Friday, January 4, 2019

ಇಂದಿನ ಇತಿಹಾಸ History Today ಜನವರಿ 04

ಇಂದಿನ ಇತಿಹಾಸ History Today ಜನವರಿ 04
2019: ಅಹಮದಾಬಾದ್: ಬೆಕ್ಕಿನ ಮರಿಗೆ ನಾಯಿ ಹಾಲೂಡಿಸುವುದು, ಆಡಿನ ಮರಿಗೆ ಆಕಳು ಹಾಲು ಕೊಡುವುದೇ ಇತ್ಯಾದಿಗಳನ್ನು ನೀವು ಕಂಡಿರಬಹುದು. ಆದರೆ ಕಾಡಿನ ರಾಜ ಸಿಂಹ ತನ್ನ ಪ್ರತಿಸ್ಪರ್ಧಿ ಚಿರತೆಗೆ ಆಶ್ರಯ ಕೊಟ್ಟದ್ದನ್ನು ಕೇಳಿದ್ದೀರಾ? ಹೌದು ಇಂತಹ ಒಂದು ವಿಸ್ಮಯದ ಘಟನೆ ಗುಜರಾತಿನ ಗಿರ್ ಅರಣ್ಯದಲ್ಲಿ ಬೆಳಕಿಗೆ ಬಂದಿತು. ತಾಯಿಯಿಂದ ಬೇರ್ಪಟ್ಟಿರುವ ಚಿರತೆಯ ಮರಿಯೊಂದನ್ನು ಸಿಂಹಿಣಿಯೊಂದುದತ್ತು ಪಡೆದುಕೊಂಡು ಪಾಲಿಸಿ ಪೋಷಿಸುತ್ತಿರುವುದು ಬೆಳಕಿಗೆ ಬಂದಿತು. ತಾಯಿಯಿಂದ ಬೇರ್ಪಟ್ಟಿರುವ ಸುಮಾರು ಒಂದೂವರೆ ತಿಂಗಳ ಚಿರತೆ ಮರಿಯನ್ನು ಸಿಂಹಿಣಿಯೊಂದು ತನ್ನ ಎರಡು ಮರಿಗಳ ಜೊತೆ ಸೇರಿಸಿಕೊಂಡು ಪಾಲಿಸುತ್ತಿರುವುದು ಗಿರ್ - ಪಶ್ಚಿಮ ವಿಭಾಗದ ಅರಣ್ಯದಲ್ಲಿ ಪತ್ತೆಯಾಯಿತು. ಅಷ್ಟೇ ಅಲ್ಲ ಚಿರತೆ ಮರಿಯ ಮೇಲೆ ಸುತ್ತಮುತ್ತಲಿನ ಇತರ ಸಿಂಹಗಳು ದಾಳಿ ನಡೆಸಿ ಕೊಲ್ಲದಂತೆ ನಿರಂತರ ನಿಗಾ ಇಟ್ಟುಕೊಂಡು ಕಾಯುತ್ತಿದೆ ಎಂದು ಗಿರ್- ಪಶ್ಚಿಮ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಧೀರಜ್ ಮಿತ್ತಲ್ ಹೇಳಿದರು. ಸಿಂಹಿಣಿ ಮತ್ತು ಚಿರತೆ ಮರಿ ನಡುವಣ ಅಪರೂಪದ ಬಾಂಧವ್ಯ ಮೊತ್ತ ಮೊದಲಿಗೆ ಆರು ದಿನಗಳ ಹಿಂದೆ ಅರಣ್ಯ ಸಿಬ್ಬಂದಿಯ ಕಣ್ಣಿಗೆ ಬಿದ್ದಿತ್ತು ಎಂದು ಅವರು ನುಡಿದರು.ಮಿತ್ರಲ್ ಅವರು ಸಿಂಹಿಣಿ ಮತ್ತು ಚಿರತೆ ಮರಿಯ ಅಸಾಧಾರಣ, ವಿಶಿಷ್ಠ ಬಾಂಧವ್ಯದ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ‘ಖಂಡಿತವಾಗಿ ಇದೊಂದು ಅಪರೂಪದ ವಿದ್ಯಮಾನ. ಏಕೆಂದರೆ ಸಿಂಹಗಳು ಸದಾಕಾಲ ಚಿರತೆಗಳನ್ನು ಕೊಂದು ಹಾಕುವ ಮನಃಸ್ಥಿತಿಯಲ್ಲೇ ಇರುತ್ತವೆ. ಪ್ರಕರಣದಲ್ಲಿ ಇದು ತದ್ವಿರುದ್ಧವಾಗಿದೆ. ಇಲ್ಲಿ ಸಿಂಹಿಣಿಯು ಚಿರತೆ ಮರಿಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿರುವುದೂ ಕಂಡು ಬಂದಿದೆ. ಅದು ಚಿರತೆಯ ಮರಿಯನ್ನು ತಾನು ಇರುವ ಪ್ರದೇಶದಲ್ಲೇ ಕಾದುಕೊಂಡು ಕುಳಿತು ರಕ್ಷಿಸುತ್ತಿದೆ ಎಂದು ಮಿತ್ರಲ್ ಹೇಳಿದರುಮಿತ್ತಲ್ ಅವರು ಹಂಚಿಕೊಂಡಿರುವ ಚಿತ್ರಗಳಲ್ಲಿ ಚಿರತೆ ಮರಿಯು ತನ್ನ ಮನೆಯಲ್ಲಿ ಇರುವಷ್ಟೇ ಖುಶಿಯಲ್ಲಿ ಸಿಂಹಿಣಿ ಮತ್ತು ಅದರ ಮರಿಗಳ ಜೊತೆ ಇರುವುದು ಕಾಣಿಸುತ್ತದೆ. ಕೆಲವು ಚಿತ್ರಗಳು ಸಿಂಹಿಣಿಯು ಅದಕ್ಕೆ ಹಾಲೂಡಿಸುತ್ತಿರುವುದನ್ನೂ ತೋರಿಸಿದವು. ಸಿಂಹಿಣಿ ತಾಯಿಯ ಸಂಜ್ಞೆಗಳು ಮತ್ತು ಶಬ್ಧಗಳನ್ನು ಚಿರತೆ ಮರಿಯು ಹೇಗೆ ಅರ್ಥ ಮಾಡಿಕೊಳ್ಳುತ್ತಿದೆ ಎಂಬುದೂ ನಮ್ಮನ್ನು ಅಚ್ಚರಿಗೊಳಿಸಿದೆ. ಸುತ್ತಾಡುವಾಗ ಸಿಂಹಿಣಿಯು ಚಿರತೆ ಮರಿಯತ್ತ ಹೆಚ್ಚಿನ ಗಮನ ನೀಡುತ್ತದೆ. ಚಿರತೆ ಮರಿಗೆ ತನ್ನ ಹಾಗೂ ತನ್ನ ಮರಿಗಳ ವೇಗದ ಜೊತೆಗೆ ಹೊಂದಾಣಿಕೆ ಆಗದಿರಬಹುದು ಎಂಬ ಕಾರಣಕ್ಕೆ ಅದು ರೀತಿ ಚಿರತೆ ಮರಿಯನ್ನು ಗಮನಿಸುತ್ತಿರಬಹುದು ಎಂದು ಮಿತ್ರಲ್ ಹೇಳಿದರು. ಚಿರತೆ ಮರಿಯ ತಾಯಿ ಎಲ್ಲಿರಬಹುದು ಎಂಬ ಪ್ರಶ್ನೆಗೆಅದು ತನ್ನ ಮರಿಯನ್ನು ತ್ಯಜಿಸಿರಬಹುದು ಅಥವಾ ಆಕಸ್ಮಿಕವಾಗಿ ಕಳೆದುಕೊಂಡಿರಬಹುದು. ಸಿಂಹಿಣಿಯ ಬಳಿಗೆ ಹೋಗಲು ಅದಕ್ಕೆ ಅಂಜಿಕೆ ಇರಲೂಬಹುದು ಎಂದು ಮಿತ್ರಲ್ ಹೇಳಿದರು. ಅಪರೂಪದ ಬಾಂಧವ್ಯದ ಬಗ್ಗೆ ಅರಣ್ಯ ಸಿಬ್ಬಂದಿ ನಿಗಾ ಇಟ್ಟಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ.ಟಿ. ವಸವಡ ಹೇಳಿದರು. ಚಿರತೆ ಮರಿಯನ್ನು ಬೇರ್ಪಡಿಸುವ ಇರಾದೆ ನಮಗಿಲ್ಲ. ಪ್ರಕೃತಿಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ನಾವು ಸಿಂಹಿಣಿಯ ಮೇಲೆ ನಿಗಾ ಇಟ್ಟಿರುತ್ತೇವೆ ಎಂದು ಜುನಾಗಢ ವನ್ಯ ವಲಯದ ಮುಖ್ಯಸ್ಥರೂ ಆಗಿರುವ ವಸವಡ ಹೇಳಿದರು.

