ನಾನು ಮೆಚ್ಚಿದ ವಾಟ್ಸಪ್

Sunday, January 20, 2019

ಇಂದಿನ ಇತಿಹಾಸ History Today ಜನವರಿ 20

ಇಂದಿನ ಇತಿಹಾಸ History Today ಜನವರಿ 20
2019: ನವದೆಹಲಿ: ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಘಟಿಸಿದ ಸಂಯುಕ್ತ ಭಾರತ ರಾಲಿಯನ್ನು ಇಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿಇದು ಸಿರಿವಂತ ಭ್ರಷ್ಟರ ಮಹಾಘಟಬಂಧನ್ ಎಂದು ಎದಿರೇಟು ನೀಡಿದರು. ಐದು ನಗರಗಳ ಬೂತ್ ಕಾರ್ಯಕರ್ತರನ್ನು ಉದ್ದೇಶಿಸಿ ವಿಡಿಯೋ ಕಾನ್ಪರೆನ್ಸಿಂಗ್ನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ’ಕೋಲ್ಕತದಲ್ಲಿ ಕಂಡು ಬಂದ ಮೈತ್ರಿ ವಿಶಿಷ್ಠವಾದದ್ದು. ಅವರು ಪರಸ್ಪರ ಮೈತ್ರಿ ಮಾಡಿ ಕೊಂಡಿದ್ದಾರೆ. ನಾವು ರಾಷ್ಟ್ರದ ೧೨೫ ಕೋಟಿ ಪ್ರಜೆಗಳ ಜೊತೆಗೆ ಮೈತ್ರಿ ಮಾಡಿಕೊಂಡಿದ್ದೇವೆ. ಯಾವ ಮೈತ್ರಿ ಪ್ರಬಲ? ಕೋಲ್ಕತ ವೇದಿಕೆಯ ಮೇಲಿದ್ದ ಬಹುತೇಕ ನಾಯಕರು ಪ್ರಭಾವಶಾಲಿ ವ್ಯಕ್ತಿಗಳ ಮಕ್ಕಳು ಅಥವಾ ತಮ್ಮ ಮಕ್ಕಳನ್ನು ಬೆಳೆಸಲು ಯತ್ನಿಸುತ್ತಿರುವ ಜನ. ಅವರ ಬಳಿಧನ ಶಕ್ತಿ ಇದೆ, ನಮ್ಮ ಬಳಿಜನಶಕ್ತಿ ಇದೆ ಎಂದು ಹೇಳಿದರು. ‘ಯೇ ಘಟಬಂಧನ್ ಏಕ್ ಅನೋಖಾ ಬಂಧನ್ ಹೈ. ಯೆ ಬಂಧನ್ ತೊ ನಾಮ್ದಾರೋ ಕಾ ಬಂಧನ್ ಹೈ. ಯೆ ಬಂಧನ್ ತೊ ಭಾಯ್ -ಭಟಿವಾಜ್ ಕಾ, ಭ್ರಷ್ಟಾಚಾರ್ ಕಾ, ಘೊಟಾಲೋಂಕಾ, ನಕಾರತ್ಮಕತಾ ಕಾ, ಅಸ್ಥಿರತಾಕಾ, ಅಸಮಾನತಾ ಕಾ ಬಂಧನ್ ಹೈ. ಯೆ ತೊ ಏಕ್ ಅದ್ಭುತ್ ಸಂಗಮ್ ಹೈ. ( ಮೈತ್ರಿ ವಿಶಿಷ್ಠವಾದ್ದು. ಇದು ಸಿರಿವಂತರ ಮೈತ್ರಿ, ಚಿಕ್ಕಪ್ಪ ಮತ್ತು ಸಹೋದರ ಸಂಬಂಧಿಗಳ ಮೈತ್ರಿ. ಭ್ರಷ್ಟರ, ಹಗರಣಗಳ, ಋಣಾತ್ಮಕ, ಅಸ್ಥಿರತೆಯ, ಅಸಮಾನತೆಯ ಮೈತ್ರಿ) ಎಂದು ಪ್ರಧಾನಿ ನುಡಿದರು.  ‘ಪ್ರಜಾಪ್ರಭುತ್ವದ ರಕ್ಷಣೆಯ ಬಗ್ಗೆ ಎಲ್ಲ ಜನರು ಯಾವ ವೇದಿಕೆಯಲ್ಲಿ ಮಾತನಾಡಿದರೋ, ಅದೇ ವೇದಿಕೆಯಲ್ಲಿ ಒಬ್ಬ ನಾಯಕ ಬೊಫೋರ್ಸ್ ಹಗರಣವನ್ನು ನೆನಪಿಸಿದರು. ಬೇಗನೆ ಅಥವಾ ತಡವಾಗಿ ಸತ್ಯ ಹೊರಬರಲೇಬೇಕು, ಕೋಲ್ಕತದಲ್ಲಿ ಆದದ್ದು ಅದೇ ಎಂದು ಪ್ರಧಾನಿ ಮೋದಿ ನುಡಿದರು. ತಮ್ಮ ಪಕ್ಷ ಮತ್ತು ಸರ್ಕಾರದ ಕೆಲಸಗಳು ವಿರೋಧ ಪಕ್ಷಗಳಿಗೆ ನಿದ್ದೆ ಇಲ್ಲದ ರಾತ್ರಿಗಳನ್ನು ಸೃಷ್ಟಿಸಿದೆ ಎಂದು ನುಡಿದ ಮೋದಿ, ವಿರೋಧ ಪಕ್ಷಗಳು ಈಗಾಗಲೇ ೨೦೧೯ರ ಚುನಾವಣೆಯಲ್ಲಿ ತಮ್ಮ ಪರಾಭವಕ್ಕೆ ನೆಪಗಳನ್ನು ಹೇಳಲು ಶುರು ಮಾಡಿದ್ದಾರೆ ಎಂದು ಪ್ರಧಾನಿ ಹೇಳಿದರು. ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ಖಳನಾಯಕನನ್ನಾಗಿ (ವಿಲನ್) ಮಾಡಲಾಗುತ್ತಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಬಯಸುವುದು ಸಹಜ, ಕೆಲವು ಪಕ್ಷಗಳು ಸಾರ್ವಜನಿಕರು ತಾವು ಹೇಳುವುದನ್ನೆಲ್ಲ ಒಪ್ಪಿ ಬಿಡುತ್ತ್ತಾರೆ ಎಂಬುದಾಗಿ ಭಾವಿಸುವುದು ಚಿಂತೆ ಹುಟ್ಟಿಸುವ ವಿಷಯ. ಅವರು ಸಾರ್ವಜನಿಕರನ್ನು ಮೂರ್ಖರು ಎಂದು ಭಾವಿಸುತ್ತಾರೆ ಮತ್ತು ತಮ್ಮ ಬಣ್ಣಗಳನ್ನು ಬದಲಿಸುತ್ತಾ ಇರುತ್ತಾರೆ ಎಂದು ಮೋದಿ ನುಡಿದರು. ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲ ಅವರು ಕೋಲ್ಕತ ಪರೇಡ್ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಕಳ್ಳರಿಗೆ ಹೋಲಿಸಿದ್ದನ್ನು ಉಲ್ಲೇಖಿಸಿ ಮಾತುಗಳನ್ನು ಹೇಳಿದರುಇವಿಎಂ ಕಳ್ಳ ಯಂತ್ರ. ನಾವು ಭಾರತದ ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಯನ್ನು ಭೇಟಿ ಮಾಡಬೇಕು ಮತ್ತು ಇವಿಎಂಗಳ ಬಳಕೆಯನ್ನು ಸ್ಥಗಿತಗೊಳಿಸುವಂತೆ ಅವರನ್ನು ಒತ್ತಾಯಿಸಬೇಕು ಎಂದು ಅಬ್ದುಲ್ಲ ರಾಲಿಯಲ್ಲಿ ಹೇಳಿದ್ದರು. ಆರ್ಥಿಕ ದುರ್ಬಲರಿಗೆ ಶೇಕಡಾ ೧೦ ಮೀಸಲಾತಿ ನೀಡಿದ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದ ಪ್ರಧಾನಿ, ಮಸೂದೆಯನ್ನು ಹಂತದಲ್ಲಿ ಜಾರಿಗೊಳಿಸಿದ್ದಕ್ಕಾಗಿ ತಮ್ಮನ್ನು ಟೀಕಿಸಲಾಗಿದೆ ಎಂದು ಹೇಳಿದರು. ಶೇಕಡಾ ೧೦ರ ಮೀಸಲಾತಿ ನೀಡುವ ನಮ್ಮ ನಿರ್ಧಾರ ಪ್ರಬಲವಾಗಿ ಇಲ್ಲದೇ ಹೋಗಿದ್ದರೆ, ವಿರೋಧ ಪಕ್ಷಗಳು ನಿದ್ದೆ ಗೆಡುತ್ತಿರಲಿಲ್ಲ, ಈಗ ಹಲವಾರು ಊಹಾಪೋಹಗಳನ್ನು ಅವರು ಹರಿಯಬಿಡಲು ಇದೆ ಕಾರಣ ಎಂದು ಮೋದಿ ನುಡಿದರುತಮ್ಮ ಸರ್ಕಾರವೇನಾದರೂ ಮಸೂದೆಯನ್ನು ಹಿಂದೆಯೇ ತರುತ್ತಿದ್ದರೆ, ಅವರು (ವಿರೋಧ ಪಕ್ಷಗಳು) ಇತ್ತೀಚೆಗೆ ಮುಗಿದ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಮಸೂದೆಯನ್ನು ತರಲಾಗಿದೆ ಎಂದು ಟೀಕಿಸುತ್ತಿದ್ದರು ಎಂದು ಪ್ರಧಾನಿ ಹೇಳಿದರುಚುನಾವಣೆಗಳಿಗೆ ಮುಂಚಿತವಾಗಿ ಶೇಕಡಾ ೧೦ರ ಮೀಸಲಾತಿ ಮಸೂದೆಯನ್ನು ತರಲಾಗಿದೆ ಎಂದು ಟೀಕಿಸುವವರಿಗೆ ನಾನು  ರಾಷ್ಟ್ರದಲ್ಲಿ ಚುನಾವಣೆ ಇಲ್ಲದ ಸಮಯ ಯಾವುದು ಎಂಬ ಪ್ರಶ್ನೆಯನ್ನು ಕೇಳಬಯಸುತ್ತೇನೆ ಎಂದು ಮೋದಿ ಚುಚ್ಚಿದರು. ಮಹಾರಾಷ್ಟ್ರದ ಹಿಂದಿನ ಸರ್ಕಾರಗಳನ್ನು ಟೀಕಿಸಿದ ಮೋದಿ, ೬೦-೬೫ ವರ್ಷಗಳ ಆಳ್ವಿಕೆಯಲ್ಲಿ ಅವರು ಕೇವಲ ೩೨ ಲಕ್ಷ ಹೆಕ್ಟೇರ್ ಭೂಮಿಯನ್ನು ಮಾತ್ರ ಕೃಷಿಯ ವ್ಯಾಪ್ತಿಗೆ ತರಲು ಸಮರ್ಥರಾದರು. ಆದರೆ ನಾವು ಕಳೆದ ಮೂರೇ ವರ್ಷಗಳಲ್ಲಿ ೩೨ ಲಕ್ಷ ಹೆಕ್ಟೇರಿನಿಂದ ೪೦ ಲಕ್ಷ ಹೆಕ್ಟೇರ್ ಭೂಮಿಯನ್ನು ಕೃಷಿವ್ಯಾಪ್ತಿಗೆ ತಂದಿದ್ದೇವೆ ಎಂದು ಪ್ರಧಾನಿ ನುಡಿದರು. ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಹಿಂದೆ ಭಾರತವನ್ನು ದುರ್ಬಲ ಆರ್ಥಿಕತೆಯ ದೇಶ ಎಂಬುದಾಗಿ ಪರಿಗಣಿಸಲಾಗುತ್ತಿತ್ತು. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶ ಎಂಬ ಖ್ಯಾತಿ ಪಡೆದಿದೆ ಎಂದು ಮೋದಿ ವಿವರಿಸಿದರು.
ಹಿಂದೆ ವಿಶ್ವಾದ್ಯಂತ ಭಾರತದ ಹಗರಣಗಳ ಬಗ್ಗೆ ದಪ್ಪಕ್ಷರಗಳ ಶೀರ್ಷಿಕೆಗಳೊಂದಿಗೆ ಸುದ್ದಿಗಳು ಬರುತ್ತಿದ್ದವು. ಇಂದು ಅವರು ಆರ್ಥಿಕ ಅಭಿವೃದ್ಧಿ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಮೋದಿ ಹೇಳಿದರು.
  
2019: ನವದೆಹಲಿ: ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವುಕಳ್ಳ ಇವಿಎಂನಿಂದ ಗೆದ್ದಿತಾ? ಎಂದು ಹಿರಿಯ ಬಿಜೆಪಿ ನಾಯಕ ರಾಮ್ ಮಾಧವ್ ಅವರು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಕ್ ಅಬ್ದುಲ್ಲ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು. ಕೋಲ್ಕತದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಘಟಿಸಿದ್ದ ವಿಪಕ್ಷ ಮಹಾರಾಲಿಯಲ್ಲಿ ಪಾಲ್ಗೊಂಡಿದ್ದ ಫರೂಕ್ ಅಬ್ದುಲ್ಲ ಅವರುವಿದ್ಯುನ್ಮಾನ ಮತ ಯಂತ್ರಗಳನ್ನುಕಳ್ಳ ಇವಿಎಂ ಎಂಬುದಾಗಿ ಕರೆದು ಇವುಗಳ ಬಳಕೆ ಸ್ಥಗಿತಗೊಳಿಸುವಂತೆ ಚುನಾವಣಾ ಆಯೋಗ ಮತ್ತು ರಾಷ್ಟ್ರಪತಿಯವರನ್ನು ಭೇಟಿ  ಮಾಡಿ ಒತ್ತಾಯಿಸಬೇಕು ಎಂದು ಹೇಳಿದ್ದರು. ನಾನು ಫರೂಕ್ ಅಬ್ದುಲ್ಲ ಅವರಿಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಾನು ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದ ಕಾಂಗ್ರೆಸ್ ನಾಯಕತ್ವವನ್ನುಕಳ್ಳ ಇವಿಎಂ ಕಾರಣದಿಂದ ರಾಜ್ಯಗಳಲ್ಲಿ ಕಾಂಗ್ರೆಸ್ಸಿಗೆ ಗೆಲ್ಲಲು ಸಾಧ್ಯವಾಯಿತು ಎಂಬುದನ್ನು ಒಪ್ಪುವಿರಾ? ಎಂಬುದಾಗಿ ಕೇಳಬಯಸುತ್ತೇನೆ. ಮೊದಲು ಇದಕ್ಕೆ ಉತ್ತರಿಸಲಿ. ಬಳಿಕ ನೋಡೋಣ ಎಂದು ರಾಮ್ ಮಾಧವ್ ನುಡಿದರು. ಲೋಕಸಭಾ ಚುನಾವಣೆಗೆ ಮುನ್ನ ಬಹುತೇಕ ಎಲ್ಲ ವಿರೋಧ ಪಕ್ಷಗಳೂ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಕೈಯಾಡಿಸಲು ಮತ್ತು ಫಲಿತಾಂಶದಲ್ಲಿ ಹಸ್ತಕ್ಷೇಪ ನಡೆಸಲು ಸಾಧ್ಯವಿದೆ ಎಂದು ಆಪಾದಿಸಿ, ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಬೇಕು ಎಂದು  ಆಗ್ರಹಿಸಿದ್ದವು.

2019: ಬೆಂಗಳೂರು: ಆಪರೇಷನ್ ಕಮಲದ ಭೀತಿ ಯಿಂದ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದ ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ನಲ್ಲಿ ಹಿಂದಿನ ರಾತ್ರಿ ಏರ್ಪಡಿಸಿದ್ದ ಔತಣ ಕೂಟದ ನಂತರ ಶಾಸಕರಾದ ಆನಂದ್ ಸಿಂಗ್ ಮತ್ತು ಜೆ.ಎನ್. ಗಣೇಶ್, ಶಾಸಕ ಭೀಮನಾಯಕ್ ನಡುವೆ ಮಾತಿನ ಚಕಮಕಿ ನಡೆದು ಸಂದರ್ಭದಲ್ಲಿ ಶಾಸಕ ಆನಂದ್ ಸಿಂಗ್ ತಲೆಗೆ ಶಾಸಕ ಗಣೇಶ್ ಬಾಟಲಿ ಯಿಂದ ಹೊಡೆದುದರಿಂದ ಅವರ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವು ದೇ ದೂರು ದಾಖಲಾಗಿಲ್ಲವಾದರೂ, ಪ್ರಕರಣ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ರೆಸಾರ್ಟ್ನಲ್ಲಿ ಎಲ್ಲಾ ಶಾಸಕರು ಮಲಗಿದ ಮೇಲೆ ಇಬ್ಬರು ಶಾಸಕರ ನಡುವೆ ನಡೆದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಶಾಸಕ ಆನಂದ್ ಸಿಂಗ್ ತಲೆಗೆ ಕಂಪ್ಲಿ ಗಣೇಶ್ ಗಾಜಿನ ಬಾಟಲಿಯಿಂದ ಹೊಡೆದಿದ್ದಾರೆ ಎಂದು ತಿಳಿದು ಬಂದಿತು.  ಘಟನೆಯಿಂದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಇತರ ಶಾಸಕರು ಬೆಚ್ಚಿ ಬಿದ್ದರು. ತಕ್ಷಣವೇ ಹಣೆಗೆ ಗಾಯವಾಗಿದ್ದ ಆನಂದ್ ಸಿಂಗ್ ಅವರನ್ನು ಕಾರಿನಲ್ಲಿ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನಂದ್ ಸಿಂಗ್ ತಲೆಗೆ ೧೨ ಹೊಲಿಗೆ ಹಾಕಲಾಗಿದೆ ಎನ್ನಲಾಯಿತು. ಸದ್ಯದ ಮಟ್ಟಿಗೆ ವೈದ್ಯರು ಅವರ ಆರೋಗ್ಯದ ಮೇಲೆ ನಿಗವಹಿಸಿದ್ದು ಗಾಯದ ಬಗ್ಗೆ ತಲೆಗೆ ಸಿಟಿ ಸ್ಕ್ಯಾನ್ ತಪಾಸಣೆ ನಡೆದಿದ್ದು, ವರದಿಗಳು ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುತ್ತಿದೆ ಎನ್ನಲಾಯಿತು.

