ ದಿನಎಂಬುದಾಗಿ ಆಚರಿಸಲಾಗುತ್ತದೆ.

1848: ಮಾರ್ಕ್ವೆಸ್ ಡಾಲ್ ಹೌಸಿ ಅವರು ಭಾರತದ ಗವರ್ನರ್ ಜನರಲ್ ಆದರು. ಯುದ್ಧ ಹಾಗೂ ಸಂಧಾನಗಳ ಮೂಲಕ ರಾಜ್ಯಗಳನ್ನು ಸೇರಿಸಿ ಭಾರತದ ನಕ್ಷೆಯನ್ನು ರೂಪಿಸಿದ ವ್ಯಕ್ತಿ ಎಂದು ಈತ ಪರಿಗಣಿತನಾಗಿದ್ದಾನೆ.

No comments:

Post a Comment