2019: ನವದೆಹಲಿ: ಲೋಕಸಭೆಯಲ್ಲಿ ರಫೇಲ್ ವ್ಯವಹಾರ ಮೇಲೆ ನಡೆದ ತೀಕ್ಷ್ಣ ಚರ್ಚೆಗೆ ಉತ್ತರ ನೀಡಿದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ಸನ್ನು ಗುರಿಯಾಗಿಟ್ಟುಕೊಂಡು ಪ್ರಖರ ಪ್ರತಿದಾಳಿ ನಡೆಸಿ, ೨೦೧೪ರವರೆಗೆ ಯುಪಿಎ ಅಧಿಕಾರದಲ್ಲಿ ಇದ್ದಾಗ ಚೀನಾ ಮತ್ತು ಪಾಕಿಸ್ತಾನಗಳ ಪ್ರಬಲ ಸವಾಲುಗಳ ನಡುವೆಯೂ ರಾಷ್ಟ್ರದ ಭದ್ರತಾ ಅಗತ್ಯಗಳನ್ನು ನಿರ್ಲಕ್ಷಿಸಿದ ಕಾಂಗ್ರೆಸ್ ಈಗ ಸುಳ್ಳುಗಳನ್ನು ಹರಡುವುದರಲ್ಲಿ ಮಗ್ನವಾಗಿದೆ ಎಂದು ಆಪಾದಿಸಿದರು. ಆಪಾದನೆಗಳನ್ನು ಮಾಡುವ ಮುನ್ನಹೋಮ್ ವರ್ಕ್ ಮಾಡುವುದನ್ನು ಕಾಂಗ್ರೆಸ್ ರೂಢಿಸಿಕೊಳ್ಳಬೇಕು ಎಂದು ಅವರು ಚುಚ್ಚಿದರು.ಹಿಂದಿನ ಯುಪಿಎ ಸರ್ಕಾರ ಕುದುರಿಸಹೊರಟಿದ್ದ ಒಪ್ಪಂದಕ್ಕಿಂತ ಪ್ರಸ್ತುತ ಎನ್ಡಿಎ ಸರ್ಕಾರ ಕುದುರಿಸಿದ ರಫೇಲ್ ವ್ಯವಹಾರ ಹೇಗೆ ಉತ್ತಮವಾಗಿದೆ ಎಂಬುದನ್ನು ವಿವರಿಸಿದ ನಿರ್ಮಲಾ, ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛ ಸರ್ಕಾರ ನೀಡಿದ್ದಕ್ಕಾಗಿ ಅವರ ವಿರುದ್ಧ ಕೆಸರು ಎರಚುವ ಪ್ರಚಾರ ಅಭಿಯಾನ ನಡೆಯುತ್ತಿದೆ ಎಂದು ಟೀಕಿಸಿದರು. ‘ಇದನ್ನು ಹೇಳಲು ನನಗೆ ಇಷ್ಟವಿಲ್ಲ. ಒಂದೇ ಉಸಿರಿನಲ್ಲಿ ನಾನು ಬೊಫೋರ್ಸ್ ಹಾಗೂ ರಫೇಲ್ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ. ಏಕೆಂದರೆ ಬೊಫೋರ್ಸ್ ಒಂದು ಹಗರಣವಾಗಿತ್ತು ಮತ್ತು ಕಾಂಗ್ರೆಸ್ಸನ್ನು ಕೆಳಗಿಳಿಸಿತು... ರಫೇಲ್ ಮೋದಿ ಅವರನ್ನು ಹೊಸ ಭಾರತ ರೂಪಿಸುವ ಸಲುವಾಗಿ ಪುನಃ ತರುತ್ತದೆ ಎಂದು ಹೇಳುತ್ತಾ ಸಂಸತ್ತಿನಲ್ಲಿ ನಡೆದ ಕೋಲಾಹಲಕಾರಿ ಚರ್ಚೆಗೆ ಸೀತಾರಾಮನ್ ತೆರೆ ಎಳೆದರು.ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧದ ತಮ್ಮ ಆಪಾದನೆ ಏನೆಂದರೆಅವರು ಯುದ್ಧ ವಿಮಾನಗಳನ್ನು ಖರೀದಿಸುವ ಉದ್ದೇಶವನ್ನೇ ಹೊಂದಿರಲಿಲ್ಲ. ರಾಷ್ಟ್ರದ ಭದ್ರತೆ ಅಪಾಯಕ್ಕೆ ಸಿಲುಕಿತ್ತು. ಆದರೆ ಅವರಿಗೆ ಒಂದಿಷ್ಟೂ ಚಿಂತೆ ಇರಲಿಲ್ಲ. ಅವರಿಗೆ ಬೊಕ್ಕಸದ ಭದ್ರತೆಯೇ ಮುಖ್ಯವಾಗಿತ್ತು ಎಂದು ಸೀತಾರಾಮನ್ ನುಡಿದರು.’ಯುಪಿಎ ಆಡಳಿತಾವಧಿಯಲ್ಲಿ ಅವರಿಗೆ ಸರಿಹೊಂದದೇ ಇದ್ದ ಯಾವುದೋ ಒಂದು ಕಾರಣವು ಫ್ರೆಂಚ್ ವಿಮಾನ ತಯಾರಕ ಡಸ್ಸಾಲ್ಟ್ ಕಂಪೆನಿ ಜೊತೆಗೆ ವ್ಯವಹಾರಕ್ಕೆ ಸಹಿ ಹಾಕುವುದನ್ನು ತಡೆಯಿತು ಎಂದು ರಕ್ಷಣಾ ಸಚಿವರು ಆಪಾದಿಸಿದರು.ರಕ್ಷಣಾ ವ್ಯವಹಾರಗಳು ಮತ್ತು ರಕ್ಷಣೆಯೊಂದಿಗೆ ವ್ಯವಹರಿಸುವುದಕ್ಕೆ ವ್ಯತ್ಯಾಸಗಳಿವೆ. ನಾವು ರಕ್ಷಣಾ ವ್ಯವಹಾರಗಳನ್ನು ಮಾಡುವುದಿಲ್ಲ. ನಾವು ರಾಷ್ಟ್ರೀಯ ಭದ್ರತೆಗೆ ಆದ್ಯತೆ ನೀಡಿ ರಕ್ಷಣೆಯೊಂದಿಗೆ ವ್ಯವಹರಿಸುತ್ತೇವೆ ಎಂದು ಸೀತಾರಾಮನ್ ಹೇಳಿದರು.ಚೀನಾ ಮತ್ತು ಪಾಕಿಸ್ತಾನ ದೊಡ್ಡ ಸಮರದಳಗಳನ್ನು ನಿರ್ಮಿಸುತ್ತಿವೆ. ಯುಪಿಎ ಸರ್ಕಾರ ನೇರವಾಗಿ ಹಾರಬಲ್ಲ ೧೮ ಯುದ್ಧ ವಿಮಾನಗಳನ್ನು ಮಾತ್ರ ಬಯಸಿತ್ತು. ಯುಪಿಎ ಕಗ್ಗಂಟು ಸೃಷ್ಟಿಸಿತು ಎಂದು ಹೇಳಿದ ಅವರು ಎನ್ಡಿಎ ಸರ್ಕಾರವು ಫ್ರಾನ್ಸಿನಿಂದ ಖರೀದಿಸಲಾಗುವ ಯುದ್ಧ ವಿಮಾನಗಳ ಸಂಖ್ಯೆಯನ್ನು ಕುಗ್ಗಿಸಿತು ಎಂಬ ಆರೋಪವನ್ನು ತಳ್ಳಿಹಾಕಿದರು. ನೇರವಾಗಿ ಹಾರಾಟದ ಸ್ಥಿತಿಯಲ್ಲಿನ ೩೬ ಯುದ್ಧ ವಿಮಾನಗಳ ಖರೀದಿಗಾಗಿ ಹೊಸ ರಫೇಲ್ ಒಪ್ಪಂದ ರೂಪಿಸಲಾಗಿದೆ ಎಂದು ಅವರು ನುಡಿದರು.ಮೊದಲ ಯುದ್ಧ ವಿಮಾನ ೨೦೧೯ರ ಸೆಪ್ಟೆಂಬರಿನಲ್ಲಿ ವಿತರಣೆಯಾಗಲಿದೆ ಮತ್ತು ೨೦೨೨ರಲ್ಲಿ ೩೬ ವಿಮಾನಗಳ ಪೈಕಿ ಕೊನೆಯ ವಿಮಾನ ವಿತರಣೆಯಾಗಲಿದೆ. ಮಾತುಕತೆಗಳ ಪ್ರಕ್ರಿಯೆ ೧೪ ತಿಂಗಳಲ್ಲಿ ಪೂರ್ಣಗೊಂಡಿತು ಎಂದು ಸೀತಾರಾಮನ್ ವಿವರಿಸಿದರು.ಇದಕ್ಕೆ ಮುನ್ನ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಕ್ಷಣಾ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮೋದಿ ಸರ್ಕಾರದ ಮೇಲೆ ದಾಳಿ ನಡೆಸಿತ್ತು.ಖರೀದಿಸಲಾಗುವ ರಫೇಲ್ ಯುದ್ಧ ವಿಮಾನಗಳ ಸಂಖ್ಯೆಯನ್ನು ೧೨೬ರಿಂದ ೩೬ಕ್ಕೆ ಇಳಿಸಿದ್ದು ಏಕೆ ಎಂಬ ಪ್ರಶ್ನೆ ಸೇರಿದಂತೆ ಸರಣಿ ಪ್ರಶ್ನೆಗಳನ್ನು ರಾಹುಲ್ ಗಾಂಧಿ ಸರ್ಕಾರಕ್ಕೆ ಎಸೆದಿದ್ದರು.’ನಮ್ಮ ನೆರೆಹೊರೆಯವರು ಅತ್ಯಂತ ಚಂಚಲರು. ಆದ್ದರಿಂದ ಶಾಂತಿ ರಕ್ಷಣೆಗಾಗಿ ಏನನ್ನಾದರೂ ಮಾಡಲು ನಾವು ಸಿದ್ಧರಾಗಿರ ಇರಬೇಕಾದ್ದು ಅತ್ಯಂತ ಮಹತ್ವ. ಸಕಾಲಕ್ಕೆ ಶಸ್ತ್ರಾಸ್ತ್ರ ಮದ್ದು ಗುಂಡು ಸಂಗ್ರಹ ಕಡ್ಡಾಯ. ಚೀನಾವು ,೮೦೦ ವಿಮಾನಗಳನ್ನು ಸೇರ್ಪಡೆ ಮಾಡಿದ್ದು, ನಾಲ್ಕನೇ ತಲೆಮಾರಿನ ವಿಮಾನವನ್ನೂ ಸೇರಿಸಿಕೊಂಡಿದೆ. ಪಾಕಿಸ್ತಾನವು ಕಳೆದ ವರ್ಷಗಳಲ್ಲಿ ತನ್ನ ವಿಮಾನಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸಿಕೊಂಡಿದೆ. ೨೦೦೨ರಲ್ಲಿ ಭಾರತ ೪೨ ಸ್ಕ್ವಾಡ್ರನ್ ಗಳನ್ನು ಹೊಂದಿತ್ತು. ಕ್ರಮೇಣ ಇದು ಕುಗ್ಗಿತು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಉತ್ತರ ನೀಡುತ್ತಾ ಸಚಿವರು ವಿವರಿಸಿದರು.ಮೋದಿ ಸರ್ಕಾರವು ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲದೇ ಕಾರ್ ನಿರ್ವಹಿಸಿದೆ ಎಂಬುದು ಗೊತ್ತಿರುವುದರಿಂದ ಕಾಂಗ್ರೆಸ್ ಧೃತಿಗೆಟ್ಟಿದೆ. ಹೀಗಾಗಿ ಕೊಚ್ಚೆ ಎಸೆದು ಓಡುವ ತಂತ್ರವನ್ನು ಅವರು ರೂಪಿಸಿದರು. ಕಳೆದ ವರ್ಷಗಳಲ್ಲಿ ರಕ್ಷಣಾ ಸಚಿವಾಲಯವು ಒಂದೇ ಒಂದು ವ್ಯವಹಾರವನ್ನೂ ಕುದುರಿಸಿರಲಿಲ್ಲ. ಬೊಫೋರ್ಸ್ ಒಂದು ಹಗರಣವಾಗಿತ್ತು, ರಫೇಲ್ ಅಲ್ಲ ಎಂದು ಸೀತಾರಾಮನ್ ಹೇಳಿದರು.ಮಾರ್ಚ್ ೯ರಂದು ಫ್ರೆಂಚ್ ಅಧ್ಯಕ್ಷರ ಜೊತೆಗಿನ ಭೇಟಿಯಲ್ಲಿ ರಫೇಲ್ ವಿಷಯವನ್ನು ಚರ್ಚಿಸಿದುದಾಗಿ ಕಾಂಗ್ರೆಸ್ ಅಧ್ಯಕ್ಷರು ಸುಳ್ಳು ಹೇಳಿದರು ಎಂದು ಸಚಿವರು ಹೇಳಿದಾಗ ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು. ವಾಯುಪಡೆ ನರಳುತ್ತಿದೆ ಎಂಬುದನ್ನು ಮರೆತು ನೀವು ಒಪ್ಪಂದವನ್ನು ಸ್ಥಗಿತಗೊಳಿಸಿದಿರಿ. ನಿಮಗೆ ಹೊಂದಿಕೆಯಾಗಲಿಲ್ಲ ಎಂದು ನೀವು ಒಪ್ಪಂದವನ್ನು ಪೂರ್ಣಗೊಳಿಸಲಿಲ್ಲ. ಒಪ್ಪಂದದಿಂದ ನಿಮಗೆ ಹಣ ಬರುತ್ತಿರಲಿಲ್ಲ ಎಂದು ಸೀತಾರಾಮನ್ ಚುಚ್ಚಿದರು.ಎನ್ ಡಿಎ ಸರ್ಕಾರ ೧೨೬ ಯುದ್ಧ ವಿಮಾನಗಳನ್ನು ೩೬ಕ್ಕೆ ಇಳಿಸಿತು ಎಂದು ನೀವು ರಾಷ್ಟ್ರದ ದಿಕ್ಕು ತಪ್ಪಿಸುತ್ತಿದ್ದೀರಿ. ಕಾಂಗ್ರೆಸ್ಸು ನೇರ ಹಾರಾಟದ ಸ್ಥಿತಿಯಲ್ಲಿದ್ದ ೧೮ ವಿಮಾನಗಳನ್ನು ಖರೀದಿಸಬಯಸಿದ್ದರೆ, ಎನ್ ಡಿಎ ಅದನ್ನು ೩೬ಕ್ಕೆ ಏರಿಸಿದೆ ಎಂದು ಸಚಿವರು ಹೇಳಿದರು.ವಾಯುಪಡೆಯು ಯಾವಾಗಲೂ ಸರ್ಕಾರಕ್ಕೆ ಎರಡು ಸ್ಕ್ವಾಡ್ರನ್ ಗಳನ್ನು ತುರ್ತು ಖರೀದಿ ಸಂದರ್ಭದಲ್ಲಿ ಖರೀದಿಸಲು ಸಲಹೆ ಮಾಡುತ್ತದೆ. ಅಂದರೆ ೧೮ ವಿಮಾನಗಳ ಬದಲಿಗೆ ೩೬ ವಿಮಾನಗಳು ಎಂದು ಸಚಿವೆ ವಿವರಿಸಿದರು.ರಫೇಲ್ ಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿ ಇಲ್ಲದೇ ಇದ್ದ ಸಿಎಜಿ ವರದಿಯನ್ನು ಉಲ್ಲೇಖಿಸುವ ಮೂಲಕ ಕೇಂದ್ರವು ಸುಪ್ರೀಂಕೋರ್ಟಿನ ದಾರಿ ತಪ್ಪಿಸಿದೆ ಎಂದು ಆಪಾದಿಸಿದ್ದ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಚರ್ಚೆಗೆ ಉತ್ತರ ನೀಡಬೇಕು ಎಂದು ಆಗ್ರಹಿಸಿತ್ತು.
ಮತದಾನಕ್ಕೆ ಅವಕಾಶ ಇಲ್ಲದ ಅಲ್ಪಾವಧಿಯ ಚರ್ಚೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಯವರು ಆಫ್ಸೆಟ್ ಗುತ್ತಿಗೆಯನ್ನು ತಮ್ಮಒಲವಿನ ವ್ಯಕ್ತಿಗೆ ಕೊಟ್ಟಿದ್ದಾರೆ ಎಂದು ದೂರಿ, ಜಂಟಿ ಸಂಸದೀಯ ಸಮಿತಿ ಮೂಲಕ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದರು.ರಫೇಲ್ ವ್ಯವಹಾರವು .೩೦ ಲಕ್ಷ ಕೋಟಿ ರೂಪಾಯಿಗಳ ಹಗರಣ. ಮೋದಿ ಅವರುಎಎಯನ್ನು ತಮ್ಮೊಂದಿಗೆ ವಿಮಾನದಲ್ಲಿ ಕರೆದೊಯ್ಯುತ್ತಾರೆ. ಇದು ಅತ್ಯಂತ ದೊಡ್ಡ ಹಗರಣವಾದ್ದರಿಂದ ಜೆಪಿಸಿ ತನಿಖೆ ನಡೆಯಬೇಕು. ಸಂಸತ್ತಿನ ನ್ಯಾಯಾಲಯದಲ್ಲಿ ಇದರ ತನಿಖೆಯಾಗಬೇಕು ಎಂದು ಖರ್ಗೆ ಒತ್ತಾಯಿಸಿದ್ದರು.ಸದನದಲ್ಲಿ ಮಾತನಾಡುತ್ತಾ ರಾಹುಲ್ ಗಾಂಧಿಯವರು ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಹೆಸರನ್ನು ಪ್ರಸ್ತಾಪಿಸಿದಾಗ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಸಂಸದೀಯ ನಿಯಮಾವಳಿಗಳ ಪ್ರಕಾರ ಅವರ ಹೆಸರು ಹೇಳುವಂತಿಲ್ಲ ಎಂದು ಸೂಚಿಸಿದ್ದರು. ಆಗ ರಾಹುಲ್ ಗಾಂಧಿ ಅಂಬಾನಿ ಅವರನ್ನುಎಎ ಎಂಬುದಾಗಿ ಉಲ್ಲೇಖಿಸಿದ್ದರು.ಪ್ರಧಾನಿಯವರು ಇಲ್ಲಿಗೆ ಬಂದು ಸದನದಲ್ಲಿ ಕುಳಿತುಕೊಳ್ಳಬೇಕು ಮತ್ತು ಚರ್ಚೆಗೆ ಉತ್ತರ ನೀಡಬೇಕು ಎಂದು ನಾವು ಬಯಸುತ್ತೇವೆ. ಸದನದಲ್ಲಿ ಪ್ರಧಾನಿಯವರು ಕುಳಿತುಕೊಳ್ಳುವವರೆಗೆ ರಫೇಲ್ ವಿಷಯವು ಇತ್ಯರ್ಥವಾಗುವುದಿಲ್ಲ. ಅವರು ಖಚಿತವಾಗಿ ರಫೇಲ್ ಚರ್ಚೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದೂ ಖರ್ಗೆ ಹೇಳಿದ್ದರು.