2019: ಶಬರಿಮಲೈ: ಋತುಮತಿ ವಯೋಮಾನದ ಮಹಿಳೆಯರ ಪ್ರವೇಶದ ವಿರುದ್ಧ ಭಾರೀ ಪ್ರತಿಭಟನೆಗಳ ಮಧ್ಯೆ ನಡೆದ ಎರಡು ತಿಂಗಳ ಕೋಲಾಹಲಕಾರೀ ಯಾತ್ರಾಋತುವಿನ ಬಳಿಕ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದೇಗುಲದ ಬಾಗಿಲುಗಳನ್ನು ವಿಧ್ಯುಕ್ತವಾಗಿ ಮುಚ್ಚಲಾಯಿತು. ದೇವಾಲಯವನು ಮುಚ್ಚುತ್ತಿದ್ದಂತೆಯೇ ವಿರೋಧೀ ಬಿಜೆಪಿಯ ತಿರುವನಂತಪುರಂನಲ್ಲಿ ಸಚಿವಾಲಯದ ಮುಂದೆ ನಡೆಸುತ್ತಿದ್ದ ತನ್ನ ೪೯ ದಿನಗಳ ಉಪವಾಸ ಮುಷ್ಕರವನ್ನೂ ಕೊನೆಗೊಳಿಸಿತು. ಶಬರಿಮಲೈಯಲ್ಲಿ ಹೇರಲಾಗಿರುವ ನಿಷೇಧಾಜ್ಞೆ ಮತ್ತು ನಿರ್ಬಂಧಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಬಿಜೆಪಿ ಸರಣಿ ಉಪವಾಸ ಮುಷ್ಕರವನ್ನು ಹಮ್ಮಿಕೊಂಡಿತ್ತು. ಆದರೆ ನಿಷೇಧಾಜ್ಞೆ ಹಾಗೂ ನಿರ್ಬಂಧಗಳನ್ನು ರದ್ದು ಪಡಿಸಲು ಎಲ್ ಡಿಎಫ್ ಸರ್ಕಾರ ನಿರಾಕರಿಸಿತ್ತು. ಸಂಘ ಪರಿವಾರದ ವಿರುದ್ಧ ಭಾನುವಾರ ಹರಿಹಾಯ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರುಸಂಘಟನೆಯ ಶಬರಿಮಲೈ ಚಳವಳಿ ಸಂಪೂರ್ಣ ವಿಫಲ ಎಂದು ಹೇಳಿದರು. ಆದರೆ ಬಿಜೆಪಿ ರಾಜ್ಯ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ಭಕ್ತರ ಪರಂಪರಾಗತ ನಂಬಿಕೆಯನ್ನು ರಕ್ಷಿಸುವ ಉದ್ದೇಶಕ್ಕಾಗಿ ನಡೆದ ಚಳವಳಿ ಜನ ಸಮೂಹದ ಬೆಂಬಲವನ್ನು ಗಳಿಸಿದೆ ಎಂದು ಪ್ರತಿಪಾದಿಸಿದರು.  ಯುವ ಮಹಿಳೆಯರ ದೇವಾಲಯ ಪ್ರವೇಶ ಯತ್ನದ ವಿರುದ್ಧ ನಡೆದ ಚಳವಳಿಗಳ ಮುಂಚೂಣಿಯಲ್ಲಿದ್ದ ಶಬರಿಮಲೈ ಕರ್ಮ ಸಮಿತಿಯು ರಾಜಧಾನಿಯಲ್ಲಿ ಭಕ್ತರು, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನಾಯಕರ ಬೃಹತ್ ಸಮಾವೇಶವನ್ನು ಸಂಘಟಿಸಿತ್ತು. ಶತಮಾನಗಳಿಂದ ದೇವಾಲಯದ ಜೊತೆಗೆ ಸಂಪರ್ಕ ಹೊಂದಿರುವ ಹಿಂದಿನ ಪಂದಳ ರಾಜಕುಟುಂಬದ ಪ್ರತಿನಿಧಿ ಪಿ. ರಾಗವ ವರ್ಮ ರಾಜ ಅವರು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದ ಬಳಿಕ ಸಂಜೆ .೧೫ ಗಂಟೆಗೆ ದೇವಾಲಯದ ಗರ್ಭ ಗುಡಿಯನ್ನು ಮುಚ್ಚಲಾಯಿತುಪರಂಪರಾಗತಭಸ್ಮಾಭಿಷೇಕ ಬಳಿಕ ದೇವಾಲಯದ  ಹೆಬ್ಬಾಗಿಲುಗಳನ್ನುಹರಿವರಾಸನಮ್ ಹಾಡಿನೊಂದಿಗೆ ಮುಚ್ಚಲಾಯಿತು೬೭ ದಿನಗಳ ಕೋಲಾಹಲಕಾರೀ ವಾರ್ಷಿಕ ಯಾತ್ರಾಋತುವಿನ ಸಮಾಪ್ತಿಯ ಬಳಿಕ, ಅಯ್ಯಪ್ಪ ಸ್ವಾಮಿ ದೇವಾಲಯವನ್ನು ಮತ್ತೆ ಮಲಯಾಳಂನಲ್ಲಿಕುಂಭಮ್ ಎಂಬುದಾಗಿ ಕರೆಯಲಾಗುವ ಮಾಸಿಕ ಪೂಜೆಗಳಿಗಾಗಿ ಫೆಬ್ರುವರಿ ೧೩ರಂದು ತೆರೆಯಲಾಗುವುದು ಎಂದು ಮೂಲಗಳು ತಿಳಿಸಿದವು. ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ಸೆಪ್ಟೆಂಬರ್ ೨೮ರಂದು ನೀಡಿದ ತೀರ್ಪನ್ನು ಜಾರಿಗೊಳಿಸಲು ಸಿಪಿಐ(ಎಂ) ನೇತೃತ್ವದ ಎಡರಂಗ ಸರ್ಕಾರ ತೀರ್ಮಾನಿಸಿದ್ದನ್ನು ವಿರೋಧಿಸಿ ಭಕ್ತರು ಮತ್ತು ಬಲಪಂಥೀಯ ಸಂಘಟನೆಗಳು ನಡೆಸಿದ ವ್ಯಾಪಕ ಪ್ರತಿಭಟನೆಯ ಪರಿಣಾಮವಾಗಿ ಬಾರಿಯ ವಾರ್ಷಿಕ ಯಾತ್ರಾಋತು ಸಂಪೂರ್ಣವಾಗಿ ಕೋಲಾಹಲಕಾರಿಯಾಯಿತುರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ದಕ್ಷಿಣ ಕೇರಳದ ಕೊಲ್ಲಂನಲ್ಲಿ ನಡೆದ ಬಿಜೆಪಿ ಸಮಾವೇಶ ಒಂದರಲ್ಲಿನಾಚಿಕೆಗೇಡಿನ ಕೃತ್ಯ ಎಂಬುದಾಗಿ ಬಣ್ಣಿಸಿದ್ದರು. ಶತಮಾನಗಳಿಂದ ಆಚರಿಸುತ್ತಾ ಬರಲಾಗಿರುವ ಸಂಪ್ರದಾಯದಂತೆ ಶಬರಿಮಲೈಯಲ್ಲಿನೈಷ್ಟಿಕ ಬ್ರಹ್ಮಚಾರಿ (ಚಿರಂತನ ಬ್ರಹ್ಮಚಾರಿ) ರೂಪದಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ೧೦ರಿಂದ೫೦ ವರ್ಷಗಳ ನಡುವಣ (ಋತುಮತಿ ವಯೋಮಾನದ) ಮಹಿಳೆಯರಿಗೆ ನಿಷೇಧವಿತ್ತು.  ಸುಪ್ರೀಂಕೋರ್ಟ್ ಸೆಪ್ಟೆಂಬರ್ ೨೮ರ ತನ್ನ ತೀರ್ಪಿನಲ್ಲಿ ಮಹಿಳೆಯರ ಪ್ರವೇಶದ ಮೇಲಿನ ನಿಷೇಧವನ್ನು ರದ್ದು ಪಡಿಸಿತು. ಆದರೆ ಶತನಮಾನಗಳಿಂದ ನಡೆದುಬರುತ್ತಿರುವ ವಿಧಿ ವಿಧಾನದ ಉಲ್ಲಂಘನೆಯನ್ನು ವಿರೋಧಿಸಿದ ಭಕ್ತರು ಹಾಗೂ ಬಲಪಂಥೀಯ ಸಂಘಟನೆಗಳು ಯಾತ್ರಾಕಾಲದ ಉದ್ದಕ್ಕೂ ಮಹಿಳೆಯರ ಪ್ರವೇಶವನ್ನು ಅಡ್ಡಗಟ್ಟಿದರು. ಚಳವಳಿ ಹಿಂಸೆಗೆ ತಿರುಗಿದಾಗ ಹಲವರು ಗಾಯಗೊಂಡಿದ್ದರು. ಕಡೆಗೂ ಕನಕ ದುರ್ಗ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ಪವಿತ್ರವಾದಪದಿನೆಟ್ಟಾಂಪಡಿ (೧೮ ಮೆಟ್ಟಿಲು) ಏರದೇ ಬದಿಯ ಮಾರ್ಗದ ಮೂಲಕ ದೇಗುಲ ಪ್ರವೇಶಿಸಿದ್ದು ರಾಜ್ಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.  ಸುಪ್ರೀಂಕೋರ್ಟಿಗೆ ಇತ್ತೀಚೆಗೆ ನೀಡಿದ ಅಪಿಡವಿಟ್ ನಲ್ಲಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಿಷೇಧಿತ ವಯಸ್ಸಿನ  ೫೦ಕ್ಕೂ ಹೆಚ್ಚು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ ಎಂದು ತಿಳಿಸಿತು. ಆದರೆ ಪಟ್ಟಿಯಲ್ಲಿದ್ದ ಹಲವಾರು ಮಹಿಳೆಯರು ತಮ್ಮ ವಯಸ್ಸನ್ನು ಪಟ್ಟಿಯಲ್ಲಿ ಇಳಿಸಲಾಗಿದೆ ಎಂದು ಆಕ್ಷೇಪಿಸುವುದರೊಂದಿಗೆ ರಾಜ್ಯ ಸರ್ಕಾರದ ನಡೆಯೂ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

2019: ಚೆನ್ನೈ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಕಟವತಿ ವಿ.ಕೆ. ಶಶಿಕಲಾ ಅವರಿಗೆ ಇಡೀ ಕಾರಿಡಾರಿನಲ್ಲಿ ಖಾಸಗಿ ತನಕ್ಕೆ ಅವಕಾಶ, ಅಡುಗೆ ಸಲವತ್ತುಗಳು ಮತ್ತು ಇತರ ವ್ಯವಸ್ಥೆಗಳನ್ನು ಸೆರೆಮನೆ ನಿಯಮಗಳನ್ನು ಉಲ್ಲಂಘಿಸಿ ಮಾಡಿಕೊಡಲಾಗಿತ್ತು ಎಂಬ ಆಪಾದನೆ ತನಿಖಾ ತಂಡದ ವರದಿಯಿಂದ ದೃಢ ಪಟ್ಟಿತು. ಸೆರೆಮನೆ ಅಧಿಕಾರಿ ಡಿ. ರೂಪಾ ಅವರು ಶಶಿಕಲಾ ಅವರಿಗೆ ಸೆರೆಮನೆಯಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಿದ ವಿಚಾರವನ್ನು ಬಯಲಿಗೆಳೆದ ಬಳಿಕ ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ಅವರನ್ನು ಈ ಕುರಿತು ತನಿಖೆ ನಡೆಸಲು ನೇಮಿಸಲಾಗಿತ್ತು.  ಇದೀಗ ವಿನಯ್ ಕುಮಾರ್ ಅವರು ಸಲ್ಲಿಸಿರುವ ವರದಿಯ ಪ್ರಕಾರ ೨೦೧೭ರ ಜುಲೈ ೧೫ರಂದು ಭೇಟಿ ನೀಡಿದ್ದ ಡಿಐಜಿಯವರು ಶಶಿಕಲಾ ಅವರಿಗೆ ವಿಶೇಷ ಸವಲತ್ತುಗಳನ್ನು ಒದಗಿಸಲಾಗುತ್ತಿದ್ದುದನ್ನು ಗಮನಿಸಿ ಮಾಡಿದ್ದ ವರದಿ ದೃಢ ಪಟ್ಟಿದೆ ಎಂದು ಮೂಲಗಳು ತಿಳಿಸಿದವು. ಶಶಿಕಲಾ ಮತ್ತು ಇಳವರಸಿ ಅವರಿಗೆ ವಿಶಾಲವಾದ ಕಾರಿಡಾರ್, ಜೈಲಿನ ಖಾಲಿ ಸೆಲ್‌ಗಳ ಬಳಕೆಗೆ ಅವಕಾಶ ಮಾತ್ರವಲ್ಲದೆ ಸೆರೆಮನೆಯೊಳಗೆ ಅಡುಗೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು ಎಂದು ಡಿಐಜಿ ರೂಪಾ ಅವರು ಆಪಾದಿಸಿದ್ದರು. ಶಶಿಕಲಾ ಸೆಲ್ ನಲ್ಲಿ ಇದ್ದ ಪ್ರಷರ್ ಕುಕರ್ ಮತ್ತು ಇತರ ಪಾತ್ರಗಳ ಫೋಟೋಗಳನ್ನು ಕೂಡಾ ಅವರು ಬಿಡುಗಡೆ ಮಾಡಿದ್ದರು.
  
2019: ಲಕ್ನೋ: ರಾಮ ಮಂದಿರ ನಿರ್ಮಾಣ ವಿಳಂಬಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದ ಅಧಿಕಾರಾರೂಢ ಬಿಜೆಪಿಗೆ ನೀಡಿದ ಪರೋಕ್ಷ ಎಚ್ಚರಿಕೆಯೊಂದರಲ್ಲಿ ವಿಶ್ವ ಹಿಂದೂ ಪರಿಷತ್, ’ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣದ ಭರವಸೆ ಕೊಟ್ಟರೆ ನಿಮ್ಮನ್ನು ಬೆಂಬಲಿಸಲು ಸಂಘಟನೆ ಮುಕ್ತವಾಗಿದೆ ಎಂದು ಕಾಂಗ್ರೆಸ್ ಪಕ್ಷಕ್ಕೆಆಫರ್ ನೀಡಿತು. ಪ್ರಯಾಗರಾಜ್ನಲ್ಲಿ ಕುಂಭಮೇಳದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ (ವಿಎಚ್ ಪಿ) ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಅಲೋಕ್ ಕುಮಾರ್ ಅವರುಕಾಂಗ್ರೆಸ್ ನಮಗೆ ತನ್ನ ಬಾಗಿಲುಗಳನ್ನು ಮುಚ್ಚಿದೆ. ಅವರು ತಮ್ಮ ಬಾಗಿಲುಗಳನ್ನು ತೆರೆದು ರಾಮ ಮಂದಿರ ವಿಚಾರವನ್ನು ತಮ್ಮ ಚುನಾವಣಾ ಪ್ರಣಾಳಿಕೆಗೆ ಸೇರ್ಪಡೆ ಮಾಡಿದರೆ ಪಕ್ಷವನ್ನು ಬೆಂಬಲಿಸುವ ಬಗ್ಗೆ ನಾವು ಯೋಚಿಸಬಹುದು ಎಂದು ಹೇಳಿದರು. ವಿಶ್ವ ಹಿಂದೂ ಪರಿಷತ್ತಿನ ಧರ್ಮ ಸಂಸದ್ ಜನವರಿ ೩೧ಕ್ಕೆ ಸಮಾವೇಶಗೊಳ್ಳಲಿದ್ದು, ಅದಕ್ಕೆ ಮುಂಚಿತವಾಗಿ ಅಲೋಕ್ ಕುಮಾರ್ ಅವರಿಂದ ಹೇಳಿಕೆ ಬಂದಿದೆಜನವರಿ ೩೧ರ ಧರ್ಮ ಸಂಸದ್ ನಲ್ಲಿ ಬಲಪಂಥೀಯ ಸಂಘಟನೆಗಳು ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸುಗ್ರೀವಾಜ್ಞೆ  ಅಥವಾ ಶಾಸನ ಜಾರಿಗೆ ಒತ್ತಡ ತೀವ್ರಗೊಳಿಸುವ ಸಾಧ್ಯತೆಗಳಿವೆ. ನಾವು ಧರ್ಮ ಸಂಸತ್ತಿನಲ್ಲಿ ಸಂತರ ಆಶೀರ್ವಾದ ಕೋರುತ್ತೇವೆ. ನಾವು ರಾಮ ಮಂದಿರ ವಿಷಯವನ್ನು ಅವರ ಮುಂದಿಡುತ್ತೇವೆ ಮತ್ತು  ಅವರ ಸಲಹೆಗಳನ್ನು ಕೋರುತ್ತೇವೆ. ಬಳಿಕ ಮಾತ್ರವೇ ನಾವು ನಮ್ಮ ಮುಂದಿನ ಕ್ರಮ ನಿರ್ಧರಿಸುತ್ತೇವೆ ಎಂದು ಕುಮಾರ್ ನುಡಿದರುಏನಿದ್ದರೂ ಬಳಿಕ ಮಾಧ್ಯಮ ಒಂದರ ಬಳಿ ಮಾತನಾಡಿದ ಕುಮಾರ್ ಅವರು ತನ್ನ ಹೇಳಿಕೆಯನ್ನು ಅಗತ್ಯಕ್ಕಿಂತ ಹೆಚ್ಚಾಗಿಹಿಗ್ಗಿಸಲಾಗಿದೆ ಎಂದು ಹೇಳಿದರು. ವಿಶ್ವ ಹಿಂದೂ ಪರಿಷದ್ ಇತ್ತೀಚಿನ ದಿನಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳನ್ನೂ ಭೇಟಿ ಮಾಡಿ ಸಂಸತ್ತಿನಲ್ಲಿ ವಿಷಯ ಬಂದಲ್ಲಿ ಶಾಸನವನ್ನು ಬೆಂಬಲಿಸುವಂತೆ ಮನವಿ ಮಾಡಿದ್ದೆವು. ಮಂದಿರ ವಿಚಾರವು ರಾಜಕೀಯ ಕ್ಷೇತ್ರದಲ್ಲಿ ಸಹಮತದ ವಿಷಯವಾಗಬೇಕು ಎಂಬುದು ನಮ್ಮ  ಆಶಯ. ತಮ್ಮ ಚುನಾವಣಾ ಪ್ರಣಾಳಿಕೆಗಳಲ್ಲಿ ವಿಷಯವನ್ನು ಸೇರಿಸುವಂತೆ ನಾವು ಎಲ್ಲ ಪಕ್ಷಗಳಿಗೂ ಮನವಿ ಮಾಡುತ್ತೇವೆ. ಇದನ್ನು ಮಾಡುವ ಯಾವುದೇ ಪಕ್ಷಕ್ಕೆ ನಾವು ಧನ್ಯವಾದ ಹೇಳುತ್ತೇವೆ. ಏನಿದ್ದರೂ ಅದು ಯಾವುದೇ ಪಕ್ಷಕ್ಕೆ ನಮ್ಮ ಬೆಂಬಲ ಎಂಬ ಅರ್ಥವಲ್ಲ. ಅದು ನಮ್ಮ ಕೆಲಸವೂ ಅಲ್ಲ. ನಾವು ಅದನ್ನು ಮಾಡುವುದಿಲ್ಲ ಎಂದು ಕುಮಾರ್ ಹೇಳಿದರುಬಿಜೆಪಿ ಪ್ರತಿಕ್ರಿಯೆ: ಅಲೋಕ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರುಮೊದಲು ಕಾಂಗ್ರೆಸ್ ಪಕ್ಷವು ಭಗವಾನ್ ಶ್ರೀರಾಮನನ್ನು ತಮ್ಮ  ಹೃದಯದಲ್ಲಿ ಪ್ರತಿಷ್ಠಾಪಿಸಿಕೊಳ್ಳಲಿ. ಯಾವ ಕಾಂಗ್ರೆಸ್ಸಿನ ನಾಯಕ ಕಪಿಲ್ ಸಿಬಲ್ ಅವರು ಕೋರ್ಟಿನಲ್ಲಿ ರಾಮಮಂದಿರದ ವಿಷಯವು ಚುನಾವಣೆಗಳ ಬಳಿಕ ವಿಚಾರಣೆಗೆ ಬರಬೇಕು ಎಂಬುದಾಗಿ ಕೋರಿಕೊಂಡಿದ್ದರೋ ಅದೇ ಕಾಂಗ್ರೆಸ್ ಇದು. ನಾವು ರಾಮ ಮಂದಿರಕ್ಕೆ ಬದ್ಧರಾಗಿಯೇ ಇದ್ದೇವೆ ಎಂದು ನುಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವಿಷಯವು ನ್ಯಾಯಾಲಯದಲ್ಲಿ  ಉಳಿದಿರುವಾಗ ಸುಗ್ರೀವಾಜ್ಞೆ ತರುವ ಸಾಧ್ಯತೆಯನ್ನು ಅಲ್ಲಗಳೆದ ಬಳಿಕ ವಿಶ್ವ ಹಿಂದೂ ಪರಿಷದ್ ಭ್ರಮನಿರಸನಗೊಂಡಿದೆ. ’ಕೇಂದ್ರ ಸರ್ಕಾರವು ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಗ್ರೀವಾಜ್ಞೆ ತರುವುದಿಲ್ಲ ಎಂಬುದು ನಮ್ಮ ಭಾವನೆ. ನಾವು ಇದನ್ನೂ ಕೂಡಾ ಧರ್ಮ ಸಂಸತ್ತಿನಲ್ಲಿ ಪಾಲ್ಗೊಳ್ಳುವ ಸಂತರಿಗೆ ಹೇಳಲಿದ್ದೇವೆ ಎಂದು ಕುಮಾರ್ ನುಡಿದರು. ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಉದಯ್ ಯು. ಲಲಿತ್ ಅವರು ಪೀಠದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಪುನರ್ರಚನೆಯಾಗಲಿರುವ ಸಂವಿಧಾನಪೀಠವು ಜನವರಿ ೨೯ರಿಂದ ಅಯೋಧ್ಯಾ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವ ನಿರೀಕ್ಷೆಯಿದೆಕಳೆದ ವಾರ ಅಚ್ಚರಿದಾಯಕವಾದ ಹೇಳಿಕೆಯೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಜೋಶಿ ಅವರುರಾಮಮಂದಿರವು ೨೦೨೫ರಲ್ಲಿ ಮುಂದಿನ ಕುಂಭಮೇಳದ ವೇಳೆಗೆ ಅಂದರೆ ೨೦೨೪ರಲ್ಲಿ ನಡೆಯುಲಿರುವ ಮುಂದಿನ ಲೋಕಸಭಾ ಚುನಾವಣೆಯ ಬಳಿಕ ನಿರ್ಮಾಣಗೊಳ್ಳಲಿದೆ ಎಂದು ಹೇಳಿದ್ದರು. ಎನಿದ್ದರೂ ಜೋಶಿ ಅವರು ಹೇಳಿದ್ದರ ಅರ್ಥ ಮುಂದಿನ ಕುಂಭಮೇಳದ ವೇಳೆಗೆ ಮಂದಿರ ಸಿದ್ಧವಾಗಲಿದೆ ಎಂದಷ್ಟೇ ಎಂದು ಆರ್ ಎಸ್ ಎಸ್ ಬಳಿಕ ಸ್ಪಷ್ಟನೆ ನೀಡಿತ್ತು.

