ನಾನು ಮೆಚ್ಚಿದ ವಾಟ್ಸಪ್

Friday, November 30, 2018

ಇಂದಿನ ಇತಿಹಾಸ History Today ನವೆಂಬರ್ 30

ಇಂದಿನ ಇತಿಹಾಸ History Today ನವೆಂಬರ್ 30
ನವದೆಹಲಿ:  33 ವರ್ಷಗಳ ಹಿಂದೆ ಜರ್ಮನಿಗೆ ಹೋಗಿ ಅಲ್ಲಿ ಭಾರತೀಯ ಹೊಟೇಲು ತೆರೆದು ಯಶಸ್ವೀ ಉದ್ಯಮಿ ಎನಿಸಿಕೊಂಡಿರುವ 80 ಹರೆಯದ ಗುಜರಾತ್ಮೂಲದ ಸವಿತಾ ಬೆನ್ಅವರು ಮುಂಬಯಿ-ಅಹ್ಮದಾಬಾದ್ಬುಲೆಟ್ಟ್ರೈನ್ಯೋಜನೆಗೆ ಗುಜರಾತ್ ಚಾನ್ಸಾದ್ಗ್ರಾಮದಲ್ಲಿನ ತನ್ನ 11.94 ಹೆಕ್ಟೇರ್ಭೂಮಿಯನ್ನು  30,094 ರೂ.ಗೆ ಮಾರಿದರು. ಈ ಭೂಮಿಯನ್ನು ಬುಲೆಟ್ಟ್ರೈನ್ಯೋಜನೆಗೆ ಕೊಡಲೆಂದೇ ಜರ್ಮನಿಯಿಂದ ಬಂದ ಸವಿತಾ ಬೆನ್‌, ಭೂ ಮಾರಾಟ ಪ್ರಕ್ರಿಯೆ ಪೂರ್ಣಗೊಳಿಸಿ ಜರ್ಮನಿಗೆ ಮರಳಿದರು. ಅಲ್ಲಿ ಈಕೆ ತನ್ನ ಮಗನೊಂದಿಗೆ ಹೊಟೇಲು ನಡೆಸಿಕೊಂಡು ವಾಸವಾಗಿದ್ದಾರೆ. 508 ಕಿ.ಮೀ. ಕಾರಿಡಾರ್ ಯೋಜನೆಗೆ ಗುಜರಾತ್ಮತ್ತು ಮಹಾರಾಷ್ಟ್ರದಲ್ಲಿ  ಒಟ್ಟು 1,400 ಹೆಕ್ಟೇರ್ಭೂಮಿ ಅಗತ್ಯವಿದೆ. ಇದರಲ್ಲಿ 1,120 ಹೆಕ್ಟೇರ್ಭೂಮಿ ಖಾಸಗಿ ಒಡೆತನದಲ್ಲಿದೆ. ಸುಮಾರು 6,000 ಭೂ ಮಾಲಕರಿಗೆ ಪರಿಹಾರ ನೀಡಬೇಕಾಗಿದೆ.


2018: ಉಡುಪಿ: ಬಡಗುತಿಟ್ಟು ಯಕ್ಷಗಾನ ರಂಗದ ಮದ್ದಳೆ ಮಾಂತ್ರಿಕ  ಹಿರಿಯಡಕ ಗೋಪಾಲ ರಾವ್ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸಚಿವೆ ಡಾ| ಜಯಮಾಲಾ ಅವರು ಅವರ ಮನೆಗೆ ತೆರಳಿ ಪ್ರದಾನ ಮಾಡಿದರು. ಬಾರಿ  99 ಹರೆಯದ ಗೋಪಾಲ ರಾವ್ಅವರ ಹೆಸರು ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಪ್ರಕಟಗೊಂಡಿತ್ತು. ಆದರೆ ವೃದ್ಧಾಪ್ಯದ ಹಿನ್ನೆಲೆಯಲ್ಲಿ ಅವರಿಗೆ ಬೆಂಗಳೂರಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹಿನ್ನೆಲೆಯಲ್ಲಿ ಸಚಿವೆ ಜಯಮಾಲಾ ಮತ್ತು ಅಧಿಕಾರಿಗಳು ಗೋಪಾಲ ರಾವ್ ಅವರ ಮನೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಸಂದರ್ಭದಲ್ಲಿ ಸಚಿವೆ ಜಯಮಾಲಾ ಸಮ್ಮುಖ ಮದ್ದಳೆ ನುಡಿಸಿದರು.



2017: ನವದೆಹಲಿ: ನೋಟು ಅಪಮೌಲ್ಯ ಘೋಷಣೆ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯಿಂದ ಕಳೆದೈದು ತ್ತೈಮಾಸಿಕಗಳಿಂದಲೂ ಇಳಿಮುಖವಾಗಿ ಸಾಗುತ್ತಿದ್ದ  ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಸೆಪ್ಟಂಬರ್ತ್ತೈಮಾಸಿಕದಲ್ಲಿ ಶೇ. 6.3ಕ್ಕೆ ಏರಿತು. ಜೂನ್ತ್ತೈಮಾಸಿಕದಲ್ಲಿ 3 ವರ್ಷಗಳಲ್ಲೇ ಅಧಿಕ ಕುಸಿತ ಕಂಡಿದ್ದ ಜಿಡಿಪಿ, ಶೇ. 5.7ಕ್ಕೆ ಇಳಿದಿತ್ತು. ಸಂಬಂಧ ಕೇಂದ್ರೀಯ ಸಾಂಖ್ಯಿಕ ಕಚೇರಿ (ಸಿಎಸ್) ದತ್ತಾಂಶವನ್ನು ಬಿಡುಗಡೆ ಮಾಡಿತು. ಇದರ ಪ್ರಕಾರ ಉತ್ಪಾದನೆ, ವಿದ್ಯುತ್‌, ಅನಿಲ, ನೀರು ಪೂರೈಕೆ, ಇತರ ಸೇವೆಗಳು, ವ್ಯಾಪಾರ, ಹೊಟೇಲ್ಳು, ಸಂವಹನ ಮತ್ತು ಬ್ರಾಡ್ಕಾಸ್ಟಿಂಗ್ಸಂಬಂಧಿ ಸೇವೆಗಳು ಶೇ. 6ಕ್ಕಿಂತ ಹೆಚ್ಚಿನ ವೇಗದಲ್ಲಿ ಅಭಿವೃದ್ಧಿ ಕಂಡಿವೆ. ಅದರಲ್ಲೂ ಉತ್ಪಾದನೆ ವಲಯವು ಶೇ. 7 ದರದಲ್ಲಿ ಏರಿಕೆ ಕಂಡಿದೆ. ಆದರೆ ಕೃಷಿ ಮತ್ತು ಮೀನುಗಾರಿಕೆ ವಲಯಗಳು ಪ್ರಗತಿಯಲ್ಲಿ ಕುಂಠಿತ ಸಾಧಿಸಿದ್ದು, ಶೇ. 1.7ಕ್ಕೆ ಕುಸಿದಿವೆ. ಹಿಂದಿನ ವರ್ಷದ ಇದೇ ತ್ತೈಮಾಸಿಕದಲ್ಲಿ ಇದು ಶೇ. 4.1ರಷ್ಟಿತ್ತುಚೇತರಿಸಿಕೊಳ್ಳುತ್ತಿವೆ ಕಂಪೆನಿಗಳು: ರಾಯrರ್ಸ್ಮೂಲಗಳ ಪ್ರಕಾರ ಜುಲೈ- ಸೆಪ್ಟಂಬರ್ತ್ತೈಮಾಸಿಕದಲ್ಲಿ ನಿಫ್ಟಿ ಕಂಪೆನಿಗಳು ಅತ್ಯುತ್ತಮ ಸಾಧನೆ ತೋರಿವೆ. ಜಿಡಿಪಿ ಏರಿಕೆ ಕಂಡಿರುವುದು ಜಿಎಸ್ಟಿ ಹಾಗೂ ನೋಟು ಅಪಮೌಲ್ಯದಿಂದ ಉಂಟಾದ ಹೊಡೆತದಿಂದ ಕಂಪೆನಿಗಳು ಚೇತರಿಸಿಕೊಳ್ಳುತ್ತಿವೆ ಎಂಬುದರ ಸಂಕೇತ ವಾಗಿದೆ. ಮುಂದಿನ ತಿಂಗಳುಗಳಲ್ಲಿ ಜಿಡಿಪಿ ಇನ್ನಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞರು ಊಹಿಸಿದ್ದಾರೆ. ಮೂಡೀಸ್ಭವಿಷ್ಯ: ಕೆಲವೇ ವಾರಗಳ ಹಿಂದೆ ಜಾಗತಿಕ ಆರ್ಥಿಕ ವಿಶ್ಲೇಷಣೆ ಸಂಸ್ಥೆ ಮೂಡೀಸ್ಭಾರತದ ಆರ್ಥಿಕ ಶ್ರೇಣಿಯನ್ನು ಏರಿಕೆ ಮಾಡಿ, ಜಿಡಿಪಿ ಮುಂದಿನ ವಿತ್ತ ವರ್ಷದಲ್ಲಿ ಶೇ. 7.5 ದರದಲ್ಲಿ ಏರಿಕೆ ಕಾಣಲಿದೆ ಎಂದಿತ್ತು. ಈಗ ಜಿಡಿಪಿ ಏರುಗತಿ ಆರಂಭವಾಗಿದ್ದು, ಮೂಡೀಸ್ನಿರೀಕ್ಷೆ ನಿಜವಾಗುವ ಸಾಧ್ಯತೆಯಿದೆ. ವಿತ್ತೀಯ ಕೊರತೆಯಿಂದಾಗಿ ಷೇರು ಪೇಟೆಯಲ್ಲಿ ತಲ್ಲಣ:  2017-18 ಬಜೆಟ್ನಲ್ಲಿ ಅಂದಾಜು ಮಾಡಿದ ವಿತ್ತೀಯ ಕೊರತೆಯ ಶೇ. 96.1ರಷ್ಟು ಅಕ್ಟೋಬರ್ನಲ್ಲೇ ಪೂರೈಸಿರುವುದು ಈದಿನ ಆರ್ಥಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿತ್ತು. ಒಂದೆಡೆ ವಿತ್ತೀಯ ಕೊರತೆ ಹೆಚ್ಚಾಗಿರುವುದು ಹಾಗೂ ಜಿಡಿಪಿ ವರದಿ ಮುನ್ಸೂಚನೆಯ ಹಿನ್ನೆಲೆಯಲ್ಲಿ  ಷೇರುಪೇಟೆಯ ಕುಸಿತ ಕಂಡಿತು. ಸೆನ್ಸೆಕ್ಸ್‌ 185 ಅಂಕ ಕುಸಿತದಿಂದಲೇ ಆರಂಭವಾಗಿ ದಿನದ ಅಂತ್ಯಕ್ಕೆ 453 ಅಂಕ ಕುಸಿದಿತ್ತು. ಇನ್ನೊಂದೆಡೆ ನಿಫ್ಟಿ ಕೂಡ 134.75 ಅಂಕ ಕುಸಿದಿದ್ದು, 10,226ಗೆ ಇಳಿಕೆ ಕಂಡಿತು. ಶೇ. 7-8 ದರದಲ್ಲಿ ಜಿಡಿಪಿ ಅಭಿವೃದ್ಧಿ ನಿರೀಕ್ಷೆ; ಜೇಟ್ಲಿ:  ದೇಶ ಶೇ. 7-8 ದರದಲ್ಲಿ ಸ್ಥಿರವಾಗಿ ಅಭಿವೃದ್ಧಿಯಾಗಲಿದೆ ಎಂದು ವಿತ್ತ ಸಚಿವ ಅರುಣ್ಜೇಟ್ಲಿ ಹೇಳಿದ್ದಾರೆ. ಇಳಿಕೆಯಾದರೂ ಶೇ. 7 ಕ್ಕಿಂತ ಕಡಿಮೆಯಾಗದು. ಅಲ್ಲದೆ ಶೇ. 10ಕ್ಕಿಂತ ಹೆಚ್ಚಿನ ವೇಗದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುವುದು ನಮ್ಮ ಸವಾಲು ಹೇಳಿದರು. ಈಗಾಗಲೇ 2.5 ಟ್ರಿಲಿಯನ್ಡಾಲರ್ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ. ದೇಶ ಎರಡಂಕಿ ಹಣದುಬ್ಬರದಿಂದ ಹೊರಬಂದಿದೆ. ನಮ್ಮ ಚಾಲ್ತಿ ಖಾತೆ ವಿತ್ತೀಯ ಕೊರತೆಯನ್ನು ನಿಯಂತ್ರಿಸಿದ್ದೇವೆ ಎಂದು ಜೇಟ್ಲಿ ಹೇಳಿದರು.


