Tuesday, January 8, 2019

ಜಾತ್ಯತೀತ ’ಆರ್ಥಿಕ’ ಬಡವರ ಮೀಸಲಾತಿಗೆ ಲೋಕಸಭೆ ಅಸ್ತು


ಜಾತ್ಯತೀತ 'ಆರ್ಥಿಕ ಬಡವರ ಮೀಸಲಾತಿಗೆ ಲೋಕಸಭೆ ಅಸ್ತು

ನವದೆಹಲಿ: ಸಾಮಾನ್ಯ ವರ್ಗದಲ್ಲಿ ಬರುವ ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ನೌಕರಿ/ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಶೇಕಡಾ ೧೦ ಮೀಸಲಾತಿ ಕಲ್ಪಿಸುವ ಸಂವಿಧಾನ (೧೨೪ನೇ ತಿದ್ದುಪಡಿ) ಮಸೂದೆ ೨೦೧೯ಕ್ಕೆ ಲೋಕಸಭೆಯು ಮಂಗಳವಾರ (08-01-2019) ತನ್ನ ಚಾರಿತ್ರಿಕ ಅನುಮೋದನೆಯನ್ನು ನೀಡಿತು. ಚರ್ಚೆಯ ಕೊನೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರೂ ಕ್ಷಣಕ್ಕೆ ಸಾಕ್ಷಿಯಾದರು.
323
ಮತಗಳು ಪರವಾಗಿ ಮತ್ತು 3 ಮತಗಳು ವಿರುದ್ಧವಾಗಿ ಬಂದವು.

ಮಸೂದೆಯ ಪ್ರಕಾರ, ಲಕ್ಷ ರೂಪಾಯಿಗಳ ಒಳಗಿನ ಆದಾಯ ಹೊಂದಿರುವ ಮತ್ತು ಎಕರೆ ಒಳಗಿನ ಭೂಮಿ ಹೊಂದಿರುವ ಸಾಮಾನ್ಯ ವರ್ಗದ ಎಲ್ಲ ವ್ಯಕ್ತಿಗಳು ಮೀಸಲಾತಿ ಸವಲತ್ತಿಗೆ ಅರ್ಹರಾಗುತ್ತಾರೆ. ವಿರೋಧ ಪಕ್ಷಗಳು ಮಸೂದೆಯ ಉದ್ದೇಶವನ್ನು ಪ್ರಶ್ನಿಸಿ ಟೀಕಿಸಿದರೂ, ಮಸೂದೆಗೆ ಬೆಂಬಲ ವ್ಯಕ್ತ ಪಡಿಸಿದವು.

ಸದನದಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಸಾಮಾಜಿಕ ನ್ಯಾಯ ಖಾತೆ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ಇದೊಂದು ಐತಿಹಾಸಕ ಕ್ರಮ. ಇಂತಹ ಮೀಸಲಾತಿ ಕೋರಿ ೨೧ ಬಾರಿ ಖಾಸಗಿ ಸದಸ್ಯರ ಮಸೂದೆಗಳು ಮಂಡನೆಯಾಗಿದ್ದವು. ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಕೂಡಾ ಇಂತಹ ಮೀಸಲಾತಿಯ ಬಗ್ಗೆ ಒಲವು ಹೊಂದಿದ್ದರು ಎಂದು ಹೇಳಿದರು.

ಸಚಿವಾಲಯವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶಿಷ್ಯವೇತನ (ಸ್ಕಾಲರ್ ಶಿಪ್) ಇತ್ಯಾದಿ ಹಲವಾರು ಯೋಜನೆಗಳ ಮೂಲಕ ನೆರವಾಗಲು ಯತ್ನಿಸುತ್ತಿದೆ. ಆದರೆ ಅವು ಸಾಕಾಗುತ್ತಿಲ್ಲ ಎಂದು ನುಡಿದ ಅವರು ಬ್ರಾಹ್ಮಣರು, ಥಾಕೂರ್, ಬನಿಯಾ, ಪಟೇಲ್ ಮತ್ತು ಹಾಲಿ ಮೀಸಲಾತಿ ವ್ಯವಸ್ಥೆಯ ಅಡಿಯಲ್ಲಿ ಯಾರಿಗೆ ಮೀಸಲಾತಿಯ ಅನುಕೂಲ ಇಲ್ಲವೋ ಅಂತಹ ಎಲ್ಲರಿಗೂ ಇದು ಅನುಕೂಲವಾಗಲಿದೆ ಎಂದು ಸಚಿವರು ನುಡಿದರು. ಸದಸ್ಯರು ಇತರ ಜಾತಿಗಳನ್ನು ಪ್ರಸ್ತಾಪಿಸಿದಾಗ ಸಚಿವರು ಹೌದು, ಎಲ್ಲರೂ ಒಳಗೊಳ್ಳುತ್ತಾರೆ ಎಂದು ಉತ್ತರಿಸಿದರು.

ಮಸೂದೆಯು ನರೇಂದ್ರ ಮೋದಿ ಸರ್ಕಾರವು ೨೦೧೪ರ ಚುನಾವಣೆಗೆ ಮುನ್ನ ನೀಡಲಾಗಿದ್ದ ಭರವಸೆಯಂತೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಗುರಿಗೆ ಬದ್ಧವಾಗಿರುವುದಕ್ಕೆ ಸಾಕ್ಷಿ ಎಂದು ಗೆಹ್ಲೋಟ್ ನುಡಿದರು.

ಕೆಲವು ಸದಸ್ಯರು ಕಲಾಪ ಸಲಹಾ ಮಂಡಳಿ ಸಭೆಯಲ್ಲಿ ಬಾರದ ಕಾರಣ ಮಸೂದೆ ಮಂಡಿಸುವಂತಿಲ್ಲ ಎಂದು ಕೆಲವು ಸದಸ್ಯರು ಆಕ್ಷೇಪಿಸಿದರು. ಆದರೆ ಲೋಕಸಭಾಧ್ಯಕ್ಷರು ತಾನು ಇದನ್ನು ಸೇರ್ಪಡೆ ಮಾಡಲು ಅನುಮತಿ ನೀಡಿರುವುದಾಗಿ ಸ್ಪಷ್ಟ ಪಡಿಸಿದರು.

ಮಸೂದೆಯನ್ನು ಸಮರ್ಥಿಸಿ ಸದನದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಬ್ಬರು ವ್ಯಕ್ತಿಗಳು ಜನ್ಮ ಅಥವಾ ಆರ್ಥಿಕ ಕಾರಣಗಳಿಗಾಗಿ ಸಮಾನರಲ್ಲದೇ ಇದ್ದಲ್ಲಿ, ಆಗ ಅವರನ್ನು ಸಮಾನವಾಗಿ ಕಾಣಲಾಗುವುದಿಲ್ಲ. ಅಸಮಾನರನ್ನು ಸಮಾನವಾಗಿ ನೋಡಲು ಆಗುವುದಿಲ್ಲ ಎಂದು ಹೇಳಿದರು.

ಸುಪ್ರೀಂಕೋರ್ಟ್ ಮೀಸಲಾತಿಯ ಮೇಲೆ ಶೇಕಡಾ ೫೦ರ ಮಿತಿ ವಿಧಿಸಿರುವುದು ಸಂವಿಧಾನದ ೧೬() ಪರಿಚ್ಛೇದಕ್ಕೆ ಸಂಬಂಧಿಸಿದಂತೆ ಮಾತ್ರ. ಅದು ಜಾತಿ ಆಧಾರಿತ ಮೀಸಲಾತಿಗೆ. ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಜೇಟ್ಲಿ ನುಡಿದರು.