2019: ನವದೆಹಲಿ: ನೀವು ೧೫ ವರ್ಷಕ್ಕಿಂತ ಕೆಳಗೆ ಅಥವಾ ೬೫ ವರ್ಷ ಮೇಲ್ಪಟ್ಟ ವಯಸ್ಸಿನ ಭಾರತೀಯರು ಇನ್ನು ಮುಂದೆ  ನೇಪಾಳ ಮತ್ತು ಭೂತಾನ್ ದೇಶಕ್ಕೆ ಭೇಟಿ ನೀಡಲು ಬಯಸುವುದಾದರೆ ವೀಸಾ ಅಗತ್ಯವಿಲ್ಲ, ತಮ್ಮ ಬಳಿ ಇರುವ ಆಧಾರ್ ಕಾರ್ಡ್ ದಾಖಲೆಯ ಮೂಲಕವೇ ಎರಡು ದೇಶಗಳಿಗೆ ಪ್ರವಾಸ ಕೈಗೊಳ್ಳಬಹುದು. ಕೇಂದ್ರ ಗೃಹ ಇಲಾಖೆಯು ತನ್ನ ಅಧಿಕೃತ ಪ್ರಕಟನೆಯಲ್ಲಿ ವಿಚಾರವನ್ನು ದೃಢಪಡಿಸಿತು. ಇದರೊಂದಿಗೆ ಭೂತಾನ್ ಮತ್ತು ನೇಪಾಳ ದೇಶಗಳ ಪ್ರವಾಸಕ್ಕೆ ಆಧಾರ್ ಕಾರ್ಡ್ಗೆ ಅಧಿಕೃತ ಸಂಚಾರಿ ದಾಖಲೆಯ ಮಾನ್ಯತೆ ಲಭಿಸಿದಂತಾಯಿತು. ಗೃಹ ಇಲಾಖೆಯು ನಿಗದಿಪಡಿಸಿರುವ ನಿರ್ದಿಷ್ಟ ವಯೋಮಾನಕ್ಕೆ ಒಳಪಡುವ ಭಾರತೀಯ ನಾಗರಿಕರು ತಮ್ಮಲ್ಲಿ ಅರ್ಹ ಪಾಸ್ ಪೋರ್ಟ್ ಹೊಂದಿದ್ದು ಸರ್ಕಾರೀ ಮಾನ್ಯತೆಯ ಒಂದು ಭಾವಚಿತ್ರ ಸಹಿತವಾಗಿರುವ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗದ ಗುರುತಿನ ಚೀಟಿಯನ್ನು ಹೊಂದಿದ್ದಲ್ಲಿ ಅಂತಹ ವ್ಯಕ್ತಿಗಳು ನಿರಾತಂಕವಾಗಿ ನೇಪಾಳ ಅಥವಾ ಭೂತಾನ್ ದೇಶಗಳಿಗೆ ಹೋಗಬಹುದು. ಹಿಂದೆ ೬೫ ವರ್ಷ ದಾಟಿದ ಮತ್ತು ೧೫ ವರ್ಷದೊಳಗಿನ ವ್ಯಕ್ತಿಗಳು ಎರಡು ದೇಶಗಳಿಗೆ ಪ್ರವಾಸ ಕೈಗೊಳ್ಳಲು ಪಾನ್ ಕಾರ್ಡ್, ವಾಹನ ಚಾಲನಾ ಪ್ರಮಾಣ ಪತ್ರ, ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಕಾರ್ಡ್ ಅಥವಾ ರೇಷನ್ ಕಾರ್ಡ್ಗಳಲ್ಲಿ ಯಾವುದಾದರೊಂದನ್ನು ಗುರುತಿಗಾಗಿ ತೋರಿಸಬೇಕಿತ್ತು. ಆದರೆ ಆಧಾರ್ ಕಾರ್ಡ್ ತೋರಿಸುವಂತಿರಲಿಲ್ಲ. ಇದೀಗ ಇವೆಲ್ಲವುಗಳ ಸ್ಥಾನವನ್ನು ಆಧಾರ್ ಕಾರ್ಡ್ ಆಕ್ರಮಿಸಿಕೊಂಡಂತಾಗಿದೆ. ಇತರರು ಮಾತ್ರ ನೆರೆಯ ರಾಷ್ಟ್ರಗಳಿಗೆ ಪ್ರವಾಸೀ ದಾಖಲೆಯಾಗಿ ಆಧಾರ್ ಕಾರ್ಡನ್ನು ತೋರಿಸುವಂತಿಲ್ಲನೇಪಾಳ ಮತ್ತು ಭೂತಾನ್ಗೆ ಪ್ರವಾಸ ಮಾಡುವ ಭಾರತೀಯ ಪ್ರಜೆಗಳು ಸಕ್ರಮ ಪಾಸ್ಪೋರ್ಟ್, ಭಾರತ ಸರ್ಕಾರ ನೀಡಿದ ಫೊಟೋ ಸಹಿತವಾದ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ವೀಸಾ ಹೊಂದಿರಬೇಕಾದ ಅಗತ್ಯ ಇಲ್ಲ ಎಂದು ಪ್ರಕಟಣೆ ಹೇಳಿತು. ಈ ಹಿಂದೆ ೬೫ ವರ್ಷ ಮೀರಿದ ಮತ್ತು ೧೫ ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳು ಎರಡು ರಾಷ್ಟ್ರಗಳಿಗೆ ಭೇಟಿ ನೀಡಲುತಮ್ಮ ಪಾನ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ಸರ್ಕಾರ ಆರೋಗ್ಯ ಸೇವಾ ಕಾರ್ಡ್ (ಸಿಜಿಎಚೆಸ್), ಪಡಿತರ ಚೀಟಿಗಳಲ್ಲಿ ಯಾವುದನ್ನಾದರೂ ತಮ್ಮ ಗುರುತನ್ನು ದೃಢ ಪಡಿಸಲು ತೋರಿಸಬೇಕಾಗುತ್ತಿತ್ತು. ಆದರೆ ಆಧಾರ್ ಕಾರ್ಡ್ ತೋರಿಸಲು ಅವಕಾಶ ಇರಲಿಲ್ಲ. ಈಗ ಪಟ್ಟಿಗೆ ಆಧಾರ್ ಕಾರ್ಡನ್ನು ಸೇರ್ಪಡೆ ಮಾಡಲಾಗಿದೆ ಎಂದು ಹಿರಿಯ ಗೃಹ ಸಚಿವಾಲಯ ಅಧಿಕಾರಿಯೊಬ್ಬರು ವಿವರಿಸಿದರು. ವಿಶಿಷ್ಠ ಗುರುತು ಪ್ರಾಧಿಕಾರವು (ಯುಐಡಿಎಐ) ನೀಡುವ ೧೨ ಅಂಕಿಗಳ ವಿಶಿಷ್ಟ ಗುರುತಿನ ನಂಬರ್ ಹೊಂದಿರುವ ಕಾರ್ಡ್ ಸರ್ಕಾರ ಸೇವೆಗಳನ್ನು ಪಡೆಯಲು ಈಗ ಕಡ್ಡಾಯವಾಗಿದೆ.
2018: ನವದೆಹಲಿ: ನ್ಯಾಷನಲ್ಹೆರಾಲ್ಡ್ಪ್ರಕರಣದಲ್ಲಿ ಕಾಂಗ್ರೆಸ್ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ತಾವು ಸಲ್ಲಿಸಿದ ಅರ್ಜಿ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಯಂಗ್ಇಂಡಿಯನ್ಪ್ರೈವೇಟ್ಲಿಮಿಟೆಡ್ಕಂಪನಿಗೆ 414 ಕೋಟಿ ರೂ.ಗಳ ದಂಡ ವಿಧಿಸಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ಸ್ವಾಮಿ ದೆಹಲಿ ಕೋರ್ಟಿಗೆ ತಿಳಿಸಿದರು. ಸ್ವಾಮಿ ಅವರು ಮೆಟ್ರೋಪಾಲಿಟನ್ಮ್ಯಾಜಿಸ್ಟ್ರೇಟ್ಅಂಬಿಕಾ ಸಿಂಗ್ಅವರ ಮುಂದೆ ಹಾಜರಾಗಿ, ತಮ್ಮ ದೂರಿಗೆ ಸಂಬಂಧಿಸಿದಂತೆ ಐಟಿ ಇಲಾಖೆ ಗಾಂಧಿಗಳು, ಯಂಗ್ಇಂಡಿಯನ್ಮತ್ತು ಇತರ ನಾಲ್ವರ ವಿರುದ್ಧ ತನಿಖೆ ಆರಂಭಿಸಿದೆ ಎಂದು ನುಡಿದರು. ಸ್ವಾಮಿ ಅವರು ಸಲ್ಲಿಸಿದ ಐಟಿ ಇಲಾಖೆ ದಾಖಲೆಗಳನ್ನು ಮುಂದಿನ ಆದೇಶದ ವರೆಗೂ ಮುಚ್ಚಿದ ಲಕೋಟೆಯಲ್ಲಿ ಸೀಲ್ಮಾಡಿ ಇಡುವಂತೆ ಕೋರ್ಟ್ಸೂಚಿಸಿತು. ಅಸೋಸಿಯೇಟ್ಜರ್ನಲ್ಸ್ಲಿಮಿಟೆಡ್ಕಾಂಗ್ರೆಸ್ಗೆ ಪಾವತಿಸಬೇಕಿದ್ದ 90.25 ಕೋಟಿ ರೂ.ಗಳ ವಸೂಲಿ ಹಕ್ಕನ್ನು ಯಂಗ್ಇಂಡಿಯನ್ಕಂಪನಿಗೆ ಕೇವಲ 50 ಲಕ್ಷ ರೂ.ಗಳಿಗೆ ಮಾರಾಟ ಮಾಡುವ ಮೂಲಕ ಗಾಂಧಿ ಕುಟುಂಬ ನಿಧಿಯ ದುರ್ಬಳಕೆ ಹಾಗೂ ವ್ಯಾಪಕ ಅವ್ಯವಹಾರ ನಡೆಸಿದೆ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದರು. ಸಂಬಂಧ ಖಾಸಗಿ ಕ್ರಿಮಿನಲ್ದೂರನ್ನೂ ಸಲ್ಲಿಸಿದ್ದರು.

2018: ವಿಶ್ವಸಂಸ್ಥೆ: ಭಯೋತ್ಪಾದಕರಲ್ಲಿ ಒಳ್ಳೆಯವರು, ಕೆಟ್ಟವರು ಎಂದು ಪ್ರತ್ಯೇಕಿಸುವ ಪಾಕಿಸ್ತಾನ ಬದಲಿಸಿಕೊಳ್ಳಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಒತ್ತಾಯಿಸಿತು.  ಭಯೋತ್ಪಾದನೆ ಒಡ್ಡಿದ ಸವಾಲುಗಳತ್ತ ಗಮನ ಹರಿಸಿ, ಗಡಿಯಾಚೆಯಿರುವ ಉಗ್ರರ ಸ್ವರ್ಗಗಳನ್ನು ನಾಶಪಡಿಸಿ ಎಂದು ಭಾರತ ಆಗ್ರಹಿಸಿತು. ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಸಯ್ಯದ್ಅಕ್ಬರುದ್ದೀನ್ಅವರು, ಅಫ್ಘಾನಿಸ್ತಾನವು ಜಗತ್ತಿನಲ್ಲಿ ತನ್ನ ಸ್ಥಾನವನ್ನು ಮರಳಿ ಗಳಿಸಿಕೊಳ್ಳುವುದನ್ನು ಭಾರತ ಬಯಸುತ್ತದೆ ಎಂದು ಹೇಳಿದರು. ಆಫ್ಘಾನಿಸ್ಥಾನದಲ್ಲಿ ಶಾಂತಿ, ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿ ತರುವಲ್ಲಿ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಪಾಲುದಾರರ ಜತೆ ಭಾರತ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೆ ಮೊದಲು ಮಾತನಾಡಿದ ಅಮೆರಿಕ ಪ್ರತಿನಿಧಿ, ಪಾಕಿಸ್ತಾನದಲ್ಲಿ ಭಯೋತ್ಪಾದಕರ ಸುರಕ್ಷಿತ ಸ್ವರ್ಗದ ಯಥಾಸ್ಥಿತಿಯನ್ನು ಒಪ್ಪಿಕೊಳ್ಳಲಾಗದು ಎಂದು ಸಾರಿದರು. ಪಾಕಿಸ್ತಾನ ಉಗ್ರರಿಗೆ ಸುರಕ್ಷಿತ ನೆಲೆ ಒದಗಿಸುವ ಬದಲು ಭಯೋತ್ಪಾದಕರನ್ನು ನಾಶಪಡಿಸುವ ಜಾಗತಿಕ ಪ್ರಯತ್ನದ ಜತೆ ಪಾಕ್ ಕೈಜೋಡಿಸಬೇಕು ಎಂದು ಅಮೆರಿಕ ಹೇಳಿತು.  'ಭಯೋತ್ಪಾದನೆ ದಮನ ವಿಷಯದಲ್ಲಿ ಪಾಕಿಸ್ತಾನದ ಜತೆಗೆ ನಿಕಟವಾಗಿ ಮತ್ತು ನಿರ್ಣಾಯಕವಾಗಿ ಕೆಲಸ ಮಾಡಲು ಬಯಸುತ್ತೇವೆ. ಆದರೆ ಪಾಕ್ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಬಯಸಿದರೆ ಯಶಸ್ವಿಯಾಗದು. ತನ್ನ ಗಡಿಯೊಳಗೆ ಉಗ್ರರಿಗೆ ಸುರಕ್ಷಿತ, ಸಮೃದ್ಧ ನೆಲೆಯನ್ನು ಒದಗಿಸುವ ಪಾಕ್ತಂತ್ರವನ್ನು ಎಂದೂ ಒಪ್ಪಲಾಗದು' ಎಂದು ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಜಾನ್ಸುಲ್ಲಿವಾನ್ಸಚಿವರ ಸಭೆಯಲ್ಲಿ ನುಡಿದರು. ಆಫ್ಘಾನ್ಉಪ ವಿದೇಶಾಂಗ ಸಚಿವ ಹಿಕ್ಮತ್ಖಲೀಲ್ಕರ್ಜಾಯಿ ಕೂಡ, ಪಾಕ್ನೆಲದಲ್ಲಿ ಉಗ್ರರ 'ಸುರಕ್ಷಿತ ಸ್ವರ್ಗ'ಗಳು ಇರುವುದನ್ನು ಪುನರುಚ್ಚರಿಸಿದರು. ಇಷ್ಟಾದರೂ ಪಾಕ್ತನ್ನ ನಿರಾಕರಣೆಯ ಮೊಂಡು ವಾದವನ್ನು ಮುಂದುವರಿಸಿತು. ಭಾರತದ ರಾಯಭಾರಿಯ ಮಾತಿಗೆ ಪ್ರತಿಕ್ರಿಯಿಸಿದ ಪಾಕ್ಪ್ರತಿನಿಧಿ ಮಲೀಹಾ ಲೋಧಿ, ಜಾಧವ್ಪ್ರಕರಣವನ್ನು ಪ್ರಸ್ತಾಪಿಸಿದರು.

2018: ನವದೆಹಲಿ: ಸಿಬಿಐ ನ್ಯಾಯಮೂರ್ತಿ ಬಿ.ಎಚ್. ಲೋಯ ಸಾವಿನ ಬಗ್ಗೆ ಸ್ವತಂತ್ರ ತನಿಖೆ ಕೋರಿ ಸಲ್ಲಿಸಲಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ಜನವರಿ ೨೨ರಂದು ವಿಚಾರಣೆ ನಡೆಸಲಿದೆ. ೨೦೧೪ರಲ್ಲಿ ತಮ್ಮ ಸಾವು ಸಂಭವಿಸಿದ ವೇಳೆಯಲ್ಲಿ ನ್ಯಾಯಮೂರ್ತಿ ಲೋಯ ಅವರು ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾಗಿದ್ದ ಸೊಹ್ರಾಬುದ್ದೀನ್ ಶೇಖ್ ಪೊಲೀಸ್ ಎನ್ ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ಜನವರಿ ೧೬ರಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ ಮತ್ತು ಮೋಹನ ಎಂ. ಶಾಂತನಗೌಡರ ಅವರ ಪೀಠವು ಪ್ರಕರಣವನ್ನು ಸೂಕ್ತ ಪೀಠದ ಮುಂದೆ ತರುವಂತೆ ಆದೇಶ ನೀಡಿ ಸಾರ್ವಜನಿಕ ಹಿತಾಸಕ್ತ ಅರ್ಜಿಗಳ ಮುಂದಿನ ವಿಚಾರಣೆಯಿಂದ ಹಿಂದೆ ಸರಿದಿತ್ತು. ಸೂಕ್ತ ಪೀಠದ ಮುಂದೆ ತರುವಂತೆ ನೀಡಿದ ಆದೇಶವು ಪೀಠವು ವಿಚಾರಣೆಯ ಕೊನೆಗೆ ನ್ಯಾಯಮೂರ್ತಿ ಲೋಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನು ಮಂಡಿಸುವಂತೆ ಮತ್ತು ಸೂಕ್ತವೆನಿಸಿದರೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಅರ್ಜಿದಾರರಾದ ಮಹಾರಾಷ್ಟ್ರ ಮೂಲದ ಪತ್ರಕರ್ತ ಬಿ.ಆರ್. ಲೋನ್ ಮತ್ತು ಸಾಮಾಜಿಕ ಚಳವಳಿಕಾರ ತೆಹ್ಸೀನ್ ಪೂನಾವಾಲ ಅವರ ಜೊತೆ ಹಂಚಿಕೊಳ್ಳುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೀಡಿದ ಆದೇಶದಲ್ಲಿನ ಒಂದು ಭಾಗವಾಗಿತ್ತು. ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿ ಮಿಶ್ರ ಅವರುಇದು ಅವರಿಗೆ (ಅರ್ಜಿದಾರರಿಗೆ) ಎಲ್ಲವೂ ಗೊತ್ತಿರುವಂತಹ ಪ್ರಕರಣ ಎಂದು ಹೇಳಿದ್ದರು.  ನ್ಯಾಯಮೂರ್ತಿಗಳು ಹಿಂದೆ ಸರಿದ ಬಳಿಕ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರಿಗೆ ಹಿಂದಕ್ಕೆ ಹೋಗಿತ್ತು. ಈದಿನ ಆಡಳಿತಾತ್ಮಕ ನಿರ್ಧಾರವನ್ನು ಕೈಗೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಸ್ವತಃ ತಾವು, ಮತ್ತು ನ್ಯಾಯಮೂರ್ತಿಗಳಾದ .ಎಂ.ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವೇ ಪ್ರಕರಣದ ವಿಚಾರಣೆ ನಡೆಸುವಂತೆ ನಿರ್ಧರಿಸಿದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಕಿರಿಯ ಪೀಠದ ಬದಲು ಹಿರಿಯ ಪೀಠಕ್ಕೆ ವರ್ಗಾಯಿಸಿದ ನಿರ್ಧಾರವು ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದ ಹಿನ್ನೆಲೆಯಲ್ಲಿ ಮಹತ್ವ ಪಡೆಯಿತು. ನ್ಯಾಯಮೂರ್ತಿಗಳು ಮುಖ್ಯನ್ಯಾಯಮೂರ್ತಿ ಮಿಶ್ರ ಅವರ  ಜೊತೆಗೆ ಪ್ರಕರಣವನ್ನು ನ್ಯಾಯಮೂರ್ತಿ ಅರುಣ್ ಮಿಶ್ರ ಪೀಠಕ್ಕೆ ವಹಿಸಿದ ಬಗ್ಗೆ ಪತ್ರಿಕಾಗೋಷ್ಠಿಯ ದಿನ ಮುಂಜಾನೆ ಕೂಡಾ ಭೇಟಿ ಮಾಡಿ ವಿರೋಧಿಸಿದ್ದರು ಎಂದು ನ್ಯಾಯಮೂರ್ತಿ ರಂಜನ್ ಗೊಗೋಯಿ ಹೇಳಿದ್ದರು. ರಾಷ್ಟ್ರೀಯ ಮಹತ್ವದ ಪ್ರಕರಣಗಳನ್ನು ಸುಪ್ರೀಂಕೋರ್ಟಿನಲ್ಲಿ ಆಯ್ದ ಪೀಠಗಳಿಗೆ ನಿಯೋಜನೆ ಮಾಡುತ್ತಿರುವದನ್ನು ನಾಲ್ವರೂ ನ್ಯಾಯಮೂರ್ತಿಗಳು ಪ್ರಶ್ನಿಸಿದ್ದರು. ಪತ್ರಿಕಾಗೋಷ್ಠಿಯ ಪರಿಣಾಮವಾಗಿ ಬಾಕಿ ಇರುವ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಿಜೆಐ ನೇತೃತ್ವದ ಪೀಠಕ್ಕೆ ವಹಿಸಬೇಕು. ಸಿಜೆಐ ಅವರಿಗೆ ಏನಾದರೂ ಕಾರಣಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲಾಗದೇ ಇದ್ದಲ್ಲಿ ತಮ್ಮ ನಾಲ್ವರು ಹಿರಿಯ ಸಹೋದ್ಯೋಗಿಗಳಲ್ಲಿ ಯಾರಾದರು ಒಬ್ಬರ ಪೀಠಕ್ಕೆ ವಹಿಸಬೇಕು ಎಂದು ಒತ್ತಾಯಿಸಿ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ನಿರ್ಣಯವನ್ನೂ ಅಂಗೀಕರಿಸಿತ್ತು. ಜನವರಿ ೧೨ರ ಜಂಟಿ ಪತ್ರಿಕಾಗೋಷ್ಠಿ ಬಳಿಕ ಮುಖ್ಯ ನ್ಯಾಯಮೂರ್ತಿ ಮತ್ತು ಅವರು ನಾಲ್ವರು ಹಿರಿಯ ಸಹೋದ್ಯೋಗಿಗಳ ಮೊದಲ ಸಭೆಯ ಸಂದರ್ಭದಲ್ಲೇ ಜನವರಿ ೧೬ರಂದು ನ್ಯಾಯಮೂರ್ತಿ ಮಿಶ್ರ ಅವರ ಪೀಠ ವಿಚಾರಣೆಯಿಂದ ಹಿಂದೆ ಸರಿಯುವ ನಿರ್ಧಾರ ತೆಗೆದುಕೊಂಡದ್ದು ಕಾಕತಾಳೀಯವಾಗಿತ್ತು. ಒಂದು ವಾರದ ಅವಧಿಯಲ್ಲಿ ಸಿಜೆಐ ಮತ್ತು ನಾಲ್ವರು ನ್ಯಾಯಮೂರ್ತಿಗಳು ಮತ್ತೊಮ್ಮೆ ಸಭೆ ನಡೆಸಿದ್ದು, ಪೀಠಗಳಿಗೆ ಪ್ರಕರಣಗಳ ನಿಯೋಜನೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪವಾದ ಇತರ ವಿಷಯಗಳ ಇತ್ಯರ್ಥಕ್ಕಾಗಿ ಇನ್ನಷ್ಟು ಸಭೆಗಳನ್ನು ನಡೆಸುವ ನಿರೀಕ್ಷೆ ಇದೆ. ಸುಪ್ರೀಂಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಾದ .ಕೆ. ಸಿಕ್ರಿ ಮತ್ತು ಚಂದ್ರಚೂಡ್ ಅವರು ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

