Thursday, January 17, 2019

ಇಂದಿನ ಇತಿಹಾಸ History Today ಜನವರಿ 17

ಇಂದಿನ ಇತಿಹಾಸ History Today ಜನವರಿ 17
2019: ನವದೆಹಲಿ: ದೇಶವ್ಯಾಪಿ ಕುತೂಹಲ ಕೆರಳಿಸಿದ್ದಸಿಬಿಐ ವರ್ಸಸ್ ಸಿಬಿಐ ಪ್ರಕರಣದಲ್ಲಿ ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಮತ್ತು ಇತರ ಮೂವರು ಅಧಿಕಾರಿಗ ಳನ್ನೂ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಕಿತ್ತು ಹಾಕುವ ಅಚ್ಚರಿಯ ಕ್ರಮವನ್ನು ಕೇಂದ್ರ ಸರ್ಕಾರವು ಕೈಗೊಂಡಿತು. ರಾಕೇಶ್ ಅಸ್ತಾನ ಅವರ ಜೊತೆಗೆ ಸಿಬಿಐಯ ಇತರ ಅಧಿಕಾರಿಗಳಾದ ಅರುಣ್ ಕುಮಾರ್ ಶರ್ಮ, ಮನಿಶ್ ಕುಮಾರ್ ಸಿನ್ಹ ಮತ್ತು ಜಯಂತ್ ನಾಯ್ಕನವರೆ ಅವರನ್ನೂ ತತ್ ಕ್ಷಣದಿಂದ ಜಾರಿಗೆ ಬರುವಂತೆ ಸಿಬಿಐಯಿಂದ ಕಿತ್ತು ಹಾಕಲಾಯಿತುಕೇಂದ್ರೀಯ ಜಾಗೃತಾ ಆಯೋಗ (ಸಿವಿಸಿ) ಬೆಳಗ್ಗೆ ನಡೆಸಿದ ಸಭೆಯಲ್ಲಿ ನಾಲ್ವರು ಅಧಿಕಾರಿಗಳನ್ನು ಸಿಬಿಐಯಿಂದ ಕಿತ್ತು ಹಾಕುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿದವು.  ರಾಕೇಶ್ ಅಸ್ತಾನ ಅವರು ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರ ವಿರುದ್ಧ ಸಿವಿಸಿಗೆ ಭ್ರಷ್ಟಾಚಾರದ ಆಪಾದನೆ ಮಾಡಿ ದೂರು ನೀಡಿದ ಬಳಿಕ, ಸಿಬಿಐ ರಾಕೇಶ್ ಅಸ್ತಾನ ವಿರುದ್ಧ ಆರೋಪಿಯೊಬ್ಬರಿಂದ ಹಣ ಪಡೆದ ಆಪಾದನೆಯಲ್ಲಿ ಪ್ರಕರಣ ದಾಖಲಿಸಿತ್ತು. ರಾಕೇಶ್ ಅಸ್ತಾನ ಅವರು ತಮ್ಮ ಮಾಜಿ ಮುಖ್ಯಸ್ಥ, ಕಳೆದ ತಿಂಗಳು ವಜಾಗೊಂಡಿದ್ದ ಅಲೋಕ್ ವರ್ಮ ವಿರುದ್ಧ ತೀವ್ರ ಸ್ವರೂಪದ ಘರ್ಷಣೆಗೆ ಇಳಿದಿದ್ದರು.
ಅಸ್ತಾನ ಅವರ ಸಿಬಿಐಯಲ್ಲಿನ ಅಧಿಕಾರಾವಧಿಯನ್ನು ಮೊಟಕುಗೊಳಿಲಾಗಿದೆ ಎಂದು ಭಾರತ ಸರ್ಕಾರದ ಆದೇಶ ಹೇಳಿತು.  ಇದೇ ಆದೇಶದಲ್ಲಿ ಅಧಿಕಾರ ಮೊಟಕುಗೊಂಡ ಉಳಿದ ಮೂವರು ಸಿಬಿಐ ಅಧಿಕಾರಿಗಳ ಹೆಸರುಗಳನ್ನೂ ನೀಡಲಾಯಿತು. ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮ ಮತ್ತು ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮನಿಶ್ ಕುಮಾರ್ ಸಿನ್ಹ ಇವರಿಬ್ಬರೂ ಅಲೋಕ್ ವರ್ಮ ಅವರಿಗೆ ನಿಕಟವಾಗಿದ್ದು, ಅಸ್ತಾನಾ ವಿರುದ್ಧದ ಲಂಚ ಪ್ರಕರಣದ ತನಿಖೆ ನಡೆಸುತ್ತಿದ್ದರು. ಇವರಿಬ್ಬರ ಜೊತೆಗೆ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ದರ್ಜೆಯ ಅಧಿಕಾರಿ ಜಯಂತ್ ಜೆ. ನಾಯ್ಕನವರೆ ಅವರನ್ನೂ ಸಿಬಿಐಯಿಂದ ಹೊರಕ್ಕೆ ತಳ್ಳಲಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತಾಧಿಕಾರ ಆಯ್ಕೆ ಸಮಿತಿಯು ಸಂಸ್ಥೆಯ ಪೂರ್ಣಾವಧಿಯ ಮುಖ್ಯಸ್ಥನನ್ನು ನೇಮಕ ಮಾಡಲು ಇನ್ನು ಕೆಲವೇ ದಿನಗಳು ಉಳಿದಿರುವಾಗ ಅಸ್ತಾನ ಅವರ ನಿರ್ಗಮನವಾಯಿತು.  ಎಂ. ನಾಗೇಶ್ವರ ರಾವ್ ಅವರು ಸಿಬಿಐಯ ಹಂಗಾಮೀ ನಿರ್ದೇಶಕರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ನೇಮಕಾತಿಯನ್ನೂ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆಯಾಗಿದೆ. ಸಿಬಿಐ ನಿರ್ದೇಶಕರನ್ನು ಕಿತ್ತು ಹಾಕಿ ಹಂಗಾಮೀ ನಿರ್ದೇಶಕರನ್ನು ನೇಮಕ ಮಾಡಿದ ಕೇಂದ್ರದ ಕ್ರಮದ ವಿರುದ್ಧ ಪ್ರತಿಭಟನೆ ವ್ಯಕ್ತ ಪಡಿಸಿರುವ ವಿರೋಧಿ ಕಾಂಗ್ರೆಸ್, ಸರ್ಕಾರವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಸಿಬಿಐ ಮುಖ್ಯಸ್ಥರು ಇರುವುದನ್ನು ಕೇಂದ್ರವು ಬಯಸುತ್ತಿಲ್ಲ ಎಂದು ಹರಿಹಾಯ್ದಿತ್ತು. ಕಳೆದ ವಾರ ಪ್ರಧಾನಿ ನೇತೃತ್ವದ ಉನ್ನತಾಧಿಕಾರದ ತ್ರಿಸದಸ್ಯ ಸಮಿತಿಯು ಅಸ್ತಾನಾ ಅವರಿಗಿಂತ ಹಿರಿಯ ಅಧಿಕಾರಿಯಾಗಿದ್ದ ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರನ್ನು ಸಿಬಿಐ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭ್ರಷ್ಟಾಚಾರ ಆಪಾದನೆಯಲ್ಲಿ ವಜಾ ಮಾಡಿತ್ತು. ಅಲೋಕ್ ವರ್ಮ ಅವರು ತಮಗೆ ನೀಡಲಾದ ಬೇರೆ ಹುದ್ದೆಯನ್ನು ಸ್ವೀಕರಿಸಿಲು ನಿರಾಕರಿಸಿ ಸೇವೆಗೇ ರಾಜೀನಾಮೆ ಕೊಟ್ಟಿದ್ದರು.  ತ್ರಿಸದಸ್ಯ  ಉನ್ನತಾಧಿಕಾರ ನೇಮಕಾತಿ ಸಮಿತಿಯ ಮುಂದೆ ಹಾಜರಾಗಲು ಅವಕಾಶ ನಿರಾಕರಿಸಿಲ್ಪಟ್ಟಿದ್ದ ವರ್ಮಾಸಹಜ ನ್ಯಾಯವನ್ನು ನಿರಾಕರಿಸಲಾಗಿದೆ ಮತ್ತು ಸಂಪೂರ್ಣ ಪ್ರಕ್ರಿಯೆಯನ್ನೇ ತಲೆಕೆಳಗು ಮಾಡಲಾಗಿದೆ ಎಂದು ದೂರಿದ್ದರು.  ವರ್ಮ ಮತ್ತು ಅಸ್ತಾನ ಇಬ್ಬರೂ ಪರಸ್ಪರ ಕಾಲೆಳೆಯುವ ಕೃತ್ಯದಲ್ಲಿ ತೊಡಗಿದ್ದು, ಇವರಿಬ್ಬರ ಕಚ್ಚಾಟದಲ್ಲಿ ಸಂಸ್ಥೆಯ ಪ್ರತಿಷ್ಠೆ ಬೀದಿಗೆ ಬರುವಂತಾಗಿತ್ತು. ಇಬ್ಬರು ಉನ್ನತ ಅಧಿಕಾರಿಗಳನ್ನು ಅಧಿಕಾರದಿಂದ ಮುಕ್ತಗೊಳಿಸಿ, ಕಡ್ಡಾಯ ರಜೆಯಲ್ಲಿ ಕಳುಹಿಸಲು ತೀರ್ಮಾನಿಸಿದ ಸರ್ಕಾರ ತನ್ನ ಕ್ರಮಕ್ಕೆ ಸಮರ್ಥನೆಯಾಗಿ ಅಧಿಕಾರಿಗಳಿಬ್ಬರ ಕಚ್ಚಾಟವನ್ನು ಉಲ್ಲೇಖಿಸಿತ್ತುಜನವರಿ ೧೨ರಂದು ನೀಡಿದ ಆದೇಶದಲ್ಲಿ ದೆಹಲಿ ಹೈಕೋರ್ಟ್ ಅಸ್ತಾನ ವಿರುದ್ಧ ಸಿಬಿಐ ದಾಖಲಿಸಿದ್ದ ಲಂಚ ಮತ್ತು ಸುಲಿಗೆ ಪ್ರಕರಣವನ್ನು ರದ್ದು ಪಡಿಸಲು ನಿರಾಕರಿಸಿತ್ತು ಮತ್ತು ಅವರ ವಿರುದ್ಧದ ಆಪಾದನೆಗಳನ್ನು ಹಂತದಲ್ಲಿ ನಿರ್ಣಾಯಕವಾಗಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು. ವರ್ಮ ಮತ್ತು ಅಸ್ತಾನ ಇಬ್ಬರನ್ನೂ, ಅವರು ಪರಸ್ಪರ ಭ್ರಷ್ಟಾಚಾರ ಆರೋಪಗಳನ್ನು ಬಹಿರಂಗವಾಗಿ ಮಾಡುತ್ತಾ ಕಚ್ಚಾಡತೊಡಗಿದಾಗ, ಅಕ್ಟೋಬರ್ ೨೩-೨೪ರ ನಡುವಣ ರಾತ್ರಿ ಹೊರಡಿಸಲಾದ ಆದೇಶದಲ್ಲಿ ಅಧಿಕಾರಗಳಿಂದ ಮುಕ್ತ ಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು.   ಕೇಂದ್ರ ಸರ್ಕಾರದ ಆದೇಶವನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್ ವರ್ಮ ಅವರನ್ನು ಷರತ್ತು ಬದ್ಧವಾಗಿ ಹುದ್ದೆಯಲ್ಲಿ ಮರುಸ್ಥಾಪನೆ ಮಾಡಿತ್ತು. ಬೆನ್ನಲ್ಲೇ ಉನ್ನತಾಧಿಕಾರ ನೇಮಕಾತಿ ಸಮಿತಿಯು ಅವರನ್ನು ಸಂಸ್ಥೆಯಿಂದ ವಜಾಗೊಳಿಸಿತ್ತು. ಸಿಬಿಐ ಅಸ್ತಾನ ಅವರ ವಿರುದ್ಧ ಉದ್ಯಮಿ ಸನಾ ಸತೀಶ ಬಾಬು ದೂರನ್ನು ಅನುಸರಿಸಿ ಅಕ್ಟೋಬರ್ ೧೫ರಂದು ಪ್ರಕರಣ ದಾಖಲಿಸಿತ್ತು.

2019: ನವದೆಹಲಿ: ಜಮ್ಮು- ದೆಹಲಿ ದುರಂತ್ (ಮೂಲ ಬಂಗಾಳಿ ಪದತುರಂತ್) ಎಕ್ಸ್ಪ್ರೆಸ್ ರೈಲುಗಾಡಿಯ ಎರಡು ಬೋಗಿಗಳಲ್ಲಿ ದರೋಡೆಕೋರರು ಚೂರಿ ತೋರಿಸಿ ಪ್ರಯಾಣಿಕರನ್ನು ದರೋಡ ಮಾಡಿದ ಘಟನೆ ಬೆಳಗ್ಗೆ ರಾಷ್ಟ್ರದ ರಾಜಧಾನಿ ದೆಹಲಿಯ ಬಡ್ಲಿ ಸಮೀಪ  ಘಟಿಸಿತು. ನಸುಕಿನ ಗಂಟೆ ಸುಮಾರಿಗೆ ರೈಲು ಸಿಗ್ನಲ್ ನಲ್ಲಿ ನಿಂತಾಗ ಘಟನೆ ಘಟಿಸಿತು. ದರೋಡೆಕೋರರು ರೈಲುಗಾಡಿಯ ಬಿ೩ ಮತ್ತು ಬಿ೭ ಹವಾನಿಯಂತ್ರಿತ ಬೋಗಿಗಳ ಪ್ರಯಾಣಿಕರನ್ನು ಗುರಿಯಾಗಿಟ್ಟುಕೊಂಡು ದರೋಡೆ ನಡೆಸಿದ್ದು ಅವರ ಬಳಿ ಇದ್ದ ನಗದು ಹಣ, ಚಿನ್ನಾಭರಣ ಮತ್ತು ಎಟಿಎಂ ಕಾರ್ಡುಗಳನ್ನೂ ದೋಚಿದರು. ರೈಲ್ವೇ ಕಂಪ್ಲೇಂಟ್ ಪೋರ್ಟಲ್ ಮೂಲಕ ಪ್ರಯಾಣಿಕರೊಬ್ಬರು ದೂರು ದಾಖಲಿಸಿದ ಬಳಿಕ ರೈಲು ದರೋಡೆ ವಿಚಾರ ಬೆಳಕಿಗೆ ಬಂದಿತು. ದುರಂತ್ ಎಕ್ಸ್ಪ್ರೆಸ್ ರೈಲುಗಾಡಿಯು ದೆಹಲಿ ಸಮೀಪದ ಸರಾಯಿ ರೊಹಿಲಾ ನಿಲ್ದಾಣದ ಸಮೀಪಕ್ಕೆ ಬರುತ್ತಿದ್ದಾಗ ಸುಮಾರು ೭ರಿಂದ ೧೦ರಷ್ಟು ಶಸ್ತ್ರಸಜ್ಜಿತ ದರೋಡೆಕೋರರು ರೈಲಿಗೆ ನುಗ್ಗಿ ಪ್ರಯಾಣಿಕರ ಬಳಿ ಇದ್ದ ನಗದು ಹಣ, ಚಿನ್ನಾಭರಣಗಳನ್ನು ದೋಚಿದರು ಎಂದು  ಅಶ್ವನಿ ಕುಮಾರ್ ಎಂಬವರು ತಮ್ಮ ದೂರಿನಲ್ಲಿ ತಿಳಿಸಿದರುಪ್ರಯಾಣಿಕರು ರೈಲು ಸಹಾಯಕ ಮತ್ತು ರೈಲು ಟಿಕೆಟ್ ತಪಾಸಕರನ್ನು (ಟಿಟಿಇ) ಪತ್ತೆ ಹಚ್ಚಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲಿ ೨೦ ನಿಮಿಷಗಳು ಕಳೆದುಹೋಗಿದ್ದವು. ’ರೈಲು ಸಹಾಯಕ ಲಭ್ಯವಾಗಲಿಲ್ಲ, ಅವರು ರೈಲಿನಲ್ಲಿ ಎಲ್ಲೋ ಒಂದು ಕಡೆ ನಿದ್ದೆ ಮಾಡುತ್ತಿದ್ದರು. ನಮಗೆ ಟಿಟಿಇ ಕೂಡಾ ಲಭ್ಯರಾಗಲಿಲ್ಲ. ನಾನು ೧೦೦ ಸಂಖ್ಯೆಗೆ ಡಯಲ್ ಮಾಡಿದೆ. ದೆಹಲಿ ಪೊಲೀಸರು ನಾವು ಗಮ್ಯಸ್ಥಳವನ್ನು ತಲುಪಿದ ಬಳಿಕ ಆಗಮಿಸಿದರು. ಅವರು ಎಫ್ಐಆರ್ ದಾಖಲಿಸಿಕೊಂಡರು ಎಂದು ಕುಮಾರ್ ಹೇಳಿದರು.  ದರೋಡೆಕೋರರು ಹರಿತವಾದ ಚೂರಿಗಳನ್ನು ಹೊಂದಿದ್ದರು. ತಮ್ಮ ಬಳಿ ಇರುವ ಬೆಲೆಬಾಳುವ ವಸ್ತುಗಳನ್ನು ಒಪ್ಪಿಸುವಂತೆ ಅವರು ಪ್ರಯಾಣಿಕರನ್ನು  ಬೆದರಿಸಿದರು. ಹವಾನಿಯಂತ್ರಿತ ಬೋಗಿಯಲ್ಲೂ ನಾವು ಸುರಕ್ಷಿತರಲ್ಲ, ಹಾಗಿರುವಾಗ ಸ್ಲೀಪರ್ ದರ್ಜೆ ಮತ್ತು ಸಾಮಾನ್ಯ ದರ್ಜೆಯ ಬೋಗಿಗಳ ಸ್ಥಿತಿಯನ್ನು ನೀವೇ ಊಹಿಸಿ. ಬೋಗಿಗಳಿಗೆ ಪ್ರಯಾಣಿಕರು ಟಿಕೆಟ್ ಇಲ್ಲದೆ ಕೂಡಾ ಪ್ರವೇಶಿಸುತ್ತಾರೆ ಎಂದು ಕುಮಾರ್ ತಮ್ಮ ದೂರಿನಲ್ಲಿ ಬರೆದರು. ಹದಿನೈದೇ ನಿಮಿಷ, ಸನ್ ಗ್ಲಾಸನ್ನೂ ಕಿತ್ತುಕೊಂಡರು: ರಾಷ್ಟ್ರದ ರಾಜಧಾನಿಯಲ್ಲಿ ಜಮ್ಮು- ದೆಹಲಿ ದುರಂತ್ ಎಕ್ಸ್ ಪ್ರೆಸ್ ರೈಲುಗಾಡಿಯ ಎರಡು ಹವಾನಿಯಂತ್ರಿತ ಬೋಗಿಗಳ ಮೇಲೆ ದರೋಡೆಕೋರರ ದಾಳಿ ಕೇವಲ ೧೫ ನಿಮಿಷಗಳ ಕಾಲ ನಡೆಯಿತು. ಆದರೆ ಅಷ್ಟರಲ್ಲಾಗಲೇ ದರೋಡೆಕೋರರು ಪ್ರಯಾಣಿಕರ ಬಳಿ ಇದ್ದ ನಗದು ಹಣ, ಚಿನ್ನಾಭರಣ, ಎಟಿಎಂ ಕಾರ್ಡು ಮಾತ್ರವೇ ಅಲ್ಲ ಸನ್ ಗ್ಲಾಸನ್ನೂ ಬಿಡದೆ ದೋಚಿದ್ದರು. ದಾಳಿ ೧೦ರಿಂದ ೧೫ ನಿಮಿಷ ಕಾಲ ನಡೆಯಿತು ಎಂದು ಅಶ್ವನಿ ಕುಮಾರ್ ತಮ್ಮ ದೂರಿನಲ್ಲಿ ತಿಳಿಸಿದರು. ‘ಲೂಟಿಕೋರರು ಹಲವಾರು ಪ್ರಯಾಣಿಕರಿಂದ ಪರ್ಸ್ಗಳು, ನಗದು ಹಣ, ಕ್ಯಾರಿ ಬ್ಯಾಗುಗಳು, ಚಿನ್ನದ ಸರ, ಮೊಬೈಲು ಫೋನುಗಳು ಮತ್ತು ಇತರ ಹಲವಾರು ವಸ್ತುಗಳನ್ನು ಕಿತ್ತುಕೊಂಡರು. ಒಬ್ಬನೇ ಒಬ್ಬ ರೈಲು ಸಿಬ್ಬಂದಿ ಅಥವಾ ಭದ್ರತಾ ಸಿಬ್ಬಂದಿ ನಮ್ಮ ನೆರವಿಗೆ ಲಭಿಸಲಿಲ್ಲ ಎಂಬುದು ದುರಂತ ಎಂದು ಕುಮಾರ್ ಹೇಳಿದರು. ರೈಲ್ವೇ ಅಧಿಕಾರಿಗಳ ಪ್ರಕಾರ ರೈಲು ಸರಾಯಿ ರೊಹಿಲಾ ನಿಲ್ದಾಣಕ್ಕೆ ಬರುವ ಮುನ್ನ ಸಿಗ್ನಲ್ ಸಮಸ್ಯೆಯ ಕಾರಣ ಸ್ವಲ್ಪ ಹೊತ್ತು ನಿಂತಿತ್ತು ಎಂದು ರೈಲ್ವೇ ಅಧಿಕಾರಿಯೊಬ್ಬರು ನುಡಿದರು. ಸಿಗ್ನಲ್ನಲ್ಲಿ ಕೈಯಾಡಿಸಲಾಗಿತ್ತು ಎಂದು ರೈಲ್ವೇ ಸುರಕ್ಷತಾ ಪಡೆಯ (ಆರ್ ಪಿಎಫ್) ಹೇಳಿಕೆ ತಿಳಿಸಿತು. ರೈಲುಗಾಡಿಗೆ ತಮ್ಮ ಸಿಬ್ಬಂದಿಯ ಭದ್ರತೆ ಇರಲಿಲ್ಲ. ನಾವು ಪ್ರಯಾಣಿಕರಿದ ಮಾಹಿತಿ ಪಡೆಯುತ್ತಿದ್ದೇವೆ ಮತ್ತು ಶಂಕಿತರ ಸ್ಕೆಚ್ಚುಗಳನ್ನು ತಯಾರಿಸುತ್ತಿದ್ದೇವೆ ಮತ್ತು ಕೃತ್ಯ ಎಸಗಿದ ತಂಡ ಯಾವುದೆಂದು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿಕೆ ತಿಳಿಸಿತು. ಪ್ರಯಾಣಿಕರು ತಮ್ಮ ನಗದು ಹಣ, ಚಿನ್ನಾಭರಣ, ಮೊಬೈಲ್ ಫೋನುಗಳು ಮತ್ತು ಸನ್ ಗ್ಲಾಸ್ಗಳನ್ನು ದೋಚಲಾಗಿರುವ ಬಗ್ಗೆ ರೈಲ್ವೇ ಸುರಕ್ಷತಾ ಪಡೆದ ನೀಡಿದ ಹೇಳಿಕೆಗಳಲ್ಲಿ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲ್ವೇ ಪೊಲೀಸ್ ಪಡೆಗೆ (ಆರ್ ಪಿಎಫ್) ಆರಂಭಿಕ ಸುಳಿವು ಲಭಿಸಿದೆ ಮತ್ತು ಶೀಘ್ರದಲ್ಲೇ ಅಪರಾಧಿಗಳನ್ನು ಬಂಧಿಸಲಾಗುವುದು ಎಂದು ಉತ್ತರ ರೈಲ್ವೇ ವಕ್ತಾರರೊಬ್ಬರು ತಿಳಿಸಿದರು.

2019: ಲಖನೌ: ತನ್ನ ಅಳಿಯ ಆಕಾಶನನ್ನು ಪಕ್ಷದ ಉತ್ತರಾಧಿಕಾರಿ ಎಂಬುದಾಗಿ ವರದಿಗಳನ್ನು ಮಾಡುವ ಮೂಲಕ ಮಾಧ್ಯಮಗಳು ತನ್ನ ಅಳಿಯನನ್ನು ಅನಗತ್ಯವಾಗಿ ಟೀಕೆಗೆ ಗುರಿಪಡಿಸುತ್ತಿವೆ ಎಂದು ದಿಢೀರನೆ ಕರೆದ ಪತ್ರಿಕಾಗೋಷ್ಠಿಯಲ್ಲಿ ತರಾಟೆಗೆ ತೆಗೆದುಕೊಂಡ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿಮಾಧ್ಯಮ ವರದಿಗಳಿಗೆ ತಕ್ಕ ಉತ್ತರ ನೀಡಲು ಆಕಾಶನನ್ನು ಬಿಎಸ್ಪಿ ಚಳವಳಿಗೆ ಸೇರ್ಪಡೆ ಮಾಡುತ್ತಿದ್ದೇನೆ ಎಂದೂ ಪ್ರಕಟಿಸಿದರು. ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಸಿಬ್ಬಂದಿ, ಬಿಜೆಪಿ ಮತ್ತು ಇತರ ವಿರೋಧ ಪಕ್ಷಗಳ ಆಣತಿಯಂತೆ ನನ್ನ ಹಾಗೂ ನನ್ನ ಪಕ್ಷದ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸುತ್ತಿವೆ. ’ಕೇಕ್ ಲೂಟಿಯಂತಹ ಘಟನೆಗಳನ್ನು ವರದಿ ಮಾಡುವ ಮೂಲಕ ನನ್ನ ಜನ್ಮದಿನದ ಬಗೆಗೂ ತಪ್ಪುತಪ್ಪು ವರದಿಗಳನ್ನು ಕೆಲವು ಮಾಧ್ಯಮಗಳು ಮಾಡಿವೆ ಎಂದು ಮಾಯಾವತಿ ದೂರಿದರು. ‘ಕೆಲವು ಮಾಧ್ಯಮಗಳು ನನ್ನ ಸೋದರಳಿಯ ಆಕಾಶನನ್ನು ನನ್ನ ಉತ್ತರಾಧಿಕಾರಿ ಎಂಬಂತೆ ಬಿಂಬಿಸುತ್ತಿವೆ. ಅವು ನನ್ನ ಅಳಿಯನನ್ನು ವಿವಾದಕ್ಕೆ ಎಳೆದು ತರಲು ಯತ್ನಿಸುತ್ತಿವೆ. ಆತನ ಪಾದರಕ್ಷೆ ಬಗೆಗೂ ತಪ್ಪು ತಪ್ಪು ವರದಿಗಳನ್ನು ಮಾಡಿವೆ. ಇದಕ್ಕೆಲ್ಲ ತಕ್ಕ ಉತ್ತರವಾಗಿ ಬಿಎಸ್ಪಿ ಚಳವಳಿಯನ್ನು ಅರ್ಥ ಮಾಡಿಕೊಂಡು ಗಟ್ಟಿಗೊಳಿಸುವ ಸಲುವಾಗಿ ಆಕಾಶನನ್ನು ಬಿಎಸ್ಪಿ ಚಳವಳಿಗೆ ಸೇರ್ಪಡೆ ಮಾಡುತ್ತಿದ್ದೇನೆ ಎಂದು ಮಾಯಾವತಿ ಘೋಷಿಸಿದರು. ಮಾಧ್ಯಮಗಳನ್ನುಜಾತಿವಾದಿ ಮತ್ತುದಲಿತ ವಿರೋಧಿ ಎಂಬುದಾಗಿ ಜರೆದ ಬಿಎಸ್ಪಿ ನಾಯಕಿ, ’ನಾನು ಕಾನ್ಶೀರಾಮ್ ಶಿಷ್ಯೆ. ಮಾಧ್ಯಮಗಳಿಗೆ ತಕ್ಕ ಉತ್ತರ ನೀಡುತ್ತೇನೆ ಎಂದು ಹೇಳಿದರು. ಬಿಎಸ್ಪಿ  ಮುಖ್ಯಸ್ಥೆಯ ಜನ್ಮದಿನದ ಸಂದರ್ಭದಲ್ಲಿ ಶುಭ ಹಾರೈಸಲು ಅಖಿಲೇಶ್ ಯಾದವ್ ಬಂದಾಗ ನೀಲಿ ಉಡುಪು ಮತ್ತು ವಿಶಿಷ್ಟ ಶೂ ಧರಿಸಿದ್ದ ಆಕಾಶ್ ಅವರಿ ಮಾಯಾವತಿ ಹಿಂದೆ ನಿಂತುಕೊಂಡಿದ್ದರು.  ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬಿಎಸ್ಪಿ ಮುಖ್ಯಸ್ಥೆಯನ್ನು ಭೇಟಿ ಮಾಡಲು ಬಂದ ಸಂದರ್ಭದಲ್ಲೂ ಆಕಾಶ್ ಹಾಜರಿದ್ದರುಲಂಡನ್ನಿನಲ್ಲಿ ಎಂಬಿಎ ಪದವಿ ಪಡೆದ ಆಕಾಶ್, ೨೦೧೬ರಲ್ಲಿ ಮಾಯಾವತಿ ಅವರು ಸಹರಾನ್ ಪುರಕ್ಕೆ ಭೇಟಿ ನೀಡಿದಾಗ, ಮೊತ್ತ ಮೊದಲಿಗೆ ಅವರ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದರು. ೨೦೧೭ರಲ್ಲಿ ಮೀರತ್ನಲ್ಲಿ ನಡೆದ ಸಭೆಯಲ್ಲಿಯೂ  ಮಾಯಾವತಿ ಅಳಿಯ ವೇದಿಕೆ ಮೇಲೆ ಮಿಂಚಿದ್ದರು.  ಮಾಯಾವತಿ ಅವರ ಕಿರಿಯ ಸಹೋದರ ಆನಂದ್ ಮತ್ತು ಅಳಿಯ ಆಕಾಶ್ ಹೆಸರುಗಳು ೨೦೧೭ರ ಅಕ್ಟೋಬರಿನಲ್ಲಿ ಪಕ್ಷದ ಪತ್ರಿಕಾ ಪ್ರಕಟಣೆಗಳಲ್ಲಿ ಪ್ರಸ್ತಾಪಗೊಂಡಿದ್ದವು.

2019: ಹೈದರಾಬಾದ್: ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರಸ್ತಾಪ ಮಾಡಿರುವ ಪ್ರಾದೇಶಿಕ ಪಕ್ಷಗಳಫೆಡರಲ್ ಫ್ರಂಟ್ ಒಂದು ವಿಫಲ ಪ್ರಯತ್ನ ಎಂಬುದಾಗಿ ಬಣ್ಣಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರುಫೆಡರಲ್ ಫ್ರಂಟ್ ಪ್ರಧಾನಿ ನರೇಂದ್ರ ಮೋದಿ ಅವರ ಮೆದುಳಿನ ಕೂಸು ಎಂದು ಆಪಾದಿಸಿದರು. ನಾಯ್ಡು ಅವರು ಸ್ವತಃ ಕಾಂಗ್ರೆಸ್ ಸೇರಿದಂತೆ ಸಮಾನ ಮನಸ್ಕ ಪಕ್ಷಗಳನ್ನು ಒಂದೇ ಛತ್ರಿಯಡಿ ಒಟ್ಟುಗೂಡಿಸಿ ಬಿಜೆಪಿ ವಿರೋಧಿ ರಂಗವನ್ನು ರಾಷ್ಟ್ರಮಟ್ಟದಲ್ಲಿ ಕಟ್ಟಲು ಪ್ರಯತ್ನಿಸುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಘಟಿಸಿರುವ ವಿರೋಧ ಪಕ್ಷಗಳ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ತಮ್ಮ ತೆಲುಗುದೇಶಂ ಪಕ್ಷ ಸಹೋದ್ಯೋಗಿಗಳ ಜೊತೆ ಅಮರಾವತಿಯಲ್ಲಿ ೨೦೧೯ರ ಚುನಾವಣಾ ಯೋಜನೆ ಕುರಿತು ಟೆಲಿಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದ ನಾಯ್ಡು, ತೆಲಂಗಾಣ ರಾಷ್ಟ್ರ ಸಮಿತಿ ಕಾರ್ಯಾಧ್ಯಕ್ಷ ಮತ್ತು ಕೆ.ಸಿ.ಆರ್ ಪುತ್ರ ಕೆ.ಟಿ. ರಾಮರಾವ್ ಅವರು ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ.ಎಸ್. ಜಗನ್ಮೋಹನ ರೆಡ್ಡಿ ಅವರ ಜೊತೆಗೆ ಬುಧವಾರ ನಡೆಸಿದ ಮಾತುಕತೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು. ವೈಎಸ್ ಆರ್ ಸಿ ಮತ್ತು ಟಿಆರ್ ಎಸ್ ರೂಪ ಈಗ ಬಟಾ ಬಯಲಾಗಿದೆ. ಅವರು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನಗಳಂತೆ ಕಾರ್ಯಾಚರಿಸುತ್ತಿದ್ದಾರೆ. ಫೆಡರಲ್ ಫ್ರಂಟ್ ಭಾರತೀಯ ಜನತಾ ಪಕ್ಷ ವಿರೋಧಿ ಮತಗಳನ್ನು ಆಂಧ್ರ ಪ್ರದೇಶದಲ್ಲಿ ಒಡೆಯಲು ರೂಪಿಲಾಗಿರುವ ಮೋದಿ ಅವರ ಮೆದುಳ ಕೂಸು. ಆದರೆ ಫೆಡರಲ್ ಫ್ರಂಟಿಗೆ ಬೇರೆ ಯಾವುದೇ ಪಕ್ಷದಿಂದಲೂ ಸ್ಪಂದನೆ ಲಭಿಸಿಲ್ಲ ಎಂದು ಟಿಡಿಪಿ ಅಧ್ಯಕ್ಷ ನುಡಿದರು. ಫೆಡರಲ್ ಫ್ರಂಟ್ ಹೆಸರಿನಲ್ಲಿ ಟಿಆರ್ ಎಸ್ ಮತ್ತು ವೈಎಸ್ ಆರ್ ಸಿ ಕೈಜೋಡಿಸಿವೆ. ಇದು ಆಂಧ್ರಪ್ರದೇಶದ ಅಭಿವೃದ್ಧಿಗೆ ಅಡ್ಡಿ ಉಂಟು ಮಾಡುವ ವಿಶಾಲ ಯೋಜನೆಯ ಒಂದು ಭಾಗ ಎಂದು ನಾಯ್ಡು ಆಪಾದಿಸಿದರು. ಜಗನ್ ಅವರು ಆಂಧ್ರಪ್ರದೇಶದ ಜನರನ್ನು ಅವಮಾನಿಸಿದ ಕೆಸಿಆರ್ ಅವರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಟಿಆರ್ಎಸ್ ಸರ್ಕಾರವು ೨೬ ಜಾತಿಗಳನ್ನು ತೆಲಂಗಾಣದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕಿತ್ತು ಹಾಕಿದೆ. ಅವರು ಆಂಧ್ರಪ್ರದೇಶಕ್ಕೆ ಇಲ್ಲಿನ ಹಿಂದುಳಿದ ವರ್ಗಗಳಿಗಾಗಿ ಮೊಸಳೆ ಕಣ್ಣೀರು ಸುರಿಸಲು ಬರುತ್ತಿದ್ದಾರೆ ಎಂದು ನಾಯ್ಡು ಟೀಕಿಸಿದರು. ಇತ್ತೀಚಿನ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಟಿಆರ್ಎಸ್ ಅಧ್ಯಕ್ಷ ಕೆಸಿಆರ್ ಪರಿಣಾಮಕಾರಿಯಾಗಿ ಪ್ರಯೋಗಿಸಿದ್ದಸ್ವಾಭಿಮಾನ ದಾಳವನ್ನೇ ನಾಯ್ಡು ಅವರು ಕೆಸಿಆರ್ ವಿರುದ್ಧ ಪ್ರಯೋಗಿಸಿದರು. ಆಂಧ್ರಪ್ರದೇಶದ ವಿರುದ್ಧ ಅಪಮಾನಕಾರೀ ಹೇಳಿಕೆ ನೀಡಿದ ವ್ಯಕ್ತಿಗಳ ಜೊತೆ ಜಗನ್ ಕೈಜೋಡಿಸುತ್ತಿದ್ದಾರೆ. ಇದು ರಾಜ್ಯದ ಜನತೆಗೆ ಮಾಡುವ ಅಪಮಾನ ಹೊರತು ಬೇರೇನಲ್ಲ. ಜಗನ್ ಅವರು ಆಂಧ್ರಪ್ರದೇಶದ ಜನರ ಸ್ವಾಭಿಮಾನವನ್ನು ಕೆಸಿಆರ್ ಅವರ ಮುಂದೆ ಅಡವು ಇಟ್ಟಿದ್ದಾರೆ ಎಂದು ಚಂದ್ರಬಾಬು ನಾಯ್ಡು ಟೀಕಿಸಿದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದನ್ನು ಟಿಆರ್ ಎಸ್ ನಾಯಕರು ಆಕ್ಷೇಪಿಸಿದ್ದರು ಎಂಬುದಾಗಿ ನೆನಪಿಸಿದ ನಾಯ್ಡು, ’ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದರೆ, ತಮಗೂ ಅದನ್ನು ನೀಡಬೇಕು ಎಂಬುದಾಗಿ ಟಿಆರ್ ಎಸ್ ಸಂಸದರು ಆಗ್ರಹಿಸಿದರು. ಪರಿಣಾಮವಾಗಿ ಕೇಂದ್ರ ಸರ್ಕಾರವು ತಾನು ನೀಡಿದ್ದ ವಚನದಿಂದ ಹಿಂದೆ ಸರಿಯಿತು ಎಂದು ದೂರಿದರು.ಗೋದಾವರಿಯಲ್ಲಿ ಪ್ರತಿಷ್ಠಿತ ಪೋಲಾವರಂ ನೀರಾವರಿ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ದಾಖಲಿಸಲು ತೆಲಂಗಾಣ ಸರ್ಕಾರವು ಒಡಿಶಾ ಜೊತೆಗೆ ಕೈಜೋಡಿಸಿತು. ಆಂಧ್ರ ಪ್ರದೇಶದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವ ಕೆಸಿಆರ್ ಜೊತೆಗೆ ಜಗನ್ ಹೇಗೆ ಮೈತ್ರಿ ಮಾಡಿಕೊಳ್ಳುತ್ತಾರೆ?’ ಎಂದು ನಾಯ್ಡು ಪ್ರಶ್ನಿಸಿದರು.  ಕೆಸಿಆರ್ ಪುತ್ರನ ಜೊತೆಗೆ ಜಗನ್ ಭೇಟಿ ನಡೆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಟಿಆರ್ಎಸ್ ಅಧ್ಯಕ್ಷರು ಆಂಧ್ರಪ್ರದೇಶದ ಜನರ ವಿರುದ್ಧ ಪ್ರಯೋಗಿಸಿದ್ದ ಅಪಮಾನಕಾರೀ ಟೀಕೆಗಳನ್ನು ನೆನಪಿಸಿ ಮತ್ತು ವೈಎಸ್ ಆರ್ ಸಿ -ಟಿಆರ್ ಎಸ್ ಮೈತ್ರಿಯನ್ನು ಪ್ರಶ್ನಿಸಿ ತೀವ್ರ ಟೀಕೆಗಳು ಹರಿದಾಡಿದವು. ಮಾಜಿ ಸಚಿವ ಮತ್ತು ವೈಎಸ್ ಆರ್ ಸಿ ವಕ್ತಾರ ಬೋತ್ಸಾ ಸತ್ಯನಾರಾಯಣ ಅವರು ಏನಿದ್ದರೂ ಜಗನ್- ಕೆಟಿಆರ್ ಸಭೆಯ ವಿರುದ್ಧ ಟಿಡಿಪಿ ಮಾಡಿರುವ ಟೀಕೆಗಳನ್ನು ಖಂಡಿಸಿದರು. ವೈಎಸ್ ಆರ್ ಸಿಯು ಎಂದೂ ಟಿಆರ್ ಎಸ್ ಜೊತೆಗೆ ಮೈತ್ರಿ ಮಾಡಿರಲಿಲ್ಲ. ಅದು ಆಂಧ್ರಪ್ರದೇಶದ ಎಲ್ಲ ೧೭೫ ಸ್ಥಾನಗಳಿಗೆ ಏಕಾಂಗಿಯಾಗಿಯೇ ಸ್ಪರ್ಧಿಸುವುದು. ಟಿಆರ್ ಎಸ್ ಜೊತೆಗಿನ ಸಭೆಯು ಫೆಡರಲ್ ಫ್ರಂಟ್ ಮೂಲಕ ಉಭಯ ತೆಲುಗು ರಾಜ್ಯಗಳು ಗರಿಷ್ಠ ಅನುಕೂಲಗಳನ್ನು ಪಡೆಯುವ ಬಗ್ಗೆ ಮಾತ್ರವಾಗಿತ್ತು ಎಂದು ಸತ್ಯನಾರಾಯಣ ಹೇಳಿದರು. ತೆಲಂಗಾಣ ಚುನಾವಣೆಗಳಿಗೆ ಮುನ್ನ ಸ್ವತಃ ನಾಯ್ಡು ಅವರೇ ಟಿಆರ್ ಎಸ್ ಜೊತೆಗೆ ಕೈಜೋಡಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ರೀತಿ ಕೈಜೋಡಿಸುವುದು ಉಭಯ ರಾಜ್ಯಗಳ ತೆಲುಗು ಜನರ ಹಿತಾಸಕ್ತಿ ದೃಷ್ಟಿಯಿಂದ ಒಳ್ಳೆಯದು ಎಂದು ಸ್ವತಃ ನಾಯ್ಡು ಅವರು ಹೇಳಿದ್ದನ್ನು ಸತ್ಯನಾರಾಯಣ ಅವರು ನಾಯ್ಡು ಅವರಿಗೆ ನೆನಪಿಸಿದರು. ಅವರು ಟಿಆರ್ಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿರುವಾಗ, ನಾವು ಯಾಕೆ ಮೈತ್ರಿ ಮಾಡಿಕೊಳ್ಳಬಾರದು?’ ಎಂದು ಅವರು ನಾಯ್ಡು ಅವರನ್ನು ಪ್ರಶ್ನಿಸಿದರು.