2019: ತಿರುವನಂತಪುರಂ: ಶ್ರೀಲಂಕೆಯ ೪೬ರ ಹರೆಯದ ಮಹಿಳೆ ಶಶಿಕಲಾ ಹಿಂದಿನ ರಾತ್ರಿ ಶಬರಿಮಲೈ ಅಯ್ಯಪ್ಪ ಸ್ವಾಮಿ ಗರ್ಭಗುಡಿ ಪ್ರವೇಶಿಸಿ ತನ್ನ ಪ್ರಾರ್ಥನೆ ಸಲ್ಲಿಸಿರುವುದಾಗಿ ಕೇರಳ ಪೊಲೀಸರು ದೃಢ ಪಡಿಸಿದರು. ಏನಿದ್ದರೂ, ಶಶಿಕಲಾ ಬಳಿಕ ವರದಿಗಾರರ ಜೊತೆ ಮಾತನಾಡುತ್ತಾ ತಾನು ಗರ್ಭಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿಲ್ಲ, ಪೊಲೀಸರು ತನ್ನನ್ನು ವಿಮುಖಗೊಳಿಸಿದರು ಎಂದು ಪ್ರತಿಪಾದಿಸಿದರು.ಶ್ರೀಲಂಕಾ ಮಹಿಳೆ ದೇವಾಲಯ ಪ್ರವೇಶಿಸಿದ ವಿಡಿಯೋ ದೃಶ್ಯಾವಳಿಗಳು ಪೊಲೀಸರ ಬಳಿ ಇವೆ ಮತ್ತು ನ್ಯಾಯಾಲಯ ಅಥವಾ ಸಂಬಂಧಪಟ್ಟ ಪ್ರಾಧಿಕಾರಿ ಕೋರಿದರೆ ಅದನ್ನು ಹಾಜರು ಪಡಿಸಲು ಅವರು ಸಿದ್ಧರಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ನಂಬಿಕೆಯ ವಿಷಯ ವೈಯಕ್ತಿಕವಾಗಿದ್ದು, ಪರೋಕ್ಷವಾಗಿ ಖಾಸಗಿತನದ ಹಕ್ಕಿಗೆ ಜೋಡಿಸಲ್ಪಟ್ಟಿದೆ. ಹೀಗಾಗಿ ಪೊಲೀಸರು ಅಧಿಕೃತವಾಗಿ ಶಶಿಕಲಾ ಅವರ ಹೇಳಿಕೆಯನ್ನು ಅಲ್ಲಗಳೆಯುವುದಿಲ್ಲ ಎಂದು ಉನ್ನತ ಅಧಿಕಾರಿ ನುಡಿದರು.ಶ್ರೀಲಂಕಾ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ತಮ್ಮ ಆಗಮನ ಬಗ್ಗೆ ಪೊಲೀಸರಿಗೆ ಮುಂಚಿತವಾಗಿಯೇ ತಿಳಿಸಿ ರಕ್ಷಣೆ ಕೋರಿದ್ದರು. ಅಧಿಕಾರಿಗಳು ಮಫ್ತಿಯಲ್ಲಿ ಬೆಂಗಾವಲು ಒದಗಿಸಿ ಆಕೆಯನ್ನು ದೇವಾಲಯಕ್ಕೆ ಕರೆದೊಯ್ದರು ಮತ್ತು ಆಕೆ ರಾತ್ರಿ .೩೦ರ ವೇಳೆಗೆ ಗರ್ಭಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸಿದಳು. ಬಳಿಕ ಪೊಲೀಸರು ಆಕೆಯನ್ನು ಮೂಲಶಿಬಿರವಾದ ಪಂಪಾಕ್ಕೆ ರಾತ್ರಿ ೧೧.೩೦ರ ವೇಳೆಗೆ ವಾಪಸ್ ಕರೆತಂದು ಬಿಟ್ಟರು ಎಂದು ಅಧಿಕಾರಿ ಹೇಳಿದರು.ಶಶಿಕಲಾ ಅವರ ಪಾಸ್ ಪೋರ್ಟ್ ಪ್ರಕಾರ ಅವರ ಜನ್ಮದಿನಾಂಕ ೧೯೭೨ರ ಡಿಸೆಂಬರ್ . ಇಬ್ಬರು ಮಹಿಳೆಯರು ಹಿಂದಿನ ದಿನ ದೇವಾಲಯ ಪ್ರವೇಶಿಸಿದ್ದನ್ನು ವಿರೋಧಿಸಿ ಕೇರಳದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದ ವೇಳೆಯಲ್ಲೇ ಶ್ರೀಲಂಕಾ ಮಹಿಳೆ ದೇಗುಲ ಪ್ರವೇಶ ಘಟನೆಯು ರಾಜಕೀಯ ಮಹತ್ವವನ್ನು ಪಡೆಯಿತು. ಪ್ರತಿಭಟನೆಗಳು ಹಿಂಸೆಗೆ ತಿರುಗಿ ನೂರಾರು ಮಂದಿ ಗಾಯಗೊಂಡಿದ್ದು, ಕೇರಳ ರಾಜ್ಯದ್ಯಂತ ಜನಜೀವನ ಸ್ಥಗಿತಗೊಂಡಿತ್ತು. ಹಲವಾರು ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಂಡಿದ್ದವು. ಸನ್ನಿಧಾನಕ್ಕೆ ೧೦ರಿಂದ ೫೦ ವರ್ಷಗಳ ನಡುವಣ  ವಯಸ್ಸಿನ ಮಹಿಳೆಯರನ್ನು ತಮ್ಮ ಬೆಂಗಾವಲಿನಲ್ಲಿ ಕರೆತರಲು ಪೊಲೀಸರು ನಡೆಸುತ್ತಿರುವ ಯತ್ನಗಳನ್ನು ವಿಫಲಗೊಳಿಸಲು ಶಬರಿಮಲೈ ಕರ್ಮ ಸಮಿತಿ ಮತ್ತು ಹಿಂದು ಐಕ್ಯವೇದಿ ಕಾರ್ಯಕರ್ತರು ತಮ್ಮ ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿದ್ದಾರೆ ಎಂಬ ವರದಿಗಳನ್ನು ಅನುಸರಿಸಿ ಪೊಲೀಸರು ಶಬರಿಮಲೈ ಯಾತ್ರಾ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದರು. ಪಾಲಕ್ಕಾಡಿನಲ್ಲಿ ನಿಷೇಧಾಜ್ಞೆ: ಮಧ್ಯೆ ಹಿಂಸಾಚಾರಗಳನ್ನು ಅನುಸರಿಸಿ ಉತ್ತರ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಮತ್ತು  ಪಾಲಕ್ಕಾಡ್ ಪಟ್ಟಣದಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಯಿತು. ಪಾಲಕ್ಕಾಡ್ ಜಿಲ್ಲಾಧಿಕಾರಿ ಡಿ. ಬಾಲಮುರಳಿ ಅವರು ಹಿಂಸಾಚಾರದ ವರದಿಗಳನ್ನು ಅನುಸರಿಸಿ ಪಾಲಕ್ಕಾಡ್ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು.

2019: ನವದೆಹಲಿ: ೨೦೧೯ರ ಜನವರಿ ೧೦ ರೊಳಗೆ ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂವಿವಾದದ ವಿಚಾರಣೆಗಾಗಿ ಹೊಸ ಪೀಠವನ್ನು ರಚಿಸಲಾಗುವುದು ಎಂದು  ಸುಪ್ರೀಂಕೋರ್ಟ್ ಪ್ರಕಟಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು, ವಿಚಾರಣೆಗೆ ಸಂಬಂಧಿಸಿದಂತೆ ಹೊಸ ಪೀಠವು ಸೂಕ್ತವಾದ ಆದೇಶಗಳನ್ನು ನೀಡುವುದು ಎಂದು ಹೇಳಿದರು.ವಿಷಯವನ್ನು ಎತ್ತಿಕೊಂಡ ಕೆಲವೇ ಸೆಕೆಂಡ್ಗಳಲ್ಲಿ ವಿಚಾರಣೆಯನ್ನು ಮುಂದೂಡಿದ ಸುಪ್ರೀಂಕೋಟ್, ‘ಅಯೋಧ್ಯಾ ಪ್ರಕರಣವನ್ನು ಆದ್ಯತೆಯ ನೆಲೆಯಲ್ಲಿ ಏಕೆ ತೆಗೆದುಕೊಳ್ಳಲಾಗದು ಎಂಬುದಕ್ಕೆ ಕಾರಣ ಸಹಿತವಾದ ತಾರ್ಕಿಕ ಆದೇಶ ನೀಡುವಂತೆ ಕೋರಿ ಸಲ್ಲಿಸಲಾದ ಹೊಸ ಅರ್ಜಿಯನ್ನೂ ತಳ್ಳಿಹಾಕಿತು.ಅಯೋಧ್ಯೆಯಲ್ಲಿನ .೭೭ ಎಕರೆ ವಿವಾದಿತ ಭೂಮಿಯನ್ನು ಮೂವರು ಕಕ್ಷಿದಾರರು, ಅಂದರೆ ರಾಮಲಲ್ಲಾ, ನಿರ್ಮೋಹಿ ಅಖಾರಾ ಮತ್ತು ಸುನ್ನಿ ವಕ್ಫ್ ಮಂಡಳಿಗೆ ವಿಂಗಡಿಸುವಂತೆ ಆದೇಶಿಸಿ ನೀಡಲಾಗಿದ್ದ  ೨೦೧೦ರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾದ ಹನ್ನೆರಡು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿತ್ತು ಪ್ರಕರಣವು ೨೦೧೦ ರಿಂದ ಸುಪ್ರೀಂಕೋರ್ಟಿನಲ್ಲಿ ಬಾಕಿ ಉಳಿದಿತ್ತು. ಸುಪ್ರೀಂಕೋರ್ಟಿನ  ವಿಚಾರಣೆಯ ವೇಳೆಯಲ್ಲಿ ಇತರ ವಿಷಯಗಳು ಕೂಡಾ ಇತ್ಯರ್ಥದ ಸಲುವಾಗಿ ಪೀಠದ ಮುಂದೆ ಬಂದಿದ್ದವುಮಸೀದಿಯು  ಇಸ್ಲಾಮಿನ ಒಂದು ಅವಿಭಾಜ್ಯ ಅಂಗವಾಗಿದೆಯೆ ಎಂಬ ಪ್ರಶ್ನೆ ಕೂಡಾ ಇವುಗಳಲ್ಲಿ ಒಂದಾಗಿತ್ತು..ಕಳೆದ ವರ್ಷ ಸೆಪ್ಟೆಂಬರ್ ೨೭ ರಂದು ಸುಪ್ರೀಂಕೋರ್ಟ್ ವಿಷಯದ ಬಗ್ಗೆ ೧೯೯೪ ರಲ್ಲಿ ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ನಿರಾಕರಿಸುವ ಮೂಲಕ ಸಮಸ್ಯೆಯನ್ನು ಬಗೆಹರಿಸಿತ್ತು. ಬಳಿಕ ಅಯೋಧ್ಯಾ ಭೂವಿವಾದದ ಬಗ್ಗೆ ತನ್ನ ಗಮನವನ್ನು ಕೇಂದ್ರೀಕರಿಸಿದ  ಸುಪ್ರೀಂಕೋರ್ಟ್  ಕಳೆದ ಅಕ್ಟೋಬರ್ ತಿಂಗಳಲ್ಲಿ ೨೦೧೯ರ ಜನವರಿ  ಮೊದಲ ವಾರದಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಪ್ರಕಟಿಸಿತ್ತುಉತ್ತರ ಪ್ರದೇಶ ಸರ್ಕಾರ ಮತ್ತು ರಾಮಲಲ್ಲಾನನ್ನು ಪ್ರತಿನಿಧಿಸುವ ವಕೀಲರು ದೀಪಾವಳಿ ರಜೆಯ ಬಳಿಕ ವಿಚಾರಣೆ ಆರಂಭಿಸುವಂತೆ ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದಾಗ ಆರೆಸ್ಸೆಸ್, ವಿಎಚ್ಪಿ ಜೊತೆಗೆ ಬಿಜೆಪಿ ಕೂಡಾ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದವು.ನ್ಯಾಯಾಲಯದ ನಿರ್ಧಾರವು ಅಯೋಧ್ಯಾ ವಿವಾದದ ಇತ್ಯರ್ಥವನ್ನು ೨೦೧೯ರ ಏಪ್ರಿಲ್- ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗಳು ಮುಗಿಯುವವರೆಗೆ ವಿಳಂಬಿಸಬೇಕು ಎಂಬ ಆಗ್ರಹದ ಪರವಾದ ಒಲವು ನ್ಯಾಯಾಲಯದ್ದಾಗಿತ್ತು. ಹಿನ್ನೆಲೆಯಲ್ಲಿ ವಿವಾದಿತ ನಿವೇಶನದಲ್ಲಿ ಬೇಗನೇ ರಾಮಮಂದಿರಕ್ಕೆ ಅನುವು ಮಾಡಿಕೊಡಲು ಸುಗ್ರೀವಾಜ್ಞೆ ಜಾರಿಗೆ ತರಬೇಕು ಎಂಬ ಬೇಡಿಕೆಗಳು ತೀವ್ರಗೊಂಡವು.ಇತ್ತೀಚೆಗೆ ಅಯೋಧ್ಯಾ ವಿಷಯದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಂಡು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕವೇ ಸುಗ್ರೀವಾಜ್ಞೆ ಬಗ್ಗೆ ನಿರ್ಧರಿಸಲಾಗುವುದುಎಂದು ಸ್ಪಷ್ಟ ಪಡಿಸಿದ್ದರು.ಅಯೋಧ್ಯೆಯ ಭೂವಿವಾದದ ಬಗ್ಗೆ ೧೯೪೦ರಿಂದ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತಿದೆ. ಫೈಜಾಬಾದ್ ಜಿಲ್ಲೆಯ ನ್ಯಾಯಾಲಯವು ೧೯೪೯ ರಲ್ಲಿ ಅಯೋಧ್ಯೆಯಲ್ಲಿನ ವಿವಾದಿತ ಭೂಮಿ ಮೇಲೆ ಮುಸ್ಲಿಮರು, ಹಿಂದೂಗಳು ಮತ್ತು ನಿರ್ಮೋಹಿ ಅಖಾರಾ ಒಡೆತನ ಹೊಂದಿದ್ದಾರೆ ಎಂದು ತೀರ್ಪು ನೀಡಿತ್ತು. ಅರವತ್ತೊಂದು ವರ್ಷಗಳ ನಂತರ, ಅಲಹಾಬಾದ್ ಹೈಕೋರ್ಟ್ ಕೂಡಾ ಇದೇ ಮಾದರಿಯ ತೀರ್ಪು ನೀಡಿತ್ತು.