2017: ನವದೆಹಲಿ:  "ರಾಜಕೀಯವಾಗಿ ಬೆಲೆ ತೆತ್ತರೂ ಸರಿ, ಬೇನಾಮಿ ಆಸ್ತಿಯನ್ನು ನಿಯಂತ್ರಿಸಿಯೇ ತೀರುತ್ತೇನೆ' ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದರು. ಕಪ್ಪು ಹಣದ ವಿರುದ್ಧ ಹೋರಾಟ ಮುಂದು ವರಿಯುತ್ತದೆ. ಆಧಾರ್ಅನ್ನು ಬಳಸಿಕೊಂಡು ಬೇನಾಮಿ ಆಸ್ತಿ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಹಿಂದುಸ್ಥಾನ್ಟೈಮ್ಸ್ನಡೆಸಿದ ಲೀಡರ್ಶಿಪ್ಸಮ್ಮೇಳನದಲ್ಲಿ ಹೇಳಿದರು. ದೇಶದಲ್ಲಿ ಬದಲಾವಣೆ ತಂದದ್ದಕ್ಕಾಗಿ ರಾಜಕೀಯವಾಗಿ ಬೆಲೆ ತೆರಲೂ ತಯಾರಿದ್ದೇನೆ. ನಾನು ಅಧಿಕಾರ ವಹಿಸಿಕೊಂಡಾಗ ದೇಶದ ಆರ್ಥಿಕತೆ, ಬ್ಯಾಂಕಿಂಗ್ವ್ಯವಸ್ಥೆ ಮತ್ತು ಆಡಳಿತ ಹತಾಶ ಸ್ಥಿತಿಯಲ್ಲಿತ್ತು. ಆದರೆ ನಾವು ಸನ್ನಿವೇಶ ವನ್ನು ಬದಲಿಸಿದ್ದೇವೆ. ಜಗತ್ತೇ ಭಾರತವನ್ನು ತಲೆಯೆತ್ತಿ ನೋಡುವಂತಾಗಿದೆ ಎಂದರು. ನೋಟು ಅಪಮೌಲ್ಯದಿಂದಾಗಿ ಕಪ್ಪು ಹಣ ಹುಟ್ಟಿಕೊಳ್ಳುವ ಪ್ರಮಾಣ ಕಡಿಮೆಯಾಗಿದೆ. ನಮ್ಮ ಮೊದಲ ಆದ್ಯತೆಯೇ ಪಾರದರ್ಶಕತೆ. ಎಲ್ಲ ಹಣಕಾಸು ವಹಿವಾಟುಗಳಿಗೂ ತಾಂತ್ರಿಕ ಮತ್ತು ಡಿಜಿಟಲ್ಮುದ್ರೆ ಬಿದ್ದಾಗ ದೇಶದಲ್ಲಿ ಭ್ರಷ್ಟಾಚಾರ ನಿವಾರಣೆಯಾಗುತ್ತದೆ. ನೋಟು ಅಪಮೌಲ್ಯಕ್ಕೂ ಮೊದಲು ಕಪ್ಪು ಹಣದಿಂದಾಗಿ ಪರ್ಯಾಯ ಆರ್ಥಿಕತೆ ರೂಪುಗೊಂಡಿತ್ತು. ಇದನ್ನು ನಾವು ಈಗ ಮುಖ್ಯವಾಹಿನಿಗೆ ತಂದಿದ್ದೇವೆ ಎಂದರು. ಧನಾತ್ಮಕ ಧನಾತ್ಮಕ ಮನೋಭಾವ ಬೆಳೆಸಿ: ಋಣಾತ್ಮಕ ಸುದ್ದಿಗಳ ಬದಲಿಗೆ ದೇಶದ ಯಶಸ್ಸಿನ ಕಥೆ ಗಳನ್ನು ಪ್ರಸಾರ ಮಾಡಿ ಎಂದು ಪ್ರಧಾನಿ ಮೋದಿ ಮಾಧ್ಯಮಗಳಿಗೆ ಕರೆ ನೀಡಿದರು. ನಮ್ಮ ಮಾಧ್ಯಮ ಯಾಕಿಷ್ಟು ಋಣಾತ್ಮಕವಾಗಿದೆ? ನಮ್ಮ ಸಾಮರ್ಥ್ಯದ ಬಗ್ಗೆ ನಾವು ಯಾಕೆ ಇಷ್ಟು ಹತಾಶಭಾವ ಹೊಂದಿದ್ದೇವೆ? ಯಶಸ್ಸಿನ ಕಥೆಗಳು ಹಲವಾರಿವೆ. ಅವುಗಳನ್ನು ನಾವು ಜನರಿಗೆ ತಲುಪಿಸೋಣ ಎಂದು ಮಾಜಿ ರಾಷ್ಟ್ರಪತಿ .ಪಿ.ಜೆ. ಅಬ್ದುಲ್ಕಲಾಂ ಹೇಳಿದ್ದನ್ನು ಮೋದಿ ವೇಳೆ ಸ್ಮರಿಸಿಕೊಂಡರು.

2017: ಚೆನ್ನೈ/ತಿರುವನಂತಪುರ: ಬಂಗಾಲ ಕೊಲ್ಲಿಯಲ್ಲಿ ಕಾಣಿಸಿ ಕೊಂಡಿದ್ದ ವಾಯುಭಾರ ಕುಸಿತ ಹಠಾತ್ಆಗಿ ಚಂಡ ಮಾರುತದ ರೂಪತಾಳಿತು. ಪರಿಣಾಮ ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪದಲ್ಲಿ ಧಾರಾಕಾರ ಮಳೆಯಾಗಿ, 8 ಮಂದಿಯನ್ನು ಬಲಿ ಪಡೆದುಕೊಂಡಿತು. "ಓಖಿ' ಚಂಡಮಾರುತ ಲಕ್ಷ ದ್ವೀಪದತ್ತ ಸಾಗಿತು. ಗಾಳಿಯ ವೇಗ ಗಂಟೆಗೆ 65-75 ಕಿ.ಮೀ. ಇರಲಿದ್ದು, ಯಾವುದೇ ಕಾರಣಕ್ಕೂ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚಿಸಲಾಯಿತು. ಲಕ್ಷದ್ವೀಪ ಪ್ರವೇಶಿಸುತ್ತಿದ್ದಂತೆ, ಇದು ತೀವ್ರ ಚಂಡಮಾರುತವಾಗಿ ಮಾರ್ಪಾಡಾಗುವ ಸಾಧ್ಯತೆಯಿದ್ದು, ಎಲ್ಲ ರೀತಿಯ ಸವಾಲು ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್ಡಿಆರ್ಎಫ್) 2 ತಂಡ ಗಳು (60 ಮಂದಿ) ಈಗಾಗಲೇ ಕನ್ಯಾಕುಮಾರಿಯನ್ನು ತಲುಪಿದ್ದು, 47 ಮಂದಿಯ ಇನ್ನೊಂದು ತಂಡವನ್ನು ಕೇರಳದ ಕೊಚ್ಚಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 5 ಸಾವು: ದಕ್ಷಿಣ ತಮಿಳುನಾಡು ಹಾಗೂ ಕೇರಳದಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ಹಲವು ಪ್ರದೇಶಗಳು ಜಲಾವೃತವಾಯಿತು. ತಮಿಳುನಾಡಿನಲ್ಲಿ ನಾಲ್ವರು ಮೃತಪಟ್ಟರೆ, ಕೇರಳದಲ್ಲಿ ಆಟೋ ರಿಕ್ಷಾದ ಮೇಲೆ ಮರ ಬಿದ್ದ ಪರಿಣಾಮ, ಚಾಲಕ ಅಸುನೀಗಿದರು. ತೂತುಕುಡಿ, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರುಧುನಗರ ಸಹಿತ 7 ಜಿಲ್ಲೆಗಳಲ್ಲಿ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಕನ್ಯಾಕುಮಾರಿ ಮತ್ತು ತೂತುಕುಡಿ ಜಿಲ್ಲೆಗಳಲ್ಲಿ 500ಕ್ಕೂ ಹೆಚ್ಚು ಮರಗಳು ಧರೆಗುಳಿದಿದ್ದು, ಹಲವಾರು ಮನೆ, ಕಟ್ಟಡಗಳಿಗೆ ಹಾನಿಯಾಯಿತು. ಇನ್ನೊಂದೆಡೆ, ಹಿಂದಿನ ರಾತ್ರಿ ಮೀನುಗಾರಿಕೆಗೆಂದು ಸಮುದ್ರಕ್ಕಿಳಿದಿದ್ದ 13 ಮಂದಿ ಮೀನುಗಾರರು ನಾಪತ್ತೆಯಾದರು. ಒಖೀ ಹೆಸರು ಬಂದದ್ದೆಲ್ಲಿಂದ?: ಚಂಡಮಾರುತಕ್ಕೆ "ಓಖಿ' ಎಂದು ನಾಮಕರಣ ಮಾಡಿದ್ದು ಬಾಂಗ್ಲಾದೇಶ. ಬಂಗಾಲಿ ಭಾಷೆಯಲ್ಲಿ "ಕಣ್ಣು' ಎಂದು ಇದರ ಅರ್ಥ.  ರಾಜ್ಯದಲ್ಲೂ ಮಳೆ: ಕೇರಳದ ದಕ್ಷಿಣ ಕರಾವಳಿಯಲ್ಲಿ "ಓಖಿ' ಚಂಡಮಾರುತದ ಪ್ರಭಾವ ತಕ್ಕಮಟ್ಟಿಗೆ ನೆರೆಯ ಕರ್ನಾಟಕದ ಮೇಲೂ ಆಯಿತು. ಇದರಿಂದಾಗಿ ಅಲ್ಲಲ್ಲಿ ಹಗುರವಾದ ಮಳೆಯಾಯಿತು.   
2016: ನವದೆಹಲಿ: ಚಿತ್ರ ಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ
ನುಡಿಸುವುದು ಇನ್ನು ಮುಂದೆ ಕಡ್ಡಾಯ. ಥಿಯೇಟರುಗಳಲ್ಲಿ ಚಲನ ಚಿತ್ರ ಆರಂಭಕ್ಕೆ ಮುನ್ನ ರಾಷ್ಟ್ರಗೀತೆಯನ್ನು ನುಡಿಸಬೇಕು ಎಂದು ಸುಪ್ರೀಂಕೋರ್ಟ್ ಆಜ್ಞಾಪಿಸಿತು.  ಚಲನ ಚಿತ್ರ ಆರಂಭಕ್ಕೆ ಮುನ್ನ ರಾಷ್ಟ್ರಗೀತೆಯನ್ನು ನುಡಿಸಲೇ ಬೇಕು. ಪ್ರತಿಯೊಬ್ಬನೂ ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಂತುಕೊಳ್ಳಬೇಕು ಮತ್ತು ಪರದೆಯಲ್ಲಿ ರಾಷ್ಟ್ರಧ್ವಜವನ್ನು ತೋರಿಸಬೇಕು ಎಂದು ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಅಮಿತವ ರಾಯ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠ ನಿರ್ದೇಶನ ನೀಡಿತು. ರಾಷ್ಟ್ರಗೀತೆಯನ್ನು ದುರುಪಯೋಗಿಸಿ ಕೊಳ್ಳಲಾಗುತ್ತಿದೆ ಎಂದು ಆಪಾದಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ ರಾಷ್ಟ್ರಗೀತೆಯನ್ನು ವಾಣಿಜ್ಯೀಕರಣ ಮಾಡಬಾರದು ಮತ್ತು ನಾಟಕೀಯಗೊಳಿಸಬಾರದು ಎಂದೂ ಆಜ್ಞಾಪಿಸಿತು. ರಾಷ್ಟ್ರಗೀತೆಯನ್ನು ನುಡಿಸುವಾಗ ಅದಕ್ಕೆ ಗೌರವ ನೀಡಬೇಕಾದ್ದು ಪ್ರತಿಯೊಬ್ಬನ ಜವಾಬ್ದಾರಿ. ಅದು ಪ್ರತಿಯೊಬ್ಬನಲ್ಲೂ ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಸ್ಪುರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಬೇಕು. ಅದನ್ನು ಆಕ್ಷೇಪಾರ್ಹ ವಸ್ತುಗಳ ಮೇಲೆ ಮುದ್ರಿಸಬಾರದು ಎಂದೂ ನ್ಯಾಯಮೂರ್ತಿಗಳು ಹೇಳಿದರು. ಭೋಪಾಲದಲ್ಲಿ ಸರ್ಕಾರೇತರ ಸಂಘಟನೆಯೊಂದನ್ನು (ಎನ್ ಜಿಓ) ನಡೆಸುತ್ತಿರುವ ಶ್ಯಾಮ್ ನಾರಾಯಣ್ ಚೌಸ್ಕಿ ಅವರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರತಿಯೊಂದು ಚಲನಚಿತ್ರ ಪ್ರದರ್ಶನದ ಬಳಿಕ ರಾಷ್ಟ್ರಗೀತೆಯನ್ನು ನುಡಿಸುವುದು 1960 ದಶಕದಲ್ಲಿ ಕಡ್ಡಾಯವಾಗಿತ್ತು. ಆದರೆ 1990 ದಶಕದ ಬಳಿಕ ಅಭ್ಯಾಸ ತಪ್ಪಿತು. 2003ರಲ್ಲಿ ಮಹಾರಾಷ್ಟ್ರ ಸರ್ಕಾರವು ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನ ಆರಂಭಕ್ಕೆ ಮುನ್ನ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿತ್ತು.

2016: ನವದೆಹಲಿ: ಕಾಂಗ್ರೆಸ್ಉಪಾಧ್ಯಕ್ಷ ರಾಹುಲ್ಗಾಂಧಿ ಬಳಸುತ್ತಿದ್ದ ಅಧಿಕೃತ ಟ್ವಿಟರ್ಖಾತೆಯನ್ನು ಹ್ಯಾಕ್ಮಾಡಿ ಕಾಂಗ್ರೆಸ್ಪಕ್ಷದ ಕುರಿತಾಗಿ ಅವಹೇಳನಕಾರಿ ಸಂದೇಶಗಳನ್ನು ಟ್ವಿಟ್ಮಾಡಲಾಯಿತು.. ಟ್ವಿಟ್ಜೊತೆಗೆ ‘We are legion’ ಎಂದು ಬರೆಯಲಾಗಿತ್ತು. ಈದಿನ ಸಂಜೆ ಖಾತೆ ಹ್ಯಾಕ್ಆಗಿದ್ದು, ಖಾತೆ ಹೆಸರನ್ನು ‘Retarded Gandhi@OfficeofRG’  ಎಂದು ಬದಲಿಸಲಾಗಿತ್ತು. ಹ್ಯಾಕರ್ಗಳು ಸರಣಿ ಟ್ವಿಟ್ಪ್ರಕಟಿಸುತ್ತಿದ್ದು, ಹ್ಯಾಕರ್ಗಳು ಮಾಡುತ್ತಿರುವ ಟ್ವಿಟ್ಗಳನ್ನು ಖಾತೆಯಿಂದ ತೆಗೆದು ಹಾಕುವ ಪ್ರಯತ್ನ ಮಾಡಲಾಯಿತು.