 2019: ಚಂಡೀಗಢ: ಹರಿಯಾಣದಲ್ಲಿ ೧೬ ವರ್ಷಗಳ ಹಿಂದೆ ಪತ್ರಕರ್ತನೊಬ್ಬನನ್ನು ಕೊಂದ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ಮೂವರಿಗೆ ಪಂಚಕುಲದ ಸಿಬಿಐ ವಿಶೇಷ ನಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿತುರಾಮ್ ರಹೀಮ್, ಕುಲದೀಪ್ ಸಿಂಗ್, ನಿರ್ಮಲ್ ಸಿಂಗ್ ಮತ್ತು ಕೃಷ್ಣಲಾಲ್ ಅವರು ಪತ್ರಕರ್ತ ರಾಮಚಂದ್ರ ಛತ್ರಪತಿಯವರನ್ನು ೨೦೦೨ರಲ್ಲಿ ಕೊಲೆಗೈದ ಪ್ರಕರಣದಲ್ಲಿ ಅಪರಾಧಿಗಳು ಎಂದು ತೀರ್ಪು ನೀಡಿದ್ದ ಕೋರ್ಟ್ ಶಿಕ್ಷೆಯ ಸ್ವರೂಪದ ಪ್ರಕಟಣೆಯನ್ನು ಕಾಯ್ದಿರಿಸಿತ್ತು. ಸೆಕ್ಸ್ ಜಾಲ ಬಯಲುಗೊಳಿಸಿದ್ದಕ್ಕಾಗಿ ಪತ್ರಕರ್ತನ ಹತ್ಯೆ ಮಾಡಲಾಗಿತ್ತು. ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಶಿಕ್ಷೆ ವಿಧಿಸಿದ ನ್ಯಾಯಾಲಯವು ಪ್ರತಿಯೊಬ್ಬರಿಗೂ ತಲಾ ೫೦,೦೦೦ ರೂಪಾಯಿಗಳ ದಂಡವನ್ನೂ ವಿಧಿಸಿತು. ೫೧ರ ಹರೆಯದ ಡೇರಾ ಮುಖ್ಯಸ್ಥ ತನ್ನ ಮಹಿಳಾ ಭಕ್ತರಿಬ್ಬರ ಮೇಲೆ ಅತ್ಯಾಚಾರ ಎಸಗಿದ ಅಪರಾಧಕ್ಕಾಗಿ ೨೦ ವರ್ಷಗಳ ಸೆರೆವಾಸದ ಶಿಕ್ಷೆಗೆ ಗುರಿಯಾಗಿದ್ದು ರೋಹ್ತಕ್ ಸುನಾರಿಯಾ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿದಾನೆಪತ್ರಕರ್ತನ ಹತ್ಯೆ ಪ್ರಕರಣದ ಶಿಕ್ಷೆ ಪ್ರಕಟಣೆ ಹಿನ್ನೆಲೆಯಲಿ ಹರಿಯಾಣ, ಪಂಜಾಬಿನ ವಿವಿಧೆಡೆಗಳಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

2019: ಕೋಲ್ಕತ: ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂಘಟಿಸಿದ ಫೆಡರಲ್ ಫ್ರಂಟ್ ಮಹಾರಾಲಿಯಲ್ಲಿ ಬಹುಜನ ಸಮಾಜ ಪಕ್ಷವು (ಬಿಎಸ್ ಪಿ) ಪಾಲ್ಗೊಳ್ಳುವುದೇ ಅಥವಾ ಇಲ್ಲವೇ ಎಂಬ ಕುರಿತ  ’ನಿಗೂಢ ಕೊನೆಗೂ ಒಡೆಯಿತು. ಮಾಯಾವತಿ ಅವರು ಪಕ್ಷದ ಹಿರಿಯ ನಾಯಕ ಸತೀಶ್ ಚಂದ್ರ ಮಿಶ್ರ ಅವರನ್ನು ಜನವರಿ ೧೯ರ ಬಿಜೆಪಿ ವಿರೋಧಿ ಸಭೆಗೆ ಕಳುಹಿಸಿಕೊಡಲು ನಿರ್ಧರಿಸಿದರು. ಬಹುಜನ ಸಮಾಜ ಪಕ್ಷದ ಲಕ್ನೋ ಕಚೇರಿಯಿಂದ ಕುರಿತ ದೃಢೀಕರಣವು ತೃಣಮೂಲ ಕಾಂಗ್ರೆಸ್ ಕಚೇರಿಗೆ ತಲುಪಿತು. ಇದಕ್ಕೆ ಮುನ್ನ ಮಾಯಾವತಿಯವರು ಯಾರಾದರೂ ಪ್ರತಿನಿಧಿಯನ್ನು ಬಹಿರಂಗ ಸಭೆಗೆ ಕಳುಹಿಸುವರೇ ಅಥವಾ ಇಲ್ಲವೇ ಎಂಬ ಬಗ್ಗೆ ಊಹಾಪೋಹಗಳು ಹರಡಿದ್ದವು. ಹೌದು, ನಾನು ಮಮತಾ ಜಿ ಅವರ ಕೋಲ್ಕೊತದಲ್ಲಿನ ಜನವರಿ ೧೯ರ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಕುರಿತು ನಮ್ಮ ಪಕ್ಷದ ಮುಖ್ಯಸ್ಥೆ ಈದಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಎಸ್ ಪಿ ಸಂಸದ ಮತ್ತು ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರ ಹೇಳಿದರು. ನಾನು ಜನವರಿ ೧೯ರ ಬೆಳಗ್ಗೆ ಕೋಲ್ಕತ ತಲುಪುತ್ತೇನೆ ಮತ್ತು ಸಂಜೆ ವಾಪಸಾಗುತ್ತೇನೆ. ನಾನು ಕೋಲ್ಕತದಲ್ಲಿ ನಿಲ್ಲುವುದಿಲ್ಲ ಎಂದು ಅವರು ನುಡಿದರು. ಮಹಾ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಬಿಎಸ್ಪಿ ನಿರ್ಧರಿಸಿದ್ದುಏಕೆ ಎಂಬ ಪ್ರಶ್ನೆಗೆಪ್ರತಿಯೊಂದನ್ನೂ ರ್ಯಾಲಿಯ ದಿನ ಹೇಳಲಾಗುವುದು ಎಂದು ಅವರು ಉತ್ತರಿಸಿದರು. ಏನಿದ್ದರೂ, ಬಿಎಸ್ಪಿಯ ಪಶ್ಚಿಮ ಬಂಗಾಳ ಘಟಕದ ಅಧ್ಯಕ್ಷ ಮನೋಜ್ ಹವಾಲ್ದಾರ್ ಅವರು ತಮಗೆ ಮಿಶ್ರ ಅವರು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ’ನಿಜವಾಗಿ ನನಗೆ ಗೊತ್ತಾಗಬೇಕು, ಆದರೆ ಅವರು ಕೋಲ್ಕತಕ್ಕೆ ಬರುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದು ನನಗೆ ಗೊತ್ತಿಲ್ಲ ಎಂದು ಮನೋಜ್ ನುಡಿದರು. ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತ ಪಡಿಸಿದ ಇತರರು: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೆಡಿ(ಎಸ್) ಮುಖ್ಯಸ್ಥ ಎಚ್.ಡಿ. ದೇವೇಗೌಡ, ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ, ಜಾರ್ಖಂಡ್ ವಿಕಾಸ ಮೋರ್ಚಾ (ಪ್ರಜಾತಾಂತ್ರಿಕ) ನಾಯಕ ಬಾಬುಲಾಲ್ ಮರಾಂಡಿ, ಕೇಂದ್ರದ ಮಾಜಿ ವಿತ್ತ ಸಚಿವ ಯಶವಂತ ಸಿನ್ಹ, ಅರುಣ್ ಶೌರಿ, ಆರ್ ಎಲ್ ಡಿ ಮುಖ್ಯಸ್ಥ ಅಜಿತ್ ಸಿಂಗ್, ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫರೂಕ್ ಅಬ್ದುಲ್ಲ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಬಿಜೆಪಿ ಭಿನ್ನಮತೀಯ ನಾಯಕ ಶತ್ರುಘ್ನ ಸಿನ್ಹ, ಎಸ್ಪಿ ನಾಯಕ ಅಖಿಲೇಶ್ ಯಾದವ್, ಆರ್ ಜೆಡಿಯ ತೇಜಸ್ವಿ ಯಾದವ್, ಪಾಟೀದಾರ್ ಮೀಸಲು ಚಳವಳಿ ನಾಯಕ ಹಾರ್ದಿಕ್ ಪಟೇಲ್ಬಿಜು ಜನತಾದಳ (ಬಿಜೆಡಿ), ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ (ಬಿಜೆಪಿ, ಕಾಂಗ್ರೆಸ್ಸೇತರ ರಂಗಕ್ಕೆ ಕರೆ ನೀಡಿರುವ ನಾಯಕ) ಮತ್ತು ಸಿಪಿಐ ಪಾಲ್ಗೊಳ್ಳುವ ಬಗ್ಗೆ ಯಾವುದೇ ಖಚಿತತೆಯನ್ನೂ ನೀಡಲಿಲ್ಲ.
 

2018: ನವದೆಹಲಿ: ಸಂಸ್ಕತ ವಿಶೇಷ ಭಾಷೆಯೇ? ನರವಿಜ್ಞಾನಿ ಜೇಮ್ಸ್ ಹರ್ಟ್‌ಜೆಲ್ ಅವರ ’ಸಂಸ್ಕೃತ ಪರಿಣಾಮ ಅಧ್ಯಯನ ಸೈಂಟಿಫಿಕ್ ಅಮೆರಿಕನ್ ನಿಯತಕಾಲಿಕದಲ್ಲಿ ಪ್ರಕಟಗೊಂಡಿದ್ದು, ಅದು ವೇದ ಮಂತ್ರಗಳನ್ನು ಉರುಹೊಡೆಯುವುದರಿಂದ ಸ್ಮರಣೆಯಂತಹ ಅರಿವಿಗೆ ಸಂಬಂಧಿಸಿದ ಮೆದುಳಿನ ಪ್ರದೇಶ ವಿಸ್ತಾರಗೊಳ್ಳುತ್ತದೆ ಎಂದು ಪ್ರತಿಪಾದಿಸಿತು. ಹರ್ಟ್‌ಜೆಲ್ ಅವರು ಸಂಸ್ಕೃತ, ಟಿಬೆಟನ್ ಭಾಷೆಗಳನ್ನು ಹಾರ್ವಡ್ ಮತ್ತು ಕೊಲಂಬಿಯಾ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ್ದು ಅರಿವು ನರವಿಜ್ಞಾನವನ್ನು ಟ್ರೆಂಟೊ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಇಟಲಿಯ ಟ್ರೆಂಟೊ ವಿಶ್ವವಿದ್ಯಾಲಯದ ಇಬ್ಬರು ಸಹೋದ್ಯೋಗಿಗಳು ಮತ್ತು ಹರಿಯಾಣದ ಮಾನೆಸರದ ರಾಷ್ಟ್ರೀಯ ಮೆದುಳು ಸಂಶೋಧನಾ ಕೇಂದ್ರದ (ಎನ್ ಬಿ ಆರ್ ಸಿ) ಡಾ. ತನ್ಮಯ್ ನಾಥ್ ಮತ್ತು ಡಾ. ನಂದಿನಿ ಚಟರ್ಜಿ ಅವರ ಸಹಯೋಗದೊಂದಿಗೆ ಹರ್ಟ್‌ಜೆಲ್ ಅವರು ವ್ಯಾಪಕ ಸಂಶೋಧನೆ ನಡೆಸಿ ಈ ವರದಿಯನ್ನು ತಯಾರಿಸಿದರು. ಶುಕ್ಲ ಯಜುರ್ವೇದವನ್ನು ಪಠಿಸುವಂತಹ ೨೧ ಮಂದಿ ವೃತ್ತಿನಿಷ್ಠ ಸಂಸ್ಕೃತ ಪಂಡಿತರು ಸೇರಿದಂತೆ ೪೨ ಮಂದಿ ಸ್ವಯಂ ಸೇವಕರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅಧ್ಯಯನ ಯೋಜನೆಗೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ ಟಿ), ಇಟಲಿಯ ಟ್ರೆಂಟಿನೊ ಪ್ರಾಂತ ಹಾಗೂ  ಟ್ರೆಂಟೊ ವಿಶ್ವವಿದ್ಯಾಲಯದ ನಡುವಣ ಭಾರತ-ಟ್ರೆಂಟೊ ಆಧುನಿಕ ಸಂಶೋಧನಾ ಪಾಲುದಾರಿಕೆ ಯೋಜನೆಯ ಅಡಿಯಲ್ಲಿ ಹಣ ಒದಗಿಸಲಾಗಿತ್ತು. ವೃತ್ತಿಪರರಾದ ಅರ್ಹ ಮತ್ತು ತರಬೇತಿ ಪಡೆದ ಯಜುರ್ವೇದ ಪಂಡಿತರನ್ನು ಅಧ್ಯಯನಕ್ಕಾಗಿ ನೇಮಿಸಿಕೊಳ್ಳಲು ಭಾರತ ಸರ್ಕಾರದ ನೆರವು ಪಡೆಯಲಾಗಿತ್ತು. ಹರ್ಟ್‌ಜೆಲ್ ಅವರು ಮಹರ್ಷಿ ಸಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನಕ್ಕೆ ಈ ಉದ್ದೇಶಕ್ಕಾಗಿ ಭೇಟಿ ಕೊಟ್ಟದ್ದಲ್ಲದೆ ಮಂತ್ರಪಠಣಗಳ ಪ್ರದರ್ಶನವನ್ನೂ ವ್ಯವಸ್ಥೆ ಮಾಡಿದ್ದರು. ಉಜ್ಜೈನಿಯ ವೇದ ಪಠಣ ಉತ್ಸವದಲ್ಲಿ ಪಾಲ್ಗೊಂಡಿದ್ದ ಅವರು, ೨೦೧೨ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಸಂಸ್ಕೃತ ಭಾಷಣ ಸ್ಪರ್ಧೆಗೂ ಭೇಟಿ ನೀಡಿದ್ದರು. ಈ ಸ್ಪರ್ಧೆಯಲ್ಲಿ ರಾಷ್ಟ್ರಾದ್ಯಂತದ ಸಂಸ್ಕೃತ ಕಾಲೇಜುಗಳ ಬುದ್ಧಿವಂತ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವೇದಗಳು ಮಾತ್ರವೇ ಅಲ್ಲ ಇತರ ಹಲವಾರು ಸಂಸ್ಕೃತ ವಿಷಯಗಳಿಗೆ ಸಂಬಂಧಿಸಿದಂತೆಯೂ ಇಲ್ಲಿ ಸಂಸ್ಕೃತ ಭಾಷಣ ಸ್ಪರ್ಧೆ ನಡೆದಿತ್ತು. ಹರ್ಟ್‌ಜೆಲ್ ಅವರಿಗೆ ಈ ಅಧ್ಯಯನ ಪೂರ್ಣಗೊಳಿಸಲು ಹಲವು ವರ್ಷಗಳೇ ಬೇಕಾಗಿದ್ದವು. ಅಧ್ಯಯನ ಕಾಲದಲ್ಲಿ ಸಂಸ್ಕೃತ  ಪಂಡಿತರು ಕೇವಲ ಸ್ಮರಣ ಶಕ್ತಿಯಿಂದಲೇ ಮಂತ್ರಪಠಣ ಮಾಡುವ ಶಕ್ತಿ ಹೊಂದಿದ್ದುದು, ಸಂಕೀರ್ಣ ಸಂಸ್ಕೃತ ಪಠ್ಯಗಳನ್ನು ಅರ್ಥ ಮಾಡಿಕೊಂಡು ಸಂಸ್ಕೃತದಲ್ಲಿ ವಿವರಿಸುತ್ತಿದ್ದುದು ತಮ್ಮ ಮೇಲೆ ಗಾಢ ಪ್ರಭಾವ ಬೀರಿತು ಎಂದು ಜೇಮ್ಸ್ ಹೇಳಿದ್ದಾರೆ. ಪಿಎಚ್‌ಡಿ ಮಾಡುವಷ್ಟೇ ಶ್ರದ್ಧೆಯಿಂದ ಈ ಆಧ್ಯಯನಗಳನ್ನು ಮಾಡಿದ್ದಲ್ಲದೆ ಅವುಗಳನ್ನು ದಾಖಲಿಸಲಾಯಿತು. ಪಂಡಿತರನ್ನು ಎನ್ ಬಿ ಆರ್ ಸಿಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಗೂ ಒಳಪಡಿಸಲಾಗಿತ್ತು. ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ಪ್ರಕಟಣೆಯ ಸಲುವಾಗಿ ಅವರ ಮೆದುಳಿನ ಚಿತ್ರಗಳನ್ನೂ ದಾಖಲಿಸಲಾಗಿತ್ತು. ಈ ಧ್ಯಯನದಿಂದ ಸ್ಪಷ್ಟವಾಗಿ ಬೆಳಕಿಗೆ ಬಂದ ವಿಚಾರವೇನೆಂದರೆ ಸಂಸ್ಕೃತ ಮಂತ್ರಪಠಣ ಮಾಡುವುದರಿಂದ ’ಯೋಚನೆ ಸುಸ್ಪಷ್ಟಗೊಳ್ಳುತ್ತದೆ. ಸಂಸ್ಕೃತದಲ್ಲೇ ಯೋಚಿಸುವುದರಿಂದ ಮೆದುಳಿನಲ್ಲಿ ಸ್ಮರಣೆಯಂತಹ ಅರಿವಿನ ಕ್ಷೇತ್ರ ವಿಸ್ತಾರವಾಗುತ್ತದೆ. ವಾಯುಸಂಚಾರ ಅಥವಾ ನೀರಿನಲ್ಲಿ ಈಜಾಡಿದ ಬಳಿಕ ಆಗುವಂತಹ ಆರಾಮದ ಅನುಭವವಾಗುತ್ತದೆ. ಸಂಸ್ಕೃತ ಮಂತ್ರಪಠಣ, ಸಂಸ್ಕೃತ ಸಂಭಾಷಣೆಯ ಬಳಿಕ ಇಂಗ್ಲಿಷಿನಲ್ಲಿ ಚಿಂತಿಸುವಾಗ ವಿಚಾgದ ಚಿಂತನೆ ಸ್ಫುಟವಾದದ್ದು  ಅನುಭವಕ್ಕೆ ಬರುತ್ತದೆ ಎಂದು ಜೇಮ್ಸ್ ತಮ್ಮ ಅಧ್ಯಯನದಲ್ಲಿ ತಿಳಿಸಿದರು. ಕಾಲಾಂತರದಲ್ಲಿ ಇಂಗ್ಲಿಷ್ ಭಾಷೆಯ ಎಷ್ಟೋ ಪದಗಳು ಕಣ್ಮರೆಯಾಗಿವೆ. ಉಚ್ಛಾರ ವ್ಯತ್ಯಾಸಗೊಂಡಿದೆ. ಆದರೆ ಸಂಸ್ಕೃತ ಉಚ್ಛಾರ ೩೦೦೦ ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಈಗಲೂ ಮುಂದುವರೆದಿದೆ. ವೇದಗಳಷ್ಟೇ ಅಲ್ಲ ಇತರ ಸಂಸ್ಕೃತ ಪಠ್ಯಗಳ ಮನನ ಅಥವಾ ಉರು ಹೊಡೆಯುವಿಕೆಯಿಂದ ಇದು ಸಾಧ್ಯವಾಗಿದೆ. ಇದು ಸಂಸ್ಕೃತವನ್ನು ವಿಶ್ವದಲ್ಲಿಯೇ ವಿಶಿಷ್ಟ ಭಾಷೆಯನ್ನಾಗಿ ಮಾಡಿದೆ ಎಂದು ಅವರು ಬರೆದರು.
2018: ನವದೆಹಲಿ: ಕೆಲವು ರಾಜ್ಯ ಸರ್ಕಾರಗಳು ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ’ಪದ್ಮಾವತ್ ಪ್ರದರ್ಶನವನ್ನು ನಿಷೇಧಿಸಿರುವುದರ ವಿರುದ್ಧ ಚಿತ್ರ ನಿರ್ಮಾಪಕರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿತು. ನಿರ್ಮಾಪಕರ ಪರ ಹಾಜರಾಗಿದ್ದ ವಕೀಲರು ರಾಜಸ್ಥಾನ, ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶ ಸರ್ಕಾರಗಳು ಚಿತ್ರವನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂಬುದಾಗಿ ಮನವಿ ಮಾಡಿದರು. ಕಾನೂನು ಮತ್ತು ವಿವಿಧ ಕೋರ್ಟ್ ಆದೇಶಗಳನ್ನು ಉಲ್ಲೇಖಿಸಿ ಅವರು ಮಂಡಿಸಿದ ವಾದವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ  ಎ.ಎಂ. ಖಾನ್ವಿಲ್ಕರ್ ಹಾಗೂ ಡಿ. ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಪರಿಗಣಿಸಿತು. ಸೆನ್ಸಾರ್ ಮಂಡಳಿಯ ಸಲಹೆಯಂತೆ ಚಿತ್ರಕ್ಕೆ ಹಲವಾರು ಬದಲಾವಣೆಗಳನ್ನು ಮಾಡಿ ಹೆಸರನ್ನು ಕೂಡಾ ’ಪದ್ಮಾವತ್ ಎಂಬುದಾಗಿ ಬದಯಿಸಲಾಗಿದ್ದು, ಜನವರಿ ೨೫ರಂದು ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