2018: ನವದೆಹಲಿ: ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇರಾನಿನ ಛಬಹಾರ್ ಬಂದರಿನಿಂದ ಪಾಕಿಸ್ತಾನಿ ಸೇನೆ ಜೊತೆ ನಿಕಟ ಸಂಬಂಧ ಹೊಂದಿದ್ದ ಜೈಶ್-ಉಲ್-ಅದ್ಲ್ ಎಂಬ ಭಯೋತ್ಪಾದಕ ಸಂಘಟನೆ ಅಪಹರಿಸಿತ್ತು ಎಂಬುದು ಬೆಳಕಿಗೆ ಬಂದಿತು. ಜಾಧವ್ ಅವರು ಭಾರತೀಯ ಗೂಢಚಾರಿ ಎಂಬ ಪಾಕ್ ವಾದದಲ್ಲಿನ ಟೊಳ್ಳುತನವನ್ನು ಮಾಹಿತಿ ಬಯಲಿಗೆಳೆಯಿತು. ಭಾರತೀಯ ಭದ್ರತಾ ಇಲಾಖೆಯ ಮೂಲಗಳ ಪ್ರಕಾರ ಜಾಧವ್ ಅವರನ್ನು ಛಬಹಾರದಿಂದ ಸುಮಾರು ೫೨ ಕಿಮೀ ದೂರದ ಸರ್ಬಜ್ ನಗರದಿಂದ ಜೈಶ್-ಉಲ್-ಅದ್ಲ್ ಭಯೋತ್ಪಾದಕ ಸಂಘಟನೆಗೆ ಸೇರಿದ ಮುಲ್ಲಾ ಒಮರ್ ಇರಾನಿ ಅಪಹರಿಸಿದ್ದಾನೆ. ಬಳಿಕ ಆತ ಜಾಧವ್ ಅವರನ್ನು ಪಾಕಿಸ್ತಾನಿ ಸೇನೆಗೆ ಹಸ್ತಾಂತರ ಮಾಡಿದ್ದಾನೆ ಎಂದು ತಿಳಿಸಲಾಯಿತು. ಜೈಶ್ - ಉಲ್- ಅದ್ಲ್ ಪಾಕಿಸ್ತಾನಿ ಸೇನೆಯ ಜೊತೆ ಸೇರಿಕೊಂಡು ಬಲೂಚ್ ಬಂಡುಕೋರರ ವಿರುದ್ಧ ಹೋರಾಟ ನಡೆಸುತ್ತಿತ್ತು ಎಂದು ನಂಬಲಾಗಿದ್ದು, ಭಯೋತ್ಪಾದಕ ಸಂಘಟನೆಯ ಕಮಾಂಡರ್ ಗಳು ಇಸ್ಲಾಮಾಬಾದಿಗೆ ಆಗಾಗ ಭೇಟಿ ನೀಡುತ್ತಿದ್ದರು ಎಂದು ಹೇಳಲಾಯಿತು. ಜೈಶ್ - ಉಲ್ -ಅದ್ಲ್ ಸಂಘಟನೆಯು ಇರಾನ್ ಮತ್ತು ಬಹರೈನಿನ ಪಾಕಿಸ್ತಾನಿ ರಾಜತಾಂತ್ರಿಕ ಕಚೇರಿಗಳಿಂದ ಹಣ ಸಂಗ್ರಹ ಮಾಡುತ್ತಿತ್ತು. ಭಯೋತ್ಪಾದಕ ಸಂಘಟನೆಯು ಜಮಾತ್ - ಉದ್ -ದವಾ (ಜೆಯುಡಿ) ಮತ್ತು ಲಷ್ಕರ್--ಖುರಸಾನ್ ಜೊತೆಗೆ ನಿಕಟ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡುತ್ತಿತ್ತು ಎಂದೂ ಮೂಲಗಳು ತಿಳಿಸಿದವು.  ಪಾಕಿಸ್ತಾನದ ವಿದೇಶಾಂಗ ಕಚೇರಿಯು ಜಾಧವ್ ಅವರಿಗೆ ಸಂಬಂಧಿಸಿದಂತೆ ಇನ್ನೊಂದು ಹೊಸ ವಿಡಿಯೋ ಬಿಡುಗಡೆ ಮಾಡಿದ ದಿನವೇ ಇರಾನಿನಿಂದ ಜಾಧವ್ ಅಪಹರಣಕ್ಕೆ ಸಂಬಂಧಿಸಿದ ಹೊಸ ಮಾಹಿತಿ ಬೆಳಕಿಗೆ ಬಂದಿತು. ಪಾಕಿಸ್ತಾನದ ಹೊಸ ವಿಡಿಯೋ: ಪಾಕಿಸ್ತಾನವು ಬಿಡುಗಡೆ ಮಾಡಿದ ಹೊಸ ವಿಡಿಯೋದಲ್ಲಿ ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಿದ್ದಕ್ಕಾಗಿ ಜಾಧವ್ ಅವರು ಪಾಕಿಸ್ತಾನಿ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು ಎಂಬಂತೆ ತೋರಿಸಲಾಗಿತ್ತು.  ಜಾಧವ್ ಅವರು ತಮ್ಮ ಪತ್ನಿ ಮತ್ತು ತಾಯಿಯನ್ನು ಇಸ್ಲಾಮಾಬಾದಿನಲ್ಲಿ ಭೇಟಿ ಮಾಡಿದ ಫೊಟೋಗಳನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ಬಳಿಕ ಪಾಕಿಸ್ತಾನದ ವಿದೇಶಾಂಗ ಕಚೇರಿಯು ಹೊಸ ವಿಡಿಯೋವನ್ನು ಬಿಡುಗಡೆ ಮಾಡಿತು. ತಮ್ಮನ್ನು ಭೇಟಿ ಮಾಡಲು ಅವಕಾಶ ನೀಡಿದ್ದಕ್ಕಾಗಿ ತಾಯಿ ಮತ್ತು ಪತ್ನಿ ಖುಷಿಯಾಗಿದ್ದರು ಎಂದು ಜಾಧವ್ ಹೇಳಿರುವಂತೆ ವಿಡಿಯೋ ತೋರಿಸಿತು.  ‘ಅವರು ನನ್ನ ಆರೋಗ್ಯದ ಬಗ್ಗೆ ತೃಪ್ತರಾಗಿದ್ದಾರೆ. ನಾನು ಇಲ್ಲಿ ಚೆನ್ನಾಗಿದ್ದೇನೆ ಮತ್ತು ಅವರು ನನಗೆ ಹಾನಿ ಮಾಡುವುದಿಲ್ಲ ಎಂದು ಜಾಧವ್ ವಿಡಿಯೋದಲ್ಲಿ ಹೇಳಿದ್ದರು. ವಿಡಿಯೋದ ಅಧಿಕೃತತೆ ಮತ್ತು ಅದನ್ನು ಬಿಡುಗಡೆ ಮಾಡಿದ ಸಮಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಎದ್ದವು. ಜಾಧವ್ ಅವರ ಕುಟುಂಬದಿಂದ ಯಾವುದೇ ಹೇಳಿಕೆ ಇಲ್ಲದಿದ್ದರೂ, ಮಾಜಿ ನೌಕಾ ಅಧಿಕಾರಿಯ ಮಿತ್ರರೊಬ್ಬರುಜಾಧವ್ ಅತ್ಯಂತ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಮಾಧ್ಯಮ ಒಂದಕ್ಕೆ ತಿಳಿಸಿದರು.ಕಳೆದ ಬಾರಿ ಕುಟುಂಬ ಸದಸ್ಯರು ಅವರನ್ನು ಭೇಟಿ ಮಾಡಿದ ಸಮಯದ ಫೋಟೊಗಳು ಅವರಿಗೆ ಗಾಯಗಳಾಗಿದ್ದುದನ್ನು ತೋರಿಸಿದ್ದವು. ಈಗಿನ ವಿಡಿಯೋ ನೋಡಿದರೆ ಹೇಳಿಕೆ ನೀಡುವಂತೆ ಪಾಕಿಸ್ತಾನವು ಜಾಧವ್ ಮೇಲೆ ಒತ್ತಡ ಹಾಕುತ್ತಿರುವಂತೆ ಅನಿಸುತ್ತದೆ. ಇದು ನಮ್ಮ ನೆರೆರಾಷ್ಟ್ರದ ಹಳೆಯ ಆಟ ಎಂದು ಜಾಧವ್ ಅವರ ಮಿತ್ರ ಸಚಿನ್ ಸುರೇಶ ಕಾಳೆ ಹೇಳಿದರು. ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯವು ಗೂಢಚರ್ಯೆ ಮತ್ತು ಭಯೋತ್ಪಾದಕ ಕೃತ್ಯ ಎಸಗಿದ ಆರೋಪ ಹೊರಿಸಿ ಮರಣದಂಡನೆ ವಿಧಿಸಿತ್ತು. ಪಾಕಿಸ್ತಾನದ ವರ್ತನೆ ಕೂಡಾ ಉಭಯ ರಾಷ್ಟ್ರಗಳ ಮಧ್ಯೆ ತೀವ್ರ ವಿವಾದವನ್ನು ಹುಟ್ಟುಹಾಕಿತ್ತು. ಕಳೆದ ವರ್ಷ ಮಾರ್ಚ್ ೩ರಂದು ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಪಡೆಗಳು ಜಾಧವ್ ಅವರನ್ನು ಬಂಧಿಸಿವೆ ಎಂದು ಪ್ರತಿಪಾದಿಸುತ್ತಿರುವ ಪಾಕಿಸ್ತಾನ, ’ಜಾಧವ್ ಅವರು ಭಾರತದ ನೌಕಾಪಡೆ ಅಧಿಕಾರಿಯಾಗಿದ್ದು ಭಾರತದ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಗೂಢಚಾರಿಯಾಗಿ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಆಪಾದಿಸಿತ್ತು. ಪಾಕಿಸ್ತಾನದ ವಾದವನ್ನು ಭಾರತ ಸರ್ಕಾರ ತಳ್ಳಿಹಾಕಿತ್ತು. ಜಾಧವ್ ಅವರು ಮಾಜಿ ನೌಕಾಪಡೆ ಅಧಿಕಾರಿಯಾಗಿದ್ದು, ಭಾರತ ಸರ್ಕಾರಕ್ಕೂ ಅವರಿಗೂ ಯಾವುದೇ ಸಂಬಂಧವೂ ಇಲ್ಲ ಎಂದು ಭಾರತ ಸ್ಪಷ್ಟ ಪಡಿಸಿತ್ತು. ಜಾಧವ್ ಅವರಿಗೆ ಮರಣದಂಡನೆ ವಿಧಿಸಿದ್ದಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ ಭಾರತ, ಮರಣದಂಡನೆಯನ್ನು ಜಾರಿಗೊಳಿಸಿದ್ದೇ ಆದರೆ ಭಾರತ ಸರ್ಕಾರ ಮತ್ತು ಭಾರತದ ಜನತೆ ಇದನ್ನುಪೂರ್ವ ಯೋಜಿತ ಕೊಲೆ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಪ್ರಕರಣ ಇತ್ತೀಚೆಗೆ ಭಾರತೀಯ ಸಂಸತ್ತಿನಲ್ಲೂ ಪ್ರತಿಧ್ವನಿಸಿದ್ದು, ಎಲ್ಲ ಪಕ್ಷಗಳು ಏಕಧ್ವನಿಯಲ್ಲಿ ಪಾಕಿಸ್ತಾನಿ ಸೇನಾ ನ್ಯಾಯಾಲಯದ ತೀರ್ಪನ್ನು ಅಸಮರ್ಥನೀಯ ಎಂಬುದಾಗಿ ಹೇಳಿ ಖಂಡಿಸಿದ್ದವು.  ಭಾರತವು ಜಾಧವ್ ಮರಣದಂಡನೆ ವಿರುದ್ದ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೂ ದೂರು ನೀಡಿದ್ದು, ಅಂತಾರಾಷ್ಟ್ರೀಯ ನ್ಯಾಯಾಲಯವು ತನ್ನ ಮುಂದಿರುವ ಪ್ರಕರಣ ಇತ್ಯರ್ಥವಾಗುವವರೆಗೂ ಮರಣದಂಡನೆ ಜಾರಿ ಮಾಡಬಾರದು ಎಂದು ಆಜ್ಞಾಪಿಸಿತ್ತು.