2016: ಚಂಡೀಗಢಭಾರತೀಯ ಕ್ರಿಕೆಟ್ ಸ್ಪೋಟಕ ಬ್ಯಾಟ್ಸ್ಮನ್ಯುವರಾಜ್ಸಿಂಗ್‌, ಬ್ರಿಟನ್
ಮೂಲದ ಬಾಲಿವುಡ್ ನಟಿ ಹಜೆಲ್ಕೀಚ್ರನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಚಂಡೀಗಢದಲ್ಲಿ ನಡೆದ ಅದ್ದೂರಿ ವಿವಾಹ ಮಹೋತ್ಸವದಲ್ಲಿ ಟೀಂ ಇಂಡಿಯಾದ ಸಹ ಆಟಗಾರರು, ಕುಟುಂಬದವರು ಮತ್ತು ಸಂಬಂಧಿಕರು ಸೇರಿದಂತೆ ಸ್ನೇಹಿತರು ಪಾಲ್ಗೊಂಡು ನವವಧುವರರಿಗೆ ಶುಭಕೋರಿದರು. ಯುವರಾಜ್ಸಿಂಗ್ಹಾಗೂ ಹಜೆಲ್ಕೀಚ್ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು

2016: ಕೋಲ್ಕತ: ಪಶ್ಚಿಮ ಬಂಗಾಳದ ಸುಕ್ನಾದಲ್ಲಿ ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್ ಒಂದು ಪತನಗೊಂಡು ಅದರಲ್ಲಿ ಇದ್ದ ಮೂವರು ಸೇನಾ ಅಧಿಕಾರಿಗಳು ಸಾವನ್ನಪ್ಪಿದರು. ಒಬ್ಬ ಜ್ಯೂನಿಯರ್ ಕಮೀಶನ್ಡ್ ಆಫೀಸರ್ (ಜೆಸಿಒ) ಗಂಭೀರವಾಗಿ ಗಾಯಗೊಂಡರು. ಬೆಳಗ್ಗೆ 10.30 ವೇಳೆಗೆ ದುರ್ಘಟನೆ ಸಂಭವಿಸಿತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಸೇನಾ ಅಧಿಕಾರಿಗಳು ಸ್ಥಳೀಯ ರಕ್ಷಣಾ ತಂಡದೊಂದಿಗೆ ಘಟನಾ ಸ್ಥಳಕ್ಕೆ ಧಾವಿಸಿದರು. ಸುಕ್ನಾದಿಂದ ಹೊರಟಿದ್ದ ಹೆಲಿಕಾಪ್ಟರ್ ತನ್ನ ದೈನಂದಿನ ಹಾರಾಟ ಕಾರ್ಯಾಚರಣೆ ನಡೆಸುತ್ತಿತ್ತು. ಇಳಿಯುವಾಗ ದುರಂತ ಸಂಭವಿಸಿತು. ದುರಂತ ಸ್ಥಳವು ಸುಕ್ನಾ ಸೇನಾ ನೆಲೆಯ ಒಳಗಡೆಯೇ ಇದ್ದು, ಹೆಲಿಪ್ಯಾಡ್ ಸಮೀಪದಲ್ಲಿತ್ತು. ಇದೊಂದು ದುರದೃಷ್ಟಕರ ಘಟನೆ. ಒಬ್ಬ ಜ್ಯೂನಿಯರ್ ಕಮೀಶನ್ಡ್ ಅಧಿಕಾರಿ ಸ್ಥಿತಿ ಚಿಂತಾಜನಕವಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದವು. ಘಟನೆ ಬಗ್ಗೆ ಇಲಾಖಾ ತನಿಖೆಗೆ ಆಜ್ಞಾಪಿಸಲಾಗಿದೆ ಎಂದು ಮೂಲಗಳು ತಿಳಿಸಿದವು.
 2016: ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸರ್ಜಿಕಲ್ ದಾಳಿ ನಡೆಸಿದ ಬಳಿಕ ನಡೆಯುತ್ತಿರುವ ಕದನವಿರಾಮ ಉಲ್ಲಂಘನೆಗಳ ಕಾಲದಲ್ಲಿ ಭಾರತೀಯ ಸೇನೆಯು 15 ಮಂದಿ ಪಾಕ್ ಸೈನಿಕರನ್ನು ಕೊಂದಿದ್ದು, 10ಕ್ಕೂ ಹೆಚ್ಚು ಭಯೋತ್ಪಾದಕರ ಸದ್ದಡಗಿಸಿದೆ ಎಂದು ಬಿಎಸ್ಎಫ್ ಮಹಾ ನಿರ್ದೇಶಕ ಕೆ.ಕೆ. ಶರ್ಮಾ ಇಲ್ಲಿ ಹೇಳಿದರು. ಪಾಕಿಸ್ತಾನದಿಂದ ನಡೆಯುತ್ತಿರುವ ಕದನ ವಿರಾಮ ಉಲ್ಲಂಘನೆಗಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಹಲವಾರು ಗಡಿ ಹೊರಠಾಣೆಗಳನ್ನೂ ನಾಶ ಪಡಿಸಿದೆ ಎಂದು ಅವರು ನುಡಿದರು. ಗಡಿ ಪ್ರದೇಶದ ಸಣ್ಣ ಸುರಂಗಗಳ ಮೂಲಕ ನುಸುಳಿವಿಕೆ ನಡೆಯುತ್ತಿದೆ. ಈವರೆಗಿನ ತಂತ್ರಜ್ಞಾನದಲ್ಲಿ ಸುರಂಗ ಪತ್ತೆಗೆ ಯಾವುದೇ ಮಾರ್ಗ ಇಲ್ಲ ಎಂದು ಅವರು ಸಾಂಬಾ ವಿಭಾಗದಲ್ಲಿ ನಡೆದ ಭಯೋತ್ಪಾದಕರ ನುಸುಳುವಿಕೆ ಬಗ್ಗೆ ಪ್ರಸ್ತಾಪಿಸುತ್ತಾ ಹೇಳಿದರು. ನಮ್ಮ ಗಡಿ ಬೇಲಿಗಳನ್ನು ಆಧುನೀಕರಿಸಲು ತೀವ್ರ ಯತ್ನಗಳನ್ನು ನಾವು ನಡೆಸುತ್ತಿದ್ದೇವೆ. ಸಾಂಬಾ ನುಸುಳುವಿಕೆ ಮತ್ತು ಸುರಂಗ ವಿಚಾರವನ್ನು ನಾವು ಪಾಕ್ ಅಧಿಕಾರಿಗಳ ಜೊತೆಗೆ ಪ್ರಸ್ತಾಪಿಸಲಿದ್ದೇವೆ ಎಂದು ಅವರು ಹೇಳಿದರು. ಯೋಧರು ಮತ್ತು ಅವರ ಕುಟುಂಬ ಸದಸ್ಯರನ್ನು ಹಲವಾರು ನಗದು ರಹಿತ ಯೋಜನೆಗಳಿಗೆ ಸೇರಿಸಲಾಗಿದೆ. ಬಾಬಾ ರಾಮದೇವ್ ಮಾರ್ಗದರ್ಶನದಲ್ಲಿ ಯೋಧರಿಗೆ 45 ನಿಮಿಷಗಳ ಯೋಗ ಶಿಕ್ಷಣ ನೀಡಲಾಗುತ್ತಿದ್ದು ಸೈನಿಕರ ಸರಾಸರಿ ತೂಕ ಈಗ ತಗ್ಗಿದೆ ಎಂದು ಅವರು ಹೇಳಿದರು.
 2016: ನವದೆಹಲಿ: ನಗದು ರಹಿತ ಪದ್ಧತಿಯನ್ನು ರೂಢಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನೆಲೆಯಲ್ಲಿ ದೆಹಲಿಯ ಸಂಸತ್ ಭವನದಲ್ಲಿ ನಗದು ರಹಿತ ವ್ಯವಸ್ಥೆ ಜಾರಿಗೆ ತರುವ ಮಹತ್ವದ ಪ್ರಯತ್ನಕ್ಕೆ ಚಾಲನೆ ನೀಡಲಾಯಿತು. ಸಂಸತ್ ಭವನದ ಆವರಣದಲ್ಲಿರುವ ಕ್ಯಾಂಟೀನ್ ಮತ್ತು ಅಂಗಡಿಗಳಲ್ಲಿ ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆಗಳನ್ನು ಅಳವಡಿಸಲಾಯಿತು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ವ್ಯವಸ್ಥೆಗೆ ಚಾಲನೆ ನೀಡಿದರು. ಸಂಸತ್ ಭವನದ ಆವರಣದಲ್ಲಿರುವ 19 ಸ್ಥಳಗಳಲ್ಲಿ ನಗದು ವಿದ್ಯುನ್ಮಾನ ಹಣ ಪಾವತಿ ವ್ಯವಸ್ಥೆ ಅಳವಡಿಸಲಾಗಿದೆ. ಸಂಸದರ ಕ್ಯಾಂಟೀನ್, ಮಾಧ್ಯಮ ಪ್ರತಿನಿಧಿಗಳ ಕ್ಯಾಂಟೀನ್ ಸೇರಿದಂತೆ ಎಲ್ಲಾ ಸ್ಥಳಗಳಲ್ಲೂ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಲು ಅವಕಾಶ ಕಲ್ಪಿಸಲಾಯಿತು. ನೋಟು ರದ್ಧತಿಯ ನಂತರ ಕ್ಯಾಂಟೀನುಗಳಲ್ಲಿ ಹಣ ನೀಡಲು ಸಂಸದರು ಮತ್ತು ಜನರಿಗೆ ಕಷ್ಟವಾಗುತ್ತಿತ್ತು. ಜತೆಗೆ ಕ್ಯಾಂಟೀನಿನಲ್ಲಿ ಸೂಕ್ತ ಪ್ರಮಾಣದ ಚಿಲ್ಲರೆ ಸಿಗುತ್ತಿರಲಿಲ್ಲ. ಹಾಗಾಗಿ ಕಾರ್ಡ್ ಮೂಲಕ ಪಾವತಿ ಮಾಡುವ ವ್ಯವಸ್ಥೆ ಅಳವಡಿಸಲಾಯಿತು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಸಂಸದರು ಮತ್ತು ಜನರು ಹೊಸ ವ್ಯವಸ್ಥೆಯಿಂದ ಖುಷಿಯಾಗಿದ್ದಾರೆ ಎಂದು ಸಂಸತ್ತಿನ ಆಹಾರ ಸಮಿತಿಯ ಅಧ್ಯಕ್ಷ .ಪಿ.ಜಿತೇಂದರ್ ರೆಡ್ಡಿ ತಿಳಿಸಿದರು.
 2016: ನವದೆಹಲಿ: ನೋಟು ರದ್ಧತಿಯ ನಂತರ ಕಪ್ಪು ಹಣ ಬದಲಾವಣೆ ಮಾಡುತ್ತಿದ್ದ ಹವಾಲಾ ಡೀಲರುಗಳ ಮೇಲೆ ಜಾರಿ ನಿರ್ದೇಶನಾಲಯ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ದೇಶಾದ್ಯಂತ 40 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿತು. ಜಾರಿ ನಿರ್ದೇಶನಾಲಯ ಸಿಬಿಐ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ನೆರವಿನೊಂದಿಗೆ ದಾಳಿ ನಡೆಸಿದೆ. ಕೋಲ್ಕತದ 6 ಸ್ಥಳಗಳು, ಒಡಿಶಾದ ಭುವನೇಶ್ವರ ಮತ್ತು ಪಾರಾದ್ವೀಪಗಳಲ್ಲಿ  ತಲಾ 2 ಸ್ಥಳಗಳು ಮತ್ತು ಗುವಾಹತಿ ಸೇರಿದಂತೆ ಈಶಾನ್ಯ ರಾಜ್ಯಗಳ ಹಲವು ಭಾಗಗಳಲ್ಲಿ ದಾಳಿ ನಡೆಸಲಾಯಿತು. ಹವಾಲಾ ಜಾಲದ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದು ಮತ್ತು ಹಣ ಬದಲಾವಣೆ ಮಾಡುವುದರ ಮೇಲೆ ನಿರ್ದೇಶನಾಲಯ ನಿಗಾ ವಹಿಸಿದೆ. ಹಳೆಯ ಮತ್ತು ಹೊಸ ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡು ಬದಲಾವಣೆ ಮಾಡಲಾಗುತ್ತಿದೆ. ಅಂತಹ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದರು.
 2016: ನವದೆಹಲಿ/ ಪಟಿಯಾಲ: ಪಂಜಾಬಿನ ಪಟಿಯಾಲ ಜಿಲ್ಲೆಯ ನಭಾ ಜೈಲ್ ಬ್ರೇಕ್ ಕೃತ್ಯದ ಸೂತ್ರಧಾರಿ ಬೇರಾರೂ ಅಲ್ಲ, ಸ್ವತಃ ತಾನೇ ಎಂದು ನಭಾ ಸೆರೆಮನೆಯಿಂದ ಪರಾರಿಯಾಗಿ ಮತ್ತೆ ಬಂಧಿತಾಗಿರುವ ಖಲಿಸ್ತಾನ ಲಿಬರೇಶನ್ ಫೋರ್ಸ್ (ಕೆಎಲ್ಎಫ್) ಸಿಖ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟು ಬಹಿರಂಗ ಪಡಿಸಿದ. ಜೈಲ್ ಬ್ರೇಕ್ ಕೃತ್ಯದ ಸೂತ್ರಧಾರಿ ತಾನೇ ಎಂಬುದಾಗಿ ಮಿಂಟು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದವು. ಜರ್ಮನಿಯಲ್ಲಿರುವ ಕೆಎಲ್ಎಫ್ ಬೆಂಬಲಿಗರು ಮತ್ತು ಇಂಗ್ಲೆಂಡಿನಲ್ಲಿರುವ ಸಂದೀಪ್ ತಮಗೆ ಹವಾಲಾ ಜಾಲದ ಮೂಲಕ ತನಗೆ ಹಣ ಕಳುಹಿಸಿದ್ದುದಾಗಿಯೂ ಮಿಂಟು ಹೇಳಿದ. ಜೈಲ್ ಬ್ರೇಕ್ ಕೃತ್ಯಕ್ಕೆ ಕೆಲವೇ ದಿನ ಮುಂಚಿತವಾಗಿ ತಾನು ಪಾಕಿಸ್ತಾನದಲ್ಲಿರುವ ತನ್ನ ಭಂಟ ಹರ್ಮೀತ್ ಜೊತೆಗೆ ಇಂಟರ್ ನೆಟ್ ಚಾಟ್ ನಡೆಸಿದ್ದುದಾಗಿಯೂ ಮಿಂಟು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿದವು. ತನ್ನ ಬಂಟ ಹರ್ಮೀತ್ ಸಿಂಗ್ ಲಾಹೋರಿನ ಡೇರಾ ಚಲ್ ಗ್ರಾಮದಲ್ಲಿ ಐಎಸ್ಐ ರಕ್ಷಣೆಯಲ್ಲಿ ಸುರಕ್ಷಿತವಾಗಿದ್ದಾನೆ. ಕಾಂಬೋಡಿಯಾ, ಲಾವೋಸ್, ಮ್ಯಾನ್ಮಾರ್ ಮತ್ತು ಥಾಯ್ಲೆಂಡಿನಲ್ಲಿ ತನಗೆ ನೆಲೆಗಳಿವೆ. ಪ್ರದೇಶಗಳಲ್ಲಿ ಮತ್ತೆ ಭಯೋತ್ಪಾದನೆಯನ್ನು ತರಲು ಐಎಸ್ಐ ಯೋಜನೆ ರೂಪಿಸಿದೆ ಎಂದೂ ಮಿಂಟು ಹೇಳಿರುವುದಾಗಿ ಮೂಲಗಳು ತಿಳಿಸಿದವು.
 2016: ಚೆನ್ನೈ: ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದಿದ್ದು ಡಿಸೆಂಬರ್ 2 ಶುಕ್ರವಾರ ತಮಿಳುನಾಡು ಕರಾವಳಿಯನ್ನು ಹಾದುಹೋಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತು. ತಮಿಳುನಾಡಿನ ವೇದಾರಣ್ಯಂ ಮತ್ತು ಕಡಲೂರು ಹಾಗೂ ಪುದುಚೆರಿ ಮಧ್ಯೆ ಚಂಡಮಾರುತ ನೆಲಕ್ಕಪ್ಪಳಿಸಬಹುದು ಎಂದು ಇಲಾಖೆ ಹೇಳಿತು. ಚೆನ್ನೈಯಲ್ಲಿ ಈದಿನ ರಾತ್ರಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ.  ತಮಿಳುನಾಡಿನ ಉತ್ತರ ಕರಾವಳಿ ಮತ್ತು ಪುದುಚೆರಿಯಲ್ಲಿ ಗುರುವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಂಡಮಾರುತಕ್ಕೆ ನಾಡಾ ಎಂದು ಹೆಸರು ಇಡಲಾಗಿದ್ದು, ಅದು ಪ್ರಸ್ತುತ ಚೆನ್ನೈಯ ಆಗ್ನೇಯ ದಿಕ್ಕಿನಲ್ಲಿ 770 ಕಿಮೀ ದೂರದಲ್ಲಿದೆ. ಇದು ಪಶ್ಚಿಮಾಭಿಮುಖವಾಗಿ ಸಾಗುತ್ತಾ ತೀಕ್ಷ್ಣಗೊಳ್ಳುವ ನಿರೀಕ್ಷೆ ಇದೆ. ಹಿನ್ನೆಲೆಯಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಯಿತು.
 2016: ಇಸ್ಲಾಮಾಬಾದ್: ಬುಲೆಟ್ ರೈಲು ಮಾರ್ಗ ನಿರ್ಮಿಸುವಷ್ಟು ಸಾಮರ್ಥ್ಯ ನಮ್ಮಲ್ಲಿಲ್ಲ ಮತ್ತು ಅದರಲ್ಲಿ ಓಡಾಡುವ ಜನರೂ ನಮ್ಮಲ್ಲಿಲ್ಲ ಹಾಗಾಗಿ ಭವಿಷ್ಯದಲ್ಲಿ ಬುಲೆಟ್ ರೈಲು ಹೊಂದುವ ಇರಾದೆ ನಮಗಿಲ್ಲ ಎಂದು ಪಾಕಿಸ್ತಾನ ತಿಳಿಸಿತು. ಪಾಕಿಸ್ತಾನದ ರೈಲ್ವೆ ಸಚಿವ ಖ್ವಾಜಾ ಸಾದ್ ರಫೀಕ್ ಕುರಿತು ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದರು. ಪಾಕಿಸ್ತಾನ ಚೀನಾದೊಂದಿಗೆ ಜಂಟಿಯಾಗಿ ಸುಮಾರು 46 ಬಿಲಿಯನ್ ಡಾಲರ್ ವೆಚ್ಚದಲ್ಲಿ ಚೀನಾ ಪಾಕ್ ಆರ್ಥಿಕ ಕಾರಿಡಾರ್ ನಿರ್ಮಿಸುತ್ತಿದೆ. ಇದರ ಭಾಗವಾಗಿ ಹೈಸ್ಪೀಡ್ ರೈಲ್ವೆ ಮಾರ್ಗ ನಿರ್ಮಿಸಲಾಗುತ್ತಿದೆ. ಮಾರ್ಗದಲ್ಲಿ ಸುಮಾರು 160 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಬುಲೆಟ್ ರೈಲು ಹೊಂದುವ ಕುರಿತು ಚೀನಾದೊಂದಿಗೆ ಮಾತುಕತೆ ನಡೆಸಿದೆವು, ಆದರೆ ಚೀನಾ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ. ಹೈಸ್ಪೀಡ್ ರೈಲನ್ನೇ ನಾವು ಬುಲೆಟ್ ರೈಲು ಎಂದು ತಿಳಿದುಕೊಳ್ಳಬೇಕಿದೆ. ನಿಜ ಹೇಳಬೇಕೆಂದರೆ ಬುಲೆಟ್ ರೈಲು ಯೋಜನೆಗೆ ಬೇಕಾಗುವಷ್ಟು ಹಣ ನಮ್ಮಲ್ಲಿಲ್ಲ, ಜತೆಗೆ ನಮ್ಮಲ್ಲಿ ಅದಕ್ಕೆ ಮಾರುಕಟ್ಟೆ ಸಹ ಇಲ್ಲ. ನಾವು ಬುಲೆಟ್ ರೈಲು ಆರಂಭಿಸಿದರೂ ಸಹ ಅದರಲ್ಲಿ ಓಡಾಡುವಂತಹ ಶ್ರೀಮಂತ ಮತ್ತು ಮೇಲ್ಮಧ್ಯಮ ವರ್ಗದ ಜನರು ಸಾಕಷ್ಟು ಪ್ರಮಾಣದಲ್ಲಿ ಇಲ್ಲ ಎಂದು ಖ್ವಾಜಾ ಸಂಸತ್ತಿನಲ್ಲಿ ತಿಳಿಸಿದರು.