2018: ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜಸ್ಥಾನ ಜೋಧ್ ಪುರ ವಾಯುನೆಲೆಯಿಂದ ಸುಖೋಯ್ ೩೦ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು. ಇದರೊಂದಿಗೆ ಸುಖೋಯ್ ವಿಮಾನ ಹಾರಾಟ ನಡೆಸಿದ ಭಾರತದ ಎರಡನೇ ಮಹಿಳೆ ಮತ್ತು ಮೊದಲ ಮಹಿಳಾ ರಕ್ಷಣಾ ಸಚಿವೆ ಎಂಬ ಹೆಗ್ಗಳಿಕೆಗೆ ನಿರ್ಮಲಾ ಪಾತ್ರರಾದರು. ಮಾಜಿ ರಾಷ್ಟ್ರಪತಿಗಳಾದ ಪ್ರತಿಭಾ ಪಾಟೀಲ್ ಹಾಗು ಅಬ್ದುಲ್ ಕಲಾಂ ಅವರು ಈ ಹಿಂದೆ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ದೇಶದ ಮೊದಲ ಮಹಿಳಾ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಸುಖೋಯ್ ವಿಮಾನದ ಮಹಿಳಾ ಪೈಲಟ್ ಹಿಂಭಾಗದ ಆಸನದಲಿ ಕುಳಿತು ಹಾರಾಟ ನಡೆಸಿದರು. ನಿರ್ಮಲಾ ಅವರು ಸುಮಾರು ೪೫ ನಿಮಿಷಗಳ ಹಾರಾಟ ನಡೆಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿದವು. ಸುಖೋಯ್ ಕಾರ್ಯಾಚರಣೆ ಹಾಗೂ ಅದರ ಶಕ್ತಿ ಸಾಮರ್ಥ್ಯದ ಪುನರ್ ಪರಿಶೀಲನೆ ಹಿನ್ನೆಲೆಯಲ್ಲಿ ಸಚಿವೆ ನಿರ್ಮಲಾ ಅವರು ಹಾರಾಟ ನಡೆಸಿದ್ದಾರೆ. ಈ ಹಿಂದೆ ಸೀತಾರಾಮನ್ ಅವರು ವಿಮಾನವಾಹಕ ಐಎನ್ ಎಸ್ ವಿಕ್ರಮಾದಿತ್ಯದಲ್ಲಿ ಹಾರಾಟ ನಡೆಸಿದ್ದರು. ೨೦೦೩ರಲ್ಲಿ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಮೊದಲ ಗಣ್ಯ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ೨೦೧೬ರ ಮೇ ತಿಂಗಳಲ್ಲಿ ಕಿರಣ್ ರಿಜಿಜು ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದರು. ವಿಮಾನದಲ್ಲಿ ಹಾರಾಟ ನಡೆಸಿದ ಬಳಿಕ ’ಅತ್ಯಂತ ಹೆಮ್ಮೆ ಎನಿಸುತ್ತದೆ. ಕಣ್ತರೆಸುವ ಮತ್ತು ಸ್ಮರಣೀಯ ಅನುಭವಕ್ಕಾಗಿ ನಾನು ಕೃತಜ್ಞತೆ ಅರ್ಪಿಸುತ್ತೇನೆ ಎಂದು ನಿರ್ಮಲಾ ನುಡಿದರು. ’ಸಂದರ್ಭಗಳಿಗೆ ಸ್ಪಂದಿಸಲು ರಕ್ಷಣಾ ಸಿಬ್ಬಂದಿ ಅದೆಷ್ಟು ಚುರುಕಾಗಿರಬೇಕು ಮತ್ತು ಎಷ್ಟೊಂದು ಸಿದ್ಧರಾಗಿರಬೇಕು ಎಂಬುದನ್ನು ಮತ್ತು ಅದಕ್ಕಾಗಿ ಅವರು ನಡೆಸುವ ಸತತ ಅಭ್ಯಾಸವನ್ನು ಈ ವಿಮಾನ ಹಾರಾಟ ನಿಜವಾಗಿ ನನಗೆ ಹೇಳಿತು ಎಂದು ಸಚಿವೆ ಬಣ್ಣಿಸಿದರು.

2018: ನವದೆಹಲಿ: ಆರೆಸ್ಸೆಸ್ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಖಟ್ಲೆ ಎದುರಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆರೋಪಪಟ್ಟಿ ದಾಖಲಾತಿಗಾಗಿ ಏಪ್ರಿಲ್ ೨೩ರಂದು ತನ್ನ ಮುಂದೆ ಹಾಜರಾಗುವಂತೆ ಭಿವಂಡಿ ನ್ಯಾಯಾಲಯ ಆಜ್ಞಾಪಿಸಿತು. ‘ಆರೆಸ್ಸೆಸ್ ಮಂದಿ ಗಾಂಧಿಯನ್ನು ಕೊಂದರು ಎಂದು ಹೇಳಿದ್ದಕ್ಕಾಗಿ ರಾಹುಲ್ ವಿರುದ್ಧ ಸಂಘ ಪರಿವಾರ ಮಾನನಷ್ಟ ದಾವೆ ಹೂಡಿತ್ತು. ರಾಹುಲ್ ಗಾಂಧಿ ಅವರು ಈ ಖಟ್ಲೆ ಸಂಬಂಧ ಈದಿನ ಕೋರ್ಟಿಗೆ ಹಾಜರಾಗಬೇಕಿತ್ತು. ಆದರೆ ಅವರು ವಕೀಲರನ್ನು ಮಾತ್ರ ಕಳಿಸಿಕೊಟ್ಟಿದ್ದರು. ಹೀಗಾಗಿ ತನ್ನ ಮುಂದೆ ಖುದ್ದಾಗಿ ಹಾಜರಾಗಲು ರಾಹುಲ್ ಅವರಿಗೆ ನ್ಯಾಯಾಲಯ ಇನ್ನೊಂದು ಅವಕಾಶವನ್ನು ನೀಡಿತು. ೨೦೧೪ರ ಮಾರ್ಚ್ ತಿಂಗಳಲ್ಲಿ ಥಾಣೆಯಲ್ಲಿ ನಡೆದ ಪ್ರದರ್ಶನ ಒಂದರಲ್ಲಿ ರಾಹುಲ್ ಗಾಂಧಿ ಅವರು ಆರೆಸ್ಸೆಸ್ ವಿರುದ್ಧ ಈ ಆರೋಪ ಮಾಡಿದ್ದರು. ಆ ಬಳಿಕ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಸಂಘದ ಪರವಾಗಿ ಖಟ್ಲೆ ದಾಖಲಿಸಿದ್ದರು.

2018: ಕಾನ್ಪುರ (ಉತ್ತರಪ್ರದೇಶ): ಅಂದಾಜು ೧೦೦ ಕೋಟಿ ರೂಪಾಯಿ ಮೌಲ್ಯದ ರದ್ದಾದ ೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ನೋಟುಗಳ ಭಾರಿ ಸಂಗ್ರಹವನ್ನು ಕಾನ್ಪುರದ ನಿರ್ಮಾಣ ಹಂತದಲ್ಲಿರುವ ಮನೆಯೊಂದರಿಂದ ವಶಪಡಿಸಿಕೊಳ್ಳಲಾಯಿತು. ಬೃಹತ್ ಪ್ರಮಾಣದಲ್ಲಿ ರದ್ದಾದ ನೋಟುಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ದೊರೆತ ಮಾಹಿತಿಯ ಮೇರೆಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಆರ್‌ಬಿಐ ಮತ್ತು ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಇಲ್ಲಿನ ಹೋಟೆಲ್ ಒಂದರ ಮೇಲೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆಯಿತು.. ಇವರ ವಿಚಾರಣೆಯ ವೇಳೆ ಮನೆಯೊಂದರಲ್ಲಿ ನಗದು ಇಟ್ಟಿರುವ ಮಾಹಿತಿ ದೊರಕಿತು. ನಂತರ ಮನೆ ಮೇಲೆ ದಾಳಿ ನಡೆಸಿದಾಗ ನೋಟುಗಳು ಪತ್ತೆಯಾದವು.  ಈ ಮನೆ ಉದ್ಯಮಿ ಹಾಗೂ ಬಿಲ್ಡರ್ ಅಶೋಕ್ ಖತ್ರಿ ಎಂಬುವವರಿಗೆ ಸೇರಿದ್ದು ಎಂದು ಪೊಲೀಸ್ ಮೂಲಗಳು ತಿಳಿಸಿದವು. ಈವರೆಗೆ ೯೭ ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಎಣಿಸಲಾಗಿದೆ. ಇನ್ನೂ ಹಲವಾರು ನೋಟುಗಳನ್ನು ಲೆಕ್ಕ ಹಾಕಬೇಕಾಗಿದೆ.
೧೬ ಜನರ ಸೆರೆ: ವಶಪಡಿಸಿಕೊಳ್ಳಲಾಗಿರುವ ನಗದು ಕೆಲವು ವ್ಯಕ್ತಿಗಳ ತಂಡಕ್ಕೆ ಸೇರಿದ್ದು ಎನ್ನಲಾಗಿದೆ. ಅಶೋಕ್ ಖತ್ರಿ ಅಕ್ರಮ ಹಣಕಾಸು ಚಟುವಟಿಕೆ ನಡೆಸುತ್ತಿರುವ ಬಗ್ಗೆ ಪೊಲೀಸರು ಗುಮಾನಿ ವ್ಯಕ್ತಪಡಿಸಿದ್ದಾರೆ. ‘ಪ್ರಕರಣಕ್ಕೆ ಸಂಬಂಧಿಸಿ ೧೬ ಜನರನ್ನು ಬಂಧಿಸಲಾಗಿದೆ. ನೋಟು ಬದಲಾವಣೆ ಪ್ರಯತ್ನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಉತ್ತರ ಪ್ರದೇಶ ಪೊಲೀಸ್‌ನ ಹಂಗಾಮಿ ಮುಖ್ಯಸ್ಥ ಆನಂದ್ ಕುಮಾರ್ ತಿಳಿಸಿದರು.