2018: ನವದೆಹಲಿ: ತ್ರಿವಳಿ ತಲಾಖ್ ಮಸೂದೆ ಎಂದೇ ಪರಿಚಿತವಾಗಿರುವ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ) ರಕ್ಷಣಾ ಮಸೂದೆಗೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಎರಡನೇ ದಿನವೂ ಕೋಲಾಹಲ ಉಂಟು ಮಾಡಿದ ವಿರೋಧ ಪಕ್ಷಗಳು ಅದನ್ನು ಅನುಮೋದನೆಗೊಳ್ಳದಂತೆ ತಡೆಯುವಲ್ಲಿ ಮತ್ತೆ ಯಶಸ್ವಿಯಾದವು. ತ್ರಿವಳಿ ತಲಾಖ್ ಮಸೂದೆಯನ್ನು ಅನುಮೋದನೆ ಸಲುವಾಗಿ ಚರ್ಚೆಗೆ ಎತ್ತಿಕೊಳ್ಳಬೇಕೆ ಅಥವಾ ಆಯ್ಕೆ ಸಮಿತಿಗೆ ಕಳುಹಿಸಬೇಕೆ ಎಂಬ ಬಗೆಗಿನ ನಿಯಮಾವಳಿ ಬಗ್ಗೆ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಈದಿನ ವಾಗ್ಯುದ್ಧ ನಡೆಸಿದವುಇಬ್ಬರು ವಿಪಕ್ಷ ಸದಸ್ಯರು ಮಂಡಿಸಿದ ತಿದ್ದುಪಡಿ ಗೊತ್ತುವಳಿಗಳನ್ನು ಸಭಾಪತಿಯವರು ಅಂಗೀಕರಿಸುವುದರೊಂದಿಗೆ ವಿರೋಧ ಪಕ್ಷಗಳು ನೈತಿಕ ವಿಜಯ ಸಾಧಿಸಿದವು. ಅದರೆ ಕಲಾಪ ಪಟ್ಟಿಯ ಪ್ರಕಾರ ವಿಷಯಗಳನ್ನು ಕೈಗೆತ್ತಿಕೊಳ್ಳಲು ಮತ್ತು ಜಿಎಸ್ ಟಿ ತಿದ್ದುಪಡಿ ಮಸೂದೆಯ ಬಳಿಕ ತ್ರಿವಳಿ ತಲಾಖ್ ಮಸೂದೆಯನ್ನು ಎತ್ತಿಕೊಳ್ಳಲು ಸಭಾಪತಿಯವರು ನಿರ್ಧರಿಸುವುದರೊಂದಿಗೆ ಆಳುವ ಪಕ್ಷ ಕೂಡಾ ಗೆಲುವಿನ ರುಚಿಯನ್ನು ಸವಿಯಿತು. ತ್ರಿವಳಿ ತಲಾಖ್ ವಿಚಾರದಲ್ಲಿ ಪ್ರತಿಭಟನೆಗಳು ಮುಂದುವರೆದ ಪರಿಣಾಮವಾಗಿ ಸದನದ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಶೂನ್ಯ ವೇಳೆಯನ್ನು ಸದಸ್ಯರು ಭೀಮಾ-ಕೋರೆಗಾಂವ್ ಸಮರದ ೨೦೦ನೇ ವರ್ಷಾಚರಣೆ ಬಳಿಕ ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರದ ಬಗ್ಗೆ ಚರ್ಚಿಸಲು ಬಳಸಿಕೊಂಡರು. ರಾಜ್ಯಸಭೆಯು ಭಾರತದ ಆರ್ಥಿಕ ಸ್ಥಿತಿಗತಿ ಬಗ್ಗೆ ಅಲ್ಪಾವಧಿಯ ಚರ್ಚೆಯನ್ನೂ ನಡೆಸಿತು. ರಾಜ್ಯಸಭೆಯಲ್ಲಿ ತ್ರಿವಳಿ ತಲಾಖ್ ಮಸೂದೆಯ ಬದಲಿಗೆ ಬೇರೊಂದು ಮಸೂದೆಯನ್ನು ಚರ್ಚೆಗೆ ಎತ್ತಿಕೊಂಡದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಕಾಂಗ್ರೆಸ್ ಪಕ್ಷದ ಆನಂದ ಶರ್ಮ ಅವರುಹಿಂದಿನ ದಿನ ಮಂಡಿಸಲಾಗಿದ್ದ ಗೊತ್ತುವಳಿ ಮೇಲಿನ ಕಲಾಪ ಮುಕ್ತಾಯಗೊಂಡಿಲ್ಲ, ಅದನ್ನು ಮುಕ್ತಾಯಗೊಳಿಸಬೇಕು. ಅದಕ್ಕೂ ಮುನ್ನ ಬೇರೆ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು. ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಲು ಸರ್ಕಾರಕ್ಕೆ ಇಚ್ಛೆ ಇಲ್ಲದೇ ಇರುವಾಗ, ಎನ್ ಡಿಎ ಸದಸ್ಯರ ಒಪ್ಪಿಗೆ ಇಲ್ಲದೆ ನಾನು ಸಮಿತಿಗೆ ಸದಸ್ಯರನ್ನು ಹೆಸರಿಸುವುದು ಹೇಗೆ ಎಂದು ಪೀಠದಲ್ಲಿದ್ದ ಸುಕೇಂದು ಶೇಖರ ರಾಯ್ ಪ್ರಶ್ನಿಸಿದರು. ನಾನು ಈಗ ತ್ರಿವಳಿ ತಲಾಖ್ ಮಸೂದೆಯನ್ನು ಎತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ರೂಲಿಂಗ್ ನೀಡಿತು. ಪರಿಣಾಮವಾಗಿ ಸದನದಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಕೋಲಾಹಲದ ಮಧ್ಯೆ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತುಇದಕ್ಕೆ ಮುನ್ನ ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಧುರೀಣ ಗುಲಾಂ ನಬಿ ಆಜಾದ್ ಅವರುಪತಿ ಸೆರೆಮನೆಯಲ್ಲಿ ಇದ್ದರೆ ಮಹಿಳೆಯನ್ನು ನೋಡಿಕೊಳ್ಳುವವರು ಯಾರು? ಬಗ್ಗೆ ಮಸೂದೆಯಲ್ಲಿ ಪ್ರಸ್ತಾಪವಿಲ್ಲ ಎಂದು ತಕರಾರು ತೆಗೆದರು. ತಮ್ಮ ಭಾಷಣ ಮುಂದುವರೆಸಿದ ಸದನದ ನಾಯಕ ಅರುಣ್ ಜೇಟ್ಲಿ ಅವರುಮಸೂದೆಯನ್ನು ಹಾಳುಗೆಡವಲು ಯತ್ನಿಸಿದವರು ಸಮಿತಿಯ ಸದಸ್ಯರಾಗುವಂತಿಲ್ಲ ಎಂದು ನಿಯಮ ಹೇಳುತ್ತದೆ. ಇಲ್ಲಿ ಪ್ರಸ್ತಾಪಿಸಿದ ಹೆಸರುಗಳು ಸಮಿತಿಯ ಭಾಗವಾಗುವಂತಿಲ್ಲ ಎಂದು ವಾದಿಸಿದರು. ಮಸೂದೆ ತಿದ್ದುಪಡಿ ನಿರ್ಣಯಗಳನ್ನು ಮಂಡಿಸಿದ ಸದಸ್ಯರು ತಮಗೆ ಅವುಗಳನ್ನು ಸಮರ್ಥಿಸಲು ಅವಕಾಶ ಬೇಕು ಎಂದು ಕೋರಿದರು. ಇದಕ್ಕೂ ಮುನ್ನ ಸಭಾಪತಿಯವರು ಸರ್ಕಾರ ಮತ್ತು ವಿರೋಧ ಪಕ್ಷಗಳ ಕಡೆಯಿಂದ ಮಂಡನೆಯಾದ ಉಭಯ ನಿರ್ಣಯಗಳೂ ಸಮಂಜಸವಾಗಿವೆ ಎಂದು ರೂಲಿಂಗ್ ನೀಡಿದರು. ಸಭಾಪತಿಯವರು ನಿರ್ಣಯಗಳನ್ನು ಅಂಗೀಕರಿಸಿದ ಹಿನ್ನೆಲೆಯಲ್ಲಿ ಅವುಗಳನ್ನು ಮಂಡಿಸಲಾಯಿತು. ಸದನದ ನಾಯಕ ಜೇಟ್ಲಿ ಅವರು ಪ್ರಸ್ತಾಪಿಸಿದ ಕೆಲವು ವಿಷಯಗಳು ಕೂಡಾ ಸಮಂಜಸವಾಗಿವೆ. ಆದರೆ ನಾನೀಗ ಏನೂ ಮಾಡುವಂತಿಲ್ಲ ಎಂದು ಸಭಾಪತಿ ಹೇಳಿದರು. ತ್ರಿವಳಿ ತಲಾಖ್ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳಲು ನಾನು ಸದನದ ಕಲಾಪಪಟ್ಟಿಯ ಪ್ರಕಾರವೇ ವಿಷಯಗಳನ್ನು ಎತ್ತಿಕೊಳ್ಳಬೇಕಾಗುತ್ತದೆ. ಆದ್ದರಿಂದ ಜಿಎಸ್ ಟಿ ಮಸೂದೆಯನ್ನು ಈಗ ಎತ್ತಿಕೊಳ್ಳುತ್ತೇನೆ ಎಂದು ಸಭಾಪತಿ ಹೇಳಿದರು.

2018: ನವದೆಹಲಿ: ವಿದೇಶೀ ವಿನಿಮಯ ನಿಯಂತ್ರಣ ಕಾಯ್ದೆಫೆರಾ ಸಮನ್ಸ್ ಪ್ರಕಾರ ತನ್ನ ಮುಂದೆ ಹಾಜರಾಗದೇ ಇದ್ದುದಕ್ಕಾಗಿ ವ್ಯವಹಾರೋದ್ಯಮಿ ವಿಜಯ್ ಮಲ್ಯ ಅವರನ್ನು ದೆಹಲಿಯ ನ್ಯಾಯಾಲಯವೊಂದುಘೋಷಿತ ಅಪರಾಧಿ ಎಂದು ಘೋಷಣೆ ಮಾಡಿ ತೀರ್ಪು ನೀಡಿತು. ಮತ್ತೆ ಮತ್ತೆ ಸಮನ್ಸ್ ಜಾರಿ ಮಾಡಿದರೂ ತನ್ನ ಮುಂದೆ ಹಾಜರಾಗಲು ಮಲ್ಯ ಅವರು ವಿಫಲರಾದ ಬಳಿಕ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದೀಪಕ್ ಶೆಹ್ರಾವತ್ ಅವರು ಈದಿನ ಮಲ್ಯ ಅವರನ್ನು ಘೋಷಿತ ಅಪರಾಧಿ ಎಂದು ಘೋಷಿಸಿದರು೩೦ ದಿನಗಳ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರಾಗಲು ವಿಜಯ್ ಮಲ್ಯ ಅವರು ವಿಫಲರಾದ ಹಾಗೂ ಅವರ ಪರವಾಗಿ ಯಾರೂ ಪ್ರತಿನಿಧಿಸದ ಹಿನ್ನೆಲೆಯಲ್ಲಿ ಅವರನ್ನು ಘೋಷಿತ ಅಪರಾಧಿ ಎಂಬುದಾಗಿ ಘೋಷಿಸಲಾಗಿದೆ ಎಂದು ನ್ಯಾಯಾಲಯ ಹೇಳಿತು೨೦೧೭ರ ಏಪ್ರಿಲ್ ೧೨ರಂದು ನ್ಯಾಯಾಲಯ ಮಲ್ಯ ಅವರ ವಿರುದ್ಧ ಜಾರಿಗೆ ಕಾಲಮಿತಿ ಇಲ್ಲದ ಜಾಮೀನುರಹಿತ ವಾರಂಟ್ (ಓಪನ್ ಎಂಡೆಡ್ ಎನ್ ಬಿ ಡಬ್ಲ್ಯೂ) ಜಾರಿ ಮಾಡಿತ್ತು. ೨೦೧೬ರ ನವೆಂಬರ್ ೪ರಂದು ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದ ನ್ಯಾಯಾಲಯಅವರಿಗೆ ಹಿಂದಿರುಗುವ ಇಚ್ಛೆ ಇಲ್ಲ ಮತ್ತು ನಾಡಿನ ಕಾನೂನಿನ ಬಗ್ಗೆ ಗೌರವ ಇಲ್ಲ ಎಂದು ಹೇಳಿತ್ತು. ಹಲವಾರು ಪ್ರಕರಣಗಳಲ್ಲಿ ಹಾಜರಾಗದೆ ತಲೆತಪ್ಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಲ್ಯ ವಿರುದ್ಧ ಆಗ್ರಹಪೂರ್ವಕ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.

2018: ಇಸ್ಲಾಮಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ರಾಷ್ಟ್ರದ ವಿರುದ್ಧ  ’ಭಾರತದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಅಸಿಫ್ ಅವರು ಆಪಾದಿಸಿದರು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸಂಸದೀಯ ಸಮಿತಿಯನ್ನು ಉದ್ದೇಶಿಸಿಟ್ರಂಪ್ ಅವರ ಇತ್ತೀಚೆಗಿನ ಟೀಕೆಗಳ ಪರಿಣಾಮವಾಗಿ ಪಾಕಿಸ್ತಾನ ಮತ್ತು ಅಮೆರಿಕದ ಮಧ್ಯೆ  ಉಂಟಾಗಿರುವ ಪ್ರಕ್ಷುಬ್ಧತೆ ಕುರಿತು ಮಾತನಾಡುತ್ತಿದ್ದ ಅವರುಅಮೆರಿಕವು ಆಫ್ಘಾನಿಸ್ಥಾನದಲ್ಲಿನ ತನ್ನ ವೈಫಲ್ಯಕ್ಕೆ ಪಾಕಿಸ್ತಾನವನ್ನು ಬಲಿಪಶು ಮಾಡುತ್ತಿದೆ ಎಂದು ಹೇಳಿದರು. ಅಮೆರಿಕವು ನೀಡಿದ ೩೩ ಶತಕೋಟಿ ಡಾಲರ್ ನೆರವಿಗೆ ಪ್ರತಿಯಾಗಿ ಪಾಕಿಸ್ತಾನವು ಸುಳ್ಳುಗಳು ಮತ್ತು ವಂಚನೆಗಳ ಹೊರತಾಗಿ ಬೇರೆ ಏನನ್ನೂ ನೀಡಿಲ್ಲ ಎಂದು ಟ್ರಂಪ್ ಇತ್ತೀಚೆಗೆ ಕಟುವಾಗಿ ಟೀಕಿಸಿದ್ದರು‘ಟ್ರಂಪ್ ಅವರು ಭಾರತದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಅಸಿಫ್ ಅವರು ಸಂಸದರಿಗೆ ಹೇಳಿದರು ಎಂದು ಮೂಲಗಳು ತಿಳಿಸಿದವು. ಅಮೆರಿಕದ ನಾಯಕರ ಹೇಳಿಕೆಗಳು ವಾಸ್ತವಕ್ಕೆ ವಿರುದ್ಧವಾಗಿವೆ ಎಂದೂ ಅಸಿಫ್ ನುಡಿದರು ಎಂದು ಮೂಲಗಳು ಹೇಳಿವೆಸಮಿತಿಯ ಮುಖ್ಯಸ್ಥರಾದ ರಾಷ್ಟ್ರೀಯ ಅಸೆಂಬ್ಲಿಯ ಸಭಾಧ್ಯಕ್ಷ ಅಯಾಜ್ ಸಾದಿಖ್ ಅವರುಅಮೆರಿಕ ಸಮತೋಲನದ ಹೇಳಿಕೆ ನೀಡಬೇಕು ಎಂದು ಸಭೆಯ ಬಳಿಕ ಮಾಧ್ಯಮದ ಜೊತೆ ಮಾತನಾಡುತ್ತ ಹೇಳಿದರು.