ಮೀಸಲಾತಿ ಮಸೂದೆ ಬಗ್ಗೆ ಕಾಂಗ್ರೆಸ್ ಪರವಾಗಿ ಮಾತನಾಡಿದ ಮೊದಲ ಸದಸ್ಯರು ವ್ಯಕ್ತ ಪಡಿಸಿದ ಕಳವಳವನ್ನು ಪ್ರಸ್ತಾಪಿಸಿದ ಜೇಟ್ಲಿ ೨೦೧೪ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯತ್ತ ಬೊಟ್ಟು ಮಾಡಿ ವಿರೋಧ ಪಕ್ಷವು ತುಂಬು ಹೃದಯದಿಂದ ಉಪಕ್ರಮವನ್ನು ಬೆಂಬಲಿಸಬೇಕು, ಗೊಣಗುತ್ತಾ ಅಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿ ಒದಗಿಸುವ ಭರವಸೆ ನೀಡಿದ ಪ್ಯಾರಾ ಒಂದನ್ನು ಓದಿ ಹೇಳಿದ ಜೇಟ್ಲಿ ಬಹುತೇಕ ಪಕ್ಷಗಳ ಪ್ರಣಾಳಿಕೆಗಳು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಮೀಸಲಾತಿಯ ಭರವಸೆ ನೀಡಿವೆ. ತಮ್ಮ ಭರವಸೆಗಳಿಗೆ ಅವರ ಬದ್ಧತೆ ಎಷ್ಟು ಎಂಬುದು ಇಂದು ಪರೀಕ್ಷೆಗೆ ಒಳಗಾಗಿದೆ ಎಂದು ನುಡಿದರು.

ಅನುದಾನಿತ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೂ ಮಸೂದೆ ಅನ್ವಯಿಸುತ್ತದೆ ಎಂದು ನುಡಿದ ಜೇಟ್ಲಿ ನಿರ್ಣಯವನ್ನು ಬೆಂಬಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪ್ರೊಫೆಸರ್ ಕೆವಿ ಥಾiಸ್ ಅವರು ವ್ಯಕ್ತಿಯ ಸಮುದಾಯಕ್ಕೆ ಬದಲಾಗಿ ಆತನ ಆರ್ಥಿಕ ಸ್ಥಿತಿಗತಿಯನ್ನು ಆಧರಿಸಿ ರಾಷ್ಟ್ರಮಟ್ಟದಲ್ಲಿ ಮೀಸಲಾತಿ ಕಲ್ಪಿಸುವ ಮಸೂದೆಯ ಮೇಲೆ ಮೊತ್ತ ಮೊದಲಿಗರಾಗಿ ಮಾತನಾಡಿದರು. ಏನಿದ್ದರೂ ಹೆಚ್ಚಿನ ಪರಾಮರ್ಶೆಗಾಗಿ ಮಸೂದೆಯನ್ನು ಸ್ಥಾಯಿ ಸಮಿತಿಗೆ ಒಪ್ಪಿಸಬೇಕು ಎಂದು ಅವರು ಬಯಸಿದರು.

ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ಇಂತಹ ಉಪಕ್ರಮವನ್ನು ಎನ್ಡಿಎ ಸರ್ಕಾರ ಕೈಗೊಂಡದ್ದು ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿತ್ತು. ಸರ್ಕಾರದ ಉದ್ದೇಶವನ್ನೂ ಅದು ಪ್ರಶ್ನೆ ಮಾಡಿತ್ತು. ಆದರೆ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಅದು ಹೇಳಿತ್ತು.

ಸರ್ಕಾರದಿಂದ ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಕೋಟಾವನ್ನು ಹೇಗೆ ಜಾರಿಗೆ ತರುತ್ತೀರಿ ಎಂದು ಪ್ರೊಫೆಸರ್ ಥಾಮಸ್ ಪ್ರಶ್ನಿಸಿದರು. ಸಹಸ್ರಾರು ಮಂದಿ ಉದ್ಯೋಗವಂಚಿರತಾಗಿರುವ ಬಗೆಗಿನ ಸಮೀಕ್ಷೆಯನ್ನು ಉಲ್ಲೇಖಿಸುವ ಮೂಲಕ ಅವರು ಸರ್ಕಾರವನ್ನು ತಿವಿದರು. ಗ್ರಾಮೀಣ ಭಾಗಗಳಲ್ಲಿ ಶೇಕಡಾ ೮೩ಕ್ಕೂ ಹೆಚ್ಚಿನ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ಹೇಳಿದರು.