2018: ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರಕ್ಕೆ ಅಲ್ಪಾವಧಿಗೆ ಹಣ ವೆಚ್ಚ ಮಾಡಲು ಅವಕಾಶ ನೀಡಬೇಕಿದ್ದ ಅಲ್ಪಾವಧಿಯ ಖರ್ಚು ಮಸೂದೆಯನ್ನು ವಿರೋಧಿ ಡೆಮಾಕ್ರಾಟ್ ಬಹುಮತವಿರುವ ಸೆನೆಟ್ ತಿರಸ್ಕರಿಸಿದ ಪರಿಣಾಮವಾಗಿ ಅಮೆರಿಕ ಸರ್ಕಾರ ಈದಿನ ಅಧಿಕೃತವಾಗಿ ತನ್ನ ಬಾಗಿಲು ಮುಚ್ಚಿತು. ಐದು ವರ್ಷಗಳ ಅವಧಿಯಲ್ಲಿ ಸೆನೆಟ್ ರೀತಿ ವೆಚ್ಚ ಮಸೂದೆಯನ್ನು ತಿರಸ್ಕರಿಸಿದ್ದು ಇದೇ ಪ್ರಥಮ. ಇದರಿಂದಾಗಿ ಟ್ರಂಪ್ ಅವರ ಮೊದಲ ವರ್ಷದ ಆಡಳಿತದ ಕೊನೆ ಅರಾಜಕ ಸ್ಥಿತಿಗೆ ತಲುಪಿದಂತಾಯಿತು. ಪೆಂಟಗಾನ್ ಮತ್ತು ಫೆಡರಲ್ ಸಂಸ್ಥೆಗಳಿಗೆ ಅಲ್ಪಾವಧಿಯ ನಿಧಿ ಒದಗಿಸುವ ನಿರ್ಣಾಯಕ ಕ್ರಮವನ್ನು ತಡೆ ಹಿಡಿಯುವಲ್ಲಿ ಡೆಮಾಕ್ರಾಟ್ ಸದಸ್ಯರ ಜೊತೆಗೆ ಕೆಲವು ರಿಪಬ್ಲಿಕನ್ ಸದಸ್ಯರೂ ಕೈಜೋಡಿಸಿದ್ದರಿಂದ ಟ್ರಂಪ್ ಸರ್ಕಾರ ಸದನದಲ್ಲಿ ಸೋಲು ಅನುಭವಿಸಿತು. ಅಮೆರಿಕದ ೪೫ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಸರಿಯಾಗಿ ಒಂದು ವರ್ಷದ ಬಳಿಕ ಸರ್ಕಾರ ಬಾಗಿಲು ಮುಚ್ಚಿರುವುದಕ್ಕೆ ಟ್ರಂಪ್ ಅವರು ಡೆಮಾಕ್ರಾಟ್ ಸದಸ್ಯರನ್ನು ದೂರಿದರು.  ತೆರಿಗೆ ಕಡಿತಗಳ ಮಹಾನ್ ಯಶಸ್ಸನ್ನು ಕುಗ್ಗಿಸಲು ಡೆಮೋಕ್ರಾಟರು ಸರ್ಕಾರದ ಬಾಗಿಲು ಮುಚ್ಚಬಯಸಿದ್ದರು. ಅವರು ಮಾಡುತ್ತಿರುವುದು ನಮ್ಮ ಆರ್ಥಿಕತೆಗೆ ತಿರುಗು ಬಾಣವಾಗಲಿದೆ ಎಂದು ಅವರು ಎಚ್ಚರಿಸಿದರು.  ಫೆಬ್ರುವರಿ ೧೬ರವರೆಗೆ ಸರ್ಕಾರಕ್ಕೆ ನಿಧಿ ಒದಗಿಸಲು ಕೊನೆಯ ಕ್ಷಣದವರೆಗೆ ನಡೆದ ದ್ವಿಪಕ್ಷೀಯ ಮಾತುಕತೆಗಳ ಹೊರತಾಗಿಯೂ ಸದನದಲ್ಲಿ ಅಗತ್ಯವಿದ್ದ ೬೦ ಮತಗಳು ಸಿಗಲಿಲ್ಲ. ಸರ್ಕಾರಕ್ಕೆ ಅಲ್ಪಾವಧಿಯ ನಿಧಿ ಒದಗಿಸುವ ಖರ್ಚು ಮಸೂದೆಯನ್ನು ಸೆನೆಟ್ ೫೦-೪೮ ಮತಗಳಿಂದ ತಿರಸ್ಕರಿಸಿತು. ಅಲ್ಪಾವಧಿಯ ಖರ್ಚು ಮಸೂದೆಯನ್ನು ಕೆಳಮನೆ ಜನವರಿ 18ರ ಗುರುವಾರ ಅಂಗೀಕರಿಸಿತ್ತು. ಖರ್ಚು ಮಸೂದೆ ಪಾಸಾಗಲು ಜನವರಿ 19ರ ಶುಕ್ರವಾರ ಮಧ್ಯ ರಾತ್ರಿ ಗಡುವಾಗಿತ್ತು. ಆದರೆ ಮಸೂದೆ ಸೆನೆಟ್ ನಲ್ಲಿ ಪಾಸಾಗುವುದಕ್ಕೆ ಅಗತ್ಯವಿರುವಷ್ಟು ಸದಸ್ಯರು ಟ್ರಂಪ್ ಪಕ್ಷದಲ್ಲಿ ಇರಲಿಲ್ಲ. ಮಸೂದೆ ಪಾಸಾಗುವುದಕ್ಕೆ ಇದ್ದ ಗಡುವು ಮಧ್ಯ ರಾತ್ರಿ ಮುಗಿದ ಬಳಿಕವೂ ಚರ್ಚೆ-ಮಾತುಕತೆ ಮುಂದುವರಿದಿತ್ತು.  ಖರ್ಚು  ಮಸೂದೆ ಪಾಸಾಗಲು ೬೦ ಮತಗಳ ಕೊರತೆ ಇದ್ದ ಸ್ಥಿತಿಯಲ್ಲಿ ಸೆನೆಟ್ ಬಹುಸಂಖ್ಯಾತ ನಾಯಕ ಮಿಚ್ ಮೆಕೊನೆಲ್ ಅವರು ಮತದಾನವನ್ನು ಮುಕ್ತವಾಗಿರಿಸಿದರು.  ಫೆ.೧೬ರ ವರೆಗಿನ ಕಿರು ಅವಧಿಗೆ ಸರ್ಕಾರದ ಖರ್ಚುಗಳನ್ನು ನಿಭಾಯಿಸುವುದಕ್ಕೆ ಅವಶ್ಯವಿರುವ ಹಣವನ್ನು ಒದಗಿಸುವ ಮಸೂದೆಯ ಸೆನೆಟ್ನಲ್ಲಿ ಅಗತ್ಯ ಸಂಖ್ಯೆಯ ಮತಗಳ ಕೊರತೆಯಿಂದಾಗಿ ತಡೆಯಲ್ಪಟ್ಟಿತು.  ನಡು ರಾತ್ರಿಯ ಗಡುವು ಮುಗಿದೊಡನೆಯೇ ಅನ್ಯ ಮಾರ್ಗೋಪಾಯಗಳನ್ನು ಚರ್ಚಿಸುವುದಕ್ಕಾಗಿ ಮೆಕೋನೆಲ್ ಮತ್ತು ಸೆನೆಟ್ ಡೆಮೊಕ್ರಾಟಿಕ್ ನಾಯಕ ಚಕ್ ಶೂಮರ್ ಅವರು ಸೆನೆಟ್ ಅಂತಸ್ತಿಗೆ ಸಮೀಪವೇ ಇರುವ ಕೋಣೆಯೊಂದರಲ್ಲಿ  ಸಭೆ ಸೇರಿದರು. ಮಸೂದೆ ಪಾಸಾಗಬೇಕಿದ್ದ ನಡುರಾತ್ರಿಯ ಗಡುವು ಮುಗಿದ ಕಾರಣ, ತಡೆ ಉಂಟಾಗಿರುವುದರಿಂದ ಈಗ ವಸ್ತುತಃ ಅಮೆರಿಕ ಸರ್ಕಾರ ತಾಂತ್ರಿಕವಾಗಿ ಖರ್ಚು ನಿಭಾವಣೆಗೆ ಚಿಕ್ಕಾಸು ಕೂಡ ಇಲ್ಲದ ಸ್ಥಿತಿಗೆ ಮುಟ್ಟಿತು.
ಸೆನೆಟ್ನಲ್ಲಿ ಡೆಮೋಕ್ರಾಟ್ ಸದಸ್ಯರು ದಾಖಲೆ ಇಲ್ಲದ ವಲಸೆಗಾರರಿಗೆ ರಕ್ಷಣೆ ನೀಡುವುದನ್ನು ಮಧ್ಯಂತರ ಕ್ರಮವಾಗಿ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸುವ ಮೂಲಕ ಒಪ್ಪಂದ ಸಾಧ್ಯತೆಯನ್ನು ಕೊಂದುಹಾಕಿದರು ಎಂದು ಸರ್ಕಾರದ ವಕ್ತಾರೆ ಸಾರಾ ಸ್ಯಾಂಡರ್ಸ್ ಹೇಳಿದರು. ಸರ್ಕಾರ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿದುದರ ಹೊಣೆಗಾರಿಕೆ ಸೆನೆಟ್ ಡೆಮೋಕ್ರಾಟ್ ಸದಸ್ಯರದು ಎಂದು ಅವರು ಇದಕ್ಕೆ ಮುನ್ನ ಟ್ರಂಪ್ ಅವರನ್ನು ಭೇಟಿ ಮಾಡಿದ್ದ ನ್ಯೂಯಾರ್ಕ್ ಸೆನೆಟರ್ ಅಲ್ಪಸಂಖ್ಯಾತ ನಾಯಕ ಚುಕ್ ಶೂಮರ್ ಅವರನ್ನು ಉಲ್ಲೇಖಿಸಿ ಘೋಷಿಸಿದರು.

2018: ನವದೆಹಲಿ: ಪಕ್ಷದ ೨೦ ಮಂದಿ ಶಾಸಕರನ್ನು ಅನರ್ಹಗೊಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿದ ಚುನಾವಣಾ ಆಯೋಗದ ಕ್ರಮಸಂವಿಧಾನಬಾಹಿರ ಎಂಬುದಾಗಿ ಬಣ್ಣಿಸಿದ ಆಮ್ ಆದ್ಮಿ ಪಕ್ಷವು (ಆಪ್) ತನ್ನ ನಿಲುವನ್ನು ವಿವರಿಸಲು ಅವಕಾಶ ನೀಡುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಮನವಿ ಮಾಡಿತು. ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜೊತೆಗೆ ಪಕ್ಷದ ಶಾಸಕರು ಸಭೆ ನಡೆಸಿದ ಬಳಿಕತಮ್ಮ ಪರವಾದ ಸಾಕ್ಷ್ಯಾಧಾರಗಳನ್ನು ಹಾಜರು ಪಡಿಸಲು ಶಾಸಕರು ರಾಷ್ಟ್ರಪತಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯ ಹೇಳಿದರು. ‘ಪ್ರಕರಣದಲ್ಲಿ ವಿಚಾರಣೆಯೇ ನಡೆದಿಲ್ಲ. ನಮ್ಮ ನಿಲುವನ್ನು ವಿವರಿಸಲು ನಮಗೆ ಅವಕಾಶವನ್ನೇ ಕೊಟ್ಟಿಲ್ಲ. ನಮ್ಮ ಅಭಿಪ್ರಾಯವನ್ನೂ ಆಲಿಸುವಂತೆ ನಾವು ರಾಷ್ಟ್ರಪತಿ ಅವರಿಗೆ ಮನವಿ ಮಾಡುತ್ತಿದ್ದೇವೆ. ಶಾಸಕರು ರಾಷ್ಟ್ರಪತಿಯರನ್ನು ಭೇಟಿ ಕೂಡಾ ಮಾಡಲಿದ್ದಾರೆ ಎಂದು ಸಿಸೋಡಿಯ ನುಡಿದರು.  ಸಂಸದೀಯ ಕಾರ್ಯದರ್ಶಿಗಳಾಗಿ ಲಾಭದಾಯಕ ಹುದ್ದೆಗಳನ್ನು ಹೊಂದಿರುವುದಕ್ಕಾಗಿ ೨೦ ಮಂದಿ ಆಪ್ ಶಾಸಕರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗವು ಜನವರಿ 19ರ ಶುಕ್ರವಾರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಶಿಫಾರಸು ಮಾಡಿತ್ತು. ಚುನಾವಣಾ ಆಯೋಗದ ಶಿಫಾರಸಿಗೆ ರಾಷ್ಟ್ರಪತಿ  ಬದ್ಧರಾಗಬೇಕಾಗುತ್ತದೆ.  ‘ರಾಜಧಾನಿ ನಗರದಲ್ಲಿ ನಾವು ನಡೆಸುತ್ತಿರುವ ಪ್ರಾಮಾಣಿಕ ಕೆಲಸಕ್ಕಾಗಿ ನಮ್ಮ ಸರ್ಕಾರವನ್ಜು ಉದ್ದೇಶಪೂರ್ವಕವಾಗಿ ಬಲಿಪಶು ಮಾಡಲಾಗುತ್ತಿದೆ ಎಂದು ಸಿಸೋಡಿಯ ಆಪಾದಿಸಿದರು. ಶಾಸಕರನ್ನು ಅನರ್ಹಗೊಳಿಸಲು ಶಿಫಾರಸು ಮಾಡಿದ ನಿರ್ಧಾರಕ್ಕಾಗಿ ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದ ಆಪ್, ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗದ ಮುಖ್ಯಸ್ಥ ಅಚಲ್ ಕುಮಾರ್ ಜೋತಿ ಅವರ ಕೊಡುಗೆ ಎಂದು ಹೇಳಿತು.   ೨೦ ಮಂದಿ ಆಪ್ ಶಾಸಕರ ಅನರ್ಹತೆಯು ಮೋದಿಗೆ ಅವರ ಕೊಡುಗೆ. ಕೊಡುಗೆಗೆ ಕಾರಣ ಏನು? ಇದನ್ನು ಏಕೆ ನೀಡಲಾಗಿದೆ? ಆಮ್ ಆದ್ಮಿ ಪಕ್ಷ ಮತ್ತು ರಾಷ್ಟ್ರ ಇದನ್ನು ತಿಳಿಯಬಯಸಿದೆ ಎಂದು ಆಪ್ ನಾಯಕ ಗೋಪಾಲ್ ರೈ ಹೇಳಿದರು.  ರಾಷ್ಟ್ರದ ಪ್ರತಿಯೊಬ್ಬನ ಮನಸ್ಸಿನಲ್ಲಿ ಒಂದೇ ಒಂದು ಪ್ರಶ್ನೆ ಇದೆ: ನಿವೃತ್ತಿ ಹೊಂದಲು ಕೇವಲ ದಿನ ಇರುವಾಗ ಇಂತಹ ನಿರ್ಧಾರ ಕೈಗೊಳ್ಳುವ ಅಗತ್ಯ ಅವರಿಗೆ ಏನಿತ್ತು?’ ಎಂದು ರೈ ಪ್ರಶ್ನಿಸಿದರು. ಮೋದಿ ಅವರು ಗುಜರಾತಿನ ಮುಖ್ಯಮಂತ್ರಿ ಆಗಿದ್ದಾಗ ಜೋತಿ ಅವರು ಅಲ್ಲಿನ ಪ್ರಿನ್ಸಿಪಲ್ ಸೆಕ್ರೆಟರಿ ಆಗಿದ್ದರು ಮತ್ತು ಮೋದಿ ಅವರ ಅತ್ಯಂತ ನಿಕರ ಅಧಿಕಾರಿಯಾಗಿದ್ದರು ಎಂದು ರೈ ಹೇಳಿದರು. ಚುನಾವಣಾ ಆಯೋಗದ ಮುಂದೆ ಹಾಜರಾಗಲು ಆಪ್ ಶಾಸಕರಿಗೆ ಹಲವಾರು ಅವಕಾಶಗಳನ್ನು ನೀಡಲಾಗಿತ್ತು ಎಂಬುದನ್ನು ತಳ್ಳಿಹಾಕಿದ ಆಪ್ ನಾಯಕ, ಮಾಧ್ಯಮದಲ್ಲಿ ಸುಳ್ಳುಗಳನ್ನು ಹರಿಯಬಿಡಲಾಗುತ್ತಿದೆ. ಚುನಾವಣಾ ಆಯೋಗ ನೀಡಿದ ಎಲ್ಲ ನೋಟಿಸುಗಳಿಗೂ ಆಪ್ ವಕೀಲರು ಉತ್ತರ ನೀಡಿದ್ದಾರೆ. ಬ್ರಿಟಿಷರ ಆಡಳಿತಾವಧಿಯಲ್ಲೂ ಶಿಕ್ಷೆ ಕೊಡುವ ಮುನ್ನ ಜನರ ವಿಚಾರಣೆ ನಡೆಸಲಾಗುತ್ತಿತ್ತು ಎಂದು ಎಂದು ಅವರು ನುಡಿದರು. ‘೨೦೧೭ರ ಮಾರ್ಚ್ ಬಳಿಕ ಆಪ್ ಶಾಸಕರಿಗೆ ಚುನಾವಣಾ ಆಯೋಗವು ವಿಚಾರಣೆಯ ದಿನಾಂಕಗಳನ್ನೇ ನೀಡಿರಲಿಲ್ಲ. ಈಗ ದಿಢೀರನೆ ಚುನಾವಣಾ ಆಯೋಗದ ಆದೇಶವಾಗಿದೆ ಎಂದು ಅವರು ಹೇಳಿದರು.  ೨೦೧೫ರ ಜೂನ್ ತಿಂಗಳಲ್ಲಿ ಹಿಂದೂ ಕಾನೂನುಕೋಶದ ಸದಸ್ಯರ ವಕೀಲ ಪ್ರಶಾಂತ ಪಟೇಲ್ ಅವರ ದೂರಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ರಾಷ್ಟ್ರಪತಿಯವರಿಗೆ ತನ್ನ ಅಭಿಪ್ರಾಯವನ್ನು ನೀಡಿತ್ತು. ಪ್ರಶಾಂತ ಪಟೇಲ್ ಅವರು  ಸಂಸದೀಯ ಕಾರ್ಯದರ್ಶಿಗಳಾಗಿ ಮಾಡಿದ ನೇಮಕಾತಿ ಅಕ್ರಮ ಎಂದು ದೂರಿ ಆಗಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೂರು ಸಲ್ಲಿಸಿದ್ದರು.  ಚುನಾವಣಾ ಆಯೋಗದ ನಿರ್ಧಾರವನ್ನು ಅನುಸರಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಾಯಿಸಿದವು.  ಚುನಾವಣಾ ಆಯೋಗದ ಶಿಫಾರಸು ವಿ ಆಪ್ ಶಾಸಕರಿಗೆ ಮಧ್ಯಂತರ ಪರಿಹಾರ ಒದಗಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು.