 2009: ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರು 'ಯಾವುದೇ ದೇಶಕ್ಕೆ ಸೇರದವರು' ಎಂಬ ಪಾಕಿಸ್ಥಾನದ ವಾದವನ್ನು ಗೃಹ ಸಚಿವ ಪಿ. ಚಿದಂಬರಮ್ ಅವರು ಸ್ಪಷ್ಟವಾಗಿ ಅಲ್ಲಗಳೆದರು. ಶಂಕಿತ ದಾಳಿಕೋರರನ್ನು ಭಾರತದ ವಶಕ್ಕೆ ನೀಡುವುದು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಪುನರುಚ್ಚರಿಸಿತು. ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಮುಂಬೈ ಮೇಲಿನ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡ ಇದೆ ಎನ್ನುವುದಕ್ಕೆ ಅಮೆರಿಕದ ಫೆಡರಲ್ ತನಿಖಾ ತಂಡವು (ಎಫ್‌ಬಿಐ) ತಾನು ಕಲೆಹಾಕಿರುವ ಸಾಕ್ಷ್ಯಾಧಾರಗಳನ್ನು ಪಾಕಿಸ್ಥಾನಕ್ಕೆ ನೀಡಿತು. 'ಮುಂಬೈ ಮುತ್ತಿಗೆ'ಯ ಸ್ವರೂಪ ಮತ್ತು ಸಂಚಿನ ತೀವ್ರತೆ ಗಮನಿಸಿದರೆ ಉಗ್ರರಿಗೆ ಪಾಕಿಸ್ಥಾನವೇ ನೆರವಾಗಿರುವುದು ದೃಢಪಟ್ಟಿದೆ. ಪಾಕಿಸ್ಥಾನ ಮತ್ತೊಮ್ಮೆ ಇಂತಹ ದುಃಸ್ಸಾಹಸಕ್ಕೆ ಕೈ ಹಾಕಿದರೆ ಅದು ಭಾರಿ ಬೆಲೆ ತೆರಬೇಕಾಗುತ್ತದೆ ಎಂದೂ ಚಿದಂಬರಮ್ ಎಚ್ಚರಿಕೆ ನೀಡಿದರು.

2009: ತಮ್ಮ ಬೇಡಿಕೆಗಳ ಈಡೇರಿಕೆ ಕುರಿತು ಕೇಂದ್ರ ಸರ್ಕಾರದೊಂದಿಗೆ ನಡೆದ ಮೂರನೇ ಸುತ್ತಿನ ಮಾತುಕತೆಯೂ ವಿಫಲವಾದ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾರಿಗಳು ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದವು. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬ್ರಹ್ಮ ದತ್ ಅವರು ಅಖಿಲ ಭಾರತ ಟ್ರಕ್ ಸಾರಿಗೆ ಕಾಂಗ್ರೆಸ್ ಜತೆಗೆ ನಡೆಸಿದ ಸಂಧಾನ ಮಾತುಕತೆ ಮುರಿದು ಬಿದ್ದಿತು. ಡೀಸೆಲ್ ಬೆಲೆ ಇಳಿಕೆ, ಟೋಲ್ ತೆರಿಗೆ ರದ್ದು, 'ಕ್ಯಾರಿಯರ್ಸ್‌ ಕಾಯ್ದೆ'ಯ ತಿದ್ದುಪಡಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಈ ಮುಷ್ಕರಕ್ಕೆ ಕರೆ ನೀಡಿತ್ತು.

2009: ಕಠ್ಮಂಡುವಿನ ಐತಿಹಾಸಿಕ ಪಶುಪತಿನಾಥ ದೇವಸ್ಥಾನದ ವಿವಾದವನ್ನು ರಾಜಕೀಯಕರಣಗೊಳಿಸದಂತೆ ನೇಪಾಳದ ಪದಚ್ಯುತ ದೊರೆ ಜ್ಞಾನೇಂದ್ರ ಜನರಲ್ಲಿ ಮನವಿ ಮಾಡಿದರು. ಮಾವೊವಾದಿ ಸರ್ಕಾರದಿಂದ ಪದಚ್ಯುತಗೊಳ್ಳುವ ಮುನ್ನ ದೇವಾಲಯದ ಪೋಷಕರಾಗಿದ್ದ ಅವರು, ಹೊಸದಾಗಿ ಹುಟ್ಟಿಕೊಂಡ ವಿವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಧಾರ್ಮಿಕ ಸೌಹಾರ್ದದ ಕಾರಣಕ್ಕಾಗಿಯೇ ವಿಶ್ವದಲ್ಲಿ ಮಾನ್ಯತೆ ಪಡೆದಿರುವ ನೇಪಾಳ, ಅದನ್ನು ಮುಂದುವರಿಸಿಕೊಂಡು ಹೋಗಬೇಕು. ದೇವಸ್ಥಾನದ ದೈನಂದಿನ ಆಚರಣೆಗಳು, ಧಾರ್ಮಿಕ ಚಟುವಟಿಕೆಗಳಿಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಹಿಂದೊಮ್ಮೆ ಭಗವಾನ್ ವಿಷ್ಣುವಿನ ಅವತಾರವೆಂದೇ ಜನರು ಪರಿಗಣಿಸುತ್ತಿದ್ದ ಆಗಿನ ದೊರೆ ಜ್ಞಾನೇಂದ್ರ ಹೇಳಿಕೆಯಲ್ಲಿ ಕೋರಿದರು.

2009: ಶ್ರೀಲಂಕಾ ಸೇನಾ ಪಡೆಯು ಎಲ್‌ಟಿಟಿಇ ಬಂಡುಕೋರರ ರಾಜಕೀಯ ರಾಜಧಾನಿ ಕೀಲಿನೋಚ್ಚಿ ವಶಪಡಿಸಿಕೊಂಡ ಬಳಿಕ ಉತ್ತರದಲ್ಲಿರುವ ಇನ್ನೊಂದು ಭದ್ರನೆಲೆ ಎಲಿಫೆಂಟ್ ಪಾಸ್ ಸ್ವಾಧೀನ ಪಡಿಸಿಕೊಳ್ಳಲು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿತು. ಕೀಲಿನೋಚ್ಚಿ ಕೊಲಂಬೊದಿಂದ 350 ಕಿ.ಮೀ ಅಂತರದಲ್ಲಿದ್ದರೆ, ಎಲಿಫೆಂಟ್‌ ಪಾಸ್ ಕೀಲಿನೋಚ್ಚಿಯಿಂದ 12 ಕಿ.ಮೀ ದೂರದಲ್ಲಿ ಜಾಫ್ನಾ-ಕ್ಯಾಂಡಿ ಮುಖ್ಯ ಹೆದ್ದಾರಿಯ ಬಳಿಯ ಜಾಗ. ಲಂಕಾಪಡೆ ಕೀಲಿನೋಚ್ಚಿ ಹಾಗೂ ಪರಂತನ್‌ನಿಂದ ಇನ್ನಷ್ಟು ಮುಂದೆ ಕಾರ್ಯಾಚರಣೆ ನಡೆಸಿದ್ದು ಎಲಿಫೆಂಟ್‌ ಪಾಸ್‌ನಿಂದ ಕೇವಲ ಎರಡು ಕಿ.ಮೀ ದೂರದಲ್ಲಿದೆ ಎಂದು ಸೇನಾ ಮೂಲಗಳು ಹೇಳಿದವು. 2000ರ ಏಪ್ರಿಲಿನಲ್ಲಿ ಸೇನಾನೆಲೆ ಎಲಿಫೆಂಟ್‌ ಪಾಸ್ ಅನ್ನು ಎಲ್‌ಟಿಟಿಇ ತನ್ನ ವಶಕ್ಕೆ ತೆಗೆದುಕೊಂಡಿತ್ತು. ನಂತರದ ದಿನಗಳಲ್ಲಿ ಇದು ಉಗ್ರರ ಭದ್ರ ನೆಲೆಯಾಗಿ ಮಾರ್ಪಟ್ಟಿತ್ತು.

2008: ವಿದ್ಯುತ್ ಚಾಲಿತ ಕಳೆಕೊಚ್ಚುವ ನೂತನ ಯಂತ್ರವನ್ನು ದಾವಣಗೆರೆ ಜಿಲ್ಲೆ ಶಾಮನೂರಿನ ಬಿ.ಆರ್. ಬಸವರಾಜ್ ಶೋಧಿಸಿದ್ದು, ಕಡಿಮೆ ವೆಚ್ಚದಲ್ಲಿ ಸಾಮಾನ್ಯ ರೈತರೂ ಬಳಸಬಹುದು ಎಂದು ರೈತ ಎಸ್.ಎಂ. ಪ್ರಭುದೇವಯ್ಯ ದಾವಣಗೆರೆಯಲ್ಲಿ ಬಹಿರಂಗಪಡಿಸಿದರು. ಈಗಾಗಲೇ ಮಾರುಕಟ್ಟೆಯಲ್ಲಿರುವ ಪೆಟ್ರೋಲ್ ಚಾಲಿತ ಯಂತ್ರ ಅಧಿಕ ಬೆಲೆ ಹಾಗೂ ವೆಚ್ಚದಾಯಕವಾಗಿದ್ದು, ಅದಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸಲಾದ ಈ ನೂತನ ಸಾಧನವನ್ನು ಅತ್ಯಂತ ಕಡಿಮೆ ಬೆಲೆಗೆ ರೈತರಿಗೆ ನೀಡಲಾಗುವುದು ಎಂದು ಅವರ ವಿವರಿಸಿದರು. 230 ವೋಲ್ಟೇಜ್, 700 ವ್ಯಾಟ್ ಸಾಮರ್ಥ್ಯ ಹಾಗೂ 10 ಸಾವಿರ ಆರ್ ಪಿ ಎಂ ಸಾಮರ್ಥ್ಯ ಹೊಂದಿರುವ ಯಂತ್ರಕ್ಕೆ ವೇಗನಿಯಂತ್ರಕ ಅಳವಡಿಸಲಾಗಿದ್ದು, ಅನುಕೂಲಕ್ಕೆ ತಕ್ಕಂತೆ ವೇಗ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ. ಒಂದು ಗಂಟೆಗೆ ಒಂದು ಯೂನಿಟ್ ವಿದ್ಯುತ್ ಖರ್ಚಾಗುತ್ತದೆ. ಪೆಟ್ರೋಲ್ ಚಾಲಿತ ಯಂತ್ರದ ಬೆಲೆ ಪ್ರಸ್ತುತ 26 ಸಾವಿರ ರೂ ಇದ್ದರೆ, ಅದಕ್ಕಿಂತಲೂ ಅತ್ಯುತ್ತಮವಾಗಿರುವ ವಿದ್ಯುತ್ ಚಾಲಿತ ಯಂತ್ರವನ್ನು ಕೇವಲ 9 ಸಾವಿರ ರೂಪಾಯಿ ಬೆಲೆಗೆ ಒದಗಿಸಲಾಗುತ್ತಿದೆ. ಅಲ್ಲದೆ ಯಂತ್ರಕ್ಕೆ ಸ್ಟೀಲ್ ಬ್ಲೇಡ್, ವೈರ್ ರೋಪ್ ಬಳಸಲಾಗಿದ್ದು, ಗ್ರೈಂಡಿಂಗ್ ಅಳವಡಿಸಲಾಗಿದೆ. ದಿನಕ್ಕೆ ಎರಡು ಎಕರೆ ಕಳೆಕೊಚ್ಚುವ ಶಕ್ತಿ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಡೇರಿ ಡಿಪ್ಲೋಮಾ ಓದಿರುವ ಸಾಮಾನ್ಯ ರೈತರಾದ ಬಸವರಾಜ್ ಈ ಹಿಂದೆ ಮಿನಿ ಡ್ರಿಲ್ಲರ್, ನೀರಿನ ಟ್ಯಾಂಕ್ ತುಂಬಿದ ತಕ್ಷಣ ಗಂಟೆ ಬಾರಿಸುವ ಯಂತ್ರಗಳ ಶೋಧನೆ ಮಾಡಿದ್ದಾರೆ.

2008: ಹೋಮ ಮಾಡುವ ಮೂಲಕ ಜಗತಾಪವನ್ನು (ಜಾಗತಿಕ ತಾಪಮಾನವನ್ನು) ತಗ್ಗಿಸಬಹುದೇ? ಪರಿಸರ ಸಂರಕ್ಷಣೆ ಸಾಧ್ಯವೇ? ಹೌದು ಎಂಬುದು ಅಗ್ನಿ ಹೋತ್ರ ಹೋಮದ ಬಗ್ಗೆ ಸಂಶೋಧನಾ ಮಹಾ ಪ್ರಬಂಧ ರಚಿಸಿ, ಪಿಎಚ್.ಡಿ ಪದವಿ ಪಡೆದಿರುವ ಡಾ.ಪೂರ್ತಿ ಆಚಾರ್ಯ ಸ್ಪಷ್ಟ ನುಡಿ. `ಹಿಮಾಚಲ ಪ್ರದೇಶದ ಉದ್ಗೀತ ಸಾಧನಾ ಸ್ಥಲಿ ಎಂಬಲ್ಲಿ 2001ರಿಂದ 2004ರವರೆಗಿನ ಅವಧಿಯಲ್ಲಿ ತಾವು ಕ್ಷೇತ್ರ ಕಾರ್ಯ ಕೈಗೊಂಡ ಸಂದರ್ಭದಲ್ಲಿ ಸೋಯಾಬಿನ್ ಗಿಡಗಳಿಗೆ ಹೋಮದ ಬೂದಿಯನ್ನು ಗೊಬ್ಬರವಾಗಿ ಹಾಕಿದಾಗ ಅವು ಅತ್ಯುತ್ತಮವಾಗಿ ಬೆಳೆದವು' ಎಂದು ಡಾ. ಆಚಾರ್ಯ ಬೆಂಗಳೂರಿನಲ್ಲಿ ಈದಿನ ವಿವರಿಸಿದರು. `ಸಹಾಯಕ ಅನಿಲಗಳು ಮತ್ತು ಶಬ್ಧ ಶಕ್ತಿಯನ್ನು ಬಿಡುಗಡೆ ಮಾಡುವ ಹೋಮದಿಂದ ಪರಿಸರದ ಸ್ವಾಸ್ಥ್ಯವನ್ನು ಕಾಪಾಡಬಹುದು. ಪರಿಸರ ಮಾಲಿನ್ಯದಿಂದಾಗಿ ಬೀಳುತ್ತಿರುವ ಆಮ್ಲ ಮಳೆ ಮತ್ತು ವಿಷಯುಕ್ತ ಅನಿಲಗಳ ಅಪಾಯವನ್ನು ಹೋಮದಿಂದ ತಡೆ ಗಟ್ಟಬಹುದು' ಎಂದು ವಿವರಿಸಿದರು. ಸಂಶೋಧನೆಗೆ ಮಾರ್ಗದರ್ಶನ ಮಾಡಿದ ವೇದ ವಿದ್ವಾಂಸ ಆಚಾರ್ಯ ನರೇಶ್ ಅವರು `ವೇದಗಳು ಯಾವುದೇ ಧರ್ಮಕ್ಕೆ ಸೀಮಿತವಲ್ಲ, ಪ್ರಪಂಚದ ಎಲ್ಲ ಜನರು ಅವುಗಳ ಪ್ರಯೋಜನ ಪಡೆಯಬಹುದು. ಪ್ರತಿ ಮನೆಯಲ್ಲಿ ಪ್ರತಿ ದಿನ ಹೋಮ ಮಾಡಿದರೆ ಆರೋಗ್ಯ ಮತ್ತು ಪರಿಸರ ವೃದ್ಧಿಯಾಗುತ್ತದೆ' ಎಂದು ವಿವರಿಸಿದರು.

