ಸಾಗರ
ಸ್ವಚ್ಛಗೊಳಿಸುವ
ಹಡಗು:
ಪುಣೆ (ಮಹಾರಾಷ್ಟ್ರ): ೧೨ ವರ್ಷ ವಯಸ್ಸಿನ ಪುಣೆ ಮೂಲದ ಬಾಲಕ ಹಾಜಿಕ್ ಕಾಜಿ ‘ಎರ್ವಿಸ್’
(ಇಆರ್
ವಿಐಎಸ್
) ಎಂಬ ಹಡಗು
ಒಂದನ್ನು
ವಿನ್ಯಾಸಗೊಳಿಸಿದ್ದು
ಈ
ಹಡಗು
ಸಾಗರ/
ಸಮುದ್ರ
ತ್ಯಾಜ್ಯವನ್ನು
ನಿವಾರಿಸಿ
ಅವುಗಳನ್ನು
ಸ್ಚಚ್ಛಗೊಳಿಸಬಲ್ಲುದು.
ತನ್ಮೂಲಕ
ಸಾಗರ
ಜೀವಿಗಳ
ಪ್ರಾಣವನ್ನೂ
ಇದು
ಕಾಪಾಡಬಲ್ಲುದು.
ಇರ್ವಿಸ್ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ವೈಶಿಷ್ಠ್ಯ ಏನು ಎಂಬುದಾಗಿ ವಿವರಿಸುವ ಕಾಜಿ ‘ತಟ್ಟೆಗಳು ತ್ಯಾಜ್ಯವನ್ನು ಹೀರಿಕೊಳ್ಳಲು ಸೆಂಟ್ರಿಪೆಟಲ್ ಬಲವನ್ನು ಬಳಸುತ್ತವೆ. ನಂತರ ಅದು ನೀರು, ಸಮುದ್ರ ಜೀವಿಗಳು ಮತ್ತು ತ್ಯಾಜ್ಯಗಳನ್ನು ಬೇರ್ಪಡಿಸುತ್ತದೆ. ಸಾಗರ ಜೀವಿಗಳು ಮತ್ತು ನೀರನ್ನು ಸಾಗರಕ್ಕೆ ವಾಪಸ್ ಕಳಿಸಲಾಗುತ್ತದೆ, ಉಳಿದುಕೊಳ್ಳೂವ ತ್ಯಾಜ್ಯಗಳು ಐದು ಐದು ಭಾಗಗಳಾಗಿ ವಿಂಗಡಿಸಲ್ಪಡುತ್ತವೆ’ ಎಂದು ಹೇಳುತ್ತಾನೆ.
ಹಾಜಿಕ್ ತನ್ನ
ಕಲ್ಪನೆಯನ್ನು ಟೆಡೆಕ್ಸ್ ಮತ್ತು ಟೆಡ್ ೮ ಮುಂತಾದ ವಿವಿಧ ವೇದಿಕೆಗಳ ಮೂಲಕ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದು, ಅನೇಕ ಅಂತಾರಾಷ್ಟ್ರೀಯ ವಿದ್ವಾಂಸರು ಮತ್ತು ಸಂಸ್ಥೆಳಿಂದ
ಮೆಚ್ಚುಗೆ ಗಳಿಸಿದ್ದಾನೆ.
.
ತನ್ನ ವಿನ್ಯಾಸದ ಹಡಗು ತನ್ನ ತಳದಲ್ಲಿ ಯಂತ್ರವೊಂದನ್ನು
ಹೊಂದಿರುತ್ತದೆ
ಎಂದು
ಹಾಜಿಕ್
ಹೇಳುತ್ತಾನೆ.
ಹಾಜಿಕ್
ಪ್ರಕಾರ
ಈ
ಯಂತ್ರವು
ಸಾಗರದಿಂದ ಪ್ಲಾಸ್ಟಿಕ್ ಅನ್ನು ಹೀರಿಕೊಳ್ಳುತ್ತದೆ ಮತ್ತು ಅದರ ಗಾತ್ರಕ್ಕೆ ಅನುಗುಣವಾಗಿ
ಅದನ್ನು ಪ್ರತ್ಯೇಕಿಸುತ್ತದೆ. ಸಮುದ್ರದ ಮೇಲೆ ಸಾಗುತ್ತಿರುವಾಗ ಸಾಗರ ಜೀವಿಗಳು,
ನೀರು ಮತ್ತು ಪ್ಲಾಸ್ಟಿಕ್ಕನ್ನು
ಪತ್ತೆಹಚ್ಚುವಂತಹ
ಸಂವೇದಕರ
ಅಥವಾ ವ್ಯವಸ್ಥೆಯನ್ನು ಹಡಗಿನ ಕೆಳಭಾಗದಲ್ಲಿ ಮಾಡಲಾಗಿರುತ್ತದೆ.
ಅದರ ಪ್ರಕಾರ ತ್ಯಾಜ್ಯ
ಪ್ರತ್ಯೇಕಗೊಳ್ಳುತ್ತದೆ.
ಒಂಬತ್ತು ವರ್ಷದ
ಹುಡುಗನಾಗಿದ್ದಾಗ ಹಡಗಿನ ವಿನ್ಯಾಸ ಕಲ್ಪನೆಯು ತನ್ನ
ಮನಸ್ಸಿಗೆ ಬಂದಿತು ಎಂದು ಹಾಜಿಕ್ ಹೇಳುತ್ತಾನೆ.
ಕಡಲ
ಜೀವಿಗಳ
ಸಲುವಾಗಿ
ಏನಾದರೂ
ಮಾಡಬೇಕು
ಎಂಬುದಾಗಿ
ಯೋಚಿಸುವ
ಹಾಜಿಕ್
ಹಲವಾರು ಸಾಕ್ಷ್ಯಚಿತ್ರಗಳ ವೀಕ್ಷಣೆಯ
ಬಳಿಕ
ಪ್ಲ್ಯಾಸ್ಟಿಕ್ ಮತ್ತು ಮಾಲಿನ್ಯದ ಕಾರಣದಿಂದ ಉಂಟಾಗುವ ಹಾನಿಯ ಬಗ್ಗೆ ಕೆಲವು ಸಂಗತಿಗಳನ್ನು ಅರಿತುಕೊಂಡುದಾಗಿ ವಿವರಿಸಿದ.
ಪ್ರಸ್ತುತ, ಸಾಗರ ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳ
ಬಗ್ಗೆ
ಬೆಳಕು
ಚೆಲ್ಲಿ,
ಸಾರ್ವಜನಿಕರಲ್ಲಿ
ಅರಿವು ಮೂಡಿಸಲು ವಿವಿಧ ಜನರು, ಸಂಘಟನೆಗಳು ಮತ್ತು ವೇದಿಕೆಗಳೊಂದಿಗೆ ಹಾಜಿಕ್
ಕೆಲಸ
ಮಾಡುತ್ತಿದ್ದಾನೆ.
No comments:
Post a Comment