ಜೇಟ್ಲಿ ಅವರು ಉದ್ಯೋಗದ ಅಂಕಿಸಂಖ್ಯೆಗಳಿಗೆ ಉತ್ತರ ನೀಡಲಿಲ್ಲ, ಬಗ್ಗೆ ಬೇರೊಂದು ದಿನ ಮಾತನಾಡುವೆ ಎಂದು ಅವರು ಹೇಳಿದರು. ಆದರೆ ಆರ್ಥಿಕ ದುರ್ಬಲರಿಗೆ ಮೀಸಲಾತಿ ಒದಗಿಸುವುದಾಗಿ ಭರವಸೆ ನೀಡಿದ ಕಾಂಗ್ರೆಸ್ ಪ್ರಣಾಳಿಕೆಯ ಪ್ಯಾರಾವನ್ನು ಓದಿ ಹೇಳಿದರು. ಜುಮ್ಲಾ ಅವರಿಂದ (ಕಾಂಗ್ರೆಸ್) ಬಂದಿದೆ ಎಂದು ಜೇಟ್ಲಿ ಚುಚ್ಚಿದರು.

ತೃಣಮೂಲ ಕಾಂಗ್ರೆಸ್, ಎಐಎಡಿಎಂಕೆ ಮತ್ತು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಕೂಡಾ ಮಸೂದೆ ಬಗ್ಗೆ ಕಠಿಣ ನಿಲುವು ತಾಳಲಿಲ್ಲ. ಆದರೆ ಎಐಎಡಿಎಂಕೆಯ ತಂಬಿದುರೈ ಅವರು ಸಾಮಾಜಿಕ ಸ್ಥಾನಮಾನಕ್ಕೆ ಬದಲಾಗಿ ಆರ್ಥಿಕ ಮಾನದಂಡವನ್ನು ಆಧರಿಸಿ ಮೀಸಲಾತಿ ಒದಗಿಸುವ ಕಲ್ಪನೆಯನ್ನು ಪ್ರಶ್ನಿಸಿದರು. ನ್ಯಾಯಾಲಯಗಳು ಇದನ್ನು ರದ್ದು ಪಡಿಸಬಹುದು ಎಂದು ಅವರು ಭವಿಷ್ಯ ನುಡಿದರು.

ಎನ್ಡಿಎ ತ್ಯಜಿಸಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಸೇರಿದ ಬಿಹಾರಿನ ಆರ್ ಎಲ್ ಎಸ್ ಪಿಯ ಉಪೇಂದ್ರ ಕುಶವಾಹ ಅವರು ನನ್ನ ಕ್ಷೇತ್ರದ ಮೇಲ್ಜಾತಿಯ ಜನ ಯಾವಾಗಲೂ ತಮಗೆ ಎಂದೂ ಮೀಸಲಾತಿಯ ಸೌಲಭ್ಯ ಸಿಕ್ಕಿಲ್ಲ ಎಂದು ಉದ್ವಿಗ್ನರಾಗಿರುತ್ತಾರೆ. ಕ್ರಮ ಅವರಿಗೆ ನೆರವಾಗಬಲ್ಲುದು. ಸರ್ಕಾರಿ ಶಾಲಾ ಮಕ್ಕಳಿಗೆ ಆದ್ಯತೆ ಕೊಡಿ ಎಂದು ನುಡಿದ ಅವರು  ಮಸೂದೆಗೆ ನಾವು ಕೆಲವೊಂದು ತಿದ್ದುಪಡಿಗಳನ್ನು ಸಲಹೆ ಮಾಡುತ್ತೇವೆ ಎಂದು ಹೇಳಿದರು.

ಜಾತಿಯನ್ನು ಆಧರಿಸದ ಮೀಸಲಾತಿ ಒಳ್ಳೆಯ ಉಪಕ್ರಮ ಎಂದು ನುಡಿದ ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವ್ಯವಸ್ಥೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಖಾಸಗಿ ರಂಗಕ್ಕೂ ಕೋಟಾ ವ್ಯವಸ್ಥೆ ಜಾರಿಗೆ ತರಬೇಕು ಎಂದು ಹೇಳಿದರು.

ಸ್ವಾತಂತ್ರ್ಯಾನಂತರ ಜನರಿಗೆ ಸಮರ್ಪಕ ಮೂಲ ಸವಲತ್ತು ಒದಗಿಸದ ಪರಿಣಾಮವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗ ಸೃಷ್ಟಿಯಾಯಿತು ಎಂದು ಟಿಆರ್ ಎಸ್ ಎಪಿ ಜಿತೇಂದರ್ ರೆಡ್ಡಿ ಹೇಳಿದರು.

ಬಾಳ್ ಠಾಕ್ರೆ ಅವರ ಕಲ್ಪನೆಯಾಗಿರುವುದರಿಂದ ನಾನು ಮಸೂದೆಯನ್ನು ಬೆಂಬಲಿಸುವೆ. ಇದಕ್ಕೆ ನಾಲ್ಕೂವರೆ ವರ್ಷ ಏಕೆ ಬೇಕಾಯಿತು ಎಂಬುದಷ್ಟೇ ನನ್ನ ಏಕೈಕ ಪ್ರಶ್ನೆ. ವಿಪಕ್ಷಗಳು ಚುನಾವಣೆ ಹತ್ತಿರ ಬರುತ್ತಿರುವುದು ಇದಕ್ಕೆ ಕಾರಣ ಎನ್ನುತ್ತಿವೆ ಎಂದು ಶಿವಸೇನೆಯ ಆನಂದರಾವ್ ಅಡ್ಸುಲ್ ಹೇಳಿದರು. ಏನಿದ್ದರೂ ಎಂದೂ ಆಗದೇ ಇರುವುದಕ್ಕಿಂತ ಎಂದಾದರೂ ಒಂದು ದಿನ ಆಗುವುದು ಒಳ್ಳೆಯದು ಎಂದು ಅವರು ನುಡಿದರು.

ಕೋಟಾ ಮಸೂದೆಗೆ ಕೊಟ್ಟಷ್ಟೇ ಆದ್ಯತೆಯನ್ನು ಮಹಿಳಾ ಮೀಸಲಾತಿ ಮಸೂದೆಗೆ ಏಕೆ ನೀಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ಸಿನ ಸುದೀಪ್ ಬಂದೋಪಾಧ್ಯಾಯ ಪ್ರಶ್ನಿಸಿದರು. ಭರವಸೆ ಕೊಡುತ್ತೀರಿ. ಆದರೆ ಕನಸುಗಳು ನನಸಾಗುವುದಿಲ್ಲ. ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಿ ಎಂದು ಅವರು ನುಡಿದರು.

ಮೀಸಲಾತಿ ಪ್ರಮಾಣವನ್ನು ಶೇಕಡಾ ೭೦ಕ್ಕೆ ಏರಿಸಬೇಕು ಎಂದು ಎಐಎಡಿಎಂಕೆ ಸದಸ್ಯರು ಆಗ್ರಹಿಸಿದರು.
ಮೇಲ್ಜಾತಿಯ ಬಡವರಿಗೆ ಇದು ಹೋಳಿ ಮತ್ತು ದೀಪಾವಳಿ ಹಬ್ಬ ಎಂದು ಬಿಜೆಪಿ ಸದಸ್ಯರೊಬ್ಬರು ಬಣ್ಣಿಸಿದರು. ಚರ್ಚೆಯಲ್ಲಿ ಪಾಲ್ಗೊಂಡ ಬಹುತೇಕ ಸದಸ್ಯರು ಕ್ರಮವನ್ನು ಬೆಂಬಲಿಸಿದರು. ಇತರ ಮಿತ್ರ ಪಕ್ಷಗಳೂ ಬೆಂಬಲಿಸಿದವು.

ಮಸೂದೆಯು ಸಂವಿಧಾನಕ್ಕೆ ಬಗೆದ ವಂಚನೆ  ಮತ್ತು ಡಾ. ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ. ಸಂವಿಧಾನವು ಆರ್ಥಿಕ ಹಿಂದುಳಿದವರನ್ನು ಮಾನ್ಯ ಮಾಡಿಲ್ಲ ಎಂದು ಅಸಾದುದ್ದೀನ್ ಒವೈಸಿ ಟೀಕಿಸಿದರು.

ಮೀಸಲಾತಿ ಮತ್ತು ತ್ರಿವಳಿ ತಲಾಖ್ ಮಸೂದೆಗಳ ಹೊರತಾಗಿ ರಫೇಲ್ ಯುದ್ಧ ವಿಮಾನ ವಹಿವಾಟು, ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತ ಪಡಿಸುವುದರೊಂದಿಗೆ ಲೋಕಸಭೆಯ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಮಂಗಳವಾರ ಕೂಡಾ ಗದ್ದಲವನ್ನು ಕಂಡಿತು.

No comments:

Post a Comment