2008: ಪರಿಸರವಾದಿ ಮತ್ತು ವನ್ಯಜೀವಿ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ. ಉಲ್ಲಾಸ್ ಕಾರಂತ್ ಅವರು ನಗರದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ಸಂಸ್ಥೆಯ ಫೆಲೊ ಆಗಿ ನೇಮಕಗೊಂಡರು.

2008: ನಿಷೇಧಿತ ಉದ್ದೀಪನ ಮದ್ದು ಸೇವಿಸಿ ಸಿಕ್ಕಿ ಬಿದ್ದ ಸ್ವಿಟ್ಜರ್ಲೆಂಡಿನ ಟೆನಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಮೇಲೆ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆಯು (ಐಟಿಎಫ್) ಎರಡು ವರ್ಷಗಳ ನಿಷೇಧ ಹೇರಿತು. 27ರ ಹರೆಯದ ಹಿಂಗಿಸ್ ಕಳೆದ ವರ್ಷದ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ವೇಳೆ ನಿಷೇಧಿತ ಕೊಕೇನ್ ಸೇವಿಸಿ ಸಿಕ್ಕಿ ಬಿದ್ದಿದ್ದರು. ಸ್ವಿಸ್ ಆಟಗಾರ್ತಿ ಉದ್ದೀಪನ ಮದ್ದು ಸೇವಿಸಿದ್ದು ತನಿಖೆಯ ವೇಳೆ ಸಾಬೀತಾಗಿತ್ತು. ಹಿಂಗಿಸ್ ಅವರು ತನಿಖೆಯಿಂದ ಹೊರಬಿದ್ದ ತೀರ್ಪನ್ನು ಪ್ರಶ್ನಿಸಿದ್ದರು. ಅಲ್ಲದೆ, ತನ್ನ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದರು. ಆದರೆ ಅವರ ಮನವಿಯನ್ನು ತಿರಸ್ಕರಿಸಿದ ಐಟಿಎಫ್ ಎರಡು ವರ್ಷ ನಿಷೇಧ ಹೇರಿತು. ನಿಷೇಧ ಶಿಕ್ಷೆ 2007ರ ಅಕ್ಟೋಬರ್ 1ರಿಂದ ಜಾರಿಗೆ ಬಂದಿದೆ ಎಂದು ಐಟಿಎಫ್ ಹೇಳಿತು. `ಸ್ವಿಸ್ ಮಿಸ್' ಖ್ಯಾತಿಯ ಹಿಂಗಿಸ್ 2007ರ ನವೆಂಬರಿನಲ್ಲಿ ವೃತ್ತಿಪರ ಟೆನಿಸ್ಸಿಗೆ ನಿವೃತ್ತಿ ಘೋಷಿಸಿದ್ದರು. ಆದ್ದರಿಂದ ಈ ನಿಷೇಧ ಶಿಕ್ಷೆ ಅವರ ಮೇಲೆ ವಿಶೇಷ ಪರಿಣಾಮ ಬೀರಲು ಸಾಧ್ಯವಿಲ್ಲ. ಹಿಂಗಿಸ್ ಐದು ಗ್ರ್ಯಾಂಡ್ ಸ್ಲಾಮ್ ಟೂರ್ನಿ ಒಳಗೊಂಡಂತೆ ಒಟ್ಟು 43 ಡಬ್ಲ್ಯುಟಿಎ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ವಿಶ್ವದ ಮಾಜಿ ಅಗ್ರ ರ್ಯಾಂಕಿಂಗಿನ ಆಟಗಾರ್ತಿ ಗಾಯದ ಕಾರಣ ಮೂರು ವರ್ಷಗಳ ಕಾಲ ಟೆನಿಸ್ಸಿನಿಂದ ದೂರ ಉಳಿದಿದ್ದರು. 2006ರಲ್ಲಿ ಮತ್ತೆ ಕಣಕ್ಕಿಳಿದ ಅವರು ನಿವೃತ್ತಿ ಪ್ರಕಟಿಸುವ ಮೊದಲು ಮೂರು ಪ್ರಶಸ್ತಿಗಳನ್ನು ಜಯಿಸುವಲ್ಲಿ ಯಶಸ್ವಿಯಾಗಿದ್ದರು.

2007: ವಿದೇಶ ಪ್ರವಾಸ ಮಾಡಿರುವ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರ ಪರ್ಯಾಯ ಪೀಠಾರೋಹಣ ಹಾಗೂ ಅವರಿಂದ ಕೃಷ್ಣ ಪೂಜೆಗೆ ತಡೆಯಾಜ್ಞೆ ಕೋರಿ ಉಡುಪಿ ಶಿರಿಬೀಡಿನ ನಿವಾಸಿಗಳಾದ ಸಿ.ಎಚ್. ನಾಗರಾಜರಾವ್ ಹಾಗೂ ಹರೀಶ್ ಭಟ್ ಅವರು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲು ಮಾಡಿದರು. ಇದರೊಂದಿಗೆ ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದ್ದ ಪರ್ಯಾಯ ವಿವಾದ ನ್ಯಾಯಾಲಯ ಮೆಟ್ಟಿಲೇರಿತು. ಪರ್ಯಾಯ ವಿಚಾರದಲ್ಲಿ ಸಾರ್ವಜನಿಕರಿಗೆ ಅಹವಾಲು ಮಂಡಿಸಲು ಅವಕಾಶ ನೀಡಬೇಕು ಹಾಗೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ನಡೆಸುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಪ್ರತ್ಯೇಕವಾಗಿ ಮನವಿ ಮಾಡಿದರು. ಈ ಪ್ರಕರಣದ ಪ್ರತಿವಾದಿಗಳಾಗಿ ಪುತ್ತಿಗೆ ಸ್ವಾಮೀಜಿ ಅವರ ಜತೆಗೆ ದ್ವಂದ್ವ ಮಠದ ಕೃಷ್ಣಾಪುರ ಸ್ವಾಮೀಜಿ ಅವರ ಹೆಸರನ್ನೂ ಸೇರಿಸಲಾಯಿತು. ಆದರೆ ಕೃಷ್ಣಾಪುರ ಸ್ವಾಮೀಜಿ ಅವರ ವಿರುದ್ಧ ಯಾವುದೇ ಆಕ್ಷೇಪಗಳು ದಾಖಲಾಗಲಿಲ್ಲ.

2008: ಭಾರತ ಕ್ರಿಕೆಟ್ ತಂಡದ ಸ್ಪಿನ್ ಬೌಲರ್ ಹರಭಜನ್ ಸಿಂಗ್ `ಭಜ್ಜಿ' ವಿರುದ್ಧ ಆಸ್ಟ್ರೇಲಿಯಾ ತಂಡದ ಆಟಗಾರ ಆಂಡ್ರೂ ಸೈಮಂಡ್ಸ್ ಅವರು ವೈಯಕ್ತಿಕ ಅವಹೇಳನ ಹಾಗೂ ಜನಾಂಗೀಯ ನಿಂದನೆಯ ಆರೋಪ ಮಾಡಿದರು. ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈದಿನ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಾಲ್ಕು ಟೆಸ್ಟ್ಗಳ ಸರಣಿಯ ಎರಡನೇ ಹಣಾಹಣಿಯ ಮೂರನೇ ದಿನದಾಟದ ಸಂದರ್ಭದಲ್ಲಿ ತಮ್ಮನ್ನು ಹರಭಜನ್ ನಿಂದಿಸಿದರು ಎಂದು ಕಾಂಗರೂಗಳ ನಾಡಿನ ಕ್ರಿಕೆಟಿಗ ದೂರಿದರು. ಸೈಮಂಡ್ಸ್ ಈ ವಿಷಯವನ್ನು ನಾಯಕ ರಿಕಿ ಪಾಂಟಿಂಗ್ ಗೆ ತಿಳಿಸಿದರು. ಪಾಂಟಿಂಗ್ ಅವರು ಕ್ಷೇತ್ರದ ಅಂಪೈರ್ಗಳಾದ ಮಾರ್ಕ್ ಬೆನ್ಸನ್ ಹಾಗೂ ಸ್ಟೀವ್ ಬಕ್ನರ್ ಗಮನಕ್ಕೆ ತಂದರು. ಅಂಪೈರ್ಗಳು ಘಟನೆಯ ವಿವರವನ್ನು ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್ ಅವರಿಗೆ ನೀಡಿದರು. ಫ್ರಾಕ್ಟರ್ ಅವರು ಪ್ರಕರಣವನ್ನು ವಿಚಾರಣಗೆ ಪರಿಗಣಿಸಿದರು.

2008: 2007-08ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ 7895 ಹುದ್ದೆಗಳ ಪೈಕಿ ಎಲ್ಲ ಜಿಲ್ಲೆಗಳಲ್ಲಿ ಶೇ ಒಂದರಷ್ಟನ್ನು ಅಂಧ ಅಭ್ಯರ್ಥಿಗಳಿಗೆ ಮೀಸಲಿಟ್ಟು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತು. 2007ರ ಜುಲೈ 30ರ ಅಧಿಸೂಚನೆ ಪ್ರಕಾರ ವಿಜ್ಞಾನ ಮತ್ತು ಗಣಿತಶಾಸ್ತ್ರ ವಿಷಯಗಳನ್ನು ಹೊರತುಪಡಿಸಿ, ಉಳಿದ ವಿಷಯಗಳಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಹಾಗೂ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಸೂಚಿಸಿತು. ಇದರಿಂದಾಗಿ ತಮ್ಮ ಹಕ್ಕಿಗಾಗಿ ಅನೇಕ ತಿಂಗಳ ಕಾಲ ಹೋರಾಟ ನಡೆಸುತ್ತಿದ್ದ ಅಂಧ ಅಭ್ಯರ್ಥಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಅಂಗವಿಕಲ ಅಧಿನಿಯಮದ ಪ್ರಕಾರ ಶಿಕ್ಷಕರ ಹುದ್ದೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಹುದ್ದೆ ಮೀಸಲಿಡಬೇಕು. ಈ ಮೀಸಲಾತಿಯಲ್ಲಿ ಶೇ 1ರಷ್ಟನ್ನು ಅಂಧರಿಗೆ ಇಡಬೇಕು. ಆದರೆ ಅದನ್ನು ಪಾಲಿಸದ ಸರ್ಕಾರ, ತಮ್ಮನ್ನು ಅವಕಾಶದಿಂದ ವಂಚಿಸಿದೆ ಎಂದು ಅಖಿಲ ಕರ್ನಾಟಕ ಅಂಧ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘವು ದೂರಿತ್ತು.

2008: ಮುಸ್ಲಿಮೇತರ ಧಾರ್ಮಿಕ ಪುಸ್ತಗಳಲ್ಲಿ `ಅಲ್ಲಾ' ಪದ ಬಳಸುವಂತಿಲ್ಲ. ಇದು ಈ ದೇಶದಲ್ಲಿರುವ ಮುಸ್ಲಿಮರಲ್ಲಿ ಗೊಂದಲ ಉಂಟುಮಾಡುತ್ತದೆ ಎಂದು ಮಲೇಷ್ಯಾ ಸರ್ಕಾರ ಹೇಳಿತು. ಇತರ ಧಾರ್ಮಿಕ ಪುಸ್ತಕಗಳಲ್ಲಿ `ಸೊಲಾಟ್' (ಮುಸ್ಲಿಮರ ಪ್ರಾರ್ಥನೆ), `ಕಾಬಾ' (ಪ್ರಾರ್ಥನೆ ಮಾಡುವ ದಿಕ್ಕು) ಹಾಗೂ `ಬೈತುಲ್ಲಾ' (ದೇವರ ಮನೆ) ಪದಗಳನ್ನೂ ಬಳಸುವಂತಿಲ್ಲ ಎಂದೂ ಸರ್ಕಾರ ತಿಳಿಸಿದೆ.

2007: ಕಾರವಾರದ ಐ ಎನ್ ಎಸ್ ನೌಕಾನೆಲೆಯಲ್ಲಿ `ಐ ಎನ್ ಎಸ್ ಶಾರ್ದೂಲ' ನೌಕೆಯನ್ನು ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಲ್ಯಾಂಡಿಂಗ್ ಶಿಪ್ ಅಪ್ಪಟ ಭಾರತೀಯ ತಾಂತ್ರಿಕತೆಯ ಪ್ರಥಮ ಹಡಗು. ಯುದ್ಧ ಮಾತ್ರವಲ್ಲ, ಚಂಡಮಾರುತ, ಸುನಾಮಿ, ಭೂಕಂಪದಂತಹ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ಜೀವ ರಕ್ಷಣೆಗೆ ಇದನ್ನು ಬಳಸಬಹುದು.

2007: ರಾಜ್ಯದ ಕುರಿಗಳಿಗೆ ವಿಮೆ ಒದಗಿಸುವ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಜನಶ್ರೀ' ಯೋಜನೆಗೆ ಉಪ ಮುಖ್ಯಮಂತಿ ಬಿ.ಎಸ್. ಯಡಿಯೂರಪ್ಪ ಅವರು ಕುರಿಗಾರರಿಗೆ ವಿಮಾಪತ್ರ ನೀಡುವ ಮೂಲಕ ಗುಲ್ಬರ್ಗದಲ್ಲಿ ಚಾಲನೆ ನೀಡಿದರು.

2007: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಗೆ ವಿಧಿಸಲಾದ ಮರಣದಂಡನೆ ಬಗ್ಗೆ ವಿಶ್ವದಾದ್ಯಂತ ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಅವರ ಇಬ್ಬರು ಸಹಚರರಿಗೆ ವಿಧಿಸಬೇಕಿದ್ದ ಗಲ್ಲು ಶಿಕ್ಷೆಯನ್ನು ಇರಾಕ್ ಸರ್ಕಾರ ಮುಂದೂಡಿತು.