2016: ಜಮ್ಮು:  ಸಾಂಬಾ ಜಿಲ್ಲೆಯಲ್ಲಿ ಬಿಎಸ್ಎಫ್ ಯೋಧರಿಂದ ಹಿಂದಿನ ದಿನ ಹತ್ಯೆಗೀಡಾದ ಮೂವರು ಉಗ್ರರು ಜಮ್ಮು ಮತ್ತು ಕಾಶ್ಮೀರದಲ್ಲಿ ರೈಲು ಸ್ಫೋಟ ನಡೆಸಲು ಸಕಲ ಸಿದ್ಧತೆ ನಡೆಸಿಕೊಂಡು ಬಂದಿದ್ದರು. ಅದಕ್ಕಾಗಿ ಐಇಡಿ ಸ್ಪೋಟಕ ಮತ್ತು ದ್ರವ ಸ್ಪೋಟಕಗಳನ್ನು ತಂದಿದ್ದರು ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದರು. ಗಡಿ ನುಸುಳಿ ದೇಶದೊಳಗಕ್ಕೆ ಪ್ರವೇಶಿಸಿದ್ದ ಉಗ್ರರು ಅತಿ ದೊಡ್ಡ ವಿಧ್ವಂಸಕ ಕೃತ್ಯ ಎಸಗಲು ಯೋಜನೆ ರೂಪಿಸಿದ್ದರು. ಅವರು ರೈಲು ಹಳಿ ಮತ್ತು ಚಲಿಸುತ್ತಿರುವ ರೈಲನ್ನು ಸ್ಪೋಟಿಸಲು ಸಿದ್ದರಾಗಿದ್ದರು. ಉದ್ದೇಶಕ್ಕಾಗಿ ಅವರು ತಂದಿದ್ದ ಚೈನ್ ಐಇಡಿ ಮತ್ತು ದ್ರವ ಸ್ಪೋಟಕಗಳನ್ನು ಬಿಎಸ್ಎಫ್ ವಶ ಪಡಿಸಿಕೊಂಡಿದೆ. ಉಗ್ರರ ಬಳಿಯಿಂದ ವಶಪಡಿಸಿಕೊಂಡಿರುವ ಚೈನ್ ಐಇಡಿಯನ್ನು ರೈಲ್ವೆ ಹಳಿ ಸ್ಪೋಟಿಸಲು ಬಳಸಲಾಗುತ್ತದೆ. ಜತೆಗೆ ದ್ರವ ರೂಪದ ಸ್ಪೋಟಕಗಳಿದ್ದು, ಇದರಿಂದ ಹಳಿಯನ್ನು ಸ್ಪೋಟಿಸಬಹುದು ಮತ್ತು ಬೆಂಕಿ ಹೊತ್ತಿಕೊಳ್ಳುವಂತೆ ಮಾಡಬಹುದು ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದರು. ಬಿಎಸ್ಎಫ್ ಯೋಧರು ಉಗ್ರರಿಂದ 5 ದ್ರವ ಐಇಡಿ, 3 ಐಇಡಿ ಬೆಲ್ಟ್, 5 ಚೈನ್ ಐಇಡಿ ಸೇರಿದಂತೆ ಅಪಾರ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

 2014: ನವದೆಹಲಿ: ಒಂದು ಕಾಲದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಯುಪಿಎ ಸರ್ಕಾರವನ್ನು ಒತ್ತಾಯಿಸಿದ್ದ ಬಿಜೆಪಿ ಈಗ ಅಧಿಕಾರಕ್ಕೆ ಬಂದಿದ್ದರೂ ಸರ್ಕಾರ ಮಾಹಿತಿ ಬಹಿರಂಗಕ್ಕೆ ನಿರಾಕರಿಸಿದ್ದು ಬೆಳಕಿಗೆ ಬಂದಿತು. ಈ ವರ್ಷದ ಜನವರಿಯಲ್ಲಿ ನೇತಾಜಿಯ 117ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಜೆಪಿ ಹಿರಿಯ ನಾಯಕರು ಸುಭಾಷ್ ಚಂದ್ರ ಬೋಸ್ ಬಗ್ಗೆ ಸರ್ಕಾರದ ಬಳಿಯಿರುವ 41 ವರ್ಗೀಕೃತ ದಾಖಲೆಗಳನ್ನು ಬಹಿರಂಗ ಪಡಿಸಲು ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ವ್ಯಕ್ತಿಯೊಬ್ಬರು ದಾಖಲೆ ಬಹಿರಂಗಕ್ಕೆ ಕೋರಿ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯ ನಿರಾಕರಿಸಿದ ಘಟನೆ ಘಟಿಸಿತು. ಪ್ರಧಾನಿ ಕಾರ್ಯಾಲಯ 41 ದಾಖಲೆಗಳ ಪೈಕಿ 2 ದಾಖಲೆಗಳನ್ನು ವರ್ಗೀಕೃತವಲ್ಲದ ದಾಖಲೆಗಳ ಪಟ್ಟಿಗೆ ಸೇರಿಸಿ ಉಳಿದ 39 ದಾಖಲೆಗಳನ್ನು ವರ್ಗೀಕೃತ ದಾಖಲೆ ಪಟ್ಟಿಯಲ್ಲೇ ಉಳಿಸಿಕೊಂಡಿದ್ದು, ದಾಖಲೆ ಬಹಿರಂಗಕ್ಕೆ ನಿರಾಕರಿಸಿತು. ದಾಖಲೆಗಳ ಬಹಿರಂಗದಿಂದ ಕೆಲವೊಂದು ದೇಶಗಳೊಂದಿಗೆ ಭಾರತದ ಸಂಬಂಧಕ್ಕೆ ಧಕ್ಕೆಯಾಗುತ್ತದೆ. ಆರ್​ಟಿಐನ ಸೆಕ್ಷನ್ 8(1)(ಎ) ಮತ್ತು ಸೆಕ್ಷನ್ 8(2)ರ ಅನ್ವಯ ದಾಖಲೆಗಳನ್ನು ಬಹಿರಂಗ ಪಡಿಸದೆ ಇರಬಹುದು ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿತು. ಇಡೀ ದೇಶವೇ ಸುಭಾಷ್ ಚಂದ್ರ ಬೋಸ್ ಸಾವಿನ ಕುರಿತು ಮಾಹಿತಿ ತಿಳಿದುಕೊಳ್ಳಲು ಉತ್ಸುಕವಾಗಿದೆ. ಆದರೆ ಸರ್ಕಾರ ದಾಖಲೆ ಬಿಡುಗಡೆಗೆ ಒಪ್ಪಿಗೆ ಸೂಚಿಸುತ್ತಿಲ್ಲ ಎಂದು ಮಾಹಿತಿ ಕೋರಿದ ಅರ್ಜಿದಾರರು ಹೇಳಿದರು..


2014: ಶ್ರೀನಗರ: ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಸುಮಾರು 25 ಸುತ್ತು ಗುಂಡು ಹಾರಿಸಿತು.. ಜಮ್ಮು ಮತ್ತು ಕಾಶ್ಮೀರದ ಸಾಂಬಾ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ನಿರಂತರ ಗುಂಡಿನ ದಾಳಿ ನಡೆಸಿದವು. ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಯೋಧರು ಈದಿನ ನಿರಂತರ ಒಂದೂ ಮುಕ್ಕಾಲು ಗಂಟೆ ಗುಂಡಿನ ದಾಳಿ ನಡೆಸಿದರು. ಇಂದು ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿನಲ್ಲಿ ಆರಂಭವಾದ ಗುಂಡಿನ ದಾಳಿ 12.45ರ ಸುಮಾರಿನಲ್ಲಿ ನಿಂತಿತು ಎಂದು ಸೇನಾ ಮೂಲಗಳು ತಿಳಿಸಿದವು. ಸಾಂಬಾ ವಿಭಾಗದ ಭಾರತೀಯ ಗಡಿಯಲ್ಲಿ ಭಾರತೀಯ ಯೋಧರು ನಿರ್ಮಿಸುತ್ತಿರುವ ನಿರ್ಮಾಣ ಕಾಮಗಾರಿಯನ್ನು ಗುರಿಯಾಗಿಸಿಕೊಂಡೇ ಪಾಕ್ ಪಡೆಗಳು ಗುಂಡಿನ ದಾಳಿ ನಡೆಸಿದವು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಅದೃಷ್ಟವಶಾತ್ ಘಟನೆಯಲ್ಲಿ ಯಾವೊಬ್ಬ ಭಾರತೀಯ ಯೋಧನಿಗೂ ಗಾಯಗಳಾಗಿಲ್ಲ. ಪಾಕ್ ಸೇನೆಯ ಉದ್ಧಟತನಕ್ಕೆ ಭಾರತೀಯ ಯೋಧರು ತಿರುಗೇಟು ನೀಡಿದ್ದು, ಪಾಕ್ ಪಡೆಗಳತ್ತ ಗುಂಡಿನ ದಾಳಿ ನಡೆಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿ ಹೆಚ್ಚಾಗುತ್ತಿದ್ದು, ಚಳಿಯಿಂದ ರಕ್ಷಣೆ ಪಡೆಯಲು ಮತ್ತು ಗಡಿಯನ್ನು ನಿರಂತರವಾಗಿ ಕಾಯುವ ಉದ್ದೇಶದಿಂದ ಭಾರತೀಯ ಗಡಿಯಲ್ಲಿ ಭಾರತೀಯ ಸೇನೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಇದು ಪಾಕಿಸ್ತಾನಿ ಪಡೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಇದನ್ನು ನಿಲ್ಲಿಸುವ ಉದ್ದೇಶದಿಂದಲೇ ದಾಳಿ ಮಾಡಿದ್ದಾರೆ ಎಂದು ಹೇಳಲಾಯಿತು.

2014: ಬೆಂಗಳೂರು: ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಮರಿ ಮೊಮ್ಮಗ ಮಧುಕೇಶ್ವರ ದೇಸಾಯಿ ಅವರ ಮದುವೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಿತು. ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರು ಕೂಡ ಆಗಿರುವ ಮಧುಕೇಶ್ವರ ದೇಸಾಯಿ ಅವರು ಕಿಲೋಸ್ಕರ್ ಸಂಸ್ಥೆಯ ಮಾಲೀಕರ ಮಗಳು ಮತ್ತು ಮುಂಬೈ ಮೂಲದ ಪತ್ರಕರ್ತೆಯಾದ ಸ್ನೇಹ ಮೆನನ್ ಈದಿನ ವಿವಾಹವಾದರು. ಬೆಂಗಳೂರಿನ ಹೆಬ್ಬಾಳದಲ್ಲಿರುವ ಕಾಫಿಬೋರ್ಡ್ ಲೇಔಟ್‌ನಲ್ಲಿರುವ ಕಿರ್ಲೋಸ್ಕರ್ ಹೌಸ್‌ನಲ್ಲಿ ಮಧುಕೇಶ್ವರ ದೇಸಾಯಿ ಮತ್ತು ಸ್ನೇಹ ಮೆನನ್ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ಸಮಾರಂಭಕ್ಕೆ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ, ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ, ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಮಾಜಿ ಶಾಸಕ ವಿ.ಸೋಮಣ್ಣ ಅವರು ಸೇರಿದಂತೆ ವಿವಿಧ ಗಣ್ಯರು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಲ್‌ಕೆ ಅಡ್ವಾಣಿ ಅವರು, ಬೆಂಗಳೂರಿಗೂ ನನಗೂ ನಿಕಟ ಸಂಬಂಧವಿದ್ದು, ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲವನ್ನು ಇಲ್ಲಿನ ಜೈಲಿನಲ್ಲಿ ಕಳೆದಿದ್ದೇನೆ ಎಂದು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. 'ಬೆಂಗಳೂರಿಗೆ ಬಂದು ತುಂಬಾ ದಿನಗಳಾಗಿದ್ದವು. ಅಲ್ಲದೆ ಬರುವಂಥ ಸಂದರ್ಭಗಳು ಎದುರಾಗಿರಲಿಲ್ಲ. ಹಿಂದೆ ಜನಚೇತನ ಯಾತ್ರೆ ವೇಳೆ ಇಲ್ಲಿಗೆ ಆಗಮಿಸಿದ್ದೆ. ಈಗ ಮಧು ಮದುವೆ ನನ್ನನ್ನು ಬೆಂಗಳೂರಿಗೆ ಕರೆತಂದಿದೆ ಎಂದು ಹೇಳಿದರು. ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಕುಟುಂಬದ ಕುಡಿಯಾಗಿರುವ ಮಧುಕೇಶ್ವರ ದೇಸಾಯಿ ಜಗದೀಶ್ ದೇಸಾಯಿ ಅವರ ಪುತ್ರರಾಗಿದ್ದು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಈ ಹಿಂದೆ ಎಲ್‌ಕೆ ಅಡ್ವಾಣಿ ಅವರು ಹಮ್ಮಿಕೊಂಡಿದ್ದ ಜನಚೇತನ ಯಾತ್ರೆಯ ಸಂದರ್ಭದಲ್ಲಿಯೂ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧುಕೇಶ್ವರ ದೇಸಾಯಿ ಅವರು ಮುಂದಾಳತ್ವ ವಹಿಸಿಕೊಂಡಿದ್ದರು.

2014: ಆಷ್​ಡಾಡ್: ಫಿಲ್ ಹ್ಯೂಸ್ ಸಾವು ಇನ್ನೂ ಹಸಿರಾಗಿರುವಾಗಲೇ ಕ್ರಿಕೆಟ್ ವಲಯಕ್ಕೆ ಮತ್ತೊಂದು ಆಘಾತಕಾರಿ ಸಾವಿನ ಸುದ್ದಿ ಅಪ್ಪಳಿಸಿತು. ವೇಗವಾಗಿ ಬಂದ ಚೆಂಡು ಕತ್ತಿಗೆ ಅಪ್ಪಳಿಸಿದ ಪರಿಣಾಮ ಭಾರತೀಯ ಮೂಲದ ಇಸ್ರೇಲ್ ತಂಡದ ಮಾಜಿ ನಾಯಕ, ಹಾಲಿ ಅಂಪೈರ್ ಹಿಲೆಲ್ ಅವಸ್ಕಾರ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದರು.. ಆಷ್​ಡಾಡ್ ಕರಾವಳಿ ನಗರದಲ್ಲಿ ನಡೆಯುತ್ತಿದ್ದ ಲೀಗ್ ಟೂರ್ನಿಯಲ್ಲಿ ಈ ಘಟನೆ ನವೆಂಬರ್ 29ರ ಶನಿವಾರ ಸಂಭವಿಸಿದೆ ಎಂದು ವರದಿ ತಿಳಿಸಿತು. ಚೆಂಡು ಮೊದಲು ಸ್ಟಂಪ್ ತಗುಲಿ ಬಳಿಕ ಹಿಲೆಲ್ ಅವಸ್ಕಾರ್ ಅವರ ಕತ್ತಿಗೆ ಬಡಿದಿದ್ದು, ತಕ್ಷಣ ಅವಸ್ಕಾರ್ ಪ್ರಜ್ಞೆ ತಪ್ಪಿ ನೆಲಕ್ಕೆ ಕುಸಿದು ಬಿದ್ದರು. ತಕ್ಷಣ ಆಟಗಾರರೆಲ್ಲ ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಪ್ರಯೋಜನಕಾರಿಯಾಗದೇ ಪ್ರಾಣ ಕಳೆದುಕೊಂಡರು ಎಂದು ಪಂದ್ಯದಲ್ಲಿ ಆಡುತ್ತಿದ್ದ ಆಟಗಾರ ಯೋನಾ ತಿಳಿಸಿದರು. 55 ವರ್ಷ ವಯಸ್ಸಿನ ಅವಸ್ಕಾರ್ ಮೂಲತಃ ಮುಂಬೈ ಮೂಲದವರಾಗಿದ್ದು, 1982ರಿಂದ 1997ರ ತನಕ ಇಸ್ರೇಲ್ ತಂಡದ ನಾಯಕರಾಗಿ ಕಾರ್ಯನಿರ್ವಹಿಸಿದ್ದರು. ಅವಸ್ಕಾರ್ ಸಾವಿನ ಬಗ್ಗೆ ಇಸ್ರೇಲ್​ನ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ವೈದ್ಯರು, ಅವಸ್ಕಾರ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ಚಿಕಿತ್ಸೆ ಫಲಕಾರಿಯಾಗುವ ಸ್ಥಿತಿಯಲ್ಲಿರಲಿಲ್ಲ. ಅವರು ಹೃದಯಾಘಾತದಿಂದ ಪ್ರಾಣಬಿಟ್ಟಿದ್ದಾರೆ ಎಂದು ತಿಳಿಸಿದರು. ಮೊನ್ನೆ ಮೊನ್ನೆಯಷ್ಟೇ ಆಸ್ಟ್ರೇಲಿಯಾದಲ್ಲಿ ನಡೆದ ದೇಶಿ ಕ್ರಿಕೆಟ್ ಪಂದ್ಯದಲ್ಲಿ ಅಬೋಟ್ ಎಸೆದ ವೇಗದ ಚೆಂಡು ತಗುಲಿ ಫಿಲ್ ಹ್ಯೂಸ್ ಕೆಲವೇ ಘಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಈ ಆಘಾತವನ್ನು ಮರೆಯುವುದಕ್ಕೂ ಮುನ್ನವೇ ಇಂತದೇ ಮತ್ತೊಂದು ಘಟನೆ ಕ್ರಿಕೆಟ್ ವಲಯದಲ್ಲಿ ಇನ್ನಷ್ಟು ಆತಂಕ ಮೂಡಿಸುವಂತೆ ಮಾಡಿತು.

2014:) ಅಟ್ಟಾರಿ (ಪಂಜಾಬ್): ಗುಜರಾತಿನ 35 ಮಂದಿ ಮೀನುಗಾರರು ಸೇರಿದಂತೆ 40 ಮಂದಿ ಭಾರತೀಯ ಕೈದಿಗಳನ್ನು ಪಾಕಿಸ್ತಾನವು ಬಿಡುಗಡೆ ಮಾಡಿದೆ ಎಂದು ಗಡಿ ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದರು. ಕೈದಿಗಳನ್ನು 29 ನವೆಂಬರ್ 2014ರ ಶನಿವಾರ ತಡವಾಗಿ ಅಮೃತಸರದಿಂದ 30 ಕಿ.ಮೀ. ದೂರದ ಇಲ್ಲಿನ ಅಟ್ಟಾರಿ-ವಾಘಾ ಚೆಕ್​ಪೋಸ್ಟ್​ಗೆ ಕರೆತಂದ ಪಾಕಿಸ್ತಾನಿ ಸೈನಿಕರು ಭಾರತದ ಗಡಿ ಭದ್ರತಾ ಪಡೆ ವಶಕ್ಕೆ ಒಪ್ಪಿಸಿದರು. ಪಾಕಿಸ್ತಾನಿ ಜಲಪ್ರದೇಶ ಪ್ರವೇಶಿಸಿದ್ದಕ್ಕಾಗಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಬಹುತೇಕ ಕೈದಿಗಳು ಪಾಕಿಸ್ತಾನಿ ಸೆರೆಮನೆಗಳಲ್ಲಿ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ಇದ್ದರು.

2014: ಥಾಣೆ (ಮಹಾರಾಷ್ಟ್ರ): ರಾಸಾಯನಿಕ ವಿಷದ ಪ್ರಭಾವದಿಂದ 601 ಜನರು ಅಸ್ವಸ್ಥವಾಗಿರುವ ಘಟನೆ ಮಹಾರಾಷ್ಟ್ರದ ಧಾಣಿ ಬಳಿಯ ಉಲ್ಲಾಸ ನಗರ ಪ್ರದೇಶದಲ್ಲಿ ಘಟಿಸಿತು. ಉಲ್ಲಾಸ ನಗರದ ಬಳಿಯ ತೊರೆಯಲ್ಲಿ ರಾಸಾಯನಿಕ ಸಾಗಿಸುವ ಟ್ಯಾಂಕರ್​ನ್ನು ತೊಳೆದಿದ್ದರು.  ಆ ನೀರನ್ನು ಉಪಯೋಗಿಸಿದ ಜನರಲ್ಲಿ ಉಸಿರಾಟದ ಸಮಸ್ಯೆ ಕಂಡು ಬಂದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. 601 ಜನರನ್ನು 5 ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಪಡೆದ ನಂತರ ಬಹುತೇಕರನ್ನು ಬಿಡುಗಡೆ ಮಾಡಲಾಯಿತು. ಹಿಂದಿನ ದಿನ ಉಸಿರಾಟದ ತೊಂದರೆ, ಕಣ್ಣುಗಳಲ್ಲಿ ಉರಿ ಮತ್ತು ತಲೆಸುತ್ತಿನ ಸಮಸ್ಯೆಗಳಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಹಾನಿಕಾರಕ ರಾಸಾಯನಿಕ ಮೊದಲಿಗೆ ಅಂಬೆರ್​ನಾಥ್ ಬಳಿ ತೊರೆಗೆ ಸೇರಿದೆ. ನಂತರ ಈ ಕಲುಷಿತ ನೀರು ಉಲ್ಲಾಸನಗರದ ಬಳಿ ಹರಿಯುವ ವಾಲ್ದುನಿ ನದಿಗೆ ಸೇರ್ಪಡೆಯಾಗಿತ್ತು. ಆ ನೀರನ್ನು ಸೇವಿಸಿದ್ದರಿಂದ ಜನರು ಅಸ್ವಸ್ಥರಾದರು ಎಂದು ಹೇಳಲಾಯಿತು.


2014: ಶಾರ್ಜಾ: ಅಸಾದ್ ಶಫೀಕ್ (137 ರನ್) ಶತಕದ ನಡುವೆಯೂ ಟ್ರೆಂಟ್ ಬೌಲ್ಟ್ (38ಕ್ಕೆ 4) ಹಾಗೂ ಮಾರ್ಕ್ ಕ್ರೇಗ್ (109ಕ್ಕೆ 3) ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಶಾರ್ಜಾ ಸ್ಟೇಡಿಯಂನಲ್ಲಿ ನಡೆದ 3ನೇ ಮತ್ತು ಕಡೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇನಿಂಗ್ಸ್ ಹಾಗೂ 80 ರನ್ ಸೋಲನುಭವಿಸಿತು, ಪರಿಣಾಮ 3 ಪಂದ್ಯಗಳ ಟೆಸ್ಟ್ ಸರಣಿ 1-1 ಸಮಬಲದಲ್ಲಿ ಅಂತ್ಯಗೊಂಡಿತು. ಅಬುಧಾಬಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಗೆದ್ದಿದ್ದರೆ, 2ನೇ ಟೆಸ್ಟ್ ಡ್ರಾಗೊಂಡಿತ್ತು. 339 ರನ್ ಹಿನ್ನಡೆಯೊಂದಿಗೆ 4ನೇ ದಿನದಾಟವಾದ ಈದಿನ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕ್, 259 ರನ್​ಗೆ ಸರ್ವಪತನ ಕಂಡಿತು. ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 351 ರನ್ ಗಳಿಸಿದ್ದರೆ, ನ್ಯೂಜಿಲೆಂಡ್ 690 ರನ್ ಕಲೆಹಾಕಿತು. ಕ್ರೇಗ್ ಪಂದ್ಯಶ್ರೇಷ್ಠ ಹಾಗೂ ಮೊಹಮ್ಮದ್ ಹಫೀಜ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.
 
2008: ದೇಶದಲ್ಲಿ ಕಳೆದ ಏಳು ತಿಂಗಳಲ್ಲಿ 70 ಕಡೆ ಸರಣಿ ಸ್ಛೋಟಗಳು ನಡೆದ ನಂತರ ವ್ಯಾಪಕ ಟೀಕೆಗೆ ಒಳಗಾಗಿದ್ದ ಗೃಹಸಚಿವ ಶಿವರಾಜ್ ಪಾಟೀಲ್ ಕೊನೆಗೂ ರಾಜೀನಾಮೆ ನೀಡಿದರು. ಪಾಟೀಲ್ ರಾಜೀನಾಮೆ ಹಿನ್ನೆಲೆಯಲ್ಲಿ ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಗೃಹ ಸಚಿವರನ್ನಾಗಿ ನೇಮಿಸಲಾಯಿತು. ಅರ್ಥಶಾಸ್ತ್ರಜ್ಞರೂ ಆದ ಪ್ರಧಾನಿ ಮನಮೋಹನ್ ಸಿಂಗ್ ಹೆಗಲಿಗೆ ಹಣಕಾಸಿನ ಹೊಣೆ ಏರಿತು. ಹಿಂದಿನ ದಿನ ರಾತ್ರಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ (ಸಿಡಬ್ಲ್ಯೂಸಿ) ರಾಜೀನಾಮೆ ನೀಡಲು ಸಿದ್ಧರಿರುವುದಾಗಿ ತಿಳಿಸಿದ್ದ ಪಾಟೀಲ್, ಈದಿನ ಬೆಳಿಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿದರು. ಅವರ ರಾಜೀನಾಮೆಯನ್ನು ರಾಷ್ಟ್ರಪತಿ ಅಂಗೀಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿತು.

2008: ಭಾರತಕ್ಕೆ 26 ಅಶುಭ ಸೂಚಕವೇ?  ಈ ಮೊದಲು ವಿಶ್ವದಾದ್ಯಂತ 13ಅನ್ನು ಅಶುಭ ಸೂಚಕ ಸಂಖ್ಯೆ ಎಂದೇ ಬಹಳಷ್ಟು ಜನರು ಪರಿಗಣಿಸುತ್ತಿದ್ದರು. ಈಗ ಭಾರತೀಯರ ಪಾಲಿಗೆ 26 ಅಶುಭ ಸೂಚಕ ದಿನವಾಗಿ ಕಾಣಿಸುತ್ತಿರುವುದು ಹೊಸ ಸಂಗತಿ. ಸುಮ್ಮನೇ ಈ ದಿಸೆಯಲ್ಲಿ ಒಂದು ಸಣ್ಣ ಸಿಂಹಾವಲೋಕನ ಮಾಡಿದರೆ ಸಾಕು 26 ಭಾರತೀಯರ ಪಾಲಿಗೆ ಎಷ್ಟೊಂದು ಅಶುಭ ಘಟನೆಗಳನ್ನು ತನ್ನ ಮಡಿಲಲ್ಲಿ ಅಡಗಿಸಿಕೊಂಡಿದೆ ಎಂಬುದು ಅರ್ಥವಾಗುತ್ತದೆ. 2001ರ ಮೇ ತಿಂಗಳಿನಲ್ಲಿ ಗುಜರಾತಿನ ಕಛ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪದ ದಿನ 26, 2004ರ ಡಿಸೆಂಬರ್ 26ರಂದು ಅಪ್ಪಳಿಸಿದ ಸುನಾಮಿ, 2007ರ ಮೇ ತಿಂಗಳಿನ 26ರಂದು ಗುವಾಹಟಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಹಾಗೂ ಇದೇ ವರ್ಷದ ಸೆಪ್ಟೆಂಬರ್ 26ರಂದು ಅಹಮದಾಬಾದಿನಲ್ಲಿ ಸಂಭವಿಸಿದ ಬಾಂಬು ಸ್ಫೋಟ ಮತ್ತು ಎಂದೆಂದಿಗೂ ಮರೆಯಲಾಗದಂತಹ ಮುಂಬೈನ ಮೇಲಿನ  ದಾಳಿ ನವೆಂಬರ್ ತಿಂಗಳ 26ರಂದೇ ನಡೆದಿರುವುದು ಈ ಹೊಸ ಲೆಕ್ಕಾಚಾರಗಳಿಗೆ ದಾರಿ ಮಾಡಿಕೊಟ್ಟಿತು. ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳ ಪ್ರಕಾರ ಇದೇನೂ ಕಾಕತಾಳೀಯವಲ್ಲ. ಸಂಖ್ಯಾಶಾಸ್ತ್ರದ ಅನುಸಾರ 26 ಅತ್ಯಂತ ದುರದೃಷ್ಟ ಸೂಚಕ ಸಂಖ್ಯೆ. 2+6=8 ಅಂದರೆ ಇದು ವಿನಾಶವನ್ನು ಸೂಚಿಸುತ್ತದೆ ಎಂದು ಮುಂಬೈನ ಸಂಖ್ಯಾಶಾಸ್ತ್ರಜ್ಞ ಸಂಜಯ್ ಜುಮಾನಿ ಅಭಿಪ್ರಾಯ. ಮುಂಬೈ ದಾಳಿಯ ದಿನವನ್ನು ಕೇವಲ ಸಂಖ್ಯಾಶಾಸ್ತ್ರದ ಆಧಾರದಲ್ಲೇ ಗಮನಿಸುವುದು ತರವಲ್ಲ ಎಂದು ಖ್ಯಾತ ಜ್ಯೋತಿಷಿ ಬೇಜನ್ ದಾರುವಾಲ ಹೇಳುತ್ತಾರೆ. ಮುಂಬೈ ದಾಳಿಗೆ ಜ್ಯೋತಿಷ್ಯದಲ್ಲೂ ಕಾರಣಗಳು ದೊರೆಯುತ್ತವೆ ಎಂಬುದು ಅವರ ಪ್ರತಿಪಾದನೆ. ಕುಜ ಮತ್ತು ಶನಿ ಸಮಾಗಮದಲ್ಲಿರುವುದರಿಂದ ಈ ಕಾಲವನ್ನು 'ಅಂಗಾರ ಯೋಗ' ಎಂದು ಕರೆಯಲಾಗುತ್ತದೆ. ಇದು ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ ಎಂಬುದು ಅವರ ಅಂಬೋಣ. ಪ್ರಧಾನಿ ಮನಮೋಹನ ಸಿಂಗ್ ಅವರು ಸೆಪ್ಟೆಂಬರ್ 26ರಂದೇ ಜನಿಸಿದ್ದಾರೆ. ನಮ್ಮ ಗಣರಾಜ್ಯೋತ್ಸವ ದಿನದ ಆಚರಣೆಯೂ ಜನವರಿ 26ರಂದು. ಹಾಗಂತ ಈ ಸಂಖ್ಯೆ ಸದಾ ಅಶುಭ ಸೂಚಕ ಎಂದು ನಾವು ಭಾವಿಸಬೇಕಾಗಿಲ್ಲ. ಸಂಖ್ಯಾಶಾಸ್ತ್ರ ಎಲ್ಲ ಸಮಯದಲ್ಲೂ ಕೆಲಸ ಮಾಡುವುದಿಲ್ಲ ಎಂದೂ ಅವರು ಹೇಳುತ್ತಾರೆ. 2008ರಲ್ಲಿ 26ರಂದು ಎರಡು ಬಾರಿ ಭಯೋತ್ಪಾದಕರ ದುಷ್ಕೃತ್ಯಗಳು ಜರುಗಿವೆ. ಇನ್ನೆರಡು 13ರಂದು ನಡೆದಿವೆ. ಜೈಪುರ ಬಾಂಬ್ ಸ್ಫೋಟದ ಘಟನೆಗಳು ನಡೆದದ್ದು ಮೇ 13 ಮತ್ತು ಅಹಮದಾಬಾದಿನಲ್ಲಿ ಜುಲೈ 26ರಂದು. ದೆಹಲಿಯಲ್ಲಿ ಸೆಪ್ಟೆಂಬರ 13ರಂದು ನಡೆದರೆ ಮುಂಬೈನಲ್ಲಿ 26 ರಂದು ಉಗ್ರರ ದಾಳಿ ಪ್ರಕರಣಗಳು ಸಂಭವಿಸಿವೆ.  ಈ ಮುಂಚೆಯೂ ಭಾರತ 13ನೇ ದಿನಾಂಕದಂದು ಭಾರಿ ದಾಳಿಗಳನ್ನು ಎದುರಿಸಿದೆ. ಮುಂಬೈಯಲ್ಲಿ 2003ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳು ಮಾರ್ಚ್ 13ರಂದು ನಡೆದಿದ್ದರೆ, ಸಂಸತ್ ಭವನದ ಮೇಲಿನ ದಾಳಿ ನಡೆದದ್ದು ಡಿಸೆಂಬರ್ 13ರಂದು. ಸಂಖ್ಯಾಶಾಸ್ತ್ರಜ್ಞರ ಪ್ರಕಾರ 13 ಮತ್ತು 26 ಎರಡೂ ದುರದೃಷ್ಟದ ಸಂಖ್ಯೆಗಳೇ. 13 ನಾವು ನಿರೀಕ್ಷಿಸದ ಸಂಗತಿಗಳನ್ನು ನಮಗೆ ಸಾದರಪಡಿಸಬಲ್ಲುದು. ಸ್ಪಲ್ಪ ಎಚ್ಚರಿಕೆಯಿಂದ ಇರದೆ ಹೋದರೆ ಈ ದಿನ ಅಪಾಯ ತಪ್ಪಿದ್ದಲ್ಲ. 26 ವಿನಾಶವನ್ನು ಹೊತ್ತು ತರಬಹುದಾದ ಸಂಖ್ಯೆ ಎನಿಸಿದರೂ ಅದು ಉತ್ತಮ ದಿನವೇ ಎಂಬುದು ನೀರಜ್ ಮನ್‌ ಚಂದಾ ಅನಿಸಿಕೆ. ಭಾರತಕ್ಕೆ ಸ್ವಾತಂತ್ರ್ಯ ದೊರೆತ 62ನೇ ವರ್ಷ ಅಷ್ಟೇನೂ ಶುಭದಾಯಕ ವರ್ಷವಲ್ಲ ಎಂಬುದು ಜುಮಾನಿ ಅಭಿಪ್ರಾಯ. ಸಂಕಲನದ ದೃಷ್ಟಿಯಿಂದ 62 ಮತ್ತು 26 ರ ಎರಡೂ ಸಂಖ್ಯೆಗಳ ಮೊತ್ತ 8 ಆಗುತ್ತದೆ. ಆದ್ದರಿಂದ ಎರಡೂ ಒಂದೇ ಪರಿಣಾಮ ಹೊಂದಿವೆ. ಇದರಿಂದಾಗಿ ಭಾರತದ ಮೇಲೆ ಈ ವರ್ಷ ದಾಳಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿವೆ ಎಂಬುದು ಅವರ ಅಂದಾಜು. ಮನ್‌ ಚಂದಾ ಅವರ ಪ್ರಕಾರ 2 ಚಂದ್ರನನ್ನು ಪ್ರತಿನಿಧಿಸಿದರೆ 6 ಶುಕ್ರನೊಂದಿಗೆ ಗುರುತಿಸಿಕೊಳ್ಳುತ್ತದೆ. ಇವೆರಡೂ ಒಟ್ಟಾದಾಗ ಭಾರಿ ಅನಾಹುತಗಳು ಸಂಭವಿಸುವ ಸಾಧ್ಯತೆಗಳಿರುತ್ತವೆ. ಅದಕ್ಕಾಗಿಯೇ 26ನ್ನು ಕ್ರೂರ ದಿನ ಎಂದು ಭಾವಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.

2008:  2004ರಲ್ಲಿ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ದೇಶದ ವಿವಿಧ ಭಾಗಗಳಲ್ಲಿ ನಡೆದ ಸುಮಾರು 25 ಸಾವಿರ ಭಯೋತ್ಪಾದಕ ಹಾಗೂ ಇನ್ನಿತರ ಉಗ್ರಗಾಮಿಗಳ ಹಾವಳಿಯಲ್ಲಿ ಒಟ್ಟು ಏಳು ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. 2004ರಲ್ಲಿ ನಡೆದ 6,029 ಘಟನೆಗಳಲ್ಲಿ 1,721 ಜನರು ಸತ್ತಿದ್ದಾರೆ. 2005ರಲ್ಲಿ 5,709 ಘಟನೆಗಳಲ್ಲಿ 1,598, 2006ರಲ್ಲಿ 5,240 ಘಟನೆಗಳಲ್ಲಿ  1,352 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಖಾತೆಯು ಬಹಿರಂಗಪಡಿಸಿರುವ ಅಂಕಿ ಅಂಶಗಳು ತಿಳಿಸಿದವು.  2007ರಲ್ಲಿ ನಡೆದ 4,709 ಘಟನೆಗಳಲ್ಲಿ 1,215 ಜನರು ಮಡಿದರು.
2008ರಲ್ಲಿ ಕಳೆದ ಸೆಪ್ಟೆಂಬರದವರೆಗೆ 3,157 ಘಟನೆಗಳಲ್ಲಿ 760 ಜನರು ಮೃತರಾದರು. ಹೈದರಾಬಾದ್ ಬಾಂಬ್ ಸ್ಫೋಟದಲ್ಲಿ 40 ಜನರು, ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದ ಸ್ಫೋಟದಲ್ಲಿ 68 ಜನರು , ರೈಲು ಮತ್ತು ಮಾಲೆಗಾಂವ್ ಸರಣಿ ಸ್ಫೋಟಗಳಲ್ಲಿ ಮುಂಬೈನಲ್ಲಿ 230 ಮಂದಿ ಸತ್ತಿದ್ದರು. ಹಿಂದಿನವಾರ ಮುಂಬೈಯಲ್ಲಿ ನಡೆದ ದಾಳಿಯಲ್ಲಿ 183 ಜನರು ಸತ್ತರು. ಎನ್‌ಡಿಎ ಆಡಳಿತ ಕಾಲದಲ್ಲಿ ನಡೆದ 36,259 ಘಟನೆಗಳಲ್ಲಿ 11,714 ಮಂದಿ ಸತ್ತಿದ್ದರು. ಎನ್‌ಡಿಎ ಆಡಳಿತದ ಪ್ರಮುಖ ಘಟನೆಗಳೆಂದರೆ ಸಂಸತ್ ಭವನ, ಅಕ್ಷರಧಾಮ ದೇವಸ್ಥಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲಿನ ದಾಳಿಗಳು ಎಂದು ಗೃಹಖಾತೆ ಅಂಕಿ ಅಂಶಗಳು ತಿಳಿಸಿದವು.

2008: ದಕ್ಷಿಣ ಆಸ್ಟ್ರೇಲಿಯಾದ ಸ್ಯಾಂಡಿ ಕ್ಯಾಪ್ ಸಮುದ್ರ ತೀರದಲ್ಲಿ ಬಂಡೆಗಳ ನಡುವೆ ಸಿಕ್ಕಿಹಾಕಿಕೊಂಡ 80 ತಿಮಿಂಗಿಲಗಳು ಸಮುದ್ರಕ್ಕೆ ಹಿಂದಿರುಗಲಾರದೆ ಸಾವನ್ನಪ್ಪಿದವು. ರಕ್ಷಣಾ ತಂಡದ ನೆರವು ಲಭಿಸುವ ವೇಳೆಗೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದರು.

2008:  ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ವ್ಯಾಸರಾಯ ಬಲ್ಲಾಳ ಸಭಾಂಗಣದಲ್ಲಿ ನಡೆದ 'ಆಳ್ವಾಸ್ ನುಡಿಸಿರಿ-2008' ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಾಡೋಜಿ ದರೋಜಿ ಈರಮ್ಮ, ಗೊ.ರು. ಚನ್ನ್ಗಸಪ್ಪ, ಡಾ.ಸಾ.ಶಿ. ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ, ನಾಡೋಜ ಜಾನಪದ ಸಿರಿ ಸಿರಿಯಜ್ಜಿ ಅವರಿಗೆ ಹಾಗೂ ಬಹ್ರೈನಿನ ಕನ್ನಡ ಸಂಘಕ್ಕೆ 'ಆಳ್ವಾಸ್ ನುಡಿಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರದಾನ ಮಾಡಿದರು. ಸಮ್ಮೇಳನಾಧ್ಯಕ್ಷ ನಾಡೋಜ ಡಾ. ಚನ್ನವೀರ ಕಣವಿ ಅಧ್ಯಕ್ಷತೆ ವಹಿಸಿದ್ದರು.

2007: `ಮಿಸೈಲ್ ಮ್ಯಾನ್' ಎಂದೇ ಗುರುತಿಸಿಕೊಂಡ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು `ಇ-ಪತ್ರಿಕೆ' ಆರಂಭಿಸುವ ಮೂಲಕ ಇದೀಗ `ಮೀಡಿಯಾ ಮ್ಯಾನ್' ಆದರು. ದೇಶದ ಯಶೋಗಾಥೆಯನ್ನು ಬಿಂಬಿಸುವ ಹಾಗೂ ಜ್ಞಾನ ಪ್ರಸಾರದ ಉದ್ದೇಶವುಳ್ಳ `ಬಿಲಿಯನ್ ಬೀಟ್ಸ್' ಪಾಕ್ಷಿಕ ಇ-ಪತ್ರಿಕೆಗೆ ಕಲಾಂ ಚಾಲನೆ ನೀಡಿದರು. ಕಲಾಂ ಅವರ www.abdulkalam.com  ನಲ್ಲಿ ಇ-ಪತ್ರಿಕೆಯ ಆವೃತ್ತಿ ಓದಲು ಸಿಗುತ್ತದೆ.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ  ನಿರ್ದೇಶಕರ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಮ್ಮ ಅಂಕಿತ ಹಾಕಿದರು. ಬಿಜೆಪಿ ಹಾಗೂ ಎಐಎಡಿಎಂಕೆ ವಿರೋಧದ ನಡುವೆಯೂ ಎರಡು ದಿನಗಳ ಹಿಂದೆ ಏಮ್ಸ್ ತಿದ್ದುಪಡಿ ಮಸೂದೆಗೆ ಸಂಸತ್ ಅಂಗೀಕಾರ ನೀಡಿತ್ತು.

2007: ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ದೇವರ ಮುಂದೆ ಪಾದರಕ್ಷೆ ಧರಿಸಿ ಕುಳಿತಿದ್ದುದಕ್ಕಾಗಿ ಬಾಲಿವುಡ್ ನಟಿ ಖುಷ್ಬೂ ವಿರುದ್ಧ ರಾಮೇಶ್ವರಂನಲ್ಲಿ ಮತ್ತೊಂದು ಮೊಕದ್ದಮೆ ದಾಖಲಾಯಿತು. ಹಿಂದೂ ಮುನ್ನಣಿ ಸಂಘಟನೆಯ ಸ್ಥಳೀಯ ಕಾರ್ಯದರ್ಶಿ ರಾಮಮೂರ್ತಿ ಅವರು ರಾಮೇಶ್ವರದ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದರು. ಹಿಂದೂ ಮಕ್ಕಳ್ ಕಚ್ಚಿ ಸಂಘಟನೆಯ ಕಾರ್ಯಕರ್ತ ಬಿ.ಆರ್. ಕುಮಾರ್ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದರು.

2007: ನವದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ವಿಶ್ವ ಪರಂಪರೆ ಸ್ಥಾನಮಾನ ನೀಡಿದ ಪ್ರಮಾಣಪತ್ರವನ್ನು ನವದೆಹಲಿಯಲ್ಲಿ ಯುನೆಸ್ಕೋ ಮಹಾನಿರ್ದೇಶಕ ಕೊಯಿಚಿರೋ ಮತ್ಸೂರ ಅವರು ಅಧಿಕೃತವಾಗಿ ಅಭಿಜಿತ್ ಸೇನ್ ಗುಪ್ತಾ ಅವರಿಗೆ ಹಸ್ತಾಂತರಿಸಿದರು. ವಿಶ್ವಪರಂಪರೆಯ ಸ್ಥಾನ ಪಡೆದ ಪಟ್ಟಿಗೆ ಸೇರಿದ 27ನೇ ಸ್ಥಳ ಎಂಬ ಖ್ಯಾತಿ ಕೆಂಪುಕೋಟೆಗೆ ಲಭಿಸಿದೆ.

2007: ಯಶವಂತಪುರ- ಮಂಗಳೂರು-ಯಶವಂತಪುರ ಎಕ್ಸ್ಪ್ರೆಸ್ ರೈಲು ಸಂಚಾರವು 2007 ಡಿಸೆಂಬರ್ 8 ರಿಂದ ಆರಂಭವಾಗುವುದು ಎಂದು ನೈಋತ್ಯ ರೈಲ್ವೇ ವಲಯ ಪ್ರಕಟಿಸಿತು. ಮಂಗಳೂರಿನಿಂದ ರೈಲು ಪ್ರಯಾಣ ಡಿಸೆಂಬರ್ 9ರಿಂದ ಆರಂಭವಾಗುವುದು. ರೈಲ್ವೇ ಪ್ರಯಾಣ ದರವನ್ನೂ ಅದು ನಿಗದಿ ಪಡಿಸಿತು.

2007: ವಿವಾದಗಳಿಗೆ ಕಾರಣವಾಗಿರುವ ತಮ್ಮ ಆತ್ಮಕತೆ 'ದ್ವಿಖಂಡಿತ'ದಲ್ಲಿನ ವಿವಾದಾತ್ಮಕ ಭಾಗ ವನ್ನು ಹಿಂದಕ್ಕೆ ತೆಗೆದುಕೊಳ್ಳುವುದಾಗಿ ಬಾಂಗ್ಲಾದೇಶದ  ಲೇಖಕಿ ತಸ್ಲೀಮಾ ನಸ್ರೀನ್ ಕೋಲ್ಕತ್ತಾದಲ್ಲಿ ಪ್ರಕಟಿಸಿದರು. ಈ ಮೂಲಕ ತಮ್ಮ ಮೇಲೆ ಹೆಚ್ಚಿದ ಒತ್ತಡಗಳಿಗೆ ತಸ್ಲೀಮಾ ಮಣಿದರು.