2018: ನವದೆಹಲಿ: ಆಧಾರ್ ಅಂಕಿ ಅಂಶಗಳನ್ನು ಹಂಚಿ ಕೊಳ್ಳುವ ಮೂಲಕ ನಾಗರಿಕರ ಪೌರ ಹಕ್ಕುಗಳ ಅವಸಾನವಾಗುತ್ತದೆ ಎಂದು ಸುಪ್ರೀಂಕೋರ್ಟಿನಲ್ಲಿ ಆಧಾರ್ ಕುರಿತ ವಿಚಾರಣೆಯಲ್ಲಿ ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ಸುಪ್ರೀಂ ಕೋರ್ಟ್ ವಕೀಲ ಶ್ಯಾಮ್ ದಿವಾನ್ ವಾದಿಸಿದರು.  ಆಧಾರ್ ಸಂಖ್ಯೆಯನ್ನು ಸರಕಾರದ ವಿವಿಧ ಜನ ಕಲ್ಯಾಣ ಯೋಜನೆಗಳಿಗೆ ಜೋಡಣೆ ಮಾಡುವಲ್ಲಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ ೨೭ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಈದಿನ ಮತ್ತೆ ಕೈಗೆತ್ತಿಕೊಂಡಿತು. "ನಾಗರಿಕರ ಪೌರ ಹಕ್ಕುಗಳನ್ನು ಆಧಾರ್ ಸಾಯಿಸುತ್ತದೆ; ಜನರ ಸಂವಿಧಾನವನ್ನು ಇದು ಸರಕಾರದ ಸಂವಿಧಾನವನ್ನಾಗಿ ಮಾರ್ಪಡಿಸುತ್ತದೆ ಎಂದು ಶ್ಯಾಮ್ ದಿವಾನ್ ಹೇಳಿದರು.
ಆಧಾರ್ ಸಾಂವಿಧಾನಿಕ ಸಿಂಧುತ್ವ ಕುರಿತ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟಿನ ಸಂವಿಧಾನ ಪೀಠವು ನಡೆಸುತ್ತಿದೆ.  ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶಾ ನೇತೃತ್ವದ ಪಂಚ ಸದಸ್ಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎ ಎಂ ಖಾನ್‌ವಿಲ್ಕರ್, ಆದರ್ಶ್ ಕುಮಾರ್ ಸಿಕ್ರಿ, ಡಿ.ವೈ ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಇದ್ದರು.  ಆಧಾರ್ ವಿಷಯ ಅತ್ಯಂತ ಸಂಕೀರ್ಣಗೊಂಡಿದೆ. ಆದ್ದರಿಂದ ಸುದೀರ್ಘ ವಿಚಾರಣೆಗೆ ಸುಪ್ರೀಂಕೋರ್ಟ್ ಸಿದ್ಧವಾಗಿರಬೇಕಾಗುತ್ತದೆ ಎಂದು ಶ್ಯಾಮ್ ದಿವಾನ್ ನುಡಿದರು. ಸಂವಿಧಾನಕ್ಕೆ ಬದ್ಧವಾಗಿರುವ ಮೌಲ್ಯಗಳನ್ನು ಆಧಾರ್ ಉಲ್ಲಂಘಿಸುತ್ತದೆಯೇ? ಭವಿಷ್ಯದಲ್ಲಿ ಸರ್ಕಾರವು ವ್ಯಕ್ತಿಗಳನ್ನು ವ್ಯಕ್ತಿಯಾಗಿ ಗುರುತಿಸುವ ಬದಲು ಸಂಖ್ಯೆಯಾಗಿ ಗುರುತಿಸಲಿದೆಯೇ ಹೇಗೆ ಎಂಬುದು ದಿವಾನ್ ಅವರ ವಾದದ ತಿರುಳಾಗಿತ್ತು.ಆಧಾರ್ ಜನರನ್ನು ನಿರ್ಣಾಯಕ ರೀತಿಯಲ್ಲಿ ಗುರುತಿಸುವ ಬದಲು ಸಂಭವನೀಯ ಅಂಶಗಳ ಮೇಲೆ ಗುರುತಿಸುವಂತೆ ಮಾಡಲಿದೆ. ಬೆರಳಚ್ಚುಗಳು ಶೇಕಡಾ ೧೦೦ರಷ್ಟು ತಾಳೆಯಾಗುವುದಿಲ್ಲ. ಒತ್ತಡ, ಬೆವರುವಿಕೆ, ಬೆಳವಣಿಗೆ, ದೃಷ್ಟಿಕೋನ ಇತ್ಯಾದಿ ಅಂಶಗಳನ್ನು ಅವಲಂಬಿಸಿರುತ್ತದೆ. ಸಂವಿಧಾನದ ಅಡಿಯಲ್ಲಿ ನನಗೆ ನೀಡಲಾಗಿರುವ ಅರ್ಹತೆಗಳನ್ನು ಸಂಭವನೀಯಾತ್ಮಕವನಾಗಿ ಮಾಡಲು ಹೇಗೆ ಸಾಧ್ಯ? ಎಂದು ದಿವಾನ್ ಕೇಳಿದರು. ಬಯೋ ಮೆಟ್ರಿಕ್ ನಕಲಿ ಪ್ರಕರಣಗಳ ಸಂಖ್ಯೆ ಇಡೀ ರಾಷ್ಟ್ರದಲ್ಲಿ ಕೇವಲ ೧೦೦೦ ಇರಬಹುದು ಎಂದು ಆಧಾರ್ ಹಿಂದಿನ ವ್ಯಕ್ತಿಗಳು ಭಾವಿಸಿದ್ದರು. ಆದರೆ ೨೦೧೭ರ ಜನವರಿ ೧೫ರ ಮಾಹಿತಿ ಹಕ್ಕು ಕಾಯ್ದೆಯ ಅಡಿ ಒದಗಿಸಲಾದ ಮಾಹಿತಿಯಂತೆ ೬.೨೩ ಕೋಟಿ ಬಯೋಮೆಟ್ರಿಕ್ ನಕಲಿ ಪ್ರಕರಣಗಳು ಇವೆ, ಅದು ಇಡೀ ರಾಷ್ಟ್ರದ ಬಯೋಮೆಟ್ರಿಕ್ ಪ್ರಕರಣಗಳ ಶೇಕಡಾ ೦.೦೫೭ನಷ್ಟು ಆಗುತ್ತದೆ ಎಂದು ನುಡಿದ ದಿವಾನ್ ’ಆಧಾರ್ ಮೂಲಕ ಅವರು ಏನು ಮಾಡುತ್ತಿದ್ದಾರೆ ಎಂದರೆ ನೀವು ಭಾರತದ ನಿವಾಸಿಯಾಗಿ ಮುಂದುವರೆಯಲು ಸಾಧ್ಯವಿಲ್ಲದಂತಾಗಬಹುದು ಎಂದು ಪ್ರತಿಪಾದಿಸಿದರು. ೨೦೦೯ರಿಂದ ೨೦೧೬ರವರೆಗೆ ಆಧಾರ್ ದಾಖಲಾತಿಯ ಯಾವುದೇ ಕಾನೂನು ಇಲ್ಲದೆ ನಡೆಯಿತು. ಸ್ವ ಇಚ್ಛೆಯಿಂದ ಜನ ಒಪ್ಪಿಗೆ ಕೊಟ್ಟಿರಲಿಲ್ಲ. ಅದರಿಂದ ಹೊರ ಹೋಗುವ ಆಯ್ಕೆ ಇರಲಿಲ್ಲ ಎಂದು ದಿವಾನ್ ವಿವರಿಸಿದರು. ಮಾನವ ದೇಹವನ್ನು ಮಾರ್ಕ್‌ಗಳಿಗಾಗಿ ಬಳಸುವಂತಿಲ್ಲ. ಆದರೆ ಆಧಾರ್ ಯೋಜನೆಯ ಅಡಿಯಲ್ಲಿ ತಮ್ಮ ದೇಹವನ್ನು ಗುರುತಿಸುವಿಕೆಗಾಗಿ ಮಾರ್ಕರುಗಳಂತೆ ಬಳಸುವಂತೆ ಪೌರರ ಮೇಲೆ ಒತ್ತಡ ಹೊರಿಸಲಾಗುತ್ತಿದೆ. ಆಧಾರ್ ಒಂದು ರಾಕ್ಷಸ ಎಲೆಕ್ಟ್ರಾನಿಕ್ ಬಲೆ ಎಂದು ಅವರು ನುಡಿದರು. ಆಧಾರ್ ಕಾಯ್ದೆಯನ್ನು ರದ್ದು ಪಡಿಸಿದರೆ ಸಾಕಾಗುವುದಿಲ್ಲ. ಹಣ ವರ್ಗಾವಣೆ ಕಾಯ್ದೆಯಂತಹ ಇತರ ಕಾನೂನುಗಳ ಮೂಲಕ ಆಧಾರ್ ಅಂಶಗಳು ಕಾರ್‍ಯಾಚರಿಸುತ್ತವೆ ಎಂದು ದಿವಾನ್ ವಿವರಿಸಿದರು. ಅರ್ಜಿದಾರರು ಗಣ್ಯ ವ್ಯಕ್ತಿಗಳಲ್ಲ, ಗ್ರಾಮೀಣ ಭಾಗಗಳಲ್ಲಿ ದುಡಿಯುತ್ತಿರುವವರು. ಗ್ರಾಮೀಣ ಪ್ರದೇಶದ ಬಹುತೇಕ ಮಂದಿಯ ಬಯೋಮೆಟ್ರಿಕ್ ತಾಳೆಯಾಗುವುದಿಲ್ಲ, ಏಕೆಂದರೆ ಅವರು ದೈಹಿಕ ದುಡಿಮೆ ಗೈಯುವವರು ಎಂದು ದಿವಾನ್ ಹೇಳಿದರು. ಖಾಸಗಿತನವನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್ ಪೀಠವು ಆಧಾರ್ ಯೋಜನೆಯನ್ನು ಪ್ರಶ್ನಿಸಿದವರು ಗಣ್ಯ ವ್ಯಕ್ತಿಗಳು ಎಂಬ ಸರ್ಕಾರದ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಅವರು ನುಡಿದರು. ಜನರ ಖಾಸಗಿತನವನ್ನು ಉಲ್ಲಂಘನೆ ಮಾಡುವ ರೀತಿಯಲ್ಲಿ  ಆಧಾರ್ ಅಂಕಿ ಅಂಶ ಸೋರಿಕೆಯಾಗಿರುವ ಬಗ್ಗೆ  ಹಲವಾರು ಸಂದೇಹಗಳಿವೆ. ಆಧಾರ್ ನಂಬರನ್ನು ಮೊಬೈಲ್ ಫೋನ್‌ಗಳಿಗೆ, ಬ್ಯಾಂಕ್ ಖಾತೆಗಳಿಗೆ ಮತ್ತು ಇತರ ಸರಕಾರಿ ಸೇವಾ ಸೌಲಭ್ಯಗಳ ಯೋಜನೆಗಳಿಗೆ ಜೋಡಿಸುವುದಕ್ಕೆ ಈ ಹಿಂದೆ ನಿಗದಿಯಾಗಿದ್ದ ಅಂತಿಮ ದಿನವನ್ನು ೨೦೧೮ರ ಮಾರ್ಚ್ ೩೧ಕ್ಕೆ ವಿಸ್ತರಿಸಲಾಗಿದೆ.

2018: ಮುಂಬೈ: ಹತ್ತು ರೂಪಾಯಿಗಳ ನಾಣ್ಯಗಳ ಚಲಾವಣೆಯನ್ನು ಸ್ಥಗಿತಗೊಳಿಸಿಲ್ಲ. ಎಲ್ಲ ಮಾದರಿಯ ೧೦ ರೂಪಾಯಿ ನಾಣ್ಯಗಳು ಚಲಾವಣೆಗೆ ಯೋಗ್ಯವಾಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟ ಪಡಿಸಿತು. ಹತ್ತು ರೂಪಾಯಿ ನಾಣ್ಯವನ್ನು ಜನರು ಬಳಕೆ ಮಾಡಬಹುದು, ಚಲಾವಣೆ ಮಾಡಬಹುದು ಎಂದು ಬ್ಯಾಂಕ್ ಹೇಳಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ವದಂತಿಗಳಿಗೆ ಕಿವಿಗೊಡಬೇಕಾಗಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿತು. ಕೆಲವು ಕಡೆ ೧೦ ರೂಪಾಯಿ ನಾಣ್ಯವನ್ನು ಪಡೆಯುತ್ತಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಆರ್‌ಬಿಐ ಈ ಸ್ಪಷ್ಟನೆ ನೀಡಿತು. ಸದ್ಯ ಬಳಕೆಯಲ್ಲಿ ೧೪ ಮಾದರಿಯ ೧೦ ರೂಪಾಯಿ ನಾಣ್ಯಗಳು ಇವೆ. ಅವೆಲ್ಲವೂ ಚಲಾವಣೆಗೆ ಯೋಗ್ಯವಾಗಿವೆ. ಇವುಗಳನ್ನು ಒಮ್ಮೆ ಬ್ಯಾಂಕ್‌ಗೆ ಜಮೆ ಮಾಡಿದರೆ ಬ್ಯಾಂಕ್‌ಗಳು ನಿರಾಕರಿಸುವಂತಿಲ್ಲ ಎಂದೂ ಆರ್‌ಬಿಐ ಪ್ರಕಟಣೆ ತಿಳಿಸಿತು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಹಮದಾಬಾದ್ ಸಮೀಪದ ದೇವ ಧೋಲೇರಾ ಗ್ರಾಮದಲ್ಲಿ ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಕೇಂದ್ರವನ್ನು (ಸೆಂಟರ್ ಫಾರ್ ಎಂಟರ್ ಪ್ರೆನ್ಯೂರ್ ಶಿಪ್ ಅಂಡ್ ಟೆಕ್ನಾಲಜಿ) ರಾಷ್ಟ್ರಕ್ಕೆ ಅರ್ಪಿಸಿದರು. ‘ಅಂತಾರಾಷ್ಟ್ರೀಯ ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಕೇಂದ್ರ (ಐಕ್ರಿಯೇಟ್) ಹೆಸರಿನ ಸರ್ಕಾರಿ -ಖಾಸಗಿ ಸಹಭಾಗಿತ್ವದ (ಪಿಪಿಪಿ) ಈ ಕೇಂದ್ರವನ್ನು ನಿಧಿ, ಸ್ಥಳಾವಕಾಶ, ಮಾರ್ಗದರ್ಶಕರು ಮತ್ತು ಇತರ ಸವಲತ್ತುಗಳನ್ನು ಒದಗಿಸುವ ಮೂಲಕ ಉದ್ಯಮಶೀಲರನ್ನು ಬೆಳೆಸುವ ಸಲುವಾಗಿ ಸ್ಥಾಪಿಸಲಾಗುತ್ತಿದೆ. ‘ನಾನು ಕಳೆದ ವರ್ಷ ಇಸ್ರೇಲಿಗೆ ಭೇಟಿ ಕೊಟ್ಟಾಗ ಈ ಪ್ರತಿಷ್ಠಾನವನ್ನು ಇಸ್ರೇಲ್ ಬಾಂಧವ್ಯದ ಜೊತೆ ಬಲಾಢ್ಯವಾಗಿ ಸ್ಥಾಪಿಸಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡಿದ್ದೆ. ಅಂದಿನಿಂದ ನಾನು ನನ್ನ ಗೆಳೆಯ ಬೆಂಜಮಿನ್ ನೆತನ್ಯಾಹು ಅವರ ಭಾರತ ಆಗಮನಕ್ಕಾಗಿ ಕಾಯುತ್ತಿದ್ದೆ. ಈಗ ಅವರು ಇಲ್ಲಿದ್ದಾರೆ ಮತ್ತು ನಾವು ಈ ಪ್ರತಿಷ್ಠಾನವನ್ನು ಉದ್ಘಾಟಿಸುತ್ತಿದ್ದೇವೆ ಎಂದು ಮೋದಿ ಹೇಳಿದರು. ‘ನಮ್ಮ ರಾಷ್ಟ್ರದ ಸಂಪೂರ್ಣ ವ್ಯವಸ್ಥೆಯನ್ನೇ ಆವಿಷ್ಕಾರಮಿತ್ರ ವ್ಯವಸ್ಥೆಯನ್ನಾಗಿ ಮಾಡಲು ನಾವು ಶ್ರಮಿಸುತ್ತಿದ್ದೇವೆ. ಇದರಿಂದ ನವೀನ ಕಲ್ಪನೆಗಳಿಂದ ರೂಪಿಸಲ್ಪಡುವ ಹೊಸ ಆವಿಷ್ಕಾರಗಳಾಗುತ್ತವೆ. ಮತ್ತು ಅಂತಹ ಆವಿಷ್ಕಾರಗಳಿಂದ ಹೊಸ ಭಾರತದ ನಿರ್ಮಾಣವಾಗುತ್ತದೆ ಎಂದು ಪ್ರಧಾನಿ ನುಡಿದರು. ಈ ಹೊತ್ತಿನಲ್ಲಿ ಇಲ್ಲಿ ಇರುವುದಕ್ಕಾಗಿ ಇಸ್ರೇಲಿನ ಪ್ರಧಾನಿ ಖುಷಿಯಾಗಿದ್ದಾರೆ ಎಂದು ಅವರು ಹೇಳಿದರು. ‘ಜಗತ್ತಿಗೆ ಐಪಾಡ್, ಐಪೋಡ್ ಗಳ ಬಗ್ಗೆ ಗೊತ್ತಿದೆ. ಇಲ್ಲಿ ಜಗತ್ತು ತಿಳಿಯಬೇಕಾದ ಇನ್ನೊಂದು ಐ ಇದೆ, ಅದು ’ಐಕ್ರಿಯೇಟ್ ಎಂದು ನೆತನ್ಯಾಹು ನುಡಿದರು. ನೆತನ್ಯಾಹು ಅವರು ತಮ್ಮ ಭಾಷಣವನ್ನು ’ಜೈ ಭಾರತ್ ಘೋಷಣೆಯೊಂದಿಗೆ ಮುಗಿಸಿದಾಗ ಸಭಾಂಗಣದಲ್ಲಿ ಕಿವಿಗಡಚಿಕ್ಕುವಷ್ಟು ಚಪ್ಪಾಳೆ ಕೇಳಿಬಂತು.  ‘ಪ್ರಧಾನಿ ನರೇಂದ್ರ ಮೋದಿ ಮತ್ತು ನಾನು ಇಬ್ಬರೂ ಅತ್ಯಂತ ಯುವಕರು ಮತ್ತು ಆಶಾವಾದಿಗಳು. ನಾವು ನಮ್ಮ ಚಿಂತನೆ ಮತ್ತು ಭವಿಷ್ಯದ ಬಗೆಗಿನ ಆಶಾವಾದದಲ್ಲಿ ಯುವಕರು. ಜೈ ಭಾರತ್, ಜೈ ಇಸ್ರೇಲ್. ನಿಮಗೆಲ್ಲರಿಗೂ ಧನ್ಯವಾದಗಳು ಎಂದು ನೆತನ್ಯಾಹು ತಮ್ಮ ಭಾಷಣ ಮುಕ್ತಾಯಗೊಳಿಸಿದರು.

2017: ನವದೆಹಲಿ: ಭಯೋತ್ಪಾದನೆಯಿಂದ ಹೊರಬಂದರೆ ಮಾತ್ರವೇ ಪಾಕಿಸ್ತಾನಕ್ಕೆ ಭಾರತದ ಜೊತೆಗೆ ಸಂಭಾಷಣೆ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು  ಈದಿನ ನವದೆಹಲಿಯಲ್ಲಿ ಪಾಕಿಸ್ತಾನಕ್ಕೆ ಖಂಡತುಂಡ ಮಾತುಗಳಲ್ಲಿ ಸ್ಪಷ್ಟ ಪಡಿಸಿದರು. ವಿದೇಶಾಂಗ ವ್ಯವಹಾರ ಸಚಿವಾಲಯವು ದೆಹಲಿಯಲ್ಲಿ ಸಂಘಟಿಸಿದ ಎರಡನೇ ಫ್ಲ್ಯಾಗ್ಶಿಪ್ ರೈಸೀನಾ ಮಾತುಕತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಸಂಪೂರ್ಣ ದಕ್ಷಿಣ ಏಷ್ಯಾದಲ್ಲಿ ಶಾಂತಿಯುತ ಬಾಂಧವ್ಯ ಇರಬೇಕು ಎಂದು ನಾನು ಬಯಸುತ್ತೇನೆ. ದೃಷ್ಟಿಕೋನವೇ ನನಗೆ ಪಾಕಿಸ್ತಾನವೂ ಸೇರಿದಂತೆ ಎಲ್ಲ ಸಾರ್ಕ್ ರಾಷ್ಟ್ರಗಳನ್ನೂ ನನ್ನ ಪ್ರಮಾಣವಚನ ಸಮಾರಂಭಕ್ಕೆ ಕರೆಯುವಂತೆ ಪ್ರೇರೇಪಿಸಿತು. ಇದೇ ಕಾರಣಕ್ಕಾಗಿ ನಾನು ಲಾಹೋರ್ವರೆಗೂ ಪ್ರಯಾಣ ಬೆಳೆಸಿದೆ. ಆದರೆ ಭಾರತ ಮಾತ್ರವೇ ಶಾಂತಿಗಾಗಿ ನಡೆದರೆ ಸಾಲದು. ಪಾಕಿಸ್ತಾನವೂ ಶಾಂತಿಯ ಮಾರ್ಗದಲ್ಲಿ ಪಯಣಿಸಬೇಕು. ಪಾಕಿಸ್ತಾನವು ಭಾರತದೊಂದಿಗೆ ಸಂಭಾಷಣೆ ಬಯಸುವುದಿದ್ದರೆ ಅದು ಭಯೋತ್ಪಾದನೆಯಿಂದ ಹೊರ ನಡೆಯಬೇಕು ಎಂದು ಪ್ರಧಾನಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ರಧಾನಿ ಚೀನಾಕ್ಕೂ ಸಂದೇಶ ರವಾನಿಸಿದರು. ಭಾರತ ಮತ್ತು ಚೀನಾಕ್ಕೆ ಅಭೂತಪೂರ್ವ ಅವಕಾಶಗಳಿವೆ. ಇದೇ ಸಮಯದಲ್ಲಿ ಎರಡು ದೊಡ್ಡ ರಾಷ್ಟ್ರಗಳ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ಇರುವುದು ಅಸಹಜ. ಉಭಯ ರಾಷ್ಟ್ರಗಳೂ ಪರಸ್ಪರರ ಕಾಳಜಿ ಮತ್ತು ಹಿತಾಸಕ್ತಿಗಳ ಬಗ್ಗೆ ಸೂಕ್ಷ್ಮವಾಗಿರಬೇಕು ಮತ್ತು ಗೌರವ ನೀಡಬೇಕು ಎಂದು ಮೋದಿ ಹೇಳಿದರು. ಪಾಕಿಸ್ತಾನ ಮತ್ತು ಚೀನಾ ಜೊತೆಗಿನ ಬಾಂಧವ್ಯಗಳು ಕಳೆದ ಒಂದು ವರ್ಷದಿಂದ ಗಮನಾರ್ಹವಾಗಿ ನಶಿಸಿರುವುದು ಇಲ್ಲಿ ಗಮನಾರ್ಹ. ಭಾರತವು ರೈಸೀನಾ ಡಯಲಾಗ್ ಹೆಸರಿನ ಸಂಭಾಷಣೆಯನ್ನು ಸಿಂಗಾಪುರದ ಶಾಂಗ್ರಿ ಲಾ ಮಾತುಕತೆ ಮಾದರಿಯಲ್ಲಿ ಸಂಘಟಿಸಿದೆ. ರಷ್ಯಾ ಮತ್ತು ಭಾರತ ನಡುವಣ ಮೈತ್ರಿ, ಸಹಕಾರವನ್ನು ಪ್ರಧಾನಿ ಶ್ಲಾಘಿಸಿದರು.
2017: ತಿರುಚ್ಚಿ: ತಮ್ಮ ಕುಟುಂಬವು ರಾಜಕೀಯದಲ್ಲಿ ಇದ್ದರೆ ತಪ್ಪೇನೂ ಇಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರ ಪತಿ ಎಂ. ನಟರಾಜನ್ ತಂಜಾವೂರಿನಲ್ಲಿ ಪ್ರತಿಪಾದಿಸಿದರು. ಎಂಜಿಆರ್ ನಿಧನದ ಬಳಿಕ ತಮ್ಮ ಕುಟುಂಬ ಸದಸ್ಯರು ಕಳೆದ 30 ವರ್ಷಗಳಿಂದ ಜಯಲಲಿತಾ ಅವರನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಎಂಜಿಆರ್ ಅವರ ಪಾರ್ಥಿವ ಶರೀರವನ್ನು ನೋಡಲು ಅವಕಾಶ ಸಿಗದೇ ಹೋದಾಗ ನಾವು ಅವರನ್ನು ಅಂತ್ಯಕ್ರಿಯೆಗೆ ಕರೆದುಕೊಂಡು ಹೋಗಿದ್ದೆವು. ಎಂಜಿಆರ್ ಪಾರ್ಥಿವ ಶರೀರ ಇದ್ದ ವಾಹನದಿಂದ ಆಕೆಯನ್ನು ಕೆಳಕ್ಕೆ ತಳ್ಳಿದಾಗ ನಮ್ಮ ಕುಟುಂಬ ಸದಸ್ಯರು ಆಕೆಗೆ ಬೆಂಬಲವಾಗಿ ನಿಂತರು. ಆಕೆಯ ಬದುಕಿನುದ್ದಕ್ಕೂ ಆಕೆಗೆ ಬೆಂಬಲವಾಗಿ ನಮ್ಮ ಕುಟುಂಬ ಸದಸ್ಯರಿದ್ದರು ಎಂದು ಅವರು ನುಡಿದರು. ಬ್ರಾಹ್ಮಣರು ಜಯಲಲಿತಾ ಅವರು ಮುಖ್ಯಮಂತ್ರಿಯಾಗುವುದನ್ನು ವಿರೋಧಿಸಿದಾಗ, ನಾವೇ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ಆದ್ದರಿಂದ ನಮ್ಮ ಕುಟುಂಬ ಸದಸ್ಯರು ರಾಜಕೀಯಕ್ಕೆ ಬಂದರೆ ಅದರಲ್ಲಿ ಅನೈಕತೆಯೇನೂ ಇಲ್ಲ ಎಂದು ನಟರಾಜನ್ ಅವರು ತಮಿಳರ್ ಕಲೆಲ್ಲಕ್ಕಿಯ ಪೊಂಗಲ್ ಫೆಸ್ಟಿವಲ್ ಅಂತಿಮ ದಿನ ಮಾತನಾಡುತ್ತಾ ನಟರಾಜನ್ ವಿವರಿಸಿದರು. ಹಾಲಿ ಮುಖ್ಯಮಂತ್ರಿಯನ್ನು ಈಗ ಬದಲಾಯಿಸಬೇಕಾದ ಅಗತ್ಯವೇನೂ ಇಲ್ಲ. . ಪನ್ನೀರಸೆಲ್ವಮ್ ಅವರು ಸರ್ಕಾರವನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈಗ ಸರ್ಕಾರದ ನಾಯಕತ್ವ ಬದಲಾವಣೆಯ ಅಗತ್ಯ ಇಲ್ಲ. ಅಂತಹ ಪರಿಸ್ಥಿತಿ ಬಂದಾಗ, ಶಾಸಕರು ಮತ್ತು ಪಕ್ಷ ಪದಾಧಿಕಾರಿಗಳು ನಿರ್ಧರಿಸುತ್ತಾರೆ ಎಂದು ಸಮಾರಂಭದ ಬಳಿಕ ವರದಿಗಾರರ ಜೊತೆ ಮಾತನಾಡುತ್ತಾ ನಟರಾಜನ್ ಹೇಳಿದರು.
2017: ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಪಕ್ಷವು ಪ್ರಕಟಿಸಿತು. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿ ಇರುತ್ತದೆ ಎಂದು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಮಾಧ್ಯಮಗಳಿಗೆ ತಿಳಿಸಿದರು. ಮುಂಬರುವ ದಿನಗಲ್ಲಿ ಇತರ ರಾಜಕೀಯ ಪಕ್ಷಗಳ ಜೊತೆಗೂ ಮಹಾಮೈತ್ರಿ ಕೂಟ ರಚನೆಯಾಗಲಿದೆ ಎಂದು ಆಜಾದ್ ನುಡಿದರು. ಉಭಯ ಪಕ್ಷಗಳೂ ಅಖಿಲೇಶ್ ಅವರ ನಾಯಕತ್ವದ ಅಡಿಯಲ್ಲಿ ಚುನಾವಣೆ ಎದುರಿಸಲಿವೆ ಎಂದೂ ಆಜಾದ್ ನುಡಿದರು. ಇದೇ ವೇಳೆಗೆ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಶೀಲಾ ದೀಕ್ಷಿತ್ ಅವರು ಚುನಾವಣೆಯಲ್ಲಿ ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ಇರಲು ಸಾಧ್ಯವಿಲ್ಲ. ಆದ್ದರಿಂದ ನಾನು ವಿನಮ್ರವಾಗಿ ಮುಖ್ಯಮಂತ್ರಿ ಅಭ್ಯರ್ಥನದಿಂದ ಹಿಂದೆ ಸರಿಯುವೆ ಎಂಬುದಾಗಿ ಹೇಳುವ ಮೂಲಕ ತಮ್ಮ ಹೃತ್ಪೂರ್ವಕ ಬೆಂಬಲ ವ್ಯಕ್ತ ಪಡಿಸಿದರು.
2017: ಸಿಡ್ನಿ: 2014ರಲ್ಲಿ ಕಣ್ಮರೆಯಾದ ಮಲೇಷ್ಯಾ ಏರ್ ಲೈನ್ಸ್ ಎಂಎಚ್370 ವಿಮಾನಕ್ಕಾಗಿ ನಡೆಸಲಾಗುತ್ತಿದ್ದ ಸಾಗರದೊಳಗಣ ಶೋಧವನ್ನು ಮೂರು ವರ್ಷಗಳ ಬಳಿಕ ಕೈಬಿಡಲಾಯಿತು. ಹಿಂದೂ ಮಹಾಸಾಗರದಲ್ಲಿ ಸುಮಾರು 46,000ಮೈಲು ಪ್ರದೇಶದಲ್ಲಿ ನಡೆಸಲಾಗುತ್ತಿದ್ದ ಶೋಧಕಾರ್ಯವನ್ನು ಕೈಬಿಡುವುದರೊಂದಿಗೆ ಮಲೇಷ್ಯಾ ವಿಮಾನದ ಕಣ್ಮರೆ ಪ್ರಕರಣ ನಿಗೂಢವಾಗಿಯೇ ಉಳಿಯುವಂತಾಯಿತು.  ವಿಮಾನದ ಯಾವುದೇ ಅವಶೇಷವೂ ಪತ್ತೆಯಾಗದ ಕಾರಣ 239 ಜನರೊಂದಿಗೆ ಕಣ್ಮರೆಯಾಗಿದ್ದ ಮಲೇಷ್ಯಾ ಏರ್ ಲೈನ್ಸ್ ಎಂಎಚ್ 370 ವಿಮಾನದ ಶೋಧವನ್ನು ಕೈಬಿಡಲಾಗಿದೆ ಎಂದು ಮೂರು ರಾಷ್ಟ್ರಗಳನ್ನು ಒಳಗೊಂಡಿದ್ದ ಶೋಧ ತಂಡ ಈದಿನ ಪ್ರಕಟಿಸಿತು. 1600 ಲಕ್ಷ ಡಾಲರ್ ವೆಚ್ಚದಲ್ಲಿ ಬೋಯಿಂಗ್ 777 ಪತ್ತೆಗಾಗಿ ಆಸ್ಟ್ರೇಲಿಯಾದ ಪಶ್ಚಿಮ ಭಾಗದ ಸಾಗರದಡಿಯಲ್ಲಿ ಶೋಧ ನಡೆಸಿದ ಆಸ್ಟ್ರೇಲಿಯಾದ ಜಂಟಿ ಏಜೆನ್ಸಿ್ಸ ಸಮನ್ವಯ ಕೇಂದ್ರವು ಈದಿನ ಹೇಳಿಕೆಯೊಂದನ್ನು ನೀಡಿ ವಿಮಾನದ ಶೋಧಕಾರ್ಯವನ್ನು ಅಧಿಕೃತವಾಗಿ ಕೈಬಿಡಲಾಗಿದೆ ಎಂದು ಪ್ರಕಟಿಸಿತು. ಶೋಧ ತಂಡದ ಸಿಬ್ಬಂದಿ 1,20,000 ಚದರ ಕಿಮೀ (46,000 ಮೈಲು) ವ್ಯಾಪ್ತಿಯಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ಯಾವುದೇ ಫಲ ನೀಡಿಲ್ಲ. ಅತ್ಯಾಧುನಿಕ ಶೋಧ ಸಲಕರಣೆಗಳ ನೆರವು ಪಡೆದಿದ್ದರೂ ವಿಮಾನವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ಚೀನೀ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದರು.
2016: ಚೆನ್ನೈ: ತಮಿಳುನಾಡು ರಾಜಕೀಯಕ್ಕೆ ದಿವಂಗತ ಜಯಲಲಿತಾ ಅವರ ಹೋಲಿಕೆ ಇರುವ  ಸೋದರ ಸೊಸೆ ದೀಪಾ ಜಯಕುಮಾರ್ ಅವರ ರಂಗಪ್ರವೇಶವಾಯಿತು.ನಾನು ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದೇನೆ. ಮತ್ತು ಜಯಲಲಿತಾ ಅವರ ಹೆಜ್ಜೆಯಲ್ಲೇ ಹೆಜ್ಜೆ ಹಾಕಲಿದ್ದೇನೆಎಂದು ದೀಪಾ ಜಯಕುಮಾರ್ ಅವರು ಚೆನ್ನೈಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಸ್ಥಾಪಕ ಮತ್ತು ಜಯಲಲಿತಾ ಅವರ ರಾಜಕೀಯ ಗುರು ಎಂಜಿ ರಾಮಚಂದ್ರನ್ ಅವರ ಜನ್ಮಶತಮಾನೋತ್ಸವ ದಿನವಾದ ಈದಿನ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿ ಕರೆದ ದೀಪಾ ಈದಿನ ನಾನು ನನ್ನ ಬದುಕಿನಲ್ಲಿ ಹೊಸ ಪಯಣ ಆರಂಭಿಸುತ್ತಿದ್ದೇನೆ. ಸೂಕ್ತ ಸಮಯದಲ್ಲಿ ನನ್ನ ರಾಜಕೀಯ ಪಯಣದ ವಿವರಗಳನ್ನು ಪ್ರಕಟಿಸಲಿದ್ದೇನೆ ಎಂದು ಹೇಳಿದರುಜಯಲಲಿತಾ ಅವರ ಎಐಎಡಿಎಂಕೆಯನ್ನು ಸೇರಲಿದ್ದಾರೆಯೇ ಅಥವಾ ಸ್ವಂತ ಪಕ್ಷ ರಚಿಸಲಿದ್ದಾರೆಯೇ ಎಂಬ ಬಗ್ಗೆ ಪಕ್ಷದ ಸದಸ್ಯರು ಮತ್ತು ಜನರ ಜೊತೆ ಸಮಾಲೋಚಿಸಿದ ಬಳಿಕ ನಿರ್ಧರಿಸುವುದಾಗಿ ದೀಪಾ ಸ್ಪಷ್ಟ ಪಡಿಸಿದರು. ತನ್ನ ಅತ್ತೆಯಂತೆಯೇ ಕೆಂಪು ಸೀರೆ ಉಟ್ಟು, ಹೆಗಲಿಗೆ ಶಾಲು ಧರಿಸಿದ್ದ ದೀಪಾ, ಇತ್ತೀಚೆಗೆ ಎಐಎಡಿಎಂಕೆಯ ಮುಖ್ಯಸ್ಥೆಯಾಗಿ ಆಯ್ಕೆಯಾದ ಜಯಲಲಿತಾ ಗೆಳತಿ ಶಶಿಕಲಾ ನಟರಾಜನ್ ಅವರನ್ನು ಟೀಕಿಸಿದರು. ಜಯಲಲಿತಾ ಅವರ ಸ್ಥಾನದಲ್ಲಿ ಬೇರೆ ಯಾರನ್ನೂ ನಾನು ಒಪ್ಪಲಾರೆ. ತಮ್ಮ ಕಲ್ಪನೆಗಳಿಗೆ ಅನುಗುಣವಾಗಿ ಜಯಲಲಿತಾ ಕೆಲಸ ಮಾಡುತ್ತಿದ್ದರೆಂಬ ಶಶಿಕಲಾ ಕುಟುಂಬದ ಪ್ರತಿಪಾದನೆ ತಪ್ಪು ಎಂದು 42 ಹರೆಯದ ದೀಪಾ ಹೇಳಿದರು.
2017: ಲಖನೌ: ತಂದೆ ಮುಲಾಯಂ ಸಿಂಗ್ ಯಾದವ್ ಅವರನ್ನೇ ಎದುರು ಹಾಕಿಕೊಂಡು ಪಕ್ಷದ ಚಿಹ್ನೆಗಾಗಿ ಹೋರಾಡಿ ಜಯ ತಮ್ಮದಾಗಿಸಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ‘ಇದನ್ನು ಜಯ ಎಂದು ಪರಿಗಣಿಸುವುದಿಲ್ಲ. ತಂದೆಯನ್ನು ಮಣಿಸಿದ್ದೇನೆನ್ನುವುದು ನನಗೆ ಎಂದೂ ಖುಷಿಪಡುವ ವಿಚಾರವಲ್ಲ. ಆದರೆ ಹೋರಾಟ ಅಗತ್ಯವಾಗಿತ್ತುಎಂದು ಪ್ರತಿಪಾದಿಸಿದರು. ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಗಾಗಿ ಚುನಾವಣಾ ಆಯೋಗದ ಕದ ತಟ್ಟಿ, ಹೋರಾಡಿ ಚಿಹ್ನೆಯನ್ನು ತನ್ನದಾಗಿಸಿಕೊಂಡಿರುವ ಅಖಿಲೇಶ್ ಯಾದವ್ ಬಗ್ಗೆ ತಮ್ಮ ಅನಿವಾರ್ಯತೆಯನ್ನು ಹೇಳಿಕೊಂಡಿದ್ದಾರೆ. ಅವರು ನನ್ನ ತಂದೆ. ಚುನಾವಣಾ ಆಯೋಗ ಆದೇಶ ಪ್ರಕಟಿಸಿದ ಬಳಿಕ ನಾನೇ ನೇರವಾಗಿ ತಂದೆ ಮುಲಾಯಂ ಸಿಂಗ್ ಅವರನ್ನು ಭೇಟಿ ಮಾಡಿಬಂದಿದ್ದೇನೆ. ಅವರ ಅಶೀರ್ವಾದ ನನಗೆ ಎಂದೆಂದೂ ಬೇಕು ಎಂದು ಹೇಳಿದರು. ಪಕ್ಷ ಇನ್ನೇನು ಇಬ್ಬಾಗ ಆಗಬೇಕಾದ ಹಂತಕ್ಕೆ ತಲುಪಿದ ಹಿನ್ನೆಲೆಯಲ್ಲಿ ನಡೆದ ಪಕ್ಷ ಚಿಹ್ನೆಗಾಗಿ ನಡೆದ ಅಪ್ಪ-ಮಗನ ಕಾಳಗದಲ್ಲಿ ಅಖಿಲೇಶ್ ಜಯ ತಮ್ಮದಾಗಿಸಿಕೊಂಡಿದ್ದರು. ಕೇಂದ್ರ ಚುನಾವಣಾ ಆಯೋಗ ಪಕ್ಷದ ಚಿಹ್ನೆ ಸೈಕಲ್ ಅಖಿಲೇಶ್ ಯಾದವ್ ಅವರಿಗೆ ಸೇರಿದ್ದು ಎಂದು ಮಹತ್ವದ ಆದೇಶ ನೀಡಿತ್ತು.ಮುಂದಿನ ತಿಂಗಳು ನಡೆಯಲಿರುವ ಚುನಾವಣೆಗೆ ಪೂರ್ವ ತಯಾರಿಯಲ್ಲಿರುವ ಅಖಿಲೇಶ್ ಯಾದವ್, ಪ್ರಬಲ ಸ್ಪರ್ಧಿಯಾಗಿರುವ ಮಾಯಾವತಿ ಮತ್ತು ಬಿಜೆಪಿಗೆ ಸವಾಲೊಡ್ಡಲು ಕಾಂಗ್ರೆಸ್ ಜತೆ ಕೈಜೋಡಿಸಲು ಮುಂದಾಗಿದ್ದು ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ಮುಂದಿನ ಹೆಜ್ಜೆ ಇಡುವುದಾಗಿ ಹೇಳಿದರು.
2017: ನವದೆಹಲಿ: ಸಮಾಜವಾದಿ ಪಕ್ಷವನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ. ಅವರದ್ದು ಜನರಿಂದ ತಿರಸ್ಕೃತರಾದ ಮತ್ತು ಖಿನ್ನರಾದ ಜನರ ಸಹಜ ಮೈತ್ರಿ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು ಅವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಬಗ್ಗೆ ಚುಚ್ಚಿದರು. ‘ಕೆಲವು ಜನರು ನಮ್ಮನ್ನು ನೀವು ಕೆವಿಐಸಿ ಕ್ಯಾಲೆಂಡರ್ನಿಂದ ಗಾಂಧೀಜಿಯನ್ನು ತೊಲಗಿಸಿದಿರಿ ಎಂದು ದೂರುತ್ತಾರೆ. ಅರೇ. ನೀವು ಗಾಂಧೀಜಿ ಅವರ ವಿಚಾರಧಾರೆಯನ್ನೇ ತೊಲಗಿಸಿದ್ದೀರಲ್ಲ? ಎಂದು ನಾಯ್ಡು ಹೇಳಿದರು. ಡಂಗಲ್ ಚಿತ್ರದ ನಟಿ ಝುಯೀರಾ ವಾಸಿಂ ಪ್ರಕರಣ ಸಿನೀಮೀಯವಾಗಿ ಅಸಹನೆ ಬೆಳೆಯುತ್ತಿದೆ ಎಂದು ಕೂಗಾಡುವವರಿಂದ ಮತ್ತು ಕಪಟ ಜಾತ್ಯತೀತವಾದಿಗಳಿಂದ ಆಗುತ್ತಿರುವ ಪರಿಸ್ಥಿತಿಯನ್ನು ತೋರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ನಮ್ಮ ಮಕ್ಕಳು ರಾಷ್ಟ್ರದ ಮುಖ್ಯವಾಹಿನಿಗೆ ಬಂದು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ನಾವೆಲ್ಲರೂ ಬಾಲಕಿಯ ಪರವಾಗಿ ನಿಲ್ಲಬೇಕು ಮತ್ತು ಬೆಂಬಲ ವ್ಯಕ್ತ ಪಡಿಸಬೇಕು ಎಂದು ಅವರು ನುಡಿದರು. ಝುಯೀರಾ ವಾಸಿಂ ಮಾರ್ಗ ತೋರಿಸಿಕೊಟ್ಟಿದ್ದಾಳೆ. ಆಕೆಯ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಮೆಚ್ಚಬೇಕು, ದೂಷಿಸುವುದಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದರು.
2017: ಲಂಡನ್‌: ವಿದ್ಯಾರ್ಥಿಗಳು ಹಗಲಿನ ಶಾಲೆಯಲ್ಲಿ ಬಹುಬೇಗ ಆಯಾಸಗೊಳ್ಳಲು  ತಡರಾತ್ರಿವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುವುದೇ ಕಾರಣ ಎಂದು ಹೊಸ ಅಧ್ಯಯನ ಎಚ್ಚರಿಸಿತು. ವೇಲ್ಸ್ಸಾಮಾಜಿಕ ಮತ್ತು ಆರ್ಥಿಕ ಸಂಶೋಧನಾ ಸಂಸ್ಥೆಯ ಸಂಶೋಧಕರ ಅಧ್ಯಯದ ಪ್ರಕಾರ, ಹುಡುಗರಿಗಿಂತಲೂ ಹುಡುಗಿಯರು ರಾತ್ರಿ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಐದು ವಿದ್ಯಾರ್ಥಿಗಳಲ್ಲಿ ಒಬ್ಬ ರಾತ್ರಿಯಲ್ಲಿ ಸಂದೇಶ ಕಳುಹಿಸಲು ಅಥವಾ ಗಮನಿಸುವುದರಲ್ಲಿ ಮುಳುಗಿರುತ್ತಾರೆ. ಹೀಗಾಗಿ, ರಾತ್ರಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯುವ ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿಗಳು ಮೂರು ಪಟ್ಟು ಹೆಚ್ಚು ಆಯಾಸಗೊಳ್ಳುತ್ತಾರೆ. ಇಂಥ ಅಭ್ಯಾಸದಿಂದ ಹುಡುಗಹುಡುಗಿಯರಲ್ಲಿ ಸಂತಸ ಕುಂದುತ್ತಿದೆ ಎನ್ನಲಾಗಿದೆ. 12–15 ವರ್ಷದ ಒಟ್ಟು 900 ವಿದ್ಯಾರ್ಥಿಗಳಲ್ಲಿ ಅಧ್ಯಯನ ನಡೆಸಲಾಗಿತ್ತು.

2017: ಮುಂಬೈ: ರಾಷ್ಟ್ರಾದ್ಯಂತ ಕುತೂಹಲ ಕೆರಳಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ಇಂದ್ರಾಣಿ ಮುಖರ್ಜಿ, ಆಕೆಯ ಪತಿ ಪೀಟರ್ ಮುಖರ್ಜಿ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಅವರ ಮೇಲೆ ವಿಶೇಷ ಸಿಬಿಐ ಕೋರ್ಟ್ ದೋಷಾರೋಪವನ್ನು ಹೊರಿಸಿತು.. ಫೆಬ್ರವರಿ 1ರಿಂದ ಸಿಬಿಐ ವಿಶೇಷ ಕೋರ್ಟ್ನಲ್ಲಿ ವಿಚಾರಣೆ ಆರಂಭಗೊಳ್ಳಲಿದೆ. ಮೂವರ ಮೇಲೆ ಕೊಲೆ ಮತ್ತು ಹತ್ಯೆ ಸಂಚು ನಡೆಸಿದ ಆರೋಪವನ್ನು ಹೊರಿಸಲಾಗಿದೆ. ಜತೆಗೆ ಇಂದ್ರಾಣಿ ಮತ್ತು ಸಂಜೀವ್ ಮೇಲೆ ಮಗ ಮತ್ತು ಶೀನಾ ಸಹೋದರ ಮಿಖೈಲ್ ಬೋರಾ ಅವರನ್ನು ಕೊಲೆ ಮಾಡಲು ಯತ್ನ ನಡೆಸಿದ ಆರೋಪವನ್ನೂ ಹೊರಿಸಲಾಯಿತು. ಮೂವರ ವಿರುದ್ಧ ಹೊರಿಸಲಾಗಿರುವ ಆರೋಪ ಸಾಬೀತಾದಲ್ಲಿ ಅವರಿಗೆ ಕನಿಷ್ಠ ಜೀವಾವಧಿ ಶಿಕ್ಷೆಯಾದರೂ ಗ್ಯಾರಂಟಿ ಎಂದು ಹಿರಿಯ ವಕೀಲ ಉಜ್ವಲ್ ನಿಕಮ್ ತಿಳಿಸಿದರು. ಇಂದ್ರಾಣಿ ಮುಖರ್ಜಿ ಅವರ ಮಗಳಾದ 24 ವರ್ಷದ ಶೀನಾ ಬೋರಾ ಏಪ್ರಿಲ್ 24, 2012ರಂದು ನಿಗೂಢವಾಗಿ ಕೊಲೆಯಾಗಿದ್ದಳು. ಮಾಜಿ ಪತಿ ಸಂಜೀವ್ ಖನ್ನಾ ಸಹಾಯದಿಂದ ಇಂದ್ರಾಣಿ ಮಗಳನ್ನು ಕಾರಿನಲ್ಲೇ ಹತ್ಯೆಗೈದು ರಾಯಗಢ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಆಕೆಯ ಶವ ಸುಟ್ಟುಹಾಕಿದ್ದಳು. ಆದರೆ ಶೀನಾ ಕೊಲೆಯಾಗಿರುವ ಬಗ್ಗೆ ಬೆಳಕಿಗೆ ಬಂದಿದ್ದು 2015ರಲ್ಲಿ. ಯಾವುದೋ ಪ್ರಕರಣದ ಸಂಬಂಧ ವಿಚಾರಣೆ ವೇಳೆ ಇಂದ್ರಾಣಿ ಮುಖರ್ಜಿ ಅವರ ಅಂದಿನ ಕಾರಿನ ಡ್ರೖೆವರ್ ಶೀನಾ ಕೊಲೆ ಬಗ್ಗೆ ಬಾಯ್ಬಿಟ್ಟಿದ್ದ. ಪೀಟರ್ ಮುಖರ್ಜಿ ಮಗ ರಾಹುಲ್ ಮತ್ತು ಇಂದ್ರಾಣಿ ಪುತ್ರಿ ಶೀನಾ ನಡುವೆ ಸಂಬಂಧವಿತ್ತು. ರಾಹುಲ್ನನ್ನು ಮದುವೆಯಾಗುವುದಾಗಿ ಶೀನಾ ಹಠಕ್ಕೆ ಬಿದ್ದಿದ್ದಳು. ಇದರಿಂದ ತಮ್ಮ ಸಂಬಂಧಗಳಿಗೆ ತೊಂದರೆಯುಂಟಾಗುತ್ತದೆ ಎಂಬ ಕಾರಣದಿಂದ ಮಗಳನ್ನೇ ಹತ್ಯೆಗೈದಿದ್ದಳು. ಶೀನಾ ಸಹೋದರನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಳು. ಶೀನಾ ಪ್ರಸ್ತುತ ಉನ್ನತ ವಿದ್ಯಾಭ್ಯಾಸಕ್ಕಾಗಿ ಅಮೆರಿಕದಲ್ಲಿ ನೆಲೆಸಿದ್ದಾಳೆ ಎಂದು ಸುಳ್ಳು ಸೃಷ್ಟಿಸಿ ಕುಟಂಬವರ್ಗದವರಿಗೆ ಮತ್ತು ಸ್ನೇಹಿತರಿಗೆ ಹೇಳುತ್ತಾ ಬಂದಿದ್ದಳು. ವಿಚ್ಛೇದನಕ್ಕೆ ಇಂದ್ರಾಣಿ ಮನವಿ:  ಪತಿ ಪೀಟರ್ ಮುಖರ್ಜಿ ಅವರಿಂದ ವಿಚ್ಛೇದನ ಬಯಸಿದ್ದು, ಪ್ರಕರಣ ದಾಖಲಿಸಲು ಅನುಮತಿ ನೀಡುವಂತೆ ಇಂದ್ರಾಣಿ ಮುಖರ್ಜಿ ಮುಂಬೈ ಕೋರ್ಟ್ಗೆ ಮನವಿ ಮಾಡಿದ್ದು, ವಿಚ್ಛೇದನ ಕೋರಿಕೆ ಪ್ರಕರಣ ದಾಖಲಿಸಲು ವಿಚಾರಣಾ ಕೋರ್ಟಿನ ಅನುಮತಿಯ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ತಿಳಿಸಿದರು.. 2002ರಲ್ಲಿ ಪೀಟರ್ ಅವರನ್ನು ಇಂದ್ರಾಣಿ ಮದುವೆಯಾಗಿದ್ದರು. ಇದು ಉಭಯರಿಗೂ ಎರಡನೇ ಮದುವೆಯಾಗಿತ್ತು.
2009: ಚೆನ್ನೈ ನಗರದ ಸೆಂಟ್ರಲ್ ಜೈಲಿನ ಕೈದಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಹೊಸ ವೇದಿಕೆಯೊಂದು ದೊರಕಿತು. ದೇಶದಲ್ಲೇ ಮೊದಲ ಬಾರಿಗೆ ಇಲ್ಲಿನ ಜೈಲು ವಾಸಿಗಳು 'ಉಳ್ ಒಲಿ' (ಸ್ವಯಂ ಪ್ರಭೆ) ಎಂಬ ಹೆಸರಿನ ಮಾಸಿಕ ಪತ್ರಿಕೆ ಹೊರತಂದರು.

2009: ಅಗತ್ಯ ದಾಖಲೆಗಳನ್ನು ಹೊಂದಿಲ್ಲದ ಕಾರಣ ಪಾಕಿಸ್ಥಾನ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಅವರನ್ನು ನವದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಬಂಧಿಸಿದ ಘಟನೆ ನಡೆಯಿತು. ನಿಲ್ದಾಣದಿಂದ ಹೊರಹೋಗಲು ಅನುಮತಿ ನೀಡದ ಅಧಿಕಾರಿಗಳು ಅವರನ್ನು ಪಾಕಿಸ್ಥಾನಕ್ಕೆ ವಾಪಸ್ ಕಳುಹಿಸಲು ನಿರ್ಧರಿಸಿದರು. ಆಸಿಫ್ ಇಂಡಿಯನ್ ಪ್ರೀಮಿಯರ್ ಲೀಗ್ ತಂಡ ದೆಹಲಿ ಡೇರ್‌ಡೆವಿಲ್ಸ್ ಅಧಿಕಾರಿಗಳನ್ನು ಭೇಟಿಯಾಗುವ ನಿಟ್ಟಿನಲ್ಲಿ ಮುಂಬೈ ಮಾರ್ಗವಾಗಿ ಇಲ್ಲಿಗೆ ಆಗಮಿಸಿದ್ದರು. ಆದರೆ ವಲಸೆ ಅಧಿಕಾರಿಗಳು ಅವರನ್ನು ನಿಲ್ದಾಣದಲ್ಲೇ ತಡೆದರು.

2009: ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಕೆಟ್ಟದ್ದು ಎನ್ನಲಾದ ವೈರಸ್ ದಾಳಿಯಿಂದ ಕೇವಲ ಒಂದು ವಾರದಲ್ಲಿ 6.5 ದಶಲಕ್ಷಕ್ಕೂ ಹೆಚ್ಚು ಕಂಪ್ಯೂಟರುಗಳಿಗೆ ಹಾನಿಯಾಯಿತು. ಡೌನ್‌ಎಡಪ್ ಅಥವಾ ಕಾನ್‌ಫಿಕರ್ ಎಂದು ಕರೆಯಲಾಗುವ ಈ ವೈರಸ್ಸಿನ ಗುರುತು ಎರಡು ವರ್ಷದ ಹಿಂದೆ ಪತ್ತೆಯಾದಾಗಿನಿಂದ ಈವರೆಗೆ 9 ದಶಲಕ್ಷ ಕಂಪ್ಯೂಟರುಗಳು ಹಾನಿಗೊಳಗಾಗಿವೆ ಎಂದು ಅಂತರ್ಜಾಲ ಭದ್ರತಾ ಸಂಸ್ಥೆಯಾದ ಎಫ್- ಸೆಕ್ಯೂರ್ ತಿಳಿಸಿತು.

2009: ಸಂಗೀತ ಸಂಯೋಜಕ, ಹಾಡುಗಾರ ಹಾಗೂ ನಟ ರಾಜು ಅನಂತಸ್ವಾಮಿ (40) ಬೆಂಗಳೂರಿನ ಅಪೊಲೊ ಆಸ್ಪತ್ರೆಯಲ್ಲಿ (40) ನಿಧನರಾದರು. ಮೂವರು ಸಹೋದರಿಯರು ಹಾಗೂ ತಾಯಿ ಶಾಂತಾ ಅವರನ್ನು ರಾಜು ಅಗಲಿದರು. ನಾಲ್ಕು ದಿನಗಳ ಹಿಂದೆ ಬೆನ್ನುನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮೂತ್ರಕೋಶ ವೈಫಲ್ಯದಿಂದಾಗಿ ಮಧ್ಯಾಹ್ನ 12.15ರ ಸುಮಾರಿಗೆ ಅಪೊಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಹೆಸರಾಂತ ಸಂಗೀತ ಸಂಯೋಜಕ ಮೈಸೂರು ಅನಂತಸ್ವಾಮಿ ಅವರ ಮಗ ರಾಜು. ನಾಲ್ಕನೇ ವಯಸ್ಸಿನಲ್ಲಿಯೇ ತಬಲ ಕಲಿತರು. ತಂದೆಯ ಹಾದಿಯಲ್ಲೇ ಸಾಗಿದ ಹುಡುಗನಲ್ಲೂ ಸಹಜವಾಗಿಯೇ ಸಂಗೀತ ಪ್ರೇಮವಿತ್ತು. ಅನಂತಸ್ವಾಮಿ ಮೃತಪಟ್ಟ ನಂತರ ಸಂಗೀತಾಸಕ್ತರು ರಾಜು ಕಂಠದಲ್ಲಿ ಅಪ್ಪನ ಧ್ವನಿಯನ್ನು ಗುರುತಿಸತೊಡಗಿದರು. ತಂದೆಯ ಧಾಟಿಯಲ್ಲಿಯೇ ಹಾಡುತ್ತಿದ್ದ ರಾಜು ಅನಂತಸ್ವಾಮಿ 'ತಂದೆಯ ನೆನಪಲ್ಲಿ', 'ಅನಂತ ನಮನ', 'ಹೂವು', 'ದೀಪೋತ್ಸವ', 'ಹರಿ ನಿನ್ನ ಮುರಳಿ', 'ಬೇರೆ ಮಧುವೇಕೆ', 'ಶಾಂತ ಮಧುರ ದನಿಗಳೆ', 'ಸಂತ ಶಿಶುನಾಳ ಷರೀಫರ ಗೀತೆಗಳು' ಮುಂತಾದ ಸಂಗೀತದ ಆಲ್ಬಂಗಳನ್ನು ಹೊರತಂದರು. ದೇಶ-ವಿದೇಶಗಳಲ್ಲಿ ಸುಗಮ ಸಂಗೀತದ ಕಛೇರಿಗಳನ್ನು ನೀಡಿದರು. ರತ್ನನ ಪದಗಳು, ನಿಸಾರ್ ಅಹಮದರ 'ನಿತ್ಯೋತ್ಸವ'ದ ಗೀತೆಗಳು ಹಾಗೂ ಎಚ್ಚೆಸ್ವಿ ಕವನಗಳಿಗೆ ರಾಗ ಬೆಸೆದ ಹಾಡುಗಳಿಗೆ ರಾಜು ಹೆಸರುವಾಸಿಯಾಗಿದ್ದರು. ನಟನೆಗೂ ಮುಖ ಮಾಡಿದ ರಾಜು 'ಊಲಲ', 'ಚಿಗುರಿದ ಕನಸು', 'ಜಾಕ್‌ಪಾಟ್', 'ಅಭಿ', 'ರಿಷಿ' ಹಾಗೂ 'ಅಮೃತಧಾರೆ' ಚಿತ್ರಗಳಲ್ಲಿ ಅಭಿನಯಿಸಿದ್ದರು. ಧಾರಾವಾಹಿಗಳಲ್ಲೂ ನಟಿಸಿದ್ದ ಅವರು ಅನೇಕ ಶೀರ್ಷಿಕೆ ಗೀತೆಗಳಿಗೆ ಮಟ್ಟು ಹಾಕಿದ್ದರು. 'ಅಮೆರಿಕ ಅಮೆರಿಕ' ಚಿತ್ರದ 'ಯಾವ ಮೋಹನ ಮುರಲಿ ಕರೆಯಿತು', 'ರಿಷಿ' ಚಿತ್ರದ 'ನಾನು ಹೊತ್ತಾರೆ ಎದ್ಬಿಟ್ಟು' ಗೀತೆಗಳನ್ನು ಹಾಡಿದ್ದರು. ಗಾಯಕಿ ಹಾಗೂ ಆಯುರ್ವೇದ ವೈದ್ಯೆ ವಿನಯಾ ಅವರನ್ನು ರಾಜು ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ ವಿಚ್ಛೇದನವೂ ಆಗಿತ್ತು.

2009: ಮಂಗಳೂರಿನ ಶಕ್ತಿನಗರದಲ್ಲಿ ಭವ್ಯವಾಗಿ ನಿರ್ಮಾಣಗೊಂಡ ವಿಶ್ವ ಕೊಂಕಣಿ ಕೇಂದ್ರವನ್ನು ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಭವ್ಯ ಸಮಾರಂಭದಲ್ಲಿ ಉದ್ಘಾಟಿಸಿದರು. ಗೋವಾದಿಂದ ಹೋದರೂ, ಕೊಂಕಣಿಗರು ಮಾತೃಭಾಷೆಯ ಪ್ರೇಮ ಉಳಿಸಿಕೊಂಡರು ಎಂದು ಅವರು ಕೊಂಡಾಡಿದರು. ಈ ಕೇಂದ್ರಕ್ಕೆ 'ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ವಿಶ್ವ ಕೊಂಕಣಿ ಕೇಂದ್ರ' ಎಂದು ಹೆಸರಿಡಲಾಯಿತು.

2009: ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರೊ. ವೆಂಕಟಾಚಲ ಶಾಸ್ತ್ರೀ ಅವರಿಗೆ ಪಂಪ ಪ್ರಶಸ್ತಿ ಪ್ರದಾನ ಮಾಡಿದರು.

2009: ಮಂಗಳೂರು ನಗರದ ಸಂತ ಅಲೋಶಿಯಸ್ ಕಾಲೇಜು ಮತ್ತು ಸುರತ್ಕಲ್ಲಿನ ಗೋವಿಂದದಾಸ್ ಕಾಲೇಜು ನಡುವೆ 'ಎರೆಹುಳು ತಾಂತ್ರಿಕತೆ' ಕುರಿತು ಮೂರು ವರ್ಷದ ಒಪ್ಪಂದ ಮಾಡಿಕೊಳ್ಳಲಾಯಿತು. ಸಂತ ಅಲೋಶಿಯಸ್ ಕಾಲೇಜಿನ ಝೇವಿಯರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಆರ್. ಸಾಮಗ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಆಡಳಿತಾಧಿಕಾರಿ ಫಾ. ಲಿಯೋ ಡಿ'ಸೋಜ ಅವರು ಎರೆಹುಳು ತಾಂತ್ರಿಕತೆ ಕುರಿತ ಒಡಂಬಡಿಕೆಯನ್ನು ವಿನಿಮಯ ಮಾಡಿಕೊಂಡರು. ಈ ಒಡಂಬಡಿಕೆ ಅನ್ವಯ ಮುಂದಿನ ಮೂರು ವರ್ಷಗಳ ಕಾಲ ಈ ಎರಡು ಕಾಲೇಜುಗಳು ಜಂಟಿಯಾಗಿ ಎರೆಹುಳು ಗೊಬ್ಬರ ತಯಾರಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ, ಸಂಶೋಧನೆ ಹಾಗೂ ರೈತರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುವು. ಒಪ್ಪಂದದ ಬಳಿಕ ಮಾತನಾಡಿದ ಗೋವಿಂದದಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಆರ್. ಸಾಮಗ, ಪರಿಸರ ಸ್ನೇಹಿಯಾದ ಎರೆಹುಳು ಗೊಬ್ಬರ ಬಳಕೆಯ ಕುರಿತು ರೈತ ಸಮುದಾಯಕ್ಕೆ ಅರಿವು ಮೂಡಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎರಡೂ ಕಾಲೇಜುಗಳು ಜಿಲ್ಲೆಯ ಯಾವುದಾದರೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿಯ ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆ ಮತ್ತು ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಡಲಿವೆ ಎಂದರು.

2008: ಆಸ್ಟ್ರೇಲಿಯ ವಿರುದ್ಧ ಪರ್ತಿನಲ್ಲಿ ನಡೆದ ಮೂರನೇ ಕ್ರಿಕೆಟ್ ಟೆಸ್ಟಿನಲ್ಲಿ 600 ವಿಕೆಟ್ ಪಡೆದ ವಿಶ್ವದ ಮೂರನೆಯ ಹಾಗೂ ಭಾರತದ ಪ್ರಪ್ರಥಮ ಬೌಲರ್ ಎಂಬ ಹೆಗ್ಗಳಿಕೆಗೆ ಅನಿಲ್ ಕುಂಬ್ಳೆ ಪಾತ್ರರಾದರು. ಆಂಡ್ರ್ಯೂ ಸೈಮಂಡ್ಸ್ ಅವರು ಹೊಡೆದ ಚೆಂಡನ್ನು ರಾಹುಲ್ ದ್ರಾವಿಡ್ ಅವರು ಹಿಡಿದಾಗ ಕುಂಬ್ಳೆ ಅವರ ಈ ದಾಖಲೆ ಸ್ಥಾಪನೆಯಾಯಿತು. 124 ಪಂದ್ಯಗಳಲ್ಲಿ ಅನಿಲ್ ಕುಂಬ್ಳೆ ಅವರು 600 ವಿಕೆಟ್ ದಾಖಲೆ ಸ್ಥಾಪಿಸಿದರು. 600 ವಿಕೆಟುಗಳ ಗಡಿ ದಾಟಿದ ಬೌಲರುಗಳ ಪೈಕಿ ಕುಂಬ್ಳೆ ಮೂರನೆಯವರಾಗಿದ್ದು, ಶ್ರೀಲಂಕೆಯ ಮುತ್ತಯ್ಯ ಮುರಳೀಧರನ್ (723) ಅವರದ್ದು ಮೊದಲ ಸ್ಥಾನ, ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಅವರದ್ದು ಎರಡನೇ ಸ್ಥಾನ. ವಿಶೇಷವೆಂದರೆ ಕುಂಬ್ಳೆ ಬಹುತೇಕ ವಿಕೆಟ್ಟುಗಳನ್ನು ಆಸ್ಟ್ರೇಲಿಯಾದಿಂದ ಕಸಿದರು. ಅವರು 17 ಪಂದ್ಯಗಳಲ್ಲಿ 104 ವಿಕೆಟುಗಳನ್ನು ಆಸ್ಟ್ರೇಲಿಯಾದಿಂದಲೇ ಪಡೆದಿದ್ದರು.

2008: ಪ್ರತಿವರ್ಷ ಒಂದು ಲಕ್ಷ ಅಂಗವಿಕಲರಿಗೆ ಖಾಸಗಿ ರಂಗದಲ್ಲಿ ಉದ್ಯೋಗ ಒದಗಿಲು ಕೇಂದ್ರ ಸರ್ಕಾರವು 1800 ಕೋಟಿ ರೂಪಾಯಿಗಳ ಪ್ರೋತ್ಸಾಹಕರ ಯೋಜನೆಗೆ ಮಂಜೂರಾತಿ ನೀಡಿತು. ಸರ್ಕಾರಿ ರಂಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತು. ನೌಕರರ ಭವಿಷ್ಯ ನಿಧಿ ಮತ್ತು ನೌಕರರ ರಾಜ್ಯ ವಿಮಾ ಯೋಜನೆಗಳಿಗೆ ಸರ್ಕಾರದಿಂದ ಹಣ ಪಾವತಿಗೆ ಅವಕಾಶ ಕಲ್ಪಿಸುವ ಈ ಯೋಜನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ  ಒಪ್ಪಿಗೆ ನೀಡಿತು.

2008: ಬಾಂಗ್ಲಾದೇಶದ ನೈಋತ್ಯ ಭಾಗದ ಕೋಳಿ ಫಾರಮ್ಮಿನಲ್ಲಿ ಕೋಳಿಗಳಿಗೆ ಜ್ವರ ತಗುಲಿದೆ ಎನ್ನುವುದು ದೃಢಪಟ್ಟ ನಂತರ ಪಶುವೈದ್ಯಕೀಯ ಇಲಾಖೆಯ ಹಾಗೂ ವೈದ್ಯಕೀಯ ಇಲಾಖೆಯ ಸಿಬ್ಬಂದಿ ಸುಮಾರು 1,700 ಕೋಳಿಗಳನ್ನು ನಾಶಪಡಿಸಿದರು. ಢಾಕಾದಿಂದ ಸುಮಾರು 275 ಕಿ. ಮೀ. ದೂರವಿರುವ ಜೆಸ್ಸೊರ್ ಕೋಳಿ ಫಾರಂನ ಕೋಳಿಗಳಿಗೆ ಜ್ವರ ತಗುಲಿರುವುದು ನಿಜ ಎಂದು ಪಶು ಸಂಗೋಪನೆ ಇಲಾಖೆಯ ವಕ್ತಾರರು ತಿಳಿಸಿದರು. ದೇಶದ ದಕ್ಷಿಣ ಭಾಗದ ಕಡಲ ತಡಿಯ ಜಿಲ್ಲೆ ಬರಿಶಾಯಿಯಲ್ಲೂ ಕೋಳಿಗಳನ್ನು ನಾಶ ಮಾಡಲಾಯಿತು. 2007 ರಲ್ಲಿ ಕೋಳಿಜ್ವರ ಹರಡಿದ್ದರಿಂದ ಬಾಂಗ್ಲಾದೇಶದಲ್ಲಿ ಸುಮಾರು ಮೂರು ಲಕ್ಷ ಕೋಳಿಗಳನ್ನು ನಾಶಪಡಿಸಲಾಗಿತ್ತು.

2008: ಭಾರತದಲ್ಲಿ ರಾಜಾಶ್ರಯ ಪಡೆದ ಸಂದರ್ಭದಲ್ಲಿ ತಾವು ರಾಜಾರೋಷವಾಗಿ ನಕಲಿ ನೋಟುಗಳ ಮುದ್ರಣ ಜಾಲ ಹರಡಿದ್ದನ್ನು ನೇಪಾಳದ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲ ಅವರು ಕಂಟಿಪುರ ಟೆಲಿವಿಷನ್ನಿಗೆ ನೀಡಿದ ಸಂದರ್ಶನದಲ್ಲಿ ಸ್ವತಃ ಒಪ್ಪಿಕೊಂಡರು. ನೇಪಾಳ ವಿಮಾನಯಾನಕ್ಕೆ ಸೇರಿದ ಪ್ರಯಾಣಿಕರ ವಿಮಾನ ಅಪಹರಣದ ರೂವಾರಿ ಕೂಡ ತಾನೇ ಎಂದು ಅವರು ಬಹಿರಂಗಪಡಿಸಿದರು. 1970ರ ಅವದಿಯಲ್ಲಿ ಕೊಯಿರಾಲ ಮತ್ತು ಅವರ ಪಕ್ಷದ ಹಲವರು ಭಾರತದಲ್ಲಿ ರಾಜಕೀಯ ಆಶ್ರಯ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲೇ ತಮ್ಮ ಪಕ್ಷದ ಚಟುವಟಿಕೆಗಳಿಗೆ ಅಗತ್ಯ ಹಣವನ್ನು ತಾವು ಈ ಮೂಲಕ ವ್ಯವಸ್ಥೆ ಮಾಡಿಕೊಂಡಿದ್ದುದಾಗಿ ಕೊಯಿರಾಲ ಹೇಳಿದರು.

2007: ಬೃಹತ್ ಬೆಂಗಳೂರು ಕೊನೆಗೂ ಅಸ್ತಿತ್ವಕ್ಕೆ ಬಂತು. ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರು ಜೆಡಿ (ಎಸ್) - ಬಿಜೆಪಿ ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಬೃಹತ್ ಬೆಂಗಳೂರು ಮಹಾನಗರ ಕುರಿತ ಅಧಿಸೂಚನೆಗೆ ಸಹಿ ಮಾಡಿದರು.

2007: ಖ್ಯಾತ ಅಂಕಣಕಾರ, ಪುಲಿಟ್ಜರ್ ಪ್ರಶಸ್ತಿ ವಿಜೇತ ವಿಡಂಬನಾತ್ಮಕ ಲೇಖನಗಳ ಕೃತಿಕಾರ ಆರ್ಟ್ ಬಕ್ ವಾಲ್ಡ್ (81) ವಾಷಿಂಗ್ಟನ್ನಿನಲ್ಲಿ ನಿಧನರಾಧರು. ಬಿಡಿ ಸುದ್ದಿ ಸಂಗ್ರಾಹಕರಾಗಿ ಸುದ್ದಿಮನೆಗೆ ಕಾಲಿಟ್ಟ ಬಕ್ ವಾಲ್ಡ್ 1982ರಲ್ಲಿ ಪುಲಿಟ್ಜರ್ ಪ್ರಶಸ್ತಿಗೆ ಪಾತ್ರರಾಗಿದ್ದರು. ತಮ್ಮ ಬರಹಗಳ ಮೂಲಕ ಐದು ದಶಕಗಳಿಗೂ ಹೆಚ್ಚು ಕಾಲ ಅಮೆರಿಕದ ಓದುಗರಿಗೆ ಆಪ್ತರಾಗಿದ್ದರು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಬ್ರಿಟನ್ನಿನ ಚಾನೆಲ್ 4 ರಿಯಾಲಿಟಿ ಶೋ `ಸೆಲೆಬ್ರಿಟಿ ಬಿಗ್ ಬ್ರದರ್' ಕಾರ್ಯಕ್ರಮದಲ್ಲಿ ಸಹ ಸ್ಪರ್ಧಿಗಳು ಜನಾಂಗೀಯ ನಿಂದೆಗೆ ಗುರಿಪಡಿಸಿದ ಘಟನೆಗೆ ವಿಶ್ವವ್ಯಾಪಿ ಪ್ರತಿಭಟನೆ ವ್ಯಕ್ತವಾಯಿತು.

2007: ಎಂ. ವೀರಪ್ಪ ಮೊಯಿಲಿ ಅವರ `ತೆಂಬೆರೆ' ಕೃತಿಯ ಇಂಗ್ಲಿಷ್ ಅನುವಾದ `ದಿ ಎಡ್ಜ್ ಆಫ್ ಟೈಮ್' ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ. ಗೋಪಿಚಂದ್ ನಾರಂಗ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ವಿಮರ್ಶಕ ಸಿ.ಎನ್. ರಾಮಚಂದ್ರನ್ ಅವರು ಈ ಕೃತಿಯನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

2007: ಬಾಂಗ್ಲಾದೇಶದ ಉಸ್ತುವಾರಿ ಸರ್ಕಾರವು ಕಾರ್ಯಾಂಗದಿಂದ ನ್ಯಾಯಾಂಗವನ್ನು ಬೇರ್ಪಡಿಸಲು ಕ್ರಮ ಕೈಗೊಂಡಿದ್ದು, ಇದಕ್ಕೆ ಸಂಬಂಧಿಸಿದ ನಾಲ್ಕು ನಿಯಮಗಳನ್ನು ಪ್ರಕಟಿಸಿತು. 1971ರಲ್ಲಿ ಬಾಂಗ್ಲಾದೇಶ ಸ್ವತಂತ್ರಗೊಂಡ ಬಳಿಕ ಈವರೆಗೂ ಯಾವುದೇ ಸರ್ಕಾರ ಈ ಸಮಸ್ಯೆ ಬಗೆಹರಿಸಲು ಯತ್ನಿಸಿರಲಿಲ್ಲ.

2007: ಅಮೆರಿಕದಿಂದ ಖರೀದಿಸಿದ ಮೊತ್ತ ಮೊದಲ ಯುದ್ಧ ನೌಕೆ `ಯು ಎಸ್ ಎಸ್ ಟ್ರೆಂಟೋನ್'ನನ್ನು ಅಮೆರಿಕದ ವರ್ಜೀನಿಯಾದಲ್ಲಿನ ನೋರ್ ಫೆಕ್ ನೌಕಾನೆಲೆಯಲ್ಲಿ ಭಾರತದ ನೌಕಾಪಡೆಗೆ ಹಸ್ತಾಂತರಿಸಲಾಯಿತು. 17,000 ಟನ್ ತೂಕದ ಈ ಬೃಹತ್ ನೌಕೆಗೆ `ಐಎನ್ ಎಸ್ ಜಲಾಶ್ವ' ಎಂದು ನಾಮಕರಣ ಮಾಡಲಾಯಿತು.

2007: ಬಾಗ್ದಾದ್ ವಿಶ್ವವಿದ್ಯಾಲಯದ ಹೊರಭಾಗದಲ್ಲಿ ವಿದ್ಯಾರ್ಥಿಗಳು ಮನೆಗೆ ಮರಳುತ್ತಿದ್ದ ವೇಳೆಯಲ್ಲಿ ಎರಡು ಕಡೆ ಭಾರಿ ಬಾಂಬ್ ಸ್ಫೋಟಗೊಂಡ ಪರಿಣಾಮವಾಗಿ 70 ಜನ ಮೃತರಾಗಿ, ಹಲವರು ಗಾಯಗೊಂಡರು. ಶಿಯಾ ಸಮುದಾಯದ ಮೇಲೆ ನಡೆದ ಇತ್ತೀಚಿನ ದಾಳಿಗಳಲ್ಲಿ ಇದೇ ಅತ್ಯಂತ ಭೀಕರ ದಾಳಿ. 2006ರ ವರ್ಷದಲ್ಲಿ ಇರಾಕಿನಲ್ಲಿ ಹಿಂಸಾಚಾರಕ್ಕೆ ಒಟ್ಟು 34,000 ನಾಗರಿಕರು ಬಲಿಯಾದರು ಎಂದು ವಿಶ್ವಸಂಸ್ಥೆ ವರದಿಯೊಂದು ಪ್ರಕಟಿಸಿದ ಮರುದಿನವೇ ಈ ಭೀಕರ ಸ್ಫೋಟ ಸಂಭವಿಸಿತು. ಇರಾಕಿ ಸರ್ಕಾರ ಸದ್ದಾಂ ಹುಸೇನ್ ಅವರ ಸಹಚರರನ್ನು ಗಲ್ಲಿಗೇರಿಸಿದ ಒಂದು ದಿನದ ಬಳಿಕ ಈ ಹಿಂಸಾಚಾರ ಭುಗಿಲೆದ್ದಿತು.

2006: ಬಹುಕೋಟಿ ರೂಪಾಯಿ ನಕಲಿ ಛಾಪಾಕಾಗದ ಹಗರಣದ ಮುಖ್ಯ ರೂವಾರಿ ಅಬ್ದುಲ್ ಕರೀಂ ತೆಲಗಿ ಮತ್ತು ಆತನ ಇಬ್ಬರು ಸಹಚರರಿಗೆ ಮುಂಬೈಯ ವಿಶೇಷ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. 1995ರಲ್ಲಿ 17 ಲಕ್ಷ ರೂಪಾಯಿ ಮೌಲ್ಯದ ನಕಲಿ ಛಾಪಾ ಕಾಗದ ಮಾರಾಟ ಮಾಡಿದ ಪ್ರಕರಣದಲ್ಲಿ ಆರೋಪಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ವಿಧಿಸಲಾಯಿತು.

2006: ವೋಲ್ವೊ ಹೆಸರಿನ ಐಷಾರಾಮಿ ಬಸ್ಸುಗಳನ್ನು ಬೆಂಗಳೂರಿನ ರಸ್ತೆಗಳಿಗೆ ಇಳಿಸುವ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತನ್ನ ಇತಿಹಾಸದಲ್ಲಿ ಇನ್ನೊಂದು ಮಹತ್ವದ ಮೈಲಿಗಲ್ಲನ್ನು ಸೇರ್ಪಡೆ ಮಾಡಿಕೊಂಡಿತು.

1991: ಬ್ರಿಟಿಷ್, ಸೌದಿ ಮತ್ತು ಅಮೆರಿಕ ರಾಷ್ಟ್ರಗಳ ಮಿತ್ರ ಪಡೆಗಳ ದಾಳಿಯೊಂದಿಗೆ ಕೊಲ್ಲಿಯುದ್ಧ ಆರಂಭವಾಯಿತು.ಕುವೈತ್ ವಿಮೋಚನೆಗಾಗಿ ಈ ದಾಳಿ ನಡೆಯಿತು.

1954: ರಾಷ್ಟ್ರ ಮಟ್ಟದ ತಬಲಾ ವಾದಕ ಪಂಡಿತ ರಘುನಾಥ ನಾಕೋಡ್ ಅವರು ಸಂಗೀತಗಾರ ಅರ್ಜುನ್ ಸಾ ನಾಕೋಡ್- ಅನಸೂಯಾ ನಾಕೋಡ್ ದಂಪತಿಯ ಮಗನಾಗಿ ಹುಬ್ಬಳ್ಳಿಯ ಸಂಗೀತಗಾರರ ಮನೆಯಲ್ಲಿ ಜನಿಸಿದರು.

1941: ಸುಭಾಶ್ ಚಂದ್ರ ಬೋಸ್ ಅವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ತಲೆಮರೆಸಿಕೊಂಡರು. ನಂತರ ಅವರು ಪ್ರತ್ಯಕ್ಷರಾದದ್ದು ಮಾಸ್ಕೊದಲ್ಲಿ.

1920: ಭಾರತದ ಖ್ಯಾತ ವಕೀಲ ನಾನಿ ಪಾಲ್ಖಿವಾಲಾ ಹುಟ್ಟಿದ ದಿನ.

1917: `ಎಂಜಿಆರ್' ಎಂದೇ ಖ್ಯಾತರಾದ ತಮಿಳು ಚಿತ್ರನಟ, ತಮಿಳುನಾಡಿನ ಮುಖ್ಯಮಂತ್ರಿ ಮರುಡು ಗೋಪಾಲನ್ ರಾಮಚಂದ್ರನ್ (1917-1987) ಹುಟ್ಟಿದ ದಿನ. 1972ರಲ್ಲಿ ಇವರು ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.

1905: ಭಾರತದ ಖ್ಯಾತ ಗಣಿತ ತಜ್ಞ ದತ್ತಾತ್ರೇಯ ರಾಮಚಂದ್ರ ಕಾಪ್ರೇಕರ್ (1905-1988) ಹುಟ್ಟಿದ ದಿನ. `6174' ಸಂಖ್ಯೆಗಾಗಿ ವಿಶ್ವಖ್ಯಾತಿ ಪಡೆದಿರುವ ಇವರ ಗೌರವಾರ್ಥ ಈ ಸಂಖ್ಯೆಯನ್ನು `ಕಾಪ್ರೇಕರ್ ಕಾನ್ ಸ್ಟಾಂಟ್' ಎಂದೇ ಹೆಸರಿಸಲಾಗಿದೆ.

1863: ರಷ್ಯಾದ ನಟ, ನಿರ್ದೇಶಕ, ನಿರ್ಮಾಪಕ ಕೊನ್ ಸ್ಟಾಂಟಿನ್ ಸೆರ್ಗಿಯೆವಿಚ್ ಸ್ಟಾನಿಸ್ಲಾವ್ ಸ್ಕಿ (1863-1938) ಹುಟ್ಟಿದ ದಿನ. ಈತ `ಸ್ಟಾನಿಸ್ಲಾವ್ ಸ್ಕಿ ಸಿಸ್ಟಮ್' ಎಂಬ ಹೆಸರಿನ ವಿಶಿಷ್ಟ ನಟನೆಗಾಗಿ ಖ್ಯಾತರಾಗಿದ್ದಾರೆ.

1863: ಬ್ರಿಟಿಷ್ ಪ್ರಧಾನಿಯಾಗಿದ್ದ ಡೇವಿಡ್ ಲಾಯ್ಡ್ ಜಾರ್ಜ್ (1863-1945) ಹುಟ್ಟಿದ ದಿನ. 1916-1922ರ ಅವದಿಯಲ್ಲಿ ಇವರು ಬ್ರಿಟನ್ನಿನ ಪ್ರಧಾನಿಯಾಗಿದ್ದರು.

1706: ಅಮೆರಿಕಾದ ಮುತ್ಸದ್ದಿ, ತತ್ವಜ್ಞಾನಿ, ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್ (1706-1790) ಹುಟ್ಟಿದ ದಿನ. ಈತ ಸ್ಟೌವ್, ಲೈಟ್ನಿಂಗ್ ಕಂಡಕ್ಟರ್, ಬೈಫೋಕಲ್ ಕನ್ನಡಕಗಳನ್ನು ಸಂಶೋಧಿಸಿದ ವ್ಯಕ್ತಿ.

No comments:

Post a Comment