2007: ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಮಾಜಿ ಆಡಳಿತ ನಿರ್ದೇಶಕ ಎನ್. ಶ್ರೀನಿವಾಸನ್ ಅವರು ಇಟಲಿ ಗಣರಾಜ್ಯವು ನೀಡುವ ಅಗ್ರ ಪ್ರಶಸ್ತಿ `ನೈಟ್' ಪದವಿಗೆ ಭಾಜನರಾದರು. ಭಾರತ ಮತ್ತು ಇಟಲಿ ನಡುವಣ ಸ್ನೇಹ ಮತ್ತು ಸಹಕಾರಕ್ಕಾಗಿ ನೀಡಲಾಗುವ ಈ ಪ್ರಶಸ್ತಿಯನ್ನು ಇಟಲಿಯಲ್ಲಿ ವಿಶೇಷ ಹೆಸರು ಗಳಿಸಿರುವ ವ್ಯಕ್ತಿಗೆ ನೀಡಲಾಗುತ್ತದೆ. ಪುರಸ್ಕಾರ ಆಯ್ಕೆಗೆ 16 ಜನ ಸದಸ್ಯರ ಸಮಿತಿ ಇದ್ದು ದೇಶದ ಪ್ರಧಾನಿ ಮತ್ತು ಅಧ್ಯಕ್ಷರಿಗೆ ಪುರಸ್ಕೃತರನ್ನು ಆಯ್ಕೆ ಮಾಡಿ ತಿಳಿಸುತ್ತದೆ.

2007: ಭಾರತೀಯ ರಾಸಾಯನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಐಸಿಟಿ) ಉಪ ನಿರ್ದೇಶಕರಾದ ಡಾ. ಎಸ್. ಚಂದ್ರಶೇಖರ್ ಅವರು ಈ ಸಾಲಿನ ರಾಜೀವ ಗೋಯಲ್ ಪ್ರಶಸ್ತಿಗೆ ಆಯ್ಕೆಯಾದರು.

2007: ತೀವ್ರ ಆತಂಕ ಮೂಡಿಸಿರುವ, ನೊಯಿಡಾದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬರ್ಬರ ಸರಣಿ ಹತ್ಯೆ ಪ್ರಕರಣಗಳ ಬಗೆಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರವು ಎಸ್ ಎಸ್ ಪಿ ಆರ್ .ಕೆ. ಎಸ್. ರಾಥೋಡ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಿತು. ಕೃತ್ಯದ ಬಗೆಗೆ ಸಿಬಿಐ ತನಿಖೆ ನಡೆಸಬೇಕು ಎಂಬ ಒತ್ತಡಕ್ಕೆ ಉತ್ತರ ಪ್ರದೇಶದ ರಾಜ್ಯಪಾಲ ಟಿ.ವಿ. ರಾಜೇಶ್ವರ್ ಅವರೂ ದನಿಗೂಡಿಸಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದರು.

2006: ಆಂಧ್ರಪ್ರದೇಶ ಸರ್ಕಾರವು ರಾಜ್ಯದ ಮುಸ್ಲಿಮರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ 5ರಷ್ಟು ಮೀಸಲಾತಿ ಕಲ್ಪಿಸಿದ್ದನ್ನು ರದ್ದುಪಡಿಸಿ ಹೈಕೋರ್ಟ್ ಸಂವಿಧಾನ ಪೀಠವು 2005 ನವೆಂಬರ್ 7ರಂದು ನೀಡಿದ ತೀರ್ಪಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು.

2006: ಅರಬ್ ರಾಷ್ಟ್ರಗಳ ಒಕ್ಕೂಟದ (ಯುಎಇ) ಉಪಾಧ್ಯಕ್ಷ, ದುಬೈ ರಾಜಮನೆತನಕ್ಕೆ ಸೇರಿದ ಶೇಖ್ ಮಹಮ್ಮದ್ ಬಿನ್ ರಷೀದ್ ಅಲ್ ಮಕ್ತೂಮ್ ಅವರು ಆಸ್ಟ್ರೇಲಿಯಾದಲ್ಲಿ ಮೃತರಾದರು.

2006: ಕನ್ನಡ ಚಿತ್ರ ನಿರ್ಮಾಪಕ ಕೆ.ಆರ್. ಶ್ರೀನಿವಾಸನ್ (60) ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ರಾಮ್ ಕುಮಾರ್ ಅಭಿನಯದ ಸೂರ್ಯಪುತ್ರ, ಜಗ್ಗೇಶ್ ಅಭಿನಯದ ಜಗತ್ ಕಿಲಾಡಿ ಹಾಗೂ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ ಮಹಾ ಎಡಬಿಡಂಗಿ ಚಿತ್ರಗಳನ್ನು ಅವರು ನಿರ್ಮಿಸಿದ್ದರು.

2006: ಕನ್ನಡ ನಟ, ನಿರ್ಮಾಪಕ ಪ್ರಸನ್ನಕುಮಾರ್ (46) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಸಿಂಹದ ಮರಿ ಸೈನ್ಯ, ಆಶಾ, ತಪ್ಪಿದ ತಾಳ, ಅಜಿತ್, ಚದುರಂಗ, ಮಕ್ಕಳ ಸೈನ್ಯ, ಪ್ರೀತ್ಸೋದ್ ತಪ್ಪಾ ಸೇರಿದಂತೆ 35ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಅವರು ಗಂಡಂದ್ರೆ ಗಂಡು, ಚದುರಂಗ ಚಿತ್ರಗಳ ಪಾಲುದಾರರೂ ಆಗಿದ್ದರು.

2006: ಕಾದಂಬರಿಗಾರ್ತಿ ಅಶ್ವಿನಿ (ಶ್ರೀಮತಿ ಎಂ.ವಿ. ಕನಕಮ್ಮ) ಅವರು 2006ನೇ ಸಾಲಿನ ಪದ್ಮ ಭೂಷಣ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದರು. ಸರೋಜಾದೇವಿ ಅವರು ತಮ್ಮ ಪುತ್ರಿ ಬಿ. ಭುವನೇಶ್ವರಿ ಸ್ಮರಣಾರ್ಥ ಈ ಪ್ರಶಸ್ತಿ ಸ್ಥಾಪಿಸ್ದಿದಾರೆ.

2001: ಭಾರತದ ಹಗುರ ಯುದ್ಧ ವಿಮಾನ ಬೆಂಗಳೂರಿನಲ್ಲಿ ತನ್ನ ಚೊಚ್ಚಲ ಹಾರಾಟ ನಡೆಸಿತು. ಇದರೊಂದಿಗೆ ಸ್ವಂತ ಸೂಪರ್ ಸಾನಿಕ್ ವಿಮಾನವನ್ನು ವಿನ್ಯಾಸಗೊಳಿಸಿದ ವಿಶೇಷ ರಾಷ್ಟ್ರಗಳ ಕೂಟಕ್ಕೆ ಭಾರತವೂ ಸೇರ್ಪಡೆಗೊಂಡಿತು.

1994: ಭಾರತೀಯ ಸಂಗೀತ ನಿರ್ದೇಶಕ ರಾಹುಲ್ ದೇವ್ ಬರ್ಮನ್ ಅವರು ನಿಧನರಾದರು.

1965: ಎಲಿಯೆಟ್ ಎಂದೇ ಖ್ಯಾತರಾಗಿದ್ದ ಥಾಮಸ್ ಸ್ಟೀಯರ್ನ್ಸ್ ತಮ್ಮ 76ನೇ
ವಯಸ್ಸಿನಲ್ಲಿ ನಿಧನರಾದರು.

1960: ನೊಬೆಲ್ ವಿಜೇತ ಫ್ರೆಂಚ್ ಸಾಹಿತಿ ಆಲ್ಬರ್ಟ್ ಕಾಮು ಅವರು ಕಾರು ಅಪಘಾತದಲ್ಲಿ ನಿಧನರಾದರು.

1958: ರಷ್ಯದ `ಸ್ಪುಟ್ನಿಕ್' ಉಪಗ್ರಹ 92 ದಿನಗಳ `ಬಾಹ್ಯಾಕಾಶ ವಾಸ'ದ ಬಳಿಕ ಭೂಮಿಗೆ ಉರಿದು ಬಿತ್ತು. ಭೂಕಕ್ಷೆಗೆ ತೆರಳಿದ ಮೊತ್ತ ಮೊದಲ ಮಾನವ ನಿರ್ಮಿತ ವಸ್ತು ಇದು.

1957: ವೃತ್ತಿಯಿಂದ ಮನಃಶಾಸ್ತ್ರ ಪ್ರವಾಚಕರೂ, ಪ್ರವೃತ್ತಿಯಿಂದ ಸುಗಮ ಸಂಗೀತಗಾರರೂ ಆದ ಡಾ. ಆರ್. ಗೋಪಾಲಕೃಷ್ಣ ಅವರು ರಾಮಸ್ವಾಮಿ- ಜಯಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1933: ಭಾರತದಾದ್ಯಂತ `ಶಾಸನ ಉಲ್ಲಂಘನೆ ದಿನ'ವಾಗಿ ಆಚರಿಸಲಾಯಿತು. 1934ರ ಮೇ ತಿಂಗಳಲ್ಲಿ ಕಾಂಗ್ರೆಸ್ ಪಕ್ಷವು ಭಾರತ ಸರ್ಕಾರ ಕಾಯ್ದೆಯ ಚೌಕಟ್ಟಿನಲ್ಲಿ ಕೆಲಸ ಮಾಡಲು ನಿರ್ಧರಿಸಿದಾಗ ಈ ಕಾನೂನು ಭಂಗ ಚಳವಳಿ ಕೊನೆಗೊಂಡಿತು.

1931: ಖಿಲಾಫತ್ ಧುರೀಣ ಮೌಲಾನಾ ಮಹಮ್ಮದ್ ಅಲಿ ಅವರು ತಮ್ಮ 52ನೇ ವಯಸ್ಸಿನಲ್ಲಿ ನಿಧನರಾದರು. ಅವರು ಮೊದಲ ದುಂಡು ಮೇಜಿನ ಪರಿಷತ್ತಿನಲ್ಲಿ ಪಾಲ್ಗೊಳಲು ಲಂಡನ್ನಿಗೆ ತೆರಳಿದ್ದರು.

1931: ಭಾರತೀಯ ಚಿತ್ರ ನಟಿ ನಿರುಪಾ ರಾಯ್ ಹುಟ್ಟಿದ ದಿನ.

1918: ಕಲಾವಿದ ಎ.ಕೆ. ಧರ್ಮಾಧಿಕಾರಿ ಜನನ.

1896: ಕನ್ನಡದ ಖ್ಯಾತ ಸಾಹಿತಿ ಶಂಕರ ಬಾಳ ದೀಕ್ಷಿತ ಜೋಶಿ (4-1-1896- 28-9-1991) (ಶಂ.ಬಾ. ಜೋಶಿ) ಈ ದಿನ ಜನಿಸಿದರು. ಹುಟ್ಟೂರು: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಗುರ್ಲಹೊಸೂರು. ಅಲ್ಲಿಯೇ ಬಾಲ್ಯದ ವಿದ್ಯಾಭ್ಯಾಸ. ಚಿಕ್ಕಂದಿನಲ್ಲಿಯೇ ತಂದೆಯ ಸಾವು. ಅಣ್ಣನ ಆಶ್ರಯ. ಪುಣೆಗೆ ಪಯಣ. ಓದಿನ ಹಠ. ಪುನಃ ಧಾರವಾಡಕ್ಕೆ. ಟ್ರೈನಿಂಗ್ ಕಾಲೇಜಿನಲ್ಲಿ ರ್ಯಾಂಕ್. ಚಿಕ್ಕೋಡಿಯಲ್ಲಿ ಶಿಕ್ಷಕ ವೃತ್ತಿ. ತಿಲಕರ ಭೇಟಿ, ಪ್ರಭಾವದಿಂದ ಖಾದಿಯ ಹುಚ್ಚು. ಪತ್ರಿಕೆಗಳಿಗೆ ಲೇಖನ. ಕರ್ಮವೀರದ ಸಂಪಾದಕತ್ವ. 1915-1930ರವರೆಗೆ ಸಂಸ್ಕತ- ಇಂಗ್ಲಿಷ್ ಅಧ್ಯಯನ. 1930ರಿಂದ 1969ರವರೆಗೆ ಅವಿಶ್ರಾಂತ ಬರವಣಿಗೆ. ಕರ್ನಾಟಕ ಇತಿಹಾಸ, ಕನ್ನಡ ಭಾಷಾ ಶಾಸ್ತ್ರ, ಜಾನಪದ ಸಾಹಿತ್ಯ, ಧಾರ್ಮಿಕ ಗ್ರಂಥಗಳ ಜೊತೆಗೆ ಹಲವಾರು ಗ್ರಂಥಗಳ ಅನುವಾದ. ಕಣ್ಮರೆಯಾದ ಕನ್ನಡ, ಮಹಾರಾಷ್ಟ್ರದ ಮೂಲ, ಕನ್ನಡದ ನೆಲೆ, ಕಂನುಡಿಯ ಹುಟ್ಟು, ಮಕ್ಕಳ ಒಡಪುಗಳು, ಸೌಂದರ್ಯ ವಿಚಾರ, ಸಾತತ್ಯ ಮತ್ತು ಸತ್ಯ, ಭಗವದ್ ಗೀತೆ, ಶಿವರಹಸ್ಯ, ಹಾಲುಮತ ದರ್ಶನ, ಋಗ್ವೇದ ಸಾರ- ನಾಗಪ್ರತಿಮಾ ವಿಚಾರ, ಬುಧನ ಜಾತಕ ಇತ್ಯಾದಿ ಕೃತಿಗಳ ರಚನೆ. ಪ್ರಶಸ್ತಿಗಳು: 1981ರ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮೈಸೂರು ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್. ಅಧ್ಯಯನ ಗ್ರಂಥ ಸದಾಕಾಲವೂ ಅಧ್ಯಯನ ನಿರತರಾಗಿದ್ದ ಶಂಬಾ ಅವರಿಗೆ ಅರ್ಪಿಸಲಾಗಿದ್ದ ಗೌರವ ಗ್ರಂಥ. ನಿಧನದ ಬಳಿಕ ಇವರಿಗೆ ಅರ್ಪಿಸಲಾದ ಗ್ರಂಥ ಶಂಬಾ ಸ್ಮತಿ ಗ್ರಂಥ.

1884: ಭಾರತೀಯ ತತ್ವಜ್ಞಾನಿ, ಸಮಾಜ ಸುಧಾರಕ ಕೇಶವ ಚಂದ್ರ ಸೇನ್ ಅವರು ತಮ್ಮ 45ನೇ ವಯಸ್ಸಿನಲ್ಲಿ ನಿಧನರಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment