Showing posts with label ಕೈಗಾ. Show all posts
Showing posts with label ಕೈಗಾ. Show all posts

Thursday, October 25, 2018

ಕೈಗಾ ಅಣು ಸ್ಥಾವರ: ವಿಶ್ವದಾಖಲೆ ನಿರ್ಮಾಣ

ಕೈಗಾ ಅಣು ಸ್ಥಾವರ: ವಿಶ್ವದಾಖಲೆ ನಿರ್ಮಾಣ

ಕಾರವಾರ: ಕರ್ನಾಟಕದ ಏಕೈಕ ಅಣು ವಿದ್ಯುತ್ ಸ್ಥಾವರ ಕೈಗಾದ ಘಟಕ-1, ಸತತ 894 ದಿನ ವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲೂ ವಿದ್ಯುತ್ ಉತ್ಪಾದನೆ ಮುಂದುವರೆಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದೆ.

2018 ಅಕ್ಟೋಬರ್ 24ರ ಬುಧವಾರ ಬೆಳಗ್ಗೆ 9 ಗಂಟೆ 19 ನಿಮಿಷಕ್ಕೆ ಕೈಗಾ ಘಟಕ-1ರಲ್ಲಿ 894 ದಿನ ಸತತ ವಿದ್ಯುತ್ ಉತ್ಪಾದಿಸಲಾಯಿತು. ಮೂಲಕ ಇಂಗ್ಲೆಂಡಿನ (ಯುನೈಟೆಡ್ ಕಿಂಗ್ಡಂ) ಏಷ್ಯನ್ ಅಣು ಸ್ಥಾವರ 894 ದಿನ ಕಾಲ ಸತತ ವಿದ್ಯುತ್ ಉತ್ಪಾದನೆ ಮಾಡಿದ್ದ ದಾಖಲೆಯನ್ನು ಸರಿಗಟ್ಟಿತು.

ತನ್ನ ಸಾಧನೆಯನ್ನು ಮುಂದುವರೆಸಿರುವ  ಘಟಕವು  ಗುರುವಾರ 895 ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರೆಸಿತು. ಗುರುವಾರ ಬೆಳಗ್ಗೆ 9 ಗಂಟೆಗೆ 895 ದಿನ ಪೂರೈಸಿ 896ನೇ ದಿನಕ್ಕೆ ಕಾಲಿಟ್ಟಿದೆ. ವಿಶ್ವದಲ್ಲಿ ಸತತ 894 ದಿನ ಅಣು ವಿದ್ಯುತ್ ಉತ್ಪಾದಿಸಿ, 895ನೇ ದಿನದಲ್ಲಿ ವಿದ್ಯುತ್ ಉತ್ಪಾದನೆ ಮುಂದುವರಿಸಿದ ಘಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೈಗಾ ಘಟಕ-1, ಜಾಗತಿಕವಾಗಿ ಎರಡನೇ ಸ್ಥಾನ ಪಡೆದಿದೆ.
 

ಭಾರತದಲ್ಲಿ ಪ್ರಥಮ ಸ್ಥಾನ
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸ್ಥಾಪನೆಯಾದ ರಿಯಾಕ್ಟರ್ ಹೆವಿ ವಾಟರ್ ರಿಯಾಕ್ಟರ್ (ಪಿಎಚ್ಡಬುಆರ್)ತಂತ್ರಜ್ಞಾನದ್ದು. ಮಾದರಿಯ ರಿಯಾಕ್ಟರ್ಗಳ ಪೈಕಿ ಸತತ 894 ದಿನ ವಿದ್ಯುತ್ ಉತ್ಪಾದಿಸಿದ ಸಾಲಿನಲ್ಲಿ ಭಾರತಕ್ಕೆ ಮೊದಲ ಸ್ಥಾನ ಪ್ರಾಪ್ತವಾಗಿದೆ. ಮಾದರಿಯ ಅಣು ರಿಯಾಕ್ಟರ್ಗಳಲ್ಲಿ ಸತತ 894 ದಿನಗಳ ಕಾಲ ಅಣು ವಿದ್ಯುತ್ ಉತ್ಪಾದನೆಯನ್ನು ಪ್ರಪಂಚದ ಯಾವುದೇ ದೇಶ ಮಾಡಿಲ್ಲ.
ತಂತ್ರಜ್ಞಾನದ ದಿಸೆಯಲ್ಲಿ ಕೈಗಾ ಘಟಕ-1 ರಿಯಾಕ್ಟರ್ ದಾಖಲೆ ಬರೆದಿದೆ. ಬುಧವಾರ ಬೆಳಗ್ಗೆ 9 ಗಂಟೆಗೆ ಭಾರತ ಅಣುವಿದ್ಯುತ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲನ್ನು ವಿಶ್ವಮಟ್ಟದಲ್ಲಿ ಬರೆದಿದೆ ಎಂದು ಕೈಗಾದ ವಿಜ್ಞಾನಿ ದೇಶಪಾಂಡೆ ತಿಳಿಸಿದರು.