2007: ಅಮೆರಿಕದ ವಾಣಿಜ್ಯ ಸಮುಚ್ಚಯವಾಗಿದ್ದ ಅವಳಿ ಗೋಪುರದ ಮೇಲೆ ನಡೆದ ದಾಳಿಯ ಹಿಂದೆ ತಾನೊಬ್ಬನೇ ಇರುವುದಾಗಿ ಖಾಸಗಿ ಟಿವಿ ಚಾನೆಲ್ ಅಲ್-ಜಜೀರಾಗೆ ಕಳುಹಿಸಿರುವ ಟೇಪಿನಲ್ಲಿ ಕುಖ್ಯಾತ ಭಯೋತ್ಪಾದಕ ಅಲ್ ಖೈದಾ ಧುರೀಣ ಬಿನ್ ಲಾಡೆನ್ ಹೇಳಿಕೊಂಡ. ಅಮೆರಿಕ ಜೊತೆಗಿನ ಸಂಬಂಧ ಕಡಿದುಕೊಳ್ಳುವಂತೆ ಹಾಗೂ ಆಪ್ಘಾನಿಸ್ಥಾನ ತೊರೆಯುವಂತೆ ಯುರೋಪಿಯನ್ನರಿಗೆ ಕರೆ ನೀಡಿದ ಲಾಡೆನ್ ನ್ಯೂಯಾರ್ಕ್ ಹಾಗೂ ವಾಷಿಂಗ್ಟನ್ ಮೇಲೆ ನಡೆದ ಈ ದಾಳಿಗೆ ತಾನೊಬ್ಬನೇ ಹೊಣೆಗಾರ' ಎಂದು ಘೋಷಿಸಿದ.

2007: ಅತ್ಯಂತ ಕಿರಿಯ ಸೌರ ಮಂಡಲವನ್ನು ಖಗೋಳ ಶಾಸ್ತ್ರಜ್ಞರು ಪತ್ತೆಹಚ್ಚಿದರು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದ ಸಂಶೋಧಕರು ಸುಮಾರು ಹತ್ತು ಲಕ್ಷ ವರ್ಷಗಳಷ್ಟು ಹಳೆಯದು ಎನ್ನಲಾದ ಕಿರಿಯ ನಕ್ಷತ್ರಗಳಾದ `ಯುಎಕ್ಸ್ ತೌ ಎ' ಮತ್ತು `ಎಲ್ ಕೆಕಾ 15'ಗಳ ಸುತ್ತಮುತ್ತ ಈ ಹೊಸ ಸೌರ ಮಂಡಲವನ್ನು ಕಾಣಬಹುದೆಂದು ಪ್ರಕಟಿಸಿದರು. ಈ ಸೌರ ಮಂಡಲವು ತಾರಸ್ ನಕ್ಷತ್ರದ ರಚನಾ ಪ್ರದೇಶದಲ್ಲಿದ್ದು ಕೇವಲ 450 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿ ಇದೆ ಎಂದು ಸಂಶೋಧಕರನ್ನು ಉಲ್ಲೇಖಿಸಿ ವಾಷಿಂಗ್ಟನ್ನಿನ ವಿಜ್ಞಾನ ಪತ್ರಿಕೆಯೊಂದು ವರದಿ ಮಾಡಿತು.

2007: ಮಧ್ಯ ಟರ್ಕಿಯ ಕೆಸಿಬೊರ್ಲು ನಗರದ ಬಳಿ ಅಟ್ಲಾಸ್ ಜೆಟ್ ವಿಮಾನವೊಂದು ಅಪಘಾತಕ್ಕೀಡಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಒಟ್ಟು 56 ಮಂದಿ ಮೃತರಾದರು. 7 ಸಿಬ್ಬಂದಿ ಹಾಗೂ 49 ಪ್ರಯಾಣಿಕರನ್ನು ಹೊತ್ತು ಇಸ್ತಾಂಬುಲ್ ನಿಂದ ಇಸ್ಪಾರ್ತ ನಗರಕ್ಕೆ ಹೊರಟಿದ್ದಾಗ ಈ ಎಂಡಿ 83 ಜೆಟ್ ಲೈನರ್ ಅಪಘಾತಕ್ಕೀಡಾಯಿತು.

2006: ಉತ್ತರ ಪ್ರದೇಶದ ಕಾನ್ಪುರದಲ್ಲಿ ಅಂಬೇಡ್ಕರ್ ವಿಗ್ರಹ ವಿರೂಪ ಘಟನೆಗೆ ಪ್ರತಿಕ್ರಿಯೆಯಾಗಿ ಮಹಾರಾಷ್ಟ್ರದಲ್ಲಿ ಭುಗಿಲೆದ್ದ ಹಿಂಸಾಚಾರ, ಗೋಲಿಬಾರಿಗೆ ನಾಲ್ವರು ಬಲಿಯಾದರು.

2006: ಮುಸ್ಲಿಂ ಸಮುದಾಯವು ಸೌಲಭ್ಯ ವಂಚಿತವಾಗಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ರಾಜಿಂದರ್ ಸಾಚಾರ್ ಸಮಿತಿಯು  ಮುಸ್ಲಿಂ ಸಮುದಾಯದ ಹಿಂದುಳಿದ ವರ್ಗಕ್ಕೆ ಮೀಸಲು ನೀಡಲು ಮತ್ತು ಸಮಾನಾವಕಾಶ ನೀಡಲು ಆಯೋಗ ರಚನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತು. ಮುಸ್ಲಿಮರು ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 4.9, ರಕ್ಷಣಾ ಪಡೆಗಳಲ್ಲಿ ಶೇಕಡಾ 3.2ರಷ್ಟಿದ್ದರೆ, 543 ಸಂಸದರಲ್ಲಿ ಮುಸ್ಲಿಂ ಸಂಸದರ ಸಂಖ್ಯೆ 33 ಮಾತ್ರ ಎಂದು ಸಮಿತಿ ಹೇಳಿತು.

2005: ಪಕ್ಷದ ವರಿಷ್ಠ ಮಂಡಳಿ ವಿರುದ್ಧ ಬಂಡೆದ್ದ ಉಮಾಭಾರತಿ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಯಿತು.

2005: ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಸೂಪರ್ ಸಾನಿಕ್ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಒರಿಸ್ಸಾದ ಬಾಲಸೋರಿನಿಂದ 15 ಕಿ.ಮೀ ದೂರದಲ್ಲಿ ಸಮುದ್ರ ಮಧ್ಯೆ ನಿರ್ಮಿಸಲಾದ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಸೇನೆಯ ಮೂರೂ ವಿಭಾಗಗಳಲ್ಲಿ ಬಳಸಬಹುದಾದ 8 ಮೀಟರ್ ಎತ್ತರದ ಈ ಕ್ಷಿಪಣಿಯು 2-3 ಟನ್ ಸಾಂಪ್ರದಾಯಿಕ ಸಿಡಿತಲೆಯನ್ನು ಹೊತ್ತು 290 ಕಿ.ಮೀ. ದೂರ ಚಲಿಸಬಲ್ಲುದು. ಇದು ಶಬ್ಧದ ವೇಗಕ್ಕಿಂತ 2.8ರಿಂದ 3 ಪಟ್ಟು ವೇಗವಾಗಿ ಹಾರಾಟ ನಡೆಸಬಲ್ಲುದು.

2000: ಬಾಹ್ಯಾಕಾಶ ಷಟಲ್ ನೌಕೆ ಎಂಡೇವರ್ `ಸೌರ ರೆಕ್ಕೆ'ಗಳೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿತು. ಈ ಸೌರರೆಕ್ಕೆಗಳು ಇಡೀ ನಿಲ್ದಾಣಕ್ಕೆ ಬೇಕಾದ ವಿದ್ಯುತ್ ಒದಗಿಸಬಲ್ಲವು.
1999: ಭಾರತದ ಸಮಾಜ ವಿಜ್ಞಾನಿ ಎಂ.ಎನ್. ಶ್ರೀನಿವಾಸ್ ಅವರು ಬೆಂಗಳೂರಿನಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

1956: ಫ್ಲಾಯ್ಡ್ ಪ್ಯಾಟ್ಟರ್ಸನ್ ಅವರು ವಿಶ್ವ ಹೆವಿವೇಯ್ಟ್ ಚಾಂಪಿಯನ್ ಶಿಪ್ ಗೆದ್ದ ಅತ್ಯಂತ ಕಿರಿಯ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಷಿಕಾಗೋದಲ್ಲಿ ಆರ್ಚೀ ಮೂರ್ ಅವರನ್ನು ಪರಾಭವಗೊಳಿಸುವ ಮೂಲಕ ಅವರು ಈ ಪ್ರಶಸ್ತಿಗೆ ಪಾತ್ರರಾದರು.

1940: ಸಾಹಿತಿ ಎಚ್. ಆರ್. ಇಂದಿರಾ ಜನನ.

1940: ಸಾಹಿತಿ ಸರೋಜ ತುಮಕೂರು ಜನನ.

1939: ಸಾಹಿತಿ ಎಸ್. ಸಿದ್ಧಲಿಂಗಪ್ಪ ಜನನ.

1925: ಪ್ರಗತಿಶೀಲ ಬರಹಗಾರ ಅನಂತನಾರಾಯಣ (30-11-1925ರಿಂದ 25-8-1992) ಅವರು ಆರ್. ಸದಾಶಿವಯ್ಯ- ರಂಗಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1900: ಐರಿಷ್ ಸಾಹಿತಿ, ನಾಟಕಕಾರ ಆಸ್ಕರ್ ವೈಲ್ಡ್ ತಮ್ಮ 46ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ಮೃತರಾದರು. ಈ ವೇಳೆಯಲ್ಲಿ ಅವರು ಕಡು ಬಡತನದಿಂದ ನಲುಗಿದ್ದರು.

1874: ಇಂಗ್ಲೆಂಡಿನ ಮಾಜಿ ಪ್ರಧಾನಿ ಸರ್ ವಿನ್ ಸ್ಟನ್ ಚರ್ಚಿಲ್ (1874-1965) ಹುಟ್ಟಿದ ದಿನ.

1858: ಭಾರತೀಯ ಸಸ್ಯತಜ್ಞ ಹಾಗೂ ಭೌತವಿಜ್ಞಾನಿ ಸರ್ ಜಗದೀಶ ಚಂದ್ರ ಬೋಸ್ (1858-1937) ಜನ್ಮದಿನ. ಸಸ್ಯ ಹಾಗೂ ಪ್ರಾಣಿಗಳ ಜೀವಕೋಶಗಳು ಏಕಪ್ರಕಾರವಾಗಿ ಸ್ಪಂದಿಸುತ್ತವೆ ಎಂಬುದನ್ನು ಪತ್ತೆ ಹಚ್ಚಲು ಅತ್ಯಂತ ಸೂಕ್ಷ್ಮಗ್ರಾಹಿ ಉಪಕರಣವನ್ನು ಸಂಶೋಧಿಸಿದವರು ಇವರು. ಮೈಕ್ರೋ ಅಲೆಗಳು ಹಾಗೂ ರೇಡಿಯೋ ಅಲೆಗಳನ್ನು ಉತ್ಪಾದಿಸುವ ಮೈಕ್ರೋವೇವ್ ಉಪಕರಣವನ್ನು ಮೊತ್ತ ಮೊದಲ ಬಾರಿಗೆ ನಿರ್ಮಿಸಿ ಸಾರ್ವಜನಿಕವಾಗಿಪ್ರದರ್ಶಿಸಿದವರೂ ಇವರೇ. ವೈರ್ ಲೆಸ್ ಟೆಲಿಗ್ರಾಫಿಯ ಜನಕ ಮಾರ್ಕೋನಿ ಅಲ್ಲ, ಈ  ಗೌರವ ಮೈಕ್ರೋವೇವ್ ಉಪಕರಣ ಸಂಶೋಧಿಸಿದ ಬೋಸ್ ಅವರಿಗೆ ಸಲ್ಲಬೇಕು ಎಂಬ ವಾಸ್ತವಕ್ಕೆ ಈಗ ಬೆಲೆ ಸಿಗತೊಡಗಿದೆ. ಆದರೆ ವೈರ್ ಲೆಸ್ ಟೆಲಿಗ್ರಾಫಿಗೆ ಪೇಟೆಂಟ್ ಪಡೆದದ್ದು ಮಾರ್ಕೋನಿ.

1835: ಮಾರ್ಕ್ ಟ್ವೇನ್ ಎಂದೇ ಜನಪ್ರಿಯರಾಗಿದ್ದ ಖ್ಯಾತ ಕಾದಂಬರಿಕಾರ ಸ್ಯಾಮ್ಯುಯೆಲ್ ಲಾಂಗ್ಹೋರ್ನ್ ಕ್ಲೆಮೆನ್ಸ್ (1835-1910) ಹುಟ್ಟಿದ ದಿನ.

1667: `ಗಲಿವರ್ಸ್ ಟ್ರಾವಲ್ಸ್' ಪ್ರವಾಸ ಕಥನದಿಂದ ವಿಶ್ವವ್ಯಾಪಿ ಖ್ಯಾತಿ ಗಳಿಸಿದ ಆಂಗ್ಲೊ ಐರಿಷ್ ಸಾಹಿತಿ ಜೊನಾಥನ್ ಸ್ವಿಫ್ಟ್ (1667-1745) ಹುಟ್ಟಿದ ದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)