2018: ಗುರುಗ್ರಾಮ: ೧೨ನೇ ತರಗತಿಯ ವಿದ್ಯಾರ್ಥಿಯೊಬ್ಬ ಖಾಸಗಿ ಶಾಲೆಯೊಂದರ ಪ್ರಾಂಶುಪಾಲೆಯನ್ನು ಅವರ ಕೊಠಡಿಯಲ್ಲೇ ಗುಂಡಿಟ್ಟು ಕೊಂದ ಘಟನೆ ಹರಿಯಾಣದ ಯಮುನಾನಗರದಲ್ಲಿ ಘಟಿಸಿತು. ಇತ್ತೀಚೆಗಷ್ಟೇ ೧೮ ವರ್ಷಗಳನ್ನು ಪೂರೈಸಿದ್ದ ವಿದ್ಯಾರ್ಥಿ ಈದಿನ ಮಧ್ಯಾಹ್ನ ಸ್ವಾಮಿ ವಿವೇಕಾನಂದ ಸ್ಕೂಲ್ ಪ್ರಾಂಶುಪಾಲೆ ರಿತು ಛಾಬ್ರಾ ಅವರ ಕೊಠಡಿಯೊಳಕ್ಕೆ ತನ್ನ ತಂದೆಯ ಲೈಸೆನ್ಸ್ ಇದ್ದ ರಿವಾಲ್ವರನೊಂದಿಗೆ ತೆರಳಿ ಅವರ ಮೇಲಕ್ಕೆ ಗುಂಡು ಹಾರಿಸಿದ ಎಂದು ವರದಿಗಳು ತಿಳಿಸಿದವು. ಮೂರು ಬುಲೆಟ್ಗಳು ಪ್ರಾಂಶುಪಾಲೆ ಅವರಿಗೆ ತಾಗಿದವು. ತಲಾ ಒಂದೊಂದು ಬುಲೆಟ್ ಮುಖ ಮತ್ತು ಕೈಗೆ ತಾಗಿದರೆ ಮೂರನೆ ಬುಲೆಟ್ ಎದೆಗೆ ತಾಗಿ ಪ್ರಾಣಕ್ಕೇ ಮಾರಕವಾಯಿತು. ಬಳಿಕ ಆಸ್ಪತ್ರೆಯಲ್ಲಿ ಗಾಯಗಳ ಪರಿಣಾಮವಾಗಿ ಅವರು ಸಾವನ್ನಪ್ಪಿದರು ಎಂದು ಯಮುನಾ ನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕಲಿಯಾ ಹೇಳಿದರು. ಮಧ್ಯಾಹ್ನ ಪಾಲಕರು ಮತ್ತು ಶಿಕ್ಷಕರ ಸಭೆಯ ಸಲುವಾಗಿ ಕೆಲವು ವಿದ್ಯಾರ್ಥಿಗಳು ತಮ್ಮ ಪಾಲಕರೊಂದಿಗೆ ಸ್ಕೂಲ್ ಕಚೇರಿಯ ಒಳಗಿದ್ದರು. ವಿದ್ಯಾರ್ಥಿ ತನ್ನ ತಂದೆಯ ರಿವಾಲ್ವರನ್ನು ಹಿಡಿದುಕೊಂಡು ಪ್ರಾಂಶುಪಾಲರ ಕೊಠಡಿಗೆ ಹೋದವನೇ ಗುಂಡು ಹಾರಿಸಿದ. ಪಾಲಕರಲ್ಲೊಬ್ಬರು ಸಿಬ್ಬಂದಿಯ ನೆರವಿನೊಂದಿಗೆ ವಿದ್ಯಾರ್ಥಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು ಎಂದು ಕಲಿಯಾ ನುಡಿದರು. ವಿದ್ಯಾರ್ಥಿ ಕಲಿಯುವಿಕೆಯಲ್ಲಿ ಹಿಂದುಳಿದಿದ್ದ ಮತ್ತು ಅದಕ್ಕಾಗಿ ಪ್ರಾಂಶುಪಾಲರು ಅನೇಕ ಬಾರಿ ಈತನನ್ನು ನಿಂದಿಸಿದ್ದರು. ಹಿನ್ನೆಲೆಯಲ್ಲೇ ಪ್ರಾಂಶುಪಾಲೆ ಛಾಬ್ರಾ ಅವರ ವಿರುದ್ಧ ವಿದ್ಯಾರ್ಥಿ ದ್ವೇಷ ಹೊಂದಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಕಲಿಯಾ ಹೇಳಿದರು. ವಿದ್ಯಾರ್ಥಿಯ ಜೊತೆಗೆ ವಿದ್ಯಾರ್ಥಿಯ ತಂದೆಯ ವಿರುದ್ಧವೂ ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲು ಯತ್ನಿಸಲಾಗುತ್ತಿದೆ. ಕೊಲೆ ಕೃತ್ಯದ ಬೆನ್ನಲ್ಲೇ ಫೈನಾನ್ಷಿಯರ್ ಆಗಿರುವ ವಿದ್ಯಾರ್ಥಿಯ ತಂದೆ ತಲೆಮರೆಸಿಕೊಂಡಿದ್ದಾನೆ ಎಂದು ಕಲಿಯಾ  ನುಡಿದರು.

2018: ನವದೆಹಲಿ: ಗಣ್ಯರ ಪರಮಾಣು ಗುಂಪಿಗೆ ಭಾರತದ ಸೇರ್ಪಡೆಯು  ರಾಷ್ಟ್ರವು ಅನುಸರಿಸುತ್ತಿರುವ ಬಿಗಿ ಅಣ್ವಸ್ತ್ರ ಪ್ರಸರಣ ನಿರೋಧ ಬದ್ಧತೆಯನ್ನು ಮತ್ತೆ ದೃಢಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ‘ಆಸ್ಟ್ರೇಲಿಯಾ ಗ್ರೂಪ್(ಎಜಿ)’ ಸದಸ್ಯನಾಗಿ ಭಾರತದ ಸೇರ್ಪಡೆಯ ಹಿನ್ನೆಲೆಯಲ್ಲಿ ಪ್ರಧಾನಿ ಮಾತನ್ನು ಹೇಳಿದ್ದಾರೆ. ಆಸ್ಟ್ರೇಲಿಯಾ ಗ್ರೂಪ್ ಗೆ ಭಾರತದ ಸೇರ್ಪಡೆಯು ಅಣ್ವಸ್ತ್ರ ಪ್ರಸರಣ ನಿಷೇಧದ ಕ್ಷೇತ್ರದಲ್ಲಿ ರಾಷ್ಟ್ರದ ವರ್ಚಸ್ಸನ್ನು ವೃದ್ದಿಸಲಿದೆ ಮತ್ತು ನಿರ್ಣಾಯಕ ತಂತ್ರಜ್ಞಾನವನ್ನು ಪಡೆಯಲು ಭಾರತಕ್ಕೆ ನೆರವಾಗಲಿದೆ ಎಂದು ನಿರೀಕ್ಷಿಸಲಾಯಿತು. ‘ಆಸ್ಟ್ರೇಲಿಯ ಮತ್ತು ರಫ್ತು ನಿಯಂತ್ರಣ ಸಂಬಂಧಿತ ಆಸ್ಟ್ರೇಲಿಯಾ ಸಮೂಹದ ಇತರ ಸದಸ್ಯರಿಗೆ, ಸಮೂಹಕ್ಕೆ ಭಾರತದ ಪ್ರವೇಶವನ್ನು ಬೆಂಬಲಿಸಿದ್ದಕ್ಕಾಗಿ ನಾನು ಧನ್ಯವಾದ ಸಲ್ಲಿಸುವೆ ಎಂದು ಮೋದಿ ಟ್ವೀಟ್ ಮಾಡಿದರು. ಕಳೆದ ಎರಡು ವರ್ಷಗಳಲ್ಲಿ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (ಎಟಿ ಸಿಆರ್), ವಾಸ್ಸೆನಾರ್ ವ್ಯವಸ್ಥೆ ಮತ್ತು ಆಸ್ಟ್ರೇಲಿಯಾ ಗ್ರೂಪ್ಗಳಲ್ಲಿ ಭಾರತವು ಸದಸ್ಯತ್ವ ಪಡೆದಿರುವುದು ರಾಷ್ಟ್ರದ ಅಣ್ವಸ್ತ್ರ ಪ್ರಸರಣ ನಿರೋಧ ಕುರಿತ ನಮ್ಮ ವಿಶ್ವಾಸಾರ್ಹತೆ ಮತ್ತು ಜಾಗತಿಕ ಶಾಂತಿ ಮತ್ತು ಭದ್ರತೆ ಬಗ್ಗೆ ನಮಗಿರುವ ಬದ್ಧತೆಯನ್ನು ಮತ್ತೆ ದೃಢಪಡಿಸಿದೆ ಎಂದು ಅವರು ನುಡಿದರು. ಭಾರತ ಈಗ ಅಣ್ವಸ್ತ್ರ ಪ್ರಸರಣ ನಿರೋಧ ಆಡಳಿತದ ನಾಲ್ಕು ಸಂಸ್ಥೆಗಳ ಪೈಕಿ ಕ್ಷಿಪಣಿ ತಂತ್ರಜ್ಞಾನ ಆಡಳಿತ (ಎಂ ಟಿ ಸಿಆರ್), ವಾಸ್ಸ್ಸೆನಾರ್ ವ್ಯವಸ್ಥೆ (ಡಬ್ಲ್ಯೂ ) ಮತ್ತು ಆಸ್ಟ್ರೇಲಿಯಾ ಗ್ರೂಪ್ (ಎಜಿ) ಮೂರರ ಸದಸ್ಯನಾಗಿದೆ. ಬಾಕಿ ಉಳಿದಿರುವ ಏಕೈಕ ಸಂಸ್ಥೆ ಎಂದರೆ ಪರಮಾಣು ಸರಬರಾಜುದಾರರ ಸಮೂಹ (ಎನ್ ಎಸ್ ಜಿ) ಮಾತ್ರ ಎಂದು ಪ್ರಧಾನಿ ಹೇಳಿದರು.

2017: ನವದೆಹಲಿ: ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಬರಾಕ್ ಒಬಾಮ ಕೆಳಗಿಳಿದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೇರುವ ಹೊತ್ತಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ತಾಣದಲ್ಲಿ ಒಬಾಮ ನಂತರ ಅತೀ ಹೆಚ್ಚು ಹಿಂಬಾಲಕರಿರುವ ಪ್ರಭಾವಿ ನಾಯಕ ಎಂದೆನಿಸಿಕೊಂಡರು. ಸಾಮಾಜಿಕ ತಾಣಗಳಾದ ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಮತ್ತು ಗೂಗಲ್ ಪ್ಲಸ್ ನಲ್ಲಿ ಮೋದಿಯವರಿಗೇ ಅತೀ ಹೆಚ್ಚು ಹಿಂಬಾಲಕರಿದ್ದಾರೆ.  2009ರಲ್ಲಿ ಟ್ವಿಟರ್ ಖಾತೆ ತೆರಿದಿದ್ದ ಪ್ರಧಾನಿ ಮೋದಿಯವರಿಗೆ ಇಲ್ಲಿ 2.65 ಕೋಟಿ ಹಿಂಬಾಲಕರಿದ್ದಾರೆ. ಅದೇ ವೇಳೆ ಫೇಸ್ಬುಕ್ನಲ್ಲಿ  3.92 ಕೋಟಿ ಹಿಂಬಾಲಕರಿದ್ದಾರೆ. ಏತನ್ಮಧ್ಯೆ , ಒಬಾಮ ಅವರಿಗೆ 8.07 ಕೋಟಿ ಹಿಂಬಾಲಕರಿದ್ದು, ಮೋದಿಯವರಿಗಿಂತ ಹೆಚ್ಚು ಹಿಂಬಾಲಕರಿರುವ ಏಕೈಕ ರಾಜಕಾರಣಿಯಾಗಿದ್ದಾರೆ. ಟ್ವೀಟ್ಗಳಿಂದಲೇ ಸದಾ ಸುದ್ದಿಯಲ್ಲಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿಯವರಿಗಿಂತ ಕಡಿಮೆ ಹಿಂಬಾಲಕರನ್ನು ಹೊಂದಿದ್ದಾರೆಸಾಮಾಜಿಕ ತಾಣಗಳಲ್ಲಿ ಮೋದಿಯವರ ಹಿಂಬಾಲಕರ ಸಂಖ್ಯೆ ಹೀಗಿದೆ: ಟ್ವಿಟರ್ : 26.5 ಮಿಲಿಯನ್, ಫೇಸ್ಬುಕ್ :39.2 ಮಿಲಿಯನ್,  ಗೂಗಲ್ ಪ್ಲಸ್ : 3.2  ಮಿಲಿಯನ್, ಲಿಂಕ್ಡ್ ಇನ್ :1.99 ಮಿಲಿಯನ್, ಇನ್ಸ್ಟಾಗ್ರಾಂ :5.8  ಮಿಲಿಯನ್, ಯೂಟ್ಯೂಬ್ :5.91  ಲಕ್ಷ.
2017: ವಾಷಿಂಗ್ಟನ್: ವಾಷಿಂಗ್ಟನ್ನಿನ ಸಂಸತ್ ಭವನದ ವೆಸ್ಟ್ ಫ್ರಂಟಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಅಮೆರಿಕದ 45ನೇ ಅಧ್ಯಕ್ಷರಾಗಿ 70 ವರ್ಷದ ಡೊನಾಲ್ಡ್ ಟ್ರಂಪ್ ಶುಕ್ರವಾರ, 20ನೇ ಜನವರಿ 2017ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೂಲಕ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಯುಗ ಆರಂಭವಾಯಿತು.  ಅಮೆರಿಕದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿ ಜಾನ್ ರಾಬರ್ಟ್ ಅವರು ಡೊನಾಲ್ಡ್ ಟ್ರಂಪ್ಅವರಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.  ಅಮೆರಿಕದ ಉಪಾಧ್ಯಕ್ಷರಾಗಿ ಮೈಕೆಲ್ ಪೆನ್ಸ್ ಸಹ ಪ್ರಮಾಣ ವಚನ ಸ್ವೀಕರಿಸಿದರು.  ಪೆನ್ಸ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪೆನ್ಸಿಲ್ವೇನಿಯಾ ಅವೆನ್ಯೂನಿಂದ ಶ್ವೇತಭವನಕ್ಕೆ ಪರೇಡ್ನಲ್ಲಿ ತೆರಳಿದರು.
2017: ನವದೆಹಲಿ: ಜಲ್ಲಿಕಟ್ಟು ಪರವಾಗಿ ತಮಿಳುನಾಡಿನಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ
ಕೇಂದ್ರ ಸರ್ಕಾರ ಮಣಿದಿದ್ದು, ಜಲ್ಲಿಕಟ್ಟು ನಿಷೇಧ ತೆರವುಗೊಳಿಸುವ ಸಂಬಂಧ ತಮಿಳುನಾಡು ಸರ್ಕಾರ ಕಳುಹಿಸಿದ್ದ ಕರಡು ಸುಗ್ರೀವಾಜ್ಞೆಗೆ ಕಾನೂನು, ಪರಿಸರ ಮತ್ತು ಸಂಸ್ಕೃತಿ ಸಚಿವಾಲಯಗಳು ಒಪ್ಪಿಗೆ ಸೂಚಿಸಿದವು.  ಸುಗ್ರೀವಾಜ್ಞೆಯನ್ನು ಕಾನೂನು ಸಚಿವಾಲಯ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಳುಹಿಸಿತು.. ರಾಷ್ಟ್ರಪತಿಗಳ ಅಂಕಿತದ ಬಳಿಕ ಸುಗ್ರೀವಾಜ್ಞೆ ಜಾರಿಗೆ ಬರಲಿದ್ದು, ಜಲ್ಲಿಕಟ್ಟಿನ ಮೇಲಿನ ನಿಷೇಧ ತೆರವಾಗಲಿದೆ. ಸುಗ್ರೀವಾಜ್ಞೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈನ ಮರೀನಾ ಬೀಚ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರು ಸಂಭ್ರಮಾಚರಣೆ ನಡೆಸಿದರು.  ಇದಕ್ಕೆ ಮುನ್ನ ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರು ಒಂದು ಅಥವಾ ಎರಡು ದಿನಗಳ ಒಳಗಾಗಿ ಜಲ್ಲಿಕಟ್ಟು ನಿಷೇಧ ತೆರವುಗೊಳಿಸಿ ಸುಗ್ರೀವಾಜ್ಞೆ ಜಾರಿಗೆ ಬರಲಿದೆ ಎಂಬುದಾಗಿ ಭರವಸೆ ನೀಡಿದ್ದಲ್ಲದೆ, ತಾವೇ ಜಲ್ಲಿಕಟ್ಟಿ ಸಮಾರಂಭವನ್ನು ಉದ್ಘಾಟಿಸುವುದಾಗಿ ಹೇಳಿದ್ದರು. ನಿಮ್ಮ ಆಶಯದಂತೆ, ಅದು ಸಂಭವಿಸುತ್ತದೆ ಎಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ನಗರಕ್ಕೆ ವಾಪಸಾದ ಮುಖ್ಯಮಂತ್ರಿ, ಚೆನ್ನೈ ವಿಮಾನ ನಿಲ್ದಾಣದಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದರು.  ಜಲ್ಲಿಕಟ್ಟು ನಿಷೇಧದ ವಿರುದ್ಧ ತಮಿಳುನಾಡಿನಲ್ಲಿ ನಡೆದ ಭಾರಿ ಪ್ರತಿಭಟನೆಗಳ ಮಧ್ಯೆ, ಕೇಂದ್ರ ಸರ್ಕಾರ ಮಾಡಿದ ಮನವಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ಜಲ್ಲಿಕಟ್ಟು ನಿಷೇಧ ತೆರವಿಗೆ ಸಂಬಂಧಿಸಿದ ತನ್ನ ಅಂತಿಮ ತೀರ್ಪನ್ನು ಒಂದು ವಾರದ ಅವಧಿಗೆ ಮುಂದೂಡಿತು. ಜಲ್ಲಿಕಟ್ಟು (ಗೂಳಿ ಪಳಗಿಸುವ ಆಟ) ಕ್ರೀಡೆಯ ಮೇಲಿನ ನಿಷೇಧ ತೆರವುಗೊಳಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಕ್ರೀಡೆಗೆ ಬೆಂಬಲ ವ್ಯಕ್ತ ಪಡಿಸಿ ಸುಮಾರು 10,000ಕ್ಕೂ ಹೆಚ್ಚು ಮಂದಿ ಪ್ರತಿಭಟನಕಾರರು ಚೆನ್ನೈಯ ಮರೀನಾಬೀಚ್ನಲ್ಲಿ ಶಾಂತಿಯುತ ಪ್ರದರ್ಶನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈದಿನ ನೀಡಬೇಕಾಗಿದ್ದ ಅಂತಿಮ ತೀರ್ಪು ಮುಂದೂಡುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿತ್ತು. ಪೊಂಗಲ್ ಉತ್ಸವ ಕಾಲದಲ್ಲಿ ನಡೆಯುವ ಜಲ್ಲಿಕಟ್ಟು ಕ್ರೀಡೆಯ ಸಂದರ್ಭದಲ್ಲಿ ಗೂಳಿಗಳಿಗೆ ಚಿತ್ರಹಿಂಸೆ ನೀಡಲಾಗುವುದು ಎಂದು ಪ್ರಾಣಿ ಪ್ರಿಯರು ಆಪಾದಿಸಿದರೆ, ಜಲ್ಲಿಕಟ್ಟು ತಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂಬುದು ಪ್ರದರ್ಶನ ನಿರತ ಲಕ್ಷಾಂತರ ಮಂದಿಯ ಪ್ರತಿಪಾದನೆ.
2017: ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವರ್ಸಸ್ ಲೋಧಾ ಸಮಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಲಾದ ಅಮಿಕಸ್ ಕ್ಯೂರಿ (ಕೋರ್ಟ್ ಸಹಾಯಕರು) ನೀಡಿದ ಪಟ್ಟಿಯಿಂದ ಭಾರತೀಯ ಕಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಜನವರಿ 24ರಂದು ಸುಪ್ರೀಂಕೋರ್ಟ್ ಆಡಳಿತಗಾರರನ್ನು ನೇಮಕ ಮಾಡಲಿದೆ. ಅಮಿಕಸ್ ಕ್ಯೂರಿ ಅನಿಲ್ ದಿವಾನ್ ಮತ್ತು ಗೋಪಾಲ್ ಸುಬ್ರಮಣಿಯಂ ಅವರು ಬಿಸಿಸಿಐ ಆಡಳಿತಗಾರರನ್ನಾಗಿ ನೇಮಿಸಲು ಶಿಫಾರಸು ಮಾಡಿ ಸಲ್ಲಿಸಿರುವ ಹೆಸರುಗಳ ಪಟ್ಟಿಯನ್ನು ಸುಭದ್ರವಾಗಿ ಇರಿಸಲಾಗಿದೆ ಎಂದು ಸುಪ್ರಿಂಕೋರ್ಟ್ ತಿಳಿಸಿತು. ರೈಲ್ವೇ ಸರ್ವೀಸಸ್, ವಿಶ್ವ ವಿದ್ಯಾಲಯಗಳ ಸಂಘ (ಅಸೋಸಿಯೇಶನ್ ಆಫ್ ವಾರ್ಸಿಟಿ) ಅಸೋಸಿಯೇಟ್ ಸದಸ್ಯರನ್ನು ಗೌಣಗೊಳಿಸುವುದರ ವಿರುದ್ಧ ಸಲ್ಲಿಸಿದ ಮನವಿಯನ್ನು ಪರಿಶೀಲಿಸಲಾಗುವುದು ಎಂದೂ ಸುಪ್ರೀಂಕೋರ್ಟ್ ಹೇಳಿತು. ರಾಜ್ಯ ಕ್ರಿಕೆಟ್ ಮಂಡಳಿಗಳು ಮತ್ತು ಬಿಸಿಸಿಐಯಲ್ಲಿ 9 ವರ್ಷಗಳ ಕಾಲ ಇದ್ದವರು ಹುದ್ದೆಯಲ್ಲಿ ಮುಂದುವರೆಯದಂತೆ ಅನರ್ಹಗೊಳಿಸಿ ಮಾಡಲಾಗಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಪರಿಷ್ಕರಿಸಿತು. ರಾಜ್ಯ ಮಂಡಳಿಗಳು ಅಥವಾ ಬಿಸಿಸಿಐಯಲ್ಲಿನ ಪದಾಧಿಕಾರಿಗಳ ಅಧಿಕಾರಾವಧಿಯನ್ನು ಸಂಚಿತವಾಗಿ (ಕ್ಯುಮುಲೇಟಿವ್) ಪರಿಗಣಿಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿತು. ಇದಕ್ಕೆ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವರ್ಸಸ್ ಲೋಧಾ ಸಮಿತಿ ಪ್ರಕರಣಕ್ಕೆ ಹೊಸ ತಿರುವು ನೀಡಿದ ಅಟಾರ್ನಿ ಜನರಲ್ ಆಫ್ ಇಂಡಿಯಾ ಮುಕುಲ್ ರೋಹ್ಟಗಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರುವ ಸಲುವಾಗಿ ನ್ಯಾಯಮೂರ್ತಿ ಲೋಧಾ ಸಮಿತಿ ಸೂಚಿಸಿದ ಕ್ರಾಂತಿಕಾರಿ ಬದಲಾವಣೆಗಳನ್ನು ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿದರು. ಬಿಸಿಸಿಐಗೆ ಆಡಳಿತಗಾರರಾಗಿ ಕೆಲವರ ಹೆಸರುಗಳನ್ನು ಸುಪ್ರೀಂಕೋರ್ಟ್ ಈದಿನ ಪ್ರಕಟಿಸಬೇಕಿತ್ತು. ಅದಕ್ಕೆ ಮುನ್ನ ಪ್ರಕರಣಕ್ಕೆ ನಾಟಕೀಯ ತಿರುವು ನೀಡಿದ ರೋಹ್ಟಗಿ ಅವರು ಲೋಧಾ ಸಮಿತಿ ಸುಧಾರಣೆಗಳ ಜಾರಿಯ ಮುನ್ನ ವಿಸõ ಚರ್ಚೆ ಆಗಬೇಕಾಗಿದೆ ಮತ್ತು ಅದನ್ನು ವಿಶಾಲ ಪೀಠಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
2017: ಸರವಕ್(ಮಲೇಷ್ಯಾ): ಸ್ಟಾರ್ ಷಟ್ಲರ್ ಸೈನಾ ನೆಹ್ವಾಲ್ ಮಲೇಷ್ಯಾ ಮಾಸ್ಟರ್ಸ್ ಜಿಪಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಇಂಡೋನೇಷ್ಯಾದ ಫಿತ್ರೀನಿ ಫಿತ್ರೀನಿ ಅವರನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದರು. ಲಂಡನ್ ಒಲಿಂಪಿಕ್ಸ್ ಕಂಚಿನ ಪದ ವಿಜೇತೆ ಸೈನಾ ನೆಹ್ವಾಲ್ 40 ನೇ ಶ್ರೇಯಾಂಕದ ಫಿತ್ರೀನಿಯನ್ನು ಕೇವಲ 40 ನಿಮಿಷಗಳ ಹಣಾಹಣಿಯಲ್ಲಿ 21-15, 21-14 ಗೇಮ್ ಗಳ ಅಂತರದಿಂದ ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದರು. ಸೈನಾ ನೆಹ್ವಾಲ್ ಸೆಮಿಫೈನಲ್ನಲ್ಲಿ ಹಾಂಗ್ ಕಾಂಗ್ ಯಿಪ್ ಪುಯಿ ಯಿನ್ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ 19ನೇ ಶ್ರೇಯಾಂಕದ ಅಜಯ್ ಜಯರಾಮ್ ಇಂಡೋನೇಷ್ಯಾದ ಸಿನಿಸುಕ ಗಿಂಟಿಂಗ್ ಅವರ ವಿರುದ್ಧ 21-13, 21-8 ಗೇಮ್ ಗಳ ಅಂತರದಿಂದ ಸೋಲನುಭವಿಸುವ ಮೂಲಕ ಟೂರ್ನಿಯಿಂದ ಹೊರಬಿದ್ದರು.
2017: ನ್ಯೂಯಾರ್ಕ್: ಅತಿ ಹೆಚ್ಚು ಭದ್ರತೆ ಇರುವ ಜೈಲಿನಿಂದ ಎರಡು ಬಾರಿ ತಪ್ಪಿಸಿಕೊಂಡು ಜಗತ್ತಿನಾದ್ಯಂತ ಸುದ್ದಿಯಾಗಿದ್ದ ಮೆಕ್ಸಿಕೋದ ಕುಖ್ಯಾತ ಡ್ರಗ್ ಡೀಲರ್ ಎಲ್ ಚಾಪೋ ಗುಜ್ ಮನ್ನನ್ನು ಗುರುವಾರ ಅಮೆರಿಕದ ವಶಕ್ಕೆ ಒಪ್ಪಿಸಲಾಯಿತು. ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣದ ವಿಚಾರಣೆಗಾಗಿ ಎಲ್ ಚಾಪೋನನ್ನು ಹಿಂದಿನ ದಿನ ಮಧ್ಯರಾತ್ರಿ ವಿಶೇಷ ವಿಮಾನದಲ್ಲಿ ನ್ಯೂಯಾರ್ಕ್ಗೆ ಕರೆತರಲಾಯಿತು.. ಆತನನ್ನು ನ್ಯೂಯಾರ್ಕ್ ಜೈಲಿಗೆ ಕರೆದೊಯ್ಯಲಾಗಿದ್ದು, ಬ್ರೂಕ್ಲೈನ್ ಫೆಡರಲ್ ಕೋರ್ಟ್ಗೆ ಹಾಜರು ಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಡೋನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಹಿಂದಿನ ದಿನ ಮಹತ್ವದ ಬೆಳವಣಿಗೆ ಘಟಿಸಿತು. ಮಾದಕ ವಸ್ತು ಕಳ್ಳಸಾಗಣೆ ಸಂಬಂಧ ಎಲ್ ಚಾಪೋ ವಿರುದ್ಧ ಅಮೆರಿಕದ ವಿವಿಧ ನಗರಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು ಎಲ್ ಚಾಪೋನನ್ನು ಹಸ್ತಾಂತರಿಸುವಂತೆ ಅಮೆರಿಕ ಬಹುದಿನಗಳಿಂದ ಮೆಕ್ಸಿಕೋಗೆ ಬೇಡಿಕೆ ಸಲ್ಲಿಸುತ್ತಿತ್ತು. ಮೆಕ್ಸಿಕೋ ಯಾವುದೇ ಮುನ್ಸೂಚನೆ ನೀಡದೆ ಎಲ್ ಚಾಪೋನನ್ನು ಅಮೆರಿಕದ ವಶಕ್ಕೆ ಒಪ್ಪಿಸಿರುವ ಕುರಿತು ಪ್ರಕಟಣೆ ಹೊರಡಿಸಿತು. ಎಲ್ ಚಾಪೋ 2001ರಲ್ಲಿ ಮೊದಲ ಬಾರಿಗೆ ಜೈಲಿನಿಂದ ಪರಾರಿಯಾಗಿದ್ದ. ನಂತರ ಆತನನ್ನು ಬಂಧಿಸಲಾಗಿತ್ತು. ಈಗ 2015 ರಲ್ಲಿ ಸುಮಾರು 1 ಮೈಲಿ ದೂರದ ಸುರಂಗ ಕೊರೆದು ಅದರ ಮೂಲಕ ಪರಾರಿಯಾಗಿದ್ದ. ಇದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು ಮತ್ತು ಮೆಕ್ಸಿಕೋ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಜತೆಗೆ ಈತ ಮತ್ತೆ ಜೈಲಿನಿಂದ ಪರಾರಿಯಾಗದಂತೆ ಭದ್ರತೆ ಒದಗಿಸುವುದು ಹೇಗೆ ಎಂಬುದೇ ಜೈಲಿನ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿತ್ತು. ಹಾಗಾಗಿ ಅಮೆರಿಕದ ಮನವಿಯನ್ನು ಪುರಸ್ಕರಿಸಿರುವ ಮೆಕ್ಸಿಕೋ ಆತನನ್ನು ಅಮೆರಿಕದ ವಶಕ್ಕೆ ಒಪ್ಪಿಸುವ ಮೂಲಕ ನಿರಾಳವಾಯಿತು.
2017: ಲಖನೌ: ಸಮಾಜವಾದಿ ಪಕ್ಷವು 191 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವುದರೊಂದಿಗೆ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಮೊದಲೇ ಆಗುವುದೆಂದು ನಂಬಲಾಗಿದ್ದ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಣ ಮೈತ್ರಿ ಆರಂಭದಲ್ಲೇ ಮುಗ್ಗರಿಸಿದಂತೆ ಕಂಡು ಬಂದಿತು. ಸಮಾಜವಾದಿ ಪಕ್ಷದ ಪಟ್ಟಿಯಲ್ಲಿ ಕಾಂಗ್ರೆಸ್ ಹೊಂದಿರುವ ಹಲವಾರು ಕ್ಷೇತ್ರಗಳೂ ಸೇರ್ಪಡೆಯಾಗಿದ್ದು, ಮೈತ್ರಿ ಬಗ್ಗೆ ಸಂಶಯ ತಲೆಯೆತ್ತಿತು. ಪಟ್ಟಿಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆಗೆ ಕುಸ್ತಿಗೆ ಇಳಿದಿದ್ದ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಶಿವಪಾಲ್ ಯಾದವ್ ಅವರ ಹೆಸರೂ ಸೇರ್ಪಡೆಯಾಯಿತು.. ಶಿವಪಾಲ್ಗೆ ಜಸ್ವಂತ್ನಗರ ಟಿಕೆಟ್ ನೀಡಲಾಯಿತು. ಫೆಬ್ರುವರಿ 11ರಂದು ಮೊದಲ ಹಂತದ ಚುನಾವಣೆ ನಡೆಯಲಿರುವ 209 ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳು 191 ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ್ದವು. ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಮಾತುಕತೆ ವಿಫಲಗೊಂಡಿದೆ ಎಂದು ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಕಿರಣ್ಮೊಯ್ ನಂದಾ ಹೇಳಿದರು. ನಾವು ಅವರಿಗೆ 54 ಸ್ಥಾನಗಳ ಕೊಡುಗೆ ಮುಂದಿಟ್ಟೆವು. ಇನ್ನೂ 25 ಹೆಚ್ಚಿನ ಸ್ಥಾನಗಳನ್ನು ಕೊಡಲು ಬಯಸಿದ್ದೆವು. ಆದರೆ ನಮಗೆ ಈವರೆಗೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ಸ್ಪಂದನೆ ಬಂದಿಲ್ಲ. ಮಾತುಕತೆಯ ಮೇಜಿಗೆ ಈಗ ಕಾಂಗ್ರೆಸ್ ಬರುತ್ತಿಲ್ಲ ಎಂದು ನಂದಾ ನುಡಿದರು. ಏನಿದ್ದರೂ ಸಮಾಜವಾದಿ ಪಕ್ಷದ ಸಂಸದ ನರೇಶ ಅಗರ್ವಾಲ್ ಅವರು ನಂದಾ ಹೇಳಿಕೆಯನ್ನು ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು. ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ ಯಾದವ್ ಅವರು ಅಂತಿಮ ನಿರ್ಧಾರ ಕೈಗೊಳ್ಳುವರು ಎಂದು ಅಗರ್ವಾಲ್ ನುಡಿದರು. ಮಧ್ಯೆ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ರಾಜ್ ಬಬ್ಬರ್ ಅವರು ಈದಿನ  ದೆಹಲಿಗೆ ತೆರಳಿದರು. ಸಮಾಜವಾದಿ ಪಕ್ಷದ ಯಾವುದೇ ನಾಯಕರ ಜೊತೆಗೂ ಮಾತುಕತೆಗಳು ನಡೆದಿಲ್ಲ ಎಂದು ವರದಿಗಳು ಹೇದವು.  ಸಮಾಜವಾದಿ ಪಕ್ಷದ ಪಟ್ಟಿ ಪ್ರಕಟವಾದ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದ ಅವರು ಕಾಂಗ್ರೆಸ್ ಕಾರ್ಯಕರ್ತರ ಸ್ವಾಭಿಮಾನವನ್ನು ಬಲಿ ಕೊಟ್ಟು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
2017: ನವದೆಹಲಿ/ ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಬರಾಕ್ ಒಬಾಮ ಅವರು ತಮ್ಮ ಅಧಿಕಾರಾವಧಿಯ ಕೊನೆಯ ದಿನ ಅಮೆರಿಕ ಪ್ರಜೆಗಳಿಗೆ ಧನ್ಯವಾದ ಅರ್ಪಿಸಿ ಭಾವೋದ್ವೇಗದ ಬಹಿರಂಗ ಪತ್ರವನ್ನು ಬರೆದರು.  ಜೊತೆಗೆಪೌರತ್ವದ ಅನುದಿನದ ಚಟುವಟಿಕೆಗಳಲ್ಲಿಪಾಲ್ಗೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಿದರು.  ‘45ನೇ ಅಧ್ಯಕ್ಷರಿಗೆ ಅಧಿಕಾರ ಬಿಟ್ಟುಕೊಡುವ ಮುನ್ನ 44ನೇ ಅಧ್ಯಕ್ಷನಾಗಿ ನಿಮ್ಮ ಸೇವೆ ಮಾಡುವ ಗೌರವ ಕೊಟ್ಟದ್ದಕ್ಕಾಗಿ ನಿಮಗೆಲ್ಲರಿಗೂ ನನ್ನ ಒಂದು ಅಂತಿಮ ಧನ್ಯವಾದ ಹೇಳಬಯಸಿದ್ದೇನೆ. ಏಕೆಂದರೆ ಹುದ್ದೆಯಲ್ಲಿದ್ದ ಅವಧಿಯಲ್ಲಿ ನಾನೇನು ಕಲಿತಿದ್ದೇನೋ ಅದೆಲ್ಲವನ್ನೂ ನಾನು ನಿಮ್ಮಿಂದಲೇ ಕಲಿತಿದ್ದೇನೆ. ನೀವು ನನ್ನನ್ನು ಉತ್ತಮ ಅಧ್ಯಕ್ಷನನ್ನಾಗಿ ಮಾಡಿದಿರಿ. ನೀವು ನನ್ನನ್ನು ಉತ್ತಮ ಮನುಷ್ಯನನ್ನಾಗಿ ರೂಪಿಸಿದಿರಿ ಎಂದು ನಿರ್ಗಮಿಸುತ್ತಿರುವ ಮುಖ್ಯ ದಂಡನಾಯಕ ಬರೆದರು. ಒಬಾಮ ಅವರು ಪತ್ರದಲ್ಲಿ ಚಾರ್ಲಸ್ಟನ್ ಚರ್ಚ್ನಲ್ಲಿ ನಡೆದ ಹತ್ಯಾಕಾಂಡ, ಸಲಿಂಗ ಕಾಮವನ್ನು ಕಾನೂನುಬದ್ಧಗೊಳಿಸಿದ್ದು ಇತ್ಯಾದಿ ತಮ್ಮ ಅಧಿಕಾರಾವಧಿಯಲ್ಲಿನ ಪ್ರಮುಖ ಘಟನಾವಳಿಗಳನ್ನು ಪತ್ರದಲ್ಲಿ ನೆನಪಿಸಿದರು. ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಲಿ, ಪೌರತ್ವದ ಖುಷಿಯ ಚಟುವಟಿಕೆಗಳಿಗೆ ಬದ್ಧರಾಗಿ ಎಂದು ಅವರು ಪತ್ರದಲ್ಲಿ ಅಮೆರಿಕದ ಪ್ರಜೆಗಳನ್ನು ಒತ್ತಾಯಿಸಿದರು.

2017: ಧಾರವಾಡ: ಧಾರವಾಡ ಸಾಹಿತ್ಯ ಸಂಭ್ರಮಕ್ಕೆ ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ಚಾಲನೆ ನೀಡಿದರು. ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ, ನಾಡೋಜ ಚನ್ನವೀರ ಕಣವಿ ಸೇರಿ ಅನೇಕ ಗಣ್ಯರು ಸಾಕ್ಷಿಯಾದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ, ಜನಜೀವನ ಮತ್ತು ಸಂಸ್ಕೃತಿ ಕುರಿತಾದ 23 ಗೋಷ್ಠಿಗಳು ನಡೆಯಲಿವೆ. ಸಮ್ಮೇಳನ ಮೂರು ದಿನಗಳ ಕಾಲ ನಡೆಯಲಿದೆ.
2009: ಜಾರ್ಜ್ ಬುಶ್ ಅವರ ಎಂಟು ವರ್ಷಗಳ ಆಡಳಿತದ ಬಳಿಕ ಭಾರಿ ಬದಲಾವಣೆಗಾಗಿ ಹಪಹಪಿಸುತ್ತಿದ್ದ ಮತ್ತು ಆರ್ಥಿಕ ಮುಗ್ಗಟ್ಟಿನಿಂದ ಜರ್ಜರಿತವಾದ ಅಮೆರಿಕದಲ್ಲಿ, ಭರವಸೆಯ ಮಿಂಚು ಹರಿಸಿದ ಬರಾಕ್ ಒಬಾಮ ಅವರು ಈದಿನ ವಾಷಿಂಗ್ಟನ್ನಿನಲ್ಲಿ ದೇಶದ 44ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಇಲ್ಲಿನ ಕ್ಯಾಪಿಟೊಲ್ ಹಿಲ್ಲಿನಲ್ಲಿ ಮಧ್ಯಾಹ್ನ 12.35 ಗಂಟೆಗೆ ಸರಿಯಾಗಿ (ಭಾರತದ ಕಾಲಮಾನ ರಾತ್ರಿ 10.35 ಗಂಟೆ) ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಒಬಾಮ ಅವರಿಗೆ ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣವಚನ ಬೋಧಿಸಿದರು. ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ಹಿಡಿದಿದ್ದ ಬೈಬಲ್ ಮುಟ್ಟಿ ಒಬಾಮ ಅಧಿಕಾರ ಸ್ವೀಕರಿಸಿದರು. ಇದಕ್ಕೆ ಸ್ವಲ್ಪ ಮೊದಲು ಉಪಾಧ್ಯಕ್ಷ ಜೋಯ್ ಬಿಡೆನ್ ಅಧಿಕಾರ ಸ್ವೀಕರಿಸಿದರು. ಇದೇ ಪ್ರಥಮ ಬಾರಿಗೆ, ಆಫ್ರಿಕನ್-ಅಮೆರಿಕಾ ಸಂಜಾತ ಪ್ರಜೆಯೊಬ್ಬರು ಜಗತ್ತಿನ ಅತ್ಯಂತ ಪ್ರಭಾವಶಾಲಿ ಅಧಿಕಾರ ಸ್ಥಾನವಾದ ಶ್ವೇತಭವನ ಪ್ರವೇಶಿಸಿದರು. ಕೊರೆಯುವ ಚಳಿಯಲ್ಲೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ 20 ಲಕ್ಷಕ್ಕೂ ಅಧಿಕ ಮಂದಿ ಈ ಐತಿಹಾಸಿಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಾದರು.

2009: ಮಾಲೆಗಾಂವ್ ಸ್ಫೋಟ ಪ್ರಕರಣದ 11 ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ದೋಷಾರೋಪ ಪಟ್ಟಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಿತು. 2008ರ ಸೆಪ್ಟೆಂಬರ್ 29ರಂದು ನಡೆದಿದ್ದ ಈ ಸ್ಫೋಟಕ್ಕೆ ಏಳು ಮಂದಿ ಬಲಿಯಾಗಿ ಸುಮಾರು 70 ಜನ ಗಾಯಗೊಂಡಿದ್ದರು.

2009: 'ಚಿಂಗಾರಿ' ಹಾಗೂ 'ಚಿನಕುರುಳಿ' ಖ್ಯಾತಿಯ ಹಿರಿಯ ವ್ಯಂಗ್ಯಚಿತ್ರಕಾರ, ಲಲಿತಕಲಾ ಅಕಾಡೆಮಿ ಮಾಜಿ ಸದಸ್ಯ ಜಿ.ವೈ.ಹುಬ್ಳೀಕರ್ (68) ಅವರು ಕಿಡ್ನಿ ವೈಫಲ್ಯದಿಂದ ಬೆಂಗಳೂರಿನ ಸಂಜಯನಗರದ ನಾಗಶೆಟ್ಟಿಹಳ್ಳಿಯ ತಮ್ಮ ನಿವಾಸದಲ್ಲಿ ನಿಧನರಾದರು. ಅವರು 1964ರಿಂದ 1971ರವರೆಗೆ 'ಪ್ರಜಾವಾಣಿ' ಬಳಗದಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. 1994ರ ನಂತರ 'ಪ್ರಜಾವಾಣಿ' ದಿನಪತ್ರಿಕೆಯಲ್ಲಿ ಪ್ರತಿದಿನ 'ಚಿನಕುರುಳಿ' ವ್ಯಂಗ್ಯಚಿತ್ರವನ್ನು ಹಲವು ವರ್ಷಗಳ ಕಾಲ ನಿರಂತರವಾಗಿ ರಚಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಹುಬ್ಳೀಕರ್ ಅವರಿಗೆ ಬಂದಿದ್ದವು. ಮೃತರ ಅಂತ್ಯಕ್ರಿಯೆ ಸಂಜೆ ಹೆಬ್ಬಾಳದ ರುದ್ರಭೂಮಿಯಲ್ಲಿ ನಡೆಯಿತು.

2009: ಸ್ವ ಸಹಾಯ ಸಂಘಗಳ ಮೂಲಕ ರಾಜ್ಯದ ಗ್ರಾಮೀಣ ಪ್ರದೇಶದ ಆರ್ಥಿಕ ದುರ್ಬಲರಿಗೆ ಅತಿ ಹೆಚ್ಚು ಸಾಲ ವಿತರಿಸಿರುವ ವಿಜಯ ಬ್ಯಾಂಕ್‌ ನಬಾರ್ಡ್ ಪ್ರಶಸ್ತಿಗೆ ಆಯ್ಕೆಯಾಯಿತು. ರಾಜ್ಯದ 49344 ಸ್ವಸಹಾಯ ಗುಂಪು ಸೇರಿ ಒಟ್ಟು 67409 ಎಸ್‌ಎಚ್‌ಜಿ ಜತೆ ಸಂಪರ್ಕ ಹೊಂದಿ 355.82 ಕೋಟಿ ರೂ. ಸಾಲ ವಿತರಣೆಗೆ ನೆರವು ನೀಡಿರುವುದಕ್ಕಾಗಿ ವಿಜಯ ಬ್ಯಾಂಕ್ 2007-08ನೇ ಸಾಲಿನ ನಬಾರ್ಡ್ 3ನೇ ಹಾಗೂ ಧರ್ಮಸ್ಥಳ ಶಾಖೆ 2ನೇ ಬಹುಮಾನಕ್ಕೆ ಆಯ್ಕೆಯಾಯಿತು..

2008: ನವದೆಹಲಿಯ ವೈದ್ಯರ ತಂಡವೊಂದು ಚಳಿಗಾಲದಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚು ಎಂಬ ಸಂಗತಿಯನ್ನು ಬಹಿರಂಗಪಡಿಸಿತು. ಹೃದಯಾಘಾತಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 25ರಿಂದ ಜನವರಿ 25ರವರೆಗಿನ ಅವಧಿ ಅತಿ ಅಪಾಯಕಾರಿ, ಹಿಂದಿನ ವರ್ಷ ಈ ಅವಧಿಯಲ್ಲಿ ದೆಹಲಿಯ ಆಸ್ಪತ್ರೆಗಳಲ್ಲಿ ಹೃದ್ರೋಗಕ್ಕೆ ಸಂಬಂಧಿಸಿದ ರೋಗಿಗಳ ಪ್ರಮಾಣ ಶೇ 25ರಿಂದ 30ರಷ್ಟು ಹೆಚ್ಚಾಗಿತ್ತು ಎಂದು ವರದಿ ಹೇಳಿತು. ಚಳಿಗಾಲದಲ್ಲಿ ಹೃದಯ ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಹೃದಯದ ಮೇಲಿನ ಹೊರೆ ಹೆಚ್ಚುತ್ತದೆ. ಏಕೆಂದರೆ ಈ ಅವಧಿಯಲ್ಲಿ ರಕ್ತನಾಳಗಳು ದೇಹದ ಬಿಸಿ ಕಾಯ್ದುಕೊಳ್ಳಲು ಸಂಕುಚಿತವಾಗುತ್ತವೆ. ಜೊತೆಗೆ ಆಸ್ತಮಾ, ಫ್ಲೂನಂತಹ ಕಾಯಿಲೆಗಳು ಇದೇ ಋತುವಿನಲ್ಲಿ ಹೆಚ್ಚುತ್ತವೆ ಎನ್ನುತ್ತಾರೆ ಉಮ್ಕಲ್ ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಉಮೇಶ್ ಗುಪ್ತಾ. ಚಳಿಗಾಲದಲ್ಲಿ ದೇಹ ಬೆಚ್ಚಗಿಟ್ಟುಕೊಳ್ಳಲು ಹಲವಾರು ಮಂದಿ ಹೆಚ್ಚು ಮದ್ಯ ಸೇವಿಸುತ್ತಾರೆ. ಇದು ಸಹ ಹೃದಯದ ಮೇಲಿನ ಒತ್ತಡ ಹೆಚ್ಚಿಸುತ್ತದೆ. ಹಾಗಾಗಿ ಚಳಿಗಾಲದಲ್ಲಿ ಹೃದ್ರೋಗಿಗಳು ಹೊರಗಿನ ಚಟುವಟಿಕೆಗಳು, ವ್ಯಾಯಾಮದ ಪ್ರಮಾಣ ಕಡಿಮೆ ಮಾಡಬೇಕು. ಮದ್ಯ ಸೇವಿಸುತ್ತಿದ್ದಲ್ಲಿ ಆ ಪ್ರಮಾಣವನ್ನೂ ಕಡಿಮೆಗೊಳಿಸಬೇಕು ಎಂಬುದು ಅವರ ಸಲಹೆ. ಚಳಿಗಾಲದಲ್ಲಿ ಸದಾ ಮೋಡ ಕವಿದ ವಾತಾವರಣ ಇರುವುದರಿಂದ ಅದು ಸಹ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಸೂರ್ಯನ ಕಿರಣಗಳು ಮೈಮೇಲೆ ಬೀಳದೇ ಇರುವುದರಿಂದ ಖಿನ್ನತೆ ಆವರಿಸುತ್ತದೆ. `ವಿಂಟರ್ ಬ್ಲೂ' ಎಂದು ಸಾಮಾನ್ಯವಾಗಿ ಕರೆಯುವ ಈ ಮಾನಸಿಕ ಸ್ಥಿತಿ ಹೃದ್ರೋಗಿಗಳ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ ಮ್ಯಾಕ್ಸ್ ಹೆಲ್ತ್ ಕೇರ್ ಮನಃಶಾಸ್ತ್ರಜ್ಞ ಸಮೀರ್ ಪಾರೀಖ್. ಮಧ್ಯಾಹ್ನದ ಸಮಯ ಸೂರ್ಯನ ಬಿಸಿಲಿಗೆ ಮೈ ಒಡ್ಡುವುದರಿಂದ, ಸ್ನೇಹಿತರ ಜೊತೆ ಬೆರೆಯುವುದರಿಂದ, ಲಘು ವ್ಯಾಯಾಮ ಮಾಡುವುದರಿಂದ ಈ ಖಿನ್ನತೆಯಿಂದ ಪಾರಾಗಬಹುದು ಎನ್ನುತ್ತಾರೆ ಡಾ. ಪಾರೀಖ್. ಮೊಣಕಾಲು, ಮೂಳೆಗಳ ಮೇಲೂ ಈ ಚಳಿ ದುಷ್ಪರಿಣಾಮ ಬೀರುತ್ತದೆ. ಕೀಲು ನೋವಿನಿಂದ ಬಳಲುತ್ತಿರುವವರು ಮಧ್ಯಾಹ್ನದ ಹೊತ್ತಿನಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದಾಗಲಾದರೂ ವ್ಯಾಯಾಮ ಮಾಡಬೇಕು. ಬೆಚ್ಚನೆಯ ಕೊಠಡಿಗಳಲ್ಲಿ ಮಲಗಬೇಕು ಎನ್ನುತ್ತಾರೆ ಸರ್ ಗಂಗಾ ರಾಮ್ ಆಸ್ಪತ್ರೆಯ ಮೂಳೆ ತಜ್ಞ ಡಾ. ಸಂಜಯ್ ಸರೂಪ್. ಈ ಪ್ರಮುಖ ರೋಗಗಳ ಹೊರತಾಗಿ ಚಳಿಗಾಲದಲ್ಲಿ ಚರ್ಮ ಸಂಬಂಧಿ ರೋಗಗಳೂ ಸಾಕಷ್ಟು ಪೀಡಿಸುತ್ತವೆ ಎನ್ನುತ್ತಾರೆ ತಜ್ಞರು.

2008: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ಕರೆ ನೀಡಿರುವ ಅನಿದರ್ಿಷ್ಟಾವಧಿ ಮುಷ್ಕರ ಈದಿನ ಮಧ್ಯರಾತ್ರಿಯಿಂದ ಕರ್ನಾಟಕದಾದ್ಯಂತ ಆರಂಭಗೊಂಡಿತು. ಕರ್ನಾಟಕ ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಒಕ್ಕೂಟದಲ್ಲಿರುವ 1.75 ಲಕ್ಷ ಲಾರಿಗಳು, 25 ಸಾವಿರ ಖಾಸಗಿ ಬಸ್ಸು, 75 ಸಾವಿರ ಮ್ಯಾಕ್ಸಿ ಕ್ಯಾಬ್ ಮತ್ತು ಟೂರಿಸ್ಟ್ ಟ್ಯಾಕ್ಸಿ ಸೇರಿದಂತೆ ಸುಮಾರು 2.75 ಲಕ್ಷ ವಾಹನಗಳ ಸಂಚಾರ ರಾತ್ರಿಯಿಂದಲೇ ಸ್ಥಗಿತಗೊಂಡಿತು.

2008: ಮಹಾರಾಷ್ಟ್ರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಪ್ತಶೃಂಗಿಯಿಂದ ನಾಸಿಕಕ್ಕೆ ಹಿಂತಿರುಗುತ್ತಿದ್ದ ಖಾಸಗಿ ಐಷರಾಮಿ ಬಸ್ಸೊಂದು ಈದಿನ ರಾತ್ರಿ 10.30ಕ್ಕೆ ನಂದುರಿ ಎಂಬಲ್ಲಿ ಆಳ ಕಮರಿಗೆ ಬಿದ್ದುದರಿಂದ ಸುಮಾರು 38 ಜನ ಭಕ್ತರು ಮೃತರಾಗಿ, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯ ಗೊಂಡರು. ಬಸ್ಸಿನಲ್ಲಿ 81 ಜನ ಪ್ರಯಾಣಿಕರಿದ್ದರು. ಘಟ್ಟ ಪ್ರದೇಶದ ಹೇರ್ ಪಿನ್ ತಿರುವಿನಲ್ಲಿ ಸಾಗುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ 600 ಅಡಿ ಆಳದ ಕಮರಿಗೆ ಬಿದ್ದು ಎರಡು ತುಂಡಾಯಿತು.

2008: ಮಲೇಷ್ಯಾ ಸರ್ಕಾರವು ಹಿಂದೂಗಳ ಹಬ್ಬವಾದ `ತೈಪೂಸಂ'ಗೆ ರಾಷ್ಟ್ರೀಯ ರಜಾ ದಿನ ಘೋಷಿಸಿತು. ಭಾರತೀಯ ಹಿಂದೂಗಳ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಪ್ರಧಾನ ಮಂತ್ರಿ ಅಬ್ದುಲ್ಲಾ ಬದಾವಿ ಪ್ರಕಟಿಸಿದರು. ಕ್ವಾಲಾಲಂಪುರದಲ್ಲಿ ಹಿಂದೂಗಳ ಪೊಂಗಲ್ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 20 ಸಾವಿರ ಭಾರತೀಯರ ಸಮ್ಮುಖದಲ್ಲಿ ಅವರು ಪ್ರಕಟಣೆ ಮಾಡಿದಾಗ ಹರ್ಷೋದ್ಘಾರವಾಯಿತು. ಇಲ್ಲಿ ನೆಲೆಸಿರುವ ಭಾರತೀಯ ಮೂಲದವರು ವಿಶೇಷವಾಗಿ ತಮಿಳುನಾಡಿನವರು ತೈಪೂಸಂ ಹಬ್ಬವನ್ನು ವ್ಯಾಪಕವಾಗಿ ಆಚರಿಸುತ್ತಾರೆ. ಪ್ರತಿವರ್ಷ ಈ ಹಬ್ಬದಂದು ಸಾವಿರಾರು ಜನರು ರಾಜಧಾನಿಯ ಹೊರಪ್ರದೇಶದಲ್ಲಿರುವ ಮುರುಘಾ ದೇವಸ್ಥಾನಕ್ಕೆ 172 ಮೆಟ್ಟಿಲು ಕ್ರಮಿಸಿ ತೆರಳುತ್ತಾರೆ.

2008: ಭಾರತದಲ್ಲಿ ಕೋಳಿಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಾರತದಿಂದ ಕೋಳಿಗಳು ಮತ್ತು ಅವುಗಳ ಉತ್ಪನ್ನಗಳ ಆಮದು ನಿಷೇಧಿಸಿರುವುದಾಗಿ ದುಬೈ ಕೃಷಿ ಸಚಿವ ಶೇಖ್ ಸಲೀಮ್ ಬಿನ್ ಹಿಲಾಲ್ ಅಲ್ ಖಲೀಲಿ ಪ್ರಕಟಿಸಿದರು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಶಿಫಾರಸನ್ನು ಆಧರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ವಾರದ ಹಿಂದೆ ಪಶ್ಚಿಮ ಬಂಗಾಳದಲ್ಲಿ ಕೋಳಿಜ್ವರ ಹರಡಿರುವುದು ಖಚಿತವಾದ ಮೇಲೆ ಕೋಳಿ, ಕೋಳಿ ಮೊಟ್ಟೆ ಹಾಗೂ ಸಂಬಂಧಿತ ಉತ್ಪನ್ನಗಳನ್ನು ಭಾರತದಿಂದ ಆಮದುಮಾಡಿಕೊಳ್ಳುವುದನ್ನು ಖತಾರ್ ನಿಷೇಧಿಸಿತ್ತು.

2008: ಇರಾನಿನ ಮೊದಲ ಅಣುಶಕ್ತಿ ಯೋಜನೆಗೆ ರಷ್ಯಾದಿಂದ 4ನೇ ಬಾರಿ ಅಣು ಇಂಧನವನ್ನು ಸರಬರಾಜು ಮಾಡಲಾಯಿತು. ಈ ಯೋಜನೆ ಪೂರ್ಣಗೊಳ್ಳಲು ಇನ್ನೂ 4 ಬಾರಿ ಅಣು ಇಂಧನವನ್ನು ರಷ್ಯಾ ಸರಬರಾಜು ಮಾಡಲಿದೆ ಎಂದು ಇರಾನ್ ಸುದ್ದಿ ಸಂಸ್ಥೆಯ ಅಧಿಕಾರಿ ಹೇಳಿದರು.

2008: ಶ್ರೀಲಂಕಾ ಸೇನಾಪಡೆ ಐದು ಎಲ್ ಟಿ ಟಿ ಇ ದೋಣಿಗಳ ಮೇಲೆ ದಾಳಿ ನಡೆಸಿ 41 ಬಂಡುಕೋರರನ್ನು ಹತ್ಯೆ ಮಾಡಿತು. ಈ ಸಂದರ್ಭದಲ್ಲಿ ಒಬ್ಬ ಯೋಧ ಹತನಾದ. ಶ್ರೀಲಂಕಾ ಸರ್ಕಾರ ಮತ್ತು ಎಲ್ ಟಿ ಟಿ ಇ ನಡುವೆ ಇದ್ದ 6 ವರ್ಷಗಳ ಕದನ ವಿರಾಮ ಮೂರು ದಿನಗಳ ಹಿಂದೆ ಅಂತ್ಯಗೊಂಡಿದ್ದು, ಎಲ್ ಟಿ ಟಿ ಇ ಬಲವಾಗಿ ನೆಲೆಯೂರಿರುವ ಉತ್ತರ ಭಾಗದಲ್ಲಿ ಶ್ರೀಲಂಕಾ ಸೇನಾಪಡೆ ದಾಳಿ ನಡೆಸಿತು.

2008: ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಹಳೆಯ ಸುದ್ದಿ. ಆದರೆ ಮೊಬೈಲ್ ಫೋನನ್ನು ಅತಿಯಾಗಿ ಬಳಸಿದರೆ ರಾತ್ರಿ ವೇಳೆ ನಿದ್ರೆಯಲ್ಲೂ ಏರುಪೇರಾಗುತ್ತದೆ ಎಂಬುದು ಹೊಸ ಸಂಶೋಧನೆಯ ಫಲಿತಾಂಶ. ಮೊಬೈಲ್ ಫೋನುಗಳಿಂದ ಹೊರಸೂಸುವ ಕಿರಣಗಳು ನಿದ್ರೆಯನ್ನು ಕಡಿಮೆ ಮಾಡುತ್ತವೆ ಎಂದು ಅಮೆರಿಕ ಮತ್ತು ಯುರೋಪಿನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂತು. ಇದರಿಂದ ತಲೆನೋವು, ಗೊಂದಲದ ಮನಸ್ಥಿತಿಯೂ ಉಂಟಾಗುತ್ತದೆ ಎಂದು ದಿ ಇಂಡಿಪೆಂಡೆಂಟ್ ಪತ್ರಿಕೆ ವರದಿ ಮಾಡಿತು. ಹಾಸಿಗೆಗೆ ಹೋಗುವ ಮುನ್ನ ನೀವು ಸೆಲ್ ಫೋನುಗಳನ್ನು ಬಳಸಿದ್ದೇ ಆದಲ್ಲಿ ಶಾಂತ ನಿದ್ರೆ ನಿಮ್ಮಿಂದ ದೂರವಾಗುತ್ತದೆ. ಇದರಿಂದ ಹಗಲು ಹೊತ್ತಿನಲ್ಲಿ ನಿಮ್ಮ ದೈಹಿಕ ಸುಸ್ಥಿತಿ ಅಸ್ತವ್ಯಸ್ತವಾಗುತ್ತದೆ. ಮೊಬೈಲ್ ಕಿರಣಗಳು ಮೆದುಳಿನ ಮೇಲೂ ಗಂಭೀರ ಪರಿಣಾಮ ಉಂಟು ಮಾಡುತ್ತವೆ, ಅಲ್ಲದೆ ಮೆದುಳಿನ ಒತ್ತಡವನ್ನು ಹೆಚ್ಚಿಸುತ್ತವೆ ಎಂಬುದು ಅಧ್ಯಯನಕಾರ ಪ್ರೊ. ಬೆಂಗ್ಟ್ ಆರ್ನೆಸ್ಟ್ ಅಭಿಪ್ರಾಯ.

2008: ಸರ್ಕಾರಿ ನೌಕರನ ಕಾನೂನು ಬಾಹಿರ ಕೆಲಸಕ್ಕೂ ಕರ್ತವ್ಯ ನಿರ್ವಹಣೆಗೂ ಸಂಬಂಧವಿಲ್ಲ, ಆದ್ದರಿಂದ ತಪ್ಪಿತಸ್ಥ ನೌಕರನ ವಿರುದ್ಧ ಪ್ರಕರಣ ದಾಖಲು ಮಾಡಲು ಅಪರಾಧ ಪ್ರಕ್ರಿಯಾ ಸಂಹಿತೆಯ ಕಲಂ 197ರ ಅನ್ವಯ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ನಾಗಪುರ ಸರ್ಕಾರಿ ಆಸ್ಪತ್ರೆಗೆ ಎಚ್ ಐ ವಿ ಸೋಂಕು ತಗುಲಿದ ರಕ್ತವನ್ನು ಪೂರೈಕೆ ಮಾಡಿದ ಹಗರಣಗಳ ಆಪಾದಿತರ ವಿಚಾರಣೆಯನ್ನು ಮುಂದುವರೆಸಬೇಕು ಎಂದು ನ್ಯಾಯಮೂರ್ತಿ ಜಿ. ಪಿ. ಮಾಥೂರ್ ಮತ್ತು ಅಲ್ತಾಬ್ ಅಲಂ ಅವರನ್ನು ಒಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸುತ್ತಿರುವ ಕೆಳ ಹಂತದ ನ್ಯಾಯಾಲಯಕ್ಕೆ ಸೂಚಿಸಿತು. ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಎಚ್ ಐ ವಿ ಸೋಂಕು ತಗುಲಿದ ರಕ್ತವನ್ನು ಪೂರೈಕೆ ಮಾಡಿದ ಹಗರಣದಲ್ಲಿ ರಕ್ತ ನಿಧಿಯ ವೈದ್ಯರಾದ ಡಾ. ಪಿ. ಪಿ. ಸಂಚೇತಿ, ಡಾ. ಪ್ರಕಾಶ್ ಚಂದ್ರ ಅವರ ಜತೆ ಇನ್ನೂ ಐವರು ಶಾಮಿಲಾಗಿದ್ದು, ಇವರ್ಲೆಲರೂ ರಕ್ತ ನಿಧಿಯ ದಾಖಲೆಗಳನ್ನು ತಿದ್ದಿದ್ದಾರೆ ಎಂದು ಪೊಲೀಸರು ದೋಷಾರೋಪ ಹೊರಿಸಿದ್ದರು. ದಾಖಲೆಗಳನ್ನು ನಾಶ ಪಡಿಸಿದ ಸಾಕ್ಷಾಧಾರಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರೂ ಈ ಸರ್ಕಾರಿ ವೈದ್ಯರನ್ನು ವಿಚಾರಣೆಗೆ ಗುರಿಪಡಿಸಲು ಅಪರಾಧ ಪ್ರಕ್ರಿಯಾ ಸಂಹಿತೆ ಕಲಂ 197ರ ಪ್ರಕಾರ ಪೂರ್ವಾನುಮತಿ ಪಡೆಯಲಿಲ್ಲ ಎಂಬ ಕಾರಣಕ್ಕೆ ಹೆಚ್ಚುವರಿ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಪ್ರಕರಣವನ್ನು ವಜಾಗೊಳಿಸಿದ್ದರು. ಆದರೆ ಸೆಷನ್ಸ್ ನ್ಯಾಯಾಲಯವು ಈ ಆದೇಶವನ್ನು ರದ್ದುಪಡಿಸಿತ್ತು. ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ ಆದೇಶವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದದ್ದರಿಂದ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಪೀಠವು, ಕಾನೂನು ಬಾಹಿರ ಕೆಲಸ ಮಾಡಿದ ನೌಕರನ ನಿರ್ವಹಣೆಗೆ ಸಂಬಂಧ ಕಲ್ಪಿಸಿ ವಿಚಾರಣೆಗೆ ಪೂರ್ವಾನುಮತಿ ಪಡೆಯಬೇಕು ಎಂಬ ಕಾರಣ ನೀಡುವುದು ಸರಿಯಲ್ಲ ಎಂದು ತಿಳಿಸಿತು.

2008: ಇಥಿಯೋಪಿಯಾದ ಮುಲು ಸೆಬೊಕಾ ಅವರು ಮುಂಬೈಯಲ್ಲಿ ನಡೆದ ಸ್ಟ್ಯಾಂಡರ್ಡ್ ಚಾರ್ಟರ್ಡ್ ಮುಂಬೈ ಮ್ಯಾರಥಾನ್ ಸ್ಪರ್ಧೆಯ ಮಹಿಳೆಯರ ವಿಭಾಗದಲ್ಲಿ ಸತತ ಮೂರನೇ ಬಾರಿ ಪ್ರಶಸ್ತಿ ಗೆದ್ದು `ಹ್ಯಾಟ್ರಿಕ್' ಸಾಧಿಸಿದರು.

2008: ಬೆಂಗಳೂರಿನ ಕಾವೇರಿ ಜಂಕ್ಷನ್ನಿನಲ್ಲಿ `ಪ್ರೀಕಾಸ್ಟ್' ಅಂಡರ್ ಪಾಸ್ ಕಾಮಗಾರಿ ಚುರುಕುಗೊಂಡು, ಸಿಮೆಂಟ್ ಎಲಿಮೆಂಟ್ಗಳನ್ನು ಅಳವಡಿಸುವ ಕೆಲಸ ಪ್ರಾರಂಭವಾಯಿತು.

2007: ರಾಷ್ಟ್ರೀಯ ಲೋಕದಳ ಸದಸ್ಯೆಯಾಗಿ 2002ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜ್ಯಸಭಾ ಸದಸ್ಯೆ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಮಹಾಜನ್ ಅವರ ಪತ್ನಿ, ಸಾಮಾಜಿಕ ಕಾರ್ಯಕರ್ತೆ ಸುಮಿತ್ರಾ ಮಹಾಜನ್ ದೆಹಲಿಯಲ್ಲಿ ನಿಧನರಾದರು.

2007: ಹೃದಯಾಘಾತಕ್ಕೆ ಒಳಗಾದ ಕ್ಯಾನ್ಸರ್ ರೋಗಿಗಳಲ್ಲಿ `ಆಸ್ಪಿರಿನ್' ಜೀವರಕ್ಷಕವಾಗಿ ಕೆಲಸ ಮಾಡುತ್ತದೆ ಎಂಬುದು ವೈದ್ಯರು ಕೈಗೊಂಡ ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿತು. ಈ ಮೊದಲು ಕ್ಯಾನ್ಸರ್ ರೋಗಿಗಳಿಗೆ ಆಸ್ಪಿರಿನ್ ಮಾತ್ರೆ ನೀಡುವುದು ಮಾರಕ ಎಂದು ತಿಳಿದಿದ್ದುದು ದೊಡ್ಡ ತಪ್ಪಾಗಿದೆ ಎಂದು ಟೆಕ್ಸಾಸ್ ವಿವಿ ಕ್ಯಾನ್ಸರ್ ಕೇಂದ್ರದ ಎಂ.ಡಿ.ಆ್ಯಂಡರ್ಸನ್ ಹೂಸ್ಟನ್ನಿನಲ್ಲಿ ಪ್ರಕಟಿಸಿದರು. ಆಸ್ಪಿರಿನ್ ರಕ್ತಸ್ರಾವಕ್ಕೆ ಕಾರಣವಾಗುತ್ತದೆ ಎಂದು ಈ ಮೊದಲು ಸಾಮಾನ್ಯ ವೈದ್ಯಕೀಯ ಅಧ್ಯಯನದಲ್ಲಿ ಕಂಡುಕೊಳ್ಳಲಾಗಿತ್ತು. ಆದರೆ, ಅದಕ್ಕೆ ವ್ಯತಿರಿಕ್ತವಾದ ಸತ್ಯವನ್ನು ಈಗ ಕಂಡುಕೊಳ್ಳಲಾಗಿದೆ. ಹತ್ತು ಕ್ಯಾನ್ಸರ್ ರೋಗಿಗಳು ಹೃದಯಾಘಾತಕ್ಕೊಳಗಾದ ಸಂದರ್ಭದಲ್ಲಿ ಆಸ್ಪಿರಿನ್ ಮಾತ್ರೆ ತೆಗೆದುಕೊಳ್ಳದೆ ಮೃತರಾಗಿದ್ದಾರೆ. ಆದರೆ, ಇದೇ ರೀತಿಯ 17 ರೋಗಿಗಳು ಆಸ್ಪಿರಿನ್ ಮಾತ್ರೆ ಸೇವಿಸಿದಾಗ ಅವರಲ್ಲಿ ಒಬ್ಬನೇ ಮೃತನಾದುದು ಸಂಶೋಧನೆ ಸಂದರ್ಭದಲ್ಲಿ ಬೆಳಕಿಗೆ ಬಂತು ಎಂದು ಆ್ಯಂಡರ್ಸನ್ ಹೇಳಿದರು.

2007: ಅತ್ಯಂತ ಹಳೆಯದಾದ, 1903ರಲ್ಲಿ ತಯಾರಾದ ಸುಸ್ಥಿತಿಯಲ್ಲಿರುವ ಫೋರ್ಡ್ ಕಾರು 630,000 ಫೋನಿಕ್ಸಿನಲ್ಲಿ ನಡೆದ ಹರಾಜಿನಲ್ಲಿ ಅಮೆರಿಕ ಡಾಲರುಗಳಿಗೆ ಮಾರಾಟವಾಯಿತು. ಅಮೆರಿಕದಲ್ಲಿ ತಯಾರಾದ ಈ ಕಾರು ಫೋರ್ಡ್ ಕಂಪೆನಿ ಮಾರಾಟ ಮಾಡಿದ ಮೊದಲು ಮೂರು ಕಾರುಗಳಲ್ಲಿ ಇದೂ ಒಂದು. ಹೂಸ್ಟನ್ನಿನ ಖ್ಯಾತ ವಕೀಲ ಜಾನ್ ಓ ಕ್ವಿನ್ ಈ ಕಾರಿನ ನೂತನ ಒಡೆಯರಾದರು.

2007: ಬ್ರಿಟನ್ನಿನ `ಚಾನೆಲ್ 4 ರಿಯಾಲಿಟಿ ಟಿವಿ ಷೋ ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ಜನಾಂಗೀಯ ನಿಂದನೆ ಮತ್ತು ಮಾನಸಿಕ ಕಿರುಕುಳ ನೀಡುವುದರ ಮೂಲಕ ಅಂತಾರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದ್ದ ಬ್ರಿಟಿಷ್ ಟಿವಿ ನಟಿ ಜೇಡ್ ಗೂಡಿ ಅವರ ವಿರುದ್ಧ ಶೇ 82ರಷ್ಟು ಪ್ರೇಕ್ಷಕರು ಮತ ಚಲಾಯಿಸಿ ಮುಂದಿನ ಪ್ರದರ್ಶನದಿಂದ ಹೊರಹಾಕಿದರು. 25 ವರ್ಷದ ಮಾಜಿ ದಂತ ವೈದ್ಯಕೀಯ ದಾದಿಯಾದ ಜೇಡ್ ಗೂಡಿ ಅವರು 31 ವರ್ಷದ ಶಿಲ್ಪಾ ಶೆಟ್ಟಿ ಅವರನ್ನು ನಿಂದಿಸಿದ ಬಳಿಕ ಟಿವಿಯ ಕಾವಲುಸಂಸ್ಥೆ `ಆಫ್ ಕಾಮ್' ಗೆ ಪ್ರದರ್ಶನದ ಬಗ್ಗೆ ಪ್ರೇಕ್ಷಕರಿಂದ ಸುಮಾರು 40,000 ದೂರುಗಳು ಬಂದಿದ್ದವು. ಈ ಪ್ರಕರಣದ ನಂತರ 20 ಲಕ್ಷ ಹೆಚ್ಚುವರಿ ಪ್ರೇಕ್ಷಕರು ಟಿವಿ ಕಾರ್ಯಕ್ರಮ ವೀಕ್ಷಿಸಿದ್ದರು. ಶಿಲ್ಪಾ ಅವರಿಗೆ ವಿಶ್ವದ ನಾನಾ ಭಾಗಗಳಿಂದ ಅಂತರ್ಜಾಲದ ಮೂಲಕ ಭಾರಿ ಪ್ರಮಾಣದ ಅಭಿಮಾನಿಗಳ ಬೆಂಬಲ ಹರಿದುಬಂದಿತ್ತು. ಸುದ್ದಿ ವಾಹಕಗಳ ಪ್ರಸಾರ, ಅಂತರ್ಜಾಲದ ವಿಚಾರ ವಿನಿಮಯ ಹಾಗೂ ವೃತ್ತಪತ್ರಿಕೆಗಳ ಬರವಣಿಗೆಗಳಲ್ಲಿ ಜನಾಂಗೀಯ ನಿಂದನೆ ಮತ್ತು ಬಿಗ್ ಬ್ರದರ್ ಕಾರ್ಯಕ್ರಮ ಕುರಿತು ವ್ಯಾಪಕ ಚರ್ಚೆ ನಡೆದಿತ್ತು.

2007: ಕಂಪ್ಯೂಟರಿಗೆ ಯಾವುದೇ ರೀತಿಯ ವೈರಸ್ಗಳಿಂದ ಸಮಗ್ರ ರಕ್ಷಣೆ ನೀಡಬಲ್ಲಂತಹ `ರುದ್ರ ಪ್ರೊಟೆಕ್ಟರ್' ನ್ನು ಇಸ್ರೋ ಉಪಾಧ್ಯಕ್ಷ ಎಸ್. ರಮಣಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಭಾರತೀಯ ಮೂಲದವರು ಅಭಿವೃದ್ಧಿ ಪಡಿಸಿರುವ ಈ ಪ್ರೊಟೆಕ್ಟರ್ ವಿಶ್ವದಲ್ಲೇ ಪ್ರಪ್ರಥಮ ಕಂಪ್ಯೂಟರ್ ಪ್ರೊಟೆಕ್ಟರ್ ಎನ್ನಲಾಗಿದೆ. ಸಿಂಗಾಪುರ ಮೂಲದ ರುದ್ರ ಟೆಕ್ನಾಲಜೀಸ್ ಸಂಸ್ಥೆಯು ಇಂಟೆನ್ಷನ್ ಬೇಸ್ಡ್ ಟೆಕ್ನಾಲಜಿ ಆಧರಿಸಿ ಇದನ್ನು ನಿರ್ಮಿಸಿದೆ.

2006: ಫಾರ್ಗೊಟ್ಟನ್ ಹೀರೋ (ಮರೆತ ನಾಯಕ) ಚಿತ್ರಕ್ಕಾಗಿ ಶ್ಯಾಮ್ ಬೆನೆಗಲ್ ಅವರಿಗೆ 2006ರ ಸಾಲಿನ ನೇತಾಜಿ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ನೇತಾಜಿ ಸುಭಾಶ್ ಚಂದ್ರ ಬೋಸ್ ಪಾತ್ರದಲ್ಲಿ ಅಸಾಧಾರಣ ಅಭಿನಯ ಮಾಡಿದ್ದಕ್ಕಾಗಿ ಸಚಿನ್ ಖೇಡೇಕರ್ ಅವರಿಗೂ ಈ ಪ್ರಶಸ್ತಿ ಲಭಿಸಿದೆ.

2006: ಕೊಂಕಣ ರೈಲ್ವೆಯು ಅಭಿವೃದ್ಧಿ ಪಡಿಸಿದ ಅಪಘಾತ ನಿಯಂತ್ರಣ ಸಾಧನ ರಕ್ಷಾ ಕವಚಕ್ಕೆ ಭಾರತ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪೇಟೆಂಟ್ ಲಭಿಸಿತು. ರಕ್ಷಾ ಕವಚ ಪೇಟೆಂಟಿಗಾಗಿ ಕೊಂಕಣ ರೈಲ್ವೆಯು ಅಮೆರಿಕ, ಯುರೋಪ್ ಮತ್ತು ಏಷ್ಯಾದ ರಾಷ್ಟ್ರಗಳಿಗೂ ಅರ್ಜಿ ಸಲ್ಲಿಸಿತು.

2006: ಭಾರತ ಮತ್ತು ಪಾಕಿಸ್ತಾನದ ನಡುವಣ ಜನರ ಸಂಪರ್ಕ ವೃದ್ಧಿಯ ಯತ್ನವಾಗಿ ಉಭಯರಾಷ್ಟ್ರಗಳ ಮಧ್ಯೆ ಮೂರನೇ ಬಸ್ಸಿಗೆ ಚಾಲನೆ ನೀಡಲಾಯಿತು. ಲಾಹೋರ್- ಅಮೃತಸರ ನಡುವೆ ಇದೇ ಪ್ರಥಮ ಬಾರಿಗೆ ಬಸ್ ಸಂಚಾರ ಆರಂಭವಾಯಿತು.

2005: ಚಿತ್ರನಟಿ ಪರ್ವೀನ್ ಬಾಭಿ ನಿಧನ.

1988: `ಗಡಿನಾಡ ಗಾಂಧಿ' ಎಂದೇ ಖ್ಯಾತರಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ (1890-1988) ಆಫ್ಘಾನಿಸ್ಥಾನದ ಪೇಷಾವರದ ಲೇಡಿ ರೀಡಿಂಗ್ ಆಸ್ಪತ್ರೆಯಲ್ಲಿ ತಮ್ಮ 98ನೇ ವಯಸ್ಸಿನಲ್ಲಿ ನಿಧನರಾದರು. ಮಹಾತ್ಮಾ ಗಾಂಧೀಜಿಯವರ ಅನುಯಾಯಿಯಾಗಿದ್ದ ಅವರು `ಖುದಾಯಿ ಖಿದ್ಮತ್ಗಾರ್' ನ (ರೆಡ್ ಶರ್ಟ್ ಮೂವ್ ಮೆಂಟ್) ಸ್ಥಾಪಕ.

1982: ಕುಖ್ಯಾತ ಕೊಲೆಗಾರರಾದ ಬಿಲ್ಲಾ ಮತ್ತು ರಂಗ ಅವರನ್ನು ಗಲ್ಲಿಗೇರಿಸುವುದಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.

1982: ನಿಕೋಬಾರ್ ದ್ವೀಪದಲ್ಲಿ ಈದಿನ ಬೆಳಗ್ಗೆ ತೀವ್ರ ಭೂಕಂಪ ಸಂಭವಿಸಿ ನೌಕಾದಳದ ಹಡಗುಕಟ್ಟೆ ಮತ್ತು ಕ್ಯಾಂಪ್ ಬೆಲ್ ಬೇನಲ್ಲಿನ ಕೆಲವು ಕಟ್ಟಡಗಳಿಗೆ ಹಾನಿ ಉಂಟಾಯಿತು.

1981: ಅಮೆರಿಕಾದ ಅಧ್ಯಕ್ಷ ಪದವು ರೊನಾಲ್ಡ್ ರೇಗನ್ ಅವರಿಂದ ಜಿಮ್ಮಿ ಕಾರ್ಟರ್ ಅವರಿಗೆ ಹಸ್ತಾಂತರಗೊಂಡ ಕೆಲವೇ ನಿಮಿಷಗಳಲ್ಲಿ ತಾನು ಒತ್ತೆಸೆರೆಯಾಗಿ ಇಟ್ಟುಕೊಂಡಿದ್ದ 52 ಮಂದಿ ಅಮೆರಿಕನ್ನರನ್ನು ಇರಾನ್ ಬಿಡುಗಡೆ ಮಾಡಿತು. ಇವರನ್ನು ಅದು 444 ದಿನಗಳ ಕಾಲ ತನ್ನ ಸೆರಯಲ್ಲಿ ಇಟ್ಟುಕೊಂಡಿತ್ತು. 1980ರ ಏಪ್ರಿಲ್ 25ರಂದು ಅಮೆರಿಕಾವು `ಆಪರೇಷನ್ ಈಗಲ್ ಕ್ಲಾ' ಗುಪ್ತಸಂಕೇತದ ಕಾರ್ಯಾಚರಣೆಯನ್ನು ಈ ಒತ್ತೆಯಾಳುಗಳ ಬಿಡುಗಡೆಗಾಗಿ ಕೈಗೊಂಡಿತ್ತು. ಆದರೆ ಇದಕ್ಕಾಗಿ ನಿಯೋಜಿಸಲಾದ ನೌಕಾಪಡೆಗೆ ಸೇರಿದ 8 ಹೆಲಿಕಾಪ್ಟರುಗಳ ಪೈಕಿ ಮೂರು ಹೆಲಿಕಾಪ್ಟರುಗಳು ವ್ಯವಸ್ಥೆಯ ದೋಷದಿಂದಾಗಿ ವಿಫಲಗೊಂಡು ಈ ಕಾರ್ಯಾಚರಣೆಯೂ ಅಯಶಸ್ವಿಯಾಗಿತ್ತು.

1959: ಭಾರತೀಯ ನ್ಯಾಯವಾದಿ, ಮುತ್ಸದ್ಧಿ ಸರ್ ತೇಜ್ ಬಹಾದುರ್ ಸಪ್ರು (1875-1959) ತಮ್ಮ 73ನೇ ವಯಸ್ಸಿನಲ್ಲಿನಿಧನರಾದರು.

1957: ಟ್ರಾಂಬೆಯ ಪರಮಾಣು ಇಂಧನ ಸಂಸ್ಥೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. 1967ರ ಜನವರಿಯಲ್ಲಿ ಅದಕ್ಕೆ ಭಾಭಾ ಪರಮಾಣು ಸಂಶೋಧನಾ ಕೇಂದ್ರ ಎಂದು ಪುನರ್ ನಾಮಕರಣ ಮಾಡಲಾಯಿತು. ಭಾರತದ ಅಣುಶಕ್ತಿ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದು ಈ ಕೇಂದ್ರದ ಉದ್ದೇಶ.

1972: ಮೇಘಾಲಯವು ರಾಜ್ಯವಾಯಿತು. ಮತ್ತು ಅರುಣಾಚಲ ಪ್ರದೇಶವು ಭಾರತದ ಕೇಂದ್ರಾಡಳಿತ ಪ್ರದೇಶವಾಯಿತು. ಅರುಣಾಚಲ ಪ್ರದೇಶವು 1987ರಲ್ಲಿ ರಾಜ್ಯವಾಯಿತು.

1934: ಸಮಕಾಲೀನ ಶಿಲ್ಪಕಲೆಯಲ್ಲಿ ನಿಷ್ಣಾತರಾದ ಧನಂಜಯಶಿಲ್ಪಿ ಅವರು ಶಿವಬಸಪ್ಪ- ಮಾಣಿಕ್ಕಮ್ಮ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಜನಿಸಿದರು.

1929: ಕಲಾವಿದೆ ಆರ್. ಲೀಲಾಬಾಯಿ ಜನನ.

1892: ಕೆನಡಾದ ವೈದ್ಯ ಜೇಮ್ಸ್ ನೈಸ್ಮಿತ್ ಕಂಡು ಹಿಡಿದ `ಬಾಸ್ಕೆಟ್ ಬಾಲ್' ಆಟವನ್ನು ಮೊತ್ತ ಮೊದಲ ಬಾರಿಗೆ ಮೆಸಾಚ್ಯುಸೆಟ್ಸ್ ಸ್ಪ್ರಿಂಗ್ ಫೀಲ್ಡಿನ ವೈಎಂಸಿಎಯಲ್ಲಿ ಆಡಲಾಯಿತು.

1818: ಕಲ್ಕತ್ತಾದ (ಈಗಿನ ಕೋಲ್ಕತ) ಗಹ್ರನ್ ಹಟ್ಟಾದಲ್ಲಿ (ಮುಂದೆ ಇದು 304 ಚಿತ್ಪುರ್ ರಸ್ತೆ ಎಂಬುದಾಗಿ ಹೆಸರಾಯಿತು) ಹಿಂದು ಕಾಲೇಜ್ (ಈಗ ಪ್ರೆಸಿಡೆನ್ಸಿ ಕಾಲೇಜ್) ಸ್ಥಾಪನೆ. ರಾಜಾ ರಾಮ್ ಮೋಹನ್ ರಾಯ್ ಅವರು ಸಮಿತಿಯ ಮುಖ್ಯಸ್ಥರಾಗಿದ್ದರು. ಕಾಲೇಜು 1855ರ ಏಪ್ರಿಲ್ 15ರಂದು ಮುಚ್ಚಿತು. ಅದೇ ವರ್ಷ ಜೂನ್ 15ರಂದು ಪ್ರೆಸಿಡೆನ್ಸಿ ಕಾಲೇಜ್ ಆರಂಭವಾಯಿತು.

No comments:

Post a Comment